ಐ.ಪಿ.ಎಲ್: ಇದು ಪೂರಾ ಲೊಟ್ಟೆ…??!

May 13, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆ ಶುದ್ದಿ ಮಾತಾಡಿ ಪ್ರಯೋಜನ ಇಲ್ಲೆ – ಹೇಳಿ ಮೊನ್ನೆ ಸುಬಗಣ್ಣ ಬೈಕ್ಕೊಂಡಿತ್ತಿದ್ದವು.
ಅವರ ಜಾಲಿಲಿ ರಜವೇ ರಜ ಅಡಕ್ಕೆ ಇತ್ತು. ಮೇಗಂದ ಟಾರ್ಪಲು ಮುಚ್ಚಿರೂ, ಅಡಿಯಂದ ಜಾಲನೀರು ಬಂದು ಪೂರಾ ಚೆಂಡಿ ಆತು ಹೇಳಿ ಅವಕ್ಕೆ ಮಳೆಯ ಮೇಗೆಯೂ, ಟಾರ್ಪಲಿನ ಮೇಲೆಯೂ – ಒಟ್ಟಾರೆ ಕೋಪ!
ಆದರೆ, ಇದಕ್ಕೆ ತದ್ವಿರುದ್ಧವಾಗಿ ಬೈಲಿನ ಮೂಡ ಕೊಡೀಲಿ ಇರ್ತ ಚೆನ್ನೈಬಾವಂಗೆ ಒಂದೇ ಗಂಟೆಲಿ ಟಾರ್ಪಲು ಒಣಗುತ್ತಷ್ಟು ಬೆಶಿಲಡ! ಚೆಲ, ಎಂತಾ ಚೋದ್ಯವೋ!
ಉಮ್ಮಪ್ಪ, ಒಪ್ಪಣ್ಣಂಗರಡಿಯ!
ಮಳೆಂದಾಗಿ ಗೆಲ್ಲು ಮುರುದು, ತರವಾಡುಮನೆ ವಿನುವಿನ ಟೀವಿನೋಡ್ಳೆಡಿಯದ್ದೆ ಮಾಡಿ, ಬೇಜಾರು ಮಾಡುಸಿದ್ದಡ!
ಬೈಲಿನ ಒಬ್ಬೊಬ್ಬಂಗೆ ಒಂದೊಂದು ಪರಿಸ್ಥಿತಿ ಆದ ಕಾರಣ ಬೆಶಿಲು – ಮಳೆಯ ಶುದ್ದಿ ಈಗ ಮಾತಾಡಿಕ್ಕಲೇ ಒಳ್ಳೆ ಸಮೆಯ ಅಲ್ಲ ಹೇಳ್ತದು ಮನಸ್ಸಿಂಗೆ ಬಂತು!
ಮಳೆಯ ಶುದ್ದಿ ಮಾತಾಡ್ಳೆಡಿಯ, ಸಮ. ಆದರೆ ಮಳೆಗೆ ಆಡ್ಳೆಡಿಯದ್ದೆ ಆದ ಆಟದ ಶುದ್ದಿ ಮಾತಾಡಿರೆ ಎಂತ? ಅಲ್ಲದೋ?
~
ಬೈಲಿಲಿ ಕ್ರಿಗೇಟು ಅರಡಿವೋರು ಸುಮಾರು ಜೆನ ಇದ್ದವು. ಗೊಂತಿಲ್ಲದ್ದವೂ ಕೆಲವು ಜೆನ ಇದ್ದವು.
ಇದಾ, ಮದಲೇ ಹೇಳ್ತೆ: ಒಪ್ಪಣ್ಣಂಗೆ ಕ್ರಿಗೇಟು ರಜ ರಜವೇ ಗೊಂತಿದ್ದಷ್ಟೆ; ಜಾಸ್ತಿ ಏನಲ್ಲ.
ಮಾಷ್ಟ್ರುಮನೆ ಅತ್ತೆಯ ಹಾಂಗೆ – ಒಯಿಡು ಯೇವದು, ನೋಬೋಲು ಯೇವದು, ಸಿಕ್ಕುಸು ಯೇವದು ಹೇಳ್ತದು ಒಪ್ಪಣ್ಣಂಗೆ ಅರಡಿಯ,
ಆದರೆ ‘ಕ್ರಿಗೇಟು ಹೇಳಿತ್ತುಕಂಡ್ರೆ – ಚೆಂಡಿಡ್ಕಿ ಓಡ್ತ ಲಗೋರಿ ಆಟದ ಹಾಂಗಿರ್ತದು’ ಹೇಳಿ ತಿಳುದ ನೆಗೆಮಾಣಿಂದ ಎಷ್ಟೋ ಜಾಸ್ತಿ ಅರಡಿಗು.
ಅದಿರಳಿ.
ಮೊನ್ನೆ ಮೊನ್ನೆ ಇಡೀ ವಿಶ್ವದ ಹತ್ತಿಪ್ಪತ್ತು ತಂಡಂಗೊ ಬಂದು, ಭಾರತ-ಬಂಗಾಳ-ಪಾಕಿಸ್ತಾನ-ಶ್ರೀಲಂಕೆಗಳಲ್ಲಿ ಕ್ರಿಗೇಟು ಆಡಿದ್ದು ಒಪ್ಪಣ್ಣಂಗೆ ಗೊಂತಾಯಿದು.

ತರವಾಡುಮನೆಗೆ ಹೊತ್ತಪ್ಪಗಾಣ ಹೊತ್ತಿಂಗೆ ಹೋದ್ದರ್ಲಿ, ಕೆಲವು ಸಚಿನ್ನಂಗಳ ಆಟ ಕಾಂಬಲೆ ಸಿಕ್ಕಿದ್ದು.
ಶಾಂಬಾವ ಒಟ್ಟಿಂಗಿದ್ದ ದಿನ ಟೀವಿಯವು ಇಂಗ್ಳೀಶಿಲಿ ಹೇಳ್ತ ವೀಕ್ಷಕ ವಿವರಣೆಯ ಅವ ಹವ್ಯಕಲ್ಲಿ ಮಾಡಿ ಹೇಳ್ತ ಇದಾ!
ಅದಿರಳಿ,
ಎಲ್ಲೋರು ಆಡಿ ಆಡಿ, ಅಕೇರಿಗೆ ಭಾರತವೇ ಗೆದ್ದುಗೊಂಡ ಸಂಗತಿ ನವಗೆ ಅರಡಿಗು.
ಆ ಸಮೆಯಲ್ಲಿ ಕ್ರಿಗೇಟಿನ ಶುದ್ದಿ ಮಾತಾಡುದೋ – ಗ್ರೇಶಿತ್ತು ಒಂದರಿ. ಬೇರೆ ಅಂಬೆರ್ಪು ಬಂದ ಕಾರಣ ಆತಿಲ್ಲೆ!
~
ಹಾಂಗೆ ನೋಡಿರೆ, ಆಟ ಸುರು ಆವುತ್ತ ಮದಲೇ `ಈ ಒರಿಶ ಕಪ್ಪು ಭಾರತಕ್ಕೇ’ ಹೇಳಿಗೊಂಡಿತ್ತಿದ್ದ°, ವಿನು.
ಅಪ್ಪು, ವಿನುವಿಂಗೆ – ಅವನ ಅಪ್ಪ ಶಾಂಬಾವನದ್ದೇ ಸಾಜ – ಕ್ರಿಗೇಟಿಲಿ! 😉
ಶಾಂಬಾವಂಗೆ ಆದರೆ ಅಷ್ಟೆಂತ ದೊಡ್ಡ ಮರಳುಲಿಲ್ಲೆ! ಆದರೆ ವಿನು ಹಾಂಗಲ್ಲ. ಅವಂಗೆ ಕ್ರಿಗೇಟಿಂದು ದೊಡಾ ಮರುಳು ಹಿಡುದು ಬಿಟ್ಟಿದು ಈಗ.
ಕ್ರಿಗೇಟು ಮಾಂತ್ರ ಅಲ್ಲ, ಕಾರು ಓಡ್ತ ರೇಸಿಂಗು, ಗುದ್ದಿಗೊಂಬ ಬೋಕ್ಸಿಂಗು, ಕಾಲಿಲಿ ಮೆಟ್ಟುತ್ತ ಪುಟ್ಟುಬೋಲು, – ಹೀಂಗಿರ್ತ ನಾನಾ ನಮುನೆದು.
ಅವರ ಟೀವಿಲಿ ಆಟಂಗೊಕ್ಕೆ ಹೇಳಿಯೇ ಮೂರು ನಾಕು ಚೇನಲುಗೊ ಇದ್ದಾಡ. ಇಪ್ಪತ್ನಾಕು ಗಂಟೆಯೂ ಅದರ್ಲಿ ಆಡುದೇ ಅಡ! ಬಚ್ಚುತ್ತಿಲ್ಲೆಯೋ? ಉಮ್ಮ!! ಅದಿರಳಿ.
~
ಈಗ ವಿನುವಿಂಗೆ ರಜೆ.
ಒಂದರಿಯಾಣ ಶಾಲೆ ಮುಗುದು, ಇನ್ನಾಣ ಒರಿಶಕ್ಕೆ ಸೇರ್ತ ಗವುಜಿ.
ನಿನ್ನ ಪಾಸುಪೈಲು ಬಂತೋ ಅಂಬಗ – ಕೇಳಿದೆ ಮೊನ್ನೆ, ನೆಗೆಮಾಡಿಂಡೇ ’ಯೇಪ್ಲಸ್ಸು’ ಗ್ರೇಡು ಬಯಿಂದು ಹೇಳಿದ.
ಯೇಪ್ಲಸ್ಸು – ಹೇಳಿರೆ ನೂರಕ್ಕೆ ಅಯಿದೇ ಮಾರ್ಕು ಕಮ್ಮಿ ಅಡ! ತೊಂಬ್ಬತ್ತೈದರ ಮೇಗೆ ಮಾರ್ಕಿದ್ದಾಡ ಅವಂಗೆ!!ಅವಂಗೆ ಮಾರ್ಕು ಇಕ್ಕು – ಎಂತ್ಸಕೆ ಹೇಳಿತ್ತುಕಂಡ್ರೆ, ಒಂದೋ ಓದುಗು, ಅಲ್ಲದ್ದರೆ ಕಂಪ್ಯೂಟರು ಗುರುಟುಗು, ಅಲ್ಲದ್ದರೆ ಟೀವಿನೋಡುಗು.
ಹೆರಾಣ ಕೆಲಸ ಅವ ಮಾಡ್ತ ನಮುನೆದು ಎಂತದೂ ಬಾಕಿ ಒಳಿತ್ತಿಲ್ಲೆ
ತುಂಬ ಕಷ್ಟದ ಕೆಲಸಂಗಳ ಅಲ್ಲಿ ರಂಗಮಾವ ಮಾಡ್ತವು. ಅದರಿಂದ ರಜಾ ಸುಲಬದ್ದರ ಪಾತಿ ಅತ್ತೆ ಮಾಡುಗು, ಬಂಙ ಬಂದುಗೊಂಡು, ಅದರಿಂದಲೂ ಸುಲಬದ್ದಿದ್ದರೆ ಆಳುಗೊ ಮಾಡುಗು –  ಅಪುರೂಪಲ್ಲಿ ಬಂದಿಪ್ಪಾಗ; ಮತ್ತೂ ಸುಲಬದ್ದೊಳುದರೆ ಶಾಂಬಾವ ಮನೆಲಿಪ್ಪ ಹೊತ್ತಿಂಗೆ ಮಾಡುಗು. ಎಲ್ಯಾರು ಒಳುದ ಕೆಲಸಂಗೊ ಇದ್ದರೆ ವಿದ್ಯಕ್ಕ –ವಿನುವಿನ ಅಮ್ಮ- ಮಾಡುಗು.
ಹಾಂಗಾಗಿ, ಇಷ್ಟೆಲ್ಲ ಆಗಿ ವಿನುವಿಂಗೆ ಮಾಡ್ಳೆ ಕೆಲಸ ಇರ್ತೇ ಇಲ್ಲೆ ಇದ!
ಅದೂ ಅಲ್ಲದ್ದೆ, ಅವ° ಎಲ್ಯಾರು ಕೆಲಸ ಮಾಡ್ಳೆಯೋ, ಬಂದೋರ ಹತ್ತರೆ ಮಾತಾಡ್ಲೆಯೋ ಮಣ್ಣೊ ಹೆರ ಹೋದರೆ ಸಾಕು, ವಿದ್ಯಕ್ಕ ಬಂದು ಬೈಗು `ಓದಲೆ ಹೋಗು’ ಹೇಳಿಗೊಂಡು.
ಅವಂಗೆ ಪೂರ್ತಿ ಬರದಾದ ಮೇಗೆ ಟೀವಿ ನೋಡ್ಳೆ ಅವಕಾಶ ಒಂದಿದ್ದು, ಹಾಂಗಾಗಿ ಅವಂಗೆ ಹೆರಾಣ ಜಗತ್ತಿನ ಸಂಪರ್ಕ ಒಳ್ಕೊಂಡಿದು.
~
ಹೀಂಗೇ ಟೀವಿ ನೋಡಿ ನೋಡಿ, ಅವಂಗೆ ಆಟಂಗಳ ಮರುಳು ಹಿಡ್ದಡ. ಆಡ್ಳಲ್ಲ – ನೋಡ್ಳೆ.
ಕಂಪ್ಲೀಟರಿಲಿ ಆಟದ ಮರುಳು ಹಿಡುದು, ಗೆದ್ದೆ-ತೋಟ ಮಾಡಿದ ಸಂಗತಿ ಅಂದೊಂದರಿ ನಾವು ಮಾತಾಡಿದ್ದಲ್ಲದೋ? (ಸಂಕೊಲೆ)
ಇದು, ಈಗ ಆಟ ನೋಡ್ತ ಮರುಳು.
ಈ ಮರುಳು ಎಷ್ಟು ಹೇಳಿತ್ತುಕಂಡ್ರೆ, ಹೇಳಿ ಸುಕ ಇಲ್ಲೆ!
~

ಬೇರೆಬೇರೆ ತಂಡದ ಧ್ವಜಂಗೊ - ಎಲ್ಲವೂ ಒಟ್ಟಾಗಿ ಪೈಶೆ ಮಾಡ್ತದು ಅಲ್ಲದೋ?

ಮೊನ್ನೆ ಒರೆಂಗೆ ನೆಡದ ವಿಶ್ವಕಪ್ಪಿನ ಇಡೀ ನೋಡಿದ್ದನಾಡ.
ಶಾಲೆಗೆ ಹೋಪಲಿದ್ದ ತೆರಕ್ಕಿಂದಾಗಿ ಕೆಲವು ಆಟಂಗೊ ನೋಡ್ಳೆ ಸಿಕ್ಕಿದ್ದಿಲ್ಲೆ, ಆದರೆ ಒಳುದ್ದೆಲ್ಲವೂ – ಸಂಪೂರ್ಣವಾಗಿ ಸಿಕ್ಕಿದ್ದಾಡ.
ಬರೇ ನೋಡ್ತದು ಮಾಂತ್ರ ಅಲ್ಲಾಡ, ಅದರ ಮನಸ್ಸಿಂಗೆ ತೆಕ್ಕೊಳ್ತನಾಡ!
ಪ್ರತಿ ಆಟದ, ಪ್ರತಿ ಚೆಂಡು ಆರು ಆರಿಂಗೆ ಇಡ್ಕಿದ್ದು, ಯೇವಗ, ಹೇಂಗೆ, ಇಡ್ಕಿದ್ದು ಮತ್ತೆ ಎಂತಾತು – ಎಲ್ಲವುದೇ ಅವಂಗೆ ನೆಂಪೊಳಿತ್ತಡ.
ಅಂಬಗ ಅಷ್ಟು ಆಟಂಗಳ ನೆಂಪು ಮಡಗಿದ್ದನೋ? ಅಪ್ಪು!
ಮದಲಿಂಗೆ ಅವನಷ್ಟು ದೊಡ್ಡ ವಟುಗೊ ಪುಟಗಟ್ಳೆ ತಂತ್ರ,ಮಂತ್ರಂಗಳ ನೆಂಪು ಮಡಿಕ್ಕೊಂಡಿದ್ದಿದ್ದವಿಲ್ಲೆಯೋ!?

ಅದೆಲ್ಲ ಹಳೆಕತೆ, ಈಗಾಣದ್ದು ಎಂತರ ಶುದ್ದಿ?
ಈಗ – ಪುನಾ ತರವಾಡುಮನೆ ಮಾಣಿಗೆ ತೆರಕ್ಕು ಸುರು ಆಯಿದು.
ಮೊನ್ನೆ ಪಾಟಂಗೊ ಎಲ್ಲ ಮುಗುದು, ಪರೀಕ್ಷೆಯೂ ಮುಗುದ ಮತ್ತಾಣ ದಿನಂದ ಅವಂಗೆ ಪುರುಸೊತ್ತೇ.
ವಿದ್ಯಕ್ಕ ಅಪ್ಪನ ಮನಗೆ ಹೋಗಿ ಬಂದ ಒಂದು ವಾರ ಅವ ಮನೆಲಿತ್ತಿದ್ದನಿಲ್ಲೆ ಬಿಟ್ರೆ, ಮತ್ತೆ ಪ್ರತಿ ದಿನವೂ ಮನೆಲೇ ಇದ್ದಿದ್ದ.
ಅಲ್ಲಿದ್ದರೂ, ಒಂದು ಗಳಿಗೆ ಬೈಲಿಂಗೆ ಬಾರ ಅವ! ಅದು ಬಿಡಿ!!
~
ಈಗ ಅವಂಗೆ ಹಾಂಗೊಂದು ತೆರಕ್ಕು ಸುರು ಅಪ್ಪಲೆ ಕಾರಣ ಎಂತರ?
ಅದೊಂದು ಹೊಸ ನಮುನೆ ಕ್ರಿಗೇಟಿನ ಹೊಸ ಸಂಕೊಲೆ ಅಡ – ಐಪೀಯಲ್ಲು ಹೇಳಿಗೊಂಡು.
~
ವಿಶ್ವಕಪ್ಪು ಆದರೆ ದೇಶದೇಶದ ನೆಡುಕೆ ನೆಡದು, ನಮ್ಮ ಆತ್ಮಾಭಿಮಾನವ ಜಾಸ್ತಿ ಮಾಡ್ತ ಕಾರ್ಯ- ಆದರೆ ಇದು ಹೊಸತ್ತು, ಇದರದ್ದೆಂತರ ಕತೆ?
ದೇಶಂಗೊ ಆಡುದಲ್ಲ, ಅಂಬಗ ರಾಜ್ಯಂಗಳೋ, ಅದೂ ಅಲ್ಲ ತೋರ್ತು, ಸರೀ ಅರಡಿಯ!
ಗೊಂತಿಲ್ಲದ್ದರೆ ಮಾತಾಡ್ತದು ಬೇಡ, ಹಾಂಗೆ ಸೀತ ಹೋಗಿ ನಮ್ಮ ಶಾಂಬಾವನ ಕೈಲೇ ಕೇಳಿದೆ – ಈ ಐಪೀಯಲ್ಲು ಹೇಳಿರೆ ಎಂತರ – ಹೇಳಿಗೊಂಡು.
ಶಾಂಬಾವ ನವಗೆ ಅರ್ತ ಅಪ್ಪ ಹಾಂಗೆ ವಿವರುಸಿ ಅಪ್ಪಗ ಗೊಂತಾತು, ಈ ಆಟದ ಒಳಗುಟ್ಟು – ಹಣೆವಾರ ಎಂತರ ಹೇಳಿಗೊಂಡು!
~
ಭಾರತಲ್ಲಿ ಕ್ರಿಗೇಟಿಂಗೆ ಹೇಳಿಯೇ ಒಂದು ಕಮಿಟಿ ಇದ್ದಡ ಅಲ್ಲದೋ, ಅವರ ಕೆಟ್ಟುಂಕೆಣಿ ಅಡ ಇದು.
ಐ.ಪಿ.ಎಲ್ – ಹೇಳಿರೆ ಇಂಡಿಯನ್ನು ಪ್ರೀಮಿಯರು ಲೀಗು ಹೇಳಿ ಅರ್ತ ಅಡ. ಕಾಸ್ರೋಡಿನ ಲೀಗಿನ ನಮುನೆಯೋ ಕೇಳಿದೆ ನೆಗೆ ಮಾಡಿಂಡು. ಅಲ್ಲಡ! ಇದು ಬಾರತದ ಒಳಾಣ ತಂಡಂಗಳ ಗುಂಪು – ಹೇಳಿ ಅರ್ತ ಅಡ.

ನಮ್ಮ ದೇಶದ ದೊಡಾ ಪೈಶೆಕ್ಕಾರಂಗಳ ದೆನಿಗೆಳಿ, ಒಂದರಿ ಮೀಟಿಂಗು ಮಾಡಿದವಡ. ಭಾರತದ ದೊಡ್ಡ ದೊಡ್ಡ ನಗರಂಗಳ ಹೆಸರಿಲಿ ಒಂದೊಂದು ತಂಡ ರಚನೆ ಮಾಡಿಕ್ಕಿ “ಪೈಸಕ್ಕೆ ತೆಕ್ಕೊಳ್ತಿರೋ” ಕೇಳಿದವಡ.
ಬೆಂಗುಳೂರು ,ಬೊಂಬಾಯಿ, ಕಲುಕತ್ತೆ, ಚೆನ್ನೈ – ಹೀಂಗೆ ಹಲವಾರು ನಗರದ ತಂಡಂಗೊ.
ಪೈಸೆ ಕೊಟ್ಟು ತೆಕ್ಕೊಂಡೋರು ಆಯಾ ತಂಡಂಗೊಕ್ಕೆ ವಾನರ (owner) ಅಡ.
ಪೈಸೆ ಕರ್ಚು ಮಾಡಿ ಬರೇ ಆ ತಂಡ ತೆಕ್ಕೊಂಡ್ರೆ ಮುಗುತ್ತಿಲ್ಲೆ, ಇನ್ನು ಅದಕ್ಕೆ ಜೆನ ತುಂಬುಸೆಕ್ಕಲ್ಲದೋ – ಅದನ್ನುದೇ ಅವ್ವೇ ಪೈಸೆ ಕೊಟ್ಟು ತೆಗೇಕಡ. ದನದ ಇಬ್ರಾಯಿ ಹೋರಿಕಂಜಿ ತೆಕ್ಕೊಂಡ ನಮುನೆಲಿ ಗಟಾನುಗಟಿ ಆಟಗಾರಂಗಳ ಕ್ರಯ ಮಾಡಿ ತಂಡಕ್ಕೆ ತೆಕ್ಕೊಂಬದಡ.
ಆರು ಹೆಚ್ಚು ಪೈಸೆ ಕೊಟ್ಟು ಒಳ್ಳೆ ಹೋರಿ ತೆಕ್ಕೊಳ್ತನೋ – ಅವರ ತಂಡ ಗಟ್ಟಿ ಆವುತ್ತಾ ಹೋವುತ್ತು!
ಹೋರಿಕಂಜಿಗೊ ಬಾರತದ್ದು ಮಾಂತ್ರ ಆಗಿರೇಕು ಹೇಳಿ ಇಲ್ಲೇಡ, ಜೆರ್ಸಿ, ಹೋಯಿಷ್ಟೀನು – ಇದ್ದ ಹಾಂಗೆ ಆಷ್ಟ್ರೇಲಿಯ, ಆಪ್ರೀಕ – ಹೀಂಗಿರ್ತ ದೇಶದೋರೂ ಇದ್ದವಡ.
ಅಯಿಪೀಯಲ್ಲು ಹೇಳಿತ್ತುಕಂಡ್ರೆ ಈ ತಂಡಂಗಳ ಮಧ್ಯಲ್ಲಿ ಆಟ ನೆಡವದಡ.
ವಿಶ್ವಕಪ್ಪಿನ ಹಾಂಗೆ ಅಯಿವತ್ತು ಓವರಿಲಿ ಆಡುದಲ್ಲಡ, ಬರೇ ಇಪ್ಪತ್ತು ಓವರಡ. ತುಂಬ ಉದ್ದ ಎಳದರೆ ಜೆನಂಗೊ ನೋಡವು – ಹೇಳಿಗೊಂಡು ಹಾಂಗೆ ಮಾಡಿದ್ದಡ. ಟೆಷ್ಟಿನ ಹಾಂಗೆ ಅಯಿದು ದಿನ ಆಯಿಸ್ಸು ಹಾಳೆ ಮಾಡೇಕಾದ ಅಗತ್ಯ ಇಲ್ಲೆ, ವಂಡೇಯ ಹಾಂಗೆ ಮದ್ಯಾನಂದ ತೊಡಗಿ ನೆಡಿರುಳೊರೆಂಗೆ ಒರಕ್ಕು ಕೆಡೆಕಾದ ಪ್ರಮೇಯ ಇಲ್ಲೆ!

ಈಗಾಣ ಹಿಂದಿ ಪಿಚ್ಚರಿನ ಕೆಲವು ವೇಷಕ್ಕಾರಂಗಳೂ ಒಂದೊಂದಿಕ್ಕೆ ಸೇರಿಗೊಂಡಿದವಡ, ಈ ತಂಡಂಗಳ ತಂಟೆಲಿ.
ಹಾಂಗಾಗಿ, ಆಟದ ಮರುಳಂಗಳೂ, ವೇಶಕ್ಕಾರಂಗಳ ಮರುಳಂಗಳೂ ಒಟ್ಟಾದವು.
ಒಟ್ಟಾಗಿ ಈ ಐಪೀಯಲ್ಲಿನ ಮರುಳಂಗೊ ಜಾಸ್ತಿ ಆದವು – ಹೇಳಿದ ಶಾಂಬಾವ.
~
ಆದರೆ ಇದರಿಂದಾಗಿ ಸುಮಾರು ಹಳಬ್ಬರ – ಹೊಸಬ್ಬರ ಆಟ ನೋಡ್ಳೆ ಸಿಕ್ಕುತ್ತಡ, ಒಂದೇ ರಂಗಸ್ಥಳಲ್ಲಿ.
ಆದರೆ, ಕ್ರಿಗೇಟಿನ ಮೂಲಧರ್ಮವನ್ನೇ ದೂರ ಮಾಡಿದ ಇದರ ಆಟ ಹಾಂಗೆ ನೋಡ್ಳೇ ಆವುತ್ತಿಲ್ಲೇಡ, ಬದಲಾಗಿ, ಪಿಚ್ಚರು ನೋಡಿದ ಹಾಂಗೇ ನೋಡೆಕ್ಕಷ್ಟೆ – ಹೇಳಿ ಬೇಜಾರುಮಾಡಿಗೊಂಡ ಶಾಂಬಾವ.
ಅಪ್ಪಡ, ರಾಜುಕುಮಾರು ಸಿನೆಮ ಒಂದು ಸುರು ಆಗಿ ಮುಗಿವಗ ಒಂದು ಆಟ ಸುರು ಆಗಿ ಮುಗಿತ್ತು! ಹೇಳಿದ.
ಇರುಳಿಡೀ ನೆಡೆತ್ತ ಬಯಲಾಟ ಹೋಗಿ, ಮೂರುಗಂಟೆಯ ಟೆಂಟಿನಾಟ ಬಪ್ಪಗ ಯಕ್ಷಗಾನ ಪ್ರಿಯರಿಂಗೆ ಹೀಂಗೇ ಬೇಜಾರಾಗಿಕ್ಕಲ್ಲದೊ – ಹೇಳಿ ಅನುಸಿ ಹೋತು ಒಂದರಿ.
ಜಾಸ್ತಿ ಪುರುಸೊತ್ತಿಲ್ಲದ್ದ ಕಾರಣ, ಎಲ್ಲೋರುದೇ ಉದಾಸಿನ ಇಲ್ಲದ್ದೆ ಆಡ್ತವಡ.
ಹೆಚ್ಚು ಆಡಿರೆ ಹೋರಿಕಂಜಿಗೂ ಪೈಸೆ, ವಾನರಂಗೂ ಪೈಸೆ, ತಂಡಕ್ಕೂ ಪೈಸೆ ಸಿಕ್ಕುತ್ತಡ ಇದಾ!
ಈ ಒರಿಶ ಆಡದ್ದರೆ; ಬಪ್ಪೊರಿಶ ವಾನರಂಗೊ ಆ ಹೋರಿಕಂಜಿಗೆ ಕ್ರಯ ಮಾಡ್ತವಿಲ್ಲೆಡ.
ಅದಿರಳಿ!
~
ಆಟಂಗಳ ವಿಶ್ವಕಪ್ಪಿನ ನಮುನೆಲೇ ನೆಡೆಶಿ, ಕ್ವಾಟ್ರುಪೈನಲ್ಲು, ಸೆಮಿ ಪೈನಲ್ಲು – ಎಲ್ಲ ಆಗಿ ಅಕೇರಿಗೆ ಪೈನಲ್ಲು ಒರೆಂಗೆ ಆಡಿ ಮುಗುಶುತ್ತದಾಡ.
ಗೆದ್ದ ತಂಡ ಚೇಂಪಿಯನ್ನು – ಹೇಳಿಗೊಂಡು ಒಂದರಿ ಬಾವುಟ ನೆಗ್ಗುಸುತ್ತದಡ. ಅಷ್ಟಪ್ಪಗ ಸುಮಾರು ಪೈಸೆ ಸಿಕ್ಕುತ್ತಡ, ಹೋರಿಕಂಜಿಗೊಕ್ಕೂ, ವಾನರಂಗೊಕ್ಕೂ!
ಅಬ್ಬ, ಪೈಸೆ ಹಾಕಿದ ವಾನರ ಇಷ್ಟಾರು ಕೊಶಿ ಪಟ್ಟುಗೊಂಗನ್ನೇ- ಹೇಳಿದೆ.
ಅಷ್ಟೇ ಅಲ್ಲ ಆ ತಂಡದ ಹೆಸರಿಲಿ ಬತ್ತ ಎಲ್ಲಾ ಜಾಹೀರಾತು, ಪ್ರಕಟಣೆಗಳ ಪೈಸೆಗಳ ಪಾಲು ಪೂರಾ ಆ ವಾನರಂಗೊಕ್ಕೆ ಹೋವುತ್ತಡ.
ಶಾಂಬಾವ ಹೇಳಿದ.
~
ಅಯಿಪೀಯಲ್ಲು ಹೇಳಿರೆ ಎಂತದೋ – ಹೇಳಿ ಗ್ರೇಶಿದ ಒಪ್ಪಣ್ಣಂಗೆ ಇದರ ಕೇಳುವಗ ತಣ್ಕಟೆ ಚಾಯಕುಡುದ ಹಾಂಗೆ ’ಪುಸ್ಕ’ ಹೇಳಿ ಆತೊಂದರಿ. ಅಪ್ಪು, ಸುಮಾರು ತಂಡಂಗೊ ಕೇಳಿದ್ದು ನಾವು, ಆದರೆ ಅದೆಂತರ ಹೇಳಿ ತಲೆ ಹಾಕಲೆ ಹೋಯಿದಿಲ್ಲೆ.
ಈಗ ನೋಡಿರೆ, ಎಬ್ಬೆ!
ಚೆನ್ನೈ ಹೇಳಿತ್ತುಕಂಡ್ರೆ ಚೆನ್ನೈಯೋರ ತಂಡ ಅಲ್ಲ, ಕಲ್ಕತ್ತ ತಂಡಲ್ಲಿ ಕಾಲುಕುತ್ತಮಾಡ್ಳೂ ಒಂದೇ ಒಂದು ಅಲ್ಯಾಣದ್ದಿಲ್ಲೇಡ! ಬೆಂಗುಳೂರಿನ ತಂಡ ಬೆಂಗುಳೂರಿನ ಹಾಂಗೇ ಆಯಿದಾಡ,  ಎಲ್ಲಾ ದಿಕ್ಕೆಯೂ ಧಾರಾಳ ಹೆರಾಣ ಹೋರಿಗೊ ಇಪ್ಪದಾಡ!
ಮತ್ತೆಂತರ ಇದು ಐ.ಪಿ.ಎಲ್ಲು? ಇಂಡಿಯನು ಪ್ರೀಮಿಯರು ಲೀಗು ಸರಿ ಕಾಣ್ತಿಲ್ಲೆ – ಹೇಳಿದೆ.
ಅದಕ್ಕೆ ಶಾಂಬಾವ ಕೇಳಿದ – ಮತ್ತೆಂತ, “”ದು “ಪೂ”ರಾ “ಲೊ”ಟ್ಟೆ – ಹೇಳಿ ಹೇಳ್ತೆಯೋ ನೀನು? ಹೇಳಿಗೊಂಡು!
~
ಅಪ್ಪನ್ನೇ, ಸರೀ ಬತ್ತಿದಾ!
ವಿಶ್ವಕಪ್ಪು ಆದರೆ ವಿಶ್ವದ ಎಲ್ಲಾ ದೇಶಂಗಳ ಒಟ್ಟಿಂಗೆ ಒಂದೇ ಜಾಲಿಲಿ ನಿಲ್ಲುಸಿ ಆಟ ಆಡುಸಿ, ಗಟ್ಟಿದರ ಹೆರ್ಕುತ್ತವು. ಅದರ ನೋಡಿಗೊಂಡು ಹೋದರೆ ಆ ತಂಡದವು ನಮ್ಮೋರು, ನಮ್ಮ ದೇಶದೋರು ಹೇಳ್ತ ಅಭಿಮಾನ ಬಂದು ಬಿಡ್ತು.
ಒಂದರ್ಥಲ್ಲಿ ಇಡೀ ದೇಶದೋರು ಆ ಆಟವ ನೋಡ್ಳೆ ಒಂದಾವುತ್ತವು.
~
ಐಪೀಯಲ್ಲಿಲಿ ಎಂತ ಇದ್ದು ಮಣ್ಣಂಗಟ್ಟಿ?
ರಾಜ್ಯಂಗಳ ಲೆಕ್ಕ ಇಲ್ಲೆ, ದೇಶದ ಲೆಕ್ಕ ಮದಲೇ ಇಲ್ಲೆ, ಆಟದ ಲೆಕ್ಕವೂ ಇಲ್ಲೆ-  ಅಲ್ಲಿ ಇಪ್ಪದು ಬರೇ ಪೈಶೆ ಲೆಕ್ಕ ಮಾಂತ್ರ!!
ಆರಿಂಗೆ ಎಷ್ಟು ಕ್ರಯ, ಆರ ತಂಡಕ್ಕೆ ಎಷ್ಟು ಸಿಕ್ಕಿತ್ತು, ಆರು ಯೇವ ಚೆಂಡಿಂಗೆ ಹೇಂಗೆ ಬಡುದು ಪೈಶೆ ತೆಕ್ಕೊಂಡ – ಹೇಳ್ತಷ್ಟು.
ಅಷ್ಟು ಪೈಸೆ ಅವು ಇವಕ್ಕೆ ಕೊಡ್ತವಲ್ಲದೋ, ಎಲ್ಲಿಂದ ಅವಕ್ಕೆ – ಕೇಳಿದೆ.
ಅದು ನಮ್ಮಾಂಗಿರ್ತೋರ ಪೈಸೆ ಇದಾ! ಅಲ್ಲಿ ಕ್ರಿಗೇಟು ನೋಡ್ಳೆ ಬಂದೋರ ಪೈಸೆ, ಟಿವಿಲಿ ನಮ್ಮಾಂಗೆ ಕೂದಂಡು ನೋಡ್ತೋರ ಪೈಸೆ- ಹೇಳಿದ ಒಂದರಿ, ಮೋರೆಲಿ ಬೇಜಾರು ತೋರುಸಿಗೊಂಡು. ಹಾಂಗಂಬಗ! ಹಾಂಗಾರೆ ಒಂದು ಲೆಕ್ಕಲ್ಲಿ ನಾವುದೇ ವಾನರಂಗೊ –ಇದಾ, ಹೇಳಿದ. ವಾನರ ಹೇಳಿರೆ ಓನರೂ ಅಪ್ಪು, ಮಂಗಂಗಳೂ ಅಪ್ಪು – ಹೇಳಿದ ಪುನಾ, ಅರ್ತ ಬಿಡುಸಿ.
ಮಂಗಂಗೊ ಅಪ್ಪ ಈ ಲೊಟ್ಟೆ ಲೊಟ್ಟೆ ಆಟವ ನೋಡ್ತ ಒಯಿವಾಟು ಬೇಕೋ? ಅದರಿಂದ ತೋಟಲ್ಲಿ ಕೂಂಬಾಳೆ ಹೆರ್ಕಲಾಗದೋ – ಹೇಳಿ ಅನುಸಿತ್ತು ಒಪ್ಪಣ್ಣಂಗೆ!

ಒಂದೊಪ್ಪ: ವಿಶ್ವಕಪ್ಪಿಲಿ ಒಂದಾದ ದೇಶದ ಮನಸ್ಸುಗಳ ಸಣ್ಣ ಸಣ್ಣ ತುಂಡು ಮಾಡ್ತದು ಐಪೀಯಲ್ಲಿನ ಕಾರ್ಯವೋ?
ಉಮ್ಮಪ್ಪ!

ಸೂ:

ಐ.ಪಿ.ಎಲ್: ಇದು ಪೂರಾ ಲೊಟ್ಟೆ…??!, 5.0 out of 10 based on 6 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಶ್ರೀಅಕ್ಕ°

  ಒಪ್ಪಣ್ಣೋ,

  ಎಲ್ಲೋರೂ ಮರ್ಲು ಕಟ್ಟಿ ನೋಡ್ತ ಆಟದ ಬಗ್ಗೆ ಬರದ್ದೆ ತುಂಬಾ ಲಾಯ್ಕಲ್ಲಿ!! ಐ. ಪಿ. ಎಲ್ ಹೇಳಿದರೆ, ಇದು ಪೈಸೆಯ(ಪೈಸೆ ಹೆಚ್ಚಾದೋರ) ಲಾಗ ಹೇಳಿ ಆವುತ್ತಿಲ್ಲೆಯಾ?

  ಎಲ್ಲಾ ದೇಶದವರ ಕಲಸಿ ಹಾಕಿ ನಮ್ಮ ದೇಶದ ಬೇರೆ ಬೇರೆ ನಗರಂಗಳ ಹೆಸರಿಲಿ ಆಡ್ಸುತ್ತದು ನೋಡುವಾಗ ನೀನು ಹೇಳಿದ ಹಾಂಗೆ ಯಾವ ಭಾವನೆಲಿ ನೋಡೆಕ್ಕು ಆಟವ ಹೇಳಿ ಆವುತ್ತು. ನಮ್ಮ ದೇಶಕ್ಕೆ ಬೇಕಾಗಿ ಹೇಳುಲೆ ಅಲ್ಲಿ ಹೆರಾಣವ್ವುದೇ ಇದ್ದವು. ನಮ್ಮ ಊರಿಂದು ಹೇಳುಲೆ ಅಲ್ಲಿ ನಮ್ಮೋರೇ ಇಲ್ಲೆ!! ನಮ್ಮ ದೇಶದ ಹೆಮ್ಮೆಯ ಆಟಗಾರರುದೇ ನೀನು ಹೇಳಿದ ಹಾಂಗೆ ಇಬ್ರಾಯಿ ಹೋರಿಕಂಜಿಯ ತೆಕ್ಕೊಂಡ ನಮುನೆಲಿ ಮಾರಾಟ ಅಪ್ಪದು ನೋಡುವಾಗ ಮನಸ್ಸಿಂಗೆ ಎಂತದೋ ಸಂಕಟ ಆವುತ್ತು. ಇಷ್ಟೆಲ್ಲಾ ಪೈಸೆ ತೆಕ್ಕೊಂಡು ಆಡುವವ್ವು ನಮ್ಮ ದೇಶಕ್ಕೆ ಬೇಕಾಗಿ ಆಡುವಾಗ ನಿಜವಾದ ನಿಯತ್ತಿಲಿ ಆಡುಗಾ ಹೇಳಿ ತೋರ್ತಿದಾ!!! ಮೊನ್ನೆ ಮೊನ್ನೆ ನವಗೆ ಬಾಕಿ ದೇಶದವರ ಹಿಂದೆ ಹಾಕಿ ವಿಶ್ವಕಪ್ಪು ಸಿಕ್ಕಿತ್ತು ಹೇಳಿ ಕೊಶಿ ಪಟ್ಟು ಪಾಯಸ ಮಾಡಿ ತಿಂದಪ್ಪಗ, ಅದು ಗೆಂಟ್ಲಿಲಿ ಇಳಿಯೆಕ್ಕಾದರೆ ಈ ಐ. ಪಿ. ಎಲ್ ಸುರು ಆಗಿ ಪಾಯಸದ ಸೀವೇ ಗೊಂತಾಗದ್ದ ಹಾಂಗೆ ಆತೋ ಹೇಳಿ ಅನಿಸಿತ್ತಿದಾ. ಓ ಮೊನ್ನೆ ನಾಯಿ ಪುಚ್ಚೆಯ ಹಾಂಗೆ ಜಗಳ ಮಾಡಿಗೊಂಡು ಲೋಕ ಇಡೀ ಸುದ್ದಿ ಆದೋರು ಈಗ ಒಂದೇ ಬಣ್ಣದ ಅಂಗಿ ಹಾಕಿ ಆಡುತ್ತವಿಲ್ಲೆಯಾ? ಅಂಬಗ ಅವಕ್ಕೆ ಜಗಳ ಮಾಡಿದ್ದು ಮರದತ್ತಾ? ಅಲ್ಲ ಪೈಸೆ ಅದರ ಮರೆಶಿದ್ದದಾ ಹೇಳಿ ಆವುತ್ತಿಲ್ಲೆಯಾ?

  ನೀನು ಹೇಳಿದ ಹಾಂಗೆ ತಂಡಂಗಳ ವಾನರಂಗ ಲೋಕ ಇಡೀಕ ಎಲ್ಲರ ಮಂಗ ಮಾಡ್ತಾ ಇಪ್ಪದಲ್ಲದಾ? ಇಷ್ಟೆಲ್ಲಾ ಗೌಜಿ ಕಟ್ಟಿ ಆಡುದರ, ಗೆದ್ದಪ್ಪಗ ಕೊಣುದ್ದರ ನೋಡಿದ ನವಗೆ ಎಂತರ ಸಿಕ್ಕುತ್ತು? ನಮ್ಮೋರ ಬಗ್ಗೆ, ದೇಶದ ಬಗ್ಗೆ ಹೆಮ್ಮೆ ಪಡುವಂಥದ್ದಾದರೆ, ಆ ಆಟಗಾರರ ಮನಸಾ ಆಡುವ ಆಟ ನೋಡುದಾದರೆ ಸರಿ, ಇಲ್ಲದ್ದರೆ ಸಮಯ ಹಾಳು ಅಲ್ಲದಾ?!!!
  ಒಂದೊಪ್ಪ ಲಾಯ್ಕಾಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ

  ಸಮಯೋಚಿತ ಲೇಖನಕ್ಕೆ ಧನ್ಯವಾದ೦ಗೊ ಒಪ್ಪಣ್ಣಾ..
  ನಿಜವಾಗಿ ನೋಡಿರೆ ಇದರ ಇಷ್ಟೆಲ್ಲ ದೊಡ್ಡ ಸುದ್ದಿ ಮಾಡೆಕಾದ ಅಗತ್ಯವೇ ಇಲ್ಲೆ. ನಾವು ಇದರ ಇಷ್ಟು ಗ೦ಭೀರವಾಗಿ ತೆಕ್ಕೋಳ್ತ ಕಾರಣವೇ ಅಲ್ಲದೊ ಇದು ಇಷ್ಟು ದೊಡ್ಡ ಬಿಸಿನೆಸ್ ಆದ್ದದು!!? ಇದು ಒ೦ದು ಆಟ, ಆದ ಕಾರಣ ಆಟಕ್ಕೆ ಕೊಡ್ತ ಪ್ರಾಧಾನ್ಯ ಕೊಟ್ಟರೆ ಸಾಕು. ವಿಶ್ವಕಪ್ ಗೆದ್ದಪ್ಪಗ ಸ೦ತೋಷ ಆತು ಹೇಳಿ ಆದರೆ, ಈಗ ಬೇಜಾರು ಆಯೆಕಾದ ಅಗತ್ಯ ಎ೦ತರ? ಕ್ರಿಕೇಟೇ ಆಗಲಿ, ಅಥವಾ ಬೇರೆ ಯಾವುದೇ ಆಟ ಆಗಲಿ, ಅದು ಇಪ್ಪದು ಬಾ೦ಧವ್ಯ೦ಗಳ ಬೆಸವಲೆ ಅಲ್ಲದ್ದೆ, ಜಗಳ ಮಾಡಲೋ, ಕಚ್ಚಾಡಲೋ ಅಲ್ಲ. ಈ ದೃಷ್ಟಿಲಿ ನೋಡುವಗ ಒ೦ದು ಆಟಲ್ಲಿ ಎದುರು ಬದುರು ತ೦ಡ೦ಗಳಲ್ಲಿ ಆಡಿತ್ತು ಹೇಳ್ತ ಕಾರಣಕ್ಕೆ ಜೀವನ ಪೂರ್ತಿ ಶತ್ರುಗೊ ಆಗಿರೆಕು ಹೇಳಿ ಎ೦ತು ಇಲ್ಲೆನ್ನೆ!! ಇನ್ನೊ೦ದು ಆಟ ಆಡುವಗ ಒ೦ದೇ ತ೦ಡಲ್ಲಿ ಒಟ್ಟಿ೦ಗೆ ಆಡಿರೆ ಎ೦ತ ತೊ೦ದರೆ!!?
  “ವಸುಧೈವ ಕುಟು೦ಬಕ೦” ಹೇಳಿ ಕಲಿಸಿದ ಸ೦ಸ್ಕಾರ೦ದ ಬತ್ತ ನಾವು ಒ೦ದು ಕೇವಲ ಆಟದ ವಿಷಯಲ್ಲಿ ಕೂಡಾ ನಮ್ಮವು, ಹೆರಾಣವು ಹೇಳ್ತ ಸ೦ಕುಚಿತ ಮನೋಭಾವನೆ ಬದಲಿಸಿಯೋಳೆಕಾದ ಸಮಯ ಯಾವತ್ತೋ ಕಳಾತು ಹೇಳಿ ಎನ್ನ ಅಭಿಪ್ರಾಯ.

  [Reply]

  VA:F [1.9.22_1171]
  Rating: +1 (from 1 vote)
 3. shyamaraj.d.k

  ಲಾಯಕ ಆಯಿದು ಒಪ್ಪಣ್ಣಾ,ಧನ್ಯವಾದಗಳೂ.

  [Reply]

  VA:F [1.9.22_1171]
  Rating: 0 (from 0 votes)
 4. Kirana arthyadka

  Lekhana laika aydu.. Adaroo anu ondu raja jasti ye cricket nodta mani ada karana enna anisike barava heli kandattu…
  IPL na tandangala owners ga are adikku,avu paise ippavu, madyada dorega., heengitta vishayangala sidenge madigi raja matadyare.. Enage anisuva prakara e ondu hosa prayoganda hosa sanna sanna talent gokke dodda dodda hesaru madida atagarangolottinge adle chance sikkuttu, hosa hosa atagarango vishvakke parichaya avtavu, sachin,warne ityadi hesaru madida atagarangolottinge adle chance sikkuttu.. Idarindagi prati ipl liyude onderadu hosa hosa atagarango bharata tandakke sikkiddavu…
  Innu noduvavara bagge alochane madre avu hengaru cricket noduvave,avu igana match alladre tv li bappa yevdaru hale match nodigondikku.. Avu adara kevala ondu atavagi nodugashte…
  Enagansuva prakara europe li football league nadava hange bharata lli janapriya ada atava bharateeyaru nodtavu…

  [Reply]

  VA:F [1.9.22_1171]
  Rating: 0 (from 0 votes)
 5. ಲಾಯ್ಕ ಹೇಳಿದೆ ಒಪ್ಪಣ್ಣ. ನಮ್ಮ ದೇಶದ ಜನ ಸಾಮಾನ್ಯರ ಕೈಂದ ಒಂತಿಗೆ ಹಾಕಿಸಿ ಶ್ರೀಮಂತರುಗೊಕ್ಕೆ – ಅದುದೆ ಹೆಚ್ಚಿನೋರು ಬೇರೆ ದೇಶದೋರು – ಕೊಟ್ಟ ಹಾಂಗೆ ಆತು. ಅದುದೆ ಒಂದೆರಡು ಮ್ಯಾಚ್ ಅಲ್ಲ – ೬೦. ಅಂತೂ ಬಡವರ ಕಿಸೆ ಸಣ್ಣ ಅಪ್ಪಗ ಶ್ರೀಮಂತರ ಕಿಸೆ ಇನ್ನೂ ದಪ್ಪ ಅವುತ್ತು. ಈ ಐ.ಪಿ.ಎಲ್ ನಿಲ್ಸದ್ರೆ ದೇಶಕ್ಕೆ ಒಳ್ಳೇದಲ್ಲ.

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ವಿನುವಿನ ಹಾಂಗಿರುತ್ತವು ಎಷ್ಟು ಜೆನ ಬೇಕು ನಿನಗೆ ಒಪ್ಪಣ್ಣಾ. ಇಂದ್ರಾಣ ಮಕ್ಕಳೇ ಹಾಂಗೆ. ಈ ಕ್ರಿಕೆಟ್ಟಿನ ಹುಚ್ಚಂಗಳ ಎಡೆಲಿ, ಬಾಕಿ ಇದ್ದವು ಎಲ್ಲೋರು ಬೋಸಂಗೊ. ಐಪಿ ಎಲ್ಲಿನ ವಿವರಣೆ ಲಾಯಕಾಯಿದು. ಗೊಂತಿಲ್ಲದ್ದ, ಎನ್ನ ಹಾಂಗಿರುತ್ತವಕ್ಕೆ ಸರೀ ಗೊಂತಾತು. ಕಡೇಣ ಒಪ್ಪವು ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)
 7. ಮುಣ್ಚಿಕಾನ ಭಾವ

  ಲೇಖನ ತುಂಬಾ ಒಪ್ಪ ಆಯಿದು ಒಪ್ಪಣ್ಣ… ಎನಗುದೇ ಸಣ್ಣಾದಿಪ್ಪಗ ಭಯಂಕರ ಕ್ರಿಕೆಟ್ಟಿನ ಮರುಳು ಇತ್ತು. ಆದರೆ ಈಗ ನೋಡೆಕ್ಕು ಹೇಳಿ ಆವುತ್ತಿಲ್ಲೆ. ಅವಕ್ಕೆ ಅಂತೆ ಚೆಂಡು ಹೆರುಕ್ಕಿ ಕೊಟ್ಟರೂ, ನೀರು ತಂದು ಕೊಟ್ಟದ್ದಕ್ಕೂ ಪೈಸೆ ಸಿಕ್ಕುತ್ತು ಇದಾ. ನಮಗೋ ಬರೇ ಟೈಮು ವೇಷ್ಟು.
  ಗಂಭೀರನ ಈ ಸರ್ತಿ 11ಕೋಟಿಗೆ ತೆಕ್ಕೊಂಡಿದ್ದವಡ. ಆ ಜೆನಕ್ಕೆ ಐಪಿಎಲ್ಲು-4ರಲ್ಲಿ ಇಷ್ಟರವರೆಗೆ 350 ರನ್ನುದೇ ಆಯಿದಿಲ್ಲೆ. ಹಾಂಗಾರೆ ಒಂದು ರನ್ನಿಂಗೆ ಎಷ್ಟು ಬೆಲೆ ಹೇಳಿ ಲೆಕ್ಕ ಹಾಕಕ್ಕಾರೆ ಮಾಷ್ಟ್ರಮಾವನತ್ತರೆ ಕೇಳೆಕ್ಕಷ್ಟೆ… 😉
  ಆದರೂ ನಮ್ಮ ಸಚಿನ್ನಿನ ಹಾಂಗೆಪ್ಪ ಕೆಲವು ಜೆನರ ಆಟ ನೋಡದ್ದೆ ಕೂಪಲೆ ಎಡಿತ್ತಿಲ್ಲೆ… :)

  [Reply]

  VA:F [1.9.22_1171]
  Rating: 0 (from 0 votes)
 8. ಶಾಂತತ್ತೆ

  oppannana shuddi odadde tumba samaya aathu.
  purusottu sikkuttille.
  beeja herkuva govuji danagokke hullu tappadu bajavu tappadu ottare full busy….
  innu vaarakkondari bailinge bareku.
  cricket oppannange aradiya helire nambuva maatha.
  ipl final dina baa aatha ottinge kudugondu maathadigondu
  noduva. 20 over aata nodle koshi allada oppanno.

  [Reply]

  VA:F [1.9.22_1171]
  Rating: +4 (from 4 votes)
 9. AnandaSubba

  ಐಪಿಎಲ್ ಲೇಖನ ಲಾಯಿಕಾಯಿದು..
  ಎನ್ನ ಆಫೀಸಿಲ್ಲಿ ಆರೊ ಹೇಳಿದವು….ಐಪಿಎಲ್ನ ಪ್ರಯೊಜನ ಎಂಥ ಹೇಳಿರೆ….ಆಟ ಆಡುವವಕ್ಕೆ ..ಬೇರೆ ಬೇರೆ ದೇಶದವರ ಒಟ್ಟನ್ಗೆ ಆಡಿ ಅನುಭವ ಆವುತ್ತಡ….ಮಣ್ಣ ಗಟ್ಟಿ ಃ)

  ಇದಲ್ಲಿ ಆರು ಗೆದ್ದರೂ ಸೋತರೂ ಮಲ್ಯ ಗೆ ಲಾಭವೆ… ಜನ ಸೋತರೂ ಕುಡಿತ್ತವು ..ಗೆದ್ದರೂ ಕುಡಿತ್ತವು

  [Reply]

  VA:F [1.9.22_1171]
  Rating: 0 (from 0 votes)
 10. ಚೆನ್ನಬೆಟ್ಟಣ್ಣ

  ಇರುಳು ಆಡುದರಂದ ಎಷ್ಟು ಕರೆಂಟು ವೇಸ್ಟು ? ಇವಕ್ಕೆಲ್ಲಾ ಅದೇ ಬ್ಯಾಟು ಬಾಲಿಲಿ ಕ್ರಿಸ್ ಗೇಯ್ಲ್ ಬಾರ್ಸಿದ ಹಾಂಗೆ ಬಾರ್ಸೆಕ್ಕು !

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹ್ಮ್,ಈಗ ಗೊ೦ತಾತು.ಅದಕ್ಕೇ ಆಗಿಕ್ಕು, ಊರಿಲಿ ದೊ೦ದಿ ಆಟದ ಪ್ರಯತ್ನ ನೆಡೆತ್ತಾ ಇಪ್ಪದು.ಶ೦ಕರಪ್ಪಚ್ಚಿಯ ಹಾ೦ಗೆ ಬಡಿವಲೆಡಿಗೊ ಗೇಯ್ಲಿ೦ಗೆ ?ಹು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಸುವರ್ಣಿನೀ ಕೊಣಲೆಕಜೆವಸಂತ°ಕೊಳಚ್ಚಿಪ್ಪು ಬಾವದೊಡ್ಡಮಾವ°ಕಾವಿನಮೂಲೆ ಮಾಣಿಸುಭಗಪುತ್ತೂರಿನ ಪುಟ್ಟಕ್ಕಎರುಂಬು ಅಪ್ಪಚ್ಚಿವೇಣಿಯಕ್ಕ°ಪುತ್ತೂರುಬಾವಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಸರ್ಪಮಲೆ ಮಾವ°ಡಾಮಹೇಶಣ್ಣಚುಬ್ಬಣ್ಣಜಯಗೌರಿ ಅಕ್ಕ°ಪುಟ್ಟಬಾವ°ಹಳೆಮನೆ ಅಣ್ಣದೊಡ್ಡಭಾವತೆಕ್ಕುಂಜ ಕುಮಾರ ಮಾವ°ಶಾ...ರೀನೀರ್ಕಜೆ ಮಹೇಶಡಾಗುಟ್ರಕ್ಕ°ಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ