ಹಳಸುವ ಮೊದಲು ಹಲಸಿನ ಬಳಶಿಗೊಳಿ..!

ತರವಾಡುಮನೆ ರಂಗಮಾವನ ಶುದ್ದಿ ಎಷ್ಟು ಮಾತಾಡಿರೂ ಮುಗಿತ್ತಿಲ್ಲೆ.

ಅಟ್ಟಲ್ಲಿ ಹೇಮಾರ್ಸಿಮಡಗಿದ ಹಳೆಪಾತ್ರಂಗಳ ಅವು ಉದ್ದಿ ಮಡಗುತ್ತ ಸಮೆಯದ ಶುದ್ದಿ ಕಳುದವಾರ ನಾವು ಮಾತಾಡಿದ್ದು
ಅಲ್ಲಿದ್ದ ಎಲ್ಲಾ ಪಾತ್ರಂಗಳನ್ನೂ ಬೈಲಿನೋರು ಗುರ್ತ ಹಿಡುದು, ಕೆಲವು ಹೊಸ ಪಾತ್ರಂಗಳನ್ನೂ ತೋರುಸಿಕೊಟ್ಟವು.
ಕೆಲವು ಪಾತ್ರಂಗೊ ಹೇಳುಲೆ ಬಿಟ್ಟು ಹೋದ್ದಕ್ಕೆ ಬಂಡಾಡಿಅಜ್ಜಿ ಪರಂಚಿಯೂ ಆತು!
ಎಷ್ಟಾರೂ, ಅಜ್ಯಕ್ಕೊಗೆ ಗೊಂತಿಪ್ಪಟ್ಟು ನವಗೆ ಅರಡಿಯಲೆ ಎಡಿಗೋ!!

~
ಈಗ ಮಳೆಗಾಲ. ಈ ಹಿಂದೆಯೇ ಸುರು ಆಗಿ ಆಟಿ ಒರೆಂಗೂ ಎತ್ತಿ ಆತು.
ಎಲ್ಲಿನೋಡಿರೂ ಮಳೆಯ ಶೆಬ್ದ. ಮಳೆ ಶೆಬ್ದಕ್ಕೆ ಮಧುರ ನೆಂಪುಗೊ ಬಂದರೆ ಎಷ್ಟು ಚೆಂದ, ಅಲ್ಲದೋ?
ದೂರಲ್ಲಿ ಕಲಿಯಲೆ ಹೋದ – ಕಳುದೊರಿಶ ಒರೆಂಗೆ ಮನೆಲೇ ಇದ್ದ – ಮಗನ ಗ್ರೇಶಿರೆ ಸುಬಗಣ್ಣನ ಮನೆದೇವರಿಂಗೆ ಮಳೆಬಕ್ಕು ಒಂದೊಂದರಿ!
ಕೃಷಿಯ ಲೆಕ್ಕಾಚಾರದ ಸುಬಗಣ್ಣಂಗೆ ಈಗ ರಜಾ ಪುರುಸೊತ್ತು;  ಅಡಕ್ಕಗೆ ರಜ್ಜ ಜಾಸ್ತಿ ಆದ್ದುದೇ ಪುರುಸೊತ್ತಿಂಗೆ ಕೊಶಿಕೊಟ್ಟತ್ತು.
ಚೆನ್ನೈಬಾವನ ಹಾಂಗೆ ಮೊಬೈಲು ಕುಟ್ಟುತ್ತವಕ್ಕೆ ಶೋಬಕ್ಕ ಕರೆಂಟು ಕೊಡದ್ದೆ ಮಾ ಉಪದ್ರ ಮಾಡಿಹಾಕಿದ್ದಡ.
ಕರೆಂಟಿಲ್ಲದ್ದರೆ ಮೀಯಲೆ ನೀರು ಬೆಶಿ ಆವುತ್ತಿಲ್ಲೆ – ಹೇಳ್ತ ಕಾರಣಲ್ಲಿ ಅಜ್ಜಕಾನಬಾವ ನಿತ್ಯವೂ ಎಡಪ್ಪಾಡಿಗೆ ಹೋಗಿ ಉದಿಯಪ್ಪಗಾಣ ತಿಂಡಿ ಮುಗುಶಿಕ್ಕಿ ಬಪ್ಪದು!
ಸುವರ್ಣಿನಿ ಅಕ್ಕ° ಹಪ್ಪಳ ಸುಟ್ಟಾಕುವಗ ಕರೆಂಟು ಹೋಗಿ, ಹೊತ್ತಿದ ಪರಿಮ್ಮಳ ಬಂದಪ್ಪಗಳೇ ಗೊಂತಾದ್ದಡ!
ಪುತ್ತೂರಿನ ಪುಟ್ಟಕ್ಕ° ತಾಡುನ ಪೆತ್ತ ಬಂತು ಹೇಳಿಗೊಂಡು ಹಾಮಾಸು ಹಿಡುದ ಸಂಕಲ್ಲಿ ಓಡ್ಳೆ ಹೆರಟು ಗಡಿಬಿಡಿ ಆಯಿದಡ!
ಮದಲೇ ಚಳಿ, ಅದರ ಮೇಗಂದ ಬಂಡಾಡಿಅಜ್ಜಿ ಮಾಡಿಕೊಟ್ಟ ಮಜ್ಜಿಗೆಗೊಜ್ಜಿ ಉಂಡು ಶರ್ಮಪ್ಪಚ್ಚಿಗೆ ಶೀತ ಸುರು ಆಯಿದಡ!!
ಅದೇನೇ ಇರಳಿ, ಮಳೆಗಾಲ ಹೇಳಿರೆ ಹಾಂಗೇ ಅಲ್ಲದೋ?

~

ತರಾವಳಿ ನೆಟ್ಟಿ ತರಕಾರಿಗೊ ಈಗ ಕಮ್ಮಿ ಆದ ಕಾರಣ ಅಡಿಗೆಲಿ ವೈವಿಧ್ಯಂಗೊ ಕಮ್ಮಿ.
ಈಗೀಗ ಬಜಾರಿಲಿಯೋ, ಬಿಗ್ಗುಬಜಾರಿಲಿಯೋ ಮಣ್ಣ ಸಿಕ್ಕುಗು, ಆದರೆ ಮದಲಿಂಗೆ ಕಮ್ಮಿ.
ಹೀಂಗಿಪ್ಪಗ, ಏನಾರು ಪುನರ್ಪುಳಿ ಓಡಿನ ಸಾರೋ, ನೀರುಮಾವಿನಕಾಯಿ ಗೊಜ್ಜಿ – ಹೀಂಗಿರ್ತರ ಮಾಡಿ ಬಳುಸುಗು ಮನೆಲಿ.
ಅದರೊಟ್ಟಿಂಗೆ ಬಹೂಪಯೋಗಿ ಮಿತ್ರ ಒಂದು ಸಿಕ್ಕುತ್ತು – ಅದೇವದು? ಅದುವೇ ಹಲಸಿನಾಯಿ!

ಇದು ಬೆಂದಿಮಾಡ್ಳೆ ತರಕಾರಿಯೂ ಅಪ್ಪು, ಚೀಪ್ಸಿನ ಹಾಂಗಿರ್ತದು ಮಾಡೇಕಾರೆ ಅದಕ್ಕಪ್ಪದೂ ಅಪ್ಪು – ಅಂತೇ ತಿಂಬಲೆ ಹಣ್ಣೂ ಅಪ್ಪು!
ಹೆಚ್ಚಿನ ಮನೆಲಿಯೂ ಇದರ ಬಹೂಪಯೋಗ ಇದ್ದೇ ಇದ್ದು.
ಮಳೆಗಾಲಲ್ಲಿ ಸುಬಗಣ್ಣನ ಮನೆದೇವರಿಂಗೇ ಇದು ಮನೆದೇವರು – ಹೇಳಿರೆ ಅರ್ತ ಮಾಡಿಗೊಳ್ಳಿ ನಿಂಗೊ; ಹೆಮ್ಮಕ್ಕೊಗೆ ಇದು ಎಷ್ಟು ಉಪಕಾರಿ ಹೇಳಿಗೊಂಡು!!
ಅಂಬಗ, ಹಲಸಿನ ಬಹೂಪಯೋಗದ ಬಗ್ಗೆ ಈ ವಾರ ಶುದ್ದಿ ಮಾತಾಡುವನೋ?!
~

ದೊಡ್ಡಬಾವನ ದೊಡ್ಡ ತೋಟದ ತಲೇಲಿ ಒಂದು ದೊಡ್ಡ ಹಲಸಿನ ಮರ ಇದ್ದು; ಎಲ್ಲೋರಿಂಗೂ ಅರಡಿವದೇ ಅದು.
ಅದೊಂದು ವಿಶಿಷ್ಟ ಜಾತಿಯ ಮರ. ದೊಡ್ಡಮಾವ “ತಲೆಂಬಾಡಿ” ಹೇಳ್ತವು ಅದರ. ತೋಟದ ತಲೇಲಿ ಇರ್ತದಕ್ಕೆ ಹಾಂಗೆ ಹೇಳ್ತದೋ, ಅಲ್ಲಲ್ಲ, ಅದರ ಮೂಲ ಊರಿನ ಹೆಸರೋ; ಉಮ್ಮಪ್ಪ!
ದೊಡ್ಡಮಾವ° ಹೇಳಿದಹಾಂಗೆ ದೊಡ್ಡಬಾವ° ಹೇಳುದು; ದೊಡ್ಡಬಾವ° ಹೇಳಿದ ಹಾಂಗೆ ದೊಡ್ಡಳಿಯ ಹೇಳುಗು ಮುಂದಕ್ಕೆ. ಅದಿರಳಿ, ಹೆಸರು ಮುಖ್ಯ ಅಲ್ಲ – ರುಚಿ ಮುಖ್ಯ. 😛
ಅಪ್ಪು, ಆ ಮರದ ವಿಶೇಷ ಎಂತರ ಹೇಳಿರೆ, ಹಣ್ಣು ತುಂಬ ಪರಿಮ್ಮಳ, ತುಂಬಾ ಸೀವು!

ಈ ಒರಿಶ ಅದರ್ಲಿ ಗುಜ್ಜೆ ಬಿಟ್ಟದರ ನೋಡಿ ಅಂದೇ ದೊಡ್ಡಬಾವ° ಸಮೋಸ ಕಳುಗಿದ್ದ – ಹೀಂಗೀಂಗೆ ಹೇಳಿಗೊಂಡು.
ಅದು ಯೇವ ಸಮೆಯಕ್ಕೆ ಬೆಳಗು ಹೇಳ್ತರ ಅಜ್ಜಕಾನಬಾವ° ಲೆಕ್ಕ ಹಾಕಿ ಮಡಗಿತ್ತಿದ್ದ! ಅವ ಲೆಕ್ಕ ಹಾಕಿ ಮಡಗಿರೆ ಎಂತ ಗುಣ; ಕೊಯಿವಲಪ್ಪಗ ಕೈಗೆ ಸಿಕ್ಕದ್ದರೆ!
ಕೆಳಂಗೆ ಎತ್ತುತ್ತದರ ಎಲ್ಲ ದೊಡ್ಡಬಾವನ ದೊಡ್ಡ ಕೊಕ್ಕೆಲಿ ಬಲುಗಿ (ಎಳದು) ಕೊಯಿದು ಆಗಿತ್ತು. ಸುಮಾರು ಬಗೆ ಮಾಡಿ ಮುಗುಶಿಯೂ ಆಗಿತ್ತು.
ಮೇಗಾಣ ಕೊಬೆಲಿ ಇರ್ತ ಹಲಸಿನಣ್ಣು ಬಾಕಿ ಒಳುದಿತ್ತಿದಾ, ಅದರ ಕೊಯ್ವಲೆ ಜೆನ ಏರ್ಪಾಡು ಆಗಿಂಡಿತ್ತಿಲ್ಲೆ ದೊಡ್ಡಬಾವಂಗೆ.

ಕಳುದವಾರ ಸುಬಗಣ್ಣ ಒಯಿವಾಟಿಲಿ ಕೆಣುದ ಕತೆ ಗೊಂತಿದ್ದಲ್ಲದೋ?
ಅವರ ಮನೆದೇವರು ಅಪ್ಪನಮನೆಗೆ ಹೋಗಿಪ್ಪಾಗಳೇ ಸುಂದರ ಮದ್ದುಬಿಡ್ಳೆ ಬಂದದು. ಹೇಂಗೂ ಅಡಕ್ಕೆಮರಕ್ಕೆ ಹತ್ತುತ್ತನ್ನೆ, ಬರಿಕ್ಕೆಯ ಎರಡು ಹಲಸ್ನಾಯಿ ಎಳದು ಹಾಕು ಮಾರಾಯ – ಹೇಳಿದವು.
ಹಾಂಗೆ ಬೆದುರ ಕೊಕ್ಕೆಗೆ ಮನೆದೇವರು ಹುಲ್ಲುಕೆರಸುತ್ತ ಕತ್ತಿಯ ಕಟ್ಟಿ ಸುಬಗಣ್ಣ ಸುಂದರನ ಕೈಗೆ ಎತ್ತುಸಿದವು.
ಸುಂದರಂಗೆ ಕುಡುದಿಪ್ಪಗ ಮಾಂತ್ರ ಸರಿ ಕಾಂಬದು; ಅಲ್ಲದ್ದರೆ ಎರಡೆರಡು ಕಾಣ್ತು.
ಹಾಂಗೆ ಗೆಲ್ಲಿಲಿ ಇರ್ತ ಹಲಸಿನಾಯಿ ಎರಡೆರಡು ಕಂಡತ್ತು; ಸುಬಗಣ್ಣನ ಕೊಕ್ಕೆಯ ಎರಡ್ಣೇದಕ್ಕೆ ಹಾಕಿ ಬಲುಗಿತ್ತು. ಉಹೂಂ! ಬಯಿಂದೇ ಇಲ್ಲೆ.
ಚೆಲ, ಹಲಸಿನಾಯಿ ತೊಟ್ಟು ಇಷ್ಟು ಗಟ್ಟಿ ಇದ್ದೋ – ತ್ರಾಣ ಪೂರ ಹಾಕಿ ಇನ್ನೊಂದರಿ ಬಲುಗಿತ್ತು.  ಕೊಕ್ಕೆಯ ಕಡೆ ಸುಂದರನ ಕೈಲಿ, ಕತ್ತಿ ಕಟ್ಟಿದ ಕೊಡಿ ಗೆಲ್ಲಿಲೇ ಬಾಕಿ.
ಸುಬಗಣ್ಣ ಕಣ್ಣಡ್ಕ ಮಡಗಿ ನೋಡಿಯಪ್ಪಗ ಗೊಂತಾತು, ಸುಂದರಂಗೆ ಎರಡೆರಡು ಕಂಡದರ್ಲಿ ಕೊಕ್ಕೆ ಹಾಕಿದ್ದು ಗೆಲ್ಲಿನ ಬುಡಕ್ಕೆ.
(ಓಯ್, ಒಪ್ಪಣ್ಣಂಗೆ ಲೊಟ್ಟೆ ಅರಡಿಯ. ಇದಾ, ಶ್ರೀಅಕ್ಕನ ಗುಜ್ಜೆಬಿರಿಯಾಣಿ ಶುದ್ದಿಯ ಒಪ್ಪಲ್ಲಿ ಇದೇ ಮಾತುಕತೆ ಆಯಿದು – ನೋಡಿಕ್ಕಿ.)
ಅದಿರಳಿ.
ಈ ಸಂಗತಿ ದೊಡ್ಡಬಾವಂಗೆ ಮದಲೇ ಗೊಂತಾದ್ದ ಕಾರಣ, ದೊಡ್ಡಬಾವನಲ್ಲಿ ಹಲಸಿನಾಯಿ ತೆಗವಲಿದ್ದು ಹೇಳ್ತ ಸಂಗತಿ ಸುಬಗಣ್ಣಂಗೆ ಹೇಳಿದ್ದವೇ ಇಲ್ಲೆ, ಬಚಾವ್!
ಅಪ್ಪು, ಹಾಂಗೆಲ್ಲ ಪ್ರಯೋಗ ಮಾಡ್ಳೆ ಹೆರಟ್ರೆ ಆಗ; ಇಪ್ಪದೇ ಒಂದು ಕೊಕ್ಕೆ! ದೊಡ್ಡಕ್ಕ° ಅಪ್ಪನಮನಗೆ ಹೋಯಿದವಿಲ್ಲೆ ಇದಾ! 😉
ಅದಕ್ಕೇ ದೊಡ್ಡಜಾಲಿಲಿ ಬಾಕಿ ಆದ ಸುಬಗಣ್ಣನ ಮನೆದೇವರ ಮೆಟ್ಟಿನಜೋಡಿನ ಉಪಾಯಲ್ಲಿ ದೊಡ್ಡತ್ತಿಗೆ ಕೈಲಿ ಕೊಟ್ಟು ಕಳುಗಿದ್ದು.
(ಓ, ಆ ಸಂಗತಿ ಗೊಂತಿಲ್ಲೆ ಅಲ್ಲದೋ? ಬೈಲಿಲಿ ಆ ಬಗ್ಗೆ ನಿದಾನಕ್ಕೆ ಶುದ್ದಿಹೇಳುಗು ಆರಾರು!)
~

ಎಯ್ಯೂರುಭಾವ° ಮೊನ್ನೆ ಸೂರಂಬೈಲಿಂದ ಮನೆಗೆ ಹೋಪಗ, ದೊಡ್ಡಬಾವನ ಮನಗೆ ಆಗಿಂಡು ಬಂದದು.
– ಎಯ್ಯೂರುಬಾವಂಗೆ ಕೃಷಿ ಅರಡಿಗು; ಕೃಷಿಯ ವಿಚಾರದ ಎಲ್ಲಾ ಕೆಲಸಂಗಳೂ ಅರಡಿಗು.
ನೆರೆಕರೆಯೋರಿಂಗೆ ಸ್ಪೂರ್ತಿ ಕೊಡ್ತ ವೆಗ್ತಿತ್ವ ಅವರದ್ದು. ಅವರ ಬಗ್ಗೆಯೇ ಇನ್ನೊಂದರಿ ಮಾತಾಡುವೊ. ಆಗದೋ?
ದೊಡ್ಡಬಾವಂಗೆ ಗೊಂತಿದ್ದ ಮಟ್ಟಿಂಗೆ ಅವರ ಮನೆಲಿ ಕೊಕ್ಕೆ ತುಂಡಾದ ಬಗ್ಗೆ ಘಟನೆ ಎಂತ್ಸೂ ಆಯಿದಿಲ್ಲೆ.
ಹಾಂಗಾಗಿ ಸುಬಗಣ್ಣನ ಬದಲು ಎಯ್ಯೂರುಬಾವನ ಹತ್ತರೇ ಹೇಳಿಕ್ಕುವೊ°- ಹೇಳಿ ದೊಡ್ಡಬಾವ° ನಿಗಂಟು ಮಾಡಿದವು. 😉
ಮೊನ್ನೆ ಬಂದಿಪ್ಪಗ ಹೇಳಿದವುದೇ!
ಅದಕ್ಕೆಂತಾಯೆಕ್ಕು, ಹೇಳಿ ರಪರಪನೆ ಮರಕ್ಕೆ ಹತ್ತಿ ಮರದ ಕೊಡಿಲಿ ಇದ್ದ ನಾಕು ಹಲಸಿನಾಯಿಯ ಎಳದು ಹಾಕಿದವು.
ಅದರ್ಲಿ ಎರಡು ಕಾಯಿ, ಎರಡು ಅರೆಹಣ್ಣು!
~
ಮೊನ್ನೆ ಒಪ್ಪಣ್ಣ ಬೈಲಿಲೇ ನೆಡಕ್ಕೊಂಡು ದೊಡ್ಡಜಾಲಿಂಗೆ ಎತ್ತುವಗ ದೊಡ್ಡ ಮೆಟ್ಟುಕತ್ತಿಯ ಮಡಿಕ್ಕೊಂಡು ದೊಡ್ಡಬಾವ° ಕೂಯಿದ.
ದೊಡ್ಡಳಿಯ ಪಕ್ಕನೆ ಕೈ ಹಾಕಿಕ್ಕದ್ದ ಹಾಂಗೆ ನೋಡಿಗೊಂಬಲೆ ದೊಡ್ಡಮಾವಂದೇ ಕೂದಿತ್ತಿದ್ದವು.
ಗಡಿಮಾಡಿ ಹಾಕಿದ ಸೊಳೆಯ ಆದು ಹಾಕಲೆ ಎದುರೇ ಕೂದುಗೊಂಡಿದವು ದೊಡ್ಡತ್ತೆ ದೊಡ್ಡಕ್ಕ°!
ಸ್ವಕಾರ್ಯವೂ ಆವುತ್ತು – ಹೇಳಿಗೊಂಡು ನಾವುದೇ ಸೇರಿಗೊಂಡತ್ತು. ಸುರುವಿಂಗೆ ಹತ್ತನ್ನೆರಡು ನಿಮಿಶ ದೊಡ್ಡಳಿಯನ ಕೈಲೇ ಮಾತಾಡಿ ಆತು.
ಮತ್ತೆ ಮೆಲ್ಲಂಗೆ ದೊಡ್ಡವರ ಕೈಲಿ ಮಾತಾಡ್ಳೆ ಸುರು.
ದೊಡ್ಡಕ್ಕಂಗೆ ನಾಳ್ತಿಂಗೆ ಅಪ್ಪನ ಮನೆಗೆ ಹೋಪಲಿದ್ದಾಡ – ಆಟಿಯ ಲೆಕ್ಕಲ್ಲಿ!
ಈ ಸರ್ತಿ ದೊಡ್ಡಬಾವಂಗೆ ಪುರುಸೊತ್ತಿಲ್ಲದ್ದ ಕಾರಣ ದೊಡ್ಡಳಿಯನೇ ಕರಕ್ಕೊಂಡು ಹೋಪದಡ.
ದೊಡ್ಡಬಾವಂಗೆ ನಾಳಂಗೆ ತೆಂಕ್ಲಾಗಿ ಹೋಪಲೆ ಇದ್ದಾಡ. ಎಂತದೋ ಪಾಟಪುಸ್ತಕದ ವಿಶಯ – ಹೀಂಗೆಲ್ಲ ಮಾತುಕತೆ ನೆಡಕ್ಕೊಂಡು ಇದ್ದತ್ತು.
~

ಸೊಳೆ ಆದಾಕಿದಷ್ಟೂ ಮುಗುದ್ದಿಲ್ಲೆ! ಒಂದಲ್ಲ, ಎರಡಲ್ಲ – ನಾಕಿದ್ದತ್ತು ಹಲಸ್ನಾಯಿ.
ಹೀಂಗೆ ಎಲ್ಲ ಒಂದೇ ದಿನ ಎಳದು ಹಾಕಿರೆ ಎಂತರ ಮಾಡ್ಸು – ಕೇಳಿದೆ.
ಹಲಸಿನಕಾಯಿಲಿ ಎಲ್ಲವೂ ಮಾಡ್ಳಾವುತ್ತು; ಎಂತರ ಮಾಡ್ಳಾವುತ್ತಿಲ್ಲೆ?– ಹೇಳಿದ ದೊಡ್ಡಬಾವ°.
ಹಲಸ್ನಾಯಿಲಿ ನಾನಾನಮುನೆ ಬಗೆಗೊ ಮಾಡ್ಳಾವುತ್ತು. ಅದು ಬೈಲಿಲಿ ಎಲ್ಲೋರಿಂಗೂ ಗೊಂತಿಪ್ಪದೇ.
ಆದರೂ – ಮಾತಿಂಗಾತು ಹೇಳಿಗೊಂಡು ಮಾತುಮುಂದುವರುಸಿದೆ.
ಈ ವಾರಕ್ಕೆ ಅದೇ ಶುದ್ದಿಮಾತಾಡುವೊ ಹೇಳಿಗೊಂಡು –  ಅಂಬಗ ದೊಡ್ಡಬಾವಾ; ಹಲಸಿನಕಾಯಿಲಿ ಎಂತೆಲ್ಲ ಮಾಡ್ಳಾವುತ್ತು ಹೇಳ್ತರ ಒಂದು ಪಟ್ಟಿಮಾಡುವನೋ – ಕೇಳಿದೆ.
ಸಮೋಸಕಳುಗುವಗ ಆದರೆ ದೊಡ್ಡಬಾವ° ಮಾತಾಡ°, ಈಗ ಮೊಬಯಿಲು ಮುಟ್ಟಿಕ್ಕಲೆ ಎಡಿಯ, ಕೈಲಿ ಇಡೀ ಮೇಣ ಇದ್ದು!
ಹಾಂಗಾಗಿ ಲೋಕಾಭಿರಾಮ ಮಾತಾಡ್ಸಕ್ಕೆ ತೊಂದರೆ ಇಲ್ಲೆ ಇದಾ!
~
ಹಾಂಗೆ ಪಟ್ಟಿ ಸುರು ಆತು.
ಎಡೆಡೆಲಿ ದೊಡ್ಡತ್ತೆ, ದೊಡ್ಡಕ್ಕ° ಸ್ವಾನುಭವಂದ ಕೆಲವು ತಿಂಡಿಗಳ ನೆಂಪುಮಾಡಿದವು. ಒಂದೊಂದರಿ ದೊಡ್ಡಮಾವನೇ ಸ್ವತಃ ಅಡಿಗೆ ಮಾಡ್ಳಿದ್ದು, ಆಸಕ್ತಿ ಎಳಗಿರೆ!
ಹಾಂಗಾಗಿ, ಎಲ್ಲೋರೂ ಸೇರಿ ರಜ್ಜ ಹೊತ್ತಿಲಿ ದೊಡ್ಡಪಟ್ಟಿ ಇಷ್ಟುದ್ದ ಆತು.
ಸೊಳೆಮುಗಿವಗ ಪಟ್ಟಿಯೂ ಮುಗುದ್ದು.

ಹಲಸ್ನಾಯಿ ಇನ್ನೂ ಸೀವು ಹಿಡಿಯೇಕಟ್ಟೆ ಹೇಳುವ ಚೆಪ್ಪೆಯ ಸಮೆಯಲ್ಲಿ ಖಾರದ ಬಗೆಗಳ ಮಾಡ್ಳಾವುತ್ತು.
ಒಂದರಿ ಅದರ ಸ್ವಾಭಾವಿಕ ಸೀವು ತೆಕ್ಕೊಂಡ ಮತ್ತೆ ಚೀಪೆಗಳ ಮಾಡ್ಳಾವುತ್ತು.
ಹಾಂಗಾಗಿ ಹಲಸ್ನಾಯಿ ಬಗೆಗಳ ಪಟ್ಟಿಮಾಡುವಗ ಎರಡು ಬೇರೆಬೇರೆ ಗೀಟು ಸುರುವಿಂಗೇ ಹಾಯೇಕಾವುತ್ತು – ಹೇಳಿದ ದೊಡ್ಡಬಾವ°.
ಎಷ್ಟಾರೂ ಮಾಷ್ಟ್ರ° ಅಲ್ಲದೋ – ಗೀಟು, ಗೆರೆಪೆಟ್ಟಿಗೆ, ಮಾರ್ಜಿನು ಎಲ್ಲ ನಾಲಗೆಕೊಡಿಲಿ ಇರ್ತು! 😉
~

ಹಲಸಿನಕಾಯಿಲಿ ಮಾಡ್ಳಾವುತ್ತ ಬಗೆಗಳ ಒಂದೊಂದೇ ನೆಂಪುಮಾಡಿಗೊಂಡು, ಪಟ್ಟಿ ದೊಡ್ಡ ಆತು.

ಕೆಲವು ಎಂಗೊಗೆ ಬಿಟ್ಟು ಹೋದ್ಸರ ದೊಡ್ಡತ್ತೆ, ದೊಡ್ಡಕ್ಕ° ನೆಂಪುಮಾಡಿದವು.
ಅಲ್ಲಿ ನೆಂಪಾದ ಹೆಚ್ಚಿಂದರನ್ನೂ ನೆಂಪುಮಡಾಗಿ ಬೈಲಿಂಗೆ ಹೇಳ್ತಾ ಇದ್ದೆ. ಪಕ್ಕನೆ ಬಿಟ್ಟುಹೋಗಿದ್ದರೆ ನಿಂಗೊ ನೆಂಪುಮಾಡಿಕ್ಕಿ ಆತೋ, ಬಂಡಾಡಿಅಜ್ಜಿ ನೋಡಿ ಪರಂಚುವ ಮದಲೇ ಬರ್ತಿಮಾಡಿಗೊಂಬೊ! 😉

ಕುಜುವೆ:

ಹಲಸ್ನಾಯಿ ಬೆಳೇಕಾರೆ ಮದಲೇ ಅದರ ಬಗೆಗಳ ಅವಕಾಶ ಸುರು ಆವುತ್ತು. ಎಳೆಹಲಸಿನ ಕಾಯಿಯ ಕುಜುವೆ ಹೇಳುದು.  – ಬಟ್ಯ ತುಳುವಿಲಿ ಇದನ್ನೇ ಗುಜ್ಜೆ ಹೇಳುಗು.
ಹಲಸಿನಕಾಯಿ ಬೆಳದ ಮತ್ತೆ ಸೊಳೆಬೇರೆ, ಹಾರೆ ಬೇರೆ, ಪಂಚಸಾರೆ ಬೇರೆ – ಎಲ್ಲ ಲೆಕ್ಕ ಇರ್ತು. ಆದರೆ ಎಳತ್ತರ್ಲಿ ಎಂತ ವಿತ್ಯಾಸ?
ಹೆರಾಣ ಮುಳ್ಳು ಹೋಪಷ್ಟು ಕೊರದತ್ತು, ಒಳುದ್ದರ ಒಟ್ಟಿಂಗೆ ಹಾಕಿ ಬೆಂದಿಂಗೆ ಮಡಗಿತ್ತು! ಮಾಷ್ಟ್ರಮನೆ ಅತ್ತೆ ಇದರ ’ಸಮೂಲ’ ಕೊರವದು ಹೇಳುಗು.

ಕುಜುವೆ ತಾಳು:
ಕೊರದ ಕುಜುವೆಯ ಒಂದು ಒಗ್ಗರಣೆ ಹಾಕಿ, ಉಪ್ಪುಮೆಣಸು ಹಾಕಿ, ಬೇಶಲೆ ಮಡಗಿರೆ ಒಂದು ಗಳಿಗೆಲಿ ಕುಜುವೆ ತಾಳು ತೆಯಾರಿ!!
ಒಳ್ಳೆ ಬೆಶಿಬೆಶಿ ಅಶನಕ್ಕೆ ಎಣ್ಣೆಯ ಒಟ್ಟಿಂಗೆ ಕೂಡಿಂಡು ಉಂಬಲೆ ಇದು ಹೇಳಿ ಮಾಡುಸಿದ ಖಾದ್ಯ!
ಪಾರೆ ಮಗುಮಾವನಲ್ಲಿ ಕುಜುವೆ ಬಾಡಿ ಬಿದ್ದರೆ, ಮೇಗಾಣ ಹಣ್ಣು ತೆಗವಗ ಬಿದ್ದರೆ ಮಣ್ಣ ಮರದಿನ ಕುಜುವೆ ತಾಳು ಖಂಡಿತ.

ಬೇಳೆಚೆಕ್ಕೆ ಬೆಂದಿ:
ಕೊರದು ಮಡಗಿದ ಕುಜುವೆಯ ಲಾಯಿಕ ಬೇಶಿ, ಬೆಂದಿ ಅರಪ್ಪಿಂಗೆ ಹಾಕಿರೆ ಬೇಳೆಚೆಕ್ಕೆ ಬೆಂದಿ ಆತು.
ಅರೆ ಬೆಳದ ಬೇಳೆಯೂ ಇರೇಕು, ಕುಜುವೆಯೂ ಇರೆಕ್ಕು, ಚೆಕ್ಕೆಯೂ ಇರೇಕು – ಎಲ್ಲ ಒಟ್ಟಿಂಗೆ ಇಪ್ಪ ಕೊದಿಲೇ ಅಲ್ಲದೋ ಬೇಳೆಚೆಕ್ಕೆ ಬೆಂದಿ.

ಹಲಸಿನ ಕಾಯಿ:

ಕುಜುವೆ ರಜಾ ಬೆಳದರೆ ಮತ್ತೆ ಹೊದುಂಕುಳು ಗಟ್ಟಿಗಟ್ಟಿ ಆಗಿರ್ತು.  ಇಡೀ ಒಟ್ಟಿಂಗೆ ಹಾಕಿ ಬೇಶಿರೆ ತಿಂಬಗ ಹೊದುಂಕುಳು ತುಂಡೇ ಸಿಕ್ಕುಗಟ್ಟೆ.
ಮತ್ತೆ, ಕಲ್ಮಡ್ಕ ಅನಂತಂಗೆ ಹಾತೆ ಮಾಡ್ಳೂ ಹೊದುಂಕುಳು ಸಿಕ್ಕ!
ಹಾಂಗಾಗಿ, ಹಲಸಿನಾಯಿಲಿ ಮಾಡ್ಳೆ ಬೇರೆಯೇ ಬಗೆಗೊ ಇದ್ದು. ಲಾಯಿಕಲ್ಲಿ ಕೊರದು ಸೊಳೆಗಳ ತೆಗದರೆ ಸುಮಾರು ಬಗೆ ಮಾಡ್ಳಾವುತ್ತು.

ಸೊಳೆ ಹೊರುದ್ದು
ಹಲಸಿನಕಾಯಿಯ ಸೊಳೆಯ ಒಳಾಣ ಬೇಳೆಯ ಮದಾಲು ತೆಗದಿಕ್ಕುದು.
ಬಿಡುಸಿದ ಸೊಳೆಯ ನೀಟನೀಟಕೆ ಕೊರೆತ್ತದು.
ಮತ್ತೆ ಲಾಯಿಕದ ತೆಂಗಿನೆಣ್ಣೆಯ ಬಾಣಲೆಗೆ ಹಾಕಿ ಕಾಸಿತ್ತು. ಕಾದ ತೆಂಗಿನೆಣ್ಣಗೆ ಕೊರದ ಸೊಳೆತುಂಡುಗಳ ಹಾಕುತ್ತದು.
ಕೊರವದು ಹೇಂಗೆ? – ಒಂದೇ ದಪ್ಪಕೆ ಕೊರೇಕು. ಅಲ್ಲದ್ದರೆ ಒಂದು ಎಣ್ಣೆಲಿ ಕರಂಚುವಗ, ಇನ್ನೊಂದು ಬೇಯ್ತಷ್ಟೆ. ಹಾಂಗಾಗಿ, ಒಂದೇ ನಮುನೆ ಕೊರೇಕು.
ಮತ್ತೆ ನಿಂಗೊಗೆ ಸರಿಯಾಗಿ ತಿಳಿಯೆಕ್ಕಾರೆ ಸುಬಗಣ್ಣನ ಸಂಪರ್ಕ ಮಾಡ್ಳಕ್ಕು. ಸ್ವಾನುಭವಲ್ಲಿ ವಿವರ್ಸುದು ನವಗೆ ಹೆಚ್ಚು ಅರ್ಥ ಅಪ್ಪದಿದಾ. 😉
ಕೊರವಲೆ ಎಷ್ಟು ಹೊತ್ತು ಬೇಕೋ, ಹೊರಿವಲೂ ಅಷ್ಟೇ ಹೊತ್ತು ಬೇಕು.
ಒಂದು ಬಾಣಲೆ ಸೊಳೆಹೊರಿಯೇಕಾರೆ, ಹೊತ್ತೋಪಗ ಸುರುಮಾಡಿರೆ, ನೆಡುಇರುಳು ಒರೆಂಗೆ ಆವುತ್ತಡ; ಶಾಂತತ್ತೆ ಹೇಳಿತ್ತಿದ್ದವು.

ಹಲಸಿನ ಕಾಯಿ ತಾಳು
ಇದೇ ಹಲಸಿನಕಾಯಿಯ ಆಗಾಣ ಗುಜ್ಜೆ ಒಗ್ಗರಣೆ ಹಾಕಿದ ನಮುನೆ ಒಗ್ಗರಣೆ ಹಾಕಿರೆ ಹಲಸಿನಕಾಯಿ ತಾಳುದೇ ತೆಯಾರು.
ಹೊಟ್ಟೆಶುದ್ದಿಗೆ ಇದು ಭಾರೀ ಒಳ್ಳೆದಾಡ, ಚೌಕ್ಕಾರುಮಾವ° ಹೇಳುಗು.
ಮಾಡ್ಳೂ ಸುಲಾಬ ಹೇಳಿಗೊಂಡು, ಹಲಸ್ನಾಯಿ ಸಮೆಯಲ್ಲಿ ಇದೊಂದು ಇದ್ದೇ ಇಕ್ಕು!!

ಕೊದಿಲು:

ಹಲಸಿನಕಾಯಿಯ ಉರುಟುರುಟು ಹೋಳುಮಾಡಿ ಲಾಯಿಕಂಗೆ ಬೇಶುದು.
ಕೊತ್ತಂಬರಿ ಕುಂಟೆಮೆಣಸು ಹಾಕಿ ತೆಂಗಿನಕಾಯಿ ಮಸಾಲೆಮಾಡ್ತದು. ಬೆಂದಬಾಗಕ್ಕೆ ಈ ಮಸಾಲೆ ಸೇರುಸಿ ಲಾಯಿಕಂಗೆ ಕೊದಿಶುದು.
ಹಲಸ್ನಾಯಿ ಕೊದಿಲು ತೆಯಾರು.

ಮೇಲಾರ:
ಕೊದಿಲಿಂದಲೂ ಸಣ್ಣಕೆ ಕೊರದ ತುಂಡುಗಳ ಲಾಯಿಕಕ್ಕೆ ಬೇಶಿ, ಮೇಲಾರದ ಅರಪ್ಪುದೇ, ರಜ ಹುಳಿಮಜ್ಜಿಗೆಯೂ ಹಾಕಿರೆ – ಪಷ್ಟ್ಳಾಸು ಮೇಲಾರ ತೆಯಾರಿ.
ರಂಗಮಾವಂಗೆ ಬೆಶಿ ಹೆಜ್ಜೆಗೆ ಬೆಶಿ ಮೇಲಾರ ಸಿಕ್ಕಿರೆ ಪಾತಿಅತ್ತೆ ಸಾಕು ಹೇಳುವನ್ನಾರವೂ ಉಂಗು!

ಜೀರಕ್ಕಿಬೆಂದಿ:

ರಜ್ಜ ಬೆಲ್ಲ, ಅರಿಶಿನ ಹೊಡಿ ಹಾಕಿ ಬಾಗವ ರಜ್ಜ ಬೇಶುದು.
ಕಾಯಿಯ ಜೀರಕ್ಕಿ, ಹಸಿಮೆಣಸಿನ ಒಟ್ಟಿಂಗೆ ಹಾಕಿ ಲಾಯಿಕಂಗೆ ಕಡದು, ಬೇಶಿದ ಬಾಗದ ಒಟ್ಟಿಂಗೆ ಮಿಶ್ರಮಾಡ್ತದು.
ಸೀವುಸೀವು ಜೀರಕ್ಕಿಬೆಂದಿ ತೆಯಾರು!! ಕೊದಿಲೂ, ಮೇಲಾರವೂ ಅಲ್ಲದ್ದೆ ವೈಶಿಷ್ಟ್ಯಪೂರ್ಣ ನಮ್ಮ ಹಳೆಅಡಿಗೆಲಿ ಇದುದೇ ಒಂದು!

ಕಾಯಿಚೆಕ್ಕೆ ದೋಸೆ:
ನೊಂಪಿಂಗೆ ಕಡವಲೆಡಿತ್ತ ನಮುನೆಯ ಲಾಯಿಕ ಹಲಸ್ನಾಯಿ ಹೆಮ್ಮಕ್ಕೊಗೆ ಕೊಶಿಯೋ ಕೊಶಿ.
ಮಂದಕೆ ದೋಸೆಹಿಟ್ಟಿನ ಕಡದು, ಕಾವಲಿಗೆ ಮಡಗಿ ಕೈಲೇ ಎರಗು ಪಾತಿಅತ್ತೆ. ಅವಕ್ಕೆ ಸೌಟಿಲಿ ಎರದರೆ ತೆಳು ಆವುತ್ತಿಲ್ಲೆಡ, ಕೈಲಿ ಎರದರೆ ಮಾಂತ್ರ ಪೇಪರಿನಷ್ಟು ತೆಳು ಅಪ್ಪದಾಡ.
ಆ ದೋಸೆಯ ಜೇನು-ತುಪ್ಪ ಕಲಸಿ ಕೂಡಿ ತಿಂದರೆ ರುಚಿಯೇ ರುಚಿ!

ಹಲಸಿನ ಕಾಯಿ ಬೋಂಡ:
ಬೈಲಿಲಿ ಬಟಾಟೆ ಗೆಣಂಗು ಹೇಳಿ ಎಲ್ಲೋರುದೇ ಜಗಳಮಾಡಿಗೊಂಡೇ ಬಾಕಿ. ಆದರೆ ದೊಡ್ಡಕ್ಕ° ಹೊಸತ್ತರ ಕಲಿತ್ತದರ ನಿಲ್ಲುಸ.
ಈ ಕಾಯಿಸೊಳೆಯ ಬೋಂಡ ಮಾಡ್ಳಾವುತ್ತು – ಹೇಳ್ತದು ನವಗೆಲ್ಲಿ ಅರಡಿವದು – ದೀಪಕ್ಕ° ಹೇಳದ್ದರೆ.
ಹಾಂಗೆ, ಮಾತಾಡುವಗ ನೆಂಪುಮಾಡಿದವು: ಹಲಸ್ನಾಯಿ ಬೋಂಡ.
ಸೊಳೆಯ ಲಾಯಿಕಲ್ಲಿ ಕಡದು, ರಜ ಮೈದಾಹೊಡಿಯ ಒಟ್ಟಿಂಗೆ ಹಾಕಿ – ಕ್ರಮ ಹೇಂಗೆ ಹೇಳ್ತದು ಒಪ್ಪಣ್ಣಂಗೆ ಸರಿ ಅರಡಿಗಾಯಿದಿಲ್ಲೆ.
ಇನ್ನೊಂದರಿ ಕೂದು ಕೇಳಿ, ಬೈಲಿಂಗೆ ನಿಧಾನಕ್ಕೆ ಹೇಳುವೊ°.

ನೀರ್ಸೊಳೆ / ಉಪ್ಪಿಲಿ ಹಾಕಿದ ಸೊಳೆ

ಕುಜುವೆ, ಹಲಸ್ನಾಯಿ ಹೇಳಿ ಪಟ್ಟಿಮಾಡುವಗ ಇಷ್ಟೊತ್ತು ಆದಾಕಿಂಡಿದ್ದಿದ್ದ ದೊಡ್ಡತ್ತೆ – ಉಪ್ಪಿಲಿ ಹಾಕಿದ ಸೊಳೆಯ ಶುದ್ದಿ ನೆಂಪುಮಾಡಿದವು.
ಅಪ್ಪು, ಒಳ್ಳೆ – ದಪ್ಪಜಾತಿಯ ಸೊಳೆಯ ಉಪ್ಪಿಲಿ ಹಾಕಿ ಮಡಗುತ್ತ ಮರಿಯಾದಿ ಇದ್ದು.
ಹಲಸ್ನಾಯಿ ಸಮೆಯಲ್ಲಿ ಹಾಂಗೆ ಮಡಗಿರೆ, ಹಲಸ್ನಾಯಿಯೇ ಇಲ್ಲದ್ದ ಸಮೆಯಲ್ಲಿ ತೆಗದು ಉಪಯೋಗ ಮಾಡಿಕ್ಕಲಾವುತ್ತು.

ಇದಕ್ಕೆ ನಮ್ಮ ಬೈಲಿಲೇ ಬೇರೆಬೇರೆ ಹೆಸರು ಹೇಳ್ತವು: ಉಪ್ಪಿನಸೊಳೆ, ನೀರುಸೊಳೆ, ಉಪ್ಪಿಲಿಹಾಕಿದ ಸೊಳೆ – ಹೀಂಗೆಲ್ಲ.
ಎಂತದೇ ಹೇಳಲಿ, ರುಚಿ ಒಂದೇ! 😉
ಉಪಯೋಗಕ್ಕಪ್ಪಗ ಉಪ್ಪಿನ ಅಳಗೆಂದ ತೆಗದು, ಒಂದರಿ ಚೆಂದಕೆ ತೊಳದು ಮಡಿಕ್ಕೊಂಗು.

ತಾಳು:
ನೀರ್ಸೊಳೆಯ ಚೆಂದಕೆ ತುಂಡುಸಿ, ಒಗ್ಗರುಸಿರೆ ತಾಳು ಆತು!
ಉಪ್ಪಿಲಿ ಹಾಕಿದ ಸೊಳೆಯ ಪೊಡಸು ರಜ ಇದ್ದರೂ, ಹಲಸಿನ ಸೊಳೆದೇ ರುಚಿ. ಇದರ ಪರಿಮ್ಮಳವ ಕೇಳಿರೇ ಅರ್ದ ಸೇರು ಅಶನ ಜಾಸ್ತಿ ಮುಗಿಗೋ ಹೇಳಿಗೊಂಡು!!

ಬೋಳುಬೆಂದಿ:
ಕಾಯಿಕಡದ ದಿನ ಬೆಂದಿ ಮಾಡ್ತನ್ನೆ, ಕಾಯಿಕಡೆಯದ್ದ ದಿನ ಎಂತರ – ಅದುವೇ ಬೋಳುಬೋಳು ಇಪ್ಪ ಬೋಳುಬೆಂದಿ.
ಬಾಗವ ಬೇಶಿ, ರಜ್ಜ ಹುಳಿ, ಬೆಲ್ಲ, ಉಪ್ಪು ಎಲ್ಲ ರುಚಿಗೆ ದಕ್ಕಿತ ಹಾಕಿಕ್ಕಿ, ಲಾಯಿಕದ ಒಗ್ಗರಣೆ ಕೊಡ್ತದು.
ಬೆಂದಿ ಬೋಳು ಆದರೂ ರುಚಿ ಬೋಳಲ್ಲ ಭಾವಾ! ಹೆಜ್ಜಗೆ ಕೂಡಿಂಡು ಉಂಬಲೆ ಪಷ್ಟಾವುತ್ತು.

ಸೊಳೆ ರೊಟ್ಟಿ:
ಉಪ್ಪಿನ ಸೊಳೆಯ ಒಂದೆರಡುಗಂಟೆ ನೀರಿಲಿ ಮಡಗುದು.
ತೆಗದು ರಜ ಅಕ್ಕಿಯೂ ಕಾಯಿಯೂ ಒಟ್ಟಿಂಗೆ ಹಾಕಿ ಗಟ್ಟಿಗೆ ಕಡವದು!
ಕಾವಲಿಗೆಗೆ ತಟ್ಟಿ ತಟ್ಟಿ ಬೇಶಿರೆ ಸೊಳೆ ರೊಟ್ಟಿ ತೆಯಾರು! ತಟ್ಟುವಗ ಕೈಬೆರಳಿನ ಗುರ್ತ ಮೂಡ್ತಿದಾ, ಅದರ ನೋಡ್ಳೇ ಚೆಂದ. 😉
ರುಚಿಯ ರೊಟ್ಟಿ ನಾಕರ ಗಟ್ಟಿಗೆ ತಿಂದರೆ ಮಧ್ಯಾನ್ನ ಆದರೂ ಕರಗ.

ಉಂಡ್ಳಕಾಳು:
ಸೊಳೆಯ ತೆಗದು ನೀರಿಲಿ ಹಾಕಿ ಒಂದೆರಡು ಗಂಟೆ ಮಡಗುದು.
ಕಾಯಿ ಹಾಕಿ ನೊಂಪಿಂಗೆ ಕಡವದು. – ಕೆಲವು ಜೆನ ಕಡವಗ ಅಕ್ಕಿಯನ್ನೂ ಮಿಶ್ರ ಮಾಡ್ತವಡ.
ಹಿಟ್ಟಿನ ಸಣ್ಣ ಸಣ್ಣ ಉಂಡೆ ಮಾಡುದು – ಕೆಲವು ಜೆನ ಉಂಡೆಮಾಡುವಗ ಉಂಡೆಯೆಡಕ್ಕಿಲಿ ಗೋಟುಕಾಯಿಯನ್ನೂ ಮಡಗ್ಗು.
ಎಣ್ಣೆಲಿ ಹಾಕಿ ಬೇಶಿರೆ, ಮಳೆಗಾಲ ತಿಂಬಲೆ ರುಚಿಯೋ ರುಚಿ!!
(ಬಂಡಾಡಿಅಜ್ಜಿ ಇದರ ಬಗ್ಗೆಯೇ ಒಂದು ಶುದ್ದಿ ಹೇಳಿದ್ದವು ಬೈಲಿಲಿ, ಗೊಂತಿದ್ದಲ್ಲದೋ?)

ಹಲಸಿನ ಹಣ್ಣು:
ಮಕ್ಕೊ ಹೆಮ್ಮಕ್ಕೊ ಇಷ್ಟೆಲ್ಲ ಬಗೆ ಮಾಡಿದ ಮೇಗೆಯೂ ಹಣ್ಣು ಒಳುದತ್ತೋ?
ಹಣ್ಣಿಂಗೂ ಕಾಯಿಯಷ್ಟೇ ಬೇಡಿಕೆ ಇದ್ದಿದಾ!!
ಮೇಗಂಗೆ ಕಾಂಬಗ ಎಲ್ಲವೂ ಹಲಸೇ ಆದರೂ, ಒಳ ಸುಮಾರು ಜಾತಿಪದ್ಧತಿ ಇದ್ದು. ಹಾಂಗೆ ಜೇನುಬರಿಕ್ಕ, ಬಡ್ಡಬರಿಕ್ಕೆ, ಉದ್ದ ತುಳುವ – ಹೀಂಗೆ ಹೆಚ್ಚಿನ ಮನೆಲಿಯೂ ಎರಡು ಮೂರು ಜಾತಿಯ ಮರಂಗೊ ಇರ್ತು.
ಇಂತಾ ಮರ ಇಂತಾದ್ದಕ್ಕೆ ಲಾಯಿಕಪ್ಪದು ಹೇಳಿಗೊಂಡು.

ಆಹಾ.. ಹಲಸಿನಣ್ಣು

ಹಣ್ಣು:
ಹಾಂಗೆ, ಜೇನಬರಿಕ್ಕ ಹೇಳಿರೆ – ಜೇನಿನಷ್ಟು ಸೀವಿನ ಹಣ್ಣಿನ ಸೊಳೆಗೊ ಇಪ್ಪ ಹಲಸಿನಣ್ಣು!!
ಆದರೂ, ಅದರ ಮೇಗಂದ ಕಾಡಜೇನ ಒಟ್ಟಿಂಗೆ ಮಿಶ್ರಮಾಡಿ ತಿಂದರೆ ಹೇಂಗಿಕ್ಕು? – ಇದು ನಮ್ಮ ಅನ್ವೇಷಣೆ ಅಲ್ಲ – ಕಾಡಿಲಿ ಇರ್ತ ಕರಡಿಯ ಅನ್ವೇಷಣೆ ಅಡ.
ಅಪ್ಪು! ಒಂದು ಲಾಯಿಕದ ಹಣ್ಣಿನ ಬಿಚ್ಚಿ, ಒಂದು ಕೋಲುಜೇನು ಗೂಡಿನ ಒಕ್ಕಿ, ಎರಿಯ ತಂದು ಹಿಂಡಿ – ಕರಡಿ ತಿಂಗಡ.
ಹಾಂಗೆ ನಾವುದೇ ಇದೇ ನಮುನೆ ಮಾಡ್ಳಿದ್ದು.
ಬರಿಕ್ಕ ಸೊಳೆಯ ಲಾಯಿಕಕ್ಕೆ ಆದು, ಗಿಣ್ಣಲಿಲಿಪ್ಪ ಜೇನವ ಮಡಗಿ ಅದ್ದಿ ಅದ್ದಿ ತಿಂತದು ಆಚಮನೆದೊಡ್ಡಪ್ಪಂಗೆ ಭಾರೀ ಆನಂದದ ವಿಶಯ.
ಒಂದು ತಮಾಶೆ ನೆಂಪಾತು: ಜೋರು ಮಳೆಬಂದುಗೊಂಡಿಪ್ಪಗ ಒಂದು ಮಾಪುಳೆ ಉದಾಸ್ನ ಮಾಡಿಂಡು ಹೇಳಿತ್ತಡ –  ಛೆ, ಈಗ ಹಲಸಿನ ಹಣ್ಣು ಇದ್ದಿದ್ದರೆ, ಒಟ್ಟಿಂಗೆ ಜೇನವೂ ಇದ್ದಿದ್ದರೆ ಅದ್ದಿ ಅದ್ದಿ ತಿಂಬಲಾವುತಿತು- ಹೇಳಿಗೊಂಡು!
ಯೇವದಾರು ಒಂದು ಇದ್ದರೂ ಹಾಂಗೆ ಹೇಳುದಕ್ಕೆ ಅರ್ತ ಇದ್ದು. ಎರಡೂ ಇಲ್ಲದ್ದೆ ಆ ಯೋಚನೆ ಬಂದದೇ ಈ ಗಾದೆಯ ತಮಾಶೆ ತಾತ್ಪರ್ಯ.
ಕೈಂದ ಹರಿಯದ್ದ ಏನಾರು ಏರ್ಪಾಡುಗಳ ಹೊತ್ತೋಪಲೆ ಹೇಳಿರೆ ಮಾಷ್ಟ್ರುಮಾವ° ಈ ಗಾದೆಯ ನೆಂಪುಮಾಡುಸುಗು ಒಂದೊಂದರಿ! 😉

ಹಣ್ಣಿನ ಪಾಯಿಸ
ಹಲಸಿನಣ್ಣಿನ ಲಾಯಿಕಕ್ಕೆ ಕೊರದು, ಕೊಚ್ಚಿ ಬೆಲ್ಲವುದೇ ರಜ ಹಾಕಿ ಬೇಶಿರೆ ಪಾಯಿಸ ಮಾಡ್ಳಕ್ಕು.
ಕಾಯಾಲು ರಜ ಹಿಂಡಿರೆ ರುಚಿ ಏರುತ್ತು. ಕೆಲವು ಸರ್ತಿ ಕೊಬ್ಬರಿಯೋ – ಮಣ್ಣ ಹಾಕುಲೂ ಅಕ್ಕು.
ಹಲಸಿನಣ್ಣಿನ ಸಮೆಯಲ್ಲಿ ಒಂದರಿ ಆದರೂ ಇದು ಇದ್ದೇ ಇಕ್ಕು!

ಕಾಸಿದ್ದು:
ಹಲಸಿನ ಹಣ್ಣಿನ ಲಾಯಿಕಕ್ಕೆ ಕೊಚ್ಚಿ, ಕಾಸುತ್ತದು.
ಜಾಸ್ತಿ ಅಲ್ಲ, ಹದಾಕೆ. ಅದರ ಹೊಸತನದ ಅಂಶ ಬಿಟ್ಟು, ಹದಾಕೆ ಬಾಡ್ತಷ್ಟು ಕಾಸಿಕ್ಕುದು.
ಇಂದು ಕೊಯಿದ ಹಣ್ಣಿನ ನಾಳೆಲ್ಲ ನಾಳ್ತಿಂಗೆ ಕೊಟ್ಟಿಗೆ ಮಾಡ್ತರೆ, ಎರಡು ದಿನದ ಮಟ್ಟಿಂಗೆ ಮಡಲೆದಕ್ಕಿತ ಹದಾಕೆ ಕಾಸಿ ಮಡಗುತ್ತದು ಇನ್ನೊಂದು ಕ್ರಮ.
ಇದರ ಚೈಂಗುಳಿ ಹೇಳಿಯೂ ಹೇಳ್ತವು ಕೆಲವು ದಿಕ್ಕೆ.

ಸುಟ್ಟವು:
ಹಲಸಿನಣ್ಣಿನ ಕೊರದು, ಕೊಚ್ಚಿ, ಕಾಸಿ, ರಜ್ಜ ಅಕ್ಕಿಹಿಟ್ಟಿನೊಟ್ಟಿಂಗೆ ಮಿಶ್ರಮಾಡಿರೆ ಸುಟ್ಟವು ಮಾಡ್ಳೆ ಪಷ್ಟು!
ಸಣ್ಣ ಸಣ್ಣ ಉಂಡೆಯ ಮಾಡಿ ತುಪ್ಪಕ್ಕೋ, ಎಣ್ಣಗೋ ಮಣ್ಣ ಬಿಟ್ಟರೆ ಸುಟ್ಟವು ತಿಂಬಲೆ ಬಲು ರುಚಿ.
ಕಾಯಿಯ ಬೋಂಡಮಾಡಿದ ಎಣ್ಣೆ ಹಾಂಗೇ ಬಾಕಿ ಇದ್ದಲ್ಲದೋ – ಹಣ್ಣಿನ ಸುಟ್ಟವು ಮಾಡ್ಳೆ! 😉

ದೋಸೆ:
ಹಲಸಿನ ಹಣ್ಣಿನ ಅಕ್ಕಿಯೊಟ್ಟಿಂಗೆ ಹಾಕಿ ಕಡದರೆ, ದೋಸೆ ಎರವಲಾವುತ್ತು.
ಕಾಯಿಯ ನಮುನೆ ಚೆಪ್ಪೆ ಅಲ್ಲದ್ದೆ, ರಜ್ಜ ಸೀವುಸೀವಟೆ ಆಗಿ, ಜೇನದ ಒಟ್ಟಿಂಗೆ ಒಳ್ಳೆ ಪಾಕಲ್ಲಿ ತಿಂಬಲಾವುತ್ತು ಭಾವ.

ಕೊಟ್ಟಿಗೆ:
ಚೆ, ಕೊಟ್ಟಿಗೆ ಹೇಳಿರೆ ಅಟ್ಟಿನಳಗೆ ನೆಂಪಾವುತ್ತು, ಅಟ್ಟಿನಳಗೆ ಹೇಳಿರೆ ಸುಬಗಣ್ಣನ ನೆಂಪಾವುತ್ತು. 🙁

ಅದಿರಳಿ, ಹಲಸಿನ ಹಣ್ಣಿನ ಕೊಚ್ಚಲಿನ ರಜ್ಜ ಅಕ್ಕಿ ಹಿಟ್ಟಿಂಗೆ ಮಿಶ್ರಮಾಡಿಗೊಂಬದು.
ಲಾಯಿಕದ ಬಾಳೆ ಎಲೆಯ ಬಾಡುಸಿ, ಈ ಹಿಟ್ಟಿನ ಒಂದು ಸೌಟು ಎರವದು.
ಬಾಳೆಯ ಚೆಂದಕೆ ಮಡುಸಿ – ಮಾಷ್ಟ್ರುಮಾವ° ಎಲೆತೊಟ್ಟೆ ಮಡುಸುತ್ತ ನಮುನೆ ಮಾಡಿ – ಅಟ್ಟಿನಳಗೆಲಿ ಮಡಗುದು.

ರಜ್ಜ ಹೊತ್ತು ಬೇಶಿರೆ ಕೊಟ್ಟಿಗೆ ತೆಯಾರಿ.
ಎಣ್ಣೆಯೋ, ಜೇನವೋ, ತುಪ್ಪವೋ, ಉಪ್ಪಿನಾಯಿಎಸರೋ, ಚಟ್ಣಿಯೋ – ಎಂತದೂ ಅಕ್ಕು ಇದಕ್ಕೆ.
ಮದಲಿಂಗೆ ಒಂದು ಮಳೆಗಾಲ ಒಂದು ಕೊಟ್ಟಿಗೆ ಆದರೂ ತಿನ್ನದ್ದವ ಬೂಸು ಹೇಳಿ ಲೆಕ್ಕ ಇತ್ತಾಡ, ಸುಬಗಣ್ಣ ಹೇಳಿದ್ದು.
ಓಯ್, ನಿಂಗನಿಂಗಳ ಮನೆ ಅಟ್ಟಿನಳಗೆ ನಿಂಗನಿಂಗಳೇ ತೊಳಕ್ಕೊಳೇಕು, ಸುಬಗಣ್ಣನ ಕೈಲಿ ಹೇಳಿರೆ ಮನೆದೇವರು ಬೈಗು – ಹಾಂ! 😉

ಗೆಣಸಲೆ:

ಇದು ಕೊಟ್ಟಿಗೆಯ ಕಿರಿಯಬ್ಬೆ ಮಗ°!
ಬಾಳೆಲೆಲೇ ಎರವದಾದರೂ, ಹಿಟ್ಟೂ ಆಗಾಣ ನಮುನೆ ಅಲ್ಲ.
ಅಕ್ಕಿ ಹಿಟ್ಟಿನ ಎರದು, ಅದರ ಮಧ್ಯಕ್ಕೆ ಹಲಸಿನಣ್ಣು-ಕಾಯಿ-ಬೆಲ್ಲದ ಮಿಶ್ರವ ಎರೆತ್ತದು.
ಬೇಶಿಆದ ಮೇಗೆ, ಹೆರಾಣ ಹೊಡೆಲಿ ತಿಂಬಲೆ ಉಪ್ಪುಪ್ಪು ಅಕ್ಕಿಹಿಟ್ಟುದೇ, ಮಧ್ಯಲ್ಲಿ ಸೀವಟೆ ಪಾಕವೂ ಸಿಕ್ಕಿ ಪರಮಾನಂದ ಆವುತ್ತು.
ಮದಲಿಂಗೆ ಕೊಂಕಣಿ ಹೋಟ್ಳುಗಳಲ್ಲಿ ಎಲೆಒಡೆ ಹೇಳಿ ಸಿಕ್ಕಿಂಡಿತ್ತಾಡ.
ಹಲಸಿನಣ್ಣಿಲ್ಲದ್ದೆ, ಬರೇ ಕಾಯಿಬೆಲ್ಲದ ಹೂರಣ ಮಾಡಿ ಹಿಟ್ಟಿಂಗೆ ಎರದು ಗೆಣಸಲೆಯ ನಮುನೆ ಬೇಶಿ ಕೊಟ್ಟೊಂಡಿದ್ದಿದ್ದಾಡ.
ಉಮ್ಮಪ್ಪ, ಒಪ್ಪಣ್ಣಂಗರಡಿಯ!

ಪೆರಟಿ:

ಕೊಚ್ಚಲು ಹೇಳಿರೆ ಎಂತ ಗೊಂತಾತು.
ಹಲಸಿನಣ್ಣಿನ ಸೊಳೆಯ ಬೆಶಿ ಮಾಡ್ತ ಅದೇ ಪಾಕವ ಇನ್ನೂ ಕಾಸಿರೆ ಎಂತಕ್ಕು?
ಅದರ್ಲಿಪ್ಪ ನೀರಿನ ಅಂಶ ಪೂರ್ತಿ ಆವಿ ಆಗಿ ಹೋವುತ್ತು; ಹಸಿ ಹಣ್ಣಿನ ನಾರುಗೊ ಸರೀ ಬೇಯ್ತು.
ಹಾಂಗೆ ಬೆಂದು, ನೀರಾರಿ, ಕಪ್ಪು ಬಣ್ಣಲ್ಲಿ ಉಂಟಪ್ಪ ಸಾಂದ್ರ ಮಿಶ್ರಣವೇ – ಪೆರಟಿ.
ಇದರ ಉಂಡೆಉಂಡೆ ಮಾಡಿ ಅಳಗೆಲಿ ಹಾಕಿ ತೆಗದು ಮಡಗಲಕ್ಕು.
ಹಲಸಿನ ಹಣ್ಣು ಒಂದೆರಡು ದಿನ ಒಳಿಗು, ಆದರೆ ಈ ಪೆರಟಿದ ಪಾಕ ಸರಿಯಾದ ನಮುನೆಲಿ ಬಂದರೆ ಮದಲಿಂಗೆ ಎರಡೊರಿಶ ಮೂರೊರಿಶ ಮಡಗ್ಗು ಕಾಂಬುಅಜ್ಜಿ!
ಈ ಒರಿಶ ಪೆರಟಿದ್ದು ಬಪ್ಪೊರಿಶ ಅಲ್ಲ, ಅದರಿಂದ ಮತ್ತಾಣ ಒರಿಶ ಒರಿಶದ ಬೆಳೆ ಒರೆಂಗೂ ಇರ್ತು.
ಅಬ್ಬಾ, ಈ ಹೆಮ್ಮಕ್ಕೊ ಹೇಮಾರ್ಸಿ ಮಡಗುತ್ತ ಕ್ರಮವೇ!!!

ಪೆರಟಿ ಪಾಯಿಸ:

ಈ ಪೆರಟ್ಟಿದ್ದರ ಅಂತೇ ಮಡಗುದಲ್ಲ; ಹಲಸಿನಣ್ಣಿಲ್ಲದ್ದ ಕಾಲಲ್ಲಿ ಪಾಚ ಮಾಡುಗು! ಅದುವೇ ಪೆರಟಿಪಾಯ್ಸ!
ಈ ಪೆರಟಿದ್ದರ ಹಾಂಗಾಗಿ, ಈ ಪೆರಟಿದ್ದರ ರಜ್ಜ ಬೆಲ್ಲ ಹಾಕಿ ಬೆಶಿಮಾಡಿ, ಕಾಯಾಲು ಎರದರೆ ಪೆರಟಿಪಾಯ್ಸ ತೆಯಾರು.
ಅದಕ್ಕೆ ಬಾಗಕ್ಕೆ ಕೊಪ್ಪರವೋ – ಎಂತಾರು ಸೇರುಸುಗು ಬಂಡಾಡಿಅಜ್ಜಿ.
ಹೇಳಿದಾಂಗೆ, ಆಟಿಗೆ ಕುಳ್ಳುಲೆ ಹೋವುತ್ತೋರಿಂಗೆ ಸಮ್ಮಾನಕ್ಕೆ ಈ ಪೆರಟಿಪಾಯ್ಸ ಇದ್ದೇ ಇಕ್ಕು ಭಾವಯ್ಯ!
~

ಇದಿಷ್ಟು ಹಲಸಿನ ಕಾಯಿಯ ವಿವಿಧ ರೂಪಂಗಳ ಬಗ್ಗೆ ಆತು.
ಇನ್ನು, ವಿವಿಧ ಭಾಗಂಗಳ ಬಗ್ಗೆ ರಜ್ಜ ಮಾತಾಡುವೊ, ಆಗದೋ?

ಬೇಳೆ:
ಹಲಸ್ನಾಯಿಲಿ ಸಿಕ್ಕುತ್ತ ಬೇಳೆಯ ಅಂತೇ ಇಡ್ಕಲಿದ್ದೋ? ಚೆ, ಇಲ್ಲೆಪ್ಪ.
ಅದರಲ್ಲಿ ಶರ್ಕರಪಿಷ್ಟ ಕೇಜಿಗಟ್ಳೆ ಇದ್ದಾಡ, ಕೇಜಿಮಾವ° ಹೇಳಿತ್ತಿದ್ದವು. ಹಾಂಗಾಗಿ ಬೇಳೆಯನ್ನೇ ಉಪಯೋಗುಸಿಗೊಂಡು ಕೆಲವು ಪಾಕಂಗಳ ಮಾಡ್ತವು.

ಸೌತ್ತೆ ಬೇಳೆ ಕೊದಿಲು:
ಹೇಂಗೂ ಕಂಬಕ್ಕೆ ಬಾಳೆಬಳ್ಳಿಲಿ ಕಟ್ಟಿ ನೇಲುಸಿದ ಸೌತ್ತೆ ಈಗ ಮನೆಗಳಲ್ಲಿ ಇಕ್ಕು, ಅಲ್ಲದೋ!
ಒಂದು ಕೊಳವಲಾದ ಸೌತ್ತೆಯ ತೆಗದು ಬೆಂದಿಮಾಡುಗು.
ಆ ಸೌತ್ತೆಗೆ ಚೇರ್ಚೆಗೆ (ಮಿಶ್ರಕ್ಕೆ) ಹಲಸಿನಾಯಿ ಬೇಳೆಯ ಗುದ್ದಿ ಹಾಕುಗು.
ಸೌತ್ತೆಯ ಮೃದುತ್ವವೂ, ಬೇಳೆಯ ’ಗಟ್ಟಿ’ಗ ತನವೂ ಒಳ್ಳೆ ಜೆತೆ! ಎರಡೂ ಒಂದೇ ಕಾಲಲ್ಲಿ ಕೈಗೆ ಸಿಕ್ಕುತ್ತ ಕಾರಣ ಅನಿವಾರ್ಯವಾಗಿ ಚೇರ್ಚೆ ಸುರು ಆದ್ದೋ ಏನೊ!
ಉಮ್ಮಪ್ಪ.

ಬೇಳೆ ಹೋಳಿಗೆ

ಇದೇ ಬೇಳೆಯ ಉಪಯೋಗಿಸೆಂಡು ಹೋಳಿಗೆ ಮಾಡ್ಳಾವುತ್ತು. ಅರಡಿಗೋ?
ಬೇಳೆಯ ಕಡದು, ಒಟ್ಟಿಂಗೆ ಬೆಲ್ಲವೂ ಹಾಕಿ – ಹೂರಣ ತೆಯಾರಿ ಮಾಡ್ತದು.
ಮೈದಾ ಹಿಟ್ಟಿನ ಕಣಕ ಮಾಡಿರೆ ಆ ಹೂರಣ ಉಂಡೆಮಾಡಿ ಲಟ್ಟುಸಿ ಬೇಶಲಕ್ಕು. ಬೇಳೆ ಹೋಳಿಗೆ ತೆಯಾರು!

ಶಾಂತಾಣಿ:
ಹಲಸಿನ ಬೇಳೆಯ ಬೇಶಿ ಉಪ್ಪಿನ ಒಟ್ಟಿಂಗೆ ಬೇಶಿ, ಒಣಗುಸಿರೆ ಶಾಂತಾಣಿ ತೆಯಾರು.
ಮಳೆಗಾಲ ಉದಾಸ್ನ ಅಪ್ಪಗ ತಿಂಬಲೆ ನೇರಂಪೋಕು ಅಗಿಯಲೆ ಇದು ಭಾರೀ ಒಳ್ಳೆ ಬಗೆ.
ಈಗ ಇದರ ಮಾಡ್ತದೂ ಕಮ್ಮಿ ಆಯಿದು, ರುಚಿ ಹಿಡುದ ಬೈಲಿನೋರೂ ಕಮ್ಮಿ ಆಯಿದವು.
ಒಪ್ಪಣ್ಣಂಗೆ ಈ ಬಗೆ ನೆಂಪಾದ ಕೂಡ್ಳೆ ಮಾಷ್ಟ್ರಮನೆ ಅತ್ತೆಯ ನೆಂಪಪ್ಪದು. ಎಂತಕಪ್ಪಾ…? 😉

~

ದೊಡ್ಡ ಕಳಲ್ಲಿ ಕೂದು ಹೀಂಗೆಲ್ಲ ಬಗೆ ಮಾತಾಡಿಗೊಂಡಿಪ್ಪಗಳೇ, ಆದು ಮುಗುದತ್ತು.
ಮಾತಾಡದ್ದೆ ಆದು ಹಾಕಿದ್ದಾದರೆ ಎಲ್ಲೋರಿಂಗೂ ಬಚ್ಚಲು ಗೊಂತಾವುತ್ತಿತು ಇದಾ. ಹೀಂಗೇ ಪಟ್ಟಿಮಾಡಿದ್ದರ್ಲಿ ಸುಲಾಬಲ್ಲಿ ಮುಗಾತು.

ತಲೆಂಬಾಡಿ ಸೀವಿನ ಹಣ್ಣಿನ ರಜ ರುಚಿನೋಡಿಗೊಂಡು, ನಾವು ಮೆಲ್ಲಂಗೆ ಹೆರಟತ್ತು.
~

ಅಲ್ಲಿಂದ ಮತ್ತೆ ಬಪ್ಪಗ ಸಿಕ್ಕಿದ್ದೇ ಮಾಷ್ಟ್ರುಮಾವನ ಮನೆ.
ಮಾಷ್ಟ್ರುಮಾವಂದೇ ಒಂದರಿಯಾಣ ಹಲಸಿನಣ್ಣು ತಿಂದು, ಎಲೆತಿಂದುಗೊಂಡಿತ್ತಿದ್ದವು, ಅಷ್ಟೆ.
ಹಾಂಗೆ, ತಲೆಲಿ ತಿರುಗಿಂಡು ಇದ್ದ ಅದೇ ಶುದ್ದಿಯ ಮುಂದುವರುಸಿದೆ. ದೊಡ್ಡಬಾವನ ಒಟ್ಟಿಂಗೆ ಕೂದು ಮಾಡಿದ ಪಟ್ಟಿಯ ಹೇಳಿದೆ.

ಮಸಿಕಳ್ಳಿಕೆ

ಓ, ಕುಜುವೆಂದ ಸುರುಮಾಡಿದ್ದೋ, ಅದರಿಂದಲೂ ಮದಲಾಣ ಕಳ್ಳಿಕೆ / ( ಕಳ್ಳಿಗೆ)ಯನ್ನೂ ಲೆಕ್ಕಮಾಡ್ಳಾವುತಿತನ್ನೇ – ಕೇಳಿದವು.
ಕಳ್ಳಿಕೆ ಗೊಂತಾತಲ್ಲದೋ – ಮರಲ್ಲಿ ಕುಜುವೆ ಮೂಡುವ ಹಂತಲ್ಲಿ ಬೆರಳಿನಷ್ಟು ತೋರದ ಸಣ್ಣ ರಚನೆ!
ಮಕ್ಕೊ ಇದನ್ನೇ ಮರಂದ ಮುರುದು ತಿಂಗಡ, ಅದರ ಕನರು ರುಚಿಗೆ! (ದೊಡ್ಡವಕ್ಕೆ ಗೊಂತಾದರೆ ಇದೇ ಮರಂದ ಅಡರು ಮುರಿಗು! 😉 )
(ಸೂ: ಈ ಕಳ್ಳಿಗೆ ಬಾಡಿ ನೆಲಕ್ಕಕ್ಕೆ ಬಿದ್ದರೆ ಅಲ್ಲಿಗೇ ಕಪ್ಪಾವುತ್ತು – ಒಂದು ಎಲಿ ಸತ್ತು ಬಿದ್ದ ನಮುನೆಲಿ ಕಾಣ್ತು. ಇದಕ್ಕೆ ಮಸಿಕಳ್ಳಿಕೆ ಹೇಳ್ತದು.)

~
ಅಷ್ಟಪ್ಪಗ ಅವು ಹಲಸಿನ ಮರದ ಬಗೆಲಿ ಸುಮಾರು ವಿಶಯ ಹೇಳಿಗೊಂಡು ಹೋದವು.
ಹಲಸಿನ ಮರ ಹೇಳಿರೆ ನಾಕು F ಗಳ ಸಂಗಮ ಅಡ: Food, Fodder, Firewood, Furniture – ಹೇಳಿಗೊಂಡು.
Food (ಆಹಾರ) – ಹಲಸಿನಣ್ಣು ನಮ್ಮ ಆಹಾರಲ್ಲಿ ಅನೇಕ ರೂಪಲ್ಲಿ ಸೇರಿಗೊಂಡಿದು.
Fodder (ಮೇವು)– ದನಗೊಕ್ಕೆ ಹಲಸಿನಣ್ಣಿನ ಕಾಲಲ್ಲಿ ತಿಂಬಲೆ ಬೇರೆಂತೂ ಬೇಡ. ಮೂರೂ ಹೊತ್ತು ಹಲಸಿನ ರಚ್ಚೆಯೋ ಎಂತಾರು ಹಾಕಿರೆ ತಿಂದುಗೊಂಡೇ ಇಕ್ಕು.
ಮೋಳಮ್ಮ ಅಂತೂ ಅಂದು ಹಲಸಿನಣ್ಣು ಕೊರದರೆ ಹೊತ್ತೋಪಗ ರಚ್ಚೆ ಹಾಕುವನ್ನಾರ ರಚ್ಚೆಂದಬಿಡ-ಗೂಂಜಿಂದ ಬಿಡ ಹೇಳಿ ಬೊಬ್ಬೆ ಮಾಡುಗು!
Firewood(ಮುಷ್ಟಗೆ)– ಹಲಸಿನ ಸೌದಿ ನವಗೆ ವಿಶೇಷ ಆದ್ಸು. ವಿಶೇಷವಾಗಿ ಯಜ್ಞ ಯಾಗಾದಿಗೊಕ್ಕೆ ಈ ಮರದ ಸಮಿತ್ತು ಸಿಕ್ಕದ್ದರೆ ಬಟ್ಟಮಾವಂಗೆ ಸಮಾದಾನ ಆಗ.

Furniture(ಪೀಠೋಪಕರಣ)- ಹಲಸಿನಮರ ನೋಪಿಂದು. ಒಳ್ಳೆ ಬೆಳದ ತಿರುಳು ಹಲಸು ಸಿಕ್ಕಿರೆ ಆಚಾರಿಗೆ ಭಾರೀ ಕೊಶೀ ಅಕ್ಕು. ಮಳೆಗಾಲ ಇಡೀ ಗೀಸುಳಿ ಹಾಕಿಂಡು ನೊಂಪುಮಾಡುಗು.
ಬಾಗಿಲು, ದಾರಂದಂದ ಹಿಡುದು – ದೇವರ ಮಣೆ, ದೇವರ ಪೀಠ – ಹೀಂಗಿರ್ತ ದೈವೀಕ ಸಲಕರಣೆಗಳ ಒರೆಂಗೆ – ಎಲ್ಲದಕ್ಕೂ ಹಲಸು ಅಕ್ಕು.

ಅದಲ್ಲದ್ದೇ,
ಹಲಸಿನ ಎಲೆಲಿ ಕಡ್ಡಿ ಕುತ್ತಿ ಮೂಡೆ ಮಾಡ್ತವು.
ಆ ಮೂಡೆಲಿ ಉದ್ದಿನ ಹಿಟ್ಟು ಎರದು ಅಟ್ಟಿನಳಗೆಲಿ ಮಡಗಿ ಇಡ್ಳಿಯ ಹಾಂಗೆ ಮಾಡ್ತವು – ಹೇಳಿದವು. ಮಾಷ್ಟ್ರುಮಾವ° ಹೇಳಿಗೊಂಡು ಹೋದ ಹಾಂಗೇ, ಎನಗೆ ಒಂದರಿ ಸುಬಗಣ್ಣನ ನೆಂಪಾಗಿ ಹೋತು!

~

ಮೇಣ
ಹಲಸಿನ ಮರಲ್ಲಿ ಮೇಣವೇ ವಿಶೇಷ.
ಮರಕ್ಕೆ / ಹಣ್ಣಿಂಗೆ ಅಪ್ಪ ಯೇವದೇ ಆಘಾತವ ಮುಚ್ಚಿ, ನೈಸರ್ಗಿಕ ಜೀವನಕ್ಕೆ ಸಹಕಾರಿಯಾಗಿಪ್ಪ ಜೀವದ್ರವವೆ ಮೇಣ.
ಈಗೀಗ ಮೇಣವೇ ಇಲ್ಲದ್ದದರ ವಿಜ್ಞಾನಿಗೊ ಕಂಡುಹುಡ್ಕಿದ್ದವಡ, ಹಲ್ಲಿಲ್ಲದ್ದ ನಾಗರ ಹಾವಿನ ನಮುನೆದು! ;-( ಅದಿರಳಿ.

ಪ್ರತಿ ಸರ್ತಿ ಹಲಸಿನಾಯಿ ಕೊರವಗಳೂ, ಅದರ ಮೇಣವ ಒಂದು ನಿರ್ದಿಷ್ಟ ಕೋಲಿಂಗೆ ಸೇರುಸೆಂಡು ಹೋಕು.
ಬೀಮನ ಗದೆಯ ನಮುನೆ ಕಾಣ್ತ ಈ ಮೇಣದ ಕೋಲು, ಕೊಟ್ಟಗೆಯ ಮಾಡಿಂಗೆ ಸಿಕ್ಕುಸೆಂಡು ಇಕ್ಕು.
ಅಂತೇ ಈ ಮೇಣವ ತೆಗದು ಮಡಗುತ್ತದಲ್ಲ, ಬದಲಾಗಿ ಅದರ ಉಪಯೋಗ ಇದ್ದು..
ಅಳಗೆಲಿ ಒಟ್ಟೆಯೋ ಮಣ್ಣ ಎದ್ದರೆ, ಹಲಸಿನ ಮೇಣವ ಲಾಯಿಕಂಗೆ ಕಾಸಿ ಎರಗು. ಆ ಒಟ್ಟೆ ತಾತ್ಕಾಲಿಕವಾಗಿ ಮುಚ್ಚುಗು!

ಹೀಂಗೆ ನಾನಾವಿಧದ ಉಪಯೋಗಂಗೊ ಇಪ್ಪ ಹಲಸಿನಾಯಿಯ ಬಹುರೂಪತೆಯ ಪಟ್ಟಿ ಮತ್ತೂ ರಜ ಉದ್ದ ಆತು.
~

ಎದುರಂದ ಕಾಂಬಲೆ ಒಂದೇ ನಮುನೆ ಕಂಡರೂ, ಹಲಸಿಲಿ ಮುಖ್ಯವಾಗಿ ಕೆಲವು ಜಾತಿಗೊ ಇದ್ದಾಡ.
ಗಟ್ಟಿಗಟ್ಟಿ ಸೊಳೆಯ ಬರಿಕ್ಕ, ಮೆಸ್ತಂಗೆ ಸೊಳೆಯ ತುಳುವ, ಸಣ್ಣ ಸಣ್ಣ ಉರುಟು ಆಕಾರದ “ರುದ್ರಾಕ್ಷಿ”, ಮೇಣವೇ ಇಲ್ಲದ್ದ (gumless) ಹೊಸಜಾತಿ – ಹೀಂಗೆ.
ಆಚಮನೆ ದೊಡ್ಡಪ್ಪ ಹೇಳಿದ ಪ್ರಕಾರ, ನೆಲಕ್ಕದ ಅಡಿಲಿ ಹಲಸಿನಣ್ಣು ಆವುತ್ತ ಜಾತಿಯ ಒಂದು ವಿಶೇಷ ಮರ ಇದ್ದತ್ತಾಡ ಉಜಿರೆಲಿ.
ಈ ಅಪುರೂಪದ ಜಾತಿಯ ಬಗ್ಗೆ ಬೈಲಿಲಿ ಆರಿಂಗಾರು ಮಾಹಿತಿ ಸಿಕ್ಕಿರೆ ತಿಳುಶುವಿರಾ?
~

ಏನೇ ಆಗಲಿ, ನಮ್ಮ ನಿತ್ಯಜೀವನಕ್ಕೆ ಹತ್ತರೆ ಆದ, ನಮ್ಮ ಜಾಗೆಗಳಲ್ಲೇ ಇರ್ತ ಒಂದು ಫಲದ ಬಗ್ಗೆ ಇಷ್ಟೆಲ್ಲ ಇದ್ದಾ?
ತರಕಾರಿಯೂ ಅಪ್ಪು, ಹಣ್ಣುದೇ ಅಪ್ಪು, ಮರಮಟ್ಟಿಂಗೆ ಆವುತ್ತ ಜಾತಿಮರವೂ ಅಪ್ಪು – ಎಲ್ಲವೂ ಅಪ್ಪು!

ಇದರ್ಲಿಪ್ಪ ಬಹುಜಾತಿ, ಬಹುರುಚಿ, ಬಹುವಿಧಂಗಳ ಗುರ್ತ ಮಾಡಿಗೊಂಬ°. ಇದರ ವೈವಿಧ್ಯತೆಯ ರುಚಿ ಅನುಭವಿಸುವ°.
ಇದೆಲ್ಲವೂ – ಇನ್ನೊಂದೆರಡು ವಾರಲ್ಲಿ ಮುಗುದೇ ಹೋವುತ್ತ ನಮುನೆದು.
ಮತ್ತೆ ಏನಿದ್ದರೂ ಬಪ್ಪೊರಿಶ ಒರೆಂಗೆ ಕಾಯೇಕು. ಹಾಂಗಾಗಿ, ಈ ಒರಿಶ ಹಲಸು ಮುಗಿತ್ತರ ಮದಲೇ ಇಪ್ಪ ಹಲಸಿನ ಕಾಯಿ ಹಣ್ಣುಗಳ ಸರಿಯಾಗಿ ಬಳಸಿಗೊಂಬ°.

ಒಂದೊಪ್ಪ: ಹಲಸು ಹಳಸಿರೆ ಸಾರ ಇಲ್ಲೆ, ಹಲಸು ಬಳಸುವ ಮನಸೇ ಹಳಸಿರೆ!?

ಸೂ: ನಿಂಗಳೂ ಈ ಸರ್ತಿ ಹಲಸಿಲಿ ವಿಶೇಷದ್ದು ಎಂತಾರು ಮಾಡಿದ್ದರೆ ಬೈಲಿಂಗೆ ಹೇಳಿ, ಆತಾ?

ಒಪ್ಪಣ್ಣ

   

You may also like...

56 Responses

 1. ಶ್ಯಾಮಣ್ಣ says:

  ಎನ್ನ ಊರಿನ ಎಡ್ರಾಸು ಕೊಟ್ಟರೆ ಅಕ್ಕೋ…? ಮರದ ಕೊಡೀಲಿ ಇನ್ನುದೆ ನಾಲ್ಕು ಒಳುದ್ದು… ಎನಗೆ ಕೊಯ್ವಲೆ ಎಡಿಗಾಯಿದಿಲ್ಲೆ…
  ನಿಂಗೊಗೆ ಮರ ಹತ್ತುಲೆ ಎಡಿಗ?

 2. ತೆಕ್ಕುಂಜ ಕುಮಾರ says:

  ನಿಂಗೊಗೆ ಹತ್ತುಲೆ ಎಡಿಯದ್ದರೆ ತಲೆಬೆಶಿ ಬೇಡ, ಸುಭಗಣ್ಣಂಗೆ ಹೇಳ್ತಿತ್ತರೆ ಸುಂದರನ ಕಳುಸಿತ್ತಿದ್ದವು. ಮರಲ್ಲಿ ಎಷ್ಟು ಕೊಡಿಲಿ ಇದ್ದರೂ ಕೊಕ್ಕೆ ಹಾಕಿ ಬಲುಗಿ ತೆಗವಲೆ ಸುಂದರಂಗೆ ಎಡಿಗಡ. ಮೂರ್ಸಂದಿಲಿ ಮಾಂತ್ರ ಅದಕ್ಕೆ ಎರಡೆರಡು ಕಾಂಬದು, ಅಷ್ಟೆ. !

 3. ಶ್ಯಾಮಣ್ಣ says:

  ಸುಂದರನಾ…!!! ಅದರ ವೈವಾಟು ಆಗ. ಆದಕ್ಕೆ ಈ ಆಟಿಲಿ ತೋಟಕ್ಕೆ ಮದ್ದು ಬಿಟ್ಟೇ ಪೂರೈಸುತ್ತಿಲ್ಲೆ. ಅಲ್ಲದ್ದೆ ಅದು ಅಡಕ್ಕೆ ಮರಕ್ಕೆ ಹತ್ತಿದ್ದು ಅಲ್ಲಿಂದಲೇ ಹಲಸಿನಕಾಯಿ ಬಲುಗುದು. ಎಂಗಳ ಮರ ಮನೆ ಹಿಂದಾಣ ಗುಡ್ಡೆಲಿ ಇಪ್ಪದು… ಅಲ್ಲಿ ತೋಟ ಇಲ್ಲೆ.

 4. ಶ್ಯಾಮಣ್ಣ says:

  (ಛೆ, ಈಗ ಹಲಸಿನ ಹಣ್ಣು ಇದ್ದಿದ್ದರೆ, ಒಟ್ಟಿಂಗೆ ಜೇನವೂ ಇದ್ದಿದ್ದರೆ ಅದ್ದಿ ಅದ್ದಿ ತಿಂಬಲಾವುತಿತು- ಹೇಳಿಗೊಂಡು!)
  ಒಪ್ಪಣ್ಣ… ಇದು ಹೀಂಗೆ ಇರೆಕ್ಕಿತೋ ಹೇಳಿ…”ಈಗ ಹಲಸಿನ ಹಣ್ಣು ಇದ್ದಿದ್ದರೆ ಜೇನಿಲಿ ಅದ್ದಿ ತಿಂಬಲಾವ್ತಿತ್ತು… ಆದರೆ ಜೇನೇ ಇಲ್ಲೆನ್ನೆ… 🙁 ”
  ಹೇಳಿರೆ… ಒಂದರ ಹೇಳುವಗ ಇನ್ನೊಂದು ಇದ್ದು ಹೇಳ್ತ ಭ್ರಮೆ ಬರೆಕ್ಕು… ಆದರೆ ನಿಜವಾಗಿ ಏವದೂ ಇರ್ತಿಲ್ಲೆ…

 5. ಒಪ್ಪಣ್ಣೋ! ಹಲಸಿನ ಬಗ್ಗೆ ಸಂಗ್ರಹಯೋಗ್ಯ ತಿಳುವಳಿಕೆ ಕೊಟ್ಟಿದೆ! ಸುಂದರ ನಿರೂಪಣೆ, ಏವತ್ತಿನ ಹಾಂಗೆ, ಒಟ್ಟಾರೆ ಎಲ್ಲರ (ಎನ್ನನ್ನೂ ಸೇರ್ಸಿ) ಬಾಯಿಲೂ ನೀರೂರಿಸಿಬಿಟ್ಟೆ ನೀನು! ಹಲಸಿನ ಖಾದ್ಯಂಗ ಅಲ್ಲದ್ದೇ ಪ್ರತಿಯೊಂದು ಉಪಯೋಗವನ್ನೂ ನೆನಪ್ಪು ಮಾಡಿದ್ದು ಪಷ್ಟಾಯಿದು.. ಓದಿಗೊಂಡು ಹೋದ ಹಾಂಗೆ ಮನೆಯ ತೋಟಲ್ಲಿ ಉದ್ದತಟ್ಟಿಲಿಪ್ಪ ಮಲ್ಲಿಗೆಬೊಕ್ಕೆಯ ನೆಂಪಾತು.. ಅದರಿಂದಲೇ ಆಚಿಕೆ ಸೊಳೆ ಹೊರಿತ್ತ ಮರ.. ಇತ್ಲಾಗಿ ಒಂದು ತುಳುವ.. ಹಪ್ಪಳಕ್ಕೆ ಯೋಗ್ಯವಾದ್ದು ಬೇರೆಯೇ ಇದ್ದತ್ತು.. ನೋಡ್ತಾ ಇದ್ದ ಹಾಂಗೆ ಆ ಮರಂಗೋ ಎಲ್ಲ ಮರೆಯಾಯಿದು.. ಪರಿಸ್ಥಿತಿಯೋ, ದುರಾಸೆಯೋ ಅಂತೂ ಮರಂಗೋ ಎಲ್ಲ ಕೊನೆಯ F – Furniture ಆಗಿ ತೋಟಂದ ಕಾಣೆಯಾಯಿದವು! ಮತ್ತೆ ಪುನಾ ಅಂಥಾ ವೈವಿಧ್ಯವ ಬೆಳೆಶುಲೆಡಿಗೋ ಹೇಳುದು ಎನಗೆ ಉತ್ತರ ಸಿಕ್ಕದ್ದ ಪ್ರಶ್ನೆ! 🙁
  ಒಂದೊಪ್ಪ ಸೂಪರು.. ಒಂದೊಪ್ಪವ ವಿವರ್ಸಿಯೇ ಇನ್ನೊಂದು ಶುದ್ದಿ ಬರವಕ್ಕೋಳಿ! 😉

 6. ಮಧು says:

  ಒಪ್ಪಣ್ಣ ಲೇಖನ ತುಂಬ ಲಾಯಿಕ ಆಯಿದು.ಹಲಸಿನ ಹಣ್ಣಿ೦ದ ರವೆದೆ ಮಾಡ್ಲೆ ಆವ್ತು. ಎನ್ನ ಅಮ್ಮ ಮಾಡ್ತು.ತುಂಬ ಲಾಯಿಕ ಆವ್ತು.

 7. ಚುಬ್ಬಣ್ಣ says:

  ಒಪ್ಪಣ್ಣ ಭಾವ ನಿನ್ನ ದಿಸೆಲಿ ಆಗ..!! ಇದರ ಓದಿ ನವಗೆ ಬಾಯಿಲಿ ನೀರು ಬತ್ತನ್ನೆ..ಕೊಟ್ಟಿಗೆ ತಿನ್ನೆಕು ಹೇಳಿ ಕೊದಿಯಾವುತ್ತು..
  ಈಗ, ಆಟಿ ಸಮಯಲ್ಲಿ, ಹಲಸಿನ ಹಣ್ಣು ಎಲ್ಲಿ ಹುಡುಕ್ಕೆ೦ಡು ಹೋಗಲಿಯಪ್ಪಾ.. ಚೇ..!! 🙁

  ಎನೇ ಆಗಲಿ.. ಲಾಯಕೆ ವಿವರಣೆ ಕೊಟ್ಟಿದೆ ಭಾವ.. ಕೊಶಿಯಾತು.. 🙂

 8. ವಿಷ್ನು ನಂದನ says:

  ಲಾಯ್ಕ ಬರವಣಿಗೆ. ಒಂದರಿ ಎಲ್ಲಾ ನೆಂಪಾತು.

  ನಮ್ಮ ಹಿರಿಯರ ಗ್ರೆಹಿಶಿರೆ ಹೆಮ್ಮೆ ಆವುತ್ತು. ಪ್ರಕ್ರುತಿದತ್ತವಾದ ಎಲ್ಲವನ್ನ ಅವು 100% ಉಪಯೊಗಿಸಿಗೊಂಡಿತ್ತವು. ಯಾವುದನ್ನುದೆ ಇಡುಕ್ಕವು. ಎಲ್ಲದರಲ್ಲಿ ಒಂದು ಉಪಯೊಗ ಕಂಡು ಹಿಡಿಗು. ಎಷ್ತೊಂದು ತರಕರಿಗಳ ಓಡು, ಚೊಲಿ, ತಿರುಳು ಉಪಯೊಗಿಸಿ ಚಟ್ನಿ, ತಾಳು ಮಾಡ್ತವು. ಇಂತಹ ಒಂದು ಅನನ್ಯ ಸಂಸ್ಕ್ರುತಿಯ ಭಾಗವದ ನಾವೆ ಧನ್ಯರು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *