Oppanna.com

ಇಂಟರ್ನೆಟ್ಟು ಬೇಸಿಕ್ಕು – ಎಂತಾರು ಕೊಕ್ಕೆ ಸಿಕ್ಕುಸಿಕ್ಕು..

ಬರದೋರು :   ಒಪ್ಪಣ್ಣ    on   15/01/2016    2 ಒಪ್ಪಂಗೊ

ಕಂಪ್ಯೂಟರಿನ ಕೆಣಿ ಒಪ್ಪಣ್ಣಂಗೆ ಅರಡಿಯ. ಅದಕ್ಕೆ ಏನಿದ್ದರೂ ಪೆರ್ಲದಣ್ಣನೇ ಆಯೆಕ್ಕಷ್ಟೆ.
ಮೊನ್ನೆ ಕುಂಟಾಂಗಿಲ ಭಾವನ ಮದುವೆಗೆ ಪೆರ್ಲದಣ್ಣ ಬಂದಿತ್ತಿದ್ದವಲ್ಲದೋ, ಉಂಬಲೆ ಒಟ್ಟಿಂಗೆ ಕೂದ್ದಿದಾ – ಅಷ್ಟಪ್ಪಗಳೇ ಈ ವಿಷಯ ಮಾತಾಡ್ಳೆ ಸಿಕ್ಕಿದ್ದಾತು ಅವಕಾಶ.
ಕೇಳಿದೆ – ಈ ಫ್ರೀ ಬೇಸಿಕ್ಕು ಇಂಟರ್ನೆಟ್ಟು ಹೇದರೆ ಎಂತ್ಸು, ಅದರ ನಮ್ಮ ಮೊಬೈಲಿಂಗೆ ಹಾಕಿಂಬದು ಹೇಂಗೆ? ಹಾಕಿರೆಂತ ಗುಣ – ಹೇದು.
ಅಷ್ಟಪ್ಪಗ ವಿವರವಾಗಿ ತಿಳುಶಿದವು – ಫ್ರೀ ಇಂಟರ್ನೆಟ್ಟು, ಅದರ ಇಕ್ಮತ್ತು, ಅದರ ಕೆಟ್ಟುಂಕೆಣಿ – ಎಂತ್ಸರ ಹೇದು.
~
ಹಿನ್ನೆಲೆ:
ಇಂಟರ್ನೆಟ್ಟು ಕೊಡ್ತ ದೊಡ್ಡ ಕಂಪೆನಿಗೊ ಸೇರಿ ಒಂದು ಕೆಣಿ ಮಾಡಿದವಡ ಒಂದರಿ.
ಇಂಟರ್ನೆಟ್ಟಿಲಿ ಕೆಲವು ವೆಬ್-ಸೈಟುಗಳ ನೋಡ್ಳೆ ಪೈಶೆ ಕಟ್ಟೆಕ್ಕೂಳಿ ಇಲ್ಲೆ, ಫ್ರೀ ಕೊಡ್ತೆಯೊ – ಹೇಳಿ.
ಅದರ ಅರ್ಥ ಮಾಡಿಗೊಂಡ ಭಾರತದ ಜೆನಂಗೊ – ಇಂಟರ್ನೆಟ್ಟು ಕೊಡ್ತರೆ ಎಲ್ಲ ವೆಬ್-ಸೈಟುಗಳನ್ನೂ ಒಂದೇ ನಮುನೆ ಕೊಡೆಕ್ಕು. ಕೆಲವೇ ವೆಬ್-ಸೈಟುಗಳ ಫ್ರೀ ಕೊಡ್ತೆ ಹೇಳಿರೆ ಒಳುದೋರಿಂಗೆ ತೊಂದರೆ. (ಉದಾ, facebook ನ free ಕೊಟ್ರೆ HareRaama ಕ್ಕೆ ಅನ್ಯಾಯ ಅಲ್ದಾ) ಹಾಂಗೆ ಇಂಟರ್ನೆಟ್ ಸೌಲಭ್ಯ ಕೊಡುವಗ ನೆಟ್ ಸೌಲಭ್ಯ ಕೊಡುವ ಕಂಪೆನಿಗೊ ತಟಸ್ಥ ಇರೆಕ್ಕು ಹೇಳಿ ಆಂದೋಲನ ಸುರು ಆತು. ಅಲ್ಲಿಗೇ ತಣುದತ್ತು. ಅದಕ್ಕೆ Net Neutrality ಅಭಿಯಾನ ಹೇಳಿ ಹೆಸರೂ ಆತು. ಇದು ಸೋಣೆಗಾಂಧಿ ಕಾಲಲ್ಲಿ.
ಹಾ, ಹಾ – ಒಪ್ಪಣ್ಣಂಗೆ ನೆಂಪಾತು – ಅಂದೊಂದರಿ ಇದರ ಬಗ್ಗೆ ಬೊಬ್ಬೆ ಆಗಿಂಡು ಇದ್ದದು. ಅಷ್ಟಪ್ಪಗಳೇ ಕೇಳೇಕು ಹೇದು ಗ್ರೇಶಿತ್ತಿದ್ದೆ ಪೆರ್ಲದಣ್ಣನ ಹತ್ತರೆ, ಅಂಬಗ ಪುರುಸೊತ್ತಾಗಿದ್ದತ್ತಿಲ್ಲೆ.
ಈಗ ಮೋದಿಅಜ್ಜ ಬಂದ ಮತ್ತೆ, ಒಂದರಿ facebook ಕಂಪೆನಿಗೆ ಹೋಗಿ ಕೈಕುಲ್ಕಿ ಎಲ್ಲ ಬಂತಲ್ಲದೋ – ಹಾಂಗೆ facebook ನ ವಾನರಂಗೆ ಒಳ್ಳೆ ಎಳಕ್ಕ ಎಳಗಿತ್ತು.

ಅದೇ ಸಂಗತಿ, ಹೆಸರು ಬೇರೆ:
ಭಾರತಲ್ಲಿ basic internet ಎಲ್ಲರಿಂಗೂ ಸಿಕ್ಕುವಾಂಗೆ ಮಾಡ್ತೆ. Facebook ಮತ್ತೆ Facebook ನ ಒಡಂಬಡಿಕೆಗೆ ಒಪ್ಪುವ ವೆಬ್-ಸೈಟುಗಳ free ಕೊಡ್ತೆ – ಹೇದು ಭಾರತ ಸರ್ಕಾರಕ್ಕೆ ಹೇಳಿತ್ತು. ಸರ್ಕಾರ TRAI ಸಂಸ್ಥೆಗೆ “ಜನರ ಅಭಿಪ್ರಾಯ ಕೇಳಿ ಹೇಂಗೆ ಬೇಕೋ ಹಾಂಗೆ ಮಾಡಿ” – ಹೇಳಿತ್ತು. ಅದಕ್ಕೆ ಈಗ ಅಭಿಯಾನ.

ಇದು ಹಳೇ ಅಭಿಯಾನದ್ದೇ ಇನ್ನೊಂದು ಮೋರೆ ಹೇದು ನಮ್ಮ ಮಾಣಿಯಂಗೊಕ್ಕೆ ಗೊಂತಾಯಿದಿಲ್ಲೆ. ಏಕೇದರೆ ಇದರ ಹೆಸರು ಬೇರೆ, ಚೆಂದದ ಹೆಸರು free basics. ಅಗತ್ಯಕ್ಕೆ ಬೇಕಾದ basic website ಗೊ ಎಲ್ಲ free ಸಿಕ್ಕುತ್ತು ಹೇದು ಗ್ರೇಶುಗು ಹೆಸರು ಕೇಳಿರೆ. ಆದರೆ basic ಹೇದರೆ facebook ಗೆ ತಗ್ಗಿ ಬಗ್ಗಿ ನಡವೋರು ಮಾಂತ್ರ.

ಎಂತಕ್ಕು?:
ಹೀಂಗೇ ಮುಂದುವರುದರೆ ನಾಳೆ facebook ಹೇಳಿದ್ದದೇ ಇಂಟರ್ನೆಟ್ಟು – ಹೇಳಿ ಆವುತ್ತು. ಎಲ್ಲರೂ ಅದರ free basic package ಇಂಟರ್ನೆಟ್ಟು ತೆಕ್ಕೊಳ್ತವು. ಆ ಇಂಟರ್ನೆಟ್ಟಿಲಿ ಎಷ್ಟು ವೆಬ್-ಸೈಟು ಬತ್ತೋ, ಅದು ಮಾಂತ್ರ ಜನಂಗೊಕ್ಕೆ ತಲುಪುಗು. ಒಳುದ್ದದು?! ಬೈಲು, HareRaama ದ ಹಾಂಗಿತ್ತ ಕೋಟ್ಯಂತರ ವೆಬ್-ಸೈಟುಗೊ ಈ free basic package ಲಿ ಬತ್ತಿಲ್ಲೆ. ಅಷ್ಟಪ್ಪಗ ಹೆಚ್ಚಿನೋರು free basic ಲಿ ಹೊಡಚ್ಚಿಗೊಂಡಿದ್ದರೆ ಹಾಂಗಿಪ್ಪದರ ಓದೇಕಾರೆ ಪೈಶೆ ಕೊಡೆಕ್ಕಕ್ಕು.

ಉದಾ: ಒಬ್ಬ ಹೊಸಾ Sim ಕನೆಕ್ಷನ್ ತೆಕ್ಕೊಳ್ತರೆ, ಅದರೊಟ್ಟಿಂಗೆ free basic ಇಂಟರ್ನೆಟ್ಟು package ಬತ್ತು ಹೇಳಿ ಮಡಿಕ್ಕೊಂಬೊ.
Facebook ಮತ್ತು ಅದರ ಒಟ್ಟಿಂಗೆ Agreement ಮಾಡಿಗೊಂಡ ವೆಬ್-ಸೈಟುಗೊ ಎಲ್ಲವೂ ಸಿಕ್ಕುತ್ತಾ ಇಕ್ಕು. ಅಷ್ಟಪ್ಪಗ ಆ ವ್ಯಕ್ತಿಗೆ ಪೈಸೆ ಕೊಟ್ಟು ಬೇರೆ ವೆಬ್-ಸೈಟು ನೋಡೆಕ್ಕಾದ ಮನಸ್ಸೂ ಬಾರ.
ಕ್ರಮೇಣ ಆ ವ್ಯಕ್ತಿಗೆ ಇಂಟರ್ನೆಟ್ಟು ಹೇದರೆ facebook, facebook ಹೇದರೆ ಇಂಟರ್ನೆಟ್ಟು ಹೇಳಿ ಅಕ್ಕು.
ಇದರಿಂದ ಒಳುದ ಕಂಪೆನಿಗೊಕ್ಕೆ ಪೆಟ್ಟು. ಆ facebook ನ package ಲಿ ನಮ್ಮ ವೆಬ್-ಸೈಟಿನ ತುಂಬುಸೆಕ್ಕಾರೆ ಆ ಜೆನ ಹೇಳಿದಷ್ಟು ಸೂಟುಕೇಸು ಮಡಗೆಕ್ಕಕ್ಕು.
ದುರಂತ – ನಮ್ಮವಕ್ಕೆ ಇದರ ಸ್ಪಷ್ಟ ಕಲ್ಪನೆಯೇ ಇಲ್ಲದ್ದೆ support ಮಾಡ್ತಾ ಇದ್ದವು – ಹೇದು ಪೆರ್ಲದಣ್ಣ ಹೇಳುವಾಗ ಒಪ್ಪಣ್ಣಂಗೆ ಒಂದರಿಯೇ ಹೆದರಿ ಹೋತು.

ಮದಲಿಂಗೆ ನಮ್ಮ ಊರಿಲಿ ಶೆಕ್ಕರೆಯ ಒಟ್ಟಿಂಗೆ ಚಾಯದ ಹೊಡೆ free ಕೊಟ್ಟಿದವಾಡ. ಚಾಯ ಮಾಡಿದವು, ಕುಡುದವು ಮುಗಿವನ್ನಾರ. ಮುಗಿವಾಗ – ಇನ್ನೂ ಬೇಕು ಹೇಳಿತ್ತು ಮನಸ್ಸು. ಹೋಗಿ ತಂದವು, ಈ ಸರ್ತಿ ಪೈಶೆ ಕೊಟ್ಟು. ಮತ್ತೆ ಜೀವಮಾನ ಪೂರ್ತ ಪೈಶೆಕೊಟ್ಟೇ ಕುಡುದವು. ಈಗ ಅವರ ಮತ್ತಾಣ ತಲೆಮಾರು ಹಲವಾತು, ಎಲ್ಲೋರುದೇ ಪೈಶೆ ಕೊಟ್ಟೇ ಕುಡಿತ್ತಾ ಇದ್ದು.
ಇನ್ನೂ ಎಷ್ಟೋ ತಲೆಮಾರು ಇದ್ದು ಪೈಶೆ ಕೊಟ್ಟು ಕುಡಿಯಲೆ.
ಒಂದು ವೇಳೆ ಅಂದು ಧರ್ಮಕ್ಕೆ ಸಿಕ್ಕಿದ್ದದು ಬೇಡ – ಹೇದು ಬಿಟ್ಟಿದ್ದರೆ ನವಗೆ ಇಂದು ಚಾಯದ ರುಚಿಯೂ ಗೊಂತಿರ್ತಿಲ್ಲೆ, ಕುಡಿಯೇಕಾದ ಅಗತ್ಯವೂ ಬತ್ತಿತಿಲ್ಲೆ.
ಈಗಾಣ ಗೌಜಿಯ freebasic ಎಷ್ಟು ಸಮೆಯ free ಇರ್ತು ಹೇದು ಅರಡಿಯ. ಒಳುದ ಕಂಪೆನಿಗೊ ಸಾವನ್ನಾರ ಇಕ್ಕು. ಎಲ್ಲರೂ ಮಾರಾಪು ಕಟ್ಟಿ ನೆಡದ ಮತ್ತೆ ಈ facebook ಕಂಪೆನಿದೇ ಕಾರ್ಬಾರು – ಅದು ಹೇಳಿದಷ್ಟು ಪೈಶೆ ಮಡಗೆಕ್ಕಕ್ಕು – ಹೇದು ಪೆರ್ಲದಣ್ಣಂಗೆ ಸಂಶಯ ಇದ್ದು.

ಎಂತ ಮಾಡೇಕು?
ಬೈಲಿನ ಎಲ್ಲೋರುದೇ ಒಟ್ಟು ಸೇರಿ ಈ freebasic ನ ದೂರ ಮಾಡೇಕು. ನವಗೆ ಪೈಶೆಕೊಟ್ಟಾದರೂ ತೊಂದರೆ ಇಲ್ಲೆ ,ಧರ್ಮಕ್ಕೇ ಸಿಕ್ಕುತ್ತದು ಬೇಡ – ಹೇದು ಎಲ್ಲೋರಿಂಗೂ ಮನವರಿಕೆ ಮಾಡೇಕು – ಹೇದು ಮತ್ತೆ ಮತ್ತೆ ನೆಂಪು ಹೇಯಿದ.
~

ಯೇವದೂ ಧರ್ಮಕ್ಕೆ ಬತ್ತಿಲ್ಲೆ – ಹೇದು ಒಂದು ಗಾದೆ ಇದ್ದು ಇಂಗ್ಳೀಶಿಲಿ.
ಧರ್ಮಕ್ಕೆ ಹೇದು ಕಂಡ್ರೆ ಅದರ ಹಿಂದೆ ಲೊಟ್ಟೆ ಇಕ್ಕು.

ಒಂದೊಪ್ಪ: ಧರ್ಮಕ್ಕೆ ಕೊಡ್ತದರ ಹಿಂದೆ ಅಧರ್ಮವೂ ಇಕ್ಕು. ನಾವು ಜಾಗ್ರತೆ ಮಾಡೇಕು.

2 thoughts on “ಇಂಟರ್ನೆಟ್ಟು ಬೇಸಿಕ್ಕು – ಎಂತಾರು ಕೊಕ್ಕೆ ಸಿಕ್ಕುಸಿಕ್ಕು..

  1. ಶುದ್ದಿ ಒಳ್ಳೆ ಮಾಹಿತಿ ಕೊಟ್ಟತ್ತು. ಬೇಸಿಕ್ಕು ತೆಕ್ಕೊಂಡರೆ ನಮ್ಮ ಮಂಗಳೂರಿನ ಟಿವಿ ಕೇಬುಲು ಆಪರೇಟರುಗಳ ಹಾಂಗೆ ಅವಕ್ಕೆ ಬೇಕಾದ್ದರ ಮಾಂತ್ರ ಕೊಡುಗಷ್ಟೆ ಅಂಬಗ. ನವಗೆ ಬೇಕಾದ್ದಕ್ಕೆ ಪೈಸೆ ಕೊಡ್ಲೇ ಬೇಕು. ನಮ್ಮ ಒಪ್ಪಣ್ಣನ ಬೈಲಿಂಗುದೆ ಪೈಸೆ ಕೊಡೆಕಕ್ಕುಅಲ್ಲದೊ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×