ಗೋಧ್ರಾ ಹತ್ಯೆ ತೀರ್ಪು ಬಪ್ಪಗ ಗೋಹತ್ಯೆಯೂ ನೆಂಪಾತು!

February 25, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 55 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ಸಮೆಯ ಆತು ಈ ಶುದ್ದಿ ಮಾತಾಡೇಕು ಗ್ರೇಶುದು, ಸಮಗಟ್ಟು ಸಮಯ ಸಿಕ್ಕದ್ದೆ ಬಾಕಿ ಒಳ್ತು.
ಈ ಸರ್ತಿ ರಜ ಪುರುಸೊತ್ತು ಆತದಾ..
~
ಮೊನ್ನೆ ಎಂತಾತು ಹೇಳಿತ್ತುಕಂಡ್ರೆ, ಮೂರ್ಸಂದೆಗೆ ಗುಣಾಜೆಕುಂಞಿ ಸಿಕ್ಕಿದ°.
ಸೂರಂಬೈಲಿನ ದೊಡ್ಡಮಾರ್ಗದ ಹತ್ತರೆ ದೊಡ್ಡಬೇಗಿನ ಕರೆಲಿ ಕಡ್ಳೆ ತಿಂದುಗೊಂಡು ನಿಂದುಗೊಂಡಿತ್ತಿದ್ದ°.
ಬೆಂಗುಳೂರಿಂಗೆ ಹೋವುತ್ತ ಸುಗಮಕ್ಕೆ ಟಿಕೇಟು ಮಾಡಿದ್ದನಾಡ.
ಮಾರ್ಗದಕರೆ ಒರೆಂಗೆ ಮನೆಂದ ಬೆಳಿವೇನಿಲಿ ತಂದುಬಿಟ್ಟಿದವು ಆಗಳೇ, ಇನ್ನೊಂದು ರಜ ಹೊತ್ತಿಲಿ ಬಸ್ಸು ಬಕ್ಕು.
ಹಾಂಗಾಗಿ ಈಗ ಅಪುರೂಪಲ್ಲಿ ಪುರುಸೊತ್ತೇ!

ಕರ್ನಾಟಕಲ್ಲಿ ಇದ್ದರೆ ಅವಂಗೆ ಮೊಬೈಲು ಪೋನುಗೊ ಬತ್ತಾ ಇರ್ತು, ಪುರುಸೊತ್ತಿಲ್ಲದ್ದೆ. ಕೇರಳಲ್ಲಿಪ್ಪಗ ಬತ್ತಿಲ್ಲೆ ಹೇಳಿ ಇಲ್ಲೆ, ಬತ್ತು.
ಆದರೆ – ಶೋಬಕ್ಕಂದೋ ಮಣ್ಣ – ತೀರಾ ಅಂಬೆರ್ಪಿಂದು ಆದರೆ ಮಾಂತ್ರ ಪೋನು ತೆಗವದು. ಅಲ್ಲದ್ದರೆ ಬಚ್ಚಿ ನಿಂಬಂನ್ನಾರ ರಿಂಗು ಅಕ್ಕು.
ಅತವಾ – ಬಚ್ಚುವನ್ನಾರ ರಿಂಗಾದರೆ ಮಾಣಿ ಕೇರಳಲ್ಲಿದ್ದ° ಹೇಳಿ ನಂಬಿಕೆ ಬೈಲಿಲಿ ನೆಡೆತ್ತಾ ಇದ್ದು!
ಅದಿರಳಿ,
ಅಂತೇ ಕೂದಂಡು ಹೊತ್ತು ಕಳೆತ್ತದು ಹೇಳಿರೆ ಅವಂಗೆ ಇಷ್ಟ ಆಗದ್ದ ಜೆಂಬಾರ – ಹಾಂಗೆ ರಜ ಕಡ್ಳೆ ಆದರೂ ಕಾಲಿಮಾಡುವೊ° – ಹೇಳಿ ಹೆರಟಿತ್ತಿದ್ದ°.

ಹೊತ್ತಿದ್ದು ರೈಲು - ಕೆಂಡ ಆದ್ದು ಸಮಾಜ!

~
ಅದೇ ದಿನ ಮದ್ಯಾನಕ್ಕೆ ಪಾಲಾರಣ್ಣ ಅಪುರೂಪಲ್ಲಿ ಮನಗೆ ಬಂದಿತ್ತ – ಹೊಸಾ ಬೈಕ್ಕಿಲಿ.
ಬೆಶಿಲಿಂಗೆ ಒರಗಿ, ಹೊತ್ತೋಪಗಾಣ ಆಸರಿಂಗೆ ಕುಡುದು ಹೆರಡ್ಳಪ್ಪಗ ಅವನೊಟ್ಟಿಂಗೆ ಸಂಗಾತಕ್ಕೆ ಸೂರಂಬೈಲು ಒರೆಂಗೆ ಕೂದೊಂಡೆ.
ಬಪ್ಪಗ ರಜ ಛಾಯದಹೊಡಿಯುದೇ ತರೆಕ್ಕಾತು, ಮನೆಲಿ ಮುಗುದಿತ್ತಿದ್ದು.
ಹಾಂಗೆ ಮತ್ತೆ, ಬಂದೋರ ಕಳುಸಿಕೊಡ್ಳೆ ಒಟ್ಟಿಂಗೆ ಹೋವುತ್ತದು ಕ್ರಮವೇ ಅಲ್ಲದೋ?! 😉

ದಡಭಡನೆ ಪಾರೆಗುಡ್ಡೆಲಿ ಬೈಕ್ಕು ಬಿಟ್ಟೊಂಡು ಮಣ್ಣುಮಾರ್ಗಂದ ಕಪ್ಪುಮಾರ್ಗಕ್ಕೆ ಎತ್ತಿತ್ತು.
ಒಪ್ಪಣ್ಣ ಬೈಕ್ಕಿಂದ ಇಳುದು ಪಾಲಾರಣ್ಣಂಗೆ ಟಾಟ ಮಾಡುವಗ – ಗುಣಾಜೆಕುಂಞಿಯ ಕಂಡತ್ತು, ಇಬ್ರಿಂಗೂ.
ಅಪುರೂಪಲ್ಲಿ ಸಿಕ್ಕುದಲ್ಲದೋ – ಮಾತಾಡುವೊ ಹೇಳಿಗೊಂಡು ಪಾಲಾರಣ್ಣಂದೇ ಬೈಕ್ಕು ನಿಲ್ಲುಸಿದ.
– ಹಾಂಗೆ ಮೂರೂ ಜೆನ ಮಾತಾಡಿಗೊಂಡು ನಿಂದೆಯೊ°.
~
ಗುಣಾಜೆಕುಂಞಿಯ ಪರಿಚಯ ಬೈಲಿಂಗೆ ಇದ್ದಲ್ಲದೋ?
ಅವ ಕೊಶಿಲಿ ಇದ್ದರೆ ಕರ್ಣ; ಕೋಪಲ್ಲಿದ್ದರೆ ಅಭಿಮನ್ಯು – ಹೇಳಿ ಒಂದೊಂದರಿ ಬುಲ್ಲೇಟುಮಾವ ಬೀರಂತಡ್ಕಲ್ಲಿ ನೆಗೆಮಾಡ್ಳಿದ್ದು.
ಮೊನ್ನೆ ಕೊಶಿಲೇ ಇತ್ತಿದ್ದ°. ಆ ಲೆಕ್ಕಲ್ಲಿ ಒಂದೊಂದು ಮುಷ್ಠಿ ಕಡ್ಳೆಯ ಕೈ ಎತ್ತಿ ದಾನ ಮಾಡಿದ°, ಇಬ್ರಿಂಗೂ.
ಅದಿರಳಿ,
ಆದಿನ ಕೊಶಿಲಿ ಇದ್ದದಪ್ಪು – ಎಂತ ಮಾತಾಡಿರೂ, ಏನು-ಒಳ್ಳೆದು ಮಾತಾಡುಸಿರೂ ಗುಣಾಜೆಕುಂಞಿಗೆ ಒಂದು ಕೊಶಿಯ ವಿಶಯ ಮಾಂತ್ರ ತಲೆಲಿ!
ಅದೆಂತರ?
~
ಸುಮಾರೊರಿಶ ಹಿಂದೆ, ಅಡಕ್ಕಗೆ ಇನ್ನೂರು ಕ್ರಯ ಇದ್ದಿದ್ದ ಕಾಲಲ್ಲಿ ಗುಜರಾತಿಲಿ ಒಂದು ಗಲಾಟೆ ಆಗಿತ್ತು!
ನೆಂಪಿದ್ದೋ? ಗೋಧ್ರಾ ಹೇಳ್ತಲ್ಲಿ ಒಂದು ರೈಲಿನ ಹೊತ್ತುಸಿದ್ದು.
ಆ ಪ್ರಯುಕ್ತ, ಅಂದಿಂದ ಕೋರ್ಟಿಲಿ ನೆಡಕ್ಕೊಂಡು ಇದ್ದಿದ್ದ ನಂಬ್ರದ ತೀರ್ಪು ಮೊನ್ನೆ ಬಂತಾಡ.
ರೈಲು ಹೊತ್ತುಸಿದ ವಿದ್ರೋಹಿಗೊಕ್ಕೆ ಶಿಕ್ಷೆಕೊಟ್ಟು ತೀರ್ಪು ಹೆರಡುಸಿದ್ದರ್ಲಿ ಹತ್ತುಮೂವತ್ತು ಜೆನ ಅಪರಾಧಿಗೊ ಒಳ ಕೂಪ ಹಾಂಗೆ ಆಯಿದಡ.
ತೀರ್ಪು ಬಂದದು ಕೊಶಿಯ ವಿಚಾರವೇ. ತಪ್ಪು ಮಾಡಿದೋರಿಂಗೆ ಶಿಕ್ಷೆ ಅಪ್ಪ ನಮುನೆಯ ತೀರ್ಪುದೇ ಕೊಶಿ.
ನಿಜವಾಗಿ ನೋಡಿರೆ, ಗುಣಾಜೆಕುಂಞಿಯ ಯೋಚನೆಯ ಹಾಂಗೆ ತೀರ್ಮಾನ ಬಂದದೇ ಅವನ ದೊಡ್ಡ ಕೊಶಿಗೆ ಕಾರಣ!
~
ಸರ್ಪಮಲೆ ಮಾವ° ಅಂದೊಂದರಿ ಜೋರುಮಾಡಿದ ಮತ್ತೆ ಅಂತೂ ಬೈಲಿಲಿ ಆರಾರು ಮಾತಾಡುವಗ ರಾಜಕೀಯ ವಿಷಯ ಬಂದರೆ ಎನ್ನದು ಕೆಮಿಯೇ ಅಲ್ಲ ಹೇಳಿಗೊಂಡು ಒಪ್ಪಣ್ಣ ಕರೆಲಿ ನಿಂಬದು! 😉
ನಮ್ಮಂದ ಆಗದ್ದರ ನಾವು ಮಾಡ್ಳೆ ಹೋಪಲಿಲ್ಲೆ – ಅದಕ್ಕೆ ಹೇಳಿಯೇ ಗುಣಾಜೆಕುಂಞಿಯ ಹಾಂಗೆ ಸಮರ್ಥರು ಇದ್ದವು, ನಾವೆಂತಕೆ!
ಅಲ್ಲದೋ?
ಆದರೆ ಪಾಲಾರಣ್ಣಂಗೆ ಮಾತಾಡುದಕ್ಕೆ ಎಂತದೂ ಹೆದರಿಕೆ ಇಲ್ಲೆ, ಗುಣಾಜೆಕುಂಞಿಯ ಹತ್ತರೆ ಬಾಯಿಗೆಬಾಯಿ ಮಾತಾಡ್ತ, ರಾಜಕೀಯ ಬಂದಪ್ಪಗ!!
ಅವಂಗೂ ಇದರ ಬಗ್ಗೆ ರಜಾ ಅರಡಿಗು. ಗುಣಾಜೆಕುಂಞಿಯಷ್ಟು ಜಾಸ್ತಿ ಅಲ್ಲ, ಕಮ್ಮಿಯೇ!
ಉದಾಹರಣಗೆ, ಈ ಗಲಾಟೆ ಆದ ವಿಷಯ, ಅದರ ಹಿನ್ನೆಲೆ – ಮುನ್ನೆಲೆ, ವಾಯಿದೆ, ವಿಚಾರಣೆ – ಪ್ರತಿಯೊಂದುದೇ ಗುಣಾಜೆಕುಂಞಿಗೆ ಅರಡಿಗು. ಪಾಲಾರಣ್ಣಂಗೆ ಬರೇ ಹಿನ್ನೆಲೆ- ತೀರ್ಪು ಮಾಂತ್ರ ಅರಡಿಗು ಅಷ್ಟೆ. 😉 :-(
~
ಬೇರೆ ವಿಶಯ ನುಗ್ಗುಲುದೇ ಸಾಧ್ಯ ಇಲ್ಲೆ – ಹೇಳ್ತ ವೆವಸ್ತೆಲಿ ಪಾಲಾರಣ್ಣಂದೇ ಅನಿವಾರ್ಯವಾಗಿ ಅದೇ ವಿಶಯ ಮಾತಾಡಿದ°.
ಅವಿಬ್ರುದೇ ಅಲ್ಯಾಣ ರಾಜಕೀಯ, ನ್ಯಾಯಾಂಗ ವೆವಸ್ತೆಯ ಬಗ್ಗೆ ಮಾತಾಡ್ಳೆ ಸುರುಮಾಡಿದವು.
ಕಡ್ಳೆ ತಿಂಬಗಳೂ ಒಂದು ದೊಡ್ಡ ಆವಳಿಗೆ ಬಂತು!
ಮಸಾಲೆಕಡ್ಳೆ ರಜಾ ಕಸಂಟಿದ್ದ ಹಾಂಗೆ ಅನುಸುಲೆ ಸುರು ಆತು ಒಪ್ಪಣ್ಣಂಗೆ
~
ರಾಜಕೀಯ ಹೇಳಿರೆ – ಬರೇ ರಾಜಕೀಯ ಅಲ್ಲ, ರಜ ಮಾನವೀಯತೆಯ ಮಾತುಕತೆಯುದೇ ಬಂದುಗೊಂಡಿತ್ತು ಅವರ ನೆಡುವಿಲಿ.
ಯೇವದೇ ಆಗಿರಳಿ, ವಿಶಯದ ಬಗ್ಗೆ ನಿಷ್ಪಕ್ಷಪಾತವಾಗಿ ಯೋಚನೆ ಮಾಡ್ತ ವಿಚಾರವಾದ ಪಾಲಾರಣ್ಣಂಗಿದ್ದು.
– ಅವ° ಹೇಳಿರೆ ಮತ್ತೆ ಅದು ಯೋಚನೆ ಮಾಡೇಕಾದ ವಿಶಯವೇ.
ಅವ° ಹೇಳಿದ್ದರಲ್ಲಿ ಇರ್ತ, ರಾಜಕೀಯ ವಿಶಯಂಗಳ ಬಿಟ್ಟು, ಒಳುದ ವಿಶಯಂಗಳ ರಜ ರಜ ಕೇಳಿಗೊಂಡಿದೆ.
ನೆಂಪಾದಷ್ಟು ಈಗ ಹೇಳ್ತೆ.
~
ಹಿನ್ನೆಲೆ:
ಪೆಬ್ರವರಿ ಇಪ್ಪತ್ತೇಳು, 2002ರ ಉದೆಕಾಲಕ್ಕೆ ಸಾಬರ್ಮತಿ ಎಕ್ಸುಪ್ರೆಸ್ಸು ಗೋಧ್ರಾ ಹೇಳ್ತ ಊರಿಲೆ ಆಗಿ ಬಂದುಗೊಂಡಿತ್ತು.
ಆ ರೈಲಿಲಿ, ಅಯೋಧ್ಯೆಂದ ತಿರುಗಿ ಮನಗೆ ಹೆರಟ ರಾಮಸೇವಕರು ಇತ್ತಿದ್ದವಡ.
ಅವು – ಅಯೋಧ್ಯೆಲಿ ಆಯೋಜನೆ ಮಾಡಿದ ವಿಶ್ವಹಿಂದು ಪರಿಷತ್ತಿನ ಒಂದು ಸಮಾವೇಶಕ್ಕೆ ಹೋಗಿ ಬತ್ತವು.

ಆ ರೈಲಿಲಿ ಕರಸೇವಕರು ಇಪ್ಪದರ ನಿಗಂಟುಮಾಡಿಗೊಂಡ ಕೆಲವು ಧರ್ಮಾಂಧ ವಿದ್ರೋಹಿ ಮಾಪಳೆಗೊ ಕೇನು ತುಂಬ ಪೆಟ್ರೋಲು ತೆಗದುಮಡಗಿ ತೆಯಾರು ಮಡಗಿತ್ತಿದ್ದವಡ.
ರೈಲು ಬಂದು ಬಂದು ಗೋಧ್ರಾ ಊರಿಂಗೆ ಎತ್ತುವಗ ಅದಾ, ಅವರ ಧರ್ಮಾನುಸಾರ ಮಾಡ್ಳೆಡಿಗಾದ ಅತ್ಯಂತ ನಾಗರೀಕ ಕೆಲಸ ಮಾಡಿಬಿಟ್ಟವು!

ರೈಲಿನ ಬೋಗಿಗೆ ಹೆರಾಂದ ಬಾಗಿಲು ಹಾಕಿದವು,
ಬೀಗ ಜಡುದವು,
ಕಿಟುಕಿಲೆ ಆಗಿ ಬಸಲ್ಲನೆ ಪೆಟ್ರೋಲು ಎರದು,
ಕಿಚ್ಚು ಕೊಟ್ಟು ಓಡಿದವು. :-(
~

ನೋಡ್ತಾ ನೋಡ್ತಾ ಇದ್ದ ಹಾಂಗೆ, ಒಳವೇ ಇದ್ದ ಎಷ್ಟೋ ಅಣ್ಣಂದ್ರು – ಅಕ್ಕಂದ್ರು- ಅಮ್ಮಂದ್ರು ಕಿಚ್ಚಿನ ಭಾಗ ಆಗಿ ಹೋದವು.
ಚೈನು ಎಳದು ರೈಲು ನಿಲ್ಲುಸುಲೆ ಹೆರಟರೂ ಗುಣ ಆಯಿದಿಲ್ಲೆಡ, ಎಂತಕೆ ಹೇಳಿರೆ ಚೈನು ಮದಲೇ ತುಂಡುಮಾಡಿತ್ತಿದ್ದವು.
ರೈಲು ಹೋವುತ್ತಾ ಇತ್ತು, ಗಾಳಿಗೆ ಕಿಚ್ಚು ಬೇಗ ದೊಡ್ಡ ಆತು.
ಅತ್ಲಾಗಿತ್ಲಾಗಿಯಾಣ ಬೋಗಿಗೊಕ್ಕುದೇ ಹಿಡ್ಕೊಂಡತ್ತು.
ಬೋಗಿಗೆ ಬಾಗಿಲು! ಕಿಟುಕಿಂದ ಹಾರ್ಲೆ ಜಾಗೆ ಇಲ್ಲೆ. ಅಂಬೆರ್ಪು ಬಾಗಿಲಿಂದ ಕುತ್ತಕಂಡೆ ಹಾರ್ಲೆ ರೈಲು ಜೋರು ಹೋವುತ್ತಾ ಇದ್ದು!
ಎಂತರ ಮಾಡುದು?
ಮಾಡುದೆಂತ – ರಾಮಸ್ಮರಣೆ ಮಾಂತ್ರ! :-(
ರಾಮಂಗಾಗಿಯೇ ಅಯೋಧ್ಯಗೆ ಹೋದ ರಾಮಸೇವಕರು ರಾಮನ ಪಾದಕ್ಕೇ ಹೋದವು.
ಬಾಕಿ ಒಳುದ ಎಡಿಗಾದಷ್ಟು ಜೆನ ಜೀವ ಒಳಿಶಿಗೊಂಡು ರಾವಣ ಸಂಹಾರಕ್ಕೆ ತಯಾರಾದವು.

ಪಾಲಾರಣ್ಣ ಇದರ ಹೇಳುವಗ ಗುಣಾಜೆಕುಂಞಿಗೆ ಒಳ್ಳೆತ ಪಿಸುರು ಬಂದು ಅಭಿಮನ್ಯು ನಮುನೆ ಕಂಡುಗೊಂಡಿತ್ತು!
ಕಡ್ಳೆ ಅದಾಗಲೇ ಕೊಟ್ಟಾದ ಕಾರಣ ಪುನಾ ತೆಕ್ಕೊಂಡಿದನಿಲ್ಲೆ, ಅಷ್ಟೆ.
~

ಪೆಟ್ರೋಲು ಎರದರೆ ಒಂದು ಬೋಗಿ ಹೊತ್ತುಗು, ನಿಜ.
ಆದರೆ ಇಡೀ ಸಮುದಾಯವನ್ನೇ, ಇಡೀ ಸಮುದಾಯದ ನಂಬಿಕೆಯನ್ನೇ, ಸಮುದಾಯದ ಹೋರಾಟವನ್ನೇ ಹೊತ್ತುಸಲೆ ಎಡಿಗೋ?
ಎಬೆ, ಸಾಧ್ಯವೇ ಇಲ್ಲೆ!
ಹಾಂಗೇ ಆತುದೇ.
ಇಡೀ ಊರಿಂಗೆ ಊರೇ ಒರಕ್ಕಿಂದ ಎದ್ದತ್ತು.
ಪೆಟ್ರೋಲು ತಂದವ°, ಪೆಟ್ರೋಲು ಎರದವ°, ಬಾಗಿಲು ಹಾಕಿದವ°,ಬೀಗ ಹಾಕಿದವ°, ಕಿಚ್ಚು ಕೊಟ್ಟವ° – ಎಲ್ಲರನ್ನುದೇ ಹುಡ್ಕಲೆ ಸುರು ಮಾಡಿದವು. ರಜ ಗಲಾಟೆ ಆತು, ಪೆಟ್ಟುಗುಟ್ಟು ಆತು.
ಒಂದರಿಂಗೆ ಸಮಾಜ ಮಡೀ ಆತು.
ಮುಳಿಯಬಾವ ಬೌಶ್ಶ ಊರಿಂಗೆ ಬಂದಾಗಿತ್ತೋ ಸಂಶಯ, ಆ ಸಮೆಯಲ್ಲಿ!
ಅಷ್ಟಪ್ಪಗ ಶಾಂತಿ ಶಾಂತಿ ಹೇಳಿಗೊಂಡು ಸುಮಾರು ಜೆನ ಬಂದವು, ಹಿಂದುಗೊ ಅಶಾಂತಿ ಮಾಡುದರ ಬಗ್ಗೆ ಲೋಕ ಇಡೀ ಶುದ್ದಿ ಮಾಡಿದವಡ! ಅದು ಬೇರೆ!!
ಆ ಬಗ್ಗೆ ಪಾಲಾರಣ್ಣ ತುಂಬ ಹೇಳಿದ°, ಅದರ ಬಗ್ಗೆ ಬರದರೆ ಅದುವೇ ಒಂದು ರಾಜಕೀಯ ಶುದ್ದಿ ಅಕ್ಕು.
ನೀರ್ಕಜೆ ಅಪ್ಪಚ್ಚಿಯೋ, ಪೆರ್ಲದಣ್ಣನೋ, ಗುಣಾಜೆಕುಂಞಿಯೋ ಮಣ್ಣ ಆ ಶುದ್ದಿ ಹೇಳುಗು ನಿದಾನಕ್ಕೆ.
~

ಸುಮಾರು ಒಂಬತ್ತೊರಿಶ ನೆಡದ ದೀರ್ಘ ವಿಚಾರಣೆಲಿ ಮೊನ್ನೆ ಸತ್ಯ ಹೆರಬಿದ್ದತ್ತಾಡ!
ಮೂವತ್ತೊಂದು ಜೆನ ಸೇರಿ ಕಿಚ್ಚುಕೊಟ್ಟದಪ್ಪು, ಪೆಟ್ರೋಲು ಎರದ್ದಪ್ಪು, ಬಾಗಿಲು ಹಾಕಿದ್ದಪ್ಪು, ಬೀಗ ಹಾಕಿದ್ದಪ್ಪು – ಹೇಳಿ.
ಈ ಸತ್ಯ ಕೋರ್ಟಿಂಗೆ ಮೊನ್ನೆ ಗೊಂತಾದ್ದು, ಆದರೆ ಗುಣಾಜೆಕುಂಞಿಗೆ ಒಂಬತ್ತೊರಿಶ ಮೊದಲೇ ಗೊಂತಾಗಿತ್ತು.
ಅವಂಗೆ ಗೊಂತಾದ ಶುದ್ದಿಯೇ ಈಗ ಕೋರ್ಟಿಂಗೆ ಗೊಂತಾದ ಕಾರಣ ಅವಂಗೆ ಅಷ್ಟೊಂದು ಕೊಶಿ!!
~
ಮಾತಾಡಿಗೊಂಡು ಇದ್ದ ಹಾಂಗೇ ಹೋರ್ನು ಬಡ್ಕೊಂಡು ಬುರುಬುರುನೆ ಬಂದೇಬಿಟ್ಟತ್ತು ಬೆಂಗುಳೂರು ಬಸ್ಸು!
ಅಟ್ಟಿನಳಗೆಯಷ್ಟಕೆ ಎರಡು ಬೇಗಿನ ಎತ್ತಿ ಬಸ್ಸಿನೊಳಂಗೆ ಹಾಕಿಕ್ಕಿ, ಬೆಂಗುಳೂರಿನ ಹೊಡೆಂಗೆ ದಿಬ್ಬಾಣ ಹೆರಟ°!
ಒಪ್ಪಣ್ಣನನ್ನೂ ಒಂದರಿ ಬೆಂಗುಳೂರಿಂಗೆ ಬಪ್ಪಲೆ ಹೇಳುಲೆ ಮರದ್ದನಿಲ್ಲೆ!
ಈಗ ಆಗ, ಇನ್ನೊಂದರಿ ಬೆಂಗುಳೂರಿಂಗೆ ಹೋಯೆಕ್ಕು, ಪುರುಸೋತಿಲಿ – ಮಳೆಗಾಲ. ಅದಿರಳಿ
~

ಬೌಶ್ಷ ಬಸ್ಸಿಲಿ ಸಮಗಟ್ಟು ಒರಕ್ಕೇ ಬಂದಿರ ಅವಂಗೆ, ಅಲ್ಲದೋ?
ಸುಗಮಲ್ಲಿ ಅಲ್ಲದ್ದರೂ ಒರಕ್ಕು ಬಪ್ಪದು ಕಮ್ಮಿ ಅಡ, ಅದರ ಮೇಗೆ ಒಂಬತ್ತೊರಿಶ ಒರಕ್ಕು ಕೆಟ್ಟು ಕಾದ್ದಕ್ಕೆ ಉತ್ತರಬಂದ ಕೊಶಿ!
ಮರದಿನ ಬೆಂಗುಳೂರಿಂಗೆ ಎತ್ತಿದ ಕೂಡ್ಳೇ, ದ್ರಾಕ್ಷೆಗೊಂಚಲಿನ ದೊಡ್ಡ ಕಟ್ಟ ತಂದು ಎಲ್ಲೋರಿಂಗೂ ಕೊಶಿ ಹಂಚಿಗೊಂಡಿದನಡ, ಎಡಪ್ಪಾಡಿಬಾವ ಹೇಳಿದ°.
ಅಷ್ಟು ಮಾಡದ್ದರೆ ಅವಂಗೆ ಸಮದಾನವುದೇ ಆವುತಿತಿಲ್ಲೆ, ಅದು ಬೇರೆ.
~
ಗೋಧ್ರಾ ಹತ್ಯೆದು ಮಾಂತ್ರ ತೀರ್ಪು ಬಂದದು, ಅದರಿಂದ ಮತ್ತೆ ಆದ ಗಲಾಟೆಯ ಬಗ್ಗೆ ಎಂತದೂ ತೀರ್ಮಾನ ಬಯಿಂದಿಲ್ಲೆ.
ಬಂದ ಮತ್ತೆ ದೊಡ್ಡ ಗಲಾಟೆ ಅಪ್ಪಲಿದ್ದು – ಹೇಳಿ ಪಾಲಾರಣ್ಣ ನೆಂಪು ಹೇಳಿದ°.
ಅಷ್ಟಪ್ಪದ್ದೇ, ಬರಕ್ಕನೆ ಬೈಕ್ಕು ಎಳಗುಸಿ ಇನ್ನೊಂದರಿ ಕಾಂಬ° ಹೇಳಿಗೊಂಡು ಅವನ ಊರಿನ ಹೊಡೆಂಗೆ ಹೆರಟ°.
ಆನಂದನ ಅಂಗುಡಿಂದ ಛಾಯದೊಡಿ ಕಟ್ಟ ತೆಕ್ಕೊಂಡು ಬೈಲಿಂಗೆ ಇಳುದೆ.
~
ಕಸಂಟಿದ್ದು ಕಡ್ಳೆಯೋ, ಅಲ್ಲ ಹೆರಾಣ ಮಸಾಲೆಯೋ ಹೇಳಿ ಕನುಪ್ಯೂಸು ಬಪ್ಪಲೆ ಸುರು ಆತು ಒಪ್ಪಣ್ಣಂಗೆ!
ರಾಜಕೀಯ ನವಗರಡಿಯ. ಆದರೆ ಚಿಂತನೆಗೊ ಅರ್ತ ಅಕ್ಕು.
ನೆಡಕ್ಕೊಂಡು ಹೋಪಗಳೂ ಇದೇ ಆಲೋಚನೆ!
ಯಬ, ಬೋಗಿಯೊಳದಿಕ್ಕೆ ಇದ್ದ ಹೆಮ್ಮಕ್ಕೊ, ಅವರ ಒಟ್ಟಿಂಗೆ ಆಟಾಡುವ ಅವರ ಮಕ್ಕೊ..
ಎಲ್ಲೋರುದೇ ಇದ್ದ ಹಾಂಗೇ.. ಬಾಗಿಲು ಹಾಕಿ, ಬೀಗ ಜಡುದು,
ಹೆರಂದ ತಂಪು ಪೆಟ್ರೋಲು ಎರದು, ಬೆಶಿ ಕಿಚ್ಚುಕೊಟ್ಟು..
ಯಬ!
ಎಂತ ಕ್ರೂರತೆ!

ವಿಶೇಷ – ಹೇಳಿತ್ತುಕಂಡ್ರೆ, “ಇದರ ಆರೂ ಮಾಡಿದ್ದಲ್ಲ” ಹೇಳಿ ಲಲ್ಲು ಹೇಳಿದ್ದಡ..!
ಆರಾರು ಮಾಡದ್ದೆ ಹಾಂಗೆ ಅಪ್ಪಲಿದ್ದೋ?  – ಆದರೂ ಆರೋ ಮಾಡಿದ್ದು ಹೇಳಿ ತೀರ್ಮಾನ ಅಪ್ಪಲೆ ಒಂಬತ್ತೊರಿಶ ಬೇಕಾತದ!
ಅದರ್ಲಿಯೂ ಬರೇ ಮೂವತ್ತು ಜೆನಕ್ಕೆ ಮಾಂತ್ರ ಶಿಕ್ಷೆ ಅಡ, ಒಳುದೋರಿಂಗೆ “ರುಜುವಾತಿಲ್ಲೆ” ಹೇಳಿ ಬಿದ್ದು ಹೋತಡ.

ಸರಿಯಾದ ತೀರ್ಮಾನ ಕೊಡ್ಳೆ ನಮ್ಮ ಕೋರ್ಟಿಂದ ಆಯಿದಿಲ್ಲೆ, ಮೇಗೆ ಇಪ್ಪ ಭಗವಂತನ ಕೋರ್ಟು ಇತ್ಯರ್ಥ ಮಾಡುಗು!
ಆದರೆ ಅದು ಯೇವಕಾಲಕ್ಕೋ ಏನೋ!
~
ಹೇಳಿದಾಂಗೆ,
ಕೋರ್ಟು ಹಾಂಗೆ ಹೇಳಿದ್ದು ಗುಣಾಜೆಕುಂಞಿಗೆ ಗೊಂತಾದ ಮರದಿನ ಪೇಪರಿನೋರಿಂಗೂ ಗೊಂತಾಯಿದು ಆ ಶುದ್ದಿ.
ಗೋಧ್ರಾ ಹತ್ಯೆ ತೀರ್ಮಾನ ಬಂದದರ ಎಲ್ಲಾ ಪೇಪರಿನೋರು ದೊಡ್ಡಕ್ಷರಲ್ಲಿ ಬರದಿತ್ತಿದ್ದವು.
ತರವಾಡುಮನೆಲಿ ಹೊಸ್ದಿಂಗತ ಓದುವಗ ಪಾಲಾರಣ್ಣ ಹೇಳಿದ್ದು ಕಣ್ಣಿಂಗೆ ಕಟ್ಟಿದ ಹಾಂಗೆ ಆಗಿ ಹೋತು! :-(
~
ಗೋಧ್ರಾ ಹತ್ಯೆ ತಪ್ಪು ಹೇಳಿ ಕೋರ್ಟು ಹೇಳಿತ್ತು.
ಅಮಾಯಕ ಜೆನಂಗಳ ಬೋಗಿ ಒಳದಿಕ್ಕೆ ಸಿಕ್ಕುಸಿ, ಹೆರಂದ ಕಿಚ್ಚುಹಾಕಿ ಅಲ್ಲೇ ನಾಶ ಮಾಡಿದ್ದು!
ಇದು ತಪ್ಪಡ..
ಭಾಗಿ ಆದೋರ ಬಗ್ಗೆ, ರುಜುವಾತು ಇಪ್ಪೋರ ಬಗ್ಗೆ, ಪಿತೂರಿಯ ಬಗ್ಗೆ – ಎಲ್ಲವೂ ತೀರ್ಮಾನ ಆತು ಮೊನ್ನೆ.

ದನ ಇಕ್ಕುಳಲ್ಲಿ - ಸಮಾಜ ಇಕ್ಕಟ್ಟಿಲಿ

ಅಂಬಗ ಗೋಹತ್ಯೆ?
ಅಮಾಯಕ ದನಂಗಳ ಕಟ್ಟಿಹಾಕಿ ಹತ್ಯೆ ಮಾಡ್ತಲ್ಲದೋ?
ಅದರ ತೀರ್ಮಾನ ಅಪ್ಪದು ಯೇವತ್ತು?
ಎಷ್ಟು ಜೆನ ಭಾಗಿ ಆಗಿರ್ತವು?
ಆರದ್ದೆಲ್ಲ ರುಜುವಾತಿಕ್ಕು? ಶ್ರೀರಾಮನೇ ಬಲ್ಲ!
~

ಧರ್ಮ ಸರಿ ಇಲ್ಲದ್ದರೂ, ಧರ್ಮದ ಅನುಯಾಯಿಗೊ ಸರಿ ಇಲ್ಲದ್ದರೂ – ಪ್ರಯೋಜನ ಒಂದೇ!
ಮಸಾಲೆ ಕಸಂಟಿರೂ, ಕಡ್ಳೆ ಕಸಂಟಿರೂ – ಗುಣ ಒಂದೇ – ಹೇಳ್ತ ಹಾಂಗೆ.
ಆಧುನಿಕ ಸಮಾಜಲ್ಲಿ ಹೊಂದಿಗೊಂಡು ಹೋವುತ್ತ ಮನಸ್ಸಿಪ್ಪ ಸುಂದರ ಧರ್ಮ ಇಂದ್ರಾಣ ದಿನಲ್ಲಿ ಅಗತ್ಯ ಇದ್ದು.
ಅದೆಡಿಯದ್ರೆ, ಐದು ಸರ್ತಿ ನೆಮಾಜು ಮಾಡಿ ನೆಲನಕ್ಕಿರೂ ಒಂದೇ, ಮೆಕ್ಕಕ್ಕೆ ಹೋದರೂ ಒಂದೇ!
ಉಪದ್ರ ಉಪದ್ರವೇ!

ಒಂದೊಪ್ಪ: ಗೋಧ್ರ ಹತ್ಯೆ ತೀರ್ಮಾನ ರಾಮನ ಪರವಾಗಿ ಕೋರ್ಟುಕೊಟ್ಟತ್ತು. ಗೋಹತ್ಯೆಯ ತೀರ್ಮಾನ ಕೋರ್ಟಿನ ಪರವಾಗಿ ರಾಮನೇ ಕೊಡ್ಳಿ. ಅಲ್ಲದೋ?

ಸೂ:

 • ಗೋದ್ರ ಘಟನೆಲಿ ಎಂತೆಂತ ಆತು ಹೇಳ್ತರ ಸಮಗ್ರ ವಿವರಣೆ: (ಇಲ್ಲಿದ್ದು)
 • ಪಟ ಇಂಟರುನೆಟ್ಟಿಂದ
ಗೋಧ್ರಾ ಹತ್ಯೆ ತೀರ್ಪು ಬಪ್ಪಗ ಗೋಹತ್ಯೆಯೂ ನೆಂಪಾತು!, 5.0 out of 10 based on 5 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 55 ಒಪ್ಪಂಗೊ

 1. ಭೂಪಣ್ಣ
  ಭೂಪ

  ಏನ್ನ ಫುಲ್ ಓಟು ನರೆ೦ದ್ರ ಮೋದಿಗೆ.. ಅವನ ಹಾ೦ಗಿಪ್ಪೊರು ಇಪ್ಪ ಕಾರಣ ಇನ್ನೂ ಹಿ೦ದುಗೊ ರಜ ಧೈರ್ಯಲ್ಲಿ ಇಪ್ಪಲಾವುತ್ಥು. ಇಲ್ಲದ್ದರೆ ಇಶ್ತೊತ್ಥಿ೦ಗೆ ನಮ್ಮ ಮಾರಾಟ ಮಾಡಿ ಆವುಥಿತ್ಥು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಏ ಭೂಪ ಭಾವಾ,
  ಒಳ್ಳೆದು,ಇನ್ನು ಅರ್ಧ ಓಟು ಹಾಕಿಕ್ಕೆಡಾ..

  [Reply]

  VA:F [1.9.22_1171]
  Rating: 0 (from 0 votes)
  ಒಪ್ಪಣ್ಣ

  ಒಪ್ಪಣ್ಣ Reply:

  ಭೂಪಣ್ಣಾ..
  ಬೈಲಿಂಗೆ ಸ್ವಾಗತ!

  ಒಳ್ಳೊಳ್ಳೆ ಚಿಂತನೆಗೊ ನಿಂಗಳ ಒಪ್ಪಲ್ಲಿ ಕಾಣ್ತು.
  ಇದರನ್ನೇ ವಿಸ್ತರುಸಿ ಬೈಲಿಲಿ ಶುದ್ದಿ ಹೇಳುಲಾಗದೋ? :-)

  [Reply]

  VA:F [1.9.22_1171]
  Rating: 0 (from 0 votes)
 2. Shivakrishna

  ಧರ್ಮ ಕ್ಕೆ ಯಾವಾಗಲೂ ಸೋಲಿಲ್ಲೆ ಹೇಳುದು ಸತ್ಯ

  [Reply]

  VA:F [1.9.22_1171]
  Rating: 0 (from 0 votes)
 3. ಶಾಂತತ್ತೆ

  shuddi odi bejaraaathu.
  vaarakkondu shuddi sikkuttu oppannange.kambale sikkippaga
  naadtana shuddi enthara heli kelire ummappa heludu.
  anthu olle vishya barettanne.
  ondoppa sooperodi koshi aathu.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿವಾಣಿ ಚಿಕ್ಕಮ್ಮಬಟ್ಟಮಾವ°ಮಂಗ್ಳೂರ ಮಾಣಿಮಾಲಕ್ಕ°ಎರುಂಬು ಅಪ್ಪಚ್ಚಿಡಾಗುಟ್ರಕ್ಕ°ರಾಜಣ್ಣಕಜೆವಸಂತ°ವೇಣೂರಣ್ಣಕೇಜಿಮಾವ°ಸರ್ಪಮಲೆ ಮಾವ°ಅಕ್ಷರದಣ್ಣದೊಡ್ಡಭಾವಪೆಂಗಣ್ಣ°ಗಣೇಶ ಮಾವ°ಚೂರಿಬೈಲು ದೀಪಕ್ಕನೀರ್ಕಜೆ ಮಹೇಶದೊಡ್ಡಮಾವ°ವೆಂಕಟ್ ಕೋಟೂರುಅಕ್ಷರ°ಶ್ರೀಅಕ್ಕ°ದೊಡ್ಮನೆ ಭಾವಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ