ಎರಡೆರಡು ಗೆರೆಯ ಇಪ್ಪತ್ತೆರಡು ಶುದ್ದಿಗೊ…!

October 7, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವರಾತ್ರಿ ಮುಗಾತೋ?
ಪುಸ್ತಕಪೂಜೆಯ ಚೀಪೆವಲಕ್ಕಿ ಮುಗಾತೋ?
ನವರಾತ್ರಿ ಎಡಕ್ಕಿಲಿ ಬೈಲಿಲಿ ರಜ ಜೆನ ಕಮ್ಮಿ, ಅಲ್ಲದ್ದೆ ಅಲ್ಲ!
ಎಲ್ಲೋರುದೇ ಅಂಬೆರ್ಪು- ಅಂಬೆರ್ಪು. ಅದರ ಎಡಕ್ಕಿಲಿ ಬೈಲಿಲಿ ಶುದ್ದಿ ಕೇಳೇಕು! ಹು!
~
ಬೈಲಿಲಿ ಶುದ್ದಿಗೊ ಎಲ್ಲ ತುಂಬ ದೊಡ್ಡ ಇರ್ತು, ಅದರ ಕೇಳುಲೇ ಪುರುಸೊತ್ತಿರ್ತಿಲ್ಲೆ – ಹೇದು ತರವಾಡುಮನೆ ಶಾಂಬಾವನ ಆರೋಪ.
ಶುದ್ದಿ ಹೇಳುಲೆ ನೆರೆಕರೆಯೋರಿಂಗೆ ಪುರುಸೊತ್ತು ಸಿಕ್ಕುತ್ತು, ಅಂಬಗ ಕೇಳುಲೆ ಬೈಲಿನೋರಿಂಗೆ ಇಲ್ಲೆಯೋ – ಕೇಳಿದೆ.
ಅಲ್ಲ, ಆರನ್ನೂ ದೂರ್ತ ಹಾಂಗಿಲ್ಲೆ ಈಗಾಣ ಕಾಲಲ್ಲಿ. ಅವಕ್ಕವಕ್ಕೆ ಅವರವರ ಅಂಬೆರ್ಪು.
ಎಂತ್ಸರ ಮಾಡುತ್ಸು!!
ಅಂಬೆರ್ಪಿನೋರಿಂಗೆ ಹೇಳಿಯೇ ಅಂಬೆರ್ಪಿಲಿ ಓದುತ್ತ ನಮುನೆ ಶುದ್ದಿ ಬರದರೆ ಹೇಂಗಕ್ಕು?
ಒಂದಕ್ಕೊಂದು ಸತ್ವ-ಸಮ್ಮಂದ ಇರೇಕು ಹೇಳಿ ಇಲ್ಲೆ, ಇಪ್ಪಲಾಗ ಹೇಳಿಯೂ ಇಲ್ಲೆ.
ನೆಗೆ ಬರೇಕು ಹೇಳಿ ಏನಿಲ್ಲೆ, ಬಪ್ಪಲಾಗ ಹೇಳಿಯೂ ಇಲ್ಲೆ – ಒಟ್ಟು ಶುದ್ದಿ ಇದ್ದರಾತು; ಇಪ್ಪ ರಜ್ಜವೇ ಸಮೆಯ ಕಳಿಯೇಕು.
ಹಾಂಗೆ, ಈ ವಾರ ಹಾಂಗಿರ್ತ ಶುದ್ದಿಯನ್ನೇ ಮಾತಾಡುವನೋ?
ಎಲ್ಲ ಶುದ್ದಿಗಳೂ ಎರಡೇ ಗೆರೆದು. ಕಣ್ಣಾಡುಸಿರೆ ಓದಿ ಮುಗಿಯೇಕು!
ಇದಾ, ಒಂದರ ಓದಲೆ ಅರ್ದ ನಿಮಿಷ ಹಿಡುದರೂ – ಒಟ್ಟು ಶುದ್ದಿ ಓದಲೆ ಹನ್ನೊಂದು ನಿಮಿಷ ಬೇಕಕ್ಕು, ಮತ್ತೆ ನಾಕು ನಿಮಿಷಲ್ಲಿ ಒಪ್ಪ ಕೊಟ್ರೆ, ಕಾಲುಗಂಟೆಲಿ ಶುದ್ದಿ ಓದುತ್ತ ಕಾರ್ಯ ಮುಗಾತು.
ಅಪ್ಪೋಲ್ಲದೋ?
~

 1. ಹಳೆಡಕ್ಕೆಗೆ ಇನ್ನೂರಾತು – ಹೇಳಿಗೊಂಡು ಶಾಂಬಾವ ಅಡಕ್ಕೆ ಕೊಟ್ಟನಾಡ.
  ಅಲ್ಲಿಂದ ಮುಳಿಯದ ಸರಾಪಣ್ಣನಲ್ಲಿಗೆ ಹೋದರೆ – ಚಿನ್ನಕ್ಕೆ ಕ್ರಯ ಮತ್ತೂ ಏರಿದ್ದು ಭಾವಾ – ಹೇಳಿದವಡ.
 2. ಶಿವಲಿಂಗ, ಸಾಲಿಗ್ರಾಮ ಎಲ್ಲ ಲೊಟ್ಟೆ.
  ನಿತ್ಯಪೂಜೆ ಮಾಡ್ತ ಅಗತ್ಯವೇ ಇಲ್ಲೆ ಹೇದು ದೇವರ ನಂಬದ್ದ ಬುದ್ಧಿಜೀವಿ ಗೆಡ್ಡದಪ್ಪಚ್ಚಿ ಕಾಸ್ರೋಡಿನ ಮಾಪುಳೆ ಅಂಗುಡಿಲಿ ಕೂದಂಡು ಲೊಟ್ಟೆಪಂಚಾತಿಗೆ ಬಿಟ್ಟುಗೊಂಡಿದ್ದ ಹಾಂಗೇ – ಅದು ಬಾಗಿಲೆಟ್ಟಿಕ್ಕಿ ಪಳ್ಳಿಗೆ ಹೋತಡ!
 3. ಬರೇ ಹತ್ರುಪಾಯಿ ಸಂಬಳ ಜಾಸ್ತಿ ಕೊಡ್ತದಕ್ಕೆ ಆಳುಗೊ ನಮ್ಮಲ್ಲಿಂದ ಬೇರೆದಿಕ್ಕೆ ಕೆಲಸಕ್ಕೆ ಹೋವುತ್ತವಡ.
  ಒಂದು ಕಂಪೆನಿಂದ ಹೆಚ್ಚು ಸಂಬಳದ ಇನ್ನೊಂದು ಕಂಪೆನಿಗೆ ಸೇರ್ಲೆ – ನೆಡುಗೆ ಒಂದುವಾರದ ರಜೆಲಿ ಊರಿಂಗೆ ಬಂದಿದ್ದ ಇಂಜಿನಿಯರು ಭಾವ ಹೇಳಿದ.
 4. ಹೆರಾಣ ಹರಟೆ ಬೇಡ ಹೇಳಿಗೊಂಡು ತಂಪಾದ ಏಸಿ ಬಸ್ಸಿಲಿ ಬೆಂಗುಳೂರಿಂಗೆ ಹೋದ್ಸಡ ರೂಪತ್ತೆ.
  ನಾಕುಸಾಲು ಹಿಂದಾಣ ಸೀಟಿಲಿ ಯೇವದೋ ಗೊರಕ್ಕೆ ಹೊಡದ್ದರ್ಲಿ ಇಡೀ ಇರುಳು ಒರಕ್ಕಿಲ್ಲೇಡ ರೂಪತ್ತೆಗೆ.
 5. ತೋಟಕ್ಕೆ ಬಂದ ದನುವಿನ ’ಕಾಲು ಮುರಿಯೇಕು’ ಹೇಳಿ ಬಡಿಗೆ ಹಿಡ್ಕೊಂಡು ಮೋಹನಬಂಟ ಓಡುಸಿಗೊಂಡು ಹೋಪಗ, ತೋಟಲ್ಲಿ ಅಡಿಮೊಗಚ್ಚಿ ಸೊಂಟ ಕುಸ್ಕಿದ್ದಡ. ಆರುತಿಂಗಳು ’ಮನುಗಿದಲ್ಲೇ’ ಇರೇಕು ಹೇಳಿದ್ದವಡ ಡಾಗುಟ್ರು.

  ಸ್ಕೂಟ್ರು ಹಳತ್ತಾಯಿದು. ಸ್ಕೂಟಿ ಹೊಸತ್ತಾಯಿದು! :-)
 6. ನೂರುಪುಟದ ಡಿಕಿಶ್ನರಿ ಮೊನ್ನೆ ಬೆಳ್ಳಕ್ಕೆ ಹೋತು ಹೇಳಿಗೊಂಡು ನೆಗೆಮಾಣಿ ಇಂಗ್ಳೀಶುಕಲಿಯಲೆ ಹೋಯಿದನಿಲ್ಲೇಡ.
  ಶುದ್ದಿ ಗೊಂತಾದ್ದಕ್ಕೆ ಮಾಷ್ಟ್ರುಮಾವ ಐನ್ನೂರು ಪುಟದ ಹೊಸ ಡಿಕಿಶ್ನರಿ ತಂದುಕೊಟ್ಟಿದವಡ!
 7. ಈ ಒರಿಶದ ನವರಾತ್ರಿಗೆ ಮಾಂಕು ಕೊರಗ್ಗನ ವೇಶ ಹಾಕಿದ್ದು ಅಕೇರಿ ಅಡ.
  ಬಾಯಮ್ಮನ ಮದುವೆ ಆದ ಅದರ ಮಗ ವೇಶ ಮುಂದುವರುಸ ಹೇಳಿ ಪ್ರಾಯ ಆದ ಮಾಂಕುಗೂ ಗೊಂತಿತ್ತು.
 8. ಇಂಜಿನಿಯರು ಕಲ್ತುಗೊಂಡಿಪ್ಪ ಪಾಡಿ ಕೂಸು ಕೆಲಸಕ್ಕೆ ಹೋವುತ್ತ ಯೋಚನೆಲಿ ರೆಸ್ಯೂಮು ಮಾಡ್ತ ಗಡಿಬಿಡಿಲಿ ಇದ್ದತ್ತು.
  ಪಾಡಿಮಾವ ಅದರಿಂದಲೂ ಬೇಗ ಜಾತಕಪಟಮಾಡಿ ಮದುವೆ ಗಡಿಬಿಡಿ ಹಬ್ಬುಸಿಬಿಟ್ಟವು!
 9. ಪಾರೆ ಮಗುಮಾವ ಮದಲಿಂಗೆ ಮಗಳ ಶಾಲೆಒರೆಂಗೆ ಬಿಟ್ಟು ಬಂದುಗೊಂಡಿತ್ತವು – ಸ್ಕೂಟರಿಲಿ.
  ಈಗ ಮಗುಮಾವ ಎಲ್ಯಾರು ಜೆಂಬ್ರಕ್ಕೋ ಮಣ್ಣ ಹೋಯೇಕಾರೆ ಮಗಳೇ ಬಿಟ್ಟಿಕ್ಕಿ ಬಪ್ಪದಡ, ಸ್ಕೂಟಿಲಿ!
 10. ರೂಪತ್ತೆಯ ಕಾರಿನ ಚಕ್ರಕ್ಕೆ ಗಾಳಿಹಾಕಿದ ಪೆಟ್ರೋಲುಬಂಕಿನ ಹುಡುಗಂಗೆ ಒಂದು ಪೈಶೆಯೂ ಕೊಡ್ತಿಲ್ಲೇಡ.
  ರೂಪತ್ತೆಗೇ ಗಾಳಿ ಹಾಕಿದ್ದರೆ ಕೊಡ್ತಿತೋ ಏನೋ!
 11. ಕೊಳೆರೋಗ ಜೋರು ಬಂದದಕ್ಕೆ ಬೈಲಿಲಿ ಎಲ್ಲೋರುದೇ ಮಳೆಯ ಬೈದವು.
  ಈಗ ನವರಾತ್ರಿಗೆ ಬಾರದ್ದೇ ಇದ್ದದಕ್ಕೆ ಮಳೆಯ ಪುನಾ ಬೈದವು!
 12. ಬೋಚಬಾವ ಕಾಳಿದಾಸ ಅಪ್ಪಲೆ ಕಾಳಿದೇವಸ್ಥಾನವೇ ಸಿಕ್ಕುತ್ತಿಲ್ಲೇಡ.
  ಎಲ್ಲಿಗೆ ಹೋದರೂ ಅವಂಗೆ ಕಾಲಿದೇವಸ್ಥಾನವೇ ಕಾಂಬದಾಡ!
 13. ದೊಡ್ಡಳಿಯ ಕೃಷ್ಣನವೇಷ ಹಾಕಿ ’ಚೆಂದ ಆಯಿದೋ’ – ನೋಡ್ಳೆ ಕಣ್ಣಾಟಿ ಎದುರೆ ನಿಂದನಾಡ.
  ಕಣ್ಣಟಿಲಿ ಅವ ಎಲ್ಲಿದ್ದ ಹೇಳಿ ಅವಂಗೇ ಗೊಂತಾಯಿದಿಲ್ಲೇಡ! 😉
 14. ಬೊಳುಂಬುಅಜ್ಜ ಸೈಕ್ಕಾಲು ಕಲ್ತು ಮೈಕೈ ಗಾಯ ಮಾಡಿಗೊಂಡದು ಗೊಂತಿದ್ದಲ್ಲದೋ.
  ಬೊಳುಂಬುಮಾವನೂ ನಾಟಕ ಮಾಡಿ ಕೈಕ್ಕಾಲು ಬೇನೆಮಾಡಿಗೊಳ್ತವು ಹೇಳಿ ಬೊಳುಂಬುಮಾವನ “ಅಜ್ಜ” ಮೊನ್ನೆ ಕೊಡೆಯಾಲಲ್ಲಿ ಶರ್ಮಪ್ಪಚ್ಚಿಯ ಹತ್ತರೆ ಬೇಜಾರುಮಾಡಿಗೊಂಡವಡ.
 15. ನೆಗೆನೆಗೆಮೋರೆಯ ನೆಗೆಮಾಣಿಗೆ ನೆಗೆಯೇ ಕಮ್ಮಿ ಆಗಿತ್ತಾಡ;
  ಬೈಲಿಲಿ ನೆಗೆಚಿತ್ರಶಾಮಣ್ಣನ ನೆಗೆಚಿತ್ರ ನೋಡಿ ನೆಗೆಮಾಣಿಗೇ ನೆಗೆಬಂತಡ.
 16. ಸರ್ಪಮೆಲೆ ಮಾವಂಗೆ ಕಳುದೊರಿಶ ರಿಟೇರ್ಡು.
  ನೆಂಟ್ರಮನೆಗೆ ರಿಟೇರ್ಡು ಆದ ಮತ್ತೆ ಹೋಪೊ ಗ್ರೇಶಿದ್ದದಡ; ಈಗ ನೋಡಿರೆ, ಮದಲೇ ಪುರುಸೊತ್ತು ಜಾಸ್ತಿ ಇದ್ದದು ಹೇಳಿ ಅನುಸುತ್ತಾಡ.
 17. ಸುಬಗಣ್ಣಂಗೆ ಎಕೌಂಟು ಲೆಕ್ಕ ಬರಕ್ಕೊಂಡು ಬೇಲೆನ್ಸು ಮಾಡುವಗ ಈಗ ಒಂದೊಂದರಿ ಹಳೆಮರಪ್ಪು ಬಂದು ಮಾಲ್ತಾಡ.
  ಮತ್ತೆ ಮಗನ ಕೈಲಿ ಕೇಳಿ ಸರಿಮಾಡಿಗೊಂಬದಾಡ!
 18. ಪ್ರಾಯ ಆದ ಬಂಡಾಡಿಅಜ್ಜಿಗೆ ಹಲ್ಲಿಲ್ಲೆ.
  ಪ್ರಾಯ ಹಿಡಿಯದ್ದ ನೆಗೆಮಾಣಿಗೂ ಹಲ್ಲಿಲ್ಲೆ!
 19. ಬೆಂಗುಳೂರಿಲಿಪ್ಪ ಪುಟ್ಟಬಟ್ರಿಂಗೆ ಅಂದೇ ಮೊಬಾಯಿಲು ಇದ್ದಾಡ.
  ಈಗ ಮಂತ್ರ ಹೇಳುವಾಗ “ಕಾಲೇ ವರುಷತು ಪರ್ಜನ್ಯಃ ಮಿಸ್-ಕಾಲೇ ಸಸ್ಯಶಾಲಿನೀ” ಹೇಳಿ ಕವಲು ಹೋವುತ್ತಾಡ!
 20. ಕಾನಾವು ಡಾಗುಟ್ರ ಆಪೀಸಿಲಿ ಯಕ್ಷಗಾನದ ಬೊಂಬೆ ಯೇವತ್ತೂ ಇದ್ದಾಡ.
  ಅವರ ಮನೆಲಿ ತಾಳಮದ್ದಳೆ ಯೇವತ್ತೂ ಇದ್ದೋ – ಉಮ್ಮಪ್ಪ!? 😉
 21. ಮೊನ್ನೆ ಅಜ್ಜಕಾನಬಾವ ಒಂದು ಶುದ್ದಿ ಹೇಳಿದ, ಭಾರೀ ಆಲೋಚನೆ ಮಾಡೇಕಾದ ವಿಚಾರ.
  ಊರಿಂದ ಬೆಂಗುಳೂರಿಂಗೆ ಹೋಪಲೆ ಮದಲೇ ಟಿಗೇಟು ಮಾಡೇಕಾವುತ್ತು, ಆದರೆ ಬೆಂಗುಳೂರಿಂದ ಊರಿಂಗೆ ಬರೇಕಾರೆ ಮದಲೇ ಟಿಗೇಟು ಮಾಡೇಕು ಹೇದು ಏನಿಲ್ಲೆಡ!
 22. ನವಗೆ ಹೇಳುಲಿಪ್ಪದರ ಎರಡೇ ಗೆರೆಲಿ ತೂಷ್ಣಿಲಿ ಮುಗುಶೇಕು.
  ಒಂದುಗೆರೆಲಿ ಸುರುಮಾಡೇಕು, ಇನ್ನೊಂದು ಗೆರೆಲಿ ನಿಲ್ಲುಸೇಕು! 😉

~
ಅದಾ, ಒಂದಲ್ಲ – ಎರಡಲ್ಲ ಇಪ್ಪತ್ತೆರಡು ಶುದ್ದಿಗೊ; ಎರಡೇ ಗೆರೆಗೊ ಪ್ರತಿ ಶುದ್ದಿಲಿಯೂ.
ಒಂದರಿಂದ ಒಂದಕ್ಕೆ ಸಮ್ಮಂದ ಇಲ್ಲೆ!

ಶುದ್ದಿ ಸಣ್ಣ ಆದಷ್ಟು ಅದರ ಯೋಚನೆಮಾಡ್ತ ವೈಶಾಲ್ಯತೆ ಜಾಸ್ತಿ ಅಡ, ಮಾಷ್ಟ್ರುಮಾವ ಹೇಳುಗು.
ಅಲೋಚನೆ ಮಾಡಿದ ಹಾಂಗೆ – ಅದರ ಆಳ,ವಿಸ್ತಾರಂಗೊ ದೊಡ್ಡ ಇದ್ದು ಹೇಳ್ತದು ಅರಡಿಗು. ಮಾತು ಕಮ್ಮಿ ಆದಷ್ಟು ತೂಕ ಜಾಸ್ತಿ ಆವುತ್ತು.
‘ಎಷ್ಟುಬೇಕೋ ಅಷ್ಟೇ’ ಹೇಳ್ತಹಾಂಗೆ ಮಾತಾಡಿತ್ತುಕಂಡ್ರೆ ತೂಕ ಹೆಚ್ಚಪ್ಪದಡ.
ಹಾಂಗಾಗಿ ಈ ವಾರದ ಶುದ್ದಿಗಳೂ – ಎರಡು ಗೆರೆ ಮಾತುಗೊ ಮಾಂತ್ರ!

ಒಂದು – ಮಾತು ಸುರುಮಾಡ್ಳೆ, ಇನ್ನೊಂದು – ನಿಲ್ಲುಸಲೆ. ಅಷ್ಟೇ! :-)
~

ಒಟ್ಟಿಲಿ ಹೇಳ್ತರೆ, ಅಗತ್ಯ ಬಿದ್ದಿಪ್ಪಾಗ ಮಾತಾಡ್ಳೂ ಅರಡಿಯೇಕು, ಸಮಯ ಬಪ್ಪಗ ನಿಲ್ಲುಸಲೂ ಅರಡಿಯೇಕು.
ಎರಡ್ರಲ್ಲಿ ಯೇವದಾರು ಒಂದು ಅರಡಿಯದ್ರೂ – ಜೆನ ಸೋತದೇ.
ಅಗತ್ಯ ಬಿದ್ದಲ್ಲಿ ಮಾತಾಡದ್ರೆ ಸುಮ್ಮನೇ ವಾದ-ಅಪವಾದಂಗೊ ಬಪ್ಪಲೂ ಸಾಕು ಕೆಲವು ಸರ್ತಿ.
ಹಾಂಗೇ, ಅಗತ್ಯ ಇಲ್ಲದ್ದೇ ಮಾತಾಡಿರೆ ಹೇಂಗಕ್ಕು – ರಜ ಅರೆಮರುಳು ಹೇಳವೋ?

ಬೈಲಿನ ಎಲ್ಲ ನೆರೆಕರೆಯೋರುದೇ – ಸಮಯ ಸಂದರ್ಭ ಅರ್ತು ಬೇಕಾದಟ್ಟೇ ಮಾತಾಡುಗು. ಹಾಂಗೇಅದರ ಸೂಚಕವಾಗಿ ಒಪ್ಪಣ್ಣನ ಈ ಶುದ್ದಿ!
ಉದ್ದದ ಶುದ್ದಿ ಕೇಳಲೆ ಉದಾಸ್ನ ಆವುತ್ತೋರಿಂಗೆ ಇದರ ಕೇಳಲೆ ಉದಾಸ್ನ ಬಾರ.
ಉದ್ದದ ಶುದ್ದಿಯೇ ಆಯೇಕು – ಹೇಳ್ತ ನೆರೆಕರೆಯೋರಿಂಗೆ ಇನ್ನು ಒಪ್ಪ ಬರವಲೆ ಪುರುಸೊತ್ತಿದ್ದು!
ಎಂತ ಹೇಳ್ತಿ?

ಒಂದೊಪ್ಪ: ಮಾತು ಸಣ್ಣ ಆಯೇಕು.
ಆದರೆ, ಮನಸ್ಸು ಸಣ್ಣ ಅಪ್ಪಲಾಗ. :-)

ಎರಡೆರಡು ಗೆರೆಯ ಇಪ್ಪತ್ತೆರಡು ಶುದ್ದಿಗೊ…!, 5.0 out of 10 based on 4 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಮಾತು ಬೆಳ್ಳಿ ,ಮೌನ ಬಂಗಾರ ಹೇಳಿ ೨ ಗೆರೆಯ ೨೨ ಶುದ್ದಿಗೊಕ್ಕೆ ೧ ಗೆರೆಯ ಒಪ್ಪ .

  [Reply]

  VA:F [1.9.22_1171]
  Rating: 0 (from 0 votes)
 2. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಕ್ರಿಷ್ಣ ಚಾಮಿಯ ಪುಟ್ಟುಬಾಯಿಲಿ ಬ್ರಹ್ಮಾಂಡ ಕಂಡಾಂಗೆ ಸಣ್ಣ ಎರಡು ಗೆರೆಲಿ ವಿಶಾಲ ಅರ್ಥ ಬಪ್ಪಾಂಗೆ ಬರದ್ದು ಭಾರೀ ಪಷ್ಟಾಯಿದು. :)

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಒ೦ದೊ೦ದರ ಓದಿ ಹನ್ನೊ೦ದು ನಿಮಿಷ ಯೊಚನೆ ಮಾಡುವ ಹಾ೦ಗಿದ್ದು.
  ಅಲ್ಲಾ,
  ” ಒಪ್ಪಣ್ಣನ ಈ ಶುದ್ದಿ ಓದಿ ನೆಗೆ ತಡವಲೆಡಿಯ
  ನಮ್ಮ ಹಾಲಿ(ಜಿ) ಮುಖ್ಯಮ೦ತ್ರಿದೂ ಇವ೦ದೂ ಒ೦ದೇ ಊರೋ?”

  [Reply]

  VA:F [1.9.22_1171]
  Rating: 0 (from 0 votes)
 4. ವಿಷ್ಣು ನಂದನ
  ವಿಷ್ಣು ನಂದನ

  ಅದ್ಹುತ ಲೇಖನ. ತುಂಬಾ ಲಾಯ್ಕಾದು.

  [ಶಿವಲಿಂಗ, ಸಾಲಿಗ್ರಾಮ ಎಲ್ಲ ಲೊಟ್ಟೆ.
  ನಿತ್ಯಪೂಜೆ ಮಾಡ್ತ ಅಗತ್ಯವೇ ಇಲ್ಲೆ ಹೇದು ದೇವರ ನಂಬದ್ದ ಬುದ್ಧಿಜೀವಿ ಗೆಡ್ಡದಪ್ಪಚ್ಚಿ ಕಾಸ್ರೋಡಿನ ಮಾಪುಳೆ ಅಂಗುಡಿಲಿ ಕೂದಂಡು ಲೊಟ್ಟೆಪಂಚಾತಿಗೆ ಬಿಟ್ಟುಗೊಂಡಿದ್ದ ಹಾಂಗೇ – ಅದು ಬಾಗಿಲೆಟ್ಟಿಕ್ಕಿ ಪಳ್ಳಿಗೆ ಹೋತಡ!
  ಬರೇ ಹತ್ರುಪಾಯಿ ಸಂಬಳ ಜಾಸ್ತಿ ಕೊಡ್ತದಕ್ಕೆ ಆಳುಗೊ ನಮ್ಮಲ್ಲಿಂದ ಬೇರೆದಿಕ್ಕೆ ಕೆಲಸಕ್ಕೆ ಹೋವುತ್ತವಡ.
  ಒಂದು ಕಂಪೆನಿಂದ ಹೆಚ್ಚು ಸಂಬಳದ ಇನ್ನೊಂದು ಕಂಪೆನಿಗೆ ಸೇರ್ಲೆ – ನೆಡುಗೆ ಒಂದುವಾರದ ರಜೆಲಿ ಊರಿಂಗೆ ಬಂದಿದ್ದ ಇಂಜಿನಿಯರು ಭಾವ ಹೇಳಿದ.
  ಹೆರಾಣ ಹರಟೆ ಬೇಡ ಹೇಳಿಗೊಂಡು ತಂಪಾದ ಏಸಿ ಬಸ್ಸಿಲಿ ಬೆಂಗುಳೂರಿಂಗೆ ಹೋದ್ಸಡ ರೂಪತ್ತೆ.
  ನಾಕುಸಾಲು ಹಿಂದಾಣ ಸೀಟಿಲಿ ಯೇವದೋ ಗೊರಕ್ಕೆ ಹೊಡದ್ದರ್ಲಿ ಇಡೀ ಇರುಳು ಒರಕ್ಕಿಲ್ಲೇಡ ರೂಪತ್ತೆಗೆ]

  ಈ ಸಾಲುಗೊ ತುಂಬಾ ಹಿಡಿಶಿತ್ತು. ೨ ಗೆರೆಲಿ ಎಲ್ಲಾ ಸಾರ ಹೊಂದುಸುತ್ತ ಕೆಲಸ ಸಂಸ್ಕ್ರುತ ಕವಿಗೊ ಮಾಡಿಯೊಂಡು ಇತ್ತವು. ಹೀಂಗಿಪ್ಪದು ಇನ್ನಷ್ಟು ಬರಲಿ.

  [Reply]

  VA:F [1.9.22_1171]
  Rating: 0 (from 0 votes)
 5. ದೀಪಿಕಾ
  ದೀಪಿಕಾ

  ತು೦ಬಾ ಲಯಿಕಾಯ್ದು ಬರದ್ದು..ಸುಮಾರು ಆಲೋಚನೆ ಮಾಡುವ೦ತ ವಿಶಯವ ಎರಡೇ ಗೆರೆಲಿ ಹೇಳಿದ್ದು ಪಷ್ಟಾಯ್ದು!!

  [Reply]

  VN:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಸೂರ್ಯ

  ಭಲೆ ಒಪ್ಪಣ್ಣ ಭಲೆ…
  ಚಿಕ್ಕ ಗೆರೆಗಳ ಚೊಕ್ಕ ಶುದ್ದಿಗ ಅರ್ಥಗರ್ಭಿತವೂ, ಚಿಂತನಾರ್ಹವೂ ಅಪ್ಪು..
  ಕೊಶಿ ಆತು…
  ಚೆನ್ನೈ ಭಾವನ ಒಪ್ಪ ಅಂತು ಅದ್ಭುತ…:)

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಪ್ರಕಾಶ ಕುಕ್ಕಿಲ

  ಸಣ್ಣ ಸಣ್ಣ ಶುದ್ಧಿಗೊಕ್ಕೇ ಈಗ ಡಿಮಾಂಡು..
  ಈಗೆಲ್ಲ ಬಫೆಲ್ಲಿ ಉಂಡಿಕ್ಕಿ ಓಡುದೇ ಮಾತಾಡಿಗೊಂಡು ಕೂಪಲೆ ಪುರುಸೊತ್ತು ಇಲ್ಲೇ..
  ಪೇಟೆಲಿಯೂ ಹಳ್ಳಿಲಿಯು..
  ಲಾಯಿಕಾಯಿದು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುನೀರ್ಕಜೆ ಮಹೇಶಶುದ್ದಿಕ್ಕಾರ°ಯೇನಂಕೂಡ್ಳು ಅಣ್ಣಮಾಲಕ್ಕ°ಜಯಗೌರಿ ಅಕ್ಕ°ರಾಜಣ್ಣಪ್ರಕಾಶಪ್ಪಚ್ಚಿಶಾಂತತ್ತೆವೇಣೂರಣ್ಣಕಾವಿನಮೂಲೆ ಮಾಣಿದೊಡ್ಮನೆ ಭಾವವಾಣಿ ಚಿಕ್ಕಮ್ಮಅಕ್ಷರದಣ್ಣವೇಣಿಯಕ್ಕ°ಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆಪಟಿಕಲ್ಲಪ್ಪಚ್ಚಿvreddhiಶಾ...ರೀಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ