ಪೂರ್ಣಗುರುವಿನ ಪೂರ್ಣಾನುಗ್ರಹ ಪೂರ್ಣಿಮೆಯ ದಿನ ಆಗಲಿ..

ಪೂರ್ಣಿಮಾ – ಹೇಳಿರೆ ಚಂದ್ರ° ಪೂರ್ತಿಯಾಗಿ ಕಾಂಬ ಸಮೆಯ.
ಅಮಾ-ಹೇಳಿತ್ತುಕಂಡ್ರೆ ಚಂದ್ರ ಇಲ್ಲದ್ದೆ ಅಪ್ಪದು ಹೇಳಿಗೊಂಡು! ಅಮಾವಾಸ್ಯಾ – ಹೇಳಿರೆ ಚಂದ್ರ° ಇಲ್ಲದ್ದೆ ಆದ ದಿನ ಇದಾ – ಮಾಷ್ಟ್ರುಮಾವ° ಹೇಳುಗು.
ಬಾನಲ್ಲಿ ಚಂದ್ರ° ಒಂದೇ ನಮುನೆ ಇರ್ತನಿಲ್ಲೆ. ಕೆಮ್ಕದ ಅಡಕ್ಕೆ ರೇಟಿನ ಹಾಂಗೆ – ಹೆಚ್ಚು ಕಮ್ಮಿ ಆವುತ್ತಾ ಇರ್ತ°.

ಆದರೆ ಈ ಹೆಚ್ಚು ಕಮ್ಮಿ ಅಪ್ಪ ಅವಧಿ ನಿರ್ದಿಷ್ಟವಾಗಿರ್ತು, ಜೋಯಿಷಪ್ಪಚ್ಚಿಯ ಪ್ರಕಾರ.
ಆ ಬಗ್ಗೆ ನಾವು ಒಂದರಿ ಶುದ್ದಿ ಮಾತಾಡಿದ್ದು, ಅಲ್ಲದೋ?
ಪೂರ್ತಿ ಕತ್ತಲೆಯ ಅಮಾವಾಸೆಂದ ಚಂದ್ರ ಗೆರೆರೂಪಲ್ಲಿ ಬೆಳದು ಬೆಳದು – ತೋರ ಆಗಿ ಆಗಿ, ಉರುಟುರುಟು – ಶುಬತ್ತೆಯ ಹಾಂಗೆ – ಬೆಳಿಬೆಳಿಯ ಪೂರ್ಣಮಿಯ ವರೆಗೆ ಅವನ ಬೆಳವಣಿಗೆ ಕೇವಲ ಹದಿನೈದು ತಿತಿಲಿ ಆವುತ್ತು.
ಇದೊಂದು ಸೃಷ್ಟಿ ವೈಚಿತ್ರ್ಯವೇ ಅಲ್ಲದೋ?

ಒರಿಷಪೂರ್ತಿ ಒಂದೊಂದು ದಿನ ಒಂದೊಂದು ವಿಶೇಷ ಇರ್ತು ಬಾರತಲ್ಲಿ!
ನಾಳ್ತು – ಆಯಿತ್ಯವಾರ ಬತ್ತ ಪೂರ್ಣಮಿಗುದೇ ಒಂದು ವಿಶೇಷ ಇದ್ದು. ಅದೆಂತರ?
ಅದುವೇ ಗುರುಪೂರ್ಣಿಮಾ..!!
~

ವೇದವ ತುಂಡುಮಾಡಿದ ವ್ಯಾಸಮುನಿಗೊ..

ವೇದವ ತುಂಡುಮಾಡಿದ ವ್ಯಾಸಮುನಿಗೊ..

ಮದಲಿಂಗೆ, ಶಂಬಜ್ಜ° ಒಂದು ಕತೆ ಹೇಳುಗು –
ಕೃಷ್ಣದ್ವೈಪಾಯನ ಋಷಿ ತಪಸ್ಸುಮಾಡಿಗೊಂಡಿಪ್ಪಗ ಅವಕ್ಕೆ ಕೆಲವು ಋಕ್ಕುಗೊ ಕೇಳಿತ್ತಡ. ಋಕ್ಕು – ಹೇಳಿರೆ ಮಂತ್ರಗುಚ್ಛಂಗೊ.
ಕೇಳಿತ್ತಡ – ಹೇಳಿರೆ ಎಲ್ಲಿಂದ? ಆರು ಹೇಳಿದ್ದು?
ಆರು ಹೇಳದ್ದೆಯೂ ಕೇಳಿತ್ತು – ಬಂಡಾಡಿಅಜ್ಜಿಯ ರೇಡ್ಯಲ್ಲಿ ಕೇಳಿದಹಾಂಗೆ!!
ಆದರೆ ಅಂಬಗ ರೇಡ್ಯಲ್ಲಿ ಕೇಳಿದ್ದಲ್ಲ, ಬದಲಾಗಿ ದೇವಲೋಕಂದ ಕೇಳಿದ್ದು. ನಿಜವಾದ ಆಕಾಶವಾಣಿ.
ಅದರ ಹೇಳಿದ ಭಗವಂತ ಲೋಕಕ್ಕೇ ಗುರುಸ್ಥಾನಲ್ಲಿಪ್ಪ ಲೋಕಗುರು.

ಆ ಋಕ್ಕುಗೊ ಜ್ಞಾನನಿಧಿ ಆಗಿತ್ತಡ. ಅತ್ಯಂತ ಕ್ಲಿಷ್ಟವಾದ ಜೀವರಹಸ್ಯಂಗೊ ಸರಳವಾಗಿ ಆ ಋಕ್ಕುಗಳಲ್ಲಿ ಅಡಕವಾಗಿತ್ತಡ.
ಮನುಕುಲದ ಅಷ್ಟೂ ಜ್ಞಾನ ಅದರ್ಲಿತ್ತಡ.
’ವಿತ್’ – ಹೇಳಿರೆ ಜ್ಞಾನ ಹೇಳಿ ಅರ್ತ ಅಡ. ವಿದ್ಯೆ, ವಿದ್ಯಾವಂತ – ಹೇಳಿ ಅದೇ ಶಬ್ದದ ರೂಪ ಅಲ್ಲದೋ?!
ಹಾಂಗೆ, ವಿತ್ – ಜ್ಞಾನವೇ ಅದರಲ್ಲಿದ್ದ ಕಾರಣ ಅದರ ವೇದ ಹೇಳಿದವಡ ಋಷಿಗೊ.

ಆ ಋಕ್ಕುಗೊ ಒಟ್ಟಾಗಿ ಒಂದೇ ಆಗಿ ಕೇಳಿತ್ತು.
ಯಾವದೇ ಪ್ರಭೇದಂಗೊ, ವಿಂಗಡಣೆ ಇತ್ತಿಲ್ಲೆ, ಅಷ್ಟುದೇ ಋಕ್ಕುಗೊ ಒಂದೇ ಪುಸ್ತಕಲ್ಲಿ, ಒಂದೇ ಶಾಯಿಲಿ, ಒಂದೇ ಗೆರೆಲಿ ಬರದಿದ್ದ ನಮುನೆ..!
ಋಕ್ಕುಗಳ ಮನನ ಮಾಡಿಗೊಂಡು, ಅದರದರ ವಸ್ತುವಿನ ಅನುಗುಣವಾಗಿ ಕೃಷ್ಣದ್ವೈಪಾಯನ ಮಹರ್ಷಿ ಸರಳವಾದ ನಾಕು ತುಂಡು ಮಾಡಿದವಡ.
ಒಂದಾಗಿದ್ದ ವೇದವ ನಾಕು ತುಂಡುಮಾಡಿದ ಈ ಮಹಾಮುನಿಗೆ (ವೇದವ ತುಂಡುಮಾಡಿದವ) ವೇದವ್ಯಾಸ° ಹೇಳಿ ಹೆಸರಾತಡ.

ವ್ಯಾಸ ಹೇಳಿರೆ ಒಂದು ವೃತ್ತವ ತುಂಡುಮಾಡ್ತದಿದಾ – ನೆಕ್ಕರೆಯ ಗಣಿತಪಂಡಿತರು ಮದಲಿಂಗೇ ಹೇಳುಗು!
ಈ ವೇದವ ತುಂಡುಮಾಡುದುದೇ ಸುಲಬದ ಕೆಲಸ ಅಲ್ಲ! ಅರ್ತಬಪ್ಪ ಹಾಂಗೆ, ಯೇವದರದ್ದುದೇ ತೂಕ ಇಳಿಯದ್ದ ಹಾಂಗೆ ಮಾಡೆಕ್ಕು.
ಜೋಗಿಬೈಲಿನ ಹತ್ತರೆ ಹತ್ತೆಕ್ರೆಯ ಪಾಲುಮಾಡ್ಳೆ ಹತ್ತೊರಿಷ ಹಿಡುದ್ದು ನಿಂಗೊಗೆಲ್ಲ ಗೊಂತಿದ್ದನ್ನೆ – ಇಷ್ಟು ತೂಕದ ವೇದವ ಮನನ ಮಾಡಿಗೊಂಡು, ಕಂಠಸ್ಥ ಮಾಡಿಗೊಂಡು ಅದರ ಪಾಲುಮಾಡುದು ಎಷ್ಟು ಕಷ್ಟದ ಕೆಲಸ ನಿಂಗಳೇ ಯೋಚನೆ ಮಾಡಿಗೊಳ್ಳಿ!!

ಅಂತೂ ಮಾಡಿದವಡ, ಹೇಂಗೆ?
ಸಮಗ್ರ ಜ್ಞಾನನಿಧಿ ಒಂದಿದ್ದದು – ಋಕ್-ಯಜುಃ-ಸಾಮ-ಅಥರ್ವ ಒಟ್ಟು ನಾಕು ವೇದಂಗೊ ಆತು.
ಒಂದೊಂದರಲ್ಲಿ ಒಂದೊಂದು ವಿಶೇಷ, ಋಗ್ವೇದ ಪಾರಾಯಣಕ್ಕೆ ವಿಶೇಷ, ಯಜುರ್ವೇದಲ್ಲಿ ತಂತ್ರ-ಪ್ರಯೋಗಂಗೊ ವಿಶೇಷ, ಸಾಮವೇದವ ಗಾನಕ್ಕೆ ವಿಶೇಷ, ಅಥರ್ವವೇದ ವಿಜ್ಞಾನಕ್ಕೆ ವಿಶೇಷ – ಬಪ್ಪ ಹಾಂಗೆ ವಿಂಗಡಣೆ ಮಾಡಿದವು ವೇದವ್ಯಾಸಮುನಿ.

ಎಲ್ಲ ಋಕ್ಕುಗಳ ಒಟ್ಟಾಗಿ ಕಲಿವದರಿಂದ ನಾಲ್ಕು ಸಣ್ಣಸಣ್ಣ ವೇದಂಗೊ ಕಲಿವದು ವಿದ್ಯಾರ್ಜನೆಗೂ ಅನುಕೂಲ ಆತಡ.
ಲೋಕಗುರು ಭಗವಂತನಿಂದ ಕೇಳಿದ ಋಕ್ಕುಗಳ ಮನುಕುಲಕ್ಕೆ ಬೇಕಾದ ಹಾಂಗೆ ವಿಂಗಡಣೆ ಮಾಡಿಕೊಟ್ಟ ವೇದವ್ಯಾಸ° ಕೃಷ್ಣದ್ವೈಪಾಯನ ಮುನಿ ಮನುಕುಲದ ಆದಿಗುರು ಆದವು.

ಇದೇ ಮಹರ್ಷಿಯೇ ಮುಂದೆ ಪಂಚಮವೇದ ಆದ ಮಹಾಭಾರತಕಾವ್ಯದ ರಚನೆಗೆ ಮುಖ್ಯಪಾತ್ರರಾದವು.
ಮಹಾಭಾರತಲ್ಲಿ ವರ ಕೊಟ್ಟು ಧೃತರಾಷ್ಟ್ರ- ಪಾಂಡುವಿನ ಜನನಕ್ಕೂ, ಕುರುವಂಶದ ಜನನಕ್ಕೂ, ಹಾಂಗೇ ಪೌರಾಣಿಕ ಭಾರತದ ವೃದ್ಧಿಗೂ ಕಾರಣರಾದವು ಈ ಆದಿಗುರುಗೊ.
ಶಂಬಜ್ಜ° ಹೇಳುದು ರಜ ರಂಗಾಗಿ ಇದ್ದರೂ; ಅದರ್ಲಿ ನಮ್ಮ ನಂಬಿಕೆಗೊ ಇದ್ದು.
~

ಅದ್ವೈತಗುರು ಶ್ರೀ ಶಂಕರಾಚಾರ್ಯರು

ಅದ್ವೈತಗುರು ಶ್ರೀ ಶಂಕರಾಚಾರ್ಯರು

ಅದೇ ಮಹಾಭಾರತದ ಚೌಕಟ್ಟಿಲಿ, ಅದೇ ದೈವತ್ವಲ್ಲಿ ಭೂಲೋಕ ಬೆಳಗಿಯೊಂಡು ಇತ್ತು.
ಹಿಂದೂ ಜೀವನಪದ್ಧತಿಲಿ ರಜ ರಜ ವಿತ್ಯಾಸ ಮಾಡಿಗೊಂಡು ಬೇರೆ ’ಧರ್ಮ’ ಹೇಳ್ತ ಲೆಕ್ಕಲ್ಲಿ ಬೌದ್ಧ, ಜೈನ ಪಂಗಡಂಗೊ ಉದಯ ಆತು.
ಉದಯ ಆದ್ದು ಮಾಂತ್ರ ಅಲ್ಲ ಅದ್ಭುತ ರೀತಿಲಿ ಪ್ರಸಾರ ಆತು.
ಶುದ್ಧ ಸಂಸ್ಕೃತಲ್ಲಿಪ್ಪ ವೇದಂಗ ಅರ್ತ ಮಾಡಿಗೊಂಬಲೆ ಎಡಿಯದ್ದ ಸಾಮಾನ್ಯಜನಂಗೊಕ್ಕೆ. ಅಂಬಗಾಣ ಆಡುಮಾತಿಲಿ ಇಪ್ಪ ಪಾಲಿ ಮಂತ್ರಂಗೊ ಹೆಚ್ಚು ಬೇಗ ಅರ್ತ ಆತು, ಹೆಚ್ಚು ಇಷ್ಟ ಆತು. ಕ್ರಮೇಣ ಈ ವೇದಂಗಳ ಮುಟ್ಟುವವೇ ಇಲ್ಲೆ – ಹೇಳ್ತ ಪ್ರಸಂಗ ಬತ್ತಿತೋ ಏನೋ!
ಅಂಬಗ ಬಂದವದಾ – ನಮ್ಮ ಶಂಕರಾಚಾರ್ಯರು.
ಜನಸಾಮಾನ್ಯರಿಂಗೆ ಅರ್ತ ಆಗದ್ದ ಹಾಂಗಿರ್ತ ಜಟಿಲ ಋಕ್ಕುಗೊಕ್ಕೆ ಸರಳ ವ್ಯಾಖ್ಯೆಗೊ ಬರದು, ಬಂಡಾಡಿ ಅಜ್ಜಿಯ ಉಂಡ್ಳಕಾಳಿನ ಹಾಂಗೆ ಗಟ್ಟಿಗಟ್ಟಿ ಇಪ್ಪದರ ಕಾನಾವಜ್ಜಿಯ ಗೋದಿಹಲುವದ ಹಾಂಗೆ – ಮೆಸ್ತಂಗೆ ಮೆಸ್ತಂಗೆ ಮಾಡಿದವು.
ರುಚಿ ಹಿಡುದವಂಗೆ ಎರಡುದೇ ಕೊಶಿ, ಆದರೂ – ಜೀರ್ಣಮಾಡಿಗೊಂಬ ಹಲ್ಲೇ ಇಲ್ಲದ್ದ ಸಾಮಾನ್ಯಜನರಿಂಗೆ ಇದು ಕೊಶಿಯೇ ಅಲ್ಲದೋ?
ಭಾರತಲ್ಲಿ ಮತ್ತೊಂದರಿ ಪರಿವರ್ತನೆ ಆತು.
ಮತ್ತೊಂದರಿ ನಮ್ಮ ಸಂಸ್ಕೃತಿ ಉಗಮ ಆತು. ವೇದ, ಸಂಸ್ಕಾರಂಗೊ, ವೈದಿಕ ಕ್ರಮಂಗೊ ಮತ್ತೊಂದರಿ ಉದಯ ಆತು.
ಬೆಳಗಿ ಪ್ರಚಾರಕ್ಕೆ ಬಂತು.
ಅದಕ್ಕೆಲ್ಲ ಕಾರಣ ಅದ್ವೈತಗುರು ಶಂಕರಾಚಾರ್ಯರು, ಆದಿ ಶಂಕರರು.
ಮಾಷ್ಟ್ರುಮಾವಂಗೆ ಈ ವಿಶಯಲ್ಲಿ ಇನ್ನೂ ಜಾಸ್ತಿ ಗೊಂತಿದ್ದು, ಒಪ್ಪಣ್ಣಂಗೆ ಅಷ್ಟು ಅರಡಿಯ.
~

ಅಷ್ಟರ ವರೆಗೆ ಸಮಾಜದ ಮಧ್ಯಲ್ಲಿ ಗುರುಗಳ ಆವಾಸ ಇತ್ತಿಲ್ಲೆಡ.
ಸಮಾಜ ಸರಿಯಾಗಿ ನೆಡೇಕಾರೆ ಧರ್ಮಗುರುಗೊ ನಮ್ಮ ಸಮಾಜದ ಮಧ್ಯಲ್ಲೇ ಬೇಕಾವುತ್ತು – ಹೇಳ್ತದರ ಶಂಕರಾಚಾರ್ಯರು ಮನಗೊಂಡವಡ. ಹಾಂಗಾಗಿ ಸಮಾಜದ ಮಧ್ಯಮಧ್ಯಲ್ಲಿ ಕೆಲವು ಧರ್ಮಪೀಠಂಗಳ ಸ್ಥಾಪನೆ ಮಾಡಿದವು.
ಭಾರತಲ್ಲಿ ರಾಜ್ಯಭಾರ ಮಾಡುದು ಯೇವ ಕ್ಷತ್ರಿಯ ರಾಜನೇ ಆಗಿರಳಿ, ಆದರೆ ಸಮಾಜಕ್ಕೆ ಧರ್ಮಬೋಧೆ ಮಾಡುದು ಈ ಗುರುಗಳೇ ಆಗಿತ್ತಿದ್ದವಡ.
ಕೆಲವು ಧರ್ಮಪೀಠಂಗೊ ’ರಾಜಪೀಠ’ ಹೇಳಿಯೂ ಗುರುತಿಸಿಗೊಳ್ತಡ. ರಾಜರಿಂಗೇ ಧರ್ಮಪಾಠ ಮಾಡುದರಿಂದ ಹಿಡುದು, ಧರ್ಮಾಧರ್ಮ, ಜ್ಞಾನಾಜ್ಞಾನ, ಕರ್ಮಾಕರ್ಮ, ಸತ್ಯಾಸತ್ಯ – ವಿಚಾರಂಗಳ ತಿಳುಶುತ್ತ ಕಾರ್ಯ ಈ ಗುರುಗಳೇ ಮಾಡಿಗೊಂಡು ಇತ್ತಿದ್ದವಡ.
ಧರ್ಮಗುರುಗಳಲ್ಲಿ ವೆಗ್ತಿಯಷ್ಟೇ ಬೆಲೆ ಅವು ಇಪ್ಪ ಪೀಠ – ಧರ್ಮಪೀಠಂಗೊಕ್ಕೆ ಇದ್ದಡ.
ನಮ್ಮ ಧರ್ಮಪೀಠಲ್ಲಿ ಶಂಕರಾಚಾರ್ಯನಿಂದ ಮತ್ತೆ ಮೂವತ್ತೈದು ಜೆನ ಬಂದು, ಈಗ ಮೂವತ್ತಾರನೆಯ ಗುರುಗೊ ಇದ್ದವು, ನಮ್ಮಧರ್ಮಗುರುಗೊ.
ಅದ್ವೈತ ಗುರುಗೊ ಬರದ ಸರಳ ಸಂಸ್ಕೃತ ವ್ಯಾಖ್ಯಾನಂಗೊಕ್ಕೆ ಈಗಾಣ ಆಡುಮಾತಿಲಿ ಅರ್ತ ಕೊಟ್ಟು, ತನ್ಮೂಲಕವಾಗಿ ಈಗಾಣ ಜನಮಾನಸಕ್ಕೆ ಸೇರ್ತನಮುನೆಯ ಸಾಹಿತ್ಯ ಬೆಳವಲೆ ಕಾರಣೀಭೂತರಾಯಿದವು.
~

ಈ ಧರ್ಮಗುರುಗೊಕ್ಕೆ ಸಮಾಜದ ಎಲ್ಲಾ ದಿಕ್ಕೆ ಇಪ್ಪಲೆಡಿಗೊ?
ಹಾಂಗಾಗಿ ಒಂದೊಂದು ಸ್ಥಳೀಯ ಪ್ರದೇಶಂಗಳಲ್ಲಿ ಒಂದೊಂದು ವೈದಿಕ ಹಿರಿಯರ ಗುರುತಿಸಿ ಅವಕ್ಕೆ ವೇದಾಧ್ಯಯನ ಮಾಡ್ತ ಏರ್ಪಾಡು ಮಾಡಿ, ಊರಿಲಿ ಧರ್ಮಕಾರ್ಯಂಗಳ ನೆಡೆಶುತ್ತ ಅಧಿಕಾರ / ಕರ್ತವ್ಯ / ಹಕ್ಕಿನ ಕೊಟ್ಟು ಮಂತ್ರಾಕ್ಷತೆಕೊಟ್ಟವಡ.
ಅವು ಪೌರೋಹಿತ್ಯದ ಮೂಲಕ ನಮ್ಮ ಕುಲೋದ್ಧಾರದ ಕಾರ್ಯಲ್ಲಿ ಸಹಕರುಸುತ್ತ ಧರ್ಮಕಾರ್ಯ ಮಾಡ್ಳೆ ಸಹಕಾರ / ಸಹಯೋಗ ನಿರಂತರ ಕೊಟ್ಟೋಂಡು ಇರೆಕ್ಕಾವುತ್ತು.
ಧರ್ಮಗುರುಗಳತ್ರಂಗೆ ಹೋಪಗ ನಮ್ಮ ಪ್ರತಿನಿಧಿಯಾಗಿ, ನವಗೆ ಧರ್ಮಗುರುಗಳ ಪ್ರತಿನಿಧಿಯಾಗಿ – ನಮ್ಮೆಲ್ಲರ ಕುಲಂಗೊಕ್ಕೆ ಕುಲ ಗುರುಸ್ಥಾನಲ್ಲಿ ನಿಂದು ಆಶೀರ್ವಾದ ಮಾಡ್ತವೇ ನಮ್ಮ ಕುಲಗುರುಗೊ.
~

ಧರ್ಮಗುರುಗೊ ಶ್ರೀ ಶ್ರೀಗೊ..

ಧರ್ಮಗುರುಗೊ ಶ್ರೀ ಶ್ರೀಗೊ..

ಮದಲಿಂಗೆ ಗುರುಕುಲ ವಿದ್ಯಾಭ್ಯಾಸ ಇತ್ತು. ಮಾಣಿಗೆ ಉಪ್ನಾನ ಆದ ತಕ್ಷಣ ಶಾಲಗೆ ಕಳುಸುದು.
ಈಗ ಹೇಂಗೆ ಮಾತಾಡ್ಳೆ ಬಪ್ಪಗಳೇ ಶಾಲಗೆ ಕಳುಸುತ್ತವೋ – ಅದೇ ನಮುನೆ.. 😉
ಗುರುಕುಲಕ್ಕೆ ಹೋದರೆ ಅಲ್ಲಿ ಒಬ್ಬ ವಿದ್ಯಾಭ್ಯಾಸಕ್ಕೆ ಗುರುಗೊ ಇರ್ತವು. ವೇದ, ಸಂಸ್ಕೃತ, ಕೃಷಿ, ಜೀವನ – ಸಮಗ್ರ ವಿದ್ಯಾಭ್ಯಾಸ ಕೊಟ್ಟು ಜೀವನವ ಕಟ್ಟುವ ವೆಗ್ತಿತ್ವ ಆ ಗುರುಕುಲದ ಗುರುಗೊ.
ಮುಂದೆ ಕಾಲಕ್ರಮೇಣ ವಿದ್ಯಾಭ್ಯಾಸ ಪದ್ಧತಿ ಬದಲಾತು.
ಗುರುಗೊ ಇಪ್ಪಲ್ಲಿಗೆ ಮಕ್ಕೊ ಹೋಪದಲ್ಲ, ಮಕ್ಕೊ ಇಪ್ಪಲ್ಲಿಗೆ ಮಾಷ್ಟ್ರಂಗೊ ಓಡೋಡಿ ಬಪ್ಪ ನಮುನೆ ಆತು. ಬಾರದ್ದೆ ಆಗ ಇದಾ – ಟ್ರಾನ್ಸ್ವರು ಆವುತ್ತು!! ಅದಿರಳಿ.
ಅವುದೇ ಗುರುಗಳೇ! ಒಟ್ಟಾಗಿ ಹೇಳ್ತರೆ ನವಗೆ ಬದುಕ್ಕಲೆ ಆರೆಲ್ಲ ಸಕಾಯ ಮಾಡ್ತವೋ – ಅವೆಲ್ಲ ಗುರುಗಳೇ ಅಡ ಮಾಷ್ಟ್ರುಮಾವ° ಹೇಳುಗು. ನಿಂಗಳೂ ಗುರುಗಳೇ ಅಲ್ಲದೋ – ಹೇಳಿರೆ ನಾವು ಎಷ್ಟೋ ಜನಕ್ಕೆ ಗುರುಗೊ ಆಗಿರ್ತು, ಎಷ್ಟೋ ಜನ ನವಗೆ ಗುರುಗೊ ಆಗಿರ್ತು. ಅಧ್ಯಯನ, ಅಧ್ಯಾಪನ – ಒಂದೇ ಪಾವೆಲಿಯ ಎರಡು ಮೋರೆ – ಹೇಳಿದವು ಮಾಷ್ಟ್ರುಮಾವ°.
(ಈಗಾಣ ಪಾವೆಲಿಲಿ ಪುರ್ಬುಗಳ ಕ್ರೂಜು ಇದ್ದಡ ಅಪ್ಪೋ ಭಾವ? ಅದಿರಳಿ, ಇನ್ನೊಂದರಿ ಮಾತಾಡುವೊ°. )
~

ಜನ್ಮನಾ ಜಾಯತೇ ಜಂತುಃ – ಜಂತುವಿನ ಹಾಂಗೆ ಹುಟ್ಟಿದ ವೆಗ್ತಿಯ ಬೆಳೆಶುವ ಹಂತಲ್ಲಿ ಸಹಸ್ರಾರು ಗುರುಗಳ ಪಡಕ್ಕೊಳ್ತ°.
ಮನೆಯೆ ಮೊದಲಪಾಟಶಾಲೆ ಅಡ – ಅಮ್ಮನೇ ಮೊದಲ ಗುರು ಅಡ. ಮತ್ತೆ ಮನೆಯ ಹಿರಿಯರು, ಅದಾದ ಮತ್ತೆ ಗುರುಕುಲದ ಗುರುಗೊ, ಅದಾಗಿ ಧರ್ಮಗುರುಗೊ, ಅದಾಗಿ ದೇವರು! – ಎಷ್ಟು ಗುರುಗೊ ಇರ್ತವು, ಇವೆಲ್ಲವೂ ಜೀವನವ ಹದಮಾಡುವ, ದೈಹಿಕವಾಗಿ- ಬೌದ್ಧಿಕವಾಗಿ ಬೆಳೆಸುವ ಕಾಯಕಮಾಡ್ತವು.
ಜೀವನಾಂತ್ಯದವರೆಗೂ ಒಬ್ಬ° ವೆಗ್ತಿ ಶಿಷ್ಯ ಆಗಿರ್ತ ಹೇಳಿತ್ತುಕಂಡ್ರೆ ಅವಂಗೆ ಗುರುವಿನ ಅವಶ್ಯಕತ ಎಷ್ಟುದ್ದು – ಹೇಳ್ತದರ ಯೋಚನೆ ಮಾಡಿ ಹೇಳಿದವು ಮಾಷ್ಟ್ರುಮಾವ°.
~
ಗು-ಹೇಳಿತ್ತುಕಂಡ್ರೆ ಕಸ್ತಲೆ ಅಡ. ಗುಮ್ಮೆ ಹಕ್ಕಿಗೆ ಆ ಹೆಸರು ಬಂದದು ಅದಕ್ಕೆಯೋ ಏನೋ! ಬಿಂಗಿ!!
ರು-ಹೇಳಿತ್ತುಕಂಡ್ರೆ ರಕ್ಷಣೆ / ಬೆಣಚ್ಚು – ಹೇಳ್ತ ಅರ್ತ ಇದ್ದಡ. ಜೀವನದ ಗಾಢಾಂಧಕಾರಂದ ಬೆಣಚ್ಚಿನ ಬೆಶ್ಚಂಗೆ ರಕ್ಷಣೆ ಕೊಡ್ತ ಕಾರ್ಯವನ್ನೇ ಮಾಡುದಲ್ಲದೋ – ಗುರುಗೊ, ಅವಕ್ಕೆ ಆ ಹೆಸರಡ.
~

ಆದಿಗುರು ವೇದವ್ಯಾಸರ ಜನನ ಆದ್ದದು ಆಷಾಡ ಮಾಸದ ಪೌರ್ಣಮಿಯ ದಿನಲ್ಲಿ ಅಡ.
ಆದಿಗುರುಗಳ ಜನ್ಮದಿನ ಪೌರ್ಣಮಿಯಂದು. ಆ ದಿನ ನಮ್ಮ ಎಲ್ಲಾ ಗುರುಗಳನ್ನೂ ನೆಂಪು ಮಾಡ್ಲೆ ಇಪ್ಪ ಸುದಿನ ಅಡ. ಅದಕ್ಕಾಗಿಯೇ ಆ ಆಷಾಡ ಪೂರ್ಣಿಮೆಯ ಗುರುಪೂರ್ಣಿಮೆ ಹೇಳಿಯೇ ಹೇಳುದಡ.

ಮೊದಲಿಂಗೆ ಆ ದಿನಂದ ಮತ್ತೆ ಅಂತರ್ಮುಖಿಯಾಗಿ, ಆತ್ಮೋದ್ಧಾರಕ್ಕಾಗಿ ಪ್ರತಿಯೊಬ್ಬನೂ ವ್ರತಲ್ಲಿ ಇದ್ದುಗೊಂಡು ಇತ್ತಿದ್ದನಡ.
ಚಂದ್ರ° ಮನೋಕಾರಕ ಅಡ, ಜೋಯಿಷಪ್ಪಚ್ಚಿ ಯೇವತ್ತೂ ಹೇಳುಗು. ಮನುಷ್ಯರ ಮನಸ್ಥಿತಿಯ ಮೇಗೆ ಚಂದ್ರನ ಸ್ಥಿತಿಯ ನೇರವಾಗಿ ಅವಲಂಬಿತವಾಗರ್ತಡ. ಹಾಂಗಾಗಿ ಚಂದ್ರ ಪೂರ್ಣವಾಗಿ ಹೊಳವ ದಿನ ಮನಸ್ಸೂ ಪೂರ್ಣವಾಗಿ ಹೊಳೆತ್ತು!!

ಆತ್ಮಚಿಂತನೆಗೆ ಆಷಾಡಪೂರ್ಣಿಮೆ ಸಕಾಲ ಅಡ – ಗುರುಪೀಠಲ್ಲಿಪ್ಪ ನಮ್ಮ ಗುರುಗಳೂ ಅದೇ ದಿನ ಆಂತರ್ಯಕ್ಕೆ ಹೋವುತ್ತವಿದಾ – ಹೇಳಿದ° ಎಡಪ್ಪಾಡಿಬಾವ°.
ಅಪ್ಪಡ, ಚಾತುರ್ಮಾಸ್ಯದ ವ್ರತದ ದಿನ, ವೇದವ್ಯಾಸನ ಮನಸಾ ಸ್ಮರಣೆಮಾಡಿಗೊಂಡು, ವ್ಯಾಸಪೂಜೆ ಮಾಡಿಕ್ಕಿ, ವ್ಯಾಸಮಂತ್ರಾಕ್ಷತೆಯ ಕೊಡುದಡ. ಅದಾದಮತ್ತೆ ಆಂತರ್ಯದ ಆತ್ಮಚಿಂತನೆಲಿ, ರಾಮಾಯಣದ ರಾಮಧ್ಯಾನಲ್ಲಿ ಚಾತುರ್ಮಾಸ್ಯಾಚರಣೆಯ ಮಾಡ್ತದಡ.
ಆದಿಗುರುಗಳ ಜನನದ ದಿನ ಪ್ರತಿಒರಿಶವೂ ಧರ್ಮಗುರುಗಳ ಚಾತುರ್ಮಾಸ್ಯ ಜನ್ಮತಳೆತ್ತಡ.
ಈ ಒರಿಶ ನಮ್ಮ ಧರ್ಮಗುರುಗಳ ಜನ್ಮದಿನವೂ ಅದೇ ದಿನ ಬತ್ತಡ – ಎಡಪ್ಪಾಡಿಬಾವ ಕೊಶೀಲಿ ಹೇಳಿದ.

ಚಾತುರ್ಮಾಸ್ಯ ನಾಳ್ತು ಗೋಕರ್ಣಲ್ಲಿ ಸುರು ಆವುತ್ತು ಹೇಳ್ತದು ಗೊಂತಿದ್ದು, ಅದಕ್ಕೆ ಬೈಲಿಂದ ಎಲ್ಲೊರುದೇ ಹೆರಡುದೂ ಗೊಂತಿದ್ದು.
ಆದರೆ ಅದರ ಹಿಂದೆ ಹೀಂಗೆಲ್ಲ ಇದ್ದು ಹೇಳ್ತದು ಒಪ್ಪಣ್ಣಂಗರಡಿಯ ಇದಾ..
~

ಭಗವಂತನ ಸಾಕ್ಷಾತ್ ಸ್ವರೂಪ - ಭಗವಧ್ವಜ

ಭಗವಂತನ ಸಾಕ್ಷಾತ್ ಸ್ವರೂಪ - ಭಗವಧ್ವಜ

ಇದೇ ಗುರುಪೂರ್ಣಿಮೆಯ ದಿನ ಸಂಘಲ್ಲಿಯೂ ಸುಮಾರು ಚಟುವಟಿಕೆಗೊ ಇದ್ದಡ.
ವಿಶೇಷವಾಗಿ ಗುರುಪೂಜಾ ಉತ್ಸವ ಹೇಳಿಯೂ ಮಾಡ್ತವಡ. ಗುರುರೂಪೀ ಭಗವಧ್ವಜಕ್ಕೆ ಪೂಜೆ ಮಾಡಿ, ಸಮಾಜಕ್ಕಾಗಿ ಸಮಾಜಂದ ತನು, ಮನ, ಧನವ ಅರ್ಪಿಸುವ ಸುಸಮಯಕ್ಕಾಗಿ ಆ ದಿನಕ್ಕೆ ಎಷ್ಟೋ ಸ್ವಯಂಸೇವಕರು ಕಾಯ್ತಾ ಇದ್ದವಡ – ಅಕ್ಷರದಣ್ಣ ಓ ಮೊನ್ನೆ ಕೊಡೆಯಾಲಲ್ಲಿ ಸಿಕ್ಕಿ ಹೇಳಿದವು. ವೆಗ್ತಿಪೂಜೆ ಇಲ್ಲದ್ದ ಸಂಘಲ್ಲಿ, ಸಾವಿರಗಟ್ಳೆ ಒರಿಶದ ನಮ್ಮ ಸಂಸ್ಕೃತಿಯ ಪ್ರತಿನಿಧಿ ಆದ ಕಾವಿವಸ್ತ್ರದ ಭಗವಧ್ವಜಕ್ಕೆ ಪೂಜೆ ಮಾಡುದಡ.
ಮಾಷ್ಟ್ರುಮಾವನ ಮಗಂಗೆ ಈ ಒರಿಷ ಗುರುಪೂಜೆಗೆ ಬಪ್ಪಲೆಡಿತ್ತಿಲ್ಲೆ ಹೇಳಿ ಭಾರೀ ಬೇಜಾರಡ, ಕೊಳಚ್ಚಿಪ್ಪುಭಾವ ಓ ಮೊನ್ನೆ ಹೇಳಿದ.
~

ನಮ್ಮ ಶ್ರೀಮಂತ ಧಾರ್ಮಿಕ ಪರಂಪರೆಲಿದೇ ಹಾಂಗೆಯೇ – ಪರಿಪೂರ್ಣತೆಯ ಸಂಕೇತ ಆದ ಕಾವಿವಸ್ತ್ರಕ್ಕೆ ಮಹತ್ವ.
ಒಂದೋ ಕಾವಿವಸ್ತ್ರವ, ಅಲ್ಲದ್ರೆ ಆ ಕಾವಿವಸ್ತ್ರವನ್ನೇ ಧರಿಸಿಗೊಂಡ ನಮ್ಮ ಗುರುಪರಂಪರೆಯ ಆ ದಿನ ನೆಂಪುಮಾಡ್ತ ವೈಶಿಷ್ಟ್ಯ ತಲೆಮಾರುಗಳಿಂದ ನೆಡಕ್ಕೊಂಡು ಬಯಿಂದು.
ಶಂಕರಾಚಾರ್ಯರ ಒಂದು ಪಟಮಡಗಿ, ಅದಕ್ಕೆ ಗುರುಪರಂಪರೆಯ ಹೆಸರುಗಳ ಹೇಳಿಗೊಂಡು ಒಂದೊಂದೇ ತೊಳಶಿ ಅರ್ಚನೆಮಾಡ್ತ ಕಾರ್ಯಕ್ರಮ ನಮ್ಮ ಪೋಳ್ಯಮಟಲ್ಲಿ ಇದ್ದಡ, ಶಂಕರಿಅತ್ತೆ ನಿನ್ನೆ ಕೆದಿಲಲ್ಲಿ ಸಿಕ್ಕಿಪ್ಪಗ ಹೇಳಿದವು.
ಅದೊಂದು ಗುರುಪೂಜೆಯ ಕ್ರಮ.
ಗುರುಗಳೇ ಚಾತುರ್ಮಾಸ್ಯ ವ್ರತ ಆರಂಭ ಮಾಡಿ ನೇರವಾಗಿ ವ್ಯಾಸಮಂತ್ರಾಕ್ಷತೆ ಕೊಡುದುದೇ ಅದೇ ಸುದಿನಲ್ಲಿ.
~
ಇಷ್ಟೆಲ್ಲಾ ಮಾಡಿರೂ ಅಕೇರಿಗೆ ನಮ್ಮ ದಾರಿ ಪೂರ್ಣತೆಯ ಹೊಡೇಂಗೆಯೇ, ಅಲ್ಲದೋ?
ಮೋಕ್ಷವೇ ಪೂರ್ಣತೆ.
ಪೂರ್ಣತೆಯೇ ನಮ್ಮ ಜೀವನದ ಕೊನೆಯ ಬಿಂದು.
ಪರಿಪೂರ್ಣ ವೆಗ್ತಿ ನಾವಾಯೆಕಾರೆ ಪೂರ್ಣಗುರುಗೊ ನವಗೆ ಸಿಕ್ಕೇಕು.
ಪೂರ್ಣಗುರುಗೊ ಸಿಕ್ಕಿರೆ ಸಾಕೋ? – ಅವರ ಪೂರ್ಣಾಶೀರ್ವಾದವೂ ಸಿಕ್ಕೇಕು!

ನಾಳ್ದು ಬಪ್ಪ ಗುರುಪೂರ್ಣಿಮೆಯ ದಿನ ನವಗೆಲ್ಲೊರಿಂಗೂ ನಮ್ಮ ಗುರುಗಳ ಪೂರ್ಣತೆಯ ಅನುಭವ ಆಗಲಿ.
ಅವರ ಪೂರ್ಣಾಶೀರ್ವಾದ ಸಿಕ್ಕಲಿ..
ತನ್ಮೂಲಕವಾಗಿ ನಾವು ಪರಿಪೂರ್ಣರಾಗಿ ಬೆಳವಲೆ ಸಾಧ್ಯ ಆಗಲಿ..
… ಹೇಳುದೇ ಬೈಲಿನವರ ಆಶಯ..

ಒಂದೊಪ್ಪ: ನಮ್ಮನಮ್ಮ ಗುರಗಳ ಪೂರ್ಣಾನುಗ್ರಹ ಸಿಕ್ಕಿದವಂಗೆ ನಿತ್ಯವೂ ಪೂರ್ಣಮೆಯೇ, ಅಲ್ಲದೋ?

ಸೂ:

ಒಪ್ಪಣ್ಣ

   

You may also like...

30 Responses

  1. anuradakka says:

    ತುಂಬಾ ಲಾಯ್ಕಿತ್ತು. ನೀನು ತುಂಬಾ ಅದೃಷ್ಟ ಮಾಡಿದ್ದೆ ಗುರುಗಳತ್ತರೆ ಇಂಥಾ ಆಶೀರ್ವಾದ ತೆಕ್ಕೊಂಬೊಲೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *