Oppanna.com

ಜಾತಿ ಮೀರಿದ ಬಸವಣ್ಣಂಗೆ ಧರ್ಮದ ಉರುಳು..!!

ಬರದೋರು :   ಒಪ್ಪಣ್ಣ    on   24/04/2015    4 ಒಪ್ಪಂಗೊ

ನೀರ್ಚಾಲಿಲಿ ವಿಷು ವಿಶೇಷ ಸ್ಪರ್ಧೆಯ ಕಾರ್ಯಕ್ರಮದ ಗವುಜಿ ಮುಗಿತ್ತಷ್ಟೆ. ಓಡಾಡಿ ಬಚ್ಚಿದ ಭಾವಂದ್ರು ಕಲ್ಮಡ್ಕದ ಎಣ್ಣೆ ಕಿಟ್ಟಿ ಕಾಲುನೀಡುತ್ತಾ ಇದ್ದವು.
ಅರ್ತಿಕಜೆ ಅಜ್ಜನನ್ನೂ ಮಾಡಾವು ಮಾವನನ್ನೂ ಕರಕ್ಕೊಂಡು ಬಂದ ಮಾಷ್ಟ್ರುಮಾವಂಗೆ ಗಾಡಿ ಬಚ್ಚಲು ಮುಗಿತ್ತಷ್ಟೆ.
ಮುಳಿಯಭಾವಂಗೆ ಯೇನಂಕೂಡ್ಳಿನ ಕಾಯಿಚೆಕ್ಕೆ ದೋಸೆಯ ಪರಿಮ್ಮಳ ಮರೆತ್ತಷ್ಟೆ, ಡೈಮಂಡುವಿಂಗೆ ಬಸ್ಸಿಲಿ ಕಚ್ಚಿದ ಸವಣೆಯ ಮೂರಿ ಮೂಗಿಂದ ಹೋವುತ್ತಷ್ಟೆ, ದೊಡ್ಡಳಿಯಂಗೆ ಮೈಸೂರುಪಾಕು ತಿಂದ ರುಚಿ ಬಾಯಿಂದ ಹೋವುತ್ತಷ್ಟೆ.
ಮಧುರಂಕಾನದ ನಕ್ಷತ್ರ ಹಣ್ಣು ರುಚಿ ಟೀಕೆಮಾವಂಗೆ ಸಿಕ್ಕಿದ್ದು. ಕೊಟ್ಟಿಗೆಯ ರುಚಿ ಬೊಳುಂಬುಮಾವನ ಬಾಯಿಲಿದ್ದು. ಈಗಳೇ ಅದರ ಮರವಲೆ ಆರಿಂಗೂ ಮನಸ್ಸಿಲ್ಲೆ.
ಒಟ್ಟಿಲಿ ಬೈಲಿಂಗೆ ಒಂದು ಅಭೂತಪೂರ್ವ ಸಾಹಸವ ಮರವಲೆ ಮನಸ್ಸೇ ಇಲ್ಲೆ! ಅದೇ ಗುಂಗು, ಅದೇ ಕುಷಿ.
ಕುಶಿಲೇ ಒಂದು ವಾರ ಕಳಾತು. ಮತ್ತೊಂದು ಶುದ್ದಿ ಹೇಳ್ತ ಸಮೆಯವೂ ಬಂತು.

~
ಪಾರೆ ಮಗುಮಾವನ ಮನೆಗೆ ಹೋಗಿತ್ತಿದ್ದೆ ಮೊನ್ನೆ. ಮುನ್ನಾಣ ದಿನ ಜಾತಿ ಗಣತಿಗೆ ಬಂದ ಕಾರಣವೋ, ಆ ದಿನ ಪೇಪರಿಲಿ ಒಂದು ಶುದ್ದಿ ಬಂದ ಕಾರಣವೋ – ಅವಕ್ಕೆ ಮೋಡ ಬಂದಿತ್ತು; ಮೂಡು ಸರಿ ಇದ್ದತ್ತಿಲ್ಲೆ.
ಸಾಮಾನ್ಯವಾಗಿ ಅವಕ್ಕೆ ಒಂದರಿ ಬಂದ ಪಿಸುರು ಕನಿಷ್ಟ ನಾಕು ದಿನ ಒಳಿತ್ತ ಕಾರಣ ಒಪ್ಪಣ್ಣಂಗೂ ಆ ಪಿಸುರಿನ ಪ್ರತ್ಯಕ್ಷ ದರ್ಶನ ಆತು. ಪಿಸುರು ಎಂತಗೆ? ಉಮ್ಮಪ್ಪ.
ಮೇಗಂದ ಮೇಗೆ ಕೇಳಿರೆ ಅರಡಿಯ, ಅವು ಪುರುಸೋತಿಲಿ ಇಪ್ಪಗಳೇ ಮಾತಾಡೆಕ್ಕು. ಹಾಂಗೆ ಅವರ ಪುರುಸೊತ್ತು ವರೇಗೆ ಮಗುಅತ್ತೆ ಕೊಟ್ಟ ಚಾಯ ಕುಡ್ಕೊಂಡು ಕಾದೆ.
ಬೆಶಿ ಚಾಯ ಒಳ ಇಳುದು ತಣಿವಗ ಮಾತಾಡ್ಳೆ ಸುರು ಮಾಡಿದವು.

~
ಸರ್ಕಾರ ಈಗ ಜಾತಿ ಗಣತಿಗೆ ಸುರುಮಾಡಿದ್ದಾಡ. ಪ್ರತಿಯೊಬ್ಬನೂ ಯೇವ ಜಾತಿ, ಯೇವ ಉಪಜಾತಿ, ಅವನ ಜಾತಿಗೆ ಯೇವ ಹೆಸರಿದ್ದು, ಯೇವೆಲ್ಲ ಉಪ ಹೆಸರಿದ್ದು ಇತ್ಯಾದಿಗಳ ಎಲ್ಲ ಪಟ್ಟಿ ಮಾಡಿ, ಪಟ್ಟಿ ಮಾಡಿ, ಪಟ್ಟಿಮಾಡಿ.. ಎಂತ ಮಾಡ್ತು? ಉಮ್ಮಪ್ಪ.
ಅಂತೂ ಜಾತ್ಯತೀತ ಸರ್ಕಾರ ಜಾತಿ ಲೆಕ್ಕ ಹಾಕುಲೆ ಸುರು ಮಾಡುದಂತೂ ನಿಜ.
ಜಾತಿ ಎಲ್ಲ ಲೆಕ್ಕಾಚಾರ ಆದ ಮತ್ತೆ – ಯೇವ ಜಾತಿಯ ಎಷ್ಟು ಜೆನ ಇದ್ದವು, ಎಂತೆಲ್ಲ ಮಾಡ್ತಾ ಇದ್ದವು – ಹೇದು ಸರಕಾರಕ್ಕೆ ಅರಡಿಗಾವುತ್ತಡ.
ಉಳುದ್ದೆಲ್ಲ ಸರಿ, ಆದರೆ ಜಾತಿ ಲೆಕ್ಕಾಚಾರ ಎಂತಕಪ್ಪಾ – ಹೇದು ಪಾರೆ ಮಗುಮಾವಂಗೆ ಪಿಸುರು.
ಮದಲಿಂಗೆ ಒಬ್ಬನ ಕಂಡ ಕೂಡ್ಳೆ ಯೇವ ಜಾತಿ ಹೇದು ತಿಳಿವ ಕುತೂಹಲ ಇದ್ದತ್ತು. ಮತ್ತೆ ಹಾಂಗೆ ಮಾಡ್ಳಾಗ – ಹೇದು ಸರ್ಕಾರ ನಿರ್ಣಯ ಮಾಡಿತ್ತಾಡ. ಈಗ ಪುನಾ “ನಿಮ್ಮದು ಯೇವ ಜಾತಿ” – ಹೇದು ಕೇಳ್ತಾಂಗೆ ಆತು, ಅದೂ ಸರ್ಕಾರಂದಲೇ!!
ಎಂತಾ ದರಿದ್ರಾವಸ್ಥೆ ಬಂತಪ್ಪಾ – ಹೇದು ಮಗುಮಾವಂಗೆ ಪಿಸುರು, ಬೇಜಾರ.

~
ಅದರೊಟ್ಟಿಂಗೇ ಇನ್ನೊಂದು ಶುದ್ದಿ ಪೇಪರಿಲಿ ಬತ್ತಾ ಇದ್ದಾಡ. ಗಟ್ಟದ ಮೇಗಾಣ ಕೆಲವು ಸ್ವಾಮಿಗೊ ಒಟ್ಟು ಸೇರಿಗೊಂಡು “ವೀರಶೈವ ಒಂದು ಸ್ವತಂತ್ರ ಧರ್ಮ” – ಹೇದು ನಿಗಂಟು ಮಾಡಿದ್ದವಾಡ.
ಅದರಂತೆ ನೆಡಕ್ಕೊಳೇಕು, ಹಿಂದೂ ಧರ್ಮವ ಬಿಟ್ಟು ದೂರ ಹೋಯೇಕು – ಹೇದು ಕರೆ ಕೊಟ್ಟಿದವಾಡ!
ಎಂತಾ ದುರವಸ್ಥೆ ಅಪ್ಪೋ! ಮೊನ್ನೆಷ್ಟೇ ಬಸವ ಜಯಂತಿ ಬಂತು. ಅದರ ಒಟ್ಟಿಂಗೇ ಈ ದುರದೃಷ್ಟಕರ ಹೇಳಿಕೆ.

ಬಸವಣ್ಣ ಆರು?
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ – ಹೇದರೆ, ಭಾರತಲ್ಲಿ ಧರ್ಮಕ್ಕೆ ಯೇವ ಯೇವಗ ಚ್ಯುತಿ ಬಂತೋ, ಅಂಬಗೆಲ್ಲ ತಾನು ಅವತಾರ ಎತ್ತಿ ಉದ್ಧರುಸುತ್ತೆ ಹೇದು – ಭಗವದ್ಗೀತೆಲಿ ಹೇಳಿ ತೋರ್ಸಿದ್ದ°. ಅದರ ಅಪ್ಪುಮಾಡಿಯೂ ತೋರ್ಸಿದ್ದ°.
ಬುದ್ಧ ಆಗಿ, ಶಂಕರಾಚಾರ್ಯ ಆಗಿ, ತುಳಸೀದಾಸ ಆಗಿ, ಕಬೀರದಾಸ ಆಗಿ – ಜನರಲ್ಲಿ ಧರ್ಮಶ್ರದ್ಧೆ ಬೆಳೆಶಿ ಹಿಂದೂ ಧರ್ಮವ ಉದ್ಧರುಸಿದ್ದವು.
ಹಾಂಗೇ, ಹನ್ನೆರಡ್ಣೇ ಶತಮಾನಲ್ಲಿ, ಕರ್ನಾಟಕದ ಬಿಜಾಪುರದ ಬಿಜಾಪುರ ಹೊಡೆಲಿ ಧರ್ಮೋದ್ಧಾರಕ್ಕೆ ಅವತಾರ ಆತು. ಬಾಗೇವಾಡಿ – ಹೇಳ್ತಲ್ಲಿ ಜನನ ಆತಾಡ.
ಆ ಸಮೆಯಲ್ಲಿ ಸಮಾಜಲ್ಲಿ ಸುಮಾರು ಪಿಡುಗುಗೊ, ಅಜ್ಞಾನಂಗೊ ಇದ್ದತ್ತಾಡ. ಅದರೆಲ್ಲ ಸರಿಮಾಡಿ ಧರ್ಮವ ಉದ್ಧರುಸುತ್ತ ಕಾರ್ಯಲ್ಲಿ ಬಸವಣ್ಣ ಹಲವೂ ಜೆನರ ಸೇರ್ಸಿ ಕೈ ಜೋಡುಸಿದನಾಡ.
ಅಸ್ಪೃಶ್ಯತೆ, ಅಜ್ಞಾನಂಗಳ ತೊಳದು ಹಾಕಿ ಹೊಸ ಸುಂದರ ಏಕರೂಪದ ಸಮಾಜ ಮಾಡುವ ಕಾರ್ಯಕ್ಕೆ ಹೆರಟನಾಡ.

~
ಮಂತ್ರಂಗೊ ಎಲ್ಲವೂ ಸಂಸ್ಕೃತಲ್ಲಿ ಇದ್ದತ್ತು, ಗಟ್ಟದ ಗೌಡುಗೊಕ್ಕೆ ಸಂಸ್ಕೃತ ಎಲ್ಲಿ ಬತ್ತು!? – ಅದಕ್ಕೆ ಸಾಮಾನ್ಯ ಜೆನಂಗೊಕ್ಕೆ ಅರ್ಥ ಅಪ್ಪಲೆ ಬೇಕಾಗಿ ಆ ಸಂಸ್ಕೃತ ಮಂತ್ರಂಗಳ ಸರಳ ಮಾತುಗನ್ನಡಲ್ಲಿ ಮಾಡಿ ಕೊಟ್ಟನಾಡ.
ಸುಮಾರು ವಚನಂಗಳ ಬರದು ಜೆನಂಗೊಕ್ಕೆ ಕಲಿಶಿದವಾಡ. ಬಟ್ಟಮಾವ ಪೂಜೆಲಿ ಮಣಿ ಆಡುಸಿಗೊಂಡು – ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ – ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಹೇಳ್ತ ವಚನ ಆತು.
ಅವರೊಟ್ಟಿಂಗೆ ಸಮಾನ ಮನಸ್ಕರೂ ಸೇರಿ ಒಂದು ಕ್ರಾಂತಿ ಆತು. ದೊಡ್ಡ ಮಟ್ಟಿನ ಬಳಗ ಬೆಳದತ್ತು.
ಕ್ರಮೇಣ ಈ ವಚನಂಗಳೇ ಒಂದು ದೊಡ್ಡ ಸಾಹಿತ್ಯ ಆಗಿ ರೂಪುಗೊಂಡತ್ತಡ. ಅದುವೇ ವಚನ ಸಾಹಿತ್ಯ.
ಶಿವನ ಭಕ್ತರಾದ ಈ ನಮುನೆ ಸನ್ಯಾಸಿಗೊಕ್ಕೆ “ಶಿವ ಶರಣರು” – ಹೇದು ಹೆಸರುದೇ ಆತಾಡ.
~

ಸಾವಿರಾರು ಜೆನಂಗೊ ಕ್ರಮೇಣ ಬಸವಣ್ಣನ ವಚನವ ಮೆಚ್ಚುಲೆ ಸುರು ಮಾಡಿದವಡ. ಜೆನಂಗೊ ಅವನ ಅನುಸರುಸಲೆ ಸುರುಮಾಡಿದವಾಡ. ಕ್ರಮೇಣ ಬಸವಣ್ಣಂಗೆ ಅನುಯಾಯಿಗೊ ಹುಟ್ಟಿ ಬೆಳದವಾಡ.
ಹುಟ್ಟಿನ ಜೆಲ್ಮಲ್ಲಿ ಯೇವದೇ ಜೀವನಪದ್ಧತಿಲಿ ಇದ್ದರೂ, ಮುಂದೆ ಅವೆಲ್ಲ ಈ ಶಿವಶರಣರ ಅನುಯಾಯಿಗೊ ಆದವಾಡ.
ಭಕ್ತಿಯ ಪೂಜೆಯೇ ಶಿವನ ಒಲುಸಿಗೊಂಬಲೆ ಇಪ್ಪ ದಾರಿ – ಹೇದು ಅವು ನಂಬಿಗೊಂಡವಾಡ.
ಆ ಕಾಲದ ಈ ಬೆಳವಣಿಗೆ ಹಿಂದೂ ಧರ್ಮದ ಅಭ್ಯುದಯಕ್ಕೆ ಕಾರಣ ಆತು. ಆಚಾರ ವಿಚಾರ ಗೊಂತಿಲ್ಲದ್ದ ಎಷ್ಟೋ ಜೆನಂಗೊ ಕ್ರಮೇಣ ಶಿವ ಶರಣರ ಅನುಯಾಯಿಗೊ ಅಪ್ಪಲೆ ಸುರು ಆದವಾಡ.
ಧರ್ಮದ ಸಂಪರ್ಕವೇ ಇಲ್ಲದ್ದೋರಿಂಗೆ ಕ್ರಮೇಣ ದೇವರ ಬಗ್ಗೆ, ಸಚ್ಚಾರಿತ್ರ್ಯದ ಬಗ್ಗೆ ಅರಿವಪ್ಪಲೆ ಸುರು ಆತಾಡ.

~
ಆದರೆ ಇಂದು?
ಯೇವ ಬಸವಣ್ಣ ಜಾತಿ-ಧರ್ಮವ ಮೀರಿ ನಿಂದಿದನೋ, ಅದೇ ಬಸವಣ್ಣನ ಶಿವಶರಣರು ಕೆಲವು ಜೆನ ಒಟ್ಟು ಸೇರಿ – ಎಂಗಳದ್ದು ಬೇರೆಯೇ ಒಂದು ಧರ್ಮ – ಹೇದು ಪ್ರಕಟ ಮಾಡಿದ್ದವು.
ಯೇವ ಹಿಂದೂ ಧರ್ಮವ ಒಳಿಶಲೆ, ಜೆನಂಗಳ ಸರಿ ಮಾಡ್ಳೆ ಬಸವಣ್ಣ ಪ್ರಯತ್ನಿಸಿದನೋ, ಆ ಹಿಂದೂ ಧರ್ಮವನ್ನೇ ಧಿಕ್ಕರುಸಿ ದೂರ ಹೋಪ ಬುದ್ಧಿವಂತಿಗೆ ಮಾಡ್ತಾ ಇದ್ದವು.
ನಿಜವಾಗಿಯೂ ಇದು ಭ್ರಾಂತಿನ ವಿಷಯ ಅಪ್ಪೋ – ಅಲ್ಲದೋ? ಕೇಳಿದವು ಪಾರೆ ಮಗುಮಾವ°.
~
ಧರ್ಮ ಜಾತಿ ಎಲ್ಲವನ್ನೂ ಮೀರಿದ ಮಹಾನ್ ವೆಗ್ತಿಗೊ ಈಗ ಮತ್ತೆ ಜಾತಿ-ಧರ್ಮದ ಕಟ್ಟಳೆಯ ಒಳ ಬಂದು ನಿಲ್ಲೆಕ್ಕಾದ ಪರಿಸ್ಥಿತಿ ಒಂದು.
ಆಡಳ್ತೆಲಿಪ್ಪ ಸರ್ಕಾರವೇ ಇದರ ಮುಂದೆ ನಿಂದು ಮಾಡುಸ್ಸು – ಇನ್ನೊಂದು.
ಎರಡುದೇ ದೌರ್ಭಾಗ್ಯದ ಸಂಗತಿ. ಇದರ ನೋಡಿದ್ದರೆ ಸ್ವತಃ ಆ ಬಸವಣ್ಣನೇ ಬೇಜಾರು ಮಾಡಿಗೊಳ್ತಿತ. ಅಲ್ದೋ?

~
ಒಂದೊಪ್ಪ: ಜಾತಿ ಮೀರಿದ ಮಹಾನ್ ಪುರುಷರು ಪುನಾ ಜಾತಿ ಬಂಧನಕ್ಕೆ ಇಳಿತ್ತಾ ಇಪ್ಪದು ದುಃಖಕರ.

4 thoughts on “ಜಾತಿ ಮೀರಿದ ಬಸವಣ್ಣಂಗೆ ಧರ್ಮದ ಉರುಳು..!!

  1. ಬಸವ ತತ್ವದ ಹತ್ತು ಪರ್ಸೆಂಟ್ ನಾವು ಅರ್ಥೈಸಿ ಪಾಲಿಸಿರೆ ಸಾಕಾವುತಿತ್ತು. ಅಂತೆ ರಜೆ ಕೊಟ್ಟು, ಕರ್ಯಾಕ್ರಮಾ ಮಾಡಿ ವರದಿ ಕೊಟ್ರೆ ಆರಿಂಗೋ ಗುಣ ಇಲ್ಲೇ

  2. ಸರಕಾರದ ಲೆಕ್ಕಂದ ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ ,ಬಸವ ಜಯಂತಿ, ಕನಕ ಜಯಂತಿ ,ಜೇಡರ (ದೇವರ ? )ದಾಸಿಮಯ್ಯ ಜಯಂತಿ ಹೇದು ಅನೇಕ ಆಚರಣೆ ಮಾಡಿ ಭಾಷಣ ಬಿಗುದು ಮಾಡುತ್ತೆಂತರ ?ಇನ್ನು ಆರದ್ದಾದರೂ ಜಯಂತಿ ಬಾಕಿ ಇದ್ದರೆ (ಬ್ರಾಹ್ಮಣ ಹೊರತು) ಅದನ್ನೂ ಮಾಡುಗು ಜಾತಿ ಲೆಕ್ಕಾಚಾರ ದ ಒಳ ಇಪ್ಪದೆಂತರ ! ಎಲ್ಲೋರಿಂಗು ಗೊಂತಿಪ್ಪದೇ ! ಪ್ರತ್ಯೇಕ ಹೇಳೆಕಾದ್ದಿಲ್ಲೆ ನ್ನೇ .

  3. ಬಸವಣ್ಣನ ಬಗ್ಗೆ ಪರಿಚಯಾತ್ಮಕವಾಗಿ ಬರದ್ದದು ಲಾಯಕ್ಕಾಯಿದು. ಮೂಡನಂಬಿಕೆ , ಅಜ್ಞಾನ , ವೈಜ್ಞಾನಿಕತೆ , ವಿಚಾರವಾದ ಎಲ್ಲ ಹೇಳಿ ಬಡಬಡಿಸುವ ಸರ್ಕಾರದ ಜಾತಿಗಣತಿ ಅಸಂಬದ್ದ ಹೇಳಿ ಬರದ್ದದು ಇನ್ನೂ ಲಾಯಕ್ಕಾಯಿದು.

  4. ಇದರೆಲ್ಲ ಕಾಂಬಗ ಭಾವ ಆ ಯುಗಲ್ಲಿ ಯಾದವೀ ಕಲಹ ನಡದಾಂಗೆ ಈ ಯುಗಲ್ಲಿ ಎಂತದೋ ಒಂದು ನಡವಲೆ ಸುರುವಾಯಿದೋದು ಕಾಣುತ್ತಪ್ಪ! ಈ ಯುಗಾಂತ್ಯ ಹೇಂಗೆ ಆಯಿಕ್ಕಪ್ಪ.

    ಹೇಂಗೆ ಆಯಿಕ್ಕಪ್ಪ ಹೇದು ನೋಡ್ಯೋಂಡು ನಿಂಬಲೆ ನಾವೆಂತ ಯುಗಾತೀತರೋ ಅಲ್ಲದೋ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×