ಅಂಧತೆ ಕಳವ ಸೂರ್ಯ° ಮತಾಂಧತೆಯನ್ನೂ ಕಳೆತ್ತನೋ?

June 12, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯೋಗ ಹೇದರೆಂತ? – ಹೇದು ಕೇಳ್ತರೆ ಆರಾರು ಯೋಗ ಅರಡಿತ್ತೋರಿಂಗೆ ಕೇಳೇಕು.
ಹಾಂಗೆ ನೋಡಿರೆ, ನಮ್ಮ ಬೈಲಿಲಿ ಬೆಟ್ಟುಕಜೆ ಮಾಣಿ ಇಪ್ಪದೂ ಒಂದು ಯೋಗವೇ!
ಈಗ ಜೀವನ ನಿಮಿತ್ತ ಬೆಂಗ್ಳೂರಿಲಿ ಇಪ್ಪದಾದರೂ ಮನಸ್ಸು ಪೂರ್ತ ಬೈಲಿಲೇ ಇದ್ದು. ಅದೇ ಸಂತೋಷ ನವಗೆ.
ಕಳುದ ವಾರ ಬೆಂಗ್ಳೂರಿಂದ ಊರಿಂಗೆ ಬಂದಿತ್ತಿದ್ದ ಬೆಟ್ಟುಕಜೆ ಮಾಣಿ. ಕರಿ ಕಾರಿಲಿ ಬಂದ ಕಾರಣ ಊರಿಲಿ ಅತ್ತಿತ್ತೆ ಹೋಪಲೂ ಅದನ್ನೇ ತೆಕ್ಕೊಂಡದು. ಅಲ್ಲದ್ದರೆ ಅಲ್ಲಿಲ್ಲಿ ಬಸ್ಸಿಂಗೆ ಕಾದೇ ಹೊತ್ತು ಹೋವುತ್ತು – ಹೇದು ಬೆಂಗ್ಳೂರಿಂದ ಬಪ್ಪಗ ಹಿಡ್ಕೊಂಡದಡ.
ಹಾಂಗಾಗಿ ಮೊನ್ನೆ ಪುತ್ತೂರಿಂಗೆ ಹೋದ್ಸೂ ಅದರ್ಲೇ.

ಪುತ್ತೂರಿಂಗೆ ಬೆಟ್ಟುಕಜೆ ಮಾಣಿ ಹೆರಡ್ತ ಹೊತ್ತು ನೋಡಿ – ಒಪ್ಪಣ್ಣ ಮಾರ್ಗದ ಕರೆಗೆ ಬಂದು ನಿಂದದಲ್ಲ; ಆದರೂ – ಅದು ಅತ್ತಿತ್ತೆ ಒಂದೇ ಹೊತ್ತಿಂಗೆ ಆಯಿದು.

ಒಪ್ಪಣ್ಣನ ಕಂಡೂ ಕಾಣದ್ದ ಹಾಂಗೆ ಮಾಡಿಂಡು, ಮೋರೆ ತಿರುಗುಸೆಂಡು ಹೋಪಲೆ ಅವ° ಎಂತ ರೂಪತ್ತೆಯೋ!
ಬೆಗರು ಅರಿಶಿಂಡು ಬಸ್ಸಿಂಗೆ ಕಾವ ಒಪ್ಪಣ್ಣನ ಕಂಡತ್ತು; ಕಾರು ನಿಲ್ಲುಸಿಯೇ ನಿಲ್ಲುಸಿದ° ಬೆಟ್ಟುಕಜೆ ಮಾಣಿ.
ಬಸ್ಸಿಲಿ ನೇತುಗೊಂಡು ಹೋಪ ತಲೆಬೆಶಿಲಿ ಇದ್ದ ಒಪ್ಪಣ್ಣಂಗೆ ಆರಾಮಲ್ಲಿ ತಂಪು ತಂಪು ಗಾಳಿಲಿ ಕಾರಿಲಿ ಹೋಪ ಯೋಗ ಆತದಾ!
ಅದೂ ಒಂದು ಯೋಗವೇ.
ಯೋಗಾಯೋಗಂದ ಮನೆಲಿ ಎಲ್ಲೋರುದೇ ಸೌಖ್ಯವೇ ಆಡ. ಕರಿಮಾರ್ಗದ ಕರೆಂಗೆ ಪುತ್ತೂರಿಂಗೆ ಎತ್ತುವನ್ನಾರವೂ ಮಾತಾಡಿಗೊಂಡೇ ಹೋದ್ಸು. ಅಪುರೂಪಲ್ಲಿ ಮೋರೆ ಕಾಂಬಗ ಹಳೆ ಶುದ್ದಿಗೊ, ಹೊಸ ಶುದ್ದಿಗೊ, ಚೀಪೆ ಶುದ್ದಿಗೊ, ನೆಗೆ ಶುದ್ದಿಗೊ – ಎಲ್ಲವುದೇ ಮಾತಾಡಿಗೊಂಡಾತು.

~

ಬೆಟ್ಟುಕಜೆ ಮಾಣಿ ಪುತ್ತೂರಿಂಗೆ ಹೋಗಿ, ಅಲ್ಲಿಂದ ಹಳೇ ಚೆಂಙಾಯಿಯ ಭೇಟಿ ಅಪ್ಪಲೆ ಹೋಪದಾಡ. ಅಂದು ಕೊಡೆಯಾಲಲ್ಲಿ ಕಲಿವಾಗ ಆದ ಚೆಂಙಾಯಿಗೊ ಕೆಲವು ಜೆನ ಇದ್ದವಾಡ.
ಬೆಟ್ಟುಕಜೆ ಮಾಣಿ ಬಾಕಿ ಮಕ್ಕಳ ಹಾಂಗೆ ಇಂಗ್ಳೀಶೋ, ಕನ್ನಡವೋ, ಸಂಸ್ಕೃತವೋ ಮಾಂತ್ರ ಕಲ್ತದಲ್ಲ, ಒಟ್ಟಿಂಗೆ “ಯೋಗ”ವನ್ನೂ ಕಲ್ತಿದ°.

ಶಾಸ್ತ್ರೀಯವಾಗಿ ಕ್ರಮಪ್ರಕಾರವಾಗಿ ಕಲ್ತು ಸರಕಾರದ ಅರ್ಹತಾಪತ್ರವ ಕೈಲಿ ಮಡಿಕ್ಕೊಂಡೇ ಬೆಂಗ್ಳೂರಿಂಗೆ ಹೋದ್ಸು.
ಈಗ ಬೆಂಗ್ಳೂರಿಲಿ ಯೋಗ ಮತ್ತೂ ಮುಂದುವರುದ್ದು, ಒಳ್ಳೆದೇ.
ಹಾಂಗೆ ಕೊಡೆಯಾಲಲ್ಲಿ ಆದ ಚೆಂಙಾಯಿಗಳ ಒಂದರಿ ಭೇಟಿ ಅಪ್ಪಲೆ ಈಗ ಹೆರಟದಾಡ.
ಎಲ್ಲೋರುದೇ ಯೋಗದ ಗೆಳೆಯರು ಆದ ಕಾರಣ ಮಾತಾಡ್ಳೆ ಯೋಗದ ವಿಶಯವೇ ಇದ್ದನ್ನೇ – ಹೇದು ನೆಗೆ ಮಾಡಿದ° ಬೆಟ್ಟುಕಜೆ ಮಾಣಿ.

ಯೋಗದ ವಿಶಯ ಎಂತರ – ಕೇಟೆ.

ಅದೇ – ನಾಳ್ತು ಅಂತಾರಾಷ್ಟ್ರೀಯ ಯೋಗದ ದಿನ – ಇಪ್ಪ ಸಂಗತಿ, ಅದಕ್ಕೆ ಪೂರ್ವಭಾವಿಯಾಗಿ ಎಂಗೊ ಸೇರ್ತಾ ಇಪ್ಪದು – ಹೇಳಿದ° ಬೆಟ್ಟುಕಜೆ ಮಾಣಿ.

ಬಪ್ಪವಾರ ಯೇವಗಳೋ ಆವುತ್ತು ಅಲ್ದೋ – ಕೇಟೆ. ತಾರೀಖುದೇ ಸರಿ ಗೊಂತಿಲ್ಲದ್ದ ಒಪ್ಪಣ್ಣಂಗೆ ಈ ಬಗ್ಗೆ ಏನೂ ಅರಡಿಯ ಹೇದು ಅನುಸಿತ್ತೋ ಏನೋ – ಯೋಗದ ದಿನದ ಬಗ್ಗೆ ಮಾತಾಡ್ಳೆ ಸುರು ಮಾಡಿದ°.

~
ಮನುಶ್ಯ ಜೀವನಲ್ಲಿ ಬೇಕಪ್ಪ ಎರಡು ಮುಖ್ಯ ಅಂಶಂಗೊ ಹೇದರೆ – ಒಂದನೇದಾಗಿ ದೇಹಾರೋಗ್ಯ, ಎರಡ್ಣೇದು ಚಿತ್ತ ಶುದ್ಧಿ.
ದೇಹಾರೋಗ್ಯ ಹೇದರೆ, ಮೈ ಕೈ ಗಟ್ಟಿ ಇದ್ದುಗೊಂಡು ಆರೋಗ್ಯಲ್ಲಿ ಇಪ್ಪ ದೇಹ. ಕೈ ಬೇನೆ, ಕಾಲುಬೇನೆ, ಸೊಂಟ ಬೇನೆ ಎಲ್ಲ ಬಂದು ಎಳಗುವಾಗ ’ಅಯ್ಯೋ ಈ ಜೀವನವೇ’ – ಹೇದು ಒಂದೊಂದರಿ ಕಾಂಬಲಿದ್ದು. ಆದರೆ, ದಿನಾಗಳೂ ಆ ದೇಹವ ದಂಡುಸಿ ಕೈಕ್ಕಾಲು ಉದ್ದ ಸರ್ತ ಮಾಡಿ ಎದ್ದು ಕೂದು ಮಾಡಿಗೊಂಡು ಇದ್ದರೆ ದೇಹ ಆರೋಗ್ಯಲ್ಲಿ ಇರ್ತು.

ಅದೇ ನಮುನೆ, ಚಿತ್ತ ಶುದ್ಧಿ. ಮನಸ್ಸು ಸರಿ ಇಲ್ಲೆ ಹೇದರೆ ದೇಹ ಸರಿ ಇದ್ದರೂ ಪ್ರಯೋಜನ ಇಲ್ಲೆ. ಮನಸ್ಸಿನ ಏಕಾಗ್ರತೆಲಿ ಮಡಗಿರೆ ಮಾಂತ್ರ ಎಂತಾರು ಕಾರ್ಯಸಾಧನೆ ಸಾಧ್ಯ. ಅಲ್ಲದ್ದರೆ ಯೇವದೂ ಎಡಿಯ. ಅಲ್ದೋ?

ನಮ್ಮ ಋಷಿಮುನಿಗೊ ಇದಕ್ಕಿಪ್ಪ ಸುಲಭ ಸಾಧನವ ಹುಡ್ಕಿ ಮಡಗಿದ್ದವು. ಅದುವೇ ಯೋಗ.
ದೈಹಿಕ ಮತ್ತೆ ಮಾನಸಿಕ – ಆರೋಗ್ಯವ ಉದ್ಧರುಸಿ, ವ್ಯಕ್ತಿಯೊಬ್ಬನ ಏಳಿಗೆಗೆ ಕಾರಣ ಅಪ್ಪ ಅಂಶವ ನಮ್ಮ ಋಷಿಮುನಿಗೊ ಹುಡ್ಕಿದ್ದವಾಡ.

ದೇಹಕ್ಕೆ ವ್ಯಾಯಾಮವೂ, ಮನಸ್ಸಿಂಗೆ ಧ್ಯಾನವೂ – ಎರಡನ್ನೂ ಅವಿಲಿನಾಂಗೆ ಬರಕ್ಕೆ ಮಾಡಿ – ರುಚಿಯಾದ ಪಾಕ ತಯಾರು ಮಾಡಿ ಮಡಗಿದ್ದವಾಡ ಹೆರಿಯೋರು. ನಾವು ಅದರ ಅನುಸರುಸುದರೆ ಆತು. ಆ ಪಾಕಕ್ಕೆ ಯೋಗ – ಹೇದು ಹೆಸರು. ನಾಗರಿಕ ಪ್ರಪಂಚಕ್ಕೆ ಭಾರತದ ಅತಿ ದೊಡ್ಡ ಕೊಡುಗೆ ಈ ಯೋಗ ಅಡ.

ನೂರಾರು ಒರಿಷ ಬಾಳಿ ಬದ್ಕಿದ ಋಶಿಗೊ ಅವರ ಜೀವಮಾನಲ್ಲಿ ಹೇಂಗೆ ರೋಗರುಜಿನಂಗಳ ಬಾರದ್ದಾಂಗೆ ಮಾಡಿತ್ತಿದ್ದವು!
ಅದು ಹೇಂಗೆ ಅವು ಸಾವಿರಾರು ಮೈಲು ನೆಡವ ಸಾಮರ್ಥ್ಯ ಮಾಡಿತ್ತಿದ್ದವು?
ಅದು ಹೇಂಗೆ ಅವರ ಮನಸ್ಸು ಅಷ್ಟು ತೀಕ್ಷ್ಣ ಆಗಿದ್ದತ್ತು..!
ಅದಕ್ಕೆಲ್ಲ ಕಾರಣವೇ – ಯೋಗ.

~

ಯೇವ ರೀತಿ ಸಂಧ್ಯಾವಂದನೆ ಮಾಡಿ ಅರ್ಘ್ಯಜಪ ಕೊಡ್ತೋ, ಅದೇ ರೀತಿ ಯೋಗಾಸನ ಮಾಡಿ ದೇಹವ ಗಟ್ಟಿಮುಟ್ಟು ಮಡಿಕ್ಕೊಳ್ತು. ಮದಲಿಂಗೆ ಎಲ್ಲೋರತ್ರೂ ಈ ಕ್ರಮ ಇದ್ದತ್ತು.

“ಹಳತ್ತೆಲ್ಲ ಅರ್ಥಹೀನ” -ಹೇದು ಒಂದು ಕಾಲಘಟ್ಟ ಬಂತಲ್ಲದೋ – ಅಂಬಗ ಈ ಯೋಗದ ಮಹತ್ವ ಕಡಮ್ಮೆ ಆಗಿಂಡು ಬಂತು.
ಎಂತ ಇದ್ದರೂ ಇಂಜೆಕ್ಷನಿಲಿ ಕಡಮ್ಮೆ ಅಪ್ಪದು, ಮದ್ದು ತೆಕ್ಕೊಂಡು ಗುಣ ಅಪ್ಪದು – ಹೇದು ತಿಳಿವಳಿಕೆ ಬೆಳದ ಕಾಲ ಅದು.
ಯೋಗಾಸನ, ಪ್ರಾಣಾಯಾಮ ಎಲ್ಲ ಅಜ್ಜಂದ್ರ ಕಾಲದ್ದು, ನವಗೆ ಇಪ್ಪದಲ್ಲ – ಹೇದು ಮಾತಾಡುವ ಕಾಲ ಅದು.
ಅದರಿಂದಾಗಿ ಒಂದೆರಡು ತಲೆಮಾರುಗಳ ಕಾಲ ಇದರ ಬಗ್ಗೆ ಆಸಕ್ತಿಯೇ ಇಲ್ಲದ್ದೆ ಆಗಿಹೋತು. ಹಾಂಗಾಗಿ ಯೋಗದ ಮಹತ್ವ ಮತ್ತಾಣೋರಿಂಗೆ ಗೊಂತೇ ಆಯಿದಿಲ್ಲೆ.

~

"ಅಂತರ್ರಾಷ್ಟ್ರೀಯ ಯೋಗದ ದಿನ
“ಅಂತರ್ರಾಷ್ಟ್ರೀಯ ಯೋಗದ ದಿನ

ಇದರೆಡಕ್ಕಿಲಿ ನಮ್ಮಲ್ಲಿಂದ ಕಲ್ತು ಹೋಗಿ ಅನುಸರುಸಿಗೊಂಡು ಇದ್ದ ಪಾಶ್ಚಾತ್ಯರು – ಹಾಂ, ಇದರ್ಲಿ ಸತ್ವ ಇಪ್ಪದಪ್ಪು – ಹೇದು ಮನಗಂಡವು. ಹೆಚ್ಚು ಹೆಚ್ಚು ಜೆನಂಗೊ ಕಲಿವಲೆ ಬಂದವು.ಪ್ರಸಾರ ಪಡುಸಿದವು. ಬೆಳೆಶಿದವು. ಇದರ್ಲಿಪ್ಪ ಆನಂದವ ಕಂಡುಗೊಂಡವು.

ನಮ್ಮವಕ್ಕೆ ಎಚ್ಚರಿಗೆಯೇ ಆಯಿದಿಲ್ಲೆ.
ಈಗೀಗ ಕೆಲವು ದಿಕ್ಕೆ – ಅಯ್ಯಂಗಾರು ಅಜ್ಜನ ಶಿಷ್ಯರೋ, ಬಾಬಾ ರಾಮದೇವರ ಪೈಕಿಯೋ, ರವಿಶಂಕರ ಗುರೂಜಿಯ ಪೈಕಿಯೋ – ಕೆಲವು ದಿಕ್ಕೆ ಯೋಗಮಾರ್ಗವ ಅನುಸರುಸುತ್ತಾ ಇದ್ದವು.

ಬೇಕೋ ಬೇಡದೋ – ಹೇದು ನಮ್ಮ ಕೆಲವು ವಿಶ್ವವಿದ್ಯಾನಿಲಯಂಗಳಲ್ಲಿ ಯೋಗದ ಕುರಿತಾಗಿ ಪದವಿ ತರಗತಿಗೊ ನೆಡೆತ್ತು. ಅಷ್ಟೇ – ಹೇಯಿದ° ಬೆಟ್ಟುಕಜೆ ಮಾಣಿ.

~

ಇದರೆಡಕ್ಕಿಲಿ ನಮ್ಮ ದೇಶದ ಪ್ರಧಾನಿ ವಿಶ್ವಸಂಸ್ಥೆಲಿ ಮಾತಾಡ್ಳೆ ಹೇದು ಕಳುದೊರಿಶ ಹೋಗಿಪ್ಪಾಗ, ಅಲ್ಲಿ ಭಾಷಣ ಮಾಡುವಗ ಹೇಳಿದ ಹಲವು ವಿಷಯದ ಒಟ್ಟಿಂಗೆ ಒಂದು ವಿಶಯ – ಒರಿಶಲ್ಲಿ ಒಂದಿನ “ಯೋಗ”ಕ್ಕೆ ಬೇಕಾಗಿ ನೆಂಪು ಮಡಿಕ್ಕೊಳೇಕು – ಹೇದು ಸೂಚನೆ ಕೊಟ್ಟನಾಡ.

ಸೆಪ್ಟೆಂಬ್ರ ಇಪ್ಪತ್ತೇಳಕ್ಕೆ ಸಲಹೆ ಕೊಟ್ಟದು, ಡಿಸೆಂಬ್ರ ಹನ್ನೊಂದಕ್ಕೆ ಒಪ್ಪಿಗೆ ಸಿಕ್ಕಿತ್ತಾಡ. ಆ ಪ್ರಕಾರ ಒರಿಶಲ್ಲಿ ಒಂದು ದಿನ “ಅಂತರ್ರಾಷ್ಟ್ರೀಯ ಯೋಗದ ದಿನ” – ಹೇದು ನಿಜ ಮಾಡಿದವಾಡ.

ಸರಿ, ಆ ಒಂದು ದಿನ ಯೇವದು ಆಗಿರೆಕ್ಕು?
ಒರಿಶಲ್ಲಿ ಒಂದು ವಿಶೇಷ ದಿನ ಯೇವಾಗ? ಜೂನ್ ಇಪ್ಪತ್ತೊಂದನೇ ತಾರೀಕು!

ವಿಶೇಷ ಎಂತರ ಹೇದರೆ, ಒರಿಶಲ್ಲಿ ಅತೀ ಹೆಚ್ಚು ಹೊತ್ತು ಆ ದಿನ ಅಡ. ದಿನಮಾನ ಅತೀ ಹೆಚ್ಚು ಇಪ್ಪದು ಆ ದಿನ ಆದ ಕಾರಣ ವಿಶೇಷವಾಗಿ ಆ ದಿನವನ್ನೇ ತೆಕ್ಕೊಂಡವಾಡ.
ಸೂರ್ಯನ ದಿನ ಆದ ಆ ದಿನ ಸೂರ್ಯ ನಮಸ್ಕಾರ ಮಾಡುವ ಪೂರ್ವಕ, ಹಲವು ಯೋಗಾಸನಂಗಳ ಮಾಡುವದರ ಒಟ್ಟಿಂಗೆ ಯೋಗದ ದಿನವ ಆಚರುಸುವ ಆಲೋಚನೆ – ಹೇದು ಬೆಟ್ಟುಕಜೆ ಮಾಣಿ ಹೇಳಿದ°.

~
ಎಲ್ಲ ಚೆಂದಲ್ಲಿ ಸಾಗುತ್ತಾ ಇದ್ದು ಹೇಳುವಾಗ ರಜ್ಜ ಹುಳ್ಕು ಎಲ್ಲ ಕಡೆಲಿಯೂ ಇಪ್ಪದೇ.
ಹಾಂಗಾಗಿ ಇಲ್ಲಿಯೂ ಬಂದದರ್ಲಿ ವಿಶೇಷ ಏನಿಲ್ಲೆ – ಬೆಟ್ಟುಕಜೆ ಮಾಣಿಯ ಮಾತಿಲಿ ಬೇಜಾರ ಎದ್ದು ಕಂಡುಗೊಂಡಿತ್ತು.
ಅದೆಂತರ ಹೇದರೆ, ಇಡೀ ವಿಶ್ವವೇ ಆ ದಿನವ ಯೋಗದ ದಿನ ಹೇದು ಅಂಗೀಕಾರ ಮಾಡಿರೂ, ನಮ್ಮಲ್ಲಿ ಅಲ್ಪರಾಜಕೀಯ ಮಾಡ್ಳೆ ಹೆರಟು “ಎಂಗಳ ಧರ್ಮಲ್ಲಿ ಸೂರ್ಯಂಗೆ ನಮಸ್ಕಾರ ಮಾಡ್ಳಿಲ್ಲೆ, ಎಂಗೊಗೆ ಒಂದೇ ದೇವರು, ಬೇರಾರೂ ಅಲ್ಲಾ” – ಹೇದು ತಗಾದೆ ತೆಗದ್ದವಾಡ ಕೆಲವು ಧರ್ಮಾಂಧರು.
ಸೂರ್ಯಂಗೆ ನಮಸ್ಕಾರ ಮಾಡ್ಳಾಗ ಹೇದು ಯೇವ ಧರ್ಮಗ್ರಂಥವೂ ಹೇಳ, ಅಲ್ದೋ?

ಇಡೀ ಲೋಕಕ್ಕೇ ಬೆಣಚ್ಚು ಕೊಡುವ ಸೂರ್ಯದೇವರು ಆ ಧರ್ಮಾಂಧರ ಅಂಧಕಾರಕ್ಕೆ ಬೆಣಚ್ಚು ಕೊಡುಗೋ? ಕೊಟ್ರೆ ಒಳ್ಳೆದಿತ್ತು.
ಅಪೂರ್ವ ಯೋಗದ ದಿನವ ರೈಸುವ ಹಾಂಗೆ ಗೌಜಿಲಿ ಬೆಳಗುಸುಲೆ ಆವ್ತಿತು.
ಯೋಗ, ನಮ್ಮ ಮನಸ್ಸು – ದೇಹವ ಶುದ್ಧ ಮಾಡಲಿ. ಎಲ್ಲೋರಿಂಗೂ ಒಳ್ಳೆದಾಗಲಿ.

~

ಒಂದೊಪ್ಪ: ದಿನವೂ ಮಾಡುವ ಯೋಗಕ್ಕೆ ಅಂತಾರಾಷ್ಟ್ರೀಯವಾಗಿ ಒಂದು ದಿನ ಸಿಕ್ಕಿದ್ದು ಭಾರತಕ್ಕೆ ಹೆಮ್ಮೆಯ ವಿಶಯ.

~
ಸೂ:
– ಯೋಗದ ಬಗ್ಗೆ ವಿಶೇಷ ಮಾಹಿತಿಗೆ ಬೆಟ್ಟುಕಜೆ ಮಾಣಿಯ ಸಂಪರ್ಕ ಮಾಡ್ಳಕ್ಕು

– ಅಂತಾರಾಷ್ಟ್ರೀಯ ಯೋಗದ ದಿನದ ಬಗ್ಗೆ ಹೆಚ್ಚಿನ ಮಾಹಿತಿ: http://idayofyoga.org/

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಂತಾರಾಷ್ಟ್ರೀಯ ಯೋಗದ ದಿನ ಹತ್ತರೆ ಬಪ್ಪಗ ಬೈಲಿಲ್ಲಿಯೂ ಯೋಗದ ಶುದ್ದಿ ಸಿಕ್ಕಿದ್ದು ಒಂದು ಯೋಗವೇ!

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  yoga ದಿನ ಸರಿಯಾಗಿ ಆಚರಣೆ ಆಗಲಿ. ಎಲ್ಲರಿಂಗೂ ಸನ್ಮತಿ ಬರಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ, ಹಳೆಮನೆ

  ನಮ್ಮ ದೇಶಲ್ಲಿಯೇ ಹುಟ್ಟಿ ಬೆಳದ ಯೋಗಕ್ಕೆ ಈಗ ಅಂತರ್ ರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ಒಂದು ಯೋಗಾಯೋಗವೇ.
  ಇದು ನವಗಿಪ್ಪದಲ್ಲ, ಎಂಗೊ ಮಾಡ್ಲೆ ಎಂಗಳ ಧರ್ಮ ಬಿಡ್ತಿಲ್ಲೆ ಹೇಳಿದರೆ, ಅವಕ್ಕೇ ನಷ್ಟ ಹೊರತು ಯೋಗಕ್ಕೆ ನಷ್ಟ ಇಲ್ಲೆ.
  ಅರ್ಥ ಮಾಡಿಗೊಂಡ ಬೇರೆ ಮತದವೂ ಯೋಗವ ಒಪ್ಪಿದ್ದವು, ಅಪ್ಪಿದ್ದವು.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಯೋಗಾಯೋಗದ ವಿವರಣೆ ಒಳ್ಳೆದಾಯಿದು ಒಪ್ಪಣ್ಣ. ಉತ್ತರಾಯಣದ ಕೊನೆ ದಿನ ಯೋಗಕ್ಕೆ ಯೋಗ ಕೂಡಿ ಬಯಿಂದು.

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ, ಹಳೆಮನೆ

  ನಮ್ಮ ಪೈಕಿ ಯೋಗಲ್ಲಿ ಸಾಧನೆ ಮಾಡಿ ಅಂತರ್ ರಾಷ್ಟ್ರೀಯ ಮಟ್ಟಲ್ಲಿ ಹೆಸರು ಮಾಡಿದವು ಹೇಳಿರೆ ” ಯೋಗ ರತ್ನ ದೇಲಂಪಾಡಿ ಗೋಪಾಲ ಕೃಷ್ಣ ಭಟ್”. ಇವು ಸಾವಿರಕ್ಕಿಂತಲೂ ಜಾಸ್ತಿ ಯೋಗ ಶಿಬಿರ ಮಾಡಿದ್ದವು, ಹಲವಾರು ರಾಷ್ಟ್ರೀಯ ಅಂತರ್ ರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿಯೂ ಸಹಕರಿಸಿದ್ದವು. ಇವರ ಬಗ್ಗೆ ಹೆಚ್ಚಿನ ಮಾಹಿತಿಗೆ :-
  http://www.delampady.com/

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಪೆರ್ಲದಣ್ಣಯೇನಂಕೂಡ್ಳು ಅಣ್ಣಅಕ್ಷರದಣ್ಣಚೆನ್ನಬೆಟ್ಟಣ್ಣಹಳೆಮನೆ ಅಣ್ಣಸರ್ಪಮಲೆ ಮಾವ°ಡಾಗುಟ್ರಕ್ಕ°ಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°ದೊಡ್ಡಭಾವಕಾವಿನಮೂಲೆ ಮಾಣಿಅಜ್ಜಕಾನ ಭಾವಸುವರ್ಣಿನೀ ಕೊಣಲೆಶ್ರೀಅಕ್ಕ°ಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕಡಾಮಹೇಶಣ್ಣವೆಂಕಟ್ ಕೋಟೂರುಸಂಪಾದಕ°ದೇವಸ್ಯ ಮಾಣಿಶ್ಯಾಮಣ್ಣನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ