ಎಲ್ಲೊರನ್ನೂ ಕಾಯುವವ°, ಎಲ್ಲೋರನ್ನೂ ಕಾಯಿಸುವವ°..

ಕಾದು ಕಾದು ಕಾದು ಸಾಕಾತು ಓ ಮೊನ್ನೆ.
ಅಭಾವಂದೇ ನಾವುದೇ ಒಟ್ಟಿಂಗೆ ಚಾತುರ್ಮಾಸ್ಯಕ್ಕೆ ಹೋಪದು ಹೇದು ಮಾತಾಡಿಗೊಂಡದು.
ಎಂಟೂವರೆಗೆ ಬತ್ತ ಗುರುವಾಯೂರಪ್ಪನ ಬಸ್ಸಿಂಗೆ ರಂಗಮಾವ° ಹತ್ತಿ ಹೋಗಿಯೂ ಆತು,
ಎಂಟೂಮುಕ್ಕಾಲಕ್ಕೆ ಅತ್ತೆಗಳ ಕಾಂಬಲೆ ಗಣೇಶಮಾವ° ಹೋಗಿಯೂ ಆತು;
ದೂಜಪುರ್ಬು ಮಕ್ಕಳ ಶಾಲೆವೇನು ಬಿಟ್ಟುಗೊಂಡು ಒಂಬತ್ತುಗಂಟೆಗೆ ಹೋಗಿಯೂ ಆತು; ಅಭಾವ° ಎಲ್ಲಿದ್ದ°? ಇವನ ಪತ್ತೆಯೇ ಇಲ್ಲೆ!
ಉದೆಕಾಲಕ್ಕೆ – ಎಂಟೂಕಾಲಕ್ಕೆ ಬೈಲಕರೆಲಿ ಸಿಕ್ಕೇಕಾತು ಅವ°. ಆದರೆ, ಅವ° ಬಪ್ಪಗ ಒಂಭತ್ತೂವರೆ!
ಸೂರಂಬೈಲಿಂಗೆ ಹಾಲೆರದು, ಆನಂದನಲ್ಲಿ ಪೇಪರು ಓದಿ ಬಂದದೋ ತೋರ್ತು, ಈಚೋನು ಕಾದ್ದೇ ಬಾಕಿ.
ರಾಮ ಹೇಳುವ ಹೆಸರಿಂಗೇ ಕಾವ, ಕಾಯಿಸುವ ಸಂಗತಿ ಅಂಟಿಗೊಂಡಿದು ಹೇದು ವಿದ್ವಾನಣ್ಣ ಒಂದೊಂದರಿ ಹೇಳುದು ಅಂತೆ ಅಲ್ಲ! ಮೊನ್ನೆ ಕಾವಗ ಅಂದೊಂದರಿ ವಿದ್ವಾನಣ್ಣ “ರಾಮಂಗಾಗಿ ಎಲ್ಲೋರುದೇ ಕಾದ ಕತೆ / ರಾಮ ಎಲ್ಲೋರನ್ನೂ ಕಾದ ಕತೆ” ಹೇಳಿದ್ದು ನೆಂಪು ಮಾಡಿಗೊಂಡೆ. ವಿದ್ವಾನಣ್ಣ ಆ ಕಥೆ ಹೇಳುವಾಗ ನಿಂಗೊ ಇತ್ತಿದ್ದಿರೋ? ಇಲ್ಲೆಯೋದು!

~

ಕಾವದು ಹೇದರೆ ಎರಡು ಅರ್ತ ಇದ್ದು – ಒಂದ್ನೇದು ರಕ್ಷಣೆ ಕೊಡುದು, ದೇಶ ಕಾವದು – ಹೇಳ್ತವಲ್ಲದೋ ಹಾಂಗೆ. ರಾಮ ಎಲ್ಲೊರನ್ನೂ ಕಾದ್ದದು ಹೇದರೆ ಆ ಅರ್ಥ.
ಕಾವದು ಹೇದರೆ ಇನ್ನೊಂದರ್ತ? ಆನು ಕರಿಮಾರ್ಗದ ಬುಡಲ್ಲಿ ಮಾಡಿದ್ದಿಲ್ಲೆಯೋ – ಅದೇ. ನಿರೀಕ್ಷೆಲಿ ಕೂದುಗೊಂಬದು.
ರಾಮಾಯಣವ ಸರೀ ಗಮನುಸಿದರೆ ಗೊಂತಾವುತ್ತಾಡ– ರಾಮಾಯಣಲ್ಲಿ ಇಪ್ಪದೇ ಕಾವದು.
ಒಂದು – ರಾಮ ಎಲ್ಲೋರನ್ನೂ ಕಾವದು; ಇನ್ನೊಂದು – ಎಲ್ಲೋರುದೇ ರಾಮಂಗೆ ಕಾವದು.
ಹೋಳಿಗೆ ಕಾವದು ಹೇದು ಇನ್ನೊಂದರ್ಥ ಇದ್ದು – ಹೇದು ಅಡಿಗೆಸತ್ಯಣ್ಣ ರಂಗಣ್ಣನತ್ರೆ ನೆಗೆಮಾಡಿದ್ದವಡ; ಅದು ಬೇರೆ ಅರ್ಥ.

~

ರಾವಣ:

ಭೂಮಿಲಿ ಅಧರ್ಮ ತುಂಬಿ ತಾಂಡವ ಆಡಿಗೊಂಡಿತ್ತು. ರಾವಣನಂಥ ಧೂರ್ತ ಮಹಾನ್ ಬಲಶಾಲಿ ಆಗಿ ಬಿಟ್ಟಿದ°. ಸೂರ್ಯ ಚಂದ್ರರು ಅವ° ಹೇಳಿದ ಹಾಂಗೆ ಕೇಳೆಕ್ಕು. ಅವ° ಹೇಳುವಾಗ ಉದಿ, ಅವ° ಹೇಳಿ ಅಪ್ಪಗಳೇ ಇರುಳು.
ಕುಬೇರಂಗೆ ಉಂಬಲೆ ಗತಿ ಇಲ್ಲೆ; ಅವನ ಹತ್ತರೆ ಇರೆಕ್ಕಾದ ಖಜಾನೆ ಬೀಗದ ಕೈ ರಾವಣನ ಹತ್ತರೆ.
ಮಾತೆಯರಿಂಗೆ ರಕ್ಷಣೆ ಇತ್ತಿಲ್ಲೆ; ರಾವಣನ ಕೆಟ್ಟ ದೃಷ್ಟಿ ಯೇವತ್ತು ಬೀಳ್ತೋ –ಹೇದು ನಿತ್ಯವೂ ಹೆದರಿಕೆ..
ಹೀಂಗಿಪ್ಪ ಲೋಕಲ್ಲಿ – ಎಲ್ಲೋರುದೇ ಕಾದುಗೊಂಡಿತ್ತಿದ್ದವು, “ಆರಾರು ಬಂದು ಈ ರಾವಣನ ಒಂದು ಸಂಹಾರ ಮಾಡಿರೆ ಸಾಕಿತ್ತನ್ನೇ” ಹೇದು.

~

ದಶರಥ:
ಅಯೋಧ್ಯಾದಿಪತಿ ದಶರಥಂಗೆ ಸಂತಾನ ಭಾಗ್ಯ ಇತ್ತಿಲ್ಲೆ.
ರಾಜಮನೆತನಕ್ಕೆ, ಸೂರ್ಯವಂಶಕ್ಕೇ ಮಕ್ಕೊ ಆತಿಲ್ಲೆ ಹೇದು ಕಾದ°, ಕಾದ° – ಮಾಪ್ಳೆಗಳ ಹಾಂಗೆ ಮೂರುಮೂರು ಹೆಂಡತ್ತಿಯಕ್ಕಳ ಕಟ್ಟಿಗೊಂಡ°; ಆದರೂ ಆತಿಲ್ಲೆ!
ಕಂಡ ಕಂಡ ಕ್ಷೇತ್ರಕ್ಕೆ ತೀರ್ಥಯಾತ್ರೆ ಮಾಡಿದ°, ಉಹುಂ. ಸಂತಾನಗೋಪಾಲ ಒಲುದ್ದನೇ ಇಲ್ಲೆ.
ದಶರಥ ಕಾದುಗೊಂಡೇ ಇತ್ತಿದ್ದ°.

~
ಅಹಲ್ಯೆ:
ಋಷಿಪತ್ನಿ ಅಹಲ್ಯೆ ಬಹು ಸುಂದರಿ ಆಡ.
ಸುಂದರಿ ಆದರೆಂತಾತು, ತೋಡಕರೆಲಿ ಒಸ್ತ್ರ ಒಗೆತ್ತ ಭಾಗ್ಯ ತಪ್ಪಿತ್ತೋ? ಋಷಿಪತ್ನಿ ಆಗಿ ಎಂತೆಲ್ಲ ಮಾಡೇಕಾದ್ಸೋ – ಅದೆಲ್ಲವನ್ನೂ ಮಾಡಿತ್ತು. ಮಾಡಿಗೊಂಡೇ ಇತ್ತು.
ಅದೊಂದು ಕೆಟ್ಟಗಳಿಗೆ ಎಂತಾತೋ – ತೋಡಕರೆಂಗೆ ಒಸ್ತ್ರ ಒಗವಲೆ ಹೋದಲ್ಲಿ ಇಂದ್ರ ಪತಿ ಗೌತಮಋಷಿಯ ರೂಪಲ್ಲಿ ಬಂದನಾಡ.
ಒಂದೇ ಒಂದು ಕ್ಷಣಕ್ಕೆ ಮನಸ್ಸಾತಾಡ, ಗೌತಮ ಋಷಿ ಅಲ್ಲ – ಹೇದು ಮತ್ತೆ ಗೊಂತಾತಾಡ; ಕೂಡ್ಳೇ ತಪ್ಪುಭಾವನೆ ಮನಸ್ಸಿಲಿ ಬಂತು. ಆದರೆ ಪಾತಿವ್ರತ್ಯ ನಷ್ಟ ಆದ ನಮುನೆ ಆತಿಲ್ಲೆಯೋ? ಋಷಿಗೆ ಅಷ್ಟು ಸಾಕಿದಾ.
ಋಷಿಗೊಕ್ಕೆ ಒಂದು ಬುದ್ಧಿ ಎಂತರ ಹೇದರೆ, ಕೊಶಿ ಆದರೆ ವರ ಕೊಡುದು, ಕೋಪ ಬಂದರೆ ಶಾಪ ಕೊಡುದು – ಹಿಂದೆ ಮುಂದೆ ನೋಡ್ಳಿಲ್ಲೆ!
ಹಾಂಗೇ, ಸ್ವಂತ ಹೆಂಡತ್ತಿ – ಅಹಲ್ಯೆಗೂ ಶಾಪ ಕೊಟ್ಟನಾಡ. ನೀನು ಕಲ್ಲು ಬಂಡೆ ಆಗಿ ಹೋಗು – ಹೇದು.
ತಪ್ಪಾತು ತಪ್ಪಾತು ಹೇದು ಹೆಂಡತ್ತಿ ಕೈಕ್ಕಾಲು ಹಿಡುದು ಬೇಡಿಗೊಂಡತ್ತಾಡ; ಒಂದರಿಯಾಣ ಕೋಪಲ್ಲಿ ಶಾಪ ಕೊಟ್ಟದು ಅಪ್ಪು, ಆದರೆ ಒಪ್ಪಿಗೊಂಡತ್ತನ್ನೇ – ಪಾಪನ್ನೇ ಕಂಡತ್ತು ಋಷಿಗೆ.
ಕೊಟ್ಟ ಶಾಪವ ಹಿಂದೆ ತೆಗವಲೆಡಿತ್ತೋ? ಇಲ್ಲೆ. ಅದಕ್ಕಾಗಿ ಶಾಪನಿಮುರ್ತಿಗೆ ಪಿರಿಮದ್ದು – “ರಾಮ ಬಂದು ನಿನ್ನ ಮುಟ್ಟಿಅಪ್ಪಗ ಪುನಾ ಮನುಷ್ಯರೂಪ ಸಿಕ್ಕುತ್ತು ನಿನಗೆ” – ಹೇಳಿಕ್ಕಿ ಹೋದನಾಡ.
ಆ ಕಾರ್ಗಾಣ ಕಸ್ತಲೆ ಕಾಡಿಲಿ, ಬಂಡೆರೂಪಲ್ಲಿ ಬಿದ್ದ ಅಹಲ್ಯೆ – ರಾಮ ಯೇವತ್ತು ಬತ್ತ° – ಹೇದು ಕಾವ ಕೆಲಸ.
ರಾಮ ಬಪ್ಪದು ಬಿಡಿ, ಆ ಹೊತ್ತಿಂಗೆ ದಶರಥಂಗೆ ಮಕ್ಕಳೇ ಆಗಿತ್ತಿದ್ದವಿಲ್ಲೆ!!
ಋಷಿಗೊಕ್ಕೆ ಭವಿಷ್ಯ ಗೊಂತಾಗಿಂಡು ಇದ್ದತ್ತು ಹೇಳುಸ್ಸು ಸುಮ್ಮನೆ ಅಲ್ಲ ಇದಾ..!

~

ಕೌಸಲ್ಯೆ:
ಮತ್ತೆ, ದೇವಲೋಕದ ಸೂಚನೆ ಪ್ರಕಾರ ದಶರಥ ಪುತ್ರಕಾಮೇಷ್ಟಿ ಮಾಡಿದನಾಡ.
ಅಲ್ಲಿ ಪ್ರಸಾದ ರೂಪಲ್ಲಿ ಸಿಕ್ಕಿದ ಪಾಯಿಸವ ಹೆಂಡತ್ತಿಯಕ್ಕೊಗೆ ಹಂಚಿದನಾಡ.
ಆಚ ಹೊಡೆಲಿ – ಅಧರ್ಮಿ ರಾವಣನ ಸಂಹಾರಕ್ಕಾಗಿ ವಿಷ್ಣು ಒಂದು ಪುಣ್ಯಗರ್ಭಕ್ಕಾಗಿ ಕಾದುಗೊಂಡಿತ್ತಿದ್ದನಲ್ಲದೋ – ಇದೇ ಸಂದರ್ಭಕ್ಕೆ ಕಾದುಗೊಂಡಿದ್ದ ಹಾಂಗೆ – ಕೌಸಲ್ಯೆಯ ಪುಣ್ಯಗರ್ಭಲ್ಲಿ ಆವಿರ್ಭಾವಗೊಂಡನಾಡ.
ಒಂದು – ಎರಡು – ಮೂರು – ಒಂಭತ್ತು – ಗರ್ಭಕ್ಕೆ ತಿಂಗಳುಗೊ ಬೆಳದ ಹಾಂಗೇ ದಶರಥ ಕಾದ°, ಕೌಸಲ್ಯೆಯೂ ಕಾದತ್ತು; ಪೂರ್ಣವಾಗಿ ಬೆಳದು ಅಖೇರಿಗೆ ಹತ್ತನೇ ತಿಂಗಳಿಂಗಪ್ಪಗ ಪುಣ್ಯಾತ್ಮನ ಜನನ ಆ ಪುಣ್ಯಗರ್ಭಲ್ಲಿ ಆತು.

~

ಋಷಿ ವರ್ಗ:

ಋಷಿಮುನಿಗಳ ಯಾಗಕ್ಕೆ ರಕ್ತ-ಮಾಂಸವ ಎರದು ಹಾಳು ಮಾಡಿಗೊಂಡಿದ್ದ ಮಾರೀಚ-ಸುಬಾಹುಗಳ ಉಪದ್ರ ತಡೆತ್ತೇ ಇಲ್ಲೆ; ಆರಾರು ಬಂದು ಇವರ ಒಂದು ಮಟ್ಟು ಮಾಡೇಕಾತು – ಹೇದು ಎಲ್ಲಾ ಋಷಿಗಳುದೇ ಕಾದುಗೊಂಡಿತ್ತಿದ್ದವಾಡ. ಅಷ್ಟಲ್ಲದ್ದೆ ಅವಕ್ಕೆ ಯಾಗ ಪೂರ್ಣ ಮಾಡ್ಳೆ ಗೊಂತಿಲ್ಲೆ; ಸ್ವಾಹಾ-ಆ – ಹೇದು ಹವಿಸ್ಸು ಎರವಗ, ಆಚಹೊಡೆಂದ ಎರದವು, ಕಾಟುಗೊ.
ಅಂತೂ, ಅವು ಕಾದ್ಸಕ್ಕೆ ಸರೀ ಆತು.
ರಾಮನ ಜನನ ಆತು; ಬಾಲ್ಯ ಬೆಳಕ್ಕೊಂಡು ಬಂತು.
ವಿದ್ಯಾಭ್ಯಾಸಕ್ಕಾಗಿ ವಿಶ್ವಾಮಿತ್ರನ ಹತ್ತರಂಗೆ ಬಂದ ಕತೆ ನಿಂಗೊಗೆ ನೆಂಪಿಕ್ಕು. ಯಾಗ ರಕ್ಷಣೆಗೆ ರಾಮ-ಲಕ್ಷ್ಮಣರು ನಿಂದವು. ಮಾರೀಚ ಹೋಗಿ ದೂ-ರದ ದ್ವೀಪಲ್ಲಿ ಬಿದ್ದ; ಈಗ ಮಾರಿಷಸ್ ಹೇಳ್ತವು ಆ ದ್ವೀಪವ, ಅದಿರಳಿ.

~

ಸೀತೆ:

ಭೂಮಿಯ ಮಗಳು ಸೀತೆ. ಸೀತಾಮಾತೆಯ ಅಪ್ಪ° ಜನಕರಾಜ.
ಇಷ್ಟೊಳ್ಳೆ ಜಾತಕದ, ಚೆಂದದ ಕೂಸಿಂಗೆ ಯೋಗ್ಯ ವರ ಬೇಕಾತಾನೇ – ಆರ, ಎಲ್ಲಿಂದ ಹುಡ್ಕುಸ್ಸು ಹೇದು ಅರಡಿಯದ್ದೆ ಒಟ್ಟು ತಲೆಬೆಶಿಲಿ ಇತ್ತಿದ್ದನಾಡ; ಜನಕರಾಜ°. ಹಾಂಗಾಗಿಯೇ ಅದಾ – ಸ್ವಯಂವರ ಮಾಡಿದ್ದು.
ಆ ಸ್ವಯಂವರಕ್ಕೂ ಹಾಂಗೇ, ಶಿವಧನುಸ್ಸು ನೇಚೇಕು. ಆರಿಂಗೆಡಿಗು!! ಹು.
ಬಂದ ಎಲ್ಲಾ ವರಂಗಳೂ ಶಿವನ ಧನುಸ್ಸು ನೆಗ್ಗುತ್ತವೋ – ಹೇದು ಸೀತೆ ಕಾಯುಸ್ಸು. ಆ ಕಾಯುವಿಕೆ ರಾಮ ಬಪ್ಪನ್ನಾರವೂ ಇದ್ದತ್ತು.
ಅಂತೂ ಒಂದಿನ ರಾಮ ಬಂದ°, ಶಿವಧನುಸ್ಸು ನೇಚುದು ಬಿಟ್ಟು, ಮುರುದೇ ಹೋತು. ಪೋ!
ಅಂತೂ ಸೀತೆಗೆ ರಾಮ ಸಿಕ್ಕಿದ°.
ಅಯೋಧ್ಯೆಗೆ ಬಂದು ಸಂಸಾರ ಮಾಡುವ ಹೊತ್ತಿಂಗೇ, ನಮ್ಮ ಮಂಥರೆ ಮೆಂತೆ ಅರದು ಹುಳಿ ಬರ್ಸಿತ್ತು ಇದಾ.
ದಶರಥ ನಿಜವಾದ ಹುಳಿಮಾವ° ಆಗಿ ಹೋದ ಆ ಹೊತ್ತಿಂಗೆ, ಸೀತೆಯ ಮಟ್ಟಿಂಗೆ.
ಅಂತೂ – ಸೀತೆಯನ್ನೂ, ರಾಮನನ್ನೂ ಕಾಡಿಂಗೆ ಕಳುಸೇಕಾದ ಪರಿಸ್ಥಿತಿ ಬಂತು. ಇರಳಿ.
ಕಾಡಿಲಿ ರಾವಣ ಹೊತ್ತುಗೊಂಡು ಹೋದ್ಸು ಗೊಂತಿದ್ದನ್ನೇ? ಹಾಂಗೆ ತೆಕ್ಕೊಂಡು ಹೋದ ಸೀತೆಯ ಲಂಕಾದೇಶದ ಅಶೋಕಾವನಲ್ಲಿ ಕೂಡಿ ಹಾಕುತ್ತ° ಆ ರಾವಣ.
ಅಲ್ಲಿಯೂ ಕಾವದೇ ಕೆಲಸ ಸೀತೆಗೆ, ಈ ರಾಮ ಬತ್ತನೋ? ಅಲ್ಲ ಮರದು ಬಿಡ್ತನೋ? ಅಲ್ಲ ಬಂದು ಎಲ್ಲೋರನ್ನುದೇ ಸಂಹಾರ ಮಾಡಿ ಬಿಡುಸಿ ತೆಕ್ಕೊಂಡು ಹೋವುತ್ತನೋ – ಹೇದು ನಿತ್ಯವೂ ಯೋಚನೆ ಮಾಡಿ, ಚಿಂತೆ ಮಾಡಿ ಕಾದುಗೊಂಡಿತ್ತದು ಸೀತೆಯ ಕಾರ್ಯ.

~

ಜಟಾಯುಃ
ರಾವಣ ಸೀತೆಯ ಕರಕ್ಕೊಂಡು ಹೋಪಾಗ ಎಡೆದಾರಿಲಿ ತಡವಲೆ ನಿಂದೋನು ಈ ಪಕ್ಷಿರಾಜ.
ದಶರಥನ ದೋಸ್ತಿಯೂ ಅಪ್ಪು, ಹದ್ದುಗಳ ರಾಜನೂ ಅಪ್ಪು, ಮಹಾನ್ ಬಲಶಾಲಿಯೂ ಅಪ್ಪು.
ಆದರೆ, ಎಷ್ಟೇ ಬಲ ಇದ್ದರೂ ಕಾಮಾತುರನಾದ ರಾವಣನ ಎದುರು ಎಂತದು!
ರಾವಣನ ಹತ್ತರೆ ಬಲವಾದ ಆಯುಧ – ಕತ್ತಿ ಇದ್ದತ್ತು – ಜಟಾಯುವಿನ ಹತ್ತರೆ ಕೊಕ್ಕು ಮಾಂತ್ರ ಇದ್ದದು.
ಸೀತೆಯ ರಕ್ಷಣೆಗೆ ಹೆರಟ ಪಕ್ಷಿಯ ಆಧಾರ – ರೆಂಕೆಯನ್ನೇ ಕಡುದು ಹಾಕುತ್ತ ರಾವಣ!
ಆ ಜಟಾಯು ರಾಮ ಬಪ್ಪನ್ನಾರವೂ ಜೀವ ಹಿಡ್ಕೊಂಡು ಕಾಯ್ತ°; ರಾಮ ಬಂದ ಮತ್ತೆ ಸೀತೆ ಇಂತಾ ಕಡೆಂಗೆ ಹೋಯಿದು – ಹೇಳಿಕ್ಕಿ ಪ್ರಾಣ ಬಿಡ್ತ°.

~

ಭರತಃ

ದಶರಥನ ದೊಡ್ಡಮಗ° ರಾಮ ಕಾಡಿಂಗೆ ಹೋದಪ್ಪದ್ದೇ, ಭರತಂಗೆ ಯುವರಾಜ ಪಟ್ಟ ಸಿಕ್ಕಿತ್ತು.
ಇನ್ನೆಂತ ಆಯೇಕು – ಇಡೀ ಅಯೋಧ್ಯಾ ನಗರವೇ ಅವಂದು; ಅಲ್ಲದೋ?
ಅಲ್ಲಪ್ಪಾ – ಭರತಂದೇ ಕಾದು ಕೂದ್ದೇ ಸರಿ; ರಾಮ ಒಪಾಸು ಬಪ್ಪಲೆ.
ದಶರಥನ ದಿನ ಕಳುದ ಮತ್ತೆ ರಾಮನ ಹುಡ್ಕಿಂಡು ಕಾಡಿಂಗೆ ಹೋದ°. ರಾಮನ ಪಗರಕ್ಕೆ ಅವನ ಮೆಟ್ಟಿನಜೋಡು ತೆಕ್ಕೊಂಡು ಹೋಗಿ, ರಾಜಪೀಠಲ್ಲಿ ಮಡಗಿ ಕಾರ್ಬಾರು ಮಾಡಿದನಾಡ. ಅವನ ಇಡೀ ರಾಜ್ಯಭಾರವೂ ಅಣ್ಣನ ಕಾಯುವಿಕೆಲೇ ನೆಡದ್ಸು.
ಮನೆಗಳಲ್ಲಿ ಒಯಿವಾಟು ಮಾಡುವ ಎಲ್ಲಾ ತಮ್ಮಂದ್ರಿಂಗೆ ಆದರ್ಶ ಈ ಭರತ ಹೇದರೆ.

~

ಕಬಂಧ:

ಯೇವದೋ ಕೆಟ್ಟ ಗಳಿಗೆಲಿ ಒಬ್ಬ ಯಕ್ಷಂಗೆ ಶಾಪ ಸಿಕ್ಕಿತ್ತು. ಕಬಂಧ ರಾಕ್ಷಸ ಆಗಿ ಹುಟ್ಟುವ ಶಾಪ ಅದು.
ರಾಕ್ಷಸ ಆಗಿ ಅವನ ಉಪದ್ರ ಜೋರಪ್ಪಾಗ ಇಂದ್ರ ಅವನ ವಜ್ರಾಯುಧಲ್ಲಿ ಒಂದು ಮಡಗಿದನಡ, ತಲಗೆ.
ತೆಕ್ಕೊಳಿ – ತಲೆ ದೇಹದ ಒಳಂಗೆ ಹೋತು.
ಹಾಂಗೆ, ಕಾಣ್ತಿಲ್ಲೆ, ಕೈಗೆ ಸಿಕ್ಕಿದ ವಸ್ತುಗಳ ಹಿಡುದು ನುಂಗುದು ಆ ಕಬಂಧ ರಾಕ್ಷಸನ ಉಪದ್ರ ಕಾರ್ಯ.
ಅವಂಗೆ ಪಿರಿಶಾಪ ಎಂತರ ಹೇದರೆ – ರಾಮ ಬಂದು ನಿನ್ನ ಕೈ ಕಡುದಪ್ಪಗ ನಿನಗೆ ಮುಕ್ತಿ – ಹೇದು.
ಹಾಂಗೆ, ಆ ಕಬಂಧನೂ ದೃಷ್ಟಿಯೇ ಇಲ್ಲದ್ದರೂ ರಾಮ ಬಕ್ಕು, ಬಂದು ಒಂದಿನ ಎನ್ನ ಮೋಕ್ಷ ಮಾಡುಗು – ಹೇದು ಕಾದುಗೊಂಡಿತ್ತಿದ್ದ°. ಪಾಪ.

~

ಹನುಮಂತಃ

ಕಾದ ಹನುಮಂಗೆ ಸಿಕ್ಕಿದ ಕಾವ ರಾಮ

ಕಾದ ಹನುಮಂಗೆ ಸಿಕ್ಕಿದ ಕಾವ ರಾಮ

ಈಗ ಮೇಗೆ ಹೇಳಿದ ಎಲ್ಲೋರುದೇ ಕಾದ್ಸು ಒಂದಲ್ಲ ಒಂದು ಒಳಪ್ಪೆಟ್ಟಿಂಗೆ, ಲಾಭಕ್ಕಾಗಿ.
ಆದರೆ, ಈ ಹನುಮಂತ ಹೇಳ್ತ ಜೀವಿ ತನಗೆ ಏನೇನೂ – ಒಂದು ಲಾಭ ಇಲ್ಲದ್ದರೂ ರಾಮನ ಆಗಮಿಕೆಗಾಗಿ ಕಾದು ಕೂಯಿದ°.
ಹೆಚ್ಚಿನ ವಿವರ ನಾವು ಕಳುದ ವಾರ ಮಾತಾಡಿದ್ದಿದಾ.
ಹನುಮಂತ ಕಾದ್ದು ರಾಮನ ದರ್ಶನಕ್ಕಾಗಿ, ರಾಮನ ಸೇವೆಗಾಗಿ.

~

ಕಾದ ದಶರಥಂಗೆ ಸಂತಾನಭಾಗ್ಯ ಕೊಟ್ಟು, ಕಾದ ಸೀತೆಗೆ ಮಾಂಗಲ್ಯ ಭಾಗ್ಯ ಕೊಟ್ಟೂ, ಕಾದ ಭರತಂಗೆ ಸಾಮೀಪ್ಯ ಕೊಟ್ಟು, ಕಾದ ರಾವಣ, ಅಹಲ್ಯೆ, ಕಬಂಧ- ಇತ್ಯಾದಿ ಶಾಪಜೀವಿಗೊಕ್ಕೆ ಮೋಕ್ಷ ಕೊಟ್ಟು, ಕಾದ ಹನುಮಂತಂಗೆ ಕೊಶಿ ಕೊಟ್ಟು, ಇಡೀ ಲೋಕವನ್ನೇ ಕಾದ ಆ ಅಮೋಘ ಶೆಗ್ತಿ ರಾಮ.
ಅಂತಾ ರಾಮನ, ರಾಮಕಥೆಯ ನಾವೆಲ್ಲೋರುದೇ ಕಾದು ಕಾದು ಕಾದು ಕೂದು ಕೇಳ್ತು – ಹೇಳುದೇ ನಮ್ಮ ಮೋಕ್ಷಕ್ಕೆ ದಾರಿ.

~
ಒಂದೊಪ್ಪ: ಕಾವ ರಾಮ ನಮ್ಮ ಕಾಯೇಕಾರೆ ನಾವುದೇ ಕಾದು ಕೂರೇಕು.

ಸೂಃ ಪಟ ಕೊಟ್ಟದು ಶ್ರೀಪರಿವಾರದ ಗೌತಮಣ್ಣ

ಒಪ್ಪಣ್ಣ

   

You may also like...

12 Responses

  1. ಹರೇರಾಮಾ. ತಾಳುವೆಕಿಗಿಂತ ತಪವು ಇಲ್ಲ ಹೇಳಿ ದಾಸ ವಾಣಿ ಇದ್ದನ್ನೆ ಒಪ್ಪಣ್ಣಾ. ಒಲ್ಳೆ ಆಯ್ಕೆ., ಬೇಡದ್ದ ಕೆಲಸ ಮಾಡಿಗೊಂಡಿದ್ದ ಪ್ರಾಚೇತಸನ ವಾಲ್ಮೀಕಿ ಮಾಡ್ಲೆ ಅವನ ಮೈಲಿ ಪುಂಚ ಬೆಳವನ್ನಾರ ವಾಲ್ಮೀಕಿ ಕಾದುಕೂಯಿದ ಅಲ್ಲೊ? ಪ್ರಾಚೇತಸನ ರಾಮಾಯಣ ಹೇಳುವದು ನಮ್ಮ ಧರ್ಮ,ಸಂಸ್ಕ್ರತಿಯ ತಾಯಿಬೇರು ಇದು ಇದ್ದದ್ದರಿಂದಲೇ ನಮ್ಮ ಅಸ್ಥಿತ್ವ . ಅದರ ಒಳಿಶಿ ಬೆಳೆಶಲೆ ಬೇಕಾದಷ್ಟು ಕಾಲ ಕಾವೊ . ರಾಮಾಯಣ ಲ್ಲಿ ಬಪ್ಪ ಸತ್ಪಾತ್ರ ಆದರ್ಶಕ್ಕಾಗಿ ನಿತ್ಯ ನಿರಂತರ ಜನಮಾನಸರು ಕಾಯುತ್ತ ತಿಳಿತ್ತಾ ಅದರ ಪಾಲಿಸುತ್ತಾ ಇರೆಕು ಹೇಳಿ ಶ್ರೀ ಗುರುಗ ಳ ಆದೇಶ . ಅಂತೂ ಒಲ್ಳೆ ಸುದ್ದಿ ಒಪ್ಪಣ್ಣಾ

  2. ಹರೇರಾಮಾ. ತಾಳುವೆಕಿಗಿಂತ ತಪವು ಇಲ್ಲ ಹೇಳಿ ದಾಸ ವಾಣಿ ಇದ್ದನ್ನೆ ಒಪ್ಪಣ್ಣಾ. ಒಲ್ಳೆ ಆಯ್ಕೆ., ಬೇಡದ್ದ ಕೆಲಸ ಮಾಡಿಗೊಂಡಿದ್ದ ಪ್ರಾಚೇತಸನ ವಾಲ್ಮೀಕಿ ಮಾಡ್ಲೆ ಅವನ ಮೈಲಿ ಪುಂಚ ಬೆಳವನ್ನಾರ ವಾಲ್ಮೀಕಿ ಕಾದುಕೂಯಿದ ಅಲ್ಲೊ? ವಾಲ್ಮೀಕಿ ರಾಮಾಯಣ ಹೇಳುವದು ನಮ್ಮ ಧರ್ಮ,ಸಂಸ್ಕ್ರತಿಯ ತಾಯಿಬೇರು ಇದು ಇದ್ದದ್ದರಿಂದಲೇ ನಮ್ಮ ಅಸ್ಥಿತ್ವ . ಅದರ ಒಳಿಶಿ ಬೆಳೆಶಲೆ ಬೇಕಾದಷ್ಟು ಕಾಲ ಕಾವೊ . ರಾಮಾಯಣ ಲ್ಲಿ ಬಪ್ಪ ಸತ್ಪಾತ್ರ ಆದರ್ಶಕ್ಕಾಗಿ ನಿತ್ಯ ನಿರಂತರ ಜನಮಾನಸರು ಕಾಯುತ್ತ ತಿಳಿತ್ತಾ ಅದರ ಪಾಲಿಸುತ್ತಾ ಇರೆಕು ಹೇಳಿ ಶ್ರೀ ಗುರುಗ ಳ ಆದೇಶ . ಅಂತೂ ಒಲ್ಳೆ ಸುದ್ದಿ ಒಪ್ಪಣ್ಣಾ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *