ವಿಶ್ವಾಮಿತ್ರ ಋಷಿಃ, ದೇವೀ ಗಾಯತ್ರೀ ಛಂದಃ, ಸವಿತಾ ದೇವತಾ ||

June 24, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 63 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಟ್ಟಮಾವಂಗೆ ಈಗ ಸೂತಕ!
ಸೂತಕ ಇಲ್ಲದ್ದರೆ ತಿರುಗಾಟ ಇರ್ತು ಇದಾ! ಅನುಪ್ಪತ್ಯಂಗಳಲ್ಲಿ ವೈದೀಕ ಕಾರ್ಯಕ್ರಮಂಗೊಕ್ಕೆ ಹೋಪಲಿರ್ತು.
ಈಗ ಅದೆಂತೂ ಇಲ್ಲೆ; ಹತ್ತುದಿನ ವಿರಾಮ, ಸೂತಕದ ಲೆಕ್ಕಲ್ಲಿ. – ಹಾಂಗಾಗಿ ಬೈಲಿಂಗೆ ರಜ ಕಾಂಬಲೆ ಸಿಕ್ಕುತ್ತವು!

ಸೂತಕಲ್ಲಿ ಎರಡುವಿಧ ಅಲ್ಲದೋ – ಕ್ಷಯ ಸೂತಕ, ವೃದ್ಧಿ ಸೂತಕ – ಹೇಳಿಗೊಂಡು.
ಈ ಸರ್ತಿ – ಆಚಮನೆ ದೊಡ್ಡಣ್ಣಂಗೆ ಎರಡ್ಣೇಮಗಳು ಹುಟ್ಟಿದ ಲೆಕ್ಕಲ್ಲಿ – ಕುಟುಂಬವೃದ್ಧಿ ಆದ ಲೆಕ್ಕದ ಕೊಶಿಯ ಸೂತಕ.
~

ಆಚಮೊನ್ನೆ ಹೊತ್ತೋಪಗಳೇ ಆಚಮನೆ ದೊಡ್ಡಣ್ಣ ಕಣಿಯಾರದ ಆಶುಪತ್ರೆಗೆ ಹೋಯಿದ°, ಅತ್ತಿಗೆಯ ಕರಕ್ಕೊಂಡು.
ಒಳ್ಳೆಶುದ್ದಿ ಯೇವಗ ತಿಳಿಶುತ್ತ° – ಹೇಳಿ ಎಲ್ಲೋರುದೇ ಕಾದಿತ್ತಿದ್ದವು. ಮರದಿನ ಉದಿಯಪ್ಪಗ ಪೋನು ಬಂದೇಬಿಟ್ಟತ್ತು.
ಗಾಯತ್ರಿಗೆ ತಂಗೆ ಹುಟ್ಟಿತ್ತು – ಹೇಳಿಗೊಂಡು! ಅಲ್ಲಿಂದ ಮತ್ತೆ ಕುಟುಂಬದೋರಿಂಗೆಲ್ಲ ಈ ಕೊಶಿವಿಶಯ ಎತ್ತಿತ್ತು.

ಇಷ್ಟನ್ನಾರ `ಸಣ್ಣಕೂಸು’ ಆಗಿದ್ದ ಗಾಯತ್ರಿ ಈಗ ಅಕ್ಕ° ಆತು!
ಅಂದಿಂದಲೇ ಆಟಾಡ್ಳೆ ಕಾದುಗೊಂಡಿದ್ದ ಗಾಯತ್ರಿ ಮೊನ್ನೆ ಆಸ್ಪತ್ರೆಗೆ ಹೋಗಿ ಕುಂಞಿ ತಂಗೆಯ ಕೈ ಮುಟ್ಟಿಕ್ಕಿ ಬಂತಾಡ;
– ತಂಗೆಯೊಟ್ಟಿಂಗೆ ಆಡಿದ ಸುರೂವಾಣ ಆಟ ಅದುವೇ ಅಲ್ಲದೋ – ಕೊಶೀಲಿ ಬೊಬ್ಬೆ ಹೊಡಾದು ಹೇಳಿಗೊಂಡಿತ್ತು.! :-)
~

ಸೂತಕ ಬಕ್ಕು ಹೇಳ್ತ ಲೆಕ್ಕಲ್ಲಿ ಈ ಸಮಯಲ್ಲಿದ್ದ ಕಳೀಯಬಾರದ್ದರ ಮಾಂತ್ರ ಒಪ್ಪಿದ್ದದು ಬಟ್ಟಮಾವ°. ಅದಕ್ಕೂ, ಬೇರೆ ಬಟ್ಟಮಾವನ ಮದಲೇ ಜೆನ ಮಾತಾಡಿತ್ತಿದ್ದವು.
ಈ ಶುದ್ದಿ ಬಂದ ಕೂಡ್ಳೇ ಎಲ್ಲ ವೆವಸ್ತೆ ಮಾಡಿಯೂ ಬಿಟ್ಟವು.

ಇನ್ನು ಹತ್ತುದಿನ ಪುರುಸೊತ್ತೇ ಅಲ್ಲದೋ?
ಅಪುರೂಪಲ್ಲಿ ಪುರುಸೊತ್ತು ಸಿಕ್ಕುವ ಬಟ್ಟಮಾವಂಗೆ ಸುಮಾರು ಕೆಲಸ ಬಾಕಿಒಳುದ್ದು, ಬೈಲಿಂಗೆ ಕೆಲವು ಶುದ್ದಿ ಹೇಳುದೂ ಸೇರಿ! :-)
~
ನಿನ್ನೆಉದಿಯಪ್ಪಗ ಗಾಯತ್ರಿಯ ಕೊಶಿಯ ನೋಡ್ಳೆ ಒಪ್ಪಣ್ಣ ಹೋಗಿತ್ತಿದ್ದನಲ್ಲದೋ – ಬಪ್ಪಗ ಮಾಷ್ಟ್ರುಮಾವನ ಮನೆಲೆ ಆಗಿಯೇ ಬಂದದು.
ಅಲ್ಲಿ ಬಟ್ಟಮಾವಂದೇ ಬಂದಿತ್ತಿದ್ದವು, ಪುರುಸೋತಿಲಿ ಮಾತಾಡ್ಳೆ; ಎಷ್ಟು ಕಾಲ ಆತೋ ಏನೋ – ಅವಕ್ಕೆ ಹಾಂಗ್ರುತ್ತ ಪುರುಸೊತ್ತು ಸಿಕ್ಕದ್ದೆ!

ಬಟ್ಟಮಾವ° ಬಂದದು ಪಟ್ಟೆಸುತ್ತಿಗೊಂಡಲ್ಲಪ್ಪ, ನಿತ್ಯಒಸ್ತ್ರ – ತೋರ್ತು ಸುತ್ತಿಗೊಂಡು. ಒಂದು ಚೆಂಡಿಹರ್ಕಿನ ಮುಂಡಾಸಿನ ನಮುನೆ ಸುತ್ತಲಿಪ್ಪದು – ಈಗ ಹೆಗಲಿಂಗೆ ಹಾಕಿಂಡದವು; ಅಷ್ಟೇ.
ಆಸ್ಪತ್ರೆಗೆ ಕುಂಬ್ಳೆಅಜ್ಜಿಯಲ್ಲಿಂದ ಬೆಶಿಬೆಶಿ ತೆಳ್ಳವುಮಾಡಿದ್ದದರ ಆಚಮನೆ ದೊಡ್ಡಣ್ಣ ತೆಕ್ಕೊಂಡು ಹೋದನಡ, ಅದರ ತಿಂದುಗೊಂಡು ಮಾಷ್ಟ್ರುಮಾವಂಗೆ ಪೋನುಮಾಡಿತ್ತಿದ್ದನಾಡ ರಜ್ಜ ಮದಲು.
ಹಾಂಗೆ ಅಲ್ಯಾಣ ಬೆಶಿಶುದ್ದಿಯನ್ನೇ ಮಾತಾಡಿಗೊಂಡಿತ್ತಿದ್ದವು.
ಒಪ್ಪಣ್ಣ ಅಲ್ಲಿಗೆ ಎತ್ತಿದ್ದೇ ಕೂಡ್ಳೇ ಗಾಯತ್ರಿಯ ಕೊಶಿಯ ಬಗ್ಗೆಯೂ ಹೇಳಲೆ ಸುರುಮಾಡಿದೆ.
~
ಆಚಮನೆ ದೊಡ್ಡಣ್ಣನ ದೊಡ್ಡಮಗಳ ಹೆಸರು “ಗಾಯತ್ರಿ” ಹೇಳಿ ಮಡಗಿದ್ದನಲ್ಲದೋ?
ಅದು ಸಣ್ಣ ಇಪ್ಪಗ ತೆಚೆಪೆಚೆ ಮಾತಾಡಿಗೊಂಡಿದ್ದದರ ’ಗಾಯತ್ರಿ ಜೆಪ’ ಹೇಳಿಗೊಂಡಿದ್ದದು ಒಪ್ಪಣ್ಣ!
ಈಗ ಕೊಶೀಲಿ ಹಾರಿಗೊಂಡಿಪ್ಪಗ ಅದೇ ನೆಂಪಾತು.
ದೊಡ್ಡದು ಗಾಯತ್ರಿ ಜೆಪ ಮಾಡ್ತು, ಸಣ್ಣ ಕೂಸು ಯೇವ ಜೆಪ ಮಾಡ್ತೋ – ಹೇಳಿದೆ, ನೆಗೆಮಾಡಿಗೊಂಡು.
ಮಾಷ್ಟ್ರುಮಾವನ ಎಲೆಹರಿವಾಣಲ್ಲಿದ್ದ ಪೀಶಕತ್ತಿಯ ಕೊಡಿಲಿ ಕಡೆಹಲ್ಲಿನ ಒಕ್ಕಿಗೊಂಡಿದ್ದ ಬಟ್ಟಮಾವ° ಜಾಗ್ರತೆಲಿ ಅದರ ಹೆರತೆಗದು ಹ್ಹ ಹೇಳಿ ನೆಗೆಮಾಡಿದವು.
~
ಬಟ್ಟಮಾವ° ಇಪ್ಪಗ ಎಂತಾರು ಮಂತ್ರದ ವಿಶಯ ಬಪ್ಪದು ಇಪ್ಪದೇ!
ಹಾಂಗೇ ಇಂದುದೇ ಬಂತು, ಗಾಯತ್ರಿ ಜೆಪದ ಬಗ್ಗೆಯೇ.

ಉಪ್ನಾನ ಆದ ದಿನ ಹೇಳುಲೆ ಸುರುಮಾಡಿದವ° – ಮೈಲಿ ಜೆನಿವಾರ ಇಪ್ಪನ್ನಾರ ನೆಂಪುಮಡಗಿ ಹೇಳ್ತದು ಗಾಯತ್ರಿ ಜೆಪವೇ ಅಲ್ಲದೋ?
ಬ್ರಹ್ಮತ್ವಲ್ಲಿ, ಬ್ರಾಹ್ಮಣತ್ವಲ್ಲಿ ಗಾಯತ್ರಿಗೆ ಬಹುಮುಖ್ಯ ಸ್ಥಾನ ಇದ್ದು. ಎಲ್ಲೋರುದೇ ಹೇಳ್ತವು; ಆದರೆ ಅದರ ಆಳ-ವಿಸ್ತಾರ ಎಷ್ಟು ಜೆನಕ್ಕೆ ಅರಡಿಗು?
ಗಾಯತ್ರಿಜೆಪದ ನೆಗೆಶುದ್ದಿ ಬಂದಪ್ಪಗಳೇ ಇದರ ತೆಗದೆ, ಗಾಯತ್ರಿಜೆಪವ ರಜ್ಜ ವಿವರುಸುತ್ತಿರೋ – ಹೇಳಿಗೊಂಡು.
ಒಂದರಿಯಾಣ ಕಾಪಿಕುಡುದು ಎಲೆ ಬಾಯಿಗೆ ಹಾಕಿದ್ದಷ್ಟೇ ಬಟ್ಟಮಾವ°! ಮಾಷ್ಟ್ರುಮಾವನಷ್ಟಲ್ಲದ್ದರೂ ಅಪುರೂಪಕ್ಕೆ ಎಲೆತಿನ್ನೇಕು ಅವಕ್ಕೆ.
ಇವಕ್ಕಿಬ್ರಿಂಗೆ ಕಾಪಿಕೊಟ್ಟು ಮಾಷ್ಟ್ರಮನೆ ಅತ್ತೆ ತೋಟಕ್ಕೆ ಹೋಗಿತ್ತಿದ್ದವೋ ಕಾಣ್ತು, ಎಲ್ಲಿಯೂ ಕಂಡತ್ತಿಲ್ಲೆ. (ಒಪ್ಪಣ್ಣಂಗೆ ಕಾಪಿಯೂ ಬಯಿಂದಿಲ್ಲೆ ಇದಾ! :-( )
ಎಲೆ ಮಡಿಕ್ಕೊಂಡೇ ಬಟ್ಟಮಾವ° ವಿವರುಸಿಗೊಂಡು ಹೋದವು…
~
‘ಕ್ರಮಾಗತವಾಗಿ ಹೇಳ್ತರೆ, ನೇರವಾಗಿ ಗಾಯತ್ರಿಜೆಪದ ವಿವರಣೆಗೆ ಹೋಪಮದಲು, ಅದರ ಪೂರ್ವಮಾಹಿತಿ ಇರೇಕು’ – ಹೇಳಿ ಮಾತು ಸುರುಮಾಡಿದವು.
ಯೇವದೇ ಜೆಪಮಂತ್ರ ಹೇಳಿ ಜೆಪಮಾಡ್ತರೆ, ಅದರಿಂದ ಮದಲು ನಮ್ಮ ಮೈಕೈಯ ಮಾನಸಿಕವಾಗಿ ಆ ದೇವರಿಂಗೆ ಅರ್ಪಣೆ ಮಾಡೇಕಡ.
ವೈದೀಕವಾಗಿ ಹೀಂಗೆ ಮಾಡ್ತ ಕಾರ್ಯಕ್ಕೆ ಕರನ್ಯಾಸ, ಷಡಂಗನ್ಯಾಸ – ಒಟ್ಟಾಗಿ ಕರಷಡಂಗನ್ಯಾಸ ಹೇಳುದು’ – ಹೇಳಿದವು.

ಈ ಕರಷಡಂಗನ್ಯಾಸ ಎಲ್ಲ ಜೆಪಕ್ಕೂ ಇರ್ತಾಡ, ಗಾಯತ್ರೀ ಜೆಪಕ್ಕೂ ಇದ್ದು.
ಕರನ್ಯಾಸ:
ಗಾಯತ್ರಿಯ ಕರನ್ಯಾಸಲ್ಲಿ ಗಾಯತ್ರೀಮಂತ್ರವನ್ನೇ ವಿಭಾಗಮಾಡಿ ನಮ್ಮ ಕೈಯ ಐದು ಬೆರಳುಗೊಕ್ಕೆ, ಪೂರ್ತಿ ಕೈಗೆ ಅನ್ವಯ ಮಾಡ್ತದಡ.

ತತ್ಸವಿತುಃ ಬ್ರಹ್ಮಾತ್ಮನೇ – ಹೆಬ್ಬೆರಳಿಂಗೆ ಅನ್ವಯ ಮಾಡಿಗೊಂಡು ಹೇಳ್ತದು- ಅಂಗುಷ್ಟಾಭ್ಯಾಂ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ
– ತೋರುಬೆರಳು – ತರ್ಜನೀಭ್ಯಾಂ ನಮಃ |
ಭರ್ಗೋದೇವಸ್ಯ ರುದ್ರಾತ್ಮನೇ
– ನೆಡುಬೆರಳು – ಮಧ್ಯಮಾಭ್ಯಾಂ ನಮಃ |
ಧೀಮಹಿ ಈಶ್ವರಾತ್ಮನೇ
– ಪವಿತ್ರಬೆರಳು – ಅನಾಮಿಕಾಭ್ಯಾಂ ನಮಃ |
ಧಿಯೋಯೋನಃ ಸದಾಶಿವಾತ್ಮನೇ
– ಕಿರುಬೆರಳು – ಕನಿಷ್ಠಿಕಾಭ್ಯಾಂ ನಮಃ |
ಪ್ರಚೋದಯಾತ್ ಸರ್ವಾತ್ಮನೇ
– ಅಂಗೈ, ಹಿಂಗೈ, ಪೂರ್ತಿ ಕೈಯೊಳ – ಕರತಲ, ಕರಪೃಷ್ಠಾಭ್ಯಾಂ ನಮಃ ||

– ಹೀಂಗೆ ಹೇಳಿಗೊಂಡು ಒಂದೊಂದೇ ಬೆರಳನ್ನೂ – ಪೂರ್ತಿ ಕೈಯ್ಯನ್ನೂ ಮುಟ್ಟಿ ತೋರುಸಿಗೊಂಡು ಹೋದವು.
ಜೆಪಕ್ಕಪ್ಪಗ ನಿತ್ಯವೂ ಹೇಳ್ತರೂ, ಸ್ಪುಟವಾಗಿ ಅರ್ತ ಹೇಳಿದ್ದು ಮನನ ಅಪ್ಪಲೆ ಒಳ್ಳೆದಾತು.

ಷಡಂಗನ್ಯಾಸ:
ಕೈಯ ಒಂದೊಂದು ಬೆರಳಿಂಗೆ ಅನ್ವಯ ಮಾಡಿದ ಮತ್ತೆ ದೇಹದ ಒಂದೊಂದು ಅಂಗಕ್ಕೆ ಅನ್ವಯ ಮಾಡ್ತದು. ಆಗ ಹೇಳಿದ ಅದೇ ಮಂತ್ರದ ಪ್ರಕಲ್ಪಂಗೊ, ದೇಹದ ಬೇರೆಬೇರೆ ಭಾಗಂಗೊಕ್ಕೆ ಹೊಂದುಸುತ್ತದು, ಅಷ್ಟೇ.

ತತ್ಸವಿತುರ್ಬ್ರಹ್ಮಾತ್ಮನೇ – ಎದೆ ಮುಟ್ಟಿಗೊಂಡು ಹೇಳ್ತದು – ಹೃದಯಾಯ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ
– ನೆತ್ತಿಯ ಮುಟ್ಟಿಗೊಂಡು – ಶಿರಸೇ ಸ್ವಾಹಾ|
ಭರ್ಗೋದೇವಸ್ಯ ರುದ್ರಾತ್ಮನೇ
– ಶಿಖೆ (ಜೊಟ್ಟು) ಮುಟ್ಟಿಗೊಂಡು  ಶಿಖಾಯೈ ವಷಟ್ | ಈಗ ಶಿಖೆಇಲ್ಲದ್ದೋರು ಹಿಂದಲೆ ಮುಟ್ಟಿಗೊಳ್ತವು, ಅಷ್ಟೇ! ಹೇಳಿದವು.
ಧೀಮಹಿ ಈಶ್ವರಾತ್ಮನೇ
– ಮೈಗಿಪ್ಪ ಕವಚ (ಎರಡೂ ಕೈಯ ರಕ್ಷಣಾಕವಚದ ಹಾಂಗೆ ಹಿಡ್ಕೊಂಡ ಕಲ್ಪಿತ ಕವಚ) – ಕವಚಾಯ ಹುಮ್ |
ಧಿಯೋಯೋನಃ ಸದಾಶಿವಾತ್ಮನೇ
– ಕಣ್ಣುಗೊ – ನೇತ್ರತ್ರಯಾಯ ವಷಟ್ |
ಪ್ರಚೋದಯಾತ್ ಸರ್ವಾತ್ಮನೇ
ಅಸ್ತ್ರಾಯ – ಎರಡೂ ಕೈ ಸೇರುಸಿ ಒಂದು ಚಪ್ಪಾಳೆ ಶೆಬ್ದ ಮಾಡಿದವು – ಫಟ್ ||

ಆ ಶಬ್ದದ ಮೂಲಕ ನಮ್ಮ ದೇಹದ ಸರ್ವತ್ರ ಗಾಯತ್ರೀದೇವರು ಆವಾಹನೆ ಆಗಲಿ – ಹೇಳ್ತದು ಆಶಯ ಅಡ.  ಬಟ್ಟಮಾವ° ಮಳೆಗಾಲ ಆದ ಕಾರಣ ನುಸಿ ಓಡುಸಿದ್ದೋ ಗ್ರೇಶುಗು ನೆಗೆಮಾಣಿ. :-)
ಒಂದೊಂದು ಕೈ-ಕರಣವನ್ನೂ ಸ್ಫುಟವಾಗಿ ತೋರುಸುವಗ ಒಂದರಿ ಎಲೆತುಪ್ಪೇಕಾಗಿ ಬಂತು ಬಟ್ಟಮಾವಂಗೆ. ಈಗ ಎಲೆತಟ್ಟೆ ಮಾಷ್ಟ್ರುಮಾವನ ಹತ್ತರೆ ಇದ್ದು.
ಜೆಪ ಮಾಡ್ತ ಆದಿಲಿ ಮೈಕೈ ಇಡೀ ಗಾಯತ್ರಿದೇ ಅನ್ವಯ ಮಾಡಿಗೊಂಬದು.
~
ಧ್ಯಾನ:
ದೇಹದ ಯೇವಯೇವ ಭಾಗ ಏವ ಅಂಶಕ್ಕೆ – ಹೇಳ್ತದು ವಿವರಣೆ ಆದ ಮೇಗೆ ಗಾಯತ್ರಿಯ ಧ್ಯಾನ ಮಾಡ್ತದು. ಸಾಮಾನ್ಯವಾಗಿ ಜೆಪದ ಮದಲಾಣ ಧ್ಯಾನಶ್ಲೋಕಲ್ಲಿ ಆ ದೇವರ ವರ್ಣನೆಯೇ ಇಪ್ಪದು-ಹೇಳಿದವು ಮಾಷ್ಟ್ರುಮಾವ°.
ಗಾಯತ್ರಿಯ ಧ್ಯಾನಶ್ಲೋಕ ಶಾರ್ದೂಲ ವಿಕ್ರೀಡಿತಲ್ಲಿ ಇದ್ದಾಡ.
ಹೆರ ಮುಗಿಲು ಹಾಕಿ ಕಪ್ಪುಗಟ್ಟಿದ್ದು, ಇನ್ನು ರಜ ಹೊತ್ತಿಲೇ ಮಳೆ ಬಂದುಬಿಡುಗು. ಈಗ ಹಾಂಗೇ ಅಲ್ಲದೋ –  ಉದಿಯಪ್ಪಗಳೇ ಮಳೆ. ಎಂತ ಕೆಲಸವೂ ಮಾಡ್ಳೆಡಿಯ.
ಧ್ಯಾನಶ್ಲೋಕವ ಜೋರಾಗಿ ರಾಗಲ್ಲಿ ಹೇಳಿದವು ಬಟ್ಟಮಾವ°:

ಮಂದಾರಾಹ್ವಯರೋಚನಾಂಜನಜಪಾ ಖಾಭೈರ್ಮುಖೈರಿಂದುಮ-
– ದ್ರತ್ನೋದ್ಯನ್ಮ ಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾ ತನುಃ |
ಅಂಭೋಜೇರಿ ದರಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇ-
ಷ್ಟಾ ಭೀತೀರ್ದಧತೀ ಭವೇದ್ಭವಭಯ ಪ್ರೋತ್ಸಾರಿಣೀ ತಾರಿಣೀ ||

ಇದು ಗಾಯತ್ರೀ ಮಂತ್ರದ ಧ್ಯಾನ ಶ್ಲೋಕ ಅಡ. ಇದರ್ಲಿಯೂ ಗಾಯತ್ರಿಯ ವರ್ಣನೆ ಇಪ್ಪದೋ – ಕೇಳಿದೆ.
ಮಾಷ್ಟ್ರುಮಾವ° ತೂಷ್ಣಿಲಿ ವಿವರುಸಿದವು:
ಗಾಯತ್ರಿ ತುಂಬ ಚೆಂದ ಆಡ. ಆಚಮನೆ ಗಾಯತ್ರಿಯೂ ಹಾಂಗೇ – ಹೇಳಿ ಅನುಸಿತ್ತು ಒಪ್ಪಣ್ಣಂಗೆ.
ಅಯಿದುಮೋರೆ ಇಪ್ಪ ಈ ದೇವಿಯ ವರ್ಣನೆ ಇದರ್ಲಿ ಮಾಡಿದ್ದವಡ. ಮಂದಾರ ಹೂಗಿನ ಬಣ್ಣದ ಒಂದು ಮೋರೆ, ಅರುಶಿನ ಬಣ್ಣದ ಒಂದು ಮೋರೆ, ಮಸಿಯ ನಮುನೆ ಕಪ್ಪುಬಣ್ಣದ್ದೊಂದು ಮೋರೆ, ಕೆಂಪುಬಣ್ಣದ್ದೊಂದು ಮೋರೆ, ಆಕಾಶದ ನಮುನೆ ನೀಲ ಬಣ್ಣದ್ದೊಂದು ಮೋರೆ! ಕಿರೀಟಲ್ಲಿಪ್ಪ ಆಭರಣಗಳಿಂದ ಮೈ ಹೊಳೆತ್ತಾ ಇದ್ದಾಡ. ಕೈಲಿ ಶಂಖಚಕ್ರಂಗಳ ಧರಿಸಿ ಆಯುಧಗಳಿಂದ ಶೋಭಿತಳಾಗಿ ಇದ್ದಾಡ. ನಂಬಿದೋರಿಂಗೆ ಅಭಯಕೊಡ್ಳೆ ಸಿದ್ಧವಾಗಿದ್ದಾಡ – ಹೇಳಿದವು.

ಅಂದೊಂದರಿ ಕಾಂಚಿ ಸ್ವಾಮಿಗೊ ಬೆಳ್ಳಾರೆ ವೇದಪಾಟಶಾಲೆಗೆ ಬಂದಿತ್ತಿದ್ದವು ಅಲ್ಲದೋ? ಅಲ್ಯಾಣ ಮಕ್ಕಳೊಟ್ಟಿಂಗೆ ಒಂದು ರಜ ಹೊತ್ತು ಮಾತಾಡಿ, ಹೆರಡ್ಳಪ್ಪಗ “ಗಾಯತ್ರಿ ದೇವಿಯ ಪಟ” ಒಂದು ಕಟ್ಟ ಕೊಟ್ಟಿತ್ತಿದ್ದವಡ.
ಬೈಲಿನ ಮಕ್ಕೊ ಆರೋ ಅಲ್ಲಿ ಕಲ್ತುಗೊಂಡಿದ್ದ ಕಾರಣ, ಬೈಲಿಂಗೂ ರಜ ಪಟ ಎತ್ತಿದ್ದತ್ತು.
ಗಣೇಶಮಾವಂಗೆ ಹತ್ತಿಪ್ಪತ್ತು ಸಿಕ್ಕಿದ್ದರ್ಲಿ ಮಾಷ್ಟ್ರುಮಾವಂಗೆ ರಜ ತಂದುಕೊಟ್ಟಿತ್ತಿದ್ದವಾಡ.
ಉಪ್ನಾನ ಹೇಳಿಕೆ ಬಂದಲ್ಲಿಗೆ ಒಸಗೆಯ ಒಟ್ಟಿಂಗೆ ಮಾಷ್ಟ್ರುಮಾವ° ಈ ಪಟವ ಉಡುಗೊರೆ ಮಾಡಿಗೊಂಡಿತ್ತಿದ್ದವಾಡ. ಇನ್ನೂ ಒಂದು ಪಟ ಇದ್ದತ್ತು, ಒಳ ಹೋಗಿ ಪಟ ತಂದು ತೋರುಸಿದವು.
ಈ ಧ್ಯಾನ ಶ್ಲೋಕ ನೋಡಿಯೇ ಪಟ ತೆಗದ್ದೋ, ಪಟ ನೋಡಿಯೇ ಧ್ಯಾನಶ್ಲೋಕ ಬರದ್ದೋ ಹೇಳಿ ಕನುಪ್ಯೂಸು ಬಪ್ಪಷ್ಟು ಚೆಂದದ ಪಟ!
ಎರಡಿದ್ದಿದ್ದರೆ ಒಂದರ ಒಪ್ಪಣ್ಣಂಗೇ ಕೊಡ್ತಿತವೋ ಏನೋ! ಗಣೇಶಮಾವನತ್ರೆ ಕೇಳೇಕು. 😉
~

ಮಾಷ್ಟ್ರುಮಾವ° ಎಲೆತಿನ್ನದ್ದೆ ಅರ್ದಗಂಟೆ ಕೂದರೆ ಹೆಚ್ಚು. ಈಗ ಎಲೆತುಪ್ಪಿ ಬಂದದಷ್ಟೇ, ಪುನಾ ತಿಂಬಲೆ ಸುರುಮಾಡಿದವು.
ಅದಿರಳಿ,
ಗಾಯತ್ರಿ ಧ್ಯಾನ ಆದ ಮತ್ತೆಯೂ ರಜ್ಜ ಶ್ಲೋಕಮಂತ್ರಂಗೊ ಇದ್ದಾಡ – ಗಾಯತ್ರಿದೇವಿಯ ಬಗ್ಗೆಯೇ.
ಸಾಮಾನ್ಯವಾಗಿ ಜೆಪಂದ ಮದಲು ಅದರ ಹೇಳ್ತ ಕ್ರಮ ಇದ್ದಾಡ, ಬಟ್ಟಮಾವ° ಹೇಳಿದವು.

ಗಾಯತ್ರೀಹೃದಯ:
ಗಾಯತ್ರಿಮಂತ್ರದ ಶೆಗ್ತಿಯ ಆಳವಾಗಿ ನೆಂಪುಮಾಡ್ತ ಮಂತ್ರ. ಅದಕ್ಕೆ ‘ಗಾಯತ್ರಿ ಹೃದಯ’ ಹೇಳ್ತದು.  ಗಾಯತ್ರಿ ಜೆಪ ಮಾಡ್ತ ಮದಲು ಇದರ ಹೇಳುಲೇ ಬೇಕಡ!
ಮಂತ್ರವ ಒಂದರಿ ಹೇಳಿಗೊಂಡು ಹೋದವು ಬಟ್ಟಮಾವ°; ಒಪ್ಪಣ್ಣಂಗೆ ಅದರ ಅರ್ತ ತೆಕ್ಕೊಂಬಲೆ ಎಡಿಗಾಯಿದಿಲ್ಲೆ!
ಮತ್ತೊಂದರಿ ಮಂತ್ರವೂ ಮಂತ್ರಾರ್ಥವೂ ಒಟ್ಟೊಟ್ಟಿಂಗೆ ಹೀಂಗೆ ವಿವರುಸಿಗೊಂಡು ಹೋದವು.

ಓಮಿತ್ಯೇಕಾಕ್ಷರಂಓಂ ಹೇಳ್ತ ಒಂದಕ್ಷರವೇಬ್ರಹ್ಮ | ಅಗ್ನಿರ್ದೇವತಾ – ಈ ಮಂತ್ರಕ್ಕೆ ಅಗ್ನಿಯೇ ದೇವತೆ | ಬ್ರಹ್ಮಇತ್ಯಾರ್ಷಂ – ಬ್ರಹ್ಮನೇ ಆ ಮಂತ್ರಕ್ಕೆ ಋಷಿ | ಗಾಯತ್ರಂ ಛಂದಂ – ಅದು ಗಾಯತ್ರೀ ಛಂದಸ್ಸಿಲಿ ನಿಬದ್ಧ ಆಯಿದು.  ಪರಮಾತ್ಮಂ ಸರೂಪಂ – ಇದಕ್ಕೆ ಪರಮಾತ್ಮನದ್ದೇ ಸ್ವರೂಪ | ಸಾಯುಜ್ಯಂ ವಿನಿಯೋಗಂ – ಮೋಕ್ಷವೇ ಇದರ ಫಲ|

– ಹೇಳಿದವು.
ಗಾಯತ್ರಿಗೆ ಆಮಂತ್ರಣ:
ಜೆಪದ ಪೂರ್ವಭಾವಿಯಾಗಿ ಗಾಯತ್ರಿದೇವಿಯ ದೆನಿಗೊಳಿ, ನಮ್ಮ ಅಸ್ತಿತ್ವಕ್ಕೆ ಆವಾಹನೆ ಮಾಡ್ತದು ಇದ್ದಡ. ಈ ಕೆಳಾಣ ಶ್ಲೋಕ ಹೇಳಿಗೊಂಡು ಬಟ್ಟಮಾವ° ವಿವರಣೆ ಕೊಟ್ಟವು:

ಆಯಾತು ವರದಾ ದೇವೀ – ಬೇಡಿದೋರಿಂಗೆ ಅಭಯಕೊಡ್ತ ದೇವೀ, ಅನುಗ್ರಹಿಸಲೆ ಬಾ! ಅಕ್ಷರಂ – ನಾಶವೇ ಇಲ್ಲದ್ದ –  ಬ್ರಹ್ಮ ಸಮ್ಮಿತಮ್ ಬ್ರಹ್ಮನೇ ಆಗಿಪ್ಪ ಮಾತೆ! |
ಗಾಯತ್ರೀಂ ಛಂದಸಾಂ ಮಾತಾ
– ಛಂದಸ್ಸಿಂಗೆಲ್ಲ ಅಬ್ಬೆಯ ಹಾಂಗಿರ್ತ ಗಾಯತ್ರೀ ಛಂದಸ್ಸಿಲಿ ಇಪ್ಪ ; ಇದಂ ಬ್ರಹ್ಮ ಜುಷಸ್ವಮೇ – ನಿನ್ನ ಅಮೋಘತ್ವದ ಬಗ್ಗೆ ಆನು ಮಾಡಿದ ಪ್ರಾರ್ಥನೆಗೆ ನೀನು ಕೆಮಿಕೊಟ್ಟು ಆಶೀರ್ವಾದ ಮಾಡು||

ಬಟ್ಟಮಾವ° ವಿವರುಸುತ್ತರೆ ಸಂಸ್ಕೃತ ಶ್ಲೋಕಂಗಳೂ ಎಡೆಡೆಲಿ ಬಂದು – ಎಲ್ಲಿಗೆತ್ತಿತ್ತು ಹೇಳ್ತದು ಗೊಂತಾವುತ್ತು.
ಮಾಷ್ಟ್ರುಮಾವ° ವಿವರುಸುತ್ತರೆ ಸಮಗ್ರ ಅರ್ಥ ಒಂದರಿಯೇ ತಲಗೆ ಹೋವುತ್ತು! ಎರಡುದೇ ಕೊಶಿಯೇ ಇದಾ!!
~

ಮಾಷ್ಟ್ರುಮಾವ° ತೋರುಸಿದ ಗಾಯತ್ರೀದೇವಿ!!

ಮಹಿಮೆ ವರ್ಣನೆ:
ಗಾಯತ್ರಿಯ ಮಹಿಮೆಯ ಸ್ತುತಿಮಾಡ್ತ ಕಾರ್ಯ ಜೆಪಂದ ಮದಲೇ ಮಾಡ್ಳಿದ್ದಾಡ. ವಿಶೇಷವಾಗಿ ಪಾಪಪರಿಹಾರಲ್ಲಿ ಗಾಯತ್ರಿಯ ಪಾತ್ರ ಹೇಂಗಿರ್ತು ಹೇಳ್ತ ಮಹಿಮೆಯ ಇಲ್ಲಿ ವರ್ಣನೆ ಮಾಡ್ತವಾಡ.

ಯದಹ್ನಾತ್ಕುರುತೇ ಪಾಪಂ – ಹಗಲೊತ್ತು ಮಾಡಿದ ಪಾಪಂಗೊ ಎಲ್ಲವುದೇ – ತದಹ್ನಾತ್ ಪ್ರತಿಮುಚ್ಯತೇ – ಹಗಲೇ ಬಿಡುಗಡೆ ಆವುತ್ತಾಡ|
ಯದ್ರಾತ್ರಿಯಾತ್ಕುರುತೇಪಾಪಂ
– ಇರುಳೊತ್ತು ಮಾಡಿದ ಪಾಪಂಗೊ – ತದ್ರಾತ್ರಿಯಾತ್ಪ್ರತಿಮುಚ್ಯತೇ – ಇರುಳಿಂದಿರುಳೇ ಪರಿಹಾರ ಆವುತ್ತಾಡ ||

ಹೇಳಿತ್ತುಕಂಡ್ರೆ – ಉದ್ದೇಶಪೂರ್ವಕ ಮಾಡಿದ ಪಾಪಂಗೊ ಅಲ್ಲ, ಬದಲಾಗಿ ಅಜ್ಞಾನಾದ್ವಾ-ಪ್ರಮಾದಾದ್ವಾ ಮಾಡಿದ ನಮುನೆ ಇದ್ದಾರೆ ಗಾಯತ್ರಿ ಸ್ತುತಿಲಿ ಪರಿಹಾರ ಆವುತ್ತು ಹೇಳ್ತದು ತಾತ್ಪರ್ಯ – ಹೇಳಿದವು.

ಸರ್ವವರ್ಣೇ – ಕಲ್ಪನೆಗೆ ಸಿಕ್ಕುವ, ಕಲ್ಪನೆಂದಲೂ ಮಿಗಿಲಾದ ಎಲ್ಲಾ ಬಣ್ಣಂಗಳಲ್ಲಿ ಪ್ರಕಟಅಪ್ಪ – ಮಹಾದೇವೀ – ಮಹಾಮಾತೆ – ಸಂಧ್ಯಾವಿದ್ಯೇ – ಸಂಧ್ಯಾಕಾಲಲ್ಲಿ ವಿಶೇಷವಾಗಿ ಪ್ರಕಟ ಅಪ್ಪ – ಸರಸ್ವತೀ –  ವಿದ್ಯಾಧಿದೇವತೇ|
ಓಜೋಸಿ
– ಇಂದ್ರಿಯ ಶೆಗ್ತಿವೆಂತೆ – ಸಹೋಸಿ – ಶತ್ರುನಾಶಿನಿ – ಬಲಮಸಿ– ಬಲವಂತೆ –  ಭ್ರಾಜೋಸಿ – ಪ್ರಕಾಶವಂತೆ – ದೇವಾನಾಂ ಧಾಮನಾಮಾಸಿ – ಇಂದ್ರಾದಿ ದೇವರಿಂಗೇ ಪ್ರಸಿದ್ಧಳಾಗಿ – ವಿಶ್ವಮಸಿ – ವಿಶ್ವವೇ ಆಗಿಪ್ಪ – ವಿಶ್ವಾಯುಃ – ಸಮಗ್ರ ಜೀವಜಗತ್ತಿನ ಆಯುಸ್ಸು ಆಗಿಪ್ಪ – ಸರ್ವಮಸಿ ಸರ್ವಾಯುಃ – ಜಗತ್ತಿನ ಸರ್ವ ಶೆಗ್ತಿಯ ಸರ್ವ ಆಯುಶ್ಶೆಗ್ತಿ ಆಗಿಪ್ಪ – ಅಭಿಭೂಃ – ಸರ್ವಪಾಪವ ನಿವಾರಣೆ ಮಾಡುವ – ಓಂ – ಮಹಾ ಬ್ರಹ್ಮ ಶೆಗ್ತಿಯ ಆವಾಹನೆ ಮಾಡ್ತಾ ಇದ್ದೆ | – ಹೇಳಿ ಪ್ರಾರ್ಥನೆ ಮಾಡಿಗೊಳೇಕಡ.

ಆವಾಹನೆ:
ಯೇವದೇ ಒಂದು ಶೆಗ್ತಿಯ ಮೇಗೆ ಮನಸ್ಸು ಮಡಗಿ ಚಿಂತನೆ ಮಾಡಿರೆ ಅದುವೇ ಧ್ಯಾನ.
ಅದೇ ಶೆಗ್ತಿಯ ಮಾಡಿದ ಮತ್ತೆ ಒಂದು ಕಲ್ಪಿತ ಕ್ಷೇತ್ರಲ್ಲಿ ಮಡಗುತ್ತದಕ್ಕೆ ಆವಾಹನೆ ಹೇಳ್ತದಡ.
ಗಾಯತ್ರಿಯನ್ನೂ ಧ್ಯಾನ ಮಾಡಿದ ಮೇಗೆ ಆವಾಹನೆ ಮಾಡೇಕಲ್ಲದೋ, ಅದಕ್ಕೆ ಈ ಶ್ಲೋಕಲ್ಲಿ ವಿವಿಧ ರೂಪಲ್ಲಿರ್ತ ಗಾಯತ್ರೀದೇವಿಯ ಆವಾಹನೆ ಮಾಡ್ತದಡ:

ಗಾಯತ್ರೀಮಾವಾಹಯಾಮಿ – ಸಂಧ್ಯಾಕಾಲದ ಬ್ರಹ್ಮತ್ವದ ದೇವತೆಯಾದ ಮಹಾಶೆಗ್ತಿ , ಸಾವಿತ್ರೀಮಾವಾಹಯಾಮಿ – ಯಜುರ್ವೇದ ದೇವತೆಯಾದ ದೇವಿಯ ಇನ್ನೊಂದು ಶೆಗ್ತಿಯ ಆವಾಹನೆ ಮಾಡ್ತೆ, ಸರಸ್ವತೀಮಾವಾಹಯಾಮಿ – ವಿದ್ಯಾದೇವತೆಯ ಆವಾಹನೆ ಮಾಡ್ತೆ, ಛಂದರ್ಷೀನಾವಾಹಯಾಮಿ – ಗಾಯತ್ರೀಛಂದಸ್ಸಿನ ದ್ರಷ್ಟಾರರಾದ ಋಷಿವರೇಣ್ಯರ ಆವಾಹನೆ ಮಾಡ್ತೆ, ಶ್ರಿಯಮಾವಾಹಯಾಮಿ – ಶ್ರೀರೂಪದ ಲಕ್ಷ್ಮಿಯನ್ನೂ ಆವಾಹನೆ ಮಾಡ್ತೆ

ಗಾಯತ್ರಿ ಪರಿಚಯ:
ಇಷ್ಟೆಲ್ಲ ವಿಶಯ ಹೇಳಿ ಅಪ್ಪಗ ಗಾಯತ್ರಿದೇವಿಯ ಒಂದು ಹಂತದ ಪರಿಚಯ ಆವುತ್ತು. ಇದಾದ ಮೇಗೆ, ಒಟ್ಟಾರೆಯಾಗಿ ಗಾಯತ್ರಿಯ ಪರಿಚಯ ತೂಷ್ಣಿಯಾಗಿ ಮಾಡಿಗೊಂಬದು.
ಪರಿಚಯ ಹೇಳಿರೆ ಎಂತರ? ಕೇಳಿದೆ ಬಟ್ಟಮಾವನ ಹತ್ತರೆ.
ಗಾಯತ್ರಿಯ ದ್ರಷ್ಟಾರ ಆರು, ಯೇವ ಛಂದಸ್ಸು ಹೇಳ್ತರಿಂದ ಹಿಡುದು, ಗಾಯತ್ರಿ ದೇವರ ದೇಹದ ವಿವಿಧ ಭಾಗಂಗಳಲ್ಲಿ ಯೇವಯೇವ ದೇವರು ಇಪ್ಪದು ಹೇಳ್ತರ ಬಗ್ಗೆ ಸ್ಥೂಲ ವಿವರಣೆ ಇಲ್ಲಿದ್ದಾಡ.
ಇದುದೇ ಹಾಂಗೆ, ಸುರುವಿಂಗೆ ಮಂತ್ರ ಹೇಳಿಗೊಂಡು ಹೋದವು; ತಲಗೆ ಏನೂ ಹೊಕ್ಕಿದಿಲ್ಲೆ ಹೇಳಿದೆ. ಪುನಾ ಒಂದೊಂದೇ ವಿವರುಸಿಗೊಂಡು ಹೋದವು – ಮಂತ್ರದ ಒಟ್ಟೊಟ್ಟಿಂಗೆ.

ಗಾಯತ್ರಿಯಾ ಗಾಯತ್ರೀಚ್ಛಂದೋ – ಗಾಯತ್ರೀ ಮಂತ್ರ ಇಪ್ಪ ಛಂದಸ್ಸಿಂಗೆ “ಗಾಯತ್ರೀ” ಛಂದಸ್ಸು ಹೇಳಿಯೇ ಹೆಸರಡ,  ವಿಶ್ವಾಮಿತ್ರಋಷಿಃ – ಮಂತ್ರದ ದ್ರಷ್ಟಾರ ಆದ ವಿಶ್ವಾಮಿತ್ರ ಋಷಿ, ಸವಿತಾ ದೇವತಾ – ವಿಶ್ವಾಮಿತ್ರ ಸೂರ್ಯನ ಬಗ್ಗೆ ಯೋಚನೆ ಮಾಡುವಗ ಈ ಜೆಪ ಹೊಳದ್ದಡ – ಹಾಂಗಾಗಿ ಇದಕ್ಕೆ ದೇವತೆ ಸವಿತೃ – ಸೂರ್ಯ ಇವೆಲ್ಲರನ್ನೂ ಆದಿಲಿ ನೆಂಪು ಮಾಡಿಗೊಂಬದು. ಅಗ್ನಿರ್ಮುಖಂ – ಗಾಯತ್ರಿಯ ಮುಖಲ್ಲಿ ಅಗ್ನಿದೇವರು ಇಪ್ಪದು, ಬ್ರಹ್ಮಾ ಶಿರೋ – ಶಿರಸ್ಸು-ತಲೆಲಿ ಬ್ರಹ್ಮದೇವರು, ವಿಷ್ಣುರ್-ಹೃದಯಗ್೦ – ಹೃದಯಲ್ಲಿ ವಿಷ್ಣು, ರುದ್ರಃಶಿಖಾ – ಶಿಖೆಲಿ – ಜೊಟ್ಟಿಲಿ ರುದ್ರ ನೆಲೆ ಆಯಿದ°, ಪೃಥಿವೀ ಯೋನಿಃ – ಆದಿಸ್ಥಾನಲ್ಲಿ ಭೂಮಿದೇವರು, ಪ್ರಾಣಾಪಾನವ್ಯಾನೋದಾನಸಮಾನಾ ಸಪ್ರಾಣಾಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ – ಹೇಳ್ತ ಐದು ಪ್ರಾಣವಾಯುಗಳ ರೂಪಲ್ಲಿ ದೇಹವ್ಯಾಪಿಯಾಗಿಪ್ಪ, ಶ್ವೇತವರ್ಣಾ – ಬೆಳಿಬಣ್ಣದ, ಸಾಂಖ್ಯಾಯನ ಸಗೋತ್ರಾ – ಸಾಂಖ್ಯಾಯನ ಹೇಳ್ತ ಗೋತ್ರಕ್ಕೆ ಸಗೋತ್ರ ಆಗಿದ್ದೊಂಡು – ಹೇಳಿರೆ ಸಾಂಖ್ಯಾಯನ ಗೋತ್ರಲ್ಲಿಪ್ಪ, ಗಾಯತ್ರೀ – ಗಾಯತ್ರಿದೇವಿಯು, ಚತುರ್ವಿಗ್೦ಶತ್ಯಕ್ಷರಾ – ಇಪ್ಪತ್ನಾಲ್ಕು ಅಕ್ಷರ ಹೊಂದಿದ್ದು, ತ್ರಿಪದಾ – ಮೂರುಕಾಲು ಹೊಂದಿದ್ದು, ಷಟ್ಕುಕ್ಷಿಃ – ಆರು ಶರೀರ ಹೊಂದಿಗೊಂಡಿದು. ಪಂಚಶೀರ್ಷೋಪನಯನೇ ವಿನಿಯೋಗಃ |
ಓಂ ಭೂಃ ಓಂ ಭುವಃ ಓಗ್೦ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಗ್೦ ಸತ್ಯಂ ||
– ಸಪ್ತಲೋಕಕ್ಕೂ ಅಧಿಪತಿಯಾಗಿ ಇಪ್ಪ ಗಾಯತ್ರೀ ದೇವಿಯ ಸದಾಸತತ ಸ್ಮರಣೆಮಾಡ್ತೆ.

ಗಾಯತ್ರಿ ಮುದ್ರೆ:
ಗಾಯತ್ರಿಯ ಸಮಗ್ರ ಜಾತಕ ಪರಿಚಯ ಆತಲ್ಲದೋ. ಇದು ಇಷ್ಟುದೇ ಮಂತ್ರಪೂರ್ವಕ ಆದ್ಸು.
ಇನ್ನು ತಂತ್ರಪೂರ್ವಕವಾಗಿ ಗಾಯತ್ರಿಯ ಸ್ತುತಿ ಆಯೇಕಲ್ಲದೋ? ಅದಕ್ಕೇ ಇಪ್ಪದು ’ಗಾಯತ್ರಿ ಮುದ್ರೆ’ಗೊ.  ಇಪ್ಪತ್ತನಾಕು ಅಕ್ಷರದ ಗಾಯತ್ರಿಗೆ ಇಪ್ಪತ್ತನಾಕು ಮುದ್ರೆಗಳ ಮೂಲಕ ಪ್ರಾರ್ಥನೆ ಮಾಡ್ತದಡ.
ಆ ಇಪ್ಪತ್ತನಾಕು ಹೀಂಗಿದ್ದಾಡ:

ಸುಮುಖಂ ಸಂಪುಟಂ ಚೈವ ವಿತತಂ ವಿಸ್ತೃತಂ ತಥಾ |
ದ್ವಿಮುಖಂ ತ್ರಿಮುಖಂಚೈವ ಚತುಷ್ಪಂಚಮುಖಂ ತಥಾ ||
ಷಣ್ಮುಖೋದೋ ಮುಖಂ ಚೈವ ವ್ಯಾಪಕಾಂಜಲಿಕಂ ತಥಾ |
ಶಕಟಂ ಯಮಾಪಾಶಂಚ ಗ್ರಥಿತಂಚೋನ್ಮುಖೋನ್ಮುಖಂ ||
ಪ್ರಲಂಬ ಮುಷ್ಟಿಕಂ ಚೈವ ಮತ್ಸ್ಯ ಕೂರ್ಮೋ ವರಾಹಕಂ |
ಏತಾಮುದ್ರಾಶ್ಚತುರ್ವಿಂಶಾ ಗಾಯತ್ರ್ಯಾಃ ಸುಪ್ರತಿಷ್ಠಿತಾ ||

– ಹೀಂಗೆ ಹೇಳಿಗೊಂಡು ಬಟ್ಟಮಾವ ಕೈಲಿ ಮುದ್ರೆಗಳ ಮಾಡಿತೋರುಸಿದವು. ಒಪ್ಪಣ್ಣಂಗೆ ಕುಂಟಾರುತಂತ್ರಿಗೊ ತಂತ್ರತೂಗುದು ನೆಂಪಾತು! :-)
ಈಗೀಗ ಈ ಮುದ್ರೆಗಳ ಬಳಕೆ ತುಂಬಾ ಕಮ್ಮಿ ಆಯಿದು, ಆದರೆ – ಕನಿಷ್ಠ ಪಕ್ಷ ಆ ಮುದ್ರೆಗಳ ನೆಂಪು ಮಾಡ್ತ ಶ್ಲೋಕವನ್ನಾರೂ ಒಂದರಿ ಪಠಿಸೇಕು – ಹೇಳಿದವು ಬಟ್ಟಮಾವ°.

ಗಾಯತ್ರಿ ಜೆಪ:

ಇಷ್ಟೆಲ್ಲ ಆದ ಮತ್ತೆಯೇ ಗಾಯತ್ರಿ ಜೆಪ ಸುರು ಮಾಡ್ತದು.
ಮಾಷ್ಟ್ರುಮಾವಂಗೆ ಎಲೆತಿಂದು ಒಳ್ಳೆತ ಸರುವೀಸು ಇದ್ದ ಕಾರಣ ಬೇಗ ತಿಂದುದೇ ಆತು.
ಗಾಯತ್ರೀಜೆಪವ ಅಂದೇ ಕೇಳಿದ್ದು, ಅಂದಿಂದಲೇ ಹೇಳಿದ್ದು. ಆದರೆ ಅದರ ಸ್ಪಷ್ಟವಾದ ಅರ್ತ ಎಂತರ ಅಂಬಗ – ಕೇಳಿದೆ.
ಮಹರ್ಷಿ ವಿಶ್ವಾಮಿತ್ರಂಗೆ ಒಲುದ ಈ ಗಾಯತ್ರೀಜೆಪಕ್ಕೆ ಸಾವಿರಾರು ಋಷಿಮುನಿಗೊ ಲಕ್ಷಾಂತರ ನಮುನೆಲಿ ಭಾಷ್ಯ – ಟೀಕೆಗೊ ಬರದ್ದವಾಡ. ಎಲ್ಲವನ್ನೂ ಕಲ್ತುಗೊಂಬಲೆ ಒಂದು ಜನ್ಮ ಸಾಲ – ಹೇಳಿದವು ಬಟ್ಟಮಾವ°.
ಆದರೆ ಸಾಮಾನ್ಯಜನರಿಂಗೆ ಅರ್ತ ಅಪ್ಪ ರೀತಿಯ ಒಂದು ಅರ್ತ ಹೀಂಗೆ ಹೇಳ್ಳಕ್ಕು – ಹೇಳಿ ಮಾಷ್ಟ್ರುಮಾವ° ವಿವರುಸುಲೆ ಸುರುಮಾಡಿದವು:

ವಿಶ್ವಾಮಿತ್ರ ಋಷಿಃ | ದೇವೀ ಗಾಯತ್ರೀ ಛಂದಃ | ಸವಿತಾ ದೇವತಾ | ಗಾಯತ್ರೀ ಮಂತ್ರ ದ್ರಷ್ಟಾರನಾದ ವಿಶ್ವಾಮಿತ್ರ ಋಷಿಯನ್ನೂ, ಗಾಯತ್ರೀ ಮಂತ್ರ ನಿಬದ್ಧವಾದ ಗಾಯತ್ರೀ ಛಂದಸ್ಸು, ಗಾಯತ್ರೀಮೂಲಕ ಪ್ರಾರ್ಥನೆಮಾಡ್ತ ಸೂರ್ಯ ದೇವರ ಮತ್ತೊಂದರಿ ನೆಂಪುಮಾಡಿಗೊಂಡು ಜೆಪದ ಹಂತಕ್ಕೆ ಎತ್ತುದು.

ಓಂ | ಬ್ರಹ್ಮತೇಜಸ್ಸಿನ
ಭೂರ್ಭುವಸ್ಸುವಃ
| ಭೂಲೋಕ-ಭುವರ್ಲೋಕ-ಸುವರ್ಲೋಕಂಗಳಲ್ಲಿ (ಹಾಂಗೆಯೇ – ಋಗ್-ಯಜುಃ-ಸಾಮ ವೇದಂಗಳಲ್ಲಿಯೂ ) ಶ್ರೇಷ್ಠವಾದ,

 1. ತತ್ಸವಿತುರ್ವರೇಣಿಯಂ |  ಶ್ರೇಷ್ಠ ಕಿರಣಂಗೊ ಇಪ್ಪ ಪ್ರಕಾಶಮಾನವಾದ ಸವಿತೃದೇವರ (ಸುರುವಾಣ ಪಾದಲ್ಲಿ ಎಂಟಕ್ಷರ ಅಪ್ಪಲೆ ಜೆಪಕ್ಕಪ್ಪಗ “ವರೇಣಿಯಂ” ಹೇಳ್ತದು. ಅಂತೆ ಹೇಳ್ತರೆ “ವರೇಣ್ಯಂ” ಹೇಳ್ತವಡ)
 2. ಭರ್ಗೋ ದೇವಸ್ಯ ಧೀಮಹಿ || ತೇಜಸ್ಸಿನ ಮನಸ್ಸಿಲೇ ಧ್ಯಾನಿಸುತ್ತೆ.
 3. ಧಿಯೋಯೋನಃ ಪ್ರಚೋದಯಾತ್ ||| ಇದು ನಮ್ಮ ’ಧೀ’ ಶಕ್ತಿಯ (ಮನಸ್ಸಿನ ಶೆಗ್ತಿಯ)ಪ್ರಚೋದನೆ, ಉದ್ದೀಪನೆ ಮಾಡಲಿ.

ನೂರಾರು ಪುಟಗಟ್ಳೆ ಇಪ್ಪ ಅರ್ತವ ಮೂರೇ ಗೆರೆಮಾಡಿ ಹೇಳಿದವು ಮಾಷ್ಟ್ರುಮಾವ°! ವಾಹ್!

ಗಾಯತ್ರೀ ಉತ್ತರ ಮುದ್ರೆಗೊ:
ಗಾಯತ್ರಿ ಜೆಪ ಸುರುಮಾಡ್ತ ಪೂರ್ವಲ್ಲಿ ಮುದ್ರಾಪ್ರದರ್ಶನ ಮಾಡಿತ್ತಿದ್ದು. ಗಾಯತ್ರಿ ಆದ ಮತ್ತೆಯೂ ಮುದ್ರೆಗಳ ಮಾಡ್ಳಿದ್ದು. ಇದಕ್ಕೆ ‘ಉತ್ತರ ಮುದ್ರಿಕಾ’ ಹೇಳ್ತದಡ.

ಸುರಭಿರ್ಜ್ಞಾನ ಚಕ್ರಂಚ ಭೂಮಿಃ ಕೂರ್ಮೋಥಪಂಕಜಂ |
ಲಿಂಗಂ ನಿರ್ಯಾಣ ಮುದ್ರಾ ಚ ಗಾಯತ್ರ್ಯುತ್ತರ ಮುದ್ರಿಕಾ ||

ಮದಲಿಂಗೆ ವಟುಗೊಕ್ಕೆ ಜೆಪದ ಮಂತ್ರ ಹೇಳಿಕೊಡುವಗ ಈ ಮುದ್ರೆಗಳನ್ನೂ ಹೇಳಿಕೊಟ್ಟೊಂಡಿತ್ತಿದ್ದವು, ಆದರೆ ಕ್ರಮೇಣ ಅದರ ಬಿಟ್ಟುಗೊಂಡು ಬಂದವು.
ಮತ್ತೆ ಮತ್ತೆ ಕೇವಲ ಶ್ಲೋಕಮಾಂತ್ರ ಹೇಳ್ತ ಪರಿವಾಡಿ ಸುರು ಆತು. ಈಗ ಈ ಶ್ಲೋಕ ಹೇಳಿರೆ ಸಾಕಾವುತ್ತಡ! – ಹೇಳಿದವು ಬಟ್ಟಮಾವ° ಕೈ ಮೊಗಚ್ಚಿಗೊಂಡು!!

~

ಇದಿಷ್ಟೇ ಅಲ್ಲದ್ದೆ, ಗಾಯತ್ರಿ ಜೆಪ ಮಾಡ್ತರ ಬಗ್ಗೆಯೂ ಒಂದೆರಡು ಸೂಚನೆಗಳನ್ನೂ ಬಟ್ಟಮಾವ° ಹೇಳಿತೋರುಸಿದವು:

 • ಗಾಯತ್ರಿಜೆಪವ ದೊಡ್ಡ ಸ್ವರಲ್ಲಿ ಮಾಡ್ಳಿಲ್ಲೇಡ. ಮವುನವಾಗಿ, ನವಗೆ ಮಾಂತ್ರ ಕೇಳ್ತ ನಮುನೆಲಿ ಮಾಡೇಕಡ. ಹಾಂಗೆನೋಡಿರೆ, ಯೇವದೇ ಜೆಪವನ್ನೂ ಜೋರು ಮಾಡ್ತ ಮರಿಯಾದಿ ಇಲ್ಲೇಡ.
 • ಸ್ವಚ್ಛ ಮನಸ್ಸಿನ, ಸ್ವಚ್ಛ ಶರೀರಲ್ಲಿ ಕೂದೊಂಡು ಗಾಯತ್ರಿ ಮಾಡೇಕಡ.
 • ಜೆಪ ಮಾಡುವಗ ಲೆಕ್ಕ ಮಡಿಕ್ಕೊಳೇಕು. ಹನ್ನೆರಡು ಗಾಯತ್ರಿ ಮಾಡ್ತವ ಅಂಬೆರ್ಪಿನ ಜೆನ ಹೇಳಿ ಲೆಕ್ಕ. ಹನ್ನೆರಡು-ಇಪ್ಪತ್ನಾಕು-ನಲ್ವತ್ತೆಂಟು-ನೂರ ಎಂಟು-ಸಾವಿರದಎಂಟು – ಹೀಂಗೆ ಎಷ್ಟುಬೇಕಾರೂ ಮಾಡ್ಲಕ್ಕು – ಹೇಳಿದವು.
  ಪರಕ್ಕಜೆ ಅನಂತಣ್ಣ ಹೊತ್ತಿಂಗೊಂದು ಗಂಟೆ ಜೆಪಮಾಡ್ತದು ನೆಂಪಾತು ಒಪ್ಪಣ್ಣಂಗೆ!
 • ಜೆಪದ ಲೆಕ್ಕ ಮಾಡುವಗ ಕೈಬೆರಳಿನ ಮಡುಸದ್ದೆ ಲೆಕ್ಕಮಾಡೇಕಡ. ಒಂದೋ ಬೆರಳಕೊಡಿಗಳ ಹೆಬ್ಬೆರಳಿಲಿ ಮುಟ್ಟಿಗೊಂಡು – ಅಲ್ಲದ್ದರೆ ಹೆಬ್ಬೆರಳಿಲಿ ಒಳುದ ಬೆರಳಿನ ಗೆಂಟಿನ ಮುಟ್ಟಿಗೊಂಡು ಜೆಪ ಮಾಡೇಕಡ.

ಈ ನಮುನೆ ಸುಮಾರು ಕಟ್ಟುಗೊ, ಕಟ್ಟುಪಾಡುಗೊ ಎಲ್ಲ ನಮ್ಮೊಳದಿಕೆ ಇತ್ತು. ಇಂದು ಅಷ್ಟಾಗಿ ಬಳಕೆ ಮಾಡ್ತವಿಲ್ಲೆ, ಎಲ್ಲ ಸುಲಾಬಲ್ಲಿ ಮುಗುಶುತ್ತವು – ಹೇಳಿದವು ಮಾಷ್ಟ್ರುಮಾವ°.
ಅಪ್ಪೂ, ಜೆಪವೇ ಮಾಡ್ತವಿಲ್ಲೆ, ಇನ್ನು ಜೆಪಲೆಕ್ಕ ಮಾಡ್ತದು ಎಲ್ಲಿಗೆ, ಹ್ಹೊ! – ಹೇಳಿದವು ಒಂದರಿ ಬಟ್ಟಮಾವ°.
ಇದೇ ಛಂದಸ್ಸಿಲಿ ಬೇರೆಬೇರೆ ದೇವರ ’ಗಾಯತ್ರಿ’ಗೊ ಇದ್ದಾಡ.
ಆದರೆ ಪ್ರಾರಂಭಲ್ಲಿ ಬಂದದು ಇದಾದ ಕಾರಣ “ಮೂಲಗಾಯತ್ರಿ” ಆಗಿ ಒಳುತ್ತು – ಹೇಳಿದವು.

~

ಆಗಳೇ ಮುಗಿಲು ಕಟ್ಟಿಕಟ್ಟಿ ಕಾದ್ದದು ಒಂದರಿ ಜೋರು ಸೊಯಿಪ್ಪಿತ್ತದಾ! ಮಳೆ ಜೋರು ಬಡಿತ್ತದೇ, ಮಾಷ್ಟ್ರಮನೆ ಅತ್ತೆ ತೋಟಕ್ಕೆ ಹೋಗಿದ್ದೋರು ಬಂದು ಮನೆಒಳ ಸೇರಿಗೊಂಡವು.
ಗಾಯತ್ರಿಗೆ ತಂಗೆಹುಟ್ಟಿದ ಲೆಕ್ಕದ ಲಾಡು ನಿನ್ನೆಯೇ ಕಳುಸಿಕೊಟ್ಟಿದನಾಡ, ಆಚಮನೆ ದೊಡ್ಡಣ್ಣ. ಹಾಂಗೆ ಬಿಡುಸಿ ಮಡಗಿದವು.
ಬಟ್ಟಮಾವಂಗೆ ಚೀಪೆ ಶುದ್ದಿಗೊ ಅಕ್ಕು; ಆದರೆ ಚೀಪೆ ಆಗ! ಹಾಂಗೆ ನಾಕು ತಂದು ಮಡಗಿದ್ದರ ಇಬ್ರೇ ತಿಂದು ಮುಗುಶಿದ್ದದು.
ಮಳೆ ಹನ್ಕುದು ಕಮ್ಮಿ ಆದ ಕೂಡ್ಳೇ ಮೆಲ್ಲಂಗೆ ಹೆರಟೆ.

ಬಾಯಿಲಿ ಗಾಯತ್ರಿಯ ತಂಗೆ ಲೆಕ್ಕದ ಚೀಪೆ, ತಲೆಲಿ ಗಾಯತ್ರಿ ಲೆಕ್ಕದ ಚೀಪೆ!
ಉದಿಉದಿಯಪ್ಪಗ ಕೆಲಸ ಇಪ್ಪ ಹೊತ್ತಿಂಗೆ ಗಾಯತ್ರಿಯ ಕೊಶಿ ಕಾಂಬಲೆ ಹೆರಟು, ಮತ್ತೆ ‘ಗಾಯತ್ರಿ’ಯ  ಬಗ್ಗೆ ತಿಳಿಯಲೆ ಸಮಯ ಸಿಕ್ಕಿದ್ದದು ಗ್ರೇಶಿ ಕೊಶಿ ಆವುತ್ತು!
ಬಟ್ಟಮಾವಂಗೆ ಸೂತಕ – ಅಲ್ಲಿ ಗಾಯತ್ರಿಯ ಕೊಶಿಯ ಶುದ್ದಿ ಬಂದದು – ಅಲ್ಲಿ ಗಾಯತ್ರಿ ಜೆಪದ ಶುದ್ದಿ ಬಂದದು – ಅಲ್ಲಿ ಈ ಶುದ್ದಿ ಬಂದದು – ಎಲ್ಲ ಒಂದೊಂದು ಒದಗಿ ಬಪ್ಪದಲ್ಲದೋ?!
ಅಂತೂ ಉಪಾಯಲ್ಲಿ ಗಾಯತ್ರಿಯ ಬಗ್ಗೆ ಕಲ್ತಾತದಾ!
~

ಅದೇನೇ ಇರಳಿ, ಒಂದು ಗಾಯತ್ರಿ ಜೆಪದ ಹಿಂದೆ-ಮುಂದೆ ಆಗಿ ಇಷ್ಟೆಲ್ಲ ವಿವರಣೆ ಇದ್ದತ್ತೋ?! ಸಾಮಾನ್ಯವಾಗಿ ನಾವು ಜೆಪಮಾಡುವಗ ಕೇವಲ ಆ ಮೂರು ಗೆರೆ ಮಾಂತ್ರ ಹೇಳ್ತದು.
ಬಟ್ಟಮಾವ° ವಿವರುಸುದು ನೋಡಿರೆ ನಾವು ಎಷ್ಟೋ ವಿಶಯಂಗಳ ದಿನಂದದಿನಕ್ಕೆ ಬಿಟ್ಟುಗೊಂಡು ಬತ್ತಾ ಇದ್ದು – ಹೇಳಿ ಕಂಡತ್ತು!
ಎಂತ ಹೇಳ್ತಿ?
ಗಾಯಂತಂ ತ್ರಾಯತಿ – ಸಾ ಗಾಯತ್ರೀ | – ಆರು ಗಾಯತ್ರಿಯ ಜೆಪಮಾಡ್ತನೋ, ಅವನ ಇದು ಒಳಿಶುತ್ತಡ – ಮಾಷ್ಟ್ರುಮಾವ° ಹೇಳಿದ್ದು ತಲೆಲಿ ತಿರುಗಿಂಡೇ ಇತ್ತು.

ಒಂದೊಪ್ಪ:ನಮ್ಮ ಅಜ್ಜಂದ್ರ ಗಾಯತ್ರಿ ಒಳುಶಿದ್ದು. ನಾವು ಗಾಯತ್ರಿಯನ್ನಾದರೂ ಒಳುಶುವೊ, ಆಗದೋ?

ವಿಶ್ವಾಮಿತ್ರ ಋಷಿಃ, ದೇವೀ ಗಾಯತ್ರೀ ಛಂದಃ, ಸವಿತಾ ದೇವತಾ ||, 5.0 out of 10 based on 7 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 63 ಒಪ್ಪಂಗೊ

 1. P.Ishwara Bhat

  Thumba arthapoorna lekhana……Mantragala swara(waves/frequency) namma mele parinama beeurttu….

  [Reply]

  VA:F [1.9.22_1171]
  Rating: 0 (from 0 votes)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಧನ್ಯವಾದಂಗೋ..ಉತ್ತಮ ಮಾಹಿತಿ ಕೊಟ್ಟದಕ್ಕೆ

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಉಂಡೆಮನೆಕುಮಾರಣ್ಣಾ..
  ಪ್ರೀತಿಯ ಒಪ್ಪಕ್ಕೆ ಒಪ್ಪಂಗೊ..

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಮಾವ°
  ಗಣೇಶ ಮಾವ°

  ಪ್ರತಿದಿನ ಉದಿಯಪ್ಪಗಳೂ,ಹೊತ್ತೋಪಗಳೂ ಉದಯ,ಅಸ್ತಮಾನದ ಸಮಯಲ್ಲಿ ಪ್ರಪಂಚಕ್ಕೆಲ್ಲ ಬೆಣಚ್ಚು ಕೊಡುವ ಸೂರ್ಯಂಗೆ ಕೃತಜ್ಞತೆ ಹೇಳುವ ಉದ್ದೇಶಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.
  ಸಂಧ್ಯಾವಂದನೆ ಮಾಡುದರಿಂದ ಮನಸ್ಸಿಂಗೆ ನೆಮ್ಮದಿ,ಶಾಂತಿ ಸಿಕ್ಕುತ್ತು .ಆರೋಗ್ಯ ದೃಷ್ಟಿಂದ ಪ್ರಾಣಾಯಾಮ ಮಾಡಿರೆ ಮನಸ್ಸು ಶುದ್ದ ಆಗಿ ,ಬುದ್ಧಿ ಚುರುಕು ಆವುತ್ತು.ಆ ಮೂಲಕ ತೇಜಸ್ಸು, ಓಜಸ್ಸು, ಆಯಸ್ಸು ಹೆಚ್ಚುತ್ತು. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ ಸಂಧ್ಯಾವಂದನೆ,”ಪ್ರಾಣಾಯಾಮ”.ಈ ರೀತಿಯ ನಿತ್ಯ ಅಭ್ಯಾಸಲ್ಲಿ ನಮ್ಮ ಜೀವನದಲ್ಲಿ ಶಿಸ್ತು ಮೂಡುಲೆ ಸುರೂವಾಣ ಮೆಟ್ಟಿಲು ಹೇಳಿರೆ ಸಂಧ್ಯಾವಂದನೆ. ಮುದ್ರೆ, ತಾತ್ಪರ್ಯ,ಗಾಯತ್ರಿಯ ವಿವರಣೆ ಒಪ್ಪಣ್ಣ ಶುದ್ಧಿಲಿ ಚೆಂದಕೆ ವಿವರ್ಸಿದ್ದಕ್ಕೆ ಧನ್ಯವಾದಂಗೋ!!!

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಗಣೇಶಮಾವಾ..
  ಮಾಷ್ಟ್ರುಮಾವ ಒಪ್ಪಣ್ಣಂಗೆ ತೋರುಸಿದ ಗಾಯತ್ರಿಯ ಸರೀಗುರ್ತ ಮಾಡಿದ್ದು ನಿಂಗಳೇ ಅಲ್ಲದೋ? :-)
  ಒಪ್ಪ ಕೊಟ್ಟದು ಕೊಶೀ ಆತು.

  ಹರೇರಾಮ

  [Reply]

  VA:F [1.9.22_1171]
  Rating: 0 (from 0 votes)
 4. ಅಡಕೋಳಿ
  ಅಡಕೋಳಿ

  ಈ ಮುದ್ರೆಗಳ ಪೊಟೊ ಇದ್ದಲ್ಲಿ ಲಾಯಕ್ ಅಗಿತ್ತು

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಗಾಯತ್ರಿ ಮುದ್ರೆಗಳ ವಿವರ ಹಾಕುವೊ. ಆದರೆ ನಿಂಗಳ ವಿವರ ಹೇಳ್ತಿರೋ?
  ಎಂತ ಮಾಡ್ತಾ ಇದ್ದಿ? ಎಲ್ಲಿದ್ದಿ ಈಗ?

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ
  vjayasubrahmanya kumble

  oppanna ninu oppannane sari e onduputa layikiddu

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ನಮಸ್ಕಾರ. ಪ್ರೀತಿಯ ಒಪ್ಪಂಗೊ ಕಂಡು ಕೊಶಿ ಆತು.
  ನಿಂಗೊ ಎಂತ ಮಾಡ್ತಾ ಇದ್ದಿ? ಎಲ್ಲಿದ್ದಿ ಈಗ? ಕಣಿಯಾರಲ್ಲಿಯೋ ?

  [Reply]

  VA:F [1.9.22_1171]
  Rating: +1 (from 1 vote)
 6. ಸಕಾಲಿಕ ಲೇಖನ…

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ ಒಪ್ಪಣ್ಣ.ವಿವರಣಾತ್ಮಕ ಸುದ್ದಿ.ಬಾರೀ ಲಾಯಕಕೆ ಬಯಿ೦ದು.ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಡಾ.ಆಜೇಯ

  ಇದರ ಬಗ್ಗೆ ಮಿತ್ತೂರು ಪುರೋಹಿತರ ಕನ್ನಡ ಸಂಧ್ಯಾಭಾಷ್ಯಲ್ಲಿ ಸಮಗ್ರ ವಿವರಣೆ ಇದ್ದು.
  ಗಾಯತ್ರಿ ಮಂತ್ರದ ಅರ್ಥವ್ಯಾಪ್ತಿಯ ವಿಸ್ತಾರವಾಗಿ ವಿವರುಸಿದ್ದವು.
  ಲೇಖನ ಲಾಯಿಕ್ಕ ಬರದ್ದಿ. ಧನ್ಯವಾದ.
  ಕೆಲವು ಮುದ್ರೆಗೊ (ಆವಾಹನ ಮುದ್ರೆ, ಗಾಯತ್ರೀ ಮುದ್ರೆ, ಅಂಕುಶ ಮುದ್ರೆ ಮತ್ತೆ ಲಲಿತಾ ಸಹಸ್ರನಾಮದ ಲೋಪಾ ಮುದ್ರೆ), ಅದೇ ರೀತಿ ಲಲಿತಾ ಸಹಸ್ರ ನಾಮದ ಕರ/ಅಂಗ ನ್ಯಾಸದ ಬಗ್ಗೆ ಆರಿಂಗಾದರು ಗೊಂತಿದ್ದರೆ ತಿಳುಶಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿಕೇಜಿಮಾವ°ಶೇಡಿಗುಮ್ಮೆ ಪುಳ್ಳಿವಿಜಯತ್ತೆಚುಬ್ಬಣ್ಣಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಕಜೆವಸಂತ°vreddhiಮುಳಿಯ ಭಾವತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಜಯಶ್ರೀ ನೀರಮೂಲೆಡಾಗುಟ್ರಕ್ಕ°ಯೇನಂಕೂಡ್ಳು ಅಣ್ಣಶಾ...ರೀನೆಗೆಗಾರ°ವೇಣೂರಣ್ಣಅಕ್ಷರದಣ್ಣಮಾಷ್ಟ್ರುಮಾವ°ಅನು ಉಡುಪುಮೂಲೆಚೆನ್ನಬೆಟ್ಟಣ್ಣದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ