ಜೀವಂದಲೂ ಮೇಲು ಜೀಮೇಲು…!?

April 2, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನವಕ್ಕೆ ಕಂಪ್ಯೂಟರು ರಜ ರಜ ಅರಡಿವಲೆ ಸುರು ಆತು. ಮದಲು ಅಷ್ಟಾಗಿ ಏನೂ ಅರಡಿಯ ಆರಿಂಗೂ.
ಪೆರ್ಲದಣ್ಣನೋ, ಬೀಸ್ರೋಡುಮಾಣಿಯೋ, ಮಣ್ಣ ಸುಚ್ಚು ಹಾಕಿರೆ ರಜ ರಜ ನೋಡಿಗೊಂಡಿದ್ದವಕ್ಕೆ ಈಗ ಸ್ವತಃ ಕಂಪ್ಯೂಟರು ಓನು ಮಾಡಿ ಬೇಕಾದ ಕೆಲಸ ಮುಗುಶಿ, ಓಫು ಮಾಡುಲೆ ಅಭ್ಯಾಸ ಆಯಿದು. ಅಲ್ಲದೋ?

ಮನುಷ್ಯನ ಸ್ವಭಾವವೇ ಹಾಂಗೆ, ಯೇವದೇ ವಿಶಯ ಆಗಿರಳಿ – ಕಲಿಯದ್ದೇ ಕೂದರೆ ’ಅದೆನಗರಡಿಯ’ ಹೇಳಿ ಕೂದುಗೊಂಗು.
ಅವಕಾಶ ಸಿಕ್ಕಿರೆ ರಜ್ಜ ಕಲ್ತುಗೊಂಗು, ರಜ ಕಲ್ತ ಕೂಡ್ಳೆ ಆಸಕ್ತಿ ಹೆಚ್ಚುಗು, ಇನ್ನೂ ಹೆಚ್ಚ ಕಲಿಗು, ಕಲ್ತು ಕಲ್ತು ಅದರ್ಲೇ ಪಳಗಿ ಹೋಕು – ರಜ್ಜವೇ ಸಮಯಲ್ಲಿ ಅವ ಆ ವಿಶಯಲ್ಲಿ ಮುಕ್ರಿ ಆಗಿ ಬಿಡುಗು!
ಕಂಪ್ಯೂಟರು ಕಲ್ತೋರುದೇ ಇದೇ ಮಾತಿನ ಒಪ್ಪುತ್ತವು.
ಆರಂಭಲ್ಲಿ ಕಲ್ತು ಅಷ್ಟಕ್ಕೇ ನಿಲ್ಲುಸಿದ್ದವಿಲ್ಲೆ, ಮೆಲ್ಲಂಗೆ ಇಂಟರ್ನೆಟ್ಟು ನೋಡ್ಳೆ ಸುರು ಮಾಡಿದವು. ಅದರ ಶುದ್ದಿ ಒಂದರಿ ಮಾತಾಡಿದ್ದು.
ಹಾಂಗೆಯೇ ಮತ್ತೆ ಇಂಟರುನೆಟ್ಟು ಸರಿಯಾಗಿ ಅಭ್ಯಾಸ ಆದ ನೆರೆಕರೆಯವು ಓರ್ಕುಟ್ಟುಲುದೇ ಸುರು ಮಾಡಿದ್ದು ನಿಂಗೊಗೆ ಗೊಂತಿಕ್ಕು, ಗೊಂತಿಲ್ಲದ್ರೆ ಇಲ್ಲಿದ್ದು.
ಕಂಪ್ಯೂಟರಿಂದ ಇಂಟರುನೆಟ್ಟು, ಮುಂದೆ ಇಂಟರುನೆಟ್ಟಿಂದ ಓರುಕುಟ್ಟು, ಅಲ್ಲಿಂದ ಗೂಗುಲು ಹೀಂಗೇ ಮುಂದೆ ಹೋಗಿ ಹೋಗಿ ಅಪ್ಪಗ ಮತ್ತೊಂದು ವಿಶಯ ಗೊಂತಾತು – ಅದುವೇ ಈಮೈಲು.
ಅದೆಂತರ – ಪೆರ್ಲದಣ್ಣಂಗೆ ಅದು ಸರೀ ಅರಡಿಗು.
~
ಪೆರ್ಲದಣ್ಣ ಊರಿಂಗೆ ಬಂದಿತ್ತಿದ್ದ, ಅಪುರೂಪಲ್ಲಿ.
ಓ ಮೊನ್ನೆ, ಮಾಷ್ಟ್ರುಮಾವನಮಗನ ಸಟ್ಟುಮುಡಿಗೆ, ಅದಾದಮತ್ತೆ ಬಜಕ್ಕೂಡ್ಳು ಜಾತ್ರೆಗೆ ಹೇಳಿಗೊಂಡು ಬಂದವ!
ಬೈಲಿನ ಹೆಚ್ಚಿನೋರು ಸುದಾರಿಕೆಲಿ ಇತ್ತಿದ್ದವು. ದೊಡ್ಡಬಾವ – ಅಜ್ಜಕಾನ ಭಾವನತ್ರೆ ನೀರು ತರುಸಿ ತರುಸಿ ಕುಡ್ಕೊಂಡಿತ್ತಿದ್ದ – ಸೆಖೆ ಅಲ್ಲದೋ!
ಆಚಕರೆಮಾಣಿ ಪುಟ್ಟಕ್ಕನ ಒಟ್ಟಿಂಗೆ ಮಾತಾಡಿಗೊಂಡು ಇತ್ತಿದ್ದ, ಯೇನಂಕೂಡ್ಳುಅಣ್ಣ ಪಟತೆಗವದರ ಒಟ್ಟಿಂಗೆ ಕೊಳಚ್ಚಿಪ್ಪು ಬಾವನತ್ರೆ ಕುಶಾಲುಮಾತಾಡಿಗೊಂಡಿತ್ತಿದ್ದ..
ಗಣೇಶಮಾವ, ಆಚಮನೆದೊಡ್ಡಣ್ಣ, ಎಲ್ಲ ಒಳದಿಕೆ ಸುದಾರಿಕೆಲಿ ಇತ್ತಿದ್ದವು.. ಒಪ್ಪಕ್ಕಂದು ಅದರ ಪ್ರೆಂಡಿನೊಟ್ಟಿಂಗೆ ಸೇರ್ಯೊಂಡು ಬಾರೀ ಸುದಾರಿಕೆ.
ಇನ್ನೂ ಏನೇನೋ!
ಒಪ್ಪಣ್ಣಂಗೆ ಒಂದು ಹಾಳೆಬೀಸಾಳೆ ಸಿಕ್ಕಿತ್ತಿದ್ದು – ಈ ಸೆಕಗೆ ನವಗೆ ಬೇರೆಂತ ಬೇಕು!

ಎಡೆಹೊತ್ತಿಲಿ ಎಲ್ಲೊರುದೇ ಒಂದರಿ ಸೇರಿದೆಯೊ, ಮಾತಾಡ್ಳೆ.
ಮಿಂಚಂಚೆಯ ಬಗ್ಗೆ ವಿವುರುಸು ಪೆರ್ಲದಣ್ಣ – ಹೇಳಿ ಅಜ್ಜಕಾನ ಬಾವ ಸುರು ಮಾಡಿದ.
ಪೆರ್ಲದಣ್ಣಂಗೆ ಸರೀ ಅರಡಿವ ವಿಶಯ ಇದಾ, ವಿವರುಸಿ ಹೇಳಿದ – ಒಪ್ಪಣ್ಣಂಗೂ ಅರ್ತ ಅಪ್ಪ ಹಾಂಗೆ!
ಈ ವಾರ ಅದರ ಬಗ್ಗೆಯೇ ಶುದ್ದಿ ಮಾತಾಡುವ ಹೇಳಿ ಕಂಡತ್ತು. ಆಗದೋ?
~

ಮದಲೆಲ್ಲ ಒಂದು ಅಂಚೆ (ಪೋಷ್ಟು) ಮಾಡುದರ ಗಮ್ಮತ್ತು ಕೇಳಿ!
ಎಲ್ಲರಿಂಗೂ ಬರವು(ಅಕ್ಷರಾಭ್ಯಾಸ) ಇರ. ದೂರದ ಬೊಂಬಾಯಿಲಿ ಇಪ್ಪ ಮಗಂಗೆ ಅಜ್ಜಿ ಕಾಗತ ಬರೇಕಾರೆ ಮಕ್ಕಳ ಕೈಲಿ ಹೇಳುಸುದು. ಮಕ್ಕೊ ಬರದ್ದರ ಸತ್ಯ ನಂಬಿ ಕಳುಸುದು.
ಒಪಾಸು ಕಾಗತ ಇತ್ಲಾಗಿ ಬಪ್ಪಗಳೂ ಹಾಂಗೇ, ಒಬ್ಬ ಬಿಡುಸಿ ಓದುದು, ಒಳುದವಂಗುದೇ ಕೇಳುಲೆ. ಮತ್ತೆ ಲಾಯಿಕಕ್ಕೆ ತೆಗದು ಮಡಗುದು.
ಕೆಲವು ಸರ್ತಿ ಕಾಗತದ ಎದುರೇ ಬರಗಡ “ಶ್ರೀ ವೆಂಕಪ್ಪ ಭಟ್ಟರು ಓದಿ ಶ್ರೀ ಸುಬ್ರಾಯಭಟ್ಟರಿಗೆ ಕೊಡುವುದು” ಹೇಳಿಗೊಂಡು – ಇಬ್ರಿಂಗೂ ಇಪ್ಪ ವಿಶಯ ಆದರೆ ಎರಡೆರಡು ಕಾಗತ ಎಂತಕೆ, ಅಲ್ಲದೋ?!
ಬರದ್ದುದೇ ಹಾಂಗೇ, ಇಂದಿಂದ ನಾಳಂಗೆ ಎತ್ತ.
ಇಂದು ಲಾಯ್ಕಕ್ಕೆ ಬರದು ಗೋಂದು ಅಂಟುಸಿ, ಮಾರ್ಗದಕರೆ ಕೆಂಪುಪೆಟ್ಟಿಗೆಗೆ ಹಾಕಿರೆ, ನಾಳೆ-ನಾಳ್ತಿಲಿ ಅದರ ತೆಗದು ಮಡುಸಿ ಮಡಿಕ್ಕೊಂಡು ಕಾಸ್ರೋಡಿಂಗೋ ಮತ್ತೊ ತೆಕ್ಕಂಡೋಗಿ, ಅಲ್ಲಿ ಅದರ ಎಡ್ರಾಸು ನೋಡಿ, ಎಲ್ಲಿಗೆ ಹೋಯೆಕೋ ಅಲ್ಲಿಗೆ ಹೋವುತ್ತ ಪೆಕೆಟಿಲಿ ತುಂಬುಸಿ, ಕಳುಸಿಕೊಡುಗು. ಬೆಂಗುಳೂರಿಂಗೆ ನಾಕು ದಿನಲ್ಲಿ ಎತ್ತುಗು. ಬೊಂಬಾಯಿಗೆ ಎತ್ತುವಗ ಒಂದು ವಾರ ಆದರೂ ಆತು. ಪೋಷ್ಟು ಬಪ್ಪದುದೇ ಹಾಂಗೇ, ಗೋವಿಂದಜ್ಜನ ಹೋಟ್ಳಿಲಿ ತಂದು ಮಡಗ್ಗು, ಪೋಷ್ಟುಮೇನು. ನಾವು ಪೇಟಗೆ ಹೋಗಿಪ್ಪಗ ನೆಂಪುಮಾಡಿ ಕೇಳೆಕ್ಕು – ಕಾಗತ ಬಂದಿಪ್ಪಗ ಆ ಮನಿಶನೇ ಎದುರು ಸಿಕ್ಕಿರೆ ನಮ್ಮ ಭಾಗ್ಯ!
ಪೋಷ್ಟಾಪೀಸಿಲಿ ಪೈಸೆಯುದೇ ಮಡಗುಲೆಡ್ಕೊಂಡಿತ್ತು ಇದಾ.
ತಿಂಗಳಿಂಗೆ ನೂರೋ, ನೂರೈವತ್ತೋ ಮತ್ತೊ – ಕಟ್ಟುತ್ತ ಸ್ಕೀಮು ಮಾಡಿರೆ ಐದೊರಿಶಕ್ಕೊಂದರಿ ಇಡಿಗ್ಗಂಟು ತೆಕ್ಕೊಂಬ ವೆವಸ್ತೆ ಇತ್ತಡ.
ಕಟ್ಟಿದಲ್ಲೇ ಕಟ್ಟೆಕ್ಕು, ಕಟ್ಟಿದಲ್ಲೇ ತೆಕ್ಕೊಳೆಕ್ಕು – ಅದೊಂದು ಕಷ್ಟ ಇದಾ!!

ಇದೆಲ್ಲ ಹಳೇ ಕತೆ. ಈಗ ಹೀಂಗಲ್ಲಡ.
ಪೋಷ್ಟು ಮಾಡಿರೆ ಬೇಗ ಬೇಗ ವಿಲೇವಾರಿ ಆವುತ್ತಡ. ಪೈಸೆ ಕಟ್ಟಿರೆ ಅಂಬಗಳೇ ವೆವಸ್ತೆ ಆವುತ್ತಡ.
ಎಲ್ಲ ದಿಕೆ ಕಂಪ್ಯೂಟರು ಮಡಗಿ, ಕಾಗತ, ಪತ್ರಂಗಳ ನಂಬರಿನ ಕಂಪ್ಯೂಟರಿಂಗೆ ಹಾಕುದಡ ಈಗ!
ಕಛೇರಿಯ ಸರ್ವ ದಾಖಲೆಗಳೂ ಸರ್ವರಿನ ಒಳ ಇರ್ತು. ಯೇವತ್ತು, ಎಲ್ಲಿಗೆತ್ತಿದ್ದು ಹೇಳ್ತದರ ತಿಳಿತ್ತ ವೆವಸ್ತೆ ಆವುತ್ತಡ.- ಅಜ್ಜಕಾನ ಬಾವ ಎಲ್ಲಿಯೋ ಪೇಪರಿಲಿ ಓದಿದ್ದನಡ.
~

ಅದು ಬಿಡಿ,
ಎಷ್ಟುಬೇಗ ಹೇಳಿದರೂ, ಇಂದು ಕಾಗತ ಹಾಕಿದ್ದರ ಈಗಳೇ ಎತ್ತುಸಲೆಡಿಯಡ.
ಈಗಾಣ ಜೀವನಲ್ಲಿ ಎಶ್ಟೋ ವಿಚಾರಂಗಳ ಈಗಳೇ, ತತ್‌ಕ್ಷಣವೇ – ಆಚೊಡೆಂಗೆ ಎತ್ತುಸೆಕ್ಕಾದ ಪರಿಸ್ಥಿತಿ ಇರ್ತಡ.
ನಾಳಂಗೆ ಅಲ್ಲ, ರಜ್ಜ ಮತ್ತಂಗೆ ಅದು ಹಳಸಿತ್ತು – ಹಾಂಗಿರ್ತ ಶುದ್ದಿಗೊ.
ಕೇಶವಜ್ಜನ ಶೇರುಗೊ, ಬೇಂಕಿನ ಪ್ರಸಾದಮಾವನ ಬಡ್ಡಿವಿವರಂಗೊ, ಏತಡ್ಕ ಬಾವಂಗೆ ಅಡಕ್ಕೆ ಕ್ರಯ – ಇತ್ಯಾದಿಗೊ ರಪರಪ ಎತ್ತೆಕ್ಕು. ಅಲ್ಲದ್ರೆ ಅದು ಏಕೂ ಬೇಡ!
ಅಂತಲ್ಲಿ ಈ ಕಾಗತ ಬರದು ಆಚೊಡೆಂತ ಎತ್ತಿ ಅಪ್ಪಗ ಇಲ್ಲಿ ಪರಿಸ್ಥಿತಿಯೇ ಹಳಸಿರ್ತಿಲ್ಲೆಯೋ!
ಅಂತಲ್ಲಿಗೆ ಬೇಕಪ್ಪದೇ ಈ ಈಮೈಲು..!
~

ಈಮೈಲು ಹೇಳಿರೆ ಇಂಟರ್ನೆಟ್ಟಿಲಿಪ್ಪ ಮೈಲು ಹೇಳಿ ಅರ್ತ ಅಡ. ಎಡಪ್ಪಾಡಿಬಾವ ಇದರ ಮಿಂಚಂಚೆ ಹೇಳುದು.
ಇಂಟರ್ನೆಟ್ಟಿಲಿ ಒಂದು ದಿಕ್ಕಂದ ಕಳುಸಿರೆ ಇಂಟರ್ನೆಟ್ಟಿಲೇ ಇನ್ನೊಂದು ದಿಕ್ಕೆನೋಡ್ಳೆ ಅರಡಿತ್ತಡ.
ಮನೆಗೆ ಯೇವ ನಮುನೆ ಎಡ್ರಾಸು ಇರ್ತೋ – ಅದೇ ನಮುನೆ ಇಂಟರ್ನೆಟ್ಟಿಲಿ ಒಂದು ಎಡ್ರಾಸು ಇರ್ತಡ.
ಯೇವದೇ ವೆಗ್ತಿಗೆ ಇಪ್ಪದಡ. ಒಬ್ಬ ಎಷ್ಟುದೇ ಮಾಡ್ಳಕ್ಕಡ.
ಮನೆ ಎಡ್ರಾಸಿನ ಹಾಂಗೆ ಒಂದು ಹನುಸ್ಸು (ಪೇರಾಗ್ರಾಪು) ಇಲ್ಲೆ, ಬರೇ ಒಂದು ಗೆರೆ ಅಡ.!
ವಯಾ, ತಾಲೂಕು, ಜಿಲ್ಲೆ ಎಲ್ಲ ಬೇಕೂಳಿ ಇಲ್ಲೆ!
ಎಲ್ಲೆಯೇ ಇಲ್ಲದ್ದ ಎಡ್ರಾಸಿದಾ, ಎಲ್ಲಿ ಬೇಕಾರುದೇ ನೋಡ್ಳೆಡಿತ್ತಿದಾ, ಹಾಂಗಾಗಿ ಒಂದೇ ಗೆರೆಯ ಎಡ್ರಾಸು.
ಎಲ್ಲಿ ಬೇಕಾರೂ – ಹೇಳಿರೆ, ಯೇವದೇ ಇಂಟರ್ನೆಟ್ಟಿಪ್ಪ ಕಂಪ್ಯೂಟರಿಲಿ ಕೂದಂಡು ನೋಡ್ಳಾವುತ್ತಡ.
~

ಆ ಒಂದು ಗೆರೆಲಿ ಎರಡು ವಿಭಾಗ.
(ಉದಾ: ajjakana.bhava@gmail.com)
ಸುರೂವಾಣದ್ದು ನಮ್ಮ ಹೆಸರು – ನಮ್ಮ ಅಂಚೆಪೆಟ್ಟಿಗೆ ಹೆಸರು ಅದು! (ಹಸುರು ಅಕ್ಷರದ್ದು)
ಅದಾದ ಮತ್ತೆ, ಎರಡ್ಣೇದು – ಆ ಪೆಟ್ಟಿಗೆ ಯೇವ ವೆಬ್ ಸೈಟಿಲಿ ಇಪ್ಪದು ಹೇಳ್ತ ವಿಶಯ. (ಕೆಂಪು ಅಕ್ಷರದ್ದು).
ಇಲ್ಲಿ ಉದಾಹರಣೆಗೆ ಕೊಟ್ಟದು ನಮ್ಮ ಅಜ್ಜಕಾನ ಭಾವನ ಮಿಂಚಂಚೆ, ಮೊನ್ನೆ ಪೆರ್ಲದಣ್ಣ ಮಾಡಿ ಕೊಟ್ಟದು.
ಅಜ್ಜಕಾನ ಭಾವ ಹೇಳಿಯೇ ಅವನ ಅಂಚೆಪೆಟ್ಟಿಗೆ ಹೆಸರು. ಅವ ಎಲ್ಲೊರಿಂಗುದೇ ಅಜ್ಜಕಾನಭಾವನೇ ಅಲ್ಲದೋ – ಹಾಂಗಾಗಿ!
~

ಮಿಂಚಂಚೆ ಪೆಟ್ಟಿಗೆಗೆ ಹೋಗಿ ನೋಡೆಕ್ಕಾರೆ, ಇಂಟರ್ನೆಟ್ಟಿಲಿ ಪೆಟ್ಟಿಗೆ ಇಪ್ಪ ವೆಬ್ಸೈಟಿಂಗೆ ಸುರೂವಿಂಗೆ ಹೋಯೆಕ್ಕಡ.

ಜೀಮೇಲಿನ ಅಂಚೆಪೆಟ್ಟಿಗೆಯ ದ್ವಾರ

(ಅಜ್ಜಕಾನ ಭಾವಂಗೆ gmail.com ಗೆ ಹೋಯೆಕ್ಕಪ್ಪದು!)
ಹಾಂಗೇ ಬೇರೆ ಕೆಲವೆಲ್ಲ ಅಂಚೆಪೆಟ್ಟಿಗೆಗೊ ಇದ್ದಡ, yahoo.com, mail.com – ಇತ್ಯಾದಿಗೊ.
ವೆಬ್ಸೈಟಿಂಗೆ ಹೋದ ಕೂಡ್ಳೇ ಎರಡು ವಿವರ ಕೇಳ್ತಡ, ಸುರೂವಾಣದ್ದು ಅವನ ಬಳಕೆ ಹೆಸರು – ಅದೇ ajjakana.bhava,
ಎರಡ್ಣೇದು ಗುಟ್ಟು ಶಬ್ದ!
ಇದೆಂತರ ಗುಟ್ಟುಶಬ್ದ? – ಹ್ಮ್, ಆರಿಂಗೂ ಕಾಂಬಲಾಗ ಇದಾ!
ಎಲ್ಲೊರುದೇ ಬಂದು ಅವನ ಅಂಚೆಪೆಟ್ಟಿಗೆ ನೋಡಿರೆ? ಅದಕ್ಕೆ ಬೇಕಾಗಿ ಒಂದು ಗುಟ್ಟುಶಬ್ದ ಮಡಗಿದ್ದು. ಮಿಂಚಂಚೆ ಮಾಡುವಗಳೇ ಇದರ ಆ ವೆಬ್ಸೈಟಿನವಕ್ಕೆ ಹೇಳೆಕ್ಕಡ.
ಗುಟ್ಟು ಶಬ್ದ ಇಪ್ಪ ಕಾರಣ ತುಂಬ ಗೌಪ್ಯವಾಗಿ ಇರ್ತಡ. ಆರಿಂಗೂ ಹೇಳುಲಾಗಡ, ಮೃತ್ಯುಂಜಯ ಜೆಪದ ಹಾಂಗೆ.
ಅಜ್ಜಕಾನ ಭಾವ ಎಂತರ ಬರವದಪ್ಪಾ – ಹೇಳಿ ಅಲೋಚನೆ ಮಾಡಿ, ಮೊನ್ನೆ ಕಂಜಿ ಹಾಕಿದ ಕೆಂಪು ದನದ ಹೆಸರು ಬರದನಡ! (ಎಂತದು ಹೇಳಿ ಒಪ್ಪಣ್ಣಂಗೂ ಅರಡಿಯ!)
ಒತ್ತಾಯ ಮಾಡಿ ಕೇಳುವಗ ಅಷ್ಟು ಹೇಳಿದ°.
~
ಅಷ್ಟು ಬರದು ಒಂದು ಸುಚ್ಚು ಒತ್ತೆಕ್ಕಡ, ಲಾಗ ಇನ್ ಹೇಳಿ ಹೆಸರಡ.
ಒಳಾಂತಾಗಿ ಲಾಗ ಹಾಕುದು – ಹೇಳಿ ನೆಗೆಮಾಡಿದ° ಪೆರ್ಲದಣ್ಣ!

ಲಾಗ ಹಾಕಿ ಒಳ ಹೋದರೆ ನಮ್ಮ ಅಂಚೆಪೆಟ್ಟಿಗೆ ಕಾಣ್ತಡ.
ನವಗೆ ಬಂದ ಮಿಂಚಂಚೆಗೊ, ನಾವು ಕಳುಸಿದ ಮಿಂಚಂಚೆಗೊ ಎಲ್ಲ ಒತ್ತರೆ ಜೋಡುಸಿಗೊಂಡು ಇರ್ತಡ.
ಓದಿಆದ್ದರ ತೆಳ್ಳಂಗೆ, ಓದಿಆಗದ್ದರ ದಪ್ಪಕ್ಷರಲ್ಲಿ ಮಾಡಿ ಮಡಗುತ್ತಡ.
ಯೇವತ್ತಿಂಗೆ ಯೇವದನ್ನುದೇ ತೆಗದು ಓದಲಕ್ಕಡ.
ಹೊಸತ್ತೊಂದು ಮಿಂಚಂಚೆ ಮಾಡ್ತರೆ ಬಾರೀ ಸುಲಾಬ ಅಡ, ಕಂಪೋಸ್ (ಗೊಬ್ಬರ ಅಲ್ಲ!) ಕೊಟ್ಟಿಕ್ಕಿ ಬರವಲೆ ಸುರು ಮಾಡ್ಳಾವುತ್ತಡ.
ಅದರೊಟ್ಟಿಂಗೆ ಅಗತ್ಯದ ಪಟಂಗಳನ್ನೋ, ಪೈಲುಗಳನ್ನೋ ಅಂಟುಸಿ(attach) ಕಳುಸುಲೂ ಆವುತ್ತಡ.
ಇನ್ನೊಂದು ಸಂಗತಿ ಇದ್ದು.
ಒಳ ಲಾಗ ಹಾಕಿ ಮೈಲು ನೋಡಿ, ಓದಿ, ಕಳುಸಿ ಎಲ್ಲ ಆದ ಮತ್ತೆ ನೆಂಪಿಲಿ ಲಾಗೌಟು ಆಯೆಕಡ. ಇಲ್ಲದ್ದರೆ ಇನ್ನೊಬ್ಬ ಆರಾದರೂ ನಮ್ಮಂದ ಮತ್ತೆ ಕಂಪ್ಯೂಟರಿಲಿ ಕೂಪವ ಸುಲಾಬಲ್ಲಿ ನಮ್ಮ ಅಂಚೆಪೆಟ್ಟಿಗೆಯ ಉಪಯೋಗುಸಿಯೊಂಗು.- ಈ ಜಾಗ್ರತೆಯನ್ನುದೇ ಹೇಳಿದ ಪೆರ್ಲದಣ್ಣ.
~

ಮಾಷ್ಟ್ರುಮಾವನಲ್ಲಿ ಇಂಟರ್ನೆಟ್ಟು ಬಯಿಂದಿದಾ, ಮಾಷ್ಟ್ರಮನೆಅತ್ತೆಗೆ ಪೇಪರು ಓದಲೆ!
ಪೆರ್ಲದಣ್ಣನ ನೇತೃತ್ವಲ್ಲಿ ಒಳ ಹೋದೆಯೊ, ಎಲ್ಲೊರುದೇ.
ಇಷ್ಟೊತ್ತು ವಿವರುಸಿದ್ದರ ಮಾಡುಸಿ ತೋರುಸಿದ ಈ ಪೆರ್ಲದಣ್ಣ.

ಅಜ್ಜಕಾನ ಬಾವ ಆಚಕರೆಮಾಣಿಗೆ ಮಿಂಚಂಚೆ ಬರವದು

ಅಜ್ಜಕಾನ ಭಾವ(ajjakana.bhava@gmail.com) – ಆಚಕರೆಮಾಣಿಗೆ (aachamaani@gmail.com) ಒಂದು ಮಿಂಚಂಚೆ ಬರದ  – ಓಯ್, ಎಲ್ಲಿದ್ದೆ – ಹೇಳಿಗೊಂಡು. ಅವ ಅಲ್ಲೇ ಇತ್ತಿದ್ದ, ನಿಲ್ಕಿಯೊಂಡು!
ಇದರನ್ನೇ ಇನ್ನೊಬ್ಬಂಗೆ ಫೋರ್ವರ್ಡು ಮಾಡ್ಳಾವುತ್ತಡ. ಕಳುಸಿದ ಮೈಲಿನ ಪುನಾ ಓಪನು ಮಾಡಿ ಫೋರ್ವರ್ಡು ಸುಚ್ಚು ಒತ್ತಿ, ಕೊಳಚ್ಚಿಪ್ಪು ಬಾವಂಗೆ ಕಳುಸಿ ತೋರುಸಿದ ಪೆರ್ಲದಣ್ಣ. ಹೀಂಗೆ ನವಗೆ ಬೇಕಾದಷ್ಟು ಜನಕ್ಕೆ ಕಳುಸುಲಕ್ಕಡ ಒಂದರಿಯಂಗೇ.
ಚೆಂಙಾಯಿಗಳದ್ದೆಲ್ಲ ಒಂದು ಲೀಷ್ಟು ಮಾಡಿ ಮಡಗಿ, ಅವಕ್ಕೆಲ್ಲೊರಿಂಗೂ ಒಂದರಿಯಂಗೇ ಮೈಲು ಮಾಡ್ಳಕ್ಕಡ. ಮಾಷ್ಟ್ರುಮಾವನ ಮಗ ಮದುವೆ ಕಾಗತವ ಹೀಂಗೇ ಕಳುಸಿದ್ದನಡ – ಎಡಕ್ಕಿಲಿ ಆಚಕರೆಮಾಣಿ ಹೇಳಿದ. ಕಳುಸಿದೋರಿಂಗೆ ಎಲ್ಲೊರಿಂಗೂ ಒಟ್ಟಿಂಗೇ ಅಂಬಗಳೇ ಹೋಗಿ ಎತ್ತುತ್ತು!

ಚೆ! ಎಷ್ಟು ಬೇಗ!
ಎರಡೇ ನಿಮಿಶಲ್ಲಿ ಎಲ್ಲಿಂದ ಎಲ್ಲಿಗೂ ಎತ್ತಿತ್ತು.
ಎಷ್ಟು ಸುಲಾಬ! ಎಂತವಂಗೂ ಹಿಡಿಗು!
ಪೆರ್ಲದಣ್ಣ ದಿನಕ್ಕೆ ಹತ್ತೈವತ್ತು ಬರೆತ್ತನಡ.
ಓ ಮೊನ್ನೆ ಗುಣಾಜಕುಂಞಿ ಶೋಬಕ್ಕನ ಒಟ್ಟಿಂಗೆ ಕೂದಂಡು ಸುಮಾರು ಇನ್ನೂರು ಮಿಂಚಂಚೆ ಬರದ್ದನಡ.
ಒಪ್ಪಕ್ಕಂದೇ ಕೋಟಿಯ ಪುಳ್ಳಿಯುದೇ ಮೈಲು ಮಾಡಿಗೊಳ್ತವಡ. – ಮೈಲು ಮಾಡಿರೆ ಮೈಲಿಗೆ ಇಲ್ಲೆ ಇದಾ!
ಕುಂಬ್ಳೆಅಜ್ಜಿಯುದೇ ಮಾಷ್ಟ್ರಮನೆಅತ್ತೆಯುದೇ ಈಗ ಮೈಲಿಲೇ ಮಾತಾಡಿಗೊಂಬದಡ, ಪರಸ್ಪರ ಸ್ವರ ಕೇಳದ್ದೆ ಎಷ್ಟೋ ಸಮೆಯ ಆತೋ ಏನೊ!
~

ಅಂಚೆಪೆಟ್ಟಿಗೆಗೊ ಸುಮಾರಿದ್ದು ಹೇಳಿದ ಅಲ್ಲದಾ, ಅದರ್ಲಿ ಒಳ್ಳೆತ ಕಾಯಿಸು ಇಪ್ಪದು ಜೀಮೈಲಿಂಗೆ ಅಡ.
ಗೂಗುಲು ಕಂಪೆನಿಯವು ಕೊಡ್ತ ಮೈಲು ಆದ ಕಾರಣ ಜೀ-ಮೈಲು ಹೇಳಿ ಹೆಸರಡ.
ಬರೇ ಮಿಂಚಂಚೆ ಬರವದು ಮಾಂತ್ರ ಅಲ್ಲದ್ದೆ, ಕೆಲೆಂಡರಿನ ಹಾಂಗಿರ್ತ ಸುಮಾರು ಸೌಕರ್ಯ ಇದ್ದಡ.

ಇನ್ನೊಂದು ಮುಖ್ಯವಾದ ಅಂಶ: ಚೇಟು (Chat)!
ಈ ಮೈಲು ಬರವಲೆ ರಜ ಹೊತ್ತು ಬೇಕಲ್ಲದ, ಅಷ್ಟುದೇ ಬೇಡದ್ದೆ ಒಬ್ಬ ಇನ್ನೊಬ್ಬಂಗೆ ಮಾತಾಡ್ಳೆಡಿತ್ತಡ.
ಆರೆಲ್ಲ ಕಂಪ್ಯೂಟರುಬುಡಲ್ಲಿ ಇದ್ದವು ಹೇಳ್ತದರ ಜೀಮೈಲು ಹಸುರು ಲೈಟು ಮಡಗಿ ತೋರುಸುತ್ತಡ. ಅವನ ಹೆಸರಿನ ಸುಚ್ಚು ಒತ್ತಿ, ಸೀತ ಎಂತಾರು ಬರದರೆ ಅವಂಗೇ ಸಿಕ್ಕಿ ಬಿಡ್ತಡ!
(ಇದರ ಬಗ್ಗೆ ವಿವರವಾಗಿ ಇನ್ನೊಂದರಿ ಮಾತಾಡುವ, ಈಗ ಅಷ್ಟು ಅರಡಿಯ ಒಪ್ಪಣ್ಣಂಗೆ! )
~

ಮದಲು ಕಾಗತ ಓದೊಗ ಸಿಕ್ಕಿಯೊಂಡಿದ್ದ ಕೊಶಿ ಈಗಾಣ ಮೈಲಿಲಿ ಸಿಕ್ಕಡ.
ಕಾಗತ ಎತ್ತಿಯೊಂಡಿದ್ದದು ತಡವಾದರೂ ಅದಕ್ಕೆ ಕಾವ ತಾಳ್ಮೆ ಇತ್ತು. ಈಗ ಎಲ್ಲ ಗಳಿಗೆಲಿ ಅತ್ತೆ ಇತ್ತೆ ಸಂಪರ್ಕ ಸಿಕ್ಕೊದರಿಂದಾಗಿ ಆರಿಂಗೂ ಕಾವ ವೆವಧಾನ ಇಲ್ಲದ್ದಾಂಗಾಯಿದು ಹೇಳಿ ಮಾಷ್ಟ್ರುಮಾವನ ಅಬಿಪ್ರಾಯ.
ಇರಳಿ, ತಂತ್ರಜ್ಞಾನ ಮುಂದರುತ್ತು!
ಯೇವದೋ ಕಾಲದ ಒಂದು ವಾರ ಹಿಡಿತ್ತ ಅಂಚೆಯ ಬದಲು ಕ್ಷಣಲ್ಲಿ ಸಿಕ್ಕುತ್ತ ಮೈಲು ಬಂತು.
ಆದರೆ,
ಅಂದ್ರಾಣ ಪೋಷ್ಟಿಲಿ ಡಿಪಾರ್ಟುಮೆಂಟಿನ ಹತ್ರೆ ಎಂತದೂ ಒಳಿವಲಿಲ್ಲೆ ಇದಾ!
ಈಗ ಎಷ್ಟೋ ಜೆನ ಜೀಮೈಲೋ, ಯಾಹೂವೋ – ಹೀಂಗಿರ್ತದರ ಬಳಸಿಗೊಂಡು, ಬಹುಮುಖ್ಯ ದಾಖಲೆಗೊ ಅಲ್ಲಿ ಒಳುಶುತ್ತವು.
ಸುಮಾರು ಜೆನಕ್ಕೆ ಅವರ ಜೀವನದ ಭಾಗ ಆಗಿ ಹೋಯಿದು!
ಕೆಲಾವು  ಜೆನಕ್ಕೆ ಜೀಮೈಲು ಹೇಳಿತ್ತು ಕಂಡ್ರೆ ಜೀವಂದಲೂ ಮೇಲೆ ಆಗಿ ಹೋಯಿದು –
ಎಲ್ಲ ಸರಿ, ಒಂದಲ್ಲಾ ಒಂದು ದಿನ ಅವು ಅಂಚೆ ನಿಲ್ಲುಸಿರೆ ಎಂತ ಮಾಡುದು?
ಅತವಾ ನಿಂಗಳ ಮೈಲು ನೋಡೆಕ್ಕಾರೆ ಪೈಸೆ ಕೊಡೆಕ್ಕು – ಹೇಳಿರೆ ಎಂತ ಮಾಡುದು – ಹೇಳಿ ದೊಡ್ಡಬಾವ ದೊಡ್ಡಕೆ ಕೇಳಿದ°.

ಒಂದೊಪ್ಪ: ಮೊನ್ನೆ ಇನ್ನೂರು ಮೈಲು ಮಾಡಿರೂ ಶೋಬಕ್ಕ ಮೈಲು ಮಾಡುದು ಹೇಂಗೇಳಿ ಕಲ್ತಿದಿಲ್ಲೆಡ, ಇನ್ನೊಂದರಿ ಹೋಪ ಕೊಶಿಲಿ ಇದ್ದ° ನಮ್ಮ ಗುಣಾಜೆಕುಂಞಿ.

ಜೀವಂದಲೂ ಮೇಲು ಜೀಮೇಲು...!?, 4.5 out of 10 based on 12 ratings

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಈ ಶರ್ಮಪ್ಪಚ್ಚಿಗೆ ಕೂಡಾ ಜೀ ಮೈಲ್, ಓರ್ಕುಟ್ ಎಲ್ಲಾ ಮಾಡಿಕೊಟ್ಟದು ಮಕ್ಕಳೇ. ಈಗ ದಿನಕ್ಕೊಂದು ಸರ್ತಿ ನೋಡದ್ದರೆ ಅಸಕ್ಕ ಆವುತ್ತು. ಈಗ ಬೇಂಕಿನ ವ್ಯವಹಾರ, ಇನ್ ಶ್ಯೂರೆನ್ಸ್ ವ್ಯವಹಾರ ಎಲ್ಲ ಇಂಟರ್ನೆಟ್ ಮೂಲಕ ಮಾಡಲೆ ಆವುತ್ತು. (ಶೇರ್ ವ್ಯವಹಾರ ಇಪ್ಪವವಕ್ಕೆ ಅದು ಕೂಡಾ)
  ಹೊಸತ್ತಾಗಿ ಸುರು ಮಾಡುವವಕ್ಕೆ ಒಂದು ಸೂಚನೆ: ಮೈಲಿಲ್ಲಿ spam ಬಂದರೆ ಅದರ ಓಪನ್ ಮಾಡುವ ಮೊದಲೇ ಆರು ಕಳುಸಿದ್ದು ಹೇಳಿ ನೋಡಿಗೊಳ್ಳಿ. Spam ಮೈಲಿಲ್ಲಿ ಬಂದ ಎಲ್ಲಾ ಸಂಕೋಲೆಗಳಲ್ಲಿ ನೇಲಲೆ ಹೋಗೆಡಿ. ಅದರಲ್ಲೂ ವಿಶೇಷವಾಗಿ ನಿಂಗಳ ಗುಟ್ಟು ಶಬ್ದ (password) ಬೇರೆಯವಕ್ಕೆ ಎಷ್ಟು ಮಾತ್ರಕ್ಕೂ ಬಿಟ್ಟು ಕೊಡೆಡಿ.Password ನ ಅಂಗಂಬಗ ಬದಲಿಸಿಗೊಂಡು ಇಪ್ಪದು ಒಳ್ಳೆದು. http// ಇಂದ ಸುರು ಅಪ್ಪ ಸೈಟ್ ಮತ್ತೆ https// ಇಂದ ಸುರು ಅಪ್ಪದು ಹೇಳಿ ಇದ್ದು. ಒಪ್ಪಣ್ಣ ಅದರ ವಿವರ ಇನ್ನೊಂದು ಸರ್ತಿ ಕೊಡುಗು.

  [Reply]

  VA:F [1.9.22_1171]
  Rating: +1 (from 1 vote)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಈಗೀಗ ಅಂಚೆ… ಮದುವೆ, ಉಪನಯನ ಇತ್ಯಾದಿ ಆಮಂತ್ರಣನ್ಗಳ ತಪ್ಪಲೆ ಮಾತ್ರ ಹೇಳಿ ಆಯಿದಾ ಹೇಳಿ.. ಈಗಾಣ ಮಕ್ಕಳುದೆ ಮಿಂಚಂಚೆ ಹೇಂಗೆ ಬರವದು ಹೇಳಿ ಕೇಳ್ತವು ..
  ಅಂಚೆಯ ಕಾದುಗೊಂಡಿದ್ದ ಹಾಂಗೆ ಈಗ ಮಿಂಚಂಚೆಯನ್ನೂ ಕಾಯ್ತವು.. ದಿನಾ ಮೇಲ್ ಚೆಕ್ ಮಾಡುವವು ಇಲ್ಲೆಯಾ? ಇಂಟರ್ನೆಟ್ಟಿನ್ದ ಹೊಸ ಜೆನಂಗಳನ್ನುದೆ ಪರಿಚಯ ಆವುತ್ತಲ್ಲದಾ?
  ಅಂಚೆಲಿ ನಾವು ಗುರ್ತ ಇಪ್ಪೋರಿಂಗೆ ಬರವದು.. ಮಿಂಚಂಚೆಲಿ ಗುರ್ತ ಮಾಡಿ ಬರವದು… ಈಗ ಬೈಲಿಲಿ ನಾವೆಲ್ಲಾ ಹಾಂಗೆ ಅಲ್ಲದಾ ಇಪ್ಪದು..?

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪೆಂಗಣ್ಣ°ವಿಜಯತ್ತೆಬಟ್ಟಮಾವ°ಪುತ್ತೂರಿನ ಪುಟ್ಟಕ್ಕದೊಡ್ಡಭಾವಅಕ್ಷರ°ವಿದ್ವಾನಣ್ಣಜಯಶ್ರೀ ನೀರಮೂಲೆತೆಕ್ಕುಂಜ ಕುಮಾರ ಮಾವ°ಸರ್ಪಮಲೆ ಮಾವ°ಬೊಳುಂಬು ಮಾವ°ಪುಣಚ ಡಾಕ್ಟ್ರುಬಂಡಾಡಿ ಅಜ್ಜಿಚುಬ್ಬಣ್ಣಕೊಳಚ್ಚಿಪ್ಪು ಬಾವಚೆನ್ನೈ ಬಾವ°ದೇವಸ್ಯ ಮಾಣಿದೊಡ್ಡಮಾವ°ಡೈಮಂಡು ಭಾವಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಜಯಗೌರಿ ಅಕ್ಕ°ಮುಳಿಯ ಭಾವಅಜ್ಜಕಾನ ಭಾವಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ