Oppanna.com

ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..!

ಬರದೋರು :   ಒಪ್ಪಣ್ಣ    on   24/08/2012    15 ಒಪ್ಪಂಗೊ

ಶುಬತ್ತೆಗೆ ರೋಸಿಯ ಹಿಡುದು ಮಡುಗಲೆ ಎಡಿತ್ತೋ ಏನೋ – ಬಟ್ಯಂಗೆ ಭಾವನೆಗಳ ಹಿಡುದು ಮಡುಗಲೆ ಎಡಿಯ.
ಬಟ್ಯಂಗೆ ಬೇಜಾರಾದರೆ ಮೋರೆ ಊರಗಲ ಅಕ್ಕು; ಕೊಶಿ ಆದರೆ ಬೊಬ್ಬೆ ಹೊಡದು ಮಾತಾಡುಗು; ಪಿಸುರು ಬಂದರೆ ಪರಂಚುಗು, ಹಶು ಆದರೆ ಸ್ವರವೇ ಹೆರಡ!
ಅದರ ಸದ್ಯದ ಮೂಡು ಹೇಂಗಿದ್ದು; ಮೋಡ ಹೇಂಗಿದ್ದು ಹೇಳ್ತರ ತಿಳಿಯೇಕಾರೆ ಅದರ ಹೆಣ್ಣು ಸೀತುವೇ ಬರೇಕು ಹೇದು ಏನಿಲ್ಲೆ, ತರವಾಡು ಮನೆ ಕುಂಞಿಮಾಣಿ ವಿನುವಿಂಗೂ ಅರಡಿಗು.

ಅಂದೊಂದರಿ ಬಟ್ಯ° ಸಣ್ಣ ಇಪ್ಪಾಗ ಅದರ ಅಪ್ಪ° ಓಡ್ಯಪ್ಪು ಎಂತದೋ ಬೈದ್ದಕ್ಕೆ ಸೀತ ಉರಿಮುಸುಡು ಮಾಡಿಂಡು ಬಂದು ತರವಾಡುಮನೆಯ ಹಟ್ಟಿ ಕೋಣೆಲಿ ಗುಡಿಹೆಟ್ಟಿ ಮನುಗಿದ್ದಾಡ. ಉಣಿಯರ ಆಂಡ್ – ಹೇಳಿರೂ, ಒಂದು ದಿನ ಹೆರ ಬಯಿಂದಿಲ್ಲೇಡ – ಶಂಬಜ್ಜ° ನೆಗೆಮಾಡಿಗೊಂಡಿತ್ತಿದ್ದವು. ಅದಿರಳಿ; ಒಪ್ಪಣ್ಣ ಬಟ್ಯನ ಶುದ್ದಿ ಹೇಳಿಂಡೇ ಹೊತ್ತು ಕಳದನೋ ಗ್ರೇಶಿಕ್ಕುದು ಬೇಡ.

ಅದು ಈಗ ಎಂತಗೆ ನೆಂಪಾತು ಹೇದರೆ, ಒಪ್ಪಣ್ಣಂಗೂ ರಜ ಬಟ್ಯನ ಹಾಂಗೇಯೋ ಹೇದು ಅನುಸುದು ಒಂದೊಂದರಿ.
ಮನಸ್ಸಿಂಗೆ ರಜ ಬೇಜಾರಾದರೆ ಸಾಕು, ಬೈಲಿಲಿಡೀ ಆ ಬೇಜಾರದ ಶುದ್ದಿಯನ್ನೇ ಹೇಳುದು – ಒಂದುವಾರ ಇಡೀಕ. ಪಿಸುರು ಬಂದರೆ ಪಿಸುರಿಲೇ ಶುದ್ದಿ ಹೇಳುಸ್ಸು; ಗುಣಾಜೆ ಮಾಣಿಯೋ ಆರಾರು ಸಿಕ್ಕಿ ರಾಜಕೀಯವೋ ಮಣ್ಣ ಹೇಳಿರೆ ಆ ವಾರಕ್ಕೆ ಅದೇ ರಾಜಕೀಯದ ಶುದ್ದಿ; ಬಟ್ಟಮಾವ° ಎಂತಾರು ಮಂತ್ರದ ಶುದ್ದಿ ಹೇಳಿರೆ ಅದೇ ತಲೆಲಿ; ಮತ್ತಾಣ ವಾರ ಒರೆಂಗೂ.
ಹಾಂಗೇ – ಮನಸ್ಸಿಂಗೆ ಕೊಶಿ ಆದರೆ ಕೊಶಿಯ ಶುದ್ದಿಯನ್ನೇ ಹೇಳಿಕ್ಕುದು – ಇದು ಒಪ್ಪಣ್ಣನ ಕ್ರಮ ಅಲ್ಲದೋ, ಕಳುದ ನಾಕೊರಿಶ ಲಾಗಾಯ್ತು!?

~

ಶುದ್ದಿ ಹೇಳುಲೆ ಸುರು ಮಾಡಿದ ನಾಕೊರಿಶಲ್ಲಿ ಹಲವು ಕೊಶಿಯ ವಿಶಯಂಗಳೂ, ಹಲವು ಬೇಜಾರದ ವಿಶಯಂಗಳೂ ಬಂದು ಹೋಯಿದು. ಆಯಾ ಸಂದರ್ಬಕ್ಕೆ ಅನುಸರ್ಸೆಂಡು ಬೈಲಿಲಿ ಶುದ್ದಿಗಳನ್ನೂ ಹೇಳಿ ಆಯಿದು.
ಅಪ್ಪೋಲ್ಲದೋ?

ಹೊಸ ಒರಿಶ ಶುರು ಅಪ್ಪಾಗ – ಇಂತಿಷ್ಟು ಶುದ್ದಿ ಆತು, ಇಂತಿಷ್ಟು ಜೆನ ಶುದ್ದಿಯ ಕೇಳಿದವು ಹೇದು ಒಂದು ವಿವರ ಹಿಡುದು ಮಾತಾಡಿಗೊಂಡು ಇತ್ತಿದ್ದು. ಅಲ್ಲದೋ?
ಇದೀಗ ಇನ್ನೊಂದು ಹೊಸ ಶುದ್ದಿ. ಅದೆಂತರ?
~

ಈಗಾಣ ವೆವಸ್ತೆಲಿ, ಬೈಲಿನ ಶುದ್ದಿಗಳ ಕೇಳೇಕಾರೆ ಎಂತಲ್ಲ ವೆವಸ್ತೆ ಇರೇಕು?
ಕಂಪ್ಯೂಟ್ರು ಬೇಕು, ನಮ್ಮ ಬೈಲಿಲಿ ಹಲವು ಮನೆಗಳಲ್ಲಿ ಕಂಪ್ಯೂಟ್ರೇ ಬರೆಕ್ಕಷ್ಟೇ.
ಕಂಪ್ಯೂಟ್ರು ಇದ್ದರೆ ಸಾಲ, ಇಂಟರ್ನೆಟ್ಟು ಬೇಕು. ಕೆಲವು ದಿಕೆ “ಕಂಪ್ಲೀಟ್ರು” ಇದ್ದು – ಇಂಟರ್ನೆಟ್ಟು ಇಲ್ಲೆ!
ಇದೆರಡು ಇದ್ದರೆ ಸಾಕೋ? ಕರೆಂಟು ಬೇಕು. ಈಗಾಣ ಕಾಲಾವಸ್ತೆಲಿ ನಮ್ಮ ಬೈಲಿಲಿ ಕರೆಂಟಿಂದೇ ರಗಳೆ ಇದಾ!
ಕಂಪ್ಯೂಟ್ರು ಸರಿಯಾಗಿ ಎಳಗಲೆ ಸುರು ಅಪ್ಪಗ ಕರೆಂಟು ಹೋತತ್ತೆ!
ಎಲ್ಲದರಿಂದಲೂ ಹೆಚ್ಚಿಗೆ, ಪುರ್ಸೋತು ಬೇಕೂ!
ಕರೆಂಟು ಯೇವದಾರು ಹೊತ್ತಿಲಿ ಬಂದರೆ, ಆ ಸಮೆಯಲ್ಲಿ ಕಂಪ್ಲೀಟ್ರಿನ ಬುಡಲ್ಲಿ ಕೂಪಲೆ ಪುರುಸೊತ್ತು ಇರ್ತೋ? ತೋಟಕ್ಕೆ ಪಂಪು, ಇಡ್ಳಿಗೆ ಕಡವಲೆ ಗ್ರೈಂಡ್ರು, ಧಾರವಾಹಿ ನೋಡ್ಳೆ ಟೀವಿ – ಇನ್ನೊಂದು ಹೇದು ಏನಾರು ಅಂಬೆರ್ಪುಗೊ ಇರ್ತು.
ಹೋ-ಹು. ಎಡಿಯಪ್ಪಾ ಎಡಿಯ.
ಈ ಸಣ್ಣ ಕಾರಣಂಗೊಕ್ಕೆ ಬೈಲಿಲಿ ಶುದ್ದಿಗಳ ಎಲ್ಲೋರಿಂಗೂ ಓದಲೆ ಕಷ್ಟ ಆಗಿಂಡಿದ್ದತ್ತು. ಅಪ್ಪೋ?
ಅದಕ್ಕೆ ಪರಿಹಾರ ಎಂತರ?

~

ಕಂಪ್ಯೂಟ್ರಿನ ಒಳ ಎಷ್ಟೇ, ಎಂತದೇ ಇದ್ದರೂ – ಅದರ ಹಿಡಿಯಲೆ ಸಿಕ್ಕ! ಅಪುರೂಪಲ್ಲಿ ಕಾಂಬಲೆ ಸಿಕ್ಕಿರೂ ಸಿಕ್ಕಿತ್ತು. ಧೈರ್ಯದ್ದಲ್ಲ!
ಹಾಂಗಾಗಿ, ಅದು “ಕನ್ನಟಿಯೊಳಾಣ” ಗೆಂಟೇ. ಅಲ್ಲದೋ?
ಅಪ್ಪು.
ಬೈಲಿಲಿ ಹೆರಿಯೋರು ಒಂದೊಂದರಿ ಹೇಳುಲಿದ್ದು; ಕನ್ನಟಿಯೊಳಾಣ ಗಂಟಿನ ನಂಬಿಕ್ಕಲೆಡಿಯ ಹೇದು.
ಹಾಂಗಾಗಿ, ಎಂತ ಮಾಡುಸ್ಸು?

~

ಮೊನ್ನೆ ತರವಾಡುಮನೆ ಆಟಿಹೊಡಾಡಿಕೆಲಿ ಗುರಿಕ್ಕಾರ್ರು ಸಿಕ್ಕಿ ಹೀಂಗೇ ಮಾತಾಡುವಗ ಇದೇ ಶುದ್ದಿ ಬಂತು.
ಬೈಲಿಲಿ ಹೇಳ್ತ ಶುದ್ದಿಗಳ ಎಲ್ಲೋರಿಂಗೂ ಎತ್ತುಸುತ್ತ ಬಗೆ ಮಾಡುವನೋ ಹೇದು ಅವು ಅಲೋಚನೆ ಮಾಡಿಂಡಿದ್ದಿದ್ದವು.
ಅದಕ್ಕೆ ಎಂತ ಮಾಡೇಕು? ಅದ್ರ ಮುದ್ರಣ ಮಾಡಿ ಕಾಗತಲ್ಲಿ ಬರುಸೇಕು.
ಹೇದರೆ, ಬೈಲ ಶುದ್ದಿಗಳ ಹೆರ್ಕಿ, ಕಾಗತಲ್ಲಿ ಅಚ್ಚು ಹಾಕುಸಿ ಪುಸ್ತಕ ಮಾಡೇಕು!!

ಈಗ ನಮ್ಮ ಬೈಲಿನ ಶುದ್ದಿಗೊ ಮುದ್ರಣ ರೂಪ ಕಂಡದು ಹೇದರೆ – ಸರ್ಪಮಲೆ ಮಾವನೋ, ಬೊಳುಂಬು ಮಾವನೋ ಮಣ್ಣ ಅವರಷ್ಟಕ್ಕೇ ಪ್ರಿಂಟು ತೆಗದ್ದು ಮಾಂತ್ರ. ಅವು ಪ್ರಿಂಟು ತೆಗದ ತಾವುಕಾಗತ ಅವರ ನೆರೆಕರೆ ನಾಕು ಮನಗೆ ಎತ್ತುಸುಗು – ಇದಾ ಶುದ್ದಿಗಳ ಓದಿಕ್ಕಿ – ಹೇದು. ಹಾಂಗೆ ಒಬ್ಬೊಬ್ಬ° ಅವರ ಅವಕಾಶಾನುಸಾರ ಮಾಡ್ತ ಪ್ರೇರೇಪಣೆಲಿ – ಬೈಲ ಶುದ್ದಿಗಳನ್ನೇ ಹೆರ್ಕಿ ಪುಸ್ತಕ ಮಾಡಿರೆ ಒಳ್ಳೆದಲ್ಲದೋ? ಗುರಿಕ್ಕಾರ್ರ ಅಭಿಪ್ರಾಯವೇ ನಮ್ಮ ಅಭಿಪ್ರಾಯವು!

~

ಪುಸ್ತಕ ಬಿಡುಗಡೆ ಹೇಳಿಕೆ, ಬೈಲಿನ ಪರವಾಗಿ

ಹೊಡಾಡಿಕೆ ದಿನ ಇರುಳು ಇಷ್ಟು ಮಾತಾಡಿದಷ್ಟೇ ಅಲ್ಲ. ವಿಷಯ ಅಲ್ಲಿಗೇ ಮುಗುತ್ತು ಗ್ರೇಶಿದಿರೋ?
ಮರದಿನ ಮತ್ತೆ ಬೈಲಿನ ಹತ್ತು ಹೆರಿಯೋರ ಹತ್ತರೆ ಮಾತಾಡಿ ವಿಷಯ ಮುಂದುವರುಸಿದವು.
ನಮ್ಮ ನೆರೆಕರೆಯ ಪ್ರತಿಷ್ಠೆಗಾಗಿಪ್ಪ ಪ್ರತಿಷ್ಠಾನದ ಹತ್ತರೆ ಈ ಸಂಗತಿ ಹೇಳುವಗ –ಕೊಶಿಲೇ ಮುಂದುವರುಸಿದವು ಶರ್ಮಪ್ಪಚ್ಚಿ.
ಶರ್ಮಪ್ಪಚ್ಚಿಗೆ ದಿನಾಗುಳೂ ವಾಕಿಂಗು ಹೇಳ್ತ ನೆಪಲ್ಲಿ ಮನೆ ಹತ್ತರಾಣ ಟ್ರಾನ್ಸುವಾರು ಪೆಟ್ಟಿಗೆ ನೋಡದ್ದರೆ ಸಮ ಆಗ. ಇರುಳು ತಿಂದ ಚಪಾತಿ ಕರಗೇಕಾರೆ ಮರದಿನ ಉದಿಯಪ್ಪಗ ವಾಕಿಂಗು ಹೋಗಿಯೇ ಆಯೇಕಟ್ಟೆ!
ಹಾಂಗೆ, ವಾಕಿಂಗು ಹೋಪಗಳೂ ಇದೇ ಶುದ್ದಿ – ಬೈಲಿನ ಶುದ್ದಿಗಳ ಪುಸ್ತಕ ಮಾಡ್ಸರ ಬಗ್ಗೆ – ತಿರುಗಲೆ ಸುರು ಆತು.
ವಾಕಿಂಗಿಲಿ ದಿನಾಗುಳೂ ಸಿಕ್ಕುವ ನೆರೆಕರೆಯ ನೆಂಟ್ರುಗಳ ಹತ್ತರೆ ಈ ಸಂಗತಿ ಹೇಳಿಕ್ಕಿದವು.
ಟೀಕೆಮಾವ°, ಮುಳಿಯಭಾವ°, ಸುಭಗಣ್ಣ, ಬೊಳುಂಬುಮಾವ°, ಕೊಳಚ್ಚಿಪ್ಪುಭಾವ° – ಇತ್ಯಾದಿ ಟ್ರಾನ್ಸುವಾರು ಪೆಟ್ಟಿಗೆ ಬುಡಲ್ಲಿ ಕೂದು “ಅಕ್ಕು” ಹೇಳಿದವಾಡ!
ಮತ್ತೆಂತ ಇದ್ದು, ಸಂಗತಿ ಮುಂದುವರುದತ್ತು.

~

ಅಂತೂ – ಶುದ್ದಿಗಳ ಹೆರ್ಕಿ ಪುಸ್ತಕ ಮಾಡ್ಸು ನಿಜ ಆತು, ಯೇವ ಶುದ್ದಿಗಳ ತೆಕ್ಕೊಳೇಕು? ಎಷ್ಟು ಪುಸ್ತಕ ಮಾಡೇಕು? ಎಷ್ಟು ಪುಟದ ಪುಸ್ತಕ ಮಾಡೇಕು? ಪ್ರಶ್ನೆಯೇ ಪ್ರಶ್ನೆಗೊ.
ಬೈಲಿನ ಎಲ್ಲೋರೂ ಕೂದು ನಿದಾನಕ್ಕೆ ಆಲೋಚನೆ ಮಾಡಿಕ್ಕಿ – ಆದೇಚ (ಆದಾಯ – ವೆಚ್ಚ) ಎಲ್ಲವನ್ನೂ ಗಮನಲ್ಲಿ ಮಡಗಿಂಡು ಒಂದು ತೀರ್ಮಾನಕ್ಕೆ ಬಂದವು.

  • ಬೈಲಿನ ಶುದ್ದಿಗಳ ಪೈಕಿ ಹಳೇ..ದು – ಹೇದರೆ ಬೈಲು ಸುರು ಆದ ಸಮಯಂದ ಹೆರ್ಕಿದ ಇಪ್ಪತ್ತು ಶುದ್ದಿಗಳ ಒಂದು ಗುಂಪು ಮಾಡಿಂಡು – ಒಪ್ಪಣ್ಣನ ಶುದ್ದಿಯ ಒಂದು ಪುಸ್ತಕ ಮಾಡುಸ್ಸು.
  • ಈಗಾಣ ತಲೆಮಾರಿಂಗೆ ಅತ್ಯಗತ್ಯ ಆದ “ಹದಿನಾರು ಸಂಸ್ಕಾರಂಗಳ” ಬಗ್ಗೆ ನಮ್ಮ ಚೆನ್ನೈಭಾವ° ಹೇಳಿದ ಶುದ್ದಿಗಳ ಕಟ್ಟಕಟ್ಟಿ ಇನ್ನೊಂದು ಪುಸ್ತಕ ಮಾಡುಸ್ಸು.

ಹಾಂಗೆ, ಸದ್ಯಕ್ಕೆ ಎರಡು ಪುಸ್ತಕ ಮಾಡುಸ್ಸು.
ಈ ಪುಸ್ತಕಂಗಳ ನಮ್ಮ ಬೈಲಿನ ಅತ್ತೆ-ಮಾವಂದ್ರು – ಅಣ್ಣತಮ್ಮಂದ್ರು – ಅಕ್ಕ ತಂಗೆಕ್ಕೊ, ಅಜ್ಜ ಅಜ್ಜಿಯಂದ್ರು ಹೇಂಗೆ ಓದುತ್ತವು ಹೇಳ್ತದರ ನೋಡಿಂಡು ಮುಂದುವರುಸುದು – ಹೇದು ತೀರ್ಮಾನ ಮಾಡಿಗೊಂಡವು.

~
ಪುಸ್ತಕ ಯೇವದೆಲ್ಲ ಹೇದು ನಿಜ ಆತು. ಆದರೆ, ಗುರುಗಳ ಅನುಗ್ರಹ ತೆಕ್ಕೊಳದ್ದರೆ ಸಮ ಆವುತ್ತೋ?
ಬೈಲು ಹುಟ್ಟಿ – ಬೆಳವ ಹೊತ್ತಿಲೇ ಗುರುಗಳ ಆಶೀರ್ವಾದಂಗೊ ನವಗೆ ಸಿಕ್ಕಿಂಡಿದ್ದತ್ತು. ಗುರುಗೊಕ್ಕೆ ಈಗಂದ ಹೆಚ್ಚು ಪುರ್ಸೋತಿಲಿ ಇಪ್ಪ ಕಾಲಲ್ಲಿ ಬೈಲಿಂಗೆ ಭೇಟಿಕೊಟ್ಟುಗೊಂಡಿತ್ತವು. ಮತ್ತೆ ಅಂಬೆರ್ಪು ಬಂದಮತ್ತೆ ಅನಿವಾರ್ಯವಾಗಿ ಕಮ್ಮಿ ಆದ್ಸು. ಅಲ್ಲದ್ದರೆ ಎಲ್ಲ ಶುದ್ದಿಗಳನ್ನೂ ಕೇಳಿ, ಒಪ್ಪ ಆಶೀರ್ವಾದ ಕೊಡ್ತವು.
ಈಗ ಹೇಂಗೂ ಗುರುಗೊ ಪುರ್ಸೋತಿಲಿ ಇದ್ದವು – ಈ ಪುಸ್ತಕದ ಶುದ್ದಿಗಳ ತಿಳುಶಿಕ್ಕುವೊ – ಹೇದು ಗುರಿಕ್ಕಾರ್ರಿಂಗೆ ಮನಸ್ಸಿಂಗೆ ಬಂತು. ಆ ಲೆಕ್ಕಲ್ಲಿ ನಿವೇದನೆ ಮಾಡಿಗೊಂಡು ಅನುಗ್ರಹವೂ, ಬೈಲಿಂಗೆ ಒಪ್ಪ ಆಶೀರ್ವಾದವೂ ಸಿಕ್ಕಿತ್ತು.

ಅಂಬಗ ಇನ್ನು ಯೇವತ್ತು ಮಾಡುಸ್ಸು?
ಅಶುಭ ಆಟಿ ಕಳುದು ಶುಭ ಸೋಣೆ ಸುರು ಅಪ್ಪದ್ದೇ ಪುಸ್ತಕಂಗೊ ಹೆರಬರಳಿ ಹೇದು ಬೈಲಿಲಿ ಕೆಲವು ಜೆನ ಅಭಿಪ್ರಾಯ ಮಾಡಿದವು. ಅದೂ ಅಲ್ಲದ್ದಲ್ಲ. ಹಾಂಗೇ ಆಗಲಿ ಹೇದು ಎಲ್ಲೋರುದೇ ಕೆಲಸ ಸುರು ಮಾಡಿಕ್ಕಿದವು.

~
ಶುದ್ದಿಗಳ ಹೆರ್ಕುದು, ತಪ್ಪಿದ್ದರ ತಿದ್ದುದು, ಬಣ್ಣ ಕೊಡುದು, ಗೀಟು ಎಳವದು, ದಪ್ಪ ಮಾಡುದು, ಅಕ್ಷರ ಸಣ್ಣ ದೊಡ್ಡ ಮಾಡುದು – ಎಲ್ಲವನ್ನೂ ಮಾಡಿದವು. ಬೈಲಿನ ಎಲ್ಲೋರುದೇ ಕೈ ಜೋಡುಸಿದವು. ಅಕ್ಷರ ತಪ್ಪಿನ ತಿದ್ದಲೆ ಶ್ರೀಅಕ್ಕ° ಅಂತೂ – ಹಲವು ಸರ್ತಿ ಪ್ರಿಂಟು ತೆಗೆಶಿ ಡಾಗುಟ್ರ ಪ್ರಿಂಟರು ಕಾಲಿ ಮಾಡುಸಿದ್ದವಾಡ! ಮತ್ತೆ ಎಂತಕೋ ಕಣ್ಣಿನ ಚಿತ್ರವ ಪ್ರಿಂಟು ಮಾಡ್ಳೆ ಹೆರಡುವಗ – ಶಾಯಿ ಕಾಲಿ ಆಗಿದ್ದತ್ತು!!
ಹಾಂಗೆ ಕಾಗತಲ್ಲಿ ಪ್ರಿಂಟು ತೆಗದ್ಸರ ಹಿಡ್ಕೊಂಡು ಇಬ್ರು ಮಹಾನುಭಾವರಿಂಗೆ ಕೊಟ್ಟೂ ಓದಿ – ಮುನ್ನುಡಿ ಬರದು ಕೊಡೇಕು ಕೇಳಿಗೊಂಡತ್ತು.
ಒಪ್ಪಂಗೊ ಪುಸ್ತಕಕ್ಕೆ ನಮ್ಮ ವಿದ್ವಾನಣ್ಣನೂ, ಸಂಸ್ಕಾರ ಶುದ್ದಿಗೊಕ್ಕೆ “ಪಳ್ಳತ್ತಡ್ಕ ಭಟ್ಟಮಾವನೂ” ಚೆಂದಲ್ಲಿ ಓದಿ, ಪ್ರೋತ್ಸಾಹಿಸಿ ಮುನ್ನುಡಿ ಬರದುಕೊಟ್ಟು ಎಡ್ಡಪಾತೆರ ಹೇಳಿದ್ದವು.
ಓದುತ್ತೋನಿಂಗೆ ಕಲ್ಪನೆ ಇರೆಕು; ಇದರ ಡೈಮಂಡು ಭಾವನೂ ಒಪ್ಪುಗು.
ಪುಸ್ತಕಲ್ಲಿ ಅಂತೇ ಶುದ್ದಿ ಹೇಳುದರ ಬದಲು ಕಲ್ಪನೆಗೆ ತಕ್ಕ ಕೆಲವು ಗೆರೆಚಿತ್ರಂಗಳೂ ಇದ್ದರೆ ಒಳ್ಳೆದಲ್ಲದೋ? – ಹಾಂಗಾಗಿ ಒಪ್ಪಣ್ಣನ ಪುಸ್ತಕಕ್ಕೆ ಗುರುಗಳದ್ದು, ಕಾಂಬುಅಜ್ಜಿದು, ರೂಪತ್ತೆ, ಮೋಳಮ್ಮಂದು – ಇಂತಾ ವೆಗ್ತಿತ್ವಂಗಳ ನೆಗೆಚಿತ್ರವನ್ನೂ, ಸಂಸ್ಕಾರ ಶುದ್ದಿಗೆ ಅನ್ನಪ್ರಾಶನ, ನಾಮಕರಣ, ಉಪ್ನಾನ – ಇತ್ಯಾದಿ ಚಿತ್ರಂಗಳನ್ನೂ ಮಾಡಿಕೊಟ್ಟವು ನಮ್ಮ ನೆಗೆಚಿತ್ರ ಶಾಮಣ್ಣ.

ಬೈಲಿನ ತರವಾಡುಮನೆಯ ಹಾಂಗೇ ಕಾಣ್ತ ಪಟವ ಶ್ರೀಅಕ್ಕ° ಹುಡ್ಕಿಕೊಟ್ಟವು; ನಮ್ಮ ಮಣಿಲ ಮಾದಣ್ಣಮಾವ ಕೊಟ್ಟದಾಡ.
ಮೂಡಂಬೈಲು ಶಾಸ್ತ್ರಿಮಾವನ ಮನೆ ಅದು! ಪುಸ್ತಕದ ಮುಖಪುಟಲ್ಲಿ ಚೆಂದಕೆ ಬತ್ತು.
ನಮ್ಮೋರ ಹಳೇ ಮನೆಯ ಸಂಕೇತ ಅದು.

ಈ ಎಲ್ಲ ಚಿತ್ರಂಗಳನ್ನೂ ಸೇರ್ಸೆಂಡು ಚೆಂದದ ಮೋರೆಪುಟ ಮಾಡಿಕೊಟ್ಟವು ನಮ್ಮ ಅಕ್ಷರದಣ್ಣ.
ಎರಡೂ ಪುಸ್ತಕಂಗಳ ಮುಖಪುಟ ಎಷ್ಟು ಚೆಂದ ಆತು ಹೇದರೆ, ಕೈತೊಳದು ಮುಟ್ಟೇಕು – ಆ ನಮುನೆ! J

ಚೆಂದದ ಮುಖಪುಟಕ್ಕೆ ಕಾರಣ ಆದ ಎಲ್ಲೋರನ್ನೂ ಬೈಲು ನೆಂಪು ಮಡಿಕ್ಕೊಳ್ತು.
~

ಎಲ್ಲ ಆಗಿ, ಚೆಂದದ ಪುಸ್ತಕ ತೆಯಾರಾವುತ್ತಾ ಇದ್ದು. ಪುಸ್ತಕ ಪ್ರಿಂಟಾದ ಕೂಡ್ಳೇ ’ಇದಾ ತೆಕ್ಕೊಳಿ ಭಾವಾ’ ಹೇದು ಕೊಡ್ಳಾವುತ್ತೋ – ಕೇಳಿದ ಅಭಾವ°. ಎಂತಾಯೇಕು? ಅದರ ಒಂದು “ಬುಡ್ಗಡೆ” ಕಾರ್ಯಕ್ರಮ ಆಯೇಕು. ಎಲ್ಲಿ? ಆರು? ಹೇಂಗೆ? ಎಂತರ? – ಪುನಾ ಟ್ರಾನ್ಸ್ವಾರು ಪೆಟ್ಟಿಗೆ ಬುಡಲ್ಲಿ ಸೇರಿ ಮಾತಾಡಿಗೊಂಡವು.
~

ಮುಳ್ಳೇರಿಯ ಮಂಡಲ ಮೀಟಿಂಗು ಮುಗುಶಿ ಹೆರ ಬಪ್ಪಾಗ ಎಡಪ್ಪಾಡಿಬಾವ ಗುರುಗಳ ಕೈಲಿ ಒಪ್ಪುಸಿದನಾಡ; ಹೀಂಗೀಂಗೆ – ಪುಸ್ತಕ ಬಿಡುಗಡೆ ಮಾಡೇಕು ಹೇದು. ಗುರುಗಳೂ ಸಂತೋಷಲ್ಲಿ ಒಪ್ಪಿದವಾಡ.
ಹಾಂಗೆ, ನಾಳ್ತು ಶೆನಿವಾರ ಮಜ್ಜಾನಮೇಲೆ, ಗುರುಗೊಕ್ಕೂ ಭಿಕ್ಷೆ ಆಗಿ, ನವಗೂ ಭಿಕ್ಷೆ ಆದ ಮತ್ತೆ, ಪುರ್ಸೋತಿಲಿ ಕೂದುಗೊಂಡು ಕಟ್ಟಬಿಚ್ಚಿ ಬುಡ್ಗಡೆ ಮಾಡ್ತವಾಡ.

ಬೈಲಿಂಗೆ ಈ ಶುದ್ದಿ ಸಿಕ್ಕಿ ಅಪ್ಪದ್ದೇ, ಎಲ್ಲೋರಿಂಗೂ ಕೊಶಿ ಆತು.
ಎಲ್ಲೋರುದೇ ಹೆರಟವು. ಆರು? ಸಣ್ಣೋರು ದೊಡ್ಡೋರು – ನೋಡದ್ದೆ ಎಲ್ಲೋರುದೇ.
ದೊಡ್ಡಜ್ಜನಿಂದ ಹಿಡುದು ದೊಡ್ಡಬಾವ°, ದೊಡ್ಡತ್ತೆ, ದೊಡ್ಡಕ್ಕ° – ದೊಡ್ಡಳಿಯನ ಒರೆಂಗೆ.
ಬೇಂಕಿಂಗೆ ರಜೆ ಎಳದು ಬೊಳುಂಬುಮಾವನೂ, ಬೇಂಕಿನ ಪ್ರಸಾದಣ್ಣನೂ.
ಕೊಡೆಯಾಲಂದ ಶರ್ಮಪ್ಪಚ್ಚಿ, ಹೊಸಬೆಟ್ಟಿಂದ ಶ್ರೀಶಣ್ಣ. ಅವರ ಒಟ್ಟಿಂಗೆ ಮಂಗ್ಳೂರುಮಾಣಿ, ಆಚಕರೆ ಮಾಣಿ, ಅಕ್ಷರದಣ್ಣ..
ಮುಳಿಯಂದ ಮುಳಿಯಭಾವ°, ಮುಳಿಯಾಲಂದ ಅಪ್ಪಚ್ಚಿ, ಡೈಮಂಡು ಉಂಗಿಲಿನ ಡೈಮಂಡು ಭಾವ°, ತೆಕ್ಕುಂಜೆಂದ ತೆಕ್ಕುಂಜೆಮಾವ°, ಬೆಳ್ಳಿಪ್ಪಾಡಿಂದ ಬೆಳ್ಳಿಪ್ಪಾಡಿಮಾವ°,
ತಲೆಂಗಳಂದ ದೀಪಿಅಕ್ಕ°, ಜಾಲುಕೊಡಿಂದ ಸುಭಗಣ್ಣ, ಕಾನಾವಿಂದ ಶ್ರೀಅಕ್ಕ°, ಚೂರಿಬೈಲಿಂದ ದೀಪಕ್ಕ°, ಸಾಗರಂದ ಸುವರ್ಣಿನಿ ಅಕ್ಕ°, ಬಂಡಾಡಿಂದ ಅಜ್ಜಿಪುಳ್ಳಿ, ಮೂಡುಕಡಲಿಂದ ಚೆನ್ನೈಭಾವಯ್ಯ°, ಬೆಂಗುಳೂರಿನ ದೊಡ್ಡಮನೆಂದ ದೊಡ್ಮನೆಭಾವ°,
– ಎಲ್ಲೋರುದೇ ಹೆರಟಿದವು.

ಅಂಬಗ, ನಿಂಗಳೂ ಬತ್ತಿರಲ್ಲದೋ?
~

ಬೈಲಿನ ಹಲವು ಸಾಹಸ ಮಾಡುವಗ ಒಟ್ಟಿಂಗೇ ಇದ್ದು ಕೈಸಕಾಯ ಮಾಡಿದೋರು ನಿಂಗೊ.
ನಿಂಗಳ ಸಹಕಾರಂದಾಗಿಯೇ ಬೈಲು ಇಷ್ಟುಬೆಳವಲೆ ಕಾರಣ.
ಆ ಆಶೀರ್ವಾದಂದಾಗಿಯೇ ಇಷ್ಟು ಬೆಳದ್ದು. ಹಾಂಗೆ ಇದೊಂದು ಹೊಸ ಮೆಟ್ಳು ಹತ್ತುವಗ ಮತ್ತೊಂದರಿ ಈ ಒಪ್ಪಣ್ಣನ, ಒಪ್ಪಣ್ಣನ ಬೈಲಿನ ಹರಸಿ ಬೆಳೆಶಿಕೊಡಿ ಹೇಳಿ ನಿಂಗಳತ್ರೆ ಕೇಳಿಗೊಂಬದು.

ಕಣ್ಣಾಟಿಯೊಳದಿಕೆ ಇದ್ದಿದ್ದ ಶುದ್ದಿಯ ಗೆಂಟು ಪುಸ್ತಕ ರೂಪಕ್ಕೆ ಇಳುದು ಕೈಯೊಳ ಅಪ್ಪ ಸಂದರ್ಭಲ್ಲಿ ಬೈಲಿನ ಎಲ್ಲಾ ಒಪ್ಪಣ್ಣ ಒಪ್ಪಕ್ಕಂದ್ರೂ ನಮ್ಮ ಒಟ್ಟಿಂಗೆ ಇರೇಕು ಹೇಳ್ತದು ಅಪೇಕ್ಷೆ. ಒಪ್ಪಣ್ಣನ ಒಪ್ಪಂಗಳೂ, ಹದಿನಾರು ಸಂಸ್ಕಾರಂಗಳೂ ನಮ್ಮ ಮನಸ್ಸಿಂಗೆ ಇಳುದು, ಸಂಸ್ಕಾರವಂತರಾಗಿ, ಸನಾತನಿಗೊ ಆಗಿಪ್ಪೊ°.

~

ಅಂಬಗ, ನಾಳ್ತು ಶೆನಿವಾರ ಎಲ್ಲೋರುದೇ ಮಠಕ್ಕೆ ಬನ್ನಿ. ಮಜ್ಜಾಂತಿರುಗಿ ಇಪ್ಪ “ಬೈಲಿನ ಪುಸ್ತಕ ಬಿಡುಗಡೆ” ಕಾರ್ಯಕ್ರಮವ ಎಲ್ಲೋರುದೇ ನೋಡುವೊ°. ಗುರುಗೊ ಆಶಿರ್ವಾದ ಮಾಡುವಗ ಪಡಕ್ಕೊಂಬೊ°.
ಹರೇರಾಮ.
~

ಒಂದೊಪ್ಪ: ಶುದ್ದಿಯ ಪುಸ್ತಕವೋ, ಪುಸ್ತಕದ ಶುದ್ದಿಯೋ – ಬೈಲಿಲಿ ಅಂತೂ ನಿತ್ಯ ಸಾಹಿತ್ಯ ಸಂಚಾರ!

15 thoughts on “ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..!

  1. ಬೈಲಿನ ಶುದ್ದಿ ಒಪ್ಪಣ್ಣ ಹೇಳಿದ ಹಾಂಗೆ ಕಂಪ್ಲೀಟರಿಪ್ಪೋರಿಂಗೆ ಮಾಂತ್ರ ಸೀಮಿತಾ ಆದರೆ ಸಾಲ, ಆ ಉದ್ದೇಶಂದ ಅದರ ಕಾಗತಲ್ಲಿ ಪ್ರಿಂಟು ಮಾಡ್ಸಿ..ಪುಸ್ತಕ ಮಾಡುವ ನಿರ್ಧಾರ …ಇಂದು ಗುರುಗಳ ಕೈಂದಲೇ ಬಿಡೂಗಡೆ ಆಗಿ ಎಲ್ಲರನ್ನೂ ತಲ್ಪುತ್ತಾ ಇಪ್ಪದು ಸಂತೋಷದ ಸಂಗತಿ. ಇದರ ಹಿಂದೆ ಶ್ರಮವಹಿಸಿದ ನಮ್ಮ ಬೈಲಿನ ಎಲ್ಲರೂ ಅಭಿನಂದನಾರ್ಹರು ..

  2. ಗುರುಗಳ ಅನುಗ್ರಹವೂ ಸಿಕ್ಕಿಇತ್ತು ಕಾರ್ಯಕ್ರಮ ಚೆಂದ ಾಅತು..ಭಾಗವಹಿಸಿ ಕುಶಿ ಆತು..ಬೈಲಿಲಿ ಇಪ್ಪದಕ್ಕೆ ಸರ್ಥ್ಕ್ಯದ ಅನುಭವ..ಇನ್ನೂ ಹೆಚ್ಚು ದಸಾಧನೆಗಳ ನಾವೆಲ್ಲ ಸೇರಿ ಮಾಡುವ..

  3. ಕಾರ್ಯಕ್ರಮಕ್ಕೆ ತುಂಬು ಹೃದಯದ ಶುಭಾಶಯಂಗೋ, ಕಾರ್ಯವಶಾತ್ ಬಪ್ಪಲೆ ಆವುತ್ತಿಲ್ಲೆ ಒಪ್ಪಣ್ಣ, ಚೆನ್ನೈಭಾವ, ಕ್ಷಮೆ ಇರಳಿ.
    ಒಂದೊಂದು ಪುಸ್ತಕದ ಪ್ರತಿ ಎನಗೆ ಬೇಕು. ದಯವಿಟ್ಟು ಹೇಂಗೆ ಸಿಕ್ಕುತ್ತು ಹೇಳಿ.

    ಒಳ್ಳೆದಾಗಲಿ ಹೇಳಿ ಹಾರೈಕೆ.

  4. ಹರೇ ರಾಮ.
    ಈ ಶುದ್ದಿ ಕೇಳಿ ತುಂಬಾ ಖುಷಿ ಆತು.
    ಬೈಲಿನ ಶುದ್ದಿಗ ಪುಸ್ತಕ ರೂಪಲ್ಲಿ ಪ್ರತಿ ಮನೆಗೂ ಎತ್ತಲಿ.
    ಶ್ರೀ ಗುರುಗಳ ಆಶೀರ್ವಾದಲ್ಲಿ ಒಂದೆಲಗಂದ ನೂರೆಲೆ ವರೆಗೂ ಬರಳಿ.

  5. ಕಾರ್ಯಕ್ರಮ ಲಾಯ್ಕಿಲಿ ಆಗಲಿ..ಇನ್ನಷ್ಟು ಪುಸ್ತಕಂಗ ಬರಲಿ!! ಪುಸ್ತಕವ ಹಿಡ್ಕೊಂಡು ಓದುವಗ ಸಿಕ್ಕುವ ಸಂತೋಷವೇ ಬೇರೆ..

  6. ಕನ್ನಡಿಯೊಳಗಿನ ಗ೦ಟು ಎಲ್ಲರ ಕೈಸೇರಲಿ. ಅದರಲ್ಲಿಪ್ಪ ಆಸ್ತಿ ನ೦ಗೋವೆಲ್ಲಾ ಹ೦ಚಿಕೊ೦ಬೋ. ಗ೦ಟಿನ ಭಾರ ಹೆಚ್ಚಾಗಲಿ, ಮನಸು ಹಗುರಾಗಲಿ ಎ೦ದು ಹಾರೈಸುವೋ. ಹರೇ ರಾಮ.

  7. ಒಪ್ಪಣ್ಣಂಗೆ ಎಂತಕೆ ಪಿಸುರು ಬಂತಪ್ಪಾ ಹೇಳಿ ಸುರೂವಿಂಗೆ ಗ್ರೇಶಿದೆ. ಮತ್ತೆ ನೋಡಿರೆ ಕೊಶಿಯ ಶುದ್ದಿ. ಪುಸ್ತಕ ಬಿಡುಗಡೆ ಕಾರ್ಯಕ್ರಮ. ಒಪ್ಪಣ್ಣನ ಸಾಧನೆಯ ಮೆಚ್ಚೆಕಾದ್ದೆ. ಎಲ್ಲೋರನ್ನೂ ಒಟ್ಟು ಸೇರುಸೆಂಡು, ಅವರಲ್ಲಿ ಅಡಗೆಂಡಿಪ್ಪ ಪ್ರತಿಭೆಯ ಹೆರ ಎಳದು ಅದರ ತೋರುಸಲೆ ಒಂದು ಚಾವಡಿಯನ್ನೂ ಕೊಟ್ಟು ಸಾಹಿತ್ಯ ಸೇವೆ ಮಾಡ್ತಾ ಇಪ್ಪದು ಸಂತೋಷ ಕೊಡ್ತು. ನಮ್ಮ ಬೈಲು ಇಷ್ಟು ದೊಡ್ಡಕೆ ಬೆಳೆತ್ತಾ ಇದ್ದು, ಇದೀಗ ನಮ್ಮ ಪ್ರತಿಷ್ಠಾನದ ಆಶ್ರಯಲ್ಲಿ ನಮ್ಮವೇ ಬರದ ಪುಸ್ತಕಂಗೊ ಗುರುಗಳ ಕೈಲಿ ಬಿಡುಗಡೆ ಆವ್ತಾ ಇದ್ದು. ಈ ಕಾರ್ಯಕ್ರಮಲ್ಲಿ ನಾವೆಲ್ಲೋರು ಭಾಗವಹಿಸುವೊ. ಕಾರ್ಯಕ್ರಮಕ್ಕೆ ಶುಭವಾಗಲಿ. ಪುಸ್ತಕಂಗಳ ನಾವೂ ಓದುವೊ, ನಮ್ಮ ನೆಂಟರಿಷ್ಟರುದೆ ಓದುತ್ತ ಹಾಂಗೆ ಮಾಡುವೊ. ಕನ್ನಾಟಿ ಒಳಾಣ ಗೆಂಟು ಎಲ್ಲೋರಿಂಗು ಸಿಕ್ಕಲಿ, ಎಲ್ಲೋರಿಂಗು ಅದರ ಪ್ರಯೋಜನ ಸಿಕ್ಕಲಿ ಹೇಳುವ ಶುಭ ಹಾರೈಕೆಗೊ.

  8. ನಮ್ಮ ಭಾಷೆ ಅಕ್ಷರರೂಪಲ್ಲಿಯೂ ಬೆಳೆಯೇಕು ಹೇಳ್ತ ಒಪ್ಪಣ್ಣನ ಆಶಯ ಇ೦ದು ಈ ಹ೦ತಕ್ಕೆ ಮುಟ್ಟಿತ್ತು.ಅಭಿನ೦ದನೆಗೊ.
    ಈ ಮದಲು ಹವ್ಯಕಲ್ಲಿ ಕೆಲವು ಮಹತ್ವದ ಪುಸ್ತಕ೦ಗೊ ಬಿಡುಗಡೆ ಆಯಿದು.
    ಮರಿಯಪ್ಪ ಭಟ್ತರ “ನಿಘ೦ಟು”,
    ಅರ್ತಿಕಜೆ ಶ್ರೀಕೃಷ್ಣ ಮಾವನ ಗಾದೆಗಳ ಸ೦ಗ್ರಹ,
    ಭರಣ್ಯ ಮಾವನ “ಗೆಣಸಲೆ”,
    ಬಾಳಿಲ ಪರಮೇಶ್ವರ ಭಟ್ಟರ ಮಹಾಕಾವ್ಯ “ಧರ್ಮ ವಿಜಯ”
    (ಇನ್ನೂ ಇದ್ದು).. …
    ಈ ಪರ೦ಪರೆಯ ಬೆಳೆಶುತ್ತಾ,ನಮ್ಮ ಭಾಷೆಯ ಚೆ೦ದವ ಒಳುಶುಲೆ,ಬೆಳೆಶುಲೆ ಒಪ್ಪಣ್ಣನ ಬೈಲು ಮಾಡ್ತಾ ಇಪ್ಪ ಈ ಪ್ರಯತ್ನ ಯಶಸ್ವಿಯಾಗಲಿ.ಹವ್ಯಕ ಭಾಷೆಯ ಪುಸ್ತಕ೦ಗೊ ಪ್ರತಿ ಮನೆ ಸೇರಲಿ,ಪ್ರತಿ ಮನ ಮುಟ್ಟಲಿ.
    ಶುಭ ಹಾರೈಕೆಗೊ.

  9. ಹರೇ ರಾಮ ।

    ಶ್ರೀಗುರುದೇವತಾನುಗ್ರಹಂದ, ಬೈಲ ನೆರೆಕರೆ ಸಮಸ್ತರ ಪ್ರೀತಿಯ ಸಹಕಾರಂದ ನಡವ ಬೈಲಿಂಗೆ ಇನ್ನಷ್ಟು ಯಶಸ್ಸು ಪ್ರಾಪ್ತಿಯಾಗಲಿ, ಬೈಲು ಬೆಳಗಲಿ ಹೇಳಿ ಹತ್ತುಸಮಸ್ತರೊಟ್ಟಿಂಗೆ ಸದಾಶಯ.

    ನಮ್ಮ ಮನೆ ಜೆಂಬಾರ ಇದು. ಬನ್ನಿ, ಎಲ್ಲೋರು ಭಾಗವಹಿಸುವೊ. ತೆರೆಮೆರೆಲಿ ಬೈಲಿಂಗೆ ಶ್ರಮಿಸುವ, ಪ್ರೋತ್ಸಾಹಿಸುವ ಪ್ರತಿಯೊಬ್ಬಂಗೂ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×