ಹರಿಸೇವೆ -ದೇವಕಾರ್ಯ; ಅಪುರೂಪದ ದೈವೀಕಾರ್ಯ

August 27, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 31 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೋಣೆ ತಿಂಗಳಿನ ಜೋರು ಮಳೆ.

ಮೊನ್ನೆ ಹಿಡುದ್ದು ಇನ್ನುದೇ ಬಿಟ್ಟಿದಿಲ್ಲೆ.
ಇಪ್ಪತ್ತಾರು ಗಂಟೆ ಆತಡ, ಹನಿ ಕಡಿಯದ್ದೆ. ಬಾನು ಒಟ್ಟೆ ಆಯಿದೋ ಹೇಳಿ ಆಚಮನೆ ದೊಡ್ಡಣ್ಣಂಗೆ ಸಂಶಯ!ಮಳೆ ಎಷ್ಟೇ ಬಂದರೂ ಹೋಪಲ್ಲಿಗೆ ಹೋಗದ್ದೆ ಆಗ – ಮೊನ್ನೆ ಈ ಮಳೆ ಎಡಕ್ಕಿಲೇ ಕುಂಡಡ್ಕದ ಹೇಳಿಕೆ ಎಂಗೊಗೆ.
ಮಾಷ್ಟ್ರುಮಾವನ ಹೊಸನೆಂಟ್ರಲ್ಲದೋ, ಬೈಲಿಂದ ಹೋಗದ್ದರೆ ಅಕ್ಕೋ – ಹೇಳಿ ಮಾತಾಡಿಗೊಂಡು, ಮಳೆಯನ್ನೂ ನೋಡದ್ದೆ ಹೆರಡ್ತ ಏರ್ಪಾಡು ಮಾಡಿದ್ದು.
~

ಕುಂಡಡ್ಕಲ್ಲಿ ಮೊನ್ನೆ ಆದ್ದು ಹರಿಸೇವೆ-ದೇವಕಾರ್ಯ. ಹಳೇ ಹಳೇ ಕ್ರಮದ ಮನೆಂಗಳಲ್ಲಿ ಮಾಂತ್ರ ಇಕ್ಕಷ್ಟೆ ಆ ಆಚರಣೆ.
ಆಚಕರೆಯ ತರವಾಡುಮನೆಲೂ ಇದ್ದು. ಒರಿಶಕ್ಕೊಂದರಿ ಹೇಳಿಕೆ ಬತ್ತು. ಉಂಡಿಕ್ಕಿ ಬತ್ತ ಕ್ರಮವೂ ಇದ್ದು.
ಅದೆಂತದು, ಎಂತ್ಸಕ್ಕೆ ಮಾಡ್ತದು, ಹೇಂಗೆ ಮಾಡ್ತದು ಹೇಳಿ ತಿಳ್ಕೊಂಬ ಆಸಗ್ತಿ ಇದ್ದರೂ ಸಮೆಯ ಸಿಕ್ಕಿತ್ತಿದ್ದಿಲ್ಲೆ.
ಬರೇ ದುರ್ಗಾಪೂಜೆ, ಗೆಣವತಿಹೋಮ, ಶಿವಪೂಜೆ ಆದರೆ ಸಮ, ನೋಡಿನೋಡಿ ಗೊಂತಿದ್ದು, ಆದರೆ ಹರಿಸೇವೆ – ದೇವಕಾರ್ಯ ಹೇಳ್ತದು ರಜಾ ಅಪುರೂಪದ ಸಂಗತಿ, ಅಲ್ಲದೋ? ಏ°?
ಅದಿರಳಿ,
~

ಹಾಂಗೆ ಕುಂಡಡ್ಕಕ್ಕೆ ಹೋಪ ಲೆಕ್ಕಲ್ಲಿ ಹೆರಟೆಯೊ°.
ಹೆರಟೆಯೊ° – ಆರೆಲ್ಲ?,
ಮಾಷ್ಟ್ರುಮಾವ° – ಹೋಗಲೇ ಬೇಕಿದ, ಮದುಮ್ಮಾಯ° ಮಗ° ಅಮೇರಿಕಲ್ಲಿಪ್ಪಗ ಆರೂ ಹೋಗದ್ದರೆ ಹೇಂಗಕ್ಕು ಹೇಳಿಗೊಂಡು!
ಅವಲ್ಲದ್ದೆ, ಅವರ ಸಂಗಾತಕ್ಕೆ ಆಚಮನೆ ದೊಡ್ಡಣ್ಣ – ಒಟ್ಟಿಂಗೆ ಒಪ್ಪಣ್ಣಂದೇ.
ಬತ್ತೆ ಹೇಳಿದ ಅಜ್ಜಕಾನಬಾವ° ಕೈಕೊಟ್ಟ ಈ ಸರ್ತಿ; ಅಂಗಿ ಹಾಕಿ ಹೆರಡ್ಳಪ್ಪಗ ಅವರಲ್ಲಿಗೆ ಬಾಬು ಬಂತಡ, ಮದ್ದು ಬಿಡ್ಳೆ.
~

ಮಾಷ್ಟ್ರುಮಾವ° ಮುನ್ನಾಣದಿನವೇ ಮೂಡಬಿದ್ರೆಮಾವನತ್ರೆ ಮಾತಾಡಿ ಎಲ್ಲ ವೆವಸ್ತೆ ಮಾಡಿಗೊಂಡಿತ್ತಿದ್ದವು.
ನಾವು ಇಲ್ಲಿಂದ ಬಸ್ಸಿಲಿ ಹೋಗಿ ವಿಟ್ಳಲ್ಲಿ ಇಳಿತ್ತದು. ಅದೇ ಹೊತ್ತಿಂಗೆ ಮೂಡಬಿದ್ರೆ ಮಾವ ಕಾರಿಲಿ ಬಂದು ವಿಟ್ಳಲ್ಲಿ ನಿಂಬದು.
ಹ್ಮ್, ಮೂಡಬಿದ್ರೆ ಮಾವನವವರ ಮೂಲಮನೆಯೇ ಕುಂಡಡ್ಕ ಅಡ, ಮಾಷ್ಟ್ರುಮಾವ° ಹೇಳಿದವು. ಮತ್ತೆ ಅವಕ್ಕೆ ಕಾರುದೇ ಅರಡಿಗು.
ಈ ಪ್ರಾಯಲ್ಲಿದೇ ಅವು ಕಾರು ತಿರುಗುಸೆಂಡು ಹೋರ್ನು ಹಾಕುತ್ಸು ಕಂಡ್ರೆ ಅಳಿಯನಿಂದಲೂ ಲಾಯಿಕ ಬಿಡ್ತವು ಹೇಳಿ ಎಲ್ಲೋರುದೇ ಹೇಳುಗಡ!
ಅದಿರಳಿ. ವಿಟ್ಳಂದ ಮತ್ತೆ ಅವರ ಒಟ್ಟಿಂಗೆ ಹೋಪದು – ದಾರಿಗುರ್ತಕ್ಕೂ ಒಳ್ಳೆದು, ಮಳಗೂ ಒಳ್ಳೆದು – ಹೇಳ್ತ ಲೆಕ್ಕಲ್ಲಿ.
~

ಉದೆಕಾಲದ ಕೃಷ್ಣಬಸ್ಸಿಂಗೆ ಹೆರಟಾತು.
ಮಾಷ್ಟ್ರುಮಾವನೇ ಟಿಕೇಟುಮಾಡಿದವು. ಉದೆಕಾಲದ ಹೊತ್ತಾದ ಕಾರಣ ಬಸ್ಸು ಕಾಲಿ ಇತ್ತು. ಮಾಷ್ಟ್ರುಮಾವಂದೆ ದೊಡ್ಡಣ್ಣಂದೇ ಒಟ್ಟಿಂಗೆ ಒಂದು ಸೀಟಿಲಿ ಕೂದವು. ನಾವೂ ಚಳಿಗಾಳಿಬೀಳದ್ದ ಸೀಟುನೋಡಿ ಕೂದುಗೊಂಡತ್ತು, ಬೆಶ್ಚಂಗೆ!. 😉

ಮಾರ್ಗ ಪೂರ ಚೆಂಡಿ, ಎಲ್ಲಿನೋಡಿರೂ ಕೊಡೆ
-ಶಂಬಜ್ಜನ ಕಾಲದ ಊದ್ದ ಕೊಡೆ ಅಲ್ಲ, ಮೂರು-ನಾಕು ಮಡಿಕ್ಕೆ ಮಾಡಿ ವೇನಿಟಿಬೇಗಿನ ಒಳ ಹಿಡಿತ್ತ ನಮುನೆಯ ಸುಚ್ಚಿನ ಕೊಡೆ.
ನಾವು ಬೆಶ್ಚಂಗೆ ಸೀಟಿಲಿ ಕೂದರೆಂತಾತು, ಆಚ ಷ್ಟೋಪಿಲಿ ಒಬ್ಬ ಚೆಂಡಿಯವ° ಬಂದು ಹತ್ತಿದ, ಬ್ರೇಕಿನ ಬೀಸಕ್ಕೆ ಅವನ ಚೆಂಡಿಕೊಡೆ ಈಚವನ ಮೈ ಮೇಗೆ! ಬೆಶ್ಚಂಗೆ ಪೂರ ನೀರಾತು!
ಹತ್ತಿದವಂಗೆ ಕೊಡೆ ಹಿಡ್ಕೊಳದ್ದೆ ನಿವುರ್ತಿ ಇಲ್ಲೆ, ಬಿಡುಸಿ ಹಿಡ್ಕೊಂಬಲೆ ಎಡಿಯ, ಅದಕ್ಕೆ ಮಡುಸಿಯೇ ಹಿಡ್ಕೊಂಬದು!!
ಅದರ ನೀರ ಹನಿ ಪೂರ ರಟ್ಟಿಗೊಂಡು – ಕೆಳ ಮಡಗಿರೆ ಮಣ್ಣು ಹಿಡಿಗು, ಕುರೆ ಕಿರಿಂಚಿ!

ತಿರುಗಾಸಿನ ಬ್ರೇಕು ಹಾಕುವಗ ಟಾರ್ಪಲಿನ ನೀರು ಕರೆಲಿ ಕೂದ ಬೆಳಿವಸ್ತ್ರದ ಒಬ್ಬ° ಮಾವನ ಮೇಗೆ.
ಉದಿಉದಿಅಪ್ಪಗಳೇ ಓದಲೆ ಹೇಳಿ ತೆಕ್ಕೊಂಡ ಪೇಪರು ಚೆಂಡಿ!! – ಒಸ್ತ್ರವೂ, ಅಂಗಿಯೂ, ಒಣಕ್ಕು ಚೆಂಡಿಹರ್ಕೂ – ಅದರೊಟ್ಟಿಂಗೆ ಎಲ್ಲವುದೇ! ಮತ್ತೆಂತರ ಓದುದು, ಮಡುಸಿ ಮಡಿಕ್ಕೊಂಬದೇ, ಚಳಿಗೆ ಕೈ ಕಟ್ಟಿ!!
ಕೃಷ್ಣಬಸ್ಸಿಲಿ ಈ ಊರಿನ ಜೀವನವೇ ಇದ್ದೋ – ಹೇಳಿ ಕಾಣ್ತು ಒಂದೊಂದರಿ!…

ಅಂತೂ-ಇಂತೂ ವಿಟ್ಳ ಎತ್ತಿತ್ತು.
ಎಂಗೊ ಇಳುದೆಯೊ°.
~

ಹೆಚ್ಚೊತ್ತು ಕಾಯೆಕ್ಕಾಯಿದಿಲ್ಲೆ – ಮಾವನ ಕಾರು ಮಾರ್ಗದ ಆಚ ಕೊಡಿಲಿ ಕಂಡತ್ತು!
ಎಂಗಳ ಕಂಡು ಕೊಶಿಲಿ ಕಾರು ಎರಡು ಹೋರ್ನು ಹಾಕಿತ್ತು!
ಶ್ಟೇರಿಂಗು ಬುಡಲ್ಲಿದ್ದ ಮಾವಂಗೂ, ಜೋರು ಹೋಪಗ ಹೇಳುಲೆ ಹತ್ತರೆ ಕೂದ ಅತ್ತಗೂ ಎಂಗಳ ಕಂಡು ಕೊಶಿ ಆತು.
ಏನು- ಒಳ್ಳೆದು ಮಾತಾಡಿಗೊಂಡೇ ಕಾರಿನ ಬಾಗಿಲು ತೆಗದವು.
ಹಿಂದಾಣ ಸೀಟಿಲಿ ಕೂದೆಯೊ – ಮಾಷ್ಟ್ರುಮಾವಂದೇ ಆಚಮನೆ ದೊಡ್ಡಣ್ಣಂದೇ ಆಚೀಚೊಡೆ ಕಿಟಿಕಿ ಕರೆಲಿ, ನಾವು ಮಧ್ಯಲ್ಲಿ – ಪುನಾ ಬೆಶ್ಚಂಗೆ!! 😉
ಉಪಚಾರ ಮಾತಾಡಿಗೊಂಡೇ ಕುಂಡಡ್ಕಕ್ಕೆ ಹೋಪಲೆ ಸಾಲೆತ್ತೂರು ಮಾರ್ಗಲ್ಲಿ ಹೆರಟೆಯೊ° ಮಾರ್ಗಲ್ಲಿ ಅಡ್ಡಡ್ಡ ನೆಡೆತ್ತ ಕೊಡೆಗೊಕ್ಕೆ ಹೋರ್ನು ಹಾಕಿಯೊಂಡು!..
~

ಮಳೆಗೆ ಕನ್ನಾಟಿ ಕಿಟುಕಿ ಹಾಯ್ಕೊಂಡೆಯೊ°.
ಹೆರಾಣ ಮಳೆನೀರು ಎಂಗಳ ಪಂಚಾತಿಗೆಗೆ ಏನೂ ತೊಂದರೆ ಕೊಟ್ಟಿದಿಲ್ಲೆ.
ಎಷ್ಟೊತ್ತಿಂಗೆ ಹೆರಟಿ – ಕಾಪಿಗೆಂತ, ಅಮೇರಿಕಲ್ಲಿ ಮಳೆ ಇದ್ದೋ – ಎಲ್ಲ ಮಾತಾಡಿ ಆತು!
ಮಾತಾಡಿ ಮಾತಾಡಿ ಸಾಲೆತ್ತೂರಿಂಗೆ ಎತ್ತಿಯೇ ಬಿಟ್ಟತ್ತು.
~

ಸಾಲೆತ್ತೂರಿಂದ ಕುಂಡಡ್ಕಕ್ಕೆ ಜಾಸ್ತಿ ದೂರ ಏನಿಲ್ಲೆ. ನೀರ್ಚಾಲಿಂದ ಸೂರಂಬೈಲಿಂಗೆ ಹೋದಷ್ಟು ಅಕ್ಕೋ ಏನೋ!
ಅಷ್ಟೂ ಆಗ.
ಜಾಸ್ತಿ ಆದ ಹಾಂಗೆ ಕಾಣ್ತು ನವಗೆ – ಎಂತಗೆ ಹೇಳಿತ್ತುಕಂಡ್ರೆ, ಅಲ್ಯಾಣ ಮಾರ್ಗ ಹಾಂಗಿದ್ದು.

ಹ್ಮ್, ಈ ಮಳೆಗಾಲದ ನೀರು ಸರ್ವಸ್ವವೂ ಅಲ್ಯಾಣ ಮಾರ್ಗದ ಗುಂಡಿಗಳಲ್ಲಿ ಇದ್ದೋ ತೋರ್ತು ಒಂದೊಂದರಿ.
ಅಡಿಗೆಉದಯಣ್ಣ ಬೆಶಿಎಣ್ಣಗೆ ಸುಟ್ಟವು ಬಿಟ್ಟನಮುನೆ ಅಲ್ಲಲ್ಲಿ ಗುಂಡಿಗೊ, ಅದರ್ಲಿ ಕೆಂಪು ಕೆಂಪು ನೀರು.
ಗುಂಡಿ ಅಲ್ಲ, ಕೆಲವು ದಿಕ್ಕೆ ಪಳ್ಳ, ತೋಡು – ಎಲ್ಲವೂ ಇದ್ದು. ಪಡ್ರೆಮಾವನ ಇಂಗುಗುಂಡಿಯ ನಮುನಗೆ!
ಆ ಪಳ್ಳಲ್ಲಿ ಗೋಣಂಗ ಇದ್ದರೂ ಗೊಂತಾಗ ಹೇಳಿ ಶರ್ಮಪ್ಪಚ್ಚಿ ಒಂದೊಂದರಿ ನೆಗೆ ಮಾಡುಗು.

ಅದು ಮೂಡಬಿದ್ರೆಮಾವಂಗೆ ಮೊದಲೇ ಗೊಂತಿದ್ದ ಕಾರಣ ’ಸಾಲೆತ್ತೂರಿಂದ ನಾವು ಜೀಪುಮಾಡಿಗೊಂಡು ಹೋಪೊ°’ – ಹೇಳಿದವು.
ಈ ಕುರೆ ಮಾರ್ಗಲ್ಲಿ ಹೋದರೆ ಕಾರಿನ ತೊಳದು ಶುದ್ಧಮಾಡ್ಳೆ ಜೀಪಿನಬಾಡಿಗೆಂದ ಹೆಚ್ಚಕ್ಕು – ಹೇಳಿ ನೆಗೆಮಾಡಿದವು. ಅವಕ್ಕೆ ಒಂದೊಂದರಿ ಕುಶಾಲಿದ್ದು – ಮಕ್ಕೊ, ಅಳಿಯಂದ್ರು ಹತ್ತರೆ ಇಲ್ಲದ್ರೆ 😉
ಹ್ಮ್, ಜೀಪಿನ ಬಾಡಿಗೆ ಏನೂ – ತುಂಬ ಇಲ್ಲೆ. ಒಂದು ಕೇಜಿ ಅಡಕ್ಕೆ. ಅಷ್ಟೆ.
ಎಂಗೊ ಇಷ್ಟು ಜೆನ ಇಪ್ಪಗ ಅದೆಂತ ಸಾರ ಇಲ್ಲೆಪ್ಪ! ಹೇಳಿ ಆತು.
ಒಪ್ಪಣ್ಣನ ಬೆಶ್ಚಂಗೆ ಸೀಟು ಪುನಾ ನೀರಾತು! 😉 :-(
~ಸಾಲೆತ್ತೂರಿಲಿ ಇಳುದು ಒಂದು ಮಾಡಡಿಲಿ ನಿಂದೆಯೊ°. ಮಳೆ ಬಂದೊಂಡೇ ಇತ್ತು.
ಅತ್ತೆಯ ಕೆಂಪುಹಿಡಿ ಕೊಡೆ ಹಿಡ್ಕೊಂಡು ಮಾವ° ಓ ಅತ್ಲಾಗಿ ಹೋದವು, ಬಪ್ಪಗ ಒಂದು ಜೀಪಿಲಿ ಕೂದುಗೊಂಡೇ ಬಂದದು.
ಬಷ್ಟೇಂಡಿನ ಮಾಡಡಿಗೆ ಬಂದಪ್ಪಗ ಎಂಗೊ ಜೀಪಿಂಗೆ ಹತ್ತಿಗೊಂಡೆಯೊ°.
ಎದುರಾಣ ಸೀಟಿಲಿ ಮಾಷ್ಟ್ರುಮಾವಂದೇ ಮೂಡಬಿದ್ರೆ ಮಾವಂದೇ!
ಹಿಂದಾಣಸೀಟಿಲಿ ಮೂಡಬಿದ್ರೆ ಅತ್ತೆ ಕೂದವು, ಮತ್ತೆ ಆಚಮನೆ ದೊಡ್ಡಣ್ಣಂದೇ, ನಾವುದೇ ಕೂದತ್ತು!
ಮೂಡಬಿದ್ರೆ ಮಾವಂಗೆ ಆ ಜೀಪಿಂದರ ಗುರ್ತ ಇತ್ತು! – ಅದರ ಡ್ರೈವರ ಹೇಳಿತ್ತುಕಂಡ್ರೆ ಕುಂಡಡ್ಕದವರ ಪರಿಚಯದ್ದೇ ಅಡ.
~

ಮಾತಾಡಿಗೊಂಡು ಹೋದೆಯೊ°. ಎಂತರ ಮಾತಾಡಿದ್ದು?
ಡ್ರೈವರಂಗೆ ಮಾತಾಡ್ಲೆ ಗೊಂತಿಲ್ಲೆ – ಪಳ್ಳಂಗಳ ಎಡೆಲಿ ಜೀಪು ಹೋಪಗ ಮಾತಾಡಿರೆ ಆಗ!
ಮಾಷ್ಟ್ರುಮಾವಂದು, ಮೂಡಬಿದ್ರೆ ಮಾವಂದು ಎಂತದೋ ಮಾತುಕತೆ ಅದಾಗಲೇ ಸುರು ಆಗಿತ್ತು – ಇಬ್ರುದೇ ಮಾಷ್ಟ್ರ ಆಗಿ ರಿಠೇರ್ಡು. ಎಲೋಷಿಯಸ್ಸು ಕೋಲೇಜು, ಮೂಡಬಿದ್ರೆ ಶಾಲೆ, ಸಂಪಾಜೆ ಶಾಲೆ, ಕೆಯ್ಯೂರು ಶಾಲೆ – ಎಂತೆಲ್ಲ ಮಾತಾಡಿಗೊಂಡಿತ್ತಿದ್ದವು!
ಅತ್ತೆ ಯೇವತ್ತಿನಂತೆ, ಮೌನ!
ಇನ್ನು ಬಾಕಿ ಆರು – ಆಚಮನೆ ದೊಡ್ಡಣ್ಣಂದೇ, ಒಪ್ಪಣ್ಣಂದೇ!

~
ದೊಡ್ಡಣ್ಣ ಯೇವತ್ತೂ ಹಾಂಗೇ – ಮಾತಾಡುಸಿರೆ ಎಷ್ಟೂ ಮಾತಾಡುಗು.
ಕುಶಾಲು,ತಮಾಶೆ, ನೆಗೆ, ಗಂಭೀರ – ಎಲ್ಲವೂ ಇಪ್ಪ ಮಾತುಕತೆ.
ಯೇವದೋ ಅನುವಾಕದ ಯೇವದೋ ಹನ್ಸಿನಮಂತ್ರದ ಅರ್ತಂದ ಹಿಡುದು, ಸುಣ್ಣಕ್ಕೆ ಮೈಲುತೂತಿನ ಪ್ರಮಾಣದ ಒರೆಗೂ ಗೊಂತಿದ್ದು.ಈಗ ಎಂತ್ಸರ ಮಾತಾಡುತ್ಸು –
ಆನೇ ಶುದ್ದಿ ತೆಗದೆ, ಅದೆಲ್ಲ ಅಪ್ಪು ದೊಡ್ಡಣ್ಣ, ಈ ಹರಿಸೇವೆ-ದೇವಕಾರ್ಯ ಹೇಳ್ತವಲ್ಲದೋ – ಹಾಂಗೆ ಹೇಳಿರೆ ವೈದಿಕ ಕ್ರಮಲ್ಲಿ ಮಾತಾಡ್ತರೆ ಎಂತರ?
ನಾವು ಅಂತೇ ಹೋಗಿ ಉಂಡಿಕ್ಕಿ ಬಯಿಂದು ಹೇಳುದರಿಂದ ಅದರ ಬಗ್ಗೆ ರಜ ಗೊಂತಾದರೆ ಒಳ್ಳೆದಲ್ಲದೋ – ಹೇಳಿ ಕೇಳಿದೆ.

ಒಂದು ಕ್ಷಣ ಮೋರೆನೋಡಿಕ್ಕಿ ವಿವರುಸುಲೆ ಸುರು ಮಾಡಿದ°..
ದೇವಕಾರ್ಯ ಹೇಳಿರೆ ಎಂತರ, ಹರಿಸೇವೆ ಹೇಳಿರೆ ಎಂತರ, ಅದರ ಹೇಂಗೆ ಮಾಡುದು, ಮಂತ್ರ, ಅರ್ಥ ವಿವರಣೆ ಸಹಿತವಾಗಿ ಎಳೆ ಎಳೆಯಾಗಿ ವಿವರುಸಿಗೊಂಡು ಹೋದ°.
ಒಟ್ಟಿಂಗೆ ಮಾಷ್ಟ್ರುಮಾವಂದೇ ಹಿಂದೆ ತಿರುಗಿ ಕೆಲವೆಲ್ಲ ವಿಶಯಂಗೊ ಹೇಳಿದ್ದವು, ಅಡಕ್ಕೆ ಹೋಳುಮಾಡುದರ ಎಡಕ್ಕಿಲಿ!
~
ನವಗೆ ದೇವರು-ಪಿತೃಗೊ – ಇಬ್ರುದೇ ಪೂಜ್ಯರು.
ಪಿತೃಕಾರ್ಯ ಮಾಡ್ತದು ಗೊಂತಿದ್ದಲ್ಲದೋ – ಬಟ್ಟಮಾವನ ದಿನಿಗೇಳಿ, ಪರಾಧೀನಕ್ಕೆ ಕೂರುಸಿ, ಅವರ ಮೇಗೆ ಪಿತೃಗೊಕ್ಕೆ ಆವಾಹನೆ, ಪೂಜೆ, ಸಮರ್ಪಣೆ ಮಾಡಿ, ಅವಕ್ಕೆ ಸಂತೃಪ್ತಿ ಅಪ್ಪ ಹಾಂಗೆ ಮಾಡುದೇ ಪಿತೃಕಾರ್ಯ.

ಅದೇ ನಮುನೆ ದೇವರಿಂಗೂ ಆಚರಣೆ ಮಾಡುದು.
ಒಂದು ಗೆಣವತಿ, ದುರ್ಗೆ ಮಂಡ್ಳ ಹಾಕಿ ಪೂಜೆ ಮಾಡುದು. ಪೂಜೆ ಯೇವತ್ತಿನ ಹಾಂಗೆಯೇ.
ಧ್ಯಾನ, ಆವಾಹನೆ, ಅರ್ಚನೆ, ಪುಷ್ಪಾಂಜಲಿ, ಎಲ್ಲವೂ ಇದ್ದು. ಆದರೆ ನೈವೇದ್ಯಕ್ಕಪ್ಪಗ ರಜಾ ವಿತ್ಯಾಸ ಇದ್ದು.
ಎಂತರ ಹೇಳಿತ್ತು ಕಂಡ್ರೆ, ಎಲ್ಲಾ ನೈವೇದ್ಯ ತಂದು ದೇವರ ಎದುರು ಮಡಗುದು.ನೈವೇದ್ಯ ಮಾಡುದು.
ಆದರೆ ಕೂಡ್ಳೇ ಉದ್ವಾಸನ ಮಾಡ್ಳಿಲ್ಲೆ, ರಜಾ ಎಡೆಬಿಡ್ಳೆ ಇದ್ದು ಇಲ್ಲಿ.
ಇಷ್ಟಾದ ಕೂಡ್ಳೇ ಬ್ರಾಹ್ಮಣರ ಮಣೆಮಡಗಿ ಕೂರುಸುದು, ಜಾಗೆ ಇದ್ದರೆ ದೇವರೊಳ. ಅಲ್ಲದ್ರೆ ಎಲ್ಲಿ ಜಾಗೆ ಇದ್ದೋ ಅಲ್ಲಿ.
ಅವಕ್ಕೆ ಪೂಜೆ ಮಾಡಿ ಅವರ ಮೈ ಮೇಗೆ ಇಷ್ಟ ದೇವರ,ಕುಲದೇವರ ಆವಾಹನೆ ಮಾಡುದು.
ನಮಸ್ಕಾರವ ಸಮರ್ಪಿಸುದು.
ಮಾಡಿದ ಪಾಕಂಗಳ ಎಲ್ಲ ಬಳುಸುದು, ಒಂದೊಂದೇ.
ಹಸ್ತೋದಕ ಮಾಡುದು. ಮನೆ ಎಜಮಾನನೇ ಖುದ್ದು  ಬಂದು ಇದಂ ವೋ ಅನ್ನಂ – ಹೇಳಿ ಅಶನ ಮುಟ್ಟುಸಿ ಸ್ವೀಕರುಸುಲೆ ಹೇಳುದು.

ಬ್ರಾಹ್ಮಣರು ಉಂಬಲೆ ಸುರು ಮಾಡ್ತವು..
ಉಂಬದು – ಹೊಟ್ಟೆ ತುಂಬ – ಸಂತೃಪ್ತಿ ಅಪ್ಪಷ್ಟು.
ಸಂತೃಪ್ತಿ – ಉಂಬವಕ್ಕೂ, ಬಳುಸುವವಕ್ಕೂ..!
ಹ್ಮ್, ಆ ಮಣೆಲಿ ಕೂದಂಡು ಅಂಬಗ ಉಂಬದು ದೇವರಿಂಗೇ ಸಂತೋಷ ಆವುತ್ತು ಹೇಳುದು ನಮ್ಮ ಪರಿಕಲ್ಪನೆ.
ಹಾಂಗಾಗಿ ಯಜಮಾನಂದೇ ಅವರ ಸಂತೃಪ್ತಿಯನ್ನೇ ಬಯಸುತ್ತ°.

ಮಾಡಿದ ಎಲ್ಲಾ ಶಾಕಪಾಕಂಗಳ ಬಳುಸಿ ತೃಪ್ತಿಪಡುಸಿ ಆದ ಮೇಗೆಯೇ ದೇವರ ಮಂಡ್ಳದ ಎದುರು ಬಪ್ಪದು.

ಮಜ್ಜಿಗೆಯ ಊಟವೂ ಆದ ಮತ್ತೆ ಪುನಾ ದೇವರ ಎದುರಾಣ ಕೆಲಸ.
ಅಪ್ಪು, ಕೂದ ಬ್ರಾಮ್ಮಣರಿಂಗೆ ಮಜ್ಜಿಗೆ ಊಟ ಆದ ಮೇಗೆ, ದೇವರ ಎದುರು ಮಡಗಿದ ನೈವೇದ್ಯದ ಉದ್ವಾಸನೆ.
ಬಟ್ಟಮಾವ° ಅಮೃತಾಪಿಧಾನಮಸಿ ಸ್ವಾಹಾ – ಹೇಳಿ ದೇವರಿಂಗೆ ಮಡಗಿದ ಸಮರ್ಪಣೆಯ ವಿಸರ್ಜನೆ ಮಾಡಿ, ಸ್ಥಳಶುದ್ಧ ಮಾಡುದು.
ನೈವೇದ್ಯ ವಿಸರ್ಜನೆ ಆದ ಮತ್ತೆ ಪುನಾ ಇತ್ಲಾಗಿ ಬಂದು ಬ್ರಾಹ್ಮಣರಿಂಗೆ ಕೈಗೆ ನೀರು ಕೊಡುದು- ಊಟ ಮುಗುದ ಲೆಕ್ಕದ್ದು, ಆಪೋಶನ!
ಬ್ರಾಹ್ಮಣರು ಉಂಡಿಕ್ಕಿ, ಕೈತೊಳದು ಬಂದ ಮತ್ತೆ ಮುಂದಾಣ ಕಾರ್ಯ.

ಕಳುದೊರಿಶ ತರವಾಡುಮನೆಲಿ ದೇವಕಾರ್ಯ ನೆಡದ್ದು - ಯೇನಂಕೂಡ್ಳಣ್ಣ ತೆಗದ ಚೆಂದದ ಪಟ!

~ಮತ್ತೆ ಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ, ಹೊಡಾಡುದು – ಎಲ್ಲವುದೇ.
ದೇವರಿಂಗೆ ಹೂಗು ಹಾಕಿ ಎಲ್ಲ ಆಗಿ ಹೊಡಾಡಿದ ಮತ್ತೆ ಬ್ರಹ್ಮಾರ್ಪಣಕ್ಕಪ್ಪಗ, ಪುನಾ ಬ್ರಾಹ್ಮಣರ ಹತ್ತರೆ ಬಂದು, ಯಜಮಾನ ‘ಸಂತೃಪ್ತಿಯ ಆಶೀರ್ವಾದ’ ತೆಕ್ಕೊಂಬದು. ಅವರ ಮೇಗಂಗೆ ಆವಾಹನೆ ಮಾಡಿದ ದೇವರ ಅಂಶವ ಉದ್ವಾಸನೆ ಮಾಡುದು.
ಮತ್ತೆ ಪೂಜಗೆ ಬ್ರಹ್ಮಾರ್ಪಣ ಬಿಟ್ಟು, ನೈವೇದ್ಯ ಪ್ರಸಾದ ಸ್ವೀಕಾರ ಮಾಡುದು.
ಇದು ದೇವಕಾರ್ಯ.

ಎಲ್ಲಾ ಪೂಜೆ ಪುನಸ್ಕಾರಂಗಳೂ ದೇವಕಾರ್ಯವೇ ಆದರೂ, ಈ ನೈವೇದ್ಯ -ಹಸ್ತೋದಕ – ಆಪೋಶನ-ಉದ್ವಾಸನೆಯ ಎಡೆಗಳಿಂದಾಗಿ ಈ ದೇವಕಾರ್ಯವ ಎಡೆಮಡಗಿ ದೇವಕಾರ್ಯ ಹೇಳಿಯೂ ಹೇಳ್ತವಡ ಬಟ್ಟಕ್ಕೊ!
ಆಚಮನೆ ದೊಡ್ಡಣ್ಣ ಎಷ್ಟು ತಿಳ್ಕೊಂಡಿದ°..! ಕೊಶೀ ಅಪ್ಪದು ಅವನತ್ರೆ ಮಾತಾಡ್ಳೆ.
~

ದೇವಕಾರ್ಯಕ್ಕೆ ಗೆಣವತಿ, ದುರ್ಗಾಪೂಜೆ ಮಾಡ್ತಲ್ಲದೋ – ಇದರ ಎಡಕ್ಕಿಲೇ ಒಂದು ವಿಷ್ಣುವಿನ ಅಷ್ಟದಳ ಮಂಡ್ಳ ಬರದು, ಅದರ ಹತ್ತರೆ ಮುಡಿಪ್ಪು ಮಡಗಿ ಪೂಜೆ ಮಾಡಿರೆ ಅದಕ್ಕೆ ಹರಿಸೇವೆ ಹೇಳುತ್ತದು.
ನೈವೇದ್ಯಕ್ಕಪ್ಪಗ ಗೆಣಮೆಣಸು-ಬೆಲ್ಲ-ಹಾಕಿ ಮಾಡಿದ ಪಾನಕವೂ, ಹಸರಬೇಳೆ, ಬಾಳೆಹಣ್ಣು, ಗೆಣಮೆಣಸು, ಬೆಲ್ಲ ಹಾಕಿದ ಪನಿವಾರವನ್ನುದೇ ನೈವೇದ್ಯ ಮಾಡ್ತದು ಕ್ರಮ.
ವೆಂಕಟ್ರಮಣನ ಧನನಿಧಿಯಾದ ‘ಮುಡಿಪ್ಪು‘ ಇದ್ದಲ್ಲದೋ – ಅದಕ್ಕೆ ಒಂದು ರಜ ಸೇರುಸಿ, ಮನೆಯ ಲಕ್ಷ್ಮಿ ಯೇವತ್ತೂ ಅಕ್ಷಯವಾಗಿರಳಿ ಹೇಳ್ತ ಪ್ರಾರ್ಥನೆಯ ಒಟ್ಟಿಂಗೆ ವಿಷ್ಣು ಸ್ಮರಣೆ ಮಾಡ್ತ ಅಪುರೂಪದ ಕಾರ್ಯವೇ ಈ ಹರಿಸೇವೆ.
ದೇವಕಾರ್ಯದ ಒಟ್ಟಿಂಗೆ ಮಾಡಿರೇ ಅದರ ಹರಿಸೇವೆ ಹೇಳುದಡ. ಅಲ್ಲದ್ರೆ ಬರೇ ಮುಡಿಪ್ಪು ಪೂಜೆ ಹೇಳ್ತ ಮರಿಯಾದಿ ಅಡ.
~
ಹೆಚ್ಚಿನ ದಿಕೆಯೂ ಈ ಹರಿಸೇವೆ – ದೇವಕಾರ್ಯ ಎರಡನ್ನೂ ಒಂದೇ ದಿನ ಮಾಡ್ತವಡ.
ಕೆಲವು ದಿಕೆ ಮಾಂತ್ರ ಒಂದು ದಿನ ಹಿಂದೆಮುಂದೆ ಆಗಿಯೂ ಮಾಡ್ತ ಮರಿಯಾದಿ ಇದ್ದಡ.
ಶುಕ್ರವಾರ ದೇವಕಾರ್ಯ ಮಾಡಿ, ಶೆನಿವಾರ ಹರಿಸೇವೆ ಆತಡ ಓ ಮೊನ್ನೆ ಅರ್ತ್ಯಡ್ಕಲ್ಲಿ!
~

ಇಷ್ಟು ಹೇಳುವಗ ಕುಂಡಡ್ಕ ಮನೆ ಎತ್ತಿ, ಅವರ ಜಾಲಿಲಿ ಜೀಪು ತಿರುಗಿ ನಿಂದದು ಗೊಂತೇ ಆಯಿದಿಲ್ಲೆ.
ಜೀಪು ನಿಂದ ಕೂಡ್ಳೇ ಮಾತಾಡ್ತ ಶುದ್ದಿಯೂ ನಿಂದತ್ತು, ಮಾತಾಡದ್ದೆ ಇಳುದತ್ತು.
ಏನು-ಏನು ಕೇಳಿದವು ಕುಂಡಡ್ಕ ಮಾವ, ಬಾವ, ಪುಟ್ಟುಕೂಸು – ಎಲ್ಲೊರುದೇ.
~
ಪೂಜೆ ಸುರು ಆದ್ದಷ್ಟೆ.
ಇಂದು ಪೂರ್ತಿ ಕ್ರಮಂಗೊ ನೋಡಿಗೊಳೆಕ್ಕು ಹೇಳ್ತ ಉದ್ದೇಶಲ್ಲಿ ದೇವರೊಳ ಕಾಂಬ ಹಾಂಗೆ ಕೂದೊಂಡೆ.
ದೊಡ್ಡಣ್ಣ ಹೇಳಿದ ಎಲ್ಲಾ ಕ್ರಮಂಗಳ ಗಮನುಸಿಗೊಂಡಾತು.

ನೈವೇದ್ಯದ ಉದ್ವಾಸನೆ, ಬ್ರಹ್ಮಾರ್ಪಣ, ನೈವೇದ್ಯ ಪ್ರಸಾದ ಸ್ವೀಕಾರ ಎಲ್ಲ ಮುಗಾತು.
ಭರ್ಜರಿ ಊಟವೂ ಆತು!
ಊಟ ಆಗಿ ತಿರುಗ ಜೀಪಿಲಿ ಸಾಲೆತ್ತೂರಿಂಗೆ ಬಂದೆಯೊ°.  ಮೂಡಬಿದ್ರೆ ಮಾವ° ಎಂಗಳ ಪುನಾ ವಿಟ್ಳಕ್ಕೆ ಬಿಟ್ಟವು.
ಅವು ಅತ್ಲಾಗಿ, ಎಂಗೊ ಇತ್ಲಾಗಿ – ಹೊತ್ತೊಪ್ಪಾಗಾಣ ಕೃಷ್ಣ ಬಸ್ಸಿಲಿ!
ಬಸ್ಸಿಲಿ ಕೂದುಗೊಂಡಿಪ್ಪಗ ಹೀಂಗೆಲ್ಲ ಅನುಸಿ ಹೋತು:
~

ಮುಡಿಪ್ಪಿನ ಅಧಿದೇವತೆ - ವೆಂಕಟ್ರಮಣ, ಧನಲಕ್ಷ್ಮಿಯೊಟ್ಟಿಂಗೆ!

ಇನ್ನೊಬ್ಬನ ಹೊಟ್ಟೆ ತುಂಬುಸುದರ್ಲೇ ತೃಪ್ತಿ ಕಾಂಬ ನಮ್ಮ ಸಂಸ್ಕೃತಿ ಎಷ್ಟು ಶ್ರೀಮಂತ ಅಲ್ಲದೋ?
ಇನ್ನೊಬ್ಬನ ಮೈ ಮೇಗೆ ದೇವರ ಅಂಶ ಬರುಸಿ, ಅವನ ಹೊಟ್ಟೆ ತುಂಬುಸಿ, ಅವ ಸಂತೃಪ್ತಿ ಅಪ್ಪಗ ಮಾಡಿದ ಕಾರ್ಯ ಸಫಲ ಆತು ಹೇಳಿ ತಿಳ್ಕೊಂಬದು – ನಮ್ಮ ಪರಸ್ಪರತೆಯ ತೋರುಸುತ್ತು. ಅಲ್ಲದೋ?
ಆ ಲೆಕ್ಕಲ್ಲಿ ಊರಿನ ಒಂದಷ್ಟು ಜನಂಗೊಕ್ಕೆ ಊಟವನ್ನುದೇ ಕೊಡ್ತು ನಾವು. ಅದುದೇ ಒಂದು ಪುಣ್ಯದ ಕೆಲಸವೇ.
ಒಟ್ಟೊಟ್ಟಿಂಗೆ ನಮ್ಮ-ನೆಂಟ್ರುಗಳ ನಡುಕೆ ಇಪ್ಪ ಬಾಂಧವ್ಯ ಹೆಚ್ಚಪ್ಪಲೆ ಕಾರಣವೂ ಆವುತ್ತು.

ಹರಿಸೇವೆ, ದೇವಕಾರ್ಯ – ಹೀಂಗಿರ್ತ ವಿಶೇಷ ಆಚರಣೆಗೊ ನಮ್ಮ ಊರಿಲಿ ಮಾಂತ್ರ ಕಾಂಗಷ್ಟೇ.
ಅದುದೇ ಈಗೀಗ ಹಳೇ ತರವಾಡು ಮನೆಗಳಲ್ಲಿ ಮಾಂತ್ರ ಕಾಂಗಷ್ಟೇ.

ಪೇಟೆಲಿಪ್ಪವಕ್ಕೆ ಅವರವರ ಹೊಟ್ಟೆಗೆ ಸರಿಯಾಗಿ ತಿಂದುಗೊಂಡು ಹೋಪಲೇ ಪುರುಸೊತ್ತು ಇರ್ತಿಲ್ಲೆಡ ಭಾವ.
ಇನ್ನು ದೇವಕಾರ್ಯ, ಹರಿಸೇವೆ ಎಲ್ಲ ಮಾಡುಗೊ?
ಒಂದು ದಿನ ಪುರುಸೊತ್ತೋ ಮಣ್ಣ ಇದ್ದರೆ ಎಲ್ಲಿಗಾರು ತಿರುಗಲೆ ಹೋವುತ್ತವಡ. ಅದರಿಂದ ನವಗೆ ಮಾಂತ್ರ ಕುಶಿ ಸಿಕ್ಕುಗಷ್ಟೆ. ನಮ್ಮ ಹಿರಿಯೋರ ಹಾಂಗೆ ಇನ್ನೊಬ್ಬನ ತೃಪ್ತಿಪಡುಸುದರಲ್ಲಿ ನಾವು ಕುಶಿ ಕಾಂಬದು ಏವತ್ತು?

ಕಾಲ ಕಳುದ ಹಾಂಗೆ ನಾವು ಸ್ವಾರ್ಥಿಗೊ ಆವುತ್ತಾ ಇದ್ದು.
ನಾವು ನಮ್ಮಷ್ಟಕ್ಕೇ ಬದುಕ್ಕಿರೆ ಒಳುದವುದೇ ಅವರಷ್ಟಕೇ ಇರ್ತವು. ಅಲ್ಲದೋ?
ಪೇಟೆಲಿ ಹೇಂಗೂ ಇಲ್ಲೆನ್ನೆ, ನಮ್ಮ ಊರಿಲೂ ಕಮ್ಮಿ ಆಗಿಯೊಂಡಿದ್ದು ಈ ನಮುನೆ ಆಚರಣೆಗೊ.

ಹೆರದೇಶಂದ ಏವ ಏವದೋ ಸಂಸ್ಕೃತಿಗಳ ನಾವು ತೆಕ್ಕೊಂಡು ಬತ್ತು, ಲಾಯ್ಕಿದ್ದು ಲಾಯ್ಕಿದ್ದು ಹೇಳಿಗೊಂಡು!
ಅದರ ಎಡಕ್ಕಿಲಿ ನಮ್ಮ ಸಂಸ್ಕೃತಿಯ ಮರದರೆ ಹೇಂಗೆ?
ನಿಜವಾಗಿ ನೋಡಿರೆ ಹೆರಾಣವು ನಮ್ಮ ನೋಡಿ ಕಲ್ತುಗೊಳೆಕು. ಅಷ್ಟು ಒಳ್ಳೆಯ, ಶ್ರೀಮಂತ ಸಂಸ್ಕಾರ ನಮ್ಮದು.

ಹಾಂಗಿಪ್ಪ ನಮ್ಮ ಹಿರಿಯೋರ ಆಚರಣೆಗಳ ಯೇವತ್ತಿಂಗೂ ಕಾಂಬ ಹಾಂಗೆ ಒಳಿಶುವೊ°.
ನಮ್ಮಂದ ಮತ್ತಾಣೋರುದೇ ನೋಡಿ ಕಲ್ತುಗೊಂಬ ಹಾಂಗೆ ಮಾಡುವೊ°.

ಹರಿ, ಗುರು, ದೇವರು ನವಗೆ ಒಳ್ಳೆದು ಮಾಡ್ಳಿ.

ಒಂದೊಪ್ಪ: ಜನಸೇವೆಯೇ ಜನಾರ್ದನ ಸೇವೆ – ಇದುವೇ ದೇವಕಾರ್ಯದ ಹಾರಯಿಕೆ..!

ಹರಿಸೇವೆ -ದೇವಕಾರ್ಯ; ಅಪುರೂಪದ ದೈವೀಕಾರ್ಯ, 4.4 out of 10 based on 9 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 31 ಒಪ್ಪಂಗೊ

 1. ಶ್ರೀಶಣ್ಣ
  ಶ್ರೀಶ. ಹೊಸಬೆಟ್ಟು

  ಒಪ್ಪಣ್ಣ..ಹರಿಸೇವೆ ದೇವ ಕಾರ್ಯದ ಬಗ್ಗೆ ಒಳ್ಳೆ ತಿಳುವಳಿಕೆ ಕೊಡುವ ಕೆಲಸ ಮಾಡಿದ್ದೆ. ಲಾಯಿಕ ಆಯಿದು. ಅದಕ್ಕೆ ಪೂರಕವಾಗಿ ನಿಂಗಳ ಪಯಣದ ಅನುಭವ ಕೂಡಾ.
  ಒಂದರಿ ಹೀಂಗಾತು ಒಪ್ಪಣ್ಣ. ಒಂದು ಮನೆಲಿ ಸತ್ಯ ನಾರಾಯಣ ಪೂಜೆ. ನಾವೆಲ್ಲ ಹೋತು ಸಮಯಕ್ಕಪ್ಪಗ. ಅಲ್ಲಿ ಹೋದರೆ ಚೆಙಾಯಿಗಳದ್ದೇ ಒಂದು ಗುಂಪು. ಹೆರ ಕೂದೊಂಡು ಹರಟೆ ಹೊಡವಲೆ ಸುರು ಮಾಡಿದವು. ಕಾಲೇಜಿನ ಪೋಕ್ರಿತನ, ಲೆಕ್ಚರರ್ ಗಳ ತಮಾಶೆ ಮಾಡುವದು, ಇನ್ನೂ ಏನೇನೋ.. ಎಲ್ಲ ಮಾತಾಡಿಗೊಂಡು ಗೌಜಿಯೋ ಗೌಜಿ. ಒಳಾಂದ ಭಟ್ಟ ಮಾವ ಕಥಾಶ್ರವಣಕ್ಕೆ ಆತು ಹೇಳಿದ್ದವಡ. ಇವರ ಬೊಬ್ಬೆಲಿ ಎಂಗೊಗೆ ಕೇಳೆಕ್ಕನ್ನೆ. ಹೆರಾಣದ್ದು ಬೇರೆಯೇ ಕಥಾಶ್ರವಣ ನಡಕ್ಕೊಂಡು ಇತ್ತಿದ್ದು. ಭಟ್ಟ ಮಾವ ಒಂದು ಸರ್ತಿ ಕಣ್ಣು ಬಿಟ್ಟು ನೋಡಿದವು. ಉಹುಂ.. ಆರೂದೇ ಬೊಬ್ಬೆ ಹೊಡವದು ನಿಲ್ಸುತ್ತ ಹಾಂಗೆ ಕಾಣ್ತಿಲ್ಲೆ. ಪುನಃ ಒಂದು ಸರ್ತಿ ಹಾಂಗೇ ನೋಡಿದವು. ಪಟ್ಟಾಂಗ ರೈಸಿಂಡು ತಾರಕ್ಕಕ್ಕೆ ಏರುತ್ತ ಇದ್ದು. ತಡವಲೆ ಎಡಿಯದ್ದೆ ಭಟ್ಟ ಮಾವ ಜೋರು ಮಾಡಿಯೇ ಬಿಟ್ಟವು. ಅಷ್ಟಪ್ಪಗ ಒಂದರಿ ಎಲ್ಲರೂ ತಣ್ಣಂಗೆ ಆದವು. ಮನಾಸಿಲ್ಲಿ ಭಟ್ಟ ಮಾವನ ಬೈದವೋ ಗೊಂತಿಲ್ಲೆ.
  ರೆಜಾ ಅಲೋಚನೆ ಮಾಡುವ ವಿಶಯ. ಇಂದು ಎಷ್ಟು ಜೆನಂಗೊ ಪೂಜೆಗೆ ಹೋದರೆ ಅದರ ಕ್ರಮಂಗಳ ಆಗಲಿ ಮಹತ್ವ ಆಗಲೀ ತಿಳಿವಲೆ ಪ್ರಯತ್ನ ಮಾಡುತ್ತವು? ಮಾತಾಡ್ಲೆ ಅಪರೂಪಕ್ಕೆ ಸಿಕ್ಕಿದವರೊಟ್ಟಿಂಗೆ ಪಟ್ಟಾಂಗ ಹೊಡವದೇ ಮುಖ್ಯ ಆವುತ್ತಲ್ಲದ. ಸತ್ಯ ನಾರಾಯಣ ಪೂಜೆಯ ಪ್ರಸಾದ ರುಚಿ ಹಿಡಿಯದ್ದವು ಆರೂ ಇಲ್ಲೆ. ಕಮ್ಮಿಲಿ ಎರಡು ಉಂಡೆ ಆದರೂ ತಿನ್ನೆಕ್ಕು ಹೇಳುವ ಎಷ್ಟು ಮಕ್ಕೊಗೆ ಸತ್ಯ ನಾರಯಣ ಪೂಜೆಯ ಕಥೆ ಗೊಂತಿದ್ದು?

  ಕೊಶಿ ಆದ ಕೆಲವು ಸಾಲುಗೊ:
  “ಇನ್ನೊಬ್ಬನ ಹೊಟ್ಟೆ ತುಂಬುಸುದರ್ಲೇ ತೃಪ್ತಿ ಕಾಂಬ ನಮ್ಮ ಸಂಸ್ಕೃತಿ ಎಷ್ಟು ಶ್ರೀಮಂತ ಅಲ್ಲದೋ?”. ಖಂಡಿತಾ ಅಪ್ಪು. ಮನೆಗೆ ಅತಿಥಿಗೊಕ್ಕೆ ಬಂದ ಕೂಡ್ಲೆ ಕೈ ಕಾಲು ತೊಳವಲೆ ನೀರು ಕೊಟ್ಟು ಬೆಲ್ಲ ನೀರು ಆಸರಿಂಗೆ ಕೊಡುವ ಕ್ರಮಂದಲೇ “ಅತಿಥಿ ದೇವೋಭವ” ಹೇಳುವ ನಮ್ಮ ಸಂಸ್ಕೃತಿ ಸುರು ಆವುತ್ತು.
  “ಅಷ್ಟು ಒಳ್ಳೆಯ, ಶ್ರೀಮಂತ ಸಂಸ್ಕಾರ ನಮ್ಮದು”.-ಖಂಡಿತಾ ಅಪ್ಪು. ಒಳುಶಿ ಬೆಳಶೆಕ್ಕಾದ್ದು ನಮ್ಮ ಕರ್ತವ್ಯ ಮತ್ತೆ ಜವಾಬ್ದಾರಿ.
  “ಕೃಷ್ಣಬಸ್ಸಿಲಿ ಈ ಊರಿನ ಜೀವನವೇ ಇದ್ದೋ – ಹೇಳಿ ಕಾಣ್ತು ಒಂದೊಂದರಿ!…”

  [Reply]

  VA:F [1.9.22_1171]
  Rating: +1 (from 1 vote)
 2. ಒಂದರಿ ಊರಿಂಗೆ ಮಳೆಗಾಲಲ್ಲಿ ಹೋಗಿ ಬಂದ ಅನುಭವ ಆತು.. ಲೇಖನ ಭಾರೀ ಲಾಯಿಕ ಇದ್ದು…

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಶಾಲ್ಮಲಿ ಅಕ್ಕಂಗೆ ನಮಸ್ಕಾರ ಇದ್ದು.
  ಶುದ್ದಿಗೆ ಕೊಟ್ಟ ಒಪ್ಪ ಕಂಡು ಕೊಶೀ ಆತು.
  ಬೈಲಿಂಗೆ ಬತ್ತಾ ಇರಿ. ನಿತ್ಯವೂ ಊರಿಂಗೆ ಬಂದ ಹಾಂಗೆ ಆವುತ್ತು!

  ಒಳ್ಳೆದಾಗಲಿ!

  [Reply]

  VA:F [1.9.22_1171]
  Rating: 0 (from 0 votes)
 3. ಹಳೆಮನೆ ಅಣ್ಣ

  ಹರಿಸೇವೆ, ದೇವಕಾರ್ಯದ ಬಗ್ಗೆ ಬರದ ಲೇಖನ ಭಾರೀ ಒಳ್ಳೆದಾಯಿದು. ನಮ್ಮ ಸಂಸ್ಕೃತಿಯ ಪರಿಚಯ ಮಾಡುವ ಹೀಂಗಿಪ್ಪ ಇನ್ನಷ್ಟು ಲೇಖನಂಗೊ ಬತ್ತಾ ಇರಳಿ…

  [Reply]

  VA:F [1.9.22_1171]
  Rating: 0 (from 0 votes)
 4. ನೆಗೆಗಾರ°
  ನೆಗೆಗಾರ°

  {ಸಾಲೆತ್ತೂರಿಂದ ಕುಂಡಡ್ಕಕ್ಕೆ ಜಾಸ್ತಿ ದೂರ ಏನಿಲ್ಲೆ. ನೀರ್ಚಾಲಿಂದ ಸೂರಂಬೈಲಿಂಗೆ ಹೋದಷ್ಟು ಅಕ್ಕೋ ಏನೋ!
  ಅಷ್ಟೂ ಆಗ.
  ಜಾಸ್ತಿ ಆದ ಹಾಂಗೆ ಕಾಣ್ತು ನವಗೆ – ಎಂತಗೆ ಹೇಳಿತ್ತುಕಂಡ್ರೆ, ಅಲ್ಯಾಣ ಮಾರ್ಗ ಹಾಂಗಿದ್ದು.}
  ಎಂಗಳ ಕರ್ನಾಟಕ ಲಾಯ್ಕಿಲ್ಲೆ, ಕೇರಳವೇ ಲಾಯ್ಕ ಹೇಳಿ ಇದರ ಅರ್ಥವೋ? ನಿಂಗೊಳ ಸುಮ್ಮನೆ ಬಿಡೆ… ಶೊಭಕ್ಕ ಮತ್ತೆ ಮಂತ್ರಿ ಆಗಲ್ಲಿ, ಗುಣಾಜೆ ಮಾಣಿಯತ್ತರೆ ಹೇಳಿ ಇಲ್ಯಾಣ ಮಾರ್ಗವ ಎಲ್ಲ ಹೇಂಗೆ ಮಾಡ್ಸುತ್ತೆ ನೋಡಿ.

  [Reply]

  VA:F [1.9.22_1171]
  Rating: +1 (from 1 vote)
 5. ಗಣೇಶ ಮಾವ°

  ಒಳ್ಳೆ ಮಾಹಿತಿಯುಕ್ತ ಲೇಖನ ಒಪ್ಪಣ್ಣಾ,,ನಮ್ಮ ಸಮಾಜಲ್ಲಿ ವೈದಿಕ ಕಾರ್ಯಲ್ಲಿ ಇಪ್ಪ ಸಂಶಯಂಗ ಹೀಂಗೆ ಒಂದೊಂದೇ ದೂರ ಆಯೆಕ್ಕು…ಬ್ರಾಹ್ಮಣೋಸ್ಯ ಮುಖಮಾಸೀತ್ ಹೇಳುವ ವೇದ ವಾಕ್ಯ ಸತ್ಯವಾಗಲಿ..

  [Reply]

  VN:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಕೆಪ್ಪಣ್ದ

  ಒಪ್ಪಣ್ಣ ಎಂದಿನಂತೆ ಈ ವಾರಾವು ನಿನ್ನ ಬರಹ ಲಾಯ್ಕ ಇದ್ದು, ಓದಿ ಕೊಶಿ ಆತು.
  ಹರಿ ಸೇವೆಯ ಪ್ರಸಾದ ತಿಂಬಲೆ ರುಚಿ.
  ದೇವಕಾರ್ಯವ ವಿವರವಾಗಿ ತಿಳಿದ ನಂತರ ಎನ್ನ ಮನಸ್ಸು ಆತು ಶುಚಿ

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಮೊದಲಾಣ ಒಪ್ಪಣ್ಣ ಆದೆ ಈ ಶುದ್ದಿಲಿ ಅಲ್ಲದಾ? ಎಲ್ಲೋರಿಂಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಂಗಳ ತಮಾಷೆ, ಕುಶಾಲಿನೊಟ್ಟಿನ್ಗೆ ಚೆಂದಲ್ಲಿ ವಿವರ್ಸಿದ್ದೆ.
  ನಮ್ಮ ಹಿರಿಯೋರು ಹರಿಸೇವೆ, ದೇವಕಾರ್ಯ ಮಾಡಿಗೊಂಡು ಬಂದದು ಮುಂದಾಣ ಪೀಳಿಗೆಯೋರಿಂಗೆ ಎಲ್ಲಾ ದಿಕ್ಕೆಯೂ ದೇವರ ಕಾಂಬಲೆ ಹೇಳಿಯೇ ಆದಿಕ್ಕಲ್ಲದಾ?
  ದೇವರು ಪ್ರಕೃತಿಲಿ ಇರ್ತ°, ಪ್ರಕೃತಿಲಿ ಇಪ್ಪ ಎಲ್ಲಾ ವಸ್ತುಗಳಲ್ಲಿ ಇರ್ತ°, ಇನ್ನೊಬ್ಬನ ಮನುಷ್ಯನ ಒಳ ಇರ್ತ° ಹೇಳುವ ತತ್ವವ ನವಗೆ ಹೇಳಿ ಕೊಟ್ಟದಾದಿಕ್ಕು.
  ಹರಿಸೇವೆ ಮಾಡುವಾಗ ಮುಡಿಪ್ಪಿಂಗೆ ಗೆಣಮೆಣಸುದೆ, ನಾಣ್ಯವುದೇ ಹಾಕುತ್ತದಲ್ಲದೋ?
  ಅದರಲ್ಲಿ ನಾಣ್ಯ ಹಾಕಿದ್ದದು ವೆಂಕಟರಮಣನ್ಗೆ ಸಂದಾಯ ಅಪ್ಪಗ ಸುಮಾರು ವರ್ಷ ಆವುತ್ತಲ್ಲದಾ ಹಾಂಗೆ ನಾಣ್ಯ ಹಾಳಾಗದ್ದ ಹಾಂಗೆ ಆತು ಹೇಳಿ ಗೆಣಮೆಣಸು ಹಾಕುದಡ್ದ.
  ಗೆಣ ಮೆಣಸು ಹೇಳಿದರೆ ಒಂದು ಆಪತ್ಕಾಲಕ್ಕೆ ಧನ ಕೊಡುವಂಥದ್ದು. ಸಂಗ್ರಹ ಮಾಡಿ ಮಡಿಗಿದರೆ ಎಷ್ಟು ವರ್ಷ ಕಳುದರೂ ಹಾಳಾಗದ್ದೆ, ನವಗೆ ಯಾವಾಗ ಮಾರಿದರೂ ಅಷ್ಟೇ ಮೌಲ್ಯ ಕೊಡುವಂಥಾದ್ದು.., ಹಾಂಗೆ ಅದನ್ನೂ ಸಂಗ್ರಹಿಸಿ ಮಡಿಗಿಗೊಳ್ಳಿ ಹೇಳುವ ಸೂಚನೆ ಅದು ಹೇಳಿ ಎಂಗಳ ಅಮ್ಮ ಯಾವತ್ತೂ ಹೇಳುಗು.
  ಹೀಂಗಿಪ್ಪ ನಮ್ಮ ಅಚಾರಂಗಳಿಂದ ಅಲ್ಲದಾ ನಮ್ಮೊಳ ನಾವೆಲ್ಲಾ ಒಂದೇ ಹೇಳುವ ಭಾವನೆ ಬೆಳಕ್ಕೊಂದು ಬಂದದು.
  ಇಲ್ಲದಿದ್ದರೆ ನಮ್ಮ ಮನೆ, ಕುಟುಂಬ ಹೇಳಿ ಮನೆಯೂ, ಮನಸ್ಸೂ ಸಣ್ಣವೇ ಆಗಿರ್ತಿತ್ತು. ಅಲ್ಲದಾ ಒಪ್ಪಣ್ಣಾ?

  [Reply]

  VA:F [1.9.22_1171]
  Rating: 0 (from 0 votes)
 8. ಅಜ್ಜಕಾನ ಭಾವ

  { ಬತ್ತೆ ಹೇಳಿದ ಅಜ್ಜಕಾನಬಾವ° ಕೈಕೊಟ್ಟ ಈ ಸರ್ತಿ; ಅಂಗಿ ಹಾಕಿ ಹೆರಡ್ಳಪ್ಪಗ ಅವರಲ್ಲಿಗೆ ಬಾಬು ಬಂತಡ, ಮದ್ದು ಬಿಡ್ಳೆ. }
  ಅಪ್ಪು ಬಾವಾ ಎಂತ್ಸು ಮಾಡುದು… ಈ ಸರ್ತಿ ಬಾಬು ಮದ್ದು ಬಿಡುದರ ಪಟ ತೆಗುದು ಮಡಗಿದ್ದೆ, ಪಟದ ಪುಟಕ್ಕೆ ಅಕ್ಕು ಹೇಳಿ..

  ನಮ್ಮ ಆಚರಣೆಗೊ ಒಳಿಯೆಕ್ಕು ಹೇಳಿರೆ, ನಾವೆಲ್ಲ ಅದರಲ್ಲಿ ಬಾಗಿಯಾಯೆಕ್ಕು..
  ಜನಾರ್ಧನ ಸೇವೆ ಮಾಡಿಯೋಂಡು ಆಯುರ್, ಆರೋಗ್ಯ ಪಡೆಯುವೋ ಆಗದೋ..

  [Reply]

  VN:F [1.9.22_1171]
  Rating: 0 (from 0 votes)
 9. ಅನುಶ್ರೀ ಬಂಡಾಡಿ

  ಕುಂಡಡ್ಕಲ್ಲಿ ಹರಿಸೇವೆ-ದೇವಕಾರ್ಯ ಇದ್ದದು ಲಾಯ್ಕಾತದ. ನವಗೆಲ್ಲ ಆ ಬಗ್ಗೆ ಸವಿವರ ಶುದ್ದಿ ಸಿಕ್ಕಿತ್ತು.
  ಹರಿಸೇವೆ-ದೇವಕಾರ್ಯದ ಬಗ್ಗೆ ಇಷ್ಟೆಲ್ಲ ಮಾಹಿತಿ ಇದರ ಓದಿಯಪ್ಪಗಳೇ ಗೊಂತಾದ್ದು.
  ನಮ್ಮ ಸಂಸೃತಿ, ಆಚರಣೆಗೊ ನಶಿಸಿ ಹೋವುತ್ತಾ ಇಪ್ಪದು ತುಂಬಾ ಬೇಜಾರಿನ ಸಂಗತಿ. ಅದರ ಒಳಿಶಿ ಬೆಳೆಶುವ ಸತ್ಕಾರ್ಯಕ್ಕೆ ಈ ಬೈಲೇ ಮುನ್ನುಡಿ ಬರೆಯಲಿ. ಒಪ್ಪಣ್ಣನೊಟ್ಟಿಂಗೆ ನಾವುದೇ ಕೈಜೋಡ್ಸುವ.

  [Reply]

  VA:F [1.9.22_1171]
  Rating: 0 (from 0 votes)
 10. Karuvaje keshavabhat

  Indina dinagalli namma makko namma samskrithiyannella maretha ippadu bahala duradrustd7a vichara. Hireyau, gurugo abhipraya illave ille. Joint familya ariveye illada avakke avara bandh7ugo arude beda. Avara limited friends heledde vedavakya
  .Kelavondu manage hodare makko mataduva manassu taime beda, kanista hello heluva saujannyaude ellade aaidu. Ellorude aunti uncle helude bittare bere sambanda ellava elle heluvantha samskrthi aaidu. Dayavittu ningala manele heenge agada hange nodikolli heluva vignnapane. Naau, nammau,namma bashe achara vivharada bagge gaurava ulisi belesuva dodda jawabdari hiriyara heluva naau madadekku.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ವಿಜಯತ್ತೆಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಬೋಸ ಬಾವರಾಜಣ್ಣಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿವಿದ್ವಾನಣ್ಣಕಜೆವಸಂತ°ಮಂಗ್ಳೂರ ಮಾಣಿಶರ್ಮಪ್ಪಚ್ಚಿಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°vreddhiವಾಣಿ ಚಿಕ್ಕಮ್ಮದೊಡ್ಮನೆ ಭಾವಚುಬ್ಬಣ್ಣಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ಸಂಪಾದಕ°ಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ