Oppanna.com

ಕೋಟಿಯ ಪುಳ್ಳಿ ಬರತನಾಟ್ಯಲ್ಲಿ ಪಷ್ಟಡ…!

ಬರದೋರು :   ಒಪ್ಪಣ್ಣ    on   26/03/2010    6 ಒಪ್ಪಂಗೊ

ಎಲ್ಲ ನೆರೆಕರೆಯ ಹಾಂಗೆ, ನಮ್ಮ ನೆರೆಕರೆಲಿದೇ ಎಲ್ಲರುದೇ ಇರ್ತವು.
ಪೂಜೆ ಮಾಡ್ತ ಬಟ್ಟಮಾವನಿಂದ ಹಿಡುದು, ಬೂತಕಟ್ಟುತ್ತ ಕೋಟಿಯ ಒರೆಂಗೆ..
ಎಣ್ಣೆ ತೆಗೆತ್ತ ಪಾಟಾಳಿಂದ ಕಳ್ಳು ತೆಗೆತ್ತ ಸಂಕಪ್ಪುವಿನ ಒರೆಂಗೆ..
ಹೂಗು ಮಾರ್ತ ರೋಸಮ್ಮನಿಂದ – ಮರ ಕಡಿತ್ತ ಇಬ್ರಾಯಿಯ ಒರೆಂಗೆ – ಎಲ್ಲರುದೇ..!
ಊರೇ ಹಾಂಗೇ ಅಲ್ಲದೋ – ಸಮಷ್ಟಿಯ ಜೀವನ!
~

ಈಗಾಣ ಈ ಇಪ್ಪತ್ತೊಂದನೇ ಶೆತಮಾನ ಹೇಳಿತ್ತುಕಂಡ್ರೆ, ತೀರಾ ಮದಲಾಣ ಹಾಂಗೆ – ಇಂತವಂಗೆ ಇಂತಾದ್ದೇ – ಹೇಳಿ ಏನೂ ಇಲ್ಲೆ.
ಮದಲಿಂಗೆ ಆದರೆ ಸಮ – ಬಟ್ಟಮಾವನ ಮಗ ಬಟ್ಟತ್ತಿಗೆ ಕಲಿತ್ತದು. ಜೋಯಿಷಪ್ಪಚ್ಚಿಯ ಮಗ ಜೋಯಿಷತ್ತಿಗೆ (ಜ್ಯೋತಿಷ್ಯ) ಕಲಿತ್ತದು, ಗುರುಗಳ ಮಗ ಅಧ್ಯಯನ ಮಾಡಿ ಅಧ್ಯಾಪನ ಸುರುಮಾಡುದು, ಓಡಾರಿಯ ಮಗ ಮಣ್ಣಳಗೆ ಮಾಡುದು, ಹೀಂಗೆ..
ಈ ಕೆಲಸಂಗಳಿಂದಾಗಿ ‘ಇಂತ ಪಂಗಡದವಂಗೆ ಇಂತ ಕೆಲಸ’ ಹೇಳುದು ನಿಗಂಟಾತು.
ಆರುದೇ ಮಾಡಿದ್ದಲ್ಲ, ಅದರಷ್ಟಕ್ಕೇ ಆದ್ದದು!

ಕ್ರಮೇಣ ಈ ಕಟ್ಟುಪಾಡುಗೊ ಪುನಾ ಮುರುದು, ಸಮಾಜದ ಕೆಲಸಂಗೊ ಪಂಗಡಂಗಳ ಒಳದಿಕೆ ಹರಡಿ / ಕರಡಿ ಹೋತು.
ನಾಯಿಕನ ಆಣು ಶಾಲೆಲಿ ಮಾಷ್ಟ್ರ° ಆತು, ಗೌಡರ ಆಣು ಆಚಾರಿ ಆತು, ಬಟ್ಟಮಾವನ ಪೈಕಿ ಮಕ್ಕೊ ಜೀಪಿನ ಡ್ರೈವರು ಆದವು – ಅಂತೂ ಒಟ್ಟಾಗಿ ಸಮಾಜ ಬೆರತು ಹೋತು.
ಈಗಂತೂ – ಇಂತಾ ಕೆಲಸ ಮಾಡ್ತರೆ ಇಂತಾ ಜಾತಿಯೇ ಆಗಿಕ್ಕು ಹೇಳಿ ಅಂದಾಜಿ ಮಾಡ್ಳೆ ಎಡಿಯಲೇ ಎಡಿಯ – ಆ ಮಟ್ಟಿಂಗೆ ಬಂದು ನಿಂದಿದು.
~

“ನಲಿಕ್ಕೆ”ಯವು ಹೇಳಿ ಗೊಂತಿದ್ದಾ?
ಬೂತಾರಾಧನೆ ಇಪ್ಪ ಊರಿನೋರಿಂಗೆ ಗೊಂತಿಕ್ಕು.
ತುಳು ಭಾಷೆಲಿ ನಲಿಕ್ಕೆ ಹೇಳಿರೆ ಕೊಣಿತ್ತದು – ನಲಿಕ್ಕೆಯವು ಹೇಳಿರೆ ಕೊಣಿವವು ಹೇಳಿಗೊಂಡು.
ಎಂತರ ಕೊಣಿವದು – ಬೂತ ಕಟ್ಟಿ ಕೊಣಿವದು.

ಕೋಟಿಯ ಬೂತ ನಲಿಕ್ಕೆಲಿ..!
ಕೋಟಿಯ ಬೂತ ನಲಿಕ್ಕೆಲಿ..!

ಬೂತ ಕಟ್ಟುವ ಈ ಜನಾಂಗಕ್ಕೆ ನಲಿಕ್ಕೆಯವು ಹೇಳುದು.

ಬಟ್ಟಮಾವಂಗೆ ಶಿಷ್ಯವರ್ಗ ಹೇಳಿ ಇದ್ದ ಹಾಂಗೆ, ಈ ನಲಿಕ್ಕೆಯವಕ್ಕೆ ’ಬೈಲು’ ಹೇಳಿ ಲೆಕ್ಕ ಇದ್ದು.
ಆ ಬೈಲಿನ ಒಳ ಬಪ್ಪ ಎಲ್ಲಾ ಬೂತಂಗಳನ್ನುದೇ ಅದೇ ಕುಟುಂಬ ಕಟ್ಟೆಕ್ಕು.

ಈ ಬೂತ ಕಟ್ಟುವ ಕೋಟಿಯ ಗೊಂತಿದ್ದನ್ನೇ – ಅಂದೊಂದರಿ ಶುದ್ದಿ ಮಾತಾಡಿದ್ದು.. (ಇಲ್ಲಿದ್ದು)
ನಮ್ಮ ಬೈಲಿನ ಪಾರೆ ಅಜ್ಜಿ ಬೂತವ ಅದುವೇ ಕಟ್ಟುದು.
ಬೂತ ಕಟ್ಟುವ ದಿನ ಮಾಂತ್ರ ಅಲ್ಲದ್ದೆ, ಒಳುದ ದಿನವುದೇ ಅದು ತರವಾಡು ಮನೆಗೆ ಕೆಲಸಕ್ಕೆ ಬಕ್ಕು. (ಈಗೀಗ ರಜಾ ಕಮ್ಮಿ!).
ಅದರ ಅಪ್ಪ ಪುತ್ತ°, ಮದಲಿಂಗೇ ಸರಾಗು ಬಕ್ಕು – ಅದು ನಮ್ಮ ಶಂಬಜ್ಜಂಗೆ ಲೋಕಾಬಿರಾಮ ಮಾತಾಡ್ಳೆ ಒಂದು ತೈನಾತಿ ಆಗಿತ್ತು.
ಅದಕ್ಕೆ ಕಾಲುಬೇನೆ ಆಗಿಪ್ಪಗ ಶಂಬಜ್ಜನೇ ಬಂಡಾಡಿಎಣ್ಣೆ ಕೊಡುಗು,  ಅದಕ್ಕೆ ಬಾಯಿಚೆಪ್ಪೆ ಅಪ್ಪಗ ಶಂಬಜ್ಜನೇ ಒಂದು ಹೊಗೆಸೊಪ್ಪು ಇಡ್ಕುಗು – ಪರಸ್ಪರ ಮುಟ್ಟದ್ರೆ ಎಂತಾತು, ಆ ನಮುನೆ ಪ್ರೀತಿ ಇತ್ತು.
ಒಟ್ಟಿಲಿ ತರವಾಡು ಮನೆಗೆ ಆಪ್ತ ಜೆನ ಆಗಿತ್ತು.
ಪುತ್ತ° – ಅದರ ಎಡಿವ ಕಾಲಲ್ಲಿ ಯೇವ ಬೂತವನ್ನುದೇ ಕಟ್ಟುಗು.
ಪ್ರಾಯ ಆಗಿ ಕೆಲಸ ಮಾಡ್ಳೆ ಎಡಿಯದ್ದ ಕಾಲಲ್ಲಿದೇ ಬಂದುಗೊಂಡು ಇತ್ತು, ಮದ್ಯಾನ್ನ ಉಂಡಿಕ್ಕಿ ಹೋಪಲೆ. ಆಟಿತಿಂಗಳಿಲಿ ’ಬೇಡ್ಳೆ’.. ಇತ್ಯಾದಿಗೊಕ್ಕೆ.
~

ಕೋಟಿಯ ಮನೆತನದ್ದು ದೊಡ್ಡ ಸಂಸಾರ. ಅದರ ಮೇಗಂದ ಬೂತ ಕಟ್ಟುದರ್ಲಿ ಉಶಾರಿ ಆರುದೇ ಇತ್ತವಿಲ್ಲೆಡ. ಹಾಂಗಾಗಿ ಅದಕ್ಕೆ ದೊಡ್ಡ ದೊಡ್ಡ ಹಲವು ಬೈಲುಗೊ ಸಿಕ್ಕಿತ್ತು.
ತರಾವಳಿ ಬೂತಂಗಳನ್ನುದೇ ಕಟ್ಟುತ್ತ ಭಾಗ್ಯ ಸಿಕ್ಕಿತ್ತು.
ಜುಮಾದಿ (ಧೂಮವತೀ), ಲಕ್ಕೇಸಿರಿ (ರಕ್ತೇಶ್ವರಿ), ಪಿಲಿಚಾಮುಂಡಿ, ಉಳ್ಳಾಲ್ತಿ – ಇತ್ಯಾದಿ ನಮ್ಮ ಊರಿನ ಹೆಸರಾಂತ ಬೈಲಿನ ಹೆಸರಾಂತ ಬೂತಂಗಳ ಕಟ್ಟಿ ಧನ್ಯ ಆಯಿದು.
ಒಳ್ಳೆತ ಕೊಣಿಯೆಕ್ಕಾದ ಪಿಲಿಬೂತಂದ ಹಿಡುದು, ಅಷ್ಟೆತ್ತರ ಮಾಡ ಇಪ್ಪ ರಾಮಲಕ್ಷ್ಮಣ ಬೂತ (ಜೋಡುಬೂತ / ಉಳ್ಳಾಕುಲು) ಬೂತವನ್ನುದೇ ಕಟ್ಟುಗು. ನಾಟ್ಯವೇ ಪ್ರಧಾನ ಆಗಿಪ್ಪ ಪಾರೆಅಜ್ಜಿ ಬೂತಕ್ಕುದೇ ನ್ಯಾಯ ಕೊಟ್ಟಿದು.
ಶಂಬಜ್ಜಂಗೆ ಬೂತಂಗಳಲ್ಲಿ ವಿಶೇಷ ಆಸಕ್ತಿ. ಭಕ್ತಿಯುದೇ ಇತ್ತು. ಈ ಕೋಟಿಯ ನಲಿಕ್ಕೆ ನೋಡಿಗೊಂಡು ’ಎಲ್ಲದರ್ಲಿದೇ ಸೈ’ ಹೇಳುಗು.!

~
ನಲಿಕ್ಕೆಯವರ ಜೀವನ ವಿಧಾನವೇ ವೈಶಿಷ್ಠ್ಯ. ಈ ಜನಾಂಗದ ಮೂಲ ತೆಮುಳು(ತಮಿಳು)ನಾಡು – ಹೇಳ್ತವಡ, ಮಾಷ್ಟ್ರುಮಾವ° ಹೇಳಿದ್ದು.
ಭೂತಾರಾಧನೆಗೆ ಅವಿನಾಭಾವ ಸಂಬಂಧ ಇಪ್ಪ ಇವರ ಕಲಿಯುವಿಕೆ ಹುಟ್ಟುವಗಳೇ ಆರಂಬ ಆಗಿರ್ತು.
ಸಣ್ಣ ಇಪ್ಪಗಳೇ ಅದಕ್ಕೆ ಬೇಕಾದ ತೆಯಾರಿಗೊ ಇಕ್ಕು. ನಿತ್ಯವೂ ಮನೆಲಿ ಅದೇ ವಾತಾವರಣ.
ಬಣ್ಣದ ಹೊಡಿಗೊ, ಪಟ್ಟೆನೂಲು, ಕೆಂಪು ಪಟ್ಟೆ, ಹಾಳಾದ ಹೂಗುಗೊ, ಕಂದುಹಿಡುದ ಮಲ್ಲಿಗೆ ಮಾಲೆಗೊ, ರಜ್ಜ ಕರ್ಪೂರ, ಮಸಿ ಹಿಡುದ ದೀಟಿಯೆ (ದೀವಟಿಗೆ) – ಇದೆಲ್ಲವನ್ನುದೇ ಕಂಡು ಕಂಡು ಭೂತಾರಾಧನೆಲಿ ಆಯಾ ವಸ್ತುಗಳ ಉಪಯೋಗ ಎಂತರ ಹೇಳ್ತದು ಅರ್ತ ಆಗಿರ್ತು.

ಮುಂದೆ, ಬೆಳದ ಹಾಂಗೆ ಬೂತಾರಾಧನೆಯ ಹಂತ ಹಂತದ ಕಲಿಯುವಿಕೆ ಸುರು.
ಹೆಣ್ಣುಕೂಸು ಆದರೆ, ಸಂದಿ/ಪಾಡ್ದನ ಹೇಳ್ತದರ ಕಲಿವದು.
ಹಾಂಗೇಳಿರೆ ಎಂತರ? – ಅದೇ, ಯೇವದೇ ಒಂದು ಬೂತದ ಚರಿತ್ರೆ, ಅದರ ಇತಿಹಾಸ ಕತೆ, ಅದು ಎಲ್ಲಿ ಎಂತ ಮಾಡಿದ್ದು ಹೇಳ್ತ ಸಣ್ಣ ಕಥೆ.
ಹಳೆತುಳು ಪದ್ಯರೂಪಲ್ಲಿ ಇರ್ತು. ಇದರ ದುಡಿ ಹೆಟ್ಟಿಗೊಂಡು ಹೇಳ್ತದು ಕ್ರಮ.
ಸಂಧಿ ಹೇಳುವಗ ದುಡಿಯ ತಾಳ ಹೆಚ್ಚುಕಮ್ಮಿ ಅಪ್ಪಲಾಗ, ತಾಳ ನೋಡಿಗೊಂಡು ಪದ್ಯ ತಪ್ಪುಲಾಗ!
ತಪ್ಪಿರೆ ಕೈಗೆಂಟಿಂಗೆ ಪೆಟ್ಟುಬೀಳುದು ಕಂಡಿತ..!!!

ಆಣು (ಮಾಣಿ) ಆದರೆ ಕೊಣಿತ್ತದರ ಅಭ್ಯಾಸ ಮಾಡುದು.
ಕೊಣಿವದರ ಒಟ್ಟಿಂಗೇ, ಕೆಲವು ಮುದ್ರೆಗೊ, ಚಲನಂಗೊ, ಭ್ರಮರಂಗೊ, ಸಂಜ್ಞೆಗೊ, ಸೂಚನೆಗೊ – ಕೈಲಿ, ಕಣ್ಣಿಲಿ, ದೇಹಲ್ಲಿ ಕೊಡ್ಳೆ ಕಲಿಯೇಕು. (ಇದಕ್ಕೆಲ್ಲ ಭರತನಾಟ್ಯವೇ ಮೂಲ ಅಡ, ಪುಟ್ಟಕ್ಕ ಹೇಳಿಗೊಂಡು ಇತ್ತು.)
ಅಂತೆ ಕೊಣಿವದು ಅಲ್ಲ, ನಾಕೈದು ಕೇಜಿ ಬಾದಿಯ ಗಗ್ಗರ(ಗೆಜ್ಜೆ ನಮುನೆದು) ಸಿಕ್ಕುಸಿಗೊಂಡು.
ಅದರ ಎದೆಗೆ ಬಡುಕ್ಕೊಂಡು, ತಲೆಲಿ ನೆಗ್ಗಿಗೊಂಡು, ಕಾಲಿಂಗೆ ಸಿಕ್ಕುಸಿಗೊಂಡು, ಕೈಲಿ ನೇಚಿಗೊಂಡು – ಕೊಣಿಯೆಕ್ಕು. ಅವರ ಅಪ್ಪಮ್ಮ ಎದುರು ಕೂದಂಡು ಸರಿಯೋ, ತಪ್ಪೋ ನೋಡುಗು.
ರಜ ತಪ್ಪಿದರೂ ಕಾಲುಗೆಂಟಿಂಗೆ ಪೆಟ್ಟುಬೀಳುದು ಕಂಡಿತ..!!

ದುಡಿಯ ಕೂಸುಗೊ ಕಲಿತ್ತರೂ, ಆಣುಗೊಕ್ಕೆ ಕಲಿವಲಿದ್ದು, ಹಾಂಗೆಯೇ, ಕೂಸುಗೊಕ್ಕೆ ನಲಿಕ್ಕೆಯುದೇ ಕಲಿವಲಿದ್ದು.
ಅದು ಕೊಣಿವಲೆ ಬೇಕಾಗಿ ಅಲ್ಲ, ಮುಂದಕ್ಕೆ ಆ ಕಲೆ ಒಳಿವಲೆ ಬೇಕಾಗಿ. ಅಂತೂ, ಮಕ್ಕೊ ಸಣ್ಣ ಇಪ್ಪಗಳೇ ಈ ಕಲೆಗಳ ನಲಿಕ್ಕೆಯವರ ಮಕ್ಕೊಗೆ ಅಬ್ಯಾಸ ಮಾಡಿರ್ತವು.
~

ಕೋಟಿಯ ಅಪ್ಪ° – ಪುತ್ತನ ಬೂತವುದೇ ಹಾಂಗೆಡ, ಬಾರೀ ಚೆಂದ ಅಡ ನೋಡ್ಳೆ. ಕೋಟಿಂದಲೂ ಹೆಚ್ಚು ಹಾರಿ ಹಾರಿ ಕೊಣಿಗಡ.
ಅದರ ಕೊನೇ ಒರಿಶಂಗಳಲ್ಲಿ, ಮಾಡದ ಉಳ್ಳಾಕುಳುವಿನ ತಡ್ಪೆ ಕಟ್ಟಿಗೊಂಡು ಹಾರುದು ನೋಡಿರೆ ಎಂತ ಜವ್ವನಿಗರುದೇ ಸೋಲೆಕ್ಕು..!!
ಕೋಟಿಗುದೇ ಅದೇ ನೆತ್ತರು ಬಯಿಂದು, ಒಳ್ಳೆ ಶರೀರ ತಾಕತ್ತು ಇದ್ದು. ಹತ್ತು-ಹನ್ನೆರಡು ಗಂಟೆ ಬಿಡದ್ದೇ ಕೊಣಿಗು. ಎಡೆಲಿ ಬೊಂಡನೀರೇ ಗತಿ.
ಬೊಂಡನೀರುದೇ ಜಾಸ್ತಿ ಕುಡುದರೆ ತಾಪತ್ರಯ – ಹಾಂಗಾಗಿ, ಹೊಟ್ಟಗೆ ಎಂತದೂ ಇಲ್ಲದ್ದೆ ತುಂಬ ಹೊತ್ತು ಕೊಣಿತ್ತ ಕಲೆ ಅಭ್ಯಾಸ ಇದ್ದು.
~

ಕೊಣಿವಗಳೂ ಹಾಂಗೇ, ಒಳ್ಳೆತ ಹಾವ – ಭಾವ ಸೂಚನೆಗೊ, ಎಲ್ಲ ತೋರುಸುಲೆ ಅರಡಿತ್ತು ಇವಕ್ಕೆ.
ಅದರೊಟ್ಟಿಂಗೆ ಜೆನರ ಭಾವನೆಗೊಕ್ಕೆ ಸ್ಪಂದುಸೆಕ್ಕು. ಅಷ್ಟಪ್ಪಗ ಕಟ್ಟಿದ ಬಚ್ಚಲು ಗೊಂತಪ್ಪಗಲಾಗ ಇದಾ!

ಆರಾರು- ಅವರ ಕುಟುಂಬದ ಬೇಜಾರವ ಬೂತದ ಹತ್ತರೆ ತಿಳುಸುಲೆ ಬಂದರೆ ಬೂತವುದೇ ಸ್ವತಃ ಬೇಜಾರುಮಾಡಿಗೊಂಡು ಅದರ ಕಾರಣ ಹುಡ್ಕಿ ಹೇಳುದು.
ಆರಿಂಗೋ ಬೊಂಬಾಯಿಲಿ ಕೆಲಸ ಸಿಕ್ಕಿದ ಕುಶಿಯ ಕಾಣಿಕೆ ತಂದು ಕೊಟ್ಟರೆ ಬೂತಕ್ಕೂ ಕೊಶಿ ಅಕ್ಕು, ಕೊಶೀಲಿ ತೆಕ್ಕೊಂಗು.
ಇದೆಲ್ಲ ಅದರ ಹಾವ ಭಾವಂದಲೇ ಗೊಂತು ಮಾಡುಸುಗು. ಅಂತೂ, ಬೂತ ನಂಬದ್ದ ಎಷ್ಟೋ ಅಜ್ಜಂದ್ರುದೇ ಬೂತ ನೋಡುವ ಹಾಂಗೆ ಮಾಡಿದ್ದು ಕೋಟಿಯೇ ಅಡ!

ಕೋಟಿಗೆ ಹತ್ತರತ್ತರೆ ರಂಗಮಾವನ ಪ್ರಾಯ. ಕೋಟಿಗೊಂದು ಮಗ° – ನೇಮು ಹೇಳಿ ಹೆಸರು.
ಸುಮಾರು ಶಾಂಬಾವನದ್ದೇ ತಲೆಮಾರು. ಆ ನೇಮುವಿಂಗೆ ಅಂದೇ ಮದುವೆ ಆಗಿ ಒಂದು ಮಗಳಿದ್ದು. ವಿನುವಿನ ಪ್ರಾಯವೇಯೋ ಏನೋ – ರಜ್ಜ ದೊಡ್ಡವೇ ಕಡೆಂಗೆ! ಉಮ್ಮ!!
~

ಈಗ ಮದಲಾಣ ಹಾಂಗೆ ಎಂತೂ ತೊಂದರೆ ಇಲ್ಲೆ ಅವಕ್ಕೆ, ಪೈಸಕ್ಕೆ.. ಕೈಲಿ ದಾರಾಳ ಇದ್ದು.
ಮತ್ತೆ, ನೇಮುವಿಂಗೆ ಒಂದು ಸಣ್ಣ ಒಯಿವಾಟು ಇದ್ದಲ್ಲದೋ – ಮೋರಿ ರಿಪೇರಿ ಮಾಡ್ತ ನಮುನೆದು ಕಂತ್ರಾಟುಗೊ – ಹಾಂಗಾಗಿ ಒಳ್ಳೆ ಪೈಸೆ ತಿರುಗುತ್ತು ಅದರ ಕೈಲಿ.
ಈ ನೇಮುವಿನ ಮಗಳು ಹತ್ತರತ್ತರೆ ಪೇಟೆ ಕೂಸುಗಳ ಹಾಂಗೆಯೇ ಬೆಳದ್ದು. ಬಾರೀ ಕೊಂಗಾಟಲ್ಲಿ. ಕಾಂಬಲೂ ಹಾಂಗೆಯೇ, ತೀರಾ ಕಪ್ಪಲ್ಲ.
ಇಪ್ಪದು ಅದೇ ಹಳೆ ಮನೆಲಿ ಆದರೂ, ಬೇಕಾದ ಎಲ್ಲಾ ಸೌಕರ್ಯ ಇದ್ದು. ಸಣ್ಣ ಇಪ್ಪಗಂದಲೇ ಆ ಕೂಸಿಂಗೆ ನಮ್ಮೋರ ಒಡನಾಟ – ನವಜೀವನಲ್ಲಿ!
ಹಾಂಗಾಗಿ ಶಾಲೆ ಕಲಿತ್ತದರ ಎಡಕ್ಕಿಲಿ ಪಟ್ಯೇತರ ಚಟುವಟಿಕೆಗೂ ಆಸಕ್ತಿ ಬಂತು. ಅದೆಂತರ? – ಚೆಂಙಾಯಿಗೊ ಕಲಿತ್ತ ಬರತನಾಟ್ಯ!!
~

ಕಾಸ್ರೋಡಿನ ವನಜಾಕ್ಷಿಟೀಚರಿನ ಕೈಲಿ ಬರತನಾಟ್ಯ ಕಲಿವಲೆ ಸುರು ಮಾಡಿತ್ತು.
ಕಲಿವಗಳೇ ಹಾಂಗೆಡ, ಅಂಗ ವಿನ್ಯಾಸಂಗೊ, ಮುದ್ರೆಗೊ ಎಲ್ಲ ಬೇಗ ಬಕ್ಕಡ ಇದಕ್ಕೆ. ಒಟ್ಟಿಂಗೆ ಕಲಿತ್ತ ಮಕ್ಕಳಿಂದ ಮೊದಲೇ ಇದಕ್ಕೆ ಅಭ್ಯಾಸ ಅಕ್ಕಡ.
ಟೀಚರಿಂಗೆ ಇದರ ಬಾರೀ ಕೊಶಿ ಅಡ, ಕಲಿವಗ ಎಡೆಡೆಲಿ ಶಾಲೆಲಿ ಎಂತಾರು ಕಾರ್ಯಕ್ರಮಂಗಳಲ್ಲಿ ಡೇನುಸು ಮಾಡಿಗೊಂಡು ಇತ್ತಡ.
ಅಂಬಗಳೇ ಇದಕ್ಕೊಂದು ಉಜ್ವಲ ಭವಿಷ್ಯ ಇದ್ದು ಹೇಳ್ತದು ಅಲ್ಯಾಣ ಮಾಷ್ಟ್ರಕ್ಕೊ ಮನನ ಮಾಡಿತ್ತಿದ್ದವಡ.
ಈ ಕೂಸು ಡೇನ್ಸಿನ ಚೆಂದಲ್ಲಿ ಕಲ್ತು ಕಲ್ತು ಜೂನಿಯರು ಪರೀಕ್ಷೆಯ ಪ್ರಥಮ ಶ್ರೇಣಿಲಿ ಪಾಸು ಮಾಡಿತ್ತಡ!

ಕೋಟಿಯ ಪುಳ್ಳಿಯ ಪಟ ಪೇಪರಿಲಿ ಬಂದದು...!
ಕೋಟಿಯ ಪುಳ್ಳಿಯ ಪಟ ಪೇಪರಿಲಿ ಬಂದದು...!

ಈಗಳೂ ಕಲಿತ್ತಾ ಇದ್ದು, ಇನ್ನೂ ಕಲಿತ್ತು, ಕಲ್ತು ದೊಡ್ಡ ಡೇನ್ಸರು ಆವುತ್ತು, ಖಂಡಿತ!
~
ಓ ಮೊನ್ನೆ ಅಜ್ಜಕಾನ ಬಾವ ಪೇಟೆಂದ ಬಪ್ಪಗ ಕನ್ನಡ ಕಾರವಲ್ ತಂದಿತ್ತಿದ್ದ°. ಹೊತ್ತಪ್ಪಗ ಓದಲೆ ಸಿಕ್ಕಿತ್ತು, ಬಿಡುಸಿ ನೋಡಿದೆ.
ಇದೇ ಡೇನ್ಸುಕಲಿತ್ತ ಕೂಸಿನ ಪಟ ಬಂದಿತ್ತು, “ಕು|ಪಲ್ಲವಿ ಜಿಲ್ಲಾಮಟ್ಟದ ಡೇನ್ಸು ಸ್ಪರ್ಧೆಲಿ ಪಷ್ಟು” ಬಂದದರ ಬಗ್ಗೆ ನಾಕು ಗೀಟು ಬರದಿತ್ತು.
ಕೂಸು ಇದು ಅಪ್ಪೋ ಅಲ್ಲದೋ ಹೇಳಿ ಒಂದರಿ ಸಂಯ ಬಂದರೂ, ಮಾಯಿಪ್ಪಾಡಿ ನೇಮುವಿನ ಮಗಳು ಹೇಳ್ತದರ ಸ್ಪಷ್ಟವಾಗಿ ಬರದಿತ್ತು! ಕೊಶೀ ಆತು ಒಂದರಿ ಇದರ ಓದಿಕ್ಕಿ.
~

ಈ ಕೂಸಿನ ಅಜ್ಜಂದ್ರು ಅದೆಷ್ಟೋ ಒರಿಶಂದ ಬೂತ ಕಟ್ಟುವವು.
ಅವರ ಮೈಕೈ ನೃತ್ಯಕ್ಕೆ ಬೇಕಾದ ಹಾಂಗೆ ತಿರುಗುತ್ತು. ಅದುವೇ ಅವರ ಕಲೆ.
ಅವಕ್ಕೇ ಗೊಂತಿಲ್ಲದ್ದೆ ಕರಗತ ಆದ ಕಲೆ ಅದು.
ಕೈ-ಕಾಲ ಗೆಂಟಿಂಗೆ ಪೆಟ್ಟು ತಿಂದೊಂಡು ಅಜ್ಜಂದ್ರು ಕಲ್ತದಕ್ಕೆ ಈಗ ಈ ಕೂಸಿಂಗೆ ಬರತನಾಟ್ಯ ಕಲಿವಲೆ ಏನೂ ಕಷ್ಟ ಆಯಿದಿಲ್ಲೆ.
ಅದರ ನೆತ್ತರಿಲೇ ಇದ್ದು! ಅದರ ಅಜ್ಜಂದ್ರ ಪ್ರಯತ್ನ ಅದು ಅನುಬವಿಸಿಗೋಂಡು ಇದ್ದು, ಅಷ್ಟೇ.
ಅಲ್ಲದೋ?
~

ಈಗ ಕೆಲವು ಕಂಡ್ರಾಗದ್ದೋರು ಕೇಡಿಲಿ ಹೇಳ್ತವಿಲ್ಲೆಯೋ – ’ಬಟ್ಟಕ್ಕೊ ಮಹಾ ಉಶಾರಿಗೊ’ ಹೇಳಿಗೊಂಡು. ಅದು ಅಪ್ಪಾದ ವಿಶಯವೇ.
ನವಗೆ ಒಂದರಿ ಓದಿರೆ ಸಾಕು – ನೆಂಪೊಳಿತ್ತು, ಒಂದರಿ ಕಲ್ತರೆ ಮರದೇ ಹೋವುತ್ತಿಲ್ಲೆ, ನಮ್ಮ ಮಕ್ಕೊ ಕ್ಲಾಸಿಂಗೆ ಪಷ್ಟು, ಇತ್ಯಾದಿ ವಿಷಯಂಗೊ ನವಗೇ ಹೆಮ್ಮೆ ಅನುಸುತ್ತು – ಅಲ್ಲದೋ?!

ಆದರೆ, ನವಗೆ ಹಾಂಗೆ ಆದ್ದದು ನಮ್ಮಂದಾಗಿ ಅಲ್ಲ, ನಮ್ಮ ಅಜ್ಜಂದ್ರಿಂದಾಗಿ!
ಅವರ ಅನುಷ್ಟಾನದ ಪಲ ನಾವು ಉಂಡುಗೊಂಡು ಇದ್ದು ಅಷ್ಟೆ!
ನಮ್ಮ ಅಜ್ಜಂದ್ರು ನಿತ್ಯ ಸಂಧ್ಯಾವಂದನೆ ಮಾಡಿಗೊಂಡು, ನೇರ್ಪಕ್ಕೆ ಅನುಷ್ಠಾನ ಮಾಡಿ ಮನಸ್ಸಿನ ಹಿಡಿತಲ್ಲಿ ಮಡಿಕ್ಕೊಂಡು ಇತ್ತಿದ್ದವು.
ಆ ಕಟ್ಟುನಿಟ್ಟು ಜೀವನದ ಪಲ ನವಗೆ ಈಗ ಸಿಕ್ಕುತ್ತಾ ಇದ್ದು. ಅವರ ಮನಸ್ಸಿನ ಶೆಗ್ತಿ ನಮ್ಮ ನೆತ್ತರಿಲಿದೇ ಇದ್ದು.ಇಂದಿಂಗೂ ನಮ್ಮ ನೆತ್ತರಿಲಿ ಅದೇ ಅಜ್ಜಂದ್ರಕಾಲದ ಅಂಶಂಗೊ ಓಡಾಡ್ತಾ ಇರ್ತು.
ನಮ್ಮ ಮಕ್ಕಳ ಮನಸ್ಸು ಚುರುಕ್ಕು ಇದ್ದು, ಯೋಚನಾ ಶಕ್ತಿ ವಿಶೇಷ ಆಗಿದ್ದು. ಗ್ರಹಣ ಶಕ್ತಿ ಅಮೋಘವಾಗಿದ್ದು – ಹೇಳಿ ಹೊಗಳೊಗ ನಾವು ನೆಂಪು ಮಡಿಕ್ಕೊಳೆಕ್ಕು – ಇನ್ನಾಣ ತಲೆಮಾರು ಹೇಂಗಿಕ್ಕು?

ಈ ವಿಶಯಲ್ಲಿ ನಮ್ಮ ಸಾಧನೆ ಎಂತರ? ಕನಿಷ್ಠ ಅಜ್ಜಂದ್ರ ಒಂದಂಶದ ಅನುಷ್ಠಾನ, ನಿಗ್ರಹ, ನಿಷ್ಟೆ ನಮ್ಮತ್ರೆ ಇದ್ದೋ?
ಇದ್ದರಲ್ಲದೋ – ನಮ್ಮ ಪುಳ್ಳಿಯಕ್ಕೊಗೆ ಒಳಿವದು..!!

ಮದಲಿಂದಲೂ ನಿಷ್ಠೆಲಿ ಭೂತಾರಾಧನೆ ಮೂಲಕ ಧರ್ಮರಕ್ಷಣೆ ಮಾಡಿಗೊಂಡು ಬಂದ ಆ ಕೋಟಿಯ ಕುಟುಂಬ ಈಗ ಸಂಸ್ಕೃತಿ ರಕ್ಷಣೆಗೆ ತನ್ನ ಮಗಳನ್ನೇ ನಿಯುಕ್ತಿ ಮಾಡಿದ್ದು. ಆದರೆ ನಮ್ಮೋರ ಮಕ್ಕೊ ಎಲ್ಲಿದ್ದವು?
ಕೋನ್ವೆಂಟಿಲಿ ಏಬೀಸೀಡಿ ಕಲ್ತುಗೊಂಡು, ಅಲ್ಲದೊ?
ಆರೋ ಒಂದು ನಮ್ಮೋರ ಕೂಸು ಎಂತದೋ ಮಾಡಿಗೊಂಡತ್ತು ಹೇಳಿ ದೊಡ್ಡಬಾವ ಸಮೋಸ ಕಳುಸಿಅಪ್ಪಗ ತುಂಬ ಬೇಜಾರಾತು.
ಬೇಡ ಬೇಡ ಹೇಳಿರೂ ಈ ಕೋಟಿಯ ಪುಳ್ಳಿಯ ನೆಂಪಾತು!

ಕಾಲಾಂತರಲ್ಲಿ ನಾವು ಬೇರೆ ಬೇರೆ ಉದ್ಯೋಗಂಗಳಲ್ಲಿ ಮುಳುಗಿ ಹೋದ್ದದರಿಂದಾಗಿ ನಮ್ಮ ಸೊಂತ ಕೆಲಸಂಗೊಕ್ಕೇ ಸಮೆಯ ಸಿಕ್ಕದ್ದ ಹಾಂಗಾಯಿದು. ಸಂಧ್ಯಾವಂದನೆ, ಜೆಪ, ಭಜನೆ ಇತ್ಯಾದಿಗೊಕ್ಕೆ ಪುರುಸೊತ್ತೇ ಇರ್ತಿಲ್ಲೆ.
ಉದ್ಯೋಗ ಬೇರೆ ಆದರೂ ನಮ್ಮ ಅಂತಃಶಕ್ತಿಯ ಮೂಲವ ಬಿಡ್ಳಾಗ ಅಲ್ಲದೋ?

ನಮ್ಮ ತಲೆಮಾರು ಯೋಚನೆ ಮಾಡ್ಳೆ ಒಳ್ಳೆ ಸಮಯ, ಎಂತ ಹೇಳ್ತಿ?

ಒಂದೊಪ್ಪ: ಜೆಪ ಮಾಡಿ ನಾಮ ಎಳಕ್ಕೊಂಡ್ರೆ ಆಚವು ನೆಗೆಮಾಡ್ತವಡ, ನಮ್ಮ ಅಜ್ಜಂದ್ರು ಹಾಂಗೇ ಹೆದರಿದ್ದರೆ ನಾವೆಲ್ಲಿ ಇರ್ತಿತು?cheap moncler jackets

6 thoughts on “ಕೋಟಿಯ ಪುಳ್ಳಿ ಬರತನಾಟ್ಯಲ್ಲಿ ಪಷ್ಟಡ…!

  1. With time professions are changing and different people adopting them because of education and technology. However, the moral values of our forefathers and culture of our land should not completelly givenup for unknown. Our roots always nourishes us and our society.
    Very nice writing, i come across this blog accidentally while searching by sitting in Sikkim away from Kannadanadu.

  2. ಒಪ್ಪಣ್ಣ ಬರದ ಶುದ್ದಿ ಎಲ್ಲೋರೂ ವಿಚಾರ ಮಾಡುವಂಥದ್ದೆ.. ಯಾವುದೇ ಉದ್ಯೋಗದವ° ಆದರುದೆ ನವಗೆ ಹಿರಿಯರಿಂದ ಬಂದದರ ಮರೆಯದ್ದೆ ಮುಂದುವರುಸೆಕ್ಕು..
    ಮೊದಲಿನವು ಕಟ್ಟಿದ ಪುಣ್ಯದ ಬುತ್ತಿ ಖಾಲಿ ಆವುತ್ತಾ ಇದ್ದು.. ಅದರಿಂದ ನಾವು ಖಾಲಿ ಮಾಡಿದ್ಡದೆ… ಅದರ ತುಂಬುಸಿದ್ದಿಲ್ಲೆ.. ಈಗ ನಾವು ಅದರ ತುಂಬುಲೇ ಸುರು ಮಾಡಿರೂ
    ಅದು ತುಂಬುವಾಗ ನಮ್ಮ ಪುಳ್ಳಿಯಕ್ಕಳ ಕಾಲ ಬಕ್ಕು.. ಇಲ್ಲದ್ದೆ ಅಪ್ಪದರಿಂದ ತಡವಾದರೂ ಅಕ್ಕು ಹೇಳಿದ ಹಾಂಗೆ ಇನ್ನಾದರೂ ನಮ್ಮ ಸಂಸ್ಕಾರವ ಒಳಿಶುಲೆ ನೋಡುವ°

  3. ಒಪ್ಪಣ್ಣನ ಬರವಣಿಗೆ ಒಂದು ಚಿಂತನೆಗೆ ಎಡೆ ಮಾಡಿ ಕೊಡುವದು ತುಂಬಾ ಸಂತೋಷದ ವಿಷಯ. ಎಷ್ಟೋ ಸರ್ತಿ ನವಗೆ ಒಳ್ಳೆದು ಆದರೆ “ಅಜ್ಜಿ ಪುಣ್ಯ” ಹೇಳ್ತಲ್ಲದ. ಮುಂದಾಣವಕ್ಕೆ ಹಾಂಗೆ ಹೇಳುವ ಹಾಂಗೆ ಅಯೆಕ್ಕಾದರೆ ನಾವು ಕೂಡಾ ನಮ್ಮ ರೀತಿ ರಿವಾಜುಗಳ ಉಳುಸಿ ಬೆಳಸೆಕ್ಕು ಅಲ್ಲದ. ನಮ್ಮ ಸಮಾಜ ಈ ವಿಷಯಲ್ಲಿ ಈಗಂದಳೇ ಜಾಗೃತರಾಯೆಕ್ಕು.

  4. ದೊಡ್ಡಭಾವಂಗೆ ನಮ್ಮೋರ ಮಾಣಿ, ಕೂಸುಗಳ ಬಗ್ಗೆ ಹೆಚ್ಚು ಚಿಂತೆ ಸುರು ಆಯಿದು. ಬೈಲಿನ ಮಾಣಿಯಂಗೊ ಅತ್ಲಾಗಿ ತೆಂಕ್ಲಾಗಿ ಹೋಗಿ ಎಲ್ಲೆಲ್ಲಿಂದಲೋ ಕೂಸು ತೆಕ್ಕೊಂಡು ಬಂದವು. ಜಾತಿ, ಗೋತ್ರ, ಸೂತ್ರ, ಪ್ರವರ ಒಂದೂ ಗೊಂತಿಲ್ಲೆ. ಹಾಂಗೆ ಗೋತ್ರ ಗೊಂತಿಲ್ಲದ್ದರೆ ಎಲ್ಲ ‘ಕಾಶ್ಯಪ’ ಹೇಳಿ ಲೆಕ್ಕ ಹೇಳ್ತವು ಕೆಲವು ಜನ ಬಟ್ಟಕ್ಕೊ. ಅವಕ್ಕೆ ಎಂತ ಗೊಂತು ಪಾಪ, ಇದು ಮುನ್ನಾಣುದಿನ ಮಾಣಿಯ ಕಡೆಯೋರು ಬೇರೆ ಆರಿಂಗೂ ಗೊಂತಾಗದ್ದ ಹಾಂಗೆ ಕೂಸಿನ ಅಪ್ಪಂಗೆ ಜೆನಿವಾರ ಹಾಕಿದ್ಸು ಹೇದು, ಪಾಪ…! ಅಲ್ಲ ಅವಕ್ಕೆ ಗೊಂತಿದ್ದೂ ಕಣ್ಣುಮುಚ್ಚಿ ಕೂದವೋ, ಎನ ಗೊಂತಿಲ್ಲೆ..!
    ಕೂಸುಗಳೂ ಭಾರೀ ಚಾಲಾಕಿಗೊ ಆಯಿದವು. ದುರ್ಬುದ್ದಿಗೊ ಬೇಗ ಕಲ್ತುಗೊಂಬಲೆ ಎಡಿತ್ತಿದಾ…!!

  5. ಕೋಟಿಯ ಪುಳ್ಳಿ ಪಲ್ಲವಿ ಭರತನಾಟ್ಯ ಕ್ಶೇತ್ರಲ್ಲಿ ಒಳ್ಳೆ ಹೆಸರು ಗಳಿಸಲಿ. ರಿಯಾಲಿಟಿ ಶೋ ವಿಂಗೆ ಹೋಗಿ ಬ್ರೇಕು ಹಾಕುವದು ಬೇಡ. ಲೇಖನದ ಮೂಲಕ ನಮ್ಮ ಹಿಂದಾಣ ತಲೆಮಾರಿನ ನೆಂಪು ಮಾಡಿದ್ದು ಸಂತೋಷದ ವಿಷಯ.

  6. ಕತೆಯೊಟ್ಟಿಂಗೆ ನೀತಿಯೂ ಚೆಂದಕೆ ಮೂಡಿಬಯಿಂದು, ಒಪ್ಪಣ್ಣ,
    ತುಂಬ ಖುಷಿಯಾತು.
    ನಮ್ಮ ವೃತ್ತಿ ಬೇರೆ ಆದರೂ ಪ್ರವೃತ್ತಿ ಬದಲಪ್ಪಲಾಗ, ಅಲ್ಲದ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×