ಕಸವಿಂದ ಕಡೆ ಕಸಬುಗೆ ಕಬಾಬು ಕೊಟ್ಟು ಸಾಂಕುತ್ತವು!

November 25, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸರಿಯಾಗಿ ಮೂರು ಒರಿಶ ಆತು ಇಂದಿಂಗೆ; ಗುಣಾಜೆಮಾಣಿಗೆ ಹೊಸತ್ತೊಂದು ತಲೆಬೆಶಿ ಸುರುಆಗಿ.
ಜೀವನ ಹೇಳಿರೆ ಹಾಂಗೇ ಅಲ್ಲದೋ – ತಲೆಬೆಶಿಗೊ ಸೇರಿಗೊಂಡೇ ಹೋಪದು.
ಎಲ್ಲ ತಲೆಬೆಶಿಗೊಕ್ಕೂ ಒಂದು ಕಾರಣ ಇರ್ತು, ಹಾಂಗೇ ಇದಕ್ಕೂ ಇದ್ದು. ಒಂದಲ್ಲ, ಎರಡಲ್ಲ – ಮೂರೊರಿಶ ಆತು ಸುರು ಆಗಿ!
~
ರಾಜಕೀಯದ ಶುದ್ದಿ ಬೈಲಿಲಿ ಬೇಪಲೇ ಬೇಡ, ಸರ್ಪಮಲೆ ಮಾವ° ಅಂದೊಂದರಿ ಕೆಮಿತಿರ್ಪಿದ ಮತ್ತೆ.
ಗುಣಾಜೆಮಾಣಿಯ ಹೆಸರೆತ್ತಿರೇ – ಅದರ ಹಿಂದೆ ರಾಜಕೀಯ ಹಿತಾಸಕ್ತಿ ಇದ್ದು ಹೇಳಿ ಪೆರ್ಲದಣ್ಣ ತಿಳ್ಕೊಂಬದು.
ಒಟ್ಟಾರೆ, ಈ ಗಡಿಬಿಡಿಲಿ ಬೈಲಿಲಿ ಮಾತಾಡೇಕಾರೆ ತುಂಬಾ ಆಲೋಚನೆ ಮಾಡೇಕಾವುತ್ತು ಈಗೀಗ!
ಹಾಂಗೇಳಿಗೊಂಡು – ಎಂತದೂ ಮಾಡದ್ದೆ ಬರೇ ಆಲೋಚನೆ ಮಾಡಿಗೊಂಡು ಕೂದರೆ ಹೇಂಗಕ್ಕು?
ಈ ಮೂರೊರಿಶ ನಮ್ಮ ಸರ್ಕಾರ ಹಾಂಗೇ ಮಾಡಿದ್ದು – ಹೇಳ್ತದು ಗುಣಾಜೆಮಾಣಿಯ ತಲೆಬೆಶಿ!
ಅದೆಂತರ ಗೊಂತಾತೋ? ಏ°?
~

ಮನ್ನೆ ಕುಕ್ಕುಜೆ ಮದುವೆ ಕಳಾತಲ್ಲದೋ – ಗುಣಾಜೆಮಾಣಿದು ಸುದರಿಕೆಯೇ ಸುದರಿಕೆ.
ಮದುವೆ ದಿನ ಊಟಕ್ಕಪ್ಪಗ ಸುರು ಆದ್ದು, ಸಟ್ಟುಮುಡಿ ದಿನದ ಊಟ ಬಿರಿವನ್ನಾರವೂ ಸುದರಿಕೆ ಇತ್ತು.
ಸಟ್ಟುಮುಡಿದಿನ ಅತ್ತಾಳದ ಬೆಂದಿಗೆ ಕೊರವಲೆ ಹೋಗಿದ್ದ ಒಪ್ಪಣ್ಣಂಗೆ ಅದೇ ಸುದರಿಕೆ ಎಡಕ್ಕಿಲಿ ಮಾತಾಡ್ಳೆ ಸಿಕ್ಕಿದ°.
ಸಿಕ್ಕಿದ° ಹೇಳಿರೆ, ಜಾಸ್ತಿ ಪುರುಸೊತ್ತಿಲಿ ಇತ್ತಿದ್ದನಿಲ್ಲೆ, ಸುದರಿಕೆ ಆಗೆಡದೋ!
ಸೇರಿದೋರು ಬಾಳೆಲೆ ಸಜ್ಜಿ ಮಾಡುವಗ ಇವ° ಸುದರಿಕೆ ಮಾಡಿಗೊಂಡಿತ್ತಿದ್ದ°.
ಎಲ್ಲೋರುದೇ ಬೆಂದಿಗೆ ಕೊರಕ್ಕೊಂಡು ಇಪ್ಪಗಳೂ ಸುದರಿಕೆ ಮಾಡಿಗೊಂಡು ಇತ್ತಿದ್ದ°.
ಒಳುದ ಎಲ್ಲೋರುದೇ ಉಂಡುಗೊಂಡಿಪ್ಪಗ ಇವಂದೇ ಉಂಬಲೆ ಕೂದಿತ್ತಿದ್ದನಲ್ಲದೋ – ಅಂಬಗ ರಜ್ಜ ಹೊತ್ತು ಮಾತಾಡ್ಳೆ ಸಿಕ್ಕಿದ್ದು.
ಊಟ ಆದ ಮತ್ತೆ ಪುನಾ ಸುದರಿಕೆಲಿ ಬೆಶಿ ಆದೋನು, ಮರದಿನ ಜೆಂಬ್ರದೂಟ ಕಳಿವನ್ನಾರವೂ ಅಂಬೆರ್ಪಿಲಿ ಇದ್ದಿದ್ದ°.
ಸುದರಿಕೆ ಮಾಡದ್ದೆ – ಅವನ ಅಣ್ಣನ ಮಾವಗಳ ಮನೆ ಅಲ್ಲದೊ ಹೇಳಿದ° ಬಲ್ನಾಡುಮಾಣಿ! 😉
~
ನವೆಂಬ್ರ ಇಪ್ಪತ್ತಾರು, ಎರಡು ಸಾವಿರದ ಎಂಟು – ಹೇದರೆ ಆಧುನಿಕ ಭಾರತದ ಕರಾಳ ದಿನ ಅಡ.
ಮನ್ನೆ ಮಾತಾಡುವಗಳೂ ಇದೇ ಶುದ್ದಿ ಬಂದದು, ಬೇರೆ ಬಯಿಂದೇ ಇಲ್ಲೆ ಗುಣಾಜೆ ಕುಂಞಿಯ ಬಾಯಿಲಿ.
ಗುಣಾಜೆಮಾಣಿಯ ಧಾಟಿಲಿ ಹೇಳ್ತರೆ ಹೇಳ್ತರೆ – ಹೆತ್ತ ಅಬ್ಬೆಗೆ ಮಕ್ಕೊ ಬಡುದ ದಿನ!
ಭರತಖಂಡದ ಈಗಾಣ ಪಾತಕಿಸ್ಥಾನಲ್ಲಿ ಹುಟ್ಟಿದ ಕೆಲವು ಮತಾಂಧ ಮಾಪುಳೆಗೊ ಅದೇ ಭರತಖಂಡದ ಹಿಂದೂಸ್ಥಾನಕ್ಕೆ ಬೋಂಬುಮಡಗಿದ ದಿನ.
ಈಗ ಭಾರತ-ಪಾತಕಿಸ್ಥಾನ ಹೇಳಿ ಆದರೂ, ಮದಲಿಂಗೆ ಇಡೀ ದೇಶ ಒಂದೇ ಅಲ್ಲದೋ.
ಇದೇ ದೇಶದ ಜೆನಂಗೊ ಇದೇ ದೇಶಕ್ಕೆ ಬೋಂಬು ಮಡಗಿರೆ ಅದು ಹೆತ್ತಬ್ಬೆಗೆ ಬಡುದ ಹಾಂಗೇ ಅಲ್ಲದೋ – ಹೇಳಿ ಅರ್ತ ಆಗದ್ದೋರಿಂಗೆ ಅವ° ಅರ್ತ ಮಾಡುಸುಗು.
ಗುಣಾಜೆಮಾಣಿ ಹೇಳ್ತದರ್ಲಿಯೂ ಸತ್ಯ ಇಲ್ಲದ್ದೆ ಇಲ್ಲೆ. ಹಾಂಗೆ ಬೋಂಬು ಮಡಗಿದ್ದು ತಪ್ಪು.
~

ಅದು ತಪ್ಪು ಹೇದು ಗುಣಾಜೆಕುಂಞಿ ಹೇಳ್ತ, ನಾವು ಹೇಳ್ತು, ನಿಂಗಳೂ ಹೇಳ್ತಿ..
ಬೊಂಬಾಯಿಲಿ ಪೆಟ್ಟು ತಿಂದು ತೀರಿಗೊಂಡ ಜೆನಂಗಳ ಮನೆಯೋರೂ ಹೇಳ್ತವು.
ಅಲ್ಲಿ ವೀರಮರಣಲ್ಲಿ ಸ್ವರ್ಗಕ್ಕೆ ಹೋದ ಸೈನಿಕರ, ಪೋಲೀಸರ ಮನೆಯೋರು ಹೇಳ್ತವು,
– ಶಾಂತಿಃ ಶಾಂತಿಃ ಶಾಂತಿಃ ಹೇಳ್ತ ಶಾಂತಿಪ್ರಿಯರು ಎಲ್ಲೋರುದೇ ಹೇಳ್ತವು.
ಅವು ಮಾಡಿದ್ದು ತಪ್ಪು ಹೇಳ್ತದು ಇನ್ನೂ ಗೊಂತಾಗದ್ದು ಆರಿಂಗೆ?
ಭಾರತ ಸರಕಾರಕ್ಕೆ!!
ಇದುವೇ ಕುಂಞಿಯ ತಲೆಬೆಶಿಗೆ ಕಾರಣ.
~
ಅಡ್ವಾಣಿ ಅಜ್ಜ° ಹುಟ್ಟಿದ ಊರು ಲಾಹೋರು, ಈಗ ಪಾತಕಿಸ್ಥಾನದ ಒಂದು ಬಾಗ.
ಅಲ್ಲಿ ಸಣ್ಣ ಹೋಟ್ಳು ಮಡಗಿದ ಒಂದು ಮಾಪಳೆಗೆ ದಾರಾಳ ಮಕ್ಕೊ; ಪೈಸೆ ಕಮ್ಮಿ ಕೊಟ್ಟರೂ ದೇವರು(ಸ.ಅ) ಮಕ್ಕೊ ಕಮ್ಮಿ ಮಾಡಿದ್ದನಿಲ್ಲೆ ಇದ, ಅವಕ್ಕೆ!
ಹುಟ್ಟುಸಿರೆ ಸಾಕೋ, ಸಾಂಕೆಡದೋ! ದರ್ಬಾರಿಲಿ ಸಾಂಕಲೆ ಸಣ್ಣ ಹೋಟ್ಳುಕಚ್ಚೋಡ ಸಾಕಾಯಿದಿಲ್ಲೆ.
ರೆಕ್ಕೆ ಗಟ್ಟಿ ಅಪ್ಪಗ ಮನೆಂದ ಎಲ್ಲ ಕುಟ್ಟಂಗಳೂ ಹಾಂಗೇ! ತಪ್ಪಲ್ಲ ಅದು.
ಹಾಂಗೆ ಹೋಟ್ಳುಮಾಪಳೆಯ ಮನೆಂದಲೂ ಹಾರಿದವು. ಅದೂ ತಪ್ಪಲ್ಲ.
ಒಂದೊಂದು ಹಕ್ಕಿ ಒಂದೊಂದು ಹೊಡೆಂಗೆ ಹಾರಿದವು.
ಒಂದು ಕುಟ್ಟ° ಆ ಊರಿಲೇ ಎಂತದೋ ಒಯಿವಾಟು ಮಾಡ್ಳೆ ಸುರುಮಾಡಿತ್ತು, ಇನ್ನೊಂದು ಕುಟ್ಟ° ಹತ್ತರಾಣ ಪೇಟಗೆ ಬಂದು ಕಚ್ಚೋಡ ಸುರುಮಾಡಿತ್ತು…
ಮತ್ತೊಂದು ಕುಟ್ಟ°? – ಅದುವೇ ಇಂದು ಲೋಕಪ್ರಸಿದ್ಧಿ ಆದ್ದು.
ಧರ್ಮಮಾರ್ಗಲ್ಲಿ ಇಪ್ಪ ಒಳುದೆರಡರ ಆರಿಂಗೂ ಗುರ್ತ ಇಲ್ಲದ್ದರೂ, ಇದರ ಎಲ್ಲೋರಿಂಗೂ ಗುರ್ತ ಆಯಿದು ಈಗ.
ಅಪ್ಪಮ್ಮನ, ಮನೆಯೋರ ‘ಹೆಸರು ಹೇಳುಸಿತ್ತು’ ಅದು!! ಹಾಂಗೊಂದು ಪ್ರಚಾರ ಆಯೇಕಾರೆ ಮಾಡಿದ್ದೆಂತರ?
~
ರೆಕ್ಕೆ ಗಟ್ಟಿ ಅಪ್ಪಗ ಮನೆಂದ ಹಾರಿದ ಜೆನ ಸೀತ ಹೋಗಿ ಬಿದ್ದದು ಉಗ್ರವಾದಿ ಸಂಘಟನೆಗಳ ಕೈಗೆ.
ಬಡವರ ಮಕ್ಕಳ ಎಲ್ಲಿ ಸಿಕ್ಕುತ್ತವು ಹೇದು ಕಾದುಗೊಂಡಿರ್ತ ಹಾಂಗಿಪ್ಪ ಸಂಘಟನೆಗೊಕ್ಕೆ ಇದೂ ಒಂದು ಸಿಕ್ಕಿಬಿದ್ದತ್ತು.
ಇದೂ ಅಲ್ಲದ್ದೆ ಇದರ ಒಟ್ಟಿಂಗೇ ಇನ್ನೂ ಹತ್ತನ್ನೆರಡು ಹೀಂಗೇ ಇರ್ತ ಕುಟ್ಟಂಗೊ ಇದ್ದಿದ್ದವಡ;
ಸುರುವಿಂಗೆ ದೇವರ(ಸ.ಅ) ಸತ್ಯಂಗಳ ವಿವರುಸಿ, ಧಾರ್ಮಿಕವಾಗಿ ರಜ್ಜ ಕಲುಶಿದವು. ಮಾತಾಡ್ಲೆ ದಕ್ಕಿತ ಧರ್ಮಾಚಾರ ಹೇಳಿಕೊಟ್ಟವು.
ಅದಾದ ಮತ್ತೆ ದೈಹಿಕ ತರಬೇತಿಯುದೇ ಕೊಟ್ಟವಡ. ಯೇವ ನಮುನೆದು?!

ಭಾರತದ ತಲೆ – ಕಾಶ್ಮೀರದ ಅರ್ದ ಭಾಗ ಈಗ ಪಾತಕಿಸ್ಥಾನದ ಕೈಲಿ ಇದ್ದು.
ಅಲ್ಲಿಪ ಕಾಲಿ ಭೂಭಾಗ ಉಪಯೋಗ ಅಪ್ಪದೇ ಹೀಂಗಿರ್ತ ಉಗ್ರವಾದಿ ಸಂಘಟನೆಗಳ ಕೇಂಪು ಮಡಗಲೆ ಅಡ.
ಅಲ್ಲಿ ಈ ಕುಟ್ಟಂಗೊಕ್ಕೆ ತರಬೇತಿ.
ಪಾತಕಿಸ್ಥಾನದ ಮಿಲಿಟ್ರಿಲಿ ಇದ್ದ ಕೆಲವು ಜೆನರ ಕರಕ್ಕೊಂಡು ಬರುಸಿ, ಅವರ ಕೈಲಿ ’ಬೆಡಿ ಹಿಡಿತ್ತದು ಹೇಂಗೆ’ ಹೇಳಿಕೊಟ್ಟವು.
ಬೆಡಿ ಹಿಡಿತ್ತದು ಹೇಳಿಕೊಟ್ಟಾದಮತ್ತೆ, ಬೆಡಿ ಮಡಗುತ್ಸು ಹೇಂಗೆ – ಹೇದು!
ಅದಾದ ಮತ್ತೆ ಬೋಂಬು ಮಡಗುತ್ತು ಹೇಂಗೆ ಹೇದು.
ಅದಾದ ಮತ್ತೆ ತಪ್ಪುಸಿಗೊಂಬದು ಹೇಂಗೆ – ಹೇದು!!
ಅದಾದ ಮತ್ತೆ ಪಾಪದವನ ತಲೆಒಡವದು ಹೇಂಗೆ ಹೇದು.
ದೇವರ(ಸ.ಅ) ಹೆಸರಿಲಿ ಆರಂಭ ಆದ ತರಬೇತಿ, ಅಕೇರಿಗೆ ಅನಾಹುತಕಾರೀ ವಿಶಯಂಗಳ ಹೇಳಿಕೊಡುವಲ್ಲಿ ಒರೆಂಗೆ ಎತ್ತಿತ್ತು.
ಹಾಂಗೆ, ಈ ಜೆನವುದೇ ತರಬೇತಿ ತೆಕ್ಕೊಂಡತ್ತು.
ಎರಡುಸಾವಿರದ ಎಂಟ್ರಲ್ಲಿ ತರಬೇತಿ ಮುಗುಶಿಕ್ಕಿ – ಕಲಿವದು ಮುಗಾತು; ಇನ್ನು ಪ್ರಯೋಗ –ಹೇಳಿದವಡ.

ಇಷ್ಟಕ್ಕೆ ಪೈಶೆ ಎಲ್ಲಿಂದ?
ಅರಬರ ದೇಶಲ್ಲಿ ಬೋರುವೆಲ್ಲುಗೊ ಇದ್ದಾಡ.
ಆ ಬೋರುವೆಲ್ಲಿಲಿ ನೀರು ಬಪ್ಪ ಬದಲು ಪೆಟ್ರೋಲು ಬತ್ತಾಡ. ಆ ಪೆಟ್ರೋಲಿನ ಇಡೀ ಪ್ರಪಂಚಕ್ಕೆ ಮಾರ್ತವಲ್ಲದೋ – ಹಾಂಗೆ ಮಾರಿದ್ದರಲ್ಲಿ ಒಂದಂಶ ದೇವರ(ಸ.ಅ) ಸೇವೆಗೆ ಹೇಳಿ ತೆಗದು ಮಡಗುತ್ತವಡ.
ಅದರ ಕೆಲವು ಸಂಘಟನೆಗೊ ತೆಕ್ಕೊಂಡು ಹೀಂಗಿರ್ತ ದುರ್ಬುದ್ಧಿಗೆ ಉಪಯೋಗುಸುತ್ತವಾಡ.
ಗುಣಾಜೆಮಾಣಿ ವಿವರುಸಿಗೊಂಡು ಹೋಪದರ ಕೇಳುವಗ ನಾವೇ ಗುಣಾಜೆಮಾಣಿ ಆದ ಹಾಂಗೆ ಆಗಿ, ಮೈ ಉರುದು ಪಿಸುರು ಬತ್ತು!
~

ತರಬೇತಿ ಮುಗುದ ಮಕ್ಕೊಗೆ ಪ್ರಯೋಗ ಎಂತರ?
ಅವರ ದೇಶಂದ ಮದ್ದು-ಗುಂಡು-ಬೆಡಿ ಎಲ್ಲ ತುಂಬುಸಿ ಹಡಗಿಲಿ ಕರಕ್ಕೊಂಡು ಅರ್ದದಾರಿ ಒರೆಂಗೆ ತಂದು ಬಿಡ್ತವು.
ಅಲ್ಲಿಂದ ಮತ್ತೆ ಅವು ಮಾಂತ್ರ ಆಗಿ ಭಾರತಕ್ಕೆ ಬಂದು ಇಲ್ಲಿ ಬೋಂಬು ಮಡಗೆಕ್ಕಡ.
ಹಾಂಗೆ, ಅರ್ದ ದಾರಿಗೆ ಎತ್ತುವಗ ಪಾಪದ ಮೀನುಗಾರರ ಹಡಗು ಸಿಕ್ಕಿತ್ತು. ಅದಕ್ಕೆ ಹತ್ತಿಗೊಂಡು, ಅಲ್ಲಿಪ್ಪ ಎಲ್ಲೋರನ್ನುದೇ ಕೊಂದಿಕ್ಕಿ, ಅದೇ ಹಡಗಿನ ಬೊಂಬಾಯಿ ಬಂದರು ಒರೆಂಗೆ ತಂದವಡ.
ಅಂತೂ – ಭಯಾನಕ ತಂಡ ಒಂದು ಬೊಂಬಾಯಿಗೆ ಎತ್ತಿತ್ತು.
~

ಬೆಡಿಹೊಟ್ಟುಸಿ ಬಚ್ಚಿದ್ದು - ಈಗ ಕಬಾಬು ತಿಂದು ಗೆನಾ ಆಯಿಕ್ಕು. ಅಲ್ಲದೋ? (ಪಟ: ಇಂಟರ್ನೆಟ್ಟು)

ಅಲ್ಲಿಂದ ಆ ತಂಡ ಬೇರೆಬೇರೆ ಗುಂಪು ಆಗಿ ಸುಮಾರು ದಿಕ್ಕಂಗೆ ಹೋತು.
ಕೆಲವು ಜೆನ ತಾಜುಮಹಲು ಹೋಟ್ಳಿಂಗೆ ಹೋದವಡ, ಕೆಲವು ಜೆನ ಯಹೂದಿದೇವಸ್ಥಾನಕ್ಕೆ ಹೋದವಡ, ಕೆಲವು ಜೆನ ರೈಲ್ವೇ ನಿಲ್ದಾಣಕ್ಕೆ ಹೋದವಡ, ಕೆಲವು ಜೆನ ಸಿನೆಮ ತಿಯೇಟರಿಂಗೆ ಹೋದವಡ
– ಓಯ್, ಇವೆಲ್ಲ ಗಮ್ಮತ್ತುಮಾಡ್ಳೆ ಹೋದ್ದಲ್ಲ; ಕೈಲಿ ಭಯಾನಕ ಶಸ್ತ್ರಾಸ್ತ್ರ ತೆಕ್ಕೊಂಡು ಸರ್ವನಾಶ ಮಾಡ್ಳೆ ಹೆರಟದು!! ಅಪ್ಪು!
ಏನೂ ಕಲಿಯದ್ದ, ಏನೂ ಅರಡಿಯದ್ದ ನಾಕು ಪುಳ್ಳರುಗಳಿಂದ ಭಾರತ ದೇಶದ ಒಯಿವಾಟುಪೇಟೆಗೇ ಪೆಟ್ಟು!
ಇಷ್ಟೆಲ್ಲ ಅಪ್ಪನ್ನಾರವೂ – ಪೋಲೀಸು ಸೇನೆಯೋರಿಂಗೆ ಆರಿಂಗೂ -ಎಂತರ ಆವುತ್ತಾ ಇದ್ದು ಹೇಳಿಯೇ ಅರಡಿಗಾಯಿದಿಲ್ಲೇಡ!
ಆರೂ ಗ್ರೇಶದ್ದ ಹಾಂಗಿರ್ತ ಒಂದು ಮಹಾನ್ ದುರಂತ!

ಅವು ಒಂದಿಕ್ಕಂದ ಇನ್ನೊಂದಿಕ್ಕಂಗೆ ಹೋಪಗ ಎದುರೆ ಸಿಕ್ಕಿದೋರ ಎಲ್ಲೋರನ್ನೂ ಕೊಂದುಗೊಂಡೇ ಹೋದ್ಸಡ.
ಇದು ಹೀಂಗೆ – ಹೇದು ಗೊಂತಪ್ಪದೇ – ಕಮಾಂಡೋ ಹೇಳ್ತ ಕಪ್ಪುಪುಚ್ಚೆಗೊ ಸೀತ ಹೋಗಿ ಒಂದೊಂದೇ ಉಗ್ರರ ದೇವರ(ಸ.ಅ) ಹತ್ತರೆ ಕಳುಗಿದವಡ!
ಅಷ್ಟುಮಾಂತ್ರ ಅಲ್ಲ, ಬೊಂಬಾಯಿಯ ಪೋಲೀಸುಗಳ ಹತ್ತರೆ ಲಾಟಿ ಇದ್ದಲ್ಲದೋ – ಅದರ ಬೀಸಿ ಬೀಸಿ ಈ ಪುಳ್ಳರುಗಳ ಎದುರಿಸಿದವಡ!!
– ಗುಣಾಜೆಮಾಣಿ ಜೋಕು ಹೇಳಿರೆ ಅವ° ನೆಗೆಮಾಡಿದ ಮತ್ತೆಯೇ ಗೊಂತಕ್ಕಷ್ಟೆ.
ಆದರೆ,
~
ಈ ಘಟನೆಗಳಲ್ಲಿ ಒಂದು ಗುಂಪು ರೈಲುನಿಲ್ದಾಣಕ್ಕೆ ಬಂದಿತ್ತು ಹೇಳಿದೆ ಅಲ್ಲದೋ – ಅದರ ಕತೆಯೇ ಬಾರೀ ಆಸಕ್ತಿದಾಯಕ.
ಅಲ್ಲಿಂದ ಹೆರಟು ಅವು ವಿಧಾನಸೌಧಕ್ಕೆ ಹೋಪಲೆ ಹೆರಟವಡ. ಅಡ್ಡಕಟ್ಟಿದ ಪೋಲೀಸರ ಕೊಂದು, ಪೋಲೀಸುವೇನಿನ ಎಳಕ್ಕೊಂಡೇ ಹೆರಟದಡ.
ಎಡಕ್ಕಿಲಿ ಆ ವೇನು ಟಯರುಪಂಚರು ಆತು ಹೇಳಿಗೊಂಡು ಕೈಗೆ ಸಿಕ್ಕಿದ ಮತ್ತೊಂದು ಕಾರಿನ ಕದ್ದುಗೊಂಡು ಹೋದವಡ.
ಎಷ್ಟೇ ಆದರೂ – ವಿಧಾನಸೌದಕ್ಕೆ ಹೋಗದ್ದ ಹಾಂಗೆ ಸರ್ಕಾರ ನೋಡಿಗೊಳ್ಳದೋ; ಹಾಂಗೆ ಅಲ್ಲಿಯೂ ಮಾರ್ಗಕ್ಕೆ ಕಬ್ಬಿಣದ ಬೇಲಿ ಅಡ್ಡಹಾಕಿ ತಡದವಡ ಪೋಲೀಸರು.
ಕೈಲಿ ಲಾಟಿ ಇದ್ದಲ್ಲದೋ – ಅದುವೇ ಪೋಲೀಸರ ಧೈರ್ಯ!

ಒಂದು ಪೋಲೀಸಿನ ಕೈಲಿ ಬೆಡಿ ಇತ್ತಡ, ಅದು ಒಂದು ಹೊಟ್ಟುಸಿದ್ದರ್ಲಿ ಆ ಎರಡು ಉಗ್ರರ ಪೈಕಿ ಒಂದು ಸತ್ತತ್ತು.
ಮತ್ತೊಂದು ಸತ್ತಿತ್ತಿಲ್ಲೆ, ಸತ್ತ ಹಾಂಗೆ ಬಿದ್ದತ್ತು.
ಅದುದೇ ಸತ್ತತ್ತು ಹೇದು ಗ್ರೇಶಿ ಪೋಲೀಸು ಹತ್ತರೆ ಹೋಪದ್ದೇ – ಎದ್ದು ಕೂದು ಬಡಬಡನೆ ಬೆಡಿ ಬಡುದತ್ತಡ.
ಪೋಲೀಸು ಆ ಮನುಶ್ಶನ ಗಟ್ಟಿ ಹಿಡ್ಕೊಂಡದರ್ಲಿ ಬೇರೆ ಪೋಲೀಸುಗ ಎರೆಪ್ಪಿನ ಎರೆಷ್ಟು ಮಾಡಿದವಡ.
ಅದರ ಬೆಡಿಯ ಗುಂಡು ತಿಂದ ಸುರುವಾಣ ಪೋಲೀಸು ಅಲ್ಲಿಯೇ ತೀರಿಗೊಂಡಿದು, ಪಾಪ.
ಅಂತೂ – ಬಾರತದ ಒಳ ಬಂದ – ಎಷ್ಟು? ಇಪ್ಪತ್ತೋ, ಇಪ್ಪತ್ತೈದೋ, ಹನ್ನೆರಡೋ – ಉಮ್ಮ, ಅಷ್ಟೂ ಉಗ್ರರ ಪೈಕಿ ಜೀವಂತ ಸಿಕ್ಕಿದ್ದು ಒಂದೇ ಒಂದು!
~
ಅದುವೇ ಕಸಬ್
~
ಹೆಸರೇ ಹೇಳ್ತ ಹಾಂಗೆ, ಅದೊಂದು ಕಸವು.
ಸಿಕ್ಕಿದ ಆ ಮಾಪುಳೆಯ ಹಿಡುದು ಅಂದೇ ಗಲ್ಲಿಂಗೆ ಹಾಕಿದ್ದರೆ ಬೊಂಬಾಯಿ ಘಟನೆಲಿ ಬೇನೆ ತಿಂದ ಎಲ್ಲೋರಿಂಗೂ ನೆಮ್ಮದಿ ಆವುತಿತು. ಆದರೆ ಹಾಂಗಾತೋ? ಇಲ್ಲೆ.
ಅದು ಇನ್ನೂ ಜೀವಂತ ಇದ್ದು. ಇಂದಿಂಗೆ ಮೂರೊರಿಶ!
ಕಸಬ್ಬು ಮಾಡಿದ್ದು ಸರಿಯೋ – ತಪ್ಪೋ ಹೇಳ್ತ ವಿಮರ್ಶೆ ಇನ್ನೂ ಮುಗುದ್ದಿಲ್ಲೇಡ.
~
ಸುರುವಿಂಗೆ ಅದು ಪಾಕಿಸ್ತಾನದ್ದೇ ಅಪ್ಪೋ-ಅಲ್ಲದೋ ಹೇದು ಸಂಶಯ ಬಂತಡ ಸರ್ಕಾರಕ್ಕೆ.
ಮತ್ತೆ ಅದುವೇ ದಮ್ಮಯ ಹಾಕಿ ಒಪ್ಪಿಗೊಂಡರೂ ಧೈರ್ಯ ಬಯಿಂದಿಲ್ಲೆ! ಮತ್ತೆ ಪಾಕಿಸ್ತಾನವೇ ಒಪ್ಪಿಗೊಂಡ ಮೇಲೆ ನಂಬಿಕೆ ಬಂದದು ನವಗೆ!
ಬೊಂಬಾಯಿ ಪೋಲೀಸರು ಅಂತೂ – ಒಂದಲ್ಲ-ಎರಡಲ್ಲ ಹನ್ನೊಂದು ಸಾವಿರ ಪುಟದ ಕೇಸು ಬರದವಡ ಅದರ ಮೇಗೆ.
ಆದರೆ, ಆ ಕೇಸು ಇಂಗ್ಳೀಶಿಲ್ಲಿ ಇದ್ದು, ಎನಗೆ ಉರ್ದು ಬಾಶೆಲಿ ಬರದುಕೊಡಿ ಹೇಳಿತ್ತಡ ಈ ಕಸವು.
ಹಾಂಗೆ, ಈಗ ನಾಕು ಮೊಯಿಲಾರಿಯ ದಿನಿಗೆಳಿ ತರ್ಜುಮೆ ಮಾಡುಸಿದವೋ ಏನೋ, ಉಮ್ಮಪ್ಪ! – ಹೇಳಿದ° ಗುಣಾಜೆಮಾಣಿ.
~

ಅದೆಲ್ಲ ಏನೇ ಇರಳಿ, ಅವಂಗೆ ತುಂಬ ಕೋಪ ಬಂದ ಸಂಗತಿ ಎಂತ್ಸರ?
ಆ ಕಸಬ್ಬುವ ಅಂತೇ ಗೂಡಿಲಿ ಮಡಗಿರೆ ಆತೋ? ಇಲ್ಲೆ.
ವಿಚಾರಣೆ ಮುಗುದು ಗಲ್ಲು ಶಿಕ್ಷೆ ಅಪ್ಪನ್ನಾರವೂ ಅದು ಬದ್ಕಿರೇಕು! ಆರೋಗ್ಯವಾಗಿ ಬದ್ಕಿರೇಕು. ನೆಮ್ಮದಿಲಿ ಬದ್ಕಿರೇಕು.
ಅದಕ್ಕೆ ಬೇಕಾದ್ದು ಪೂರಾ, ಕೇಳಿದ್ದರ ಪೂರಾ ಕೊಟ್ಟು ಹೊಟ್ಟೆತುಂಬುಸುತ್ತಾ ಇದ್ದಡ ಭಾರತ ಸರಕಾರ.
ಮೊನ್ನೆ ಒಂದರಿ ಕೋಳಿತುಂಡು ಸಾಕಾವುತ್ತಿಲ್ಲೆ – ಹೇದು ಕಾಗತ ಬರದ್ದಡ ನಮ್ಮ ಪ್ರಧಾನಿಗೆ!!
ಹಾಂಗೆ ಈಗ ಅದಕ್ಕೆ ಕಬಾಬು (ಕೋಳಿತುಂಡಿನ ಹೊರುದು ಎಂತದೋ ಮಾಡ್ತ ಬಗೆ, ಎಂಗೊ ಉಂಡುಗೊಂಡು ಇದ್ದ ಕಾರಣ ಇದೆಂತರ ಹೇದು ಜಾಸ್ತಿ ಕೇಳಿದ್ದಿಲ್ಲೆ) ಕೊಡುದಡ ದಿನನಿತ್ಯ!
ಕಳ್ಳಂಗೆ ಹಾಂಗೆಲ್ಲ ಮಾಡಿ ಹೊಟ್ಟೆತುಂಬುಸುತ್ತದು ಈಗ ಇಡೀ ಭಾರತಲ್ಲಿ ದೊಡ್ಡ ಸಂಗತಿ ಆಯಿದಾಡ.

ಲೆಕ್ಕಪತ್ರ ಪೂರ್ತಿ ತೆಗದು ನೋಡಿರೆ ಸುಬಗಣ್ಣಂಗೇ ಬೇಲೆನ್ಸು ತಪ್ಪುಗು – ಅಷ್ಟು ಕೋಟಿ ಕರ್ಚು ಮಾಡಿದ್ದವಡ ನಮ್ಮವು!!
~

ಶಾಂತಿ ಬೇಕು, ಶಾಂತಿಪ್ರಿಯ ದೇಶವೂ ಬೇಕು. ಆದರೆ ಅದಕ್ಕೂ ಒಂದು ಮಿತಿ ಇಲ್ಲೆಯೋ?
ನಾಗರಹಾವು ಕಚ್ಚ, ಕಚ್ಚುದು ಕಮ್ಮಿಯೇ ಆಗಿಕ್ಕು, ಆದರೆ ಅದಕ್ಕೂ ವಿಷ ಇದ್ದು.
ಅಗತ್ಯ ಬಂದರೆ ಕಚ್ಚೇಕು, ಕಚ್ಚುತ್ತು. ಅಪ್ಪೋಲ್ಲದೋ!
ಹಾಂಗೆ, ಇಂತಾ ಅಗತ್ಯ ಸಂದರ್ಭಲ್ಲಿಯೂ ಕಚ್ಚದ್ದೆ ಕೂದರೆ ನಮ್ಮ ದೇಶದ ಮೇಗಾಣ ಅಭಿಪ್ರಾಯ ಎಂತಕ್ಕು?
ನಾಗರಹಾವು ಹೋಗಿ ಕೇರೆ ಹೇಳಿ ಅಕ್ಕು – ಹೇಳಿದ° ಗುಣಾಜೆಮಾಣಿ!!
ಇರುಳಾಣ ಊಟ ಆದರೂ ಗುಣಾಜೆಮಾಣಿ ಪಿಸುರಿಲಿ ಮಧ್ಯಾನ್ನಂದ ಜಾಸ್ತಿಯೇ ಅಂತುಗೊಂಡಿದ. ಪಿಸುರಿಲಿದ್ದ ಕಾರಣ ಎಲ್ಲೋರ ಒಟ್ಟಿಂಗೇ ಉಂಡಾತು.
ಎದ್ದು ಕೈ ತೊಳವನ್ನಾರವೂ ಇದೇ ಶುದ್ದಿ!
~

ಗುಣಾಜೆಮಾಣಿ ಹೇಳಿದ ಕಾರಣ ರಜ ರಂಗು ಇಪ್ಪಲೂ ಸಾಕು, ನವಗರಡಿಯ.
ಆದರೆ ಅವ° ಹೇಳಿದ್ದರ್ಲಿ ಸತ್ಯವೂ ಇದ್ದು – ಹೇಳ್ತರ ನಾವು ಒಪ್ಪೇಕು.

ಕಸಬ್ಬುವ ಹಾಂಗಿರ್ತ ಕಸವು ನಮ್ಮ ದೇಶಲ್ಲಿ ಬೇಕೋ?
ಅಮ್ಮಂಗೇ ಬಡುದ ಆ ಕೈಯ ಮಡಗುಲಕ್ಕೋ?
ಇಲ್ಯಾಣ ಅಶನ ತಿಂದು ಇಲ್ಲಿಗೇ ದ್ರೋಹ ಬಗದ ಆ ಜೀವಿ ನಮ್ಮ ನೆಲಕ್ಕಲ್ಲಿ ಬದ್ಕಲೆ ಹಕ್ಕಿದ್ದೋ?
ನಮ್ಮ ಕಾಲ ಕಸವಿಂದ ಕಡೆ ಆ ಕಸವು ಕಸಬ್ಬು ಅದರ ಮಡಿಕ್ಕೊಂಡು ಇನ್ನುದೇ ಪೂಜೆ ಮಾಡ್ತ ನಮ್ಮದೇ ಧ್ಯೇಯಕ್ಕೆ “ಶಾಂತಿಪ್ರಿಯ” ಹೇಳೇಕೋ, “ಅಶಕ್ತಿ” ಹೇಳೇಕೋ? – ಹೇಳಿ ನವಗೇ ಒಂದೊಂದರಿ ಸಂಶಯ ಬತ್ತು!

ಅದರ ಊಟ-ತಿಂಡಿ-ಆರೋಗ್ಯ ಹೇದು ಕರ್ಚು ಮಾಡ್ತ ಪೈಸೆಲಿ ಬೇರೆಂತಾರು ಒಳ್ಳೆಕೆಲಸ ಮಾಡ್ಳಾಗದೋ – ಹೇದು ಅವನ ಪ್ರಶ್ನೆ.
ಕೇಳುದಾರತ್ರೆ? ಉಮ್ಮಪ್ಪ!

ಒಂದೊಪ್ಪ: ಕಸವು ಕಸಬ್ಬುವ ಎಷ್ಟು ಸಮಯ ಮಡಿಕ್ಕೊಂಡರೂ, ಕೆಸವಿನ ಕಟ್ಟಿಗೊಂಡ ಹಾಂಗೆ ಅಕ್ಕಷ್ಟೆ. ಎಂತ ಹೇಳ್ತಿ?

ಸೂ: ಇದು ದೇವರ(ಸ.ಅ) ಆಣೆಗೂ ಇದು ಮಾಪಳೆ ಧರ್ಮದ ಬಗ್ಗೆ ಅಲ್ಲ, ಉಗ್ರವಾದಿಗಳ ಮಾಂತ್ರ ಕುರಿತು! ಅಷ್ಟೇ.

ಕಸವಿಂದ ಕಡೆ ಕಸಬುಗೆ ಕಬಾಬು ಕೊಟ್ಟು ಸಾಂಕುತ್ತವು!, 5.0 out of 10 based on 5 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. drmahesh
  ಡಾ. ಮಹೇಶ್ ಪಿ. ಯಸ್.

  ಎಷ್ಟು ಬೋಂಬು ಹಾಕಿರೂ ನಮ್ಮವಕ್ಕೆ ಎಚ್ಚರಿಕೆ ಆಗ. ನಮ್ಮ ರಾಜಕಾರಣಿಗಳ ಮನಗೇ (ಸಂಸತ್ತಿಂಗೆ) ದಾಳಿ ಮಾಡಿದವಕ್ಕೆ ಸಕಾಯ ಮಾಡಿದ್ದರ ಗಲ್ಲಿಂಗೆ ಹಾಕೆಕು ಹೇಳಿ ಸುಪ್ರೀಮ್ ಕೋರ್ಟು ಹೇಳಿರೂ ಮೀನ-ಮೇಷ ಎಣುಸುತ್ತವನೆ…. ಎಂತ ಮಾಡುವದು?

  [Reply]

  VA:F [1.9.22_1171]
  Rating: 0 (from 0 votes)
 2. vaishali avinash

  ಬೈಲಿಂಗೆ ನಮಸ್ಕಾರ. ಸುಮಾರು ತಿಂಗಳುಗಳೇ ಆತು ಆನು ಬೈಲಿಂಗೆ ಬಾರದ್ದೆ. ಎಲ್ಲರೂ ಕ್ಷಮಿಸಿ. ಇನ್ನು ವಾರಕ್ಕೆ ಒಂದರಿ ಆದರೂ ಬತ್ತೆ.
  ಒಪ್ಪಣ್ಣ… ಇಂದರಣ ಭಾರತದ ದುರವಸ್ಥೆ ಅಲ್ಲದಾ ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಲೇಖನದ ತಲೆಬರಹಂದ ಸುರುಆಗಿ ಕಡೇಣ ಒಪ್ಪದ ವರಗೆ ಓದುಸೆಂಡು ಹೋತು. ಗುಣಾಜೆ ಮಾಣಿಗೆ ಬಂದ ಹಾಂಗೆ ಪಿಸುರುದೆ ಬಂತು. ಎಲ್ಲ ಕಡೆಲಿಯುದೆ ರಾಜಕೀಯವೇ. ಓಟಿಂಗೆ ಬೇಕಾಗಿ ನ್ಯಾಯ, ನೀತಿಗಳ ಎಲ್ಲ ಮರೆತ್ತವಾನೆ ಇವು. ಒಪ್ಪಣ್ಣ ಉಂಡೊಂಡಿಪ್ಪಗ ಕೋಳಿ ಕಾಲಿನ ಪೋಡಿ ಬಗ್ಗೆ ಹೆಚ್ಚು ವಿಚಾರುಸದ್ದೆ ಇದ್ದದು ಇನ್ನೂ ಲಾಯಕಾದ್ದದು. ಗಂಭೀರ ವಿಷಯದ ಎಡೆಲಿ ತಮಾಷೆ ಬಂದಪ್ಪಗ ಕೊಶಿ ಅಪ್ಪದು ಇಪ್ಪದೇ.

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಪ್ಪಣ್ಣಾ,
  ಬರದ್ದು ಲಾಯಿಕ ಆಯಿದು.
  ಗುಣಾಜೆ ಮಾಣಿಗೆ ಮಾತ್ರ ಅಲ್ಲ ಆರಿಂಗಾದರೂ, ದೇಶದ ಮೇಗೆ ರೆಜ ಆದರೂ ಅಭಿಮಾನ ಇಪ್ಪವಂಗೆ ಉರಿಯದ್ದೆ ಇರ. ಇದಕ್ಕೆ ಅಪವಾದ ಹೇಳಿರೆ ಜೆಡ್ಡುಕಟ್ಟಿದ ರಾಜಕಾರಿಣಿಗೊ.
  ದೇಶದ ಒಡದು ಆಳುವದು ಹೇಳಿ ಬ್ರಿಟಿಶರ ನಾವು ದೂರಿತ್ತು. ಇವು ಮಾಡುವದು ಅದರಿಂದ ಕಡೆ ಅಲ್ಲದಾ?
  ಮಾಪ್ಳೆಗಳ ಒಲುಸಲೆ ಬೇಕಾಗಿ ಎಂತ ಮಾಡ್ಲೂ ಹೇಸದ್ದ ಜೆನಂಗೊ. ಹೆತ್ತಬ್ಬೆಯ ಮೇಲೆ ಅಪಚಾರ ಆದರೂ ಅಕ್ಕು, ಮಾಪ್ಳೆಗಳ ಕೂದಲು ಹಂದ್ಲಾಗ ಹೇಳ್ತ ಈ ರಾಜಕಾರಿಣಿಗೊಕ್ಕೆ ಸರಿಯಾದ ಪಾಠ ಕಲ್ಸೆಕ್ಕಾದ್ದು ನಮ್ಮೆಲ್ಲರ ಕರ್ತವ್ಯ ಕೂಡಾ.
  ಹಿಂದುಗೊಕ್ಕೆ ವಿರುದ್ಧವಾದ ಕಾನೂನನ್ನೇ ತಪ್ಪಲೆ ಪ್ರಯತ್ನ ಮಾಡುವ ಇವರಿಂದ ನಾವು ಎಂತ ನಿರೀಕ್ಶೆ ಮಾಡ್ಲೆ ಅಕ್ಕು?
  ನಾವು ಕಟ್ತಿದ ತೆರಿಗೆಲಿ ಕೋಟಿಗಟ್ಟಲೆ ಖರ್ಚು ಮಾಡಿ ಕಸಬ್, ಅಬ್ಜಲ್ ಹಾಂಗಿಪ್ಪವರ ಸಾಂಕುತ್ತವಲ್ಲದಾ? ಇದಕ್ಕಿಂತ ಘೋರ ದೇಶ ದ್ರೋಹ ಇನ್ನೊಂದು ಇದ್ದಾ?

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಇಷ್ಟಕ್ಕೂ ದೇಶಕ್ಕೆ ಬೋ೦ಬು ಮಡುಗಿದ ಈ ಉಗ್ರವಾದಿಗಳ ಇನ್ನೂ ಸಾ೦ಕುತ್ತಾ ಇಪ್ಪದು ಆರು? ದೇಶಕ್ಕೆ ಪೀಶಕತ್ತಿ ಕುತ್ತುವ ಬೆರಳೆಣಿಕೆಯ ರಾಜಕಾರಣಿಗೊ.
  ಪಾರ್ಲಿಮೆ೦ಟಿ೦ಗೇ ಧಾಳಿ ಮಾಡಿದ “ಗುರು”ವೂ ಸುಖಲ್ಲಿದ್ದು,ಈ ಕಸವೂ ತಿ೦ದು೦ಡು “ಅಮ್ಚಿ ಮಾಣಸ್” ಆಯಿದು. ಅವರ ಹೆಸರು ಹೇಳಿ ಕೆಲವು ಜೆನ ಕೋಟಿ ಬಾಚಿದವು, ಇವಕ್ಕೆಲ್ಲ ಪೆಟ್ಟಿನ ಹೆದರಿಕೆ ಇಲ್ಲದ್ದೇ ಮೋಸ ಆತು,ಹು.

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಧರ್ಮಕ್ಕಾಗಿ ಹೊರಾಡುಲೇ ಸಿದ್ದರಿಲ್ಲದ್ದ ಹೇಡಿಗ… ಹೇಳಿ ಹೇಳುವನ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಶಾಂತತ್ತೆಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಸುವರ್ಣಿನೀ ಕೊಣಲೆಅನಿತಾ ನರೇಶ್, ಮಂಚಿಗೋಪಾಲಣ್ಣದೀಪಿಕಾತೆಕ್ಕುಂಜ ಕುಮಾರ ಮಾವ°ವಿಜಯತ್ತೆಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿದೊಡ್ಡಭಾವವಾಣಿ ಚಿಕ್ಕಮ್ಮವೇಣಿಯಕ್ಕ°ದೇವಸ್ಯ ಮಾಣಿಸಂಪಾದಕ°ಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಮಾಲಕ್ಕ°ಸುಭಗಡಾಗುಟ್ರಕ್ಕ°ಪುತ್ತೂರುಬಾವಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ