ಮತ್ತೆ ಬಂತು ಮನೆಯೊಳಾಂಗೆ ಮಣ್ಣಳಗೆ..!

ಮೊನ್ನೆ ಒಪ್ಪಣ್ಣನೂ, ಕುಂಟಾಂಗಿಲ ಭಾವನೂ- ಕುಂಬ್ಳೆಜ್ಜಿ ಕೊಟ್ಟು ಕಳುಸಿದ ಕರಡಿಗೆ ಎತ್ತುಸುಲೆ ಕಾನಾವು ಡಾಗುಟ್ರ ಮನೆಗೆ ಹೋಗಿತ್ತಿದ್ದೆಯೊ°. ಎತ್ತುವಾಗ ಊಟದ ಸಮೆಯವೇ ಆದ ಕಾರಣ ’ಉಂಡಿಕ್ಕಿಯೇ ಹೋಪಲಕ್ಕು’ ಹೇದವು ಕಾನಾವಕ್ಕ°. ಸರಿಯಾದ ವಿಷಯವೇ – ಹೇದು ಒಪ್ಪಣ್ಣಂಗುದೇ ಕಂಡತ್ತು; ಅಕ್ಕಂಬಗ ಹೇದು ಬಾಳೆ ಬುಡಲ್ಲಿ ಕೂದೆಯೊ°.
ತೋಟಲ್ಲಿ ಅಲ್ಲ, ಅಟ್ಟುಂಬೊಳಲ್ಲಿ ಉಂಬಲೆ ಮಡಗಿದ ಬಾಳೆಲೆ ಹತ್ತರೆ!
~
ಕಾನಾವು ಡಾಗುಟ್ರು, ಕುಂಟಾಂಗಿಲ ಭಾವ°, ಒಪ್ಪಣ್ಣ – ಇಷ್ಟೇ ಜೆನ ಇದ್ದಿದ್ದ ನಿತ್ಯದ ಸಣ್ಣ ಹಂತಿಯೇ.
ವಿಶೇಷ ಬಗೆ ಏನಿಲ್ಲೆ ಅತಾ, ಒಂದು ತಾಳು, ಸಾರು, ಕೊದಿಲು, ಮತ್ತೊಂದು ಮೇಲಾರ- ಇಷ್ಟೇ ಹೇದವು ಕಾನಾವಕ್ಕ° ಸುರುವಿಂಗೇ. ನಿತ್ಯಕ್ಕೆ ಬಂದ ಕಾರಣ ಇಷ್ಟೇ ಸಿಕ್ಕಿದ್ದಡ ಬಾವ, ಹಾಂಗಾರೆ ಜೆಂಬ್ರಕ್ಕೆ ಬಂದಿದ್ದರೆ ಉಂಡು ಬಾಳೆ ಕಾಲಿ ಮಾಡ್ಳೆ ಎಡಿತ್ತಿತಿಲ್ಲೆ – ಹೇದ ಕುಂಟಾಂಗಿಲ ಬಾವ°.
ಮಜ್ಜಿಗೆ ಇದ್ದನ್ನೇ ಕೇಳಿದೆ. ’ಇದ್ದಿದ್ದು, ಮಜ್ಜಿಗೆ ಆಗದ್ದೋರು ಆರಾರು ಅಪ್ರೂಪಲ್ಲಿ ಬಂದರೆ ಅವಕ್ಕೆ ಹಾಲೋ, ಮೊಸರೋ ವೆವಸ್ತೆಯೂ ಇದ್ದು’ – ಹೇದವು ಡಾಗುಟ್ರು ಬಾವ°.

~
ಮೆಡಿ ಉಪ್ಪಿನಕಾಯಿ – ಕೈರಂಗಳ ದೊಡ್ಡಮ್ಮನ ಪಾಕ – ಬಾಳೆ ಕೊಡೀಲಿ ಕೂದತ್ತು.
ಹಬೆ ಹೆರಡುವ, ಚೆಂದದ ಕೆಂಪು ಕೆಂಪು ಕಜೆ ಅಕ್ಕಿ ಬಾಳಗೆ ಬೀಳುವಗಳೇ ಒಂದು ನಮುನೆ ಪರಿಮ್ಮಳ. ಅದರ ಮೇಗಂಗೆ ಗೆನಾ ತುಪ್ಪದ ಪರಿಮ್ಮಳ. ಕರೆಲಿ ಹಲಸಿನ ಕಾಯಿ ತಾಳು. ತುಪ್ಪಶನಲ್ಲೇ ಹೊಟ್ಟೆ ತುಂಬುಸೆಕ್ಕೋ ಗ್ರೇಶಿ ಹೋತು, ಆದರೆ ಇನ್ನಾಣ ಪಾಕಂಗಳೂ ಬತ್ತನ್ನೇ!
ಪಷ್ಟ್ಲಾಸು ನಿಂಬೆ ಸಾರು, ಎರಡೆರಡು ಸರ್ತಿ ಹೊಡದಾತು.
~
ಅಷ್ಟಪ್ಪಗ ಪಲ್ಯ ವಿಚಾರಣೆ ಬಂತು. ಅರೆ! ಮಣ್ಣಳಗೆ!!
ಆಗ ಸುರುವಿಂಗೆ ಬಳುಸುವಾಗ ಒಪ್ಪಣ್ಣಂಗೆ ಹಶುವಿಲಿ ಗೋಷ್ಟಿ ಆಯಿದಿಲ್ಲೆ; ಈಗ ವಿಚಾರಣೆಗೆ ಬಪ್ಪಗ ಕಂಡತ್ತು – ತಾಳು ಮಾಡಿದ್ದು ಮಣ್ಣಳಗೆಲಿ. ಹಾಂಗೆಯೋ ಏನೊ, ತಾಳಿಂಗೆ ಒಂದು ಪರಿಮ್ಮಳ ಬೇರೆಯೇ!
ಮತ್ತೆ ಕೊದಿಲು ಬಂತು – ಅದೂ ಮಣ್ಣಿನ ಚಿಟ್ಟೆಗುಳಿಲಿ ಮಾಡಿದ್ದು.
ಅದಾಗಿ ಮೇಲಾರ – ಅದುದೇ ಮಣ್ಣಿನ ಬಾಣಲೆಲಿ!!
ಗಟ್ಟಿ ಮೊಸರು – ಅದುದೇ ಮಣ್ಣಿನ ಪಾತ್ರಲ್ಲಿ ಇದ್ದತ್ತು..
ಹೆಜ್ಜೆ ಅಳಗೆಯೂ ಮಣ್ಣಿಂದೇ!
ಕುಡಿವ ನೀರು – ಅದುದೇ ಮಣ್ಣಿನ ಹೂಜಿ!!
ಅರೆ! ಪಾತ್ರ, ಅಳಗೆ, ಚಿಟ್ಟೆಗಿಳಿ, ಉರುಳಿ – ಎಲ್ಲವುದೇ ಮಣ್ಣಿಂದೇಇಲ್ಲಿ! ಸರ್ವಂ ಮೃಣ್ಮಯಮ್!

ಈಗ ಮಣ್ಣಳಗೆಲಿ ಅಡಿಗೆಯೋ ಡಾಗ್ಟ್ರೇ- ಕೇಳಿದ° ಕುಂಟಾಂಗಿಲ ಭಾವ°.
ಅಪ್ಪು, ರಜ ಸಮಯ ಆತು, ಪುನಾ ಮಣ್ಣಿನ ಪಾತ್ರೆಗಳ ಸುರು ಮಾಡಿ -ಹೇದವು ಕಾನಾವಕ್ಕ°.
~
ನಮ್ಮ ಹೆರಿಯೋರು, ಹಲವು ಸಾವಿರ ಒರಿಶಂದ ಶಾಕ ಪಾಕಂಗಳ ಮಾಡ್ಳೆ ಕಂಡುಗೊಂಡ ಸರಳ ವಿಧಾನ ಮಣ್ಣಳಗೆ. ಎಷ್ಟು ಸರಳವೋ, ಅಷ್ಟೇ ಆರೋಗ್ಯಕರ, ಅಷ್ಟೇ ಶಾಶ್ವತ.
ಯಾವದೇ ದೋಷಪೂರಿತ ರಾಸಾಯನಿಕಂಗೊ ಇಲ್ಲದ್ದ, ಅಡಿಗೆಗೂ ತುಂಬ ಲಾಯ್ಕಪ್ಪ ಪಾತ್ರಂಗೊ ಹೇದರೆ ಅದು ಮಣ್ಣಳಗೆಯೇ.
ಅದರ ಬಾಳ್ವಿಕೆಯೂ ತುಂಬಾ ಸಮೆಯ ಬತ್ತು; ಸಿಂಧೂ ನದಿಯ ಆಸುಪಾಸಿನ ನಾಗರೀಕತೆಲಿ ಬಳಸಿದ ವಸ್ತುಗೊ ಈಗಳೂ ಸಿಕ್ಕುತ್ತಾ ಇದ್ದಾಡ ಹೇದರೆ ಆಲೋಚನೆ ಮಾಡಿ ಅದರ ಬಾಳಂತನವ!
ಆ ಪಾತ್ರಂಗಳಲ್ಲಿ ಈಗಳೂ ಅಡಿಗೆ ಮಾಡ್ಳೆಡಿಗು. ಅಂದು ಎಷ್ಟು ಪ್ರಾಮುಖ್ಯವೋ, ಈಗಳೂ ಅದೇ ನಮುನೆ. ಅಷ್ಟೇ ಚೆಂದಕೆ, ಹಾಂಗೇ ಬಳಸುಲೆ ಆವುತ್ತು – ಹೇದು ಕಾನಾವಕ್ಕ° ಹೇಳಿದವು.
ಅದರ್ಲಿ ಅಡಿಗೆ ಮಾಡ್ಳೆ ಮ್ಯೂಸಿಯಂನವು ಬಿಡವು – ಡಾಗುಟ್ರು ನೆಗೆ ಮಾಡಿದವು.
ಅದಿರಳಿ.
~
ತುಂಬಾ ಒರಿಶ ಬಳಸಿದ ಮತ್ತೆ ರಜಾ ತಳವಲೂ ಸಾಕು, ಆದರೆ ಹೊಟ್ಟೆಗೆ ಹೋದರೆ ಎಂತದೂ ದೋಷ ಇಲ್ಲೆ, ಮಣ್ಣು ಅಷ್ಟೆ. ಹಾಂಗಾಗಿ ಕರುಳಿಲಿ ಏನೂ ಉಪದ್ರ ಕೊಡ್ತಿಲ್ಲೆ. ಪ್ಲೇಷ್ಟಿಕ್ಕು, ಕರಡಿಗೆ ಇತ್ಯಾದಿಗೊಕ್ಕೆ ಹೋಲುಸಿರೆ ಇದು ತುಂಬ ಆರೋಗ್ಯಕರ ಪಾತ್ರ ಹೇದು ಡಾಗುಟ್ರುಬಾವ ಅಭಿಪ್ರಾಯ.
ಸಣ್ಣಾಗಿಪ್ಪಾಗ ಮನೆಲಿ ಮಣ್ಣಳಗೆಲೇ ಅಡಿಗೆ ಮಾಡಿಗೊಂಡು ಇದ್ದದು ಒಪ್ಪಣ್ಣಂಗೆ ನೆಂಪಾತು. ಕುಂಟಾಂಗಿಲ ಭಾವಂಗೂ ನೆಂಪಿದ್ದಾಡ.

ಕೆಂಪು ಪಾತ್ರವ ತಂದು, ಅದಕ್ಕೆ ಎಣ್ಣೆ ಕೊಟ್ಟು, ಬೀಜದ ಓಡು, ಕರಟ ಇತ್ಯಾದಿಗಳ ಹಾಕಿ ಮತ್ತೊಂದರೆ ಬೇಶುದು. ಇದಕ್ಕೆ “ಕನಿಶುದು” ಹೇಳ್ತವು.
ಹಾಂಗಿ ಕನಿಶಿದ ಪಾತ್ರ ಕಪ್ಪಾವುತ್ತು; ಆದರೆ ಬಳಕೆಗೆ ತಯಾರಾವುತ್ತು.
ಕನಿಶುವಗ ಬೇಕಾದಷ್ಟು ಎಣ್ಣೆ ಕುಡುದ ಪಾತ್ರ ಮತ್ತೆ ಜೀವಮಾನಲ್ಲಿ ಕುಡಿತ್ತಿಲ್ಲೆ. ಹೇದರೆ, ಆ ಮಣ್ಣಳಗೆಯ ಮೈಲಿ ಇಪ್ಪ ಸಣ್ಣ ಸಣ್ಣ ಒಟ್ಟೆಗಳಲ್ಲಿ ಎಲ್ಲ ಎಣ್ಣೆಪಸೆ ತುಂಬಿಗೊಳ್ತು. ಈ ಪಾತ್ರಂಗಳಲ್ಲಿ ಮಾಡಿದ ಪಾಕಕ್ಕೆ ಅದರದ್ದೇ ಪರಿಮ್ಮಳ! ಅದರದ್ದೇ ರುಚಿ.
ಯೇವದೇ ಪ್ಲೇಶ್ಟಿಕು, ಶ್ಟೀಲಿನ ಪಾತ್ರಲ್ಲಿ ಮಾಡಿರೆ ಹೀಂಗಿರ್ತ ರುಚಿ ಬಾರ ಒಪ್ಪಣ್ಣಾ – ಹೇದವು ಕಾನಾವಕ್ಕ°.
ಅಪ್ಪನ್ನೇ ಕಂಡತ್ತು.
ಯೇವಗಳೂ ಎರಡೆರಡೇ ಸೌಟು ಉಂಡು ಹೋಪ ಪಾಕಂಗೊ ಇಂದು ನಾಲ್ಕು ನಾಲ್ಕು ಸೌಟು ಉಂಡಿದು ನಾವು! ವಿಷಯ ಆಗಿಕ್ಕು – ಹೇದೆ ಕುಂಟಾಂಗಿಲ ಭಾವನ ಕೆಮಿಲಿ. ಅಪ್ಪಪ್ಪು – ಹೇದು ಒಪ್ಪಿದ°.
ಹಾಂಗಾರೆ ಮಣ್ಣಳಗೆ ಒಡೆತ್ತಿಲ್ಲೆಯೋ, ಜಾಗ್ರತೆ ಬೇಕಾವುತ್ತಿಲ್ಲೆಯೋ – ಕೇಳಿದೆ.
ಜಾಗ್ರತೆ ಬತ್ತು ಒಪ್ಪಣ್ಣಾ, ಬಿದ್ದರೆ ಒಡಗು ಹೇದು ನಮ್ಮ ಮನಸ್ಸಿಂಗೆ ಗೊಂತಿಪ್ಪ ಕಾರಣ ಮನಸ್ಸು ಜಾಗ್ರತೆ ಮಾಡ್ತು. ಅದು ಏನೂ ಕಷ್ಟ ಆವುತ್ತಿಲ್ಲೆ. ಅಟ್ಟುಂಬೊಳ ಅಂಬೆರ್ಪು, ಗಡಿಬಿಡಿ ಮಾಡದ್ರೆ ಆತು – ಹೇದವು..
ಒಪ್ಪಣ್ಣಂಗೆ ಉಂಬಲೆ ಕೂದ ಮತ್ತೆ ಅಂಬೆರ್ಪು ಇರ್ತಿಲ್ಲೆ. ಮಣ್ಣಳಗೆ ಇದ್ದರೆ ಅಡಿಗೆ ಮಾಡುವಗಳೂ ಅಂಬೆರ್ಪು ಮಾಡ್ಳಾಗ! 😉
ಅಂತೂ ಚೆಂದದ ಊಟ ಆತು. ಎಲ್ಲವೂ ರುಚಿಯೂ, ಪರಿಮ್ಮಳವೂ.
ಕಾನಾವು ಡಾಗುಟ್ರ ಮನೆಂದ ಹೆರಡುವಗ ತಲೆಲಿ ಇಡೀ ಮಣ್ಣಳಗೆಯೇ ಇದ್ದತ್ತು.
~
ನಮ್ಮ ಬೈಲಿನ ಸುಮಾರು ಮನೆಗಳಲ್ಲಿ ಈಗ ಮಣ್ಣಳಗೆ ಪುನಾ ಕಾಂಬಲೆ ಸುರು ಆಯಿದಾಡ. ಮಾಷ್ಟ್ರುಮಾವನ ಮನೆಲಿಯೂ ಈಗ ಅದೇ ಪಾತ್ರಂಗೊ ಆಡ. ಒಂದೊಂದರಿ ಅದರಲ್ಲಿ ಅಡಿಗೆ ಆವುತ್ತಾ ಇಪ್ಪಾಗ ಮಾಷ್ಟ್ರುಮಾವ° “ಮರಳಿ ಮಣ್ಣಿಗೆ” – ಹೇದು ನೆಂಪು ಮಾಡಿಗೊಳ್ತವಾಡ.

ತುಂಬಾ ಹಿಂದೆ ಮಣ್ಣಿನ ಅಳಗೆಗೊ ಇದ್ದತ್ತು. ಅದು ಮತ್ತೆ ಒಂದು ತಲೆಮಾರಿನ ಕಾಲವೇ ಕಾಣೆ ಆಗಿ ಹೋತು.
ಈಗ ಪುನಾ ಬಳಕೆ ಆವುತ್ತು.
ಆರೋಗ್ಯಕರ ಜೀವನಲ್ಲಿ ಮಣ್ಣಳಗೆಯೂ ಒಂದಾಗಿ ಇರಲಿ.
~
ಒಂದೊಪ್ಪ: ಮಣ್ಣಿನ ಅಳಗೆಯ ಬಳಕೆ ಮಣ್ಣಿಂಗೂ ಒಳ್ಳೆದು; ನವಗೂ ಒಳ್ಳೆದು.

~
ಸೂ:
ನಿಂಗಳ ಮನೆಲಿಯೂ ಮಣ್ಣಳಗೆ ಬಳಕೆ ಇದ್ದರೆ, ಪಟ ಕಳುಸಿ..

ಒಪ್ಪಣ್ಣ

   

You may also like...

5 Responses

 1. ಒಳ್ಳೆ ಶುದ್ದಿ ಒಪ್ಪಣ್ಣಾ, ಎನ್ನಜ್ಜನಮನೆ ಕಾರಿಂಜಹಳೆಮನೆಲಿ ಎನ್ನ ಪುಟ್ಟು ಮಾವನ ಹೆಂಡತಿ ಪುಟ್ಟತ್ತೆಯ ನೆಂಪಾತು. ಆನು ಪ್ರಾಥಮಿಕ ಹಂತದ ಶಾಲಗೆ ಅಲ್ಲಿಂದ ಕಳತ್ತೂರು ಶಾಲಗೆ ಹೋದೋಳು. ಅಂಬಗ ಅಜ್ಜ-ಅಜ್ಜಿ ಇತ್ತಿದ್ದವು. ಆವಗ ಮಣ್ಣಳಗೆ,ಕರಟದ ಕೈಲು, ಇಶಿಮುಚ್ಚಲು,
  ಬಾಯಡೆ, ಮರಿಗೆ, ಓಟುಪ್ಪಾಳೆ ಓಡು, ಮಜ್ಜಿಗೆ ಅಳಗೆ ಹೀಂಗೆ ಉಪಯೋಗಿಸಿಗೊಂಡಿತ್ತಿದ್ದವು. ಪುಟ್ಟತ್ತೆ,ಅವರ ಸೊಸೆ, ಈಗಳೂ ಮಣ್ಣಿನ ಪಾತ್ರೆಯನ್ನೇ ಉಪಯೋಗಿಸಿ ಅಡುಗೆ ಮಾಡ್ತವು. ಮಣ್ಣನ್ನು ನಂಬುವೆಮಣ್ಣಿಂದ ಬಾಳುವೆ|ಮಣ್ಣೆನಗೆ ಹೊನ್ನ ಕೊಡುತಿಕ್ಕು ಅಣ್ಣಯ್ಯ| ಮಣ್ಣೆ ಲೋಕಲ್ಲಿ ಬೆಲೆಬಾಳ್ಗು|| ಜಾನಪದ ಹಾಡಿನ ಪುಸ್ತಕಲ್ಲಿ ಆನು ಬರದ್ದು ನೆಂಪಾತು.

  • ತೋಟಕ್ಕೆ ನೀರು ತೋಕುಲೆ ಕೈದಂಬೆ, ಹರವಿಂದ ಬೆಶಿನೀರು ತೋಡ್ಳೆ ಉದ್ದದ ಕೈ ಇಪ್ಪ onakkarata ಇದ್ದ nempu

 2. ಒಂದು ಕರಡಿಗೆ ಎತ್ತುಸುಲೆ ಇಬ್ರು ಹೋದ್ದೆಂತಕೇದು ಮದಾಲು ಎನ ತೋರಿದ್ದಪ್ಪು ಆದರೆ ಮತ್ತೆ ನೆಂಪಾತು ಒಪ್ಪಣ್ಣ ಬೈಕಿಲ್ಲಿ ಹಿಂದೆ ಕೂರ್ಸು ಹೇಂಗೇದು.! ಆದರೆ ಆ ಕರಡಿಗೆ ಕೊಂಡೋದ್ಸು ಎಂತಾಯಿಕ್ಕು ಹೇದು ಪತ್ತಕ್ಕೆ ಸಿಕ್ಕಿತ್ತಿಲ್ಲೆ. ಉಪ್ಪಿನಾಯಿಯೋ ? .. ಹಸರ ಪಾಚಾವೋ…. ಅಲ್ಲಲ್ಲ…. ಕಳುದೊರಿಶಕೊಂಡೋದ ಉಪ್ಪಿನಕ್ಕಾಯಿ ಕರಡಿಗೆಯೇ ಆಗಿರಿಕ್ಕೀಗದು. ಉಮ್ಮ ಮುಗಾತನ್ನೆ ಬಿಡ್ವೊ ಅದರ.

  ಅದಾ ಕೈರಂಗಳ ದೊಡ್ಡಮ್ಮನ ಪಾಕ ಹೇಳ್ವಾಗ ಎನ ನೆಂಪಾತು… ಕಳುದೊರಿಶಾಣ ಉಪ್ಪಿನಕ್ಕಾಯಿ ಕರಡಿಗೆ ವಾಪಾಸು ಕೊಡ್ಳೆ ಬಾಕಿ ಆಯಿದೆನಗೆ !!

  ಅದಾ ಇದರೆಡಕ್ಕಿಲ್ಲಿ ಒಪ್ಪಣ್ಣಂಗೆ ಆಯೇಕ್ಕಾದ್ದಂಬಗ ಮಜ್ಜಿಗೆಯೋ ಮೊಸರೋ ಹಾಲೋ.?!! ಉಮ್ಮ ಅಲ್ಲಿ ಮೋರೆ ಪೀಂಟಿದ್ದು ಕಾಣದ್ದ ಕಾರಣ ಅಂದಾಜಿ ಆಯಿದಿಲ್ಲೆ. ದೊಡ್ಡಜ್ಜನ ದೊಡ್ಡಳಿಯನ ಕೇಟ್ರೆ ನೇರ್ಪ ಸಂಗತಿ ಗೊಂತಕ್ಕು. ಬಿಡ್ವೊ ಅದರ್ನೂ ಈಗ.

  ಇದಾ… ಮಣ್ಣಳಗೆ , ಚಿಟ್ಟಗುಳಿ, ಬಾಣಾಲೆ, ಹೂಜಿ…… ಹೇಳ್ವಾಗ …..ನೋಡಿರೆ ರೈಲಿಂಗೆ ಟಿಕೇಟಿಲ್ಲೆ ಸದ್ಯಕ್ಕೆ. ಬಸ್ಸಿಲ್ಲಿ ನಮ್ಮಂದಾಗದ್ದ ಕೆಲಸ !!

  ಆಗಲಿ ಎರಡು ದಿಕ್ಕೆ ಮಣ್ಣಿನ ಪಾತ್ರ ಸುರುವಾದ್ದು ಕೊಶಿ ಆತು. ಇನ್ನಾಣ ರೈಲು ಟಿಕೆಟು ಬುಕ್ಕು ಮಾಡ್ಳಪ್ಪಗ ಇನ್ನು ನಾಕು ದಿಕ್ಕೆ ಬೇಗ ಸುರುವಾಗಲಿ ಹೇದಿತ್ಲಾಗಿಂದ.

 3. ಬೊಳುಂಬು ಗೋಪಾಲ says:

  ಮಣ್ಣಳಗೆಲಿ ಮಾಡಿದ ಬೆಂದಿ ರುಚಿ ಬಲ್ಲವನೇ ಬಲ್ಲ. ಎನಗುದೆ ಬೊಳುಂಬಿಲ್ಲಿ ಮಣ್ಣಳಗೆಗೆ ಬೀಜದೆಣ್ಣೆ ಉದ್ದಿ ಒಣಗುಸೆಂಡಿದ್ದಿದ್ದು ಮಣ್ಣಳಗೆಯನ್ನೇ ಉಪಯೋಗುಸಿಂಡಿದ್ದಿದ್ದು ನೆಂಪಾತು. ನಮ್ಮ ಗೇಸಿನ ಒಲಗುದೆ, ಮಣ್ಣಳಗೆಗುದೆ ಚೇರ್ಚೆ( ಜೆತೆ) ಕೂಡಿ ಬಕ್ಕಾಯ್ಕು. ಪುನ: ಮಣ್ಣಳಗೆ ಸುರುಮಾದುವನೋ ಹೇಳಿ. ಬಂದರಿಲ್ಲಿ ಒಂದು ಅಂಗಡಿಲಿ ಸಿಕ್ಕುತ್ತು. ಇನ್ನು ಜಾಗ್ರತೆಲಿ ತೊಳೆತ್ತ ಕೆಲಸ ನಿಂಗಳದ್ದೇ ಹೇಳಿ ಯಜಮಾನ್ತಿ ಹೇಳಿರೆ ಕಷ್ಟ ಇದಾ. ಶುದ್ದಿ ಲಾಯಕಾಯಿದು ಒಪ್ಪಣ್ಣ. ಒಪ್ಪಣ್ಣ ಬೈಲಿಲ್ಲಿ ಹಿಂದೆ ಬಂದೊಂಡಿದ್ದಿದ್ದ ಶುದ್ದಿಗೊ ಪುನ: ನೆಂಪಾತು.

 4. ಶರ್ಮಪ್ಪಚ್ಚಿ says:

  ಎಂಗೊ ಸಣ್ಣಾಗಿಪ್ಪಾಗ, (ಬಹುಶಃ ಒಂದೈವತ್ತು ವರ್ಷ ಮೊದಲು) ಮಣ್ಣ ಪಾತ್ರೆಯೇ ಅಡಿಗೆಗೆ, ಕರಟದ ಕೈಲೇ(ಸೌಟು) ಬಳುಸಲೆ. ಮತ್ತೆ ಚೆಂಬಿನ ಪಾತ್ರ ಕಲಾಯಿ ಹಾಕಿದ್ದರ ಉಪಯೋಗವೂ ಇತ್ತಿದ್ದು.
  ನಿಧಾನಕೆ ಅಲುಮೀನಿಯಂ, ಸ್ಟೀಲ್ ಪಾತ್ರಂಗೊ ಈ ಜಾಗೆಯ ಅಕ್ರಮಿಸಿತ್ತು. ಅಲುಮಿನಿಯಂ ಪಾತ್ರಲಿ ಮಾಡಿದ್ದು ಆರೋಗ್ಯಕ್ಕೆ ಹಾಳು ಹೇಳಿ ಮತ್ತೆ ಲೇಖನಂಗೊ ಬಪ್ಪಲೆ ಸುರುಆತು, ಸ್ಟೀಲಿಂಗೆ ಹೋದವು ಜೆನಂಗೊ.
  ಮಣ್ಣಳಗೆಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಒಳ್ಳೆದು ಹೇಳಿ ನಮ್ಮ ಹಿರಿಯರು ತಿಳುಶಿಕೊಟ್ಟಿದವು.
  ಇದರ ಇನ್ನೊಂದು ಲಾಭ ಹೇಳಿರೆ ಗುಡಿಕೈಗಾರಿಕೆಗೆ ಪ್ರೋತ್ಸಾಹ ಕೊಟ್ಟ ಹಾಂಗೂ ಆವ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *