Oppanna.com

ಗೋವರ್ಧನ ಗಿರಿನಗರ, ಗೋವಿಂದ..!

ಬರದೋರು :   ಒಪ್ಪಣ್ಣ    on   15/07/2016    5 ಒಪ್ಪಂಗೊ

ಮೊನ್ನೆ ಎಡಪ್ಪಾಡಿ ಬಾವನ ಸಂಸಾರ ರಜೆ ಹಾಕಿ ಊರಿಂಗೆ ಬಂದಿದ್ದರಲ್ಲಿ ಕಾವೇರಿಕ್ಕಾನದ ಪೂಜೆಲಿ ಮಾತಾಡ್ಳೆ ಸಿಕ್ಕಿದವು. ಮಾತಾಡ್ಳೆ ಸಿಕ್ಕದ್ದೆ, ಕಾಣದ್ದೆ ಸುಮಾರು ಸಮಯ ಆಗಿತ್ತು. ಅವರ ಕುಂಞಿಮಗಳು ಈಗ ಶಾಲೆಗೆ ಹೋಪಲೆ ಸುರು ಮಾಡಿ ದೊಡ್ಡ ದೊಡ್ಡ ಆಟ ಆಡ್ತು! ಅದೇ ನಮುನೆ ಬೇರೆ ಸುಮಾರು ಬದಲಾವಣೆ ಆಯಿದು.
ಬೈಲಿಲೂ ಕೆಲವು ಜೆನ ಊರು ಬಿಟ್ಟು ಹೆರಂಗೆ ಹೋಯಿದವು, ಕೆಲವು ಜೆನ ಹೆರಂದ ಊರಿಂಗೆ ಬಯಿಂದವು, ಕೆಲವು ಜೆನ ಕಾಣೆ ಆಯಿದವು, ಕೆಲವು ಜೆನ ಹೊಸಬ್ಬರು ಬಯಿಂದವು.
ಬದಲಾವಣೆಯೇ ಇಲ್ಲದ್ದರೆ – ಬೆಳವಣಿಗೆ ಇಲ್ಲೆ ಹೇಳಿ ಅರ್ತ ಅಡ. ಪ್ರತಿ ಬದಲಾವಣೆಯೂ ಒಂದೊಂದು ಬೆಳವಣಿಗೆಯ ಸೂಚಕ.
ಅದಿರಳಿ.

ಆದರೆ, ಎಡಪ್ಪಾಡಿ ಬಾವನ ತಲೆಕಸವಿನ ಬಣ್ಣ ಮಾಂತ್ರ ಬದಲಾಯಿದೇ ಇಲ್ಲೆ.  ಅವರ ಹಲ್ಲು ಎಷ್ಟು ಬೆಳ್ಳಂಗೆಯೋ – ಅಷ್ಟೇ ಕಪ್ಪು ಅವರ ತಲೆಕಸವು.
ಅಂದು ಇದ್ದ ನಮುನೆಯೇ ಈಗಳೂ ಇದ್ದು. ಅದೇ ನಮುನೆ ಕಪ್ಪು.
ಮೊನ್ನೆ ಹೀಂಗೇ ಕುಶಾಲಿಂಗೆ ಮಾತಾಡುವಗ ಕೇಳಿದೆ – ಅದಪ್ಪು ಎಡಪ್ಪಾಡಿ ಭಾವಾ, ನಿಂಗಳ ತಲೆಕಸವು ಇನ್ನೂ ಕಪ್ಪಾಯಿದಿಲ್ಲೆಪ್ಪೋ… ಹೇದು.
ಅಷ್ಟಪ್ಪಗ ಅವು ಹೇಯಿದವು  – ಅದೂ, ಗರಗನ ಎಣ್ಣೆಯೂ, ಊರದನದ ತುಪ್ಪವೂ ಕಿಟ್ಟುತ್ತ ಕಾರಣ ಹಾಂಗೆ ಒಳುದ್ದು – ಹೇದು.
ಊರ ದನದ ತುಪ್ಪ? – ಬೆಂಗುಳೂರಿಲಿ ಅದು ಸಿಕ್ಕುತ್ತೋ – ಕೇಟೆ.
ಅಷ್ಟಪ್ಪಗ ಹೇದವು – ಗಿರಿನಗರ ಮಠ ಹೇದರೆ ಗೋವರ್ಧನ ಗಿರಿಯ ಹಾಂಗೇ ಆಯಿದು, ಅಲ್ಲಿ ಗೋಶಾಲೆ ಇದ್ದು – ಹೇದು.
~

ಬೆಂಗುಳೂರು ಮಠ ಹೇದರೆ ಗಿರಿನಗರದ ಹೃದಯಭಾಗಲ್ಲಿಪ್ಪ ಶ್ರೀರಾಮಚಂದ್ರಾಪುರ ಮಠ. ಸ್ಥಳೀಯವಾಗಿ ಅದರ ಶ್ರೀರಾಮಾಶ್ರಮ – ಹೇಳಿಯೂ ಗುರುತುಸುತ್ತವು.
ದೊಡ್ಡಗುರುಗಳ ಕಾಲಲ್ಲಿ ಕಟ್ಟಿದ ಅಡಿಪಾಯ, ಅಂದಿಂದ ಇಂದಿನ ವರೆಗೂ – ಬೆಂಗ್ಳೂರೆಂಬೋ ಬೆಂಗ್ಳೂರಿಲಿ ನಮ್ಮ ಸಮುದಾಯಕ್ಕೆ ಒಂದು ಆಧಾರಭವನ ಆಗಿ ಇದ್ದಾಡ.
ಸುರುವಿಂಗೆ ಬರೇ ಮೂಲಸ್ವರೂಪವಾದ ಶ್ರೀರಾಮನ ಗುಡಿಂದ ಆರಂಭವಾಗಿ, ಹಂತಹಂತವಾಗಿ ಮೇಲೆ ಬಂತಾಡ.
ಕ್ರಮೇಣ ಅದರ ಸುತ್ತದ ಗೋಪುರ,
ಅದಾಗಿ ಗೋಪುರದ ಮಾಳಿಗೆ,
ಅದಾಗಿ ಅದರಿಂದ ಹೆರಾಣ ಪಾಕಶಾಲೆ,
ಅದಾಗಿ ಅದರ ಎದುರಾಣ ಯಾಗಶಾಲೆ,
ಅದಾಗಿ ಅದರ ಒತ್ತಕ್ಕೆ ಒಂದು ಗೋಶಾಲೆ – ಇಷ್ಟುದೇ ಹಂತಹಂತವಾಗಿ ರಚನೆ ಆತಾಡ.

ಅಕೇರಿಯಾಣದ್ದು ಎಂತರ? – ಗೋಶಾಲೆ!
ಅಪ್ಪು, ದೇವಸ್ಥಾನ, ಮಠ ಹೇಳಿದ ಮತ್ತೆ ಅದಕ್ಕೆ ಅದರದ್ದೇ ಆದ ಗೋಶಾಲೆ ಬೇಕು, ಅಲ್ಯಾಣ ದೇವರಿಂಗೆ ಆ ಗೋಶಾಲೆಂದಲೇ ಹಾಲು ಉತ್ಪತ್ತಿ ಆಯೇಕು – ಹೇಳ್ಸು ನಮ್ಮ ಗುರುಗಳ ಆಶಯ ಆಡ.
ಹಾಂಗಾಗಿ, ವ್ಯವಸ್ಥೆ ಎಷ್ಟೇ ಸಣ್ಣದಿರಲಿ, ಜಾಗೆ ಎಷ್ಟೇ ಸಣ್ಣದಿರಲಿ, ಪೇಟೆ ಎಷ್ಟೇ ದೊಡ್ಡದಿರಲಿ, ಅಲ್ಲಿ ಒಂದು ಗೋಶಾಲೆ – ಅಪ್ಪಲೇ ಬೇಕು – ಹೇಳ್ತ ಇಚ್ಛಾಶಕ್ತಿಲಿ, ಒಂದು ಗೋಶಾಲೆ ತಯಾರಾತು.
ನಂದಿನಿ ಗೋಶಾಲೆ – ಹೇದು ಆ ಗೋಶಾಲೆಗೆ ಹೆಸರು.
~
ಸಣ್ಣದಾದರೂ-ಚೊಕ್ಕ ಬಾಚಟ್ಟಿಲಿ ಭಾರತದ ದೇಶೀಯ ತಳಿಯ ದನಗೊ ಹಲವೂ ಇದ್ದವಾಡ.
ಎಲ್ಲೆಲ್ಲಿಂದಲೋ ಸಂಪಾಲುಸಿದ ಹಸಿಹುಲ್ಲು ಬಂದು ಮುಟ್ಟುತ್ತಡ ಆ ದನಗೊಕ್ಕೆ.
ಆರಾರೋ ಕೊಡುವ ಗೋಗ್ರಾಸಂಗೊ ಅಲ್ಲಿ ಸಿಕ್ಕುತ್ತಡ.
ಭಕ್ತರು ಮಾಡ್ತ ಗೋಪೂಜೆ ಅವಕ್ಕೆ ಸದಾ ಸಿಕ್ಕುತ್ತಾ ಇರ್ತಾಡ.
ಅದಕ್ಕೆ ಪ್ರತಿಯಾಗಿ ಪೂಜೆಗೊಕ್ಕೆ ಗೋಮೂತ್ರ, ಗೋಮಯವನ್ನೂ, ಒಳ್ಳೆ ಗೊಬ್ಬರವನ್ನೂ, ಶುದ್ಧ ಹಾಲನ್ನೂ ಕೊಡ್ತವಡ.
ಪೇಟೆ ಆದ ಪೇಟೆಲಿ ಇಷ್ಟು ವೆವಸ್ತೆ ಇಪ್ಪದು ನಿಜಕ್ಕೂ ಅದ್ಭುತವೇ ಸರಿ – ಹೇಳ್ತದು ಎಡಪ್ಪಾಡಿಭಾವನ ಅಭಿಮತ.
~

ಅದರೊಟ್ಟಿಂಗೆ, ಇನ್ನೊಂದು ಶುದ್ದಿ ಎಂತ ಹೇದರೆ,
ಅದೇ ಗಿರಿನಗರ ಮಠಲ್ಲಿ ಇದೇ ಹತ್ತೊಂಬತ್ತರಿಂದ ಗುರುಗಳ ಚಾತುರ್ಮಾಸ್ಯ ಸುರು ಅಪ್ಪದು.
ಚಾತುರ್ಮಾಸ್ಯ ಹೇದರೆ ನಾಲ್ಕು ಪಕ್ಷದ ವ್ರತ.
ಒರಿಶಕ್ಕೊಂದರಿ ಸನಾತನಿಗೊ ಆ ವ್ರತ ಮಡಿರೆ ಶ್ರೇಷ್ಠ- ಹೇಳ್ತದು ನಮ್ಮ ನಂಬಿಕೆ.
ನಮ್ಮಲ್ಲೇ ಶ್ರೇಷ್ಠರಾದ ಯತಿಗೊ ಅದರ ಮಾಡುವಾಗ, ನಾವು ಒಂದರಿ ಹೋಗಿ ಭೇಟಿ ಆಗಿ ಬಪ್ಪದು – ಪುಣ್ಯಕಾರ್ಯ.
ನಮ್ಮ ಗುರುಗೊ ಚಾತುರ್ಮಾಸ್ಯಾಚರಣೆ ಮಾಡುವಾಗ ನಾವು ಹೋಗಿ ಅಡ್ಡಬಿದ್ದು ವ್ಯಾಸಮಂತ್ರಾಕ್ಷತೆ ತೆಕ್ಕೊಂಡು ಬಪ್ಪದು ನಮ್ಮ ಕ್ರಮ.
ಆ ಪ್ರಕಾರಲ್ಲಿ ಈ ಸರ್ತಿಯಾಣ ಇಪ್ಪತ್ತಮೂರನೇ ಒರಿಷದ ಚಾತುರ್ಮಾಸ್ಯ – ಬೆಂಗುಳೂರಿನ ಗಿರಿನಗರಲ್ಲಿ ಆಡ.
~
ಗಿರಿನಗರಲ್ಲಿ ಈ ಸರ್ತಿ ನೆಡವ ಚಾತುರ್ಮಾಸ್ಯ “ಗೋ ಚಾತುರ್ಮಾಸ್ಯ” – ಹೇದು ಹೆಸರಾಡ.
ಇಡೀ ಚಾತುರ್ಮಾಸ್ಯವೇ ಗೋವಿನ ಬಗೆಗೆ, ಗೋವಿನ ಬಗ್ಗೆ ಕೆಲಸ ಮಾಡಿದ ವ್ಯಕ್ತಿಗಳ ಬಗೆಗೆ, ಗೋವಿನ ಬಗ್ಗೆ ಚಿಂತನೆಗಳ ಬಗೆಗೆ ಇತ್ಯಾದಿ.
ಗೋಸೇವೆಲಿ ವಿಶೇಷ ಛಾಪು ಮೂಡುಸಿದ ನಮ್ಮ ಗುರುಗೊ, ಒಂದಿಡೀ ಚಾತುರ್ಮಾಸ್ಯವನ್ನೇ ಗೋಸೇವೆಗಾಗಿ, ಅದರ ಸಚ್ಚಿಂತನೆಗಾಗಿ ಅರ್ಪಣೆ ಮಾಡುದಿದ್ದಲ್ಲದೋ – ಅದು ನಿಜವಾಗಿಯೂ ಅದ್ಭುತವೇ ಸರಿ!
~
ಬನ್ನಿ, ನಾವೆಲ್ಲರೂ ಹೋಪೊ, ಗುರುಗಳ ಕೈಂದ ಮಂತ್ರಾಕ್ಷತೆಯೂ, ಗೋವಿನ ಕ್ಷೀರಧಾರೆಯನ್ನೂ ಅನುಗ್ರಹ ಪಡಕ್ಕೊಂಡು ಬಪ್ಪೊ°.
ಅಕ್ಕಲ್ಲದಾ?
~
ಒಂದೊಪ್ಪ: ಪುಣ್ಯಕೋಟಿಯ ಒಳಿಶಿರೆ, ಕೋಟಿಪುಣ್ಯ ನಮ್ಮದಕ್ಕು. ಪುಣ್ಯಕೋಟಿಯ ಒಳಿಶುವ ಗುರುಪೀಠವ ಒಳಿಶಿರೆ ಇನ್ನೆಷ್ಟು ಪಾಲು ಹೆಚ್ಚುಬಕ್ಕು!

5 thoughts on “ಗೋವರ್ಧನ ಗಿರಿನಗರ, ಗೋವಿಂದ..!

  1. ಗೋವರ್ಧನ ಗಿರಿನಗರ – ಒಪ್ಪ ಶುದ್ದಿ ಒಳ್ಳೆ ತಲೆಬರಹ. ಹರೇರಾಮ.

  2. ಗುರುಪೀಠ ಅಲುಗುಸಲೆ ಆರಿಂಗೂ ಏಡಿಯ . ಆ ಬಗ್ಗೆ ಹೆದರಿಕೆ ಇಲ್ಲೆ. ಆದರೆ ದನಗಳ ಕಸಾಯಿಗೆ ಕೊಂಡೋಪದರ ಇಲ್ಲದ್ದೆ ಮಾಡ್ಳೆ ಬೇಕಪ್ಪದಿಗಾ ಸಾಧನೆ !!.ಹರೇರಾಮ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×