ಗೆದ್ದೋರೂ ಸೋತವು; ಸೋತೋರೂ ಸೋತವು!!

September 10, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 38 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೋರ ಒಳದಿಕ್ಕೆ ಹೋಕುವರುಕ್ಕು ಇಲ್ಲದ್ದರ ಬಗ್ಗೆ – ಜಗಳಂಗೊ ಇರ್ತಬಗ್ಗೆ ನಾವು ಹಿಂದೆ ಒಂದರಿ ಮಾತಾಡಿಗೊಂಡಿದು. ಅಲ್ಲದೋ? (ಇದಾ, ಇಲ್ಲಿದ್ದು)

ಹಾಂಗೇ ಮಾಣಿಪ್ಪಾಡಿಯ ಮಾಣಿಯಂಗಳ ಬಗ್ಗೆಯೂ ಅಂದೊಂದರಿ ಮಾತಾಡಿದ್ದು, ನೆಂಪಿದ್ದೋ? (ಇಲ್ಲಿದ್ದು, ಓದಿಕ್ಕಿ!)
ಅದೆರಡೂ ಶುದ್ದಿಗೆ ಹತ್ತರೆ ಸಂಬಂದ ಇಪ್ಪ ಶುದ್ದಿ ಈ ವಾರ! :-(

ಅಷ್ಟೆಂತ ಕೊಶಿಯ ವಿಶಯ ಅಲ್ಲ, ಹೇಳಲೇ ಬೇಜಾರಾವುತ್ತು!
ಎಂತ್ಸರ ಮಾಡುತ್ಸು! ಹೇಳುವೊ ಹೇಳಿ ಕಂಡತ್ತು, ಅದಕ್ಕೆ ಸುರುಮಾಡಿದ್ದು.
ಪೂರ್ತಿ ಹೇಳುಲೆ ಎಡಿತ್ತೋ ಇಲ್ಲೆಯೋ ಗೊಂತಿಲ್ಲೆ. ಎಡಿತ್ತಷ್ಟು ಹೇಳುವೊ°.
ಒಳುದ್ದರ ನಿಂಗೊ ಯೋಚನೆ ಮಾಡಿಗೊಳ್ಳಿ. ಆತೋ?
~
ಇದು ನಮ್ಮ ಊರಿನ ಕತೆಯೋ ಹೇಳಿ ಕೇಳಿರೆ ಆಗಿರ. ಅಲ್ಲದೊ ಕೇಳಿರೆ ಆಗಿಪ್ಪಲೂ ಸಾಕು.
ನೇರ್ಪಕ್ಕೆ ಹೇಳುಲೆ ಒಪ್ಪಣ್ಣಂಗರಡಿಯ.
ದಿವ್ಯಕ್ಕ ಯೇವತ್ತೂ ಬೈಗು ಒಪ್ಪಣ್ಣಂಗೆ – ಅರ್ದಂಬರ್ದ ಹೇಳುಲಾಗ, ಪೂರ್ತ ಹೇಳೆಕ್ಕು – ಹೇಳಿಗೊಂಡು. ಆದರೆ ಪೂರ್ತ ಹೇಳುಲೆ ಆವುತ್ತೋ – ಶುದ್ದಿ ಶುದ್ದಿಯಷ್ಟಕೇ ಇರೆಕ್ಕು, ಕಾದಂಬರಿಯೋ, ಕತೆಯೋ ಮಣ್ಣ ಅಪ್ಪಲಾಗ ಅಲ್ಲದೋ ಹೇಳಿ ಕಾಂಬದು?! 😉
ಅದಕ್ಕೆ ಆದಷ್ಟು ಸಣ್ಣ ಮಾಡಿ ಹೇಳುದಿದಾ!
ಮುಳಿಯಾಲದಪ್ಪಚ್ಚಿ ಈಗಳೇ ’ನಿನ್ನ ಶುದ್ದಿ ಬಯಂಕರ ಉದ್ದ ಆತು ಮಾರಾಯನೇ’ ಹೇಳಿ ಬೈಗು ಒಂದೊಂದರಿ, ಅದರ ಮೇಗಂದ ಇನ್ನುದೇ ಉದ್ದ ಮಾಡಿರೆ ಇನ್ನು ಬೈಲಿಂಗೆ ಬಪ್ಪದೇ ಬಿಡುಗೋ ಏನೋ! ಉಮ್ಮಪ್ಪ!!
ಅದೆಲ್ಲ ಇರಳಿ.
~
ಹಳೇ ವಿಟ್ಳಸೀಮೆಲಿ ಒಂದು ಊರು! ಊರಿನ ಹೆಸರೆಂತ ಕೇಳೆಡಿ, ಒಪ್ಪಣ್ಣಂಗರಡಿಯ!
ನಮ್ಮೋರ ಕುಳಂಗೊ ಇಪ್ಪ ಜಾಗೆ, ಧಾರಾಳ ಮನೆಗೊ ಇದ್ದು!
ನಮ್ಮೋರು ಇದ್ದಲ್ಲಿ ಜೆಂಬ್ರಂಗೊಕ್ಕೆ ಎಂತರ ಕಮ್ಮಿ, ಆ ಊರಿಲಿಯೂ ಜೆಂಬ್ರಂಗೂ ಧಾರಾಳ.
ಜೆಂಬ್ರಂಗೊ ಇಪ್ಪಗ ಕಲ್ಯಾಣ ಮಂಟಪವುದೇ ಇರೆಕ್ಕಲ್ಲದ? ಅಲ್ಲಿಯೂ ಇತ್ತು.

~
ವಸಂತಣ್ಣ ಮಿಲಿಟ್ರಿಂದ ಬಂದ ಮತ್ತೆ ಅಂತೇ ಕೂಯಿದವಿಲ್ಲೆ, ಪೆನುಶನಿನ ಪೈಸೆಯ ಅಂತೇ ಕಳವದು ಬೇಡ ಹೇಳ್ತ ಲೆಕ್ಕಲ್ಲಿ ತುಂಬ ಯೋಚನೆ ಮಾಡಿದವು.

ಅಲ್ಲೇ ವಸಂತಣ್ಣನ ಅಪ್ಪನಕಾಲದ ಜಾಗೆ ಇತ್ತಲ್ಲದೋ ಅದು ದೊಡ್ಡಮಾರ್ಗದಕರೆ ಒರೆಂಗೂ ಬತ್ತು – ಮಾರ್ಗದ ಕರೆಲಿ ಅವರದ್ದೇ ಒಂದು ಅಂಗುಡಿಯೂ ಇದ್ದು, ಅಪ್ಪನ ಕಾಲದ್ದು!
ಆ ಜಾಗೆಲೇ, ಅಂಗುಡಿ ಕರೇಲೆ ಒಂದು ಕಲ್ಯಾಣಮಂಟಪ ಏಳುಸಿದವು, ದೊಡ್ಡಮಾರ್ಗದ ಒತ್ತಕ್ಕೆ – ಎತ್ತರಲ್ಲಿ.
~
ಆ ಜಾಗೆಲಿ ಒಂದು ಬೂತ ಇತ್ತು.
ಅನಾದಿ ಕಾಲಂದಲೂ ಆ ಬೂತಕ್ಕೆ ಕೋಲ ಕೊಟ್ಟುಗೊಂಡು ಇತ್ತಿದ್ದವು, ಕೋಲ ಕೊಣಿವಗ ಬೂತ ಆ ಜಾಗೆ ಅಬಿವುರ್ದಿ ಅಗಲಿ ಹೇಳಿಯೇ ಹೇಳುಗು, ಪ್ರತಿಒರಿಶವುದೇ.
ಒಂದೊರಿಶ – ರಿಟೇರ್ಡು ಆಗಿ ಬಂದ ಒರಿಶ – ವಸಂತಣ್ಣ ಅವರ ಆಶೆಯ ಹೇಳಿತ್ತಿದ್ದವಡ ಬೂತದತ್ರೆ – ಕಲ್ಯಾಣಮಂಟಪ ಕಟ್ಟುತ್ತೆ ಹೇಳಿಗೊಂಡು.
ನೀನು ಮಾಡ್ತ ಕಾರ್ಯ ಒಳ್ಳೆದಾಗಲಿ, ಈ ಜಾಗೆ ಇನ್ನೂ ಅಬಿವುರ್ದಿ ಆಗಲಿ – ಬೂತ ದರುಸಿಗೊಂಡು ಹೇಳಿತ್ತಡ.
ಬೂತದ ಜಾಗೆಯೇ ಅಲ್ಲದೋ – ಅಬಿವುರ್ದಿ ಆದರೆ ಬೂತಕ್ಕೂ ಕೊಶಿಯೇ!
~

ಕಲ್ಯಾಣ ಮಂಟಪ ಹೇಳಿರೆ ಸರ್ವಸ್ವವುದೇ ತಯಾರಿರೆಕು ಇದಾ!
ಅದೊಂದು ನಿತ್ಯ ಜೆಂಬ್ರದ ಮನೆ, ಅಲ್ಲದೋ?
ಹಾಂಗಾಗಿ ಹತ್ತರೆಯೇ ಒಂದು ಬೋರುವೆಲ್ಲು ಕೊರದು – ನಿರಂತರ ನೀರಿಂಗೆ ಒಂದು ಟೇಂಕಿ ಕಟ್ಟುಸಿದವು. ಎತ್ತರಕ್ಕೆ.
ಮಾರ್ಗಲ್ಲಿ ಹೋವುತ್ತ ಬಸ್ಸಿನೋರಿಂಗೆ ಮನೆಯ ಆಕಾರದ ಟೇಂಕಿಯ ನೋಡುದೇ ಒಂದು ಕೊಶಿ.
ಯೇವ ಬೇಸಗೆಲಿದೇ ನೀರಿದ್ದು, ಆ ಬೋರುವೆಲ್ಲಿಲಿ.
ಕರೆಂಟಿದ್ದರೆ ಎಂತ ಹೆದರಿಕೆದೇ ಇಲ್ಲೆ, ಪಂಪಿನ ಎಳಗುಸಿ ನೀರು ತುಂಬುಸುತ್ತ ವೆವಸ್ತೆ ನಿತ್ಯಕ್ಕೂ ಇದ್ದು.

ಬೋರುವೆಲ್ಲು ಕಲ್ಯಾಣಮಂಟಪದ ಹತ್ತರೇ ಇಪ್ಪದಲ್ಲ, ನೂರುಗಜ ದೂರ ಇದ್ದು.
ಹ್ಮ್, ಜಾಲಕೊಡೀಲಿ ಬೋರುವೆಲ್ಲು.
ವಿಶಾಲ ಜಾಗೆಯ ಎದುರುಜಾಲು ಸಿಕ್ಕಿಗೊಂಡು, ನೂರಾರು ಬೈಕ್ಕು-ಕಾರು  ನಿಂಬಲೆ ಅವಕಾಶ ಆಗಿಂಡು ಇತ್ತಿದ್ದು.
ಕೈತೊಳೆತ್ತ ನೀರಿನ ವೆವಸ್ತೆಂದ ಹಿಡುದು ಬಾತ್ರೂಮು-ಹೇತ್ರೂಮು ಎಲ್ಲವುದೇ ಸುಸಜ್ಜಿತವಾಗಿ ಅಷ್ಟೊಂದು ಅಚ್ಚುಕಟ್ಟಿಲಿ ಇತ್ತಿದ್ದು.
ಶೀಟಿನ ಮಾಡಿನ ಕಟ್ಟೋಣಕ್ಕೆ ಎತ್ತರದ ಗೋಡೆ ಮಾಡಿ, ಯೇವ ಜಡಿಮಳಗೂ ಒಳಂಗೆ ಒಂದೇಒಂದು ನೀರಹನಿ ರಟ್ಟದ್ದ ಹಾಂಗೆ ಕಟ್ಟಿದ್ದವು ವಸಂತಣ್ಣ.
ಅವು ಮಿಲಿಟ್ರಿಲಿಪ್ಪಗ ಕಲ್ತುಗೊಂಡ ವಿಶೇಷ ಇಕ್ನೀಸು ಎಲ್ಲ ಈ ಮಂಟಪಲ್ಲಿ ಬಳಸಿಗೊಂಡಿದವು.

ಈಗ ಇಲ್ಲದ್ದ ಕಲ್ಯಾಣಮಂಟಪಲ್ಲಿ ಮದುವೆ ಜೆಂಬ್ರ ಆಗಿಂಡಿದ್ದ ಮಂಟಪ

ಆಯೆತಕ್ಕೆ ಬೇಕಾದ ರೂಮು, ಎದುರುಗೊಂಬಲೆ ಬೇಕಾದ ದ್ವಾರ, ಮದುವೆಗೆ ಬೇಕಾದ ಮಂಟಪ, ಮದುಮಕ್ಕೊಗೆ ಬೇಕಾದ ಕೆಂಪು ಕುರ್ಶಿ, ಚಿಕಿಬುಕು ಬಲ್ಬುಗೊ, ಬಟ್ಟಮಾವನ ಮಂತ್ರಕೇಳಲೂ ಅಕ್ಕು, ವಿದ್ಯಾಭೂಷಣನ ಪದ್ಯ ಕೇಳುಲೂ ಅಕ್ಕು – ಮೈಕ್ಕದ ಸೆಟ್ಟು –
ಎಲ್ಲಕ್ಕೆ ಎಲ್ಲವೂ ಅಲ್ಲಿತ್ತು.
ಅಷ್ಟು ಮಾಂತ್ರ ಅಲ್ಲ, ಮದುವೆದಿನ ನಮಸ್ಕಾರ ಮಾಡಿಕ್ಕಿ ಬಪ್ಪಲೆ ಸಣ್ಣದೊಂದು ಗೆಣವತಿ ಗುಡಿಯೂ ಇತ್ತು ಅಲ್ಲಿ.
ಅಲ್ಲಿ ಸಕಲ ವೆವಸ್ತೆಯೂ ಇತ್ತು.
ಕಟ್ಟುವಗ ಮಾಂತ್ರ ಆ ವೆವಸ್ತೆ ಇದ್ದದಲ್ಲ, ಸ್ವತಃ ವಸಂತಣ್ಣನೇ ಅದರ ಎದುರು ನಿಂದು ಆ ವೆವಸ್ತೆಯ ಒಳಿಶಿಗೊಂಡಿದವು.
~
ಯೇವದಾರು ಜೆಂಬ್ರ ಇದ್ದರೆ, ಅವಕ್ಕೂ ಪುರುಸೊತ್ತಿದ್ದರೆ – ಅವ್ವೇ ಸ್ವತಃ ಮೆನೇಜರನ ಕೋಣೆಲಿ ಕೂದೊಂಗು.
ಈಗ ಪೆನ್ಷನು ಮಾಂತ್ರ ಅಲ್ಲದೋ – ಹಾಂಗೆ ಇಡೀ ತಿಂಗಳು ಅವಕ್ಕೆ ಪುರುಸೊತ್ತೇ! 😉
ಪಾತ್ರ-ಸಾಮಾನು, ನೀರು, ಹೂಗು, ಮೈಕ್ಕ – ಎಂತ ಆಯೆಕ್ಕೊ ಅದೆಲ್ಲ ಬೇಕಾದಲ್ಲಿ ಸಿಕ್ಕುತ್ತ ಹಾಂಗೆ ನೋಡಿಗೊಂಡಿತ್ತಿದ್ದವು.
ಒಟ್ಟಿಲಿ ಅದೊಂದು ಸರ್ವಸನ್ನದ್ಧ ಹೋಲು ಆಗಿತ್ತಿದ್ದು.
~
ಕಲ್ಯಾಣಮಂಟಪ ಬಂದೇ ಬಿಟ್ಟತ್ತು. ಭಾರೀ ಚೆಂದಕೆ. ವಸಂತಣ್ಣನೇ ಎದುರು ನಿಂದು ಮಾಡುಸಿದ್ದು ಅದರ.
ಬರೇ ಕಂತ್ರಾಟಿನವು ಮಾಡಿದ್ದಲ್ಲ!
ನಮ್ಮೋರದ್ದೇ ಆದ ಕಾರಣ ಅಲ್ಲಿ ಪರಿಶತ್ತು ಮೀಟಿಂಗು, ಗುರಿಕ್ಕಾರ್ರ ಸಭೆ – ಇತ್ಯಾದಿಗೊ ನೆಡಕ್ಕೊಂಡು ಇತ್ತಡ.
ಇಂತಾ ಧರ್ಮಕಾರ್ಯಂಗೊ ಎಲ್ಲವುದೇ ಧರ್ಮಾರ್ಥವೇ – ಇದಕ್ಕೆಲ್ಲ ಒಂದು ಮುಕ್ಕಾಲು ತೆಕ್ಕೊಂಡಿತ್ತಿದ್ದವಿಲ್ಲೆ ವಸಂತಣ್ಣ.
ಯೇವದೋ ಒಂದು ದೊಡ್ಡ ಸಬಗೆ ನಮ್ಮ ಗುರುಗಳೂ ಬಂದಿತ್ತಿದ್ದವಡ.
ಅಷ್ಟಪ್ಪಗ ವಸಂತಣ್ಣನ ಆ ಜಾಗೆಗೂ, ಕಲ್ಯಾಣಮಂಟಪಕ್ಕೂ – ಅಬಿವುರ್ದಿ ಆಗಲಿ ಹೇಳಿ ಮಂತ್ರಾಕ್ಷತೆಯುದೇ ಕೊಟ್ಟಿತ್ತಿದ್ದವಡ.
~
ಕಟ್ಟುವ ಮದಲೇ ಅವರ ಕುಲಗುರುಗಳ, ಹತ್ತಾರು ವೈದೀಕರ ದಿನಿಗೇಳಿ ಲಾಯಿಕಲ್ಲಿ ವಾಸ್ತು ರಕ್ಷೋಘ್ನ ಇತ್ಯಾದಿ ಮಾಡುಸಿಗೊಂಡು, ಆ ಜಾಗೆಗೆ ಒಂದು ಶ್ರೀ ರಕ್ಷೆ ತೆಕ್ಕೊಂಡು, ಅದು ಅಬಿವುರ್ದಿ ಆಗಲಿ ಹೇಳ್ತ ವೇದೋಕ್ತ ಆಶೀರ್ವಾದ ತೆಕ್ಕೊಂಡಿತ್ತಿದ್ದವಡ ವಸಂತಣ್ಣ!
~
ಧರ್ಮಗುರುಗೊ, ಕುಲಗುರುಗೊ, ಕುಲದೇವರು, ಕುಲದೈವ – ಎಲ್ಲೋರುದೇ “ಈ ಜಾಗೆ ಅಬಿವುರ್ದಿ ಆಗಲಿ” ಹೇಳಿ ಹರಸಿದ ಜಾಗೆ ಅದು.
ಒಳ್ಳೆದಾಗದ್ದೆ ಇಕ್ಕೋ? ಒಳ್ಳೆದಾಗಿಯೇ ಆತು. ತುಂಬ ಚೆಂದಲ್ಲಿ ನೆಡಕ್ಕೊಂಡು ಇತ್ತು.
ಹತ್ತರಾಣ ಹತ್ತು ಊರಿನ ಕೊಡುದು-ತಪ್ಪದು ಯೇವದೇ ಜೆಂಬ್ರ ಇರಳಿ, ಆ ಕಲ್ಯಾಣಮಂಟಪಲ್ಲೇ ಅಪ್ಪದು ಹೇಳಿ ಆಗಿತ್ತು.
ಭಾರೀ ಚೆಂದದ ವೆವಸ್ತೆ. ಅಚ್ಚುಕಟ್ಟು – ನೋಡಿದೋರೇ ಹೇಳಿಗೊಂಡು ಇತ್ತಿದ್ದವು.
ಮನೆಲಿ ಜೆಂಬ್ರ ತೆಗದ ಹಾಂಗೇ ಆವುತ್ತು – ಹೇಳಿಗೊಂಡು.
ಸಕಲ ವೆವಸ್ತೆಯೂ ಇತ್ತು. ಅವರ ಅಂಗುಡಿಗೂ ಒಳ್ಳೆ ವೇಪಾರ!

ಎಲ್ಲವೂ ಸುಸೂತ್ರವಾಗಿ ನೆಡಕ್ಕೊಂಡು ಇತ್ತು.
ಅದೊಂದು ತೊಂದರೆ ಎಳಗುವನ್ನಾರ.
~

ಒಂದರಿ ಯೇವದೋ ಒಂದು ಜೆಂಬ್ರಕ್ಕಪ್ಪಗ ಈ ವಸಂತಣ್ಣ ಇತ್ತಿದ್ದವಿಲ್ಲೆ.
ಒಬ್ಬ ಪಿಸುಂಟ ಮೆನೇಜರ ಮಾಂತ್ರ ಇದ್ದದು – ಅಷ್ಟು ಅನುಬವ ಇತ್ತಿಲ್ಲೆ.
ಪಾತ್ರಸಾಮಾನುಗಳ ವಿಲೇವಾರಿ ಸರಿ ಆಯಿದಿಲ್ಲೆ ಹೇಳಿಗೊಂಡು ಅಡಿಗೆ ನರಸಿಂಹಣ್ಣ ಆ ದಿನ ಗಲಾಟೆ ಮಾಡಿದ್ದನಡ.
ಅಲ್ಲ, ಅವಕ್ಕುದೇ ತಲೆಬೆಶಿ ಆವುತ್ತಿಲ್ಲೆಯೋ – ಅಡಿಗೆ ಕೈ ಕೊಟ್ರೆ ಎಲ್ಲೋರುದೇ ಹೇಳುದು ಅಡಿಗೆಯೋರ, ಹೋಲಿನವರ ಅಲ್ಲ.
ಅಡಿಗೆ ಚೆಂದಕೆ ಆಯೆಕ್ಕಾರೆ ಪಾತ್ರಸಾಮಾನುಗೊ ಯಥೇಷ್ಟ ಬೇಕಿದಾ!
ಅದರ ವಿಲೇವಾರಿ ಸಮಗಟ್ಟು ಆಗಿತ್ತಿಲ್ಲೆ, ಹಾಂಗಾಗಿ ಆ ದಿನ ರಾಮಾರಂಪ ಆಗಿತ್ತು.
ತಣಿಶಲೆ ಆರುದೇ ಬಯಿಂದವಿಲ್ಲೆ, ಜೆಂಬ್ರದ ಮನೆಯೋರುದೇ ಸೇರಿ!

ಹಾಂಗೂ, ಹೀಂಗೂ ಸಮಗಟ್ಟು ಮಾಡಿಗೊಂಡವು ಆ ಒಂದು ಕಾರ್ಯಕ್ರಮಲ್ಲಿ!
ಅಡಿಗೆಯೋರ ಸೋಲುಸುತ್ತೆಯೋ ನೀನು – ನಿನ್ನನ್ನೂ ಸೋಲುಸುವೆ – ಹೇಳಿ ಪಂತ ಕಟ್ಟಿಯೇ ಅಲ್ಲಿಂದ ಹೆರಟವು ನರಸಿಂಹಣ್ಣ.

~

ಅಡಿಗೆನರಸಿಂಹಣ್ಣ ಹೇಳಿರೆ ದೊಡ್ಡ ಕೈ.
ಅವಕ್ಕೆ ತುಂಬ ಹೆಸರಿದ್ದು, ತುಂಬ ಮನೆಯೋರು ಅವರ ದಿನಿಗೇಳ್ತವು. ಈಗಾಣ ಭಾಶೆಲಿ ಹೇಳ್ತರೆ ಅವಕ್ಕೆ ತುಂಬ ಇಂಪ್ಳೆನ್ಸು ಇದ್ದು.
ಅವಕ್ಕೇ ಈ ತೊಂದರೆ ಬಂದದು ಬಾರೀ ಪ್ರಮಾದ ಆಗಿ ಹೋತು.
ಮತ್ತಾಣ ಯೇವದೇ ಜೆಂಬ್ರ ಆದರೂ – ಆ ಹೋಲಿಲಿ ಆವುತ್ತರೆ ಎಂಗಳ ಹೇಳೆಡಿ, ಎಂಗೊ ಬತ್ತಿಲ್ಲೆಯೊ- ಹೇಳಿದವು ನೇರಾನೇರ.
ಜೆಂಬ್ರಕ್ಕೋಸ್ಕರ ಅಡಿಗೆಯವರ ಬಿಡ್ತ ಮರಿಯಾದಿ ನಮ್ಮೋರಲ್ಲಿ ಇದ್ದೋ – ಚೆ ಚೆ, ಇಲ್ಲೆಪ್ಪ.
ಹೋಲಿನ ಆದರೂ ಬದಲುಸುಗು, ಅಡಿಗೆಯೋರಿಂಗೋಸ್ಕರ, ಹೋಲಿಂಗೋಸ್ಕರ ಅಡಿಗೆಯೋರ ಬದಲುಸುದಿಲ್ಲೆ.
ಹಾಂಗಾಗಿ ದೊಡ್ಡದೊಡ್ಡ ಜೆಂಬ್ರಂಗೊ – ಅಡಿಗೆನರಸಿಂಹಣ್ಣ ಒಪ್ಪಿಗೊಂಬಂತಾದ್ದು – ಎಲ್ಲವುದೇ ಅವರ ಕೈ ಜಾರಿತ್ತು.
~

ಆರಂಬಲ್ಲಿ ಒಳ್ಳೆತ ಜೆಂಬ್ರಂಗೊ ನೆಡಕ್ಕೊಂಡಿತ್ತು, ಒಳ್ಳೆತ ಪೈಸೆ ತಿರುಗಿಯೊಂಡಿತ್ತು, ಒಳ್ಳೆ ರೀತಿಲಿ ಮೆನೇಜರು ನೋಡಿಗೊಂಡು ಇತ್ತಿದ್ದವು, ಒಳ್ಳೆ ಹೆಸರಿತ್ತು ಅದಕ್ಕೆ.
ಕ್ರಮೇಣ ಜೆಂಬ್ರಂಗೊ ಕಮ್ಮಿ ಆತು, ಪೈಸೆ ಬಪ್ಪದು ಕಮ್ಮಿ ಆತು, ಮೆನೇಜರು ನೋಡ್ತದು ಕಮ್ಮಿ ಆತು, ಹೆಸರೂ ಕಮ್ಮಿ ಆತು, ಜೆಂಬ್ರಂಗಳೂ ಕಮ್ಮಿ ಆತು..
ಎಲ್ಲವುದೇ ಅಲ್ಲೇ ಹತ್ತರಾಣ ಒಂದು ದೇವಸ್ಥಾನಲ್ಲಿ ಆತು.

ದೇವಸ್ತಾನದ ಹೋಲು ಮದಲಿಂದಲೇ ಒರಕ್ಕು ತೂಗಿಂಡು ಇತ್ತು.
ಈಗಾಣ ಜೆಂಬ್ರದ ಪೋರ್ಸಿಲಿ ಅದು ತುಂಬಾ ಅಬಿವುರ್ದಿ ಆತು.
ದೇವಸ್ತಾನ ಅಬಿವುರ್ದಿ ಅಪ್ಪದು ಒಳ್ಳೆದೇ, ಆದರೆ ಈ ಹೋಲು ಕೆಳ ಹೋದ್ದು ಮಾಂತ್ರ ತುಂಬಾ ಬೇಜಾರು! :-(
ಕ್ರಮೇಣ ಆ ಹೋಲಿಲಿ ನಮ್ಮೋರ ಜೆಂಬ್ರಂಗಳೇ ಆವುತ್ತಿಲ್ಲೆ ಹೇಳ್ತ ಮಟ್ಟಿಂಗೆ ಆಗಿ ಬಿಟ್ಟತ್ತು!
~

ವಸಂತಣ್ಣಂಗೆ ಕಾಯಿಸು ಇಲ್ಲದ್ರೆ ಬೇಂಕಿನವು ಸುಮ್ಮನೆ ಕೂರುಗೋ?
ಎಲ್ಲೋರುದೇ ನಮ್ಮ ಬೊಳುಂಬುಮಾವನ ಹಾಂಗೆ ಪಾಪ ಅಲ್ಲ, ಕೆಲವು ಜೆನ ಬಂದು ಜೋರು ಮಾಡಿಯೇ ಮಾಡಿದವು, ಲೋನಿನ ಕಂತು ಕಟ್ಟದ್ದಕ್ಕೆ.
ಪೆನುಶನಿನ ಪೈಸೆ ಸಾಕಾಗದ್ದಕ್ಕೆ ರಜಾ ಲೋನುದೇ ಮಾಡಿತ್ತಿದ್ದವು ವಸಂತಣ್ಣ.
ಒಂದೆರಡು ಸರ್ತಿ ಆದರೆ ಸಾರ ಇಲ್ಲೆ, ನಿರಂತರ ಹಾಂಗೇ ಅಪ್ಪಗ ಅವಕ್ಕುದೇ ಬೊಡುದು ಹೋತು.
ಈ ಲೋನಿನ ಹಾವಳಿಂದ ತಪ್ಪುಲೆ ಎಂತಾರು ಆಗೆಡದೋ – ಅನಿವಾರ್ಯವಾಗಿ ಮಾರ್ತ ನಿರ್ಧಾರ ಮಾಡಿದವು.
~

ಮಾರ್ತದು ಆರಿಂಗೆ?
ದಾರಿ ಕರೆಯ ಜಾಗೆ – ಆಚೀಚ ಹೊಡೆಲಿ ಕೆಲವು ಪಚ್ಚೆಕಟ್ಟೋಣಂಗೊ ಬಪ್ಪಲೆ ಸುರು ಆಯಿದು. ಪೂರ್ತಿ ಪಚ್ಚೆ ಮಾಡ್ಳೆ ಈ ಕಲ್ಯಾಣಮಂಟಪ ಒಂದೇ ಅಡ್ಡಿ ಇದ್ದದು. ಹತ್ತರಾಣ ತುಂಡು ಜಾಗಗೊಕ್ಕೆ ತಲೆಂದ ಮೇಗೆ ಕ್ರಯ.

ನಮ್ಮೋರ ಅಡಕ್ಕೆ ಪೈಸೆಲಿ ಅದರ ನೋಡ್ಳೆ ಸಾಧ್ಯವೇ ಇಲ್ಲೆ. ಆರುದೇ ಅದರ ತೆಕ್ಕೊಂಬ ಪರಿಸ್ತಿತಿಲಿ ಇಲ್ಲೆ.
ಇದ್ದೋರೂ ಮನಸ್ಸು ಮಾಡಿದ್ದವಿಲ್ಲೆ. ಆ ಜೆಂಬ್ರದ ಹೋಲಿನ ಜೆಂಬಾರ ಆಗ ಹೇಳಿಗೊಂಡು.
ಲೋಸಿಲಿ ನೆಡಕ್ಕೊಂಡಿದ್ದತ್ತದ.

ಹಾಂಗಿಪ್ಪಗ ಆರಿಂಗೆ ಮಾರ್ತದು?
~

ಒಂದು ದುಬಾಯಿ ಮಾಪುಳೆ ಬಂತು.
ಅದಕ್ಕೆ ಇಂತಾದ್ದೇ ಜಾಗೆ ಬೇಕಾದ್ದು. ನಮ್ಮದೇ ಊರಿನ ಮೂಲ ಮಾಪುಳೆ ಆದ ಕಾರಣ ಬೂತದ ಕಾರಣಿಕದ ಮೇಲೆ ಅಂಗಿ ಒಳಾಂದ ನಂಬಿಕೆ ಇದ್ದು, ಎದುರಂದ ಇಲ್ಲದ್ರೂ! ಹಾಂಗಾಗಿ ಬೂತಸ್ತಾನವನ್ನುದೇ ಸೇರಿ ಕ್ರಯ ಮಾಡಿತ್ತು.
ವಸಂತಣ್ಣ ನೂರೊರಿಶ ಜೆಂಬ್ರ ತೆಗದರೂ ಆಗದ್ದ ಪೈಸೆ ಒಂದೇ ಸರ್ತಿಗೆ ಕೊಟ್ಟತ್ತು!
ಎಂತ ಆವುತ್ತಾ ಇದ್ದು ಗೊಂತಪ್ಪ ಮೊದಲೇ ಎಗ್ರಿಮೆಂಟು-ಕ್ರಯಚ್ಚೀಟು ಎಲ್ಲವುದೇ ಆಗಿ ಬಿಟ್ಟತ್ತು!
~

ಈಗಾಣೋರ ಯೋಚನೆ ಬಯಂಕರ ದೊಡ್ಡದಿದ್ದಡ!
ದುಬಾಯಿಯ ನಮುನೆ ಹೋಟ್ಳುಕಟ್ಟುದಡ. ಮೊದಲಿದ್ದ ಆ ಹೋಲಿನ ಸಂಪೂರ್ಣ ಮುರುದವಡ.
ಕುಂಬು ಶೀಟಿನ ಮಾಡು ಅವರ ಹೊಸಹೊಸ ಗ್ರಾನೈಟಿನ ಎದುರು ಎಂತ ಲೆಕ್ಕ! ಅಲ್ಲದೊ?
ಸಂಪೂರ್ಣ ಬುಡಮೇಲು ಗರ್ಪುವಗ ಬೂತಸ್ತಾನ ಒಂದು ಒಳಿಶಿತ್ತಡ.
ಆ ಜಾಗೆ ಅಬಿವುರ್ದಿ ಆಯೆಕ್ಕಾರೆ ಆ ಬೂತಸ್ತಾನ ಕರೆಲಿ ಇರೆಕ್ಕಡ, ಅದಕ್ಕೆ ಆರೋ ಮೊಯಿಲಾರಿಗೊ ಹೇಳಿದವಡ.
~

ಒಟ್ಟಿಲಿ ಅಲ್ಲಿ ಒಂದು ದೊಡಾ ಹೋಟ್ಳು ಬತ್ತು!
ಸೆಂಟು ನಾತ ಬಡಿವ ಮಾಪುಳೆಗಳ ಸಾಮ್ರಾಜ್ಯ ಆವುತ್ತು.
ಇಷ್ಟು ದಿನ ಶುದ್ದಲ್ಲಿ, ಮಡಿಲಿ ಅಡಿಗೆ ಆಗಿಯೊಂಡು ಇದ್ದಲ್ಲಿ ಇನ್ನು ತುಂಡು-ಇಡಿ ಇಡಿ ಮಾಂಸಾಹಾರದ ಅಡಿಗೆ!
ಗೋವಿನ ಪೂಜ್ಯ ಭಾವನೆಲಿ ಕಂಡುಗೊಂಡು, ನೈವೇದ್ಯ ಕೊಟ್ಟೊಂಡಿದ್ದಲ್ಲಿ ಅದೇ ಗೋವಿನ ಬೆಂದಿ!
ಚೆ, ಬೇಜಾರಾವುತ್ತು ಭಾವಾ, ಬೇಜಾರಾವುತ್ತು!!

~
ಅಂತೂ ಆ ಜಾಗೆಲಿ ಮಾಡಿದ ಎಲ್ಲವುದೇ ಅಬಿವುರ್ದಿ ಆವುತ್ತು.
ವಸಂತಣ್ಣನ ಮನೆ-ಕುಟುಂಬ ತುಂಬ ಮೇಲೆ ಹೋತು.
ಅವರ ಅಪ್ಪನ ಕಾಲದ ಅಂಗುಡಿಯುದೇ ತುಂಬ ಅಬಿವುರ್ದಿ ಆತು.
ವಸಂತಣ್ಣ ಕಟ್ಟಿದ ಮದುವೆಮಂಟಪವುದೇ ಒಳ್ಳೆ ಅಬಿವುರ್ದಿ ಆತು.
ಈಗ ಅವು ಕಟ್ಟುತ್ತ ಹೋಟ್ಳುದೆ ಅಬಿವುರ್ದಿ ಆವುತ್ತು.

ಎಂತಕೇ ಹೇಳಿತ್ತು ಕಂಡ್ರೆ,
ಈ ಜಾಗೆ ಅಬಿವುರ್ದಿ ಆಗಲಿ ಹೇಳಿ ಎಷ್ಟೋ ಸಾವಿರ ಒರಿಶಂದ ಅವರ ಬೂತ ಹೇಳುಗು!
ಗುರುಗೊ ಬಂದಿಪ್ಪಗಳೂ ಅದನ್ನೇ ಹೇಳಿ ಆಶೀರ್ವಾದ ಮಾಡಿದ್ದವು – ಈ ಜಾಗೆ ಅಬಿವುರ್ದಿ ಆಗಲಿ ಹೇಳಿಗೊಂಡು.
ಬಟ್ಟಮಾವ ಕ್ರಿಯೆ ಮಾಡಿದ ಮೇಗೆಯುದೇ ’ಉತ್ತರೋತ್ತರ ಅಬಿವುರ್ದಿ ಆಗಲಿ’ ಹೇಳಿಯೇ ಆಶೀರ್ವಾದ ಕೊಟ್ಟದು.
ಜಾಗೆ ಅಬಿವುರ್ದಿ ಆಗಿಯೇ ಅಕ್ಕು!
ಆದರೆ ಅಬಿವುರ್ದಿಯ ಅನುಬವುಸುವ ಬಾಗ್ಯ ನಮ್ಮ ಕೈಲಿಲ್ಲೆ!!

ಎಂತ ಮಾಡುತ್ಸು!

~

ನಮ್ಮೋರ ಒಳದಿಕೆ ಎಂತಕೆ ಕೆಲವು ಸರ್ತಿ ತಪ್ಪುಸಂಬಂದಂಗೊ ಬಂದು ಬಿಡ್ತೋ ನವಗರಡಿಯ!
ಕ್ಷುಲ್ಲಕ ಅಹಂಭಾವದ ಬೇನೆಗೊಕ್ಕೆ ಇಡೀ ಅಷ್ಟು ದೊಡ್ಡ ಭವ್ಯತೆಯನ್ನೇ ಕಳಕ್ಕೊಂಡವು ನಾವು.
ಆದರೆ ಇದರ್ಲಿ ಗೆದ್ದದಾರು, ಸೋತದಾರು?
ಅಡಿಗೆಯೋರ ಸೋಲುಸಿದ ಹೋಲಿನವು, ಹೋಲಿನವರ ಸೋಲುಸಿದ ಅಡಿಗೆಯೋರು – ಇಬ್ರುದೇ ಸೋತವು!
ಹ್ಮ್, ಇಬ್ರುದೇ ಗೆದ್ದಿದವಿಲ್ಲೆ, ಗೆದ್ದದು ಆ ಮಾಪುಳೆ ಮಾಂತ್ರ!!!
ಮುಂದೆ ಗೆಲ್ಲುದೂ ಅದುವೇ! ಅಪ್ಪೋ ಅಲ್ಲದೋ ನೋಡಿ ಬೇಕಾರೆ.
~
ರಂಜಾನಿಂಗೆ ಅಲ್ಲಿ ದೊಡಾ ಕಾರ್ಯಕ್ರಮ ಇದ್ದಡ.
ಸರ್ವಧರ್ಮ ಸಮ್ಮೇಳನ ಎಲ್ಲ ಇದ್ದಡ, ಅಲ್ಲಿಗೆ ಸುಮಾರು ಮಾಜಿ-ಮಂತ್ರಿಮಾಗಧಂಗೊ ಬತ್ತವಡ,
ಎಲ್ಲೋರೂ ಒಟ್ಟಿಂಗೆ ಇರೆಕ್ಕು ಹೇಳ್ತ ಬಾಷಣ ಮಾಡ್ತವಡ.
ಕಳುದೊರಿಶ ಒರೆಗೆ ಆ ಜಾಗೆಲಿ ಚೌತಿ ಗವುಜಿ ಇತ್ತು, ಇನ್ನು ಮುಂದೆ ರಂಜಾನು ಗವುಜಿ ಮಾಂತ್ರ!!

~

ಇಲ್ಲಿಪ್ಪ ಕತೆ ಹೇಂಗೆ ಬೇಕಾರೂ ಇರಳಿ, ಆದರೆ ಇದರ ಹಿಂದೆ ಇಪ್ಪ ತತ್ವ ಲೊಟ್ಟೆ ಅಲ್ಲ!

ಎಷ್ಟೋ ದಿಕ್ಕೆ ನಮ್ಮೋರಲ್ಲಿ ಹೀಂಗೆ ಆವುತ್ತಾ ಇದ್ದು. ನಮ್ಮೊಳಾಣ ವೈಮನಸ್ಸಿನ ಮೂರ್ನೇವು ಉಪಯೋಗುಸುತ್ತಾ ಇದ್ದವು.
ಊರಿಲಿ ಎಷ್ಟೋ ಕಡೆಲಿ ಮೊದಲು ನಮ್ಮೋರ ಜಾಗೆ, ಕಟ್ಟೊಣ ಇದ್ದಲ್ಲಿ ಈಗ ಮಾಪುಳೆಗಳ ಪಳ್ಳಿ ಎದ್ದಿದು!
ಜಾಗೆಯ ಮಾಂತ್ರ ಅಲ್ಲ ಜಾಗೆಯ ಹೆಸರನ್ನುದೇ ಅವಕ್ಕೆ ಬೇಕಾದಾಂಗೆ ಮಾಡಿಗೊಂಡಿದ್ದವು!
ಎಲ್ಲ ದಿಕ್ಕೆಯುದೇ ಅವರದ್ದೇ ಹೋಟ್ಳುಗೊ, ಹೋಲುಗೊ ಆವುತ್ತಾ ಇದ್ದು,
ಮುಂದೆ ನಮ್ಮೋರ ಮದುವಗುದೇ ಅವರ ಹೋಲಿಂಗೇ ಹೋಯೆಕ್ಕಾದ ಪರಿಸ್ತಿತಿ ಬಕ್ಕೋ ಏನೊ!
~

ಹೀಂಗಪ್ಪಲೆ ಕಾರಣ ಎಂತರ?
ನಾವೇ ಅಲ್ಲದೋ? ಇಷ್ಟು ಸಣ್ಣ ವಿಶಯಕ್ಕೆ ಜಗಳ ಮಾಡಿಗೊಂಡು ನಮ್ಮೊಳವೇ ಪಂತ ಕಟ್ಟಿರೆ ಹೇಂಗೆ?
ನಾಳೆ ಅವರ ಸೋಲುಸುವವು ಆರು?
ರಜ್ಜ ಆಲೋಚನೆ ಮಾಡುವೊ°.

ಇನ್ನಾದರೂ ಒಟ್ಟಿಂಗಪ್ಪ°, ಗೆಲ್ಲುವೊ°.
ಇಬ್ರು ಸೋತೋರು ಒಂದಾವುತ್ತವಡ. ನಾವುದೇ ಒಂದಪ್ಪಲಿಕ್ಕಲ್ಲದಾ?

ಒಂದೊಪ್ಪ: ಚೌತಿದಿನ ಮದೂರು ಗೆಣಪ್ಪಣ್ಣನ ’ಅಪ್ಪ’ ತಿಂದೊಂಡು ಒಳ್ಳೆದು ’ಅಪ್ಪ’ದನ್ನೇ ಚಿಂತನೆ ಮಾಡುವೊ°.
ಎಂತ ಹೇಳ್ತಿ?

ವಿ.ಸೂ: ಬೈಲಿನ ಎಲ್ಲೋರಿಂಗೂ ಗೆಣವತಿ ಚವುತಿಯ ಶುಭಾಶಯಂಗೊ.

ಗೆದ್ದೋರೂ ಸೋತವು; ಸೋತೋರೂ ಸೋತವು!!, 4.8 out of 10 based on 6 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 38 ಒಪ್ಪಂಗೊ

 1. ಕುವೈತ್ ಭಾವ

  ನವಗೆ ಅಡಿಕ್ಕೆಯೂ ತೆಂಗೂ ಬಿಟ್ರೆ ಬೇರೆಂತ ತಲೆಗೆ ಹೋವುತ್ತಿಲ್ಲೆ. ಎರಡೂ ಇಂದಿಂಗೆ ಹೇಳಿದ್ದಲ್ಲ. ಉಪ / ಎಡೆಕೃಷಿಲಿ ಹಲವರು ಕೈತುಂಬಾ ಸಂಪಾದಿಸಿದ ಬಗ್ಗೆ ಲೇಖನ ಕಂಡೆ. ಈ ದಿಸೆಲಿ ನಮ್ಮವರ ಪ್ರಯತ್ನ ಕಮ್ಮಿ (ಆರೂ ಇಲ್ಲೇ ಹೇಳಿ ಅಲ್ಲ, ಕೆಲವರಿದ್ದವಪ್ಪ … ಅವಕ್ಕೆ ನಮ್ಮ ಸಲ್ಯೂಟ್). ಇಪ್ಪ ಸಮಸ್ಯೆಗಳ ಬಗ್ಗೆ ಆಲೋಚನೆ ಬತ್ತೆ ವಿನಃ ಉಪಾಯಂಗಳ ಆಲೋಚನೆ ಬತ್ತಿಲ್ಲೆ. ಸುರು ಮಾಡೆಕ್ಕಾರೆ ಮದಲೇ ಕೂಲಿಯವು ಸಿಕ್ಕ, ನೀರು ಸಮಸ್ಯೆ …… ಇತ್ಯಾದಿ ನೆನೆಸಿ ಅತ್ಲಾಗಿ ತಲೆ ಹಾಕಿ ಮನುಗಲೆ ಸಾನು ತಯಾರಿಲ್ಲೆ. ಸುಲಾಭ ಉಪಾಯ(!) ಇಪ್ಪ ಹಳ್ಳಿ ಜಾಗೆ ಮಾರಿ, ಪೇಟೇಲಿ ಸಣ್ಣ ಗೂಡು ತೆಕ್ಕೊಂಬದಲ್ಲದೋ? ಊರಿಂಗೆ ಬ್ಯಾರಿ ಬಂದರೆ ಎಂತಾತು, ಅಲ್ಲಿ ನಾವಿಲ್ಲೆನ್ನೆ…..

  ಆನು ಇಲ್ಲಿಯೊಂದು ಸೂಪರ್ ಮಾರ್ಕೆಟಿಗೆ ಹೋಗಿತ್ತೆ. ಅಲ್ಲಿ ಒಂದು ವಿಚಿತ್ರ ಕಂಡತ್ತು (ವಿಚಿತ್ರವಾದರೂ ಸತ್ಯ). ಈ ಪೇಟೆ ಮನೆಗಳಲ್ಲಿ ಪರಿಮಳ ಬಪ್ಪಲೆ (ವಾಸನೆ ಹೊಪಲೋ !!) ಹೇಳಿ ಒಣಗಿದ ಹೂ ಎಸಳೋ, ಸೊಪ್ಪೋ ಇತ್ಯದ್ದಿಗಳದ್ದು ಒಂದು ತಟ್ಟೆ (scented) ಇಡ್ತವು. ನಮ್ಮ ಪೇಟೆಗಳಲ್ಲಿಯೂ ಹೀಂಗಿರ್ತ ತಟ್ಟೆ ಆನೂ ಕಂಡಿದೆ. ಆನು ಕಂಡ ಇಲ್ಯಾಣ ವಿಚಿತ್ರಲ್ಲಿ ಹೂ ಎಸಳುಗಳ ಎಡೆಲಿ ಚೆಂದಕ್ಕೆ ಅಡಿಕೆ ಚೋಲಿ + ಅಂಬಟೆ ಗೊರಟು !! ತಯಾರಕ ಒಂದು ಅಮೇರಿಕಾದ ಕಂಪೆನಿ (ಬಹುಷಃ ಭಾರತೀಯನೇ ಇಕ್ಕು). ವಿವರಣೆಗಳಲ್ಲಿ “Produce of India” ಹೇಳಿ ಕಂಡತ್ತು. ಎನಗ ಅದರ ನೋಡಿ ಅತ್ತ ಖುಷಿಯೋ ಸಂಕಟವೋ ಎಂತೆಲ್ಲ ಆತು. ಎಂತಕೂ ಇರ್ಲಿ ಹೇಳಿ ಅಂಗಡಿಯವಕ್ಕೆ ಗೊಂತಾಗದ್ದ ಹಾಂಗೆ ಎನ್ನ ಮೊಬೈಲಿಲಿ ಒಂದು ಫಟ ತೆಗದು ಮಡುಗಿದೆ.

  [Reply]

  ಬೈಲಕರೆ ಭಾವ Reply:

  ಇತ್ಯಾದಿ ನೆನೆಸಿ ಅತ್ಲಾಗಿ ತಲೆ ಹಾಕಿ ಮನುಗಲೆ ಸಾನು ತಯಾರಿಲ್ಲೆ. ~ ~~
  ತಲೆ ಹಾಕಿ ಮನುಗದ್ದವ ಮೊಬೈಲಿಲಿ, ಅದೂ ಅಂಗಡಿಯವಕ್ಕೆ ಗೊಂತಾಗದ್ದ ಹಾಂಗೆ ಪಟ ತೆಗವ ಗ್ರಾಚಾರ ಎಂತಕೆ ಬೇಕಾತು?ಮೊದಾಲು ಕೊಶಿಯೂ ಸಂಕಟವೂ ಏಕ ಕಾಲಕ್ಕೆ ಅಪ್ಪ ಸೀಕಿಂಗೆ ಮದ್ದು ತೆಕ್ಕೊಂಬದು ಒಳ್ಳೇದು ಹೇಳಿ ಕಾಣ್ತು.
  ಇಲ್ಲದ್ರೆ ಮೇಗೆ ಬರದ ಹಾಂಗೆ ಆನು ಹೇಳಿ ಬರವಲೆ ಹೆರಡುವಾಗ ಸಾನು ಹೇಳಿ ಅಪ್ಪದು ಖಂಡಿತಾ!!

  [Reply]

  ಕುವೈತ್ ಭಾವ Reply:

  ಬೈಲಕೆರೆ ಭಾವ, {…ಮದ್ದು ತೆಕ್ಕೊಂಬದು ಒಳ್ಳೇದು ಹೇಳಿ ಕಾಣ್ತು…} … ತೆಕ್ಕೊಳ್ಳಿ ತೆಕ್ಕೊಳ್ಳಿ … ಎನ್ನ ಅಡ್ಡಿ ಇಲ್ಲೆ. ಮದ್ದು ಬೇಗ ತೆಕ್ಕೊಂಡಷ್ಟು ಒಳ್ಳೇದು.
  .
  ಕೃಷಿಯ ಬಗ್ಗೆ ಒಳ್ಳೆ ಅಭಿಪ್ರಾಯ ಇಪ್ಪ ಕಾರಣವೇ ಆನೂ ಒಂದು ಕೃಷಿ ಭೂಮಿಯ ಎನಗೆಡಿಗಪ್ಪ ರೀತಿಲಿ ಈಗಿತ್ಲಾಗಿ ಮಾಡಿಗೊಂಡಿದೆ. ಕಷ್ಟ ಗ್ರೆಶಿ ಓಡಿ ಹೋಯಿದಿಲ್ಲೆ.
  .
  ಫಟ ತೆಗದ್ದು ಎನಗೂ ಎನ್ನ ಹಾಂಗಿರ್ತ ಸದಭಿರುಚಿ ಇಪ್ಪವಕ್ಕೂ ಬೇಕಾದರೆ ಆತು ಹೇಳುವ ದೃಷ್ಟಿಂದ….ಬೇಡದ್ದವಕ್ಕೆ ಖಂಡಿತಾ ಒತ್ತಾಯ ಇಲ್ಲೆ. ಅಂಗಡಿಯೊಳ ಫಟ ತೆಗವಲಾಗ ಹೇಳ್ತ ಒಂದು ನಿರ್ಬಂಧ ಅಲ್ಲಿತ್ತ ಕಾರಣ ಅವಕ್ಕೆ ಗೊಂತಾಗದ್ದ ಹಾಂಗೇ ಫಟ ತೆಗೆಯೇಕ್ಕಷ್ಟೆ ಇದಾ… ಬೇರೆ ದಾರಿ ಎನಗೆ ಗೊಂತಿಲ್ಲೆ. ಅದೂ ಒಂದು ರೀತಿಯ ಗ್ರಾಚಾರವೇ ಅಲ್ಲದೋ.
  .
  ಎಲ್ಲೋರ ಅಭಿಪ್ರಾಯ-ಸಲಹೆಗೊಕ್ಕೆ ಮುಕ್ತ ಅವಕಾಶ ಇದ್ದು ಹೇಳಿ ಗ್ರಹಿಸಿ ಎನ್ನ ಅನುಭವವ ಬೈಲಿಲಿ ಬಿಡಿಸಿಟ್ಟಿದೆ. ಇದು ಪಬ್ಲಿಕ್ ಬ್ಲಾಗ್ ಹೇಳಿ ಗ್ರೆಶಿ ಆನು ಎನ್ನ ಅಭಿಪ್ರಾಯ ಪ್ರಕಟಿಸಿದ್ದು. ಬೈಲಕೆರೆ ಭಾವನ ಖಾರದ ಟೀಕೆ ನೋಡುವಾಗ ಒಪ್ಪಣ್ಣನ ಬೈಲಿಂಗೆ ಬರೆಕ್ಕಾದ ಅವಶ್ಯಕತೆ ಎನಗೆ ಕಾಣ್ತಿಲ್ಲೆ … ಒಪ್ಪಣ್ಣ ಎಂತ ಹೇಳ್ತ… ?
  .

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಅಪ್ಪಚ್ಚಿ Reply:

  { ನವಗೆ ಅಡಿಕ್ಕೆಯೂ ತೆಂಗೂ ಬಿಟ್ರೆ ಬೇರೆಂತ ತಲೆಗೆ ಹೋವುತ್ತಿಲ್ಲೆ. ಎರಡೂ ಇಂದಿಂಗೆ ಹೇಳಿದ್ದಲ್ಲ }
  ಇದು ಎನಗುದೆ ಇಷ್ಟ ಆಯಿದಿಲ್ಲೆ.

  { ಇತ್ಯಾದಿ ನೆನೆಸಿ ಅತ್ಲಾಗಿ ತಲೆ ಹಾಕಿ ಮನುಗಲೆ ಸಾನು ತಯಾರಿಲ್ಲೆ }
  ಇದು ಮತ್ತೆ
  { ಕೃಷಿಯ ಬಗ್ಗೆ ಒಳ್ಳೆ ಅಭಿಪ್ರಾಯ ಇಪ್ಪ ಕಾರಣವೇ ಆನೂ ಒಂದು ಕೃಷಿ ಭೂಮಿಯ ಎನಗೆಡಿಗಪ್ಪ ರೀತಿಲಿ ಈಗಿತ್ಲಾಗಿ ಮಾಡಿಗೊಂಡಿದೆ. ಕಷ್ಟ ಗ್ರೆಶಿ ಓಡಿ ಹೋಯಿದಿಲ್ಲೆ }
  ಇದು – ವಿರೋಧಾಭಾಸ ಅಲ್ಲದ??

  ಮುಕ್ತ ಅವಕಾಶ ಇಕ್ಕು ಖಂಡಿತ ಹಾಂಗೆ ಹೇಳಿ ನಿಂಗಳ ಅಭಿಪ್ರಾಯ ಟೀಕಿಸುವ ಹಕ್ಕು ಬಾಕಿದ್ದೊರಿಂಗೂ ಇದ್ದಲ್ಲದ? ಈ ವೈಚಾರಿಕ ವಿಷಯಂಗಳ ನಿಂಗ ಸ್ವಂತದ್ದಾಗಿ ತೆಕ್ಕೊಂಡು ಕೋಪ ಮಾಡುಲಕ್ಕ?? ಹಾಂಗೆ ಮಾಡಿರೆ ಒಪ್ಪಣ್ಣ ಬರದ ಲೇಖನವ ನಾವೇ ಇರುವಾರ ಸಾಧಿಸಿ ತೋರ್ಸಿದ ಹಾಂಗೆ ಆತಲ್ಲದೋ?

  ಟೀಕೆಯ ಎನಗ ಮಾಡಿದ್ದಲ್ಲ,ಎನ್ನ ಯೋಚನೆಗೆ ಮಾಡಿದ್ದು ಹೇಳಿ ತಿಳ್ಕೊಂಡರೆ ಬೇಜಾರಪ್ಪದು ತಪ್ಪುತ್ತು, ಜಗಳ ಅಪ್ಪದು ತಪ್ಪುತ್ತು.

  ಕುವೈತ್ ಭಾವ Reply:

  ಅಪ್ಪಚ್ಚಿ .. ಎನ್ನ ಉದ್ದೇಶ … ನಾವು ಕಷ್ಟ ಹೇಳಿ ಕೂದರೆ ಯಾವದೂ ಸಾಧ್ಯ ಇಲ್ಲೆ, ಅಡಕೆ+ತೆಂಗಿಂದ ಹೆರ ಪರಿಹಾರ ಹುಡುಕುವ ಪ್ರಯತ್ನ ಕಮ್ಮಿ ಹೇಳ್ತ ಸಾರ್ವತ್ರಿಕ ಅಬಿಪ್ರಾಯ ಅಷ್ಟೇ. ಯಾರೂ ಪ್ರಯತ್ನಿಸಿದ್ದವಿಲ್ಲೆ ಹೇಳಿದ್ದೂ ಇಲ್ಲೆ … ಕೆಲವರಿದ್ದವು ಹೇಳಿ ಮದಲೇ ಒಪ್ಪಿಗೊಂಡಿದೆ. ಹಾಳೆ ತಟ್ಟೆಗಳ ಉದ್ಯಮ ಊರಿಲಿ ಕೆಲವು ಇಲ್ಯೋ … ಇದು ಮಾದರಿ.

  ವಿರೋದಾಭಾಸ ಹೆಂಗಾತು? ಹೆಚ್ಚಿನವು ಕೃಷಿ ಕಷ್ಟ ಹೇಳಿ ತೀರ್ಮಾನಿಸಿ ಮಾರ್ತದಲ್ಲದ್ದೆ ಪರ್ಯಾಯ ಆದಾಯವ ಯೋಚುಸುತ್ತವಿಲ್ಲೇ ಹೇಳಿ ತಿಳುಶುವ ಪ್ರಯತ್ನ ಆನು ಮಾಡಿದೆ. ಅದೇ ದೃಷ್ಟಿಲಿ ಇಲ್ಯಾಣ ಅಂಗಡಿಲಿ ಕಂಡ ಪರ್ಯಾಯ ಮಾರ್ಗಂಗೋ ಹಲವು ಇದ್ದು ಹೇಳ್ತದರ ಕಂಡದ್ದರ ಕಂಡ ಹಾಂಗೆ ಬರದೆ.

  ಟೀಕೆ ಯೋಚನೆಗಾದರೆ …. ವಿಕೃತ ಸಲಹೆಯ ಔಚಿತ್ಯ ಎಂತರ? ತಮಾಷೆಯ ಹಾಂಗೂ ಅದು ಕಂಡಿದಿಲ್ಲೆ. ಟೀಕೆಗೂ ಒಂದು ಕ್ರಮ ಇಲ್ಯೋ?
  .

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  raghumuliya Reply:

  ಭಾವಾ.. ಖಾರದ ಟೀಕೆ ಬಂದರೆ ಸೀವಿನ ಕೇಟಿ ಕುಡಿವ°,ಕಲ್ಲಡ್ಕಲ್ಲಿ..,ಖಾರವ ಮರೆವ°
  ನಿಂಗಳ,ನಮ್ಮೆಲ್ಲರ ಅನುಭವವ ಹಂಚಿಗೊಮ್ಬಲೆ ಅಲ್ಲದೋ ಇಪ್ಪೊದು ಒಪ್ಪಣ್ಣನ ಈ ಬೈಲು?
  ಮನ್ನೆ ಹೇಳಿದ್ದು ನಿತ್ಯನೂತನ ಹೇಳೋದು ಇದಕ್ಕೆ ಅಲ್ಲದೋ??

  ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹೊಲೆಯು
  ಮಾತಿನಿಂ ಸರ್ವ ಸಂಪದವು
  ಲೋಕಕ್ಕೆ ಮಾತೇ ಸರ್ವಜ್ಞ

  ಕುವೈತ್ ಭಾವ Reply:

  ಖಂಡಿತಾ… 2011 ಜುಲಾಯಿಲಿ KT ಕುಡಿವ …

  ರಾಜನಾರಾಯಣ ಹಾಲುಮಜಲು Reply:

  ಹೇ ಕುವೈತ್ ಬಾವ, ನಿಂಗ ಖಾರದ ಒಪ್ಪಂಗೊಕ್ಕೆ ಬೇಜಾರ ಮಾಡಿದರೆ ಆಗ.. ನಿಂಗ ಅಭಿಪ್ರಾಯ ಬರವಗ ನೀರ್ಕಜೆ ಅಪ್ಪಚ್ಚಿ ಹೇಳಿದಂಗೆ ವಿರೋಧಾಭಾಸ ಅಯಿದು. (ಕೃಷಿಗೆ ವಿರುದ್ದ ಮಾತಾಡಿದ ಹಾಂಗೆ ಅರ್ಥ ಬಂತು. ಟೈಪಿಂಗ್ ಮಿಸ್ಟೇಕ್ ಅದಿಕ್ಕು. )ಅದಕ್ಕೆ ಬೈಲಕೆರೆ ಬಾವಂಗೆ ಬೇಶಿ ಅತಯಿಕು. ಹೀಂಗೆ ನಾವು ಮಾತಾಡಿದರೆ ಅಲ್ಲದ ನಮ್ಮ ಆಲೋಚನಗ ಗೊಂತಪ್ಪದು ಮುಳಿಯ ಬಾವ ಹೇಳಿದಂಗೆ ಬಾಯಿ ಚಿಪೆ ಮಾದ್ಯೊಂಬ…….. ಆಗದ ??

  ಕುವೈತ್ ಭಾವ Reply:

  ಇಂದು ಯಾವದೇ ಕೃಷಿಕನ ಹತ್ರೆ ಮಾತಾಡಿದರೂ ಸಮಸ್ಯೆಗಳ ಬೆಟ್ಟವೇ ಬತ್ತು ಹೊರತು, ಎಷ್ಟು ಜನ ಉಪಕೃಷಿ (ಅಡಿಕೆ+ತೆಂಗಿನ ಜೊತೆಗೆ) ಮಾಡುವವಿದ್ದವು ಅಥವಾ ಮಾತಾಡುವವಿದ್ದವು? ಖಂಡಿತವಾಗಿಯೂ ಬರೇ ಅಡಿಕೆ+ತೆಂಗು (ಇಂದ್ರಾಣ ಖರ್ಚು + ಸಮಸ್ಯೆಗಳ ಲೆಕ್ಕ ಹಾಕಿ) ಮಾತ್ರ ನಂಬಿದರೆ ಜೀವನ ಕಷ್ಟ ಹೇಳುದು ಸಾರ್ವತ್ರಿಕ ಅಭಿಪ್ರಾಯ ಅಲ್ಲದೋ. ಅದನ್ನೇ ಆನು ಬರದ್ದು. ಎನ್ನ ಒಂದೋ ಎರಡೋ ವಾಕ್ಯ ಓದಿ ತೀರ್ಮಾನಿಸಿದರೆ ವಿರೋಧಾಭಾಸ ಕಾಂಗು, ಬಹುಶ ಪೂರ್ಣ ಪ್ಯಾರಗ್ರಾಫ್ ಓದಿದರೆ ಸರಿ ಅಭಿಪ್ರಾಯ ಬಕ್ಕು.
  .
  ಹೋಗಲಿ, ಎಲ್ಲಿ ಚೀಪೆ ತಿಂಬೋ? ಮುಳಿಯ ಭಾವನೊಟ್ಟಿಂಗೆ ಕೇಟಿ ಕುಡಿವಲಿದ್ದದ.
  .

  ನೀರ್ಕಜೆ ಮಹೇಶ

  ನೀರ್ಕಜೆ ಅಪ್ಪಚ್ಚಿ Reply:

  {ಇಂದು ಯಾವದೇ ಕೃಷಿಕನ ಹತ್ರೆ ಮಾತಾಡಿದರೂ ಸಮಸ್ಯೆಗಳ ಬೆಟ್ಟವೇ ಬತ್ತು ಹೊರತು, ಎಷ್ಟು ಜನ ಉಪಕೃಷಿ (ಅಡಿಕೆ+ತೆಂಗಿನ ಜೊತೆಗೆ) ಮಾಡುವವಿದ್ದವು ಅಥವಾ ಮಾತಾಡುವವಿದ್ದವು? ಖಂಡಿತವಾಗಿಯೂ ಬರೇ ಅಡಿಕೆ+ತೆಂಗು (ಇಂದ್ರಾಣ ಖರ್ಚು + ಸಮಸ್ಯೆಗಳ ಲೆಕ್ಕ ಹಾಕಿ) ಮಾತ್ರ ನಂಬಿದರೆ ಜೀವನ ಕಷ್ಟ}
  ಒಪ್ಪತಕ್ಕ ಮಾತು. ಕೃಷಿ ಸರಿ ಇಲ್ಲೇ ಹೇಳ್ತು ಒಂದು ಕ್ಲೀಷೆ ಆಗಿ ಹೋಯಿದು.

  VA:F [1.9.22_1171]
  Rating: 0 (from 0 votes)

  ಬೈಲಕರೆ ಭಾವ Reply:

  ನಮ್ಮ ಜೀವವೇ ಕೃಷಿ ಆದ ಕಾರಣ ಅದರ ಟೀಕೆ ಮಾಡುವದು ಎನಗೆ ಹಿಡಿಸುತ್ತಿಲ್ಲೆ…ನಾವು ಇಂದು ಹೇರ ದೇಶಕ್ಕೆ ಹೋವ್ತು ಹೇಳಿ ಆದರೆ,ನಾವು ಹೋಪದು ನಮ್ಮ ಕೃಷಿಯ ಮೂಲಕ ಅಭಿವೃದ್ಧಿ ಆದ ಪೈಸೆಲಿ ಅಲ್ದಾ? ನಾವು ಅಲ್ಲಿಗೆ ಎತ್ತಿಯಪ್ಪಗ ನವಗೆ ಅದರ ಗೌರವಿಸುವಷ್ಟಾದರೂ ಕೃತಜ್ಞತಾ ಭಾವ ರೂಢಿ ಮಾದಿಗೊಮ್ಬದು ಒಳ್ಳೇದು ಹೇಳಿ ಎನಗೆ ಅನಿಸುತ್ತು.ಅದಕ್ಕಾಗಿ ಆನು ಖಾರದ ಟೀಕೆ ಕೊಡೆಕ್ಕಾಗಿ ಬಂತು.ಒಪ್ಪಣ್ಣ ಅಷ್ಟು ಕಷ್ಟ ಪಟ್ಟ ವಸಂತಣ್ಣನ ಜೀವನಲ್ಲಿ ಆದ ತಿರುವಿನ ಬಗ್ಗೆ ವಿವರಿಸಿ ಹೇಳಿದ್ದಕ್ಕೆ ನಾವು ಈ ಮೂಲಕ ಆದರೂ ಒಳ್ಳೆ ಒಪ್ಪಂಗಳ ಕೊಡುವ ಮೂಲಕ ಗೌರವ ಕೊಡೆಕು..ಅದು ವಸಂತಣ್ಣನ ಜೀವನಲ್ಲಿ ಸ್ಫೂರ್ತಿಯ ಸೆಲೆಯಾಗಿ ಉತ್ಪನ್ನ ಅಪ್ಪಲೆ ಕಾರಣ ಅಕ್ಕು…ಎಂಥ ಹೇಳ್ತೆ ಒಪ್ಪಣ್ಣ?

  ಕುವೈತ್ ಭಾವ Reply:

  ನಿಂಗಳ ಈ ಹಿಂದಾಣ ಒಪ್ಪ ಎನ್ನ ಆಶಯ ಪೂರ್ಣ ಅರ್ಥೈಸದ್ದೆ ಉದ್ವೇಗಲ್ಲಿ ಬರದ್ದದು ಹೇಳಿ ಗೊಂತಾವುತ್ತು. ಟೀಕೆ ಮಾತ್ರ ಇದ್ದತ್ತೋ? ಪೂರ್ಣ ಓದಿದ್ದರೆ, ಕೃಷಿಯ ಬಗ್ಗೆ ಜನಂಗೊಕ್ಕೆ ಇಪ್ಪ ಅನಾಸಕ್ತಿಯನ್ನುದೆ ಮತ್ತು ಪರ್ಯಾಯ ಮಾರ್ಗಂಗೋ ಇದ್ದು (ಕಸದಿಂದ ರಸ… ಸ್ಪೂರ್ತಿಗೆ ಹೊಸ ಸೆಲೆ… ) ಹೇಳ್ತದನ್ನುದೆ ಎನಗೆ ತೋರಿದ ರೀತಿಲಿ ಆನು ಬರದ್ದದು. ನಾವು ಬಾವಿಲಿಪ್ಪ ಕಪ್ಪೆಗೋ ಆದರೆ ಹೇಂಗೆ? ಹವ್ಯಕರಿಂಗೆ ಕೃಷಿ ಪ್ರಧಾನವಾದರೂ ಬೇರೆ ವೃತ್ತಿಗಳೂ ಇದ್ದು (ಪೌರೋಹಿತ್ಯ, ವ್ಯಾಪಾರ, ಉದ್ಯೋಗ, … ). ಎಲ್ಲದರಲ್ಲೂ ಸಮಸ್ಯೆಗಳೂ ಇದ್ದು, ಗೌರವವೂ ಇದ್ದು. ಸಮಸ್ಯೆಯನ್ನೇ ದೊಡ್ಡ ಮಾಡಿ ಕೈಕಟ್ಟಿ ಕೂತರೆ ಕೆಲಸ ಅಕ್ಕೋ? ಮತ್ತೆ ಎನಗೆ ಅಡಕ್ಕೆ ಹೆಕ್ಕಿಯೂ, ಸೊಲುದೂ ಗೊಂತಿದ್ದು. ಹಾಂಗೆ ಹೇಳಿ ಆನು ಕೃಷಿ ಹಿನ್ನೆಲೆಂದ ಮೇಲೆ ಬಂದವ ಖಂಡಿತಾ ಅಲ್ಲ. ಆದರೂ ಕೃಷಿಯ ಮತ್ತು ಕೃಷಿಕರ ಬಗ್ಗೆ ಅತೀವ ಆದರ ಇದ್ದು. ಎನ್ನ ಬಗ್ಗೆ ಹಾಂಗಿರಲಿ, ಅದು ಅಪ್ರಸ್ತುತ. ನಿಂಗೊ ಟೀಕೆಯ ಬದಲು ಆನು ಬರದ “ವಿಚಿತ್ರ”ದ ಬಗ್ಗೆ ಕೇಳಿದ್ದರೆ ಬಹುಷಃ ಇಷ್ಟು ಅನವಶ್ಯಕ ಚರ್ಚೆ ಬತ್ತಿತ್ತಿಲ್ಲೆ.

  ಒಪ್ಪಣ್ಣನ ಬೈಲಿಲಿ ಬಂದ ಬೇರೆ ಲೇಖನಂಗೊಕ್ಕೆ ಆನು ಒಪ್ಪ ಕೊಟ್ಟಿದೆ. ಎಲ್ಲವೂ ಸದಭಿರುಚಿ+ಸಕಾರಾತ್ಮಕವಾಗಿಯೇ ಇದ್ದು. ಸದ್ರಿ ಲೇಖನಕ್ಕೂ ಎನ್ನ ಸುರುವಾಣ ಒಪ್ಪ (ಸಪ್ಟಂಬರ ೧೦ರದ್ದು) ಓದಿದ್ದಿರೋ?…

  VA:F [1.9.22_1171]
  Rating: 0 (from 2 votes)
  ಒಪ್ಪಣ್ಣ

  ಒಪ್ಪಣ್ಣ Reply:

  ಕುವೈತು ಬಾವಾ..

  ನಿಂಗ್ಳ ಒಪ್ಪದ ಆಶಯ ಎಂತ ಹೇಳುದು ಎನಿಗೆ ಗೊತ್ತಿದ್ದು, ಬೈಲಿಂಗೂ ಗೊತ್ತಿದ್ದು.
  ಕುವೈತಿಲಿಯೇ ಕೂತುಕೊಂಡು ನೀರ್ಕಜೆ ಅಪ್ಪಚ್ಚಿಯ ಊರಲ್ಲಿ ಹದಿನೈದೆಕ್ರೆ ಜಾಗ ತೆಗುದ್ದು,
  ಅದ್ರ ಮೂಲಕ ಒಪ್ಪಣ್ಣನ ಈ ಲೇಖನದ ತಾತ್ಪರ್ಯವ ಎತ್ತಿ ಹಿಡುದ್ದು, ನಾವೆಲ್ಲರೂ ಮಾಡೆಕ್ಕಿದ್ದ
  ಕಾರ್ಯಕ್ಕೆ ಮುನ್ನುಡಿ ಬರದ್ರ ನೋಡುವಾಗ ಹೆಮ್ಮೆ ಆನುಸ್ತು.
  ಕುಂಬ್ಳೆ ಸೀಮೆಯ ಮೂಲ ಇದ್ದುಕೊಂಡು, ಪಂಜಸೀಮೆಲಿ ಬೆಳುದು, ಈಗ ವಿಟ್ಳ ಸೀಮೆಯ ಮಣ್ಣನ್ನೂ ಅನುಭವಿಸುವ ಸೌಭಾಗ್ಯ ನಿಂಗ್ಳದ್ದಲ್ಲದಾ? ಊರಿಗೆ ಬಂದ ಮೇಲೆ ಇಪ್ಪುಲೆ ಒಳ್ಳೆ ವ್ಯವಸ್ತೆ ಮಾಡಿಕೊಂಡಿದಿ, ಅಲ್ದಾ?
  ದೂರದೃಷ್ಟಿ ಇಟ್ಟುಕೊಂಡು ನಿಂಗ ಮಾಡ್ತಾ ಇಪ್ಪ ಕಾರ್ಯ ಮುಂದಿನವಕ್ಕೆ ದಾರಿದೀಪ ಆಗಲಿ!
  ದೇವರು – ಗುರುಗೊ ನಿಂಗ್ಳ ಈ ಕಾರ್ಯಕ್ಕೆ ಆಶೀರ್ವಾದ ಮಾಡ್ಳಿ!

  {ಒಪ್ಪಣ್ಣನ ಬೈಲಿಂಗೆ ಬರೆಕ್ಕಾದ ಅವಶ್ಯಕತೆ ಎನಗೆ ಕಾಣ್ತಿಲ್ಲೆ …}

  ಹೀಂಗಂತೂ ಆರುದೇ,ಯೇವತ್ತೂ ಆಲೋಚನೆ ಮಾಡೆಡಿ. ಇದು ನಮ್ಮೆಲ್ಲರ ಬೈಲು.
  ಎಲ್ಲೋರೂ ಹತ್ತರಾಣೋರೇ ಅಲ್ಲದೋ? ಹತ್ತರಾಣೋರತ್ರೇ ಪ್ರೀತಿ-ಕೋಪ -ಜಗಳ ಅಪ್ಪದಲ್ಲದೋ?
  ಅಭಿಪ್ರಾಯಲ್ಲಿ ಭಿನ್ನತೆ ಬಂದರೂ, ಅನುಭವದ ಮೂಲಕ ಪರಿಹರಿಸಿಗೊಂಬ.
  ಸೀಮೆಗಳ ಅಂತರ ಇಲ್ಲದ್ದ, ದೇಶಂಗಳ ಅಂತರ ಇಲ್ಲದ್ದ ಸರ್ವಾನುಸುಂದರ ಬೈಲಿನ ಆಶಯ ಈಡೇರುಸುವ°.
  ಇಲ್ಲಿ ಎಲ್ಲೋರ ಹಾರಯಿಕೆಯೂ ಒಂದೇ – ನಮ್ಮ ತನ ಒಳಿಯೆಕ್ಕು.
  ಮಾತುಗೊ ರಜಾ ಬೇರೆಬೇರೆ, ಅಷ್ಟೆ. ಎಂತ ಹೇಳ್ತಿ?

  ಬಪ್ಪೊರಿಶ ಜುಲಾಯಿಲಿ ಎಲ್ಲಿ ಸಿಕ್ಕುವೊ°? :-)
  ಉತ್ತರ ಬರೆಯಿ, ಕಾದೊಂಡಿರ್ತೆ.
  ~
  ನಿಂಗಳ ಒಪ್ಪುವ,
  ಒಪ್ಪಣ್ಣ

  VA:F [1.9.22_1171]
  Rating: +1 (from 1 vote)
 2. ಹೆಸರು ಬೇಡ (ಬ್ಲಾಗ್ ನ ಹಿತೈಷಿ )

  ಬೈಲಿಲಿ ಇಪ್ಪ ಅಪ್ಪಚಿ / ಭಾವ/ ಅಣ್ಣ/ ಅಕ್ಕ(ಎಲ್ಲೋರಿನ್ಗುದೆ ..ನೆನಪ್ಪು ಆವುತ್ತಿಲ್ಲೇ ಆರೆಲ್ಲ ಇದ್ದವು ಹೇಳಿ)..
  ಈ ಬ್ಲಾಗ್/ ವೆಬ್ಸೈಟ್ ಲಿ ನಾವು ಕೃಷಿ / ಹಳ್ಳಿ ಜೀವನ ದ ಬಗ್ಗೆ ಬೇಕಾದಷ್ಟು ಸರ್ತಿ ಈ ಮೊದಲೇ ಚರ್ಚೆ ಮಾಡಿದ್ದು.. ಆರಿಂಗು ಒಮ್ಮತಕ್ಕೆ ಬಪ್ಪಲೆ ಆಯಿದಿಲ್ಲೇ ಎಲ್ಲೋರಿಂಗು ಅವರವರದ್ದೇ ಆದ ದ್ರಿಷ್ಟಿ ಕೋನ ಇದ್ದು..
  ನಾವು ಇಲ್ಲಿ ಚರ್ಚೆ ಮಾಡುದರ ಬದಲು ಕಾರ್ಯಲ್ಲಿ ಹೇಂಗೆ ಒಳ್ಳೆದು ಮಾಡುವ ಹೇಳಿ ವಯಕ್ತಿಕವಾಗಿ ಆಲೋಚನೆ ಮಾಡಿ ಅದರ ಕಾರ್ಯರೂಪಕ್ಕೆ ತಪ್ಪೋ ಆಗದೋ.. ಹಾಂಗಾಗಿ ಈ ವಿಷಯದ ಮೇಲಣ ಚರ್ಚೆಯ ಇಲ್ಲಿಗೆ ಇದರಲ್ಲಿ ನಿಲ್ಸುವ..ಆಗದೋ ….(ಚರ್ಚೆಗೆ ಆನು ಇಲ್ಲೆ. ವಯಕ್ತಿಕ ಅಭಿಪ್ರಾಯ .. ಹೇಳಿದ್ದು ತಪ್ಪು ಹೇಳಿ ಕಂಡರೆ ಕ್ಷಮಿಸಿಕ್ಕಿ.. )

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  {ಹೇಳಿದ್ದು ತಪ್ಪು ಹೇಳಿ ಕಂಡರೆ ಕ್ಷಮಿಸಿಕ್ಕಿ}
  ಸರಿಯಾಗಿ ಹೇಳಿದಿ ಅಪ್ಪಚಿ / ಭಾವ/ ಅಣ್ಣ/ ಅಕ್ಕ.
  ಬೈಲಿನ ಬಗ್ಗೆ ನಿಂಗಳ ಹಾರಯಿಕೆ ಕಂಡು ಕೊಶೀ ಆತು.

  [Reply]

  VA:F [1.9.22_1171]
  Rating: +1 (from 1 vote)
 3. ಬೈಲಕರೆ ಅಜ್ಜ

  ನಿಂಗ ಹೀಂಗೆ ಎಂತಕೆ ಚರ್ಚೆ ಮಾಡ್ತಿರೋ? ನಾವು ಎಲ್ಲೇ ಇರಲಿ ಕೃಷಿಯ ಗೌರವಿಸುವ..ನಿಂಗ ಮಕ್ಕ ಚರ್ಚೆ ಮಾಡುವದು ಸಹಜ..ಅದರ ಒಳ್ಳೆ ರೀತಿಲಿ ಮುಗಿಶುವ.ಕೃಷಿತೋ ನಾಸ್ತಿ ದುರ್ಭಿಕ್ಷಂ….ಹೇಳಿ ಇದ್ದ ಹಾಂಗೆ ನಿಂಗಳ ಚರ್ಚೆಗ ಒಳ್ಳೆ ರೀತಿಲಿ ಬೈಲಿಲಿ ಬರಲಿ….

  [Reply]

  VA:F [1.9.22_1171]
  Rating: 0 (from 0 votes)
 4. ರಾಜಾರಾಮ ಸಿದ್ದನಕೆರೆ

  ಒಪ್ಪಣ್ಣನ ಈ ಲೇಖನ ಓದಿ ಎನಗೆ ತುಂಬಾ ಖುಷಿ ಆತು.ಇಂತಿಂಥ ಪ್ರಾಮುಖ್ಯತೆ ಇಪ್ಪಂತಹ ವಿಷಯಂಗಳ ನಾವಿಲ್ಲಿ ವಿಮರ್ಶಿಸೋದು ನಮ್ಮ ಹವ್ಯಕ ವರ್ಗದ ಏಳಿಗೆಗೂ ದಾರಿ ಅಕ್ಕು ಹೇಳಿ ಗ್ರಹಿಸುತ್ಥೆ !!
  ಇಲ್ಲಿ ಬಂದ ಒಪ್ಪಂಗಳ ಓದುತ್ತ ಹೋದ ಹಾಂಗೆ ಎನಗೆ ಅನಿಸಿತ್ತು ನಮ್ಮ ಕುವೈತ್ ಭಾವ,ಪ್ರಾಸಕ್ಕೆ ಬೇಕಾಗಿ ಅಡಿಕೆ
  ( ಅಡಿಗೆ ) ವಿಷಯವ ತೆಗದಪ್ಪಗ ಅದು ನಮ್ಮ ಕೃಷಿಯ ಬಹಳಷ್ಟು ಪ್ರೀತಿಸುವ ಬೈಲಕೆರೆ ಭಾವಂಗೆ ರಜಾ ಬೇಜಾರ ಆತಲ್ಲದ !?
  ಅಲ್ಲಾ ಕುವೈತ್ ಭಾವ ನಿಂಗೋಗೆ ಅಲ್ಲಿ ಸೂಪರ್ ಮಾರ್ಕೆಟ್ ಲಿ ಫೋಟೋ ತೆಗವಲೇ ಆಗ ಹೇಳಿ ಇದ್ದರೆ ಒಂದು ಪ್ಯಾಕೆಟ್ ತೆಕ್ಕೊಂಡು ಅದರ ಸರಿಯಾಗಿ ಓದಿ ನೋಡಿ ತಿಳುದು ಈ ಬಯಲಿಲಿ ಪ್ರಸಿದ್ದೀಕರಿಸುತ್ತಿದ್ದರೆ ಇಲ್ಲಿ ಅದೆಷ್ಟೋ ನಮ್ಮವಕ್ಕೆ ಉಪಕಾರ ಆವುತ್ತಿತ್ತಿಲ್ಲೆಯಾ !!
  ಇದಾ ಈ ಬಯಲಿಲಿ ಲಾಗ ಹಾಕುವ್ವವಕ್ಕೆಲ್ಲ; ಕೃಷಿಯ ಬಗ್ಗೆ ಹೆಚ್ಹಿನ ಮಾಹಿತಿ ಬೇಕಾಗಿದ್ದಲ್ಲಿ ಎನ್ನ ಅಣ್ಣ ಕೃಷಿ ಸಂಶೋಧನಾ ಕೇಂದ್ರಲ್ಲಿ ಡಾಕ್ಟರೇಟ್ ಹೊಂದಿದ ಸೈಂಟಿಸ್ಟ್ ಆಗಿ ಕೆಲಸಲ್ಲಿ ಇದ್ದ.ಕ್ರಿಷಿಕರಿಂಗೆ ಬೇಕಾದ ಸಲಹೆ ಸಹಕಾರವ ಅವಂದ ಎಡಿಗಾದಷ್ಟು ಅವ ಹೇಳಿ ಕೊಡುಗು !ಅವ ಇಪ್ಪೋದು ಸಕಲೇಶಪುರದ ಏಲಕ್ಕಿ ಸಂಶೋಧನಾ ಕೇಂದ್ರಲ್ಲಿ , ಹೆಸರು:ಡಾ.ಶ್ರೀಕೃಷ್ಣ ಭಟ್ಟ ಸಿದ್ದನಕೆರೆ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಸಿದ್ದನಕೆರೆ ಭಾವ
  ನಿಂಗಳಾ ಅಣ್ಣ ಬೈಲಿಲಿ ಕೃಷಿಯ ಬಗ್ಗೆ ಸಾಹಿತ್ಯ ಕೃಷಿ ಮಾಡಿರೆ ಹೇಂಗೆ..
  ಬರೆತ್ತವೋ ಕೇಳಿ ಆತೋ..!

  [Reply]

  ಡಾಮಹೇಶಣ್ಣ

  ಮಹೇಶ Reply:

  ಅವು ಬರೆಕು, ಬರಲಿ,ಬರೆಯಲಿ. ತುಂಬಾ ಉಪಕಾರ ಅಕ್ಕು. ತೋಟಲ್ಲಿ ಏಲಕ್ಕಿಯ ಪರಿಮಳ ಬರಲಿ.

  [Reply]

  VA:F [1.9.22_1171]
  Rating: 0 (from 0 votes)

  ರಾಜಾರಾಮ ಸಿದ್ದನಕೆರೆ Reply:

  ಅಜ್ಜಕಾನ ಭಾವ; ಅವ ರಜಾ ಆಪೀಸಿನ ಕೆಲಸಲ್ಲಿ ದೂರ ಪ್ರಯಾಣಲ್ಲಿದ್ದ. ಅವ ಎತ್ತಿದ ಕೂಡ್ಲೇ ಅವನತ್ತರೆ ಮಾತಾಡಿಗೊಂಡು ಅವನ ಈ ಬಯಲಿನ್ಗೆ ಬಪ್ಪಲೆ ಹೇಳ್ತೆ

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಅಕ್ಕು ಬಾವಾ..

  ರಾಜಾರಾಮ ಸಿದ್ದನಕೆರೆ Reply:

  ಅಜ್ಜಕಾನ ಭಾವ ಇದಾ ಅಣ್ಣ ಈಗ ಸಕಲೇಶಪುರಕ್ಕೆ ಬಂದು ಮುಟ್ಟಿದ್ದ.ನಿಂಗ ಊರಿಂದ ಒಂದರಿ ಅವನ ಹತ್ಥರೆ ಮಾತಾಡಿ ಆಗದೋ .
  ಇಲ್ಲೇ ಕೆಳ ಅವನ ಅಡ್ರೆಸ್ ಕೊಡ್ತೆ ಆತೊ.

  Dr.Sreekrishna Bhat.S.
  Scientist-C,
  Spices Board,
  Indian Cardamom Research Institute,
  Sakaleshpur-573 134
  Hassan Dist.
  Mob: 09449804329

  VA:F [1.9.22_1171]
  Rating: 0 (from 0 votes)
 5. ಡೈಮಂಡು ಭಾವ
  ಕೆಪ್ಪಣ್ಣ

  ಒಪ್ಪಣ್ಣಾ ಲೇಖನ ಲಾಯ್ಕಾ ಆಯಿದು. ಇನ್ನೂ ಪಷ್ಟಾದ್ದು ಚರ್ಚೆಗೊ…ಹಲವು ದೃಷ್ಟಿಕೋನಂಗ ಒಟ್ಟು ಗೂಡಿಯಪ್ಪಗ.ಅಕೇರಿಗೆ ಸಿಕ್ಕುವ (ದೃಷ್ಟಿ)ಕೋನಲ್ಲಿ ಎಲ್ಲರ ಅಭಿಪ್ರಾಯವುದೇ ಕೂಡಿರುತ್ತಿದಾ..ಹಾಂಗಾಗಿ, ಚರ್ಚೆ ಒಳ್ಳೆದೆ…

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಈ ವಾರದ ಶುದ್ದಿ ನಮ್ಮ ಸಮಾಜದ ಒಂದು ದುರ್ದೈವ ಹೇಳುಲಕ್ಕು ಅಲ್ಲದಾ?
  ನಮ್ಮ ಒಳಾಣ ಜನಂಗಳ ಅಹಮ್ಮಿನ ಜಗಳಲ್ಲಿ ನಮ್ಮ ಸಮುದಾಯವೇ ಸೋತತ್ತು. ಸಣ್ಣಕ್ಕೆ ಸುರು ಆದ ಭಿನ್ನಾಭಿಪ್ರಾಯ ಆರೂ ತಣಿಶದ್ದೆ, ಎಲ್ಲೋರೂ ಪರೋಕ್ಷವಾಗಿ ಬೆಳೆಶಿ, ಒಬ್ಬರ ಪಿತ್ರಾರ್ಜಿತ ಜಾಗೆ, ಗುರು, ದೈವ, ಹಿರಿಯರ ಅನುಗ್ರಹದ ಜಾಗೆ, ಸರ್ವ ಸಮೃದ್ಧ ಅಭಿವೃದ್ಧಿಯ ಜಾಗೆ, ಮೃಷ್ಟಾನ್ನ ಭೋಜನ ಕಷ್ಟ ಪಟ್ಟು ತಯಾರು ಮಾಡಿ, ಬಾಳೆಲಿ ಬಡಿಸಿ, ಇನ್ನು ಉಂಬ ಹೊತ್ತಿಂಗೆ ಮಾಪ್ಳೆಯ ಕೂರ್ಸಿ ಉಂಬಲೆ ಹೇಳಿದ ಹಾಂಗೆ ಆಯಿದು.
  ನಾವು ಇಂದು ಜಾಗೆಯ ಅಗತ್ಯತೆ ಕಾಣ. ಭೂಮಿಯ ಬೆಲೆ ಅರಡಿಯ. ಆದರೆ, ನಾಳೆ ನಮ್ಮ ಮೂಲ ಎಲ್ಲಿ ಹೇಳಿ ನಮ್ಮ ಮುಂದಾಣೋರು ಹುಡುಕ್ಕಿ ಬಪ್ಪಗ ಈ ಮಾಪ್ಳೇ ನಮ್ಮ ಮಕ್ಕೊಗೆ ಜಾಗೆ ಉದಾರತೆಲಿ ಬಿಡುಗೋ? ಆ ಹೊತ್ತಿಂಗೆ ಅದೆಷ್ಟು ತುಂಡಾಗಿಕ್ಕೋ? ಇದರ ಎಲ್ಲ ಕಂಡು ನಮ್ಮ ಪಿತೃಗೋ ಸಂತೋಷಲ್ಲಿ ಇಕ್ಕೋ? ಅವು ಎಷ್ಟೋ ಬೆಗರು ಹರಿಶಿ ಸಂಪಾಲ್ಸಿದ ಜಾಗೆ ಅನ್ಯಾಯವಾಗಿ ಮಾಪ್ಳೆಗೊಕ್ಕೆ, ಚೇಟ್ಟನ್ಗೊಕ್ಕೆ ಹೋಪದು ಕಾಂಬಗ ಆ ಆತ್ಮಂಗ ನೊಂದುಗೊಳ್ಳದಾ? ನಾಳೆ ನಾವು ಮಾಡಿದ ಜಾಗೆಗಳ, ನಾವು ಒಳಿಶಿದ ಜಾಗೆಗಳ ನಮ್ಮ ಮಕ್ಕೊ ಹೀಂಗೆ ಮಾರಿದರೆ ನವಗೆ ಹೆಂಗಕ್ಕು? ಇದೆಲ್ಲಾ ನಾವು ಯೋಚನೆ ಮಾಡೆಕ್ಕಾದ್ದದೆ!!!
  ಒಬ್ಬ° ನಮ್ಮಲ್ಲಿ ಸೋತಪ್ಪಗ ಇನ್ನೊಬ್ಬಂಗೆ ಪೂರ್ತಿ ಸಹಾಯ ಮಾಡ್ಲೆ ಎಡಿಯ. ಎಲ್ಲೋರೂ ಸೇರಿದರೆ ರಜ್ಜ ಸಹಾಯ ಅಕ್ಕು. ಆದರೆ ಒಬ್ಬ° ಸೋತಿಪ್ಪಗ ಅವನ ಎಲ್ಲೋರೂ ಸೇರಿ ಇನ್ನೂ ಗುಂಡಿಗೆ ಹಾಕಿದರೆ, ಮಾಪ್ಳೆಗ ಅಥವಾ ಇನ್ನೊಬ್ಬ° ನಮ್ಮ ಈ ಅಸಹಕಾರ ಭಾವನೆಯನ್ನೇ ಬಂಡವಾಳ ಮಾಡಿ ನಮ್ಮ ಎಲ್ಲರ ಅಡಿಪಾಯ ಅಲ್ಲಾಡ್ಸಿ, ಅದು ಭದ್ರ ಬುನಾದಿ ಹಾಕುಗು.
  ಒಂದೊಪ್ಪ ಲಾಯ್ಕಾಯಿದು.
  ಶೀರ್ಷಿಕೆ ಲಾಯ್ಕಾಯಿದು.
  ಗೆದ್ದೋರೂ ಸೋತವು ; ಸೋತೊರೂ ಸೋತವು,
  ನಮ್ಮೊಳಾನ ಅಹಮ್ಮಿಲಿ ನಮ್ಮ ಸಮುದಾಯದವ್ವೇ ಬ್ಯಾರಿಗೊಕ್ಕೆ ಸೋತವು.
  ನಮ್ಮ ಸಣ್ಣ ಜಗಳವ ಪಚ್ಚೆ ಬಣ್ಣ ನುಂಗಿತ್ತು.. :-(

  [Reply]

  VA:F [1.9.22_1171]
  Rating: +2 (from 2 votes)
 7. ರಾಜಾರಾಮ ಸಿದ್ದನಕೆರೆ

  ಕುವೈತ್ ಭಾವನ ಉತ್ತರಕ್ಕೆ ಕಾಯ್ತಾ ಇದ್ದೆ !!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಶ್ಯಾಮಣ್ಣಗಣೇಶ ಮಾವ°ದೊಡ್ಡಮಾವ°ಯೇನಂಕೂಡ್ಳು ಅಣ್ಣಹಳೆಮನೆ ಅಣ್ಣದೀಪಿಕಾಡೈಮಂಡು ಭಾವಚೆನ್ನೈ ಬಾವ°ಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಬೊಳುಂಬು ಮಾವ°ಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮನೆಗೆಗಾರ°ಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಮಾಲಕ್ಕ°ಅಜ್ಜಕಾನ ಭಾವಒಪ್ಪಕ್ಕವಸಂತರಾಜ್ ಹಳೆಮನೆಡಾಮಹೇಶಣ್ಣಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ