ದೀಪಾವಳಿಗೆ ಪಟಾಕಿ ಬಿಡ್ಳಕ್ಕೋ

ಪಟಾಕಿ ಎಲ್ಲರೂ ಬಿಡ್ತವು; ಬೋಚಬಾವ ಅಂತೂ ಯೇವತ್ತೂ ಪಟಾಕಿ ಬಿಡ್ತ – ಇನ್ನು ದೀಪಾವಳಿಗೆ ಬಿಡ್ಳಕ್ಕೋ ಕೇಳಿರೆ ಎಂತ ಅರ್ತ ಅಪ್ಪೋ! – ಹೇದು ಕೇಳುವಿ ನಿಂಗೊ.
ಅಪ್ಪು, ದೀಪಾವಳಿಗೆ ಪಟಾಕಿ ಬಿಡ್ಳಕ್ಕೋ ಆಗದೋ – ಹೇದು ಹಲವೂ ಜೆನ ಅತಿ ಬುದ್ಧಿವಂತರು ಚಿಂತನೆ ಮಾಡ್ತವು. ಅದರ ಬಗ್ಗೆಯೇ ಈ ಶುದ್ದಿ.
~
ಭಾರತದ ಬುದ್ಧಿಜೀವಿಗೊಕ್ಕೆ ಕೆಲವು ಸರ್ತಿ ಪ್ರಶ್ನೆ ಬಪ್ಪದಿದ್ದು.
ನಮ್ಮ ಹಿಂದೂ ಆಚರಣೆಗಳ ಬಗ್ಗೆ – ಅದು ಹಾಂಗೆ ಮಾಡ್ಳಕ್ಕೋ, ಹೀಂಗೆ ಮಾಡ್ಳಕ್ಕೋ, ಅದು ಏಕೆ ಹಾಂಗೆ ಮಾಡೇಕು – ಇತ್ಯಾದಿ.
ಪ್ರತಿಯೊಂದಕ್ಕೂ ಕುಂಟು ನೆಪ, ಕೊಂಕು ಕಾರಣ ಹುಡ್ಕುಸ್ಸು.
ಆ ದೇವಸ್ತಾನಕ್ಕೆ ಏಕೆ ಹೆಮ್ಮಕ್ಕೊ ಹೋಪಲಾಗ, ಈ ದೇವಸ್ತಾನಲ್ಲಿ ಏಕೆ ಎಲ್ಲೋರುದೇ ಒಟ್ಟಿಂಗೆ ಉಂಬಲಾಗ, ಇನ್ನೊಂದಿಕ್ಕೆ ಏಕೆ ಅಂಗಿ ತೆಗೆಯದ್ದೆ ಹೋಪಲಾಗ – ಇತ್ಯಾದಿ.
ಇದರ ಪ್ರಶ್ನೆ ಕೇಳುದೇ ಒಂದು ಕೊಶಿ – ಅಷ್ಟಪ್ಪಗ ಇಡೀ ಊರಿಂಗೇ ಗೊಂತಾವುತ್ತನ್ನೇ’ದು!
~
ಈ ದೀಪಾವಳಿ ಹಬ್ಬದ ಗೌಜಿ ಸಮೆಯಲ್ಲಿ ಕೇಳ್ತ ಇನ್ನೊಂದು ಸುದ್ದಿ – “ದೀಪಾವಳಿಗೆ ಪಟಾಕಿ ಹೊಡವಲಕ್ಕೋ”ದು.
ಎಂತಕೆ ಆಗ? – ವಾತಾವರಣಕ್ಕೆ ತೊಂದರೆ, ಹಾಂಗೆ ಹೀಂಗೆ, ಲಂಡು ಲುಸ್ಕು – ಹೇದು ಹಲವೂ ಕಾರಣಂಗೊ.
ಆರಿಂಗೆ ಈ ಸಂಶಯ ಬಂದದು? – ದೀಪಾವಳಿಲಿ ಒಂದು ಪಟಾಕಿಯೂ ಹೊಡೆಯದ್ದ, ಹಬ್ಬವ ಆಚರಣೆಯೇ ಮಾಡದ್ದ ಪ್ರಾಂದುಗೊಕ್ಕೆ.

ಪಟಾಕಿ ಹೊಟ್ಟುಸಿರೆ ಎಂತಾವುತ್ತು?
ಶಬ್ದ ಮಾಲಿನ್ಯ:
ಹಾಂಗಾರೆ ಇದರ ಹತ್ತು ಪಾಲು ಶಬ್ದಮಾಲಿನ್ಯ – ದಿನಕ್ಕೈದು ಸರ್ತಿ ಮೈಕ್ಕಲ್ಲಿ ಮಾಡ್ತವು, ಅದು ಲೆಕ್ಕ ಇಲ್ಲೆಯೋ? ಅಥವಾ, ಘನವಾಹನಂಗೊ ಮಾಡ್ತವು, ಅದು ಲೆಕ್ಕ ಇಲ್ಲೆಯೋ? ಗಣಿಲಿ ಗರ್ನಲು ಹೊಡವಗ ಮಾಡ್ತವು ಇದು ಲೆಕ್ಕ ಇಲ್ಲೆಯೋ?

ವಾಯು ಮಾಲಿನ್ಯ: ಒರಿಶದ ಒಂದು ದಿನದ ಹಬ್ಬಲ್ಲಿ ನಾಲ್ಕು ಪಟಾಕಿ ಹೊಟ್ಟುಸಿ ಹಾಳಪ್ಪದು ಜಾಸ್ತಿಯೋ, ಅಲ್ಲ ದಿನಾಗುಳೂ ವಾತಾವರಣಕ್ಕೆ ಬಿಡ್ತ ಕಾರ್ಖಾನೆಗೊ ಮಾಡ್ತ ಮಾಲಿನ್ಯ ಹೆಚ್ಚೋ.
ಪಟಾಕಿಲಿ ಆವುತ್ತಿಲ್ಲೆ ಹೇಳುದಲ್ಲ, ಆದರೆ ಬಹಳ ಬಹಳ ಕಡಮ್ಮೆ ಇಪ್ಪ ಮಾಲಿನ್ಯ ಇದು.
~
ಇಷ್ಟೆಲ್ಲ ಪ್ರಶ್ನೆ ಕೇಳ್ತ ಬುದ್ಧಿವಂತರಿಂಗೆ – ಬಕ್ರೀದಿಲಿ ಆವುತ್ತ ಜೀವ ಹಾನಿ, ಅದರಿಂದಾಗಿ ಬಪ್ಪ ಪರಿಸರಮಾಲಿನ್ಯ ಗೊಂತಾವುತ್ತಿಲ್ಲೆಯೋ?
ರಾಜಕಾರಣಿಗೊ ಯೇವದಾರು ಗೆದ್ದಪ್ಪಗ ಮಾಲೆ ಮಾಲೆ ಮಾಲೆಪಟಾಕಿ ಹೊಟ್ಟುಸುತ್ತವು – ಆ ಪಟಾಕಿ ಪರಿಸರಕ್ಕೆ ಎಂತೂ ಹಾನಿ ಮಾಡ್ತಿಲ್ಲೆಯೋ?

ಹೀಂಗೆಲ್ಲ ಪ್ರಶ್ನೆ ಕೇಳಿದರೆ ಈ ಬುದ್ಧಿ ಜೀವಿಗಳತ್ರೆ ಉತ್ತರ ಇರ.
ಏನಿದ್ದರೂ, ಹಿಂದೂ ಆಚರಣೆಗಳ, ಪದ್ಧತಿಗಳ, ಕ್ರಮಂಗಳ ನೆಗೆಮಾಡೇಕು, ಏನಾರು ಕಾರಣಕೊಟ್ಟು ಅದರ ನಿಲ್ಲುಸೇಕು – ಇದು ಅವಕ್ಕಿಪ್ಪ ಮಹಾನ್ ಕಾರ್ಯ.
~

ಬೈಲ ನೆಂಟ್ರುಗಳೇ, ದೀಪಾವಳಿ ಚೆಂದಕ್ಕೆ ಆಚರಣೆ ಮಾಡುವೊ.
ನೆಲಚಕ್ರ, ಸುರುಸುರು ಕಡ್ಡಿ, ದುರ್ಸು, ಬೀಡಿಪಟಾಕಿ, ಮಾಲೆಪಟಾಕಿ – ಎಲ್ಲವನ್ನೂ ಹೊತ್ತುಸುವೊ, ಹೊಟ್ಟುಸುವೊ. ಸಣ್ಣ ಮಕ್ಕೊಗೆ ಮಾಲೆಪಟಾಕಿಯನ್ನೂ ಕೊಡುವೊ.
ಧೈರ್ಯಲ್ಲಿ ದೀಪಾವಳಿ ಮಾಡುವೊ.

ಆದರೆ – ಕಿಚ್ಚಿನ ಒಟ್ಟಿಂಗೆ ಲಾಗ ತೆಗವಗ ರಜ ಜಾಗ್ರತೆ ಬೇಕು -ಅಷ್ಟೆ.
ಎಚ್ಚರಿಗೆ ಇರಳಿ, ಆದರೆ ಹಬ್ಬಕ್ಕೆ ಎಂತೂ ಕಡಮ್ಮೆ ಮಾಡೆಡಿ, ಕೇಳಿತ್ತೋ.
~
ಒಂದೊಪ್ಪ: ದೀಪದ ಸಾಲಿನ ಒಟ್ಟಿಂಗೇ ಪಟಾಕಿ ಸಾಲು, ಗೌಜಿ ನೆಗೆಯ ಸಾಲುದೇ ಬರಳಿ..

ಒಪ್ಪಣ್ಣ

   

You may also like...

4 Responses

  1. ಶ್ಯಾಮಣ್ಣ says:

    ಈಗೆಲ್ಲ ಪಟಾಕಿಗೋ ಬಪ್ಪದು ಚೀನಂದ…. ಅದರ ನಾವು ತೆಕೊಂಡು ಹೊಟ್ಟುಸೆಕ್ಕಾದ ಅಗತ್ಯ ಇಲ್ಲೆ. ಶಿವಕಾಶಿದಾದರೆ ಅಕ್ಕು…

  2. ಶಾಮಣ್ಣ ಹೇಳ್ತ ಶುದ್ದಿ ಏವಗಳೂ ವಾಟ್ಸಪ್ ಲ್ಲಿ ಪತ್ರಿಕೆಲಿ ಬತ್ತಾ ಇತ್ತು.

  3. ಒಳ್ಳೆ ವಿಷಯ.ಒಂದು ಹೇಳ್ಲೆ ಬಿಟ್ಟತ್ತೋ ಹೇಳಿ.ಪಟಾಕಿ ಬಾಯಿ ಪಟಾಕಿ ಹಾಂಗೇ ಹಿಂದಂದ ಬಿಡ್ತ ಪಟಾಕಿ ಗರ್ನಾಲು ಸುರು ಸುರು ಕಡ್ಡಿ ನೆಲಚಕ್ರ ಎಲ್ಲಾ ಇರಳಿ ಆದರೆ ನವಗೇ ಎದುರು ನಿಲ್ಲುತ್ತ ಚೈನದವು ಮಾಡಿದ ಪಟಕಿ ಬೇಡ.ಹರೇರಾಮ

  4. S.K.Gopalakrishna Bhat says:

    ಸ್ವದೇಶಿ ಪಟಾಕಿ ಬೇಕು.ವಿದೇಶಿ ಬೇಡ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *