ಮರ ಬಿಟ್ಟ ಮಂಗನೂ, ಮನೆ ಬಿಟ್ಟ ಮಗನೂ…

December 12, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಣಿ ಮಠಲ್ಲಿ ಮದುವೆಯ ದಿನದ ಊಟ ಗೌಜಿ ಆದ್ದೋ, ಅಲ್ಲ ಮೈಸೂರಿಲಿ ಆರತಕ್ಷತೆಯ ದಿನದ ಊಟ ಗೌಜಿ ಆದ್ದೋ – ಹೇದು ಆರಾರು ಕೇಳಿರೆ, ಶರ್ಮಪ್ಪಚ್ಚಿ ಮುಗೂಳು ನೆಗೆಮಾಡಿ ಬಿಡುಗಷ್ಟೆ. ಅವಕ್ಕೆ ಎರಡೂ ಊಟವೂ ರುಚಿಯೇ ಆಯಿದು. ಆದರೆ, ಒಂದನ್ನೇ ಉಂಡವ ಇನ್ನೊಂದು ಹುಳಿ ಹೇಳುವ ಕ್ರಮ ಮದಲಿಂದಲೇ ನಮ್ಮ ಊರೊಳ ಇದ್ದು.
ಮದುವೆ ಊಟ ಮಾಂತ್ರ ಉಂಡ ದೊಡ್ಡಭಾವಂಗೆ, ಆರತಕ್ಷತೆ ಊಟ ಲಾಯ್ಕಾಯಿದು – ಹೇದು ಅವರ ಅಣ್ಣ ಹೇದರೆ ನಂಬಿಕೆ ಬಾರ.
ಆರತಕ್ಷತೆ ಊಟ ಮಾಂತ್ರ ಉಂಡ ಚೆನ್ನಬೆಟ್ಟಣ್ಣಂಗೆ, ಮದುವೆ ಊಟಂದಲೂ ಗೌಜಿ ಆಯಿದು – ಹೇದರೆ ಟೀಕೆ ಮಾವಂಗೆ ಸಮದಾನ ಬಾರ.
ಅದಿರಳಿ, ಒಟ್ಟಿಲಿ ಎರಡೂ ಊಟ ರೈಸಿದ್ದು – ಹೇಳ್ತದು ಇದರ ತಾತ್ಪರ್ಯ.

~
ಒಪ್ಪಣ್ಣಂಗೆ ಮೈಸೂರಿಂಗೆ ಹೋಯೇಕು ಹೇದು ಇತ್ತು, ಆದರೆ ಅದೇ ದಿನ ಮಂಗನ ಹಿಡಿವ ಜೆನ ಬತ್ತೆ ಹೇಳಿದ ಕಾರಣ ಹೆರಡ್ಳೆ ಆತಿಲ್ಲೆ.
ತೋಟಕ್ಕೆ ಮಂಗನ ಉಪದ್ರ ಸುರು ಆದರೆ ಮತ್ತೆ ಅಡಕ್ಕೆ ಹಣ್ಣಪ್ಪಗ ರಗಳೆ ಆವುತ್ತಿದ, ಅದಕ್ಕೆ ಅಂಬಗಂಬಗ  ತೋಟಂದ ಮಂಗನ ಹಿಡಿಸ್ಸು – ಅದರ ಕೊಂಡೋಗಿ ಸುಬ್ರಮಣ್ಯದ ಕಾಡಿಲಿ ಬಿಡುಸ್ಸು – ನಿಂಗೊಗೆ ಗೊಂತಿಕ್ಕು. (ಅದು
ಸುಬ್ರಮಣ್ಯದ ಕಾಡಿಲಿ ಬಿಡ್ತೇನೆ – ಹೇದು ಓ ಆಚಿಕ್ಕೆ ಆಚ ಗುಡ್ಡೆಯ ಹೊಡೆಲಿ ಬಿಡ್ತದೂ ನಿಂಗೊಗೆ ಗೊಂತಿಕ್ಕು. ಅಲ್ಲದ್ದರೆ ಮಂಗನ ಹಿಡಿತ್ತ ಜೆನಕ್ಕೆ ಪುನಾ ಕೆಲಸ ಸಿಕ್ಕೆಡದೋ!). ಅಂತೂ, ನಮ್ಮ ಊರಿಂದ ಒಂದರಿ ಉಪದ್ರ ಕಮ್ಮಿ ಆವುತ್ತನ್ನೇ – ಅದೇ ಸಮಾದಾನ.
ಆಚಮನೆ ಪುಟ್ಟಣ್ಣನ ಉಸ್ತುವಾರಿ, ಮಂಗನ ಹಿಡಿಶುತ್ತಕ್ಕೆ. ಉಸ್ತುವಾರಿ ಅಪ್ಪು, ಆದರೆ ಅವ ಒಬ್ಬನೇ ಕೆಲಸ ಮಾಡಿರೆ ಹೇಂಗೆ? ಉಪಕಾರ ಆವುತ್ತರೆ ಎಲ್ಲೋರಿಂಗೂ ಅಪ್ಪದಲ್ಲದೋ, ಹಾಂಗೆ ನಾವೆಲ್ಲರೂ ಒಟ್ಟಿಂಗೆ ಸೇರೇಕು – ಹೇದು ಬೈಲಿನ ಹಲವು ಮನೆಯೋರು ಅವಂಗೆ ಸಕಾಯಕ್ಕೆ ನಿಂದದು.

~
ಮಂಗಂಗಳ ಹಿಡಿಸ್ಸು ಹೇಂಗೆ?
ಕಬ್ಬಿಣದ ಬಲೆ ಬಲೆ ಗೂಡು, ಪಕ್ಕನೆ ನೋಡಿರೆ ಗೂಡು ಹೇಳಿಯೇ ಗೊಂತಾಗ. ಮಂಗಂಗೊಕ್ಕೆ ಕಾಂಬದು ಬಾಳೆಗೊನೆಗೊ ಮಾಂತ್ರ.
ಅವಕ್ಕೇ ಕಟ್ಟಿ ಮಡಗಿದ್ದು, ಬೇಕಾಬಿಟ್ಟಿ ತಿಂಬಲಕ್ಕು; ಎಷ್ಟು ತಿಂದರೂ ಮುಗಿಯದ್ದಷ್ಟು. ಉಳುದ ದಿನ ಕಾಂಬಲೂ ಸಿಕ್ಕ, ಬಿಡಿ – ಗ್ರೇಶಲೂ ಎಡಿಯದ್ದಷ್ಟು ಸುಖದ ಊಟ. ಯಥೇಶ್ಠ ತಿಂಬಲಕ್ಕು, ಅಷ್ಟುದೇ.
ಮಂಗಂಗೊ ನಂಬಿದವು, ಬಂದವು, ತಿಂದವು. ಬಾಳೆಗೊನೆಗೊ ಹಲವು ಮುಗಾತು.
ಸರಾಗ ಬಂದು ತಿಂದು ಬಂದು ತಿಂದು ಹೋದ ಮತ್ತೆ ಒಂದರಿಯೇ – ಬಾಗಿಲು ಎಳದತ್ತು ಮಂಗನ ಹಿಡಿತ್ತ ಮನಿಶ್ಯ. ಸುಮಾರು ನೂರರ ಹತ್ತರೆ ಮಂಗಂಗೊ ಆ ಗೂಡಿನೊಳ ಬಾಕಿ!!
ಬಾಳೆಗೊನೆ ಕಟ್ಟಿದ್ದು ಮುಗುಕ್ಕೊಂಡು ಬಂತು, ಗೂಡು ಹಾಕಿ ಆಯಿದು. ಇನ್ನು ಏನಿದ್ದರೂ,ಆ ಮಂಗನ ಹಿಡಿತಿತ್ತ ಜೆನರ ಬಂಧನಲ್ಲಿ ಇರ್ಸಲ್ಲದೋ!
ಗೊಂತಪ್ಪಗ ಹೊತ್ತಾಗಿ ಕಳಾತು, ಪಾಪ.
ಮಂಗನ ಹಿಡಿಸ್ಸ ಕಾರ್ಯವ ನೋಡ್ಳೆ ನಿಂದ ಕಾರಣ ಇದರಲ್ಲಿಪ್ಪ ಸೂಕ್ಷ್ಮಂಗೊ ಅರಡಿಗಾತು.
ಹಾಂಗೆ ನಿಂದ ಕಾರಣವೇ ಮೈಸೂರಿಂಗೆ ಹೋಪಲಾತಿಲ್ಲೆ – ಹೇಳುಸ್ಸು ಒಂದು ಶುದ್ದಿ ಆದರೆ, ಮಂಗನ ಹಿಡಿತ್ತ ಗೌಜಿಲಿ ಶುದ್ದಿಗೆ ಬಂದ ಸಂಗತಿಗೊ ಮತ್ತೊಂದು ವಿಚಾರ. ಅದೆಂತರ?

~
ಮಂಗಂಗೆ ಮರವೇ ಮನೆ. ಮರಲ್ಲೇ ಹುಟ್ಟಿ, ಮರಲ್ಲೇ ಬೆಳದು, ಮರಲ್ಲೇ ಸಾವದು – ಹೇಳ್ತ ಹಾಂಗೆ, ಮರವೇ ಅವರ ವಾಸ ಸ್ಥಾನ. ಅದು ಮಂಗನ ಸಹಜ ಧರ್ಮ. ಅವರ ಶರೀರ ಪ್ರಕೃತಿಯೂ ಅದೇ ವ್ಯವಸ್ಥೆಗೆ ಅನುಕ್ಕೂಲ ಅಪ್ಪ ಹಾಂಗೆ ರಚನೆ ಆಯಿದು. ಹಾಂಗಿರ್ಸ ಮಂಗಂಗಳ ಹಿಡುದು ಗೂಡಿಂಗೆ ಹಾಕಿರೆ, ಹೇಂಗಕ್ಕು? ಗೂಡು ಅವರ ಸಹಜ ವಾಸ ಸ್ಥಾನ ಅಲ್ಲ; ಅದು ಏನಿದ್ದರೂ ಅವರ ಬಂಧನದ ಜಾಗೆಯೇ ಅಲ್ಲದೋ?
ಅದು ಬಂಧನ ಹೇದು ಗೊಂತಪ್ಪಗ ಇನ್ನು ಹಿಂದೆ ಬಪ್ಪಲೆಡಿಯದ್ದಷ್ಟು ಮುಂದೆ ಹೋಗಿ ಆಗಿರ್ತು. ಮತ್ತೆಂತ ಮಾಡುಸ್ಸು, ಅದರೊಟ್ಟಿಂಗೆ ಜೀವನ ಮಾಡೇಕಷ್ಟೆ.
ಈ ಮರ ಬಿಟ್ಟ ಮಂಗಂಗೊ, ಅತ್ಲಾಗಿ ಹಳೆ ಜೀವನ ಕ್ರಮವ ಬಿಡ್ಳೂ ಎಡಿಯದ್ದೆ, ಗೂಡಿಲಿ ಬದ್ಕಲೂ ಎಡಿಯದ್ದೆ – ಕೆಲವು ಸಾಯ್ತವು; ಕೆಲವು ಹಾಂಗೂ ಹೀಂಗೂ ಬದ್ಕುತ್ತವು. ಅವರ ನೆಮ್ಮದಿ ಪುನಾ ಕಾಣೆಕ್ಕಾರೆ ಮರವೇ ಸಿಕ್ಕಿ ಆಯೆಕ್ಕಷ್ಟೆ.
ಹಾಂಗಾಗಿಯೇ ಪಾತಿ ಅತ್ತೆಯ ಗಾದೆ ಇಪ್ಪದು “ಮರ ಬಿಟ್ಟ ಮಂಗನ ಹಾಂಗೆ” – ಹೇದು.

~
ಇದೇ ನಮುನೆ ಘಟನೆ ನೆಂಪಪ್ಪದು – ಧರ್ಮಾಂತರದ ಸಂದರ್ಭಲ್ಲಿ.
ಸನಾತನ ಧರ್ಮ ಭೂಮಿ ಆದ ಈ ದೇಶಲ್ಲಿ ಮೂಲ ನಿವಾಸಿಗೊ ಸನಾತನಿಗಳೇ ಆದರೂ ಎಲ್ಲಾ ಧರ್ಮಕ್ಕೂ ಅವಕಾಶ ಇದ್ದು.
ಈಗಾಣ ಸರ್ಕಾರ ‘ಜಾತ್ಯತೀತ ದೇಶ’ – ಹೇಳುವಂದ ಮದಲೇ ನಮ್ಮ ದೇಶಲ್ಲಿ ಧರ್ಮಾತೀತ ವ್ಯವಸ್ಥೆ ಇತ್ತು. ಅವ್ವವ್ವು ಅವಕ್ಕವಕ್ಕೆ ಬೇಕಾದ ಧರ್ಮವ ಪಾಲನೆ ಮಾಡಿಗೊಂಡು ಇತ್ತಿದ್ದವು. ವೈಷ್ಣವನ ಮಗ ಜೈನ, ಬೌದ್ಧನ ಮಗ ಶೈವ – ಹೀಂಗೆ ಬದಲಾವಣೆಗೊ, ಅವರವರ ವೈಯಕ್ತಿಕ ಸ್ವಾತಂತ್ರ್ಯದ ಹಾಂಗೆ ನೆಡಕ್ಕೊಂಡು ಇತ್ತು.
ಯೇವಾಗ, ಈ ಮ್ಲೇಚ್ಚ ಧರ್ಮಂಗೊ ಬಂತೋ, ಅಶ್ಟಪ್ಪಗ ಧರ್ಮವನ್ನೇ ಬಲಾತ್ಕಾರವಾಗಿ, ಅಥವಾ ಆಶೆ ಹುಟ್ಟುಸಿ ಬದಲುಸುತ್ತ ಹೀನ ಕಾರ್ಯ ಮಾದಿಗೊಂಡು ಬಂದವು. ಕೋಟ್ಯಂತರ ಸನಾತನಿಗೊ ಪೆಟ್ಟಿನ ಹೆದರಿಕೆಲಿಯೋ, ಪೈಶೆಯಾಶೆಯೋ – ಎಂತದೋ ಒಂದು ಕಾರಣಕ್ಕೆ ಧರ್ಮ ಬದಲುಸಿದವು.
ಪೈಶೆಯಾಶೆ? ಅಪ್ಪು, ‘ನಿಂಗೊ ಎಂಗಳ ಧರ್ಮಕ್ಕೆ ಬಂದರೆ ಮನೆ ಕಟ್ಟುಸಿ ಕೊಡ್ತೆ, ಅಲ್ಲದ್ದರೆ ಹತ್ತು ಸಾವಿರ ಕೊಡ್ತೆ, ಅಲ್ಲದ್ದರೆ ವಾಹನ ತೆಗದು ಕೊಡ್ತೆ’ – ಇತ್ಯಾದಿ ಆಮಿಷಂಗೊ.

ಈ ಘಟನೆ ನೋಡುವಾಗ ಮಂಗನ ಹಿಡುದ್ದು ನೆಂಪಾಗದ್ದೆ ಇಕ್ಕೋ?
ಎಲ್ಲಾ ಆಮಿಷಂಗಳೂ – ಗೂಡಿನೊಳಾಣ ಬಾಳೆಹಣ್ಣುಗೊ!
ಪಾಪ ಮಂಗಂಗೊ ಅದರ ನಂಬುಸ್ಸು; ಒಂದೊಂದೇ ಮಂಗಂಗೊ ಆ ಪೈಶೆಯ ರುಚಿ ನೋಡಿಕ್ಕಿ ಬಪ್ಪದು.
ರುಚಿ ಹಿಡುದು ಬಂದು ಉಳುದ ಮಂಗಂಗೂ ಹೇಳುಸ್ಸು.
ಎಲ್ಲಾ ಒಟ್ಟಾಗಿ ಆ ಗೂಡಿಂಗೆ ಹೋವುಸ್ಸು; ಅದುವೇ ಸುಲಭದ ಜೀವನ ಹೇದು ಗ್ರೇಶಿ ಬಾಳೆಣ್ಣಿನ ಆಸೆಗೆ ಅದರೊಳ ಬಾಕಿ ಅಪ್ಪದು.

ಹೆರಂದ ಧರ್ಮಾಂತರ ಹೇಳ್ತ ಬಾಗಿಲು ಹಾಕಿ ಅಪ್ಪಗಳೂ ಗೊಂತಾವುತ್ತಿಲ್ಲೆ. ಯೇವಾಗ ಅಲ್ಲಿಪ್ಪ ಬಾಳೆಹಣ್ಣುಗೊ ಮುಗಿತ್ತೋ – ಅಷ್ಟಪ್ಪಗ ಗೊಂತಾವುತ್ತು; ಅತ್ಲಾಗಿ ಸ್ವತಂತ್ರ ಮರದ ಜೀವನವೂ ಇಲ್ಲೆ, ಇತ್ಲಾಗಿ ಬಾಳೆಗೊನೆಯೂ ಇಲ್ಲೆ.
ಅಲ್ಲಿಪ್ಪಗಳೂ, ಇಲ್ಲಿಪ್ಪಗಳೂ ಅಪ್ಪದು ಅದೇ ಹೊಟ್ಟೆ ಹಷು – ಹೇಳ್ತ ಸತ್ಯ ಆ ಮಂಗಂಗೊಕ್ಕೆ ಗೊಂತಪ್ಪಗ – ತಡವಾಗಿರ್ತು.
ಹೀಂಗೆ ಆಶೆ ಬರುಸಿ ಧರ್ಮಾಂತರ ಮಾಡುಸ್ಸು ಒಂದು ರೀತಿ ಆದರೆ, ಇನ್ನೊಂದು ರೀತಿ – ಬಲಾತ್ಕಾರಲ್ಲಿ ಧರ್ಮಾಂತರ. ಒಂದೋ ಮದುವೆ ಅಪ್ಪಲೆ ಬಲಾತ್ಕಾರ, ಅಲ್ಲದ್ದರೆ ಮಾನ ಮರ್ಯಾದಿಯ ಹೆದರಿಕೆ, ಅಲ್ಲದ್ದರೆ ಪೆಟ್ಟಿನ ಬೆಶಿ ತೋರ್ಸಿ, ಅಲ್ಲದ್ದರೆ ಅಪಹರಣ ಮಾಡಿ – ಹೀಂಗೆ ನಾನಾ ನಮುನೆಲಿ ಉಪದ್ರ ಪೀಡೆ ಕೊಟ್ಟು ಅನಿವಾರ್ಯತೆ ಬರುಸಿ ಧರ್ಮಾಂತರ ಮಾಡುಸ್ಸು.

ಉದಾಹರಣೆಗೆ, ಮಂಗಂಗಳ ಬಲಾತ್ಕಾರವಾಗಿ ಹಿಡುದು, ಕೈಯೋ ಕಾಲೋ ಮುರುದ ಮತ್ತೆ ಬಲುಗಿ ತಂದು ಗೂಡಿನೊಳ ಇಡ್ಕಿದ ಹಾಂಗೆ.
ಒಂದು ಆಮಿಷ, ಒಂದು ಅನಿವಾರ್ಯತೆ – ಕಾರ್ಯ ಬೇರೆ ಬೇರೆ, ಕಾರಣ ಒಂದೇ!
ದಾರಿ ಬೇರೆ ಬೇರೆ, ಎತ್ತುದು ಅದೇ ಜಾಗೆಗೆ!
~

ಗೂಡಿನ ಮಂಗಂಗಳ ಎಂತ ಮಾಡ್ತು?
ಆ ಗೂಡನ್ನೇ ಜೀಪಿಲಿ ಮಡಿಕ್ಕೊಂದು ಸೀತ ಹೊಗಿ ಸುಬ್ರಮಣ್ಯದ ಕಾಡಿನ ಬುಡಕ್ಕೆ ಹೋಗಿ, ಜೀಪು ನಿಲ್ಲುಸಿ ಗೂಡಿನ ಬಾಗಿಲು ತೆಗೆಸ್ಸು.
ಅಷ್ಟಪ್ಪಗ ಮಂಗಂಗೊ ಪುನಾ ಹಸುರು ಕಂಡ ಕುಷಿಲಿ ಮರಕ್ಕೆ ಓಡಿ ಹೋಗಿ ಹತ್ತುತ್ತವು!
ಒಂದರ್ಥಲ್ಲಿ ನೋಡಿರೆ – ಇದು ಮಂಗಂಗಳ ಘರ್-ವಾಪಸಿ ಕಾರ್ಯಕ್ರಮ, ಅಲ್ದೋ?

ಮನುಶ್ಯರಿಂಗೂ ಇದೇ ನಮುನೆ ಘರ್ ವಾಪಸೀ – ಕಾರ್ಯಕ್ರಮವ ಮಾಡಿರೆ ಹೇಂಗೆ?
ಯೇವದೋ ಕಾರಣಕ್ಕೆ ಧರ್ಮವ ಬಿಟ್ಟು – ದೂ..ರ ಹೋಗಿ, ಕಷ್ಟವೋ, ನಷ್ಟವೋ, ಬಂಙವೋ, ಬೇನೆಯೋ – ಬದ್ಕಿ ಅಸಬಡಿತ್ತಾ ಇಪ್ಪ ನಮ್ಮ ಜೆನಂಗಳ ಪುನಾ ನಮ್ಮ ಬೈಲಿಂಗೇ ಕರಕ್ಕೊಂಡು ಬಪ್ಪ ಕಾರ್ಯಕ್ರಮ – ಎಷ್ಟು ಚೆಂದ ಅಲ್ಲದೋ?
ಅದುವೇ “ಘರ್ ವಾಪಸೀ”.
ಭಾರತದ ರಾಶ್ಟ್ರೀಯತೆಯ ಎತ್ತಿ ಹಿಡಿವ ಮೂಲ ಉದ್ದೇಶ ಇಪ್ಪ ಸಂಘ ಪರಿವಾರದ ಅಂಗ ಪರಿವಾರ ನೆಡೆಶುವ ಕಾರ್ಯಕ್ರಮವೇ “ಘರ್ ವಾಪಸೀ”.

ಭಾರತದ ಕೆಲವು ಪ್ರದೇಶಂಗಳಲ್ಲಿ, ಮುಖ್ಯವಾಗಿ ಈಶಾನ್ಯ ಭಾರತಲ್ಲಿ ತುಂಬಾ ಜೆನಂಗಳ ಧರ್ಮಾಂತರ ಮಾಡಿದ್ದವಡ.
ಕೆಲವೆಲ್ಲ ಬುಡಕಟ್ಟು ಜೆನಾಂಗದ ಅವರದ್ದೇ ಆದ ಹತ್ತು ಹಲವು ಸಂಪ್ರದಾಯಂಗಳ ಹೊಂದಿಗೊಂಡ ಕುಂಞಿ ಕುಂಞಿ ಸಮೂಹ ಅಡ.
ಪಾಶ್ಚಾತ್ಯ ದೇಶದ ಕ್ರೈಸ್ತ ಮಿಶನರಿಗೊ ಬಂದು ಎಲ್ಲೊರಿಂಗೂ ಪೈಶೆಯಾಶೆ ಕೊಟ್ಟು, ಹೊಸ ಮನೆ, ಹೊಸ ಸೌಕರ್ಯಂಗಳ ಆಷೆ ಏಪುಸಿ, ಅವರ ಮೂಲ ಸಂಸ್ಕಾರವ ಬಿಟ್ಟು ಕ್ರೈಸ್ತ ಧರ್ಮಕ್ಕೆ ಬಪ್ಪ ಹಾಂಗೆ ಮಾಡಿದವಾಡ. ಅವೆಲ್ಲವೂ ಈಗ ಅಧಿಕೃತವಾಗಿ ಕ್ರಿಸ್ತಿಯಾನರು ಆಯಿದವು. ಮೂಲ ಯೇಸುಕ್ರಿಸ್ತಂಗೂ, ಇವಕ್ಕೂ ಯೇವ ಸಮ್ಮಂಧವೂ ಇಲ್ಲೆ, ಆದರೂ ಅವು ಕ್ರಿಶ್ಚಿಯನ್ನರು. ಅವರ ನೆತ್ತರೂ, ನಮ್ಮ ನೆತ್ತರೂ ಒಂದೇ – ಆದರೂ ಅವು ಕ್ರಿಶ್ಚಿಯಾನರು.
ಅದೇ ನಮುನೆ ಬ್ಯಾರಿಗೊ. ನಮ್ಮ ಊರಿನ ಮಾಪ್ಳೆಗಳ ಮೈಲಿಪ್ಪ ನೆತ್ತರೂ, ನಮ್ಮ ನೆತ್ತರೂ ಒಂದೇ. ಅದರ್ಲಿ ಯೇವದೇ ವಿತ್ಯಾಸ ಇಲ್ಲೆ. ಸಾಕ್ಷಾತ್ ಪೈಗಂಬರ ಇಲ್ಲಿಗೆ ಬಂದು ಮಾಡಿದ ಸಂತಾನ ಅಲ್ಲ ಅದು; ಇಲ್ಯಾಣವೇ ಯೇವದೋ ಕಾರಣಕ್ಕೆ ಧರ್ಮಾಂತರ ಆಗಿ ದಿನಕ್ಕೈದು ನಮಾಜು ಮಾಡುಸ್ಸು.
ನ್ಯಾಯವಾಗಿ ಅವು ನಮ್ಮ ದುರ್ಗೆ ಗೆಣವತಿ ಶಿವಂಗೆ ಅರ್ಚನೆ ಮಾಡೆಕ್ಕಾದ್ಸು.

~
ಹಾಂಗಾರೆ, ಇದಕ್ಕೆ ಪರಿಹಾರ ಎಂತರ?
ಆ ಮರ ಬಿಟ್ಟ ಮಂಗಂಗಳ ಎಲ್ಲೋರನ್ನೂ ಕರಕ್ಕೊಂಡು ಬಂದು ಮಾತೃಧರ್ಮಕ್ಕೆ ಸೇರ್ಸೆಕ್ಕು. ಈ ಕೆಲಸದ ಅಗತ್ಯ ಎಷ್ಟು ಇದ್ದು – ಹೇದು ನವಗೆ ಮನವರಿಕೆ ಆದರೇ “ಘರ್ ವಾಪಸೀ”
ಕಾರ್ಯಕ್ರಮದ ಬೆಲೆ ನವಗೆ ಅರಡಿಗಷ್ಟೆ. ಅಲ್ದೋ?

~
ಒಂದೊಪ್ಪ: ಮನೆ ಬಿಟ್ಟ ಮಂಗಂಗಳ ಪೂರ್ತಿ ತಂದು ಮನೆಗೆ ಸೇರ್ಸಿರೆ, ಗೂಡಿನ ಎಜಮಾನನೇ ಮಂಗ ಅಕ್ಕು. ಅಲ್ದೋ?

~
ಸೂ: ನಮ್ಮ ಬೈಲಿನ ಸುವರ್ಣಿನಿ ಅಕ್ಕನ ಅಪ್ಪ ಈ ವಿಶಯಲ್ಲಿ ತುಂಬ ಕೆಲಸ ಮಾಡಿದ್ದವಡ. ಅವರ ಸೇವೆಯ ವಿವರ ನಮ್ಮ ಬೈಲಿಂಗೆ ಸಿಕ್ಕಲಿ ಹೇಳ್ತದು ಒಪ್ಪಣ್ಣನ ಆಶಯ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. parvathimbhat
  parvathimhat

  ಎಷ್ಟೋ ವರ್ಷ೦ದ ಎ೦ಗಳಲ್ಲಿ ಇಲ್ಲದ್ದ ಮ೦ಗ೦ಗೊ ಈಗ ಒ೦ದು ವಾರ೦ದ ಬ೦ದು ತೋಟಲ್ಲಿ , ಮನೆಯ ಸುತ್ತು ಮುತ್ತು ಕೊಣಿವಲೆ ಸುರು ಮಾಡಿದ್ದು ಅಲ್ಲಿ ಹಿಡುದ ಮ೦ಗ೦ಗೊ ಅಲ್ಲನ್ನೇ? ಒಪ್ಪಣ್ಣಾ !ಅದಿರಲಿ .ಬುದ್ಧಿ ಇಲ್ಲದ್ದ ಮ೦ಗ೦ಗೊ ಬಾಳೆ ಹಣ್ಣಿನ ಆಶಗೆ ಗೂಡಿ೦ಗೆ ಹೋಪದು ಸಹಜ ಆದರೆ ಬುದ್ಧಿ ಇಪ್ಪ ಮನುಷ್ಯ ಕ್ಷುಲ್ಲಕ ಆಶೆ ಆಮಿಷಕ್ಕೆ ಬಲಿಯಾಗಿ ಮಾತೃ ಧರ್ಮಕ್ಕೇ ದ್ರೋಹ ಬಗವದರ ಗ್ರಹಿಸಿದರೆ ಭಾರೀ ಬೇಜಾರಾವುತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಪ್ರಕಾಶ ಕುಕ್ಕಿಲ

  ಕಲ್ಲಡ್ಕದ ಶ್ರೀರಾಮ ವಿದ್ಯಾಕೆಂದ್ರಲ್ಲಿ ಯಾವಗಂದಲೇ ಈಶಾನ್ಯ ಭಾರತದ ಮಕ್ಕೊಗೆ ಫ್ರೀ ಎಜುಕೇಶನ್ ಇದ್ದು. ಡಾಕ್ಟ್ರು ಮಾವನ ಹಳೆ ಕನಸು ಈಗ ನನಸಾವ್ತಾ ಇದ್ದು

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಗೋಪಾಲ

  ಮಂಗಂಗಳ ಮನೆಗೆ ಪುನ: ಕರಕ್ಕೊಂಡು ಬತ್ತದು ಒಳ್ಳೆ ವಿಚಾರವೆ. ಅವಕ್ಕೆ ನಮ್ಮ ಮನೆಯೇ ಒಳ್ಳೆದು ಹೇಳಿ ಅನಿಸುತ್ತ ಹಾಂಗೆ ಮಾಡೆಕಾದ ಆವಶ್ಯಕತೆಯುದೆ ಇದ್ದು. ಅವು ಬಾಳೆಹಣ್ಣಿನ ಆಕರ್ಷಣೆಲಿ ಹಾಳಾಗಿ ಹೋದರೆ ಬೇರೆಯವಕ್ಕೆ
  ಎಂತ ಮಾಡ್ಳೆ ಎಡಿಗು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಪುತ್ತೂರುಬಾವವೇಣಿಯಕ್ಕ°ಮುಳಿಯ ಭಾವಕಜೆವಸಂತ°ಅನು ಉಡುಪುಮೂಲೆಸಂಪಾದಕ°ಬಟ್ಟಮಾವ°ಪ್ರಕಾಶಪ್ಪಚ್ಚಿಅಕ್ಷರ°ಶರ್ಮಪ್ಪಚ್ಚಿಡಾಮಹೇಶಣ್ಣವೆಂಕಟ್ ಕೋಟೂರುಗಣೇಶ ಮಾವ°ಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕಮಾಲಕ್ಕ°ರಾಜಣ್ಣಶುದ್ದಿಕ್ಕಾರ°ಪವನಜಮಾವಜಯಗೌರಿ ಅಕ್ಕ°ನೆಗೆಗಾರ°ಬಂಡಾಡಿ ಅಜ್ಜಿಶ್ರೀಅಕ್ಕ°ನೀರ್ಕಜೆ ಮಹೇಶದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ