ಗೆಣವತಿ ಮುಳುಗುಸುಲೆ ತಕ್ಕ ಆದರೂ ನೀರಿರಳಿ..!!

September 9, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ಕರ್ನಾಟಕ ಬಂದು ಅಡ.
ಕಾವೇರಿ ನೀರಿನ ತೆಮುಳುನಾಡಿಂಗೆ ಬಿಡೇಕು – ಹೇಳ್ತ ಲೆಕ್ಕಲ್ಲಿ ಗಲಾಟೆ ಎದ್ದು, ಅದರ ಲೆಕ್ಕಾಚಾರಲ್ಲಿ ಸುಪ್ರೀಂ ಕೋರ್ಟಿಲಿ ನಂಬ್ರ ಆಗಿ, ಮೊನ್ನೆ ತೀರ್ಮಾನ ಬಂತಲ್ಲದೋ – ದಿನಕ್ಕೆ ಸಾವಿರಗಟ್ಳೆ ಕ್ಯೂಸೆಕ್ಸು ನೀರಿನ ಹತ್ತು ದಿನ ಬಿಡೇಕು – ಹೇದು ತೀರ್ಮಾನ ಆಡ. ಆ ತೀರ್ಮಾನಕ್ಕೆ ಎಂತ ಅರ್ತವೋ, ಅದರ ಹಿಂದಾಣ ಲೆಕ್ಕಾಚಾರಕ್ಕೆ ಆಧಾರ ಎಂತ್ಸೋ – ಮೇಲೆ ಇಪ್ಪ ವರುಣ ದೇವರಿಂಗೂ, ಡೆಲ್ಲಿಲಿಪ್ಪ ನ್ಯಾಯದೇವರಿಂಗೂ – ಮಾಂತ್ರ ಗೊಂತು.
~
ಈ ಕಾವೇರಿ ಸಂಗತಿ ತುಂಬ ಹಿಂದಾಣದ್ದಡ.
ಮದಲಾಣ ಕಾಲಲ್ಲಿ ಬ್ರಿಟಿಶರ ಮೆಡ್ರಾಸು ಗೋರ್ಮೆಂಟು ಇದ್ದಿದ್ದ ಸಮೆಯಲ್ಲಿ ಮೈಸೂರು ಗೋರ್ಮೆಂಟಿನ ಸೋಲುಸಿ ಅವಕ್ಕೆ ಧಾರಾಳ ನೀರು ಸಿಕ್ಕುತ್ತ ಹಾಂಗೆ ವೆವಸ್ತೆ ಮಾಡಿದ್ದವು.
ಈಗಾಣ ದಿನವೂ ಅದನ್ನೇ ನಂಬಿ, ಅದೇ ಆಧಾರಲ್ಲಿ ಲೆಕ್ಕಾಚಾರ ಮಾಡ್ತದಡ. ಅಂದ್ರಾಣ ವೆವಸ್ತೆಗೂ, ಈಗಾಣ ವೆವಸ್ತೆಗೂ ತುಂಬಾ ವಿತ್ಯಾಸ ಇದ್ದು.
ಅಂದು ಇಡೀ ಮೈಸೂರಿಂಗೆ ಬೇಕಾದಷ್ಟು ನೀರು ಈಗ ಬರೇ ಬೆಂಗ್ಳೂರಿಗರಿಂಗೆ ಕುಡಿವಲೇ ಬೇಕಕ್ಕು – ಹೇದು ಗೊಂತಿಪ್ಪೋರು ಹೇಲ್ತವು.
~
ವಿಶಯ ಅಪ್ಪಾಡ.
ಬೆಂಗ್ಳೂರಿಂಗೆ ಮದಲಾಣ ಕಾಲಂದಲೇ – ಕುಡಿಯಲೆ ಕಾವೇರಿ ನೀರು ತತ್ತ ಏರ್ಪಾಡು ಮಾಡಿತ್ತಿದ್ದವು. ಈಗಳೂ ಸುಮಾರು ಕಡೆಂಗೆ ಹಾಂಗೇ.
ಹೊಸ ಜಾಗೆಗೊಕ್ಕೆ ಇನ್ನೂ ಆ ವೆವಸ್ತೆ ಮಾಡ್ಳೆ ಎತ್ತದ್ದರೂ – ಹಳೆ ಊರುಗೊ ಎಲ್ಲ ಈಗಳೂ ಕಾವೇರಿ ನೀರು ಕುಡಿತ್ತವು.
ಒಂದರ್ತಲ್ಲಿ ನೋಡಿರೆ – ಕಾವೇರಿ ನೀರಿನ ಬಳಕೆ ಹೆಚ್ಚು ಮಾಡಿಗೊಂಡು, ಇಡಿಯ ಬೆಂಗ್ಳೂರಿಂಗೇ ಅದರ ಕೊಡ್ಳಕ್ಕು.
ಕ್ಲೋರಿನ್ ಬೆರಕ್ಕೆ ಆದ ಬೋರ್ವೆಲ್ಲಿನ ನೀರಿಂದ ಇದು ಎಷ್ಟೋ ಒಳ್ಳೆದು – ಹೇಳ್ತ ಅಭಿಪ್ರಾಯ ಪೆರ್ಲದಣ್ಣಂದು.
ಹಾಂಗೆ ಕಾವೇರಿ ನೀರು ಕೊಡೆಕ್ಕಾದರೆ, ಕಾವೇರಿ ದಂಡೆಂದ ಬೆಂಗ್ಳೂರಿಂಗೆ ಪೈಪುಗೊ ಹೆಚ್ಚುಮಾಡಿಗೊಂಡು ನೀರು ಸಾಗಾಟ ವೆವಸ್ತೆ ಮಾಡೆಕ್ಕಕ್ಕು.
ಆದರೆ, ಕರ್ನಾಟಕಲ್ಲಿ ಬಿದ್ದ ನೀರು ಕರ್ನಾಟಕಕ್ಕೇ ಒಳಿತ್ತು.
ಅಲ್ಲದ್ದರೆ, ನಮ್ಮ ಭೂಮಿಲಿ ಬಿದ್ದ ನೀರು, ನಮ್ಮ ಭೂಮಿಯ ಸಾರವ ಎಳದ ನೀರು, ನಮ್ಮ ಭೂಮಿಗೇ ಸೇರೇಕಾದ ನೀರು – ಆರೋ ಕೆಳಾಣವು ಅಣೆಕಟ್ಟು ಕಟ್ಟಿದ್ದವು ಹೇಳ್ತ ಕಾರಣಕ್ಕೆ ಬಿಡೆಕ್ಕಾದ್ಸು ಇದ್ದೋ?
ನಮ್ಮದು ನವಗೆ ಆತು, ನಮ್ಮ ನೀರು ನಮ್ಮ ಊರಿಂಗೇ ಆತು.
~
ಮೊದಲು ಬ್ರಿಟಿಷರು ಲೆಕ್ಕ ಹಾಕುವಾಗ ಬರೇ ಕೃಷಿ ಸೌಕರ್ಯ ಮಾಂತ್ರ ಇದ್ದಿದ್ದದು. ಈಗ, ಕಾರ್ಖಾನೆಗೊ ಬಯಿಂದು, ಜೆನಸಂಖ್ಯೆ ಬಯಿಂದು, ಪೇಟೆ ಬೆಳದ್ದು – ಇತ್ಯಾದಿ ಹಲವು ತೊಂದರೆಗೊ ಇದ್ದು.
ಮೊದಲಾಣ ಓಬೀರಾಯನ ಲೆಕ್ಕಲ್ಲಿ ನೋಡಿರೆ ಬರೇ ಕರ್ನಾಟಕ, ಕೇರಳ, ಪಾಂಡಿಚೇರಿ – ಹೇದು ವಿಭಾಗ ಮಾಡುವ ಬದಲು, ಕರ್ನಾಟಕ-ಕೃಷಿ, ಕರ್ನಾಟಕ-ಬೆಂಗ್ಳೂರು, ತೆಮುಳು ನಾಡು, ಕೇರಳ – ಹೇದು ವಿಭಾಗ ಮಾಡುಸ್ಸು ಒಳ್ಳೆದು ಅಲ್ಲದೋ.

ಅಪ್ಪು, ಆದರೆ ಆರು ಹೇಳುಸ್ಸು; ಆರಿಂಗೆ ಹೇಳುಸ್ಸು.
ಕರ್ನಾಟಕಂದ ನ್ಯಾಯಯುತ ಹೋರಾಟ ಸಮಗಟ್ಟು ಆಯಿದಿಲ್ಲೆ.
ಇದಕ್ಕೆ ಬೇಕಾದ ಪೂರಕ ರಿಕಾರ್ಡುಗೊ, ಸಂಖ್ಯಾಬಲಂಗೊ ಇತ್ಯಾದಿಗಳ ತೋರ್ಸಿ ಹೋರಾಡಿರೆ ಉಪಕಾರ ಅಕ್ಕು.
ಅಷ್ಟು ಇಚ್ಛಾಶೆಗ್ತಿ ಕರ್ನಾಟಕ ರಾಜ್ಯ ಸರಕಾರಕ್ಕೆ ಬೇಕಿದಾ.
~
ಮೊನ್ನೆಷ್ಟೇ ಗೆಣವತಿಯ ಕೂರ್ಸಿ ನಿನ್ನೆಮೊನ್ನೆ ಆಗಿ ನೀರಿಲಿ ವಿಸರ್ಜನೆ ಮಾಡಿದವು. ಹಾಂಗೆ ವಿಸರ್ಜನೆಗೆ ಕೆರೆಯ ಹತ್ತರೆ ಹೋಪಗೆಲ್ಲ ಈ ಸಂಗತಿ ನೆಂಪಾವುತ್ತಾಡ ಬೆಂಗ್ಳೂರಿಗರಿಂಗೆ. ಕೇಳಿರೆ ಇನ್ನೂ ಸಿಕ್ಕುತಿತೋ ಏನೋ – ಹೇದು ಅನುಸುತ್ತಡ ಬೆಂಗ್ಳೂರಿಗರಿಂಗೆ.

ಅದಿರಳಿ,
ಜಲಸಂಪತ್ತು ದೇಶದ್ದು. ಅದು ಪಶ್ಚಿಮ ಘಟ್ಟಲ್ಲಿ ಹುಟ್ಟಿ ಅದರಷ್ಟಕ್ಕೇ ಪೂರ್ವ ಕರಾವಳಿಗೆ ಹೋವುತ್ತಾ ಇದ್ದು. ಹೋಪ ದಾರಿಲಿ ಈಗಾಣ ಸೌಕರ್ಯಕ್ಕೆ ಮಾಡಿಗೊಂಡ ರಾಜ್ಯಭಾರಲ್ಲಿ ಜಗಳ ಮಾಡುವ ಹಾಂಗಾತು.
ಅದೇ ಬೇಜಾರ.

ಅತ್ಲಾಗಿತ್ಲಾಗಿ ಜಗಳ ಮಾಡಿಗೊಂಡು, ಕೃಷಿಗೆ ಹೇಂಗೂ ಸಿಕ್ಕ.. ಗೆಣವತಿಯ ಮುಳುಗುಸುಲೆ ತಕ್ಕ ಆದರೂ ನೀರು ಸಿಕ್ಕಲಿ ಮುಂದಕ್ಕೆ.
~
ಒಂದೊಪ್ಪ: ಕಾವೇರಿಗಾಗಿ ನಾವುದೇ ಕಾವು ಏರ್ಸೆಕ್ಕಷ್ಟೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಕಾವೇರಿ ಎರಡೂ ರಾಜ್ಯದ್ದು. ಕರ್ನಾಟಕ ರಾಜ್ಯ ಬಿಟ್ಟ ನೀರು ಅವಕ್ಕೆ ಬೇಡಾದ್ದರೆ ಮೇಲೆ ಬಾರ.ಅಲ್ಲಿ ಜೋರು ಮಳೆ ಆದರೆ ಕರ್ನಾಟಕಕ್ಕೆ ನೀರು ಸಿಕ್ಕ.ಮೇಲಾಣ ರಾಜ್ಯದವಕ್ಕೆ ಕಷ್ಟವೇ

  [Reply]

  VA:F [1.9.22_1171]
  Rating: 0 (from 0 votes)
 2. ಯಮ್.ಕೆ.

  ಕರ್ನಾಟಕ-ಕೃಷಿ, ಕರ್ನಾಟಕ-ಬೆಂಗ್ಳೂರು, ತೆಮುಳು ನಾಡು, ಕೇರಳ – ಹೇದು ವಿಭಾಗ ಮಾಡುಸ್ಸು ಒಳ್ಳೆದು ಅಲ್ಲದೋ.—-ಇದು ಸಮ ಅಲ್ಲಾ.,

  ಅದೇ ಏನಿರಲಿ ,,ಒಬ್ಬ ಒಪ್ಪಣ್ಣನು ಈ ನ0ಬ್ರಲಿ ಭಾಗಿ ಹೇಳುದು ಈ ಬೈಲಿ0ಗೆ ಖುಷಿಯ ವಿಚಾರ ಅಲ್ಲದೋ ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಅಮ್ಮಾ ಹೇಳಿ ಕೂಗಿಕ್ಕಲೆ ಎಡಿಯ ಸದ್ಯಕ್ಕೆ. ವಿಷಯ ಬೇಜಾರಿನದ್ದೆ. ಒಂದು ಚೆಂದಕೆ ಪರಿಹಾರ ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವದೊಡ್ಡಭಾವವಸಂತರಾಜ್ ಹಳೆಮನೆಪೆರ್ಲದಣ್ಣvreddhiದೇವಸ್ಯ ಮಾಣಿಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಮಾಲಕ್ಕ°ಚೆನ್ನೈ ಬಾವ°ದೊಡ್ಡಮಾವ°ಬಟ್ಟಮಾವ°ಸರ್ಪಮಲೆ ಮಾವ°ಚೂರಿಬೈಲು ದೀಪಕ್ಕಡಾಮಹೇಶಣ್ಣಚೆನ್ನಬೆಟ್ಟಣ್ಣಅಕ್ಷರದಣ್ಣಚುಬ್ಬಣ್ಣಶಾಂತತ್ತೆವಾಣಿ ಚಿಕ್ಕಮ್ಮಕೇಜಿಮಾವ°ಕಾವಿನಮೂಲೆ ಮಾಣಿಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ