ಗಣರಾಜ್ಯಲ್ಲಿ ಗಣವೇಶ ಮತ್ತೇವಗ ಬಕ್ಕೋ..!?

ನಮ್ಮ ದೇಶ ಭಾರತಕ್ಕೆ ಸ್ವಾತಂತ್ರ್ಯ 1947 ರಲ್ಲೇ ಸಿಕ್ಕಿರುದೇ, ನಮ್ಮದೇ ಆದ ಒಂದು ಸಂವಿಧಾನ ಹೇಳ್ತದು ರಚನೆ ಆಗಿತ್ತಿಲ್ಲೆಡ.
ಬ್ರಿಟಿಷರ ಕಾಮನ್‌ವೆಲ್ತ್ ಹೇಳ್ತ ಗುಂಪಿಲಿ ನಮ್ಮ ದೇಶವುದೇ ಒಂದು ಆಗಿತ್ತಡ!
ಬ್ರಿಟನ್ ರಾಣಿಯ ಸೂಚನೆಯ ಮೇರೆಗೆ ಒಬ್ಬ ಗುರಿಕ್ಕಾರ° ಗವರ್ನರ್ ಜನರಲ್ ಆಗಿ ಈ ದೇಶವ ಇಂಗ್ಲೇಂಡಿಂಗೆ ಪ್ರತಿನಿಧಿಸುದಡ.
ಎಲ್ಲ ನಿರ್ಧಾರಂಗಳುದೇ ‘ರಾಣಿಯ’ ಅಧಿಸೂಚನೆಗೆ ಒಳಪಟ್ಟದಾಗಿತ್ತಡ!

ಸಂಪೂರ್ಣ ಸ್ವಾಯತ್ತೆ (ಸ್ವಾತಂತ್ರ) ಬರೆಕಾರೆ ನಮ್ಮದೇ ಕಾನೂನು, ಸಂವಿಧಾನ ಬರೆಡದೋ?
1946 ರಲ್ಲಿಯೇ ನಮ್ಮ ಸಂವಿಧಾನವ ಬರವಲೆ ಸುರುಮಾಡಿದ್ದವಡ, ಸುಮಾರು ಬಟ್ಟಕ್ಕೊ ಎಲ್ಲ ಸೇರಿ ಒಂದು ಸಮಿತಿ – ಆ ಸಮಿತಿಗೆ ಅಂಬೇಡ್ಕರು ಅಧ್ಯಕ್ಷ° ಆಗಿ ಇದ್ದಿದ್ದಡ.
ಇಷ್ಟು ವಿಶಾಲ ದೇಶಕ್ಕೆ ಸಂವಿಧಾನ ಬರವದು ಹೇಳಿರೆ ಸಣ್ಣ ಕೆಲಸ ಅಲ್ಲ..
ಹತ್ತಾರು ಧರ್ಮಂಗೊ, ನೂರಾರು ಭಾಷೆಗೊ, ಸಾವಿರಾರು ನಮುನೆ ಜೀವನ ಶೈಲಿಗೊ, ಕೋಟ್ಯಂತರ ಜೆನಂಗೊ!
ಅಂತೂ ಇಂತು ಬರದು ಬರದು 1949 ನೆವೆಂಬ್ರ 26ಕ್ಕೆ ಒಂದು ಹಂತಕ್ಕೆ ಬಂತಡ. ಅರೆಬೆಂದ ಸಂವಿದಾನವ ಅಂಬಗಳೇ ಅನುಮೋದನೆ ಮಾಡಿದವಡ.
ಮತ್ತಾಣ (1950ರ) ಜೆನವರಿ 26 ಕ್ಕೆ ಸಂವಿಧಾನದ ಅಂತಿಮ ಪ್ರತಿ ತಯಾರಾತಡ. ಸಂವಿಧಾನವ ಸರ್ವಾನುಮತಂದ ಅನುಮೋದನೆ ಮಾಡಿದವಡ.

ಜೆನಂಗಳೇ ಮಾಡಿದ ಸಂವಿಧಾನ ಆದ ಕಾರಣ ಕೆಲವು ಮಹತ್ತರ ಬದಲಾವಣೆಗೊ ಬಂತು.
ಒಳ್ಳೆದು, ಕೆಟ್ಟದು – ಎರಡೂ ಇತ್ತು ಅದರ್ಲಿ!
ವಂಶಪಾರಂಪರ್ಯ ರಾಜ ಪದ್ಧತಿ ಎಲ್ಲ ತೆಗದು ಹಾಕಿ, ‘ಜೆನಂಗಳೇ ಜೆನರ’ ಆಯ್ಕೆ ಮಾಡ್ತ ಗಣರಾಜ್ಯದ ವೆವಸ್ತೆ ಆತಡ.
ಈ ‘ಗಣರಾಜ್ಯ’ ಹೇಳಿತ್ತುಕಂಡ್ರೆ ಪೂರಾ ಹೊಸ ಸೃಷ್ಟಿ ಅಲ್ಲ, ಸಾವಿರಾರು ಒರಿಷ ಮೊದಲೇ ನಮ್ಮ ಭರತಖಂಡಲ್ಲಿ ಇದ್ದಿದ್ದದಡ.
ಲಿಚ್ಛವಿ, ಶಾಕ್ಯ – ಮುಂತಾದ ಇತಿಹಾಸದ ದೇಶಂಗಳಲ್ಲಿ ಗಣರಾಜ್ಯವೇ ಇದ್ದದಡ. ಊರಿಂದ ಒಬ್ಬ ಗಣಾಧ್ಯಕ್ಷನ ಆಯ್ಕೆ ಮಾಡಿ, ಕೇಂದ್ರ ಸಮಿತಿ ಮಾಡಿ, ಅದರ ಮೂಲಕ ಆಳ್ವಿಕೆ ಮಾಡ್ತ ಕಾರ್ಯ. ಚಂದ್ರಗುಪ್ತ ಮೌರ್ಯ ಅವನ ಸಾಮ್ರಾಜ್ಯ ವಿಸ್ತಾರ ಮಾಡುವಗ ಹೀಂಗಿಪ್ಪದರ ಸುಮಾರು ವಶಮಾಡಿದ್ದನಡ – ಮಾಷ್ಟ್ರುಮಾವ° ಹೇಳಿದ್ದು.

ಅದಿರಳಿ, ಬ್ರಿಟಿಷರು ಆಡಳ್ತೆಗೆ ಬೇಕಾಗಿ ದೇಶವ ಕೆಲವೆಲ್ಲ ಭಾಗ ಮಾಡಿತ್ತಿದ್ದವಲ್ದ, ಅದರ ಸಂಪೂರ್ಣವಾಗಿ ತೆಗದು, ಹೊಸ ತುಂಡುಗಳ ಮಾಡಿದವಡ.
ಶಂಬಜ್ಜನ ಕಾಲಲ್ಲಿ ನಮ್ಮ ಊರು ಎಲ್ಲ ‘ಮದರಾಸು ರಾಜ್ಯ’ ದ ಒಳ ಇತ್ತು. ಮುತ್ತಿಗೆಭಾವನ ಸಾಗರಹೋಬಳಿ ಎಲ್ಲ ಬೊಂಬಾಯಿಪ್ರಾಂತಕ್ಕೆ ಸೇರಿತ್ತು. ಮತ್ತೆ ಕನ್ನಡ – ಮಲೆಯಾಳ- ಮರಾಟಿ ಪ್ರಾಬಲ್ಯ ನೋಡಿಗೊಂಡು ಕರ್ನಾಟಕ -ಕೇರಳ – ಮಹಾರಾಷ್ಟ್ರ ಹೇಳಿ ತುಂಡುಸಿದ್ದಡ. ಇದೇ ನಮುನೆ ಇಡೀ ದೇಶವ!
ಮೊದಲು ಆಡಳ್ತೆಗೆ ಬೇಕಾಗಿ ಮಾಡಿದ ವಿಂಗಡಣೆಗೊ ಸಂಪೂರ್ಣವಾಗಿ ಬರ್ಕಾಸ್ತು ಆತು! ನೂರಾರು ಭಾಷೆ ಇಪ್ಪ ದೇಶಲ್ಲಿ ‘ಭಾಶೆಗೊಂದು ರಾಜ್ಯ’ ಹೇಳಿಗೊಂಡು ತುಂಡುಸಿರೆ ಅಕ್ಕೋ? ನಿಂಗಳೇ ಹೇಳಿ!
ಹಾಂಗಾಗಿ ಇದರ್ಲಿ ಸುಮಾರು ತಪ್ಪುಗೊ – ದೋಷಂಗೊ, ಅನ್ಯಾಯಂಗೊ ಎಲ್ಲ ಬಯಿಂದು.
ಅದು ನಿರೀಕ್ಷಿತವೇ!

ಸಂಘ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಈ ಭಾಷಾವಾರು ವಿಂಗಡಣೆಯ ವೆವಸ್ತೆಯ ತೀವ್ರವಾಗಿ ವಿರೋಧಿಸಿತ್ತಡ.
ಅಖಂಡ ಭಾರತವ ಕಟ್ಟುವ ನಿರೀಕ್ಷೆಲಿ ಇದ್ದ ಸಂಘಕ್ಕೆ ಅಷ್ಟಪ್ಪಗಳೇ ತುಂಬ ಬೇಜಾರಾಗಿತ್ತಡ.
ಪಾಕಿಸ್ತಾನ, ಬಾಂಗ್ಲಾ, ಬರ್ಮ, ನೇಪಾಳ, ಶ್ರೀಲಂಕ, ಅದು ಇದು ಎಲ್ಲ ಅಖಂಡಭಾರತದ ಕುಂಞಿಗಳೇ ಇದಾ..!
ಹಾಂಗಾಗಿ, ಅಂಬಗ ನವಗೆ ಸಿಕ್ಕಿದ ಭಾಗವೇ ತುಂಡು ತುಂಡಾಗಿ ಒಳುದ್ದು – ಇನ್ನು, ಇದ್ದದರ್ಲಿದೇ ಆಂತರಿಕವಾಗಿ ಭಾಷೆ ಭಾಷೆಗಳ ಭೇದ ಹುಟ್ಟುಸಿ ತುಂಡುಸಿರೆ ಹೇಂಗಕ್ಕು? ಕೇಳಿತ್ತಡ ಸರಕಾರವ!
ಬಾಯಿಮಾತಿಲಿ ಹೇಳಿರೆ ಆರು ಕೇಳ್ತವು ಬೇಕೆ!
ನಾಕರ ಕೊಂದು, ಎರಡು ಪೋಲೀಸು ಷ್ಟೇಶನಿಂಗೆ ಕಿಚ್ಚು ಕೊಟ್ಟಿದ್ದರೆ ಆವುತಿತೋ ಏನೋ – ಸಂಘಕ್ಕೆ ಅದೆಲ್ಲ ವರ್ಜ್ಯ!
ಅಂತೂ, ನೋಡಿಗೊಂಡು ಇದ್ದ ಹಾಂಗೇ, ಗಣರಾಜ್ಯ ಬಂತು. ಸಂತೋಷದ ವಿಚಾರವೇ.
ಮಾತಾಡ್ತ ಪ್ರಮುಖ ಭಾಷೆಗೊಂದು ರಾಜ್ಯ (ಭಾಷಾವಾರು ವಿಂಗಡಣೆ) ಮಾಡಿಗೊಂಡವು. ಇದು ಬೇಜಾರದ ವಿಚಾರ!
~

ಅದೇನೇ ಇರಳಿ, ನಮ್ಮದೇ ಸಂವಿಧಾನ ಬಂತಲ್ದ, ಅದು ನಮ್ಮ ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಬಂದ ದಿನ!
ಆ ಕೊಶಿಗೆ ಅಂದು ಡೆಲ್ಲಿಲಿ ದೊಡಾ ಜಾತ್ರೆಯ ಹಾಂಗೆ ಮಾಡಿದವಡ. ರಾಷ್ಟ್ರಪತಿಭವನಂದ ಇಂಡಿಯಾಗೇಟಿನ ಒರೆಂಗೆ ಮೆರವಣಿಗೆ ಮಾಡಿದವಡ – ಮೂರೂರಣ್ಣ ಹೇಳಿದ್ದು.
ಆ ನೆಂಪಿಂಗೆ ಪ್ರತಿಒರಿಶದ ಜೆನವರಿ ಇಪ್ಪತ್ತಾರಕ್ಕೆ ಅದೇ ನಮುನೆ ಮೆರವಣಿಗೆ ಮಾಡ್ತವಡ.

India Republic Day 2009

ಈ ಒರಿಶದ ಗಣರಾಜ್ಯದ ಪಥಸಂಚಲನ - ಮೂರೂರಣ್ಣ ಪಟತೆಗದು ಕಳುಸಿದ್ದು.

ಮೆರವಣಿಗೆಲಿ ಒಂದೊಂದು ಸಂಘಟನೆಯನ್ನುದೇ ಗುಂಪು ಮಾಡಿಗೊಂಡು, ಲೆಪ್ಟ್-ರೈಟ್-ಲೆಪ್ಟ್-ರೈಟ್ ಹೇಳಿ ಮಾರ್ಚುಪಾಷ್ಟು (ಪಥಸಂಚಲನ) ಮಾಡುಸುತ್ತವಡ – ದೊಡ್ಡಬಾವನ ಶಾಲೆಲಿ ನೀಲಿಇನಿಪಾರ್ಮು ಹಾಕಿದ ಮಕ್ಕೊ ಎಲ್ಲ ಮಾಡ್ತನಮುನೆ!
ದೇಶಕ್ಕಾಗಿ ಕೆಲಸ ಮಾಡುವ ಕೆಲವು ಮುಖ್ಯಸಂಘಟನೆಗಳ ದಿನಿಗೆಳಿ ಈ ಮೆರವಣಿಗೆಲಿ ಸೇರುಲೆ ಹೇಳ್ತವಡ.
ಮಿಲಿಟ್ರಿ, ಕಮಾಂಡೋ, ಪೋಲೀಸು, ಹೋಮುಗಾರ್ಡು – ಇದೆಲ್ಲ ಹೇಂಗೂ ಇದ್ದನ್ನೆ.
ಅದಲ್ಲದ್ದೇ, ಕೆಲವು ಯನ್ಸೀಸೀ (NCC), ಸ್ಕೌಟು (ದೀಪಕ್ಕನ ಸೌಟು ಅಲ್ಲ) ಅದು ಇದು ಎಲ್ಲ ಬತ್ತಡ.
ಇಡೀ ದೇಶಲ್ಲಿ ಹರಡಿಗೊಂಡಿಪ್ಪ ಸಂಘಟನೆಯ ಸಾವಿರಾರು ಜೆನರಲ್ಲಿ ಕೆಲವೇ ಕೆಲವು ಜೆನರ ಆಯ್ಕೆ ಮಾಡಿ ಕಳುಸುದಡ.
ಎತ್ತರ, ಪಥಸಂಚಲನದ ಪರಿಪಕ್ವತೆ, ದೇಹಸೌಷ್ಠವ, ರೂಪ ಎಲ್ಲವುದೇ ನೋಡಿ ಆಯ್ಕೆ ಮಾಡುದಡ.
ಗಣರಾಜ್ಯದ ಪಥಸಂಚಲನಕ್ಕೆ ಆಯ್ಕೆ ಅಪ್ಪದು ಹೇಳಿರೆ ‘ಪೂರ್ವಜನ್ಮದ ಸುಕೃತ’ ಹೇಳ್ತ ತಿಳುವಳಿಕೆ ಇದ್ದು, ದೇಶಲ್ಲಿ!

ಅದರೊಟ್ಟಿಂಗೇ, ನಮ್ಮ ದೇಶದ ವಿವಿಧತೆಯ ತೋರುಸುತ್ತ ಬೇರೆಬೇರೆ ಊರಿನ ಕಲಾಕೃತಿಗಳುದೇ ಇರ್ತು – ಯಕ್ಷಗಾನವೋ, ಕತಕ್ಕಳಿಯೋ, ಕೋಲಾಟವೋ – ಹೀಂಗೆಂತಾರು!
ಅದಲ್ಲದ್ದೇ, ದೇಶದ ರಕ್ಷಣೆಗೆ ಬಳಸುವ ಬೆಡಿ, ಪಿರೆಂಗಿ, ಟೇಂಕು, ಕ್ಷಿಪಣಿ, ರೋಕೆಟ್ಟು, ದುರ್ಸು, ಬೋಂಬು – ಇತ್ಯಾದಿಗಳನ್ನುದೇ ತೋರುಸುತ್ತವಡ.
ಒಂದೊಂದು ಲೋರಿಯ ಮೇಲೆ ಮಡಗಿ ನಿದಾನಕ್ಕೆ ಹೋಪದಡ.
ಇಡೀ ಗುಂಪೇ ಗಣರಾಜ್ಯದ ಪಥಸಂಚಲನದ ತಾಳಲ್ಲಿ ನೆಡವದು.
~

ನಾವು ಎಷ್ಟು ಶಾಂತಿಪ್ರಿಯರು ಆದರುದೇ ನೆರೆಕರೆ ಸರಿ ಇಲ್ಲದ್ರೆ ಜಗಳ ಆಗಿಯೇ ಆವುತ್ತು. ಎಷ್ಟೇ ರಕ್ಷಣೆ, ಆಯುಧಂಗೊ ಇದ್ದರುದೇ ಸೋಲು ಬಂದೇ ಬತ್ತು.
ಅದರ್ಲಿಯೂ ನೆಹರುವಿನ ಹಾಂಗೆ ಅರೆಬೆಂದ ಮಾರಾಯ° ಪ್ರಧಾನಿ ಆದರೆ ಕೇಳುದೇ ಬೇಡ ಮತ್ತೆ!
ವೆವಸ್ಥೆಯ ಎಷ್ಟು ಲಗಾಡಿ ತೆಗವಲಕ್ಕೋ ಅಷ್ಟು ತೆಗದು ಹೋಕು!
ಶಾಂತಿಪ್ರಿಯ ಪೋಸು ಕೊಟ್ಟೋಂಡು ‘ಶಾಂತಿ ನೋಬೆಲ್’ ಸಿಕ್ಕುಲೆ ಒಳಂದೊಳ ಸಿಕ್ಕಾಪಟ್ಟೆ ಲಾಗ ಹಾಕಿ, ದೇಶದ ಗಡಿಲಿ ಇಪ್ಪ ಬೂತವ ಮರದೇ ಬಿಟ್ಟಿತ್ತಿದ್ದನಡ.
ಹಾಂಗೆ ಶಾಂತಿಪ್ರಿಯ ನಮ್ಮ ದೇಶಕ್ಕುದೇ ಜಗಳ ಆಗಿತ್ತು.
1962ರಲ್ಲಿ ಚೀನಾ ದೇಶ, ಟಿಬೇಟಿನ ನುಂಗುವ ವಿಶಯಲ್ಲಿ ಕೈ ಹಾಕಿ, ಅದೇ ಮುಂದುವರುದು ಮತ್ತೆ ಭಾರತದ ಒಟ್ಟಿಂಗೆ ಯುದ್ಧ ಮಾಡಿದ್ದು.
ಆ ಯುದ್ಧಲ್ಲಿ ಒಂದೇ ಪೆಟ್ಟಿಂಗೆ ಸೋತು, ಕಂಗಾಲಾಗಿ ಹೋಯಿದು ಭಾರತ ದೇಶ!
ಸತ್ಯ ಹೇಳೆಕ್ಕಾರೆ, ನಮ್ಮ ದೇಶ ಆ ಸಮಯಲ್ಲಿ ಒಂದು ಯುದ್ಧಕ್ಕೆ ತೆಯಾರಾಗಿಯೇ ಇತ್ತಿಲ್ಲೆ.
ಗಡಿಯ ಹತ್ರೆ ಸುಮಾರು 10-12ಸಾವಿರ ಭಾರತದ ಸೈನಿಕರು ಬರ್ಕತ್ತಿಂಗೆ ಸ್ವೆಟರುದೇ ಇಲ್ಲದ್ದೆ ನಡುಗಿಯೊಂಡು ಇತ್ತಿದ್ದವು. ಚೀನಾದವು 80ಸಾವಿರ ಜೆನಂಗೊ ಪೂರ್ತಿ ಸನ್ನದ್ಧರಾಗಿ ಕಾದುಲೆ ನಿಂದಿತ್ತಿದ್ದವು!
ಶಂಬಜ್ಜನ ಕಾಲದ ಮುರ್ಕಟೆ ಬೆಡಿಯ ಹಿಡ್ಕೊಂಡು ಇವು ಎಂತರ ಜಗಳ ಮಾಡುದು, ಪಾಪ!
ಹರ್ಕಟೆ ಬೂಟೀಸು / ಬೂಡುಸು (boots) ಹಾಯ್ಕೊಂಡು ಹೇಂಗೆ ನೆಡವದು ಆ ಮಂಜಿನ ಮೇಲೆ!
ಕಪ್ಪು ಕನ್ನಡ್ಕ ಇಲ್ಲದ್ರೆ ಆ ಬೆಳಿ ಮಂಜಿನ ಹಿಮಾಲಯ ಪರ್ವತಲ್ಲಿ ಬೆಣಚ್ಚು ಕಣ್ಣುಕುತ್ತುವಗ ಎಂತರ ನೋಡುದು ಬೇಕೆ?
ಹೊಟ್ಟೆತುಂಬ ಉಂಬಲೆ ಗೆತಿ ಇಲ್ಲದ್ರೆ ಬೇಗು ನೆಗ್ಗುದು ಹೇಂಗೆ?
ಒಟ್ಟೆ ಪೋನುದೇ ಇಲ್ಲದ್ರೆ ಅತ್ತಿತ್ತೆ ಮಾತಾಡುದು ಹೇಂಗೆ ಬೇಕೇ? ಅವರತ್ರೆ ಕ್ಷಣಲ್ಲಿ ಅವರ ರಾಜಧಾನಿಗೆ ಸಂಪರ್ಕ ಅಪ್ಪಲೆ ವೆವಸ್ಥೆ ಇತ್ತಿದಾ!
ಎದುರಾಣವರ ಭಾಷೆಯೇ ಅರ್ಥ ಆಗದ್ರೆ ಹೇಂಗೆ ಗುಟ್ಟುತಿಳಿವದು ಬೇಕೇ? ಅವರಲ್ಲಿ ದ್ವಿಭಾಷಾತಜ್ಞ ಸೈನಿಕರ ರಾಶಿಯೇ ಇತ್ತು!
ಅದೊಂದು ಯುದ್ಧವೇ ಅಲ್ಲಡ! ಕೆಲವು ಗಂಟೆಗಳ ಗುಂಡಿನ ಚಕಮಕಿ!!
ಅಂತೂ ಭಾರತ ಸೋತತ್ತು!
ನಮ್ಮ ಇತಿಹಾಸಲ್ಲೇ ಅಂತಾ ಸೋಲಿನ ನಾವು ಅನುಬವಿಸಿತ್ತಿಲ್ಲೆಡ! ಗೊಂತಿದ್ದಾ!!
ಅದರ ಬಗ್ಗೆ ವಿವರವಾಗಿ ಒಂದು ಪುಸ್ತಕ ಇದ್ದು, ಕೊಳಚ್ಚಿಪ್ಪುಭಾವ ಓದಿದ್ದವಡ – ಅದರ ಶುದ್ದಿ ಹೇಳ್ತವಡ, ಸದ್ಯಲ್ಲೇ!
ಈಗಾಣ ಮಕ್ಕೊಗೆ ಸಚಿನು ಆಡಿಯುದೇ ಭಾರತ ಸೋತರೆ ಮಾಂತ್ರ ಬೇಜಾರಪ್ಪದು!
ಎಷ್ಟೋ ಸಚಿನ್ನಂಗೊ ಹೋರಾಡಿರುದೇ ಭಾರತ ಸೋತದು ಮರದೇ ಹೋಯಿದು!!

ಯುದ್ಧಕ್ಕೆ ಸೈನಿಕರು ಅಲ್ಲಿಗೆ ಹೋದವು.
ಅವು ಹೋದ್ದು ಬೇರೆ ಬೇರೆ ಗಡಿ ಭಾಗಂದ.
ಅಲ್ಲಿ ಬರ್ತಿ ಮಾಡ್ಳೆ ಪೋಲೀಸುಗಳೋ, ಹೋಮುಗಾರ್ಡುಗಳೋ – ಇತ್ಯಾದಿ ಜೆನಂಗೊ ಹೋದ್ದಡ.
ಅಷ್ಟಪ್ಪಗ ಪೋಲೀಸರ ಕೊರತೆ ಉಂಟಾತು! ಎಂತ ಮಾಡುದು!!
ಭಾರತ ಅಕ್ಷರಶಃ ಕಷ್ಟಲ್ಲಿತ್ತು, ದೇಶಭಕ್ತರಿಂಗೆ ಕೈಕಟ್ಟಿ ಕೂಪಲೇ ಎಡಿಯದ್ದ ಸಮಯ.
ಆ ಸಮಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರಸೇವೆ ಮಾಡಿತ್ತಡ.
ಪೋಲೀಸು ಶ್ಟೇಶನು ಕಾಲಿ ಆದರೆಂತಾತು? ಊರಿನ ಶಿಸ್ತು, ಕಾರ್ಯಂಗಳ ಸ್ವತಃ ಸಂಘದ ಸ್ವಯಂಸೇವಕರು ಸೇವೆಯ ಮೂಲಕ ಮಾಡಿದವಡ.
ದೇಶದ ಆಂತರಿಕ ತೊಂದರೆಗಳ ಎಲ್ಲ ಪೋಲೀಸರಿಂದ ಲಾಯ್ಕಲ್ಲಿ ನಿಭಾಯಿಸಿದವಡ!
ಕೆಲವು ದಿಕೆ ಅಂತೂ – ಬಸ್ಸು, ವೇನು ಹೋಪ ಮಾರ್ಗವ ನೋಡಿಗೊಂಬದರಿಂದ ಹಿಡುದು, ಸಣ್ಣ ಸಣ್ಣ ಗಲಾಟೆ – ಒಂದೂ ಆಗದ್ದ ಹಾಂಗೆ ಕ್ರಮಾಗತವಾಗಿ ನೋಡಿಗೊಂಡಿದವಡ.
ಯುದ್ಧಲ್ಲಿ ಗಾಯ ಆದ ಸೈನಿಕರಿಂಗೆ ಬೇಕಾಗಿ ರಕ್ತದಾನ ಮಾಡಿದವಡ – ದೇಶಕಾಗಿ ನೆತ್ತರಧಾರೆಕೊಡುದು ಇದುದೇ ಅಪ್ಪಲ್ದಾ?
ಶಿಸ್ತಿಂಗೆ ಹೆಸರಾದ ಸಂಘ ಮತ್ತೊಂದರಿ ದೇಶದ ಮನೆಮಾತು ಆತಡ.
ದೇಶಸೇವೆಗೆ ಇನ್ನೊಂದು ಹೆಸರು ಸಂಘ ಹೇಳಿ ಆಗಿತ್ತಡ ಆ ಹೊತ್ತಿಂಗೆ.

‘ಗಾಂಧಿಯ ಕೊಂದವು’ ಹೇಳಿ ಅಂತೇ ಬೊಬ್ಬೆ ಹೊಡಕ್ಕೊಂಡು ಇದ್ದ ಬುದ್ಧಿ(ಲ್ಲದ್ದ)ಜೀವಿಗೊ ಮೂಗಿಲಿ ಬೆರಳು ಮಡಗಿದ್ದರ ತೆಗವಲೇ ಮರದವಡ!
ಅಂದು ಅದಾಗಲೇ ಬೆಳಕ್ಕೊಂಡು ಇತ್ತಿದ್ದ ಸಂಘದ ಮೇಲೆ ಗಾಂಧಿಹತ್ಯೆಯ ನೆಪಲ್ಲಿ ಬೇನು (ನಿಷೇಧ) ಹಾಕಿದ ಅದೇ ನೆಹರು, ಸ್ವತಃ ಈ ದೇಶಸೇವೆಯ ಮನಗಂಡನಡ.
ಯುದ್ಧ ಮುಗುತ್ತು. ಮತ್ತೆ ಶಾಂತಿ ಬಂತಡ. ಪೋಲೀಸುಗೊ ಒಪಾಸು ಬಂದವು. ಸಂಘ ಸ್ವಯಂಸೇವಕರು ಮನಗೆ ಬಂದವು!
ಯಾವ ಪ್ರತಿಫಲವುದೇ ಇಲ್ಲದ್ದೆ ಮಾಡಿದ ಈ ಕಾರ್ಯ, ಸಮಾಜಸೇವೆ ಸಣ್ಣದೇನಲ್ಲ!
~
ಯುದ್ಧಕಾಲಲ್ಲಿ ಮಾಡಿದ ದೇಶಸೇವೆಗೆ ಗೌರವಕ್ಕಾಗಿ ಮರುಒರಿಷದ ಗಣರಾಜ್ಯಕ್ಕೆ ಸಂಘಕ್ಕೆ “ಗಣವೇಶಲ್ಲಿ ಪಥಸಂಚಲನ ಮಾಡೆಕ್ಕು” ಹೇಳಿಗೊಂಡು ಭಾರತಸರಕಾರಂದ ಆಹ್ವಾನ ಬಂತಡ. (ಸಂಘದ ಸಮವಸ್ತ್ರಕ್ಕೆ ಗಣವೇಶ ಹೇಳ್ತದು – ಗೊಂತಿದ್ದನ್ನೇ?)
ನೆಹರುವಿನ ಆಡಳ್ತೆಲಿ ಮಾಡಿದ ಅತೀ ಕಡಮ್ಮೆ ‘ಮೆಚ್ಚೆಕ್ಕಾದ’ ಕೆಲಸಂಗಳಲ್ಲಿ ಒಂದು!
ಹಾಂಗೆ, 1963ರಲ್ಲಿ ಸಂಘ ಗಣರಾಜ್ಯಲ್ಲಿ ಭಾಗವಹಿಸಿತ್ತಡ.
ಸೈನ್ಯದವರ ತಾಳಕ್ಕೆ, ಅವರಷ್ಟೇ ಚೆಂದಕೆ ಪಥ ಹಾಕಿಯೊಂಡು, ಇಡೀ ದೇಶಭಕ್ತರ ಮೈಲಿ ಸಂಚಲನ ಮೂಡುಸಿಗೊಂಡು ನೆಡದವಡ!
ಸಮಾಜದ ದೇಶಸೇವೆಯ ಸಂಘಟನೆಗೆ ಸಿಕ್ಕಿದ ಅತ್ಯಂತ ದೊಡ್ಡ ಹೆಗ್ಗಳಿಕೆ!
ಕೊಡೆಯಾಲದ ಪೊಸವಣಿಕೆಅಣ್ಣ ಇದರ ವಿವರವಾಗಿ ಹೇಳುವಗ ನವಗೆ ರೋಮ ಕುತ್ತಕುತ್ತ ಆವುತ್ತು!
~

ಅಲ್ಲಿಂದ ಇಂದಿನ ಒರೆಂಗೂ ಗಣರಾಜ್ಯ ಏನೋ ನೆಡೆತ್ತಾ ಇದ್ದು, ಪ್ರತಿಒರಿಷ.
ಆದರೆ ಗಣವೇಶ ಮರುಒರಿಶಂದ ಕಾಂಬಲೇ ಇಲ್ಲೆ!
ಆ ಒಂದು ಒರಿಶ ಮಾಂತ್ರ ಗಣವೇಶಕ್ಕೆ ಆಹ್ವಾನ, ಮತ್ತೆ ಬೇಡ ಹೇಳಿ ಕಂಡತ್ತೋ ಏನೋ!
ಹಿಂದೂರಾಷ್ಟ್ರದ ಕಲ್ಪನೆ ಇಪ್ಪ ಸಂಘವ ಹತ್ತರೆ ಮಾಡಿರೆ ಮಾಪ್ಳೆಗಳ ಓಟು ಸಿಕ್ಕ ಹೇಳಿ ನೆಹರು ಆಲೋಚನೆ ಮಾಡಿದನೋ ಏನೋ!
ದಿನಿಗೆಳಿ ಅಪ್ಪಗ ಹಿಗ್ಗದ್ದೆ, ದೂರಮಾಡಿಅಪ್ಪಗ ಕುಗ್ಗದ್ದೆ, ಸಂಘ ಅಂದು, ಇಂದು ಎಂದೆಂದೂ ಅದೇ ನಮುನೆ ಸ್ಥಿತಪ್ರಜ್ಞನ ಹಾಂಗೆ ಇದ್ದುಗೊಂಡು ಇತ್ತು!
ಸರಕಾರ ಹಾಂಗೆ ದೂರ ಮಾಡಿರೂ, ಭಾರತ ದೂರ ಮಾಡಿದ್ದಿಲ್ಲೆ!
ಅದರಿಂದ ಮತ್ತೆ ಭಾರತ ಪಾಕಿಸ್ತಾನ ಯುದ್ಧ ಆತು, ಅಲ್ಲಿಯೂ ಸಂಘ ಹೀಂಗೇ ಕೆಲಸ ಮಾಡಿದ್ದು.
ಮತ್ತೆ ಎಷ್ಟೋ ದಿಕ್ಕೆ ಭೂಕಂಪ ಆತು, ಅಂಬಗಳೂ ಇದೇ ರೀತಿ ಕೆಲಸ ಮಾಡಿದ್ದು.
ಎಷ್ಟೋ ದಿಕ್ಕೆ ನೆರೆ-ಬೆಳ್ಳ-ಪ್ರಳಯ ಬಯಿಂದು, ಅಂಬಗಳುದೇ ಇದೇ ರೀತಿ ತೊಡಗುಸಿಗೊಂಡಿದು.
ಅದೆಷ್ಟೋ ದಿಕ್ಕೆ ಧರ್ಮವ ಬೈದು ನಮ್ಮೋರ ಧರ್ಮಾಂತರ ಮಾಡುವ ದೇಶದ್ರೋಹ ಮಾಡಿಗೊಂಡಿತ್ತಿದ್ದವು – ಅಂಬಗಳುದೇ ಇದೇ ರೀತಿ ಕೆಲಸ ಮಾಡಿದ್ದು.
ತೆಮುಳುನಾಡಿಲಿ ಸುನಾಮಿ ಬಂದಿತ್ತು, ಅದರ್ಲಿದೇ ಇದೇ ನಮುನೆ ಕೆಲಸ ಮಾಡಿತ್ತಿದ್ದು.
ಸರಕಾರಂದ ಯಾವದೇ ರೀತಿ ಸಹಕಾರವ ನಿರೀಕ್ಷೆ ಬಯಸದ್ದೆ, ದೇಶಸೇವೆ ಕೇವಲ ತನ್ನ ಕರ್ತವ್ಯ ಹೇಳಿ ನಂಬಿಗೊಂಡು ಬಂದ ಸಂಘಕ್ಕೆ ಗಣರಾಜ್ಯಲ್ಲಿ ಒಂದೇ ಸರ್ತಿ ಭಾಗವಹಿಸುವ ಅವಕಾಶ!
ಚೆ! ಅದೆಂತಕೆ ಹಾಂಗೆ?
ಪ್ರತಿಸರ್ತಿ ದಿನಿಗೆಳ್ತ ಯೋಗ್ಯತೆ ಸರಕಾರಕ್ಕೆ ಇಲ್ಲದ್ದೆಯೋ? ಅಲ್ಲ ದಿನಿಗೆಳುಲೆ ಮನಸ್ಸಿಲ್ಲದ್ದೆಯೋ?
ಎಲ್ಲ ಓಟಿನ ರಾಜಕೀಯ ಅಡ – ಗುಣಾಜೆಮಾಣಿ ಪಿಸುರಿಲಿ ಹೇಳಿದ!
~

ಈ ಸರ್ತಿಯಾಣ ಗಣರಾಜ್ಯೋತ್ಸವ ಮೊನ್ನೆ ಕಳಾತು.
ಟೀವಿಲಿ ಪಥಸಂಚಲನ ಬಂದುಗೊಂಡು ಇತ್ತು, ಎಕ್ಕಳುಸಿ ಎಕ್ಕಳುಸಿ ನೋಡಿದೆ, ಗಣವೇಶ ಕಾಣ್ತೋ – ಹೇಳಿಗೊಂಡು.
ಏಯ್, ಇಲ್ಲೆ! ಕಾಂಬಲೇ ಇಲ್ಲೆ.
ದೊಡ್ಡಬಾವಂಗೆ ಪದ್ಮಪ್ರಶಸ್ತಿ ಹೇಂಗೆ ಈ ಒರಿಶವೂ ಇಲ್ಲೆಯೋ – ಅದೇ ರೀತಿ ಗಣವೇಶದ ಪಥಸಂಚಲನ ಈ ಒರಿಶವೂ ಇಲ್ಲೆ!!
~

RSS At Republic Day 1963

1963 ರಲ್ಲಿ ಸಂಘದ ಗಣವೇಶ, ಗಣರಾಜ್ಯ ಪಥಸಂಚಲನಲ್ಲಿ!

ಮಾಷ್ಟ್ರುಮಾವನ ಮಗ°, ಅಮೇರಿಕಲ್ಲಿಪ್ಪವ° – ಒಂದು ಪಟ ಕಳುಸಿದ°, 1963ರಲ್ಲಿ ಸಂಘದ ಪಥಸಂಚಲನದ್ದು.
ಬ್ಲೇಕೆಂಡುವೈಟು! ಇದರ ಕಲರು ಇಲ್ಲೆಯೋ – ಹೇಳಿ ಕೇಳಿದೆ.
‘ಅಂಬಗ ಕಲರುಪಟಂಗ ಇತ್ತಿಲ್ಲೆ ಅಲ್ದಾ, ಈಗ ಆದರೆ ಇದ್ದು’ – ಹೇಳಿ ಬೇಜಾರಲ್ಲಿ ನೆಗೆಮಾಡಿದ°.
ಒಪ್ಪಣ್ಣಂಗೂ ಬೇಜಾರಾತು!
ಗಣರಾಜ್ಯಲ್ಲಿ ಗಣವೇಶ ಮತ್ತೇವಗ ಬಕ್ಕು?
ಕಾಕಿ ಬೆಳಿ ಸಮವಸ್ತ್ರಲ್ಲಿ ಕಪ್ಪು ಟೊಪ್ಪಿ ಹಾಕಿ, ದಂಡ ಹಿಡ್ಕೊಂಡ ಗಣವೇಶ- ಪಥಸಂಚಲನ ಮಾಡ್ತದರ ಬಣ್ಣಬಣ್ಣದ ಪಟಲ್ಲಿ ಯೇವತ್ತು ಕಾಂಗು?
ನಿಂಗೊಗೆ ಅರಡಿಗೋ?

ಏ°?

ಒಂದೊಪ್ಪ: ಗಣರಾಜ್ಯಲ್ಲಿ ಗಣವೇಶ ಬಪ್ಪದು `ಗೆಣವತಿಯ ಮದುವೆ’ಯ ಹಾಂಗೇ ಆಗಿಹೋಗನ್ನೇ..!?

ಒಪ್ಪಣ್ಣ

   

You may also like...

13 Responses

  1. deepakka says:

    bari laikiddu oppanno

  2. ಭಾರೀ ಲಾಯಿಕಾಯಿದು.
    < < ಎಷ್ಟೋ ಸಚಿನ್ನಂಗೊ ಹೋರಾಡಿರುದೇ ಭಾರತ ಸೋತದು ಮರದೇ ಹೋಯಿದು! >>
    ಅಪ್ಪಲ್ಲ… ಎಲ್ಲವೂ ಸ್ವಾರ್ಥಭರಿತ ರಾಜಕಾರಣದ ಕೈಗೊಂಬೆ. ಸ್ವಾತಂತ್ರ್ಯ, ಗಣತಂತ್ರ ಬಂದರೂ ಪ್ರಯೋಜನ ಆದ್ದು ಅಷ್ಟಕ್ಕಷ್ಟೆ.
    ‘ಒಂದೊಪ್ಪ’ಲ್ಲಿ ಹೇಳಿದಾಂಗಾಗದ್ರೆ ರಜ ನಿರೀಕ್ಷೆ ಮಡುಗುಲಕ್ಕು….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *