Oppanna.com

ಬತ್ತ ಬಿತ್ತಿ ಕದುರು ಕೊಯ್ತ ‘ಹುತ್ತರೀ’ಯ ಕಂಡಿರಾ!??

ಬರದೋರು :   ಒಪ್ಪಣ್ಣ    on   26/11/2010    34 ಒಪ್ಪಂಗೊ

ಮಾಷ್ಟ್ರುಮಾವಂಗೆ ಕೊಡಗು ಅರಡಿಗು.
ಕೊಡಗಿಲಿಯೂ ರಜ ಸಮಯ ಮಾಷ್ಟ್ರ° ಆಗಿ ಇದ್ದಿದ್ದವಿದಾ! ಹಾಂಗೆ.
ಮಾಷ್ಟ್ರ ಆಗಿ ಅಲ್ಲಿಗೆ ಹೋದ ಸಮೆಯ ಅಲ್ಯಾಣ ಊರೋರ ಒಟ್ಟಿಂಗೇ ನಿಂದ ಕಾರಣ ಧಾರಾಳ ಸಂಸರ್ಗಂದಾಗಿ ಅಲ್ಯಾಣ ಭಾಶೆ- ಕೊಡವ ತಕ್ಕ್- ದೇ ರಜರಜ ಅರಡಿಗು!!
ಅಂಬಗ ಎಲ್ಲ ಸಲೀಸಾಗಿ ಮಾತಾಡುದೇ ಅರಡಿಗಡ; ಈಗ ಮರದ್ದಡ – ಸುಮಾರು ಸಮೆಯ ಆತಿದಾ..
ಈಗ ನಿಂಗ ದಾಡ? ಹೇಳಿ ಕೇಳ್ತಷ್ಟಾದರೂ ಭಾಶೆ ಬಕ್ಕು.
ಆದರೂ ತಂಪಿನ ಕೊಡಗು ಮರದ್ದಿಲ್ಲೆ; ಅದರಿಂದಲೂ ತಂಪಿನ ಅಲ್ಯಾಣ ಜೆನಂಗೊ, ಕಂಡಂಡ;ಎದ್ದಂಡ;ಉಳ್ಳಿಯಾಡ – ಅವರ ವೈವಿಧ್ಯಮಯ ಕುಲಂಗೊ, ಅವರ ಭಾಶೆ, ಅವರ ಜೆನಜೀವನದ ನೆಂಪು – ಎಲ್ಲವುದೇ ಇದ್ದೇ ಇದ್ದು.
ಜೀವನರ ರಜವೇ ರಜ ಭಾಗವ ಆದರೂ ಅಲ್ಲಿ ಕಳದರೆ ಅದು ಮರವದು ಸಾಧ್ಯವೇ ಇಲ್ಲೆ – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.

ಅಲ್ಯಾಣ ಬಾಶೆಯೊಟ್ಟಿಂಗೆ, ನಮ್ಮ ಬಾಶೆ, ತುಳು, ಮಲೆಯಾಳಕ್ಕಿಪ್ಪ ಸಂಕೊಲೆ, ಅಲ್ಯಾಣ ಜೆನಜೀವನದ ವಿಶೇಷತೆಗಳ ಒಂದೊಂದರಿ ಹೇಳುಗು ಪುರುಸೋತಿಲಿ!
ಈಗ ಪುರುಸೋತು ಅಪ್ಪದೇ ಕಡಮ್ಮೆ, ಆದರೂ ಎಡೆಡೆಲಿ ನೆಂಪಪ್ಪಗ ಹೇಳುಗು; ತೋಟ್ರನ ಪೀಶಕತ್ತಿಲಿ ಅಡಕ್ಕೆ ಕೆರಸುವಗ
~
ಮೊನ್ನೆ ಜೋಇಶಪ್ಪಚ್ಚಿ ಮನೆಲಿ ಕೊತ್ತಂಬರಿ ಕಶಾಯ ಕುಡಿತ್ತ ನೆಪಲ್ಲಿ ವಿಕೃತಿ ಸಂವತ್ಸರದ ವಿಕೃತಿಗಳ ವಿವರುಸಿದ್ದು ನಿಂಗೊಗೆ ಗೊಂತಿಕ್ಕು.
(ಗೊಂತಿಲ್ಲದ್ದರೆ ಇಲ್ಲಿದ್ದು ಶುದ್ದಿ, ಓದಿಕ್ಕಿ)
ನಾವು ಶುದ್ದಿ ಹೇಳಿಗೊಂಡೇ ಇದ್ದು, ಅದರೆಡಕ್ಕಿಲಿಯೂ ವಿಕೃತಿ ನಿಂದಿದೇ ಇಲ್ಲೆ, ಮುಂದುವರುದೇ ಇತ್ತು!
ನಿನ್ನೆ ಮೊನ್ನೆ ಆಗಿ ರಜ ಕಮ್ಮಿ ಆದರೂ, ಧಾರೆ ಧಾರೆ – ಇಡೀ ಊರಿಂಗೆ ಊರೇ ಚೆಂಡಿ!
ಇನ್ನೂ ಚಳಿ ಇಲ್ಲೆ!

ಇದರೆಡಕ್ಕಿಲಿ ಸುಬ್ರಮಣ್ಯದ ಕುಲ್ಕುಂದ ಜಾತ್ರೆ ಸುರು ಆಯಿದು!
ಜೋಯಿಶಣ್ಣ ಗುಡ್ಡೆಗರ್ಪಿ ಮಾಡಿದ ಜಾಲಿಲಿಯೋ – ಉಮ್ಮ, ಹೋಗಿ ನೋಡೆಕ್ಕಟ್ಟೆ. 😉
ತಲೆತಲಾಂತರಂದ ಹೆಸರು ಹೋದ ಜಾನುವಾರು ಜಾತ್ರಗೆ ಗಟ್ಟದ ಮೇಗಾಣ ಗೌಡುಗೊ ಬಂದು ಅವರ ಜಾನುವಾರುಗಳ ಮಾರಿ, ಕಂಬುಳಿಗೆ ಕ್ರಯಮಾಡಿ ಬೇರಕಚ್ಚೋಡ (ವ್ಯಾಪಾರ) ಮಾಡಿಗೊಂಡು ಹೋವುತ್ತ ಜಾತ್ರೆ ಅದು.
(ಅದ್ರಾಮ ಬಂದರೆ ಎಲ್ಲಾ ದನಗೊಕ್ಕೂ ಒಂದರಿಯೇ ಕ್ರಯ ಮಾಡುಗೋ ಏನೋ – ಉಮ್ಮಪ್ಪ. ಗ್ರೇಶಿರೇ ಬೇಜಾರಾವುತ್ತು!)
ಆದರೆ, ಈಗ ಆ ಜಾತ್ರೆಯ ಆರ್ವಾಡು ಕಮ್ಮಿ
– ದೊಡ್ಡ ಗವುಜಿ ಏನಿಲ್ಲೆ; ಮದಲಿಂಗೆ ಆದರೆ ತುಂಬ ಜಾನುವಾರುಗೊ ಬಂದು ವಾರಗಟ್ಳೆ ಜಾತ್ರೆಯೇ ಜಾತ್ರೆ!

ಈಗ ಅಂತೂ ಹೆಸರಿಂಗೆ ಒಂದು ಜಾತ್ರೆ ಹೇಳಿ ಮಾಡುದಷ್ಟೆಡ – ಪಂಜಚಿಕ್ಕಯ್ಯ ಬೇಜಾರಲ್ಲಿ ನೆಗೆಮಾಡುಗು.
ಅವು ಈ ಸರ್ತಿ ನಾಕು ಕಂಬುಳಿ ತಯಿಂದವಡ, ಕಂತುತ್ತದು.
ಇನ್ನೂ ಚಳಿ ಸುರು ಆಗದ್ದ ಕಾರಣ ಕಂಬುಳಿ ಕಟ್ಟ ಬಿಡುಸಿದ್ದವಿಲ್ಲೆ, ಹಾಂಗೇ ಇದ್ದು, ಕರೆಲಿ ಮಡಿಕ್ಕೊಂಡು.
ಚಳಿಗಾಲ ಸುರು ಅಪ್ಪಲೆ ತಾಂತ್ರಿಕ ತೊಂದರೆ ಇದ್ದ ಕಾರಣ ಮಳೆಗಾಲವೇ ಮುಂದರಿತ್ತು – ಹೇಳ್ತ ಸಮೋಸವ ಗಬ್ಲಡ್ಕಭಾವ ಕಳುಸುತ್ತ ಒಂದೊಂದರಿ..
~
ವಾತಾವರಣ ಹೇಂಗಿದ್ದರೂ, ಕೃಷಿಕರಿಂಗ ಎಷ್ಟೇ ತೊಂದರೆ ಇದ್ದರೂ, ಕೃಷಿಕರು ಕೃಷಿ ಬಿಟ್ಟಿದವಿಲ್ಲೆ.
ಹಾಂಗೆ ನೋಡಿರೆ, ಈಗಾಣ ವಿಕೃತಿಯ ಮುನ್ಸೂಚನೆ ಇಲ್ಲದ್ದ ಕಾರಣ ಯೇವದೂ ಕಾರ್ಯ ತೆಕ್ಕೊಂಡಿದವಿಲ್ಲೆ.
ಸೆಸಿಮಡುಗುಸುವೋರು ಮಡಗಿದ್ದವು – ಬುಡಕೊಳದತ್ತೋ ಏನೋ!
ರಬ್ಬರು ನೆಡುವೋರು ನೆಟ್ಟಿದವು – ಬುಡಕ್ಕೆ ಗುಡ್ಡೆಮಣ್ಣು ನಿಂದತ್ತೋ ಏನೋ!
ಕೊಕ್ಕ ಹಾಕುಸುತ್ತವು ಅದನ್ನೂ ಮಡಗಿದ್ದವು; ಪೂರ್ತಿ ಕೊಳದತ್ತೋ ಏನೋ!!
ಗೆದ್ದೆ ಬಿತ್ತುವೋರು ಬಿತ್ತಿದ್ದವು; ಕೊಯಿವಲಪ್ಪಗ ಮಳೆಬಂದು ಪೂರಾ ಮುಂಗೆಬಂದರೂ..
ಈ ಸರ್ತಿಯೂ ಪ್ರಕೃತಿ ಕೈ ಕೊಡ ಹೇಳಿ ಗ್ರೇಶಿಗೊಂಡು ಬಿತ್ತಿದ್ದಲ್ಲದೋ – ಪಾಪ!!
ಕೃಷಿ ಹೇಳಿತ್ತುಕಂಡ್ರೆ ಪ್ರಕೃತಿದೇವರು ಕೊಡ್ತ ಪ್ರಸಾದ ಹೇಳಿ ಲೆಕ್ಕ; ಅಪ್ಪನ್ನೇ?
ಹಾಂಗಾಗಿ ಪ್ರಕೃತಿಯ ಪೂಜೆಮಾಡಿ ಆ ದೇವಿಯ ಕೊಶಿಪಡುಸುತ್ತ ಕಾರ್ಯ ಮಾಡ್ಳೇ ಬೇಕಿದಾ..
ಪ್ರಕೃತಿಯೊಟ್ಟಿಂಗೇ ಬೆಳದ ಜೆನಂಗೊ ಅಲ್ಲದೋ – ಎಡೆಡೆಲಿ ಪ್ರಕೃತಿಪೂಜೆಯೂ, ಆಚರಣೆಗಳೂ ಇರ್ತು.

~

ಕೊಡಗಿನ ಕಾಯ್ತ ಇಗ್ಗುತಪ್ಪ ದೇವರ ಗುಡಿ..

ಪ್ರಕೃತಿ ಹೇಳಿತ್ತುಕಂಡ್ರೆ ಎಂತರ? – ನಮ್ಮ ಆಸಕ್ತಿದಾಯಕ ನೈಸರ್ಗಿಕ ವಿಶಯಂಗೊ.
ಅದು ನಮ್ಮ ಮನೆ ಆಯಿಕ್ಕು; ದನಗೊ ಆಯಿಕ್ಕು; ತೋಡು ಆಯಿಕ್ಕು; ಕಲ್ಲು ಆಯಿಕ್ಕು ಅತವಾ ನಾವು ಬೆಳದ ಪಲವಸ್ತು ಆಯಿಕ್ಕು –
ಒಟ್ಟಿಲಿ ನಮ್ಮ ಜೀವನಕ್ಕೆ ಯೇವದೆಲ್ಲ ಆಧಾರ ಕೊಡ್ತೋ – ಅದರ ಎಲ್ಲವನ್ನೂ ಪೂಜೆ ಮಾಡ್ತ ಸ್ವಭಾವ ನಮ್ಮದು.

ಎಲ್ಲವನ್ನೂ ಹೇಳಿರೆ, ನಾವು ಬೆಳದ ಪಸಲುದೇ ಬಂತು!
ಹ್ಮ್, ಗೆದ್ದೆ ಬೆಳದ್ದರ ಪಸಲು – ಕದುರು ಇದ್ದನ್ನೇ, ಅದರನ್ನುದೇ!
ಆ ಕದುರು ಊಟ ನಿವಾರುಸುವ ಅನ್ನಪೂರ್ಣೇಶ್ವರಿಯೂ ಅಪ್ಪು,
ಹೆಚ್ಚಾಗಿ ಒಳುದ್ದರ ಮಾರಿರೆ ಪೈಶೆರೂಪಲ್ಲಿ ಬಪ್ಪ ಲಕ್ಷ್ಮಿಯೂ ಅಪ್ಪು!
ಮಕ್ಕೊಗೆ ಬರವಣಿಗೆ ಕಲುಶುವಗ ಸರಸ್ವತಿಯೂ ಆವುತ್ತು..
ಹಾಂಗೇ, ಗೆದ್ದೆಲಿ ಹಸುರು ಹಸುರು ಆಗಿಪ್ಪ ಕದುರು ಪ್ರಕೃತಿದೇವತೆಯೂ ಅಪ್ಪು.
ಅಂತೂ, ಕೃಷಿರಿಂಗೆ ಎಲ್ಲವೂ ಅಪ್ಪು..

ಕದುರಿನ ಕೊಯಿದ ಮನೆಗೆ – ದಿಬ್ಬಣ ಎದುರುಗೊಂಬ ನಮುನೆಲಿ- ಎದುರುಗೊಂಬದು; ಮತ್ತೆ ಮನೆತುಂಬುಸಿಗೊಂಬದು – ಎಲ್ಲವುದೇ ತಲೆತಲಾಂತರಂದ ನೆಡಕ್ಕೊಂದು ಬಯಿಂದು.
ಒಂದೊಂದು ಊರಿಲಿ ಒಂದೊಂದು ಕಾಲಲ್ಲಿ, ಒಂದೊಂದು ಹೆಸರಿಲಿ ಆಚರಣೆ ಮಾಡ್ತವು, ಅಷ್ಟೇ!
~
ಮಾಷ್ಟ್ರುಮಾವ ಹೇಳಿದ ಪ್ರಕಾರ, ಕೊಡಗಿಲಿಯೂ ಇದೇ ನಮುನೆ ಒಂದು ಆಚರಣೆ ಇದ್ದಡ,
ಕಾರ್ತೀಕಮಾಸದ ಹುಣ್ಣಮೆ ಕಳುದು ಬತ್ತ ರೋಹಿಣೀ ನಕ್ಷತ್ರದ್ದಿನ ಈ ಹಬ್ಬ ಬಪ್ಪದಡ.
ಹಬ್ಬದ ಹೆಸರೇ ಪುತ್ತರಿ ಹೇಳಿಗೊಂಡು.
ಪುತ್ತು (ಪುದಿಯ / ಪೊಸ) – ಹೇಳಿತ್ತುಕಂಡ್ರೆ ಹೊಸತ್ತು ಹೇಳಿ ಅರ್ತ ಅಡ. ಅರಿ ಹೇಯಿದರೆ ಅಕ್ಕಿ ಹೇಳಿ ಅರ್ತ!!
ಪುತ್ತ್ + ಅರಿ = ಪುತ್ತರಿ ಹೇಳಿರೆ ಹೊಸ ಅಕ್ಕಿಯ ಮನೆ ತುಂಬುಸುತ್ತ ಹಬ್ಬ ಹೇಳಿಗೊಂಡು ರೂಡಿ ಅಡ.
ಕ್ರಮೇಣ ಕನ್ನಡಮಾತಿಂಗಪ್ಪಗ ಅದು ಹುತ್ತರಿ ಹೇಳಿಯೂ ಆಯಿದು, ಗೊಂತಿದ್ದನ್ನೇ!

ಕೊಡವರಿಂಗೆ ಅದುವೇ ಪಟಾಕಿಹೊಟ್ಟುಸುತ್ತ ಗವುಜಿ ಅಡ.
ಅಲ್ಲಿ ದೀಪಾವಳಿಗೂ ಪಟಾಕಿ ಹೊಟ್ಟುಸದ್ದೆ ಇಕ್ಕು, ಆದರೆ ಹುತ್ತರಿ ಹಬ್ಬಕ್ಕೆ ಗವುಜಿ ಮಾಡದ್ದೆ ಇಲ್ಲೆಡ.
~

ಹುತ್ತರಿಯ ಮುನ್ನಾಣದಿನದ ಹಗಲೇ ಗವುಜಿ ಸುರು.
ಆ ಗೆದ್ದೆಗೆ ಅಲಂಕಾರ ಮಾಡಿ, ಗೆದ್ದಗೆ ಇಳಿತ್ತ ದಾರಿಗೆ ಎರಡು ಬಾಳೆಗೆಡು ಕಟ್ಟಿ, ತೋರಣ ಇತ್ಯಾದಿಗಳ ಏಳುಸಿ, ಒಂದು ಮದುವೆ ಚೆಪ್ಪರಕ್ಕೆ ಬತ್ತ ನಮುನೆ ಮಾಡುಗಡ.
ಚಂದ್ರೋದಯದ ಮೂರ್ತಕ್ಕೆ ಸರಿಯಾಗಿ ಆಚರಣೆ ಸುರು.
ಆಚರಣೆ ಎಂತರ?

~
ಮೂರ್ತಂದ ರಜ ಮೊದಲೇ ಮನೆ ಯೆಜಮಾನ ಅದರ ಕುಟುಂಬದ ಎಲ್ಲೋರ ಒಟ್ಟಿಂಗೆ ಗೆದ್ದೆಕರೆಂಗೆ ಹೋಪದು.
ಮನೆಹೆರಡುವಗ ದಿಬ್ಬಣ ಹೆರಡ್ತ ನಮುನೆಯ ಗವುಜಿ.. ಬೆಡಿ – ಗರ್ನಲು, ಎಲ್ಲ ಹೊಡದು ಹೆರಡುಗು.
ಗೆದ್ದಗೆ ಮುಖ್ಯದ್ವಾರಲ್ಲೆ ಎತ್ತಿದ ಮೇಗೆ ಎಲ್ಲೋರುದೇ ಗೆದ್ದಗೆ ಮೋರೆ ಮಾಡಿ ನಿಂದುಗೊಂಗು.
ಆ ಗೆದ್ದೆಗೆ ನೀರು ಕೊಡ್ತ ಅಮ್ಮ ಕಾವೇರಿಯನ್ನೂ, ಕೊಡಗಿನ ಕಾವ ಅಧಿದೇವತೆ ಇಗ್ಗುತಪ್ಪನನ್ನೂ (ಸುಬ್ರಮಣ್ಯನ ಶೆಗ್ತಿ ಅಡ) – ಮನಸಾ ಪ್ರಾರ್ತನೆ ಮಾಡಿಗೊಂಡು, ಯೆಜಮಾನ ಅದರ ಪೀಚಕತ್ತಿಲಿ ಗೆದ್ದೆಂದ ಕದುರು ಕೊಯಿವದು.
ಎಲ್ಲೋರುದೇ “ಪೊಲಿ ಪೊಲಿ ದೇವಾ – ಪೊಲಿ ಪೊಲಿ ದೇವಾ” ಹೇಳಿ ಬೊಬ್ಬೆ ಹೊಡದು ಗವುಜಿಲಿ ದೇವರ ನೆಂಪು ಮಾಡ್ತದು.
(ನೆಗೆಮಾಣಿಗೆ ಪೋಲಿ ಹೇಳಿ ಕೇಳುಗೋ ಏನೋ!)
ಎಡಿಗಾದೋರು ಗರ್ನಲು ಹೊಟ್ಟುಸುಗು, ಗೆದ್ದೆಕರೆಂಗೆ ದೀಪಾಲಂಕಾರ ಮಾಡುಗು.
ಇಷ್ಟಾಗಿ ಕೊಯಿದ ಕದುರಿನ ಮನಗೆ ತೆಕ್ಕೊಂಡು ಬಪ್ಪದು.
~
ಲಕ್ಷ್ಮಿಯ ಮನಗೆ ಕರಕ್ಕೊಂಡು ಬಂದು ಮನೆ ತುಂಬುಸುದೇ ಒಂದು ವೈಶಿಷ್ಠ್ಯ.
ಯೆಜಮಾನನ ಒಳಗೊಂಡು ಎಲ್ಲೋರುದೇ ಒಂದೊಂದು ಹಿಡಿ ಕದುರಿನ ತಲೆಲಿ ಹೊತ್ತುಗೊಂಡು ಜೈಕಾರ ಕೂಗಿಂಡು ಮನಗೆ ತಪ್ಪದು.
ಎಡೆಲಿ ಪಟಾಕಿ. ಇಪ್ಪೋರು ಡೋಲು-ವಾದ್ಯವನ್ನುದೇ ಬಾರುಸುಗಡ.
ಓಲಗ ಅವರದ್ದೇ ಒಂದಿದ್ದಡ ಅಲ್ಲದೋ – ಅದರ.

ಬೊಳ್ಳ್-ಕಾಟ್ಟ್; ಗೆಂಡುಮಕ್ಕೊ ಕೊಣಿತ್ತದು!!

ಅಂತೂ ಮೆರವಣಿಗೆಲಿ ಮನೆಗೆ ಎತ್ತಿದ ಮೇಗೆ, ತಂದ ಕದುರಿನ ದೇವರ ಮಂಟಪದ ಎದುರೆ ಮಡಗಿ ದೇವರ ಪ್ರಾರ್ತನೆ ಮಾಡುಗಡ.  ಗಣಪತಿ ದೇವರನ್ನೂ, ಕಾವೇರಮ್ಮನನ್ನೂ, ಇಗ್ಗುತಪ್ಪನನ್ನೂ – ಒಟ್ಟಾಗಿ.

~

ಇಷ್ಟಾದ ಮೇಗೆ ಹೊಟ್ಟೆ ತುಂಬ ಕಳ್ಳು ಕುಡಿಗು, ಬಿರಿವನ್ನಾರ ಕೊಣಿಗು!
ಕೊಣಿವದು ಒಟ್ರಾಶಿ ಅಲ್ಲ, ಅವರ ಸಾಂಪ್ರದಾಯಿಕ ಡೇನ್ಸು ಮೂಲಕ ಅಡ.
ಗೆಂಡುಮಕ್ಕಳ – ಲೇಲೆಹಾಕುತ್ತ – ಬೊಳ್ಕಾಟ್, ಹೆಮ್ಮಕ್ಕಳ – ತೇನತೇನ ಪದ್ಯಂಗಳ – ಉಮ್ಮತ್ತಾಟ್ಟ್ – ಹೇಳ್ತ ಡೇನ್ಸುಗೊ.
ಎಲ್ಲೋರುದೇ ಸೇರಿ ಸಂಪ್ರದಾಯಬದ್ಧ ಆದ ಆ ಪದಂಗಳ ಹೇಳಿಗೋಂಡು, ಸುತ್ತ ತಿರುಗಿ ಡೇನ್ಸು ಮಾಡುಗಡ. ಕೋಲಾಟಂಗೊ ಹೇಂಗೂ ಇದ್ದನ್ನೆ?!
– ಇದಲ್ಲದ್ದೆ,ಮತ್ತಾಣ ದಿನಂಗಳಲ್ಲಿ ಜವ್ವನಿಗರು ಮಾಡಿಗೊಂಡ ಕ್ರಮಂಗೊ ಸುಮಾರು ಇದ್ದಡ – ಮಾಷ್ಟ್ರುಮಾವ ಹೇಳುಗು ನೆಗೆಮಾಡಿಗೊಂಡು.
~

ಆ ದಿನದ ಇರುಳು ಒರಗಿದೋರಿಂಗೆ ಮರದಿನ ಇಡೀ ಹಬ್ಬ.
ಹುತ್ತರಿಯ ದಿನ ಕೊಡಗಿಲಿ ಶಾಲೆ-ಕೋಲೇಜುಗೊ ಸೇರಿದಂತೆ ಯೇವ ಆಪೀಸುದೇ ನೆಡೆಯ ಅಡ!
ಆ ದಿನ ಊರ ದೇವಸ್ತಾನದ ’ಸಾಮಿ’(ಪೂಜೆಬಟ್ರು) ಮನೆಮನೆಗೆ ಕಾವೇರಿ ನೀರುದೇ-ಗಂಧಪ್ರಸಾದವೂ ಎತ್ತುಸುತ್ತ ಕ್ರಮ ಇದ್ದಡ.
ಆ ಪುಣ್ಯಕಾರ್ಯಕ್ಕೆ ದಕ್ಷಿಣೆಯಾಗಿ ಅವು ಕುಟುಂಬದ ಲೆಕ್ಕಲ್ಲಿ – ಇಂತಿಷ್ಟು ಬಟ್ಟಿ ಬತ್ತ – ಹೇಳ್ತ ಲೆಕ್ಕಲ್ಲಿ ಕೊಡ್ತವಡ.

ಚೆ, ಎಷ್ಟೊಂದು ಚೆಂದದ ಆಚರಣೆ, ಅವರ ಅಜ್ಜಂದ್ರ ಸುಂದರ ಪರಿಕಲ್ಪನೆ..
ತಮ್ಮ ಪ್ರಕೃತಿ ಮಾತೆಯ ಮೊಟ್ಟೆಲಿ ತಾವೇ ಬಿತ್ತಿ, ತಾವೇ ಬೆಳದು, ಅದು ಲಕ್ಷ್ಮಿ ಆದ ಮೇಗೆ ಅವ್ವೇ ಅದರ ತಲೆಮೇಲೆ ಹೊತ್ತುಗೊಂಡು ಮನಗೆ ಬಂದು ಪೂಜೆ ಆಚರಣೆ ಮಾಡ್ತ ಗವುಜಿ!
ಎಂತಾ ಸಂಭ್ರಮ ಅದರ ಬೆಳದವಂಗೆ!!
~

ಉಮ್ಮಕ್ಕಾಟ್ಟ್ - ಹೆಮ್ಮಕ್ಕಳ ಡೇನ್ಸು!

ಈ ಒರಿಶದ ಹುತ್ತರಿ ಮೊನ್ನೆ ಕಳಾತಡ, ಮಡಿಕ್ಕೇರಿ ದೀಪುಅಣ್ಣಂಗೆ ಗವುಜಿ ಇದ್ದಿಕ್ಕು!

ಎಷ್ಟೇ ವಿಕೃತಿ ಇರಳಿ ಪರಿಸರಲ್ಲಿ, ಪ್ರಕೃತಿ ಕೊಟ್ಟದರ ಮನಗೆ ತಪ್ಪಗ ಕೊಶೀಲಿ ಎದುರುಗೊಂಡಿದವಡ.
ಮನೆಲಿ ಸುಖ ಸೌಭಾಗ್ಯ ತಪ್ಪಲೆ ಪ್ರಾರ್ತನೆ ಮಾಡಿಗೊಂಡಿದವಡ.

~

ಪ್ರತಿ ಕುಟುಂಬದ ಕೃಷಿಲಿಯೂ ಹುತ್ತರಿ ದಿನಕ್ಕೆ ಕದಿರು ಕೊಯಿವಲೇ ಹೇಳಿಗೊಂಡೇ ಒಂದು ಗೆದ್ದೆ ಇಕ್ಕಡ.
ಒಳುದ್ದರ ನಾಟಿಯ ನಿದಾನಕ್ಕೆ ಮಾಡಿರೂ, ಈ ಗೆದ್ದೆದರ ಹುತ್ತರಿಗೆ ಕೊಯಿತ್ತ ನಮುನಗೇ ಮಾಡುಗಡ.

ಮತ್ತೆ ಕೆಲವು ಜೆನ ಗೆದ್ದೆಲಿ ಶುಂಟಿಬಿತ್ತಿ, ಪೇಟೆಂದ ಕದುರು ತಂದು ಹಬ್ಬ ಆಚರಣೆ ಮಾಡಿದವಡ!
(ಶುಂಟಿ ಬಿತ್ತಿರೆ ಮಣ್ಣಿನ ಸಾರ ಪೂರ ಎಳೆತ್ತಡ, ಆದರೆ ಎಂತ ಮಾಡ್ತದು – ಬತ್ತಕ್ಕೆ ಅನುಕೂಲಕರ ವಾತಾವರಣ ಬೇಕೇ?!)
ಅಲ್ಲದ್ದರೂ ಈ ಸರ್ತಿ ಬತ್ತ ಬೆಳೆಗಾರಂಗೆ ದೊಡಾ ಲೋಸು ಅಡ – ಎಯ್ಯೂರುಬಾವ° ಹೇಳಿದ ಓ ಮೊನ್ನೆ.
ಅಪ್ಪು, ಅವ° ಪ್ರತಿಒರಿಶವೂ ಬತ್ತ ಮಾಡ್ತ. ಈ ಸರ್ತಿ ಬಿತ್ತಿದ ಬತ್ತ ಪೂರ ಹುಟ್ಟಿದ್ದು – ಹೇಳಿ ಬೇಜಾರಮಾಡಿಗೊಂಡ ಓ ಮೊನ್ನೆ ಸೂರಂಬೈಲಿಲಿ ಸಿಕ್ಕಿಪ್ಪಗ.
ಚೆ, ಒಪ್ಪಣ್ಣಂಗೂ ಬೇಜಾರಾತು.
~
ಮಳೆ ಕಮ್ಮಿ, ಹಾನಿ ಹೆಚ್ಚು – ಏನೇ ಇರಳಿ, ಪ್ರಕೃತಿಯೇ ಕೊಟ್ಟ ಪ್ರಸಾದ ಅಲ್ಲದೋ – ಕೊಟ್ಟಷ್ಟು ಸಾಕು ಹೇಳ್ತ ಮನೋಭಾವ ರೈತಂದು.
ಈ ಸಾರ್ಥಕತೆ ರೈತಂಗೆ ಮಾಂತ್ರ ಅರಡಿಗಷ್ಟೆ.
ಅಂಗುಡಿ ಮಡಗಿದ ಕೊಂಕಣಿಗೆ ಈ ಕುಶಿ ಇದ್ದೋ?
ಕಚ್ಚೋಡದ ಮಾಪಳೆಗೆ ಇದರ ಇಂಪು ಗೊಂತಕ್ಕೋ?
ಪರಿಸರಕ್ಕೆ ಹತ್ತರೆ ಆಗಿ, ಆನಂದವ ಹಂಚಿಗೊಂಡು ಬದುಕ್ಕುತ್ತ ಹುತ್ತರಿಯ ಹಾಂಗಿರ್ತ ಆಚರಣೆಗೊ ನಮ್ಮ ಸಂಸ್ಕೃತಿಯ ಜೀವಂತ ಮಡಗುತ್ತು.
ಯೇವದೇ ಊರಿಲಿ, ಯೇವದೇ ಕೆಲಸಲ್ಲಿ ಇದ್ದಂಡು, ಅಂಬೆರ್ಪಿಲಿ ಇದ್ದರೂ – ಒರಿಶಕ್ಕೊಂದರಿ ಹುತ್ತರಿಗೆ ಊರಿಂಗೆ ಬಂದು ನೆಂಪುಮಾಡುವ ಕೊಡವರ ಗ್ರೇಶಿರೆ ಒಪ್ಪಣ್ಣಂಗೆ ಅಭಿಮಾನ ಬಕ್ಕು.
ನಮ್ಮ ಕ್ರಮಂಗಳ ಒಳಿಶಿ, ಮುಂದಾಣೋರಿಂಗೆ ಕೊಡ್ತ ಬಹುಪುಣ್ಯಕಾರ್ಯ ಅವು ಮಾಡ್ತಾ ಇಪ್ಪದರ ಕಂಡು ತುಂಬ ಹೆಮ್ಮೆ ಅನುಸುತ್ತು.
~
ಪ್ರತಿ ಒರಿಶ ಹೊಸ ಅಕ್ಕಿ ಬತ್ತು, ಪ್ರತಿ ಒರಿಶ ಕಾವೇರಿಲಿ ಹೊಸ ನೀರು ಬಕ್ಕು, ಆದರೂ
– ಅವು ಅವರ ಹಳೇ ಆಚರಣೆ ಬಿಟ್ಟಿದವಿಲ್ಲೆ.
ನವಗುದೇ ಇಂತಾ ಆಚರಣೆಗೊ ಇದ್ದು, ಕಮ್ಮಿ ಅಪ್ಪಲೆ ಬಿಡುದು ಬೇಡ, ಅಲ್ಲದೋ?
ಹೊಸ ಜೀವನ ಹಿಡ್ಕೊಂಬದರ್ಲಿ ನಾವು ತುಂಬ ಉಶಾರಿ.
– ಆದರೆ ಹಳೆಕ್ರಮಂಗಳ ನೆಂಪು ಮಡಿಕ್ಕೊಂಬ ವಿಚಾರಲ್ಲಿದೇ ನಾವು ಉಶಾರಿ ಹೇಳಿ ಮಾಡಿಗೊಂಬ.

ಒಂದೊಪ್ಪ: ಹೊಸ ಅಕ್ಕಿ ಬಪ್ಪಗ ಹಳೇ ಪಾತ್ರಲ್ಲೇ ಸೇರುಸಿಗೊಂಬ, ಅಲ್ಲದೋ?
ಹೊಸ ಒರಿಶಂಗೊ ಬಂತು ಹೇಳಿಗೊಂಡು ನಾವು ಹಳತ್ತರ ಪೂರ್ತ ಬಿಡೆಕ್ಕಾದ್ಸು ಇಲ್ಲೆ ಅಲ್ಲದೋ?

34 thoughts on “ಬತ್ತ ಬಿತ್ತಿ ಕದುರು ಕೊಯ್ತ ‘ಹುತ್ತರೀ’ಯ ಕಂಡಿರಾ!??

  1. ಸಂಧರ್ಭೋಚಿತ..ಆದರೆ ಬೇಜಾರು ಹೇಳಿರೆ ಭತ್ತದ ಕೃಷಿಯೇ ನಶಿಸಿ ಹೋಗ್ತಾ ಇಪ್ಪದು..ಗದ್ದೆಯೆ ಇಲ್ಲದ್ರೆ ಈ ಹುತ್ತರಿ ಇಕ್ಕೋ? ಕೇವಲ ಕಥೆ ಕೇಳ್ವ ಹಾಂಗೆ ಆಗದ್ದೆ ಇರಲಿ..ಹಸಿರು ಪೈರು ಬೆಳೆಯಲಿ..ಜೀವನ ಹಸಿರಾಗಲಿ..

  2. Huthari bagge lekana layakaayidu
    annu kodagilli hutti baladava hangagi rajja mahith
    1) hutthari dina kodavaru huthari genasu(thuna genasu mathra ahara)thinnuthavu
    2)AA dina shudha sasyaharigo
    3)Aadina hosakadirinda thgada akki haki payasa madi unnuthavu
    4)Hutari dina modalu uringe samabandapatta devaragaddeli modalu kadaru thegada mathe urinavu avaraavara gaddeli khadaru thegathavu
    5) Virajpete hatre ondu gramalli mathra hagalu kadaru thegattha samparadaya iddu
    6)Kodagiliyude samparadya thorike mattinge oluddu
    7)Anivarya karananada Hera uringe/kelasakke hopalediyaddavu mathra sampardaya palisiyondu belesiyoundu iddavu

  3. ಅಪ್ಪು ಒಪ್ಪಣ್ಣೊ ಆನು ಈಗ ಡಬ್ಬಲ್ ಅಜ್ಜ೦ ಮದಲಾಣವ೦ ಮಾಣಿ ಎರಡನೇ ಕ್ಲಾಸು.ಎರಡನೆ ನಾಳ೦ಗೆ ಎರಡು ತಿ೦ಗಳವುತ್ತಷ್ಟೆ ಕೂಸು.ರಘು ಭಾವನ ಅತ್ತೆ ಮನೆಯ ನೆರೆ ಮನೆಯೇ ಎನ್ನ ಅಳಿಯನ ಮನೆ.ಜಿ.ಟಿ.ರಾಘವೇ೦ದ್ರನ ಮಗ ಎನ್ನ ಅಳಿಯ೦.ಅವರದ್ದೆ ಅಣ್ಣನ ಮಗ ಮ್ಯೆಸೂರಿಲ್ಲಿಪ್ಪ ಅನ೦ತವರ್ದನನ ಮಗಳು ಎನ್ನ ಸೊಸೆ (ಮ೦ಗಳೂರಿನ ಅತ್ರಿ ಬುಕ್ ಸೆ೦ಟರಿನ ಅಶೋಕವರ್ದನನ ತಮ್ಮ).ಇರಲಿ ಸುಮ್ಮನೆ ಪರಿಚಯಕ್ಕೆ ಹೇಳಿ ಹೇಳಿದ್ದು.ಆನು ಮದಲೇ ಒ೦ದಾರಿ ಹೇಳಿದ ಹಾ೦ಗೆ ದೊಡ್ಡಮಾಣಿ ರವಿಶ೦ಕರ ಎನ್ನ ದೊಡ್ಡಪ್ಪನ ಮಗ೦ ಅಣ್ಣನ ಮಗ೦.ಒಪ್ಪ೦ಗಳೊಟ್ಟಿ೦ಗೆ.

  4. ಒಪ್ಪಣ್ಣ, ಕೊಡಗಿನವರ ಪ್ರಕೃತಿ ಪೂಜೆಯ ವೈಭವ ಮಾಷ್ಟ್ರುಮಾವನ ಅನುಭವಲ್ಲಿ ಚೆಂದಕ್ಕೆ ಶುದ್ದಿಲಿ ಬಯಿಂದು.
    ನಮ್ಮ ಹೊಟ್ಟೆಯ ಹಶು ತಣಿಶಿ, ಶರೀರಕ್ಕೆ ಶಗುತಿ ಕೊಡುವ ಅನ್ನಪೂರ್ಣೆಯ ಶ್ರದ್ಧೆಲಿ, ಭಗುತಿಲಿ ಕೊಯಿದು, ಸಂಭ್ರಮಲ್ಲಿ ಕರ್ಕೊಂಡು ಬಂದು, ಸಾಂಪ್ರದಾಯಿಕವಾಗಿ ಎದುರುಗೊಂಡು ಮನೆಯ ಒಳ ಸ್ವಾಗತ ಮಾಡಿ ಮನೆಲಿ ತುಂಬುಸಿಗೊಂಬ ಕ್ರಮ ತುಂಬಾ ಲಾಯ್ಕಲ್ಲಿ ವಿವರ್ಸಿದ್ದೆ.
    ನಮ್ಮಲ್ಲಿ ಎಲ್ಲಾ ಮನೆಗಳಲ್ಲಿ ಮೊದಲು ನಡಕೊಂಡು ಇದ್ದ ಕ್ರಮ ಈಗ ತೀರಾ ಕಡಮ್ಮೆ ಆಯಿದು. ಕೊಡಗಿನವ್ವು ಬಹುಷಃ ಕ್ರಮವ ನಶಿಸಿ ಹೋಪಲೆ ಬಿಟ್ಟಿದವಿಲ್ಲೇ. ಎಲ್ಲಿದ್ದರೂ ಮನೆಯೋರು ಎಲ್ಲೋರೂ ಸೇರಿ ಮಹಾಲಕ್ಷ್ಮಿಯ ಎದುರುಗೊಂಬಲೆ ಸೇರ್ತವು ಹೇಳಿ ನೀನು ಹೇಳಿದ್ದದರ ಕೇಳಿ ಕೊಶಿ ಆತು.
    ನಮ್ಮಲ್ಲಿ ಬತ್ತ ಬೆಳವಲೆ ಇಲ್ಲದ್ದೆ ನಮ್ಮ ಕ್ರಮಂಗ ನಾಶ ಆವುತ್ತಾ ಇದ್ದು. ನಮ್ಮಲ್ಲಿಯೂ ಇಂತಾ ಕ್ರಮಂಗ ಇನ್ನಾದರೂ ಒಳಿಯಲಿ.
    ರೈತನ ಸಾರ್ಥಕತೆ ಪ್ರಕೃತಿಯ ವರಪ್ರಸಾದಲ್ಲಿ ಸಿಕ್ಕಿದ ಬೆಳೆಲಿ ಸಂತೃಪ್ತಿ ಪಡುದು ಹೇಳಿ ಮನೋಜ್ಞವಾಗಿ ಹೇಳಿದ್ದೆ. ಸತ್ಯವೇ ಅಲ್ಲದಾ? ಬೆಳದ್ದದರಲ್ಲಿ ಸಿಕ್ಕುವ ಕೊಶಿ ಅಂಗಡಿಯ ಕೊಂಕಣಿಗೂ, ಕಚ್ಚೋಡದ ಮಾಪ್ಳೇಗೂ ಯಾವತ್ತಿಂಗೂ ಸಿಕ್ಕ.
    ನೀನು ಹೇಳಿದ ಹಾಂಗೆ ಹೊಸ ಕ್ರಮ ಬಂದಪ್ಪಗ ಹಳತ್ತರ ಮರೆಯದ್ದೆ ಒಳಿಶಿ ಬೆಳೆಶೆಕ್ಕು ಅಲ್ಲದಾ? ಒಂದೊಪ್ಪ ಲಾಯ್ಕಾಯಿದು.

    1. ಶ್ರೀಅಕ್ಕ..
      ಯೇವತ್ತಿನಂತೆ ತೂಕದ ಮಾತಿಲಿ ಒಪ್ಪ ಕೊಟ್ಟಿದಿ.

      ನಿಂಗೊ ಹೇಳಿದ, ಅದೇ ಆಶಯ ಒಪ್ಪಣ್ಣಂಗೂ ಅನುಸಿದ್ದು.
      ಕೊಡವರಿಂಗೆ ಎಡಿತ್ತಡ, ನವಗೂ ಎಡಿಗಲ್ಲದೋ? – ಚಿಂತನೆ ಮಾಡ್ತ ವಿಚಾರ, ಅಲ್ಲದೋ?

      ಕೊಶಿ ಆತು ನಿಂಗೊ ಬರದುಕೊಟ್ಟದು. 🙂

  5. ನಮ್ಮ ನೆರೆಕರೆಯ ಸಂಸ್ಕೃತಿಯಾದ ಕೊಡಗರ ಹುತ್ತರಿ ಹಬ್ಬದ ಬಗ್ಗೆ ಬರೇ ಹೆಸರು ಕೇಳಿ ಗೊಂತಿತ್ತಷ್ಟೇ ಹೊರತು ಹೆಚ್ಚೇನು ತಿಳ್ಕೊಂಡಿತ್ತಿಲ್ಲೆ, ತುಂಬಾ ಚೆಂದಕ್ಕೆ ಅದರ ಆಚರಣೆಯ ತಿಳಿಶಿದ ಒಪ್ಪಣ್ಣಂಗೆ ತುಂಬಾ ಧನ್ಯವಾದಂಗೋ.
    ಒಂದೊಪ್ಪ ಪಷ್ಟಾಯಿದು.
    ನಮ್ಮ ಸಂಸ್ಕೄತಿಯ ನಾವೇ ಒಳುಶೆಕ್ಕು, ಅದರ ನಮ್ಮ ನಂತರದ ಪೀಳಿಗೆಗೆ ಕೊಡೆಕ್ಕು.. ಕೊಡಗರ ಹತ್ರಂದ ಆಚರಣೆ, ಸಂಸ್ಕೃತಿಯ ಒಳಶಿಗೊಂಬ ಬಗ್ಗೆ ಕಲಿವಲೆ ತುಂಬಾ ಇದ್ದು ಅನ್ಸಿತ್ತು.. ಕೄಷಿಯ ನಂಬಿದವ° ಎಂದಿಂಗೂ ಸೋಲ° . “We may lose a battle, but we can still win the War” ಹೇಳುವ ಮಾತಿದ್ದು. ಕೄಷಿಲಿ ಹಿನ್ನಡೆ ಬಂದಿಕ್ಕು, ಆದರೆ ಸೋಲು ಬಾರ, ಒಂದಲ್ಲ ಒಂದು ದಿನ ಗೆಲ್ಲುಗು.. ಕೊನೆ ಕ್ಷಣದ ವರೆಗೆ ಹೋರಾಡ್ತ ಛಲ ನಮ್ಮಲ್ಲಿರ್ತೋ ಹೇಳುದು ಪ್ರಶ್ನೆ.. ಸೂಕ್ಷ್ಮಲ್ಲಿ ತಿಳಿಶಿದ್ದೆ ಕೄಷಿ ಕಷ್ಟಲ್ಲಿದ್ದರೂ ಪ್ರಕೄತಿ ಮುನಿಸಿಗೊಂಡರೂ, ಅದು ನಮ್ಮ ಉಪವಾಸ ಹಾಕ ಹೇಳಿ.. ಓದಿ ಕುಶಿ ಆತು. ಎಷ್ಟೋ ಮನೆಲಿ ಈಗ “ಮನೆ ತುಂಬುದು” ಹೇಳುದು ನೋಡ್ಲೆ ಸಿಕ್ಕುತ್ತಿಲ್ಲೆ, ಆದರೆ ಎನ್ನ ಮನೆಲಿ ಈಗಳೂ ಇದ್ದು.. ಆ ಆಚರಣೆಯ ಏವತ್ತೂ ಬಿಡ್ತಿಲ್ಲೆ ಹೇಳಿ ಮನಸ್ಸಿಲೆ ಗಟ್ಟಿ ಮಾಡ್ಯೊಂಡೆ..
    ಅಂದವಾದ ಬರಹಕ್ಕೆ ಚೆಂದದ ಒಂದೊಪ್ಪ, ಒಟ್ಟಿನಮೇಲೆ, ತಡವಾಗಿ ಆದರೂ ಆನು ಓದಿದ್ದಕ್ಕೆ ಮನಸ್ಸು ತುಂಬಿತ್ತು, ಹೀಂಗಿಪ್ಪ ಲೇಖನಂಗ ಬರ್ತಾ ಇರಳಿ.. 🙂

    1. ಧನ್ಯವಾದಂಗೊ ಬಲ್ನಾಡುಮಾಣೀ..
      ನಿಧಾನಕ್ಕೆ ಶುದ್ದಿಯ ಸರಿಯಾಗಿ ಕೇಳಿ ಒಪ್ಪ ಕೊಟ್ಟಿದೆ, ಕೊಶಿ ಆತು ನಿನ್ನ ತಾಳ್ಮೆ! 😉

      ಬೈಲಿಂಗೆ ಬತ್ತಾ ಇರು.

  6. ಖ೦ಡಿತಾ ನಮ್ಮ ಊರಿಲ್ಲಿ ಸುಬ್ಬಯ್ಯಣ್ಣ ಹೇಳಿದ ಕ್ರಮ೦ಗೊ ಇತ್ತು.ಈಗ ಕೆಲವು ಕಡೆ ಇಪ್ಪಲೂ ಸಾಕು ಹೇಳ್ತಲಿ೦ಗೆ ಎತ್ತಿದ್ದು.ಎ೦ಗಳಲ್ಲಿ ಹತ್ತು ವರ್ಷ ಮೊದಲು ಬೇಸಾಯ ನಿಲ್ಲುಸುವನ್ನರ ಮಾಡಿದ್ದೆ.ನಮ್ಮ ಗೆದ್ದೇಲಿ ಬೆಳೆ ಇಲ್ಲದ್ದ ಮೇಲೆ ಇದೆಲ್ಲಾ ಬೇಡ ಹೇಳಿ ನಿಲಿಸಿದ್ದದು.ಬೇಸಾಯ ಹೇಳುವದು ಎ೦ಗಳ ಊರಿಲ್ಲಿ ಅತಿ ಸಾಹಸ೦ದಲೂ ಮೇಲಿನದ್ದಯಿದು.ಎಷ್ಟು ಬೇಜಾರ ಆದರೂ ನಿಲ್ಲುಸಲೇ ಬೇಕಾಗಿ ಬ೦ದಪ್ಪಗ ನಿಲ್ಲುಸೇಕಾವುತ್ತು.ಈಗ ದನ ಸಾ೦ಕುವದೂ ಅದೇ ಸ್ಥಿತೀಗೆ ಬತ್ತ ಇದ್ದು ಒ೦ದು ದಿನ ಅದೂ ನಿಲ್ಸೇಕಕ್ಕು.ಹೇ೦ಗಾರು ಮಾಡುವೆ ಹೇಳ್ಲೆ ಪ್ರಾಯ ನಮ್ಮ ಹೊಡೇಲಿ ಇಲ್ಲೆ.ಇನ್ನು ಕೊಡಗಿ೦ಗೂ ಹುತ್ತರೀಗೂ ಎನಗೂ ಒ೦ದು ಸ೦ಬ೦ದ ಇದ್ದು ಎನ್ನ ಮಗಳ ಮನೆ ಮಡಿಕೇರಿ.ಎನ್ನ ಮಗಳ ನೋಡ್ಲೆ ಬತ್ತ ದಿನ ನೆ೦ಪಿಲ್ಲದ್ದೆ ಹುತ್ತರಿ ದಿನವ ಹೇಳಿತ್ತಿದ್ದವು.ಹೇಳಿದ್ದಕ್ಕೆ ಬೇಕಾಗಿ ಅ೦ದೇ ಹುತ್ತರಿ ಮುಗುಸಿಯೊ೦ಡು ಬಯಿ೦ದವು ಹಾ೦ಗೂ ಆ ಸ೦ಬ೦ದ ಕೂಡಿಯೂ ಬಯಿ೦ದು.ಇರಲಿ ರಾಮಾಯಣದ ಎಡೆಲಿ ಪಿಟ್ಕಾಯಣ ಯೆ೦ತಕೆ.ಒಪ್ಪ೦ಗಳೊಟ್ಟಿ೦ಗೆ.

    1. ಕೃಷ್ಣಮಾವಾ°..
      ಅನುಭವದ ಒಪ್ಪಕೊಟ್ಟ ನಿಂಗೊಗೆ ವಂದನೆಗೊ..
      { ಇರಲಿ ರಾಮಾಯಣದ ಎಡೆಲಿ ಪಿಟ್ಕಾಯಣ ಯೆ೦ತಕೆ }
      ಇಲ್ಲೆಪ್ಪಾ.. ಎಂಗೊಗೆ ಎಲ್ಲವೂ ರಾಮಾಯಣವೇ. ಪಿಟ್ಕಾಯಣ ನವಗರಡಿಯ.

      ಇರಳಿ, ಕೊಡಗಿನ ಸಮ್ಮಂದ ಮುಂದರುದು ಅಜ್ಜ ಆದಿರೋ ತೋರುತ್ತು, ಅಲ್ಲದೋ?
      ಪಟ ನೋಡುವಗ ಹಾಂಗೆ ಕಾಣ್ತು.
      ಕೊಡಗಿನ ಶುದ್ದಿ ಗೊಂತಿಪ್ಪದರ ಹೇಳುವೊ°, ಆಗದೋ?

  7. ೧) ಪೊಲಿ ದೆನುಗೋಳುದು
    ೨) ಮನೆ ತುಂಬುದು=
    ಭತ್ತದ ಕದುರು (ಎಳದು ತೆಗದ್ದದು; ತುಂಡುಮಾದಿದ್ದದು ಅಲ್ಲ)
    ಪೊಲಿ ಬಳ್ಳಿ
    ಬಿದಿರ ಸೊಪ್ಪು
    ತಗ್ಗಿ (ಇಟ್ಟೋವು) ಸೊಪ್ಪು
    ದಡ್ಡಾಲ ಸೊಪ್ಪು + ನಾರು (ಕಟ್ಟುಲೆ ಇಪ್ಪದು)
    ಹಲಸಿನ ಸೊಪ್ಪು
    ಮಾವಿನ ಸೊಪ್ಪು
    ಅತ್ತಿ+ಇತ್ತಿ+ಗೋಳಿ+ಅಶ್ವತ್ಥ+ಪಾಲಾಶ (ಪಂಚ ವೃಕ್ಷಂಗೊ) ಸೊಪ್ಪುಗೊ
    – ಇಷ್ಟು ಮನೆ ತುಂಬುಲೆ ಬೇಕು- ಎಲ್ಲಾ ಸೇರ್ಸಿ ತೊಳಶಿ, ಬಲೀಂದ್ರ, ಪತ್ತಾಯ, ಎದುರು ಬಾಗಿಲಿನ ಹತ್ರೆ, ನಾಯೇರು(ನೇಗಿಲು), ಒಣಕ್ಕೆ(ಒನಕೆ), ತೊಟ್ಲು, ಗಾಡಿ(ವಾಹನ), ಹಟ್ಟಿ, ದೇವರ ಕೋಣೆ, ಫಲವೃಕ್ಷಂಗೊ- ಕ್ಕೆ ಎಲ್ಲಾ ಕಟ್ಟುದು.(ದೀಪಾವಳಿಂದ ಮೊದಲು). ದೀಪಾವಳಿಲಿ ಬಲೀಂದ್ರಂಗೆ ಕಟ್ಟಿದ್ದದರ ಪತ್ತಾಯಕ್ಕೆ ಸೇರ್ಸೆಕ್ಕು.
    ೩) ಹೊಸ್ತು
    = ಇದೆಲ್ಲಾ ನಮ್ಮೂರಿಲಿ ಇಪ್ಪ/ಇದ್ದ ಕ್ರಮಂಗೊ

    1. ಒರುಂಬುಡಿ ಅಣ್ಣಂಗೆ ನಮಸ್ಕಾರ ಇದ್ದು.

      ನಮ್ಮ ಕ್ರಮಂಗಳ ಎತ್ತಿ ತೋರುಸುವ ಹಾಂಗಿರ್ತ ಕ್ರಮಗಳ ಬರದು ಬೈಲಿಂಗೆ ತಿಳುಶಿದಿ.
      ತುಂಬಾ ಒಳ್ಳೆ ಕಾರ್ಯ.

      ಇನ್ನು ಮುಂದಕ್ಕುದೇ ಹೀಂಗೇ ಮಾಡಿ, ಹೊಸ-ಹಳೆ ವಿಶಯಂಗಳ ತಿಳುಶುತ್ತದರ್ಲಿ ಭಾಗಿ ಆಗಿ.
      ನಮ್ಮತ್ವವ ಒಳಿಶಲೆ ನಿಂಗಳದ್ದೂ ಒಂದು ಸೇವೆ ಆಗಲಿ, ಎಂತ ಹೇಳ್ತಿ?

      ನಮಸ್ತೇ..

      1. ಈ ಗಡಿಬಿಡಿ ಎಡೆಲಿ (fast life) ಬಹುಶಃ ಒಪ್ಪಣ್ಣನ ಬೈಲಿಲಿ ಮಾಂತ್ರ ಅವಕಾಶ ಕಾಣ್ತಶ್ಟೆ.”ಪುರುಸೊತ್ತಿಲ್ಲೆ” ಹೇಳುಲೆ ನಾಚಿಕೆ ಆವುತ್ತು. ಗೊಂತಿಪ್ಪದರೆಲ್ಲಾ ಹಂಚಿಗೊಂಬ°. ಒಳುದ್ದದೇ ಕಡಮ್ಮೆ ಅಲ್ಲದೋ?.

  8. “(ನೆಗೆಮಾಣಿಗೆ ಪೋಲಿ ಹೇಳಿ ಕೇಳುಗೋ ಏನೋ!)”=
    ಈ ಮಾಣ್ಯಂಗೊಕ್ಕೆಲ್ಲಾ ಬೇಕಾದಾಂಗೆ ಕೇಳುಗು; ಹೇಳಿದಾಂಗಲ್ಲ; ಇರಳಿ, ಪ್ರಾಯದ ದೊಷ ಇಕ್ಕು 🙂

  9. “ಎಲ್ಲೋರುದೇ “ಪೊಲಿ ಪೊಲಿ ದೇವಾ – ಪೊಲಿ ಪೊಲಿ ದೇವಾ” ಹೇಳಿ ಬೊಬ್ಬೆ ಹೊಡದು ಗವುಜಿಲಿ ದೇವರ ನೆಂಪು ಮಾಡ್ತದು.”=
    ತುಳುನಾಡಿಲಿ “ಪೊಲಿ ಲೆಪ್ಪುನೆ”= ಪೊಲಿ ದೆನುಗೋಳುದು, ಇದ್ದು

  10. “ಎಲ್ಲವನ್ನೂ ಹೇಳಿರೆ, ನಾವು ಬೆಳದ ಪಸಲುದೇ ಬಂತು!
    ಹ್ಮ್, ಗೆದ್ದೆ ಬೆಳದ್ದರ ಪಸಲು – ಕದುರು ಇದ್ದನ್ನೇ, ಅದರನ್ನುದೇ!
    ಆ ಕದುರು ಊಟ ನಿವಾರುಸುವ ಅನ್ನಪೂರ್ಣೇಶ್ವರಿಯೂ ಅಪ್ಪು,
    ಹೆಚ್ಚಾಗಿ ಒಳುದ್ದರ ಮಾರಿರೆ ಪೈಶೆರೂಪಲ್ಲಿ ಬಪ್ಪ ಲಕ್ಷ್ಮಿಯೂ ಅಪ್ಪು!
    ಮಕ್ಕೊಗೆ ಬರವಣಿಗೆ ಕಲುಶುವಗ ಸರಸ್ವತಿಯೂ ಆವುತ್ತು..
    ಹಾಂಗೇ, ಗೆದ್ದೆಲಿ ಹಸುರು ಹಸುರು ಆಗಿಪ್ಪ ಕದುರು ಪ್ರಕೃತಿದೇವತೆಯೂ ಅಪ್ಪು.
    ಅಂತೂ, ಕೃಷಿರಿಂಗೆ ಎಲ್ಲವೂ ಅಪ್ಪು..”=
    ಇದುವೇ ನಿಜವಾದ ವೈದಿಕ ಜೀವನ ಅಲ್ಲದೊ? “ವೇದನಾ ಪೂರ್ವಕ ಕರ್ಮ”

  11. “ಹಾಂಗಾಗಿ ಪ್ರಕೃತಿಯ ಪೂಜೆಮಾಡಿ ಆ ದೇವಿಯ ಕೊಶಿಪಡುಸುತ್ತ ಕಾರ್ಯ ಮಾಡ್ಳೇ ಬೇಕಿದಾ..”=
    ಈ ಪೂಜೆಗೆ ಆರತಿ,ನೈವೇದ್ಯ ಎಲ್ಲಾ ಸಾಕವುತ್ತಿಲ್ಲೆನ್ನೆ! ಪ್ರಕೃತಿಗೆ ಸರಿಯಾಗಿ ಎಲ್ಲವೂ-ಎಲ್ಲೋರೂ ಇರೆಕಲ್ಲದೊ?

  12. @”ಚಳಿಗಾಲ ಸುರು ಅಪ್ಪಲೆ ತಾಂತ್ರಿಕ ತೊಂದರೆ ಇದ್ದ ಕಾರಣ ಮಳೆಗಾಲವೇ ಮುಂದರಿತ್ತು – ಹೇಳ್ತ ಸಮೋಸವ ಗಬ್ಲಡ್ಕಭಾವ ಕಳುಸುತ್ತ ಒಂದೊಂದರಿ.. “=
    ಇದೆಂತ ಮೊದಮೊದಲಾಣ ಟೀವಿ ಕಾರ್ಯಕ್ರಮವೊ?

  13. ಹವ್ಯಕ ಸಂಸ್ಕೃತಿಯ ಬಗ್ಗೆ ಲಾಯಿಕಿಲ್ಲಿ ಬರವ ಒಪ್ಪಣ್ಣ ನಮ್ಮ ನೆರೆಕರೆಲಿಪ್ಪವರ ಸಂಸ್ಕೃತಿಯ ಬಗ್ಗೆಯೂ ಅಷ್ಟೇ ಚೆಂದಕ್ಕೆ ವಿವರಿಸಿ ತಿಳಿಶುವ ಪ್ರಯತ್ನ ಮಾಡಿದ್ದು ನಿಜಕ್ಕೂ ಮೆಚ್ಚೆಕಾದ ವಿಷಯ! ಇದೇ ರೀತಿ ನಮ್ಮ ಸುತ್ತಮುತ್ತ ಕಾಂಬ ವಿಶಿಷ್ಟ ಸಂಸ್ಕೃತಿ – ಜೀವನ ಕ್ರಮ, ಸಂಪ್ರದಾಯ, ಆಚರಣಗೊ ಇತ್ಯಾದಿ – ಇಪ್ಪ ಜಾತಿ, ಸಮಾಜ, ಸಮುದಾಯಂಗಳ ಬಗ್ಗೆಯೂ ಬರದರೆ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ.
    ಹಳತ್ತಿಂಗೆ ಮಡಗಿದ ಒಪ್ಪಣ್ಣನ ಶುದ್ದಿಗಳ ಪುರುಸೊತ್ತಿಪ್ಪಗ ತಿರುಗ ಹುಡುಕ್ಕಿ ಓದುವ ಅಬ್ಯಾಸ ಇದ್ದೆನಗೆ. ನಮ್ಮ ಸಂಸ್ಕೃತಿಯ ಬಗ್ಗೆ, ಬದಲಾಗೆಂಡಿಪ್ಪ ನಮ್ಮ ಭಾಷೆ, ಸಂಪ್ರದಾಯಂಗಳ ಬಗ್ಗೆ ಎಷ್ಟು ಬರದರೂ ಮುಗಿಯ! ಬಹುಶ: ಸಾಮಾಜಿಕ ಬದಲಾವಣಗಳ ಒಪ್ಪಿಗೊಂಬದಲ್ಲಿ ಹವ್ಯಕರಷ್ಟು ಬೇರೆಯವು ಮುಂದುವರುದ್ದೊವಿಲ್ಲೆ. ಇದೆಲ್ಲದರ ಬಗ್ಗೆ ಒಪ್ಪಣ್ಣನ ಶೈಲಿಲಿ, ಅವನ ಬಾಯಿಂದಲೇ (ಕೈಂದಲೇ?)ಬಂದರೆ, ಓದಲೆ, ಕೇಳ್ಳೆ ಕೊಶಿ ಆವುತ್ತು!

    1. ಸರ್ಪಮಲೆ ಮಾವಾ°….
      { ಸಾಮಾಜಿಕ ಬದಲಾವಣಗಳ ಒಪ್ಪಿಗೊಂಬದಲ್ಲಿ ಹವ್ಯಕರಷ್ಟು ಬೇರೆಯವು ಮುಂದುವರುದ್ದೊವಿಲ್ಲೆ }
      ಚಿನ್ನದಂತಾ ಮಾತು ಹೇಳಿದಿ!
      ನಿಜವಾಗಿಯೂ ಅದು ಸತ್ಯವೇ.
      ಹೊಸತ್ತರ ಸ್ವೀಕರುಸುಲೆ ನಮ್ಮೋರೇ ಮುಂದೆ. ಬೇರೆ ಪಂಗಡಂಗೊ ಇನ್ನುದೇ ಹೆಣಗಾಡ್ತಾ ಇದ್ದವು – ಅಲ್ಲದೋ?
      ನಾವು ಎಲ್ಲೋರುದೇ ಒಂದೊಂದರ ವಿವರುಸಲೆ ಹೆರಟ್ರೆ ಬೇಗ ಅಕ್ಕು, ಬೈಲಿಂಗೆ ಬನ್ನಿ, ಒಟ್ಟಿಂಗೆ ಶುದ್ದಿ ಹೇಳುವೊ°..
      ಆಗದೋ?

      ಹ್ರೇರಾಮ..

  14. ಭಾರೀ ಲಾಯ್ಕಾಯ್ದು!! ಆನುದೇ ಎರಡು ವರ್ಷ ಕೊಡಗಿಲಿ ಇದ್ದವ (ಕುಶಾಲನಗರ )!! ಆದರೂ ಇಷ್ಟೆಲ್ಲಾ ವಿಷಯ ಗೊಂತಿತ್ತಿಲ್ಲೇ !
    ಕೊಡಗು ಹೇಳುದೆ ಸ್ವರ್ಗ! ಅವರ ಸಂಸ್ಕೃತಿಯೇ ಒಂದು ಅದ್ಭುತ! ಮನೆ ಮನೇಲಿ ವೀರಯೋಧರ ಕೊಟ್ಟ ನಾಡು ಅದು!
    ಧನ್ಯವಾದಂಗೋ!

    1. ಅದಾ, ವೀರಯೋಧರ ಶುದ್ದಿ ಒಪ್ಪಣ್ಣಂಗೇ ಬಿಟ್ಟು ಹೋಗಿತ್ತು.
      ನೆಂಪುಮಾಡಿದ್ದಕ್ಕೆ ವಂದನೆಗೊ ಪುಟ್ಟಬಾವ..

      ನಿಂಗೊ ಕಲಿವಗ ನೆಂಪೊಳಿತ್ತ ಶುದ್ದಿ ಎಂತಾರಾಯಿದೋ? ಆಗಿದ್ದರೆ ಬೈಲಿಂಗೆ ಹೇಳಿ, ಆತೋ? 🙂

  15. ಬಿತ್ತಿದವಂಗೆ ಬೆಳೆ ಕೈಗೆ ಸಿಕ್ಕುವಾಗ ಧನ್ಯತೆ, ಸಂತೋಷ, ತೃಪ್ತಿ ಎಲ್ಲವೂ ಅಕ್ಕು. ಬೆಳೆ ಸರಿಯಾಗಿ ಸಿಕ್ಕೆಕ್ಕಾರೆ, ಪ್ರಕೃತಿಯ ವರ ಬೇಕು. ಅದರ ಸ್ಮರಿಸಿ ಆ ಗೆದ್ದೆಗೆ ನೀರು ಕೊಡ್ತ ಅಮ್ಮ ಕಾವೇರಿಯನ್ನೂ, ಕೊಡಗಿನ ಕಾವ ಅಧಿದೇವತೆ ಇಗ್ಗುತಪ್ಪನನ್ನೂ ಆರಾಧನೆ ಮಾಡಿ ಸಂಭ್ರಮ ಪಡುವ ಹುತ್ತರಿ ಹಬ್ಬದ ಸವಿವರವಾದ ಲೇಖನ ಲಾಯಿಕ ಆಯಿದು.
    ನಮ್ಮಲ್ಲಿಯೂ ಹೊಸ್ತು ಊಟ ಹೇಳಿ ಮಾಡುವ ಕ್ರಮ ಇದ್ದು.
    ಕದಿರಿನ ತಂದು ಪೂಜೆ ಮಾಡಿ ಮನೆ ತುಂಬಿ ಹೊಸ ಅಕ್ಕಿಂದ ಹಾಲು ಪಾಯಸ ಮಾಡಿ ಮನೆ ದೇವರಿಂಗೆ ನೈವೇದ್ಯಮಾಡಿ, ನಂತ್ರವೇ ಆ ಅಕ್ಕಿಯ ಉಪಯೋಗ ಮಾಡ್ತ ಕ್ರಮ ಬೆಳೆ ಬೆಳೆಶುತ್ತವರಲ್ಲಿ ನಡಕ್ಕೊಂಡು ಬತ್ತಾ ಇದ್ದು. ಫಸಲು ಸಿಕ್ಕಿದ್ದರ ದೇವರಿಂಗೆ ಮದಾಲು ಅರ್ಪಿಸಿ ಮತ್ತೆಯೇ ಮನೆ ಉಪಯೋಗಕ್ಕೆ ತೆಕ್ಕೊಂಗಷ್ಟೆ.

    1. ಕೊಡವರ ಭಾಷೆ ಕೇಳುವಗ ನಮ್ಮ ಭಾಷೆ, ಮಲೆಯಾಳ, ತುಳು ಎಲ್ಲವೂ ಮಿಶ್ರ ಆಗಿ, ಅವು ನಮ್ಮವೇ ಹೇಳ್ತ ಭಾವನೆ ಬತ್ತು. ಅವರ ಕ್ರಮಂಗಳ, ಹುತ್ತರಿ ಹಬ್ಬದ ಬಗ್ಗೆ ಒಪ್ಪಣ್ಣನ ಲೇಖನ ಲಾಯಕಿತ್ತು. ಶರ್ಮಪ್ಪಚ್ಚಿ ಹೇಳಿದ ಹಾಂಗೆ, ನಮ್ಮ ಮನೆಗಳಲ್ಲಿಯೂ ಹೊಸ್ತು ಹೇಳಿ ಹೊಸ ಅಕ್ಕಿ ಪರಮಾನ್ನ (ಬೆಳಿ ಪಾಚ) ಉಣ್ತ ಕ್ರಮ ಇದ್ದು. ಮನೆ ತುಂಬುವ ಕಾರ್ಯಕ್ರಮವೂ ಅಂದೇ ನೆಡೆತ್ತು. ಬತ್ತದ ಕದಿರಿನ, ಅಶ್ವಥ್ಥ, ಗೋಳಿ, ಅತ್ತಿ, ಇತ್ತಿ, ನೆಲ್ಲಿ ಮೊದಲಾದ ಸೊಪ್ಪುಗಳ ತಂದು ದೇವರ ಕೋಣೆಲಿ ಪೂಜೆ ಮಾಡುತ್ತವು. ಕದಿರಿನ, ಎಲ್ಲಾ ಸೊಪ್ಪುಗಳ ಸೇರುಸಿ ಒಲಿ ಬಳ್ಳಿಲಿ ಕಟ್ಟಿ, ಅದರ ಮನೆಯ ಪತ್ತಾಯಕ್ಕೆ, ಬಾಗಿಲಿಂಗೆ, ಕಪಾಟಿಂಗೆ ಎಲ್ಲ ಕಟ್ಟುತ್ತವು. ಒಳುದ ಎಲ್ಲಾ ಸೊಪ್ಪುಗಳ ಒಟ್ಟಿಂಗೆ ಕಟ್ಟಿ ಮನೆಯ ಮಾಡಿಂಗೆ ಇಡುಕ್ಕುಗು. ಮನೆಯ ಹಿರಿಯವರ ಒಟ್ಟಿಂಗೆ ಸೇರೆಂಡು ಈ ಕೆಲಸವ ಮಾಡ್ಳೆ ಸಣ್ಣ ಇಪ್ಪಗ ಕೊಶಿಯೇ ಕೊಶಿ. ನಂತರ, ಹೊಸ ಬತ್ತದ ಹೊಟ್ಟು ತೆಗದು, ಅಕ್ಕಿ ಮಾಡಿ ಅದರ ಹಾಲು ಪಾಯಸ. ಎಲ್ಲವೂ ನೆಂಪು ಮಾಡಿದ ಒಪ್ಪಣ್ಣಂಗೆ ಧನ್ಯವಾದಂಗೊ. ಈಗಾಣ ಪೇಟೆಯ ಮಕ್ಕೊಗೆ, ಎಲ್ಲ ಬಾಯಿಲೇ ವಿವರುಸಿ ಹೇಳೆಕಷ್ಟೆ !

      1. ಶರ್ಮಪ್ಪಚ್ಚಿ, ಬೊಳುಂಬುಮಾವಾ..
        ಆನು ಇಷ್ಟಪಟ್ಟು ನೋಡ್ತ ಎರಡೂ ಒಪ್ಪಂಗೊ ಒಟ್ಟಿಂಗೇ ಇದ್ದು – ಎರಡಕ್ಕೂ ಒಟ್ಟಿಂಗೇ ಉತ್ತರುಸುತ್ತೆ!

        ಶರ್ಮಪ್ಪಚ್ಚಿ ನೆಂಪುಮಾಡಿದ ಹೊಸ್ತು, ಬೊಳುಂಬುಮಾವ ನೆಂಪುಮಾಡಿದ ತೋರಣದ ಗವುಜಿ ನೋಡಿ ಕೊಶೀ ಆತು.
        ನಮ್ಮ ಕ್ರಮಂಗಳ ಎಡಿಗಾದ ಮಟ್ಟಿಂಗೆ ಒಳಿಶಿ ಮುಂದಾಣೋರಿಂಗೆ ಎತ್ತುಸುವೊ ಹೇಳ್ತ ಯೋಚನೆ ಕೊಡವರು ಹಲವು ತಲೆಮಾರು ಮದಲೇ ಮಾಡಿದ್ದವು – ಹೇಳಿ ಅನುಸುತ್ತಲ್ಲದೋ?

        ಇಬ್ರಿಂಗೂ ಶಿರಸಾ ವಂದನೆಗೊ..
        ಹರೇರಾಮ..

  16. ಕೊಡವರ ಪುತ್ತರಿ ಹಬ್ಬವ ರಜಾ ಹತ್ತರಂದ ನೋಡಿದ ಅನುಭವ ಆತು ಒಪ್ಪಣ್ಣ,ಧನ್ಯವಾದ.
    “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ” ಹೇಳಿ ಕೊಡಗಿನ,ಕೊಡವರ ಜೀವನವ ಕೊಂಡಾಡಿದ ಕವಿ ಪಂಜೆ ಮಂಗೇಶರಾಯರ ಪದದ ಕೆಲವು ಸಾಲುಗೊ ಮನಸ್ಸಿಲಿ ತಿರುಗಿತ್ತು.
    {ಮಳೆ ಕಮ್ಮಿ, ಹಾನಿ ಹೆಚ್ಚು – ಏನೇ ಇರಳಿ, ಪ್ರಕೃತಿಯೇ ಕೊಟ್ಟ ಪ್ರಸಾದ ಅಲ್ಲದೋ – ಕೊಟ್ಟಷ್ಟು ಸಾಕು ಹೇಳ್ತ ಮನೋಭಾವ ರೈತಂದು.
    ಈ ಸಾರ್ಥಕತೆ ರೈತಂಗೆ ಮಾಂತ್ರ ಅರಡಿಗಷ್ಟೆ.} – ಅಪ್ಪು, ಕೃಷಿ ಮಾಡುವ ರೈತರು ನಮ್ಮ ದೇಶದ ಬೆನ್ನೆಲುಬುಗೋ. ಪ್ರಕೃತಿಯ ವಿಕೃತಿಗಳ ,ಹೆಜ್ಜೆ ಹೆಜ್ಜೆಗೂ ಕಷ್ಟಂಗಳ ಎದುರಿಸಿದರೂ ಪರಿಸರಕ್ಕೆ ಹತ್ತರೆ ಆಗಿ ನೆಮ್ಮದಿಂದ ಬದುಕುವ, ನಮ್ಮ ಸಂಸ್ಕೃತಿಯ ಒಳುಶುವ ಬಂಧುಗೊಕ್ಕೆ ನಮನಂಗೋ .

    1. ಮುಳಿಯಭಾವಾ..
      ಪಂಜೆ ಮಂಗೇಶರಾಯರ ಪದ ನೆಂಪುಮಾಡಿ ಕೊಟ್ಟದು ಕೊಶೀ ಆತು.
      ಹುತ್ತರಿ ಹಬ್ಬವ ಒಳುಶುತ್ತ ಕೊಡವರಿಂಗೆ ಧನ್ಯವಾದ ಹೇಳ್ತ ಒಪ್ಪ ಈ ಶುದ್ದಿಯ ತೂಕ ಹೆಚ್ಚು ಮಾಡಿತ್ತು, ವಂದನೆಗೊ..

  17. ಈ ಸರ್ತಿ ಜಾನುವಾರು ಸಂತೆ ಎನಗೂ ನೋಡ್ಲೆ ಸಿಕ್ಕಿದ್ದು. ಜಾನುವಾರುಗೊ ಇದ್ದವು ಹೇಳ್ತದರ ಬಿಟ್ಟರೆ ಅಲ್ಲಿ ಒಂದೇ ಒಂದು ದನ ಇತ್ತಿಲ್ಲೆ! ಎತ್ತುಗಳೂ, ಗೋಣಂಗಳೂ ಮಾಂತ್ರ. ಅದರಲ್ಲೂ ಸುಮಾರು 900 ಜಾನುವಾರು ಬಂದದರಲ್ಲಿ 750 ಸುರುವಾಣ ದಿನವೇ ಮಾರಾಟ ಆಯಿದಡ. ತೆಕ್ಕೊಂಡು ಹೋಪಲೆ ನಿವುರ್ತಿ ಇಲ್ಲದ್ದ ಕಾರಣ ಬಾಕಿ ಆದ್ದದು. ತೆಕ್ಕೊಂಬಲೆ ಬಂದವುದೆ ಹಾಂಗಿಪ್ಪವೇ. ಇದೆಲ್ಲ ಕಡಿವಲೇ ಹೋಪದು ಹೇಳಿದವು ಅಪ್ಪಚ್ಚಿ. ಕೇಳುವಾಗಲೇ ಬೇಜಾರಾವುತ್ತು. ಬಹುಷಃ ಇದೇ ಕಾರಣಕ್ಕೆ ಅಲ್ಲಿ ಈ ಸರ್ತಿ ಜಾನುವಾರು ಜಾತ್ರೆ ಮಾಡ್ಲೆ ಅವಕಾಶ ಕೊಡ್ತಿಲ್ಲೆ ಹೇಳಿಯೊಂಡು ಇತ್ತಿದ್ದವಡ ನಮ್ಮವರ ಸಂಘಟನೆಗೊ.

    1. ಈ ಎತ್ತುಗವಕ್ಕು, ಗೋಣಂಗವಕ್ಕೂತುಂಬಾ ಬೇಡಿಕೆ ಇದ್ದು …………………………….

    2. ಒಪ್ಪವಾದ ಒಪ್ಪ ಕೊಟ್ಟ ಹಳೆಮನೆ ಅಣ್ಣಂಗೆ ಒಪ್ಪಂಗೊ.
      ಇಷ್ಟೆಲ್ಲ ವಿಶಯ ಮೊನ್ನೆ ಪಂಜಚಿಕ್ಕಯ್ಯಂದ ಹೇಳಿತ್ತಿದ್ದವು, ಆದರೆ ಎಲ್ಲ ಹೇಳುಲೆ ಹೋಯಿದಿಲ್ಲೆ, ಸೂಕ್ಷ್ಮವಾಗಿ ತೋರುಸಿ ಬಿಟ್ಟೆ.
      ನಿಂಗೊ ವಿವರುಸಿದ್ದು ನೋಡಿ ಕೊಶಿ ಆತು, ವಿಶಯ ಗ್ರೇಶಿ ಬೇಜಾರಾತು.
      ಕುಂಬ್ಳೆ-ಕಾಸ್ರೋಡು ಮಾರ್ಗದ ಕರೆಲಿ ಇಲ್ಲೆಯೋ – ಅದೇ ನಮುನೆ ಆಯಿಕ್ಕಲ್ಲದೋ? ಪಾಪ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×