Oppanna.com

ಎಂಟೆದೆಯ ಹೋರಾಟದ ’ಎಂಟೆಬೆ’ಯ ಶುದ್ದಿ…

ಬರದೋರು :   ಒಪ್ಪಣ್ಣ    on   23/11/2012    12 ಒಪ್ಪಂಗೊ

ಈಗೀಗ ಪೆರ್ಲದಣ್ಣಂಗೆ ಊರು ನೆಂಪಪ್ಪದು ಜಾಸ್ತಿ – ಹೇದು ಗುಣಾಜೆಮಾಣಿ ನೆಗೆಮಾಡ್ಳಿದ್ದು.
ಅಲ್ಲದ್ದಲ್ಲ, ಮದಲಿಂಗೆ ನಾಕು ತಿಂಗಳಿಂಗೊಂದರಿ ಊರಿಂಗೆ ಬತ್ತೋನು – ಈಗ ತಿಂಗಳಿಂಗೇ ನಾಕು ಸರ್ತಿ ಬತ್ತ° ಇದಾ!
ಅಪ್ಪಮ್ಮಂಗೆ ಸಕಾಯಕ್ಕೆ ಬಪ್ಪದು – ಹೇಳುಗು ಕೇಳಿರೆ. ನಾವು ಅಲ್ಲ ಹೇಳ್ತಿಲ್ಲೆ. ಅದು ಬೇರೆ! 😉
ಮನ್ನೆ ಊರಿಂಗೆ ಬಂದೋನು ವಿಟ್ಳಲ್ಲಿ ಒಂದು ಮದುವೆ ಜೆಂಬ್ರಲ್ಲಿ – ಕಾಂಬಲೆ ಸಿಕ್ಕಿದ°.

ಪೆರ್ಲದಣ್ಣನೂ, ಗುಣಾಜೆಮಾಣಿಯೂ ಓ ಮನ್ನೆ ಗುಜರಾತಿಂಗೆ ಹೋಗಿ ಬಂದವಾಡ.
ಗುಣಾಜೆಮಾಣಿ ಹೋಯಿದ° ಹೇದರೆ ಮತ್ತೆ ಕೇಳೇಕೋ – ಅಲ್ಯಾಣ ಸರುತ್ತ ಮಾರ್ಗಂದ ಹಿಡುದು ಹರಿತ್ತ ನೀರಿನ ಒರೆಂಗೆ ಎಲ್ಲವನ್ನೂ ಪಟ ತೆಗದು ತೆಗದು ಮೋರೆಪುಟಲ್ಲಿ ತುಂಬುಸಿದ್ದನಡ.
ಪೆರ್ಲದಣ್ಣಂಗೂ ಪಟ ತೆಗವಲೆ ಅರಡಿಗು; ಆದರೆ ಮೋರೆಪುಟಕ್ಕೆ ಹಾಕಲೆ ಗುಣಾಜೆಮಾಣಿಯಷ್ಟು ಅರಡಿತ್ತಿಲ್ಲೆಯೋ ಏನೋ; ಉಮ್ಮಪ್ಪ! ಅಂತೂ ಇಬ್ರೂ ಚೆಂದಕೆ ಹೋಗಿ ಬಂದವು.
ಹೋದ್ದರ್ಲಿ, ಅಲ್ಯಾಣ ­ಆಡಳ್ತೆ ಪ್ರಗತಿ, ಜೆನಂಗಳ ಅನಿಸಿಕೆ, ರಾಜ್ಯಾಭಿವೃದ್ಧಿ – ಎಲ್ಲದರ ಬಗ್ಗೆಯೂ ತಿಳ್ಕೊಂಡು ಬಂದವು,
ವಿಟ್ಳಮದುವೆಲಿ ಈ ಬಗ್ಗೆ ಸುಮಾರು ಮಾತಾಡಿದೆಯೊ°.

~

ಗುಜರಾತಿಲಿ ಮದಲಿಂಗೆ ಹೋಲುಸಿರೆ ತುಂಬಾ ತುಂಬಾ ಅಭಿವೃದ್ಧಿ ಆಯಿದು – ಹೇಳ್ತದು ಅಲ್ಯಾಣ ಸಾಮಾನ್ಯ ಜೆನಂಗಳ ಅನಿಸಿಕೆ ಆಡ. ಅಭಿವೃದ್ದಿ ಆಯೇಕಾರೆ ಬರೇ ಜೆನಂಗಳಿಂದಲೂ ಆಗ, ಮಂತ್ರಿಗಳಿಂದಲೂ ಆಗ – ಅದು ಇಬ್ರ ಸಮಾಗಮಲ್ಲೇ ಅಕ್ಕಷ್ಟೇ – ಹೇಳ್ತದು ಪೆರ್ಲದಣ್ಣನ ನೇರ ಅಭಿಪ್ರಾಯ. ಆಳುವ ವರ್ಗವೂ – ನಾಗರಿಕ ಜೆನರ ವರ್ಗವೂ ಒಗ್ಗಟ್ಟಿದ್ದರೆ ಅಭಿವೃದ್ದಿಯ ಆರಿಂದಲೂ ತಡವಲೆಡಿಯ.
ಉದಾಹರಣಗೆ ಇಸ್ರೇಲಿನ ಕತೆ ನೋಡು – ಹೇದ°.
ನೋಡು ಹೇದರೆ ಕಾಂಬಲೆ ಅದು ವಿಟ್ಳ ದೇವಸ್ಥಾನದ ಕೊಡಿಮರವೋ; ಅಲ್ಲ.
ನೋಡು ಹೇದರೆ ತಿಳಿ ಹೇಳಿ, ತಿಳಿಯೇಕಾರೆ ಅರ್ತೋರು ವಿವರ್ಸೇಕು – ಪೆರ್ಲದಣ್ಣನೇ ವಿವರ್ಸಿದ°
ಇಸ್ರೇಲಿನ ಬಗ್ಗೆ ಮೇಗಂದ ಮೇಗೆ ವಿವರ್ಸಿಗೊಂಡು ಹೋದ°.
~

ಇಸ್ರೇಲ್:

ಅಮೇರಿಕ ಮತ್ತೆ ಭಾರತದ ಮಧ್ಯ ಭಾಗಲ್ಲಿ ಭಾರತದ ಆಕಾರದ್ದೇ ಒಂದು ದೊಡಾ ಖಂಡ ಇದ್ದಲ್ಲದೋ – ಆಪ್ರಿಕಾ.
ಆ ಆಪ್ರಿಕಂದ ಮೇಗೆ ಹೊಯಿಗೆ ರಾಶಿಯ ಅರಬ್ ದೇಶಂಗೊ ಇದ್ದು. ಚಿಮ್ಣೆಣ್ಣೆ ಸಿಕ್ಕುತ್ತ ಜಾಗೆ!
ಸುಮಾರು ದೇಶಂಗೊ – ಒಟ್ಟಾಗಿ ಗಲ್ಪು ದೇಶಂಗೊ – ಹೇಳ್ತದು ಕ್ರಮ.
ನಮ್ಮ ಗಾಡಿ ಇಬ್ರಾಯಿಯ ಮಗ° ಮಮ್ಮದೆ ಹೋದ್ಸು ಅದೇ ಗಲ್ಪಿಂಗೆ –ಅಲ್ಲದೋ? ಯೇವ ದೇಶಕ್ಕೆ ಹೋದ್ಸು ಹೇದು ಒಪ್ಪಣ್ಣಂಗರಡಿಯ; ಆ ಮಮ್ಮದೆಯ ಪೆರ್ಲದಣ್ಣಂಗರಡಿಯ. ಅದಿರಳಿ.
ಅಂತೂ – ಆ ಅರಬ್ ದೇಶಂಗಳಲ್ಲಿ ಪೂರ ಮಾಪಳೆಗೊ ಇಪ್ಪದು. ಪೂರ ಅಲ್ಲ; ಮದ್ದಿಂಗೆ ತಕ್ಕ ಒಂದು ದೇಶ ಬೇರೆ ಧರ್ಮದ್ದಿದ್ದು – ಅದುವೇ ಇಸ್ರೇಲು!

~

ಸೀತ ಈ ಕತೆ ಹೇದರೆ ನಿನಗೆ ಅರ್ತ ಆಗ ಒಪ್ಪಣ್ಣಾ, ಇಸ್ರೇಲಿನ ಹುಟ್ಟಿನ ಬಗ್ಗೆಯೇ ಮಾತಾಡಿ ಶುದ್ದಿ ಮುಂದುವರುಸುವೊ° ಹೇದ°. ಮೂರ್ತ ಹದಾಕೆ ಆದ ಕಾರಣ ಊಟಕ್ಕೆ ತಡವಿತ್ತು; “ಆತು” ಹೇದೆ.
ಅರ್ತೋರು ವಿವರ್ಸುತ್ತೆ ಹೇಳುವಗ ನಾವು ಅಡ್ಡಬಾಯಿ ಹಾಕಲಿಲ್ಲೆ; ಹಾಂಗೆ, ಇಸ್ರೇಲಿನ ಕತೆ ಸುರು ಆತು.

ಆ ಜಾಗೆಲಿ ಜೆರುಸಲೇಮು ಹೇದು ಒಂದು ಜಾಗೆ ಇದ್ದಾಡ.
ಮಧ್ಯಕಾಲಲ್ಲಿ ಅಲ್ಲಿ ಅಲ್ಯಾಣಷ್ಟಕೇ ಒಂದು ಧರ್ಮ ಇದ್ದತ್ತಾಡ – ಎಹೂದಿಗೊ ಹೇದು. ಜೆರುಸಲೆಮಿನ ದೇವಸ್ಥಾನಲ್ಲಿ ಪೂಜೆ ಮಾಡಿಂಡು ದೇವರ ನಂಬಿಂಡು ಅವರಷ್ಟಕೇ ಇದ್ದಿದ್ದವು. ಕ್ರಮೇಣ ಒಯಿವಾಟು-ವಲಸೆ ಎಲ್ಲ ಸೇರಿ ಅಲ್ಲಿಂದ ಬೇರೆಬೇರೆ ಊರ ಹೊಡೆಂಗೆ ಹೋದವಾಡ. ಪೂರ ಹೋಯಿದವಿಲ್ಲೆ, ಮುಂದೆ ಮಾಪ್ಳೆ ಪ್ರವರ್ಧಮಾನಕ್ಕೆ ಬಪ್ಪನ್ನಾರವೂ ಅಲ್ಲೇ ಇತ್ತಿದ್ದವು.

ಮಾಪ್ಳೆಧರ್ಮದ ಅಂತಃಸತ್ವ ಎಂತರ ಹೇದರೆ, ದೇವರ ಆರು ನಂಬುತ್ತನಿಲ್ಲೆಯೋ – ಅವನ ತಲೆಕಡಿಯೇಕು ಹೇದು.
ದೇವರೂ ಯೇವ ದೇವರು? – ಅವರ ದೇವರೇ ಆಯೇಕು! ಅಲ್ಲಾಹುವೇ ಆಯೇಕು,
ಸ್ವತಃ ಅಲ್ಲಾಹುವೇ ಹೇಳಿದ್ಸಡ ಹಾಂಗೆ. ಮತ್ತೆ ಕಾವಲಿದ್ದೋ? ಸುರುಮಾಡಿದವು; ಸುಮಾರು ಎಹೂದಿಗೊ ಮುಗುದವು.
ಪೆಟ್ಟಿಂಗೆ ಹೆದರಿ, ಜೀವದಾಶೆಗೆ ಹಲವಾರು ಜೆನಂಗೊ ಅಲ್ಲಿಂದ ದಿಕ್ಕಾಪಾಲಾಗಿ ಹೋದವು. ಜೀವ ಒಳಿಶಿಗೊಂಡವು.
ಅಂತೂ – ಜೆರುಸಲೆಮಿನ ಪವಿತ್ರ ದೇವಾಲಯಲ್ಲಿ ಒಂದು ಪಳ್ಳಿ ಎದ್ದತ್ತು.

ಗುಣಾಜೆಮಾಣಿಯೂ ಅಲ್ಲಿರ್ತಿತರೆ ನಮ್ಮ ಅಯೋಧ್ಯೆ ನೆಂಪಾವುತಿತೋ ಏನೋ!
ಅಲ್ಲಿಯೂ ಒಂದು ದೇವಸ್ಥಾನ ಇದ್ದದರ ಹೊಡಿತೆಗದು ಮಸೀದಿ ಕಟ್ಟಿದ್ದಿದಾ!  ಎಲ್ಲಿ ಹೋದರೂ ಇದೇ ಬುದ್ಧಿ ಇವಕ್ಕೆ ಹೇದು ಪರಂಚುತಿತ°. ಅದಿರಳಿ

~

ಇದರೆಡಕ್ಕಿಲಿ ಎಂತಾತು ಹೇದರೆ, ಓ ಮೊನ್ನೆ – ಹತ್ತುಎಂಭತ್ತೊರಿಶ ಹಿಂದೆ, ಜರ್ಮನಿ ದೇಶಲ್ಲಿ ಭೀಕರ ಸಮಸ್ಯೆ ಉಂಟಾತಾಡ.
ನಮ್ಮ ಭಾರತಲ್ಲಿ ಎಲ್ಲಾ ಸಮಸ್ಯೆಗೂ “ಬ್ರಾಹ್ಮಣರು ಕಾರಣ” ಹೇದು ಹೇಂಗೆ ಹೇಳ್ತವೋ; ಅಲ್ಲಿಯೂ “ನಮ್ಮೆಲ್ಲ ಸಮಸ್ಯೆಗೆ ಇಲ್ಲಿಗೆ ಬಂದ ಎಹೂದಿಗಳೇ ಕಾರಣ” ಹೇದು ಒಂದು ಮಲೆಮಂಗ ಜನನಾಯಕ ಜೆನರ ತಲಗೆ ತುಂಬಿತ್ತಾಡ.
“ಆ ಜೆನವೇ ಹಿಟ್ಳರು” ಹೇಳಿದ° ಪೆರ್ಲದಣ್ಣ.
ಕೊಳಚ್ಚಿಪ್ಪು ಭಾವಂಗೆ ಈ ಜೆನರ ಜಾತಕ ಪೂರ ಅರಡಿಗು; ಅಂದೊಂದರಿ ಮಾತಾಡುವಗ ಹೇಳಿತ್ತಿದ್ದ°. ನವಗೆ ಪೂರ್ತ ನೆಂಪಿಲ್ಲೆ ಈಗ.

ಹಾಂಗೆ, ಅವರ ದೇಶದ ಸಮಸ್ಯೆ ಪರಿಹಾರ ಆಯೇಕಾದರೆ ಅಲ್ಯಾಣ “ಎಹೂದಿಗಳ ಸರ್ವನಾಶ ಮಾಡೇಕು” ಹೇದು ನಿಗಂಟು ಮಾಡಿದವಾಡ. ಹಾಂಗೆ, ಬಲುಗಿ ತಂದು ಜೈಲಿಂಗೆ ಬಿಟ್ಟವಾಡ. ಜೈಲುದೇ ಎಂತ ಜೈಲು? ದೊಡಾ ಬಯಲು – ಉಂಬಲಿಲ್ಲೆ, ತಿಂಬಲಿಲ್ಲೆ. ಹೊದವಲೆ ಕಂಬುಳಿ ಇಲ್ಲೆ, ಕುಡಿವಲೆ ಕಳ್ಳು ಇಲ್ಲೆ. ಆ ಛಳಿ ದೇಶಲ್ಲಿ ಅಷ್ಟೇ ಸಾಲದೋ?

ಅದೂ ಸಾಲದ್ದಕ್ಕೆ, ದೊಡಾ ಸೂಟುಮಣ್ಣು ಮಡಗಿ ಒಂದೊಂದೇ ಜೆನರ ಅದಕ್ಕೆ ಹಾಕಿಂಡಿತ್ತಿದ್ದವಾಡ. ಪಾಪ!
ಹಿಟ್ಳರನ ಕಾರ್ಬಾರುಗಳ ಒಂದೊಂದರಿ ಕೊಳಚ್ಚಿಪ್ಪು ಭಾವ° ವಿವರ್ಸಲಿದ್ದು, ನವಗೇ ಬೆಗರ್ತು ಬಾವಾ!

~

ಅಂತೂ ಈ ಹಿಟ್ಳರು ಸುಮಾರು – ಎಷ್ಟೋ ಲಕ್ಷಗಟ್ಳೆ ಜೆನರ ಕೊಂದತ್ತಾಡ.
ಈ ಕೊಲ್ಲಾಣ ಆಗಿಂಡಿಪ್ಪಾಗ, ಎಹೂದಿಗಳ ಹಿಡುದು ಹಿಡುದು ಜೈಲಿಂಗೆ ಬಲುಗಿಂಡಿಪ್ಪಾಗ,
ತಪ್ಪುಸಿ ಬಾಕಿ ಒಳುದ ಎಹೂದಿಗೊ – “ಬದ್ಕಿರೆ ಬೇಡಿ ತಿಂಬೆ” ಹೇದು ಪ್ರಪಂಚದ ಸಿಕ್ಕಿ ಸಿಕ್ಕಿದಲ್ಲಿಗೆ ಓಡಿದವಾಡ.
ಕೆಲವು ಜೆನ ಪ್ರಾನ್ಸಿಂಗೆ, ಕೆಲವು ರಷ್ಯಕ್ಕೆ, ಕೆಲವು ಜೆನ ಇಂಗ್ಲೆಂಡಿಂಗೆ – ಕೆಲವು ಸಂಸಾರಂಗೊ ನಮ್ಮ ಭಾರತಕ್ಕೂ ಬಯಿಂದವಾಡ. ದೊಡ್ಡ ಪ್ರಮಾಣದ ಜೆನಂಗೊ ಅಮೇರಿಕಕ್ಕೂ ಹೋಯಿದವಾಡ.

ಒಂದು ಶುಬಗಳಿಗೆಲಿ ಮಹಾಯುದ್ಧ ಮುಗಾತು; ಹಿಟ್ಳರನ ಅವಸಾನ ಆತು. ಇನ್ನೆಂತ?
ಎಹೂದಿಗೊ ಊರುಬಿಟ್ಟು ಬಂದಾಗಿತ್ತು, ಇನ್ನು ಒಪಾಸು ಹೋಗೆಡದೋ? ಎಲ್ಲಿಗೇದು ಹೋಪದು?
ಅವು ಬಂದದು ಜರ್ಮನಿಂದಲೋ – ಅದು ಅವರ ಮೂಲ ಅಲ್ಲ. ಮೂಲ ಇಪ್ಪದು ಜೆರುಸಲೆಮಿಲಿ!

ಅದಕ್ಕೇ, ಹಲವು ಜೆನ ಒಗ್ಗಟ್ಟಾಗಿ, ಅಮೇರಿಕ-ಇಂಗ್ಲೇಂಡಿನ ಹಾಂಗಿರ್ತ ಸಹೃದಯಿಗಳ ಹತ್ರೆ ಹೇಳಿದವಾಡ – ಎಂಗಳ ಜಾಗೆ ಹೇಂಗಾರು ಮಾಡಿ ಬಿಡುಸಿ ಕೊಡಿ, ಅಜ್ಜಂದ್ರ ಹೆಸರು ಹೇಳಿ ಎಂಗೊ ಕೃತಜ್ಞತೆ ಕೊಡ್ತೆಯೊ°ಹೇದು.
ಸಂಗತಿ ಅಲ್ಲದ್ದಲ್ಲ ಹೇದು ಕಂಡತ್ತು. ಅಮೇರಿಕ-ಇಂಗ್ಲೇಂಡಿನ ಪುರ್ಬುಧರ್ಮ ಹುಟ್ಟಿದ್ದು ಇದೇ ಜೆರುಸಲೆಮಿಲಿ ಅಲ್ದೋ?
ಆ ಜಾಗೆ ಬ್ಯಾರಿಗಳ ಕೈಲಿ ಇಪ್ಪದರಿಂದ ಏಸುವಿನ ಪೂರ್ವಧರ್ಮ – ಎಹೂದಿಗಳ ಕೈಲಿದ್ದರೆ ಒಳ್ಳೆದು ಹೇದು ಕಂಡತ್ತಾಡ.
ಹಾಂಗೆ, ಜೆರುಸಲೆಮಿನ ಆಸುಪಾಸು ರಜ ಜಾಗೆ ಬಿಡುಸಿಕೊಟ್ಟವಾಡ.

ಸಹಸ್ರಾರು ಒರಿಶ ಮತ್ತೆ ಅಬ್ಬೆಮಣ್ಣಿನ ಕಾಂಬ ಯೋಗ ಎಹೂದಿಗೊಕ್ಕೆ.
ಲೋಕಲ್ಲಿ ಅಳುದು ಒಳುದ ಎಹೂದಿಗೊ “ನಮ್ಮ ಅಜ್ಜಂದ್ರ ಊರು”ಹೇದು ಸೀತ ಜೆರುಸಲೆಮಿಂಗೆ ಹೆರಟವಾಡ.
ಇಂಗ್ಲೆಂಡು, ಫ್ರಾನ್ಸು, ಭಾರತ, ಅಮೇರಿಕ – ಎಲ್ಲಾ ದಿಕ್ಕಂದಲೂ.

~

ಮುಳ್ಳಿನ ಶತ್ರುಗೊಕ್ಕೆ ಮುಳ್ಳಿಂದಲೇ ಉತ್ತರ ಕೊಡೆಕ್ಕು!

ಜೆರುಸಲೆಮಿನ ಆಸುಪಾಸಿಂಗೆ ಬಂದ ಕೂಡ್ಳೇ “ಏನು ಭಾವಾ” ಕೇಳುಲೆ ಒಳ್ಳೆ ನೆರೆಕರೆ ಇತ್ತಿಲ್ಲೆ.
ಬನ್ನಿ, ಆಸರಿಂಗೆ ಕುಡೀರಿ ಹೇಳುಲೆ ಸಹೃದಯ ಬಾಂಧವ್ಯ ಇತ್ತಿಲ್ಲೆ. ಬಂದ ಕೂಡ್ಳೇ ಪೆಟ್ಟೇ ತಿಂದದು.
ಭೂಮಿ ಧರ್ಮಕ್ಕೆ ಸಿಕ್ಕಿದ್ದಿಲ್ಲೆ, ಹಾಂಗಾಗಿ ಸ್ವಾತಂತ್ರ್ಯವೂ ಬಿಕರಿಗೆ ಸಿಕ್ಕುತ್ತಿಲ್ಲೆ – ಹೇಳ್ತ ಸತ್ಯ ಬೇಗ ಅರಡಿಗಾತು.
ಪೆಟ್ಟಿಂಗೆ ಉತ್ತರ ಹೇಂಗೆ ಕೊಡೆಕ್ಕು? ಪೆಟ್ಟು ಕೊಟ್ಟವನ ಜೈಲಿಲಿ ಹಾಕಿ, ಕಬಾಬು ಬಿರಿಯಾನಿ ತಿನ್ನುಸಿಗೊಂಡು, ಸಾಂಕಿ ಸಾಂಕಿ ಬೊಡುದಪ್ಪಗ ಬಳ್ಳಿಕಟ್ಟಿ ನೇಲುಸುತ್ತೋ?
ಅಲ್ಲ, ಪೆಟ್ಟಿಂಗೆ ಪೆಟ್ಟೇ ಉತ್ತರ. ಇಸ್ರೇಲಿನ ಆರಂಭಂದಲೂ ಅದನ್ನೇ ಮಾಡಿದ್ದು!
ಆ ಸಂಸ್ಕೃತಿ ಇಂದಿಂಗೂ ಮುಂದುವರುದ್ದು – ಹೇಳಿದ°.
ಅಪ್ಪಪ್ಪು, ಪೇಪರಿಲಿ ಕಾಣ್ತು – ಇಸ್ರೇಲು-ಪೆಲೆಸ್ತೇನು ಜಗಳದ ಶುದ್ದಿಗೊ; ಹೇದೆ.

ಹ್ಮ್, ಈಗ ಪೆಲೆಸ್ತೇನು ಮಾಂತ್ರ; ಮದಲಿಂಗೆ ಆ ಊರಿನ ಎಲ್ಲೋರುದೇ ಸೇರಿ ಬೋಂಬು ಹಾಕಲೆ ನೋಡಿದವು –  ಎಡಿಗಾಯಿದಿಲ್ಲೆ. ಸುತ್ತುಮುತ್ತಲಿನ ಎಲ್ಲ ಬಲಾಢ್ಯ ದೇಶಂಗೊ ಸೇರಿ ಯುದ್ಧ ಮಾಡಿರೂ – ಈ ಪಿಟ್ಟೆ ದೇಶದ ಒಟ್ಟಿಂಗೆ ಗೆಲ್ಲಲೆ ಎಡಿಗಾಯಿದಿಲ್ಲೆ. ಎಲ್ಲೋರುದೇ ಬೀಲ ಸುಟ್ಟುಗೊಂಡು ಹೋಗಿ ಮನೆಲಿ ಕೂದವು –
ಈಗ ಏನಿದ್ದರೂ ಹಿಂದಂದ ಸಪೋರ್ಟು. ಪೇಲೆಸ್ತೇನಿನೋರು ಪೆಟ್ಟುಮಾಡ್ಳೆ, ಪೆಟ್ಟುತಿಂಬಲೆ; ಒಳುದೋರು ಚೆಂದನೋಡ್ಳೆ – ಪಾಪ! ಹೇಳಿದ°.
ಹೀಂಗೇ ಇಸ್ರೇಲಿನೋರ ದೇಶಪ್ರೇಮಂಗಳ ಬಗ್ಗೆ, ಸಾಹಸಂಗಳ ಬಗ್ಗೆ, ಮಿಳ್ಟ್ರಿ ಆಧುನಿಕತೆಗಳ ಬಗ್ಗೆ ಮಾತಾಡಿಗೊಂಡಿದ್ದ ಹಾಂಗೇ – ಹಲವು ಜೆನ ಗುರ್ತದ ಮೋರೆಗೊ ಕಂಡವು; ಮಾತಾಡಿಗೊಂಡೂ ಆತು.
ಇಸ್ರೇಲಿನ ಸಾಹಸಂಗಳ ಬಗ್ಗೆ ಮಾತಾಡುವಗ ಈ ಒಂದು ವಿಚಾರ ಬಂತು. ಏವದು?

~

ಎಂಟೆಬೆ:

ದೇಶದ ಮೇಗೆ ಯುದ್ಧ ಸಾರಿದ ಕೆಲವು ಉಗ್ರಗಾಮಿಗಳ ಹಿಡುದು ಹೇಮಾರ್ಸಿ ಹಾಕಿತ್ತಿದ್ದವಡ ಒಂದರಿ ಇಸ್ರೇಲಿನೋರು.
ಅವು ಎಂಗಳ ಜೆನಂಗೊ, ಅವರ ಬಿಡೇಕು ಹೇದು ಕೆಲವು ಪೆಲೆಸ್ತೇನಿನ ಜೆನಂಗೊ ಗಲಾಟೆ ಸುರು ಮಾಡಿದವಾಡ. ಹೇಂಗೆಲ್ಲ ಗಲಾಟೆ ಮಾಡ್ಳೆಡಿತ್ತೋ – ಅದೆಲ್ಲಾ ರೀತಿಲಿ. ಆದರೆ ಯೇವದೂ ಹರುದ್ದಿಲ್ಲೆ! ನಮ್ಮ ಬೊಂಬಾಯಿ ಹೋಟ್ಳಿಂಗೆ ನುಗ್ಗಿದ ಹಾಂಗೇ ಅಲ್ಲಿ ಇಸ್ರೇಲಿಂಗೂ ನುಗ್ಗಿದವಾಡ. ಅವರ ಅಂಬಗಳೇ ಸಪಾಯಿ ಮಾಡಿ ಬಿಟ್ಟವು!

ಒಂದಿನ ಎಂತಾತು ಹೇದರೆ – ಒಂದು ವಿಮಾನ ಗ್ರೀಸಿಂದ ಪೇರಿಸಿಂಗೆ ಹೆರಟತ್ತಾಡ. ಆ ವಿಮಾನ ಇಸ್ರೇಲಿಂದಲ್ಲ, ಪ್ರೆಂಚರದ್ದು. ಆದರೂ – ಅದರ್ಲಿ ಇಸ್ರೇಲಿ ಪ್ರಯಾಣಿಕರೂ ಧಾರಾಳ ಇತ್ತಿದ್ದವಾಡ.
ವಿಮಾನಕ್ಕೆ ಪಿಸ್ತೂಲು, ಬೋಂಬು ಎಲ್ಲ ಹಿಡ್ಕೊಂಡು, ಪ್ರಯಾಣಿಕರ ಹಾಂಗೇ ಪೇಂಟಂಗಿ ಹಾಕಿಂಡು ಕೆಲವು ಕಳ್ಳರುದೇ ಹತ್ತಿದ್ದಿದ್ದವು. ವಿಮಾನ ಹೆರಟು ರಜ ಹೊತ್ತಪ್ಪಗ – ಕಳ್ಳರ ನಿಜಬಣ್ಣ ತೋರ್ಸಿದವು, ಇಡೀ ವಿಮಾನವ ತನ್ನ ವಶಕ್ಕೆ ತೆಕ್ಕೊಂಡು –  ಎಂಗೊ ಹೇಳಿದಲ್ಲಿಗೆ ತಿರುಗುಸಿ – ಹೇಳಿದವಾಡ.

ಗ್ರೀಸಿಂದ ಪೇರಿಸಿಂಗೆ ಹೋಯೇಕಾದ್ಸು ಸುರುವಿಂಗೆ ಲಿಬಿಯ ದೇಶಕ್ಕೆ ಹೋಗಿ ಇಳುದತ್ತಾಡ. ವಿಮಾನದ ಮತ್ತಾಣ ಪ್ರಯಾಣಕ್ಕೆ ಬೇಕಾದಷ್ಟು ಪೆಟ್ರೋಲು ತುಂಬುಸೆಂಡು ಪುನಾ ಹಾರಿತ್ತಾಡ. ಎತ್ಲಾಗಿ? ಉಮ್ಮಪ್ಪ!
ವಿಮಾನಲ್ಲಿದ್ದ ಆರಿಂಗೂ ಗೊಂತಿಲ್ಲೆ, ಆ ನಾಕುಜೆನ ಕಳ್ಳರಿಂಗೆ ಬಿಟ್ಟು!

ಹೆಚ್ಚುಕಮ್ಮಿ ಒಂದು ದಿನದ ಹಾರಾಟದ ಮತ್ತೆ ವಿಮಾನ ಬಂದು ಇಳುತ್ತು. ಎಲ್ಲಿ?
ಆಪ್ರಿಕಾ ಖಂಡದ ನೆಡುಮಧ್ಯಲ್ಲಿಪ್ಪ, ತೆಂಙಿನಕಾಯಿಯಷ್ಟು ದೊಡ್ಡ ಕಪ್ಪು ದೇಶ, “ಉಗಾಂಡ”ಕ್ಕೆ.
ಅಲ್ಯಾಣ ಆಡಳಿತ ಹಾಳಾಗಿ ಒಂದು ಭ್ರಷ್ಟ ಸರ್ವಾಧಿಕಾರಿ ಮಾಪ್ಳೆ ಇದಿ ಅಮೀನ್ ಕೈಲಿ ಇದ್ದತ್ತಾಡ.
ಅದರ ಹೆಸರೇ ಹೇಳ್ತ ಹಾಂಗೆ ಜೆನರ ಇಡಿಇಡಿ ತಿಂದುಗೊಂಡಿತ್ತಾಡ! ಆ ಜೆನ ಪೆಲೆಸ್ತೇನ್ ಉಗ್ರಗಾಮಿಗಳ ಚೆಂಙಾಯಿ ಇದಾ; ಹಾಂಗಾಗಿ ಅವು ಇಲ್ಲಿಗೆ ಬಂದದು.
ವಿಮಾನಲ್ಲಿದ್ದ ನಾಕು ಅಲ್ಲದ್ದೆ, ಮತ್ತೆ ನಾಕು ಉಗ್ರರು ಸೇರಿಗೊಂಡವಾಡ ಅಲ್ಲಿ.

ಇಸ್ರೇಲಿನೋರ ಮಾಂತ್ರ ಒತ್ತೆ ಮಡಗಿ – “ಎಂಗಳ ಅಣ್ಣಂದ್ರು ಜೈಲಿಲಿದ್ದವು – ಅವರ ಬಿಡಿ” – ಹೇಳಿ ಬೇಡಿಕೆ ಮಡಗಿದವಾಡ.

~

ಬಿಡಿ ಹೇಳಿದ ಕೂಡ್ಳೇ ಬಿಡ್ಳೆ ಅದೆಂತ ಬಾರತವೋ, ಅಲ್ಲ.
ಸುರುವಿಂಗೆ ಮೂರು ದಿನ ಸಮಯ ಕೊಟ್ಟವಾಡ. ಮತ್ತೆ “ಆಲೋಚನೆ ಮಾಡ್ತೆಯೊ°, ಮತ್ತೆ ಮೂರುದಿನ ಬೇಕು”ಇಸ್ರೇಲು ಹೇಳಿದ್ದಕ್ಕೆ ಆತು – ಹೇದವು. ಹೇಳುಲೆ ಹಾಂಗೆ ಹೇಳಿರೂ – ಒಳಂದ ಆಲೋಚನೆ ಬೇರೆಯೇ ಇದ್ದತ್ತು ಇಸ್ರೇಲಿಲಿ.

ಆ ವಿಮಾನನಿಲ್ದಾಣ ಕಟ್ಟಿದ ಇಂಜಿನಿಯರುಗಳ ಲೋಕದ ಬೇರೆಬೇರೆ ದಿಕ್ಕಂದ ಹುಡ್ಕಿ, ಬಪ್ಪಲೆ ಮಾಡಿ, ಅವರ ಕೈಲಿ ನಕಲು ಬರೆಶಿ, ಅದರ ಕುಂಞಿ ಮೋಡೆಲು ಮಾಡಿ ಮಡಿಕ್ಕೊಂಡವು. ಮಿಲಿಟ್ರಿಂದ ಹೆರ್ಕಿ ತೆಗದ ಕೆಲವು ಜೆನರ ಕೂರ್ಸೆಂಡು “ಮಾಷ್ಟರ್ ಪ್ಲೇನು” ಹಾಕಿದವಾಡ. ಪ್ಲೇನು ಎಂತಗೆ?
ಇಸ್ರೇಲಿಂದ ಸೀತ ಹೋಗಿ, ಎಂಟೆಬೆ ವಿಮಾನ ನಿಲ್ದಾಣಲ್ಲಿಪ್ಪೋರ ರಕ್ಷಿಸಿ ಕರಕ್ಕೊಂಡು ಬಪ್ಪಲೆ!
ಪೆರ್ಲದಣ್ಣ ಹೇಳಿಂಡು ಹೋದ ಹಾಂಗೇ, ಹು – ಸಿನೆಮ ನೋಡಿ ಅಪ್ಪಗ ರೋಮ ಕುತ್ತ ಆದ ಹಾಂಗೆ ಆತು ಒಪ್ಪಣ್ಣಂಗೆ.

~

ಅಲ್ಲ, ಇಸ್ರೇಲಿಂದ ಅಲ್ಲಿಗೆ ದೂರ ಎಷ್ಟಿದ್ದು, ಇದೆಲ್ಲ ಹರಿವಲಿದ್ದೋ? ಇದ್ದು, ಎಡಿಗಾಯಿದು ಅವಕ್ಕೆ.
ಅಂತೂ ಇಸ್ರೇಲು ಮಿಲಿಟ್ರಿ ಹೆರಟತ್ತು, ಎಂಟೆಬ್ಬೆಗೆ.
ನೆಡು ಇರುಳು ಎತ್ತಿತ್ತು. ಸೀತ ಇಳುದವು, ಉಪಾಯಲ್ಲಿ ಒಳ ನುಗ್ಗಿದವು, ಗುಂಡು ಹಾರ್ಸಿದವು.
ರಜ ಪೈಟಿಂಗು ಪೆಟ್ಟುಗುಟ್ಟೂ ಆತು, ಆದರೆ ಜೆನಂಗೊ ಒಳುದವು. ನೂರಾಆರು ಜೆನರಲ್ಲಿ ನಾಕು ಹೋದವು. ಒಳುದ ನೂರ ಎರಡು ಜೆನರನ್ನೂ ಸುರಕ್ಷಿತವಾಗಿ ಕರಕ್ಕೊಂಡು ಬಂದವಾಡ – ಇನ್ನೊಂದು ವಿಮಾನಲ್ಲಿ.

ಸಾರ ಇಲ್ಲೆ, ಅಷ್ಟಾರೂ ಒಳುದ್ದು ಭಾಗ್ಯ. ಮಾತುಕತೆಗೆ ಕಾದಿದ್ದರೆ ಅಷ್ಟೂ ಇರ್ತಿತಿಲ್ಲೆ ಇದಾ. ನಾಕೇನಾಕು ಜೆನ ಸತ್ತರೂ – ದೇಶದ ಮರಿಯಾದಿ ಎಷ್ಟು ಮೇಗೆ ಹೋತಪ್ಪೋ!
ಹೇಳಿದಾಂಗೆ, ಇದೆಲ್ಲ ನೆಡದ್ಸು ಈಗಾಣ ಕಾಲಲ್ಲಿ ಅಲ್ಲ, ತಂತ್ರಜ್ಞಾನ ಬೆಳೆತ್ತ ಮದಲು, ಸಾವಿರದ ಒಂಭೈನೂರ ಎಪ್ಪತ್ತಾರರಲ್ಲಿ!

ಸಾವಿರಗಟ್ಳೆ ಕಿಲೋಮೀಟ್ರು –  ಎಂಟೆಬೆಯಷ್ಟು ದೂರಕ್ಕೆ ಹೋಗಿ ಆದರೂ ಎಂಟೆದೆಲಿ ಹೋರಾಟ ಮಾಡಿ, ತನ್ನ ದೇಶಕ್ಕಾಗಿ  ಇಸ್ರೇಲಿಗಳ ಕತೆ ಕೇಳುವಗ ರೋಮಾಂಚನ ಆಗದ್ದೆ ಇಕ್ಕೋ?

~

ಎಂಟೆಬೆಯ ಕತೆ ಒಂದಲ್ಲ, ಹತ್ತು ಹಲವು ಸನ್ನಿವೇಶಂಗೊ, ಘಟನೆಗೊ ಅವರ ಶೌರ್ಯ ಸಾಹಸಂಗಳ ತೋರುಸುತ್ತಾಡ.

~

ಮದಲಿಂದಲೇ ಎಹೂದಿಗೊ ಧಾರಾಳ ಸತ್ತಿದವು.
ಇತಿಹಾಸ ಕಾಲಲ್ಲಿ, ಮಧ್ಯಯುಗಲ್ಲಿ, ಹಿಟ್ಳರನ ಕಾಲಲ್ಲಿ  – ಎಲ್ಲೋರ ಕೈಲಿಯೂ ಸಾವಲೆ ಧರ್ಮಕ್ಕೆ ಸಿಕ್ಕಿಗೊಂಡಿದ್ದದು ಎಹೂದಿಗಳೇ. ಹಾಂಗಾಗಿ, ಪಾಪ  – ಇನ್ನು ಮುಂದೆ ಒಬ್ಬನೂ ಸಾವಲಾಗ ಹೇಳ್ತದು ಅವರ ಹಾರೈಕೆ.
ಹಾಂಗೆ, ಎಲ್ಲೇ ಆಗಲಿ – ಒಬ್ಬನೇ ಒಬ್ಬ° ಇಸ್ರೇಲಿ ಸತ್ತರೂ, ಅತವಾ ಅಪಾಯಲ್ಲಿದ್ದರೂ – ಅದಕ್ಕೆ ಪ್ರತೀಕಾರ ತೀರ್ಸಿಯೇ ತೀರ್ಸುತ್ತದು ಇಸ್ರೇಲಿನ ಮಣ್ಣಿನ ಗುಣ.
ದೇಶಪ್ರೇಮ, ದೇಶಾಭಿಮಾನ, ತನ್ನ ಸ್ವಂತ ಮಣ್ಣಿನ ಬಗ್ಗೆ ತೋರ್ಸುಲೆಡಿಗಾದ ಗೌರವ – ಇದಕ್ಕೆ ಪ್ರತ್ಯಕ್ಷ ಉದಾಹರಣೆ ಇಸ್ರೇಲು ಅಡ.
ಆದರೆ,ಅವಕ್ಕೆ ಇಂದಿಂಗೂ ನೆಮ್ಮದಿ ಇಲ್ಲೆ. ಸುತ್ತುಮುತ್ತ ಇಪ್ಪ ನೆರೆಕರೆ ಪೂರ ಹಾಳಾಗಿ ಹೋದ ಮಾರಿಗೊ ಆದ ಕಾರಣ, ಏವಗ ಎಲ್ಲಿಂದ ರೋಕೆಟು ಬತ್ತು ಹೇಳ್ತದು ಅರಡಿಯ.
ನಿತ್ಯವೂ ಕಣ್ಣಿಲಿ ಕಣ್ಣು ಮಡಗಿ ಬದ್ಕೇಕಾದ ಅವಸ್ಥೆ.

ಎಲ್ಲ ಸಮಸ್ಯೆಗಳನ್ನೂ ಎದುರುಸಿ, ದಂತಕತೆಯ ಹಾಂಗೆ, ಸಿನೆಮದ ಕತೆಗಳ ಹಾಂಗೆ ಸಾಹಸಿ ಆಗಿಂಡು ಇಸ್ರೇಲು ಹೇಳ್ತ ದೇಶ ನಮ್ಮ ಭೂಮಿಲಿ ಇದ್ದು ಒಪ್ಪಣ್ಣಾ ಹೇಳಿದ° ಪೆರ್ಲದಣ್ಣ.
~

ಕಸಬ್ ಹೇಳ್ತ ಒಂದು ಕಸವು ಹರುದು ಬಿದ್ದದಕ್ಕೆ ಐವತ್ತು ಕೋಟಿ ಕರ್ಚು ಮಾಡಿದ ನಮ್ಮ ದೇಶ ಅಂತೂ – ಇಂತಾ ಕುಂಞಿ ಸಾಹಸಿ ಇಸ್ರೇಲಿಂದ ಕಲಿಸ್ಸು ತುಂಬ ಇದ್ದು!
ನಾಕೊರಿಶ ಬೇಕಾತೋ ಒಂದು ಉಗ್ರನ ಕೊಲ್ಲಲೆ? ಅಷ್ಟು ಸಮಯಲ್ಲಿ ಅದೆಷ್ಟು ರಕ್ತಬೀಜಾಸುರನ ಜನನ ಆಗಿಕ್ಕೋ?!
ಒಂದು ಕಸಬು ಹೋದರೂ ಸಹಸ್ರಾರು ಕಸಬ್ಬುಗೊ ನಮ್ಮ ಸುತ್ತುಮುತ್ತ ಇರ್ತವು. ಅವೆಲ್ಲವೂ ನಾಶ ಆದರೆ ಮಾಂತ್ರಾ ಭಾರತಮಾತೆಗೆ ನೆಮ್ಮದಿ.
ಹಾಂಗೆ ನಾಶ ಆಯೇಕಾರೆ ಕಣಕಣಲ್ಲಿಯೂ ನಮ್ಮ ಅಸ್ತಿತ್ವದ ಬಗೆಗೆ ಅಭಿಮಾನ ಬರೇಕು; ಇಸ್ರೇಲಿಗಳ ಹಾಂಗೆ.
ಹಾಂಗೆ ಆಯೇಕಾರೆ  ಜೆನಂಗಳೂ-ಸರ್ಕಾರವೂ ಎರಡೂ ಸ್ವಾಭಿಮಾನಿ ಆಗಿರೇಕು.
ನಮ್ಮ ದೇಶ, ಮಣ್ಣು, ಸಂಸ್ಕಾರಂಗಳ ಗೌರವಿಸುವ ಯೇವದೇ ಜಾತಿ-ಪಂಗಡ- ಧರ್ಮದ ಜೆನ ಆಗಲಿ, ಅವ° ಭಾರತೀಯನೇ. ಅಂತಹ ನಿಜವಾದ ಭಾರತೀಯರ ಅಗತ್ಯ ಇದ್ದು – ಹೇಳಿದ ಪೆರ್ಲದಣ್ಣ.
ಎಂತ ಹೇಳ್ತಿ?

ಒಂದೊಪ್ಪ: ದೇಶಕ್ಕೇ ಆಗಲಿ, ಮನೆಗೇ ಆಗಲಿ – ಹೆರಾಂದ ತೊಂದರೆ ಬಂದಷ್ಟೂ ಒಳಾಣ ಶೆಗ್ತಿ ಜಾಗೃತ ಆವುತ್ತು.

ಸೂ:

~*~*~

12 thoughts on “ಎಂಟೆದೆಯ ಹೋರಾಟದ ’ಎಂಟೆಬೆ’ಯ ಶುದ್ದಿ…

  1. ಎಂಟೆದೆ ದೈರ್ಯ ತುಂಬುಸುತ್ತ ಕೆಲಸ ಆಯೆಕ್ಕು. ವಿಶೇಷವಾಗಿ ಮಕ್ಕಳಲ್ಲಿ ತುಂಬುಸೆಕ್ಕು ಅಲ್ಲದಾ? ಈಲೇಃಖನಕ್ಕ್೦ದು ಒಪ್ಪ.

  2. ಒಪ್ಪಣ್ಣಾ,
    ಒಳ್ಳೆ ಶುದ್ದಿ. ಆ ಇಂಗ್ಲೀಶಿಲ್ಲಿ ಬರದ್ದರಿಂದ ನೀನು ವಿವರುಸಿದ್ದೇ ಲಾಯ್ಕ ಆಯಿದು..
    ಯಬ್ಬೋ ದೇವರೇ ಅಶ್ಟೆಲ್ಲ ಮಾಡಿದವಪ್ಪೋ ಆರೇ ದಿನಲ್ಲಿ!!!
    ಅವರ ಕೆಪೆಕಿಟಿಯ ಮೆಚ್ಚೆಕಾದ್ದೇ… 🙂
    { ದೇಶಕ್ಕೇ ಆಗಲಿ, ಮನೆಗೇ ಆಗಲಿ – ಹೆರಾಂದ ತೊಂದರೆ ಬಂದಷ್ಟೂ ಒಳಾಣ ಶೆಗ್ತಿ ಜಾಗೃತ ಆವುತ್ತು.} – ನಮ್ಮ ಮೇಲೆ ಈಗ ಹೆರಂದಲೂ ಒಳಾಂದಲೂ ಒಟ್ಟಿಂಗೇ ಆಕ್ರಮಣ ಆವ್ತಾ ಇದ್ದನ್ನೇ? 🙁

    {ಪೆಟ್ಟಿಂಗೆ ಉತ್ತರ ಹೇಂಗೆ ಕೊಡೆಕ್ಕು? ಪೆಟ್ಟು ಕೊಟ್ಟವನ ಜೈಲಿಲಿ ಹಾಕಿ, ಕಬಾಬು ಬಿರಿಯಾನಿ ತಿನ್ನುಸಿಗೊಂಡು, ಸಾಂಕಿ ಸಾಂಕಿ ಬೊಡುದಪ್ಪಗ ಬಳ್ಳಿಕಟ್ಟಿ ನೇಲುಸುತ್ತೋ?
    ಅಲ್ಲ, ಪೆಟ್ಟಿಂಗೆ ಪೆಟ್ಟೇ ಉತ್ತರ. }
    ಪೆಟ್ಟಿಂಗೆ ಪೆಟ್ಟೇ ಮದ್ದು ಸರಿ 🙂 ಆದರೆ ತಿರುಗುಸಿ ಕೊಡುವ ಪೆಟ್ಟು ಕ್ರಮಲ್ಲಿ ಕೊಡೆಕು..
    ಹೇಂಗೆ ಕೊಡೆಕು ಹೇದರೆ – ಒಂದರಿ ತಿಂದವ° ಮತ್ತೆ ಕೈ ಎತ್ತಿವ ಮದಲು ಸಾವಿರ ಸರ್ತಿ ಅಲೋಚನೆ ಮಾಡೆಕು.
    ನಾವೂ ಅದೇ ಮಾಡಿದ್ದು.
    * India is The First Country to punish a terrorist with procedure.
    Moreover,
    * India is The First Country to arrest a terrorist alive. 🙂
    ಹೆಮ್ಮೆ ಆವ್ತಿಲ್ಲೆಯಾ ಈ ಮಾತು ಕೇಳುವಾಗ….?? 🙂

  3. ಅಪ್ಪು ಇಸ್ರೇಲು ದೇಶಂದ ನಾವು ಕಲಿವದು ತುಂಬ ಇದ್ದು..ಅಲ್ಲಿಪ್ರತಿ ನಾಗರಿಕನೂ ಎರಡು ವರ್ಷ ಮಿಲಿಟ್ರಿ ಸೇವೆ ಮಾಡುದು ಕಡ್ಡಾಯಡ.ಮತ್ತೆ ನವಗೂ ಅವಕ್ಕೂ ಒಂದು ಸಾಮ್ಯತೆ ಇದ್ದು..ಯಹೂದಿಯೂ ನಮ್ಮ ಹಿಂದು ಧರ್ಮ ದ ಹಾಂಗೆ ಒಂದು ಪ್ರಾಚೀನ ಧರ್ಮ….ಮಾಪ್ಲೆ,ಸೋಜಂಗಳ ಹಾಂಗೆ ಒಂದು ಮತ ಅಲ್ಲ .ಮತ್ತೆ ನಾವು ಹೆಚ್ಚು ಬೆರವಲೆ ಅನುಕೂಲ ಆಗಿಪ್ಪ “ಮೋರೆಪುಟ” ತಯಾರ್ಸಿದ್ದೂ ಮಾರ್ಕ್ ಜುಕರ್ ಬರ್ಗ್ ಹೇಳ್ತ ಯಹೂದಿಯೇ..

  4. ವಿಚಾರ ಪ್ರದೋಚಕ ಲೇಖನ.
    ಮಕ್ಕಳಲ್ಲಿ ದೇಶ ಪ್ರೇಮ ಜಾಗೃತಗೊಳುಸುವ ಕಾರ್ಯ ನಿರಂತರವಾಗಿ ನೆಡೆತ್ತಾ ಇರೆಕು. ಬರೇ ಪುಸ್ತಕದ ಓದು, ಮಾರ್ಕ್ ತೆಗವದರಲ್ಲೇ ಅವರ ಭವಿಷ್ಯ ಹೇಳಿ ಅವರ ತಲಗೆ ತುಂಬುಸಲಾಗ. ಪಠ್ಯ ಪುಸ್ತಕಂಗಳಲ್ಲಿ ದೇಶಕ್ಕಾಗಿ ಹೋರಾಡಿದವರ, ಜೀವ ತೆತ್ತವರ, ಸ್ವಾಭಿಮಾನ ಹುಟ್ಟುಸುವ ವಿಶಯಂಗಳ ಬಗ್ಗೆ ಪಾಠಂಗೊ ಇರೆಕ್ಕು. ಈ ದೇಶ, ಈ ಮಣ್ಣು ನಮ್ಮ ಕೈಲಿ ಇಲ್ಲದ್ರೆ ನಮ್ಮ ಅಸ್ತಿತ್ವ ಇಲ್ಲೆ ಹೇಳ್ತದು ಅವಕ್ಕೆ ಮನದಟ್ಟು ಮಾಡೆಕ್ಕು. ಪರಕೀಯದ ಧಾಳಿಂದ ನಾವು ಸೋತ ಕತೆ ಇದ್ದರೆ, ಅದಕ್ಕೆ ನಮ್ಮವರ ಪಿತೂರಿಯೇ ಕಾರಣ ಹೊರತು ನಮ್ಮವರ ಶಕ್ತಿ ದೌರ್ಬಲ್ಯಂದ ಅಲ್ಲ ಹೇಳ್ತದರ ಮನವರಿಕೆ ಮಾಡೆಕ್ಕು.

  5. ಬೈಲಿನವರ ಜೊತೆ ಒಂದರಿ ಇಡೀ ವಿಶ್ವ ಪರ್ಯಟನೆ ಮಾಡಿದ ಅನುಭವ ಆತು… ಒಪ್ಪಣ್ಣನ ಲೇಖನ ಶೈಲಿಗೆ ನಮೋ ನಮ:

  6. ಎಂಟೆಬೆ ಸುದ್ದಿ ಅವತ್ತು ಓದಿದ್ದು ನೆಂಪಾತು.ಮತ್ತೆ ಮೊಗಾಡಿಷು ಹೇಳುವಲ್ಲೂ ಹೀಂಗೆ ಆಯಿದಡ.

  7. ಒಪ್ಪಣ್ಣ ಅಂತರಾಷ್ಟ್ರೀಯ ಮಟ್ಟದ ಶುದ್ದಿಯನ್ನುದೆ ಬೈಲಿಂಗೆ ಕೊಟ್ಟದು ಲಾಯಕಾಯಿದು. ರಾಷ್ಟ್ರ ಪ್ರೇಮದೊಟ್ಟಿಂಗೆ ಸಾಭಿಮಾನ ಪ್ರತಿಯೊಬ್ಬಂಗೂ ಬೇಕೇ ಬೇಕು. ನಾವು ನಮ್ಮದು ಹೇಳ್ತ ಪ್ರೀತಿ ಬೇಕು, ಎನ್ನದು ಎಲ್ಲವೂ ಎನಗೇ ಹೇಳುವ ಭಾವನೆ ಬಪ್ಪಲಾಗ.

  8. ಒಪ್ಪಣ್ಣ,
    ಈ ಶುದ್ದಿ ಓದಿ ಬೆಂಗ್ಳೂರಿನ ಈ ಚಳಿಯೊಳಿರ್ದುಂ ಬೆಮರ್ತನ್ ಹೇಳಿ ಆತಿದ. ಇಸ್ರೇಲಿನ ಕತೆಯೇ ಹಾಂಗಿದ್ದು.

  9. ಇ೦ದು ಅಮೇರಿಕದ ಹಣಕಾಸು ವೆವಸ್ತೆಯ ನಿಯ೦ತ್ರಣ ಈ ಯೆಹೂದಿಗಳ ಕೈಲಿಯೇ ಇಪ್ಪದು.ಇಸ್ರೇಲಿನ ಗುಪ್ತಚರ ಇಲಾಖೆ ‘ಮೊಸಾದ್ ‘ ಭಾರೀ ಹುಷಾರಿ ಹೇಳಿ ಲೆಕ್ಕ.ಸುತ್ತಲೂ ಧರ್ಮಾ೦ಧಕಾರ ತು೦ಬಿದ್ದರೂ ನೆಡೂಕೆ ಧೈರ್ಯಲ್ಲಿ ಬದುಕ್ಕುವ ಈ ದೇಶದವು ನಿಜಕ್ಕೂ ಗಟ್ಟಿಗ೦ಗೊ.
    ಒಳ್ಳೆ ಶುದ್ದಿ,ಒಪ್ಪಣ್ಣಾ.

  10. ದಕ್ಷಿಣ ಕನ್ನಡದ ಹವ್ಯಕ° ಎಲ್ಲಿ? ಇಸ್ರೇಲ್ ಎಲ್ಲಿ?
    ಒಪ್ಪಣ್ಣ ಸೀದಾ ಅಂತರಾಷ್ಟ್ರೀಯ ವಿಷಯಕ್ಕೆ ಹಾರಿದ್ದು ಕುಷಿ ಆತು. ಇಸ್ರೇಲಿನೋರ ಸಾಹಸ ನವಗೆ ಪ್ರೇರಣೆ ಕೊಡೆಕ್ಕು.
    ಒಳ್ಳೆ ಶುದ್ದಿ ಕೊಟ್ಟದಕ್ಕೆ ಧನ್ಯವಾದಂಗ.

  11. ಪಷ್ಟುಕ್ಲಾಸು ಶುದ್ದಿ. ಮೊಳೆಯಾರ ಅಜ್ಜ° ಹೇಳಿದಾಂಗೆ “ಅದು ಅವರಿಂದ ಆದ ಕಾರಣ ಎಡಿಗಾತು. ನಮ್ಮಿಂದ ಮತ್ತು ಏನೆಡಿಗಾವ್ತಿತ್ತಿಲ್ಲೆ”.- ಹೀಂಗೆ ಹೇಳ್ತೋರೇ ಹೆಚ್ಚಿಗೆ ಇರ್ಸು ನಮ್ಮಲ್ಲಿ . ಆಯೇಕು ಮಾಡೇಕು ಹೇಳ್ತವು ಬೆರಳೆಣಿಕೆಲಿ ಇಪ್ಪೋರಿಂಗೆ ಸಪೋರ್ಟು ಮಾಡ್ತೋರು ತುಂಬಾ ಕಮ್ಮಿ, ಇನ್ನು ಕೆಲವರು ಮರೆ ಎಡೆಕ್ಕಿಲಿ ಕೂದೊಂಡು ಕೆಕೆಪೆಕೆ ಹೇದೊಂಡು ‘ಬೇಕಾತೋ ಈ ಕೆಲಸ’ ಹೇದು ಹೇಳ್ವವು. ಅಡಿಯಂಗೆ ಪಸೆ ಬಂದರೂ ಉದ್ದಿಗೊಂಡು ಕೂಬೋರ ಕಟ್ಟ್ಯೋಂಡು ಮಾಡ್ತೆಂತರ!. ಮಾನಮರ್ಯಾದಿ ಹೋದರೂ ಶಾಂತಿಯ ಬಿಡ್ಳಾಗ ಹೇದು ದೊಡ್ಡ ಮುಂಡಾಸಿನವು ಕೂದರೆ ಅಲ್ಯಾಣೋರ ಹಾಂಗೆ ಜನಂಗಳೇ ಎಳಗದ್ದೆ ನಿಮುರ್ತಿ ಇಲ್ಲೆ. “ಹೋದರೆ ಕಲ್ಲು, ಸಿಕ್ಕಿರೆ ಮಾವಿನಣ್ಣು”. ಈಸುಬ್ಬೂ ಇರಳಿ ಅಂತೋಣಿಯೂ ಇರಲಿ ಆದರೆ ಎಲ್ಲೋರು ಭಾರತೀಯರು, ಮನುಷ್ಯರು ಹೇಳ್ವ ಬೋಧ ಇರಳಿ ಹೇದು ಹೇಳ್ವೊ° ಅಲ್ಲದೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×