ಭಾರತಾಂಬೆಯ ಭೂಶಿರ – ತಲೆಬೇನೆಯ ಕಾಶ್ಮೀರ..

ಮೊನ್ನೆ ಶೆನಿವಾರ ತಲೆಬೇನೆ.
ಬೇನೇ ಹೇದರೆ ಹೇಂಗಿರ್ಸು – ಕಣ್ಣಕರೆಯ ಒಂದು ಹೊಡೆಂದ ಸಬ್ಬಲಿಲಿ ಮೀಂಟಿದ ಹಾಂಗಿರ್ಸ ಭಯಾನಕ ಬೇನೆ!
ಕೆಲವು ಸರ್ತಿ ತಲೆಲಿಪ್ಪ ನರವ ಆರೋ ಬಳ್ಳಿಲಿ ಕಟ್ಟಿ ಹಾಕಿದರೆ ಅಪ್ಪ ಬೇನೆ!
ಕಾಂಬುಅಜ್ಜಿ ಇದರ ಒರಿಕ್ಕೆನ್ನಿ ಹೇಳುಗು; ಸುವರ್ಣಿನಿ ಅಕ್ಕ° ಅದರ ಮೈಗ್ರೇನು ಹೇಳುಗು!
ಹೆಸರು ಎಂತದೇ ಆದರೂ – ಬೇನೆ ಬೇನೆಯೇ!
ಬೇನೆಯ ಅನುಭವಿಸಿದವಂಗೆ ಹಗಲು ಇರುಳು ಅರಡಿಯ. ದಿನ ಹುಟ್ಟಿತ್ತೋ ಮುಗುದತ್ತೋ ಅರಡಿಯ.
ಅರಡಿವದು ಎಂತರ? ಬೇನೆ ಮಾಂತ್ರ!
ಒಂದರಿ ತಲೆಬೇನೆ ಮುಗುದರೆ ಸಾಕು – ಹೇಳ್ತ ಬಚ್ಚಲು ಹಿಡುದು ಹೋಗಿದ್ದತ್ತು. ಮತ್ತೆ ಬಬ್ಬುಮಾವನ ಕಂಡು, ಮದ್ದು ತೆಕ್ಕೊಂಡು ಬಂದು ಒಂದು ವಿಶ್ರಾಂತಿ ಆಗಿ ಒರಗಿ ಎದ್ದಪ್ಪಗಳೇ ಸರಿ ಆದ್ದು!

ಹಾಂಗೇ ಕೂದು ಮದ್ದಿನ ಅಮಲು ಬಿರುದು, ತಲೆ ಹಗೂರ ಆಗಿ ಉಲ್ಲಾಸ ಅಪ್ಪಗ  ಹೊತ್ತೋಪಗ ಆಚಕರೆ ತರವಾಡು ಮನೆಗೆ ಹೋದೆ.
ಅಡಕ್ಕಗೆ ಕ್ರಯ ಹೇಂಗಿದ್ದು – ಹೇದು ಪೇಪರಿಲಿ ನೋಡಿದಾಂಗೂ ಆತು; ಪಾತಿಅತ್ತೆ ಕೊಡ್ತ ಕಡ್ಪಚಾಯ ಕುಡುದ ಹಾಂಗೂ ಆತು – ಹೇದು.

~

ತರವಾಡು ಮನೆ ಶಾಂಬಾವಂಗೆ ಕೊಡೆಯಾಲಲ್ಲಿ ಒಯಿವಾಟು ಇರ್ಸು ನಿಂಗೊಗೆ ಅರಡಿಗು.
ಮೊನ್ನೆ ಶಾಂಬಾವ° ಶೆನಿವಾರದ ಕಾರಣ ಮನೆಗೆ ಬೇಗ ಬಂದ್ಸು, ಹೊತ್ತೋಪಗಳೇ ಮನೆಲಿ ಇದ್ದಿದ್ದ°. ನೆರೆಕರೆಲೇ ಇದ್ದರೂ ಅಪುರೂಪ ಆಗಿಹೋಯಿದ° ಈ ಶಾಂಬಾವ° ಹೇದರೆ!
ನವಗೆ ಬಿಡಿ, ರಂಗಮಾವಂಗೇ ಅಪುರೂಪ ಆಯಿದನಾಡ! ಇರಳಿ.

ಎಷ್ಟೇ ಅಪುರೂಪ ಆದರೂ, ಸಿಕ್ಕಿ ಅಪ್ಪಗ ಒಂದು ಗಳಿಗೆ ಮಾತಾಡದ್ದೆ ಆತಿಲ್ಲೆ. ಮೊನ್ನೆಯೂ ಹಾಂಗೇ.

~

ಶಾಂಬಾವ° ಮನೆಲೇ ಇದ್ದರೆ ಟೀವಿ ನೋಡುಗು. ಆದರೆ, ವಿನು ನೋಡ್ತ ಹಾಂಗೆ ಕಾರ್ಟೂನು ಅಲ್ಲ, ವಿದ್ಯಕ್ಕ° ನೋಡ್ತ ಹಾಂಗೆ ಅಡಿಗೆ ಅಲ್ಲ. ಶಾಂಬಾವ° ನೋಡುದು ಒಂದೋ ಶೇರಿನ ಕ್ರಯ, ಅಲ್ಲದ್ದರೆ ವಾರ್ತೆ, ಅದೂ ಅಲ್ಲದ್ದರೆ ಯೇವದಾರು ಆಟಂಗೊ.
ಈಗ ತೊಳಿತ್ತ ಪುಟ್ಟುಬೋಲಿನ ನೆಡುಇರುಳು ಎದ್ದು ಕೂದು ನೋಡ್ತ ಮರಿಯಾದಿ ಇದ್ದಾಡ, ಪಾತಿಅತ್ತೆ ಪರಂಚುಗು. ಇರಳಿ.
ಈಗ ನೋಡ್ತಾ ಇಪ್ಪದು – ವಾರ್ತೆಯನ್ನೇ.
ಯೇವದೋ ಇಂಗ್ಳೀಶೋ, ಹಿಂದಿಯೋ ವಾರ್ತೆ ಅದು. ಮೋದಿಯ ಬಗ್ಗೆ ಹೇಳಿಗೊಂಡಿದ್ದದು ಕೇಳಿತ್ತು.
ಯೇಯ್, ಅದೆಂತ ವಿಷಯ ಅಂಬಗ – ಕೇಳಿದೆ ಶಾಂಭಾವನ ಹತ್ತರೆ.

ಈಗ ಯೇವ ವಾರ್ತೆ ನೋಡಿರೂ ಮೋದಿಯೇ ಕಾಂಬದಾಡ.
ಮೋದಿ ಆಡಳ್ತೆ ಸುರು ಮಾಡಿದ ಮತ್ತೆ ಅಂದಿಂದ ತುಕ್ಕುಹಿಡುದ ಯೋಜನೆಗೊ ಎಲ್ಲ ಬೇಗಬೇಗಲ್ಲಿ ನೆಡೆತ್ತಾ ಇದ್ದಾಡ. ಹಾಂಗೆ ಆದ ಕೆಲವು ಕಾರ್ಯಲ್ಲಿ ಇಂದ್ರಾಣದ್ದೂ ಒಂದು – ಹೇದು ಅಭಿಮಾನಲ್ಲಿ ಹೇಯಿದ ಶಾಂಬಾವ°.
ಅದೆಂತರ? ಅದುವೇ – ವೈಷ್ಣೋದೇವಿ ಹತ್ತರಂಗೆ “ಶ್ರೀಶಕ್ತಿಎಕ್ಸ್-ಪ್ರೆಸ್” ಹೇಳ್ತ ರೈಲಿನ ಉದ್ಘಾಟನೆ!

~

ವೈಷ್ಣೋ ದೇವಿ ಅರಡಿಗನ್ನೇ? ಜಮ್ಮು ಕಾಶ್ಮೀರದ ಎತ್ತರದ ಪರ್ವತಶ್ರೇಣಿಲಿ ಕೂದೊಂಡು ತನ್ನ ನಂಬಿದ ಭಕ್ತರಿಂಗೆ ಬೇಕಾದ ಅಭೀಷ್ಟ ಕೊಡುವ ಅಬ್ಬೆ.
ಹಲವೊರಿಶ ಮದಲು ಓಜುಪೇಯಿ ಅಜ್ಜ° ಇಪ್ಪಾಗ ಆರಂಭ ಮಾಡಿದ ಕಾರ್ಯ ಮತ್ತೆ ಹತ್ತು ಒರಿಶಲ್ಲಿ ಕುಂಟಿಗೊಂಡೇ ಸಾಗಿತ್ತಾಡ. ಮೊನ್ನೆ ಮೋದಿ ಬಂದ ಮತ್ತೆ ಆ ಹಳೆಫೈಲುಗೊ ಎಲ್ಲ ಒಂದರಿ ಕುಡುಗಿ, ಅಡೀಲೆ ಬಾಕಿ ಆದ ಈ ಸಂಗತಿಯ ಬೇಗಲ್ಲಿ ಮುಗುಶಿ, ಉದ್ಘಾಟನೆ ಮಾಡಿಬಿಟ್ಟತ್ತಾಡ!
ಇಷ್ಟನ್ನಾರ ಜಮ್ಮುನಗರಂದ ವೈಷ್ಣೋದೇವಿಯ ಬುಡಒರೆಂಗೆ ಬಸ್ಸಿಲಿ ಹೋಯೇಕಾಗಿದ್ದಿದ್ದದಾಡ, ಇನ್ನು ಆರಾಮಲ್ಲಿ ರೈಲಿಲಿ ಹೋಪಲೆಡಿತ್ತಾಡ – ಹೇದು ಕೊಶೀಲಿ ಹೇಯಿದ°.

ಎಷ್ಟೋ ರೈಲುಗೊ ಉದ್ಘಾಟನೆ ಆವುತ್ತು, ಹೋವುತ್ತು – ಹಾಂಗೇ ಇದೂ ಒಂದು.
ಇದರ್ಲಿ ವಿಶೇಷ ಎಂತ ಇದ್ದು – ಹೇದು ಗ್ರೇಶೆಡ ಒಪ್ಪಣ್ಣಾ, ಇದು ಭಾರತಕ್ಕೆ, ಭಾರತದ ಅಸ್ತಿತ್ವಕ್ಕೆ ಬಹುಮುಖ್ಯಪಟ್ಟ ಒಂದು ಸಂಗತಿ – ಹೇಯಿದ°. ಅದೆಂತರ?

~
ಭಾರತಮಾತೆಗೆ ಬ್ರಿಟಿಷರ ಆಳ್ವಿಕೆಂದ ಸ್ವಾತಂತ್ರ ಸಿಕ್ಕಿದ ಮತ್ತೆ ಸುರುವಾದ ಒಂದು ತಲೆಬೇನೆ, ಇಂದಿನ ಒರೆಂಗೂ ಮುಗುದ್ದಿಲ್ಲೆ ಇದಾ. ಅದೇ – ಕಾಶ್ಮೀರದ್ದು!
ಎಲ್ಲ ರಾಜ್ಯಂಗಳ ಸೇರ್ಸಿ ಒಂದು ದೇಶ ಮಾಡೇಕು ಹೇಳ್ತ ಸಂದರ್ಭಲ್ಲಿ ಈ ರಾಜ್ಯದ ರಾಜನ ನಿರ್ಧಾರ ರಜಾ ತಡವಾತಡ. ಅಷ್ಟು ಸಮೆಯಲ್ಲಿ ಪಾಕಿಸ್ತಾನದ ಕಂಡುಗೊ ಬಂದು ಅದಾಗಲೇ ಸುಮಾರು ತಿಂದುಹಾಕಿದವು. ಪಾಕಿಸ್ಥಾನದ ಸೈನ್ಯ ನುಗ್ಗುತ್ತು ಹೇದು ಗೊಂತಾದ ಮತ್ತೆ ರಾಜಂಗೆ ಬೆಶಿಮುಟ್ಟಿತ್ತು, ಸೀತ ಓಡಿಗೊಂಡು ಬಂದು “ರಾಜ್ಯವ ಒಳುಶೀ, ಭಾರತದ ಒಟ್ಟಿಂಗೆ ಸೇರ್ತೇ” ಹೇದು ಒರೆಂಜಿತ್ತಾಡ.
ಹಾಂಗೆ ಮತ್ತೆ ಭಾರತದ ಸೈನ್ಯ ಅಲ್ಲಿಗೆ ಹೋಗಿ, ಇಪ್ಪಷ್ಟಾರೂ ಒಳುಶಿಗೊಂಡತ್ತು.

ಹೋದ ಜಾಗೆ? ಅದು ಇಂದಿಂಗೂ ಭಾರತದ ಕೈಲಿ ಇಲ್ಲೆ. ಆದಿನ ಪಾಕಿಸ್ಥಾನದಸೈನ್ಯ ಬಂದು ನಿಂದಲ್ಲಿಯೇ ಇಂದಿನ ಗಡಿ!
ಇದರೆಡಕ್ಕಿಲಿ – ಅತ್ಲಾಗಿ ಚೀನಾಕ್ಕೆ “ಇದಾತೆಕ್ಕೊಳಿ” ಹೇದು ರಜಾ ಜಾಗೆಯ ಕೊಟ್ಟು “ಭೂದಾನಪುಣ್ಯ” ಪಡಕ್ಕೊಂಡತ್ತಡ ಪಾಕಿಸ್ಥಾನ. ಅವು ಕೊಟ್ಟದು ಯೇವ ಜಾಗೆಯ? ನಮ್ಮ ಕಾಶ್ಮೀರದ ಜಾಗೆಯ!
ಇರಳಿ.

~

ಹೆರದೇಶದ ಕ್ರೂರಿಗಳ ಆಕ್ರಮಣದ ಕತೆ ಇದಾದರೆ, ಇನ್ನು ದೇಶದ ಒಳವೇ ಇದ್ದುಗೊಂಡು ನೆತ್ತರು ಹೀರುವ ಹೇನು-ಉಣುಂಗುಗಳ ಹಾಂಗೆ ಕೆಲವು ಜೆನ ಇದ್ದವಾಡ. “ಕಾಶ್ಮೀರ ಭಾರತಕ್ಕೆ ಸೇರಿರೂ, ಕೇವಲ ಗಡಿರಕ್ಷಣೆ ಮಾಂತ್ರ; ಆಂತರಿಕ ವಿಷಯಲ್ಲಿ ಯೇವದೇ ತಲೆಹಾಕಲಾಗ” – ಹೇದು ನಿಜ ಮಾಡಿದವಾದ. ಸಂವಿಧಾನ ಬರೆತ್ತಾ ಇಪ್ಪ ಸಮೆಯಲ್ಲಿ ನೆಡದಈಸಂಗತಿಗೊ ಸಂವಿಧಾನಲ್ಲೇ ಒಂದು ವಿಶೇಷ ಒಡಂಬಡಿಕೆ ಆಗಿಹೋತು. ಆರ್ಟಿಕಲ್ ಮುನ್ನೂರಎಪ್ಪತ್ತು –ಹೇಳ್ತ ಸಂಗತಿ ಇಂದಿಂಗೂ ತಲೆಬೇನೆಯೇ ಆಗಿದ್ದು – ಹೇಳ್ತದು ಶಾಂಬಾವನ ಅಭಿಪ್ರಾಯ.

ಅದರ ಪ್ರಕಾರ, ಕಾಶ್ಮೀರಕ್ಕೆ ಅದರದ್ದೇ ಆದ ಧ್ವಜ, ಸೀಲು, ಅದರದ್ದೇ ಆದ ಸರ್ಕಾರ – ಆರು ಒರಿಶದ್ದು. ಅದರದ್ದೇ ಆದ ಸ್ವಾಯತ್ತೆಗೊ, ಅದರದ್ದೇ ಆದ ತೆರಿಗೆ ಪದ್ಧತಿ, ಸಂವಿಧಾನ – ಎಲ್ಲವುದೇ. ಭಾರತಮಾತೆಯ ಅಂಗವೇ ಆದರೂ, ಅದಕ್ಕೆ ಒಂದು ಬೇರೆಯೇ ವ್ಯವಸ್ಥೆ.
ಇನ್ನೂ ಆಘಾತಕಾರಿ ಎಂತರ ಹೇದರೆ, ಪೌರತ್ವದ ಬಗ್ಗೆ!
ಅಲ್ಯಾಣ ಕೂಸುಗೊ ಭಾರತಾಂಬೆಯ ಬೇರೆ ರಾಜ್ಯದೋರ ಮದುವೆ ಆದರೆ ಅವು ಮತ್ತೆ ಕಾಶ್ಮೀರದ ಪ್ರಜೆ ಅಲ್ಲ, ಆದರೆ ಅಲ್ಯಾಣ ಕೂಸುಗೊ ಒಂದು ಪಾಕಿಸ್ಥಾನಿಯ ಮದುವೆ ಆದರೆಆಪಾಕಿಸ್ಥಾನಿಯೂ ಕಾಶ್ಮೀರದ ಪ್ರಜೆ!
ಚೆಲಾ!!
ಕ್ರಮ ಮಾಡ್ತರೆ ಒಂದೇ ನಮುನೆ ಇರೆಕ್ಕು. ಇದು ಒಂದೊಂದು ಹೊಡೆಂಗೆ ಒಂದೊಂದು ನಮುನೆ ಹೇದು ಮಾಡಿರೆ ಹೇಂಗಕ್ಕು!? ಅಲ್ದೋ?
ಭಾರತಂದ ಕ್ರಮೇಣವಾಗಿ ಪೀಂಕುಸಿ ಪಾಕಿಸ್ಥಾನಕ್ಕೆ ದಾಂಟುಸುಲೆ ಇದ್ದಿದ್ದ ಹುನ್ನಾರಂಗೊ ಆಗಿದ್ದತ್ತು ಇದು!
~

ಇದರ ಹೇಂಗಾರು ಮಾಡಿ ತಡೇಕು.
ತಡೆಯೆಕ್ಕಾರೆ ಎಂತ ಮಾಡೇಕು?– ಭಾರತದ ಒಟ್ಟಿಂಗೆ ಸಂಪರ್ಕ ಜಾಸ್ತಿ ಮಾಡೇಕು. ಸಂವಹನ ಜಾಸ್ತಿ ಮಾಡೇಕು.
ಪರಸ್ಪರ ಸಂಪರ್ಕ ಜಾಸ್ತಿ ಆದರೇ ಅಲ್ಲದೋ, ಮನಸ್ತಾಪಂಗೊ ದೂರ ಅಪ್ಪದು.
ಹಾಂಗೆ, ಕಾಶ್ಮೀರದ ಒಳಒಳಂಗೂ ಸರಿಯಾದ ಸಂಪರ್ಕ ಆಗಿ, ಅಲ್ಲಿಗೆ ಎಲ್ಲ ಭಾರತೀಯರೂ ಹೋಗಿ, ನೆಮ್ಮದಿಲಿ ನಿಂಬ ಹಾಂಗೆ ಆದರೆ, ಆಊರುದೇ ರಜ ಅಭಿವೃದ್ಧಿ ಆವುತ್ತು. ಪ್ರವಾಸೋದ್ಯಮ, ಸಂವಹನ– ಅದರೊಟ್ಟಿಂಗೇ ಭಾರತೀಯತೆಯ ಒಲವುದೇ ಬೆಳೆತ್ತು. ಹಾಂಗಾಗಿ, ಈವೈಷ್ಣೋದೇವಿಯ ಕಾಲಬುಡಕ್ಕೆ ರೈಲು ಎತ್ತುಸಿದ್ದುದೇ ಇದೇ ನಮುನೆ ಒಂದು ದೂರಾಲೋಚನೆಯ ಮಟ್ಳು ಅಡ.

~
ಆಗಲಿ, ದೇಶ ಒಳುಶುಲೆ ಒಂದೊಂದರಿ ಧೈರ್ಯದ ನಿರ್ಧಾರಂಗೊ ಬೇಕಾವುತ್ತು.
ಜಮ್ಮುವಿನ ಹಾಂಗಿತ್ತ ನಿತ್ಯ ಭಯೋತ್ಪಾದನಾ ಊರಿಂಗೆ ಪ್ರಧಾನಿ ಹೋಗಿ, ಅಲ್ಲಿ ಒಂದು ರೈಲಿನ ಉದ್ಘಾಟನೆ ಮಾಡೇಕಾರೆ ಎಂಟೆದೆ ಬೇಕು. ಅಷ್ಟು ಮಾಂತ್ರ ಅಲ್ಲ, ಆರೈಲಿಂಗೆ “ಶ್ರೀಶಕ್ತಿ” ಹೇಳ್ತ ಹೆಸರು ಕೊಡೆಕ್ಕಾರೆ ವೈಷ್ಣೋದೇವಿಯ ಶ್ರೀಶಕ್ತಿಯೇ ಧೈರ್ಯ ಕೊಡೆಕ್ಕಷ್ಟೆ. ಇನ್ನುಆರೈಲಿನ ಇಡೀ ಭಾರತಕ್ಕೆ ವಿಸ್ತಾರ ಮಾಡ್ತವಡ .ಹಾಂಗಾಗಿ, ಬೆಂಗುಳೂರಿಂದಲೂ ವೈಷ್ಣೋದೇವಿಗೆ ಹೋಪಲೆ ಇನ್ನು ಸುಲಭ ಅಕ್ಕು- ಹೇಳ್ತದು ಶಾಂಬಾವನ ಅಭಿಪ್ರಾಯ.

~

ಭಾರತಂದ ಕ್ರಮೇಣ ದೂರ ಹೋಪ ಸಾಧ್ಯತೆ ಇಪ್ಪ ಜಮ್ಮು-ಕಾಶ್ಮೀರವ ಒಳುಶೇಕಾರೆ ಸಂವಹನ- ಸಂಪರ್ಕದ ಅಗತ್ಯ ಇದ್ದು ಹೇಳ್ತರ ಕಂಡುಗೊಂಡ ಓಜುಪೇಯಿ ಅಜ್ಜನ ಬಗ್ಗೆ ಹೆಮ್ಮೆ ಅನುಸಿತ್ತು. ಅವು ಹಾಕಿದ ಅಡಿಗಲ್ಲಿನ ಮೇಗೆ ರೈಲುಹಳಿಯ ಅಂತಿಮಗೊಳುಸಿ, ಅದರ ಉದ್ಘಾಟನೆ ಮಾಡಿ ಲೋಕಕ್ಕೆ ಕೊಟ್ಟ ಮೋದಿಯ ಬಗ್ಗೆ ಅಭಿಮಾನ ಅನುಸಿತ್ತು.

ಒಪ್ಪಣ್ಣಂಗೆ ಒಂದು ದಿನದ ತಲೆಬೇನೆಯೇ ಕಂಡಾಬಟ್ಟೆ ಬಂಙ ಆಯಿದು. ಆದರೆ, ತಲೆಭಾಗಲ್ಲಿಪ್ಪ ಕಾಶ್ಮೀರದ ಬೇನೆಯ ಕಳುದ ಅರುವತ್ತು ಒರಿಶಂದ ಹೇಂಗೆ ಸಹಿಸಿಗೊಂಡಿದ್ದೋ, ಆ ಬಾರತಾಂಬೆ!!

~

ಒಂದೊಪ್ಪ: ಭಾರತಾಂಬೆಗೆ ಕಾಶ್ಮೀರದ ತಲೆಬೇನೆ ಬೇಗಲ್ಲೇ ಕಮ್ಮಿ ಅಪ್ಪ ಹಾಂಗೆ ಆ ಶ್ರೀಶಕ್ತಿ ಅನುಗ್ರಹಿಸಲಿ.

 

ಒಪ್ಪಣ್ಣ

   

You may also like...

6 Responses

 1. ಚೆನ್ನೈ ಭಾವ° says:

  ದುರಾಲೋಚನೆ ಇಲ್ಲದ್ದೆ ದೂರಾಲೋಚನೆಂದಲೇ ಮಾಡಿದ ಈ ಕಾರ್ಯವೈಖರಿ ದೂರಾಲೋಚನೆ ಕಳಕಳಿ ಇಪ್ಪೋರಿಂದ ನಿಜಕ್ಕೂ ಶ್ಲಾಘನೀಯ. ತತ್ಕಾಲಿಕ ಲಾಭವನ್ನೇ ಓಂಗ್ಯೊಂಡು ದುರಾಲೋಚನೆ ಮಾಡ್ತೋರಿಂಗೆ ಇದು ಅಪಥ್ಯ.

  ಶ್ರೀಶಕ್ತಿಯ ಅನುಗ್ರಹಂದ ಭಾರತ ಭವ್ಯಭಾರತವಾಗಿ ಬೆಳದು ಕಂಗೊಳುಸಲಿ ಹೇಳ್ವ ಸದಾಶಯ.

 2. ತೆಕ್ಕುಂಜ ಕುಮಾರ ಮಾವ° says:

  ಒಪ್ಪ ಶುದ್ಧಿಗೆ ಒಂದೊಪ್ಪ

 3. ಶ್ರೀಕೃಷ್ಣ ಶರ್ಮ says:

  ನಮ್ಮ ತಲೆಯ ಮತ್ತೆ ಭಾರತದ ತಲೆಯ ಹಾಂಗಿಪ್ಪ ಕಾಶ್ಮೀರವ ಹೋಲಿಕೆ ಮಾಡಿದ್ದು ಲಾಯಿಕ ಆಯಿದು.
  ಕಾಶ್ಮೀರವ ಎಷ್ಟರವರೆಗೆ ನಮ್ಮ ತಲೆ ಹೇಳಿ ತಿಳ್ಕೊಳ್ತ ರಾಜಕಾರಿಣಿಗೊ ಬತ್ತವೋ ಅಲ್ಲಿಗೆ ವರೆಗೆ ಆ ತಲೆಗೆ ನೆಮ್ಮದಿ ಇಲ್ಲೆ.ಹೊಸ ಸರಕಾರ ಈ ನಿಟ್ಟಿಲ್ಲಿ ಕ್ರಿಯಾಶೀಲರಾಗಲಿ ಹೇಳುವದೆ ನಮ್ಮ ಆಶಯ
  ತಲೆಗೆ ಬಂದ ಬೇನೆ ಕಾಲಿನ್ಗೆ ಇಳಿವಲೆ ದಣೀಯ ಸಮಯ ಬೇಕಾಗ. ಅದಕ್ಕಾಗಿ ದುಡಿವ, ಪೈಸೆ ಹಾಕುವ, ಪ್ರಾಣ ಕೊಡುವ ಜಿರಳೆ ಸಂತಾನ ವೇ ಇದ್ದು.

 4. raghu muliya says:

  ಒಳ್ಳೆ ಶುದ್ದಿ .
  ಪಾಕಿಸ್ಥಾನವ ಕಾಶ್ಮೀರಿ ಪ್ರಜೆಗಳೇ ದೂರ ಮಡುಗುತ್ತಷ್ಟು ಅಭಿವೃದ್ಧಿ ಕಾರ್ಯಂಗೊ ನೆಡಗು ಹೇಳ್ತ ಭಾವನೆ ಬಂತು ಈ ಸರ್ತಿಯಾಣ ಬಜೆಟ್ ನೋಡಿ .

 5. ಬೊಳುಂಬು ಗೋಪಾಲ says:

  ಹೊಸ ಗೋರ್ಮೆಂಟಿನ ಹೊಸ ಹೊಸ ಯೋಜನೆಗಳ ಕಾಂಬಗ ಮುಂದೆ ಒಳ್ಳೆ ದಿನಂಗೊ ಬಕ್ಕೂ ಹೇಳಿ ಕಾಣ್ತು. ಎಲ್ಲವುದೆ ಒಳ್ಳೆದಾಗಲಿ. ಒಪ್ಪಣ್ಣನ ಶುದ್ದಿ ಲಾಯಕಿತ್ತು.

 6. ಹರೇರಾಮ, ಒಳ್ಳೆ ಶುದ್ದಿ . ಮೋದಿಯ ಆಡಳಿತದ ಸತ್ಪರಿಣಾಮ, ಎಲ್ಲಾ ವಿಷಯಂಗಳಲ್ಲೂ ನಮ್ಮ ದೇಶ ರಾಮರಾಜ್ಯ ಆಗಲಿ ಹೇಳಿ ಪ್ರಾರ್ಥನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *