ಹೆಜ್ಜೆಲಿ ಬಿದ್ದ ನೆಳವಿಂಗೂ ರೆಚ್ಚೆಲಿ ಕೂದ ನೆಳವಿಂಗೂ ಎಂತ ವೆತ್ಯಾಸ?

ಪಳಮ್ಮೆಗಳ ಶುದ್ದಿ ಓ ಮೊನ್ನೆ ಒಂದರಿ ಮಾತಾಡಿದ್ದು. ಓದಿದ್ದಿರನ್ನೇ? (ಓದದ್ರೆ ಇಲ್ಲಿದ್ದು, ಓದಲಕ್ಕು).

ಎರಡು ಸಮಾಂತರ ಪಳಮ್ಮೆಗಳ ಸೇರುಸಿ ಈ ಶುದ್ದಿ. ಎರಡುದೇ ವ್ಯಕ್ತಿತ್ವಂಗಳ ಹೇಳ್ತ ಪಳಮ್ಮೆಗೊ. ಎರಡ್ರಲ್ಲಿದೇ ’ನೆಳವು’(Fly) ಮಾದರಿ. ಎರಡುದೇ ಶುಬತ್ತೆಯ ಮಕ್ಕೊಗೆ ಹೇಸಿಗೆ ಅಪ್ಪ ಸಂದರ್ಬಂಗೊ 😉 . ಎರಡರಲ್ಲಿಯೂ ತಮಾಶೆ ಇದ್ದು.
ಪಳಮ್ಮೆ ೧: ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ:
ಮುಚ್ಚದ್ದೆ ಮಡಗಿದ ಹೆಜ್ಜೆ ಅಳಗೆಗೆ ನೆಳವು ಹಾರಿ ಬಂದು ಬಿದ್ದರೆ ಎಂತ ಗತಿ? ಹೆಜ್ಜೆ ಬೆಶಿ ಬೆಶಿ ಇದ್ದರೆ ಅದುದೇ ಊಟದೊಟ್ಟಿಂಗೆ ಸೇರಿಹೋಕು, ಅದು ಬೇರೆ.
ಹೆಜ್ಜೆ ಬೆಶಿ ಇಲ್ಲೆ ಹೇಳಿ ಆದರೆ? ಬಿದ್ದ ಆ ನೆಳವು ರಜ್ಜ ಹೊತ್ತು ಪೆಡಚ್ಚುತ್ತು. ಮತ್ತೆ ಅದರ ರೆಂಕೆ ಎಡೆಂಗೆ ಆ ಮಂದ ತೆಳಿ ಸೇರಿ ರೆಂಕೆ ಆಡುಸುಲೇ ಎಡಿತ್ತಿಲ್ಲೆ.

ಪಕ್ಕನೆ ನೋಡಿರೆ ಸತ್ತಿದೋ ಗ್ರೇಶೆಕ್ಕು, ಹಾಂಗೆ ಚೈತನ್ಯವೇ ಇಲ್ಲದ್ದೆ ತೇಲಿಗೊಂಡಿರ್ತು. ಜೀವ ಇದ್ದರೂ ಜೀವ ಇಲ್ಲದ್ದ ಹಾಂಗೆ, ಅಂತೇ ಬಿದ್ದುಗೊಂಡಿರ್ತು. ಬಿಡುಸಿಗೊಂಡು ಹೆರ ಹೋಪ ಕನಿಷ್ಠ ಪ್ರಯತ್ನವನ್ನೂ ಮಾಡದ್ದೇ! ಹುಟ್ಟಿದ ಲಾಗಾಯ್ತು ಮಾಡಿದ ’ರೆಂಕೆ ಆಡುಸುತ್ತ’ ಗುಣ ಮರದೇ ಹೋಯಿದಾ ಹೇಳಿ ಕಾಣ್ತು ಅದರ ನೋಡುವಗ.

ನಮ್ಮಲ್ಲಿ ಕೆಲವು ಜೆನವುದೇ ಹೀಂಗೆ.
ಮಾಡ್ಳೆ ತುಂಬ ಕೆಲಸ ಇದ್ದರೆ, ಅದು ಅವಕ್ಕೆ ಗೊಂತಿದ್ದರೂ, ಜೀವನಲ್ಲಿ ಯಾವುದೇ ಚೈತನ್ಯ ಇಲ್ಲದ್ದೋರ ಹಾಂಗೆ ಬಿದ್ದುಗೊಂಡು ಇರ್ತವು. ಒಟ್ಟು ಹೇಂಗಾರು ಜೀವನ ಸಾಗುತ್ತು ಹೇಳ್ತ ತತ್ವಲ್ಲಿ. ಆರತ್ರೂ ಸಮಗಟ್ಟು ವೆವಹರುಸುಲೂ ಇಲ್ಲೆ, ಆರನ್ನೂ ಜಾಸ್ತಿ ಹಚ್ಚಿಗೊಂಬಲೂ ಇಲ್ಲೆ, ಸಮಾಜದ ಯೇವ ಕಾರ್ಯಲ್ಲೂ ಜಾಸ್ತಿ ಹೊಂದಿಗೊಂಬಲೆ ಇಲ್ಲೆ- ಒಟ್ಟು ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ. 😉
ಪಳಮ್ಮೆ ೨: ರಚ್ಚೆಲಿ ಕೂದ ನೆಳವಿನ ಹಾಂಗೆ (/ ಹಲಸಿನ ಗಡಿಲಿ ಕೂದ ನೆಳವಿನ ಹಾಂಗೆ):
ಹಲಸಿನ ಕಾಯಿ ಸಮಯಲ್ಲಿ, ಮೆಟ್ಟುಕತ್ತಿ ಮಡಿಕ್ಕೊಂಡು ಹಲಸಿನ ಗಡಿ ಮಾಡ್ತವು. ಇಡಿ ಹಲಸಿನ ಕಾಯಿಯ ಗಡಿ ಮಾಡಿ, ಗಡಿಯ ಸೊಳೆಗಳ ತೆಗದು ಪಾತ್ರಕ್ಕೆ ಹಾಕಿ ರಚ್ಚೆಯ ಕರೆಲಿ ಮಡಗುತ್ತವು. ನೆಳವು ಅಲ್ಲಿಗೂ ಎತ್ತುತ್ತು. ಹಲಸಿನ ಕಾಯಿ ಕೊರೆತ್ತವನ ಕೈಲಿ ಇಡೀಕ ಮೇಣ ಆದ ಮತ್ತೆಯೇ ಅಲ್ಲದೊ ಆ ನೆಳವು ಅವನ ಮೂಗಿನ ಮೇಲೆ ಕೂರ್ತದು. ತೊರುಸುಲೂ ಅಲ್ಲ, ಬಿಡ್ಳೂ ಅಲ್ಲ – ಅದವನ ಪರಿಸ್ಥಿತಿ.
ಅದಿರಳಿ, ಹಲಸಿನ ಗಡಿಲಿಯೋ, ರಚ್ಚೆಲಿಯೋ ಕರೆ ಕರೆಲಿ ಮೇಣ ಇರ್ತು.
ನೆಳವು ಹೋಗಿ ಅದರ್ಲೇ ಕೂದರೆ? ಅದರ ಕಾಲಿಂಗಿಡೀ ಮೇಣ. ಗಡಿಗೂ ಅದರ ಕಾಲಿಂಗೂ ಅವಿನಾಭಾವ, ಬೇರ್ಪಡಿಸುಲೇ ಎಡಿಯದ್ದ ಸಂಬಂಧ ಏರ್ಪಡುತ್ತು. ರೂಪತ್ತೆಗೂ ಗುಪ್ತಗಾಮಿನಿ ಧಾರವಾಹಿಗೂ ಆದ ಹಾಂಗೆ!
ಆದರೆ ಮನಸ್ಸು ಪೂರ ಸ್ವಚ್ಚಂದವಾಗಿ ಹಾರೆಕ್ಕು, ಹೆರ ಹೋಗಿ ಸ್ವತಂತ್ರ ಆಯೆಕ್ಕು ಹೇಳಿ ಯೋಚಿಸುತ್ತು.
ಹೆರ ಹೋಯೆಕ್ಕು ಹೇಳಿ ತನ್ನ ರೆಂಕೆಯ ಜೋರು ಜೋರು ಬಡಿತ್ತು, ಚಡಪಡಿಸುತ್ತು.. ಆದರೆ ಎಡಿತ್ತಿಲ್ಲೆ. ಹಲಸಿನ ಮೇಣ ಬಿಡ್ತಿಲ್ಲೆ.

ಕೆಲವು ಸರ್ತಿ ನವಗೆ ಯೇವದೋ ಕೆಲಸ ಮಾಡೆಕ್ಕು ಹೇಳಿ ಇರ್ತು. ಆವುತ್ತಿಲ್ಲೆ.
ಹತ್ತರಾಣ ನೆಂಟ್ರಮನೆ ಜೆಂಬ್ರಕ್ಕೆ ಹೋಯೆಕ್ಕು ಹೇಳಿ ಇರ್ತು, ಆದರೆ ಮನೆಲಿ ಬೇರೆ ಜೆನ ಇಲ್ಲೆ, ಆಳುಗೊ ಮೊದಲೇ ಇಲ್ಲೆ. ಹಟ್ಟಿಲಿ ಕರೆತ್ತ ದನ ಬೇರೆ.  ಎಂತರ ಮಾಡುಸ್ಸು? ಅಲ್ಲಿಗೆ ಹೋಯೆಕ್ಕು-ಇಲ್ಲಿಗೆ ಹೋಯೆಕ್ಕು ಗ್ರೇಶುದು. ಯೇವದೂ ಎಡಿತ್ತಿಲ್ಲೆ.

ಮನೆಲಿಪ್ಪ ಬೇರೆ ’ಬಂಧನಂಗೊ’ ಬಿಡ್ತಾ ಇಲ್ಲೆ. ಹಾಂಗಿರ್ತ ಕಥೆ, ಒಟ್ಟು ’ರಚ್ಚೆಲಿ ಕೂದ ನೆಳವಿನ ಹಾಂಗೆ’ ಆವುತ್ತು.

ನೋಡದಿರಾ?
ಎರಡು ಪಳಮ್ಮೆ. ವ್ಯಕ್ತಿ ಒಂದೇ – ಅದೇ ನೆಳವು.
ಒಂದು ದಿಕ್ಕೆ ಬರೇ ಉದಾಸಿನದ ಬಡ್ಡ. ಇನ್ನೊಂದು ದಿಕ್ಕೆ ಅತ್ಯಂತ ಚುರ್ಕು.
ಒಂದೇ ವ್ಯಕ್ತಿ. ಬೇರೆ ಬೇರೆ ವ್ಯಕ್ತಿತ್ವ.
ಕಾರಣ? ವ್ಯಕ್ತಿ ಇಪ್ಪ ಪರಿಸರ.

ಎಷ್ಟೇ ಚುರ್ಕಿನ ವೆಕ್ತಿ ಆದರೂ ಅವನ ಪರಿಸರ ಇಡೀ ಉದಾಸಿನದವೇ ಆದರೆ ಬಡ್ಡ° ಆವುತ್ತ°.
ಅದೇ ರೀತಿ ಉದಾಸಿನದ ಮಾಣಿ ಒಬ್ಬ ಚುರುಕ್ಕಿನ ಪರಿಸರಲ್ಲಿ ಬೆಳದರೆ ಅವ ಉಳುದವರೊಟ್ಟಿಂಗೆ ಸೇರಿ ಒಳ್ಳೆತ ಚುರುಕ್ಕು ಆವುತ್ತ°. ಅಲ್ಲದೋ? ನಮ್ಮ ಪರಿಸರ ಒಳ್ಳೆದಿರೇಕು ಹೇಳಿ ಅಜ್ಜಿಯಕ್ಕೊ ಹೇಳುಸ್ಸು ಇದಕ್ಕೆ ಬೇಕಾಗಿಯೇ!. ಅಲ್ಲದೋ?
ಏ°?
ಎಂತ ಹೇಳ್ತಿ?

ಶಂಬಜ್ಜನ ಎರಡು ಪಳಮ್ಮೆಗಳ ಸೇರ್ಸಿ ಪುಳ್ಳಿದು ಉಪಾಯಲ್ಲಿ ಒಂದು ಶುದ್ದಿ. 😉

[ಮುಳಿಯಾಲದಪ್ಪಚ್ಚಿ ಓ ಮೊನ್ನೆ ವಿಟ್ಳಲ್ಲಿ ಸಿಕ್ಕಿ ಅಪ್ಪಗ ಪರಂಚಿದವು, ’ನಿನ್ನ ಶುದ್ದಿಗೊ ಬಯಂಕರ ಉದ್ದ ಆತು ಒಪ್ಪಣ್ಣ’ ಹೇಳಿ.  ಈ ಸರ್ತಿ ಚಿಕ್ಕ-ಚೊಕ್ಕ ಶುದ್ದಿ. ಈ ಸರ್ತಿ ಎಂತ ಹೇಳ್ತವು ನೋಡೆಕ್ಕು 🙂 ]

ಒಂದೊಪ್ಪ: ಪಳಮ್ಮೆ ಓದಿದ ಲೆಕ್ಕಲ್ಲಿ ಆದರೂ ಇಂದ್ರಾಣ ಹೆಜ್ಜೆಲಿ ನೆಳವು ಇದ್ದೋ ನೋಡಿಗೊಳ್ಳಿ. 😉

ಒಪ್ಪಣ್ಣ

   

You may also like...

9 Responses

 1. ಪುಟ್ಟಕ್ಕ.. says:

  ಎಂತ ಒಪ್ಪಣ್ಣೋ..ಉದ್ದದ ಸುದ್ಧಿ ಬರದು ಉದಾಸೀನ ಆತೋ ಹೇಂಗೆ? ಅಂದಹಾಂಗೆ ಆಚಕರೆ ಮಾಣಿಯ 'ಹೆಜ್ಜೆಲಿ ಬಿದ್ದ ನೆಣವಿನ ಹಾಂಗೆ' ಹೇಳಿ ಮಡೆಕೇರಿ ಅತ್ತೆ ಹೇಳಿಗೊಂಡಿದ್ದ ನೆಂಪು !ಆದರೆ ಈಗ ಅವಂದು ರಚ್ಚೆಲಿ ಬಿದ್ದ ನೆಣವಿನ ಹಾಂಗೆ ಆಯ್ದು ಮಿನಿಯಾ. ಅದಕ್ಕೆ ಕಾಣ್ತು ಕಳೆದ ಸಲದ ಶುದ್ಧಿಗೆ ಎಂತದೂ ಬರದ್ದನೇ ಇಲ್ಲೆ ! ಒಟ್ಟಿಲಿ ಪರಿಸರ, ಪರಿಸ್ಥಿತಿ, ಸಹವಾಸ ಮನುಷ್ಯರ ಬದಲ್ಸುತ್ತು ಹೇಳುದು ನೂರಕ್ಕೆ ನೂರು ಶತಸಿದ್ಧ. ಅಂದಹಾಂಗೆ ಒಪ್ಪಣ್ಣೋ, ನಿನ್ನದೆಂತ ಸ್ಥಿತಿ?

 2. amma says:

  oppannana blog ellinda ellige hovuttu.padlagiyana suddi hakadre bloginge maja illeya.hejjeli bidda nelavu bidu hala patralli nelavu biddare enta madte oppanno.adara tegadu unnuttilleya.happa oppannana chokke.

 3. ಬೇಂಕಿನ ಪ್ರಸಾದ says:

  'ಮಾಣಿಯ ದೊಡ್ಡ ಭಾವ' ನೀರ್ಚಾಲಿಲಿ ಹುಡ್ಕಿದರೆ ಎಲ್ಲಿ ಸಿಕ್ಕುದು???? ಆನು ಅಸ್ಸಾಮಿಂಗೆ ಟ್ರಾನ್ಸ್ವರು ಆಗಿ ತಿಂಗಳು ಮೂರು ಕಳ್ತು. ಇಲ್ಲಿ ಎನಗೆ ಒಪ್ಪಣ್ಣ ಬಿಟ್ಟರೆ ಬೇರೆ ಆರನ್ನೂ ಗೊಂತಿಲ್ಲೆ(ನೆಟ್ಟಿಲಿ). ಮೊನ್ನೆ ನೆಟ್ಟಿಲಿ ಪ್ರೆಂಡುಗ ಆರಾರು ಸಿಕ್ಕುಗೋ ಹೇಳಿ ಓಂಗಿಗೋಂಡಿಪ್ಪಗ ಈ ಒಪ್ಪಣ್ಣ ಸಿಕ್ಕಿದ ಇದಾ… ಇಲ್ಲಿ ಸುಮ್ಮನೆ ರಚ್ಚೆಲಿ ಅಂಟಿದ ಹಾಂಗೆ ಕೂಪಗ ಈ ಒಂದು ಕೆಲಸ ಸಿಕ್ಕಿದ್ದು ಬಾರೀ ಸಂತೋಷದ ಸಂಗತಿ. ವಾರ ವಾರ ಕಾವದು ಈ ಒಪ್ಪಣ್ಣಂಗೆ ಏವಗ ಪುರುಸೊತ್ತಾವುತ್ತು ಹೇಳಿಗೊಂಡು… ಬರವದು ನಿಲ್ಸಿಕ್ಕೆಡ ಮಿನಿಯಾ? ನೀನು ಹಾಂಗೆಂತಾರು ಮಾಡಿದರೆ ಮತ್ತೆ ಒಬ್ಬ ಒಳ್ಳೆಯ ಮಾಣಿ ಪಬ್ಬಿಂಗೆ ಹೋಗಿ ಹಾಳಪ್ಪಲೆ ನೀನೆ ಕಾರಣ ಆವ್ತೆ…. ಜಾಗ್ರತೆ.

 4. ಆಚಕರೆ ಮಾಣಿ says:

  ಏ ಭಾವ…. ಇದು ಚೆಂದ ಆಯಿದು…. ಮೂರೇ ಪೇರಗ್ರಾಫಿನ ಒಪ್ಪ… ಓದುಲೂ ಸುಲಾಬ. ಬದಿಯಡ್ಕಕ್ಕೆ ಕೆಮ್ಕಕ್ಕೆ ಬಂದಿಪ್ಪಗ ಹೆಚ್ಚು ಪುರುಸೊತ್ತಿರ್ತಿಲ್ಲೆ ಇದಾ…. ಬೇಗ ಓದಿ ಮುಗಿಶುಲೆ ಒಳ್ಳೆದು.

  ಅದ್ದಾ…. ಒಂದು ನೆಳವು ಕಾಪಿಗೆ ಬಿದ್ದತ್ತು… ಎನ್ನಂದೆಡಿಯ ಈ ನೆಳವುಗಳ ಕಿತಾಪತಿಲಿ… ಪುಟ್ಟಕ್ಕ ಭಾರೀ ಕಷ್ಟಪಟ್ಟು ಒಂದು ಕಾಪಿ ಹೆಳ್ತ ಸಾಮಾನು ಮಾಡಿ ತಂದದು. ಅದೂ ಹೋತು. ಹಾಳಾದ ನೆಳವು.

  ಮತ್ತೆ ನಮ್ಮ ಡೈಮಂಡು ಭಾವ ಮೊನ್ನೆ ಎಂತದೋ ಹೇಳಿತ್ತಿದ್ದ ನೆಳವುಗಳ ಬಗ್ಗೆ, ಎಂತ ಹೇಳಿ ಮರತ್ತೆ. ಅವನತ್ತರೆಯೆ ಕೇಳೆಕ್ಕಷ್ಟೆ.

  ಹೇಳ್ತ ಹಾಂಗೆ , ಮೇಲೆ ತೋರ್ಸಿದ ಪಟಲ್ಲಿ ನೆಳವು ಯೇವ ಜಾಗ್ಗೆ ಬೀಳ್ತಾ ಇಪ್ಪದು? ಹೆಜ್ಜಗಾ? ಅಲ್ಲ ರಚ್ಚಗಾ?

 5. ವಜ್ರೋತ್ತಮ says:

  ಒಪ್ಪಣ್ಣಂಗೆ ಸಣ್ಣಕ್ಕೆ ಬರವಲೆ ಗೊಂತಿದ್ದು ಹೇಳಿ ಆತು. ಸತ್ಯ ಹೇಳೆಕ್ಕಾ ಬಾವ ಆ ನವರಾತ್ರಿಯ ಬಗ್ಗೆ ಲೇಖನವ ಆನು ಓದಿದ್ದಿಲ್ಲೆ ಆತಾ.. ಅದರ ಉದ್ದ ನೋಡಿ. ಮುಳಿಯಾಲ ಅಪ್ಪಚ್ಚಿಗೆ ಎಲ್ಲರೂ ಕೃತಜ್ಞರಾಗಿರೆಕ್ಕು ಇದಾ..
  ಹಾಂಗಾರೆ ನಮ್ಮ ಬೇಂಕಿನ ಬಾವ ಅಸ್ಸಾಮಿಂಗೆ ಹೋಯಿದನಾ..ನಕ್ಸಲರು ಇದ್ದವು ಬಾವ ಹೇಳಿಕ್ಕು ಮಿನಿಯಾ….
  ಹೇಳಿದ ಹಾಂಗೆ ಮೊನ್ನೆ ಆಚಕರೆ ಮಾಣಿ ನೊರಂಜಿಯ ಬಗ್ಗೆ ಲೆಕ್ಚರು ಬಿಡ್ತಾ ಇತ್ತಿಂದಾ ….ಎಂತಾತಪ್ಪ ಅವನತ್ತರೆ ಕೇಳೆಕಷ್ಟೇ…

 6. Shyam says:

  ರೆಚ್ಚೆ ಬಿಟ್ಟರೂ ಬೂಂಜು ಬಿಡ ಹೇಳಿಯೂ ಹೇಳ್ತವಪ್ಪ ! 🙂

 7. ಕೆಳಾಣ ಮನೆ ಶಾಸ್ತ್ರಿ says:

  ಅದು ಹಾಂಗಲ್ಲ, ಮಕ್ಕ ಜಗಳ ಮಾಡಿಗೊಂಬಗ ಹೇಳುವ ಮಾತದು. ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ ಹೇಳಿ. ಆರೂ ಸೋಲೊಪ್ಪುಲೆ ತಯಾರಿಲ್ಲದ್ದೆ ಇಪ್ಪಗ ಹೇಳುವ ಮಾತದು.

  ಒಪ್ಪಣ್ಣ ಲಾಯಿಕ್ಕ ಬರೆತ್ತಾ ಇದ್ದೆ. ಸುಮಾರು ಸಮೆಯಂದ ಗಮನಿಸ್ತಾ ಇದ್ದೆ. ಖುಶೀ ಆವ್ತು ನಮ್ಮೋರ ಮಕ್ಕಳ ಕ್ರಿಯೇಟಿವಿಟಿ ಕಂಡು. ಕೀಪ್ ಇಟ್ ಅಪ್

 8. deepakka says:

  sadya deepakkana maneli heli heliddilleanne,mundana oppada nireeksheli………..

 9. oppi says:

  ಒಳ್ಳೆ ಪಳಮ್ಮೆಗೊ…
  ವ್ಯಕ್ತಿಯ ವ್ಯಕ್ತಿತ್ವ ಅವ ಬೆಳದ ಪರಿಸರದ ಪ್ರತಿಬಿಂಬ ಹೇಳ್ತದು ನೂರಕ್ಕೆ ನೂರು ಸತ್ಯದ ಮಾತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *