ಹಳ್ಳಿಲಿ ಹೇಮಾರ್ಸಿದ್ದು ಪೇಟೆಗೆ ಎತ್ತಲಿ…!!

June 24, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಗಾಲ ಹೇದರೆ ಧೋ – ಧೋ ಹೇಳ್ತ ಮಳೆ ಒಂದೇ ಬಕ್ಕಷ್ಟೆ.
ರಜ ದಿನ ಒರೆಂಗೂ ಮಳೆ ಇಲ್ಲೆ ಹೇದ ಮಾವಂದ್ರು ಈಗ ಕಿಡಿಂಜೆಲು ಹಾಕಿಂಡೇ ತೋಟಕ್ಕೆ ಹೋಪ ಹಾಂಗೆ ಆಯಿದು. ಬಂದರೆ ಒಂದೇ ಸಮಕ್ಕೆ ಬತ್ತು, ಒರತ್ತೆ ಏಳುವನ್ನಾರವೂ. ಒಳ್ಳೆ ಮಳೆ ಹೇದರೆ ಸೌಭಾಗ್ಯ.
~
ಮೊನ್ನೆ ಮೊನ್ನೆ ಬೇಸಗೆ ಮುಗಾತು.
ಅಂತೇ ಬೆಶಿಲು ಹಾಳಾವುತ್ತನ್ನೇ – ಹೇದು ಅಜ್ಜಿಯಕ್ಕೊ ಬೇಜಾರ ಮಾಡಿರೆ;
ಬೆಶಿಲು ಕಂಡಾಬಟ್ಟೆ ಆಗಿ ತೋಟಕ್ಕೆ ಕಾಚೆಲು ಎತ್ತಿತ್ತು – ಹೇದು ಅಜ್ಜಂದ್ರು ಬೇಜಾರ ಮಾಡಿಗೊಂಡಿತ್ತಿದ್ದವು.
ಅಪ್ಪು, ಈ ಸರ್ತಿ ಒಳ್ಳೆ ಬೆಶಿಲು ಸಿಕ್ಕಿದ್ದು ಅಜ್ಜಿಯಕ್ಕೊಗೆ.
ಹಲಸ್ನಾಯಿ ಇಪ್ಪೋರು ಹಪ್ಪಳ ಮಾಡಿದವು,
ಮೆಣಸು ಕೃಷಿ ಇದ್ದೋರು ಬಾಳ್ಕು ಮಾಡಿದವು,
ಸಾಬಕ್ಕಿ ತಂದೋರು ಸೆಂಡಗೆ ಮಾಡಿದವು,
ಬೇಳೆ ಸಿಕ್ಕಿದೋರು ಶಾಂತಾಣಿ ಮಾಡಿದವು,
ಮಾಯಿನಣ್ಣು ಸಿಕ್ಕಿದೋರು ಮಾಂಬಳ ಮಾಡಿದವು,
ದರ್ಭೆ ಹುಲ್ಲು ಇಪ್ಪೋರು ಕೆರಸಿ ಕಟ್ಟು ಮಾಡಿದವು,
ಭರಣಿ ಇದ್ದೋರು ಉಪ್ಪಿನಕಾಯಿ ಹಾಕಿಗೊಂಡವು,
ಸೊಳೆ ಸಿಕ್ಕಿದೋರು ಉಪ್ಪಿನ ಸೊಳೆ ಹಾಕಿದವು,
ಕೂವೆ ಗೆಂಡೆ ಸಿಕ್ಕಿದೋರು ಕೂವೆಹೊಡಿ ಅರಿಶಿ ಮಡಗಿದವು,
ಜೇಡಿ ಮಣ್ಣು ಸಿಕ್ಕಿದವು ಸೇಡಿಹೊಡಿ ಮಾಡಿದವು – ಅಂತೂ ಎಲ್ಲ ಮನೆ ಹೆಮ್ಮಕ್ಕಳೂ ಅವಕ್ಕೆ ಎಡಿಗಾದಷ್ಟು ಬೆಶಿಲಿನ ಬಳಕೆ ಮಾಡಿಗೊಂಡಿದವು.
ಇದೆಲ್ಲವೂ ಮುಂದಕ್ಕೆ ಹೇದು ತೆಗದು ಮಡಗುಸ್ಸು ಹೆಮ್ಮಕ್ಕಳ ಕ್ರಮ.
ಎಡಿಗಪ್ಪಗ ಮಾಡಿ ಹೇಮಾರ್ಸಿ ಮಡಗಿರೆ, ಬೇಕಪ್ಪಗ ಉಪಯೋಗುಸಲಕ್ಕನ್ನೇ’ದು ಯೋಚನೆ.
~
ಈಗ ಮಳೆಗಾಲ ಬಂತು.
ಮಾಡಿ ಮಡಗಿದ ಮಾಂಬಳ, ಸೊಳೆ, ಹಪ್ಪಳ-ಸೆಂಡಗೆ ಎಲ್ಲ ಹೆರ ಬತ್ತ ಕಾಲ.
ಹೆಮ್ಮಕ್ಕಳ ಹೇಮಾರ್ಸಿದ ಕಟ್ಟಂಗೊ ಪೂರ ಹೆರ ಬಪ್ಪ ಕಾಲ.
ಜೋರು ಮಳಗೆ ಸುದ್ದಿ ಮಾತಾಡೆಂಡು ಕಾಯಿ-ಹಪ್ಪಳ ತಿಂತ ಕಾಲ.
ಬಂದೋರಿಂಗೆ ಕೊಂಡೋಪಲೆ ಒಂದೊಂದು ಕಟ್ಟ ಕೊಡ್ತ ಕಾಲ. ಅಲ್ಲದೋ?
~
ಅದೆಲ್ಲ ಹಳ್ಳಿ ಕತೆ ಆತು.
ಆದರೆ ಪೇಟೆಲೇ ಕೂರ್ತ ಬಾವಯ್ಯಂಗೆ ಇದೆಲ್ಲ ಎಲ್ಲಿ ಸಿಕ್ಕುತ್ತು?
ಏನಿದ್ದರೂ ಪೇಟೆ ತಿಂಡಿಗಳೇ ಆತಷ್ಟೆ, ಊರದ್ದು ಒಂದೂ ಸಿಕ್ಕುತ್ತೇ ಇಲ್ಲೆ – ಹೇದು ಮದಲಿಂಗೆ ಬೇಜಾರ ಇದ್ದತ್ತು.
ಈಗ – ಗ್ರಾಮರಾಜ್ಯ ಬಂದ ಮತ್ತೆ ಆ ಬೇಜಾರವೇ ಇಲ್ಲೆ – ಹೇದು ಬೆಂಗುಳೂರಿಲಿಪ್ಪ ಜೆಡ್ಡು ಭಾವ ಹೇಳ್ತವು.

ಅಪ್ಪಡ.
ನಮ್ಮ ಊರಿನ ಹೆಮ್ಮಕ್ಕಳ ತಯಾರಿಲಿ ಆದ – ಹೇಮಾರ್ಸಿ ಮಡಗಿದ ಸಾಮಾನುಗೊ – ಪೇಟೆಲಿಪ್ಪ ಬಂಧುಗೊಕ್ಕೆ ಎತ್ತುತ್ತಾ ಇದ್ದಾಡ.
ಬದಿಯೆಡ್ಕದ ಅತ್ತೆಕ್ಕೊ ಮಾಡಿದ ಉಪ್ಪಿನಕಾಯಿ, ಪಂಜಚಿಕ್ಕಯ್ಯನಲ್ಲಿ ಮಾಡಿದ ಸೆಂಡಗೆ, ಕೋಳ್ಯೂರು ದೊಡ್ಡಮ್ಮ ಮಾಡಿದ ಬಾಳ್ಕು, ವಿಟ್ಳದಜ್ಜಿ ಮಾಡಿದ ಮಾಂಬ್ಳ, ಪಳ್ಳತಡ್ಕ ಮಾವ° ಮಾಡಿದ ಜೆನಿವಾರ, ಇದೆಲ್ಲವೂ ಈಗ ಚೆಂದಕೆ ಪೇಕಾಗಿ ಬೆಂಗುಳೂರಿಂಗೆ ಹೋಪದಡ.
ಅಲ್ಲಿ ಅದೆಲ್ಲ ಒಂದು ವೆವಸ್ತೆಲಿ ಜೋಡಣೆ ಆಗಿರ್ತಾಡ.
ಬೆಂಗುಳೂರಿಲಿ – ಆರಿಂಗೆಲ್ಲ ಯೇವೆಲ್ಲ ಐಟಮ್ಮುಗೊ ಬೇಕು – ಹೇದು ಮೊದಲೇ ಗೊಂತುಮಾಡಿರ್ತವಾಡ.
ಅವಕ್ಕವಕ್ಕೆ ಬೇಕಾದ್ಸರ ಆಯ್ಕೆ ಮಾಡಿ ಪಟ್ಟಿ ಮಾಡಿ ಪೇಕು ಮಾಡಿ – ಅವರ ಮನೆ ಬಾಗಿಲಿಂಗೆ ಎತ್ತುಸುತ್ತವಾಡ.

ಇದರಿಂದ ನೈಸರ್ಗಿಕ, ಸಾರಯುಕ್ತ ಆಹಾರಂಗೊ ಬೆಂಗುಳೂರಿನ ಪೇಟೆಗೆ ಎತ್ತುದಲ್ಲದ್ದೆ, ಹಳ್ಳಿಗಳಲ್ಲಿಪ್ಪ ಗ್ರಾಮೋದ್ಯೋಗಂಗೊ ಬೆಳೆತ್ತು.
ಕಷ್ಟಲ್ಲಿಪ್ಪ ಹೆಮ್ಮಕ್ಕೊ ಅವಕ್ಕೆ ಬೇಕಾದ್ದರಿಂದ ರಜಾ ಜಾಸ್ತಿ ಹಪ್ಪಳ ಮಾಡಿರೆ – ಆದಾಯದ ಮೂಲವೂ ಆವುತ್ತು.
ತುಪ್ಪ ಕಾಸುವಗ ಮನೆಗೆ ಬೇಕಪ್ಪಷ್ಟು ಮಡಗಿ – ಒಳುದ್ದರ ಗ್ರಾಮರಾಜ್ಯಕ್ಕೆ ಕೊಟ್ರೆ – ಹಿಂಡಿ ತಪ್ಪಲೆ ಪೈಶವೂ ಆವುತ್ತು.
ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಮತ್ತೆ ಹಳ್ಳಿಯ ಮೂಲ ಸತ್ವದ ಆಹಾರವಸ್ತುಗೊ ಶುದ್ಧರೂಪಲ್ಲಿ ಪೇಟಗೆ ಎತ್ತುವ ಅಪೂರ್ವ ಕಾಳಜಿ – ಇದೆಲ್ಲವೂ ಒಂದೇ ಸರ್ತಿಗೆ ಸಾಫಲ್ಯ ಆವುತ್ತು.
ಅಂತಾ ಯೋಜನೆಯ ಸಬಲೀಕರಣ, ಸಾಫಲ್ಯತೆಲಿ ನಾವುದೇ ಭಾಗಿಅಪ್ಪೊ°.
ನಮ್ಮ ಹತ್ತರೆ, ನಮ್ಮ ಹತ್ತರೆ ಇಪ್ಪೋರ ಹತ್ತರೆ ಹೇಮಾರ್ಸಿ ಮಡುಗುತ್ತ ಆಹಾರಂಗೊ ಇದ್ದರೆ ನಾವು ನಮ್ಮ ವಲಯ-ಮಂಡಲಂಗಳ ಗ್ರಾಮರಾಜ್ಯಪ್ರಧಾನರ ಹತ್ರೆ ಮಾತಾಡಿಗೊಂಡು ದೂರದ ಊರಿಲಿಪ್ಪ ನಮ್ಮ ಬಂಧುಗೊಕ್ಕೆ ಕೊಂಡಿ ಅಪ್ಪೊ.

ಬೆಂಗುಳೂರಿಲಿಪ್ಪ ಜೆಡ್ಡುಬಾವನ ಮನೆಲಿ ಈಗ ದಿನಾಗುಳೂ ಹೊತ್ತೋಪಗ ಚಾಯಕ್ಕೆ ಹಲಸಿನ ಹಪ್ಪಳ ಅಡ!
ಊರಿಲಿಪ ಜೆಡ್ಡುಭಾವನ ಮನೆಯ ಹಾಂಗೇ!
~
ಒಂದೊಪ್ಪ: ಹಳ್ಳಿಯ ಮೂಲಸತ್ವ ಪೇಟೆಗೆ ಎತ್ತಿದ ಹಾಂಗೇ – ಪೇಟೆಲಿ ಹೇಮಾರ್ಸಿದ ಸಂಪತ್ತು ಹಳ್ಳಿಗೂ ಎತ್ತಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಒಳ್ಳೆ ಕೆಲಸ ಆವ್ತಾ ಇದ್ದು. ಇದರಿಂದ ಬೆಳದವಂಗೆ ಸರಿಯಾದ ಬೆಲೆ ಸಿಕ್ಕುಗು. ಮಧ್ಯವರ್ತಿಗೊ ಹೆಚ್ಚು ತಿಂಬಲೆ ಇಲ್ಲದ. ಹಲಸಿನ ಕಾಯಿಗೆ ೧೦೦ ರೂಪಾಯಿ ಕೊಡೆಕಾಗಿ ಬಾರ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಒಳ್ಳೆ ಶುದ್ದಿ. ನಮ್ಮ ಊರ ಹೆಮ್ಮಕ್ಕೊ ಅಬಲೆಯರಲ್ಲ ಸಬಲೆಯರು ಹೇಳಿ ಇತ್ತೀಚಗೆ ಕೆಲವು ವರ್ಷನೆಂದ ಗೊಂತಾವುತ್ತು. ಒಳ್ಳೆ ಬೆಳವಣಿಗೆ. ಹಾಂಗೇ ಪ್ರಕೃತಿಯ ವೈಚಿತ್ರ್ಯ ನೋಡಿ!. ಎರಡು ಮೂರು ವಾರ ಹಿಂದೆ [ಜೂನ್ 4, 5 ತಾರೀಕು ವರೆಗೆ ] ನಮ್ಮ ಬಾವಿ ಒಣಗಿ ಹಸೆಹಾಕಿ ಮನುಗುತ್ತಂಗಿದ್ದತ್ತು !. ಈಗ ಬಗ್ಗಿರೆ ಕೈಗೆ ಸಿಕ್ಕುಗು ನೀರು!!!. ಯೋಚನೆ ಮಾಡಿರೆ ಇದೆಲ್ಲಿದ್ದತ್ತು!!!?.

  [Reply]

  VN:F [1.9.22_1171]
  Rating: 0 (from 0 votes)
 3. ಹೇಮಾರ್ಸಿದ್ದು ಹೇಳಿ. ಹೇಳುಗ ಅನು ಮೋಸ ಮಾಡಿದ್ದು ಹೇಳಿ ಗ್ರೇಶಿದೆ. ಮತ್ತೆ ಗೊಂತಾತು ಸ್ಟಾಕ್ ಮಾಡಿದ್ದು ಹೇದು.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ -ಹೇಳಿ ಗೀತೆಲಿ ಹೇಳಿದ ಹಾಂಗೆ ಪೇಟೆ ಮತ್ತೆ ಹಳ್ಳಿಯವು ಸಹಕಾರಂದ ಬದುಕಲಿ

  [Reply]

  VA:F [1.9.22_1171]
  Rating: 0 (from 0 votes)
 5. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಪೇಟೆ ಹಳ್ಳಿಗಳ ನೆಡುವಣ ಸಂಪರ್ಕ ಸೇತು ನಮ್ಮ ಹವ್ಯಕ ಹೆಮ್ಮಕ್ಕೊ ತಯಾರಿಸಿದ ತಿಂಡಿಗೋ ಹೇಳುವದು ನಿಜವಾಗಿಯೂ ಹೆಮ್ಮೆಯ ವಿಷಯ. ಪೇಟೆಲಿ ಹೇಮಾರ್ಸಿದ ಸಂಪತ್ತು ಹಳ್ಳಿಗೆತ್ತಲಿ ಹೇಳುವ ಮಾತು ಬಹಳ ಅರ್ಥಪೂರ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಬೋಸ ಬಾವಡೈಮಂಡು ಭಾವಚುಬ್ಬಣ್ಣಶುದ್ದಿಕ್ಕಾರ°ಶ್ಯಾಮಣ್ಣವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಪೆರ್ಲದಣ್ಣಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕಜಯಗೌರಿ ಅಕ್ಕ°ರಾಜಣ್ಣನೀರ್ಕಜೆ ಮಹೇಶಸುಭಗಮುಳಿಯ ಭಾವಮಾಲಕ್ಕ°ಕಜೆವಸಂತ°ಗಣೇಶ ಮಾವ°ಹಳೆಮನೆ ಅಣ್ಣಕೊಳಚ್ಚಿಪ್ಪು ಬಾವನೆಗೆಗಾರ°ಉಡುಪುಮೂಲೆ ಅಪ್ಪಚ್ಚಿಗೋಪಾಲಣ್ಣಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ