Oppanna.com

ಹಾಳೆಪಾತ್ರಂದ ಹಾಳೆತಟ್ಟೆಗೆ -ಬರೇ ಎರಡು ತಲೆಮಾರಿನ ದೂರ

ಬರದೋರು :   ಒಪ್ಪಣ್ಣ    on   07/08/2009    20 ಒಪ್ಪಂಗೊ


ಶಂಬಜ್ಜನ ಕಾಲದ ಶುದ್ದಿ:
ಕಾಂಬು ಅಜ್ಜಿ ಹಗಲೊತ್ತು ತೋಟಕ್ಕೆ ಹೋದರೆ, ಬಪ್ಪಗ ಕತ್ತಿಲಿ ಒಂದು ಕಾಯಿ ಕೊಡಪ್ಪಿಗೊಂಡು ಬಪ್ಪದಲ್ಲದ್ದೆ, ಗೆನಾದ ಒಂದಷ್ಟು ಹಾಳೆ, ಕೂಂಬಾಳೆಯನ್ನೂ ಕಂಕುಳೆಡೆಲಿ ಸಿಕ್ಕಿಸಿಗೊಂಡು ಬಕ್ಕು. ಜೆಗಿಲಿಲಿ ಕತ್ತಿಯ ಕಾಲೆಡಕ್ಕಿಂಗೆ ಸಿಕ್ಕುಸಿ ಹಾಳೆಕಟ್ಟ ಮಡಿಕ್ಕೊಂಡು ಕೂದರೆ ಹತ್ತು ನಿಮಿಶ ಏಳವು, ಪುಳ್ಳಿಯಕ್ಕಳ ’ಹತ್ತರೆ ಬರೆಡಿ’ ಹೇಳಿ ಬೈವದು ಅಂಬಗ ಮಾಂತ್ರ.
ಎಷ್ಟೋ ಮನೆಗಳಲ್ಲಿ ಅಜ್ಜಿಯಕ್ಕೊ ಈ ಕೆಲಸ ಮಾಡಿಗೊಂಡು ಇತ್ತಿದ್ದವು. ಉದಿಯಪ್ಪಗ ತೋಟಕ್ಕೆ ಹೋಗಿ ಹೊಸ ಹಾಳೆಗಳ ತಪ್ಪದು, ತಂದು ಹಾಳೆ ಪಾತ್ರವೋ ಎಂತಾರು ಮಾಡುದು.

ಆ ಕಾಲಲ್ಲಿ ನಿತ್ಯೋಪಯೋಗಕ್ಕೆ ಅಡಕ್ಕೆ ಹಾಳೆ ತುಂಬ ಉಪಯೋಗ ಆಯ್ಕೊಂಡಿತ್ತು.

  • ಹಾಳೆಯ ಕೊಡಿಯನ್ನೂ ಕಡೆಯನ್ನೂ ತುಂಡುಸಿ, ನಾರಿಗೆ (ಹಾಳೆ ಹಿಂದಾಣ ಚೋಲಿ) ತೆಗದರೆ ಹಾಳೆ ಪಾತ್ರ ಆತು. ಮದ್ಯಾನ ಉಂಬಲೆ. ನಾರಿಗೆ ತೆಗದ ಜಾಗೆ ನೆಲಕ್ಕ ಹಿಡುದು ನಿಂದರೆ, ಆಚೀಚ ಹೊಡೆಯ ನಾರಿಗೆ ಅದಕ್ಕೆ ಆಧಾರ ಕೊಡುಗು. ಹಾಳೆ ಪಾತ್ರಲ್ಲಿ ಆ ಕಾಲಲ್ಲಿ ಎಷ್ಟೋ ಮನೆಗಳಲ್ಲಿ ಉಂಡುಗೊಂಡಿತ್ತಿದ್ದವು. ಬಾಳೆಲಿ ಉಣ್ತ ಹಾಂಗೇ. ಹಾಳೆಪಾತ್ರಲ್ಲಿ ಉಂಬದು ಹೇಳಿರೆ ಬೇರೆಯೇ ಒಂದು ಅನುಭವ. ಬಾಳೆಯ ಹಾಂಗೆ ಮೃದು ಅಲ್ಲ, ಅದರ ಮೈ. ರಜ ದಡಿ ದಡಿ ಇದ್ದು, ರಂಗಮಾವನ ಮೋರೆಯ ಹಾಂಗೆ. ಕೊಯಿಶಕ್ಕಿ ಅಶನಕ್ಕೆ ಮಜ್ಜಿಗೆ ಹಾಕಿರೆ ಉಂಬಲೆ ನಿಜವಾಗಿ ಅಭ್ಯಾಸ ಬೇಕು.
  • ಹಾಳೆ ರಜ್ಜ ಗೆನಾ ಆಗಿ ದೊಡ್ಡ ಇದ್ದರೆ ಹಾಳೆ ಪಡಿಗೆ ಕುತ್ತುಗು, ಎರಡು ಹೊಡೆ ನಾಲಗೆಯ ಮಡುಸಿದ ಹಾಂಗೆ ಹಿಡುದು, ಮುದ್ದೆಯ ನೆಡುಸರೆಂಗೆ ತೋಟ್ರ ಪೀಶಕತ್ತಿಲಿ ಒಟ್ಟೆ ಮಾಡಿ, ನಾರಿಗೆಬಳ್ಳಿಲಿ ಕುತ್ತಿ, ಕಟ್ಟಿರೆ ಪಡಿಗೆ ಆತು. ಕಾಂಬು ಅಜ್ಜಿಗೆ ಅದು ಅರ್ದ ನಿಮಿಶದ ಕೆಲಸ. ಪಾತಿ ಅತ್ತೆಗೆ ಎರಡು ನಿಮಿಶ ಬೇಕಕ್ಕು. (ಈಗಾಣ ಸೊಸೆಗೆ ಮ್ಯಾಗಿ ಆದರೆ ಎರಡು ನಿಮಿಶಲ್ಲಿ ಮಾಡ್ಲರಡಿತ್ತು. ಪಡಿಗೆಗೆ ಅರ್ದ ದಿನ ಬೇಕಕ್ಕೋ ಅರಡಿಯ!)
    ಎಂತಾರು ತುಂಬುಸಿ ಮಡಗಲೆ. ಜೆಂಬ್ರಕ್ಕೆ ಎಲೆ ಮರಿಗೆ ಮಾಡ್ಳಾದರೂ ಆತು. ಪೋಕು ಮುಟ್ಟಿರೆ ಪಾತ್ರಕ್ಕೂ ಬಳಸುಗು ಹೇಳಿ ಆಚಮನೆ ದೊಡ್ಡಣ್ಣ ಹೇಳಿತ್ತಿದ್ದ. ತಾತ್ಕಾಲಿಕ ವೆವಸ್ತೆಗೊಕ್ಕೆ ಅಕ್ಕಷ್ಟೆ ಇದೆಲ್ಲ.
  • ಸಾರಡಿ ತೋಡಿಂದ ಜೊಟ್ಟೆ ಮೊಗಚ್ಚಿ, ತೋಟದ ಕರೆಣ ಕಟ್ಟಪುಣಿಲೆ ನೀರು ಬರುಸಿ ಅವರ ಆಚ ಹೊಡೇಣ ಕೊಳಕ್ಕೆ ಗೆದ್ದಗೆ ನೀರು ಬಿಟ್ಟೋಂಡು ಇದ್ದದು. ಹೋಪ ದಾರಿಲಿ ತಟ್ಟಿಲಿ ಮಡಗಿದ ಅಡಕ್ಕೆ ಸೆಸಿಗೊಕ್ಕೆ ನೀರು ತೋಕೆಡದೋ? ಅದಕ್ಕೆ ’ಹಾಳೆ ಕಿಳ್ಳಿ’ ಮಾಡುಗು. (ಮೂಡ್ಳಾಗಿ ’ಹಾಳೆ ಚಿಳ್ಳಿ’ ಹೇಳಿಯೂ ಹೇಳುಗು ಅದರ.) ಪಡಿಗೆಯಷ್ಟು ಚೆಂದವೂ ಇಲ್ಲೆ, ದೊಡ್ಡವೂ ಇಲ್ಲೆ. ಎರಡೂ ಹೊಡೆಯ ಗಟ್ಟಿಗೆ ಬಿಗುದ್ದು ಕಟ್ಟುಗು, ಬಾಳೆ ಬಳ್ಳಿಲಿ. ಉದ್ದಕೆ ಒಂದು ಓಡದ ನಮುನೆಯ ಪಾತ್ರದ ಹಾಂಗೆ ಅಕ್ಕು. ಕಣಿಂದ ನೀರು ತೋಕಲೆ ಅಕ್ಕಷ್ಟೆ, ಬೇರೆ ಎಂತಕೂ ಆಗ.
  • ಹಟ್ಟಿಂದ ಗೊಬ್ಬರ ತೆಗದು ಗೆದ್ದೆಗೋ, ತೋಟಕ್ಕೋ ಹಾಕುದು. ಬಟ್ಯ ನಾಯ್ಕಂಗೆ ಗೊಬ್ಬರ ಹೊರ್ಲೆ ತಲಗೆ ಹೆಡಗೆ ಮಡುಗೆಡದೋ? ತಲೆ ಒತ್ತುದಕ್ಕೆ ಹೇಳಿಗೋಂಡು ಹಾಳೆಯ ಒಂದು ಟೊಪ್ಪಿ ಮಾಡುಗು. ಮುಟ್ಟಂಪಾಳೆ ಹೇಳುಗು ಅದಕ್ಕೆ. ತುಳು ಮೂಲದ ಹೆಸರು. ಪುಳ್ಳಿಮಾಣಿ ವಿನು ತಿಂತ ಕೋನು ಐಸ್ಕ್ರೀಮಿನ ತಲೆಯ ಹಾಂಗೆ ಕಾಂಗು ಅದು. ತಲಗೆ ಹೊರೆ ಮಡುಗುತ್ತರೆ ಈ ಮುಟ್ಟಂಪಾಳೆ ಮಾಡಿ ಮಡುಗುತ್ತದು ಕ್ರಮ.
  • ಮುಟ್ಟಂಪಾಳೆ ಆದರೆ ಬಹು ತಾತ್ಕಾಲಿಕ. ರಜ ಸಮಯ ಬರೆಕ್ಕು ಹೇಳಿ ಆದರೆ ಮುಟ್ಟಾಳೆ ಮಾಡುಗು. ಚೆಂದಕೆ ಒಂದು ಕ್ರಮಲ್ಲಿ ಮಡುಸಿ, ಒಣಗುಸಿ, ಹಾಳಗೆ ಶೇಕ ಕೊಟ್ಟು, ಕರಂಚುಸಿ ಒಂದು ಟೊಪ್ಪಿ ನಮುನೆದು ಮಾಡುಗು. ಕ್ರಿಕೆಟಿನ ದೋನಿಯ ಟೊಪ್ಪಿಯ ಹಾಂಗೆ ಕಾಂಗು. ತುಂಬ ಸಮಯ ಬಕ್ಕು. ಕೆಲಸಕ್ಕೆ ಹೋದಿಪ್ಪಗ ಚೆಂಡಿ ಆದರೆ ಒಲೆಕಟ್ಟೆಲಿ ಮಡಗಿ ಒಣಗುಸುದು. ಇಂದಿರಾ ಗಾಂದಿ ಕೊಡೆಯಾಲಕ್ಕೆ ಬಂದಿಪ್ಪಗ ಅದು ತಲೆಲಿ ಮಡಿಕ್ಕೊಂಡು ನಮಸ್ಕಾರ ಮಾಡಿದ್ದಡ. ಬಟ್ಯಂಗೆ ಹೆಮ್ಮೆಯ ವಿಶಯವೇ ಅದು. ಬೊಳುಂಬು ಮಾವ “ಹ್ಯಾಟ್ಸಾಫ್” (Hats Off) ಹೇಳ್ತದರ ಬದಲು “ಮುಟ್ಟಾಳೆ ನೆಗ್ಗಿದೆ ಮಿನಿಯಾ…” ಹೇಳುದು.
  • ದುರ್ಗಾಪೂಜೆಗೆ ಕಿಸ್ಕಾರ ಹೂಗು ಕೊಯಿವಲೋ, ಗುಡ್ಡೆಂದ ಬೀಜ ಹೆರ್ಕಲೋ ಮತ್ತೊ ಹಾಳೆ ಮೂಡೆ ಉಪಯೋಗ ಆಯ್ಕೊಂಡು ಇತ್ತು. ಉದ್ದ ಹಾಳೆಯ ಅರ್ದಕ್ಕೆ ಮಡುಸಿ ಎರಡೂ ಹೊಡೆಂದ ಕಟ್ಟಿ ಒಂದು ಪಾತ್ರ ಮಾಡುದು ಮೊದಲು. ಮತ್ತೆ ಅದಕ್ಕೆ ಒಂದು ಬಾಳೆ ಬಳ್ಳಿಯೋ, ನಾರಿನ ಬಳ್ಳಿಯೋ ಮತ್ತೊ ಕಟ್ಟುದು, ಹೆಗಲಿಂಗೆ ನೇಲುಸಲೆ. ಪುಟ್ಟತ್ತೆಯ ವೇನಿಟಿ ಬೇಗು ಇಲ್ಲೆಯೋ, ಸಾಮಾನ್ಯ ಅದೇ ನಮುನೆ. ಮೂಡೆ ಹೆಗಲಿಂಗೆ ಹಾಯ್ಕೊಂಡು ಹೆರಟ್ರೆ, ಅದರ ಒಳ ಅಡಕ್ಕೆಯೋ, ಹೂಗೋ, ಬೀಜವೋ, ಬೇಕಾದ್ದು ತುಂಬುಸಿಗೊಂಡು ಬಕ್ಕು.ನೆರಿಯದಜ್ಜ ಎಡಪ್ಪಾಡಿಗೆ ಬಪ್ಪಗ ಹಾಳೆ ಮೂಡೆಲಿ ಮಜ್ಜಿಗೆ ತುಂಬುಸಿ ತಯಿಂದವಡ,ಎಡಪ್ಪಾಡಿ ಬಾವ ಹೇಳಿದ ಶುದ್ದಿ.
  • ಮಣ್ಣ ಜೆಗಿಲಿಗೆ ಸಗಣ ಬಳುಗುದು ಗೊಂತಿದ್ದಲ್ದ? ನೆಲಕ್ಕ ನೀಟುದೇ ಇರ್ತು, ಶುದ್ದಕ್ಕೂ ಆತು ಹೇಳಿಗೊಂಡು ಸಗಣ ಬಳುಗುದು. ಬಣ್ಣ ಬರೆಕ್ಕಾರೆ ರಜ್ಜ ಬೆಟ್ರಿಕರಿಯನ್ನೂ ಸೇರುಸಿಗೊಂಗು. ಬಳುಗುಲೆ ಹಾಳೆಕಡೆ ಬೇಕೇ ಬೇಕು. ಪಂಜ ಚಿಕ್ಕಯ್ಯ “ನಿನಿಗೆ” ಸೆಗ್ಣಿ ಸಾರ್ಸುದು ಇದೇ ನಮುನೆಲಿ!
  • ತೆಳ್ಳವೋ, ಉದ್ದಿನ ದೋಸೆಯೋ ಮತ್ತೊ ಮಾಡ್ತರೆ ಚುಟ್ಟಿ ಕಿಟ್ಟೆಡದೋ? ಅದಕ್ಕೆ ಬೇಕಾದ ಹಾಂಗೆ ಹಾಳೆತುಂಡು ಮಾಡಿಗೊಳ್ತವು, ಕೈಗೆ ಬೆಶಿಯೂ ಬತ್ತಿಲ್ಲೆ, ತಯಾರು ಮಾಡ್ಳುದೇ ಸುಲಬ ಇರ್ತು ಹೇಳಿಗೊಂಡು.
  • ಕುಂಞಿ ಬಾಬೆಯ ಮನುಶುಲೋ, ಎಣ್ಣೆಕಿಟ್ಟುಲೋ ಎಲ್ಲ ಹಾಳೆ ಬೇಕಾವುತ್ತಡ, ಒಪ್ಪಣ್ಣಂಗೆ ಅಷ್ಟು ಅರಡಿಯ. ಹಳತ್ತು ನೆಂಪಿಲ್ಲೆ, ಹೊಸತ್ತು ಅನುಭವ ಇಲ್ಲೆ. 😉
  • ಶಂಬಜ್ಜಂಗೆ ಸೆಕೆ ಜಾಸ್ತಿ. ಬೇಸಗೆ ಬಂದರೆ ಮೂರೊತ್ತೂ ಅವರ ಕೈಲಿ ಬೀಸಾಳೆ ಇದ್ದೇ ಇಕ್ಕು. ಮೈಲಿ ವಸ್ತ್ರ ಇಲ್ಲದ್ರೂ ಕೈಲಿ ಬೀಸಾಳೆ ನಿಘಂಟೇ. ಮರದ ಮಂಚಲ್ಲಿ ಮನುಗುವಗ ಹಾಸವು, ಎಂತದನ್ನುದೇ. ಉಂಡಿಕ್ಕಿ ವರಗುವಗ ಕೈಲಿ ಹಾಳೆ ಬೀಸಾಳೆ ತಿರುಗುಸುಲೆ ಸುರು ಮಾಡಿರೆ ಮನುಗಿದಲ್ಲಿಗೆ ವರಕ್ಕು ಬಪ್ಪನ್ನಾರವೂ ತಿರುಗಿಯೋಂಡೇ ಇಕ್ಕು.
  • ಆಚಕರೆ ಮಾಣಿಬಾವನ ಹಾಂಗಿಪ್ಪ ದಪ್ಪ ಚರ್ಮದೋರಿಂಗೆ ಶಾಲಗೋಪಗ ಬೆನ್ನಿಂಗೆ ಕಟ್ಟಲೂ ಹಾಳೆ ಕೀತು ಬೇಕಾಗಿತ್ತು 🙁 . ಕೇಳೆಡಿ ಅವನತ್ರೆ, ನಾಚಿಕೆ ಮಾಡಿಗೊಳ್ತ° 😉
  • ಇದಿಷ್ಟಲ್ಲದ್ದೇ ಜೆಗಿಲಿಲಿ ಇಪ್ಪ ಹೇಸಿಗೆ ತೆಗವದರಿಂದ ಹಿಡುದು, ಪಿಕ್ಕಾಸಿಂಗೆ ತಳ್ಳೆ ಮಾಡುವಗ ಎಡೆಂಗೆ ಕೊಡ್ಳೋ, ಹೇಳಿದ್ದು ಕೇಳದ್ದ ಎಮ್ಮೆ ಮೈಗೆ ಎರಡು ಬಾರುಸುಲೋ- ಬೇನೆ ಅಪ್ಪಲಾಗ , ಶಬ್ದ ಬರೆಕ್ಕು ಅವಕ್ಕೆ ಬಡುದಪ್ಪಗ- ಹಾಂಗೆ, ಸಪುರ ಬಳ್ಳಿ ತಿರ್ಪಿ ಎಂತಕಾರು ಕಟ್ಟುಲೋ, ಒಲೆಂದ ಬೂದಿ ತೆಗವಗಳೋ, ಹಲಸಿನ ಕಾಯಿ ಕೊರವಗಳೋ, – ಹೀಂಗೇ ಇನ್ನುದೇ ಹಲವಾರು ನಮುನೆಯ ಉಪಯೋಗಂಗೊ ಇದ್ದು.

ಅಂದು ಹಾಳೆ ಹೇಳ್ತದು ಜನಜೀವನಲ್ಲಿ ಅಷ್ಟೊಂದು ಅಡಕ ಆಗಿ ಹೋಗಿತ್ತು. ಎಲ್ಲದಕ್ಕೂ ಬೇಕಕ್ಕು. ತೋಟಲ್ಲಿ ಒಂದೇ ಒಂದು ಹಾಳೆ ಬಾಕಿ ಅಪ್ಪಲೆ ಬಿಡವು. ಎಂತಕಾರು ಬೇಕು ಹೇಳಿಗೊಂಡು ಎಳಕ್ಕೊಂಡು ಬಕ್ಕು. ಬೇಕಾದ ರೂಪಕ್ಕೆ ತಂದು ಉಪಯೋಗುಸುಗು. ಒಳುದ ನಾರಿಗೆ, ಹಾಳೆ ಕಡೆ, ಸಿಗುದು ಸಣ್ಣ ಸಣ್ಣ ತುಂಡು ಮಾಡಿ ಕೂಂಬಾಳೆ ಎಲ್ಲ ಸೇರುಸಿ ಹಟ್ಟಿಲಿಪ್ಪ ಕಂಜಿಗೊಕ್ಕೆ ಹಾಕುಗು. ಅಗಿವಲೆ. ಮದ್ಯಾನ್ನ ಅಕ್ಕಚ್ಚು ಕೊಡುವನ್ನಾರ ಬಾಯಿರುಚಿಗೆ ಎಂತಾರು ಬೇಕನ್ನೆ ಕಂಜಿಗೊಕ್ಕೆ, ಪಾಪ! ಹಾಳೆಂದ ಬೇಕಾದ್ದರ ತಯಾರು ಮಾಡಿ ಬಳಸಿಗೊಂಗು.

ರಂಗ ಮಾವನ ಕಾಲಲ್ಲಿ:
ಎಲ್ಲದಕ್ಕೂ ಕೃತಕ ವಸ್ತುಗೊ
ಬಂದುಗೊಂಡು ಇದ್ದ ಕಾಲ. ಹಾಳೆ ಉಪಯೋಗ ಕಡಮ್ಮೆ ಆಯ್ಕೊಂಡು ಬಂತು. ಆದರೂ ಎಡೆಡೆಲಿ ಬೇಕಾದ ಅವಶ್ಯಕ ವಸ್ತುಗೊಕ್ಕೆ ಹಾಳೆಯನ್ನೇ ಕುತ್ತಿಗೊಂಡು ಇದ್ದದು. ಎಲ್ಲೊರಿಂಗೂ ಅದರ ಉಪಯೋಗ ಗೊಂತಿತ್ತು. ಅಗತ್ಯ ಕಮ್ಮಿ ಇದ್ದದು, ಹಾಂಗಾಗಿ ಉಪಯೋಗವೂ ಕಮ್ಮಿ.
ಕಡುದು, ಬೆಶಿಲಿಲಿ ಒಣಗುಸಿ, ಉಪ್ಪು ನೀರು ತಳುದು, ಗೋಣಂಗೊಕ್ಕೆ ಹಾಯ್ಕೊಂಡು ಇತ್ತಿದ್ದವು. ಅಷ್ಟೆ. ತಿತಿ ದಿನ ಪರಾದಿನದವರ ಊಟ ಆದ ಮೇಲೆ ಕೈ ತೊಳವಲೆ ಪಡಿಗೆಯೋ, ಮದುವೆ ಜೆಂಬ್ರಂಗಳಲ್ಲಿ ಮದುಮ್ಮಾಯಂಗೆ ಗಾಳಿ ಬೀಸಲೆ ಬೀಸಾಳೆಯೋ , ಮತ್ತೊ ಉಪಯೋಗ ಆಯ್ಕೊಂಡಿತ್ತು. ಕೆಲವು ದಿಕ್ಕೆ ಜೋರು ಮಳೆಗಾಲ ಹಾಳೆ ಕೀತು ಮಾಡಿ ಮಾಡಿನ ಹಂಚಿನೆಡೆಂಗೆ ಮಡುಗ್ಗು, ನೀರು ಸೋರ್ತದಕ್ಕೆ.

ತರವಾಡು ತೋಟಲ್ಲಿ ಅಂತೂ ಮರದ ಬುಡಕ್ಕೆ ಕಡುದು ಕಡುದು ಹಾಕುದು ಬಿಟ್ರೆ ಅಂತೇ ತೋಟಲ್ಲಿ ಬಿದ್ದು ನುಸಿ ಬೆಳವಲೆ ನೀರು ನಿಂದುಗೊಂಡು ಇರ್ತು. ಕ್ರಯಕ್ಕೆ ಸಿಕ್ಕುತ್ತ ಬೀಸಾಳೆ, ಪ್ಲೇಶ್ಟಿಕ್ಕು ಬರಣಿ, ಟೊಪ್ಪಿ, ಹೀಂಗಿರ್ತ ಕೃತಕ ವಸ್ತುಗೊ ಬಂದು ತುಂಬಿದ್ದು. ಪಾತಿ ಅತ್ತೆಗೆ ಹೇಂಗಿರ್ತದು ಬೇಕೋ, ಆ ನಮುನೆದು ಬದಿಯಡ್ಕದ ’ಮಾರ್ಜಿನ್ ಫ್ರೀ’ ಅಂಗುಡಿಂದಲೋ, ಕುಂಬ್ಳೆಂದಲೋ ಮತ್ತೊ ತಕ್ಕು ರಂಗಮಾವ.


ಪಡಿಗೆಯೋ- ಅದರ ಬದಲು ಪ್ಲೇಶ್ಟಿಕು ಬರಣಿ, ಮೂಡೆಯೋ- ಅದರ ಬದಲು ಪ್ಲೇಶ್ಟಿಕು ಪಾಟೆ, ಮುಟ್ಟಾಳೆಯೋ – ಅದರ ಬದಲು ಪ್ಲೇಶ್ಟಿಕು ಟೊಪ್ಪಿ, ಬೀಸಾಳೆಯೋ – ಅದರ ಬದಲು ಪ್ಲೇಶ್ಟಿಕು ಬೇಸಾಳೆ, ಹಾಳೆತುಂಡೋ- ಅದರ ಬದಲು ಪ್ಲೇಶ್ಟಿಕು ಸೌಟು, ಕಸವು ತೆಗವ ಹಾಳೆತುಂಡೋ, ಅದೇ ನಮುನೆದುದೇ ಪ್ಲೇಶ್ಟಿಕಿಂದು ಬತ್ತಡ, ಹಾಳೆ ಪಾತ್ರದ ಬದಲು ಶ್ಟೀಲು ಬಟ್ಳು ಬಂತು.
ಅಲ್ಲಿಗೆ ಆ ತಲೆಮಾರಿನ ಹಿಂದೆವರೆಗೂ ಇದ್ದ ಅಗಾಧ ಹಾಳೆಯ ಉಪಯೋಗ ರಪಕ್ಕ ನಿಂದತ್ತು.
ಹಾಳೆಂದಾಗಿ ಎಂತೆಲ್ಲ ಮಾಡಿಗೊಂಡಿತ್ತಿದ್ದವೋ, ಅದಕ್ಕೆಲ್ಲ – ಒಂದರಿ ಪೈಸೆ ಕೊಟ್ರೆ ಮುಗುತ್ತಲ್ದೋ? – ಪ್ಲೇಶ್ಟಿಕಿಂದು ಬಂತು. ಹಳತ್ತೆಲ್ಲ ಮರದವು.
ಅಜ್ಜಕಾನ ಬಾವ ಹೇಳಿದ ಪ್ರಕಾರ ಪಾತಿ ಅತ್ತೆಗೆ ಪಡಿಗೆ ಕುತ್ತುದುದೇ ಮರಕ್ಕೊಂಡು ಬಯಿಂದಡ.
ನೋಡಿಗೊಂಡು ಇದ್ದ ಹಾಂಗೇ ಒಂದು ತಲೆಮಾರು ಕಳುತ್ತು.

ಇದು ಈಗ ಶಾಂಬಾವನ ಕಾಲ.

ಮೊನ್ನೆ ಅವರ ಮನೆಲಿ ಒರಿಶಾವಧಿ ಪೂಜೆ. ಇರುಳಿಂಗೆ ಆಟಿ ತಿಂಗಳ ಹೊಡಾಡಿಕೆ ಹೇಂಗೂ ಇತ್ತನ್ನೆ, ಮದ್ಯಾನ್ನಕ್ಕೆ ಒಂದು ಶಿವಪೂಜೆ ಗೆಣವತಿಹೋಮ ಮಾಡಿದವು. ಎಂಗೊಗೆಲ್ಲ ಹೇಳಿಕೆ ಇತ್ತಪ್ಪಾ. ಕಿಳಿಂಗಾರು ಬಟ್ಟ ಮಾವ ಬಂದು ಮಾಡ್ತ ಗೌಜಿಯ ದಿನ ಅದು. ಹೇಂಗೂ ಮಳೆ ಅಲ್ದೋ, ವೈದಿಕರಿಂಗೆ ಹಸ್ತೋದಕಕ್ಕೆ ದಕ್ಕಿತ(ತಕ್ಕ) ಅಂತಿ ಹಾಕುಸ್ಸು ಹೇಳಿ ನಿಜ ಮಾಡಿತ್ತಿದ್ದವು. ಬಾಕಿದ್ದವಕ್ಕೆ, ಹೆರಾಣೋರಿಂಗೆ ಎಲ್ಲ ಉಂಬಲೆ ಅಂತಿಯೋ ಗಿಂತಿಯೋ ಎಲ್ಲ ಬೇಡಾಳಿ ಉಪಾಯಲ್ಲಿ ಬಪೆ ಮಾಡಿದ್ದಡ. ’ಬೇಡಿ ಉಂಬದು ಎನಗಾಗ’ ಹೇಳಿ ಪರಂಚಿಗೊಂಡು ಇದ್ದ ರಂಗಮಾವ ಅವರ ಮನೆಲೇ ಅಪ್ಪಗ ’ಮಾಡುದು ಬೇಡ’ ಹೇಳಿದ್ದವಿಲ್ಲೆ. ವೆವಸ್ತೆಗೆ ಸುಲಬ ಹೇಳಿ ಕಂಡತ್ತು ಅವಕ್ಕೆ.


ಮಳೆಗಾಲದ ಹಾಂಗಿಪ್ಪ ಸಮಯಂಗಳಲ್ಲಿ ವೆವಸ್ತೆಗೆ ಎಲ್ಲ ಅದು ಬಯಂಕರ ಸುಲಬ ಆದ ಕಾರಣ ಈಗ ಅದು ತುಂಬ ರೈಸಿಗೊಂಡು ಇದ್ದು. ಬಪೆ ಹೇಳಿರೆ ಹಾಂಗೇ ಅಲ್ದೋ, ಎಲ್ಲ ಸಾಲಾಗಿ ಮಡುಗುತ್ತದು, ಮಾರ್ಜಿನು ಪ್ರೀ ಅಂಗುಡಿಲಿ ಮಡಗಿದ ಹಾಂಗೆ. ಬೇಕಾದ್ದರ ಎದುರು ಹೋಗಿ ನಿಂದರೆ ಬಳುಸಲೆ ನಿಂದ ಕೂಚಕ್ಕಂಗೊ ಪ್ರೀತಿಲಿ ಪ್ಲೇಟಿಂಗೆ ಹಾಕುತ್ತವು. ಹಾಂಗಾಗಿ ಹಂತಿ ಊಟಂದ ಬಪೆ ರುಚಿ ಜಾಸ್ತಿ ಹೇಳಿ ಕೊಳಚ್ಚಿಪ್ಪು ಬಾವನ ಅಂಬೋಣ. ಆಚಕರೆ ಮಾಣಿ ಎರಡು ಸರ್ತಿ ಉಂಡದು ಅಜ್ಜಕಾನ ಬಾವಂಗೆ ಮಾಂತ್ರ ಗೊಂತಾದ್ದು.

ಬಪೆ ಊಟಕ್ಕೆ ತಟ್ಟೆ ಬೇಡದೋ, ಶ್ಟೀಲಿಂದರ ಆದರೆ ತೊಳದು – ಉದ್ದಿ – ಎಲ್ಲ ರಗಳೆ, ಯೂಸೆಂಡು -ತ್ರೋ (Use & Throw) ಅಕ್ಕು ಹೇಳಿ ಹಾಳೆತಟ್ಟೆ ಹೇಳಿದವಡ. ಈಗ ಅದೊಂದು ನಮುನೆದು ಬತ್ತಡ. ಉಂಡ ಮತ್ತೆ ಅಡಕ್ಕೆ ಬುಡಕ್ಕೆ ಹಾಕಿರೆ ಆತು, ತೊಳೆತ್ತೆ ಕೆಲಸವೂ ಇಲ್ಲೆ, ಉದ್ದುತ್ತ ಕೆಲಸವೂ ಇಲ್ಲೆ. ರೂಪತ್ತೆಯ ಪೈಕಿ ಆರಿಂಗೋ ಅದರ ವೈವಾಟು ಇದ್ದಡ. ಒಂದು ಪೋನು ಮಾಡಿದ್ದರಲ್ಲಿ ಎರಡು ಕಟ್ಟ ತಂದು ಮಡಗಿದ°. ಚೆಂದದ ಗುಂಡಿ ಗುಂಡಿ ಇಪ್ಪ ಉರುಟಿನ ಸುಮಾರು ತಟ್ಟೆಗೊ. ಒಂದರ ಮೇಗೆ ಒಂದು ಮಡಗಿ ಐವತ್ತಕ್ಕೆ ಒಂದು ಕಟ್ಟ ಹಾಕಿತ್ತಿದ್ದವು. ಬೇಕಾದಷ್ಟೇ ಉಪಯೋಗಿಸಿರೆ ಆತು, ಒಳುದರೆ ತೆಕ್ಕೊಳ್ತನಡ° ಅವನೇ, ಇನ್ನೊಂದು ಮನಗೆ ಕೊಡ್ಳೆ. 😉


ಹಾಳಗೆ ಒಳ್ಳೆತ ಕ್ರಯ ಸಿಕ್ಕುತ್ತು ಹೇಳಿಗೊಂಡು ಈಗ ಎಲ್ಲೊರು ಅದರ ಮಾರುದು. ಹಾಂಗಾಗಿ ಇಡಿ ಹಾಳಗೂ ಒಳ್ಳೆತ ಕ್ರಯ. ಆಚಕರೆ ಮಾವ ಅವರ ಪುಳ್ಳಿಗೆ ಬೇಕಪ್ಪಷ್ಟೇ ತೆಗದು ಮಡಗಿ ಒಳುದ್ದರ ಪೂರ ಜಾಲಕರೆಲಿ ತಣಿಲಿಲಿ ಹಾಕಿದ್ದವಡ. ಆ ಮಾಣಿ ಜೀಪು ಮಾಡಿಗೊಂಡು ಬತ್ತನಡ, ಶೆನಿವಾರ ಶೆನಿವಾರ.
ಮನೆಮನೆಗೆ ಹೋಗಿ ಹಾಳೆ ಇದ್ದೋ ಕೇಳಿ, ಕ್ರಯಕ್ಕೆ ತೆಗದು; ಕ್ರಯ ಹೇಳಿರೆ ಗಮ್ಮತ್ತಿದ್ದು- ಇಡಿ ಹಾಳೆ ಒಂದಕ್ಕೆ ಎಂಟಾಣೆ (ಐವತ್ತು ಪೈಸೆ) – ಅದರ ಜೀಪಿಲಿ ಕೋಂಡೋಗಿ, ಅವನ ಗುಡ್ಡೆಲಿ ತಣಿಲಿಲಿ ಒಣಗುಸಿ, ಒತ್ತುತ್ತ ಮಿಶನಿಲಿ – ಕರೆಂಟಿನ ಮಿಶನಡ- ಮಿಶನಿಲಿ ಮಡಗಿ ಹಪ್ಪಳ ಒತ್ತಿದ ಹಾಂಗೆ ಒತ್ತುದು. ಅಷ್ಟಪ್ಪಗ ಚಡಿ ಚಡಿ ಸಾದಾರಣದ್ದು ಹೋಗಿ ಚೆಂದಕೆ ಒಂದು ಉರುಟು ಉರುಟು ಬಟ್ಳು ತಯಾರು ಆವುತ್ತು. (ಹಿಸ್ಕು ಎಡೆಲಿ ಇದ್ದರೆ ಎಂತಕ್ಕೋ? ಮಾಂಬ್ಳದ ಹಾಂಗಕ್ಕೋ? ಏ°?
;-( ) ತಂದ ಹಾಳೆ ತಟ್ಟೆಲಿ ನಮ್ಮ ಮನೆ ಹಾಳೆಯೇ ಇದ್ದೋ ಏನೋ, ಹೇಳಿ ಪಾಲಾರು ಅಣ್ಣ ನೆಗೆ ಮಾಡಿದ°.

’ಎಬೆ, ಎಂಗೊಗೆ ಹಾಳೆಲಿ ಊಟವೋ?’ ಹೇಳಿ ಮದ್ಯಾನ್ನ ಬರ್ಮಿಲಿ ಊಟಕ್ಕೆ ಬಂದ ಮೋಹನ ಬಂಟಂಗೆ ಬೆಶಿ ಆತು. ಊಟವ ಹಾಳೆಲಿ ಕೊಡುದು ಈಗ ಕೋಟಿಗೆ ಮಾಂತ್ರ. ಹಾಳೆಯ ಈ ನಮುನೆ ಹೊಸ ಅವತಾರ ಅವಕ್ಕೆಲ್ಲ ಅಬ್ಯಾಸ ಆಯೆಕ್ಕಷ್ಟೆ. ’ಪೇಟೆಲಿ ಎಲ್ಲ ಅದಕ್ಕೆ ಒಳ್ಳೆತ ಡಿಮಾಂಡು ಇದ್ದು ಮಾವ°’ ಹೇಳ್ತ, ಆ ತಟ್ಟೆ ತಂದು ಕೊಡ್ತ ಮಾಣಿ.

ಏನೇ ಆಗಲಿ, ಎರಡು ತಲೆಮಾರು ಹಿಂದೆ ಇದ್ದ ಹಾಳೆ ಉಪಯೋಗ ಈಗ ಇನ್ನೊಂದು ರೂಪಲ್ಲಿ ನಡೆತ್ತಾ ಇದ್ದು. ಒಳ್ಳೆ ಬೆಳವಣಿಗೆ. ಆರೋಗ್ಯಕ್ಕೆ ಒಳ್ಳೆದು ಹೇಳ್ತ ಮರುಳು ಈಗ ಜೋರು ಅಲ್ದೋ? ಹಾಂಗಾಗಿ ಮತ್ತೆ ಮೊದಲಾಣ ಹಾಂಗಕ್ಕೋ? ಹಾಳೆ ಪಡಿಗೆ, ಹಾಳೆ ಸೌಟು, ಹಾಳೆಯ ಕಸವು ತೆಗೆತ್ತದು, ಹಾಳೆ ಬೀಸಾಳೆ… ಎಲ್ಲ ಬಪ್ಪಲೆ ಸುರು ಅಕ್ಕೋ ಏನೋ!
ಆದರೆ ಎಲ್ಲ ಪೈಸಕ್ಕೆ ತಪ್ಪ ಹಾಂಗಿರ್ತದು ಬಕ್ಕೋ ಹೇಳಿಗೊಂಡು ಒಪ್ಪಣ್ಣಂಗೆ ಒಂದು ಕನಪ್ಯೂಸು ಬಪ್ಪದು.

ಪಾತಿ ಅತ್ತೆಗೆ ಗೊಂತಿಪ್ಪ ಪಡಿಗೆ ಕುತ್ತುತ್ತ ಕ್ರಮ ಈಗಾಣ ಸೊಸೆಗೆ ಅಬ್ಯಾಸ ಅಕ್ಕೋ, ಆಗದೋ ಹೇಳುದರಿಂದಲೂ, ಬಟ್ಟಕ್ಕಳ ಜೀವಾಳ ಆಗಿಪ್ಪ ಅಡಕ್ಕೆ ಮರದ ಹಾಳೆ ಹೀಂಗೊಂದು ಜೀವ ಪಡಕ್ಕೊಳ್ತು ಹೇಳುದು ತುಂಬ ಒಳ್ಳೆ ಶುದ್ದಿ.

ಮುಳಿಯಾಲದಪ್ಪಚ್ಚಿ ಕೂಸು ನೋಡುವಗ ’ಕೂಸಿಂಗೆ ಪಡಿಗೆ ಕುತ್ತಲೆ ಅರಡಿಯೆಕ್ಕು!’ ಹೇಳಿ ಹಟ ಹಿಡುದ್ದನಡ ಅಂದು ಒಂದು ದಿಕ್ಕೆ. ಪೆರ್ಲದಣ್ಣ ಹೇಳಿದ್ದು.

ಒಂದೊಪ್ಪ: ಈ ಒಪ್ಪದ ಲೆಕ್ಕಲ್ಲಿ ಆದರೂ ಮನೆಲಿ ಹಾಳೆ ಪಾತ್ರ ಮಾಡಿ, ಅದರ್ಲಿ ಹೆಜ್ಜೆ ಉಂಡಿಕ್ಕಿ ಒಂದರಿ, ಆತೋ? ಹಿಸ್ಕು ಇದ್ದೋ ನೋಡಿಗೊಳ್ಳಿ. 😉


ಸೂ: ಮೊನ್ನೆ ಮಾರ್ಚಿಂದ ಕಳುದ ಜುಲೈವರೆಂಗೆ ಲೆಕ್ಕ ಹಾಕಿ ಅಪ್ಪಗ ’ಶುದ್ದಿ’ಯ ಲೋಕಾದ್ಯಂತ ಒಟ್ಟು ೧೦,೦೦೦ ಸರ್ತಿ ಓದಿದ್ದವು! ತುಂಬ ಕುಶಿ ಆತು. ಒಪ್ಪಣ್ಣಂಗೆ ಹೇಳಿಗೊಂಬಲೆ ಇಪ್ಪ ಸೊತ್ತು ಅದೊಂದೇ. ನಿಂಗಳ ಸಪೋರ್ಟು ಹೀಂಗೇ ಮುಂದರಿಶಿ ಆತೋ…. 🙂

20 thoughts on “ಹಾಳೆಪಾತ್ರಂದ ಹಾಳೆತಟ್ಟೆಗೆ -ಬರೇ ಎರಡು ತಲೆಮಾರಿನ ದೂರ

  1. Hale vishaya oduvaga ondu nenapatu, enthalidare anu sannarippaga tange,tammandirottinge tootada olili haleya male kudu gadi bittadu, gadi elava rabhasakke hali haridu kunde choli hoddu kuda gontayidille, astu laikka ayikondittu. Matte enna ajji anu huttippaga halelie etti kondu muddu madudu bahala chenda kanuttu, haleya mele manugisi, ugurili geechuvaga bappa PARA PARA sabhanda chendakke enage orekku bandu gondittu heli enna ajji tumba varshanda enage heli kondittu.

    Ottare hindina kalada HAVYAKARA vybhavada jeevana nenapisule OPPANNA ippadu tumba santhosada vishaya.

    1. { choli hoddu kuda gontayidille }
      ಬೇರೆ ಎಂತ ಹರುದರೂ ಸಾರ ಇಲ್ಲೆ ಕೊಡಕ್ಕಲ್ಲು ಅಪ್ಪಚ್ಚಿ!!
      ಹಾಳೆ ಹರಿಯದ್ರೆ ಆತು ನವಗೆ!! – ಈ ಮಳೆಗಾಲ ಒಣಕ್ಕು ಹಾಳೆ ಸಿಕ್ಕುದು ಬಾರೀ ಕಷ್ಟ!! 😉

    2. ಹಾಳೆಯ ಉಗುರಿಲ್ಲಿ ಗೀಚುವಗ ಬಪ್ಪ ಪರ ಪರ ಶಬ್ದ …! ಮಕ್ಕೊ ಎಲ್ಲ ಅಂಬಗಂಬಗ ಹೇಳ್ತ ಮುಂಗಾರು ಮಳೆ ಸಿನೆಮಾದ ಗಣೇಶನ ಡಯಲೋಗು ನೆಂಪಾತು ..!
      ಹಾಳೆಯ ಮಹಾತ್ಮೆ ಲೇಖನವ ಮತ್ತೊಂದರಿ ಓದಿ ಕೊಶಿ ಆತು.

  2. ಕಳುದೊರಿಶ ಈ ವಾರದ ಶುದ್ದಿ..
    ಎಲ್ಲಾ ಕಾರ್ಯಲ್ಲಿ ಉಪಯೋಗ ಆವುತ್ತ ಹಾಳೆಯ ಶುದ್ದಿ..!!

  3. ye, oppanna, idu neenu hogaliddo, baydo heli gonthagadde thaleeshi ayidu maraya. hangagi coment hakule istu late athu…!

  4. ಭಾವ ಎಂತ ಹೇಳುದು.. ಪರಿಸ್ಥಿತಿಯ ಆಟವೋ.. ವಿಧಿಯ ಮೇಲಾಟವೋ..! ಕಾಲ ಬದಲಾದ ಹಾಂಗೆ ಕೆಲವೊಂದು ರೂಪ ವಿರೂಪ ಆದರೂ ಈ ವಿಷಯಲ್ಲಿ ಸ್ವರೂಪ ಬದಲಾದರೂ ಅಡಿಕೆ ಬೆಳೆಗಾರಂಗೆ ರಜ್ಜ ಉಪಯೋಗ ಆಯಿದು ಹೇಳುಲಕ್ಕು. ಆದರೆ ಸಾಂಪ್ರದಾಯಿಕ ಕೃಷಿಗೆ ಈ ಬೆಳವಣಿಗೆ ಒಳ್ಳೆದು ಹೇಳುವ ಭಾವನೆ ಎನಗಿಲ್ಲೆ.

  5. ಗುರುಗಳೇ….ಎಂಗಳ ಊರಿಲಿ ಸುಬ್ಬ ಮೂಲ್ಯ ಹೇಳಿ ಒಂದು ಕೆಲಸದ ಆಳು ಇದ್ದು……ಅದಕ್ಕೆ ಕೆಲಸ ಮಾಡುಲೆ ತುಂಬಾ ಉದಾಸನ…ಕೆಲಸ ಮಾಡುವಗ ಬಳ್ಳಿ ಬೇಕು ಹೇಳಿ ಆದರೆ ಕೂಡಲೆ ತೋಟಕ್ಕೆ ಹೊಗಿ ಹಾಳೆ ಬಳ್ಳಿ ಮಾಡಿ ತಕ್ಕು…(ಆದರೆ ಒಂದರಿ ತೋಟಕ್ಕೆ ಹೋದರೆ ಪುನ: ಬಪ್ಪಲೆ ಅಪ್ಪನ ಕೂಕಿಲು ಕೇಳಲೇ ಬೇಕು….ಅಷ್ಟುದೇ ಶ್ರದ್ಧೆ ಅದಕ್ಕೆ..:):):)) ಅದರ ಕೆಲಸಕ್ಕೆ ಹೇಳೇರೆ ದಿನದ ಅರ್ಧ ದಿನ ಹಾಳೆ ಬಳ್ಳಿ ತಪ್ಪಲೆ ಮೀಸಲು…….

  6. ಒಪ್ಪಣ್ಣನ ಈ 'ಶುದ್ದಿ'ಗಳ ಲೋಕಾದ್ಯಂತ ಹತ್ತು ಸಹಸ್ರ ಸರ್ತಿ ಓದಿದ್ದವು ಹೇಳ್ತದರ ಓದಿ ಭಾರೀ ಖುಷಿ ಆತು. . . ಈ ಸಾಧನೆ ಹೀಂಗೇ ಬೆಳೆಯಲಿ. . . ಶುಭಹಾರೈಕೆಗೊ. . . 🙂

  7. ಲಾಯ್ಕ ಬರದ್ದೆ ಆತೋ????????
    ಕಾಶಿ ಯಾತ್ರೆದು ಅನುಭವ ಇಲ್ಲೇ ಅಲ್ಲದೋ ???????? ಆದರೂ ನೋಡಿ ಗೊಂತಿದ್ದನ್ನೇ ?????????????
    ಅಂದು ಆನು ಸಣ್ಣ ಆದಿಪ್ಪಗ ನೀನು ಹಾಳೆಲಿ ಕೂರ್ಸಿ ಎಳಕ್ಕೊಂಡು ಇದ್ದದು ಈಗಲೂ ಸರೀ ನೆಮ್ಪಿದ್ದು …..
    ಈಗ ಎಡಿಯ ಆತೋ ಅಷ್ಟು ಸುಲಾಭಲ್ಲಿ ಏಳವಲೇ..ಎಂತಕೆ ಹೇಳಿರೆ,ನಿನಗೆ ಹೊಟ್ಟೆ ಬೆಳದು ಬಗ್ಗುಲೇ ಕಷ್ಟ ಈಗ ಅಲ್ಲದೋ ?….. 🙁
    ಬಪ್ಪ ವಾರ ಎಂತಪ್ಪ???????????ಕಾಯ್ತಾ ಇರ್ತೆ ………….

  8. madimmaya kashige hopaga hale mettu hakiyondu hovutta heli innu gontayekkaste ayikku allada,,,,,,,,,,,,

  9. ಅಯ್ಯೋ ಭಾವ, ಎನ್ನ ಅಳಿಯನ ಒಬ್ಬನನ್ನೇ ಹಾಂಗೆ ಮನುಗುಸಿದರೆ ಹೆದರಿಕೆ ಆಗದ ಅವಂಗೆ? 🙂 ೪೧ ದಿನ ಆದಪ್ಪಗಣ ಪಟ ಅದು. ಪುಟ್ಟು ಬಾಬೆ ಅಹನ್ ಶರ್ಮ.

    ಎನಗೆ ಇನ್ನೂ ನೆಂಪಿದ್ದು ಭಾವ… ಮಾಣಿ ಸಣ್ಣಾಗಿಪ್ಪಗಾಣ ಕಥೆ. ಹಬ್ಬದ ಟೈಮಿಲಿ ಆಚಕರೆ ಮನೆಯ ಹಿಂದೆ ಇಪ್ಪ ಹೊಲೆಯಾರ ಮನೇಲಿ ಪಟಾಕಿ ತಕ್ಕು. ಮೂರು ದಿನ ಮದಲೇ ಹೊಟ್ಸುಲೆ ಸುರು ಮಾಡುಗು. ಅವಕ್ಕೆಂತ ಧಾಡಿ? ಅಂದಂದಿನ ದುಡಿಮೆ ಅಂದಂದಿನ ಖರ್ಚಿಂಗೆ ಸಮ, ನಾಳೆಯಾಣ ಚಿಂತೆ ಅವಕ್ಕಿಲ್ಲೆ. ಅದೇ ಸಮಯಕ್ಕೆ ಮಾಣಿ ಕೂಸು ಇಬ್ರಿಂಗೂ ಎನೂ ಅರಡಿಯದ್ದ ಪ್ರಾಯ, ಪಟಾಕಿ ಬೇಕು ಹೇಳಿ ಹಠ. ಅವಗ ಅಪ್ಪ, ಅಜ್ಜ, ಅತ್ತೆಕ್ಕೊ ಎಲ್ಲಾ ಮಾಡಿಗೊಂಡಿತ್ತಿದ್ದ ಸುಲಾಭದ ಉಪಾಯ ಈ ಹಾಳೆ. ತೋಟಂದ ಕಡುದು ತಕ್ಕು ನಾಕು ಹಾಳೆ. ಬಡೀರಿ ಮಕ್ಕಳೇ ಚಿಟ್ಟಗೆ ಹೇಳುಗು. ಅದಾ ಪಟಾಕಿ ರೆಡಿ :-)ಹೊಲೆರ ಪಟಾಕಿ ಹೊಟ್ಸಿ ಮುಗುದರೂ ಎಂಗಳ ಪಟಾಕಿ ಮುಗಿಯ.

    ಅದೆ, ಮಾಣಿ ಬೆನ್ನಿಂಗೆ ಕಟ್ಟಿಗೊಂಡು ಶಾಲಗೆ ಹೋಯ್ಕೊಂಡಿತ್ತದು ಹಾಳೆ ಅಲ್ಲ ಭಾವ, ಅದಕ್ಕೆ ಹೆಸರು ಪೃಷ್ಠಕವಚ, ಪೃಷ್ಠರಕ್ಷಕ ಹೇಳಿ. ನಿಂಗೊಗೆ ಎಲ್ಲ ಅದು ಅರಡಿಯ… ಮಾಷ್ಟ್ರ ಮಾವನತ್ತರೆ ಕೇಳಿಗೊಳ್ಳಿ.

    ಹೇಳ್ತ ಹಾಂಗೆ…. ಭೀಷ್ಮನ ಕಥೆ ಗೊಂತಿದ್ದಲ್ದ ಭಾವ? ಜಾಗ್ರತೆ…..:)

  10. ಹೇಳಿದ ಹಾಂಗೆ ಬಾಬೆಯ ಪಟ ಒಪ್ಪೊಪ್ಪ ಇದ್ದು..ಎಣ್ಣೆಕಿಟ್ಟಿ ಮೀವಲೆ ರೆಡಿಯಾ….??

  11. ಭಾರೀ ಲಾಯ್ಕಾಯಿದು. ಒಳ್ಳೆ ವಿಷಯ.
    ಓದಿಗೊಂಡು ಹೋಪಾಗ ಮನೆಲಿ ಚಿನ್ನಮ್ಮಜ್ಜಿ ಚಿಳ್ಳಿ ಮಾಡುದು, ಅಪ್ಪ ಮಳೆಕಾಲಲ್ಲಿ ಮಾಡು ಸೋರುದಕ್ಕೆ ಮಡುಗುಲಪ್ಪ ಹಾಳೆ ತುಂಡುಗಳ ರೂಢಿ ಮಾಡುದು, ಹಲಸಿನಹಣ್ಣು, ತರಕಾರಿ ಎಲ್ಲ ಹಾಕುಲೆ ಅಮ್ಮ ಲಾಯ್ಕ ಲಾಯ್ಕ ಹಾಳೆಗಳ ಅಟ್ಟಲ್ಲಿ ಕಟ್ಟಿ ಮಡುಗುದು್….ಮತ್ತೆ ಸಣ್ಣಾದಿಪ್ಪಾಗ ಮಜ್ಜಿಗೆ ಅಶನಕ್ಕೆ ಇಡಿಕ್ಕಾಯಿ ಉಪ್ಪಿನಕಾಯಿ ಹಾಕಿ ಹಾಳೆಲಿ ಉಂಡುಗೊಂಡಿದ್ದದು….ಎಲ್ಲವು ನೆಂಪಾತು….
    ಹಾಳೆಯೊಟ್ಟಿಂಗೆ ಸುರುಳಿಸುತ್ತಿ ಬೆಶ್ಚಂಗಿಪ್ಪ ನೆಂಪುಗೊ ಸುಮಾರಿದ್ದು….ಸಣ್ಣ ಬಾಬೆ ಆಗಿಪ್ಪಾಗಳಂದ ಹಿಡುದು….

    ಮತ್ತೆ ಪ್ರಸ್ತುತ, ಹಾಳೆ ತಟ್ಟೆ ಸುಮಾರು ಕುಟುಂಬಂಗೊಕ್ಕೆ ಒಂದು ಜೀವನಾಧಾರ ಆಯಿದು…
    ಅದರೆಲ್ಲ ನೆಂಪು ಮಾಡ್ಸಿ ಕೊಟ್ಟ ಅದ್ಭುತ ಬರವಣಿಗೆ…

  12. ಭಟ್ರೆ,
    ನಿಮ್ಮ ಕೊಳಚಿಪ್ಪು ಭಾವನ ಬಗ್ಗೆ ಸುಳ್ಳು ಬರ್ದಿದ್ದಿರಿ. ಅವರು ಯಾವಾಗಲೂ ಹಂತಿ ಊಟ ಬಫೆಗಿಂತ ರುಚಿ ಜಾಸ್ತಿ ಅಂತ ನಂಬಿದ ಮನುಷ್ಯ.ಹಂತಿ ಊಟದಲ್ಲಿ ಕೂತು ಆರಾಮದಲ್ಲಿ ಊಟ ಮಾಡುದರ ಮಜಾವೇ ಬೇರೆ ಅಂತ ಅವರು ಹೇಳ್ತಾ ಇರ್ತಾರೆ.

    ನೀವು ಬರ್ದದ್ದು ಸತ್ಯ ಸ್ವಾಮಿ, ಈ ಹೊಸಹೊಸ ವಸ್ತುಗಳ ಸಂತೆಯಲ್ಲಿ ಎಲ್ಲಿಯೋ ನಾವು ನಮ್ಮತನ ಕಳೆದುಕೊಳ್ತಾ ಇದ್ದೇವೆ ಅನ್ನಿಸ್ತಾ ಉಂಟು.

  13. ಹೀಂಗೆ ಇಪ್ಪ ತಲೆಮಾರಿನ ಬಳಕೆ ಶುದ್ದಿಯ ಶೈಲಿ ಒಂದರಿ ಬರೆದ್ದೆ ಅಲ್ದೋ? ಅದೇ ಮಣ್ಣಚಿಟ್ಟೆದು..
    ಇದಾ..ಎನ್ನ ಕಥೆ ಹೇಳ್ತೆ. ಮೊನ್ನೆ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡೆಕ್ಕು ಹೇಳಿ ಆತು. ಮಿಕ್ಸಿಲಿ ಕಡದರೆ ಎಂತ ಲಾಯ್ಕವೂ ಇರ್ತಿಲ್ಲೆ.. ಹಾಂಗಾಗಿ ಕೊಚ್ಚಿ ಮಾಡುದು ಹೇಳಿ ಆತು. ಕೊಚ್ಚಿ ಮಾಡ್ಲೇ ಬೇಕು ಹೇಳಿ ಅಪ್ಪನತ್ರ ಹಟ ಬೇರೆ. ಕೊಚ್ಚುದು ಎಂತರಲ್ಲಿ? ಮೊದಲಾದರೆ ಹಾಳೆಲೇ ! ಅಲ್ದೋ ? ಈ ಪೇಟೆಲಿ ಹಾಳೆ ಎಲ್ಲಿಂದ ತಪ್ಪದು? ಕೊನೆಗೆ ಅಜ್ಜನ ಮನೆಂದ ತಂದ ಯಾವುದೋ ೪ ಕುಂಬು ಬೂಸುರು ಬಂದ ಹಾಳೆಗಳ ಹರಿಯದ್ದ ಹಾಂಗೆ ತೊಳದು ಮೆಲ್ಲಂಗೆ ಕೊಚ್ಚಿ ಕೊಟ್ಟಿಗೆ ಮಾಡಿತ್ತಿದ. ಪುನಾ ಆ ಕುಂಬು ಹಾಳೆಗಳ ಮೆಲ್ಲಂಗೆ ತೊಳದು ಒಣಗಿಸಿದ್ದು..ಮುಂದ್ರಾಣ ಸರ್ತಿಗೆ ಬೇಕನ್ನೇ ! ಈ ಪರಡಾಣವ ನೋಡಿ ಮೊನ್ನೆ ಅಮ್ಮ ಪುನಾ ಅಜ್ಜನ ಮನೇಂದ ನಾಲ್ಕು ಹಾಳೆ ಕಟ್ಟ ತೆಕ್ಕೊಂಡು ಬಯಿಂದು.ಆದರೆ ಕೊಟ್ಟಿಗೆ ಮಾತ್ರ ಒಳ್ಳೆ ರುಚಿ ಮಿನಿಯಾ..
    ಸಣ್ಣದಿಪ್ಪಾಗ ಹಾಳೆಕಡೆಲಿ ಪೊಳಿ ಬೀಳುದೂ ಇತ್ತು. ಅದರದ್ದು ಮಾತ್ರ ಬೆಶಿ ರುಚಿ..ದೋಸೆಗೆ ಎಣ್ಣೆ ಕಿಟ್ಟುವಾಗ ದೋಸೆ ಮಾತ್ರ ಬೆಶಿ ಅಕ್ಕು. ಆದರೆ ಹಾಳೆ ಕಡೆಲೀ ಚಪಕ್ಕ ಹೇಳಿ ಕೊಟ್ಟ್ರೆ ಕರಂಚಿದ ದೋಸೆ ಹಾಂಗೆ ಅಕ್ಕು.
    ನಿನಗೊಂದು ಸೀಕ್ರೇಟು ಗೊಂತಿದ್ದಾ? ಆಚಕರೆ ಮಾಣಿ ಈಗಲೂ ಹಾಳೆ ಕಟ್ಟಿಕೊಂಬದಿದ್ದು. ಪುಟ್ಟಕ್ಕಂಗೆ ಪಿಸುರು ಬರಿಸಿರೆ ಮತ್ತೆ ಎಂತ ಮಾಡುದು ಅಲ್ದೋ?
    ಅಂದಹಾಂಗೆ ಆಚಕರೆ ಮಾಣಿಯ ಅಳಿಯನ ಮುಕ್ಕಾಲುವಾಶಿ ಪೊಟೋ ಎಲ್ಲಾ ಹಾಳೆಲಿಪ್ಪದೇ ಇದ್ದಿದ.ಹಾಂಗಾಗಿ ಮೊನ್ನೇಯಿಂದಿತ್ಲಾಗಿ ಅವಂಗೆ ಬೆನ್ನಿಂಗೆ ಕಟ್ಟುಲೂ ಹಾಳೆ ಸಿಕ್ಕಿದ್ದಿಲ್ಲೆಡ !
    ಹೇಳುಲೆ ಮರೆತೆ.. ಕುಂಞಿಆಪ್ಪಜ್ಜ ಮೊದಲು ಮನೆಗೆ ಬರೆಕ್ಕಾರೆ ಎಂಗೊಗೆ ಆಡುಲೆ, ಗಾಳಿ ಬೀಸುಲೆ ಹೇಳಿ ತಂದು ಮಡುಗಿದ ಬೀಸಾಳೆ ಎಂಗಳ ಶೋಕೇಸಿಲಿ ಇದ್ದು. ನೋಡಿದವ್ವು ಕಣ್ಣು ಬಿಟ್ಟುಕೊಂಡು ನೋಡ್ತವದ. ಹಾಂಗಾಗಿ ಎಂಗಳ ಏಂಟಿಕ್ ಕಲೇಕ್ಷನುಗಳಲ್ಲಿ ಅದೂ ಒಂದು. ಮನೆ ಮದುವೆಲಿ ಅದರಲ್ಲೇ ಮದಿಮ್ಮಾಯಂಗೆ ಗಾಳಿ ಬೀಸಿರೆ ಎಲ್ಲರೂ ಒಂದರಿ ಕಣ್ಣು ಬಿಟ್ಟು ನೋಡುಗು ಹೇಳಿ ಎಂಗಳ ಅಂದಾಜು. ಹೇಂಗೆ ಆಗದೋ !

  14. ಹಾಳೆ ಕಿಳ್ಳಿ ಕೂರ್ಧಿ ಹಾಕಿ ಪತ್ತನಾಜೆ ತಂಬಿಲ ಮಾಡ್ತವು…. ಮತ್ತೆ ಅಮ್ಮ ಹೇಳಿದ ಹಾಂಗೆ ಹಾಳೆಲಿ ಎನ್ನ ತಂಗೆಯ ಎಳಕ್ಕೊಂಡು ಜಾಲಿಲಿ ಹೋದ್ದು ನೆಂಪು ಆವ್ತು. ಮತ್ತೆ ಅಜ್ಜನ ಒಟಿನ್ಗೆ ಹಾಳೆಲಿ ಉಂಡುಗೊಂದು ಇತ್ತೆ.ಈಗ ಅಮ್ಮ ದೋಸೆ ಎರವಾಗ ಚುಟ್ಟಿ ಕಿಟ್ಟುತ್ತು.

    ಈಗ ಅದೇ ನೀನು ಹೇಳಿದ ಹಾಂಗೆ ಬೈಪ್ಪಣೆ ಊಟ (ಬಫೆ) ಮಾಡುವಾಗ ತುಂಬಾ ಉಪಯೋಗ ಮಾಡ್ತವು .
    ಲಾಯಿಕ ಆಯಿದು ಮಹೇಶ…

  15. sooper!haleya vishaya baraddu olledatu.maradu hodare nempu madle aatu.neenu anna tange heli jalili elakkondu aata aadiddu maradatta henge.ninage babe haleli manikkondu ippa pata mantra sikkidda.padige, halekuntu, killi,beesale ityadi patango sikkiddilleya adaraddu hakire chenda kantitu.mastru mavana maneli adu ella iddare pata tegadu haku aata.aachakare maniya aliyana patava oppanno?

  16. modalaaNa comment li suruvinge akshara dosha ayidu, hange innondu baretthe.

    ಒಪ್ಪಣ್ಣ, ಲಾಯಿಕ ಆಯಿದು ಬರದ್ದು ಎಂದಿನ ಹಾಂಗೇ.
    ಎನಗೆ ನೀನು ಬರದ, ಹಾಳೆಯ ಬೇರೆ ಬೇರೆ ನಮೂನೆಯ ಉಪಯೋಗಂಗೋ ಎಲ್ಲ ನೆನಪಾತು.
    ಅದೆಲ್ಲವನ್ನೂ ಎನಗೆ ಮಾಡಿ ಗೊಂತಿದ್ದು, ಕೆಲವೊಂದೆರಡರ ಮಾಡದ್ರೂ ನೋಡಿ ಗೊಂತಿದ್ದು.
    ಒಪ್ಪಣ್ಣ, ನಿನಗೆ ಇಡೀ ಹಾಳೆಯ ಸೋಗೆ ಸಮೇತ ಜಾಲಿಂಗೆ ತಂದು ಅದರಲ್ಲಿ ಒಬ್ಬ ಕೂದು ಇನ್ನೊಬ್ಬ 'ಬರಾನೆ' ಎಳವ ಆಟ ಆಡಿ ಅಭ್ಯಾಸ ಇಲ್ಲೆಯ? ಎಂಗೋ ಅದನ್ನೂ ಮಾಡಿದ್ದೆಯೋ, ಸಣ್ಣ ಇಪ್ಪಗ.
    ಹಾಂಗೆ, ಈಗಾಣ ಹೊಸ ಹಾಳೆ ಬಟ್ಟಲುಗಳಲ್ಲಿ ಉಂಡಿದೆಯೋ, ಆದರೆ ಹಳೆ ಕಾಲಲ್ಲಿ ಉಂಡ ಮಜಾ ಬತ್ತಿಲ್ಲೆ ಈಗಾಣದ್ದರಲ್ಲಿ.
    ಸದ್ಯ ನೋಡಿದ ಒಂದು ಹೊಸ ವಿಷಯ ಹೇಳಿರೆ ಹಾಳೆಂದ ಮಾಡಿದ ಗಿಣ್ಣಾಲು, ಚಮಚ, ಫೋರ್ಕ್, ನೋಡಲೇ ಚೆಂದ ಕಂಡತ್ತು.
    ಅಂಬಗ ಇನ್ನು ಇನ್ನಾಣ ವಾರಕ್ಕೆ ಕಾವದಲ್ಲದೋ?

  17. ಒಪ್ಪಣ್ಣ, ಲಾಯಿಕ ಆಯಿದು ಬಾರದ್ದು ಎಂದಿನ ಹಾಂಗೇ.
    ಎನಗೆ ನೀನು ಬರದ, ಹಾಳೆಯ ಬೇರೆ ಬೇರೆ ನಮೂನೆಯ ಉಪಯೋಗಂಗೋ ಎಲ್ಲ ನೆನಪಾತು.
    ಅದೆಲ್ಲವನ್ನೂ ಎನಗೆ ಮಾಡಿ ಗೊಂತಿದ್ದು, ಕೆಲವೊಂದೆರಡರ ಮಾಡದ್ರೂ ನೋಡಿ ಗೊಂತಿದ್ದು.
    ಒಪ್ಪಣ್ಣ, ನಿನಗೆ ಇಡೀ ಹಾಳೆಯ ಸೋಗೆ ಸಮೇತ ಜಾಲಿಂಗೆ ತಂದು ಅದರಲ್ಲಿ ಒಬ್ಬ ಕೂದು ಇನ್ನೊಬ್ಬ 'ಬರಾನೆ' ಎಳವ ಆಟ ಆಡಿ ಅಭ್ಯಾಸ ಇಲ್ಲೆಯ? ಎಂಗೋ ಅದನ್ನೂ ಮಾಡಿದ್ದೆಯೋ, ಸಣ್ಣ ಇಪ್ಪಗ.
    ಹಾಂಗೆ, ಈಗಾಣ ಹೊಸ ಹಾಳೆ ಬಟ್ಟಲುಗಳಲ್ಲಿ ಉಂಡಿದೆಯೋ, ಆದರೆ ಹಳೆ ಕಾಲಲ್ಲಿ ಉಂಡ ಮಜಾ ಬತ್ತಿಲ್ಲೆ ಈಗಾಣದ್ದರಲ್ಲಿ.
    ಸದ್ಯ ನೋಡಿದ ಒಂದು ಹೊಸ ವಿಷಯ ಹೇಳಿರೆ ಹಾಳೆಂದ ಮಾಡಿದ ಗಿಣ್ಣಾಲು, ಚಮಚ, ಫೋರ್ಕ್, ನೋಡಲೇ ಚೆಂದ ಕಂಡತ್ತು.
    ಅಂಬಗ ಇನ್ನು ಇನ್ನಾಣ ವಾರಕ್ಕೆ ಕಾವದಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×