ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶಗಣೇಶ ಮಾವ°ಶರ್ಮಪ್ಪಚ್ಚಿಡಾಮಹೇಶಣ್ಣಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಶ್ರೀಅಕ್ಕ°ಅನು ಉಡುಪುಮೂಲೆಅಕ್ಷರ°ವಸಂತರಾಜ್ ಹಳೆಮನೆಸುಭಗಗೋಪಾಲಣ್ಣಶ್ಯಾಮಣ್ಣಅಕ್ಷರದಣ್ಣದೊಡ್ಡಮಾವ°ವೇಣೂರಣ್ಣದೊಡ್ಡಭಾವಡಾಗುಟ್ರಕ್ಕ°ಚೆನ್ನಬೆಟ್ಟಣ್ಣಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಬಟ್ಟಮಾವ°ಪುತ್ತೂರುಬಾವಪೆಂಗಣ್ಣ°ಮುಳಿಯ ಭಾವಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಅನುಶ್ರೀ ಬಂಡಾಡಿಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಮಾಷ್ಟ್ರುಮಾವ°ಶಾಂತತ್ತೆಬಲ್ನಾಡುಮಾಣಿಶುದ್ದಿಕ್ಕಾರ°ಸಂಪಾದಕ° (editor)ಎರುಂಬು ಅಪ್ಪಚ್ಚಿಡೈಮಂಡು ಭಾವಮಂಗ್ಳೂರ ಮಾಣಿಚೂರಿಬೈಲು ದೀಪಕ್ಕಪೆರ್ಲದಣ್ಣಚುಬ್ಬಣ್ಣನೆಗೆಗಾರ°ಪುಟ್ಟಬಾವ°ವೇಣಿಯಕ್ಕ°ಚೆನ್ನೈ ಭಾವ°ಪವನಜಮಾವತೆಕ್ಕುಂಜ ಕುಮಾರ ಮಾವ°ದೀಪಿಕಾಕೇಜಿಮಾವ°ಬೊಳುಂಬು ಮಾವ°ಒಪ್ಪಕ್ಕಕಳಾಯಿ ಗೀತತ್ತೆವಿದ್ವಾನಣ್ಣಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿ


ಕಾಪಿ – ಚಾಯ : ಹೊತ್ತು ಸೂಚಕ ಪಾನೀಯಂಗಳ ಬಗ್ಗೆ

March 5, 2009 ರ 2:02 pmಗೆ ನಮ್ಮ ಒಪ್ಪಣ್ಣ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಪಿ ಕುಡುದಾತ? ಉದಿಯಪ್ಪಗಾಣ ಹೊತ್ತಿಂಗೆ ಪಕ್ಕನೆ ಆರಾರು ಸಿಕ್ಕಿರೆ ಕೇಳುವ ಸಾಮಾನ್ಯ ಪ್ರಶ್ನೆ . ಉದಿಯಪ್ಪಗ ಎದ್ದ ಕೂಡ್ಲೇ ಹಲ್ಲು ತಿಕ್ಕಿ, ಮಿಂದು, ಜೆಪ-ತಪ ಎಲ್ಲ ಮುಗುಶಿಕ್ಕಿ ಮಾಡುವ ಸಣ್ಣ ತಿಂಡಿಗೆ ‘ಕಾಪಿ‘ ಹೇಳಿ ಹೆಸರು. ‘ಕಾಪಿಗೆಂತ?’ ಹೇಳಿ ಕೇಳಿರೆ ‘ಉದಿಯಪ್ಪಗ ತಿಂಡಿ ಎಂತ?’ ಹೇಳಿ ಅರ್ಥ. ದೋಸೆಯೋ, ಸಜ್ಜಿಗೆಯೋ ಎಂತಾರು ಹೇಳ್ತವು. ಅದರ ಒಟ್ಟಿಗೆ ಕುಡಿವಲೆ ಚಾಯ ಇದ್ದರೂ ಆತು, ಅದು ಚೋದ್ಯ ಇಲ್ಲೆ. ಕೆಲವು ಮನೆಲಿ ಕಾಪಿಗೆ ‘ಹೆಜ್ಜೆ’ (ಗಂಜಿ) ಆದರೂ ಆತು. :-) ಎಲ್ಲೋರಿಂಗೂ ಗೊಂತಿಪ್ಪ ವಸ್ತುವಾಚಕ ಅದು.

ಮದಲಿಂಗೆ ಕಾಪಿಯೂ ಹಾಂಗೇ! ಸಾಮಾನ್ಯ ನಮ್ಮೋರ ಮನೆಗಳಲ್ಲಿ ಮಾಡುದು ‘ಬೆಲ್ಲದ ಕಾಪಿ’. ಬೆಲ್ಲದ ಚೀಪೆ ಕಾಪಿ. ಬೆಲ್ಲ + ನೀರು ಒಲೆಲಿ ಮಡುಗಿ, ಅದು ಕರಗಿ ಬಳ-ಬಳ ಹೇಳಿ ಕೊದಿವಗ ಕಾಪಿ ಹೊಡಿ ಹಾಕಿ ಇಳುಗುದು. ರಜ್ಜ ಹನುದಮತ್ತೆ ಅದಕ್ಕೆ ಹಾಲು ಹಾಕಿ ಕುಡಿವದು. ಕರಿ ಅರಿಶಲೆ ಎಲ್ಲ ಇಲ್ಲೆ, ಅಡಿಲಿ ಇಕ್ಕು- ಕುಡಿತ್ತವನೆ ಅದರ ಕರಡದ್ದ ಹಾಂಗೇ ಕುಡಿಯೆಕ್ಕು. ಮಕ್ಕೊಗೆ ಕಾಪಿಹೊಡಿ ಉಷ್ಣ ಹೇಳಿ ಆದರೆ- ಆ ಬೆಲ್ಲದ ನೀರು ಕೊದಿತ್ತದಕ್ಕೆ ಹಾಲು ಹಾಕಿ ಬೆಲ್ಲನೀರು ಕೊಡುಗು. ಕೆಲವು ಮನೆಗಳಲ್ಲಿ ಅಂತೂ ೨೪ ಗಂಟೆ ಬೆಲ್ಲದ ಕಾಪಿ ಹಂಡೆ ಇಕ್ಕೇ ಇಕ್ಕು. (ಈಗ ರಜ್ಜ ಫ್ಯಾಶನ್ ಎಲ್ಲ ಸೇರಿ, ಗೋಬರ್ ಗ್ಯಾಸು, ಹಂಡೆ ಗ್ಯಾಸು ಎಲ್ಲ ಬಂದು – ಡಿಕೋಕ್ಷನು ತಯಾರು ಮಾಡಿ ಮಡುಗಿ, ಕಾಪಿ ಬಗ್ಸಿ…) ಕಾಪಿಯ ಕಥೆ ಇದು.

ಒಂದು ಚಾಯ ಕುಡಿವ°, ಬಾ ಹೇಳಿ ಆರಾರು ಹೇಳಿದರೆ ಅದು ಈ ಉದಿಯಪ್ಪಗಾಣ ವಿಷಯ ಅಲ್ಲ ಹೇಳುದು ಸ್ಪಷ್ಟ.! ಮಧ್ಯಾನ್ನ ಮೇಲೆ ಕುಡಿವ ಆಸರಿಂಗೆಗೆ ಚಾಯ ಹೇಳಿ ಅನ್ವರ್ಥ . :-)
ಚಾಯ ಕುಡುದು ಆತೋ? ಕೇಳಿರೆ – ಕಾಪಿಯೇ ಕುಡುದಿದ್ದರೂ, ಹೊತ್ತಪ್ಪಗಾಣದ್ದಾದರೆ, ಆತು- ಹೇಳಿಯೇ ಹೇಳೆಕ್ಕು.

ಹಳಬ್ಬರು ಉದಿಯಪ್ಪಗ ತಿಂಡಿ ತಿಂದುಗೋಂಡು ಇತ್ತಿದ್ದವಿಲ್ಲೆ ಅಡ. ಸೀದಾ ಮದ್ಯಾನ್ನದ ಊಟವೇ. ಮದ್ಯಾನ್ನ ಮೇಲೆ ಆದರೂ ಅವು ಕುಡುಕ್ಕೊಂಡು ಇದ್ದದು ಚಾಯ. ಕಾಪಿ ಹೇಳಿ ಮಾಡಿ ಕುಡುಕ್ಕೊಂದು ಇದ್ದದು ಅಂಬಗಾಣ ಸಣ್ಣ ಮಕ್ಕೊ. ಹಾಂಗಾಗಿಯೇ ಕಾಪಿ ಹೇಳಿರೆ ಉದಿಯಪ್ಪಗಾಣದ್ದು, ಚಾಯ ಹೇಳಿರೆ ಹೊತ್ತಪ್ಪಗಾಣದ್ದು ಹೇಳಿ ಆತು.

ಕುಡಿವ ೨ ನಮೂನೆ ಕಶಾಯಂಗೋ ಬೇರೆ ದೇಶಂದ ಬಂದ ಆಸರಿಂಗೆಗೊ ಆದರೂ, ನವಗೇ ಗೊಂತಿಲ್ಲದ್ದೆ ನಮ್ಮ ‘ಹೊತ್ತು ಸೂಚಕ’ ರೂಡನಾಮ ಆಗಿ ಹೇಂಗೆ ಕೆಲಸ ಮಾಡ್ತು ಅಲ್ದಾ?

ಒಂದೊಪ್ಪ: ಹ್ಮ್, ಹೇಳಿದ ಹಾಂಗೆ, ನಿಂಗೊಗೆ ಕಾಪಿಗೆಂತ?

ಕಾಪಿ - ಚಾಯ : ಹೊತ್ತು ಸೂಚಕ ಪಾನೀಯಂಗಳ ಬಗ್ಗೆ, 5.0 out of 5 based on 1 rating
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಒಪ್ಪಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. Pavithra
    VA:F [1.9.3_1094]
    Rating: 0 (from 0 votes)

    ellinda ellige link maadthirappa ,,god!!!!!nice!

    [ಉತ್ತರುಸಿ]

  2. Avani
    VA:F [1.9.3_1094]
    Rating: 0 (from 0 votes)

    indu kaapigentara hELi kELuva haangE..innondu iddu…
    ammange yaavaagaLuu ondu rajja hottu talebeshi maaDlippa sangati…
    “naaLe kaapigenta maaDudu…?” hELi….
    maneyavarattare ella kELire aaruu sariyaagi hELavu….matte ammanE ondu aalOchane maaDi maaDekaavuttu….

    matte udiyappaagaaNa hottili jeerige kashaaya kuDivadaadarude kELudu “naaLe kaapigentara..?” hELiyE…

    [ಉತ್ತರುಸಿ]

  3. Anonymous
    VA:F [1.9.3_1094]
    Rating: 0 (from 0 votes)

    blog laikiddu!
    chikkamma 'kaapi kududaata?' hELi kELiddakke enna magaLu, (tinDi tinDu) 'aatu' hELi uttara koDuva badalu "aanu kaapi kuDittE ille.. :-) " hELikki nege barsittu..

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME