Oppanna.com

ಅಂಟಿದ ಕೆಸರು ಹೋದಪ್ಪಗ ಕಂಚಿನ ಹೊಳಪು ಕುಂದುತ್ತಿಲ್ಲೆ.!

ಬರದೋರು :   ಒಪ್ಪಣ್ಣ    on   29/11/2013    14 ಒಪ್ಪಂಗೊ

ಗುರುವಾಯೂರಿಂಗೆ ಹೋದೋರು ಬಂದಾತು.
ಕೂಸುನೋಡ್ಳೆ ಬಂದೋರು ಹೋಗಿ ಆತು,
ಶಾಮಣ್ಣ ನೆಗೆಚಿತ್ರ ತೋರ್ಸಿ ನೆಗೆಮಾಡ್ಸಿ ಆತು,
ನೆಮ್ಮದಿಲಿ ಉಂಡು ಸ್ವಸ್ಥ ಕಾಲುನೀಡಿ ಕೂದಾತು, ಇನ್ನು ಬೈಲಿಂಗೊಂದರಿ ಶುದ್ದಿ ಹೇಳಿಕ್ಕುವೊ°,
ಅದರಿಂದಲೂ ಮದಲು ಇಂದ್ರಾಣ ಪೇಪರಿಲಿ ಎಂತ ಇದ್ದು ನೋಡಿಕ್ಕುವೊ° – ಹೇದು ಪುಟ ಬಿಡುಸಿದರೇ…!!
ಅಮೋಘ ಸಂಗತಿ ನೆಡದು ಹೋತು. ಈ ಸಂಗತಿಯನ್ನೇ ಬೈಲಿಲಿ ಮಾತಾಡಿರೆ ಎಂತ..??!
~

ಮದಲಿಂಗೆ ನಮ್ಮ ಊರಿಲಿ “ನಂದ”ರ ಆಳ್ವಿಕೆ ಇದ್ದತ್ತಾಡ.
ಅಧರ್ಮ, ಅವಿದ್ಯಾವಂತ, ಸಂಸ್ಕಾರ ಹೀನರಾದ ಅವರ ಆಳ್ವಿಕೆಲಿ ಪಾಂಡಿತ್ಯಕ್ಕೆ ಬೆಲೆ ಇದ್ದತ್ತಿಲ್ಲೇಡ!
ಆ ಸಮೆಯಲ್ಲಿ ಸುಸಂಸ್ಕೃತರು, ವಿದ್ಯಾವಂತರು, ಪಂಡಿತರು – ಎಲ್ಲೋರುದೇ ಊರು ಬಿಟ್ಟು ಹೋಯಿದವಾಡ.
ನಂದರ ಆಡಳ್ತೆ ಮುಗುದ ಮತ್ತೆಯೇ ಅವು ಒಪಾಸು ಬಂದ್ಸು – ಹೇಳ್ತದು ಹಳೇ ಕತೆ.
ಇದರ ಸತ್ಯಾಸತ್ಯತೆ ಅರಡಿಯೇಕಾರೆ ಲಕ್ಷ್ಮಿಅಕ್ಕನ ಪುಸ್ತಕ ಕಟ್ಟಲ್ಲಿ ತೆಗದು ಹುಡ್ಕಿ ನೋಡಿಯೇ ಆಯೇಕಟ್ಟೆ, ಒಪ್ಪಣ್ಣಂಗೆ ಅದೆಲ್ಲ ಅರಡಿಯ.
ಅಂದು ನಂದರ ಆಡಳ್ತೆ ಇದ್ದತ್ತೋ ಗೊಂತಿಲ್ಲದ್ದರೂ – ಈಗಾಣ ಕಾಲಲ್ಲಿ ಅದೇ ನಮುನೆಯ ನಾಸ್ತಿಕರ ಆಡಳ್ತೆಯ ರಾಜ್ಯ ನಮ್ಮ ಹತ್ತರೆಯೇ ಇದ್ದು.
ಅದುವೇ ನಮ್ಮ ಚೆನ್ನೈಭಾವನ ಊರು!! 🙂
ನೇರವಾಗಿ ಶುದ್ದಿ ಹೇಳುವ ಮದಲು, ಚೆನ್ನೈಭಾವ ಅಂದೊಂದರಿ ಹೇಳಿದ ಸಂಗತಿಯ ಮಾತಾಡುವೊ°.
~

ಆರ್ಯ – ದ್ರಾವಿಡ:

ವೇದ ಮಂತ್ರಂಗಳಲ್ಲಿ ಆರ್ಯರು – ಹೇಳುವ ಉಲ್ಲೇಖ ಧಾರಾಳವಾಗಿ ಬತ್ತಡ,  ಚೆನ್ನೈಭಾವ ಹೇಳುಗು.
ಸುಸಂಸ್ಕೃತರು, ಸಂಸ್ಕಾರ ಅರಡಿತ್ತೋರು – ಹೇಳ್ತ ಜೆನಂಗಳ ಆರ್ಯರು – ಹೇದು ಗುರುತುಸುತ್ತವಾಡ.
ಆರಾರು ಅದಕ್ಕೆ ಹೊರತಾಗಿ ನೆಡವೋರ ’ಅನಾರ್ಯ’ ಹೇಳಿಯೂ ಹೇಳಿಗೊಂಡಿತ್ತವಾಡ.
ನಾವಿಲ್ಲಿ ಆರ್ಯ ಆರ್ಯ – ಹೇಳಿಗೊಂಡು ಕೂದರೆ , ಕಣ್ಣನೂರು ಭಾವಂಗೆ “ಭಾರ್ಯೆ” ನೆಂಪಕ್ಕು,  ಬಾಬುವಿಂಗೆ ಬಾವಿಕೆಲಸ ನೆಂಪಕ್ಕು
(ಸಂಕೊಲೆ: https://oppanna.com/?p=21178) – ಹೋ – ಹು! ಇರಳಿ.
ಹಾಂಗೆ ಅದು ಆರ್ಯರು.
ಒಟ್ಟಾಗಿ ಸಂಸ್ಕಾರ ಅರಡಿತ್ತೋರ ಆರ್ಯರು – ಹೇದು ಗುರುತಿಸಿಗೊಂಡು ಇತ್ತಿದ್ದವಾಡ.

ಇನ್ನು ದ್ರಾವಿಡರ ಶುದ್ದಿ – ಮನುಷ್ಯರಲ್ಲಿ ಹಲವಾರು ವಂಶಂಗೊ ಇದ್ದು ಅಪ್ಪೋ;
ಬೆಳಿ ಚರ್ಮದೋರು, ಕುಂಞಿಕಣ್ಣಿನೋರು, ಉರುಟು ಮೂಗಿನೋರು, ಕರಿಚೋಲಿಯೋರು, ಕೆಂಪು ಕೂದಲಿನೋರು – ಇತ್ಯಾದಿ.
ಬೋಚಬಾವನ ಹಾಂಗಿರ್ತೋರ “ದಪ್ಪಚರ್ಮದೋರು” ಹೇಳ್ತವು ರಂಗಮಾವ ಒಂದೊಂದರಿ. ಆದರೆ ಅದು ಪೊಕ್ಕಡೆ, ಹಾಂಗೊಂದು ಪ್ರಭೇದ ಇಲ್ಲೇಡ, ಮಾಷ್ಟ್ರುಮಾವ° ಹೇಳಿತ್ತಿದ್ದವು.
ಅದೇನೇ ಇರಳಿ, ದ್ರವಿಡ ವಂಶಕ್ಕೆ ಸೇರಿದೋರು ದ್ರಾವಿಡರು – ಹೇದು ತೋರಮಟ್ಟಿಂಗೆ ಒಂದು ಅಂದಾಜಿ.
ಸರಿಯಾದ ಬದ್ಕಾಣ ಅರಡಿತ್ತ ದ್ರಾವಿಡರೂ ಆರ್ಯರೇ.  ಸುಸಂಸ್ಕೃತರಾದ ಆರ್ಯರು ದ್ರವಿಡ ವಂಶಲ್ಲಿ ಹುಟ್ಟಿರೆ ಅವು ದ್ರಾವಿಡರೇ!
ಅದಿರಳಿ.

~

ರಾಜಕೀಯ:

ಜೆನಂಗೊ ಓಟು ಹಾಕಿ ರಾಜ್ಯಾಡಳ್ತೆ ಮಾಡ್ತ ಏರ್ಪಾಡು ಬಂದಪ್ಪದ್ದೇ – ಹೆಚ್ಚಿನ ಜೆನಂಗೊ ಓಟುಹಾಕಿದ್ದದು ಗೆಲ್ಲುತ್ತು – ಹೇಳಿ ಆತಲ್ಲದೋ?
ಹೆಚ್ಚು ಓಟು ಬರೇಕು; ಒಳುದೋರಿಂದ ಹೆಚ್ಚಿಗೆ ಬಂದರೆ ಸಾಕು!
ಹೆಚ್ಚು ಜೆನ ಓಟು ಹಾಕಲೆ ಎಂತ ಮಾಡೇಕು? – ಒಂದೋ ಒಳ್ಳೆ ಕೆಲಸ ಮಾಡಿ ಅವರ ಮನಸ್ಸು ಗೆಲ್ಲೇಕು; ಅಲ್ಲದ್ದರೆ ಏನಾರು ಮಾತಾಡಿ ಅವರ ಮಂಗಮಾಡೇಕು.
ಒಂದೊಂದು ಊರಿಲಿ ಒಂದೊಂದು ವಿದ್ಯೆಗೊ ನೆಡೆತ್ತಾ ಇದ್ದು. ಇನ್ನೂ ಹಲವು ನೆಡವದಿದ್ದು.
ಯೇವದರ್ಲಿ ಹೆಚ್ಚು ಪ್ರಚಾರ ಸಿಕ್ಕುಗು, ಓಟು ಸಿಕ್ಕುಗು – ಹಾಂಗಿರ್ಸು ಸಾಲು ಸಾಲು ಬಕ್ಕಡ, ಕೊಳಚ್ಚಿಪ್ಪು ಭಾವ ಹೇಳಿ ನೆಗೆಮಾಡ್ಳಿದ್ದು ಒಂದೊಂದರಿ.
ಶಾದಿಭಾಗ್ಯ – ಹೇದು ಮಾಪುಳ್ತಿ ಮದುವೆ ಆವುತ್ತರೆ ಪೈಶೆ ಕೊಡ್ತದು;
ಗೋಧಿಭಾಗ್ಯ – ಹೇಳಿ ಎರಡ್ರುಪಾಯಿಗೆ ಕಿಲಗಟ್ಳೆ ಅಕ್ಕಿ-ಗೋಧಿ ಕೊಡ್ತದು,
ಬೂದಿಭಾಗ್ಯ – ಹೇಳಿ ಸರ್ಕಾರಿ ರೈತರಿಂಗೆ ಧರ್ಮಕ್ಕೇ ವಿಷ ಗೊಬ್ಬರ ಕೊಡ್ತದು,
ಹೀಂಗೆಂತೆಲ್ಲ ಮಾಡಿ ಕಣ್ಣುಕಟ್ಟು ಮಾಡುಸ್ಸು ಬುದ್ಧಿವಂತಿಗೆ.
ಓಟು ಸಿಕ್ಕಿರೆ ಆತು.

ಇದೆಲ್ಲದರ ಒಟ್ಟಿಂಗೇ ಆರ್ಯ-ದ್ರಾವಿಡವುದೇ ಕಣ್ಣುಕಟ್ಟಿಲಿ ಬಂದುನಿಂದಿದಡ.
ಅದರ್ಲಿಯೂ ಕಣ್ಣುಕಟ್ಟುಮಾಡ್ಳೆ ಎಂತ ಇದ್ದು ಕೇಳುವಿ ನಿಂಗೊ. “ಆರ್ಯರು ಹೇದರೆ ಹೆರಾಣೋರು, ದ್ರಾವಿಡರು ಹೇದರೆ ಇಲ್ಯಾಣೋರು” – ಹೇಳಿ ಒಂದು ತರ್ಕ ಉಂಟುಮಾಡಿ, ಅದನ್ನೇ ಸತ್ಯ ಹೇದು ಹಬ್ಬುಸಿದವಾಡ.
ಎತಾರ್ತಕ್ಕೆ ನೋಡಿರೆ ಹಾಂಗೆ ಬೇರೆಬೇರೆ ಇಲ್ಲೆ. ಅಂದು ಇಂಗ್ಳೀಶರು ಇಲ್ಯಾಣೋರ ಸಮದಾನ ಮಾಡ್ಳೆ ಬೇಕಾಗಿ “ಎಂಗಳೂ ಹೆರಾಣೋರು, ನಿಂಗಳೂ ಹೆರಾಣೋರು” – ಹೇಳುಲೆ ಬೇಕಾಗಿ ಆ ಕತೆ ಉಂಟುಮಾಡಿದ್ದಾಡ.
ಅಂತೂ ಇಂತೂ, ತೆಮುಳು ಜೆನಂಗೊ ಪೂರಾ ಆ ಕತೆಯನ್ನೇ ನಂಬಿದ್ದವು.
ನಮ್ಮ ಆಡಳ್ತೆ ಮಾಡ್ಳೆ ಹೆರಾಣೋರು ಬೇಡ, ನಾವೇ ಆಯೇಕು – ಹೇದು ನಂಬಿದ್ದವಾಡ. “ದ್ರಾವಿಡ ಚಳುವಳಿ” – ಹೇಳಿ ಹೆಸರೂ ಮಡಗಿದ್ದವಾಡ.
ಚೆನ್ನೈಭಾವಂಗೆ ಪುರುಸೊತ್ತಪ್ಪಗ ರಜ ವಿವರ ಹೇಳುಗೋ ಏನೋ ಇದರ ಬಗ್ಗೆ.

ಹಾಂಗೆ ಸುರು ಆದ ದ್ರಾವಿಡ ಚಳುವಳಿ ಇಂದಿಂಗೂ ನೆಡೆತ್ತಾ ಇದ್ದು.
ದ್ರಾವಿಡ ಮುನ್ನೇತ್ರ ಹೇಳಿಗೊಂಡು ಪಕ್ಷ ಕಟ್ಟಿ, ಆ ಪಕ್ಷವೇ ಹನ್ನೆರಡು ತುಂಡಾಗಿ – ಅಂತೂ ಅದೇ ಸಂಸ್ಕಾರಲ್ಲಿ ಸರಕಾರ ಕಾರ್ಯಾಭಾರ ನೆಡೆಶುತ್ತಾ ಇದ್ದು, ಕೇರಳಲ್ಲಿ ಕಮ್ಮಿನಿಷ್ಠೆಯೋರು ಇಪ್ಪ ಹಾಂಗೆ.

~

ಶಂಕರಾಚಾರ್ಯರು:

ಮದಲಿಂಗೆ ಶಂಕರಾಚಾರ್ಯ ಹೇಳ್ತ ಮಹಾನುಭಾವರು ಅವತಾರ ಆದ್ಸು ನವಗೆ ಗೊಂತಿದ್ದು.
ಇಡಿಯ ಭಾರತ ಸುತ್ತಿ, ಧರ್ಮ ಸಂಸ್ಥಾಪನೆಗೆ ಹಲವು ಮಠಂಗಳ ಸ್ಥಾಪನೆ ಮಾಡಿದ್ದು.
ನಮ್ಮ ಗುರುಪೀಠವೂ ಶಂಕರಾಚಾರ್ಯರಿಂದಲೇ ಆರಂಭ ಆದ್ಸು. ಹಾಂಗೆ ಹಲವಾರು ಗುರುಪೀಠಂಗೊ ದೇಶಾದ್ಯಂತ ಇದ್ದು.
ಅದರ್ಲಿ “ಕಾಂಚಿ”ಯೂ ಒಂದು.
ಕಾಮಾಕ್ಷಿ ದೇವರ ಪ್ರತಿಷ್ಠಾಪನೆ ಮಾಡಿ, ಅಲ್ಲೊಂದು ಗುರು ಪೀಠ ಸ್ಥಾಪನೆ ಮಾಡಿ ಧರ್ಮರಕ್ಷಣೆಗೆ ನಿಯೋಜಿಸಿದವು.
ಅದಕ್ಕೆ “ಕಾಮಕೋಟಿ”ಪೀಠ ಹೇಳಿ ಹೆಸರಾತು ಮುಂದೆ.
ದಕ್ಷಿಣಲ್ಲಿ ಕ್ಷೀಣ ಆದ ವೈದಿಕ ಧರ್ಮ ಬೆಳವಲೆ ಈ ಪೀಠ ತುಂಬ ಕೆಲಸ ಮಾಡಿದ್ದು.
ಸಾಹಿತ್ಯಿಕವಾಗಿ ಈ “ಸರಸ್ವತಿ” ಪೀಠ ಬಹುದೊಡ್ಡ ಕಾರ್ಯ ಮಾಡಿದ್ದು, ಇಂದಿಂಗೂ ಮಾಡಿಗೊಂಡಿದ್ದು.

ಈ ಕಾಂಚಿ ಇಪ್ಪದು ಈಗಾಣ “ದ್ರಾವಿಡ” ಸಂಸ್ಕಾರದ ಸರ್ಕಾರದ ವ್ಯಾಪ್ತಿ ಒಳ ಇದಾ!
ಮದಲೇ ವೈದಿಕ ಧರ್ಮವ ಒಪ್ಪುತ್ತವಿಲ್ಲೆ, ಅದರ ಮೇಗಂದ ಓಟಿನ ರಾಜಕೀಯ!!
ಅಲ್ಯಾಣ ಒಂದು ತೋರದ ಅತ್ತೆ ಮುದಲ ಅಮಾಚ್ಚೆರು (ಮುಖ್ಯ ಮಂತ್ರಿ) ಆಗಿದ್ದಪ್ಪಗ ಅಂತೂ ಪರಿಸ್ಥಿತಿ ತುಂಬಾ ವಿಕಾರ ಆಗಿದ್ದತ್ತು.
ಎಂತರ?

~

ಚೆನ್ನೈಭಾವ ಲಾಯಿಕಲ್ಲಿ ವಿವರುಸುತ್ತವು,
ಈ ಕಾಂಚಿ ಕಾಮಾಕ್ಷಿ ದೇವಸ್ಥಾನದ ಹತ್ತರೆ ವರದರಾಜ ಪೆರುಮಾಳ್ ಹೇದು ಒಂದು ದೇವಸ್ಥಾನ ಇದ್ದಾಡ.
ಅದರ ಮೆನೇಜರು ಆಗಿದ್ದ ಜೆನರ ಒಂದಿರುಳು ಆರೋ ಕೊಂದವತ್ಲಾಗಿ.
ಆ ಕೊಲೆಗೆ ಕಾಂಚಿ ಸ್ವಾಮಿಗಳೇ ಕಾರಣ – ಹೇದು ಯೇವದೋ ಅರುಶಿನ ಪತ್ರಿಕೆಗೊ ಮಸಾಲೆ ಒಗ್ಗರಣೆ ಹಾಕಿ ಬರದಿತ್ತಿದ್ದವಾಡ.
ಅದೇ ಆಧಾರಲ್ಲಿ ಪೋಲೀಸರುದೇ ತನಿಖೆ ನೆಡೆಶಿದವಾಡ.
ಅಷ್ಟುಮಾಂತ್ರ ಅಲ್ಲ, ವಯೋವೃದ್ಧ ಕಾಂಚಿ ಶಂಕರಾಚಾರ್ಯರ “ಜೈಲಿಂಗೇ” ಸೇರ್ಸಿದವಾಡ!

ಸರ್ವಸ್ವತಂತ್ರ ಗುರುಪೀಠ ಜೈಲಿನೊಳ ಬಂಧಿ!
ಎಂತಾ ದುರವಸ್ಥೆ.
ಅಷ್ಟು ಮಾಂತ್ರ ಅಲ್ಲದ್ದೆ – ಆ ಶಂಕರಾಚಾರ್ಯರ ಶಿಷ್ಯಸ್ವಾಮಿಗಳನ್ನೂ ಜೈಲಿಂಗೆ ಸೇರ್ಸಿದವಾಡ.
ಶಂಕರಾ..!!

~

ಯೇವದೇ ಪುರಾವೆ ಇಲ್ಲದ್ದ ಕೇಸಿಂಗೆ ಬೇಕಾಗಿ ಗುರುಪೀಠವನ್ನೇ ಜೈಲಿಂಗೆ ಅಟ್ಟುವ ಪರಿಸ್ಥಿತಿ ಬಂತೋ ಭಾರತಲ್ಲಿ!!
ಪುರಾವೆ ಇದ್ದರೂ ಪೀಠದ ಪೂಜಾ ಕೈಂಕರ್ಯಂಗಳ ನೆಡೆಶಲೆ ಬೇಕಾಗಿ ಆದರೂ ಬಿಟ್ಟು ಬಿಡೇಕಾದ್ದದು ದೊಡ್ಡತನ.
ಅಂತದ್ದರಲ್ಲಿ ಕೇವಲ “ಆರೋಪ” ಇಪ್ಪಗ ಜೈಲಿಂಗೆ ಹಾಕಿರಕ್ಕೋ?

ವಿಚಾರಣೆ ನೆಡಕ್ಕೊಂಡಿತ್ತು.
ಮುಖ್ಯಮಂತ್ರಿ ಆದ ತೋರದ ಅತ್ತೆ ಹೋತು, ಕರಿ ಕನ್ನಡ್ಕದ ಜೆನ ಬಂತು.
ಎರಡೂ ಒಂದೇ ಸಂಸ್ಕಾರದ ಸರಕಾರ ಆದ ಕಾರಣ ಏನೂ ವಿತ್ಯಾಸ ಇಲ್ಲೆ ಇದಾ. ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೆ ಹೇಳ್ತ ಲೆಕ್ಕಲ್ಲಿ!
ಇಲ್ಲಿ ಮೆಡ್ರಾಸಿಲೇ ಕೇಸಿನ ವಿಚಾರಣೆ ಆದರೆ ಸತ್ಯದ ದಾರಿಲೆ ಹೋಗ ಹೇದು ಕೇಂದ್ರ ಕೋರ್ಟಿಂಗೆ ಅಂದಾಜಿ ಆತು.
ಹಾಂಗೆ, ನೇರವಾಗಿ ಡೆಲ್ಲಿ ಕೋರ್ಟಿನ ಅಡಿಲಿ ಬಪ್ಪ ಪುದುಚೇರಿಗೆ ವರ್ಗಾವಣೆ ಆತು. ವಾದ-ಪ್ರತಿವಾದ-ರುಜುವಾತು ಎಲ್ಲ ಪರಿಶೀಲನೆ ಆತು. ವಿಚಾರಣೆ ಆತು.

~

ಕಾಮಕೋಟಿ ಗುರುಗಳ ೇಗೆ ನಿರಾಳ ಆದ್ಸಕ್ಕೆ ಕೋಟಿ ಕೋಟಿ ಸಂತೋಷಂಗೊ..
ಕಾಮಕೋಟಿ ಗುರುಗಳ ೇಗೆ ನಿರಾಳ ಆದ್ಸಕ್ಕೆ ಕೋಟಿ ಕೋಟಿ ಸಂತೋಷಂಗೊ..

ನಿನ್ನೆಲ್ಲ ಮೊನ್ನೆ – ಕೇಸು ಮುಗಾತು.
ತ್ತೀರ್ಪು ಎಂತಾತು? ಅಪ್ಪದೆಂತರ, ಲೊಟ್ಟೆ ಕೇಸು.
ಗುರುಪೀಠವೂ ಸೇರಿ ಎಲ್ಲಾ ಆರೋಪಿಗಳೂ “ದೋಷಮುಕ್ತ” ಹೇಳಿ ತೀರ್ಪು ಆತು.
ರುಜುವಾತಿಲ್ಲೆ – ಹೇದು ನಂಬ್ರ ಬಿದ್ದತ್ತು.
ವೇದ, ವೇದಾಂಗ, ಪುರಾಣ ಎಲ್ಲವನ್ನೂ ಕಲ್ತು ಎಲ್ಲರ ದೋಷವನ್ನೂ ಕಳವ ಆ ಗುರುಪೀಠಲ್ಲಿಪ್ಪ, ಆ ಗುರುಗೊ “ದೋಷಮುಕ್ತ” ಹೇಳಿ ಡಿಗ್ರಿಕಲ್ತು ಪರೀಕ್ಷೆ ಬರದು ಜಡ್ಜು ಆದ ಜೆನ ಹೇಳಿತ್ತಾಡ.

~

ಏನೇ ಆಗಲಿ, ಸತ್ಯಕ್ಕೆ ಜಯ ಇದ್ದು. ಇಂದಲ್ಲ ನಾಳೆ, ಜಯ ಖಂಡಿತಾ ಇದ್ದೇ ಇದ್ದು.

~

ಧರ್ಮ ಇಲ್ಲದ್ದ ಊರಿಲಿ ನೆಲೆ ನಿಂದು ಧರ್ಮ ಸಂಸ್ಥಾಪನೆಗೆ ಹೇಳಿ ಮಠಂಗಳ ಕಟ್ಟಿದ್ದವು ಶಂಕರಾಚಾರ್ಯರು.
ಎಲ್ಲಾ ಶಂಕರರೂ ಆ ಕಾರ್ಯವ ನೆಡೆಶಿಗೊಂಡು ಬಪ್ಪದು, ಧರ್ಮವ ಗಟ್ಟಿಮಾಡ್ತ ಕಾರ್ಯವ ನೆಡೆಶುತ್ತವು.
ಕಾಂಚಿಗೂ ಅದೇ ಪರಿಸ್ಥಿತಿ.
ಅಲ್ಯಾಣ ಜೆನಂಗಳ ಮನಃ ಪರಿವರ್ತನೆ ಆಯೇಕಾಯಿದು. ಎಲ್ಲೋರನ್ನೂ “ಆರ್ಯರಾಗಿ” ಮಾಡೇಕಾಯಿದು. ಮಠವ, ಪೀಠವ, ಹಿಂದೂ ಧರ್ಮವ ನಂಬುತ್ತ ಹಾಂಗೆ ಮಾಡೇಕಾಯಿದು.

ಇದು ಇಂದ್ರಾಣ ಅಗತ್ಯತೆ.

~

ಅದೇನೇ ಇರಳಿ,
ಕಾಂಚಿ ಗುರುಗಳ ಮೇಗೆ ಇದ್ದ ಆರೋಪ ಖುಲಾಸೆ ಆಗಿ ಹೋತು – ಹೇಳ್ತದು ಅತ್ಯಂತ ಕೊಶಿ ಕೊಡುವ ಸಂಗತಿ.
ಕಂಚಿನ ಪಾತ್ರೆಗೆ ಮಣ್ಣು ರಟ್ಟಿರೆ ಎಂತಕ್ಕು? ಎಂತೂ ಆಗ.
ಒಂದರಿ ತೊಳದರೆ ಆತು, ಮತ್ತೆ ಮೊದಲಾಣದ್ದೇ ಶುಭ್ರ ತೇಜಸ್ಸು.
ಈ ಕಂಚಿ ಪೀಠವೂ ಹಾಂಗೇ. ಒಂದೊಂದು ಸಣ್ಣ ಅಪವಾದಂಗೊ ಬಕ್ಕು, ಹೋಕು- ಆದರೆ ಅದೆಲ್ಲವನ್ನೂ ಮೀರಿ ಆ ಶಂಕರ ಪೀಠ ಎದ್ದು ನಿಲ್ಲಲಿ.
ಬುದ್ಧಿಜೀವಿ, ದ್ರಾವಿಡ ಚಳುವಳಿ, ಕಮ್ಮಿನಿಷ್ಠೆ, ಬ್ಯಾರಿ ಓಲೈಕೆ, ಚರ್ಚುಗಳ ಪ್ರಭಾವಳೆ – ಇದೆಲ್ಲದರ ಎಡೆಲಿಯೂ ಕಾಂಚಿಯ ಹಾಂಗಿಪ್ಪ ಒಂದು ಮಠ ಮತ್ತೆ ಮತ್ತೆ ಎದ್ದುನಿಲ್ಲೆಕ್ಕು,
ಸತತವಾಗಿ ಬಪ್ಪ ಎದುರುಗಳ ಎದುರುಸೇಕು – ಹೇಳ್ತದು ನಮ್ಮೆಲ್ಲರ ಬಯಕೆ, ಹಾರೈಕೆ.

ಹಾಂಗಲ್ಲದೋ?

~

ಒಂದೊಪ್ಪ: ಕಂಚಿಂಗೆ ಬಿದ್ದ ಕೆಸರು ತೊಳದಪ್ಪಗ ಕಲೆ ಒಳಿಯದ್ದೆ ಇರಳಿ..

14 thoughts on “ಅಂಟಿದ ಕೆಸರು ಹೋದಪ್ಪಗ ಕಂಚಿನ ಹೊಳಪು ಕುಂದುತ್ತಿಲ್ಲೆ.!

  1. ಅನ್ಯಾಯವಾಗಿ ಗುರುಗಳ ಒಳ ಹಾಕಿ ಎಂತ್ಸ ಸಿಕ್ಕಿತ್ತೋ? ಅದೇ ಮದನಿಯ ಇಲ್ಲಿಗೆ ತಂದು, ವಿಚಾರಣೆ ಮಾಡ್ಲೂ ಬಿಡ್ತವಿಲೆ, ಅದಕ್ಕೆ ರಾಜ ಮರ್ಯಾದೆ!! ಅದು ಎಂತಾ ಹರ್ಕಟೆ ಬುದ್ದಿದು ಹೇಳಿ ಗೊಂತಾದರುದೆ!!ಅವಸ್ಥೆ!!!! 🙁 ಶುದ್ದಿ ಲಾಯ್ಕಾಯ್ದು ಒಪ್ಪಣ್ಣ 🙂

  2. ಕಂಚಿ ಸ್ವಾಮಿಗಳ ಬಿಡುಗಡೆ ಆದ್ದದು ನಿಜ, ಆದರೆ ಶಂಕರರಾಮನ್ ಕೊಲೆ ಮಾಡುಸಿದ ಅಪರಾಧಿಗೊ ಎತ್ಲಾಗಿ ಹೋದವು?

  3. ಸಕಾಲಿಕ ಬರಹ. ನಾಯಿ ಬೊಗಳಿರೆ ಸ್ವರ್ಗ ಲೋಕ ಹಾಳಕ್ಕೊ.
    ವೇದ, ವೇದಾಂಗ, ಪುರಾಣ ಎಲ್ಲವನ್ನೂ ಕಲ್ತು ಎಲ್ಲರ ದೋಷವನ್ನೂ ಕಳವ ಆ ಗುರುಪೀಠಲ್ಲಿಪ್ಪ, ಆ ಗುರುಗೊ “ದೋಷಮುಕ್ತ” ಹೇಳಿ ಡಿಗ್ರಿಕಲ್ತು ಪರೀಕ್ಷೆ ಬರದು ಜಡ್ಜು ಆದ ಜೆನ ಹೇಳಿತ್ತಾಡ. ಎಂತಾ ಮಾತು ಒಪ್ಪಣ್ಣಾ. ಸತ್ಯಕ್ಕೆ ಎಂದಿಂಗೂ ಜಯ ಇದ್ದು.

  4. ಹರೇರಾಮ, ಕಂಚು ಪೀಠಕ್ಕೆ ಕಲೆ ಅಪ್ಪಲೆ ಕಂತುಪಿತ ಬಿಡುಗೊ? ಇನ್ನೀಗ ಶಿಷ್ಯಸಮೂಹಕ್ಕೆ ಕಂಚಿನ ಬಲವೂ ಕಂಚಿನ ಕಂಠವೂ ಬಂದು ಪೀಠಕ್ಕೆ ಸರ್ವರೀತಿಂದ ಶ್ರೇಯಸ್ಸಾಗಲಿ ॥ ಸರ್ವೆಜನಃಸುಖಿನೋಭವಂತು।।

  5. ಒಂದು ವಿಶಯ ಮರತ್ತು. ನಮ್ಮ ಮಠದ ಬಗ್ಗೆ, ನಮ್ಮ ಗುರುಗಳ ಬಗ್ಗೆ ಅರಿಸಿನ ಪತ್ರಿಕೆಲಿ ಬರದವೂ, ಮಾಲೀಕ, ಸಂಪಾದಕ ಸೇರಿ ಶ್ರೀ ಗುರುಗೊಕ್ಕೆ ತಪ್ಪಾತು ಹೇಳಿ ಅಡ್ಡಬಿದ್ದಿದವು. ಹಾಂಗಾಗಿ ಸತ್ಯಕ್ಕೇ ಯಾವತ್ತೂ ಜಯ. ಹರೇ ರಾಮ.

  6. ಹೀಂಗಿಪ್ಪ ರಾಕ್ಷಸರು ಹಿಂದೆಯೂ ಇತ್ತಿದ್ದವು. ಬ್ರಾಹ್ಮಣರ, ಋಷಿಗಳ ಯಜ್ನ, ಯಾಗಾದಿಗಳ ಹಾಳು ಮಾಡಿ, ಉಪದ್ರ ಮಾಡಿಕೊಂಡಿತ್ತಿದ್ದವಡ. ಶ್ರೀ ರಾಮ, ಶ್ರೀ ಕ್ರಿಷ್ಣರು ಹಾಂಗಿಪ್ಪವರ ಸಂಹಾರಕ್ಕಾಗಿಯೇ ಹುಟ್ಟಿದ್ದಡ. ಹಿಂದೂಗಳಲ್ಲಿ ಜಾಗ್ರತಿಯಾದರೆ ನಮ್ಮಲ್ಲಿಯೂ ಶ್ರೀ ರಾಮ, ಶ್ರೀ ಕ್ರಿಷ್ಣರು ಹುಟ್ಟುಗು. ಹರೇ ರಾಮ.

  7. ಕಾಂಚಿಪೀಠ ಭಗವಾನ್ ಶಂಕರರಿಂದ ಸ್ಥಾಪನೆ ಆದ್ದದು, ಧರ್ಮವೇ ಇದರ ತಳಪಾಯ. ನಾಕು ಕಾಲಿನ ಕುರ್ಚಿಲಿ ಕೂಪ – ಕಪ್ಪು ಕನ್ನಡ್ಕದವೇ ಆಗಲಿ, ದಪ್ಪ ಮೈಯವೇ ಆಗಲಿ- ಆರಿಂದಲೂ ಗುರುಪೀಠವ ಹನುಸುದು ಅಸಾಧ್ಯ ಹೇಳುದು ಈಗ ಸಿದ್ಧ ಆತು.

  8. ಎಲ್ಲರ ದೋಷವನ್ನೂ ಕಳವ ಆ ಗುರುಪೀಠಲ್ಲಿಪ್ಪ, ಆ ಗುರುಗೊ “ದೋಷಮುಕ್ತ” ಹೇಳಿ ಡಿಗ್ರಿಕಲ್ತು ಪರೀಕ್ಷೆ ಬರದು ಜಡ್ಜು ಆದ ಜೆನ ಹೇಳಿತ್ತಾಡ…ಏನೇ ಆಗಲಿ ಸತ್ಯಕ್ಕೆ ಗೆಲು ಸಿಕ್ಕಿತ್ತನ್ನೆ..ಅಧರ್ಮ ಕಳದು ಧರ್ಮಕ್ಕೆ ಜಯ ಸಿಕ್ಕಲಿ..ನಿರೂಪಣೆಗೆ ಒಂದು ಒಪ್ಪ..

  9. ಕಂಚಿನ ಪಾತ್ರೆಗೆ ಮಣ್ಣು ರಟ್ಟಿರೆ ಎಂತಕ್ಕು? ಎಂತೂ ಆಗ.
    ಒಂದರಿ ತೊಳದರೆ ಆತು, ಮತ್ತೆ ಮೊದಲಾಣದ್ದೇ ಶುಭ್ರ ತೇಜಸ್ಸು…ಸಕಾಲಿಕ ಬರಹ ತುಂಬಾ ಲಾಯಕ್ಕು ಆಯಿದು

  10. ಶುದ್ದಿ ಒಪ್ಪ ಆಯ್ದು.

    ಅದು ಹೋತು ಆಚದು ಬಂತು. ಬೆಲ್ಲಲ್ಲಿ ಕಡೆಕೊಡಿ ಇಲ್ಲೆ – ಸರಿಯಾದ ಮಾತು. ಅವಕ್ಕೆ ಬೇಕಾದ್ಸು ಒಂದೇ. ಅವರ ಎದುರೆ ಹೋರಾಡ್ಳೆ ನಾವೇ ಬಲಹೀನರು ಎಲ್ಲ ಮಟ್ಟಿಲ್ಲಿಯೂ. ಸತ್ಯ ಒಂದೇ ನಮ್ಮ ಕಾಪೇಡಕ್ಕಷ್ಟೆ. ಸಹನೆಯೇ ನವಗೆ ಆಧಾರ.

    ಆರ್ಯ ಸಂಸ್ಕಾರ ಉಳುಶುವೊ ಬೆಳೆಶುವೊ. ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×