Oppanna.com

ಗಡಿ ಗಟ್ಟಿ ಇದ್ದರೆ ದೇಶದೊಳ ಗಡಿಬಿಡಿ ಇರ..!

ಬರದೋರು :   ಒಪ್ಪಣ್ಣ    on   21/12/2012    9 ಒಪ್ಪಂಗೊ

ಗುಜರಾತಿಲಿ ಓಟು ಕಳಾತು. ಇಂದು ಅವರ ಪಾಸುಪೈಲುದೇ ಬಂತು. ಆರಿಂಗೆಷ್ಟು ಬಂತು, ಆರು ಸೀಟಿ ಹಿಡಿಸ್ಸು ಹೇದು ಗುಣಾಜೆಮಾಣಿಗೆ ಮೊನ್ನೆಯೇ ಅಂದಾಜಿ ಆಯಿದು.
ಅವಂಗೆ ಬಿಡಿ, ಓಟು ಆಯೇಕಾರೆಯೇ ಅಂದಾಜಿ ಆಗಿದ್ದತ್ತು, ಆದರೆ ಪೆರ್ಲದಣ್ಣಂಗೆ ಇಂದೇ ಗೊಂತಾದ್ದದು.
ಏನೇ ಇರಳಿ, ಭವ್ಯ ಭಾರತದ ಗಟ್ಟಿ ಭವಿಶ್ಯತ್ತಿನ ಸೂಚನೆ ಅದು – ಹೇಳ್ತದು ಗುಣಾಜೆಮಾಣಿಯ ಅಭಿಪ್ರಾಯ.
ಅದಿರಳಿ.

~

ಬೈಲಿಂಗಿಡೀ ಉಪದ್ರ ಕೊಡ್ತ ಮಂಗಂಗಳ ಉಪಾಯಲ್ಲಿ ಹಿಡಿತ್ತ ಏರ್ಪಾಡು – ಕಳುದ ವಾರ ಮಾತಾಡಿದ್ದು.
ಇಡೀ ತೋಟಕ್ಕೆ ಒಗ್ಗಟ್ಟಿಲಿ ಧಾಳಿಮಾಡಿ ಬೆಳೆ ಹಾಳುಮಾಡ್ತ ಮಂಗಂಗಳ, ಬೈಲಿನೋರೆಲ್ಲ ಒಗ್ಗಟ್ಟಿಲಿ ಹಿಡುದು – ತೋಟವ ಭದ್ರ ಪಡುಸುತ್ತದು ಕ್ರಮ. ಕಾಡಿನ ಮಂಗಂಗೊ ನಾಡಿಂಗೆ ಬತ್ತದರ ತಪ್ಪುಸುತ್ತದು ಇದರ ಉದ್ದೇಶ.
ಮನ್ನೆ ಪೆರ್ಲದಣ್ಣ ಸಿಕ್ಕಿತ್ತಿದ್ದ°, ಮದುವೆ ಹೇಳಿಕೆ ಗಡಿಬಿಡಿ ಎಡೆಲಿ. ಪೆರ್ಲದಣ್ಣಂಗೆ ಮಂಗನ ಹಿಡಿತ್ತದು ಹೇಂಗೇದು ಅರಡಿಯ; ಕಂಪ್ಲೀಟರಿಲಿ ಯೇವದೋ ಪೈಲು ಹಿಡಿತ್ತದು ಅರಡಿಗು ಬೇಕಾರೆ. ಮೊನ್ನೆ ಮಾತಾಡುವಗ ಒಪ್ಪಣ್ಣಂಗೆ ಈ ಸಂಗತಿ ಅಂದಾಜಿ ಆಗಿದ್ದತ್ತು. ಅಲ್ಲ – ಮದುವೆ ಗಡಿಬಿಡಿಲಿ ಇರ್ತೋನಿಂಗೆ ಮಂಗನ ಹಿಡಿಯಲೆ ಅರಡಿಯೇಕಾದ್ಸು ಏನಿಲ್ಲೆ, ಅದು ಬೇರೆ. ಒಪ್ಪಣ್ಣ ಎಂತದೋ ಹೇಳ್ಳೆರಟು ಎಂತೆಂತದೋ ಆವುಸ್ಸು ಒಂದೊಂದರಿ, ಛೇ – ಈಗಳೂ ಹಾಂಗೇ ಆತು. ಹ್ಮ್, ಎಂತರ ಹೇಳ್ಳೆ ಗ್ರೇಶಿದ್ದು ಹೇದರೆ..

~

ಮದುವೆಗೆ ದಿನ ಹತ್ತರೆ ಬಂದ ಹಾಂಗೆ – ಪರೀಕ್ಷೆಗೆ ದಿನ ಹತ್ತರೆ ಬಂದ ಮಕ್ಕಳ ಹಾಂಗೆ – ಗವುಜಿ ಗಡಿಬಿಡಿ ಜಾಸ್ತಿ ಆಡ, ಬೀಸ್ರೋಡುಮಾಣಿ ಹೇಳಿತ್ತಿದ್ದ°. ಪೆರ್ಲದಣ್ಣನ ನೋಡಿರೆ ಸಂಶಯ ಬಪ್ಪಲಿದ್ದು.
ಎಂತಕೆ – ಭಾರೀ ಆರಾಮಲ್ಲಿ ಇದ್ದ° ಇದಾ. “ಮದುವೆ ತನಗೇ ಅಲ್ಲ” ಹೇಳ್ತಷ್ಟು ಆರಾಮ! ಮೆಲ್ಲಂಗೆ ನಿದಾನಕ್ಕೆ ಹದಾಕೆ ಸಮದಾನಲ್ಲಿ ಯೇವತ್ರಾಣಂತೇ ತುಂಬ ಮಾತಾಡಿದ ಮೊನ್ನೆ ಸಿಕ್ಕಿಪ್ಪಗಳೂ. ಗುಣಾಜೆಮಾಣಿಯ ಹಾಂಗೆ ಹತ್ತು ಕೆಲಸ ಒಟ್ಟಿಂಗೇ ಮಾಡದ್ದರೂ – ಹಿಡುದ ಒಂದೊಂದೇ ಕೆಲಸ ಮುಗಿಶುತ್ತ ಲೆಕ್ಕಲ್ಲಿ, ಹೇಳಿಕೆ ಒಂದೊಂದನ್ನೇ ಮುಗುಶಿಂಡು ಬತ್ತಾ ಇದ್ದನಾಡ. ಕೊಡೆಯಾಲದ ಅಕ್ಷರದಣ್ಣಂಗೆ ಹೇಳಿಕೆ ಮುಗುಶಿ ಬೈಲಿಂಗೆ ಬಂದದಾಡ, ಬೈಲಿನ ನೆರೆಕರೆಗೂ ಹೇಳಿಕೆ ಮಾಡಿದ°. ಇನ್ನು ಬೀಸ್ರೋಡುಮಾಣಿಯ ಕಾಂಬಲೆ ಬೀಸ್ರೋಡಿಂಗೇ ಹೋಪದಾಡ!

ಆಗಲಿ, ಒಳ್ಳೆದಾತು, ಬೀಸ್ರೋಡಿಂಗೆ ಹೋಪಗ ಜಾಗ್ರತೆ ಹೇಳಿದೆ. ಸ್ವಾಭಾವಿಕವಾಗಿ ಅಕ್ಷರದಣ್ಣನ ಬಗ್ಗೆಯೂ ಮಾತಾಡಿದೆಯೊ°.

ಅಕ್ಷರದಣ್ಣಂದು ಎಂತ ಶುದ್ದಿ? ಕೇಳಿದೆ. ಉತ್ತರಭಾರತಕ್ಕೆ ಹೋಗಿತ್ತಿದ್ದವಡಾ. ಮುನ್ನಾದಿನ ಬಂದದಷ್ಟೇಡ – ಹೇಳಿದ° ಪೆರ್ಲದಣ್ಣ. ಹೋ, ತಿಂಬಲೆಂತ ತಯಿಂದವು? ಕೇಟೆ. ತಿಂಡಿ ತಪ್ಪಲೆ ಹೋದ್ಸಲ್ಲ ಒಪ್ಪಣ್ಣೋ – ಅದೆಂತದೋ “ಗಡಿಗೆ ನಮಸ್ಕಾರ” ಹೇಳ್ತ ಕಾರ್ಯಕ್ರಮ ಆಡ, ಅದರ ಮೂಲಕ ಹೋದ್ಸಾಡ ಹೇದು ಪೆರ್ಲದಣ್ಣ ವಿವರುಸಿದ°.
ಗಡಿಗೆಯೋ? ಯೇವ ಗಡಿ? ಎಂತ? ಅದೆಂತ ಕಾರ್ಯಕ್ರಮ? ವಿವರ ಅರಡಿಗೋ? ಕೇಳಿದೆ.
ಈಗ ಎನಗೆ ಗೊಂತಿಪ್ಪಷ್ಟು ಹೇಳ್ತೆ – ಪೂರ್ತಿ ವಿವರ ಇಂಟರ್ನೆಟ್ಟಿಲಿ ಸಿಕ್ಕುಗು – ಹೇಳಿ ವಿಶಯ ಸುರುಮಾಡಿದ°.
~
ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇದರೆ ಭಾರತದ ರಾಷ್ಟ್ರೀಯ ವಿಚಾರವಾದಿ ಸಂಘಟನೆ. ಗುರ್ತ ಇಪ್ಪೋರು ಬಾಯಿಲಿ “ಸಂಘ” ಹೇಳಿ ಗುರುತಿಸಿಗೊಳ್ತು; ಹಾಂಗೆ ಹೇಳ್ತೋರ “ಸ್ವಯಂಸೇವಕರು” ಹೇಳಿ ಗುರುತುಸುತ್ತವು. ನಮ್ಮ ದೇಶದ ಹಿರಿಮೆ ಗರಿಮೆಗಳ ಬಗ್ಗೆ ಸಾರಿ ಹೇಳಿ, ನಮ್ಮ ದೇಶದ ಸಾಂಸ್ಕೃತಿಕ, ಬೌದ್ಧಿಕ ವಿಚಾರಂಗಳ ಬಗ್ಗೆ ಮಂಥನ ಮಾಡಿ – ಭಾರತೀಯತೆಯ ಒಳಿಶುತ್ತದು ಸಂಘದ ಉದ್ದೇಶ. ಡಾಕ್ಟರ್ಜೀ ಹೇಳ್ತ ಹಿರಿಯರು ಆರಂಭ ಮಾಡಿದ ಸಂಘ ಅಂದಿಂದ ಇಂದಿನ ಒರೆಂಗೂ ಏಕಧ್ಯೇಯಲ್ಲಿ ಬೆಳದು ಬತ್ತಾ ಇದ್ದು. ಯುದ್ಧ ಸಂದರ್ಭಲ್ಲಿಯೂ, ಶಾಂತಿ ಸಂದರ್ಭಲ್ಲಿಯೂ – ಎರಡೂ ಹೊತ್ತಿಲಿ ಬೇಕಾದ ಸೇವೆ ಸಲ್ಲಿಸಿಗೊಂಡು ಬಯಿಂದು. ಇದರ ಕುಂಟಾಂಗಿಲ ಭಾವನೂ ಒಪ್ಪುಗು, ಅಕ್ಷರದಣ್ಣನೂ ಒಪ್ಪುಗು, ಗುಣಾಜೆ ಮಾಷ್ಟ್ರೂ ಒಪ್ಪುಗು, ಮಾಷ್ಟ್ರುಮಾವನ ದೊಡ್ಡಮಗ – ಅಮೇರಿಕಲ್ಲಿಪ್ಪೋನೂ ಒಪ್ಪುಗು! ಜಾತಿ, ನೀತಿ, ರೀತಿ, ಭೀತಿ ಮೀರಿದ ಅಭೂತಪೂರ್ವ ಸಂಘಟನೆ. ದೇಶ ಜಾಗೃತಿಗಾಗಿ ಹಲವು ಕಾರ್ಯಂಗೊ ಸಂಘಂದಾಗಿ ನೆಡೆತ್ತು.

ಸಂಘ ಆಯೋಜನೆ ಮಾಡಿದ ಹಲವು ಕಾರ್ಯಕ್ರಮಂಗಳಲ್ಲಿ ಇದೊಂದು ವಿಶಿಷ್ಟ ಕಾರ್ಯಕ್ರಮ – ಸರಹದ್ ಕೋ ಪ್ರಣಾಮ್ – ಹೇಳಿ ಆಡ. ಸರಹದ್ದು – ಹೇದರೆ ಸೀಮೆ, ಗಡಿ. ಎಂತರ ಸರಹದ್ದು – ನಮ್ಮ ದೇಶದ್ದು. “ಸರಹದ್ ಕೋ ಪ್ರಣಾಮ್” ಹೇದರೆ – ಗಡಿಗೆ ನಮಸ್ಕಾರ ಹೇದು ಹಿಂದಿಲಿ ಅರ್ತ. ಪೆರ್ಲದಣ್ಣಂಗೆ ಹಿಂದಿ ಸಮಗಟ್ಟು ಅರಡಿಯದ್ದರೂ ಮೇಗಂದ ಮೇಗೆ ಅರಡಿತ್ತು.

ನಮ್ಮ ದೇಶದ ಸುತ್ತಲೂ ಇಪ್ಪ, ನಮ್ಮ ದೇಶದ ಅಸ್ಮಿತೆಯ ಪ್ರತೀಕ ಆದ, ವಿದೇಶದ ಭೌಗೋಳಿಕ ಪ್ರದೇಶಂದ “ನಮ್ಮ ದೇಶ” ಆರಂಭ ಮಾಡುವ ಗಡಿಭಾಗಂಗಳ ಭೇಟಿಮಾಡಿ, ಅಲ್ಯಾಣ ಸ್ಥಿತಿಗತಿ- ಜೆನಜೀವನವ ತಿಳ್ಕೊಂಡು ನಮ್ಮ ಊರೂರು, ಹಳ್ಳಿಹಳ್ಳಿಗೊಕ್ಕೆ ತಿಳುಶುತ್ತ ಕಾರ್ಯ ಈ “ಸರಹದ್ ಕೋ ಪ್ರಣಾಮ್” ಕಾರ್ಯಕ್ರಮದ ಚಿಂತನೆ.

ಇಡೀ ದೇಶಂದ ಹಲವು ಜೆನ ಆಸಕ್ತರ ಆಯ್ಕೆಮಾಡಿ, ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಯೋಗ್ಯರಾದವರ ಹೆರ್ಕಿ, ಹಲವು ಗುಂಪುಗಳ ಮೂಲಕ ಬೇರೆಬೇರೆ ಊರುಗೊಕ್ಕೆ ಕಳುಸಿದ್ದವಾಡ. ನೋಡಿಗೊಂಡು ಬಂದ ವಿಚಾರವ ಪೇಪರು, ಟೀವಿ, ರೇಡ್ಯಂಗಳಲ್ಲಿ ಪ್ರಸಾರ ಮಾಡಿ ಆಯಾ ಊರಿನ ಜೆನಂಗೊಕ್ಕೆ ತಿಳುಶೇಕು – ಹೇಳ್ತದು ಕಾರ್ಯಕ್ರಮದ ಉದ್ದೇಶ.

ನಮ್ಮ ಊರಿಂದ ಈ ಕಾರ್ಯಕ್ರಮಕ್ಕೆ ಹೋಪ ಭಾಗ್ಯಶಾಲಿಗಳಲ್ಲಿ ಅಕ್ಷರದಣ್ಣನೂ ಒಬ್ಬರು.
ಬಂದಪ್ಪದ್ದೇ – ಪೆರ್ಲದಣ್ಣ ಮದುವೆ ಕಾಗತ ಹಿಡ್ಕೊಂಡು ಹಾಜೆರಿ ಇದಾ – ಹಾಂಗೆ ಪೆರ್ಲದಣ್ಣಂಗೆ ಹಲವು ವಿಶಯಂಗೊ ಬೆಶಿಬೆಶಿ ಗೊಂತಾತು. ಒಪ್ಪಣ್ಣಂಗೂ ಪೆರ್ಲದಣ್ಣ ಬೆಶಿಬೆಶಿ ಸಿಕ್ಕಿದ ಕಾರಣ ನವಗೂ ಹಲವು ಶುದ್ದಿಗೊ ಗೊಂತಾತು. ಇಂದು ಬೈಲಿಲಿ ಇದನ್ನೇ ಮಾತಾಡುವೊ, ಆಗದೋ? ಎಂತರ? ಅಕ್ಷರದಣ್ಣ ಪೆರ್ಲದಣ್ಣಂಗೆ ಹೇಳಿದ ಸರಹದ್ದಿನ ಶುದ್ದಿ!

~

ಅಕ್ಷರದಣ್ಣ ಹೋದ್ಸು “ಭೂತಾನ್” ದೇಶದ ಗಡಿಗೆ ಅಡ.
ನಮ್ಮ ದೇಶದ ಪೂರ್ವಕ್ಕೆ ತಾಗಿಂಡಿಪ್ಪ, ಭಾರತದ ಸಾದಾರ್ಣ ಒಂದು ರಾಜ್ಯದಷ್ಟು ದೊಡ್ಡ ದೇಶ. ಬ್ರಿಟಿಷರ ಆಳ್ವಿಕೆ ಕಾಲಲ್ಲಿ ಬೇರೆಬೇರೆ ವಿಂಗಡಣೆ ಮಾಡಿ – ಸುಲಭ ಅಪ್ಪಲೆ – ಹಂಚಿ ಮಡಗಿತ್ತವು; ಸ್ವಾತಂತ್ರ್ಯ ಸಿಕ್ಕುವಾಗ ಬೇರೆಯೇ ದೇಶ ಆಗಿ ಮಾಡಿಬಿಟ್ಟವು! ಭೂತಾನ್, ಬರ್ಮಾ, ನೇಪಾಳ, ಶ್ರೀಲಂಕ – ಎಲ್ಲದರದ್ದೂ ಇದೇ ಕತೆ!
ಹಾಂಗೆ, ಭೂತಾನ್ ಹೇಳ್ತ ಒಂದು ಕುಂಞಿದೇಶ ಮೂರೂ ಹೊಡೆಂದ ಭಾರತವ ಹೊಂದಿಗೊಂಡು ಇದ್ದು.
ಅಲ್ಲಿಂದ ಅತ್ಲಾಗಿ ಮಹಾ ಭಯಂಕರದ, ಮುಂದೊಂದು ಕಾಲದ ಅಪಾಯ – ಚೀನಾ ಇಪ್ಪದಿದಾ!
ಪೆರ್ಲದಣ್ಣಂಗೆ ಚೀನಾದ ಶುದ್ದಿ ತೆಗವಗ ಅಂದ್ರಾಣ ಹಿಂದೀ ಚೀನೀ ಭಾಯಿ ಭಾಯಿ ಹೇದು ಮತ್ತೆ ಬಾಯಿಂದಲೂ ಮೇಗೆ ಮೂಗಿನೊರೆಂಗೆ ಮುಳುಗಿದ್ದೇ ನೆಂಪಾವುತ್ತು! ಅದಿರಳಿ.

ಭೂತಾನ್ ದೇಶ ನವಗೆ ಕೇಳುಲೆ ಹೊಸತ್ತಲ್ಲ, ನಮ್ಮ ಪಾಟಪುಸ್ತಕಲ್ಲಿ ಇದ್ದತ್ತು, ಕುಂಞಿ ಬಟಾಟೆಯ ನಮುನೆದು. ಶಾಲೆಲಿ ಕಲಿಯಲೇ ಸಮ, ಅದರ ಬಗ್ಗೆ ಮತ್ತೆ ಮಾತಾಡಿದ್ದಿಲ್ಲೆ, ಮಾತಾಡ್ಳೆ ಸಮಾಜ ಟೀಚರುದೇ ಸಿಕ್ಕಿತ್ತಿದ್ದವಿಲ್ಲೆ ಇದಾ.
ಈಗ ಅಕ್ಷರದಣ್ಣ ಅಲ್ಲಿಗೇ ಹೋದಪ್ಪಗ ನವಗೆಲ್ಲೋರಿಂಗೂ ಕಂಡ ಹಾಂಗಾತಿದಾ.

ಭೂತಾನ್ ಸಾಂಸ್ಕೃತಿಕವಾಗಿ ಭಾರತದ ಒಂದು ಭಾಗವೇ. ನಮ್ಮ ಹಾಂಗೇ ಬೊಟ್ಟು ಹಾಕುದು, ಸೀರೆ ಸುತ್ತುದು, ಹಬ್ಬಂಗಳ ಆಚರಣೆ ಮಾಡ್ಸು – ಇದೆಲ್ಲವೂ ಇದ್ದು. ಹಿಂದುಗಳ ಬಾಹುಳ್ಯ ಇಲ್ಲದ್ದ ಜಾಗೆಲಿ ಬೌದ್ಧರು ಇದ್ದವು. ಅಷ್ಟಕ್ಕೂ ಸಿಖ್ಖ್ – ಜೈನ – ಬೌದ್ಧರು ಹೇದರೆ ಹಿಂದೂಗಳೇ ತಾನೆ! ಈಗಾಣ ರಾಜಕೀಯಲ್ಲಿ ಅದೆಲ್ಲ ಬೇರೆಬೇರೆ ಆದ್ಸು ಅಷ್ಟೆ.

ಹಾಂಗೆ, ಭೂತಾನ್ ನೋರು ಭಾರತದ ಸಂಸ್ಕಾರವನ್ನೇ ಹೊಂದಿಗೊಂಡಿದವು. ಅಲ್ಯಾಣ ಹೆಚ್ಚಿನ ಒಯಿವಾಟುದೇ ಭಾರತದೊಟ್ಟಿಂಗೇ ಆಯೇಕಟ್ಟೆ. ಅದೇ ಸಂಸ್ಕಾರದ ಎಷ್ಟೋ ದೊಡ್ಡ ದೇಶ ಅವರ ಆವರುಸಿಗೊಂಡಿದ್ದು ಹೇದರೆ ಹಾಂಗೇ ಆಯೇಕಟ್ಟೆ, ಅಲ್ಲದೋ?! ರಾಜಕೀಯವಾಗಿ ನೋಡಿರೆ ಭಾರತದ ಮಿತ್ರರಾಷ್ಟ್ರ. ಒಳ್ಳೆ ರೀತಿಲಿ ಎರಡೂ ದೇಶಂಗೊ ಹೊಂದಾಣಿಕೆಲಿ ಹೋಗಿ ವ್ಯಾಪಾರ ವ್ಯವಹಾರ ಕೃಷಿ ಒಯಿವಾಟುಗಳ ಮಾಡಿಂಡು ಚೆಂದಕಿರೇಕು. ಅದು ಕ್ರಮ.

ಆದರೆ, ಅಲ್ಲಿಗೆ ಹೋಗಿನೋಡಿ ಬಂದ ಅಕ್ಷರದಣ್ಣ ಹೇಳಿದ ಸಂಗತಿಯೇ ಬೇರೆ!

~

ಒಂದುಕಾಲಲ್ಲಿ ಭೂತಾನ್ ಮಿತ್ರರಾಷ್ಟ್ರ ಆಗಿದ್ದ ಕಾರಣ ನವಗೂ ಅವಕ್ಕೂ ನೆಡುಗಂಗೆ ನಿರ್ದಿಷ್ಟವಾದ ಬೇಲಿ ಇಲ್ಲೆ.
ಹಾಕಿದ್ದೇ ಗುರ್ತ, ಮಾಡಿದ್ದೇ ಗಡಿ. ಆ ಜಾಗೆಗೇ ಅಕ್ಷರದಣ್ಣ ಹೋದ್ಸು – ಭಾರತದ ಕೊನೇ ಹಳ್ಳಿಯ ಕೊನೇ ಮನೆಯ ಒಳ ಹೋಗಿ, ಅಲ್ಯಾಣ ಜೆನರ ಕಂಡು ಹಿಂದೂಸ್ತಾನದ ಬಗ್ಗೆ ಮಾತಾಡಿಕ್ಕಿ ಬಂದ್ಸು. ಅಲ್ಯಾಣ ಜೆನಂಗೊಕ್ಕೆ ಒಂದನೇದಾಗಿ ಬಂಙ ಇಪ್ಪದು ಬಡತನ. ಕೈಲಿ ಪೈಶೆ ಇಲ್ಲೆ. ಹೊತ್ತಿನ ಊಟ ಸಿಕ್ಕಿರೆ ಎಷ್ಟೋ ಜೆನಕ್ಕೆ ಅದೇ ಒಂದು ಭಾಗ್ಯ. ಹೊಟ್ಟೆ ಹಶು ಜೋರಿದ್ದರೆ ತಲೆ ಓಡ್ತಿಲ್ಲೆಡ, ಒಂದೊಂದರಿ ಮಾಷ್ಟ್ರುಮಾವ ಹೇಳುಲಿದ್ದು. ಅವಕ್ಕೂ ಹಾಂಗೆಯೋ ಏನೊ, ಹೊಟ್ಟೆ ಹಶು ಇದ್ದ ಕಾರಣ ಹೊಸ ಆಲೋಚನೆಗೊ, ಹೊಸ ಚಿಂತನೆಗೊ, ಸಂಘಟನೆ, ಇಂಟರ್ನೆಟ್ಟು – ಇದೇವದೂ ಇಲ್ಲೆ ಅಲ್ಲಿಗೆ.

ಅಲ್ಲಿಗೆ ಅದೆಲ್ಲ ಬರುಸೇಕಾದ ಇಚ್ಛಾಶೆಗ್ತಿಯೂ ನಮ್ಮ ದೇಶಕ್ಕಿಲ್ಲೆ. ಇದೇ ಇಚ್ಛಾಶೆಗ್ತಿ, ಆಚ ಹೊಡೆಲಿ ಭೂತಾನ ದೇಶಕ್ಕೆ? ಧಾರಾಳ ಇದ್ದು. ಅಲ್ಯಾಣ ಜೆನಜೀವನ ಇಲ್ಲಿಂದ ಶ್ರೀಮಂತ ಆಡ. ಅಲ್ಯಾಣ ಜೆನಂಗೊ ಪೈಸೆಕ್ಕಾರಂಗೊ. ಹಾಂಗೆ, ಅವಕ್ಕೆ ಪಾಪದೋರು ಬೇಕು. ನಮ್ಮ ದೇಶಕ್ಕೆ ಬಂದು ಅವಕ್ಕೆ ಬೇಕಾದ್ಸರ ಮಾಡಿಂಡು ಹೋವುತ್ತವು. ವ್ಯಾಪಾರ ಮಾಡ್ತೋರು ಸೀತ ನಮ್ಮ ದೇಶದೊಳ ಬಂದು, ತಂದ ಮಾಲಿನ ಮಾರಿಕ್ಕಿ, ಪೈಶೆ ಎಣುಸೆಂಡು ಒಪಾಸು ಅವರ ದೇಶಕ್ಕೆ ಹೋವುತ್ತವು.

ಇಲ್ಲಿ ಎರಡು ವಿಶಯ ಇಪ್ಪದು – ಒಂದು ನಮ್ಮ ದೇಶಕ್ಕೆ ಹೋಗಿಬಂದು ಮಾಡುದು, ಎರಡ್ಣೇದು ಮಾರಾಟ ಮಾಡುದು.
ಒಂದು – ನಮ್ಮ ದೇಶಕ್ಕೆ ಭೂತಾನಿನೋರು ಬಂದರೆ ಯೇವದೇ ಪರಿಶೀಲನೆ ಇಲ್ಲೆ; ಎಷ್ಟು – ನಮ್ಮ ಅಡ್ಕಸ್ಥಳ ಚೆಕ್-ಪೋಷ್ಟಿನಷ್ಟೂ ಇಲ್ಲೇಡ, ಅಕ್ಷರದಣ್ಣ ಹೇಳಿದ ಲೆಖ್ಖಲ್ಲಿ. ಎಲ್ಯಾರು ಸಂಶಯ ಬಂದು ಒಬ್ಬನ ನಿಲ್ಲುಸಿ ಅಪ್ಪಗ ಸರಿಯಾದ ದಾಖಲೆಗೊ ಇಲ್ಲೆ ಹೇದು ಗೊಂತಾಗಿ ಒಪಾಸು ಕಳುಸಿ, ಕೂಡಿ ಹಾಕಿಯೋ ಮತ್ತೊ ಮಾಡಿರೆ – ಕೂಡ್ಳೇ ಭೂತಾನ್ ರಾಜನ ಜೆನಂಗೊ ನಮ್ಮ ದೇಶದ ರಾಯಭಾರಿಗೆ ಮಾತಾಡಿ, ಅಲ್ಲಿಂದ ನಮ್ಮ ರಾಜಧಾನಿಗೆ ಮಾತಾಡಿ, ಕೂಡ್ಳೇ ಆ ಜೆನರ ಬಿಡ್ತ ನಮುನೆ ಪ್ರಭಾವಳಿ ಇದ್ದಾಡ.

ಅದೇ ಇಲ್ಲಿಂದ ಅತ್ಲಾಗಿ ಹೋವುತ್ತರೆ – ಅಂಗುಲ ಅಂಗುಲವೂ ಬಿಡದ್ದೆ ಪೂರ್ತಿ ನೋಡಿಕ್ಕಿಯೇ, ಎಲ್ಲಾ ದಾಖಲೆಗೊ ಇದ್ದೋ ಹೇದು ಪರಿಶೀಲನೆ ಮಾಡಿಕ್ಕಿ, ಮತ್ತೆಯೇ ಒಳ ಬಿಡ್ಸು ಆಡ. ಮಾರ್ಗದ ಕತೆ ಹಾಂಗಿರಳಿ,

ಎರಡ್ಣೇದು – ಅವು ಮಾರಿದ್ದು ಎಂತರ?
ಭೂತಾನಿಂದ ಅತ್ಲಾಗಿ ಇಪ್ಪದು ಚೀನಾ ಅಲ್ಲದೋ? ಆ ಚೀನಾಂದ ಕಳ್ಳಸಾಗಣೆ ಮಾಡಿದ ಹಲವು ಹತ್ಯಾರುಗೊ, ಕಳ್ಳಮಾಲುಗೊ – ಇದರನ್ನೇ. ಇನ್ನೊಂದು ರೀತಿಲಿ ಹೇಳ್ತರೆ – ಚೀನಾದ ಮಾಲುಗಳ ಯೇವದೇ ತೆರಿಗೆ ಹಾವಳಿ ಇಲ್ಲದ್ದೆ ನಮ್ಮ ದೇಶಕ್ಕೆ ನುಗ್ಗುಸಲೆ ಈ ಭೂತಾನ್ ಒಂದು ಅಸ್ತ್ರ. ಒಟ್ಟು ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನೇ ಮುರುದು ಬೀಳ್ಸುತ್ತ ಹುನ್ನಾರವೋ ಎಂತ್ಸೋ – ಹೇದು ಅಕ್ಷರದಣ್ಣಂಗೆ ಸಂಶಯ ಬತ್ತಾಡ, ಪೆರ್ಲದಣ್ಣ ಹೇಳಿದ°.

~

ಅಲ್ಯಾಣ ಬಡತನವ ನೋಡಿದ ಅಕ್ಷರದಣ್ಣನ ತಂಡ, ಹಳ್ಳಿಲಿ ಜೆನಂಗಳ ಕಂಡು ಮಾತಾಡ್ಸಿಗೊಂಡು ಹೋಪಾಗ, ಪಕ್ಕನೆ ಒಂದರಿ ಭೂತಾನ್ ದೇಶಲ್ಲಿ ನಾಕು ಹೆಜ್ಜೆ ಹೋದವಾಡ. ಅಷ್ಟೇ – ಅದೆಲ್ಲಿಯೋ ಇದ್ದ ಭೂತಾನ್ ಗಡಿ ಸೈನಿಕರು ಕೂಡ್ಳೇ ಓಡಿಗೊಂಡು ಬಂದು ದರ್ಪ ತೋರ್ಸಿದವಾಡ, ಆರು ಏನು ತಾನು ಎತ್ಲಾಗಿ ಹೇದು ಪೂರ ವಿವರುಸಿ, ಜಾತಕ ಕೇಳಿದವಾಡ. ಆದರೆ ಇತ್ಲಾಗಿ – ನಮ್ಮ ದೇಶಲ್ಲಿ ಅಷ್ಟು ಲಾಯ್ಕದ ಭದ್ರತಾ ವೆವಸ್ತೆ ಇಲ್ಲೆ. ಪಕ್ಕನೆ ಆರಾರು ಬಂದರೆ – ಬಂದು ಬಂದು ಸುಮಾರು ಮೈಲು ಬಪ್ಪನ್ನಾರವೂ ಗೊಂತೇ ಆಗ! ಮತ್ತೆ ಹೇಂಗೂ ಗೊಂತಾಗ ಇದಾ.
ಕಾವಲು ಪಡೆಯ ಹತ್ತರೆ ಅಕ್ಷರದಣ್ಣನೋರು ಮಾತಾಡುವಗ ಹೀಂಗಿರ್ತ ಹಲವು ಸಂಗತಿಗೊ ಗೊಂತಾಯಿದಾಡ.

ಭೂತಾನ್ ನೋರು ಬಂದರೆ ಮಣ್ಣಾಕಲಿ, ಭೂತಾನ್ ಜೆನರ ಹೆಸರಿಲಿ ಚೀನಾದೋರು ಸುಮಾರು ಜೆನ ಬತ್ತವಾಡ ನಮ್ಮ ದೇಶಕ್ಕೆ. ಲೈನುಮೇನು, ಸೇಲ್ಸುಮೇನು – ಹೇಳ್ತ ಹೆಸರಿಲಿ ಭಾರತಕ್ಕೆ ಬಪ್ಪದು. ಒಪಾಸು ಹೋವ್ತವೋ? ಆರಿಂಗೊಂತು?! ಹೋದರೆ ಹೋದವು, ಇಲ್ಲೇ ಬೇಹುಗಾರಿಕೆಯೋ ಎಂತಾರು ಮಾಡಿರೆ ಮಾಡಿದವು. ನಮ್ಮ ದೇಶದ ಗಡಿಯ ಅವಸ್ಥೆ ಇದು!!

~

ಅಕ್ಷರದಣ್ಣಂಗೆ ಬೇಜಾರಾದ, ಆ ಶುದ್ದಿ ಕೇಳಿ ಪೆರ್ಲದಣ್ಣಂಗೂ ಬೇಜಾರಾದ, ಅದರ ಕೇಳಿ ಒಪ್ಪಣ್ಣಂಗೂ ಬೇಜಾರಾದ ಒಂದು ಶುದ್ದಿ ಎಂತರ ಹೇದರೆ –

ನಮ್ಮ ದೇಶಕ್ಕೆ ಗಡಿಯ ಬೆಲೆ ಗೊಂತಿಲ್ಲದ್ದರೂ – ಭೂತಾನ್ ದೇಶಕ್ಕೆ ಗೊಂತಿದ್ದನ್ನೇ; ಹಾಂಗೆ ಭೂತಾನ್ ಅದರ ಗಡಿಗೆ ಕೋಂಗ್ರೇಟು ಕಟ್ಟೆ ಕಟ್ಟಿ ಬೇಲಿ ಹಾಕಲೆ ಸುರು ಮಾಡಿದ್ದಾಡ. ಎಷ್ಟೋ ಅಡಿ ಎತ್ತರದ ಭರ್ತಿ ಕೋಟೆ ಅದು.
ಹಾಂಗೆ ಹಾಕುವ ಮದಲು ನೆಪಕ್ಕೆ ಒಂದರಿ ಭಾರತದ ಅನುಮೋದನೆ ಪಡಕ್ಕೊಳೇಕಲ್ಲದೋ? ಹಾಂಗೆ ನಮ್ಮ ದೇಶದ ದೊಡ್ಡೋರಿಂಗೆ ಕೇಳಿ, ಅಲ್ಲಿಂದ ರಾಜ್ಯ-ಜಿಲ್ಲೆ-ತಾಲೂಕು – ಗ್ರಾಮ ಪಂಚಾಯ್ತಿಂಗೆ ಬಂತು ಆ ನಕ್ಷೆ. ಅದು ಅಲ್ಲಿಗೆ ಎತ್ತುವ ಮದಲೇ ಬೇಕಾದೋರ ಎಲ್ಲೋರನ್ನೂ ’ನೋಡಿಗೊಂಡಿದವಾಡ’ ಭೂತಾನದೋರು. ಪಂಚಾಯತು ಮೆಂಬರುಗೊಕ್ಕೆ ಸಮಾ ತಿನ್ನುಸಿ ನಕ್ಷೆಯ ರಜಾ ವಿತ್ಯಾಸ ಮಾಡಿ ಸುಮಾರು ನೂರು ಮೀಟ್ರಿನಷ್ಟು ಹಿಂದೆ ಮಾಡಿತ್ತಿದ್ದವಾಡ – ಭಾರತದ ಜಾಗೆ ನುಂಗಿದ್ದವಾಡ!
ಹಳೆ ಗಡಿಂದ ಹೊಸ ಗಡಿಗೆ ಸುಮಾರು ಈ ನೂರು ಮೀಟ್ರು ವಿತ್ಯಾಸ – ಎಷ್ಟು ದೂರಕ್ಕೆ ಇದ್ದೋ!
ಹೀಂಗೆ ನೂರು ಮೀಟ್ರು ಹಿಂದೆ ಬಪ್ಪಗ, ಅಕ್ಷರದಣ್ಣ ಹೋದ ಹಳ್ಳಿಲಿ ಇದ್ದ ಒಂದು ದೇವಸ್ಥಾನ  – ಮದಲು ಭಾರತ, ಈಗ ಭೂತಾನ್!!

ಆ ದೇವಸ್ಥಾನವ ಕಟ್ಟಿ, ಅಲ್ಲಿ ಸಣ್ಣದೊಂದು ಸಂಘಟನೆ ಮಾಡಿ, ಹಿತ್ತಿಲು ಮನೆ ಮಾಡಿಗೊಂಡು ಬದ್ಕಿಗೊಂಡಿದ್ದ ಒಂದು “ಸಾಧು” ಸನ್ಯಾಸಿಗೆ ಈಗ ಆ ದೇವಸ್ಥಾನಕ್ಕೇ ಪ್ರವೇಶ ಇಲ್ಲೆ. ಅಲ್ಲಿಗೆ ಹೋದರೆ – ಎಂಗಳ ದೇಶಕ್ಕೆ ಎಂತಗೆ ಬಂದದು – ಕೇಳ್ತವು!
ಪ್ರತಿಷ್ಠೆ ಮಾಡಿದ ವಿಗ್ರಹವ ಅಲ್ಲಿಂದ ತೆಗವಲಾಗ ಹೇದು ಆ ಊರಿನ ಕ್ರಮ ಆಡ; ಹಾಂಗಾಗಿ ದೇವಿ ಅಲ್ಲಿ ಉಪವಾಸ, ದೇವಿಯ ಭಕ್ತರು ನೂರು ಮೀಟ್ರು ಇತ್ಲಾಗಿ ಉಪವಾಸ.
ದೇವಿದೇವಸ್ಥಾನ ಹೋತು, ಆಸುಪಾಸು ಜಾಗೆಯೂ ಹೋತು. ಅಷ್ಟು ಜಾಗೆ ಹೋದ್ಸಕ್ಕೆ ಸಾಧುಗೆ ಹತ್ತುಸಾವಿರ ಕೊಟ್ಟಿದವಾಡ ಆ ಊರ ಪಂಚಾಯ್ತು ಮೆಂಬರು. ಅದಕ್ಕೆ ಭೂತಾನಿಂದ ಲಕ್ಷಗಟ್ಳೆ ಸಿಕ್ಕಿಪ್ಪಗ ಹತ್ತುಸಾವಿರ ಸಾಧುಗೆ ಕೊಟ್ರೆ ಅದೆಂತ ದೊಡ್ಡ ನಷ್ಟ.
ಎಂತಾ ದುರ್ದೈವ ಅಲ್ಲದೋ?
~

ಗಡಿಭಾಗದ ಭಾರತದ ಹೆಚ್ಚಿನ ಅಧಿಕಾರಿಗಳೂ ಅವರ ತನ್ನನ್ನೇ ಮಾರಿಗೊಂಡಿದವಾಡ.
ತಿಂಗಳಿಂಗಿತಿಷ್ಟು ಹೇದು ಪೈಶೆ ಅವಕ್ಕೆ ಬತ್ತು, ಗಡಿಪ್ರದೇಶಲ್ಲಿ ಒಳ ಬತ್ತೋರ ಬಿಡೇಕು, ಆರನ್ನೂ ಹಿಡುದು ಹಾಕಲಾಗ, ಆರನ್ನೂ ವಿಚಾರಣೆ ಮಾಡ್ಳಾಗ, ಆರಾರು ಪೇದೆಗೊ ಹಿಡುದರೂ ಬಿಡೇಕು. ಅಷ್ಟೇ ಅಲ್ಲದೋ? ಸುಮ್ಮನೆ ಎಂತಕೆ ಹಾಳುಮಾಡಿಗೊಂಬದು – ಭೂತಾನ್ ನ ಎದುರು ಹಾಕಿಗೊಂಡು!

~

ಭೂತಾನ ಹೆಸರೇ ಹೇಳ್ತ ಹಾಂಗೆ ಭೂತದ ಹಾಂಗೇ ಆಯಿದು – ಪೆರ್ಲದಣ್ಣ ಹೇಳುವಗ ಒಪ್ಪಣ್ಣಂಗೆ ತುಂಬ ಬೇಜಾರಾತು.
ಅಷ್ಟೊಂದು ಮಿತ್ರರಾಷ್ಟ್ರ ಆಗಿಪ್ಪ ಭೂತಾನೇ ಹೀಂಗೆ ಮಾಡಿರೆ, ಅಂಬಗ ಒಳುದ ದೇಶಂಗಳ ಗೆತಿ?
ಗೆತಿ ಎಂತರ ಹೇದು ಅರಡಿಯೇಕಾರೆ ಅಲ್ಲಿಗೆ ಹೋಗಿಯೇ ನೋಡೇಕು. ಒಬ್ಬೊಬ್ಬನಿಂದ ಅಪ್ಪ ಕಾರ್ಯ ಅಲ್ಲ ಅದು, ಜೆನಂಗಳೇ ಬದಲಾಯೇಕು. ಇದಕ್ಕೆ ಆರಂಭವೇ “ಸರಹದ್ ಕೋ ಪ್ರಣಾಮ್”.
ಅಕ್ಷರದಣ್ಣನ ಹಾಂಗಿರ್ತ ನೂರಾರು ಕಾರ್ಯಕರ್ತರು ಗುಂಪುಗುಂಪಾಗಿ ಗಡಿಪ್ರದೇಶಕ್ಕೆ ಹೋಗಿ, ಅಲ್ಯಾಣ ವಾಸ್ತವ್ಯದ ಬಗ್ಗೆ ತಿಳುದು, ನಮ್ಮ ಊರೂರುಗೊಕ್ಕೆ ಮನವರಿಕೆ ಮಾಡ್ತಾ ಇದ್ದವು.
ಅಕ್ಷರದಣ್ಣನ ಸದ್ಯ ಭೇಟಿ ಆಯಿದಿಲ್ಲೆ, ನೋಡೊ-  ಬೈಲಿಂಗೆ ಅವ್ವೇ ವಿವರವಾಗಿ ಹೇಳುಲೂ ಸಾಕು. ಬೈಲಿಂಗೂ ಮನವರಿಕೆ ಮಾಡುಗು.

~

ನಮ್ಮ ದೇಶವ, ನೆರೆಕರೆಗಳ ಗಟ್ಟಿ ಮಾಡೇಕಾರೆ ನಮ್ಮ ಗಡಿ ಗಟ್ಟಿ ಆಯೇಕು. ಇದಕ್ಕೆ ನಮ್ಮ ದೇಶವೇ ಹೋರಾಡೇಕಟ್ಟೆ. ಹೋರಾಡೇಕಾರೆ ಎಂತಾಯೇಕು? ಆ ತಾಕತ್ತು ಇಪ್ಪ ಸರಕಾರ ಇರೇಕು.
ಏಳುಲೆಡಿಯದ್ದ ಸರಕಾರವೂ, ಮಾತಾಡ್ಳರಡಿಯದ್ದ ಪ್ರಧಾನಿಯೂ ಇದ್ದರೆ ದೇಶಕ್ಕೆ ಅದೆಂತ ರಕ್ಷಣೆ?
ಆರು ಬೇಕಾರೂ ಬತ್ತವು, ಬೇಕಾದಷ್ಟು ಬಾಚುತ್ತವು, ತಿಂತವು, ಒಪಾಸು ಹೋವುತ್ತವು.

ಭಾರತ ಮಾತೆಯ ಹೆಮ್ಮೆಯ ಪುತ್ರರು ಈ ದೇಶವ ಆಳುವ ಹಾಂಗಾಗಲಿ, ಭಾರತಮಾತೆಯ ಗಾತ್ರ ಹಿಗ್ಗದ್ದರೂ ಬೇಜಾರಿಲ್ಲೆ, ಕುಗ್ಗದ್ದ ಹಾಂಗೆ ನೋಡಿಗೊಳ್ಳಲಿ. ಇದು ಒಂದು ಗುಜರಾತಿಲಿ ಆಯೇಕಾದ ಕತೆ ಅಲ್ಲ, ಒಂದು ಹೊಡೆಲಿ ಆಯೇಕಾದ ಕಾರ್ಯ ಅಲ್ಲ, ಬದಲಾಗಿ – ಇಡೀ ದೇಶಲ್ಲೇ ಈ ಕಾರ್ಯ ಆಯೇಕಾಯಿದು.

ಎಂತ ಹೇಳ್ತಿ?
~

ಒಂದೊಪ್ಪ: ನೆರೆಕರೆ ಸಮ್ಮಂದ ಗಟ್ಟಿ ಒಳಿಯೇಕಾರೆ ಗಡಿಗುರ್ತವೂ ಗಟ್ಟಿ ಇರೆಕ್ಕಡ, ಮಾಷ್ಟ್ರುಮಾವ° ಹೇಳಿತ್ತಿದ್ದವು.

ಸೂ:

  • ಭೂತಾನ್ ಗಡಿಗೆ ಹೋಗಿ ಸಚಿತ್ರ ಮಾಹಿತಿ ಒದಗುಸಿದ ಅಕ್ಷರದಣ್ಣ, ಶ್ರೀಯುತ ಸುನಿಲ್ ಕುಲಕರ್ಣಿಗೆ ಬೈಲಿನ ಪರವಾಗಿ ಅಭಿನಂದನೆಗೊ.
  • ಬೈಲಿಂಗೆ ಲೇಖನವನ್ನೂ, ಪಟವನ್ನೂ ಕಳುಸಿಕೊಟ್ಟಿದವು. ವಿವರವಾದ ಲೇಖನ ಬೈಲಿಲಿ ಸದ್ಯಲ್ಲೇ ಬತ್ತು.
    ಅವು ಕಳುಗಿದ ಕೆಲವು ಪಟಂಗೊ, ಇಲ್ಲಿದ್ದು:

9 thoughts on “ಗಡಿ ಗಟ್ಟಿ ಇದ್ದರೆ ದೇಶದೊಳ ಗಡಿಬಿಡಿ ಇರ..!

  1. ಪೈಸೆಗಾಗಿ ತಮ್ಮನ್ನೇ ಮಾರಿಗೊ೦ಬ ಅಧಿಕಾರಿಗಳ ಹತ್ತರೆ,ಸದಾ ಸ್ವಾರ್ಥಕ್ಕಾಗಿ ಕೆಲಸ ಮಾಡುವ ರಾಜಕಾರಣಿಗಳ ಹತ್ತರೆ ನಾವು ನಿರೀಕ್ಷೆ ಮಡಗುಲಾಗ ಹೇಳೊದು ಸತ್ಯ.ಭಾರತದ ಪೂರ್ವಭಾಗಕ್ಕೆ ಕೇ೦ದ್ರಸರಕಾರ ಯೇವದೇ ಸಹಾಯ ಮಾಡುತ್ತಾ ಇಲ್ಲೆಡ,ಇನ್ನು ಗಡಿಯ ಒಳ ಆರು ಬ೦ದರೆ ಎ೦ತ ಹೇಳಿ ಯೋಚನೆ ಬಿಟ್ಟು ಕೂದಿಕ್ಕು ನಮ್ಮ ನಾಯಕ೦ಗೊ.
    ‘ಸ೦ಘ’ದ ಹಾ೦ಗಿರ್ಥ ಸ೦ಘಟನೆ ಈ ಕಾರ್ಯಕ್ರಮದ ಮೂಲಕ ದೇಶಪ್ರೇಮಿಗೊಕ್ಕೆಲ್ಲಾ ಕಟುಸತ್ಯವ ಹ೦ಚಿದ್ದು.
    ಅಕ್ಷರದಣ್ಣ,ಪೆರ್ಲದಣ್ಣ,ಒಪ್ಪಣ್ಣ ಎಲ್ಲಾ ಸೇರಿ ಕೊಟ್ಟ ಈ ಶುದ್ದಿಲಿ ಸುಮಾರು ವಾಸ್ತವ೦ಗೊ ನವಗೆ ಗೊ೦ತಾತು

  2. ನಿಜವಾಗಿಯೂ ಇದೊ೦ದು ಚಿ೦ತಾಜನಕ ಸ್ಥಿಥಿ. ಭಾರತದ ಪ್ರತಿಯೊ೦ದು ಗಡಿಲಿಯೂ ಹೀ೦ಗೆಯೆ ಆವ್ತಾ ಇದ್ದು. ಗಡಿ ಪ್ರದೆಶಲ್ಲಿ ನೆರೆಕರೆಯ ದೆಶ೦ಗೊ ಆಕ್ರಮಣ ಮಾಡೆ೦ಡಿದ್ದಾ೦ಗೆ ನಮ್ಮ ಊರಿಲ್ಲಿ ಬ್ಯಾರಿಗಳೂ ಪೊರ್ಬುಗಳೂ ಹಲವು ರೀತಿಲಿ ಆಕ್ರಮಣ ಮಾಡ್ತ ಇದ್ದವು. ನಿ೦ಗೊಗೆ ಕಾಸರಗೋಡು ಜಿಲ್ಲೆಯ ಮಾರ್ಗೆದ ಕರೆಲಿ ಹಿ೦ದುಗಳ ಮನೆ ಕಾ೦ಬಲೆ ಕೊದಿ ಅವ್ತು ಹೇಳ್ವಲ್ಲಿಗೆ ಎತ್ತಿದ್ದು ಅವಸ್ಥೆ.
    ಬ್ಯಾರಿಗಳ ಮದುವೆ ದಿಬ್ಬಾಣ ಮಾರ್ಗಲ್ಲಿ ಬತ್ತು ಹೇದಾದರೆ ಮತ್ತಿಪ್ಪವು ಜೀವ ಬೇಕಾದರೆ ಕೆಳ ಇಳುದು ನಿಲ್ಲೆಕು ಹೇಳ್ತ ಕಥೆ. ನಿಜವಾಗಿ ಆದರು ಈ ಉಗ್ರ೦ಗಳ ಅ೦ದು ಮೋದಿ ಮಾಡಿದಾ೦ಗೆ ಮಾರಣ ಹೋಮ ಮಾಡೆಡದೊ?

  3. ಗಡಿ ಗಟ್ಟಿ ಆಯೆಕ್ಕಾದರೆ ಸರಕಾರ ಗಟ್ಟಿ ಬೇಕು. ಸರಕಾರ ಗಟ್ಟಿ ಆಯೆಕ್ಕಾರೆ ನಾವು ಮನಸ್ಸು ಮಾಡೆಕ್ಕು. ಅದಕ್ಕೆ ನಾವು ಸರಿಯಾದ ಸರಕಾರವ ಅಧಿಕಾರೆಕ್ಕೆ ತರೆಕ್ಕು. ಹಾಂಗಾಗಿ ಬದಲಾವೆಣೆ ಹೇಳ್ಟದು ನಮ್ಮ ಕೈಲೇ ಇಪ್ಪದು. ಇದರ ನಾವು ಮಾಡೆಕ್ಕು. ಒಂದು ಒಳ್ಲೆಯ ವಿಷಯ ತಿಳಿಸಿದ್ದಕ್ಕೆ ಅಭಿನಂದನೆಗೋ.

  4. ಈ ಶುದ್ದಿ ಎಲ್ಲರೂ ಓದೆಕ್ಕಾದ್ದು.
    ನಮ್ಮ ಗಡಿಲಿ ಎಂತ ಆವ್ತಾ ಇದ್ದು ಹೇಳಿ ಎಲ್ಲರೂ ಅರ್ಥ ಮಾಡಿಗೊಳೆಕ್ಕು. ನಾವಿಲ್ಲಿ ಆರಾಮವಾಗಿ ಇರೆಕಾರೆ ಗಡಿಲಿ ಇಪ್ಪವರ ತ್ಯಾಗ ಎಷ್ಟು ಇದ್ದು ಹೇಳಿ ತಿಳ್ಕೊಳೆಕ್ಕು.
    ಅದರೊಟ್ಟಿಂಗೆ ಈ ರೀತಿ ಅಕ್ರಮಣ ನುಸುಳುವಿಕೆಯ ತಡೆಗಟ್ಟಲೆ ನಮ್ಮಂದ ಎಂತ ಎಡಿಗೋ ಅದರ ಮಾಡೆಕ್ಕು. ಓಟ್ ಬ್ಯಾಂಕ್ ದೃಷ್ಟಿಂದ ಕಾರ್ಬಾರು ಮಾಡುವವರ ಮೊದಾಲು ಕುರ್ಚಿಂದ ಇಳುಶುವ ಕೆಲಸ ಆಯೆಕ್ಕು. ಇದರ ಬಗ್ಗೆ ಜೆನಂಗಳಲ್ಲಿ ಜಾಗೃತಿ ಮೂಡೆಕ್ಕು.

  5. ಛೆ, ಹೀಂಗುದೆ ಇದ್ದಲ್ಲದೊ ? ಅಕ್ಷರದಣ್ಣ ಭೂತಾನಕ್ಕೆ ಹೋಗಿ ವಿಷಯ ಎಲ್ಲಾ ತಿಳುದು ಒಪ್ಪಣ್ಣನ ಮೂಲಕ ಬೈಲಿಂಗೆ ಗೊಂತಾವ್ತ ಹಾಂಗೆ ಮಾಡಿದ್ದು ಲಾಯಕಾತು. ವಿಷಯ ಕೇಳಿ ತುಂಬಾ ಬೇಜಾರು ಆತು. ಒಂದು ಕಣ್ಣಿಂಗೆ ಬೆಣ್ಣೆ ಮತ್ತೊಂದು ಕಣ್ಣಿಂಗೆ ಸುಣ್ಣ ನೆಂಪಾತು. ಗಡಿವಿವಾದಂದಾಗಿ ವೈಮನಸ್ಸು ಖಂಡಿತಾ ಬತ್ತು. ನಮ್ಮ ಜನನಾಯಕರಿಂಗೆ ತಿಂಬಲೆ ಸಿಕ್ಕಿದಷ್ಟೂ ಸಾಲ, ಅದರೆಡೆಲಿ ಸಾಮಾನ್ಯ ಜೆನಂಗವಕ್ಕೆ ಎಂತಾದರೆ ಅವಕ್ಕೆ ಎಂತ. ದೇಶದ ಒಳಾಣದ್ದೇ ಗಡಿ ವಿಷಯವ ದೊಡ್ಡದು ಮಾಡಿ ಅತ್ಲಾಗಿತ್ಲಾಗಿ ಕತ್ತಿಲಿ ಗಡಿ ಹಾಕೆಳುತ್ತ ಹಾಂಗೆ ಮಾಡುಸಿ ಅವು ಚೆಂದ ನೋಡುಗು. ಜೆನಂಗೊ ಅತ್ಲಾಗಿತ್ಲಾಗಿ ಕಚ್ಚಿ ಬಿದ್ದೊಂಡು ಇರೆಕು. ಒಗ್ಗಟ್ಟಿಲ್ಲಿ ಇದ್ದರೆ, ಈ ನಾಯಿಕರಿಂಗೆ ಉಪದ್ರ ಅಲ್ಲದೊ ?
    ಅಕ್ಷರದಣ್ಣನ ಸಚಿತ್ರ, ಸವಿವರ ವರದಿ ಬರಳಿ.

  6. ಭೂತಾನ್ ಭೂತಕಾಲವ ಮರೆತು ಭೂತವಾಗಿ ಕಾಡುವ ವಿಷಯ ಬೇಜಾರದ ಸಂಗತಿ.

  7. ಅಕ್ಷರದಣ್ಣನಿಂದ ಪೆರ್ಲದಣ್ಣಂಗೆ, ಪೆರ್ಲದಣ್ಣಂದ ಒಪ್ಪಣ್ಣಂಗೆ, ಒಪ್ಪಣ್ಣಂದ ಬೈಲ್ಲಿಂಗೆ ಬಂದ ಭೂತಾನ್ ಭೂತಂಗಳ ವಿವರ ಲಾಯ್ಕ ಆತು. ಅಕ್ಷರದಣ್ಣ ಹೋದ ಕಾರ್ಯ ಇಲ್ಲಿ ಸಾರ್ಥಕದ ಒಂದು ಪಾಲೂ ಆತು. ಹೀಂಗೆ ಇನ್ನೂ ಆಚ ಚೆಕ್ಪೋಸ್ಟುಗಳಲ್ಲಿ ಹೀಂಗಿಪ್ಪದೇ ಕತೆ ಆಯ್ಕು ಹೇಳ್ವದು ಊಹಿಸಲಕ್ಕು ಈಗ. ಹಳ್ಳಿಹಳ್ಳಿಗೊಕ್ಕೆ ತಿಳುಶುತ್ತ “ಸರಹದ್ ಕೋ ಪ್ರಣಾಮ್” ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಾಣಲಿ, ನಾವೂ ಜತೆಸೇರುವೋ. ಎಲ್ಲೋದಿಕ್ಕೆ ಮಾನವೀಯತೆ ಮೆರೆಯಲಿ.

  8. “ಭಾರತಾಂಬೆಯೆ ಜನಿಸಿನಿನ್ನೊಳು ಧನ್ಯನಾದೆನು ದೇವಿಯೇ” ಹೇಳ್ತ ಪದ್ಯದ ಸಾಲು ನವಗೆ ಅಂಬಗಂಬಗ ನೆನಪಾವುತ್ತು ಆದರೆ ಭಾರತಾಂಬೆಯ ಸೀರೆ ಸೆರಗು ಹಿಡುದು ಎಳೆತ್ತಾಇಪ್ಪ ಕಳ್ಳಂಗಳ ಕಥೆ ಗೊಂತಪ್ಪದು ಮಾತ್ರಾ ಎಲ್ಲಿಯಾರು ಬೋಂಬು ಹೊಟ್ಟಿಯಪ್ಪಗ ಹೇಳಿ ಆಯಿದು, ಒಂದುವೇಳೆ ಗೊಂತಾದರುದೇ ಎಂತದೂ ಮಾಡುವ ಹಾಂಗಿಲ್ಲೆ ಏಕೇಳೀರೆ ನಮ್ಮದು ಜ್ಯಾತ್ಯಾತೀತ ರಾಷ್ಟ್ರ ಹೇಳ್ತ ಜಾತಿವಾದಿಗೊ ಅಧಿಕಾರಲ್ಲಿಪ್ಪದು! ಹೇಳ್ತ ದು ಬಾರೀ ಬೇಜಾರಿನ ಸಂಗತಿ. ಬೂತಾನಿನ ಬೂತದ ಹಾಂಗೇ ಇನ್ನೂ ಎಲ್ಲಿಂದೆಲ್ಲಾ ಎಂತದೆಲ್ಲಾ ಬತ್ತೋ ಉಮ್ಮಪ್ಪ.
    ಗಡಿ ಗಟ್ಟಿ ಇದ್ದರೆ ಮಾತ್ರಾ ಸಾಕೋ ಗಡಿಯೊಳ ಇಪ್ಪವು ಗಟ್ಟಿಗರಾಗಿರೆಡದೋ……?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×