ಶಿವರಾತ್ರಿ ದಿನವೇ ಶಿವ ಪಾದ ಸೇರಿದ ಶಿವನ ವಾಹನನ ಶುದ್ದಿ..!

March 4, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಳ್ಳಮೂಲೆ ಮಾವ° ಈಗ ಇಂಟರ್ನೆಟ್ಟಿಲಿ ತುಂಬ ಸಕ್ರಿಯ.
ಅವಕ್ಕೆ ಯೇವದಾರು ಕೆಲಸ ಇಷ್ಟ ಆದರೆ, ಅವರ ಒಟ್ಟಿಂಗೆ ಇಡೀ ಸಮಾಜವನ್ನೇ ಬರುಸದ್ದೆ ಬಿಡವು – ಅದು ಅವರ ಚಾಕಚಕ್ಯತೆ, ಸಂಘಟನಾ ಚಾತುರ್ಯ. ಈಗಳೂ ಹಾಂಗೇ ಆಯಿದು. ಮೊನ್ನೆ ಬೆಂಗ್ಳೂರು ಮಠಕ್ಕೆ ಹೋಗಿಪ್ಪಾಗ – ಇಂಟರ್ನೆಟ್ಟಿಲಿ ನಮ್ಮೋರು ಸಕ್ರಿಯ ಆಯೇಕು – ಹೇದು ಕೇಳಿದವಾಡ. ಅದರ ಕುರಿತು ಸಂಪೂರ್ಣ ಮಾಹಿತಿ ಪಡದ ಬಳ್ಳಮೂಲೆ ಮಾವ° ಈಗ ಮಂಡಲ – ಮಂಡಲ, ವಲಯ – ವಲಯಂಗಳಲ್ಲಿ ಜೆನರ ಎಳಗುಸಿಗೊಂಡು ಇದ್ದವಾಡ.
ಆ ಪ್ರಕಾರ ಹಲವಾರು ಜೆನಂಗೊ ಬಂದು ಅಂತರ್ಜಾಲಲ್ಲಿ ಸಕ್ರಿಯ ಆಗಿದ್ದವಾಡ.
ಎಲ್ಲೋರಿಂಗೂ ಗುರುಗಳನ್ನೂ, ಮಠವನ್ನೂ, ಗೋಕರ್ಣ ಇತ್ಯಾದಿ ದೇವಸ್ಥಾನದ ಆಡಳ್ತೆಯನ್ನೂ – ಕಾಂಬಲೆ ಎಡಿತ್ತಾಡ. ಬಳ್ಳಮೂಲೆ ಮಾವನ ಉತ್ಸಾಹಕ್ಕೆ ಅದೂ ಒಂದು ಕಾರಣ. ಹಾಂಗೆ, ಒಪ್ಪಣ್ಣಂಗೂ ಒಂದು ಇಂಟರ್ನೆಟ್ಟಿಲಿ ಪುಟ ಆತು. ಅದಿರಳಿ.ಶುದ್ದಿಗೊ ಎಲ್ಲ ರಪರಪನೆ ಗೊಂತಪ್ಪದೂ ಒಂದು ಗಮ್ಮತ್ತೇ ಅಪ್ಪೋ.
ರಾಮಾಶ್ರಮಲ್ಲಿ ಸೀತಾ ಜಯಂತಿ, ಬೆಂಗ್ಳೂರು ಮಂಡಲಲ್ಲಿ ಸಭೆ, ಗೋಕರ್ಣಲ್ಲಿ ಶಿವರಾತ್ರಿ – ಹೀಂಗಿರ್ಸ ಶುದ್ದಿಗೊ ಹಲವು ಕೇಳುತ್ತು ಅಲ್ಲಿ. ಕೂಡ್ಳೇ ಕೂಡ್ಳೇ ಗೋಕರ್ಣಂದ ಹೆರಡ್ತು, ಬೆಂಗ್ಳೂರಿಂಗೆ ಎತ್ತುತ್ತು, ಅಲ್ಲಿಂದ ಇಡೀ ಲೋಕಕ್ಕೇ ಎತ್ತುತ್ತು. ಬೈಲಿಂಗೂ ಎತ್ತುತ್ತು!
ಯಬ್ಬಾ ಮೇಘ ಸಂದೇಶವೇ – ಅದರ ವೇಗವೇ!
~
ಗೋಕರ್ಣಲ್ಲಿ ಮೊನ್ನೆ ಶಿವರಾತ್ರಿ ಆಚರಣೆ ಸುರು ಆತು.
ನಮ್ಮ ಮಠಕ್ಕೆ ಆ ದೇವಸ್ಥಾನದ ಸೇವಾಭಾಗ್ಯ ಪುನಾ ಸಿಕ್ಕಿದ ಮತ್ತೆ ಅತ್ಯಂತ ಚೆಂದ – ಗಂಭೀರಕ್ಕೆ ಕಾರ್ಯಕ್ರಮ ನೆಡೆತ್ತಾ ಬತ್ತಾ ಇಪ್ಪದು ಕೊಶಿಯ ಸಂಗತಿ. ಸಾವಿರಾರು ಲಕ್ಷಾಂತರ ಜೆನಂಗೊ ಕ್ಷೇತ್ರಕ್ಕೆ ಬಂದು ಮಹಾಬಲನ ಸೇವೆ ಮಾಡಿ ಪುನೀತರಾವುತ್ತಾ ಇದ್ದವು.
ಆ ಪ್ರಕಾರ ಈ ಒರಿಶದ ಶಿವರಾತ್ರಿಯೂ ನೆಡೆತ್ತಾ ಇದ್ದು.
ಗೆಣವತಿಗೆ ಪ್ರಾರ್ಥನೆ ಮಾಡಿದ್ದೂ ಆತು.
ನಂದಿ ಧ್ವಜ ಆರೋಹಣ ಮಾಡಿದ್ದೂ ಆತು.
ರಾಮಾ ಜೋಯಿಶಜ್ಜ° ಬಂದು ಕಾರ್ಯಕ್ರಮಂಗಳ ಉದ್ಘಾಟನೆ ಮಾಡಿದ್ದೂ ಆತು.
ಕಾರ್ಯಕ್ರಮ ಸುರು ಆದ್ದೂ ಆತು.

ಅಷ್ಟಪ್ಪಗ ಒಂದು ಶುದ್ದಿ ಬಂತು. ಅದೆಂತರ?
ಗೋಕರ್ಣದ ರಾಜನಂದಿ ತೀರಿತ್ತಡ – ಹೇದು.
ಶಿವನ ಹಬ್ಬದ ಶಿವರಾತ್ರಿಯ ದಿನವೇ ಶಿವನ ನಂದಿಯ ಕೈಲಾಸ ಯಾತ್ರೆ!
~
ಶಿವನ ವಾಹನ ನಂದಿ. ಪ್ರತಿ ದೇವಸ್ಥಾನಲ್ಲಿಯೂ – ಅದರ್ಲಿಯೂ ವಿಶೇಷವಾಗಿ ಶಿವನ ದೇವಸ್ಥಾನಲ್ಲಿ ನಂದಿ ಇದ್ದೇ ಇರ್ತು.
ದೇವರ ಶುಭ ಕಾರ್ಯಕ್ರಮಲ್ಲಿ ಈ ನಂದಿ ಉಪಸ್ಥಿತಿ ಇರ್ಸು ನವಗೆ ಗೊಂತಿದ್ದು.
ಪ್ರತ್ಯಕ್ಷ ದೇವರು ಹೇದು ನಾವು ಪೂಜಿಸುದು ದನುವಿನನ್ನೇ ಅಲ್ದೋ; ದೇವಸ್ಥಾನಲ್ಲೇ ಇರ್ಸ ಈ ನಂದಿ ಅಂತೂ – ಪ್ರತ್ಯಕ್ಶ ಪ್ರತ್ಯಕ್ಷ ದೇವರು.
ಒಂದು ನಂದಿ ಕಾಲ ಆದ ಮೇಗೆ ಇನ್ನೊಂದು ನಂದಿ ನಿಯುಕ್ತಿ ಆವುತ್ತು; ಅದು ಅದರ ಜೀವಮಾನ ಪೂರ್ಣವಾಗಿ ಜೀವನ ಸಮರ್ಪಣೆ ಮಾಡ್ತು.

ಎಲ್ಲ ದೇವಸ್ಥಾನದ ಹಾಂಗೆ ಗೋಕರ್ಣ ದೇವಸ್ಥಾನಕ್ಕೂ ನಂದಿ ಇರ್ತು.
ನಿನ್ನೆ ಒರೆಂಗೆ ಇದ್ದ ನಂದಿ, ಇಂದಿಂದ ಇಲ್ಲೆ – ಹೇಳ್ತದೇ ಇಂದ್ರಾಣ ಶುದ್ದಿ!

ಅಪ್ಪಡ – ಗೋಕರ್ಣ ದೇವಸ್ಥಾನಕ್ಕೆ ನಿಯುಕ್ತಿ ಆಗಿದ್ದ ರಾಜನಂದಿ – ಶಿವರಾತ್ರಿಯ ಧ್ವಜಾರೋಹಣ ಕಂಡಿಕ್ಕಿ, ಶಿವರಾತ್ರಿ ಆರಂಭವ ನೋಡಿಕ್ಕಿ – ಮೋಕ್ಷದಾರಿಲಿ ನೆಡದತ್ತು.
ಶಿವನ ದೇವಸ್ಥಾನಲ್ಲಿಯೇ, ಶಿವರಾತ್ರಿಲೇ, ಶಿವನ ವಾಹನ ಆಗಿದ್ದದೇ – ಶಿವನ ಪಾದ ಸೇರೆಕ್ಕಾರೆ – ಎಂತಾ ಪುಣ್ಯವಂತ ಆಗಿಕ್ಕು ಅದು!
~

ಅದು ಗೋಕರ್ಣ ದೇವಸ್ಥಾನಕ್ಕೆ ಬಂದ ಕತೆಯೂ ಅಷ್ಟೇ ಕುತೂಹಲಕಾರಿ ಆಗಿ ಇದ್ದಾಡ; ಬಳ್ಳಮೂಲೆ ಮಾವ° ಹೇಳಿದವು.
ಅದೆಂತರ?:
ಒಂದರಿ ಬೆಳಗಾವಿ ಹೊಡೆಂದ ವಾಹನಲ್ಲಿ ಕೆಅಲ್ವು ದನಗಳ ದಾಖಲೆ ಇಲ್ಲದ್ದೆ ಭ್ಹಟ್ಕಳ ಹೊಡೆಂಗೆ ಕೊಂಡು ಹೋಗಿಂಡಿದ್ದವು – ಹೇದು ಸೂಚನೆ ಸುದ್ದಿ ಬಂತಡ, ನಮ್ಮ ಮಠದ ಕಾಮದುಘಾ ವಿಭಾಗಕ್ಕೆ.
ಭಟ್ಕಳಕ್ಕೆ ಹೋಪದು ಹೇದ ಮತ್ತೆ ಬೇರೆ ಎಂತ ದಾಖಲೆ ಬೇಕು – ಕೊಲೆಗಡುಕರ ಕೈಗೇ ಹೋವುಸ್ಸು. ಕಾಸ್ರೋಡಿನ ಹಾಂಗೆ.
ಅದಿರಳಿ.
ಅಷ್ಟಪ್ಪಗ ಸೂಕ್ಷ್ಮಗ್ರಾಹಿಗಳೂ, ಮುತ್ಸದ್ಧಿಗಳೂ ಆದ ಕಾಮದುಘಾ ಸಂಚಾಲಕರು – ಮತ್ತೆ ಕೆಲವು ಜೆನ ಮುಂದಾಳುಗಳ ಸೇರುಸಿಗೊಂಡು ಚೆಕ್-ಪೋಷ್ಟಿಂಗೆ ಹೋದವಾಡ.
ಪೋಲೀಸರ ಮನವೊಲಿಸಿ – ಆ ವಾಹನವ ಹಿಡುಶಿದವಡ.
ನೋಡಿರೆ – ಹಸುಳೆ ಕಂಜಿಗಳೂ, ಮಾತ್ರುತ್ವದ ಉಂಬೆ ದನಗಳೂ.
ಅಯ್ಯೋ – ಚೂರು ವಿತ್ಯಾಸ ಆಗಿದ್ದರೂ ಆ ದನುಗಳ ಜೀವಕ್ಕೆ ಅಪಾಯ ಇದ್ದತ್ತು.
ಅಂತೂ ಒಳ್ಕೊಂಡವು.
ಮಠದ ಸುಪರ್ದಿಗೆ ಬಂದದು ಮತ್ತೆ – ಹೊಸಾಡ ಗೋಶಾಲೆಗೆ ತಂದವಾಡ.
~
ಹೊಸಾಡ ಗೋಶಾಲೆ ಕುಮಟಾ ದ ಹತ್ರೆ ಇಪ್ಪದು ಇದಾ. ಅಲ್ಲಿಗೆ ಬಂದ ಕಂಜಿಗಳ ಪೈಕಿ ಒಂದು ಹೋರಿ ಕಂಜಿ ಬಹು ಆಕರ್ಷಣೀಯವೂ, ದಷ್ಟ ಪುಷ್ಟವೂ ಇರ್ಸು ಜೆನಂಗಳ ಕಣ್ಣಿಂಗೆ ಕಂಡತ್ತು.
ಅದೇ ಸಮೆಯಲ್ಲಿ – ಗೋಕರ್ಣಕ್ಕೆ ಹೊಸ ನಂದಿಯ ಏರ್ಪಾಡುದೇ ಆಯೇಕು – ಹೇದು ಪರಿಸ್ಥಿತಿ ಬಂತು.
ಇದೆರಡೂ ವಿಷಯವ ಸರಿಯಾಗಿ ತುಲನೆ ಮಾಡಿದ ನಮ್ಮ ಗುರುಗೊ – ಕುಮಟೆ ಗೋಶಾಲೆಲಿ ಇರ್ಸ ಆ ಕಂಜಿಯನ್ನೇ – ಗೋಕರ್ಣದ ರಾಜನಂದಿ ಪೀಠಕ್ಕೆ ನಿಯೋಜಿಸಿದವು.
ಎಲ್ಲಿ ಹುಟ್ಟಿದ್ದದೋ, ಎಲ್ಲಿ ಬೆಳದ್ದದೋ, ಯೇವ ಕಾರಣಕ್ಕೆ ಭಟ್ಕಳ ದಾರಿಗೆ ಹೆರಟದೋ, ಯೇವ ಸೂಚನೆಲಿ ಅದು ಬದ್ಕಿ ಒಳುದ್ದದೋ – ಎಂತದೇ ಆದರೂ, ಈಗ ಅದಕ್ಕೆ ಸಿಕ್ಕಿದ ಸ್ಥಾನ ಮಾಂತ್ರ ಅಮೋಘ, ಆಶ್ಚರ್ಯಕರ.
ಅನಾಥ ಭಾವನೆ ಹೋಗಿ ಎಲ್ಲರಿಂಗೂ ಬೇಕಾದ ಒಂದು ಸ್ಥಾನಕ್ಕೆ ಬಂದು ನಿಂದತ್ತು ಆ ರಾಜನಂದಿ.
ಅದರ ಸಾಧು ಬುದ್ಧಿಗೆ, ಪ್ರೀತಿ ತೋರುಸುವ ಗುಣಂದಾಗಿಯೇ ಅದು ಎಲ್ಲೋರಿಂಗೂ ಇಷ್ಟ ಅಪ್ಪಲೆ ಸುರು ಆತು.

ದೇವರಿಂಗೆ ನಿತ್ಯವೂ ಪ್ರದಕ್ಷಿಣೆ ಬಪ್ಪದು; ದೇವರ ಪೂಜಾಕ್ರಮದ ಒಡನಾಡಿಗೊಕ್ಕೆ ನಿತ್ಯವೂ ಮಾತಾಡ್ಸುದು, ದೇವರ ಚಾಕ್ರಿಗಾರರ ಹತ್ರೆ ತಿಂಬಲೆ ಕೇಳುದು – ಹೀಂಗೆಲ್ಲ ಅದರ ಕೊಂಡಾಟದ ಆಟಂಗೊ.

ಎಷ್ಟೋ ಒರಿಶ ಸೇವೆ ಮಾಡಿದ ನಂದಿ, ಈ ಸರ್ತಿಯಾಣ ಶಿವರಾತ್ರಿಯ ಒಳ್ಳೆ ದಿನ ನೋಡಿ ಕೈಲಾಸಕ್ಕೆ ಪಾದ ಬೆಳೆಶಿತ್ತಾಡ.
ಯೇವ ಸಾಲವನ್ನೂ ಬಾಕಿ ಮಡುಗದ್ದೆ, ಸೀದ ಮೋಕ್ಷಕ್ಕೆ ಹೋಪ ಪುಣ್ಯ ಅದರದ್ದಾತು.
ಶುಭಮ್.
ಬಳ್ಳಮೂಲೆ ಮಾವ° ಇದರ ಜೀವನಕತೆ ಹೇಳುವಾಗ ಒಪ್ಪಣ್ಣಂಗೆ ತುಂಬಾ ತುಂಬಾ ಬೇಜಾರಾಗಿತ್ತು.

~

ಹಾಂಗೇ ಒಪ್ಪಣ್ಣಂಗೆ ಬಂದ ಯೋಚನೆ –
ಆ ಕಂಜಿ ಎಲ್ಲಿ ಹುಟ್ಟಿದ್ದದೋ; ಅದರ ಆರು ಅಷ್ಟು ಸಮೆಯ ಸಾಂಕಿದವೋ!
ಕೊನೆಗೆ – ಅವು ಎಂತಕೆ ಕಟುಕರಿಂಗೆ ಮಾರಿದವೋ?
ಒಂದು ವೇಳೆ – ಈ ಕಂಜಿ – ರಾಜನಂದಿ ಆಗಿ ಅಲ್ಲಿಪ್ಪಗ,
ಆ ಸಂಸಾರದವು ಗೋಕರ್ಣಕ್ಕೆ ಬಂದಿದ್ದರೆ,
ಕಂಜಿಯ ಕಂಡು ಗುರ್ತ ಸಿಕ್ಕದ್ದೆ ಹೋಗಿ,
ಕಂಜಿಯೇ ಬಂದು ಮಾತಾಡುಸಿ,
ಮತ್ತೆ ಅವಕ್ಕೆ ಗುರ್ತ ಸಿಕ್ಕಿದ್ದರೆ,
– ಹೇಂಗೆ ಅನುಸುತಿತು ಅವಕ್ಕೆ!?

ನಿಂಗೊ ಸಾಂಕಿದಿ, ಮೋಸಲ್ಲೆ ಕಟುಕರಿಂಗೆ ಕೊಟ್ಟಿ, ಆದರೆ ಶಿವ ಒಳಿಶಿದ°, ಈಗ ಗೋಕರ್ಣಲ್ಲಿ ನಿತ್ಯವೂ ಪೂಜಿತ – ಹೇಳಿದ ಹಾಂಗೆ ಅನುಸದೋ?
ಏನೇ ಆಗಲಿ, ಶಿವರಾತ್ರಿಯ ಶುಭದಿನ, ಶಿವನ ಪಾದ ಸೇರಿದ ಸಂತ – ರಾಜನಂದಿಗೆ ಶುಭ ನಮನಂಗೊ.
~

ಒಂದೊಪ್ಪ: ಕಟುಕರಿಂಗೆ ಕೊಡುವನ್ನಾರ ನಮ್ಮ ಸೊತ್ತು. ಮತ್ತೆ ಶಿವನ ಸೊತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋವಿಂದ ಮಾವ, ಬಳ್ಳಮೂಲೆ
  ಗೋವಿಂದ ಬಳ್ಳಮೂಲೆ

  ಒಂದೊಪ್ಪ: ದನ ಪ್ರೇಮಿಗಳ ಎದೆಯೊಳಾಣ ದೇವಸ್ಥಾನಲ್ಲಿ ರಾಜ ನಂದಿ ನಂದದ್ದೇ ನಂದಾ ದೀಪವಾಗಿ ಇರುತ್ತ.
  ಒಪ್ಪಣ್ಣ.. ಎನ್ನ ಕೆಲಸ ಎಲ್ಲವೂ ಗುರು ಪಾದಂಗಳಿಗೆ ಅರ್ಪಿತವು. ಸಂಸ್ಥಾನದ ವಿಚಾರಂಗೋ ಸೇವಾ ಬಿಂದುಗಳ ಮನಸ್ಸಿಲ್ಲಿ ಒಳ ಹೊಗುವಾಂಗೆ ಆಯೇಕು . ಅದುವೇ ಎನ್ನ ಮನಸ್ಸಿನ ಆಂತರ್ಯ .
  ಒಪ್ಪಣ್ಣ ಎನ್ನ ಕೆಲಸವ ಅಂಗೀಕರಿಸಿದೆ ನೀನು. ನೀನು ಮಾಡ್ತಾ ಇಪ್ಪ ಅಹೋರಾತ್ರ ಕೆಲಸದ ಎಡೆಲಿ ಎಂಗೋ ಇಷ್ಟಾದರೂ ಮಾಡೇಡದೋ ….ತುಂಬಾ ಖುಷಿಯಾತು . ಈ ಮಾತುಗೋ ಎನ್ನ ಕೆಲಸಕ್ಕೆ ಮತ್ತೊಂದು ಗರಿ ಮೂಡಿತ್ತು . ಮತ್ತೊಂದಾರಿ ಹೃದಯದ ಒಳಂದ ಹರೇ ರಾಮ ಒಪ್ಪಣ್ಣ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ರಾಜನಂದಿ ಶಿವಪಾದ ಸೇರಿದ ಶುದ್ದಿ ಓದಿ ತುಂಬಾ ಬೇಜಾರಾತು. ಭಟ್ಕಳ ಕಡೇಂಗೆ ಹೆರಟ ಕಂಜಿ ಭಟ್ಟಕ್ಕಳ ಕಡೆಂಗೆ ಪುನ: ಬಂದು ನಂದಿಯಾಗಿ ಮೆರದ್ದದು ಕೇಳಿ ಕೊಶಿಯಾತು. ಕಡೇಣ ಒಪ್ಪಲ್ಲಿ ಅದೆಷ್ಟು ಅರ್ಥ ಅಡಗೆಂಡಿದ್ದು. ಮನಸ್ಸಿಂಗೆ ತಟ್ಟುವ ಒಪ್ಪ ಅದು.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಭಟ್ಟಕ್ಕಳ ಊರು = ಭಟ್ಕಳ ಆತು ಹೇಳಿ ಒಂದು ಲೇಖನ ಓದಿದ್ದು ನೆಂಪಾತು . ನಂದಿ ನಂದಿದರು ನಂದಾದೀಪ ಆದ ಕತೆ ಓದಿ ಮನತುಂಬಿತ್ತು. ಒಪ್ಪಣ್ನಂಗೆ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣದೀಪಿಕಾಪುಟ್ಟಬಾವ°ಶಾಂತತ್ತೆಪಟಿಕಲ್ಲಪ್ಪಚ್ಚಿವಿಜಯತ್ತೆಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಶರ್ಮಪ್ಪಚ್ಚಿವೇಣೂರಣ್ಣಬಂಡಾಡಿ ಅಜ್ಜಿನೆಗೆಗಾರ°ಶುದ್ದಿಕ್ಕಾರ°ಶ್ಯಾಮಣ್ಣಮಾಲಕ್ಕ°ಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ವೇಣಿಯಕ್ಕ°ಅಕ್ಷರ°ಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಬಟ್ಟಮಾವ°ಪುತ್ತೂರುಬಾವಡೈಮಂಡು ಭಾವಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ