ನಂಜಿಲಿಯೇ ಹುಟ್ಟಿ ದ್ವೇಷವನ್ನೇ ಉಸಿರಾಡುವ ಪಾತಕಿಸ್ತಾನ!

ಪ್ರತಿ ಒರಿಶದ ಜೆನವರಿ ಇಪ್ಪತ್ತಾರು ಬಪ್ಪಗಳೂ ಬೋಚಬಾವಂಗೆ ಒಂದರಿ ಭಾರತದ ಧ್ವಜ ನೆಂಪಪ್ಪಲಿದ್ದು.
ಬೋಚಬಾವಂಗೆ ಮಾಂತ್ರ ಅಲ್ಲ, ಎಲ್ಲೋರಿಂಗುದೇ – ಗಣರಾಜ್ಯೋತ್ಸವ ಅಲ್ಲದೋ!
ಭಾರತವ ಇಂಡಿಯಾ ಮಾಡ್ತೇನೆ ಹೇಳಿ ಹೆರಟೋರು ಆ ದಿನ ಮುಗುಶಿದವಾಡ.
ಅಷ್ಟನ್ನಾರ ಭಾರತದೇಶಲ್ಲಿ ಸುಮಾರು ರಾಜ್ಯಂಗಳೂ, ಅವರವರ ರಾಜಧರ್ಮಂಗಳೂ ಇದ್ದತ್ತು; ಎಲ್ಲ ಒಟ್ಟಾಗಿ ಬೆಳದ ಇಂಡಿಯಕ್ಕೆ ಹೊಸತ್ತೊಂದು ಸಂವಿಧಾನ. ಅಷ್ಟನ್ನಾರ ಇದ್ದ ರಾಜ್ಯಂಗಳನ್ನೂ ಭಾರತದ ಹಡಗಿನೊಳ ಮುಳುಗುಸಿ, ಜೆನಂಗೊ ಮಾತಾಡ್ತ ಭಾಷೆಯ ಮೇಗೆ ವಿಂಗಡಣೆ ಮಾಡಿಗೊಂಡು – ಅರೆಬೆಂದ ರಾಜ್ಯಪದ್ಧತಿ ಬಂತು. ಅಷ್ಟನ್ನಾರ ಒಟ್ಟಿಂಗೇ ಇದ್ದಿದ್ದ ಕೆಲವು ರಾಜ್ಯಂಗೊ ಬೇರೆಯೇ ದೇಶ ಆಗಿ ಬಿಟ್ಟದು ಅದರಿಂದಲೂ ಕರಾಳ. “ಬ್ಯಾರಿಗೊಕ್ಕೆ ಪ್ರತ್ಯೇಕ ದೇಶ ಬೇಕು” ಹೇಳ್ತ ಹೋರಾಟ, ಕೊನೆಗೆ ದ್ವೇಷಕ್ಕೆ ತಿರುಗಿ ಪಾತಕಿಸ್ಥಾನ ಆಗಿ ರೂಪುಗೊಂಡತ್ತು.
~

ಎಂತದೇ ಕೆಲಸ ಮಾಡ್ತರೂ – ಜೋಯಿಷಪ್ಪಚ್ಚಿ ಒಂದರಿ ಪಂಚಾಂಗ ಬಿಡುಸಿ ನೋಡಿಕ್ಕಿಯೇ ಹೆರಡುದು.
ಪೇಟಗೆ ಬೀಡಿತಪ್ಪಲೆ ಹೆರಡ್ತರೆ ಈ ಸಂಗತಿ ಲಗಾವು ಇಲ್ಲೆ; ಆದರೆ ದೊಡ್ಡಮಟ್ಟಿನ – ಕೂಸು ನೋಡುಸ್ಸೋ, ಮನೆ ಕಟ್ಟುಸ್ಸೋ, ಜಾಗೆ ನೋಡುಸ್ಸೋ – ಹೀಂಗಿರ್ಸು ಎಂತಾರಿದ್ದರೆ ರಾಶಿಬಲ, ಗುರುಬಲ ಹೇಂಗಿದ್ದು ನೋಡಿಕ್ಕಿಯೇ ಮುಂದರಿಗು. ಸಾಮಾನ್ಯ ಭಾರತೀಯರು ಇದನ್ನೇ ಅನುಸರುಸುತ್ತವು. ಒರಿಸ್ಸಾಲ್ಲಿ ಕ್ಷಿಪಣಿ ಹಾರ್ಸಲೆ ಆಗಿಕ್ಕು, ಮೈತುಂಬಿದ ಕಾವೇರಿಗೆ ಬಾಗಿನ ಕೊಡ್ಳೆ ಆಗಿಕ್ಕು, ಹೊಸ ಮುಖ್ಯಮಂತ್ರಿ ಪ್ರಮಾಣವಚನ ತೆಕ್ಕೊಂಬಲೆ ಆದಿಕ್ಕು – ಮೂರ್ತ ನೋಡುಸ್ಸು ಇದ್ದೇಇದ್ದು.
ಒಳ್ಳೆ ಮೂರ್ತಲ್ಲಿ ಶುರು ಆದರೆ ಚೆಂದಕೆ ಇರ್ತು, ಒಳ್ಳೆ ಬಾಳತನ ಬತ್ತು ಹೇಳ್ತದು ಅಜ್ಜಂದ್ರು ಕಂಡುಗೊಂಡ ನಂಬಿಕೆ. ಅದರಿಂದಾಗಿಯೇ, ಒಳ್ಳೆಕೆಲಸ ಮಾಡ್ತರೆ ನೆಡುಇರುಳು ಮಾಡವು.
ಆದರೆ, ಈ ಪಾತಕಿಸ್ಥಾನ ಹೇಳ್ತ ದೇಶ ಹುಟ್ಟಿದ್ದು ಯೇವಗ? ಆ ಹೊತ್ತು ಹೇಂಗಿತ್ತು?
ನಟ್ಟ ನೆಡಿರುಳು! ಸೂರ್ಯನ ಬೆಣಚ್ಚೇ ಇಲ್ಲದ್ದೆ, ಕಾರ್ಗಾಣ ಕಸ್ತಲೆ ಹೊತ್ತಿಂಗೆ, ಸಾವಿರಾರು. ನೆತ್ತರ ಹೊಳೆ ಹರ್ಕೊಂಡಿದ್ದ ಸಮಯಕ್ಕೆ – ಪಾತಕಿಸ್ಥಾನದ ಉದಯ ಆತು.
ದ್ವೇಷಲ್ಲಿಯೇ ಹುಟ್ಟಿದ ಆ ದೇಶ ಅದೆಷ್ಟು ಚೆಂದಕೆ ಸೇರಿಗೊಂಗು ನಮ್ಮೊಟ್ಟಿಂಗೆ?

~

ಪಾತಕಿಸ್ಥಾನ ಹೇಂಗೆ ಹುಟ್ಟಿತ್ತು – ಕೇಳಿರೆ ಗುಣಾಜೆಮಾಣಿ ಸರಿಯಾಗಿ ವಿವರ್ಸುತ್ತ°. ಈಗ ಹಾಂಗೆ ವಿವರ್ಸುತ್ತೋರ “ಕೋಮುವಾದಿಗಳು” ಹೇಳ್ತ ಕ್ರಮ ಇದ್ದರೂ – ಗುಣಾಜೆಮಾಣಿಗೆ ಸತ್ಯವೇ ಮುಖ್ಯ.
ಅವ° ಅಂದೊಂದರಿ ಹೇಳಿದ ಕತೆಯೇ ಒಪ್ಪಣ್ಣಂಗೆ ಮರದ್ದಿಲ್ಲೆ. ನೆಹರು-ಜಿನ್ನ ಹೇಳ್ತ ಇಬ್ರ ತಲೆಲಿ ತುಂಬಿದ್ದ ಅಹಂಭಾವವೇ ಈಗ ಹೀಂಗೆ ದೇಶ ಎರಡಾಗಿ ತುಂಡಾಗಿ ಹೋಳಾಗಿ ಹಾಳಾಗಿ ಹುಣ್ಣಾಗಿ ಹೋಪಲೆ ಕಾರಣ – ಹೇದು ಎಷ್ಟು ಜೆನಕ್ಕೆ ಗೊಂತಿಕ್ಕು!?
ನೆಹರುವಿಂಗೆ ಭಾರತದ ಪ್ರಧಾನಿ ಆಯೇಕು – ಹೇಳ್ತ ಆಶೆ ಇತ್ತಾಡ. ಅದೇ ಆಶೆ ಜಿನ್ನಾಂಗೂ ಇದ್ದತ್ತಡ.
ಆಶೆ ಎಲ್ಲೋರಿಂಗೂ ಇರ್ತು; ಆದರೆ ಅದೃಷ್ಟ ಎಲ್ಲೋರಿಂಗಿರ್ತಿಲ್ಲೆ ಇದಾ – ಮೌನಮೋಹನನ ಹಾಂಗೆ? ಇಲ್ಲೆ!
ಆದರೆ, ನೆಹರುವಿಂಗೆ ಸ್ವಂತಬಲವೂ ಇತ್ತಿಲ್ಲೆ, ಜೆನ ಬಲವೂ ಇದ್ದತ್ತಿಲ್ಲೆ. ಜಿನ್ನಂಗೆ ಇದೆರಡೂ ಇದ್ದತ್ತು. ಇದಲ್ಲದ್ದೆ, ಹೆರಾಣ ಮಟ್ಟಿಂಗೆ ಕಾಣ್ತ ವಿತ್ಯಾಸ ಎಂತರ?
ನೆಹರು ಹಿಂದು, ಜಿನ್ನ ಬ್ಯಾರಿ ಇದಾ. ಅದನ್ನೇ ದಾಳ ಆಗಿ ಮಡಿಕ್ಕೊಂಡು ಇಡೀ ದೇಶಲ್ಲೇ – ಮನಸ್ಸು ಮನಸ್ಸಿಲೇ ವಿಭಜನೆಯ ಬೀಜ ಹುಟ್ಟುಸಿತ್ತು ಜಿನ್ನಾ.
ಬುದ್ಧಿಮಾತು ಹೇಳೇಕಾದ ಗಾಂಧಿ ಅಜ್ಜಂಗೆ “ಒಳ್ಳೆ ಜೆನ” ಆಯೇಕು; ಎಲ್ಲೋರ ಕೈಂದ ಒಪ್ಪ ತೆಕ್ಕೋಳೇಕು – ಹೇಳ್ತ ಆಶೆ. ಇದೆಲ್ಲ ಸಮಸ್ಯೆಗಳೂ ಒಂದಕ್ಕೊಂದು ಸೇರಿ – ಜಿನ್ನಾನ ಜಾತಿರಾಜಕೀಯಕ್ಕೆ ಪುಷ್ಟಿ ಸಿಕ್ಕಿತ್ತಾಡ.
“ಬ್ಯಾರಿಗೊಕ್ಕೆ ಪ್ರತ್ಯೇಕ ದೇಶ ಮಾಡೇಕು” ಹೇಳ್ತ ಬಲವಾದ ಕೋರಿಕೆ ದೇಶದ ಎಲ್ಲಾ ಹೊಡೆಂದಲೂ ಬಪ್ಪ ಹಾಂಗೆ ಮಾಡಿತ್ತಾಡ.

~

ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟದ ಬೆಶಿ.
ಸುಭಾಶ್ ಚಂದ್ರ ಬೋಸರ ಹಾಂಗಿರ್ತ ಶಿಸ್ತುಬದ್ಧ ಆಧುನಿಕತೆಯ ಹೋರಾಟಗಾರರಿಂದ ಹಿಡುದು, ವಿವೇಕಾನಂದರ ಹಾಂಗಿರ್ತ ಸ್ಪೂರ್ತಿದಾಯಕರ ಒರೆಂಗೆ- ಎಲ್ಲೋರುದೇ ಒಂದಲ್ಲ ಒಂದು ರೀತಿಲಿ ಭಾರತಮಾತೆಯ ದಾಸ್ಯಮುಕ್ತಕ್ಕಾಗಿ ದುಡ್ಕೊಂಡು ಇತ್ತಿದ್ದವು.
ಹೀಂಗೆ – ಭಾರತಕ್ಕೆ ಸ್ವಾತಂತ್ರ್ಯ ಕೊಡಿ- ಹೇಳಿ ಎಲ್ಲೋರುದೇ ಒಕ್ಕೊರಲಿಲಿ ಹೇಳಿಂಡಿಪ್ಪಾಗಳೇ, “ಎಂಗೊಗೆ ಪಾತಕಿಸ್ಥಾನ ಮಾಡಿಕೊಡಿ” ಹೇಳಿ ಕೆಲವು ಜೆನ ಬ್ರಿಟಿಷರ ಹತ್ತರೆ ರಂದುಲೆ ಸುರು ಮಾಡಿದವಾಡ.
ನಮ್ಮೊಳಾಣ ಜಗಳವ ಮತ್ತೆ ನಿಧಾನಕ್ಕೆ ಪರಿಹರುಸುವೊ, ಮದಾಲು ಆ ಮೂರ್ನೇ ಜೆನ ಹೋಗಲಿ – ಹೇದು ತಲಗೆ ಹೋಯಿದಿಲ್ಲೆ ಅವಕ್ಕೆ.
ಅವು ದೊಡ್ಡೋರು, ಈಗ ಹೆರಡುವ ಮದಲೇ ಎಂಗೊಗೊಂದು ಅಶನದ ದಾರಿ ಮಾಡಿ ಕೊಡ್ಳಿ – ಹೇದು ಸಣ್ಣತನದ ಬುದ್ಧಿವಂತಿಕೆ ಮಾಡಿದವು.
ಜಿನ್ನಾನ ಹಾಂಗಿರ್ತ ಸ್ವಾರ್ಥಿಗಳ ಹೋರಾಟ ಎಷ್ಟು ಕ್ರೂರವಾಗಿತ್ತು ಹೇದರೆ, ದಾರಿಹೋಕ ಹಿಂದುಗೊ, ವ್ಯಾಪಾರಿಗೊ – ಎಲ್ಲರನ್ನುದೇ ಕೊಚ್ಚಿ ಕೊಲ್ಲುವಷ್ಟು ಮಟ್ಟಿಂಗೆ ಬೆಳದಿತ್ತು.
ಪಾಪ, ಪಾತಕಿಸ್ಥಾನ ಮಾಡ್ತದಕ್ಕೂ, ಹಳ್ಳಿಹಳ್ಳಿಯ ಪಾಪದೋರ ಕೊಲ್ಲುತ್ತದಕ್ಕೂ ಎಂತ ಸಮ್ಮಂದ ಅಪ್ಪಾ!? ಅಂತೂ – ಅವರ ಹಿಂಸಾಚಾರ ತೀವ್ರಮಟ್ಟಕ್ಕೆ ಎತ್ತಿದ ಒಂದು ಸಮಯಕ್ಕೆ “ದೇಶ ಎರಡು ಮಾಡ್ತದು” ಹೇದು ನಿಗಂಟಾತು.

ಪಾತಕಿಸ್ಥಾನ ಕೇಳಿದ ಜಾಗೆಗೊ ಎಂತರ?

 • ನಮ್ಮ ನಾಗರೀಕತೆ ಉದಯ ಆದ, ನಮ್ಮ ಅಜ್ಜಂದ್ರು ವೇದದ ಸಾರವ ತಿಳ್ಕೊಂಡ ಸಿಂಧೂನದಿ ಬಯಲು – ಸಿಂಧ್ – ಇದರ ಹೊಂದಿಗೊಂಡ ವಿಶಾಲ ಭೂಪ್ರದೇಶ.
 • ನಮ್ಮ ಅಜ್ಜಂದ್ರು “ಅಮ್ಮ”ನ ಸ್ಥಾನ ಮಡಗಿ ಪೂಜೆ ಮಾಡಿದ ಗಂಗಾನದಿ ಬಯಲು – ಬಂಗಾಳವ ಹೊಂದಿಗೊಂಡ ಭೂಪ್ರದೇಶ.

ಈ ಎರಡು ಜಾಗೆಲಿ ಆಗಿ ಮುಸ್ಲಿಂ ಬಾಹುಳ್ಯ ಇಪ್ಪದು ಹೇಳ್ತ ಕಾರಣಕ್ಕೆ ಈ ಎರಡು ಭೂಪ್ರದೇಶವ “ಪಾತಕಿಸ್ಥಾನ” ಹೇದು ಹೆಸರು ಮಡಗಿ ಬೇರೆಯೇ ದೇಶ ಆಗಿ ಗುರುತಿಸಿದವು.
~

ಸರಿ, ಇಸ್ಲಾಂ ಮತಕ್ಕೆ ಹೇಳಿಯೇ ಒಂದು ದೇಶ ಮಾಡಿದ ಮತ್ತೆ ಇನ್ನೆಂತರ? ಅಲ್ಲಿದ್ದ ಇತರ ಕಾಫಿರರ ಅಟ್ಟುದು / ಮೆಟ್ಟುದು.
ಸಾವಿರ ಸಾವಿರ ಸಂಖ್ಯೆಲಿ ಪಾತಕಿಸ್ಥಾನಲ್ಲಿ ಹಿಂದುಗೊ ಸತ್ತವು!
ಗುಣಾಜೆಮಾಣಿ ಎಂತರ ಕೇಳುಸ್ಸು ಹೇದರೆ – ಅಲ್ಲಿಂದ ಹಿಂದುಗೊ ಪೂರ ಭಾರತಕ್ಕೆ ಬರೆಕ್ಕಡ. ಅಂಬಗ ಭಾರತಂದ ಬ್ಯಾರಿಗೊ ಪೂರ ಅಲ್ಲಿಗೆ ಹೋಗೆಡದೋ? ಅವಕ್ಕೆ ಹೇಳಿಯೇ ಮಾಡಿದ ದೇಶ ಇಪ್ಪಗ ಇಲ್ಲಿ ಎಂತರ ಗೆಬ್ಬಾಯಿಸುದು?
ಸಹಜವಾಗಿಯೇ ಈ ಪ್ರಶ್ನೆ ಎಲ್ಲೋರ ಮನಸ್ಸಿಲಿ ಬತ್ತು. ಆದರೆ “ಅವರದ್ದು ಬ್ಯಾರಿ ದೇಶ ಆದರೂ, ನಮ್ಮದು ಜಾತ್ಯತೀತ ರಾಷ್ಟ್ರ” ಹೇದು ಗಾಂಧಿಅಜ್ಜ ಸಮದಾನಲ್ಲಿ ಹೇಳಿ ಕೈ ಕಟ್ಟಿ, ಕೈಕಟ್ಟುಸಿ ಕೂದವು!
ಒಂದು ಬ್ಯಾರಿದೇಶ, ಮತ್ತೊಂದು ಜಾತ್ಯತೀತ ರಾಷ್ಟ್ರ – ಬ್ಯಾರಿಗೊ ಎರಡ್ರಲ್ಲಿಯೂ ಇಪ್ಪಲಕ್ಕು. ಹಿಂದುಗೊಕ್ಕೆ ಜಾತ್ಯತೀತ ರಾಷ್ಟ್ರಲ್ಲಿ ಎಡಿಗಾರೆ ಬದ್ಕೇಕು.
ಮನುಕುಲದ ಇತಿಹಾಸಲ್ಲಿ ನೆಡದ ಬೃಹತ್ ಅಸಮತೋಲನದ ಇತ್ತೀಚಿನ ಉದಾಹರಣೆ – ಹೇಳ್ತದು ಗುಣಾಜೆಮಾಣಿಯ ಅಭಿಪ್ರಾಯ.

~

ಕೆಲವು ಜೆನರ ಸ್ವಾರ್ಥಕ್ಕಾಗಿ ಇರುಳು ಉದಿ ಆಯೇಕಾರೆ ಹುಟ್ಟಿದ ದೇಶದ – ಸ್ವಂತಿಕೆ ಎಂತರ? ಎಂತದೂ ಇಲ್ಲೆ. ಇತಿಹಾಸ ಎಂತರ? ಎಂತದೂ ಇಲ್ಲೆ. ಅಸ್ತಿತ್ವ ಎಂತರ? ಅದೂ – ಎಂತದೂ ಇಲ್ಲೆ.
ಹಾಂಗೆ ನೋಡಿರೆ ಒಂದು ದೇಶ ಹೇದರೆ ಎಂತ್ಸು?
ಒಂದು ಇತಿಹಾಸಂದಾಗಿ ಒಂದು ದೇಶ ಹೇಳ್ತ ಕಲ್ಪನೆ ಹುಟ್ಟುತ್ತು.
ಭರತವರ್ಷ ಹೇಳ್ತ ವಿಶಾಲ ಭೂಪ್ರದೇಶಕ್ಕೆ ಸಹಸ್ರಮಾನದ ಇತಿಹಾಸ ಇದ್ದು. ಎಷ್ಟೋ ರಾಜರು ಭಾರತಮಾತೆಯ ಪಾದ ತೊಳದು, ಇಲ್ಯಾಣ ಜೆನರ ಸಾಂಕಿ, ಸಲಹಿ ಮಣ್ಣಾಯಿದವು.
ಎಷ್ಟೋ ಕಾಲಂದ ಇಲ್ಲಿ ಸಾಹಿತ್ಯ-ವಿಜ್ಞಾನ-ಸಂಸ್ಕಾರ-ಸಂಸ್ಕೃತಿಗೊ ಬೆಳದು ಬಯಿಂದು. ಇಲ್ಯಾಣ ಜೀವನಕ್ಕೇ, ಅದರದ್ದೇ ಆದ ಸಂಸ್ಕಾರ ಇದ್ದು, ಅದರದ್ದೇ ಆದ ಇತಿಹಾಸ ಇದ್ದು.
ಕಾಶ್ಮೀರಂದ ಕನ್ಯಾಕುಮಾರಿ ಒರೆಂಗೂ – ಹಲವು ಭಾಷೆಯ, ಹಲವು ಧರ್ಮದ, ಹಲವು ಸಿರಿವಂತಿಗೆಯ, ಹಲವು ಬುದ್ಧಿಮತ್ತೆಯ, ಹಲವು ಬಣ್ಣದ ಜೆನಂಗೊ ಇದ್ದವು.
ಇಷ್ಟೆಲ್ಲ ಬೇರೆಬೇರೆ ಇದ್ದರೂ – ಎಲ್ಲೋರಿಂಗೂ “ಇತಿಹಾಸವೇ” ಅಯಸ್ಕಾಂತ. ಅವೆಲ್ಲರನ್ನೂ ಕಟ್ಟಿಮಡಗಿದ್ದು ನಮ್ಮ ರಾಮಾಯಣ, ಮಹಾಭಾರತ ಇತ್ಯಾದಿ ಇತಿಹಾಸ-ಪುರಾಣಂಗೊ.
ಅದರ್ಲಿ ಏಕತೆ ಇಪ್ಪ ಕಾರಣವೇ ಎಲ್ಲೋರುದೇ ಒಟ್ಟಿಂಗಿದ್ದು. ಮುಂದಕ್ಕೂ ಒಟ್ಟಿಂಗೇ ಇರ್ತು.

ಆದರೆ, ಪಾತಕಿಸ್ಥಾನಕ್ಕೆ ಸ್ವಂತದ್ದು ಎಂತ ಇದ್ದು?
ಅಲ್ಯಾಣ ಇತಿಹಾಸ ಹೇದರೆ ಭಾರತದ ಇತಿಹಾಸವೇ – ಸ್ವಾತಂತ್ರ ಸಿಕ್ಕುವಲ್ಲಿ ಒರೆಂಗುದೇ. ಅಲ್ಲಿಂದ ಮತ್ತೆ ಮಾಂತ್ರ ಅವರದ್ದು ಬೇರೆ ಇತಿಹಾಸ ಅಪ್ಪದು.
ಅಲ್ಲದೋ? ಇತಿಹಾಸ ಇಲ್ಲದ್ದ ದೇಶಕ್ಕೆ ಭವಿಷ್ಯ ಇಕ್ಕೋ? ಇಲ್ಲೆ. ಅತವಾ, ಇತಿಹಾಸ ಒಂದೇ ಇದ್ದುಗೊಂಡ ದೇಶ ಬೇರೆಬೇರೆ ಆಗಿ ಬದ್ಕುಲೆ ಎಡಿಗೋ? ಎಡಿಯ!

“ಇಸ್ಲಾಂ” ಹೇಳ್ತ ಒಂದು ಧರ್ಮ ಮಾಂತ್ರ ಪಾತಕಿಸ್ಥಾನ ಇನ್ನೂ ಜೀವಂತ ಇಪ್ಪಲೆ ಕಾರಣ.
ಅದು ಆ ನೆಲದ ಧರ್ಮವೂ ಅಲ್ಲ- ಪರದೇಶವಾದ ಅರಬ್ ಲಿ ಹುಟ್ಟಿದ್ದು. ಅಲ್ಯಾಣ ಜೆನಜೀವನಕ್ಕೆ ಅಕ್ಕಾದ ಹಾಂಗಿಪ್ಪ ಧರ್ಮ.
ಆ ಧರ್ಮವ ಪಾತಕಿಸ್ಥಾನಲ್ಲಿ ದತ್ತಕ್ಕೆ ತೆಕ್ಕೊಂಡು ಸಾಂಕುಸ್ಸು. ಆ ಧರ್ಮ ಎಷ್ಟು ಶಾಶ್ವತ ಹೇಳ್ತ ಸಂಶಯ ವಿದ್ಯಾವಂತರಾದ ಎಲ್ಲೋರಿಂಗೂ ಬತ್ತು. ಅದಿರಳಿ.
ಒಂದೇ ಧರ್ಮ ಆದರೂ, ಒಂದೇ ತಲೆಮಾರು ಕಳಿಯೇಕಾರೆ – ಪೂರ್ವಪಾತಕಿಸ್ಥಾನ, ಪಶ್ಚಿಮ ಪಾತಕಿಸ್ಥಾನ– ಎರಡು ಹೋಳಾಗಿ ಬೇರೆಬೇರೆಯೇ ದೇಶ ಆಗಿ ಹೋತು.
ಒಂದೇ ಕಾರಣಕ್ಕೆ ಭಾರತಂದ ಹೆರ ಹೋದ್ದು, ಒಂದೇ ಧರ್ಮಲ್ಲಿ ಜೀವನ ಮಾಡ್ತರೂ – ಒಟ್ಟಿಂಗಿಪ್ಪಲೆ ಎಡಿಗಾಯಿದಿಲ್ಲೆ.
ಎಂತಕೆ ಹೇದರೆ, ಭವ್ಯ ಇತಿಹಾಸದ ಮೇಗೆ ಕಟ್ಟಿದ ದೇಶ ಅಲ್ಲ ಅದು; ಹಾಂಗಾಗಿ.

~

ಕೊರಪ್ಪಲೆ ಬಂದ ನಾಯಿ ಪೆಟ್ಟುತಿಂದು ಶರಣಾಗತಿ ಆದ ಭವ್ಯ ಸಂದರ್ಭ!!

ಕೊರಪ್ಪಲೆ ಬಂದ ನಾಯಿ ಪೆಟ್ಟುತಿಂದು ಶರಣಾಗತಿ ಆದ ಭವ್ಯ ಸಂದರ್ಭ!!

ಇದೆಲ್ಲ ಈಗ ಎಂತಗೆ ನೆಂಪಾತು ಹೇದರೆ; ಪಾತಕಿಸ್ಥಾನ ಉದಯ ಆದ ಮತ್ತೆ, ಇಂದಿನ ಒರೆಂಗೂ – ಭಾರತಮಾತೆಗೆ ಕೊಟ್ಟ ಉಪದ್ರ ಅಷ್ಟಿಷ್ಟಲ್ಲ.
ದಿನದಿನವೂ ಬೇಲಿ ಮುಂದೆ ಹಾಕಿ ಜಾಗೆ ನುಂಗುದು, ಕಾದಲೆ ಬಂದು ಪೆಟ್ಟು ತಿಂಬದು, ಎಂತದೂ ಎಡಿಯದ್ದರೆ ಶಿಖಂಡಿಗಳ ಹಾಂಗೆ ಜೆನ ಬಿಟ್ಟು ಉಪದ್ರ ಮಾಡುಸುದು – ಹೀಂಗೇ ನಾನಾ ನಮುನೆ “ಧರ್ಮ”ದ ಉಪದ್ರ ಕೊಡ್ತಾ ಇದ್ದು.
ಕುಪುತ್ರೋ ಜಾಯೇತ ಕ್ವಚಿದಪಿ ಕು ಮಾತಾ ನ ಭವತಿ – ಶಂಕರಾಚಾರ್ಯರು ಹೇಳಿದ ಹಾಂಗೆ, ಭಾರತ ಹೇಳ್ತ ಅಮ್ಮ ಎಲ್ಲವನ್ನೂ ಸಹಿಸೆಂಡು ಸುಮ್ಮನೇ ಕೂಯಿದು.
ಮೊನ್ನೆ ಮೊನ್ನೆ – ಕಳುದವಾರ ಹಾಂಗೇ ಆತಿದಾ. ಗಡಿದಾಂಟಿ ಸುಮಾರು ಒಳ ಬಂದರೂ – ಅಲ್ಲೇ ಈಗಾಣ ಬೇಲಿ ಹಾಕಿರೂ – ಆ ಬೇಲಿಯನ್ನೇ ಗಡಿಯಾಗಿ ಸಾಂಕಿಂಡು ಇದ್ದು.
ಇತ್ಲಾಗಿ ನಮ್ಮ ಸೈನಿಕರು, ಅತ್ಲಾಗಿ ಅವರ ಸೈನಿಕರು. ಆತಪ್ಪ, ಇರಳಿ. ಹಾಂಗಾರೆ ಹಾಂಗೆ! ಊಹೂಂ!!
ಇದ್ದಕ್ಕಿದ್ದ ಹಾಂಗೇ ಬೇಲಿ ಹಾರಿ ಸೀತ ಒಳ ಬಂದದು ಮಾಂತ್ರ ಅಲ್ಲ,
ಎಕ್ಕಸಕ್ಕ ಗುಂಡು ಹಾರ್ಸಿ ಇಬ್ರ ಕೊಂದವು ಪಾತಕಿಸ್ಥಾನದ ಪಾಪಿಗೊ.
ಕೊಂದದು ಹೇಂಗೆ? ಅತಿ ಭೀಭತ್ಸ; ತಲೆಕಡುದು ಕೊಂದದು. ಪರಮ ಪಾಪಿಗೊ.
ಅಷ್ಟಕ್ಕೇ ನಿಂದವೋ – ಒಬ್ಬನ ತಲೆಯನ್ನೇ ಹೊತ್ತುಗೊಂಡು ಓಡಿದವು – ಶೆನಿಗೊ.
ಅಲ್ಲಿ ಹೋಗಿ ಆ ತಲೆಯ ಮಡಗಿ ಗೌಜಿ ಮಾಡಿದ್ದವಾಡ; ಹಂದಿಗೊ!

ಸೈನಿಕರ ಶವ ಊರಿಂಗೆ ಬಂತು, ಸಂಸ್ಕಾರಂಗೊ ಎಲ್ಲ ಮುಗಾತು. ಈಗ ಆ ಒಂದು ಸೈನಿಕನ ಹೆಂಡತ್ತಿ ನಿರಶನ ಮಾಡ್ತಾ ಇದ್ದಾಡ, ಎಂತಗೆ? “ಎನ್ನ ಗೆಂಡನ ತಲೆ ಒಪಾಸು ತೆಕ್ಕೊಂಡು ಬನ್ನಿ” ಹೇದು.
ಎಂತಾ ಹೃದಯ ಕಲಂಕುವ ಸನ್ನಿವೇಶ!!? ಛೇ. ಮಾಲೆಹಾಕಿ ಮದುವೆ ಆದ ಕೊರಳಿಲಿ ತಲೆ ಇಲ್ಲೆ!
ಆ ಹೆಣ್ಣಿನ ಎದುರು ನಮ್ಮ ಸರಕಾರವೇ ಶಿಖಂಡಿ ಆಗಿ ಹೋತಾನೇ – ಹೇಳ್ತದು ಬೇಜಾರದ ಸಂಗತಿ.
ಇಷ್ಟೆಲ್ಲ ಆದರೂ – “ಎಂಗೊಗೆ ಗೊಂತೇ ಇಲ್ಲೆ, ಎಂಗೊ ಮಾಡಿದ್ದೇ ಅಲ್ಲ” ಹೇದು ಪಾತಕಿಸ್ಥಾನದ ಮಂತ್ರಿಗೊ ಹೇಳಿಗೊಂಡು ಇದ್ದವಾಡ.
“ಹೋ, ಅಪ್ಪೋ? ಆಯಿಕ್ಕಂಬಗ, ಪಾತಕಿಸ್ಥಾನದೋರು ಆಗಿರ, ಬೇರೆ ಆರಾರು – ಜಪಾನಿನೋರು ಆಯಿಕ್ಕು” – ಹೇದು ನಮ್ಮ ಮಂತ್ರಿಗಳೂ ಸುಮ್ಮನೆ ಕೂದುಗೊಂಡಿದ್ದವಾಡ. 🙁

~

ಎಂತ ಹೇಳೇಕಂಬಗ? ನಮ್ಮ ಗುಣಾಜೆಮಾಣಿಗೆ ಕೋಪ ಬಪ್ಪದು ಅಂತೆ ಅಲ್ಲ ಒಂದೊಂದರಿ.
ಭಾರತ ದೇಶದ ಹಾಂಗಿರ್ತ ಮಾಣಿಕ್ಯ ಈಗ ಮಂಗಂಗಳ ಕೈಲಿ ಬಣ್ಣ ಇಲ್ಲದ್ದೆ ಮಸ್ಕಾವುತ್ತಾ ಇದ್ದು.
ಇದು ಮತ್ತೆ ಹೊಳೇಕು. ಗಾಂಧಿ, ನೆಹರು, ಬುದ್ಧ – ಇವೆಲ್ಲದಕ್ಕೂ ಮೀರಿದ ವೆಗ್ತಿತ್ವಂಗೊ ನಮ್ಮ ಯುವಕರಿಂಗೆ ಆದರ್ಶ ಆಯೇಕು.
ಸಂಸ್ಕಾರ ಬೇಕು, ತತ್ವ ಅರಡಿಯೇಕು, ಅಹಿಂಸೆ ಗೊಂತಿರೆಕು. ಆದರೆ ಅಗತ್ಯ ಬಪ್ಪಗ ಎದ್ದು ನಿಂದು ಕೈಬೇರುಲೂ ಅರಡಿಯೇಕು.

ಮನೆಜಾಲಿಂಗೇ ಬಂದು ಕಾಟುನಾಯಿ ಕೊರಪ್ಪಿರೆ ಆಸೆಯೇ ದುಖ್ಖಕೆ ಮೂಲ ಹೇಳ್ತದಲ್ಲ; ಒಂದು ಕೆಪ್ಪಟೆಗೆ ಬಡುದರೆ ಇನ್ನೊಂದು ಕೆಪ್ಪಟೆ ಕೊಡು ಹೇಳ್ತದಲ್ಲ. ಕೊದಂಟಿ ಹಿಡ್ಕೊಂಡು ಓಡುಸಲೆ ಅರಡಿಯೇಕು.
ಕೃಷ್ಣನ ಹಾಂಗಿರ್ತ ವಿವೇಕ, ವಿವೇಕಾನಂದರ ಹಾಂಗಿಪ್ಪ ಧೈರ್ಯ, ಸುಭಾಶ್ ಚಂದ್ರ ಬೋಸರ ಹಾಂಗಿಪ್ಪ ಶೌರ್ಯ, ಲಾಲ್ ಬಹದೂರ್ ಶಾಸ್ತ್ರಿಯ ಹಾಂಗಿರ್ತ ತಾಕತ್ತು, ಇಂದಿರಾಗಾಂಧಿಯ ಹಾಂಗಿರ್ತ ದೂರದೃಷ್ಟಿ, ಓಜುಪೇಯಿ ಅಜ್ಜನ ಹಾಂಗಿರ್ತ ದೇಶಪ್ರೇಮ – ಇದೆಲ್ಲವೂ ತುಂಬಿಗೊಂಡಿದ್ದೋರು ನಮ್ಮ ದೇಶಸೇವೆ ಮಾಡ್ಳೆ ಹೋಯೇಕು. ಅಲ್ಲದ್ದರೆ, ಗಡಿ ಕಾವ ಸೈನಿಕರ ಇಡಿಇಡಿ ಹೊತ್ತುಗೊಂಡು ಹೋದರೂ, ಕನಿಷ್ಟ ಒಂದು ಪ್ರತಿರೋಧ ತೋರುಸಲೂ ತಾಕತ್ತಿಲ್ಲದ್ದ ಹಿಸ್ಕುಗೊ ಆಗಿ ಹೋಕು ನಾವು.
ಎಲ್ಲೋರಿಂಗೂ ಅವರವರ ದೇಶ, ಜಾಗೆಯ ಬಗ್ಗೆ ಪ್ರೀತಿ ಇದ್ದು; ನಮ್ಮಲ್ಲಿ ಮಾಂತ್ರಾ ನಮ್ಮ ಮಂತ್ರಿ ಕುರ್ಶಿಗಳ ಬಗ್ಗೆ ಆಶೆ ಇದ್ದು – ಹೇಳ್ತ ಹಾಂಗೆ ಆಗಿ, ದೇಶ ಅನರ್ಥ ಆಗಿ ಹೋಕು ಹೇದು ಗುಣಾಜೆಮಾಣಿ ಹೇಳುಸ್ಸು.

~

ದ್ವೇಷಲ್ಲೇ ಹುಟ್ಟಿದ ದೇಶ ಪ್ರತಿ ಉಸಿರಿಲಿಯೂ ಭಾರತದ ಬಗ್ಗೆ ನಂಜು ಕಾರ್ತಾ ಇದ್ದು.
“ತನಗೆ ಜನ್ಮಕೊಟ್ಟ ಅಬ್ಬೆ ಅದು; ಅದರಿಂದಾಗಿಯೇ ತಾನು ಹುಟ್ಟಿದ್ದು” ಹೇಳ್ತ ವಿವೇಚನೆಯೂ ಇಲ್ಲದ್ದ ಬೋಸುಲಕ್ಷಣ.
ಆ ಪಾತಕಿ ಸ್ಥಾನ ಉದಯ ಆದ್ದೇ ದ್ವೇಷಲ್ಲಿ. ಧರ್ಮದ ಮೂಲ ಹಿಡುದು, ಪರಧರ್ಮ ಅಸಹಿಷ್ಣುತೆಲೇ ಹುಟ್ಟಿ-ಬೆಳೆತ್ತಾ ಇಪ್ಪದು.
ಯೋಗ್ಯ ನಾಗರಿಕರು ಆ ದೇಶಕ್ಕೆ ಬಂದಪ್ಪದ್ದೇ “ಭಾರತವೇ ನಮ್ಮ ಮೂಲರಾಷ್ಟ್ರ” ಹೇಳ್ತದು ತಿಳಿಗು.
ಮತ್ತೆ ಅಖಂಡ ಭಾರತ ಅಕ್ಕು ಹೇಳ್ತದು ಗುಣಾಜೆಮಾಣಿಯ ಆಶಯ. ಮುಂದಕ್ಕೆ ನೋಡುವೊ ಎಂತಾವುತ್ತು ಹೇದು.

ಈ ಸರ್ತಿ ಮಾಂತ್ರ – ಗುಂಡುನಿರೋಧಕ ಗೂಡಿನೊಳ ಪುಚ್ಚೆಯ ಹಾಂಗೆ ನಿಂದುಗೊಂಡು ಭಾರತದ ಧ್ವಜ ಹಾರ್ಸಿ ಒಂದು ಜನಗಣಮನ ಹಾಡುವೊ°, ಕಳುದೊರಿಶದ ಹಾಂಗೇ. ಸೈನಿಕರು ಸಿಂಹದ ಹಾಂಗೆ ಹೋರಾಡಿರೂ ತೊಂದರೆ ಇಲ್ಲೆ. ತೀರಾ ಉಪದ್ರ ಆದರೆ ಇನ್ನಾಣ ಸರ್ತಿ ಕ್ರಿಗೇಟು ಆಡುಸ್ಸು ಬೇಡ, ಅವರ ಒಟ್ಟಿಂಗೆ; ಅಷ್ಟೇ ಉಳ್ಳೊ!!

~

ಒಂದೊಪ್ಪ: ಅತ್ಯಾಚಾರ ಅಪ್ಪಗಳೂ ಶಾಂತ್ರಿಮಂತ್ರ ಹೇಳ್ತರೆ ಅದು ಸಹನೆಯೋ? ದೌರ್ಬಲ್ಯವೋ?

~

ಸೂ: ಪ್ರಿಂಟು ಮಿಷ್ಟೇಕು ಆಗಿ “ಪಾತಕಿಸ್ಥಾನ” ಹೇಳಿದ್ದು ಅಲ್ಲ – ಅದರ ಅನ್ವರ್ಥ ನಾಮ ಹೇಳಿಯೇ ಬರದ್ದು. 🙁

ಒಪ್ಪಣ್ಣ

   

You may also like...

12 Responses

 1. ಮನಮೋಹನ ಸಿಂಗ° ಮಾತಾಡಿತ್ತಡ, “ಇದಾ ನಿಂಗೊ ಹೀಂಗೇ ಕಚ್ಚಿಯೊಂಡಿದ್ದರೆ ನವಗೆ ಎಂದ್ರಾಣ ಹಾಂಗೆ ನೆಗೆಮಾಡ್ಳೆಡಿಯ” ಹೇದು. “ನಾವು ತಯಾರಿದ್ದು” ಹೇಳಿದ್ದಲ್ಲದ್ದೆ, ಅತ್ಲಾಗಿಂದ ನಾಯಿಗೊ ಬೊಗಳುವಾಗ ಒಂದರ ಬಡುದು ಕೊಂದು ತಳೀಯದ್ದೆ ಕೂದವಡ ನಮ್ಮ ಜನರಲ್ಲುಗೊ… 😀
  ಪಾಕಿಸ್ತಾನದ್ದು ಟುಸ್ಕುಡಮ್ಮಿಲ್ಲೆ…
  ಅಶ್ಟು ಹೊತ್ತು ಚೆರೆ ಚೆರೆ° ಹೇಳಿಯೊಂಡಿದ್ದ ಮಾತಕಿಸ್ತಾನದ ಚೆಂದದ ಹೆಮ್ಮಕ್ಕೊಗೂ ಚಳಿಕೂದು “ಇದಾ ನಾವು ಮಾತಾಡುವ° ಆಗದಾ?” ಕೇಳಿತ್ತು. 😛
  ನಮ್ಮ ಒಪ್ಪಣ್ಣ ಬರದ್ದು ಮಿಲಿಟ್ರಿಯವ್ವೂ ಓದಿದವೋ ಹೇಂಗೆ? 😉

  ***

  ಮತ್ತೊಂದು ಕತೆ ಇದ್ದು ಒಪ್ಪಣ್ಣ, ಈಗಳೇ ಯುದ್ಧ ಮಾಡಿಕ್ಕುವೊ° ಹೇದರೆ, ನಮ್ಮಲ್ಲಿ ಮದ್ದು ಗುಂಡುಗೊ ಬೇಕೇ? ಎಲ್ಲಾ ತಿಂದು ತೇಗಿದ್ದವನ್ನೇ ಅಲ್ಲಿಪ್ಪೋರು.. 🙁 ಅದಕ್ಕೇ ನಮ್ಮ ಮಿಲಿಟ್ರಿಯವ್ವು ರಜ ಹದಾಕೆ ಮಾತಾಡಿದ್ದು, ಇಲ್ಲದ್ದರೆ ಕೊರಪ್ಪುಲೆ ಬಪ್ಪಗಳೇ ಸಪಾಯಿ ಮಾಡ್ತಿತ್ತವಿಲ್ಲೆಯಾ??
  ಹು°!!!

 2. Vaishu kumbla says:

  Superb…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *