Oppanna.com

ನೆರೆಕರೆ ಒಳಿಯೆಕ್ಕಾರೆ ಕೆರೆ ಬೆಳೆಯೆಕ್ಕು…!

ಬರದೋರು :   ಒಪ್ಪಣ್ಣ    on   20/05/2016    3 ಒಪ್ಪಂಗೊ

ಹಸುರು ಕಾಡುಗೊ ಇದ್ದರೆ ತಂಪು ಒಳಿತ್ತು. ತಂಪು ಒಳುದರೆ ನೀರು ಒಳಿತ್ತು.
ಈ ಸರ್ತಿ ನೀರಿಂಗೂ ಒತ್ತಾಯ, ಸೆಕೆಯೂ ಕಂಡಾಬಟ್ಟೆ!
ಒರಿಶ ಹೋದ ಹಾಂಗೇ ಬೆಶಿಲು ಏರಿಂಡೇ ಹೋಪದು. ಈ ಒರಿಶದ ಸೆಕೆ ಅಂತೂ ತಡವಲೆಡಿಯದ್ದು.
ಇದಕ್ಕೆಲ್ಲ ಕಾರಣ ಎಂತರ? ಇದು ಎಲ್ಲಿಗೆತ್ತುಗು!?
ಉಮ್ಮಪ್ಪ.
~
ಮದಲಿಂಗೆ ಹೀಂಗಿತ್ತಿಲ್ಲೆ – ಹೇಳುಗು ರಂಗಮಾವ°.
ಬೈಲಕರೆಯ ಕರಿ ಮಾರ್ಗದ ಕರೆಲಿ ಸಿಕ್ಕುತ್ತ ಮಣ್ಣಿನ ಮಾರ್ಗ ಹಿಡುದರೆ ಸೀದಾ ಇಳಿವದು ಹೊಂಡ ಜಾಗೆಗೆ.
ಮೇಗೆ ರಜ ರಜ ಹಸುರು ಇದ್ದು, ಆದರೆ ಗುಡ್ಡೆ ಕೆಳಾಚಿಗೆ ಪೂರ್ತಿ ಹಸುರು ತುಂಬಿದ ಜಾಗೆ.
ಮದಲಿಂಗೆ ಭತ್ತದ ಗೆದ್ದೆ, ಈಗ ಅಡಕ್ಕೆಯೇ ತುಂಬಿದ್ದು.
ಆ ಎಲ್ಲಾ ಜೀವ ಜಗತ್ತಿಂಗೆ ನೀರಿನ ಆಶ್ರಯ – ಆ ಹೊಂಡಜಾಗೆಯ ನೀರ ಸೆಲೆಗೊ.
ಅದೆಲ್ಲ ಎರ್ಕುಲೆ ಸಣ್ಣಸಣ್ಣ ಕೆರೆಗೊ. ಅದರಿಂದ ಹೆಚ್ಚಾದ ನೀರು ಹೆರ ಹೋಪ ವೆವಸ್ತೆ.
ಗುಡ್ಡೆ ನೀರೆಲ್ಲ ಸೇರಿ ಹರಿಪ್ಪು ಆಗಿ ವೃದ್ಧಿ ಆಗಿ ಸಣ್ಣ ತೋಡಿಲಿ ಬೈಲಿನ ಎಲ್ಲಾ ಗೆದ್ದೆಗೊಕ್ಕೆ ಕೊಟ್ಟೋಂಡು ಮುಂದುವರಿಗು.

ಜೆನಂಗೊ ಆ ತೋಡಿಂದ ಮಿತವ್ಯಯಲ್ಲಿ ನೀರು ತೆಗಗು. ಅವಕ್ಕೆ ಬೇಕಾದಷ್ಟೇ ಅವರ ಮನೆಗೆ.
ಬೇರೆಯವಕ್ಕೂ ನೀರು ಬೇಕು – ಹೇಳ್ತ ಚಿಂತನೆ ಅವಕ್ಕಿತ್ತು.

ದನಗಳೂ ಅಷ್ಟೇ – ಬೇಕಾದಷ್ಟೇ ಉಪಯೋಗುಸುಗು. ಆಸರಪ್ಪಗ ನೀರು ಕುಡಿಗು, ಸೆಕೆ ಆವುತ್ತರೆ ಎಮ್ಮೆಗೊ ಬಂದು ಬೀಳುಗು.

ಗೆಡುಗಳೂ ಹಾಂಗೇ – ಬೇಕಾದಷ್ಟೇ ತೆಕ್ಕೊಂಗು, ಒಳುದ್ದರ ಗೆದ್ದೆ ಕರೆಯ ಮಾದುಗಳಲ್ಲಿ ಕೆಳಾಣ ಗೆದ್ದೆಗೆ ಕೊಡುಗು, ಅದಾಗಿ ಅದರಂದ ಕೆಳಾಣ ಗೆದ್ದೆಗೆ, ಅದಾಗಿ ಅದರಿಂದ ಕೆಳ – ಇದೇ ನಮುನೆ ಗೆದ್ದೆಂದ ಗೆದ್ದೆಗೆ ನೀರು ಹರಿಪ್ಪು ಇಕ್ಕು.

ಪರಸ್ಪರ ಹಂಚಿಗೊಂಡು ತಿಂಬ ಕಾಲಲ್ಲಿ ಧಾರಾಳ ನೀರು ಇದ್ದತ್ತು.
ಆರಿಂಗೂ ಏನೂ ಕೊರತ್ತೆ ಬಯಿಂದಿಲ್ಲೆ.
ಈಗ?
~

ಕ್ರಮೇಣ ಭತ್ತದ ಬೆಳೆ ಹೋಗಿ ಅಡಕ್ಕೆ ಬೆಳೆ ಬಂತು.
ಧನದಾಹದ ಒಟ್ಟಿಂಗೇ ಜಲದಾಹವೂ ಹೆಚ್ಚಾತು.
ಅಡಕ್ಕೆಗೆ ಆರು ತಿಂಗಳು ನೀರು ಕೊಟ್ಟಷ್ಟೂ ಬೇಕು. ಅಡಕ್ಕೆ ಕಿಲೆ ಹಸುರು ಹಸುರು ನೇಲೇಕು – ಹೇದು ಸಮಾ ನೀರು ಬಿಡ್ಳೆ ಸುರು ಮಾಡಿದವು.
ನಾಲ್ಕು ಕಿಲೆಯ ಬದಲು ಆರು ಕಿಲೆ ನಿಲ್ಲೆಕ್ಕು ಹೇದು ಹೊಸ ಈಟು ಹಾಕಿದವು.
ಅಷ್ಟಪ್ಪಗ ಇನ್ನೂ ಜಾಸ್ತಿ ನೀರು ಕೊಟ್ಟವು.
ಪಂಪು ಮಡಗಿ ಎಳದವು, ಸ್ಪ್ರಿಂಕ್ಲರು ಬಿಟ್ಟವು.
ತೋಡನೀರು ಮುಗಾತು. ಬಾವಿಗೆ ಪಂಪು ಮಡಗಿದವು.
ಭೂ ಮೇಲ್ಮೈಲಿ ನೀರ ಹರಿಪ್ಪು ನಿಂದತ್ತು. ಅಡಿಯಂಗೆ ಇಳುದತ್ತು.

ತಟ್ಟಿಂಗೆ ಬಿದ್ದು ಹಾಳಪ್ಪದು ಬೇಡ ಹೇದು ಕಟ್ಟಪ್ಪುಣಿ, ಕಣಿಗೊ ಕಾಣೆ ಆತು – ಪ್ಲೇಷ್ಟಿಗು ಪೈಪಿಲಿ ನೀರು ಹೋಪಲೆ ಸುರು ಆತು.
ಬಾವಿಗೆ ಎಲ್ಲಾ ಹೊಡೆಂದ ಪೈಪು ಪಂಪುಗೊ ಆತು.
ಎಡಿಗಾಷ್ಟು ಅಡಿಯಂದ ನೀರು ಎಳದತ್ತು.

ಅಡಕ್ಕೆ ಮರ ಕುಡುದೇ ಕುಡುದತ್ತು. ಕೊಟ್ಟಷ್ಟೂ ಕುಡುದತ್ತು.
ಅದೂ ಸಾಕಾಯಿದಿಲ್ಲೆ, ಅಂತರ್ಜಲ ಸಿಕ್ಕುತ್ತು ಹೇದು ಬೋರುವೆಲ್ಲು – ಇಂಜೆಕ್ಷನು ಕೊಟ್ಟಾತು.
ಭೂಮಿ ಒಳಾಂದ ನೀರು ಎಳದತ್ತು.

ಸುರು ಸುರುವಿಂಗೆ ಸಂತೋಷಲ್ಲಿ ಓವರ್ ಫ್ಲೋ ಅಪ್ಪಷ್ಟೂ ಕೊಶಿಲಿ ನೀರು ಕೊಟ್ಟತ್ತು ಭೂಮಾತೆ.
ಮತ್ತೆ ಮತ್ತೆ ಸಬ್ಮರ್ಸಿಬುಲು ಪಂಪಿಂಗೆ ಸಿಕ್ಕಿತ್ತು.
ಸುರಿವಿಂಗೆ ನೂರು ಫೀಟು ಸಾಕು, ಮತ್ತೆ ಮತ್ತೆ ಹಲವು ನೂರುಗೊ.
ಈಗ ಐನ್ನೂರು ಅಡಿ ಆಳದ ವರೆಂಗೆ ತೆಗದರೆ ಒಂದಿಂಚು ಸಿಕ್ಕುತ್ತರೆ – ಅದು ದೋಡ ಸಂಗತಿ

ಅಂತೂ ಅಡಕ್ಕೆ ಮರ ನೀರು ಕುಡ್ಕೊಂಡೇ ಇದ್ದು.
~
ಅಂಬಗ ಇದಕ್ಕೆಲ್ಲ ಕೊನೆ ಇಲ್ಲೆಯೋ?
ಆದಿಯೇ ಕೊನೆ.
ಅಪ್ಪು, ಮೊದಲು ಅಜ್ಜಂದ್ರು ಮಾಡಿಗೊಂಡಿದ್ದ ಹಾಂಗಿಪ್ಪ ವೆವಸ್ತೆಯೇ ನಮ್ಮ ಊರಿಂಗೆ ಹೇಳಿದ ಸಂಗತಿ.

ಊರಿಲಿ ಒಂದು ದೊಡಾ ಕೆರೆ.
ಆ ಕೆರೆಲಿ ನೀರು ಎರ್ಕುದು.
ಅಲ್ಲಿಂದ ಹೆಚ್ಚಾದ ನೀರು ಹರುದು ಹೋಪದು.
ಅದು ಹೋಗಿ ತೋಡಿಂಗೆ ಸೇರುದು.
ಭತ್ತದ ಗೆದ್ದೆ ಹೇದು ವಿಶಾಲ ಜಾಗೆಗಳಲ್ಲಿ ನೀರು ಎರ್ಕುದು.
ಇದರಿಂದ ಪುನಃ ಒರತ್ತೆ ವೃದ್ಧಿ ಅಪ್ಪದು.
ಇದೆಲ್ಲ ಇದ್ದರೆಯೇ ನಮ್ಮ ಊರಿನ ಜಾಗೆಗಳಲ್ಲಿ ನೀರಿಕ್ಕಷ್ಟೆ.
ಅಲ್ಲದ್ದರೆ – ಮಳೆ ಬಂದ ನೀರು ಸೀದ ಹರುದು ಹೋದರೆ ಎರಡು ದಿನಲ್ಲಿ ಸಮುದ್ರಕ್ಕೆ ಸೇರ್ತು, ಅಷ್ಟೆ ವಿನಃ ಏನೂ ಪ್ರಯೋಜನ ಕಾಣ.
~

ಎಲ್ಲಿಂದ ಸುರು ಮಾಡೆಕ್ಕಾದ್ಸು?
ಮೂಲ ಹುಡ್ಕೆಕ್ಕಪ್ಪದು ನಮ್ಮ ಜಾಗೆಗಳಲ್ಲಿ ಕೆರೆ ತೆಗೇಕು. ಹಳೆಯ ಕೆರೆಗಳ ಪುನರುತ್ಥಾನ ಮಾಡೇಕು.
ಅದರಲ್ಲಿ ಪುನಾ ನೀರು ಎರ್ಕುತ್ತ ಹಾಂಗೆ ನೋಡಿಗೊಳೆಕ್ಕು.
ಆ ನೀರು ಭೂಮಿಲಿಯೇ ಇರೆಕ್ಕು, ಸಾಧ್ಯವಾದಷ್ಟೂ ನೀರು ಇಂಗೆಕ್ಕು.
ಈ ವ್ಯವಸ್ಥೆ ನಮ್ಮ ಭೂಮಿಯ ಪುನಶ್ಚೇತನ ಮಾಡ್ತು.
ಅದು ಬಿಟ್ಟು ನೀರು ಬೇಕು ಹೇಳಿದ ಕೂಡ್ಳೇ ಬೋರುವೆಲ್ಲು ತೆಗದರೆ ಕತೆ ಒಳಿಯ.
~
ಕಾವಿನಮೂಲೆ ಮಾಣಿಯ ಮನೆಲಿ ಮೊನ್ನೆ ಒಂದು ಹಳೇ ಕೆರೆ ಜೀರ್ಣೋದ್ಧಾರ ಮಾಡಿದ್ದವಡ.
ಆ ಶುದ್ದಿ ಕೇಳಿ ಬೈಲಿಲಿ ಬಹು ಆನಂದ ಆತು.

ಇದು ಬೈಲ ಎಲ್ಲೋರಿಂಗೂ ಮಾದರಿ ಆಗಲಿ.
ನಮ್ಮ ಜಾಗೆಗೆ ಬೀಳ್ತ ನೀರಿನ ನಾವು ಇಂಗುಸುವೊ°. ನೀರಿನ ಸೆಲೆ ವೃದ್ಧಿಸುವೊ°.
ನಮ್ಮ ಹೆರಿಯರು ಆಸ್ಥೆಲಿ ಒಳಿಶಿದ ನೀರಿನ ನಮ್ಮ ಮಕ್ಕೊಗೆ ಇರುವಾರ ತುಂಬುಸಿ ಮಡಗುವ°..
ಹನಿಗೂಡಿ ಅಬ್ಬೆಮಣ್ಣ ಋಣ ತೀರ್ಸುಲೆ ನೋಡುವ°..

ಒಂದೊಪ್ಪ: ಕೆರೆ ಒಳಿಯದ್ರೆ ನೆರೆಕರೆ ಒಳಿಯ!

3 thoughts on “ನೆರೆಕರೆ ಒಳಿಯೆಕ್ಕಾರೆ ಕೆರೆ ಬೆಳೆಯೆಕ್ಕು…!

  1. ಅಪ್ಪದು ಹೇಳಿ ಒಪ್ಪೆಕಾದ ಒಪ್ಪ ಶುದ್ದಿ. ಮಳೆನೀರ ಭೂಮಿಯೊಳಂಗೆ ಇಂಗುಶುವ ಕೆಲಸ ಖಂಡಿತಾ ಆಯೆಕು.
    ಕೃಷಿಭೂಮಿಯ ತೆಗದು ಕಾಂಕ್ರೀಟು ಮಾರ್ಗಂಗಳ ಅಗಲ ಮಾಡುವದು, ಜಾಲಿಂಗೆ ಸಿಮೆಂಟು ಹಾಕಿ ಚೆಂದ ಮಾಡುವದು ಎಲ್ಲವುದೆ ಕಡಮ್ಮೆಯಾಯೆಕು.

  2. ಇದೇ ದೇಶಲ್ಲಿ ಪ್ರತಿ ಬೋರೆವೆಲ್ಲಿಂಗು ನೀರಿಂಗಿಸುವ ಕ್ರಮವ ಕಡ್ಡಾಯ ಮದೆಕ್ಕು ಸರ್ಕಾರ, ಇದಕ್ಕೆ ಬದ್ದರಗದ್ದವಕ್ಕೆ ಕರೆಂಟು ಕೊಡಲಾಗ.. ಹಂಗಾದರೆ, ರಾಜ ಸಮಯಲ್ಲಿ ಪರಿಸ್ಥಿತಿ ಸುದಾರ್ಸುಗು

    http://thealternative.in/wp-content/uploads/2013/03/dscn0201.jpg

    1. ಇಡೀ ದೇಶಲ್ಲಿ ಪ್ರತಿ ಬೋರೆವೆಲ್ಲಿಂಗು ನೀರಿಂಗಿಸುವ ಕ್ರಮವ ಕಡ್ಡಾಯ ಮಾಡೆಕ್ಕು ಸರ್ಕಾರ, ಇದಕ್ಕೆ ಬದ್ದರಾಗದವಕ್ಕೆ ಕರೆಂಟು ಕೊಡ್ಲಾಗ.. ಹಂಗಾದರೆ, ರಜಾ ಸಮಯಲ್ಲಿ ಪರಿಸ್ಥಿತಿ ಸುದಾರ್ಸುಗು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×