Oppanna.com

ಹೋ… ಇದಾರು ಬಂದದೂ : ಅನಿರೀಕ್ಷಿತ ನೆಂಟ್ರು ಬಪ್ಪ ಶುದ್ದಿ

ಬರದೋರು :   ಒಪ್ಪಣ್ಣ    on   07/05/2009    16 ಒಪ್ಪಂಗೊ

ತುಂಬಾ ಮದಲಾಣ ಶುದ್ದಿ ಅಲ್ಲ ಇದು. ಒಪ್ಪಣ್ಣ ಸಣ್ಣ ಇಪ್ಪಗಾಣ ಒರ್ತಮಾನಂಗೊ.
ಸಣ್ಣ ಇಪ್ಪಗಾಣ – ಒಪ್ಪ ಮನೆ, ಚೆಂದಕ್ಕೆ ಶಾಲಗೆ ಹೋಪ ಸುಂದರ ದಿನಂಗೋ. ಎಷ್ಟು ಮನುಗಿರೂ ಮುಗಿಯದ್ದ ದೊಡ್ಡ ರಜೆ. ಆದರೆ, ಮಕ್ಕೊ ರಜೆ ಹಾಳು ಮಾಡ್ತವು ಹೇಳಿ ಹೊಟ್ಟೆ ಉರಿ ಇಪ್ಪ ಟೀಚರುಗೊ ಆ ವರ್ಷದ ಇಡೀ ಪ್ರಶ್ನೆ ಪತ್ರಿಕೆಯ ಉತ್ತರ ಬರಕ್ಕೊಂಡು ಬಪ್ಪಲೆ ಹೇಳುಗು. ಕ್ಲಾಸುಗೋ ಸುರು ಆದ ಕೂಡ್ಲೇ ತಿದ್ದುಲೆ ಅಡ. ಕ್ಲಾಸ್ ಬೇರೆ ಆದರೂ ಟೀಚರು ಅವ್ವೆ ಅಲ್ದೋ! ಬರೆಯದ್ದೆ ಗೊಂತಿಲ್ಲೆ. ಒಪ್ಪಣ್ಣನ ಅಣ್ಣ ಆದರೆ ರಜೆ ಸುರು ಆದ ವಾರವೇ ಬರದು ಮುಗುಶುಗು. ಒಪ್ಪಣ್ಣ ಅಕೇರಿಯಾಣ ವಾರ ಸುರು ಮಾಡುದು ಇದಾ. ಅಷ್ಟೇ ವೆತ್ಯಾಸ. 🙂 ರಜೆ ಇಡೀ, ಪ್ರತಿ ದಿನ ಬರವಲೆ ಹೋಗು, ಬರೆ, ಹೇಳಿ ಅಮ್ಮ ಹೇಳುಗು. ಕೊನೆ ವಾರ ಅಲ್ಲದ್ದೆ ನಾವು ಸುರು ಮಾಡ್ಲೆ ಇಲ್ಲೆ. ತುಳುವಿಲಿ ಒಂದು ಗಾದೆ ಇದ್ದು, ಕೇಳಿದ್ದಿರಾ?, ಪೀ ಬನ್ನಗ ಪಿತ್ತಿಲು ನಾಡುನೆ ಹೇಳಿ.ಛೀ!. ಈಗ ಪಿತ್ತಿಲಿಂಗೆ ಹೋಗಿ ಗೊಂತಿಲ್ಲೆ ಆರಿಂಗೂ. ಬಿಡಿ.
ಯಾವತ್ತಿನ ಹಾಂಗೆ, ಮದ್ಯಾನ್ನ ಉಂಡು ಒಂದೊರಕ್ಕು ಆಯಿದು ಎಲ್ಲರಿಂಗೂ. ಒಪ್ಪಣ್ಣಂಗೆ ಬೇಗ ಮನುಗಿ ತಡವಾಗಿ ಏಳುವ ಕ್ರಮ ಇದಾ! ಅಮ್ಮ ಏಳುಸಿದ ಮತ್ತುದೇ ರಜ್ಜ ಹೊತ್ತು ಪುಸ್ತಕ ಬಿಡುಸೆಕ್ಕಾ-ಬೇಡದಾ ಹೇಳಿ ಆಲೋಚನೆ ಮಾಡಿಗೊಂಡು ಇದ್ದೆ. ಅಪ್ಪ ಎಂತದೋ ಬರಕ್ಕೊಂಡು ಇದ್ದವು, ಒಪ್ಪಕ್ಕ ‘ಈಂ’ ಹೇಳಿ ಕೂಗಿಯೊಂದು ಇದ್ದು ,ಅಮ್ಮನ ಅಂಟುಲೆ ಆಯಿಕ್ಕು. ಅಮ್ಮ ವಸ್ತ್ರ ಒಗಕ್ಕೊಂಡು ಹೆಂಗಪ್ಪಾ.. ಸಣ್ಣ ಮಕ್ಕೊಗೆ ಅರ್ಗೆಂಟು ಹೇಳಿರೆ ಇನ್ನು…;-) ಅಣ್ಣ ಚಂದಮಾಮ ಓದಿ ಉಗುರು ಕಚ್ಚಿಗೊಂಡು ಕೂಯಿದ, ಎಡೆ ಎಡೆಲಿ ಅಪ್ಪನ ಹತ್ರೆ ಕೇಳಿಗೊಂಡು. ಎಂತರ ಇದ್ದು ಬೇಕೇ ಹಾಂಗುದೆ ಕೇಳುಲೆ? ಕೆಲವು ಸರ್ತಿ ಅಪ್ಪದೆನಗೆ, ‘ವಿಷಯ’ ಹೇಳಿದ ಮತ್ತೆ ಇಪ್ಪದು ಎರಡೇ. ಒಂದು-ಗೊಂತಿಪ್ಪದು. ಅದರ
ಕೇಳುಲೆ ಎಂತ ಇಲ್ಲೆ ಬಾಕಿ. ಇನ್ನೊಂದು- ಗೊಂತಿಲ್ಲದ್ದು. ಅದರ ಎಂತರ ಹೇಳಿ ಕೇಳುದು! ಅವ° ಕೇಳುಗು, ಕೇಳಿಯಪ್ಪಗ ಎಲ್ಲ ಅಪ್ಪ ವಿವರುಸುಗು, ಬರವದರ ಎಡಕ್ಕಿಲಿಯುದೆ.ಉಮ್ಮ, ಎಂತದೋ – ಎನಗರಡಿಯ.
ಒಂದರಿಯಾಣ ವಸ್ತ್ರ ಎಲ್ಲ ಒಗದಿಕ್ಕಿ ಬಾಲ್ದಿಲಿ ಹಾಕಿಯೊಂಡು ಜಾಲಿಂಗೆ ಬಂದ ಅಮ್ಮ ಪಕ್ಕನೆ , ಮನೆಯವಕ್ಕೆಲ್ಲ ಕೇಳುವ ಹಾಂಗೆ ಹೇಳಿತ್ತು ಜೋರು- ಹೋ…ಇದಾರು ಬಂದದೂ…..!!!
ಒಪ್ಪಕ್ಕನ ಅರ್ಗೆಂಟು ರಪಕ್ಕನೆ ನಿಂದತ್ತು, ಬಾಯಿಗೆ ಗಂಟೇಪು ಹಾಕಿದ ಹಾಂಗೆ.ಅಣ್ಣಂಗೆ ಎಂತದೋ ಹೇಳಿಗೊಂಡು ಇದ್ದ ಅಪ್ಪ – ‘ಅದ, ಆರೋ ಬಂದವಡ ಮಗೋ’ ಹೇಳಿದವು ಒಳಂದ. ಬರವಲೆ ಹೋಪದು ಈಗಳಾ ಮತ್ತೆಯಾ ಹೇಳಿ ಆಲೋಚನೆ ಮಾಡಿಗೊಂಡಿದ್ದ ಒಪ್ಪಣ್ಣಂಗೆ ನೆವ ಸಿಕ್ಕಿದ ಕುಶಿಯೋ ಕುಶಿ. ಬೇಗ ಎದ್ದು ಹೆರ ಬಂದು ನೋಡಿದೆ. ಪುಟ್ಟಮಾವನ ಹೆಂಡತ್ತಿ- ಪುಟ್ಟತ್ತೆಯುದೆ, ಅವರ ಕೊಂಗಾಟದ ಮಗಳು ಶೈಲತ್ತಿಗೆಯುದೆ. ಸೋದರತ್ತಿಗೆ ಬಂದದಿದಾ, ರಜೆಲಿ. ಇನ್ನು ಬರವಲೆ ಕೂದು ಮೂಡುಭೂತದ ಹಾಂಗೆ ಇಪ್ಪ ಕ್ರಮ ಇದ್ದಾ. ಛೆ ಛೆ… 😉

ಪುಟ್ಟ ಮಾವನ ಮನೆಲಿ ದೊಡ್ಡ ಸಂಸಾರ. ಹಳೆ ಕಾಲದ ದೊಡ್ಡ ಮನೆ. ಅವಿಭಕ್ತ ಕುಟುಂಬ ಹೇಳ್ತವಲ್ದ, ಹಾಂಗೆ. ೬ ಜನ ಮಾವಂದ್ರು. ಮೂರ್ನೆಯವ ಮಾಷ್ಟ್ರತ್ತಿಗೆ, ನಾಲ್ಕ್ನೆಯವ ಡಾಕ್ಟ್ರತ್ತಿಗೆ, ಆರ್ನೆಯವ ಜ್ಯೋತಿಷ್ಯ, ಒಳುದ ಮೂರು ಜೆನಕ್ಕುದೆ ಕೃಷಿಯೇ.ಎಲ್ಲೊರು ಊರಿಲೇ ಆದ ಕಾರಣ ಬೇರೆ ಮನೆ ಮಾಡುವ ಪ್ರಮೇಯವೇ ಬಯಿಂದಿಲ್ಲೇ.ಎಲ್ಲರಿಂಗೂ ಮದುವೆ ಆಯಿದು, ಆದರೂ ಚೆಂದಕ್ಕೆ ಒಟ್ಟಿಂಗೆ ಇದ್ದವು. ಈಗಾಣ ಕಾಲಲ್ಲಿ ಅದುದೆ ಆಶ್ಚರ್ಯದ ವಿಷಯವೇ! ಇನ್ನುದೆ ಪಾಲಾಯಿದಿಲ್ಲೆ. ಹಾಂಗಿಪ್ಪ ಮನಸ್ಸೇ ಇಲ್ಲೆ ಅಲ್ಲಿ ಆರಿಂಗೂ.ಬಂದ ಅತ್ತೆಕ್ಕಳೂ ತುಂಬಾ ಹೊಂದಿಗೊಂಡಿದವು.ಒರ್ಮೈಸಿಗೊಂಡು ಹೋಕು, ಒಂದೇ ಮನೆಂದ ಬಂದವರ ಹಾಂಗೆ. ಎಲ್ಲದಕ್ಕೂ ಕಾರಣ ಅಲ್ಯಾಣ ಸಂಸ್ಕಾರ. ಅದಿರ್ಲಿ, ಆ ದೊಡ್ಡ ಮನೆಲಿ ಒಳ ಕೆಲಸಕ್ಕೆ ಆರು ಜೆನ ಅತ್ತೆಕ್ಕೊ, ಹೆರಕೆಲಸಕ್ಕೆ ಮಾವಂದ್ರು. ಒಬ್ಬೊಬ್ಬ° ಒಂದೊಂದರಿ ಇಲ್ಲದ್ರೂ ಎಂತ ಕಷ್ಟ ಆವುತ್ತಿಲ್ಲೆ. ಹಾಂಗೆ ರಜೆಲಿ ಎಲ್ಲ ಸಣ್ಣ ಮಕ್ಕಳ ನೆಂಟ್ರ ಮನಗೆ ಕರಕ್ಕೊಂಡು ಹೋಪದು. ದೊಡ್ಡರಜೆಲಿ ಒಪ್ಪಣ್ಣನ ಮನೆಗೂ ಬಕ್ಕು.
ಬಕ್ಕು ಹೇಳಿರೆ, ಬಂದರೂ ಆತು, ಇಲ್ಲದ್ರೂ ಆತು. ಅದೆಂತ ಈಗಾಣ ಹಾಂಗೆ, ಒಬ್ಬ ಬಪ್ಪಲೆ ಹೇಳಿ ಇನ್ನೊಬ್ಬ ಬಪ್ಪ ಕ್ರಮ ಅಲ್ಲ. ಹೋಯೆಕ್ಕು ಹೇಳಿ ಅವಕ್ಕೂ ಇರ್ತು, ಬರೆಕ್ಕು ಹೇಳಿ ಇವಕ್ಕೂ ಇರ್ತು. ಅವರ ಮನೆಲಿ ಅನುಕೂಲ ನೋಡಿಗೊಂಡು, ಒಂದು ದಿನ ಮದ್ಯಾನ್ನ ಸೀದಾ ಹೆರಟು ಬಕ್ಕು. ಈಗೆಲ್ಲ Surprise Visit ಹೇಳ್ತವಲ್ದ ಈಗ, ಹಾಂಗೆ ( ಲೋಕಾಯುಕ್ತದವು ಮಾಂತ್ರ ಬಾವಾ ಈಗ ಹಾಂಗೆ ಹೋಪದು.). ಬಂದರೆ ಒಂದೆರಡು ದಿನ ಕೂದು ಹೆರಡುದು. ಕೆಲವು ಸರ್ತಿ ವಾರ ಆದರೂ ಆತು. ಅಮ್ಮನುದೇ ಪುಟ್ಟತ್ತೆಯುದೆ ಎಂತಾರು ಕುಣು ಕುಣು ಮಾತಾಡಿಗೊಂದು ಇಕ್ಕು. ಈಗಾಣ Professional ಮಾತುಕತೆ ಅಲ್ಲ. ಎಲ್ಲ ನಿಸ್ಪೃಹ. ಮನೆ ಶುದ್ದಿ, ಮಗಳ ಶುದ್ದಿ, ಅಪ್ಪನ ಮನೆ ಶುದ್ದಿ, ಅವರ ನೆರೆಕರೆ ಶುದ್ದಿ ಎಲ್ಲ ಹೇಳುಗು. ಹಾಂಗೆ ಎಂಗಳ ವಿಷಯವೂ ಕೇಳುಗು. ಶೈಲತ್ತಿಗೆ ಬರತನಾಟ್ಯ ಕಲಿಗಲ್ದ, ಹಾಂಗೆ ಬರತನಾಟ್ಯ, ಶಾಲೆಲಿ ಕಲುಶಿದ ಜಾನಪದ ನೃತ್ಯ ಎಲ್ಲ ಮಾಡುಗು,ಬಪ್ಪ ಪದ್ಯ ಎಂತ ನಾಚಿಕೆ ಇಲ್ಲದ್ದೆ ಜೋರಾಗಿ ಹೇಳುಗು. ಮಕ್ಕಳ ರಾಗಲ್ಲಿ. 🙂.
ಮನೆಂದ ಹೆರಟು ಇನ್ನೊಬ್ಬ ನೆಂಟರ ಮನೆಗೆ ಹೋಕು, ಅವು. ಹಾಂಗೆ ಪುರುಸೋತ್ತಿಲಿ ಒಪ್ಪಣ್ಣ, ಒಪ್ಪಕ್ಕ, ಅಮ್ಮ ಎಲ್ಲ ಒಂದರಿ ಅವರ ಮನೆಗೆ ಹೋಕು. ಅದೇ ರಜೆಲಿ.

ಒಪ್ಪಣ್ಣ, ಆಚಕರೆ ಮಾಣಿ, ಅಜ್ಜಕಾನ ಬಾವ ಮತ್ತೆ ಈಚಕರೆ ಪುಟ್ಟ – ನಾಲ್ಕು ಜೆನ ಜೆಗಿಲಿಲಿ ಕೂದು ಹೊತ್ತಪ್ಪಗ ರಜ್ಜ ಪಟ್ಟಾಂಗ ಹಾಕುವ ಕ್ರಮ ಇದ್ದು, ಇಲ್ಯಾಣ ಹಾಂಗೆ. ಎಲ್ಲ ಕೆಲಸ ಆದ ಮತ್ತೆ,🙂 ಸದ್ಯದ ಒರ್ತಮಾನ ಇದು:
ಈಚಕರೆ ಪುಟ್ಟ° ಮೊನ್ನೆ ಬೆಂಗ್ಳೂರಿಲಿ ಎಪಾರ್ಟುಮೆಂಟಿಲಿ (ಅಟ್ಟದ ಮನೆ) ಇಪ್ಪ ಅವನ ಬಾವನ ಮನೆಗೆ ಹೋದ್ದಡ, ಹೀಂಗೆ ಊರ ಕ್ರಮಲ್ಲೇ ಹೋದ್ದು. ಮನೆ ದಾರಿ ಗೊಂತಿದ್ದು ಹೇಳಿ ರಿಕ್ಷ ಮಾಡಿಗೊಂಡು. ಹೋಗಿ ನೋಡಿರೆ ನೀರು ಕೇಳುಲುದೇ ಆರು ಇತ್ತಿದ್ದವಿಲ್ಲೆ ಅಡ. ‘ ಕುಂಞಿ ಬಾವ’ನ ಮನೆಗೆ ಹೇಳಿರೆ ಆ ಸೆಕ್ಯುರಿಟಿಗೆ ಸಾಕಾವುತ್ತಿಲ್ಲೆ ಅಲ್ದಾ, ಆ ಮನೆ ಯಜಮಾನ್ರ ಹೆಸರು ಹೇಳಿದ ಮತ್ತೆ, ಅವಂಗೆ ಫೋನು ದಿನಿಗೆಳಿ, ಅವ ‘ಯಸ್ಸ್’ ಹೇಳಿದ ಮತ್ತೆ ಒಳ ಬಿಡುದಡ. ಮನೆಗೆ ಫೋನು ಮಾಡಿರೆ ತೆಗದವಿಲ್ಲೆ. ಮೊಬೈಲಿಂಗೆ ಫೋನು ದಿನಿಗೆಳಿದ ಅಡ ಇವ°, ಆ ಹೊತ್ತಿಂಗೆ ಅವು ಜವ್ಳಿ ತೆಗವಲೆ ಹೇಳಿ ಹೆರ ಹೊಗಿತ್ತಿದ್ದವಡ, ಪಾಪ, ಇವ° ಕಾದೆ ಬಾಕಿ. ಕುದುಕ್ಕ° ಕಾದ ಹಾಂಗೆ. ;-( ಸುಮಾರು ೨ ಗಂಟೆ ಆದ ಮತ್ತೆ ಕಾರಿಲಿ ಬಂದವಡ, ಗೆಂಡ-ಹೆಂಡತ್ತಿ. ಓ! ಆಗಳೆ ಬಂದೆಯ ಬಾವ ಹೇಳಿಕ್ಕಿ, (ಅಟ್ಟದ) ಮನೆಗೆ ಕರಕ್ಕೊಂಡು ಹೋದ° ಅಡ. ಎಂತ, ಅಂಬೆರ್ಪಿಲಿ ಜವುಳಿ ತೆಗವಲೆ ಜೆಂಬ್ರ ಇದ್ದೋ ಅಂಬಗ!, ಹೇಳಿ ಕೇಳಿದ ಇವ°. ‘ಪ್ರತಿ ವಾರದ ಹಾಂಗೆ ಹೋದ್ದು ಬಾವ, ಇಲ್ಲಿ ಅದು ಒಂದು ಪೇಶನು ಬಾವ’ ಹೇಳಿದ° ಅಡ.

ತಂದ ಜವುಳಿ ಸಾಮಾನು ಪೂರ ಹರಗಿ ನೋಡುಲೆ ಎಡಿಯದ್ದಕ್ಕೆ ಆ ಬಾವನ ಹೆಂಡತ್ತಿ, ಬೆಂಗ್ಳೂರಿನ ಕೂಸು ಕಳುದ ಒರಿಷ ಮದುವೆ ಆದ್ದು, ಮುರುಮುರು ಮಾಡಿಗೊಂಡಿತ್ತಡ, ಇವ° ಮಿಂದಿಕ್ಕಿ ಬಪ್ಪಗ ಕೇಳಿದ್ದಡ. Privacy ಹಾಳಾದ ಬೇಜಾರು ಅದಕ್ಕೆ, ಪಾಪ!
ಒಂದರಿ ಆದರೂ ಹೋಗದ್ದೆ ಗುರ್ತ ಅಪ್ಪದು ಹೆಂಗಪ್ಪಾ ಹೇಳಿ ಇವನ ಮನಸ್ಥಿತಿ. ಹೋಗಿಯೇ ಗುರ್ತ ಆಯೆಕ್ಕಾ ಹೇಳಿ ಅವರ ಮನಸ್ಥಿತಿ.
ಈಚಕರೆ ಪುಟ್ಟ ಹೇಳುಗು:

  • ಆ ಹಳೆ ಕಾಲದ ಕ್ರಮ ‘ರೇಡಿಯ’ (Radio) ಇದ್ದಲ್ದ, ಅದರ ನಮುನೆ. ಮುಂದೆ ಯಾವ ಪದ್ಯ ಬತ್ತು ಹೇಳಿ ಗೊಂತಿಲ್ಲೇ. ಅದೇ ಒಂದು ಕುತೂಹಲ. ದಿನಾಗ್ಳೂ ಯಾವ ನೆಂಟ್ರು ಬತ್ತವು ಇಂದು, ಹೇಳಿ ನಿರೀಕ್ಷೆಲಿ, ಉತ್ಸಾಹಲ್ಲಿ ಇಪ್ಪದು. ಸೌದಿ ಕೊರದರಾ, ಪುಚ್ಚೆ ಮೋರೆ ತಿಕ್ಕಿರಾ ಮಣ್ಣ ಇಂದು ನೆಂಟ್ರು ಬಕ್ಕು ಹೇಳಿ ಅಜ್ಜಿದು ಶಕುನ ಬೇರೆ 🙂.
  • ಈಗಾಣ ಕ್ರಮ ಟೇಪ್ರೆಕಾರ್ಡಿನ (Tape Recorder) ನ ಹಾಂಗೆ. ನವಗೆ ಬೇಕಾದ ಪದ್ಯ ಬೇಕಾದ ಹೊತ್ತಿಂಗೆ ನಾವು ಹಾಕಿಗೊಂಬದು. ಇವರ ದಿನಿಗೆಳಿದ್ದೆ, ಅವರ ಇನ್ವೈಟ್ ಮಾಡಿದ್ದೆ, ಹೇಳಿಗೊಂಡು. ಅಂತೂ ಪುಚ್ಚೆಗೆ ಯಾವಾಗ ಎಲ್ಲ ಮೋರೆ ತಿಕ್ಕೆಕ್ಕು ಹೇಳಿ ಬಾರೀ ಕನ್ಫ್ಯೂಸು. 😀

ಬನ್ನಿ, ಬನ್ನಿ ಹೇಳಿ ಸುಮಾರು ಸರ್ತಿ ದಿನಿಗೆಳಿದ ಮತ್ತೆ, ಇಂಥಾ ದಿನ ಬತ್ತೆಯೋ° ಹೇಳಿ ಹೇಳಿಕ್ಕಿ ಒಬ್ಬರ ಮನೆಗೆ ಹೋಪದು ಈಗಾಣ ಕ್ರಮ. ಅಲ್ದೋ?
ಜೆಂಬ್ರ ಮಣ್ಣ ಇದ್ದರೆ ಒಪ್ಪೊತ್ತು ಮುಂಚಿತವಾಗಿ ಬಂದು ಕೂರುಗು. ಎಲ್ಲ ಕಳಿಶಿ ಕೊಟ್ಟು, ಪಾತ್ರ ಕೌಂಚಿ ಆದ ಮೇಲೆ ಹೆರಡುಗು. ಹೋಪಗ ಹೋಳಿಗೆ ಎಂತಾರು ಕಟ್ಟಿ ತೆಕ್ಕೊಂಗು. ಈಗ ನೆಡು ಮದ್ಯಾನ್ನ ಮನೆಂದ ಹೆರಡುಗು, ಬೈಕ್ಕಿಲಿ- ಬುರ್ರನೆ. ಹಂತಿಗೆ ಕೂಪಲಪ್ಪಗ ಎತ್ತುಗು. ಉಂಡ ಕೂಡ್ಲೇ ಹೆರಡುಗು, ಕೈ ಮನೇಲಿ ತೊಳದರೂ ಆತು, ನೋಡ್ವೊರಿಲ್ಲೇ. 🙂 ಎಲ್ಲೋರಿಂಗೂ ಅರ್ಜೆಂಟು.
ಅಷ್ಟಕ್ಕೂ ದಿನಿಗೆಳದ್ದೆ ಹೋದರೆ ನಾವು ಪುಸ್ಕ ಹೇಳಿ ಲೆಕ್ಕ. ದಿನಿಗೆಳಿಯೂ ಬಾರದ್ರೆ ಬಯಂಕರ ದೊಡ್ಡ ಜೆನ ಹೇಳಿ ಗ್ರೇಶಿಗೊಂಬದು. ‘ಸುಮಾರು ಸರ್ತಿ ದಿನಿಗೆಳಿದವು, ಹೋಪಲೆ ಆಯಿದಿಲ್ಲೆ’ ಹೇಳಿ ಆದರೆ ದೊಡ್ಡ ಜೆನ ಹೇಳಿ ಗ್ರೇಶಿಯೊಂಗು..

ಈಗಾಣ ನಮೂನೆ ಬದುಕ್ಕಾಣಲ್ಲಿ ಆ ಹಳೆ Surprize Visit ಗೊ ಎಲ್ಲ ಸಾಧ್ಯವಾ?
ಎಂತ ಹೇಳ್ತಿ?

ಒಂದೊಪ್ಪ: ನಿಂಗಳ ಹತ್ತರಾಣ ನೆಂಟ್ರಲ್ಲಿಗೆ ಒಂದು ಸರ್ಪ್ರೈಸ್ ವಿಸಿಟ್ ಕೊಟ್ಟು ನೋಡಿ, ಹೇಂಗಿರ್ತು ಅವರ ಮುಖಬಾವ ಹೇಳಿ ನೋಡುಲೆ ಆದರೂ!

16 thoughts on “ಹೋ… ಇದಾರು ಬಂದದೂ : ಅನಿರೀಕ್ಷಿತ ನೆಂಟ್ರು ಬಪ್ಪ ಶುದ್ದಿ

  1. ಇದುವೇ ಭಾವ ಹಳ್ಳಿಗೂ ಪೇಟೆಗೂ ಇಪ್ಪ ವ್ಯತ್ಯಾಸ …ಎನ್ನ ಅಮ್ಮ ಹೇಳ್ತಾ ಇರ್ತ …” ಪೇಟೇಲಿ ಇಪ್ಪೋರಿಂಗೆ ಯಾವಗಲೂ ಪುರುಸೊತ್ತೇ ಇರ್ತಿಲ್ಲೆ ..ಫೋನ್ ಮಾಡದ್ದೆ ಹೋದರೆ ಬಾಗಿಲು ಕಾಯೇಕ್ಕಷ್ಟೇ ..” ಹೇಳಿ. ಪೇಟೇಲಿ ಆದರೆ ಫೋನ್ ಮಾಡಿ appointment ತೆಕ್ಕೊಂಡು ಹೋಯೆಕ್ಕು..ಆದರೂ 2 – 3 ಘಂಟೆಂದ ಜಾಸ್ತಿ ಅಲ್ಲೇ ಇದ್ದರೆ ವಾಚ್ ನೋಡ್ಲೆ ಸುರುಮಾಡ್ತವು ( ಎಲ್ಲೂರೂ ಅಲ್ಲ..) .ಹಳ್ಳಿಲಿ ಯಾವ ಹೊತ್ತಿಂಗೆ ಹೋದರೂ ” ನಾಳೆ ಹೋದರೆ ಸಾಲದಾ ?” ಹೇಳ್ತವು….ಆದರೂ ಪೇಟೆಲಿಯೇ ಬದುಕೆಕ್ಕಾದ ಅನಿವಾರ್ಯತೆ…..

  2. ಒಪ್ಪಣ್ಣಂಗೆ ಬೇಗ ಮನುಗಿ ತಡವಾಗಿ ಏಳುವ ಕ್ರಮ ಇದಾ!

    ಒಪ್ಪಣ್ಣ office nge hopadu hange adikku, tadavaagi hogi beega bappadu!!

  3. ಅದ್ಭುತ ಬರವಣಿಗೆ….!!!!
    ಶಾಲಗೆ ಹೋಯ್ಕೊಂಡಿಪ್ಪಾಗಣ ಸಂಗತಿ ಲಾಯ್ಕಿದ್ದು….ಒಂದು ವಿಷಯದೊಳ ಇನ್ನೊಂದು ಸಣ್ಣ ವಿಷಯ….
    ರೇಡಿಯ,ಟೇಪ್ ರೆಕಾರ್ಡಿನ ಹೋಲ್ಸಿ ಹೇಳಿದ್ದು ಲಾಯ್ಕಾಯಿದು…..ನೂರಕ್ಕೆ ನೂರರಷ್ಟು ಸತ್ಯ ಸಂಗತಿ…. 🙂

  4. ಸಣ್ಣ ಒಂದು ಆಲೋಚನೆ ಮನಸ್ಸಿಲಿ ಬಂದದು, ಎಷ್ಟು ಒಪ್ಪಣ್ಣ – ಒಪ್ಪಕ್ಕಂಗೊ ಅದಕ್ಕೆ ಒಪ್ಪ ಕೊಟ್ಟವು, ಕುಶೀ ಆತು, ಒಪ್ಪಣ್ಣಂಗೆ . 🙂
    ನಮ್ಮ ಬದುಕ್ಕಾಣ ಬದಲಾಯಿದು ಹೇಳಿ ಒಂದು ವಿಚಾರ ಮಾಂತ್ರ ಅಲ್ಲದ್ದೆ, ಜನಜೀವನದ ನೇರ ಪರಿಣಾಮ ಸಂಬಂಧಂಗಳಲ್ಲಿ ಕಾಣುತ್ತು, ನಮ್ಮ ಮುಂದಾಣೋರಿಂಗೆ ನಮ್ಮತ್ವ ಸಿಕ್ಕೆಕ್ಕು ಹೇಳಿ ಕೆಲವು ಜೆನ ಹೇಳಿದವು, ಅಪ್ಪಾದ್ದೇ ಅದು.
    ಹೀಂಗೆ ಒಪ್ಪ ಕೊಟ್ಟೊಂಡು ಇರಿ, ಆತ?

  5. suuuuppar aayidu baraddu….eega surprise visit ella koDle hOdare beega nODikki barekakku aldO… koDeyaalada atlaagi ella raje dina elliyaaru tirugule hOpa aalOchane maaDuvavve ippadu hechchaagi…..
    matte bandavakke sikkuva aatithyavuu ashTe…. TV haaki koorsudu…taavude koodugombadu….
    heengaayideega paristhiti….

  6. ಸವಿ ನೆನಪುಗೋ ಭಾವ ಅದು…….. ಅಜ್ಜನ ಮನಗೆ ಹೋಪದು, ಅತ್ತಿಗೆಯಕ್ಕೋ ಭಾವಂದ್ರು ಎಲ್ಲಾ ಸಮ ಪ್ರಾಯದವು. ದೊಡ್ಡ ರಜೆ ಹೇಳಿರೆ ಒಂದು ಹಬ್ಬ……. ಎಲ್ಲಾ ನೆನಪು ಮಾಡಿಗೊಂಡು ನಿಟ್ಟುಸಿರು ಬಿಡುದು ಬಿಟ್ಟರೆ ಬೇರೆ ಎಂತದೂ ಎಡಿಯ ಅಲ್ದಾ?
    ಹಾಂಗೆ ಒಂದು ಸಂಗತಿ ನೆಂಪಾವ್ತು ಈಗ , ಒಂದರಿ ಮಾಣಿ ಕೊಡೆಯಾಲದ ಅತ್ತೆ ಮನೆಗೆ ಹೋದಿಪ್ಪಗಾನ ಶುದ್ದಿ. ಪೇಟೆ ಅಲ್ದಾ, ನವಗೆ ಹೇಂಗೆ, ಎಷ್ಟು ತಿನ್ನೆಕ್ಕು ಹೇಳಿ ಗೊಂತಿಲ್ಲೇ ಇದಾ… ಇಡ್ಲಿ ಬಳುಸಿದವು ಮಾಣಿಗೆ, ಸುರುವಿನ್ಗೆ ೪, ಮುಗುಶಿದ , ಮತ್ತೆ ೨ ಬಳುಸಿದವು, ಮುಗುಶಿದ, ಹೀಂಗೆ ೧೩ ಇಡ್ಲಿ ಬಳುಸಿ ನಂತರ ಮೋರೆ ನೋಡಿದವು…. ಒಹ್…. ನಂತರ ಗೊಂತಾತು , ಪೇಟೆಲಿಪ್ಪವು ಅಂಥಾ ಇಡ್ಲಿ ಎರಡೇ ತಿಂಬದು ದಿನಕ್ಕೆ ಹೇಳಿ…. ಅಂತೂ ಆತಿಥ್ಯದ ಮಜಾ…..
    ಈಗ ಅಜ್ಜನ ಮನೆಗೆ ಹೋದರೂ ಮದ್ಯಾನ ತಲಪಿ ಉಂಡಿಕ್ಕಿ, ”ಹೋಗಿ ಬತ್ತೆ ಮಾವ ” ಹೇಳುದಷ್ಟೇ ಪುರುಸೊತ್ತು …. ಕಾಲ ಕಷ್ಟ ಭಾವ………….

  7. ಒಪ್ಪಣ್ಣಾ ಭಾವ ನೀನು ಹೇಳಿಕ್ಕಿದ್ದು ಸರಿ ಇದ್ದು.. ಎದುರು ಮನೆಲಿ ಆರಿದ್ದವು ಹೇಳುದು ತಿಳ್ಕೊಂಬಲೆ ಇಲ್ಲದ್ದು ಇಂದ್ರಾಣ ಪರಿಸ್ತಿತಿ, ಹೀಂಗಿಪ್ಪಗ ಅಪರೂಪಕ್ಕೆ ಬಪ್ಪ ನೆಂಟ್ರ ಬಗ್ಗೆ ಅಂತವು ಹೇಂಗೆ ತಲೆಕೆಡಿಸುತ್ತವು ನಿನೇ ಹೇಳು ಭಾವ.

  8. ಒಪ್ಪಣ್ಣ ಭಾವ…
    ಉತ್ತಮ ಲೇಖನ. ಇತ್ತೀಚೆಗಿನ ಸಮಾಜಕ್ಕೆ ಹಿಡಿದ ಕನ್ನಡಿ ಭಾವ ನಿಂಗಳ ಬರಹ. ಈ ವಿಷಾದತೆ ಮಧ್ಯಲ್ಲಿ ಇನ್ನೂ ಕೂಡ ಕೆಲವು ದಿಕ್ಕಿಲ್ಲಿ ಈ ಸಂಪ್ರದಾಯ ಒಳುದ್ದು. ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಯಾವುದು? ಆಧುನಿಕ ಜೀವನ ಕ್ರಮ. ನೆಂಟ್ರುಗಳ ಅನಿರೀಕ್ಷಿತ ಭೇಟಿಯ ಸಂಭ್ರಮ ತಿರುಗಿ ಬಾರದ್ದಷ್ಟು ನಾವು ಮುಂದೆ ಹೋಯಿದು.ನಾವಂತು ಆ ಸಂಭ್ರಮವ ಅನುಭವಿಸಿದ್ದು. ನಮ್ಮ ಮುಂದಿನ ಪೀಳಿಗೆ ನಿಜವಾಗಿಯೂ ಇದರಿಂದ ವಂಚಿತವಾಯ್ತು.
    ಉತ್ತಮ ಲೇಖನ ಬರದ್ದಕ್ಕೆ ನಿಂಗೊಗೆ ಆನು ಕೃತಜ್ಞ. ಧನ್ಯವಾದ. ಮುಂದೆಯೂ ಇಂತಹ ಲೇಖನಗಳ ನಿರೀಕ್ಷೆಯಲ್ಲಿ….
    ವಜ್ರಾಂಗಿ ಸೂರ್ಯ

  9. Thumba layka ayidu baraddu.
    Adappu ninu barada haange raje mugivalappaga barava jana aanu, raje sikkida kudle baravadu enna thange thamma. Aadre besage rajeli baravale kottadu enage nempille..adu october (dasara) rajegeya heLi kanthu…
    HaLeya aa dinangaLalli nentra menege hopadu,. manege nentru bappale kaavadu, avu thumba dina nammalli ireku heLi kugudu ella nenapaathu enage…
    EegaLuu nentru bappadu, engo hoapdu ella iddu, adare aa phone madadde seeda hopadella kammi avtha iddu.
    Laayika ayidu baraddu atha OppaNNa?.

  10. Thumba layka ayidu baraddu.
    Adappu ninu barada haange raje mugivalappaga barava jana aanu, raje sikkida kudle baravadu enna thange thamma. Aadre besage rajeli barava kottadu enage nempille..adu october (dasara) rajegeya heLi kanthu…
    HaLeya aa dinangaLalli nentra menege hopadu,. manege nentru bappale kaavadu, avu thumba dina nammalli ireku heLi kugudu ella nenapaathu enage…
    EegaLuu nentru bappadu, engo hoapdu ella iddu, adare aa phone madadde seeda hopadella kammi avtha iddu.
    Laayika ayidu baraddu atha OppaNNa?.

  11. appu………..navagakkadavu battare tapseku heli kana ida………adare kelvu kurbayi hange koravavu irtavida hangippavu batte helire mantra enage bere hopaliddu heli heludu allada? enta helti annooooooooooooooo

  12. ayyooo..annaa…
    neenethara helte…egana kalallii phone madikki hovtaru engo maeli ille heli tappisikomba janagale jasti..athava enthaadru saboobu heli saga hakuttav..entha madwa?Egana kalalli hoda dinave semige madi balsuvavve jasti…idella ellige muttuliddo ento…!!!!!!!

  13. Nijavagiyu…estu change ayidalla namma life style???….athmiyate…aa preethi..ella…maya ayidu….. navu estu mechanical life lead madtha eddalda ??? ………
    fantastic article ‘Oppanna’ …….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×