Oppanna.com

ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..!

ಬರದೋರು :   ಒಪ್ಪಣ್ಣ    on   06/08/2010    52 ಒಪ್ಪಂಗೊ

ನಮ್ಮೋರಲ್ಲಿ ಮದಲಿಂಗೇ ಹಾಂಗೆ, ಕೈಲಿ ರಜಾ ಪೈಸೆ ತುಂಬಿರೆ ಅದರ ಕಳವಲೆ ಎಂತಾರು ದಾರಿ ನೋಡುಗು.
ಒಂದೋ ಎಲ್ಲೊರನ್ನೂ ದಿನಿಗೆಳಿ ಒಂದು ಜೆಂಬ್ರ ತೆಗಗು, ಅಲ್ಲದ್ದರೆ ಆರನ್ನಾರು ದಿನಿಗೆಳಿ ಒಂದು ನಂಬ್ರ ತೆಗಗು.

ನಂಬ್ರ ಮಾಡುದು ಹೇಳಿರೆ ನಿಂಗೊಗೆ ಅರಡಿಯದೋ ಏನೋ-
ಏವದೇ ಕೇಸು ರಿಜಿಸ್ತ್ರಿ ಆಗಿ ಕೋರ್ಟಿಂಗೆ- ಎತ್ತಿರೆ ಇಂತಾ ಕೇಸಿಂಗೆ ಇಂತಾ ನಂಬ್ರ- ಹೇಳಿ ಬರಕ್ಕೊಂಗಿದಾ;
ಹಾಂಗೆ – ಕೋರ್ಟಿಲಿ ವಿಚಾರಣೆ ಆಗಿಯೊಂಡಿಪ್ಪ ಕೇಸಿಂಗೆ ನಂಬ್ರ ಹೇಳಿ ಹೆಸರು.
ಯೇವ ಕಾಲಕ್ಕೂ ಮುಗಿಯದ್ದ ನಂದಾದೀಪ ಅದೊಂದು.

ನಮ್ಮೋರಲ್ಲಿ ನಂಬ್ರಂಗೊ ಈಗೀಗ ರಜ ಕಮ್ಮಿ ಆದರೂ, ಮದಲಿಂಗೆ ಅದು ಧಾರಾಳ!
ಅಜ್ಜಂದ್ರು ಯೇವದೋ ಕೆಟ್ಟ ಗಳಿಗೆಲಿ ಸುರು ಮಾಡುದು – ಒಂದು ತಕರಾರು, ಅವರ ಮಕ್ಕಳಕಾಲಕ್ಕಪ್ಪಗ ಅದು ಹಳಸಿರ್ತು.  ಅವರ ಮಕ್ಕೊಗೆ ಪರಸ್ಪರ ಯಾವ ಮನಸ್ತಾಪವೂ ಇರ್ತಿಲ್ಲೆ.
ಆದರೂ ಅದನ್ನೇ ಮುಂದರುಶಿಗೊಂಡು ಹೋವುತ್ತವಿದಾ – ಅಪ್ಪನ ಮೇಗಾಣ ಭಯಭಕ್ತಿಯ ಮೇಲೆ..
ಅದುವೇ ಇಂದ್ರಾಣ ಶುದ್ದಿ.
~
ಇದು ಆಚಬೈಲಿನ ಶುದ್ದಿ, ನಮ್ಮ ಬೈಲಿಂದಲ್ಲ –
– ಅಲ್ಲಿ, ಮೇಗಾಣ ಮನೆಗೂ ಕೆಳಾಣ ಮನೆಗೂ ಹೋಕ್ವರ್ಕಿಲ್ಲೆ.
ಹೋಕುವರುಕ್ಕು ಇಲ್ಲೆ ಹೇಳಿರೆ ಮದಲಿಂಗೇ ಇಲ್ಲೆ – ಒಂದು ನೂರುನೂರೈವತ್ತು ಒರಿಶ ಮದಲಿಂಗೇ!
ಮೂವತ್ತೊರಿಷಕ್ಕೆ ಒಂದು ತಲೆಮಾರು ಲೆಕ್ಕ ಇದಾ – ಹಾಂಗೆ ಇದೊಂದು ಸಾಮಾನ್ಯ ಐದು ತಲೆಮಾರು ಹಿಂದಾಣ ಶುದ್ದಿ.
ಅಂಬಗಾಣ ಅಜ್ಜಂದ್ರ ಜಗಳ!!
ಆ ಕಾಲದ ಜವ್ವನಿಗರು ಕಡ್ಪ ಜಾಸ್ತಿ – ಏನಾರು ಆಗದ್ದೆ ಬಂದರೆ ಪಕ್ಕನೆ ಹೇಳಿಬಿಡುಗು, ಕಣಿಯಾರಕ್ಕೋ, ಧರ್ಮಸ್ಥಳಕ್ಕೋ ಮಣ್ಣ!

ಹ್ಮ್, ಧರ್ಮಸ್ಥಳಕ್ಕೆ ಹೇಳುದು ಹೇಳಿರೆ, ಯೇವದಾರು ಜಗಳ ಸುರು ಮಾಡಿರೆ ಅದರಲ್ಲಿ ಸರಿ ಆರದ್ದು ತಪ್ಪು ಆರದ್ದು ಹೇಳ್ತ ತೀರ್ಪು ಆ ಧರ್ಮಸ್ಥಳ ಮಂಜುನಾಥನೇ ಕೊಡಲಿ ಹೇಳಿ ನಂಬಿಗೊಂಬದು.
ಧರ್ಮಸ್ಥಳದವಂಗೆ ತೀರ್ಪಿನ ಬಿಟ್ಟಾಯಿದು, ಇನ್ನು ಅವ ತೀರ್ಪು ಕೊಡುವನ್ನಾರ ಪರಸ್ಪರ ಯೇವದೇ ವೆವಹಾರ ಮಾಡ್ಳಿಲ್ಲೆ!
ವೆವಹಾರ ಮಾಡುದೆಲ್ಲಿಗೆ, ಅಲ್ಲಿಂದ ಮತ್ತೆ ಮಾತುಕತೆಯೇ ಇಲ್ಲೆ!!
~

ಆಚಬೈಲಿನ ಆ ಮೇಗಾಣ ಮನೆ ಮಾಪಣ್ಣಜ್ಜನೂ, ಚುಬ್ಬಣ್ಣಜ್ಜನೂ ಇಬ್ರುದೇ ಕಾಸಾ ಅಣ್ಣತಮ್ಮಂದ್ರು. ಆದರೂ ಪರಸ್ಪರ ಅವು ಮಾತಾಡಿದ್ದು ಕೇವಲ ಸುರುವಾಣ ನಲುವತ್ತೊರಿಶ ಮಾಂತ್ರ!!
ಅಷ್ಟೊರಿಶಲ್ಲಿ ಅವು ಬೆಳದು ಅವಕ್ಕೆ ಮದುವೆ ಆಗಿ ಮಕ್ಕೊ ಆಗಿಯೂ ಆಯಿದು.
ಅವಕ್ಕೆ ನೆಡುಪ್ರಾಯ ಬಪ್ಪಗ ಅವರ ಅಪ್ಪ ತೀರಿಹೋಗಿ ಜಾಗೆ ಪಾಲುಮಾಡಿಗೊಂಡವು!

ಪಾಲುಮಾಡಿದವು, ಎಂತರ – ಜಾಗೆಯ ಮಾಂತ್ರ.
ಆದರೆ ಆ ಜಾಗೆಗೆ ಕೆರೆ ಒಂದೇ ಇದ್ದದಿದಾ – ಹಾಂಗೆ ಆ ಕೆರೆಯ ಪಾಲುಮಾಡ್ತದು ಹೇಂಗೆ – ಹಾಂಗಾಗಿ ನೀರಿನ ಹಂಚಿಗೊಂಡವು.

ಅಂಬಗ ಗೆದ್ದೆ ಇದಾ – ಸಣ್ಣ ಹಿಡ್ವಳಿ, ನೀರು ಬೇಕು ಧಾರಾಳ.
ಹಾಂಗೆ ಅಣ್ಣ- ತಮ್ಮ ಇಬ್ರುದೇ ಗೆದ್ದೆ ಬಿತ್ತಲೆ ಸುರುಮಾಡಿದವು. ಸೆಸಿ ಬೆಳತ್ತು, ಮೇಗೆ ಬಂತು.
ಜೊಟ್ಟೆ(ಏತ) ಮೊಗಚ್ಚಿ ಗೆದ್ದಗೆ ಬಿಡುದು. ಒಬ್ಬೊಬ್ಬಂದು ಒಂದೊಂದು ಜೊಟ್ಟೆ. ಕೆರೆ ಒಂದು, ಪಾಲೆರಡು.
ಒಂದೇ ಕೆರೆಂದ ನೀರಿನ ಹಂಚಿಗೊಂಬದು ಬಾರಿ ಕಷ್ಟ ಇದಾ – ಆಚವಂಗೆ ಹೆಚ್ಚು ಸಿಕ್ಕಿತ್ತು, ಎನಗೆ ಕಮ್ಮಿ ಸಿಕ್ಕಿತ್ತು ಹೇಳಿ ಒಂದು ಸಣ್ಣ ಸಂಶಯ ಇಬ್ರಿಂಗೂ ಸುರು ಆತು!

ಇಬ್ರುದೇ ಕಷ್ಟಪಟ್ಟು ಗೆದ್ದೆ ಬೆಳೆಶಿ, ಬತ್ತ ಮಾಡಿಯೇ ಹೊಟ್ಟೆ ತುಂಬೆಕ್ಕಷ್ಟೆ –  ಹಾಂಗಾಗಿ ಇಬ್ರಿಂಗೂ ಅದು ಒಂದೊರಿಶದ ಜೀವನದ ಪ್ರಶ್ಣೆ –
ಗೆದ್ದಗೆ ನೀರಿಲ್ಲದ್ರೆ ಆ ಒರಿಶ ಜೀವನವೇ ಇಲ್ಲೆ!

ಮಾಪಣ್ಣಜ್ಜ ಅನ್ಯಾಯ ಮಾಡಿದವು ಹೇಳಿ ಚುಬ್ಬಣ್ಣಜ್ಜನೂ, ಚುಬ್ಬಣ್ಣಜ್ಜ ಬೆನ್ನಿಂಗೆ ಪೀಶಕತ್ತಿ ಇಳುಸಿದವು ಹೇಳಿ ಮಾಪಣ್ಣಜ್ಜನೂ ನಂಬಿಗೊಂಡವು.
ಸಂಶಯ ಜಗಳಕ್ಕೆ ತಿರುಗಿ, ಕ್ರಮೇಣ ಬಾಯಿಮಾತು ಜೋರು ಜೋರಾಗಿ ಒಂದು ದೊಡ್ಡ ತಕರಾರೇ ಆತು ಅದು.
ಇಬ್ರುದೇ ಒಂದು ನಂಬ್ರ ತೆಗದೇ ತೆಗದವು. ನಂಬ್ರ ತೆಗದೇ ತೆಗಗು ಹೇಳಿ ನೆರೆಕರೆಯೋರುದೇ ಅಂದಾಜಿ ಮಾಡಿತ್ತಿದ್ದವು!

ಎರಡು ಮನೆಗೂ ಹೋಕ್ವರ್ಕು ಇಲ್ಲದ್ದೆ ಆತು.
ಕೋರ್ಟಿಲಿ ಕೇಸು ನಡವಲೆ ಸುರು ಆತು. ಒಂದೇ ಬೈಲಿಂದ, ಒಂದೇ ದಾರಿಲಿ, ಒಂದೇ ಹೊತ್ತಿಂಗೆ ಇಬ್ರು ಅಜ್ಜಂದ್ರೂ ಬೇರೆ ಬೇರೆ ಆಗಿ ವಿಚಾರಣೆಗೆ ಹೋಯ್ಕೊಂಡು ಇತ್ತಿದ್ದವು – ಸಾವಲ್ಲಿಯೊರೇಂಗೆ.

ಅವರ ಅಹಂ ರಜ ಏರಿದ್ದು ಅವರ ಕೆಲಸದೋರು ಕುತ್ತಿಕೊಟ್ಟದರಿಂದ ಅಡ – ಅಂಬಗಾಣ ಕಾಲದವು ಮಾತಾಡಿಗೊಂಬಲೆ ಬೆಶಿಬೆಶಿ ಶುದ್ದಿ ಅಡ.
ಕೆಲವು ಜನ ಕೆಲಸದೋರು ಹಾಂಗೇ ಅಡ – ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಶುದ್ದಿ ಹೇಳುದು.
ಅಲ್ಲಿಯಾಣ ಶುದ್ದಿ ಇಲ್ಲಿ ಹೇಳಿತ್ತುಕಂಡ್ರೆ ಇಲ್ಲಿ ಎಂತಾರು ಸಿಕ್ಕುಗು. ಹಾಂಗೆಯೇ ಅಲ್ಲಿದೇ – ಹೇಳುದು ಹೇಳಿರೆ ಅದಕ್ಕೆ ರಜ ಸೇರುಸಿಯೇ ಹೇಳುದು – ಚಾಡಿ ಹೇಳ್ತ ನಮುನೆಲಿ.
ಒಟ್ಟಿಲಿ ಅವರ ಲಾಬ ಅವು ನೋಡಿಗೊಂಗು. ಆಚೀಚೊಡೆಲಿ ಕಿಚ್ಚು ಹೊತ್ತಿ ಉರುದರೆ ಅವಕ್ಕೆಂತ. ಅದು ನಂದದ್ದ ಹಾಂಗೆ ತುಪ್ಪ ಸುರುಕ್ಕೊಂಡಿದ್ದರೆ ಅವರ ಜೀವನ ನೆಮ್ಮದಿಲಿ ನಡೆಗು.
~
ಕುತ್ತಿಕೊಟ್ಟದರ ಕೇಳ್ತದು ಹಿತ್ತಾಳೆಕೆಮಿ ಅಡ! ಕೋರ್ಟಿಲಿ ನಂಬ್ರ ನಡೆತ್ತಾ ಇದ್ದರೂ ಸಾಲ – ಇಷ್ಟೆಲ್ಲ ಅನ್ಯಾಯ ಮಾಡಿದವಂಗೆ ದೇವರೇ ಗೆತಿ ಮಾಡೆಕ್ಕು ಹೇಳ್ತದು ಮಾಪಣ್ಣಜ್ಜ ಗ್ರೇಶಿ ಬಿಟ್ಟವು.
ಒಂದು ಹಂತಲ್ಲಿ ಮಾಪಣ್ಣಜ್ಜ ಹೇಳಿಯೇ ಬಿಟ್ಟವು – ಅಕ್ಕಂಬಗ, ನ್ಯಾಯ ಏವದೋ ಧರ್ಮಸ್ಥಳದವ° ಕಂಡಾಂಗಿರಳಿ – ಹೇಳಿಗೊಂಡು!
ಚುಬ್ಬಣ್ಣಜ್ಜಂಗೂ ತಾನುಸರಿ ಹೇಳಿಯೇ ನಂಬಿಕೆ, ಅಕ್ಕಂಬಗ, ಅನ್ಯಾಯ ಮಾಡಿದವನ ನಾಲಗೆ ಕಾನತ್ತೂರಿಂಗೆ ಹೋಗಿ ಬೀಳಲಿ – ಹೇಳಿದವು.

ಆತಲ್ಲಿಗೆ,

ಒಬ್ಬ ಧರ್ಮಸ್ಥಳಕ್ಕೂ, ಇನ್ನೊಬ್ಬ ಕಾನತ್ತೂರಿಂಗೂ ಹೇಳಿದವು.
ಮನೆ ಒಳ ಅಜ್ಜಿಯಕ್ಕೊಗೆ ಬಾರೀ ಅನ್ಯೋನ್ಯ, ಆದರೆ ಮನೆಲಿ ಹೀಂಗಾತು. ಎಂತರ ಮಾಡುದು!
ಸಂಬಂದ ಸರಿ ಆಯೆಕು ಹೇಳಿ ಎರಡೂ ಮನೆಯ ಎಲ್ಲೊರಿಂಗೂ ಇದ್ದು, ಯೆಜಮಾನಕ್ಕಳ ಬಿಟ್ಟು!!

ಅದಿನ್ನು ಸರಿ ಆಯೆಕ್ಕಾರೆ ಮಾತಾಡಿಗೊಂಡ ಇಬ್ರುದೇ ಒಟ್ಟಾಗಿ ಸುರೂವಿಂಗೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ದೇವರ ಸನ್ನಿಧಿಲಿ ತಪ್ಪುಕಟ್ಟಿಕ್ಕಿ (ತಪ್ಪುಕಾಣಿಕೆ ಕಟ್ಟಿಕ್ಕಿ) ಬರೆಕ್ಕು,
– ಅದಾದ ಮತ್ತೆ ಇಬ್ರುದೇ ಕಾನತ್ತೂರಿನ ಬೂತದತ್ರಂಗೆ ಹೋಗಿ ಅಲ್ಲಿಯೂ ತಪ್ಪುಕಟ್ಟಿಕ್ಕಿ ಬರೆಕ್ಕು.
ಎರಡೂ ದಿಕ್ಕಾಣ ಪ್ರಸಾದ ತೆಕ್ಕೊಂಡ ಮತ್ತೆ ಪರಸ್ಪರ ಯೇವದೇ ವೆವಹಾರ ಸುರು ಮಾಡ್ಲಕ್ಕು – ಮಾತಾಡುದರಿಂದ ಹಿಡುದು!
ಅಲ್ಲಿಯವರೆಗೆ ಪರಸ್ಪರ ನೀರುದೇ ಕುಡಿವಲಾಗ – ಹೇಳ್ತದು ನಂಬಿಕೆ.
~

ಅಲ್ಲಿಂದ ಮತ್ತೆ ಅವಕ್ಕೆ ಹೋಕ್ವರುಕ್ಕು ಇಲ್ಲೆ!
ಒಂದೇ ಕೆರೆಯ ನೀರಾದರೂ, ಇವ° ಎಳದ್ದರ ಅವ ಕುಡಿಯ, ಅವ° ಎಳದ್ದರ ಇವ° ಕುಡಿಯ!
ಕೆರಗಾ ಮಣ್ಣ ಈ ಸಂಗತಿ ಗೊಂತಾಗಿದ್ದರೆ ಬಿದ್ದು ಬಿದ್ದು ನೆಗೆಮಾಡ್ತಿತು – ಅಲ್ಲದೋ?
~

ಸುರುವಿಂಗೆ ರಜ ಒರಿಶ ಪರಸ್ಪರ ಮಾತುಕತೆಯೇ ಇತ್ತಿಲ್ಲೆಡ, ಎರಡು ಮನೆಗೆ.
ಕೆರೆಬುಡಲ್ಲಿ ಅಜ್ಜಿಯಕ್ಕೊ, ಮನೆಯೋರು ಎಲ್ಲ ಮಾತಾಡಿಗೊಂಗು – ರಜರಜ, ಕದ್ದುಕದ್ದು.
ಅಜ್ಜಂದ್ರಿಂಗೆ ಗೊಂತಾಗದ್ದ ಹಾಂಗೆ! 😉

ಮತ್ತೆ ಮತ್ತೆ ಅಜ್ಜಂದ್ರಿಂಗೆ ಪ್ರಾಯ ಆತು, ಒಯಿವಾಟು ಕಮ್ಮಿ ಆತು.

ಜಾಗೆಗೆ ಗಡಿ ಇಲ್ಲದ್ರೂ ಮನಸ್ಸಿಂಗೆ ಗಡಿ ಇತ್ತು!!

ಎಡಿಗಾದಪ್ಪನ್ನಾರವೂ ಕೋರ್ಟಿಂಗೆ ಹೋಯ್ಕೊಂಡಿತ್ತಿದ್ದವು – ಬೇರೆಬೇರೆ!
ಅಜ್ಜಂದ್ರ ಒಯಿವಾಟು ಕಮ್ಮಿ ಆದಷ್ಟು, ಮನೆಯೋರು ಮಾತಾಡಿಗೊಂಬದು ಜಾಸ್ತಿ ಆತು.
ಕಾಲಕ್ರಮೇಣ ಮಾಪಣ್ಣಜ್ಜಂಗೆ ಆಯುಶ್ಶ ತೀರಿ, ತೀರಿಗೊಂಡವು – ರಜ ಒರಿಶಲ್ಲಿ ಚುಬ್ಬಣ್ಣಜ್ಜಂದೇ.

ಅಜ್ಜಂದ್ರು ತೀರಿಗೊಂಡಮೇಗುದೇ ಸೂತಕ ಆಚರಣೆ ಮಾಡಿಗೊಂಡವು, ಆದರೆ ಪರಸ್ಪರ ಬಯಿಂದವಿಲ್ಲೆ – ಆ ಅಜ್ಜಂದ್ರ ಮಕ್ಕೊಗೆ ಅವರವರ ಅಪ್ಪನ ಮೇಗೆ ಇದ್ದ ಭಯಭಕ್ತಿ ಕಾರಣ ಅಡ.
ಎನ್ನಪ್ಪ ಮಾತು ಕೊಟ್ಟಿದವು, ಹಾಂಗಾಗಿ ಆಚಮನೆ ನೀರು ಕುಡಿವಲಿಲ್ಲೆ – ಹೇಳಿಗೊಂಡು  ಅವುದೇ ಸಂಬಂದ ಸರಿ ಮಾಡಿಗೊಂಡವಿಲ್ಲೆ.
ಮತ್ತೆ ಮತ್ತೆ ಆಚೀಚ ಮನೆಗಳ ಒಯಿವಾಟು ಬದಲಿಬದಲಿ – ದೂರದೂರವೇ ಆತಷ್ಟೇ ವಿನಾ, ಮತ್ತೆ ಒಂದಪ್ಪ ಪ್ರಯತ್ನವೇ ಆಯಿದಿಲ್ಲೆ…

ಎರಡೂ ಕೂಟದೋರಿಂಗೂ ಅವರ ಹೆರಿಯೋರ ಮೇಗಾಣ ಭಯಬಗ್ತಿ ಇನ್ನೂ ಒಂದಾಗದ್ದ ಹಾಂಗೆ ಮಾಡಿಗೊಂಡತ್ತೋ ಏನೋ!
ಉಮ್ಮಪ್ಪ, ಮಾತಾಡುದು ಮಾತಾಡಿಗೊಂಡೇ ಇತ್ತಿದ್ದವು – ಆದರೆ ಆಚ ಮನೆಗೆ ಈಚ ಮನೆಯೋರು ಹೋಗಿ ಬಪ್ಪದಿಲ್ಲೆ…
ಅಜ್ಜಂದ್ರು ಮಾಡಿದ ನಂಬ್ರದ ಕೇಸು ನಡಕ್ಕೊಂಡೇ ಇತ್ತು.
ಇಬ್ರ ಮಕ್ಕಳೂ ಕೋರ್ಟಿಂಗೆ ಹೋಯ್ಕೊಂಡಿತ್ತಿದ್ದವು – ಒಂದೇ ಬಸ್ಸಿಲಿ.
~

ಆ ತಲೆಮಾರುಗೊ ಮುಗಾತು.
ಅಂದು ಜಗಳ ಮಾಡಿಗೊಂಡ ಅಜ್ಜಂದ್ರ ಮಕ್ಕೊಗೇ ಸುಮಾರು ತಿತಿ ಕಳಾತು.
ಮೊದಲು ಎರಡೇ ಮನೆ ಇದ್ದದು ಈಗ ಆರೇಳು ಆಯಿದು. ಒಂದು ಕುಟುಂಬ, ಎರಡು ಕೂಟ, ಆರೇಳು ಮನೆ..

ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!
ಮದಲಾಣ ಅಜ್ಜಂದ್ರ ಜಾಗೆಯ ಪಾಲಿಲಿ ತುಂಡುತುಂಡು ಮಾಡಿಗೊಂಡ ಕಾರಣ ಹಿಡುವಳಿ ಸಣ್ಣ ಸಣ್ಣ ಆತು. ಇವರ ಮನೆ ಹತ್ತರತ್ತರೆ ಬಂತು.
ಅವು ತೋಟಲ್ಲಿ ಸಿಕ್ಕಿರೆ ಎಷ್ಟುದೇ ಮಾತಾಡುಗು – ಪೇಟಗೆ ಒಟ್ಟಿಂಗೇ ಹೋಕು.
ಕೋರ್ಟು ಕೇಸಿಂಗುದೇ ಅನ್ಯೋನ್ಯಲ್ಲಿ ಮಾತಾಡಿಗೊಂಡು ಹೋಗಿ ವಿಚಾರಣೆ ಮುಗುಶಿ ಒಟ್ಟಿಂಗೇ ಬಕ್ಕು.
ಕಾಸ್ರೋಡಿಂದ ಒಬ್ಬಂಗೆ ಎಂತಾರು ತಪ್ಪಲಿದ್ದರೆ ಇನ್ನೊಬ್ಬಂಗೆ ಪೇಟಗೆ ಹೋಪಲಿದ್ದರೆ – ಧಾರಾಳ ಕೈಸಕಾಯ ಮಾಡಿಗೊಂಗು.

ಅವಿಬ್ರು ಪರಸ್ಪರ ಮಾತಾಡುವಗ ಅವರ ಜಾಗಗೆ ಇವು, ಇವರ ಜಾಗಗೆ ಅವು ಬಕ್ಕು. ಬಂದು ಬಂದು ಕೆಲವು ಸರ್ತಿ ಜಾಲಿಂಗೂ ಎತ್ತುಗು. ಮಾತಾಡಿಗೊಂಡೇ ಸೀತ ಮನೆಗೂ ಬಂದು ಬಿಡುಗು. 😉
ಆದರೂ…

ಈ ಮನೆಯೋರು ಆಚ ಮನೆಯವರ ನೀರು ಕುಡಿಯವು, ಅವು ಇಲ್ಯಾಣ ನೀರು ಮುಟ್ಟವು. ತಲೆತಲಾಂತರಂದ ಬಂದ ನಂಬಿಕೆಯ ಹಾಂಗೆ ಇದರ ಒಂದು ನಿಷ್ಠೆಲಿ ಆಚರುಸುಗು.
ಕೇಳಿರೆ ಹೇಳುಗು – ಎಂಗೊಗೆ ಹೋಕ್ವರುಕ್ಕು ಇಲ್ಲೆ ಹೇಳಿಗೊಂಡು. ಅಜ್ಜ ನೆಟ್ಟ ಆಲದ ಮರಕ್ಕೆ ನೇಲುದು ಹೇಳ್ತ ಹಾಂಗೆ.
~

ಮೊದಮೊದಲು ಹೋಕು – ಬರುಕ್ಕು (ಹೋಪದು, ಬಪ್ಪದು) ಎರಡೂ ಇಲ್ಲದ್ದು ಕ್ರಮೇಣ ಪರಸ್ಪರ ಮಾತಾಡ್ಳೆ ಸುರು ಆವುತ್ತು.
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!
ಅಲ್ಲಿಂದ ಮತ್ತೆ ಮಾತಾಡಿಮಾತಾಡಿ ಪರಸ್ಪರ ಜಾಗೆ ಪ್ರವೇಶ ಸುರು ಆವುತ್ತು.
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!
ಅಲ್ಲಿಂದ ಮತ್ತೆ ಮೆಲ್ಲಂಗೆ ಮನಗೆ ಬಪ್ಪದು ಸುರು ಆವುತ್ತು!
ಆದರೂ ಹೋಕ್ವರುಕ್ಕು ಇಲ್ಲೆ ಹೇಳಿಯೇ ಲೆಕ್ಕ!

ಇಲ್ಲೆ ಹೇಳಿರೆ ಇಲ್ಲಲೇ ಇಲ್ಲೆ ಹೇಳಿ ಲೆಕ್ಕ ಅಲ್ಲ!!
ಹೋಪದಿದ್ದು, ಬಪ್ಪದಿದ್ದು – ಆದರೆ ಜೆಂಬ್ರಕ್ಕೆ ಹೋಪಲಿಲ್ಲೆ, ಹಸ್ತೋದಕ ಉಂಬಲಿಲ್ಲೆ – ನಿತ್ಯಕ್ಕೆ ಮಾಂತ್ರ ಹೋಪದು – ಹೀಂಗೆಲ್ಲ ಪಿರಿಗೊ ಸುರು ಆವುತ್ತು.

ಈಗ ರಜ ಕಮ್ಮಿಯೋ ಏನೋ – ಮದಲಿಂಗೆ ನಮ್ಮ ಊರಿಲಿ ಎಷ್ಟೂ ಇತ್ತು, ಹೀಂಗಿರ್ತ ಹೋಕುವರುಕ್ಕು ಇಲ್ಲದ್ದ ಮನೆಗೊ.
ಅದೊಂದು ನಂಬಿಕೆ – ಅಂದು ಅಜ್ಜಂದ್ರ ಒಯಿವಾಟಿಲಿ ಆ ಜಗಳವ ಮಂಜುನಾತಂಗೆ ಬಿಟ್ಟದಲ್ಲದೋ!

ಮಾತುಬಿಡ ಮಂಜುನಾತ, ಕಾಸುಬಿಡ ವೆಂಕಟ್ರವಣ – ಹೇಳಿ ಶಂಬಜ್ಜನ ಗಾದೆ ಒಂದಿದ್ದು.
ಮಂಜುನಾತಂಗೆ ಹೇಳಿದ ಮಾತು ಅವ ಬಿಟ್ಟಾಕುತ್ತನಿಲ್ಲೆಡ. ಅದೇ ತಿರುಪತಿಗೆ ಮಡಗಿದ ಪೈಸೆಯ ಎತ್ತುಸಲೇ ಬೇಕು – ಅಲ್ಲದ್ರೆ ವೆಂಕಟ್ರಮಣ ದೇವರು ಅಂತೇ ಬಿಡ, ವಸೂಲುಮಾಡಿಯೇ ಮಾಡುಗು!
~
ಹೀಂಗೆಲ್ಲ ಸಂಗತಿ.
ಸುಮಾರು ಮನೆಗಳ ಈಗ ಗುರುಗೊ ಮಂತ್ರಾಕ್ಷತೆ ಕೊಟ್ಟು ಸರಿ ಮಾಡಿದ್ದವಡ, ಎಡಪ್ಪಾಡಿಬಾವ ಹೇಳಿದ ಓ ಮೊನ್ನೆ.
ಇನ್ನೂ ಕೆಲವೆಲ್ಲ ಒಳುಕ್ಕೊಂಡಿದು. ನೋಡೊ – ನಿದಾನಕ್ಕೆ ಸರಿ ಅಕ್ಕು.
ಎಷ್ಟೇ ಹೋಕುವರುಕ್ಕು ಇಲ್ಲದ್ದದುದೇ ರಜ ಸಮಯಲ್ಲಿ ಕೋಪ ಇಳಿತ್ತು. ಮನುಷ್ಯಂಗೆ ಮರೆವು ಜಾಸ್ತಿ. ಕೆಲವು ವಿಶಯಲ್ಲಿ ಅದು ಒಳ್ಳೆದೇ!

~

ಹಾಂಗೆ ನೋಡಿರೆ ಹೋಕುವರುಕ್ಕು ಇಲ್ಲದ್ದೇ ಅಪ್ಪಲೆ ಕಾರಣ ದೊಡ್ಡದೇನೂ ಇರ್ತಿಲ್ಲೆ.
ಸಣ್ಣ ನಾಯಿ-ಪುಚ್ಚೆ ಜಗಳದ ಹಾಂಗೆ ಇಪ್ಪದರ ಅಂತೇ ದೊಡ್ಡ ಮಾಡಿ ಸಂಬಂದ ಹಾಳುಮಾಡಿಗೊಂಡಿರ್ತವಷ್ಟೆ.
ಇನ್ನೂ ಕೆಲವು ಜನಕ್ಕೆ ಎಂತಕೆ ಹೋಕುವರುಕ್ಕು ಇಲ್ಲದ್ದದು ಹೇಳಿಯೇ ಗೊಂತಿರ! – ಅದು ಮೊದಲಿಂದ ಬಂದದು ಹೇಳಿ ಕಾರಣ ಇಲ್ಲದ್ದೇ ದ್ವೇಷ ಮಾಡುಗು.
ಹಾಂಗಾಗಿ – ನಿಂಗೊಗೆ ಗೊಂತಿದ್ದ ಹೋಕುವರುಕ್ಕು ಇಲ್ಲದ್ದ ವೆವಸ್ತೆ ಇದ್ದರೆ ಸರಿಮಾಡ್ಲೆ ಒಂದು ಪ್ರಯತ್ನ ಮಾಡಿಬಿಡಿ.
ಎಲ್ಲ ‘ಅಹಮ್’ಗಳನ್ನೂ ಯೇವದಾರು ದೊಡ್ಡ ಶೆಗ್ತಿಯ ಎದುರು ತಂದು ನಿಲ್ಲುಸಿ – ಎಲ್ಲ ಒಳ್ಳೆದಾವುತ್ತು!
ಓ ಮೊನ್ನೆ ಹೀಂಗಿರ್ತ ಹೋಕುವರುಕ್ಕು ಇಲ್ಲದ್ದ ಎರಡು ಮನೆಗೊಕ್ಕೆ ಗುರುಗೊ ಮಂತ್ರಾಕ್ಷತೆ ಕೊಟ್ಟು ಸರಿ ಆಯಿದಡ – ಎಡಪ್ಪಾಡಿಬಾವ ಹೇಳಿದ.

~
ವೋಯ್! ನಮ್ಮ ಬೈಲಿಲಿ ಆರಿಂಗೂ ಹೋಕ್ವರುಕ್ಕು ಇಲ್ಲದ್ದೆ ಆಯಿದಿಲ್ಲೆ.
ಒಂದು ವೇಳೆ ಮಾತಾಡುಸದ್ರೂ ಹೋಗಿಬಂದು ಮಾಡ್ತವು, ಅಲ್ಲದೋ?

ಒಂದೊಪ್ಪ: ನಾವುನಾವೇ ಜಗಳಮಾಡಿಗೊಂಡ್ರೆ, ನಾಳೆ ಆಚವರತ್ರೆ ಜಗಳಮಾಡ್ಲೆ ಆರಿದ್ದವು ಭಾವಾ?

ಸೂ: ಆರು ಬೈಲಿಂಗೆ ಬತ್ತವಿಲ್ಲೆಯೋ – ಅವು ಒಂದು ಒಪ್ಪ ಬರದು ತಿಳುಸಿ, ಆತೋ? 😉

52 thoughts on “ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..!

  1. [ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!]
    ಪೊಸವಣಿಕೆ ಚುಬ್ಬಣ್ಣ ಹೇಳಿರೆ ಇವನೆಯೋ ಒಪ್ಪಣ್ಣಾ! 🙂

    [ಹಾಂಗೆ ನೋಡಿರೆ ಹೋಕುವರುಕ್ಕು ಇಲ್ಲದ್ದೇ ಅಪ್ಪಲೆ ಕಾರಣ ದೊಡ್ಡದೇನೂ ಇರ್ತಿಲ್ಲೆ.
    ಸಣ್ಣ ನಾಯಿ-ಪುಚ್ಚೆ ಜಗಳದ ಹಾಂಗೆ ಇಪ್ಪದರ ಅಂತೇ ದೊಡ್ಡ ಮಾಡಿ ಸಂಬಂದ ಹಾಳುಮಾಡಿಗೊಂಡಿರ್ತವಷ್ಟೆ.
    ಇನ್ನೂ ಕೆಲವು ಜನಕ್ಕೆ ಎಂತಕೆ ಹೋಕುವರುಕ್ಕು ಇಲ್ಲದ್ದದು ಹೇಳಿಯೇ ಗೊಂತಿರ! – ಅದು ಮೊದಲಿಂದ ಬಂದದು ಹೇಳಿ ಕಾರಣ ಇಲ್ಲದ್ದೇ ದ್ವೇಷ ಮಾಡುಗು.
    ಹಾಂಗಾಗಿ – ನಿಂಗೊಗೆ ಗೊಂತಿದ್ದ ಹೋಕುವರುಕ್ಕು ಇಲ್ಲದ್ದ ವೆವಸ್ತೆ ಇದ್ದರೆ ಸರಿಮಾಡ್ಲೆ ಒಂದು ಪ್ರಯತ್ನ ಮಾಡಿಬಿಡಿ.]

    ಮುತ್ತಿನಂಥ ಮಾತುಗಳ ಹೇಳಿದೆ. ಈ ಬ್ಲೋಗಲ್ಲಿ ಲೇಖನಂಗಳ ಬರೆತ್ತ ಹಾಂಗೆಯೇ ಒಂದು ಪುಸ್ತಕವ ಬರೆ. ನವಗೆಂತ, ಹೇಳಿರಾತು. ಬಿಟ್ಟಿ ಸಲಹೆ ಕೊಡ್ಲೆ ಪೈಸದ ಖರ್ಚಿಲ್ಲೆ 🙂

  2. [ಮಾಪಜ್ಜನ ಪುಳ್ಳಿ ಮಾಪಣ್ಣನೂ, ಚುಬ್ಬಣ್ಣಜ್ಜನ ಪುಳ್ಳಿ ಸುಬ್ಬಣ್ಣನೂ – ಒಂದೇ ಪ್ರಾಯದೋರು, ಹತ್ತರತ್ತರೆ ಮನೆ!]
    ಪೊಸವಣಿಕೆ ಚುಬ್ಬಣ್ಣ ಹೇಳಿರೆ ಇವನೆಯೋ ಒಪ್ಪಣ್ಣಾ! 🙂

  3. ಜೆಂಬ್ರಕ್ಕೆ ಒಂದು ಭೇಟಿ ಕೊಡದ್ರೂ ನಂಬ್ರದ ಲೆಕ್ಕಲ್ಲಿ ಕೋರ್ಟಿಂಗೆ ಒಂದು ಸರಿಯಾಗಿ ಹೋಕು… ನ್ಯಾಯ ಎಂಥ ಸಿಕ್ಕುತ್ತೋ ದೇವರಿಂಗೇ ಗೊಂತು, ಆದರೆ ಹೀಂಗೆ ಮಾಡಿ ಲಾಯರುಗೋ ಮಾತ್ರ ಹೊಸ ಮನೆ ಕಟ್ಟುಗು ಫ಼ೀಸಿಲ್ಲಿ!
    ಲಾಯಕ್ಕ ಆಯ್ದು ಬರದ್ದು…

    – ಉಷೈ

    1. ಉಷೈಅತ್ತಿಗೆಗೆ ನಮಸ್ಕಾರ ಇದ್ದು!
      ಸರಿಯಾಗಿ ಹೇಳಿದಿ.

      ಎಷ್ಟೋ ಜೆನ ಮಾಡಿದ್ದರ ಪೂರ ಕೋರ್ಟಿಂಗೆ ಸೊರುಗಿ, ಅಕೇರಿಗೆ ಪೈಶೆಕಾಲಿ ಆಗಿ, ಒಯಿವಾಟಿಲಿ ಬಚ್ಚಿ, ಮನೆಯ ಲಾಯರಿಂಗೇ ಅಡವು ಮಡಗಿದೋರುದೇ ಇದ್ದವಡ, ಆಚಮನೆ ದೊಡ್ಡಣ್ಣ ಹೇಳಿತ್ತಿದ್ದ°…

  4. ಒಪ್ಪಣ್ಣಾ. ಯೇವತ್ತಿನ ಹಾಂಗೆ ಲಾಯ್ಕಾ ಆಯಿದು, ಬೈಲಿಂಗೆ ಬಪ್ಪಗ ಲೇಟಾತು… ಕೊಶಿ ಆತು ಲೇಖನ
    ನಂಬ್ರ = ಯೇವ ಕಾಲಕ್ಕೂ ಮುಗಿಯದ್ದ ನಂದಾದೀಪ ಅದೊಂದು-ಭಲೇ ಭಲೇ…

  5. oppanno enthella shuddi baretteppa enage gontilleppa.
    monne maheshanatre kelide innana vaarada shuddi entha heli.
    oppanatre keli helte helida.aatambaga helide.
    hokvarakku illadre balavanthanda sari madle aaga heli enage kaanthu.
    neerina vishayaddu oppannange gontikku
    yavagalu paalili haruve bittu bittule heratre ee ajjandra hange appadu.
    matte gurugalavarege ettuttu aste.elloringu preeti taalme vishvasa iddare heengella aaga allada oppanno.badathana ondu lekkave alla.ondoppa sooper.
    good luck

    1. { monne maheshanatre kelide innana vaarada shuddi entha heli. }
      ಚೆ, ಗೊಂತಿಲ್ಲದ್ದರ ಗೊಂತಿಲ್ಲದ್ದವನ ಹತ್ತರೆ ಗೊಂತಿಲ್ಲದ್ದ ಹಾಂಗೆ ಕೇಳಿರೆ ಎಂತ ಮಾಡುದು ಗೊಂತಾಗ!!

      1. ಗೊಂತಿಲ್ಲದ್ದರ ಗೊಂತಿಪ್ಪವನ ಹತ್ರೆ ಕೇಳಿರೆ, ಗೊಂತಿಲ್ಲೆ ಹೇಳಿರೆ, ಗೊಂತಿಲ್ಲದ್ದವಂಗೆ ಎಂತ ಗೊಂತಕ್ಕು?:)

  6. ಒಪ್ಪಣ್ಣ, ಈ ವಾರದ ಶುದ್ದಿಲಿ ನಮ್ಮ ಹಿಂದಾಣ ತಲೆಮಾರಿನೋರು ಹೊತ್ತುಸಿದ ನಂದಾದೀಪ, ‘ನಂಬ್ರ’ದ ಮೇಲೆ ಬೆಳಕು ಚೆಲ್ಲಿದ್ದೆ.. ಎಷ್ಟೋ ಮನೆತನಂಗ, ಎಷ್ಟೋ ತಲೆಮಾರುಗ ಎಂತಕ್ಕೆ ಹೊಕ್ವರುಕ್ಕು ನಿಂದತ್ತು ಹೇಳಿ ಸಮೇತ ಗೊಂತಿಲ್ಲದ್ದೆ, ಅದರ ಒಂದು ಮನೆತನದ ಸಂಪ್ರದಾಯದ ಹಾಂಗೆ ಮುಂದರಿಶಿಗೊಂದು ಬಯಿಂದವು..ಕೋರ್ಟಿನ್ಗೆ ಹೋಪದುದೆ ವರ್ಷಾವಧಿ ಮಾಡ್ತ ಸೇವೆಯ ಹಾಂಗೆ. ಆದರೆ ಈಗ ಸುಮಾರಾಗಿ ಈ ಹೊಕ್ವರುಕ್ಕು ನಿಂದದು ನಮ್ಮ ಸಮಾಜಲ್ಲಿ ಕಡಮ್ಮೆ ಆಗಿ ಪರಸ್ಪರ ಹೋಪಲೆ ಬಪ್ಪಲೆ ಸುರು ಆಯಿದು. ಇದರಲ್ಲಿ ಎಡಪ್ಪಾಡಿ ಭಾವ° ಹೇಳಿದ ಹಾಂಗೆ ನಮ್ಮ ಸಂಸ್ಥಾನ ಆಶೀರ್ವಾದ ಮಾಡಿದ ಫಲ..!!
    ಒಂದೇ ಅಬ್ಬೆಯ ಹೊಟ್ಟೆಲಿ ಹುಟ್ಟಿದೋರಿಂಗೆ ಒಂದೇ ಭೂಮಿಯ, ಒಂದೇ ಕೆರೆಂದ ನೀರು ಪಾಲು ಮಾಡಿ ಅವರವರ ಪಾಲಿಂಗೆ ಹಾಕಿಗೊಂಬದರಲ್ಲಿಯೂ ಸಂಶಯ ಮಾಡಲೂ ಮನಸ್ಸು ಬತ್ತಲ್ಲದಾ? ಒಪ್ಪಣ್ಣ ಹೇಳಿದ್ದು ಸರಿ, ಕೆರೆಗೆ ಎಲ್ಲಿಯಾದರೂ ಈ ವಿಷಯ ಗೊಂತಾದರೆ ಬಿದ್ದು ಬಿದ್ದು ನೆಗೆ ಮಾಡ್ತಿತ್ತೋ ಹೇಳಿ ಅಲ್ಲದ್ದರೆ ಇವರ ಅವಸ್ತೆಗೆ ಬೇಜಾರಾಗಿ ಬತ್ತಿಯೇ ಹೋವುತ್ತಿತ್ತೋ ಏನೋ ಅಲ್ಲದಾ? 🙁 ಒಂದು ಅಮ್ಮ ಮಕ್ಕಳಲ್ಲಿ ಬೇಧ ಮಾಡಿದರಲ್ಲದಾ ಕೆರೆ ಬೇಧ ಮಾಡುದು? ಬೇಧ ಇಪ್ಪದು ನಮ್ಮ ಮನಸ್ಸಿಲಿ.. ಭೂಮಿ ಅಲ್ಲ, ನಾವೇ ಶಾಶ್ವತ ಹೇಳುವ ಭಾವನೆ ಮನಸ್ಸಿಲಿರ್ತೋ ಏನೋ ಅಲ್ಲದಾ?
    ಒಪ್ಪಣ್ಣ, ನಮ್ಮ ಬೈಲಿಲಿ ಆರೂ ಹೊಕ್ವರಕ್ಕು ಮುಟ್ಟುಸಿದ್ದವಿಲ್ಲೇ, ಗೆದ್ದೆ ಹುಣಿಲೇ ಹೋವುತ್ತವಾಯಿಕ್ಕು.. ಇಳುದು ಮಾತಾಡ್ಲೆ ಪುರುಸೊತ್ತಿಲ್ಲೇ ಆದಿಕ್ಕಪ್ಪಾ.. ಅವರವರ ಪುರುಸೋತ್ತಿಲಿ ಬಂದು ಒಪ್ಪ ಬರೆತ್ತವು.. ಒಂದೊಪ್ಪ ಲಾಯಕ ಆಯಿದು.. ನಾವು ನಾವೇ ನಂಬ್ರಂಗಳಲ್ಲಿ, ಜಗಳಲ್ಲಿ ಮುಳುಗಿಪ್ಪಗ ಇನ್ನೊಬ್ಬ° ಬಂದು ನಮ್ಮೊಳ ಭಿನ್ನ ಮಾಡಿ ಚೆಂದ ನೋಡುಗು. ಅಂಬಗ ಆರು ಬತ್ತ° ನಮ್ಮೊಟ್ಟಿನ್ಗೆ?

    1. { ಗೆದ್ದೆ ಹುಣಿಲೇ ಹೋವುತ್ತವಾಯಿಕ್ಕು.. ಇಳುದು ಮಾತಾಡ್ಲೆ ಪುರುಸೊತ್ತಿಲ್ಲೇ }

      ಗೆದ್ದೆ ಹುಣಿಂದ ಇಳುದರೆ ಮತ್ತೆ ಗೆದ್ದಗೇ ಅಲ್ಲದೋ?
      ಚೆಕ್! ಕಾಲುಪೂರ ಕೆಸರು 😉

  7. ನೀನು ನಂಬ್ರ ಮಾಡ್ಲೆ ಅಂತೂ ಹೋಗೆ (ಒಪ್ಪಣ್ಣ ಅಲ್ಲದ). ಯಾವುದಾರೂ ಜೆಂಬಾರಕ್ಕೆ ಗುರಿಕ್ಕಾರ್ರರೊಟ್ಟಿಂಗೆ ಹೋದೆ ಆಯಿಕ್ಕು ಹೇಳಿ ಅಂದಾಜು ಮಾಡಿದೆ.
    ಹೋಳಿಗೆ, ಜಿಲೇಬಿ ಇದ್ದು ಗೊಂತಾಗಿದ್ದರೆ ಆನೂದೆ ಹಾಜರ್ ಅವ್ತಿತ್ತೆ. ಹೋಕ್ವರುಕ್ಕು ಮುಟ್ತುಸಲೆ ಆಗನ್ನೆ. 🙂 🙂

    1. ಅಪ್ಪೂಳಿ!
      ಅಡಿಗೆ ನರಸಿಮ್ಮಣ್ಣನತ್ರೆ ಹೋದ ಕೂಡ್ಳೇ ಕೇಳಿದೆ – ಚೀಪೆದೆಂತರ ಹೇಳಿಗೊಂಡು.
      ಜಿಲೇಬಿ ಇದ್ದು ಹೇಳಿ ಗೊಂತಾತು. ಶ್ರೀಶಣ್ಣ ಬಕ್ಕು ಖಂಡಿತ – ಹೇಳಿ ಗ್ರೇಶಿದೆ. ಬಯಿಂದನಿಲ್ಲೆ!

      ಗುರಿಕ್ಕಾರ್‌ರಿಂಗೆ ಹೆದರಿದ್ದೋ ಹೇಂಗೆ? 😉

      1. ಎಂತಾ ಅನ್ಯಾಯ ನೋಡು. ಆನು ಬಾರದ್ದರಿಂದಾಗಿ 6 ಜಿಲೇಬಿ ಸುಮ್ಮನೆ ಹಾಳು ಆತನ್ನೆ 🙂 🙂

        1. ಹಾಳಪ್ಪದು ಹೇಂಗೆ ಶ್ರೀಶಣ್ಣೋ..
          ಬಂಙ ಬಂದು ಮಾಡಿದ್ದಲ್ಲದೋ, ಎಂತದನ್ನೂ ಹಾಳಪ್ಪಲೆ ನಾವು ಬಿಡ… 😉

          1. [ಬಂಙ ಬಂದು ಮಾಡಿದ್ದಲ್ಲದೋ] ನೀನು ಅಷ್ಟು ಬಂಙ ಬಂದು ಜಿಲೇಬಿ ಮಾಡ್ತೆ ಹೇಳಿ ಗೊಂತಾಗಿದ್ದರೆ, ಆನು ಖಂಡಿತಾ ಬಂದು ಸುಲಾಭಲ್ಲಿ ತಿಂದು ತೋರುಸುತ್ತಿತ್ತೆ.

  8. ಬಯಲಿಂದ ಒಪ್ಪಣ್ಣ, ನಗೆಗಾರ, ಶುದ್ದಿಕ್ಕಾರ, ಬಟ್ಯ, ಕೊರಗ್ಗ, ಬೆಳ್ಳಿ ಎಲ್ಲಾ ಎಲ್ಲಿಗೆ ಸವಾರಿ ಬಿಟ್ಟವು?
    ಗುರಿಕ್ಕಾರ್ರು ಎಲ್ಲಿಗಾರೂ ಕರಕ್ಕೊಂಡು ಹೆರಟವೋ? 🙂

    1. ಚೆ, ಹಾಂಗೆಂತ ಇಲ್ಲೆ ಶ್ರೀಶಣ್ಣೋ..

      ನೆಕ್ರಾಜಲಿ ಮೊನ್ನೆ ತ್ರಿಕಾಲಪೂಜೆ. ಎಂಗೊ ಎಲ್ಲ ಅಲ್ಲಿ ಇತ್ತಿದ್ದೆಯೊ°, ಗಣೇಶಮಾವನೂ ಕೂಡ.
      ಶುದ್ದಿಯೇ ಹೇಳಿಗೊಂಡು ಕೂದರೆ ಹೊಟ್ಟಗೇನಾರು ಆಗೆಡದೋ? 😉
      ಹೋಕ್ವರುಕ್ಕು ಇಲ್ಲೆ ಹೇಳಿ ಕೂದರೆ ನವಗೇ ನಷ್ಟ! 🙂

      ಹ್ಮ್, ನೀ ಯೇಕೆ ಬಯಿಂದಿಲ್ಲಿ? ಜಿಲೇಬಿ-ಹೋಳಿಗೆ ಎರಡುದೇ ಸಿಕ್ಕುತಿತು ಬಂದಿದ್ದರೆ. 🙂

  9. ಒಪ್ಪಣ್ಣೋ!,ಬೈಲಿ೦ಗೆ ಮಾತ್ರ ಆರೂ ಹೋಕ್ವರ್ಕು ಇಲ್ಲದ್ದ ಹಾ೦ಗೆ ಮಾಡದ್ದೆ.

    1. ಇಲ್ಲೆ ಡಾಗುಟ್ರೇ..
      ನಮ್ಮ ಬೈಲಿಂಗೆ ಆರುದೇ ಹೋಕ್ವರುಕ್ಕು ಇಲ್ಲದ್ದೆ ಆಗಪ್ಪ.

      ಒಂದುವೇಳೆ ಮದುವೆಯೋ, ಟ್ರಾನ್ಸುವರೋ – ಎಂತಾರು ಅಂಬೆರ್ಪು ಬಂದರೆ ರಜ ಸಮಯ ದೂರಂದಲೇ ಮಾತಾಡುಸುಗು. ಆದರೂ ಬಾರದ್ದೆ ಕೂರವು. 😉
      ಎಲ್ಲೋರಿಂಗೂ ಸ್ವಾಗತ ಬಯಸುವ ನಮ್ಮೆಲ್ಲರ ಬೈಲು ಅಲ್ಲದೋ ಇದು!!

  10. ಒಪ್ಪಣ್ಣೋ!, ನ೦ಬ್ರ ಮಾಡದ್ದೇ ಇದ್ದರೆ ಎನಗೆ ಕಷ್ಟ ಅಕ್ಕು ಹೇಳಿ ವಕೀಲಕ್ಕ° ಹೇಳಿಗೊ೦ಡಿತ್ತು..

  11. ಹೋಕ್ವರುಕ್ಕು ಇಲ್ಲದ್ರೂ ಹೋಗಿಬಂದು ಮಾಡ್ತವು..! —ಒಪ್ಪಣ್ಣ ನ ಲೇಖನ ಲಾಯಿಕ್ಕ ಆಯಿದು

  12. ಒಪ್ಪಣ್ಣನ ಮೇಲೆ ಒಂದು ನಂಬರ ಮಾಡಿರೆ ಹೇಂಗೆ ? 😀

    1. ಒಳ್ಳೆ ಉಪಾಯವೇ!
      ಆದರೆ ಒಪ್ಪಕ್ಕ ನಿತ್ಯವೂ ನಂಬ್ರ ತೆಗೆತ್ತು. ಜಡ್ಜಿ ಅಮ್ಮನ ಕೈಂದ ಬೈಗಳು ಮಾಂತ್ರ ಒಪ್ಪಣ್ಣಂಗೇ!

  13. ಒಪ್ಪಣ್ಣ, ವಾಸ್ತವ ಚಿತ್ರಣ ಕೊಟ್ಟಿದೆ.
    ನವಗೆ ಪೇಟೆಲಿ ಇಪ್ಪವಕ್ಕೆ ಇದೆಲ್ಲಾ ಹೆಚ್ಚು ಅನುಭವ ಇಲ್ಲೆ. ಹೇಳಿಕೆ ಬಂದ ಜೆಂಬ್ರಂಗೊಕ್ಕೆ ರಜೆ ಇದ್ದರೆ ಹೋಪದು, ಅತೀ ಅಗತ್ಯದ್ದಾದರೆ ರಜೆ ಮಾಡಿ ಹೋಗಿ ಉಂಡಿಕಿ ಬಪ್ಪದು ಅಷ್ಟೆ. ಅಲ್ಲಿ ನವಗೆ ಎಲ್ಲರೂ ಹೋಕ್ವರುಕ್ಕೆ ಇಪ್ಪವೇ ಅಲ್ಲದ?.
    ಆದರೂ ಕೆಲವೆಲ್ಲ ಕೇಳಿದ್ದೆ. ಕೋರ್ಟು ಕೇಸ್ ಹೇಳುವಾಗ ಒಂದು ನೆಂಪು ಆವುತ್ತು. “ಗೆದ್ದವ ಸೋತ, ಸೋತವ ಸತ್ತ” ಹೇಳ್ತ ಗಾದೆ. ಒಪ್ಪಣ್ಣ ಹೇಳಿದ “ಯೇವ ಕಾಲಕ್ಕೂ ಮುಗಿಯದ್ದ ನಂದಾದೀಪ ಅದೊಂದು” ಹೇಳುವದು ಅಕ್ಷರಶಃ ನಿಜ.
    “ಪಾಲುಮಾಡಿದವು, ಎಂತರ – ಜಾಗೆಯ ಮಾಂತ್ರ” ಹೇಳಿದೆ ಅಲ್ಲದ ಒಪ್ಪಣ್ಣ. ಒಟ್ಟಿಂಗೆ ಇತ್ತಿದ್ದ ಮನಸ್ಸೂ ಪಾಲು ಆತಲ್ಲದ? ಇಲ್ಲದ್ದರೆ ಜಗಳ ಎಂತಕೆ ಸುರು ಆಯೆಕ್ಕು?
    ಅಣ್ಣ ತಮ್ಮ, ಅಪ್ಪ ಮಗ, ವರ್ಷಾನುಗಟ್ಟಲೆ ನಂಬ್ರ ಮಾಡಿ, ದುಡುದ್ದರ ತೆಕ್ಕೊಂಡು ಹೋಗಿ ಕೊಡೆಯಾಲಲ್ಲಿಯೋ ಕಾಸರಗೋಡಿಲ್ಲಿಯೊ ಇಪ್ಪ ವಕೀಲಕ್ಕಳ ಸಾಂಕುವದು. ಆರು ಪೈಸ ಕೊಟ್ಟರೂ ಅದೇ ಆಸ್ತಿಂದಲೇ ಅಲ್ಲದ ಖರ್ಚು ಅಪ್ಪದು. ಕಡೇಂಗೆ ಒಂದು ದಿನ ಬೊಡುದು ರಾಜಿ ಆದರೆ,ಅಷ್ಟು ವರ್ಷ ಖರ್ಚು ಮಾಡಿದ್ದು ಬಂತು. ವ್ಯಾಜ್ಯ ಮುಗುದಪ್ಪಗ ಲೆಕ್ಕ ಹಾಕಿರೆ, ಪಾಲು ಅಪ್ಪಗ ಸಿಕ್ಕಿದ್ದರಿಂದ ಹೆಚ್ಚು ವಕೀಲಕ್ಕೊಗೆ, ಅವರ ಗುಮಾಸ್ತಂಗೊಕ್ಕೆ, ಕೋರ್ಟು ಫೀಸು, ಕಾಪಿ ಹೋಟ್ಲಿಂಗೆ, ಬಸ್ಸಿಂಗೆ ಸಂದಾಯ ಆಗಿಕ್ಕು.
    ಹೋಕ್ವರುಕ್ಕು ಇಲ್ಲದ್ದ ಮನೆಗಳಲ್ಲಿ, ಅಲ್ಲಿಯಾಣ ಮಕ್ಕಳೊಟ್ಟಿಂಗೆ (ಚೆಙ್ಙಾಯಿಗೊ) ಹೋಗಿ ಕಾಪಿ ಕುಡುದು, ದೋಸೆ ತಿಂದು ಮನೆಲಿ ಬೈಶಿಗೊಂಡದು ಇದ್ದು. ಎಂತಕೆ ಹೋಕ್ವರುಕ್ಕು ಇಲ್ಲೆ ಕೇಳಿರೆ ಉಮ್ಮ ಉಪ್ಪ. ಅಜ್ಜನ ಕಾಲಂದ ನೆಡಕ್ಕೊಂಡು ಬಂದ ರಿವಾಜು ಹೇಳಿ ಉತ್ತರ. ಅಲ್ಲಿಂದ ಪೈಸೆ ಕೊಟ್ಟು ತಂದ ಹಾಲು, ಮಜ್ಜಿಗೆ ಅದಕ್ಕೆ ಅಶುದ್ಧ ಇಲ್ಲೆ ಅಡ. ತರಕಾರಿ ಹಣ್ಣು, ತಂದರೂ ಹಾಂಗೇ. ತಿಂಬಲೆ ಅಕ್ಕಡ. ಪಾಪ ಆ ನೀರು ಎಂತ ಅನ್ಯಾಯ ಮಾಡಿದ್ದು ಗೊಂತಾಗಿಂಡು ಇತ್ತಿದ್ದಿಲ್ಲೆ.
    ಕೊಶಿ ಆದ ಕೆಲವು ಸಾಲುಗೊ:
    ಕುತ್ತಿಕೊಟ್ಟದರ ಕೇಳ್ತದು ಹಿತ್ತಾಳೆಕೆಮಿ ಅಡ!
    ತಲೆತಲಾಂತರಂದ ಬಂದ ನಂಬಿಕೆಯ ಹಾಂಗೆ ಇದರ ಒಂದು ನಿಷ್ಠೆಲಿ ಆಚರುಸುಗು. (ಆಚರಿಸಿದ್ದು ಕೊಶಿ ಆದ್ದು ಅಲ್ಲ. ಸಂಧರ್ಭಕ್ಕೆ ಬರದ್ದು ಕೊಶಿ ಆತು)
    ನಾವುನಾವೇ ಜಗಳಮಾಡಿಗೊಂಡ್ರೆ, ನಾಳೆ ಆಚವರತ್ರೆ ಜಗಳಮಾಡ್ಲೆ ಆರಿದ್ದವು ಭಾವಾ?

  14. ಒಪ್ಪಣ್ಣ ಬರದ ಹಲವಾರು ವಿಷಯಂಗೊ ಅನುಭವಕ್ಕೆ ಬಯಿಂದು.
    ಹವ್ಯಕರು ಪ್ರತಿಯೊಬ್ಬನೂ ಆಗಿ ತೆಕ್ಕೊಂಡರೆ ಅನುಭವಸ್ಥರು, ವಿದ್ಯಾವಂತರು, ಕಾನೂನು ಪಂಡಿತರು. ಆರಿಂಗೂ ಹೇಳಿ ಕೊಡೆಕು ಹೇಳಿ ಇಲ್ಲೆ. ಎನ್ನ ಸಹೋದ್ಯೋಗಿ ಒಬ್ಬ ಯಾವಾಗಲೂ ಹೇಳುಗು “ಹವ್ಯಕರೆಲ್ಲಾ ಲಾಯರ್ ಗಳು ಇಲ್ಲದ್ದರೆ ಮಾಷ್ಟ್ರುಗಳು” ಹೇಳಿ.
    ಮಾತು ಮಾತಿಂಗೆ ಯಾವುದಾರೂ ದೇವರಿಂಗೆ ಹರಕ್ಕೆ ಹೇಳುವದು (ದೇವರು ಎಂತ ಇವರ ಒಕ್ಕಲು ಕೂಯಿದನಾ?), ನಂಬ್ರ ಮಾಡುವದು, ನೆರೆ ಕರೆಯವರ ಒಟ್ಟಿಂಗೆ ಮನಸ್ಥಾಪ ಮಾಡಿಗೊಂಬದು, ಹೋಕ್ವರುಕ್ಕು ಮುಟ್ಟುಸುವದು (ನಿಲ್ಲುಸುವದು) ಮೊದಲಾಣ ಕಾಲಲ್ಲಿ ಸಾಮಾನ್ಯ ಹೇಳ್ತ ಹಾಂಗೇ ಇತ್ತಿದ್ದು. ಇದು ನಮ್ಮ ಸಮಾಜಕ್ಕೆ ಅಂಟಿದ ದೊಡ್ಡ ಶಾಪ.
    ಜೆನಂಗೊ ಜಗಳ ಮಾಡುವಾಗ ನಾವು ಇಲ್ಲಿ ಶಾಶ್ವತ ಹೇಳ್ತ ಹಾಂಗೆ ಮಾತಾಡ್ತವು. 80 ವರ್ಷ ಆದ ಮುದುಕ ಆದರೂ ಹೇಳುವದು “ಸತ್ತರೂ ಸಮ, ಆನು ಅವನ ಒಟ್ಟಿಂಗೆ ರಾಜಿ ಆಗೆ, ಅವನ ಮನೆ ನೀರು ಕುಡಿಯೆ” ಹೇಳಿ. ಹಾಂಗೆ ಹೇಳಿದವು ಹೋಪಗ ಎಂತ ತೆಕ್ಕೊಂಡು ಹೋದವು? ಕೆಟ್ಟ ಹೆಸರು ಮಾತ್ರ ಅಲ್ಲದ? ಮನುಷ್ಯ ತಾನು ಮಾಡಿದ ತಪ್ಪಿಂದ ಕಲಿಯೆಕ್ಕು, ಆದರೆ ತಪ್ಪು ಮಾಡಿದ್ದೆ ಹೇಳಿ ಗೊಂತಿದ್ದೊಂಡೂ, ಗೊಂತಾಗದ್ದ ಹಾಂಗೆ ಇದ್ದರೆ ಬುದ್ಧಿ ಬಪ್ಪದು ಯೇವಾಗ? ಒರಗಿದವನ ಏಳುಸಲೆ ಎಡಿಗು. ಒರಗಿದ ಹಾಂಗೆ ನಟಿಸುತ್ತವನ ಏಳುಸಲೆ ಎಡಿಗೋ?. ಎಂತಾರೂ ಅನ್ವಾರು ಆಪತ್ತಿಂಗೆ ಸಿಕ್ಕುವದು ನೆರೆ ಕರೆಯವೇ ಅಲ್ಲದೋ? ಅವರ ಒಟ್ಟಿಂಗೆ ಒಳ್ಳೆದು ಇದ್ದರೆ ಎರಡು ಕಡೆಯವಕ್ಕೂ ಅನುಕೂಲವೇ ಅಲ್ಲದ?. ಏಕೆ ಈ ರೀತಿ ಆಲೋಚನೆ ಬತ್ತಿಲ್ಲೆ? ಇಲ್ಲಿ ಒಣ ಪ್ರತಿಷ್ಠೆಯೇ ಮೆರವದು ಅಲ್ಲದ್ದೆ ಹೃದಯವಂತಿಗೆ ಅಲ್ಲ.
    ಯಾವುದೋ ಅಜ್ಜಂದಿರ ಕಾಲಲ್ಲಿ ಹೋಕ್ವರುಕ್ಕು ಮುಟ್ಟಿಸಿದ್ದು ಅವರ ಪುಳ್ಯಕ್ಕಳ ಕಾಲಕ್ಕೆ ಅದು ಯೆಂತಕೆ ಹೇಳಿಯೇ ಗೊಂತಿರ್ತಿಲ್ಲೆ. ಆದರೂ ಹೋಪಲೆ ಬಪ್ಪಲೆ ಇಲ್ಲೆ. ಒಟ್ಟು ಆಯೆಕು ಹೇಳ್ತ ಕಾಲಲ್ಲಿ ಪಂಚಾಂಗ ಮಡುಗಿ ಅಪ್ಪಗ ಹರಕ್ಕೆ ಒಂದು ಬಾಕಿ ಇದ್ದು ಹೇಳಿ ಕಾಂಬದು, ಅದರ ತೀರ್ಸುವದು. ಯಾವ ಪುರುಷಾರ್ಥಕ್ಕೆ?
    ಆದರೆ, ಇತ್ತೀಚೆಗೆ ಜೆನಂಗೊಕ್ಕೆ ಅದಕ್ಕೆಲಾ ಪುರುಸೊತ್ತು ಇಲ್ಲೆ. ಅವರವರ ಕೆಲಸಕ್ಕೆ ಸಮಯ ಸಿಕ್ಕದ್ದೆ ಇಪ್ಪಗ ಹೀಂಗಿಪ್ಪದಕ್ಕೆ ಸಮಯ ಆದರೂ ಎಲ್ಲಿ ಇದ್ದು?
    ಒಪ್ಪಣ್ಣ ಹೇಳಿದ ಹಾಂಗೆ ಹೋಕ್ವರುಕ್ಕು ಇಲ್ಲದ್ದರೂ ಹೋಗಿ ಬಂದು ಮಾಡುವದು ಕೂಡಾ ಒಳ್ಳೆ ಬೆಳವಣಿಗೆಯೇ. ಮುಂದಂಗೆ ಅವು ಒಟ್ಟು ಅಪ್ಪಲೆ ಇಪ್ಪ ದಾರಿ ಸುಲಭ ಆವುತ್ತಲ್ಲದ.

  15. Yengala kutumballiyu hingippa ondu vishya nadaddu. Innudu hopadu bappadu ille.
    Lekhana thumba layka aaydu. Hale kaldavara manasthithi bagge belaku cheliddu thumba olledu.

    Ondu samdhanda sangathi helire eega hingippdella kammi aydu. Yella doora doora ippa karana jagala avutthille.

    Nammvu hindna kallli ippa paise yela hinge kaladavu. Addakke paiseya oshi madigiddu mantra sadhane. Nammavu koda ondondu Shale, Hostel, Aspathre, Bank heli heradthithare indu namma samaja innashtu prabhalavagi beletthithu.

    1. ವಿಷ್ಣು ಭಾವಾ!
      ನಿಂಗಳ ವಿಚಾರ ಸರಿ ಇದ್ದು.
      ಶಾಲೆ, ಆಸುವತ್ರೆ, ಹೋಟ್ಳು – ಆ ಮಟ್ಟಿಂಗೆ ನಾವು ರಜ ಕಮ್ಮಿಯೇ.
      ಅದರ್ಲಿ ಬಾಕಿದ್ದೋರು ಭಯಂಕರ ಉಶಾರಿ ಆಯಿದವು.
      “ವಿಷ್ಣುಭಾ(ಭ)ವನ ಹೋಟ್ಳು”, “ಉಡುಪಿ ಹೋಟ್ಳು” ಹೇಳಿ ಊರಿಡೀ ಬಯಿಂದು. ನಮ್ಮ ಹಿರಿಯೋರು ಅಡಕ್ಕೆತೋಟವೇ ರಜ ಜಾಸ್ತಿ!

      1. Appu bhava…

        Namma hiriyavu madida thappu navu madlaga. Illadre appa nett aalada marada kathe hange aku.

        Navu Iyers, Iyengars ivarelarinda kalivadu bekadashtu idu. Avu arthikavagi sabalarada hange samkrthika maulyavannu ottinge beleshidavu.
        Samajakke yeradude beku.

  16. Oppanna layaka ayidu.Kelavu kadeli tumbaa close iddondu hokuhark illadda manego tumba iddu.Ajjandru madida papangala pulyakko anubhavisodu allada?Ajji punya heludara ulta helekavtu henge?(elloru alla).

    1. ಶಾಂಬಾವಾ!
      ನಿಂಗೊ ಹೇಳಿದ್ದು ಅಪ್ಪಾದ ವಿಶಯವೇ.
      ಅಜ್ಜಂದ್ರು ಹೋಕ್ವರುಕ್ಕು ಬಿಟ್ರುದೇ, ಪುಳ್ಯಕ್ಕೊ ಮಾನಸಿಕವಾಗಿ ಒಂದೇ ಕುಟುಂಬದ ಭಾವನೆಲಿ ಇಪ್ಪ ಮನೆಗಳೂ ಆಚ ಬೈಲಿಲಿ ಇದ್ದು.!!
      ಅಲ್ಲದೋ? ಏ°?

    1. ದೀಪಕ್ಕಾ..
      ನಿನ್ನ ಒಪ್ಪ ಕಂಡು ನೀನು ಮಾಡಿದ ಹಸರಪಾಯಿಸ ಕುಡುದಷ್ಟೇ ಕೊಶಿ ಆತು!
      ಬೈಲಿಂಗೆ ಇಷ್ಟು ಅಪುರೂಪ ಆಗೆಡ, ಆತೋ?
      ಏ°?

  17. ‘ಹೋಕೂರಕ್ಕೆ’ ಇಲ್ಲದ್ದ ಮನೆಲಿ ಚಾಯ, ಕಾಪಿ ಅಕ್ಕು… ಊಟವುದೆ ಗಟ್ಟಿ ತಿಂಡಿಯೂ (ಕೊಳೆ ಅಥವಾ ಮುಸುರೆ ತಿಂಡಿ) ಆಗ… ಹೇಳ್ತ ಒಂದು ಶಾಸ್ತ್ರ (ಅದು ಅನುಕೂಲ ಶಾಸ್ತ್ರ ಹೇಳುದು ಎನ್ನ ನಂಬಿಕೆ) ಇದ್ದು. ಆರಾದರೂ ಈ ಸಂಗತಿಯ ಮೇಲೆ ಬೆಳಕು ಚೆಲ್ಲಿದರೆ ಒಳ್ಳೆದಿದ್ದತ್ತು.

    1. ನೀರು ಕುಡಿವಲಾಗ ಹೇಳ್ತದಕ್ಕೆ ಹಾಲಿಲೇ ಮಾಡಿದ ಚಾಯಕಾಪಿ ಕುಡಿವಲಕ್ಕು ಹೇಳಿ ಇನ್ನೊಂದು ಅನುಕೂಲಶಾಸ್ತ್ರ ಇದ್ದಡ – ಪಾರೆಮಗುಮಾವ° ಹೇಳಿದವು.

  18. ಒಪ್ಪಣ್ಣ ಇದು ೧೦೦ ರಕೆ ೧೦೦ ಸತ್ಯದ ಮಾತು…. 😛
    ಹೀಗೆ ಅಜ್ಜಂದ್ರ ಕಾಲಲ್ಲಿ ಸುಮಾರು ಕಥೆಗೊ ನಡೆದ್ದು…. ಮಕ್ಕೊಗೆ ಎಂತಗೆ ಹೊವ್ಸುಬಸ್ಸು ಇಲ್ಲೇ ಹೇಳಿ ಗೊಂತಿರ್ತಿಲ್ಲೆ….
    ಯೆ೦ತಾದೋ ಒಂದು ಕಾರಣಕ್ಕೆ ಅಜ್ಜ -ದೊಡ್ಡಜ್ಜನ ಕಾಲಲ್ಲಿ ಯೆಂತದೋ ಹೇಳಿಕೊಂಡು ಜಗಳ ಮಾಡಿ ಊರು ಬಿಟ್ಟು ಬೇರೆಯೋ, ಇಲ್ಲದ್ರೆ ಅಲ್ಲೇ ನೆರೆಕರೆಲಿಯೋ ಹೋಗಿ ಕೂಪ ಸಂಗತಿ ಇದ್ದು….
    ಹಿರಿಯವು ಹೇಳಿಕೊಂಡ ಹರಕ್ಕೆಯೂ ಎಂತರು ಪುರೇಸದ್ರೆ ಇದರ ಮುಂದಣ ತಲೆಮಾರಿನ ಮಕ್ಕೊಗೆ ದೋಷ ಕಾಣ್ತದು ಇದ್ದು ..
    ಮತ್ತೆ ಪ್ರಶ್ನೆ ಮಡುಗಿಸಿಯಪ್ಪಗ ಗೊಂತಾವುತ್ತು ಅದ.. ಪಂಡುಕಾಲಲ್ಲಿ ಹೀಂಗೊಂದು ಸಂಗತಿ ಇದ್ದತ್ತು ಹೇಳಿ…. ಮತ್ತೆ ಇದರ ಸರಿಪಡ್ಸಿಯಪ್ಪಗ ಎಲ್ಲಾ ಸರಿಯವ್ತು ಅದ.. 😛

    ಭಾವ ನೀರಲಿ ಹಾಕಿ ಸೊಲುದುಮಡಗಿದ ಆಡಕ್ಕೆ ಇದ್ದೋ ..??? 😀 😛 ಎನ್ನ ತೂಟ್ಟೆಲಿ ಆಡಕ್ಕೆ ಮುಗಾತು … ಭಾವ…. ಹಾಂಗೆ.. 😛 😛

  19. ಆನಿಲ್ಲಿಂದಲೇ ಒಪ್ಪ ಬರೆತ್ತೆ,,, ಬೈಲಿಂಗೆ ರಜ ದೂರಾವ್ತು ಬಪ್ಪಲೆ.. !

    ಆರೋ ಅಜ್ಜಂದ್ರು ಮಾಡ್ಯೊಂಡ ಜಗಳವ ಪುನಃ ಮುಂದೆ ದೂಡುದು ಎಂತಕೋ??!! ಅವರ ಕಾಲ ಮುಗುದ ಕೂಡ್ಲೆ ಮತ್ತಾಣ ತಲೆಮಾರಿನವು ಒಳ್ಳೆದರಲ್ಲಿ ಇದ್ದವು ಹೇಳಿ ಆದ್ರೆ ಮನೆಗೆ ಹೋಗಿ ಉಂಡಿಕ್ಕಿ ಬಪ್ಪಲಕ್ಕನ್ನೆ.. ಅಲ್ಲದಾ…!

    1. ದಿವ್ಯಕ್ಕೋ..
      ಅಪುರೂಪಲ್ಲಿ ಕಂಡು ಕೊಶಿ ಆತು.

      ಬಾಳೆಕಾನಂದ ಶಿಮುಲಡ್ಕಒರೆಗುದೇ ನಿಂಗಳ ಒಪ್ಪಂಗೊ ಕೇಳಲಿ.
      ಜೀವನ ಒಳ್ಳೆದಾಗಲಿ!

  20. ಒಂದೇ ಕೆರೆಯ ನೀರಾದರೂ, ಇವ° ಎಳದ್ದರ ಅವ ಕುಡಿಯ, ಅವ° ಎಳದ್ದರ ಇವ° ಕುಡಿಯ!
    ಕೆರಗಾ ಮಣ್ಣ ಈ ಸಂಗತಿ ಗೊಂತಾಗಿದ್ದರೆ ಬಿದ್ದು ಬಿದ್ದು ನೆಗೆಮಾಡ್ತಿತು – ಅಲ್ಲದೋ?
    ಅಜ್ಜಂದ್ರು ಮಾಡಿದ ನಂಬ್ರದ ಕೇಸು ನಡಕ್ಕೊಂಡೇ ಇತ್ತು.
    ಇಬ್ರ ಮಕ್ಕಳೂ ಕೋರ್ಟಿಂಗೆ ಹೋಯ್ಕೊಂಡಿತ್ತಿದ್ದವು – ಒಂದೇ ಬಸ್ಸಿಲಿ

    ಓಹ್, ಎಂತಾ ಮಾತುಗೊ ಒಪ್ಪಣ್ಣ. ಎಂತಾ ಮಾತುಗೊ. ಒಪ್ಪ ಅಂತೂ ಒಪ್ಪವೇ. ನಮ್ಮ ವಕ್ಕೆಲ್ಲ ಹೇಳಿ ಮಾಡುಸಿದ ಹಾಂಗಿದ್ದು.
    ಅಪ್ಪಪ್ಪಾ. ಸುಮ್ಮನೇ ನಮ್ಮ ನಮ್ಮ ಒಳ ಎಂತಕೆ ಲಡಾಯಿ ?
    “ಹೋಕುರಕ್ಕೆ” ಹೇಳ್ತ ಶಬ್ದದ ಸರಿಯಾದ ರೂಪ ನಿನ್ನ ಲೇಖನಂದ ಇಂದು ಗೊಂತಾತು.

    1. ಮಾವಾ°..
      ಒಂದು ಲೋನು ತೆಗವದಿದ್ದು. ಎನಗೂ ಅಜ್ಜಕಾನಬಾವಂಗೂ..
      ಅದು ಸಿಕ್ಕಿದಮತ್ತೆ ಬೇಂಕಿಂಗೂ ಎಂಗೊಗೂ ಹೋಕ್ವರುಕ್ಕು ಇರ, ಆತೋ? 😉

      1. ಒಪ್ಪಣ್ಣ ಭಾವಾ..

        ಲೋನು ಸಿಕ್ಕಿದ ಮೇಲೆ ನಿಂಗೊಗು ಬೆಂಕಿಂಗು ಹೊಕ್ವರ್ಕು ಇರ
        ಲೋನು ತೆಗವಲೆ ಸಕಾಯ( ಶೂರಿಟಿ)ಮಾಡಿದ ಶೂರಂಗೆ ಒರಕ್ಕು ಬಾರ…

  21. ಒಪ್ಪಣ್ಣ ಭಾವಾ.. ನಂಬ್ರಕ್ಕೆ ಹೋಪ ಕ್ರಮ ಹೇಂಗೆ ? ಅಂಗಿ ಕೋಲರಿನ ಒಳ ಕರ್ಚೀಪು,ಕಿಂಕಿಲ ಎಡೆನ್ಗೆ ಕೇಸಿನ ಕಟ್ಟ, ಎಲೆ ಸಂಚಿಇಪ್ಪ ಕಪ್ಪು ಬ್ಯಾಗು ,ಕೈಲಿ ಮರದ ಹಿಡಿಯ ದೊಡ್ಡ ಕೊಡೆ ಹಿಡುಕ್ಕೊಂದು( ಅಥವಾ ಅಂಗಿ ಕೋಲರಿಂದ ಬೆನ್ನಿಲಿ ನೇಲುಸಿಗೊಂದು) ಎದುರು ಕಕ್ಷಿ ಸಿಕ್ಕಿರೆ ಬಿಡೆ ಹೇಳುತ್ತ ಪಿಸುಂಟು ಮೋರೆ.
    ಇನ್ನು ತಿರುಗಿ ಬಪ್ಪ ಕ್ರಮ,ಕರ್ಚೀಪು ಕಿಸೆಲಿ,ಮೋರೆ ಬಾಡಿಗೊಂಡು, ಇನ್ನಾಣ ವಾಯಿದೆ ಆದ ಕಾರಣ. ಅಂತೂ ಅಜ್ಜಂದಿರು ಪರಲೋಕ ಸೇರಿದರೂ ವ್ಯಾಜ್ಯದ ನಂಬ್ರ ವಾಯಿದೆ ಆದ್ದದೆ..
    ನಂಬ್ರ ಇಲ್ಲದ್ದರೆ ನೀರಿನ ವ್ಯಾಜ್ಯ ಅದ. ವಾರಲ್ಲಿ ಎರಡು ದಿನ ಅಣ್ಣ,ತಮ್ಮನ ತೋಟಕ್ಕೆ ಕೆರೆ ನೀರು ಬಿಡೆಕ್ಕು.ಈ ನೀರು ಕಣಿಲೆ ಹರುದು ಹೋಪಗ ಹೊಟ್ಟೆ ಉರಿಗು .ಮತ್ತೆ ಹೋಪೊದು ಬಪ್ಪೊದು ಎಲ್ಲಿಗೆ?
    ಕೆಲವು ಪುಳ್ಳಿಯಕ್ಕ ರಾಜಿ ಆವುತ್ತವು.ಕೆಲವು ಸಂಬಂಧಂಗ ಕಡುದೇ ಹೋಯಿಕ್ಕು.
    ಹಳತ್ತು ಎಲ್ಲಾ ನೆಂಪು ಮಾಡಿಸಿದೆ.ಲಾಯಿಕ ಆಯಿದು.

    1. ಕೋರ್ಟಿಂಗೆ ಹೋಪದು, ಬಪ್ಪದು – ಎರಡು ಸಂದರ್ಭ ವರ್ಣನೆ ಕೊಶಿ ಆತು ರಘುಭಾವಾ!
      ಭಾರೀ ಚೆಂದ ಬರದ್ದಿ.

  22. ಇದಾ ಆನೀಗ ಬೈಲಿ೦ಗೆ ಬಾರದ್ದೆ ಒಪ್ಪ ಬರದು ತಿಳುಸಿದ್ದು , ಆತೋ? 😉

  23. ಒಪ್ಪಣ್ಣಾ, ಬೈಲಿಂಗೆ ಬಪ್ಪವು ಒಪ್ಪ ಬರೆವಲೆ ಅಕ್ಕಲ್ಲದೋ? ಎನಗೆ ಒಂಚೂರು confuse ಆತು ಸೂಚನೆ ನೋಡಿ.

    1. ನೀ ಯೇಕೋ° ಹೀಂಗೆ, ಗುಣಾಜೆಮಾಣಿ ನಿನ್ನ ತಲಗೆ ಕೈ ಮಡಗಿದ್ದನೋ?
      ಪೆರಟ್ಟು ಮಾತಾಡುದು, ಹಪ್ಪಾ..!
      – ಹೇಳಿ ಗುರಿಕ್ಕಾರ್ರು ಬೈಗು ನೋಡು!! 😉

  24. ನಮ್ಮ ಬೈಲಿಲಿ ಆರಿಂಗೂ ಹೋಕ್ವರುಕ್ಕು ಇಲ್ಲದ್ದೆ ಆಯಿದಿಲ್ಲೆ ಹೇಳಿ ಹೇಳಿದ್ದು ಎನಗೆ ಬತ್ತಿ ಮಡುಗುಲೆ ಅಲ್ಲದ? ಒಪ್ಪಣ್ಣ ಎಂತದೇ ಮಾಡಲ್ಲಿ, ಎನ್ನ ಹೆಸರು ಬರೆಯಲ್ಲಿ, ಬರೆಯದ್ದಿರಲ್ಲಿ, ಆನು ಬೈಲಿಂಗೆ ಬಪ್ಪದು ಬಿಟ್ಟಿದೆ ಆತೊ? ಆನು ಪಾನಿಪೂರಿ ತಿಂದದು ಬಿಟ್ಟಷ್ಠೇ ಸತ್ಯ ಬೈಲಿಂಗೆ ಬಪ್ಪದರ ಬಿಟ್ಟದುದೇ.

    1. ಈ ಗುಣಾಜೆ ಮಾಣಿಗೆ ಇಷ್ಟು ಕೋಪ ಎಂತ್ಸಕಪ್ಪಾ….? ಅವನ ಕೋಪ ಕಮ್ಮಿ ಮಾಡ್ಳೆ ಒಂದು ಕೇಂಡ್ಳು ಹೊತ್ತುಸೇಕೋ ಹೇಂಗೇ…?!

      1. ಹೊತ್ಸು. ಮಾಣಿ ಕೋಪ ಮಾಡಿದ್ದೋ ಅಲ್ಲದೋ ಹೇಳಿ ಕೇಂಡ್ಲ್ ಬೆಣಚ್ಚಿಲಿ ಗೊಂತಾಗ 🙂

    2. ನೀನು “ಪಾನಿ ಪೂರಿ ತಿಂದದು ಬಿಟ್ಟದು” ಎಷ್ಟು ಸತ್ಯ ಹೇಳಿ ಎಂಗೊಗೆ ಗೊಂತಿಲ್ಲೆ. ಆದರೆ ಈಗ ಬಯಲಿಂಗೆ ಬಂದದಂತೂ ಸತ್ಯವೇ 🙂

      1. {ಈಗ ಬಯಲಿಂಗೆ ಬಂದದಂತೂ ಸತ್ಯವೇ}
        ಪಾನಿಪೂರಿ ಬಿಟ್ಟದುದೇ ಅಷ್ಟೇ ಸತ್ಯ ಶ್ರೀಶಣ್ಣಾ.. 😉

  25. {ನಾವುನಾವೇ ಜಗಳಮಾಡಿಗೊಂಡ್ರೆ, ನಾಳೆ ಆಚವರತ್ರೆ ಜಗಳಮಾಡ್ಲೆ ಆರಿದ್ದವು ಭಾವಾ?}
    ಒಪ್ಪಣ್ಣ ಅಜ್ಜಕಾನ ಭಾವನತ್ತರೆ ಜಗಳ ಮಾಡಿಕೊಂದಿದ್ದರೆ ಆಚಕರೆಮಾಣಿಯತ್ತರೆ ಆರು ಜಗಳ ಮಾಡ್ತವು ಹೇಳಿ ಅರ್ಥವಾ?
    ಇರಲ್ಲಿ… ಇಬ್ರ ಮನೆಲಿಯೂ ಆನು ಅಡಿಗೆಗೆ ಹೋಪದಲ್ದಾ? ಅಲ್ಲಿ ಮಾಡಿದ ಅಡುಗೆಯ ಈ ಮನೆಯವು ಉಣ್ತವಿಲ್ಲಡ, ಇಲ್ಲಿ ಮಾಡಿದ್ದು ಅವು ಉಣ್ತವಿಲ್ಲೆ! ಇಬ್ರೂ ಪರಸ್ಪರ ಮಾತಾಡಿಕೊಳ್ತವು! ಇಬ್ರೂ ಎನ್ನ ಅಡುಗೆ ಭಾರೀ ಲಾಯ್ಕ ಹೇಳ್ತವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×