Oppanna.com

ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..!

ಬರದೋರು :   ಒಪ್ಪಣ್ಣ    on   20/01/2017    2 ಒಪ್ಪಂಗೊ

ನೆಕ್ರಾಜೆ ಅಪ್ಪಚ್ಚಿಯ ಮನೆಲಿ ಒಂದು ಹೋರಿ ಇದ್ದು. ಭಯಂಕರ ದೊಡ್ಡ ಕಾಂಕ್ರೇಜ್ ಹೋರಿ ಅದು. ಮಠದ ಕಾಮದುಘ ಯೋಜನೆಲಿ ತರುಸಿದ್ದದು. ಅವು ಸ್ವತಃ ಕೃಷಿಕರೂ ಆದ ಕಾರಣ ಆ ಹೋರಿ ಅವರ ಮನೆಲಿ ತುಂಬ ಉಪಕಾರಿಯಾಗಿ ಇದ್ದು.
ನೆಕ್ರಾಜೆ ಅಪ್ಪಚ್ಚಿಯ ನಿಂಗೊಗೆ ನೋಡಿ ಗೊಂತಿಕ್ಕು, ಹದಾ ಎತ್ತರದ, ಸಪೂರದ ವ್ಯಕ್ತಿತ್ವ.
ಕಾಂಕ್ರೇಜ್ ಹೋರಿ – ಹೇದರೆ ದೈತ್ಯ ದೇಹಿ.

ಆದರೆ, ಒಂದರಿಯೂ ಅವಕ್ಕೆ ಆ ಹೋರಿಯ ಹಿಡುದು ನಿಲ್ಲುಸುವ ಸಮಸ್ಯೆ ಬಯಿಂದಿಲ್ಲೆ.
ಏಕೆ? ಎರಡು ಕಾರಣಂಗೊ,
ಅವಕ್ಕೆ ಹೋರಿಯ ನಿಡಿವ ಹಿಕ್ಮತ್ತು ಗೊಂತಿದ್ದು.
ಎರಡ್ಣೇದು, ಆ ಹೋರಿಗೆ ಅವರ ಗುರ್ತ ಇದ್ದು; ಹಾಂಗಾಗಿ ಅವು ನಿಲ್ಲು ಹೇಳಿಯಪ್ಪಗ ನಿಲ್ಲೇಕು ಹೇದು ಅರ್ತ ಆವುತ್ತು.
ಇದೆಲ್ಲ ಈಗ ಏಕೆ ನೆಂಪಾವುತ್ತು ಹೇದರೆ….
~
ಮೊನ್ನೆ ಶೆಂಕ್ರಾಂತಿ ಬಪ್ಪ ಲಾಗಾಯ್ತು ಹಲವೂ ಸರ್ತಿ ಈ ಶುದ್ದಿ ಕೇಳಿತ್ತು.
ಎಂತರ?
ಜಲ್ಲಿಕಟ್ಟು ಸಂಪ್ರದಾಯಕ್ಕೆ ನಿಷೇಧ – ಹೇದು.
ಅದೆಂತರ? ಅದರ ಪೂರ್ವಾಪರ ಎಂತರ?
ಬೆತ್ತಸರವು ಬಾವನ ಮದುವೆಲಿ ಚೆನ್ನೈ ಬಾವ ಸಿಕ್ಕಿದವು, ಅವರತ್ರೆ ಕೇಳಿದೆ. ಅವಕ್ಕೆ ಗೊಂತಿಪ್ಪಷ್ಟೂ ವಿವರಲ್ಲಿ ಹೇಯಿದವು.
~
ಜಲ್ಲಿಕಟ್ಟು ಹೇದರೆ ಪೆರ್ಚಿ ಬಂದ ಹೋರಿಯ ಹಿಡುದು ನಿಲ್ಲುಸುವ ಆಟ. ಇಷ್ಟು ವಿವರ ಕೇಳುವಾಗಳೇ ರೋಮ ಕುತ್ತ ಅಕ್ಕನ್ನೇ. ಗೆನಾ ಹೋರಿಯ ಕಾಂಬಗಳೇ ಹೆದರಿ ಮೈ ಅಕ್ಕಿ ಕಟ್ಟುಗು; ಅಂತದ್ದರ್ಲಿ ಪೆರ್ಚಿ ಬಂದ ಮತ್ತೆ ಕೇಳೇಕೋ!

ತುಂಬಾ ಮೊದಲಿಂಗೆ, ತೆಮುಳು ಸಂಪ್ರದಾಯದ ಪ್ರಕಾರ – ಹಳ್ಳಿಗಳಲ್ಲಿಪ್ಪ ಮನೆಗಳಲ್ಲಿ ಒಂದು ಸಂಪ್ರದಾಯ ಇತ್ತಾಡ.
ಮದುವೆ ಪ್ರಾಯಕ್ಕೆ ಬಂದ ಕೂಸಿನ ಅಪ್ಪ, ಯೋಗ್ಯ ವರನ ಅನ್ವೇಶಣೆಗೆ ಕಂಡುಗೊಂಡ ದಾರಿ ಅದು. ಸಾಮಾನ್ಯವಾಗಿ ಎಲ್ಲೋರುದೇ ಗೋಪಾಲರು ಆದ ಕಾರಣ, ದನ ಎತ್ತುಗಳ ಸರೀ ಗುರ್ತ ಇದ್ದತ್ತು; ದನ-ಎತ್ತುಗೊಕ್ಕೂ ಜೆನಂಗಳ ಸರೀ ಗುರ್ತ ಇದ್ದತ್ತು.
ಹಾಂಗಾಗಿ, ಕೂಸಿನ ಅಪ್ಪ – ವರಾನ್ವೇಷಣೆಗೆ ಎಂತ ಮಾಡುದು ಹೇದರೆ, ಅವರ ಮನೆಯ ಒಂದು ಘಟ್ಟಿ ಹೋರಿಯ ಹಿಡುದು ನಿಲ್ಲುಸುವ ಪಂಥ. ಯೇವ ಆಣು ಆ ಕೆಲಸ ಸಮರ್ಥವಾಗಿ ಮಾಡ್ತೋ, ಅದು ತನ್ನ ಮಗಳ ರಕ್ಷಣೆಗೆ ಸೂಕ್ತ – ಹೇದು ತೀರ್ಮಾನ ಮಾಡಿ, ಅದಕ್ಕೆ ಮಗಳ ಧಾರೆ ಎರದು ಕೊಡ್ತ ಸಂಪ್ರದಾಯ ಇದ್ದತ್ತು.
ಕ್ರಮೇಣ, ಇದೇ ಪಂಥದ ಕ್ರೀಡೆ ಮುಂದುವರುದು ಕೂಸಿನ ಕೊಡುದು ಅಲ್ಲ, ಪ್ರೈಸು ಕೊಡುದು – ಹೇದು ಬದಲಿತ್ತು.
ಎತ್ತಿನ ಕೊಂಬಿಲಿ ಚಿನ್ನ ಅಥವಾ ಬೆಳ್ಳಿಯ ಪಾವೆಲಿ ಕಟ್ಟಿ ಇರ್ತು; ಉಶಾರಿ ಮಾಣಿಗೊ ಅದರ ಹಿಡುದು ನಿಲ್ಲುಸಿ ಆ ನಾಣ್ಯ ಪೀಂಕುಸಿರೆ ಅದು ಅವಕ್ಕೆ – ಹೇದು ಲೆಕ್ಕ.
ಇದುವೇ ಮುಂದೆ ಜಲ್ಲಿಕಟ್ಟು ಹೇದು ಪ್ರಸಿದ್ಧ ಆತು.
ಶೆಂಕ್ರಾಂತಿಲಿ ದನಗಳ ಹಬ್ಬ, ಜಾತ್ರೆ ಆವುತ್ತಲ್ಲದೋ – ಅದೇ ದಿನ ಈ ಜಲ್ಲಿಕಟ್ಟುದೇ ಮಾಡ್ಳೆ ಸುರು ಆತು; ನಮ್ಮ ಊರಿನ ಕಂಬುಳದ ಹಾಂಗೆ.
~
ಎಲ್ಲವೂ ಸರಿ ಇದ್ದತ್ತು.
ಆದರೆ, ಈಗೀಗ ಮನುಷ್ಯರಿಂಗೆ ಸರಿಯಾಗಿ ಹೋರಿಗಳ ಹಿಡುದು ನಿಲ್ಲುಸ್ವ ಹಿಕ್ಮತ್ತು ಗೊಂತಿಲ್ಲೆ, ಹೋರಿಗೊಕ್ಕೂ ಸರಿಯಾಗಿ ಮನುಷ್ಯರ ಗುರ್ತ ಅಪ್ಪಲೆ ಅವಕಾಶ ಇಲ್ಲೆ.
ಪ್ರೈಸು ಸಿಕ್ಕುತ್ತು, ಚಿನ್ನ ಸಿಕ್ಕುತ್ತು ಹೇದು ಹೋರಿಗಳ ಬಲುಗಿ, ಬೀಲ ತುಂಡು ಮಾಡಿ, ಬೇನೆ ಮಾಡಿ, ಕುತ್ತಿ, ಒತ್ತಿ – ಎಲ್ಲ ಮಾಡಿ ನಿಲ್ಲುಸುಲೆ ಪ್ರಯತ ಮಾಡ್ತವಾಡ ಆಣುಗೊ. ಅಷ್ಟಪ್ಪಗ ಸ್ವಾಭಾವಿಕವಾಗಿ ಹೋರಿಗೊಕ್ಕೆ ಆದ ಬೇನೆಯ ಪ್ರತಿಫಲನ ಆಗಿ ಅವುದೇ ಕುತ್ತಿ, ಗುದ್ದಿ, ತಾಡಿ, ಮೆಟ್ಟಿ ಎಲ್ಲ ಮಾಡ್ತವು.
ಪರಸ್ಪರ ಇಬ್ರಿಂಗೂ ಬೇನೆ ವೇದನೆ ಪೆಟ್ಟು ಗುಟ್ಟು ಸಾವು ನೋವುದೇ ನೆಡೆತ್ತಾಡ.
ಇದರ ಕಂಡ ಮೆಡ್ರಾಸು ಹೈಕೋರ್ಟು ೨೦೦೬ರಲ್ಲಿ ಜಲ್ಲಿಕಟ್ಟು ಹೇದರೆ ಹಿಂಸಾತ್ಮಕ ಕ್ರೀಡೆ ಆದ ಕಾರಣ ಇದು ಬೇಡ – ಹೇದು ತೀರ್ಪು ಕೊಟ್ಟತ್ತಾಡ. ಅದಕ್ಕೆ ಪ್ರಾಣಿದಯಾ ಸಂಘ ಕೊಟ್ಟ ಅರ್ಜಿಯೂ ಒಂದು ಕಾರಣ.
~
ಆದರೆ, ತೆಮುಳುನಾಡು ಸುಮ್ಮನೆ ಕೂರ್ತೋ? ಇಲ್ಲೆ.
೨೦೦೯ರಲ್ಲಿ ಶಾಸನ ಸಭೆ ಒಂದು ಕಾನೂನೇ ಮಾಡಿತ್ತಡ, ಜಲ್ಲಿಕಟ್ಟು ಸಿಂಧು – ಹೇದು.
~
೨೦೧೧ ರಲ್ಲಿ ಹೇಮಾ ಮಾಲಿನಿ ಒಂದು ಅರ್ಜಿ ಹಾಕಿತ್ತಾಡ, ಜಲ್ಲಿಕಟ್ಟು ಕೊನೆ ಆಯೇಕು ಹೇದು. ಅದರ ಪುರಸ್ಕರೈಸಿ ಸರ್ವೋಚ್ಚ ನ್ಯಾಯಾಲಯ ಅಪ್ಪಪ್ಪು ಹೇಳಿತ್ತಾಡ.
ಮೆಡ್ರಾಸಿನ ಮೆಡ್ರಾಸು ಕೋರ್ಟೇ ಬೇಡ ಹೇಯಿದ ಮತ್ತೆ ಸುಪ್ರೀಮು ಕೋರ್ಟು ಹೇಳಿದ್ದರ್ಲಿ ಏನೂ ಆಶ್ಚರ್ಯ ಇಲ್ಲೆ – ಹೇಯಿದವು ಚೆನ್ನೈ ಬಾವ.
~
ಇದರೆಡಕ್ಕಿಲಿ, ಅಂಬಗ ಆಡಳ್ತೆ ನೆಡೆಶಿಗೊಂಡಿದ್ದ ಸೋನೆ ಗಾಂಧಿ ಸರ್ಕಾರ ಜಲ್ಲಿಕಟ್ಟು ಬೇನು ಮಾಡುವ ಸರ್ವ ಪಯತ್ನ ಮಾಡಿ ಯಶಸ್ವಿ ಆತಾಡ.
~
ಇದರ ಎಡಕ್ಕಿಲಿಯೂ ಸ್ವಾಭಿಮಾನಿ ತೆಮುಳರು ೨೦೧೫ ರ ಮಕರ ಶೆಂಕ್ರಾಂತಿಲಿ ಜಲ್ಲಿಕಟ್ಟು ಏರ್ಪಾಡು ಮಾಡಿದವಡ. ನ್ಯಾಯಂಗದ ಆದೇಶವ ಧಿಕ್ಕರಿಸಿ ಮಾಡಿದ್ದಕ್ಕೆ ಪೋಲೀಸರು ಹತ್ತೈವತ್ತು ಜೆನರ ಒಳ ಹಾಕಿದವಾಡ.
~
ಎರಡು ವಾರ ಹಿಂದೆ, ಈಗಾಣ ಸರ್ಕಾರ ಜಲ್ಲಿಕಟ್ಟಿಂಗೆ ವಿರೋಧ ಇಲ್ಲೆ – ಹೇಳ್ತ ಒಂದು ಆದೇಶ ಕೊಟ್ಟತ್ತಾಡ. ಆದರೆ, ಇದಾದ ಐದೇ ದಿನಲ್ಲಿ ಸುಪ್ರೀಂ ಕೋರ್ಟು ಈ ತೀರ್ಮಾನವ ನಿಲ್ಲುಸಿತ್ತಾಡ.
ಈಗ ತೆಮುಳುನಾಡಿನ ಜೆನಂಗೊಕ್ಕೆ ಮನಸ್ಸಿದ್ದರೂ, ತೆಮುಳು ನಾಡಿನ ಶಾಸಕಾಂಗ, ಕಾರ್ಯಾಂಗಕ್ಕೆ ಅಕ್ಕಾದರೂ, ಸ್ವತಃ ಕೇಂದ್ರ ಸರ್ಕಾರಕ್ಕೇ ಬೇಕೂಳಿ ಇದ್ದರೂ – ನ್ಯಾಯಾಂಗಕ್ಕೆ ಬೇಡ ಹೇದು ಆಯಿದಾಡ. ಹಾಂಗಾಗಿ ಮುಂದುವರಿತ್ತಾ ಇಲ್ಲೆ.
~
ಜಲ್ಲಿಕಟ್ಟಿನ ಸಮಸ್ಯೆ ಸುರು ಆದ್ಸು ಹೋರಿಗೊಕ್ಕೂ, ಮನುಷ್ಯರಿಂಗೂ ಆದ ಸಾವು ನೋವುಗಳಿಂದಾಗಿ. ಇದಕ್ಕೆ ಕಾರಣ – ಪರಸ್ಪರ ಗುರ್ತದ ಕೊರತೆ.

ಹೋರಿಗೊಕ್ಕೆ ಮನುಷ್ಯರ ಸರೀ ಗುರ್ತ ಮಾಡುಸೆಕ್ಕು, ದೊಡ್ಡ ಆದ ಕೂಡ್ಳೆ ಮಾರದ್ದೆ ಮನೆಲೇ ಗುರ್ತ ಮಾಡುಸಿರೆ ಹೀಂಗಾಗ.
ಮನುಷ್ಯರಿಂಗೆ ಮೊದಲೇ ಗುರ್ತ ಇಲ್ಲೆ, ಹೋರಿಗಳ ಎಲ್ಲಿ ಹೇಂಗೆ ಹಿಡ್ಕೊಳೆಕ್ಕೂ ಹೇದು.
ಅಲ್ಲದೋ?
~
ಒಂದೊಪ್ಪ: ದನಗೊಕ್ಕೂ, ಜನಂಗೊಕ್ಕೂ ಗುರ್ತ ಮಾಡುಸುಲೆ ಗೋಯಾತ್ರೆಗಳೇ ಆಯೇಕಷ್ಟೆ.

2 thoughts on “ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..!

  1. ಮಂಗಲ ಗೋಯಾತ್ರೆ ಯಶಸ್ವಿಯಾಗಲಿ. ದನಂಗಳ ಬಗ್ಗೆ ಜೆನಂಗವಕ್ಕೆ ಗುರ್ತ ಆಗಲಿ. ಹರೇರಾಮ.

  2. ಅಪ್ಪಪ್ಪು. ಪೆರ್ಚಿ ಇಪ್ಪ ಹೋರಿಗಳ ಹಿಡುದು ನಿಲ್ಲುಸುದು ಸಮ….. ಆದರೆ ಪೆರ್ಚಿ ಬರುಸಿ ಅದರ ಕೆಣಕಿ ತಾನೂ ಹೊಡಿ ಮಾಡಿಗೊಂಬದೆಂತದಕ್ಕೆ ಅಲ್ಲದಾ

    ಮನ್ನೇ ….೨೦ ಏನೋ ಹೋದವಡಾ !! ಬೇಕೋ ಅಂಬಗ ಹಾಂಗಿರ್ತ ಸಾಹಸ ?! ಇದಕ್ಕೂ ಗೋರಿಮೆಂಟು ಪರಿಹಾರ ಕೊಡೆಕೊ ?!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×