Oppanna.com

ಕೊಟ್ಟಿಗೆ ಕಟ್ಟುವಗ ಒಗ್ಗಟ್ಟು ಕಂಡತ್ತು

ಬರದೋರು :   ಒಪ್ಪಣ್ಣ    on   17/08/2012    16 ಒಪ್ಪಂಗೊ

ಅಷ್ಟಮಿ ಗೌಜಿಯೋ? ಮೂಡೆ- ಕೊಟ್ಟಿಗೆ ಮಾಡಿ ತಿಂದಿರೋ?
ಕೃಷ್ಣ ಚಾಮಿ ಬಂದನೋ? ಎಲ್ಲೋರನ್ನೂ ಕೊಶಿಪಡುಸಿಕ್ಕು, ಅಲ್ಲದೋ?
ಅಷ್ಟಮಿಯ ಗವುಜಿಲೇ, ಕೊಟ್ಟಿಗೆಯ ಕೈ ಪರಿಮ್ಮಳ ಇನ್ನೂ ಹೋಯೇಕಾರೆ ಮತ್ತಾಣ ವಾರ ಬಂದೇಬಿಟ್ಟತ್ತು.ಈ ವಾರಕ್ಕೆ ಎಂತರ ಶುದ್ದಿ ಮಾತಾಡುದು?
ಹೇಂಗೂ ಕೊಟ್ಟಿಗೆ ಮಾಡ್ತರ ಬಗ್ಗೆ ಈಗ ಮಾತು ತೆಗತ್ತು ಅಪ್ಪೋ; ಈಗ ಹಲಸಿನ ಕಾಲ ಮುಗಿವಲಾತುದೇ
– ಅಂಬಗ “ಹಲಸಿನಣ್ಣು ಕೊಟ್ಟಿಗೆ” ಮಾಡ್ತ ಸಂಗತಿಯನ್ನೇ ಮಾತಾಡುವೊ°.
~

ತರವಾಡುಮನೆಲಿ ಹಲಸಿನಣ್ಣಿನ ಕೊಟ್ಟಿಗೆ ಮಾಡುಸ್ಸು ಹೇದರೆ ಅದು ಪಾತಿಅತ್ತೆಯ ಕೆಲಸ ಮಾಂತ್ರ ಅಲ್ಲ; ಎಲ್ಲೋರದ್ದುದೇ.
ಉದಿಯಪ್ಪಗಳೇ ಪಾತಿಅತ್ತೆ ನೆಂಪುಮಾಡುಗು, “ಇದಾ – ಜಾಲಿಲಿಪ್ಪದು ಹಣ್ಣಾಯಿದು, ಕೇಳಿತ್ತೋ?” ಹೇದು.
ಜಾಲಿಲಿಪ್ಪದು ಹಣ್ಣಪ್ಪದು ಬೇರೆಂತ ಇದ್ದು? ಹಲಸಿನಣ್ಣೇ ಆಯೇಕಟ್ಟೆ.
ಅಪ್ಪು; ಒಂದು ವಾರ ಮದಲೇ ಒಳ್ಳೆ ಬೆಳದ ನಾಕು ಹಲಸಿನಕಾಯಿಯ ಕೊಯಿದು ರಂಗಮಾವ° ಜಾಲಿಂಗೆ ತಂದು ಮಡಗ್ಗು.
ತೋಟಲ್ಲೇ ಹಣ್ಣಾಗಿ ಎಲಿಪ್ಪಂಜಿಯೋ ಮುಜುವೋ ಮಂಗನೋ ಎಂತಾರು ತಿಂದರೆ ಗೊಂತಾಗ; ಆದರೆ ಜಾಲಿಲೇ ಇದ್ದರೆ ಹಣ್ಣಾದ ಪರಿಮ್ಮಳ ಸುಲಾಬಕ್ಕೆ ಗೊಂತಾವುತ್ತಿದಾ.

ಕೊರವದು:
ಆ ದಿನ ಹೊತ್ತೋಪಗ ಒಂದರಿಯಾಣ ಕೆಲಸ ಎಲ್ಲ ಮುಗುದು, ರಂಗಮಾವ° ಮೆಟ್ಟುಕತ್ತಿ ತಂದು ಕೂರುಗು.
ಹಣ್ಣಾದ್ದರ “ಕೊರವಲೆ”.

ರಂಗಮಾವ° ಮಾಂತ್ರ ಕೂಪದಲ್ಲ,
ಶಾಲೆಮುಗುಶಿ ಬಂದ ವಿನು;
ಟೀವಿ ಮುಗುಶಿ ಬಂದ ವಿನುವಿನ ಅಮ್ಮ ವಿದ್ಯಕ್ಕ°,
ಅಂಗುಡಿಗೆ ಹೋಗದ್ದೆ ಮನೆಲೇ ಇದ್ದರೆ ಶಾಂಬಾವ°;
ದನಗಳ ಚಾಕ್ರಿಗೆ ಇನ್ನೂ ರಜ ಹೊತ್ತಿದ್ದು; ಹಾಂಗೆ ಒಟ್ಟಿಂಗೆ ಪಾತಿಅತ್ತೆಯೂ
– ಎಲ್ಲೋರುದೇ ರಂಗಮಾವನ ಸುತ್ತಕೆ ಕೂರುಗು.
ದಾಸುದೇ ಇಕ್ಕು ರಜ್ಜ ದೂರಲ್ಲಿ ಕೂದಂಡು.

ಒಪ್ಪಣ್ಣ ಹೊತ್ತೋಪಗ ಒಂದೊಂದರಿ ತರವಾಡುಮನೆಗೆ ಹೋದರೆ ಈ ದೃಶ್ಯ ಕಾಂಬಲಿದ್ದು; ಹಾಂಗೆ ಕಂಡರೆ ಒಪ್ಪಣ್ಣಂದೇ ಕೂಪದೇ.
ಕೂಬದೆಂತಕೆ? ರಂಗಮಾವ° ಕೊಟ್ಟದರ ತಿಂಬಲೋ? ಅಲ್ಲ.
ಆ ಕಡಿಂದ ಹಣ್ಣು ಸೊಳೆಗಳ “ಎಳಕ್ಕಲೆ” ಅಲ್ಲಿ ಎಲ್ಲೋರುದೇ ಕೂದ್ದದು.

ರಂಗಮಾವ° ಆ ದೊಡ್ಡ ಹಲಸಿನಣ್ಣಿನ ಮನಾರಕ್ಕೆ ಮೇಣತೆಗದು, ದಂಡು ತುಂಡುಸಿ ಹದಾ ಕಡಿಮಾಡಿ ಕೊಡುಗು. ಎಲ್ಲೋರಿಂಗೂ.
ಸುತ್ತ ಕೂದ ಎಲ್ಲ ಸ್ವಯಂ ಸೇವಕರಿಂಗೊ; ದಾಸುನಾಯಿಯ ಬಿಟ್ಟು.
ದಾಸು ಎಂತಕೆ ಕೂದ್ದದು? ಸೊಳೆ ತಿಂಬಲೆ, ಕಳ್ಳ°! 🙂
~

ರಂಗಮಾವ° ಕೊಟ್ಟ ಹಣ್ಣುಕಡಿಂದ ಸೊಳೆಗಳ ಎಳಕ್ಕುಸಿ ಎದುರೇ ಮಡಗಿದ ಹೆಡಗೆಗೆ ಹಾಕುಸ್ಸು ಮದಲಾಣ ಕೆಲಸ.
ರಚ್ಚೆಂದ ಬಿಡ – ಗೂಂಜಿಂದ ಬಿಡ ಹೇಳಿ ಗಟ್ಟಿಗೆ ಕೂದ ಸೊಳೆಗಳ ಎಳಕ್ಕುಸುದೇ ಹೊತ್ತು ತಿಂಬ ಕೆಲಸ ಇದಾ.
ಮನೆಯ ಎಲ್ಲೋರುದೇ ಸೇರಿರೆ ಬೇಗ ಅಕ್ಕು; ಅಲ್ಲದ್ದರೆ ರಂಗಮಾವ° ನುಸಿ ಕಚ್ಚುಸೆಂಡು ತುಂಬ ಹೊತ್ತು ಕೂರೇಕಕ್ಕು!

ಪಾತಿಅತ್ತೆಗೆ ಒಂದು ಕಡಿ ಎಳಕ್ಕುಸಿ ಅಪ್ಪಗ, ಶಾಂಬಾವಂಗೆ ಹತ್ತರತ್ತರೆ ಒಂದು ಕಡಿ ಎಳಕ್ಕುಸಿ ಅಕ್ಕು; ವಿದ್ಯಕ್ಕಂಗೆ ಅರ್ದಕಡಿ ಆವುತ್ತಷ್ಟೆ, ವಿನುವಿಂಗೆ ನಾಲ್ಕೇ ನಾಲ್ಕು ಎಳಕ್ಕುಸಿ ಆಯಿದು.
ಎಳಕ್ಕುಸಿಂಡು ಅರ್ದಲ್ಲಿಪ್ಪಗ ಬೆನ್ನಿಂಗೆ ಒಂದು ನುಸಿ ಕಚ್ಚಿದ ಕಾರಣ ಮೇಣ ಹಿಡುದ ಕೈಲಿ ಬೆನ್ನಿಂಗೆ ಬಡುದು, ಹಲಸಿನ ಹಣ್ಣಿನ ಪಸೆ ಬೆನ್ನಿಂಗೆ ಹಿಡುದು – ಒಟ್ಟು ಅಸಮಾಧಾನ ಆವುತ್ತಾ ಇರ್ತು ಅವಂಗೆ.
ಆದರೂ, ಆಸಕ್ತಿಲಿ ಕಡಿ ಎಳಕ್ಕುಸಲೆ ಬಂದು ಕೂರುಗು.

ರಪರಪನೆ ಎಲ್ಲೋರುದೇ ಸೇರಿ ಎಳಕ್ಕುಸಿದ್ದರ್ಲಿ ಕಡಿಗೊ ಎಲ್ಲವೂ ಕಾ..ಲಿ.
ಅರುಶಿನ ಬಣ್ಣದ ಹಣ್ಣಣ್ಣು ಸೊಳೆಗೊ ಹೆಡಗೆಲಿ ಇರ್ತು.
ಸೊಳೆಗಳೇ ಇಲ್ಲದ್ದ ಕಾಲಿ ರಚ್ಚೆಯ ಸಣ್ಣಸಣ್ಣಕೆ ತುಂಡುಸಿ ಒಂದು ಕರಿಹೆಡಗೆಲಿ ಹಾಕುಗು ರಂಗಮಾವ°. ಹಟ್ಟಿಲಿಪ್ಪ ಗೌರಿ-ಸುಭದ್ರೆ-ನಂದಿನಿಗೊ ಆಸೆಪಟ್ಟು ತಿಂತವು, ನಾವು ಸೊಳೆ ತಿಂದ ಹಾಂಗೆ.
ಇಂದಿರುಳೋ, ನಾಳೆಯೋ ಮಣ್ಣ ದನಗೊಕ್ಕೆ ಹಾಕುಗು.
~
ಮೆಟ್ಟುಕತ್ತಿಲಿ ಕೊರೆತ್ತ ಕಾರ್ಯ ಬೆಣಚ್ಚಿಪ್ಪಗಳೇ ಆಯೇಕು ಹೇದು ಹೊತ್ತೋಪಗಳೇ ಕೊರದ್ದು; ಇನ್ನಾಣದ್ದೇನಿದ್ದರೂ ಆದು ಹಾಕುದು, ಕೊಚ್ಚುದು – ಎಲ್ಲವೂ ಆ ಹಣ್ಣಿನ ಪರಿಷ್ಕರಣೆಗೊ.
ಇರುಳೂ ಮಾಡ್ಳಕ್ಕು.

ಮತ್ತೆ ಪುರುಸೋತಿಲಿ ಮಾಡುವೊ° ಹೇದು ಪಾತಿಅತ್ತೆ ಎದ್ದಿಕ್ಕಿ ದನಗಳ ಚಾಕ್ರಿಗೆ ಹೋಕು.
ಶಾಂಬಾವ° ಮೊಬೈಲು ಮಾತಾಡ್ಳೆ ಹೋಕು, ವಿದ್ಯಕ್ಕ° ಕೋಣೆಗೆ ಹೋಕು, ವಿನು ಟೀವಿ ಬುಡಕ್ಕೆ ಹೋಕು.
ರಂಗಮಾವ° ಮೆಟ್ಟುಕತ್ತಿಗೆ ಎಣ್ಣೆ ಕೊಟ್ಟಿಕ್ಕಿ, ಎಣ್ಣೆ ತಲಗೆ ಉದ್ದಿಗೊಂಡು ತೋಟಕ್ಕೆ ಹೋಕು – ಹಸಿಹುಲ್ಲು ತಪ್ಪಲೆ; ಒಟ್ಟಿಂಗೆ ನಾಕು ಬಾಳೆಲೆಯೂ.
ದಾಸು ರಂಗಮಾವನ ಒಟ್ಟಿಂಗೆ ಹೋಕು; ಬೀಲಲ್ಲಿ ಮಾತಾಡೆಂಡು.
~
ಮೇಣ, ಮಣ್ಣು ಇಪ್ಪ ಕೆಲಸಂಗಳ ಜಾಲಿಲೇ ಮಾಡಿರೂ, ಅದರಿಂದ ಮತ್ತಾಣ “ಮನಾರ”ದ ಕೆಲಸಂಗಳ ಮನೆ ಒಳವೇ ಮಾಡ್ಳಕ್ಕು.
ಸಾಮಾನ್ಯವಾಗಿ ಇರುಳು ಮಾಡ್ತ ಕಾರಣ ಜಾಲಿಲಿ ಆರೂ ಮಾಡ್ಳೆ ಹೋಗವು. ಹಾಂಗೆ, ಸೊಳೆ ಹೆಡಗೆಯ ಜೆಗಿಲಿಲಿ ಮಡಗ್ಗು; ಶಾಂಬಾವನೋ ರಂಗಮಾವನೋ ಮಣ್ಣ.
ಮದಲಿಂಗೆ ಪಾತಿಅತ್ತೆಗೆ ಎಡಿತ್ತರೂ, ಈಗ – ಆಚೊರಿಶ ಮೊಳಪ್ಪುಬೇನೆ ಜ್ವರ ಬಂದ ಮತ್ತೆ – ಹಾಂಗಿರ್ತ ನೇಚುತ್ತ ಕೆಲಸ ಎಲ್ಲ ಮಾಡ್ಳೆ ಹೋಪಲಿಲ್ಲೆ.
ಕಾಲಿಂಗೆ ತ್ರಾಣ ಇಲ್ಲೆ ಒಪ್ಪಣ್ಣಾ – ಹೇಳುಗು ಕೇಳಿರೆ. ಕಾಲಿಂಗಿಲ್ಲದ್ದರೂ ಅವರ ಮನಸ್ಸಿಂಗೆ ಇದ್ದನ್ನೇ, ಅಷ್ಟು ಸಾಕಾವುತ್ತು.

ಪಾತಿಅತ್ತೆಯ ಹಟ್ಟಿ ಕೆಲಸ, ಕರೆಯಾಣ, ರಂಗಮಾವ° ಹುಲ್ಲು ವಿಲೇವಾರಿಗೊ, ಶಾಂಬಾವನ ಮೊಬೈಲು ಪೋನುಗೊ ಎಲ್ಲೋರ ಗಡಿಬಿಡಿಯೂ ಮುಗುದ ಮತ್ತೆ ಮನೆಗೂಡಿಂಗೆ ಸೇರುಗು.
~

ಆವದು:

ಪಾತಿ ಅತ್ತೆಯ ಒಂದರಿಯಾಣ ಕೆಲಸ ಆದ ಮತ್ತೆ ಸೊಳೆ ಆದು ಹಾಕುತ್ತ ಕಾರ್ಯ ಸುರು.
ಆಗಾಣ ಹೆಡಗೆಲಿ ಇಪ್ಪ ರಾಶಿಂದ ಒಂದೊಂದೇ ಸೊಳೆಯ ಹೆರ್ಕಿ “ಆವದು” ಈಗಾಣ ಕೆಲಸ. ಹಲಸಿನ ಸೊಳೆಯ ಸುತ್ತಮುತ್ತ ಆವರುಸಿಪ್ಪ ಪಂಚಸಾರೆ ಗೂಂಜು ಬೇಳೆ ಹೊದುಂಕುಳು ಇತ್ಯಾದಿಗಳ ಪ್ರತ್ಯೇಕಿಸಿ -ಸೊಳೆಯ ಮಾಂತ್ರ ಆಗಿ ತೆಗವದು. ಅದರ ಅರ್ದರ್ಧ ಸಿಗುದು ಸಣ್ಣ ಹೆಡಗೆಗೋ, ಪಾತ್ರಕ್ಕೋ ಮಣ್ಣ ಹಾಕಿಂಬದು,ಒಳುದ ಕಸವಿನ ಒಂದು ತೆಗದು ಹೆಡಗೆಗೋ ಮಣ್ಣ ಹಾಕಿಗೊಂಗು.
ನಮ್ಮ ಬೈಲಿನ ಎಲ್ಲ ಮನೆಯ ಪಾತಿಅತ್ತೆಕ್ಕಳೂ ಹೀಂಗೇ ಮಾಡುಗಷ್ಟೆ.
ಆದು ಹಾಕಿದ ಹಲಸಿನ ಸೊಳೆ ಪಾಕಶಾಲೆಗೆ, ಒಳುದ ಭಾಗಂಗೊ ಗೋಶಾಲೆಗೆ.

ಒಗ್ಗಟ್ಟಿನ ಕೆಲಸಲ್ಲಿ ಅಟ್ಟಿನಳಗೆಲಿ ಅಟ್ಟಿಮಡಿಗಿ ಬೆಂದ ಕೊಟ್ಟಿಗೆ

ಪಾತಿಅತ್ತೆಯ ಪುರುಸೋತಿಲಿ ಸುರುಮಾಡಿಗೊಂಡ್ರೂ ಒಬ್ಬನ ಕೆಲಸಲ್ಲಿ ಬೇಗ ಮುಗಿಯ. ಪಾತಿಅತ್ತೆ ಇದೇ ಕೆಲಸ ಮಾಡಿಗೊಂಡು ಕೂದರೆ ಇರುಳಾಣ ಊಟ ತೆಯಾರಾಗ. ಹಾಂಗೆ ಎಲ್ಲೋರುದೇ ಬಂದು ಸೇರುಗು; ಅವರವರ ಹೊತ್ತಿಲಿ.
ಹಾಂಗಾಗಿ, ಆಗ ಮೆಟ್ಟುಕತ್ತಿ ಬುಡಲ್ಲಿ ಎಲ್ಲೋರುದೇ ಕೂದ ಹಾಂಗೆ, ಈಗ ಮತ್ತೊಂದರಿ ಎಲ್ಲೋರುದೇ ಹೆಡಗೆ ಬುಡಲ್ಲಿ ಕೂದುಗೊಂಗು. ಅಂತೇ ಮುಸುಡು ನೋಡದ್ದೆ ಕೂದುಗೊಂಬದಲ್ಲ, ಎಲ್ಲೊರುದೇ ಕೂದುಗೊಂಗು- ಎಲ್ಲೋರುದೇ ಮಾತಾಡುಗು.

ವಿನು ಅವನ ಕ್ಲಾಸಿಲಿಪ್ಪ ಕಾನಾವಣ್ಣ ಎಂತ ಮಾಡಿದ°, ಭಾಮಿನಿ ಎಂತ ಮಾಡಿತ್ತು – ಹೇಳಿ ಶುದ್ದಿ ಹೇಳುಗು. ವಿದ್ಯಕ್ಕ° ಅದರ ಕೇಳಿ ಕೊಶಿಪಡುಗು.
ಆಚಕರೆ ಅತ್ತೆ ಎಂತದೋ ಶುದ್ದಿ ಹೇಳಿದ್ದರ ಪಾತಿ ಅತ್ತೆ ಹೇಳುಗು; ರಂಗಮಾವ° ಹೂಂಕುಟ್ಟುಗು.
ಬಪ್ಪೊರಿಶ ರಬ್ಬರು ಗೆಡು ನೆಡ್ತ ಯೋಚನೆಯ ಶಾಂಬಾವ° ಹೇಳುಗು; ರಂಗಮಾವ° ಆಲೋಚನೆ ಮಾಡುಗು.
ಚಾತುರ್ಮಾಸ್ಯಕ್ಕೆ ಬೆಂಗುಳೂರಿಂಗೆ ಹೋಯೇಕು ಹೇಳುವ ಬಯಕೆಯ ರಂಗಮಾವ° ಹೇಳುಗು; ಶಾಂಬಾವ° ಆಲೋಚನೆ ಮಾಡುಗು.
ಎಲ್ಲೋರುದೇ ಅವರವರ ಭಾವನೆಯ, ಅನಿಸಿಕೆಯ ಈ ಆದು ಹಾಕುವಗ ಹೇಳುಗು – ಕೇಳುಗು.
ಆದು ಹಾಕಿದ ಮತ್ತೆ ಎಲ್ಲೋರುದೇ ಎದ್ದು, ಮಿಂದು ಪೂಜೆ ಆಗಿ ಉಂಬದು.

ಎಲ್ಲೋರಿಂಗೂ ಮಿಂದು, ನಿತ್ಯಪೂಜೆಯೂ ಅಪ್ಪಲೆ ಸುಮಾರು ಹೊತ್ತಿದ್ದಿದಾ – ಆ ಹೊತ್ತಿಲಿ ಪಾತಿಅತ್ತೆಗೆ ಅಕ್ಕಿಯೂ ಕಡದಕ್ಕು.
ಅಪ್ಪು – ಉದಿಯಪ್ಪಗಳೇ “ಜಾಲಿಲಿಪ್ಪದು ಪರಿಮ್ಮಳ ಬಪ್ಪ ಸಂಗತಿ”ಗೆ ರಂಗಮಾವ° ಒಪ್ಪಿದ ಕೂಡ್ಳೇ ಬಂದು ಪಾತಿಅತ್ತೆ ಅಕ್ಕಿಯ ನೀರಿಲಿ ಹಾಕಿದ್ದಿದ್ದವು.
ಈಗ ಅದರ ನೊಂಪಿಂಗೆ ಕಡೆತ್ತ ಕಾರ್ಯ. ಈಗೀಗ ವಿದ್ಯಕ್ಕ° ಕೆಲಸ ಅರ್ತು ಸೇರುವ ಕಾರಣ ಎಡೆಹೊತ್ತಿಲಿ ಕಡದು ಮಡಗ್ಗು – ಕಡವಕಲ್ಲಿಲಿ ಅಲ್ಲ, ಗ್ರೈಂಡರಿಲಿ. ಅದಿರಳಿ.
~
ಉಂಡಾದ ಮತ್ತೆ ಸೀತ ಒರಗುದೋ? ಅಲ್ಲ, ಮತ್ತೊಂದು ಕೆಲಸ ಇದ್ದು.
ಅದೆಂತರ?
~
ಕೊಚ್ಚುದು:

ಕೊಟ್ಟಿಗೆಗೆ ಇಡೀ ಸೊಳೆ ಹಾಕಿರೆ ಅಕ್ಕೋ? ಸೊಳೆಯ ಆದು ಹಾಕಿದ ಮತ್ತೆ ಕೊಚ್ಚೆಡದೋ?
ಉಂಡಾದ ಮತ್ತೆ ಎಂಜಲು ತೆಗದು, ಪಾತ್ರವೂ ತೊಳದ ಮತ್ತೆ “ಕೊಚ್ಚುತ್ತ” ಕಾರ್ಯ ಸುರು.
ಅಗಾಲದ ಹಾಳೆಲಿ ಸೊಳೆಯ ಹರಗಿಂಡು, ದೋಸೆ ಎಳಕ್ಕುತ್ತ ಸಟ್ಟುಗಿನ ಕೈಲಿ ಹಿಡ್ಕೊಂಡು ಬಜಬಜನೆ ಕೊಚ್ಚುಲೆ ಸುರುಮಾಡುಗು.
ಮದಲು ಪಾತಿಅತ್ತೆ ಮಾಂತ್ರ ಮಾಡಿಗೊಂಡಿದ್ದರೂ, ಈಗೀಗ ವಿದ್ಯಕ್ಕನೂ ಬಂದು ಸೇರಿಗೊಂಗು.ಅತ್ತೆ-ಸೊಸೆಯ ಮಾತುಕತೆಗೊ, ಕುಣುಕುಣುಗೊ ಎಲ್ಲ ಧಾರಾಳ ನೆಡವದು ಈ ಹೊತ್ತಿಂಗೇ.
ಎಲ್ಲ ಮನೆಲಿ ನೆಡೆತ್ತ ಹಾಂಗೆ ತರವಾಡುಮನೆಲಿಯೂ ನೆಡೆತ್ತು.

ಹಲಸಿನ ಹಣ್ಣಿನ ಕೊಚ್ಚಲು ತೆಯಾರಪ್ಪದ್ದೇ, ಕಡದ ಅಕ್ಕಿಹಿಟ್ಟನ್ನೂ, ಈಗಾಣ ಕೊಚ್ಚಲನ್ನೂ ಒಟ್ಟುಮಾಡಿ – ಸಮಾ ಬೆರುಸುಗು.
ಎಲ್ಲ ಬೆರುಸಿ ಆತು ಹೇಳುವಗಳೇ ಅತ್ತೆಸೊಸೆಯ ಕುಣುಕುಣುದೇ ಮುಗಿಗಷ್ಟೆ.
ವಿನುವಿಂಗೆ ಕಣ್ಣು ತೂಗಿ ತೂಗಿ ಒರಕ್ಕು ಎಳದು ಎಳದು ಬಪ್ಪ ಹೊತ್ತಾತು. ಹಾಂಗೆ ಮೆಲ್ಲಂಗೆ ವಿದ್ಯಕ್ಕ° ಎದ್ದು ಮಾಣಿಯ ಒರಗುಸಲೆ ಹೋಕು.
~

ಕಟ್ಟುದು
ಕೊಚ್ಚಿ ಆದ ಮತ್ತೆ ಬೇರೆಂತ ಕೆಲಸ?
ಆಗ ರಂಗಮಾವ° ತಂದ ಕಡೆಬಾಳೆಲೆಗಳ ಕೀತು ಮಾಡಿಗೊಂಡು, ಒಲೆಯ ಕೆಂಡಲ್ಲಿ ಬಾಡುಸಿ ಮನಾರಕ್ಕೆ ಉದ್ದುಗು ಪಾತಿಅತ್ತೆ.
ಕೊಚ್ಚಲಿನ ಒಂದೊಂದೇ ಸೌಟಿನಷ್ಟು ಬಾಳೆಲಗೆ ಹಾಕಿ, ಮೂಗಿಂಗೆಳೆತ್ತ ಹೊಡಿಯ ಪೇಪರಿಲಿ ಕಟ್ಟಿದ ಹಾಂಗೆ – “ಮಡುಸಿ” ಕಟ್ಟೇಕು.
ಒಂದೊಂದನ್ನೇ ಕಟ್ಟಿದ ಮತ್ತೆ ಚೆಂದಕೆ ಅಟ್ಟಿನಳಗೆಲಿ ಮಡುಗೇಕು.

ಬಾಳೆಲೆಯ ಬಾಡುಸಿಗೊಂಡಿಪ್ಪಗಳೇ – ಬಾಯಿಲಿ ಎಲೆಡಕ್ಕೆ ತುಂಬುಸಿದ ರಂಗಮಾವಂದೇ ಮೆಲ್ಲಂಗೆ ಅಡಿಗೆಕೋಣಗೆ ಎತ್ತುಗು.
ಯೇವದೋ ಒಂದು ಶುದ್ದಿಯ ಹಿಡ್ಕೊಂಡು ಮಾತಾಡ್ಳೆ ಸುರುಮಾಡಿರೆ, ಬಾಳೆಲೆಲಿ ಕೊಚ್ಚಲು-ಹಿಟ್ಟಿನ ಮಿಶ್ರಣ ಹಾಕಿ, ಚೆಂದಕೆ ಮಡುಸಿ ಮಡುಸಿ ಅಟ್ಟಿನಳಗೆಲಿ ಮಡಗುವನ್ನಾರವೂ ಶುದ್ದಿ ಮುಗಿಯ.
ರಂಗಮಾವ° ಹೇಳುಲೆ, ಪಾತಿಅತ್ತೆ ಹೂಂಕುಟ್ಳೆ.
ಉಂಡಿಕ್ಕಿ ಮಾತಾಡಿದರೆ ಒಯಿವಾಟುಗೊ ನೆಡೆತ್ತಿಲ್ಲೇಡ, ಹಾಂಗಾಗಿ ದೊಡ್ಡಮಟ್ಟಿಂದೇನೂ ಮಾತಾಡವು. ಅದಿರಳಿ.
ಎಲ್ಲವನ್ನೂ ಅಟ್ಟಿನಳಗೆಲಿ ಮಡುಸಿ ಮಡಗಿದ ಮತ್ತೆ ಒಂದರಿಯೇ ಕಿಚ್ಚು ದೊಡ್ಡಮಾಡಿಕ್ಕಿ ಪಾತಿಅತ್ತೆ ಏಳುಗು; ರಂಗಮಾವನೂ ಅಡಕ್ಕೆ ಕೆರಸಿಂಡು ಒಪಾಸು ಜೆಗಿಲಿಗೆ ಬಕ್ಕು.

ಇಪ್ಪತ್ತು ನಿಮಿಷದ ಕಿಚ್ಚಿಲಿ ಅಟ್ಟಿನಳಗೆಲಿ ಬೆಂದರೆ ಆ ದಿನದ ಕೊಟ್ಟಿಗೆ ಏರ್ಪಾಡು ಮುಗಾತು.
ನಾಳೆ ಉದಿಯಪ್ಪಗ ಸಣ್ಣ ಕಿಚ್ಚಿಲಿ ಒಂದರಿ ಬೆಶಿ ಮಾಡಿಕ್ಕಿ, ಕೊಟ್ಟಿಗೆ ತಿಂಬದೇ.
~
ಹಲಸಿನಣ್ಣಿನ ಗಡಿಮಾಡುದು, ಕಡಿಮಾಡುದು, ಎಳಕ್ಕುದು, ಆದು ಹಾಕುದು, ಕೊಚ್ಚುದು, ತುಂಬುಸುದು – ಎಲ್ಲವನ್ನೂ ಕಡಮ್ಮೆಲಿ ಇಬ್ರು ಇದ್ದುಗೊಂಡು ಮಾಡೇಕಷ್ಟೆ. ಅಪ್ಪೋ?
ಮರದಿನ ಕೊಟ್ಟಿಗೆಲಿ ತಿಂಬಲೆ ಹೇಂಗೂ ಒಟ್ಟಿಂಗೇನ್ನೆ!
~
ಅಪ್ಪಲೆ ಬರೇ ಒಂದು ಹಲಸಿನಣ್ಣು ಕೊಟ್ಟಿಗೆ ಆದರೂ, ಎಷ್ಟೆಲ್ಲ ಕೆಲಸಂಗೊ ಇದ್ದು ಅಪ್ಪೋ?!
ದೊಡ್ಡ ಮನೆಲಿ ಎಲ್ಲೋರುದೇ ಇದ್ದುಗೊಂಡು, ಎಲ್ಲೋರುದೇ ಸೇರಿರೆ ಮಾಂತ್ರ ಹೀಂಗಿರ್ತ ತಿಂಡಿಗಳ ಮಾಡ್ಳೆಡಿಗಷ್ಟೆ.
ಒಬ್ಬೊಬ್ಬನಿಂದಲೇ ಮಾಡಿಗೊಂಬಲೆ ಎಡಿಗೋ?

ಅಡಿಗೆ ಮಾಡುದರಿಂದಲೂ ಹೆಚ್ಚಿಗೆ, ಎಲ್ಲೋರುದೇ ಅತ್ತಿತ್ತೆ ಮಾತಾಡಿಗೊಂಡು ಕೆಲಸ ಹಂಚಿಗೊಳ್ತವಲ್ಲದೋ? ಅದು ಮುಖ್ಯ.
ಹಾಂಗೆ ಹಂಚಿ ಕೆಲಸ ಮಾಡಿಗೊಂಬಗ ಭಾವನೆಗಳನ್ನೂ ಹಂಚಿಗೊಳೆಕ್ಕಾವುತ್ತು.

ಉದಾಹರಣೆಗೆ ನಮ್ಮ ವಿದ್ಯಕ್ಕ°, ಈಗ ಪಾತಿಅತ್ತೆಗೆ ಮಾತಾಡ್ಳೆ ಸಿಕ್ಕುತ್ತು. ಅಲ್ಲದ್ದರೆ ಅದರ ಕೋಣೆಲಿ ಹೋಗಿ ಕೂದರೆ ಆರಿಂಗೂ ಕಾಂಬಲೆ ಸಿಕ್ಕ. ಪಾತಿಅತ್ತೆಯ ಮೃದು ಮಾತುಗೊ ಈಗೀಗ ವಿದ್ಯಕ್ಕಂಗೂ ಇಷ್ಟ ಅಪ್ಪಲೆ ಸುರು ಆಯಿದು.
ಮನೆಕೆಲಸಂಗಳಲ್ಲಿ ಸೇರೇಕು ಹೇದು ಕಾಂಬಲೆ ಸುರು ಆಯಿದು.
ಛೇ, ಇಷ್ಟು ಒಳ್ಳೆ ಅತ್ತೆಯ ಹತ್ತರೆ ಅಂದೇ ಈ ನಮುನೆ ಮಾತಾಡ್ಳೆ ಸುರು ಮಾಡೇಕಾತು ಹೇದು ವಿದ್ಯಕ್ಕಂಗೆ ಕಾಂಬಲೆ ಸುರು ಆದ್ಸು ಅದಕ್ಕೇ!
ಒಂದು ಕೊಟ್ಟಿಗೆಲಿ ಎಷ್ಟು ಶುದ್ದಿಗೊ!
~
ನಮ್ಮ ಅಡಿಗೆಗಳಲ್ಲೂ ನಮ್ಮ ಒಗ್ಗಟ್ಟು ಕಾಣೇಕು. ಎಲ್ಲೋರುದೇ ಸೇರಿ ಅಡಿಗೆ ಮಾಡೇಕು,ಎಲ್ಲೋರುದೇ ಸೇರಿ ಉಣ್ಣೇಕು, ಎಲ್ಲೋರುದೇ ಸೇರಿಗೊಂಡು ಸೌಭಾಗ್ಯ ಅನುಭವಿಸೇಕು. ಸಹ-ನಾ-ವವತು. ಅಲ್ಲದೋ?
ಮನೆ ಮನೆಯೂ ಒಗ್ಗಟ್ಟಾದರೆ ಊರೇ ಒಟ್ಟಾದ ಹಾಂಗೆ, ಅದರಿಂದಾಗಿ ಇಡೀ ದೇಶವೇ ಒಗ್ಗಟ್ಟಾದ ಹಾಂಗೆ, ಅಲ್ಲದೋ?
~
ಈಗಾಣ ಕಾಲಲ್ಲಿ ಬಪ್ಪದೆಲ್ಲ “ಒಬ್ಬಂಗಿಪ್ಪ” ಅಡಿಗೆಗೊ.
ಬೆಶಿನೀರಿಂಗೆ ಹಾಕಿ, ಕಲಸಿ ತಿನ್ನಿ – ಒಬ್ಬಂಗಿಪ್ಪ ಪೆಕೆಟಿಂಗೆ ಹತ್ರುಪಾಯಿ!
ಅಷ್ಟಪ್ಪಗ ಇನ್ನೊಬ್ಬನ ಮುಸುಡುದೇ ಕಾಣೇಕಾಗಿಲ್ಲೆ ಇದಾ. ಮತ್ತೆಲ್ಲಿಗೆ ಮಾತಾಡ್ಳೆ ಸಿಕ್ಕುದು?

ಅದಕ್ಕೇ, ಕೊಟ್ಟಿಗೆಯ ಹಾಂಗಿಪ್ಪ ದೊಡ್ಡ ತಿಂಡಿಗೊ ನಮ್ಮ ಮನೆಗಳಲ್ಲಿ ಇನ್ನೂ ಇರಳಿ.
ಮನೆ-ಮನಸ್ಸುಗಳ ಒಗ್ಗಟ್ಟಿನ ಹೆಚ್ಚಿಸಲಿ.
~
ಒಂದೊಪ್ಪ: ಕೊಟ್ಟಿಗೆಯೇ ಇರಳಿ, ಕೊಟ್ಟಗೆಯೇ ಇರಳಿ – ಜೀವನ ಒಟ್ಟಿಂಗಿರಳಿ.

16 thoughts on “ಕೊಟ್ಟಿಗೆ ಕಟ್ಟುವಗ ಒಗ್ಗಟ್ಟು ಕಂಡತ್ತು

  1. ಆಟಿ ತಿಂಗಳು ಕಳೆದಪ್ಪಗ ಆದರೂ ಒಪ್ಪಣ್ಣಂಗೆ ಹಲಸಿನ ಹಣ್ಣಿನ ಕೊಟ್ಟಿಗೆ ನೆಂಪಾತಿದಾ… 😉
    ಎಂಗಳಲ್ಲಿ ಇನ್ನುದೇ 8-10 ಹಲಸಿನ ಕಾಯಿ (ಆಟಿ ಬಕ್ಕೆ) ಬಾಕಿ ಇದ್ದು. ಹಣ್ಣಪ್ಪಗ ಅದರಷ್ಟಕ್ಕೇ ಬೀಳುತ್ತು. ನಿನ್ನೆ ಒಂದು ಹೆಕ್ಕಿಕೊಂಡು ಬೈಂದೆ. ಅಪ್ಪ ಅಮ್ಮ ಸೇರಿ ಕೊರದು, ಆಯ್ದು, ಕೊಚ್ಚಿ, ಬೇಯಿಸಿ ಮಡುಗಿದ್ದವು. ಇಂದು ಕತ್ತಲಪ್ಪಗ ಅಮ್ಮ ಕೊಟ್ಟಿಗೆ ಕಟ್ಟುಗು.

  2. ಗೊ೦ತಪ್ಪಗ ಹೊತ್ತಾತು. ಹಲಸಿನಕಾಯಿ ಮುಗಾತು.

  3. ಕೊಟ್ಟಿಗೆ ತಿಂಬಲೆ ಕೊಶಿ ಅಗ್ತು ಅಲ್ಲದ್ದೆ ಅದರ ಮಾಡುವ ಗೌಜಿಯು ಗಮ್ಮತು..ದೊಡ್ಡಭಾವ ಇಪ್ಪ ಹಲಸಿನ ಹಣ್ಣಿನ ಕೊಟ್ಟಿಗೆ ಯಾವಾಗ ಮಾಡುದು..

  4. ಎನಗೂ ಕೊಟ್ಟಿಗೆ ತಿಂದಷ್ಟೆ ಕೊಶಿ ಆತು, ಒಪ್ಪಣ್ಣನ ಶುದ್ದಿ ಓದಿ.
    {ರಂಗಮಾವ° ಮೆಟ್ಟುಕತ್ತಿಗೆ ಎಣ್ಣೆ ಕೊಟ್ಟಿಕ್ಕಿ, ಎಣ್ಣೆ ತಲಗೆ ಉದ್ದಿಗೊಂಡು ತೋಟಕ್ಕೆ ಹೋಕು….} ಇದರ ಓದಿಯಪ್ಪಗ, ಅಂದೊಂದರಿ ಸುಭಾವ ಮೆಟ್ಟುಕತ್ತಿಲಿ ಹಿಡುದ ಮೇಣವ ತೆಗೆತ್ತ ಇಕ್ಣೀಸು ಹೇಳಿಕೊಟ್ಟದು ನೆಂಪಾತಿದ ಎನಗೆ….ನೆಂಪಿದ್ದೋ.?

  5. ಹಲಸಿನ ಹಣ್ಣಿಲ್ಲಿ, ಸೊಳೆಗಳುದೇ ಒಗ್ಗಟ್ಟಿಲ್ಲಿ ಇಪ್ಪದು..!
    ಒಪ್ಪಣ್ಣಾ,
    ನಿನ್ನೆ ಹಲಸಿನ ಹಣ್ಣು ಕೊಟ್ಟಿಗೆ ತಿಂದದಷ್ಟೆ.
    ತಲೆಂಬಾಡಿ ಮರಲ್ಲಿ ಇನ್ನೂ ಒಂದು ಹಲಸಿನ ಹಣ್ಣು ಇದ್ದು ಪುಣ್ಯಕ್ಕೆ!

  6. ಕೂಡು ಸಂಸಾರದ ನೈಜ ಚಿತ್ರಣ ಲಾಯಿಕಲಿ ನಿರೂಪಣೆ ಆಯಿದು.
    ನೆಂಪುಗೊ ಹಿಂದಂಗೆ ಓಡಿತ್ತು. ಶುದ್ದಿಯ ಪ್ರತಿಯೊಂದು ವಿವರಂಗಳೂ ಕಣ್ಣ ಮುಂದೆ ಬಂದ ಹಾಂಗೆ ಆತು.
    ಕುಟುಂಬದ ಸಾಮರಸ್ಯ ಒಳಿವಲೆ ಹೀಂಗಿಪ್ಪ ಕಾರ್ಯಚಟುವಟಿಕೆಗೊ ಸಹಾಯ ಅವ್ತು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

  7. ನಮ್ಮ ಹವ್ಯಕರ ಮನೆಲಿಪ್ಪ ಒಗ್ಗಟ್ಟಿನ, ಕೊಟ್ಟಿಗೆ ಕತೆ ಮೂಲಕ ತಿಳಿಶಿದ್ದು ಭಾರೀ ಲಾಯಿಕ ಅಯಿದು.
    ಸಣ್ಣ ಇಪ್ಪಗ ಹೀಂಗೆ ಎಲ್ಲ ಒಟ್ಟು ಸೇರಿ ಮಾಡಿದ ಕೊಟ್ಟಿಗೆ, ಹಪ್ಪಳ, ಉಂಡ್ಳಕಾಳು ಇತ್ಯಾದಿ ಎಲ್ಲಾ ನೆಂಪಾತು.
    ಇನ್ನಾಣ ವಾರ ಇನ್ನೆಂತ ಶುಧ್ಧಿ ಒಪ್ಪಣ್ಣಾ?

  8. ಹಲಸಿನ ಹಣ್ಣು ಕೊರವಗ ಬೆನ್ನಿಂಗೆ ನುಸಿ ಕಚ್ಚಿ ತೊರುಸೆಕಾಗಿ ಬಂದ ಅನುಭವ ಶಾಮಣ್ಣನದ್ದು ಮಾಂತ್ರ ಅಲ್ಲ, ಎಲ್ಲೋರದ್ದು.
    ಒಪ್ಪಣ್ಣನ ಶುದ್ದಿ, ಕಡೇಣ ಒಪ್ಪ ಕೊಶಿ ಕೊಟ್ಟತ್ತು.
    ಮನೆಲಿ ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ ಎಲ್ಲವುದೆ ಬೆಳವಲೆ ಹೀಂಗಿಪ್ಪ ಕಾರ್ಯಂಗೊ ಅನುವು ಮಾಡಿ ಕೊಡುತ್ತದು ನಿಜ. ಸೇಮಗೆ ಒತ್ತುವಗ ಮನೆಯವೆಲ್ಲೋರು ಸೇರ್ಯೊಂಡರೆ ಅದರಲ್ಲಿ ಬತ್ತ ಗಮ್ಮತ್ತು ಬಲ್ಲವಂಗೇ ಗೊಂತು, ಎಂತ ಹೇಳ್ತಿ ?
    ಹಬ್ಬ, ವಿಷುವಿನ ಸಮೆಲಿ “ಪೇರೀಸು” ಚಾಕಲೇಟಿನ ಹಾಂಗಿಪ್ಪ ಉದ್ದಿನ ಕೊಟ್ಟಿಗೆಯ ಮಾಡೆಕಾರೆ, ಎಲ್ಲೋರ ಸಹಕಾರ ಬೇಕೇ ಬೇಕು.
    ಹಲಸಿನ ಹಪ್ಪಳ ತಯಾರಿಯ ವರ್ಷಾವಧಿ ಕಾರ್ಯಕ್ರಮ ನೆಡೆಕಾರು ಮನೆಯವರ ಎಲ್ಲೋರ ಸಹಯೋಗ ಇದ್ದರೇ ಚೆಂದ. ಕೂಡಿ ಬಾಳಿದರೆ ಸ್ವರ್ಗ ಸುಖ ಹೇಳುವ ನಾಣ್ಣುಡಿಯ ಒಟ್ಟಿಂಗೆ, ಕೊಟ್ಟಿಗೆ ಮಾಡುವ ವೈಭವವ ನೆಂಪು ಮಾಡಿದ ಒಪ್ಪಣ್ಣನ ಶುದ್ದಿಗೆ ಗೆ ಒಪ್ಪ ಕೊಟ್ಟ್ಶೇ ಕೊಡೆಕು.

  9. ಪಷ್ಟಾಯ್ದು ಒಪ್ಪಣ್ಣ!! ಇಲ್ಲಿ ಕೊಟ್ಟಿಗೆ ಮಾಡಿ ತಿಂಬ ಹೇಳಿ ಗ್ರೇಶಿದೆ…ಹಲಸಿನ ಹಣ್ಣೇ ಸಿಕ್ಕುತ್ತಿಲೆಡ!!!.

  10. ಅಬ್ಬಾ!!! ಕೊಟ್ಟಿಗೆ ತಿ೦ದಶ್ಟೇ ಕುಶಿ ಆತು.. ಓದಿ ಅಪ್ಪಗ ಅಮ್ಮ ಮಾಡಿಗೊ೦ಡು ಇತ್ತ ಕೊಟ್ಟಿಗೆ ನೆನಪ್ಪಾತು.ಆನು ಆವ ಕೆಲಸಕ್ಕೆ.+ ತಿ೦ಬ ಕೆಲಸಕ್ಕೆ.. ಮನೆಗಳಲ್ಲಿ ಒಗ್ಗಟ್ಟು ಬೇಕು ಹೆಳುದರ ಕೊಟ್ಟಿಗೆ ಮಾಡುದರ ರೀತಿಲಿ ಹೇಳಿದ್ದು ತು೦ಬಾ ಲಾಯಿಕಾಯಿದು.

  11. ಅದೆಲ್ಲ ಸರಿ ಒಪ್ಪಣ್ಣೋ,ಆದರೆ ಇದೇ ಶೈಲಿ ಹವ್ಯಕ ವಾರ್ತೆಲಿ ಬತ್ತಿಲ್ಲೆನ್ನೆ,ಏಕೋ?

    1. ಎನಗೂ ಈ ಸಂಶಯ ಬಂದಿತ್ತು. ಇದರ ಬಗ್ಗೆ ವಿಚಾರುಸಿದೆ ಕೂಡ. ಸ್ಥಳಾವಕಾಶದ ಕೊರತೆ ಹೇಳುವ ಕಾರಣಲ್ಲಿ, ಒಪ್ಪಣ್ಣನ ಶುದ್ದಿಗಳಲ್ಲಿ ಬಪ್ಪ, ತಮಾಷೆಗೊ, ಮಾತುಗೊ, ಉದಾಹರಣೆಗೊ ಎಲ್ಲದಕ್ಕು ಕತ್ತರಿ ಪ್ರಯೋಗ ಆವುತ್ತು. ಅಷ್ಟೆ.

  12. ಒಪ್ಪಣ್ಣನ ಒಪ್ಪ ನಮ್ಮ ಅಂದ ಕಾಲತ್ತಿಲ್ ಗೆ ಕರಕ್ಕೋಂಡು ಹೋತು. ಸಣ್ಣದಿಪ್ಪಗ ಹಲಸಿನ ಹಣ್ಣು ಕೊರವದು, ಆವದು, ಕೊಚ್ಚುದು, ಎಲ್ಲಾ ಕೆಲಸಂಗಳ ಹಂಚೋಂಬದು ಒಬ್ಬೋಬ್ಬ. ಕೊರವದರಲ್ಲಿಯೂ ಒಬ್ಬ ಕೊರೆತ್ತರೆ, ನೀನು ಕೊರೆ, ಅನು ಎಳಕ್ಕುಸುತ್ತೆ, ಅವ ಆಯಲಿ, ಮತ್ತೆ ಕೊಚ್ಚುದು ಅಜ್ಜಿಯ ಕೆಲಸ. ಅಮ್ಮಂದು ಎಂತ ಇದ್ದರೂ ಹಲಸಿನ ಹಣ್ಣಿನ ಕೊಟ್ಟಿಗೆ ಆಗದ್ದೋರಿಂಗೆ ಸೌತೆ ಕಾಯಿ ಕೊಟ್ಟಿಗೆ ಮಾಡ್ತ ಗಡಿಬಿಡಿ. ಈಗ ಎಂತ ಇದ್ದರೂ ಸವಿನೆನಪುಗೆ ಅಷ್ಟೇ. ಈ ವಾರದ ಒಪ್ಪ ಲಯಕ್ಕು ಇದ್ದತ್ತು.

  13. ಹರೇ ರಾಮ । ಕೊಟ್ಟಿಗೆ ಲಾಯಕ ಆಯ್ದು.

    ರೂಪತ್ತೆಗೆ ಕೊಟ್ಟಿಗೆ ಮೆಚ್ಚುಗೊ? ಒಂದಿನ ಕರಕ್ಕೊಂಡು ಹೋಯೇಕು ಕೊಟ್ಟಿಗೆ ಮಾಡ್ವ ದಿನ ಅಲ್ಲಿಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×