ದನಗಳ ಪುಂಡಿನ ದೊಡ್ಡಣ್ಣ “ಗೋಪಾಲ”ನ ಶುದ್ದಿ..

November 1, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪುಳ್ಯಕ್ಕೊ ಬಂದರೆ ಅಜ್ಜಿಯಕ್ಕೊಗೆ ಪುರುಸೊತ್ತು ಜಾಸ್ತಿ ಅಪ್ಪದೋ ಕಮ್ಮಿ ಅಪ್ಪದೋದು ನವಗರಡಿಯ.
ಆದರೆ ಕೊಶಿ ಅಂತೂ ಜಾಸ್ತಿಯೇ ಅಪ್ಪದು.
ಕುಂಬ್ಳೆಜ್ಜಿಗೂ ಹಾಂಗೇ ಅಪ್ಪದು.
~

ಎಯ್ಯೂರು ಬಾವ ಓ ಮನ್ನೆ ಎಂತದೋ ಪೇಟೆ ಕೆಲಸಲ್ಲಿ ಕಣಿಯಾರಕ್ಕೆ ಬಂದಿಪ್ಪಾಗ, ಮೂರೊರಿಶದ ಮಗಳ ಅಂಗುಡಿ ಸುತ್ತುಸುದು ಎಂತಗೆ – ಹೇದು ಕುಂಬ್ಳೆಜ್ಜಿ ಮನೆಲಿ ಬಿಟ್ಟಿಕ್ಕಿ ಹೋದ್ಸು.
ಹೊದಳು ಹೊರುದ ಹಾಂಗೆ ಮಾತಾಡ್ಸು ಆ ಕೂಸಿನ ವಿಶೇಷ!
ಪೇಟೆ ಬಚ್ಚಲಿನ ಎಡಕ್ಕಿಲಿ ಈ ಕುಂಞಿಕೂಸಿನ ಪ್ರಶ್ನೆಗೊಕ್ಕೆ ಉತ್ತರ ಹೇದು ಬಚ್ಚುಸ್ಸು ಎಂತಗೆ – ಹೇದೂ ಬಿಟ್ಟಿಕ್ಕಿ ಹೋದ್ಸೋ ಏನೋ! ಉಮ್ಮಪ್ಪ. ಅದಿರಳಿ.

ಮಾಷ್ಟ್ರುಮಾವನ ಸುಣ್ಣದಂಡೆ ಕಾಲಿ ಆಗಿತ್ತು; ಹಾಂಗೆ ಜಕ್ರಿಯ ಅಂಗುಡಿಂದ ರಜ ಸುಣ್ಣ ಆಯೇಕಾತು ಹೇದು ನಾವುದೇ ಕುಂಬ್ಳೆಜ್ಜಿ ಮನೆ ಕರೆಲಿ ಪೇಟಗೆ ಹೋಪದು;
– ಅಷ್ಟಪ್ಪಗ ಕೇಳ್ತು ಈ ಅಜ್ಜಿ ಪುಳ್ಳಿ ಮಾತುಕತೆ.

ಅಡಿಗೆ ಕೋಣೆಲಿ ಅಜ್ಜಿ ಎಂತದೋ ಕೆಲಸ ಮಾಡಿಗೊಂಡಿದ್ದವು, ಈ ಕೂಸು ಪಿಟಿಪಿಟಿ ಮಾಡಿಗೊಂಡು ಒಟ್ಟಿಂಗೇ ಇದ್ದು.
ದೊಡ್ಡಳಿಯ ಆಟಲ್ಲಿ ಉಶಾರಿ; ಈ ಕೂಸು ಬಾಯಿಲಿ ಉಶಾರಿ; ಎಷ್ಟಾರೂ ದೊಡ್ಡಳಿಯನ ಖಾಸಾ ದೊಡ್ಡಜ್ಜಿಯ ಖಾಸಾ ದೊಡ್ಡಪುಳ್ಳಿ ಅಲ್ಲದೋ ಇದು!
ಕುಂಬ್ಳೆಜ್ಜಿಗೆ ಹೂಂಕುಟ್ಟುದು ಮಾಂತ್ರ ಕೆಲಸ; ಶುದ್ದಿ ಪೂರ ಈ ಕೂಸೇ ಹೇಳಿ ಮುಗುಶುತ್ತು. ಪೋ!
ಎಂತದೋ ಕತೆ ಹೇಳಿಗೊಂಡಿತ್ತು ಅಜ್ಜಿಯ ಕೈಲಿ.
ಕೂಸು ಹೇಳುದೂ, ಅಜ್ಜಿ ಹೂಂಕುಟ್ಟುದೂ ಆಗಿ, ಜುಗಳುಬಂದಿ ರೈಸಿಗೊಂಡಿತ್ತು; ಒಂದು ಗಳಿಗೆ ದಾರಿಲೇ ನಿಂದು ಕೆಮಿಕೊಟ್ಟು ಕೇಳಿದೆ.

ಒಂದು ಕಾಡಿಲಿ ಸಿಮ್ಮ ರಾಜ ಆಗಿತ್ತಾಡ. ಎಲ್ಲಾ ಪ್ರಾಣಿಗೊ ಇತ್ತಿದ್ದವಡ. ಆನೆ ಈಂದು ತಿಂದುಗೊಂಡಿತ್ತಡ, ಮೀನು ನೀರಿಲಿ ಈಜಿಗೊಂಡಿತ್ತಡ, ಹಕ್ಕಿ ಅಕ್ಕಿ ತಿಂದುಗೊಂಡಿತ್ತಡ; ಕಂಜಿ ಹಾಲು ತಿಂದುಗೊಂಡಿತ್ತಾಡ – ಹೀಂಗೆ ಆರಾರು ಎಂತೆಂತ ತಿಂದುಗೊಂಡಿತ್ತು – ಹೇಳಿಯೇ ವಿವರಣೆ ಆಗಿಂಡಿತ್ತು. ಬೌಶ್ಶ ಆ ಕೂಸಿಂಗೆ ಉಣುಸುವಗ, ತಿಂಡಿ ತಿನುಸುವಾಗ ಬಂಙ ಅಪ್ಪದಕ್ಕೆ ಯೆಯ್ಯೂರುಭಾವ ಹೀಂಗಿರ್ಸ ಕತೆ ಹೇಳಿ ಮಡಗಿದ್ದೋ ಏನೋ!
ಕತೆ ಹಾಂಗೇ ಮುಂದುವರುದು – ದನ ಹುಲ್ಲು ತಿಂದುಗೊಂಡಿತ್ತು; ನಾಯಿ ಹುಲ್ಲು ತಿಂದುಗೊಂಡಿತ್ತು- ಹೇಳಿತ್ತು ಕೂಸು.
ಅಷ್ಟೊತ್ತು ಹೂಂಕುಟ್ಟಿಗೊಂಡಿದ್ದ ಕುಂಬ್ಳೆಜ್ಜಿಗೆ ಈ ನಾಯಿ ಹುಲ್ಲು ತಿಂಬದು ಕೇಳಿತ್ತಲ್ಲದೋ – “ಹೇಂ, ನಾಯಿ ಹುಲ್ಲು ತಿಂತೋ?” ಕೇಟವು.
ಅಷ್ಟಪ್ಪಗ ಈ ಕೂಸು “ಅಲ್ಲಲ್ಲ, ಎಂಗಳ ನಾಯಿ ಕಲ್ಲು ತಿಂತು”- ಹೇಳಿತ್ತು. “ಅಪ್ಪೋ” ಕೇಟವು ಕುಂಬ್ಳೆಜ್ಜಿ ದೊಡ್ಡಕೆ.
“ಎಂಗಳ ನಾಯಿ ಜೋಡುದೇ ತಿಂತು” ಹೇಳಿತ್ತು ಕೂಸು. ಕುಂಬ್ಳೆಜ್ಜಿಗೆ ನೆಗೆ ಬಂದು ತಡೆಯ.
ಕೂಸಿನ ಕೆಮಿಗೆ ಗಾಳಿ ಹೊಕ್ಕತ್ತೋ ತೋರ್ತು; ಹೋರಿ ಕದುರು ತಿಂತು ಹೇಳುಲೆ ಸುರುಮಾಡಿತ್ತು.
ಗೆದ್ದೆ ಬೇಸಾಯ ಇಪ್ಪ ಕಾರಣ ಒಂದು ಜೋಡಿ ಹೋರಿ ಇದ್ದು ಅವರ ಹಟ್ಟಿಲಿ. ಅದಿರಳಿ.
ಕತೆ ಹೀಂಗೇ ಎಲ್ಲೆಲ್ಲೋ ಹೋಪಗ ಮೂಲಕತೆ ದಾರಿಬಿಟ್ಟು ಇತ್ಲಾಗಿಬಂದದು ಕುಂಬ್ಳೆಜ್ಜಿಗೆ ಅಂದಾಜಿ ಆತು.
ವಿಷಯ ಬೇರೆಂತದಕ್ಕೋ ಹೊರಳಿತ್ತು. ನಾವು ಅಲ್ಲಿಂದ ಮುಂದುವರುದು ಕಣಿಯಾರ ಪೇಟೆಯತ್ಲಾಗಿ ಹೆರಟತ್ತು.
~
ಹಾಂಗೇ ನೆಡಕ್ಕೊಂಡು ಹೋಪಗ ಎಯ್ಯೂರು ಕೂಸು ಹೇಳಿದ ಸಂಗತಿಯೇ ತಲೆಲಿ ಸುತ್ತಿಗೊಂಡಿತ್ತು.
ಅದರ್ಲಿಯೂ “ಹೋರಿ ಕದುರು ತಿಂತು” ಹೇಳ್ತದು ತುಂಬಾ ಕೊಶಿ ಆತು ಒಪ್ಪಣ್ಣಂಗೆ.
ಈಗ ಹೋರಿಗೊ ಎಲ್ಲಿದ್ದವು? ಹೋರಿಗೊ ಇದ್ದರೂ ಗೆದ್ದೆ ಎಲ್ಲಿದ್ದು? ಎರಡೂ ಇದ್ದರೂ ಬೇಸಾಯ ಎಲ್ಲಿದ್ದು?
ಅದೆಲ್ಲವೂ ಈ ಕೂಸಿಂಗೆ ಬಾಲ್ಯಲ್ಲೇ ಸಿಕ್ಕುತ್ತ ಸೌಭಾಗ್ಯ – ಅಲ್ಲದೋ.

~
ಅದಿರಳಿ, ಈ ಕದುರು ತಿಂತ ಸಂಗತಿ ಕೇಳಿ ಅಪ್ಪಗ ಆಚಮನೆ ದೊಡ್ಡಪ್ಪ ಹೇಳಿದ ಹಳೇ ಕತೆ ಒಂದು ನೆಂಪಾತು.
ಅದು ಗೋಪಾಲ ಹೋರಿಯ ಬಗ್ಗೆ. ಅಲ್ಲೇ ಆಸುಪಾಸು –ಎಡಪ್ಪಾಡಿಲಿ ನೆಡದ ಕತೆ.
ಪಕ್ಕನೆ ಹೇಳಿಕ್ಕುತ್ತೆ, ಆಗದೋ?
~
ಕತೆ ಹಳತ್ತು ಹೇದರೆ ತುಂಬಾ ಹಳತ್ತು.
ಎಡಪ್ಪಾಡಿ ಅಜ್ಜನ ಮನೆಲಿ ದೊಡಾ ಎರಡು ಹಟ್ಟಿಗೊ ಇದತ್ತಾಡ.
ದನದ ಹಟ್ಟಿ, ಎಮ್ಮೆ ಹಟ್ಟಿ – ಹೇದು. ದನದ ಹಟ್ಟಿತುಂಬಾ ದನಗೊ – ಹೋರಿಗೊ; ಎಮ್ಮೆ ಹಟ್ಟಿಲಿ ಎಮ್ಮೆಗೋಣಂಗೊ.
ಮದಲಿಂಗೆ ಹಾಂಗೇ ಅಲ್ಲದೋ – ದನಗಳೇ ಸಂಪತ್ತು – ಹೇಳ್ತದರ ನಂಬಿ ಬದ್ಕಿದೋರು ನಮ್ಮ ಹೆರಿಯೋರು. ಎಲ್ಲಾ ಮನೆಗಳಲ್ಲೂ ಯಥಾಶಕ್ತಿ ದನಗೊ ಇದ್ದೇ ಇತ್ತು.
ಎಲ್ಲೋರುದೇ ಒರ್ಮೈಶಿಗೊಂಡು, ಅನ್ಯೋನ್ಯವಾಗಿ ನೆಡಕ್ಕೊಂಡು ಇತ್ತಿದ್ದವು, ಕೂಡುಕುಟುಂಬದ ಮನೆಯಂತೇ.
ಊರ ಎಲ್ಲಾ ದನಗಳಂತೆ ಇವೆಲ್ಲವೂ ಉದಿಯಪ್ಪಗ ಗುಡ್ಡಗೆ ಹೋದರೆ – ಹೊತ್ತೋಪಗ ಒರೆಂಗೂ ಗುಡ್ಡೆಲೇ ಮೇವದು.
ಹೊತ್ತೋಪಗ ಹಟ್ಟಿಗೆ ಬಂದು ಅಕ್ಕಚ್ಚೋ, ಮಡ್ಡಿಯೋ, ಬೆಳುಲೋ – ಎಂತಾರು ತಿಂದು ಮನಿಕ್ಕೊಂಬದು.
~
ಎಡಪ್ಪಾಡಿಯ ಹಟ್ಟಿಲಿ “ಗೋಪಾಲ” ಹೇದು ಒಂದು ಹೋರಿ ಇದ್ದತ್ತಾಡ. ಅದರ ಕತೆ ಇಂದು ಮಾತಾಡುಸ್ಸು!
ಕಂಜಿ ಆಗಿಪ್ಪಾಗಳೇ ವಿಪರೀತ ಕೊಂಡಾಟ. ಕೊಂಡಾಟ ಇಪ್ಪ ದನಗೊಕ್ಕೆ ಬುದ್ಧಿಯೂ, ಬುದ್ಧಿ ಇಪ್ಪ ದನಗೊಕ್ಕೆ ಕೊಂಡಾಟವೂ ಇಪ್ಪದು ಸ್ವಾಭಾವಿಕ.

ಗೋಪಾಲಂಗೂ ಹಾಂಗೇ, ಒಳ್ಳೆತ ಬುದ್ಧಿ ಇತ್ತಾಡ.
ಕೊಂಡಾಟಲ್ಲೇ ಅಜ್ಜಿಯಕ್ಕಳ ಕೈಂದ ಗಿಟ್ಟುಸಿಗೊಂಡು ಪುಷ್ಟಿಲಿ ಮೈತುಂಬಿ ಒಳ್ಳೆ ತ್ರಾಣಿ ಆಗಿ ಬೆಳದತ್ತಡ.
ಪುಷ್ಟಿ ಹೇದು ಆಚಮನೆ ದೊಡ್ಡಪ್ಪ ವಿವರ್ಸುವಾಗ ಒಡ್ಡೋಲಗದ ದೇವೇಂದ್ರನ ಹಾಂಗೆ ಕೈ ಅಗಾಲ್ಸಿ ತೋರ್ಸುಗು ಒಂದರಿ.
ಇರಳಿ, ನಾವು ನೋಡಿದ್ದಿಲ್ಲೆ ಈ ಗೋಪಾಲನ.
ಎತ್ತರದ ನಿಲುವು, ಬೆಳಿ ಮೈಬಣ್ಣ, ಎರಡು ಅಡ್ಡ ಕೊಂಬುಗೊ, ಪುಷ್ಟಿ ಮೈ – ಗೋಪಾಲನ ಚಿತ್ರ ಕಣ್ಣೆದುರೇ ಬತ್ತು.
ನಮ್ಮ ಮಠದ ಮಹಾನಂದಿಯ ಹಾಂಗಿಪ್ಪದೋ ಏನೋ – ಉಮ್ಮಪ್ಪ; ಆಯಿಪ್ಪಲೂ ಸಾಕು!
ಹಾಂಗೆ, ಈ ಗೋಪಾಲನ ಕತೆಗೊ ಹಲವು ದಂತಕತೆಗಳ ಹಾಂಗೆ ಹಳಬ್ಬರ ಬಾಯಿಲೆ ತಿರುಗೆಂಡು ಇದ್ದತ್ತು.
ಗೋಪಾಲನ ಹಲವು ಗುಣಂಗಳಲ್ಲಿ ಕೆಲವೆಲ್ಲ ತಲೆತಲಾಂತರಕ್ಕೆ ನೆಂಪೊಳಿವಂತದ್ದು.
~

ಎರಡು ಹಟ್ಟಿ ಇತ್ತು ಹೇಳಿದೆ ಅಲ್ಲದೋ – ಹಟ್ಟಿ ಇದ್ದ ಕೂಡ್ಳೇ ಅಲ್ಲಿ ಒಂದು ಕೌಟುಂಬಿಕ ವ್ಯವಸ್ಥೆಗೊ ಇರ್ತು.
ಅಮ್ಮ, ಅಜ್ಜಿ, ಪಿಜ್ಜಿ, ಸೋದರ ಮಾವ, ಚಿಕ್ಕಮ್ಮ – ಹೀಂಗೆ ನಾವು ಗುರುತುಸುತ್ತು.
ಒಂದು ಕಂಜಿ ಹುಟ್ಟಿ ಅಪ್ಪಗ ನಮ್ಮ ಮನೆ ಒಳ ಸಮ್ಮಂದಂಗಳ ಹೇಂಗೆ ಅನ್ವಯಿಸುತ್ತೋ, ಹಟ್ಟಿಲಿಯೂ ಹಾಂಗೇ ಅನ್ವಯಿಸುತ್ತು.
ಚಿಕ್ಕಮ್ಮ, ಸೋದರಮಾವ ಅಜ್ಜಿ – ಹೀಂಗಿರ್ಸರ ಗೌರವಿಸುತ್ತವೋ ಇಲ್ಲೆಯೋ, ಆದರೆ ಅಮ್ಮ ಹೇಳ್ತ ಸಮ್ಮಂದವ ಮಾಂತ್ರ ಎಲ್ಲಾ ಕಂಜಿಗೊ ಗುರುತಿಸಿಯೇ ಗುರುತುಸುತ್ತವು.
ಹಾಂಗೆ, ಕುಟುಂಬ ವ್ಯವಸ್ಥೆ ಇದ್ದಲ್ಲಿ “ಯೆಜಮಾನ” ಬೇಕಲ್ಲದೋ?
ಸಂಘಜೀವಿ ದನಗೊಕ್ಕೆ ಈ ವಿಷಯ ಸರೀ ಗೊಂತಿದ್ದು.
ಬೇರೆ ಪುಂಡಿಂದ ದನಗೊ ಬಂದು ಕೀಟ್ಳೆ ಮಾಡುವಾಗ, ನಾಯಿ ಇತ್ಯಾದಿ ಪ್ರಾಣಿಗಳಿಂದ ಉಪದ್ರ ಆದರೆ ರಕ್ಷಣೆ ಮಾಡ್ಳೆ ನಾಯಕನ ಸಕಾಯ ಬೇಕಾವುತ್ತು.

~

ಗೋಪಾಲ – ಆ ಗುಂಪಿಂಗೆ ನಾಯಕ ಆಗಿತ್ತಾಡ.
ಉದಿಯಪ್ಪಗ ಗುಡ್ಡಗೆ ಬಿಡುವಾಗ ಎಲ್ಲೋರನ್ನೂ ಕರಕ್ಕೊಂಡು ಹೋದರೆ, ಹೊತ್ತೋಪಗ ಕರಕ್ಕೋಂಡು ಬಪ್ಪನ್ನಾರವೂ, ಸಣ್ಣ ದನಗೊ, ಕಂಜಿಯಕ್ಕಳ ಬಗ್ಗೆ ವಿಶೇಷ ಕಾಳಜಿ ತೆಕ್ಕೊಂಡು ಬಕ್ಕಾಡ.
ಪುಂಡಿಂಗೆ ನಾಯಕ ಹೇದು ಅಂತೇ ಹೇಳಿರೆ ಸಾಕೋ – ಗುಡ್ಡೆಲಿ ಬೇರೇವದೋ ಪುಂಡಿನ ಒಂದು ಹೋರಿ ಇದರ ಹಟ್ಟಿಯ ದನಗೊಕ್ಕೆ ಅಂತೇ ತಾಡಿಗೊಂಡಿತ್ತಾಡ.
ತೆಕ್ಕೊ, ಗೋಪಾಲಂಗೆ ಒಂದುದಿನ ಬಂತು ಪಿಸುರು; ತನ್ನ ಮನೆದನಕ್ಕೆ ತಾಡ್ಳೆ ಬಂದಪ್ಪಗ ಹಿಂದುಮುಂದು ನೋಡದ್ದೆ ಹೋಗಿ ಆ ಹೋರಿಯ ಮೇಗೆ ಆಕ್ರಮಣ ಮಾಡಿದ್ದರಲ್ಲಿ, ಮತ್ತೆ ಇತ್ಲಾಗಿ ಬಯಿಂದಿಲ್ಲೇಡ.

ಮೈಲಿ ತ್ರಾಣ ಇದ್ದು ಹೇದರೆ ಹೋರಿಗೊಕ್ಕೆ ಅದುವೇ ಒಂದು ಚೆಂದ. ಆದರೆ, ಕೆಲವು ಸರ್ತಿ ಚೆಂದದೊಟ್ಟಿಂಗೆ ಹಾಂಕಾರವೂ ಬತ್ತು; ಈಗಾಣ ಕೂಚಕ್ಕಂಗಳ ಹಾಂಗೆ!!
ಅಹಂಕಾರ / ದರ್ಪಂಗಳೂ ಬಂದುಬಿಟ್ರೆ ಮತ್ತೆ ಮೂಗಿನ ಬಳ್ಳಿಯೇ ಗೆತಿ!
ಆದರೆ ಗೋಪಾಲಂಗೆ ಮನುಷ್ಯರತ್ರೆ ಪಿಸುರೇ ಇಲ್ಲೇಡ. ಹಾಂಗಾಗಿಯೇ ಅದಕ್ಕೆ ಮೂಗಿನಬಳ್ಳಿಯೂ ಹಾಕಿದ್ದಿಲ್ಲೇಡ.
ಆ ಮನೆ ಅಜ್ಜಿ ಹೇಳಿದಾಂಗೇ ಕೇಳುಗಾಡ ಅದು.
~

ಗೋಪಾಲನ ಹಾಂಗೇ - ಮಠಲ್ಲಿ ಬೆಳಗಿದ ಕೊಂಡಾಟದ ಹೋರಿ ಮಹಾನಂದಿ..
ಗೋಪಾಲನ ಹಾಂಗೇ – ಮಠಲ್ಲಿ ಬೆಳಗಿದ ಕೊಂಡಾಟದ ಹೋರಿ ಮಹಾನಂದಿ..

ತ್ರಾಣಿ ಆದ ಹೋರಿಗೊ ಎಲ್ಲ ಅಂಬಗಾಣ ಅಗತ್ಯ ಆದ “ಹೂಟೆ”ಗೆ ಬೇಕೇಬೇಕು ಅಲ್ಲದೋ!
ಹದ್ನಾರು ಮುಡಿ ಗೆದ್ದೆ ಇದಾ; ಹಾಂಗೆ ಹೂಟೆ ಜೋರಿತ್ತು.
ಗೋಪಾಲಂದೇ ಗುರಿಕ್ಕಾರ್ತಿಕೆ. ಬೇರೆ ಎಷ್ಟೇ ಹೋರಿಗೊ ಇದ್ದರೂ – ಗೋಪಾಲನ ಮದಾಲು ಹೂಟೆಗೆ ಕಟ್ಟುದು.
ಆದರೆ, ಈ ಗೋಪಾಲಂಗೆ ಹೂಟೆ ಸರಿಯಾದ ಜೆತೆ ಸಿಕ್ಕಿಗೊಂಡಿತ್ತಿಲ್ಲೆ ಇದಾ.
ಜೆತೆ ಹೇದರೆ – ಒಂದೇ ಎತ್ತರ, ಒಂದೇ ತ್ರಾಣ, ಒಂದೇ ವೇಗ – ಮೂರುದೇ ತಾಳೆ ಅಪ್ಪಂತಾದ್ದು.
ಯೇವದಾರು ಒಂದು ಹೆಚ್ಚುಕಮ್ಮಿ ಆದರೂ ಸಮ ಆಗ; ಸಂಸಾರದ ಹಾಂಗೇ ಅಲ್ಲದೋ ಅದುದೇ!
ಹಾಂಗೆ, ಸುರುವಿಂಗೆ ಒಂದು ಜೆತೆ ಇದ್ದತ್ತು; ಮತ್ತೆ ಆ ಹೋರಿ ಸತ್ತತ್ತು.
ಒಂಟಿ ಆದ ಗೋಪಾಲಂಗೆ ಹೂಟೆಯ ಜೋಡಿ ಸಿಕ್ಕಿತ್ತಿದ್ದಿಲ್ಲೆ; ಸುಮಾರು ಸಮೆಯ. ಆ ಎತ್ತರ, ಆ ತ್ರಾಣ, ಆ ವೇಗಕ್ಕೆ ಹೊಂದುವ ಹೋರಿಗೊ ಅಪುರೂಪವೇ ಅಲ್ಲದೋ!?
ಆದರೂ – ಹೂಟೆಲಿ ಗುರಿಕ್ಕಾರ್ತಿಕೆ ಬಿಡುಗೋ? ಸುರೂವಾಣ ಒಂದು ಸುತ್ತು ಅದರದ್ದೇ. ಎಂತಗೆ?
ಹೂಡ್ಳೆ ಕಟ್ಟಿದ ಹೋರಿಗೊಕ್ಕೆ ಒಂದು ಬಾಳ್ದಿ ಮಡ್ಡಿ ಕೊಡ್ತವಿದಾ– ಅದರ ಆಶೆಗೆ ಗೋಪಾಲಂಗೇ ಹೂಡ್ಳೆ ಉತ್ಸಾಹ! 😉
ಈ ಕ್ರಮವ ಅದು ಸಾವನ್ನಾರವೂ ಪಾಲುಸಿಗೊಂಡು ಬಯಿಂದಾಡ.
ಬಂಙಲ್ಲಿ ನೆಡವಲೆಡಿತ್ತಷ್ಟೇ – ಹೇದು ಆದರೂ, ಹೂಟೆಯ ದಿನ ಕರಕ್ಕೊಂಡು ಬಂದು, ಅದರ ಬೆನ್ನಿಂಗೆ – ಹಗೂರದ ನೊಗ ಮಡಗಿ – ಹೂಡಿದಾಂಗೆ ಮಾಡಿ ಮೂರು ಸುತ್ತು ಗೆದ್ದೆಲಿ ಕರಕ್ಕೊಂಡು ಬಕ್ಕು.
ಇಷ್ಟಪ್ಪದ್ದೇ ಗೆದ್ದೆ ಹುಣಿಲಿ ಬಂದು ನಿಂದುಗೊಂಗು; ಬೇರೆ ಹೋರಿಗಳ ಮೂಲಕ ಹೂಟೆ ಮುಗಿವನ್ನಾರ.
~
ತ್ರಾಣ ಮಾಂತ್ರ ಅಲ್ಲ; ಬುದ್ಧಿವಂತಿಗೆ ಧಾರಾಳ ಇದ್ದತ್ತಡ ಈ ಗೋಪಾಲಂಗೆ.
ಬೇಲಿಗೊಂದು ಪಡಿ ಇದ್ದತ್ತು. ಗೋಪಾಲಂಗೆ ಅಡ್ಡ ಕೊಂಬು ಆದ ಕಾರಣ ಆ ಪಡಿಲಿ ದಾಂಟ್ಳೆ ಎಡಿಗಾಗಿಂಡಿತ್ತಿಲ್ಲೆ ಇದಾ! ಆದರೆ ಒಳ ಹೋಗದ್ದೆ ನಿಮುರ್ತಿ ಇಲ್ಲೆ – ಹೇಳಿ ಆದರೆ, ಕೊಂಬಿಲಿ ಆ ಪಡಿಯ ಒಕ್ಕಿ, ಪೊರ್ಪಿ, ಒಳಬಂದು; ಆ ಪಡಿಯ ಪುನಾ ಹಾಂಗೇ ಮಡಗಿಕ್ಕಿ ಬಕ್ಕಾಡ.
ಇಷ್ಟೆಲ್ಲ ಒಳ್ಳೆಬುದ್ಧಿ ಇದ್ದರೂ – ಒಂದು ಪೋಕ್ರಿಬುದ್ಧಿ ಇದ್ದತ್ತಾಡ.
ಒಳ್ಳೆತ ಬೆಳದು – ಬಗ್ಗಿದ ಕದಿರು – ಹೇಳಿರೆ ಗೋಪಾಲಂಗೆ ಭಾರೀ ಇಷ್ಟ ಆಡ.
ಎಷ್ಟೇ ಬಂಙಲ್ಲಿ ಆದರೂ ಪಡಿ ಬಿಡುಸಿ, ಬೇಲಿ ಹಾರಿ ಗೆದ್ದೆಗೆ ಬಕ್ಕಾಡ.
ಇದರ ಎಡಕ್ಕಿಲಿ ಗೋಪಾಲ ಗೆದ್ದೆ ಮೇವ ಸಂಗತಿ ಆರಿಂಗಾರು ಗೊಂತಾಗಿ “ಅದಾ, ಗೋಪಾಲ ಗೆದ್ದೆಗೆ ಬಂದು ಕದುರು ತಿಂತಾ ಇದ್ದೂ..” – ಹೇಳಿ ಆರಾರು ಹೇಳುಸ್ಸು ಕೇಳಿರೆ ಸಾಕಡ, ಕೂಡ್ಳೇ ಅದು ಗೆದ್ದೆಂದ ಗುಡ್ದಗೆ ಓಡುಗಾಡ.
ಆರೂ ಎಂತದೂ ಹೇಳದ್ದರೆ, ಹೊಟ್ಟೆ ತುಂಬ ಕಸ್ತ್ರ ತಿಂದು ಬಂದ ದಾರಿಲೇ ಗುಡ್ಡಗೆ ಹೊಕಾಡ. 😉

ಈಗಾದರೆ ಹೂಟೆಗೆ ಜೊತೆಯೂ ಸಿಕ್ಕುತ್ತಿಲ್ಲೆ, ಬೇರೆಂತ ಪ್ರಯೋಜನವೂ ಇಲ್ಲೆ ಹೇದು ನಿಘಂಟಪ್ಪಗ ಮಮ್ಮದೆಗೆ ಕೊಟ್ಟು ಬಿಡ್ತಿತವು; ಅಲ್ಲದೋ?
ಮದಲಿಂಗೆ ಹಾಂಗೆ ಕೊಡವು. ಜೀವಮಾನಲ್ಲಿ ಅತಿ ಹೆಚ್ಚು ಸಮೆಯವೂ ದುಡಿಯದ್ದೇ ಇದ್ದರೂ, ಮನೆಯೋರಿಂಗೆ ಈ ಗೋಪಾಲನ ಮೇಲೆ ಅಪ್ರತಿಮ ಪ್ರೀತಿ.
ಹಾಂಗಾಗಿಯೇ ಸಾವನ್ನಾರ ಆ ಹೋರಿ ಆ ಮನೆಲಿ ಇದ್ದತ್ತು. ಒಳುದ ದನಗೊಕ್ಕೆ ಲೀಡ್ರು ಆಗಿಂಡು.
~
ಮೊನ್ನೆ ಯೆಯ್ಯೂರು ಕೂಸು “ಹೋರಿ ಕದುರು ತಿಂತು” ಹೇಳುವಾಗ ಈ ಹಳೇ ಕತೆ ನೆಂಪಾತು.
ಆಗಲಿ, ಕೆಲವು ಮನೆಗಳಲ್ಲಿ ಈಗಳೂ ಅದೇ ಹಳೇ ಸಂಬಂಧಂಗೊ ಇದ್ದನ್ನೇ – ಹೇದು ಅನುಸಿ ಸಂತೋಷ ಆತು.
ಆ ಪುಳ್ಳಿ-ಕುಂಬ್ಳೆಜ್ಜಿಯ ಮಾತುಕತೆಲಿ ಈ ಹಳೇ ಶುದ್ದಿ ಒಂದು ಹೇಳಿಕ್ಕಲೆ ಅವಕಾಶ ಆತಿದಾ!

~

ಎಲ್ಲ ಮನೆಗಳಲ್ಲೂ ಹೀಂಗಿಪ್ಪ ದನಗೊ, ಹೋರಿಗೊ ಇದ್ದತ್ತು. ಅದರ ನಡವಳಿಕೆಗಳ ಸೂಕ್ಷ್ಮವಾಗಿ ನೋಡಿ ಮುಂದಕ್ಕೆ ಅದುವೇ ದಂತಕತೆಯಾಗಿ ತಿರುಗುತ್ತ ಸಂದರ್ಭಂಗೊ, ಸಂಬಂಧಂಗೊ ಇದ್ದತ್ತು.
ಈಗ ಕಾಂಬಲಿಲ್ಲೆ, ಅಷ್ಟೆ!
ಹಾಲುಕೊಡ್ತ ದನಗಳೇ ಇಲ್ಲೆ, ಇನ್ನು ಹೋರಿಗೊ ಇಪ್ಪಲೆ!
ದನಗೊ ಇದ್ದರೂ ಅವಕ್ಕೆ ಇಲ್ಯಾಣ ಭಾಷೆ ಬತ್ತಿಲ್ಲೆ. ಇಂಗ್ಳೋಷೋ, ಜರ್ಮನಿಯೋ ಮಣ್ಣ ಆಯೇಕು.
ಅಂತೂ – ಹೋರಿಗಳೇ ಇಲ್ಲೆ; ಗೆದ್ದೆಗಳೇ ಇಲ್ಲೆ. ಇದೆರಡೂ ಇದ್ದಲ್ಲಿ ಹೂಟೆ ಇಲ್ಲೆ.
ಎಲ್ಲಾ ಅಡಕ್ಕೆ ತೋಟ ಆಗಿ ಹೋತು. ಎಲ್ಲವನ್ನೂ ಒಂದೇ ದಿಕ್ಕೆ ಕಾಂಬಲೆ ಸಿಕ್ಕಿರೆ ಅದು ಶಂಬಜ್ಜನ ಕಾಲವೇ ಆಗಿ ಹೋಕು; ಅಲ್ಲದೋ?

ಅದೇನೇ ಇರಳಿ, ಮನೆಯೋರ ಪ್ರೀತಿಯ ಹಂಚಿಗೊಂಬಲೆ, ಕೊಂಡಾಟಂಗಳ ಕೊಟ್ಟು-ತೆಕ್ಕೊಂಬಲೆ ಗೋಪಾಲನ ಹಾಂಗಿರ್ತ ದನ-ಹೋರಿಗೊ ನಮ್ಮೆಲ್ಲರ ವಳಚ್ಚಲಿಲಿ ತಿರುಗಲೆ ಸುರು ಆಗಲಿ.

~
ಒಂದೊಪ್ಪ: ಗೋವುಗೊ ಕಮ್ಮಿ ಅಪ್ಪಲೆ “ಗೋಪಾಲಂಗೊ” ಕಮ್ಮಿ ಅಪ್ಪದೇ ಕಾರಣ. ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಶುದ್ದಿ ಕೊಂಗಾಟ ಆಯ್ದು. ಶುದ್ದಿಯೊಟ್ಟಿಂಗೆ ಇಪ್ಪ ಪಟವೂ ಕೊಂಗಾಟ ಆಯ್ದು

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇರಾಮ, ನಾಡ್ದು ಪಾಡ್ಯಕ್ಕೆ ಗೋಪೂಜೆಯಿದ! ಸಂದರ್ಬೋಚಿತ. ಒಪ್ಪಣ್ಣನಸುದ್ದಿ ಓದಿಅಪ್ಪಗ ಎನ ಒಂದು ಸಂಗತಿ ನೆಂಪಾತಿದ! ಆನು ಸಣ್ಣಾಗಿಪ್ಪಗ ಅಜ್ಜನ ಮನೆಂದ ಶಾಲಗೆ ಹೋದ್ದಿದ. ಅಂಬಗ ಅಲ್ಲಿ ತುಂಬಾ ದನಗೊ ಎಕ್ಕು. ಗೆಂದೆ ಹೇದೊಂದು ದನ ಇದ್ದತ್ತು. ಅದಕ್ಕೆ ಈ ಗೋಪಾಲನ ಹಾಂಗೇ ಒಳ್ಲೆ ಬುದ್ದಿ ಇದ್ದತ್ತಿದ! ಒಂದು ದಿನ ಕಸ್ತಲಪ್ಪಗ ಈ ಗೆಂದೆ ಹುಮ್ಮಾ.., ಹುಮ್ಮಾ.., ಹೇದು ಕೂಗೆಂಡು ಬಂತು. ಏನ ಮಾಡಿರೂ ಕೂಡ್ಲೆ ಬಾರದ್ದೆ ಹಟ್ಟಿ ಉರುವೆಲಿನ ಹೆರವೇ ಸುತ್ತು ಸುತ್ತು ಬಂದೊಂಡು ಕೂಗ್ಗು ಎನ್ನ ಅಜ್ಜಿಗೆ ದನಗಳ ಭಾಷೆ ಅರಡಿಗು .ಎಲ್ಲಾ ದನಗಳೂ ಕೂದಿದ್ದವೊ ನೋಡಿದವು ಇಲ್ಲೆ ಸೀತೆ ಹೇಳ್ತ ದನ ಬಯಿಂದಿಲ್ಲೆ! ಗೆಂದೆಯ ಮೈ ಉದ್ದಿಗೊಂಡು ಅದರ ಹಿಂದೆನಿಂದಪ್ಪಗ ಅದು ಅಜ್ಜಿಯ ಗುಡ್ಡಗೆ ಕರಕ್ಕೊಂದೋತು. ನೋಡೀರೆ ಸೀತೆ ಗುಡ್ಡೆಲಿ ಕಂಜಿ ಹಾಕಿದ್ದ್ಲ್ಲದ್ದೆ ಕಂಜಿ ಮುಳ್ಲ ಬಾಲ್ಲೆಲಿ ಸಿಕ್ಕಿತ್ತು.ಕಂಜಿಯ ಕರಕ್ಕೊಂಡು ಸೀತಗೆ ಬಪ್ಪಲೆಡಿತ್ತಿಲ್ಲೆ ! ಆ ವಿಷಯವ ಮನೆವಕ್ಕೆ ಸೂಚನೆ ಕೊಡ್ಲೆ ಗೆಂದೆ ಬಂದದು . ಬಾಯಿ ಬಾರದ್ದ ದನಗೊಕ್ಕೆ ಬುದ್ದಿ ಕಮ್ಮಿ ಅಲ್ಲ!

  [Reply]

  VN:F [1.9.22_1171]
  Rating: +2 (from 2 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಚೆಲ ಗೋಪಾಲನೇ, ಒಳ್ಳೆ ಬುದ್ದಿವಂತ. ಹಾಂಗಿಪ್ಪಗ ಹೋರಿಗೊ, ಹಶುಗೊ ಮದಲೆ ಇದ್ದಿದ್ದದು ಅಪ್ಪು. ಒಳ್ಳೆ ಶುದ್ದಿ.
  ಪುಳ್ಳಿ ಕೂಸಿನ ಪಟ್ಟಾಂಗವುದೆ ಲಾಯಕಿತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪೆರ್ಲದಣ್ಣಚೆನ್ನೈ ಬಾವ°ಪ್ರಕಾಶಪ್ಪಚ್ಚಿಬೊಳುಂಬು ಮಾವ°ಕಾವಿನಮೂಲೆ ಮಾಣಿಅಕ್ಷರ°ಅನು ಉಡುಪುಮೂಲೆಪುತ್ತೂರುಬಾವವೇಣಿಯಕ್ಕ°vreddhiಒಪ್ಪಕ್ಕಶಾಂತತ್ತೆಅಜ್ಜಕಾನ ಭಾವಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆಶುದ್ದಿಕ್ಕಾರ°ಅನುಶ್ರೀ ಬಂಡಾಡಿಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿಶೀಲಾಲಕ್ಷ್ಮೀ ಕಾಸರಗೋಡುನೆಗೆಗಾರ°ಬಟ್ಟಮಾವ°ಮುಳಿಯ ಭಾವದೇವಸ್ಯ ಮಾಣಿಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ