Oppanna.com

ಕೃಷ್ಣಾವತಾರದ ಒಳವೇ ದಶಾವತಾರ…!!

ಬರದೋರು :   ಒಪ್ಪಣ್ಣ    on   30/08/2013    6 ಒಪ್ಪಂಗೊ

ಅಷ್ಟಮಿ ಬಂದರೆ ಸಾಕು, ರಂಗಮಾವಂಗೆ ಮನಸ್ಸಿಲೇ ಒಂದು ಸಂಭ್ರಮ.

ತರವಾಡುಮನೆಲಿ ನಿತ್ಯವೂ ನೆಡೆತ್ತ ನಿತ್ಯಪೂಜೆಗೆ ಒಂದು ಸಣ್ಣ ಬದಲಾವಣೆ,
ಉದಿಯಪ್ಪಗಳೇ ಪಾರೆಗುಡ್ಡೆಗೆ ಹೋಗಿ, ವಿಷ್ಣುಕ್ರಾಂತಿಯ ಹುಡ್ಕಿ ತಂದು ಮಡಗ್ಗು; ಇರುಳು ಪೂಜೆಲಿ ಹೂಗಿನೊಟ್ಟಿಂಗೆ ದೇವರ ತಲಗೆ ಮಡಗ್ಗು. ನೈವೇದ್ಯದ ಹಾಲಿನ ಒಟ್ಟಿಂಗೆ ಬಾಳೆಕೀತಿಲಿ ಬೆಣ್ಣೆಯನ್ನೂ ಚಾಮಿಗೆ ತಿಂಬಲೆ ಕೊಡುಗು; ಪ್ರಸಾದ ಹೇದು ಮನೆಯ ಎಲ್ಲೋರಿಂಗೂ – ಇದೆರಡೂ ಸಿಕ್ಕುತ್ತ ನಮುನೆ ಕೊಡುಗು.
ಎಲ್ಲ – ಆ ಕೃಷ್ಣಚಾಮಿಯ ಕೊಶಿ ಮಾಡ್ಳೆ.
ಅಪ್ಪು, ಕೃಷ್ಣದೇವರ ಕೊಶಿ ಆಯೇಕಾರೆ ಪ್ರಾಯ ಯೇವದೇ ಆಗಿರೆಕು ಹೇದು ಲೆಕ್ಕ ಇಲ್ಲೆ. ಬಾಲ-ವೃದ್ಧ-ಕೌಮಾರ್ಯ-ಬ್ರಹ್ಮಚರ್ಯ-ವಾನಪ್ರಸ್ಥ – ಯಾವದೇ ಕಾಲಘಟ್ಟಲ್ಲಿ ಇರಳಿ, ಕೃಷ್ಣ ನಮ್ಮವನೇ – ಹೇದು ಅನುಸುತ್ತು. ಅದಕ್ಕೆ ಕಾರಣ ಶ್ರೀಕೃಷ್ಣನ ಅನೇಕಾವತಾರ!
~

ವಸುದೇವ-ದೇವಕಿಯರು ಅರಮನೆಂದ ಸೆರೆಮನೆಗೆ ಹೋದ ಕತೆ ಹಳತ್ತು.
ಕಂಸಮಾವನ ಅಮಾನುಷ ದರ್ಪದ ಎಡಕ್ಕಿನ ಜೀವನ. ಅಂತಲ್ಲಿಯೇ ಕುಂಞಿ ಕೃಷ್ಣ ಹುಟ್ಟಿದ್ದದು!!
ಶ್ರಾವಣ ಮಾಸ ಕೃಷ್ಣ ಪಕ್ಷಲ್ಲಿ ಶ್ರೀಕೃಷ್ಣನ ಜನನ ಆತಲ್ಲದೋ – ಅದನ್ನೇ ಕೃಷ್ಣಾಷ್ಟಮಿ – ಹೇಳ್ತದು.
ಹುಟ್ಟಿದ ದಿನಂದಲೇ ಅವಂಗೆ ಅಮ್ಮ ಒಟ್ಟಿಂಗೆ ಇಲ್ಲೆ, ಬೇರೆಲ್ಲಿಯೋ ಬೆಳದ್ದದು. ಎಲ್ಲಿ? ರಂಗಮಾವಂಗೆ ಇಡೀ ಕತೆ ಗೊಂತಿದ್ದು, ನಿಂಗೊಗೆ?
ಬೈಲಿಲಿ ಕಳುದೊರಿಶ ಆ ಬಗ್ಗೆ ನಾವು ಶುದ್ದಿ ಮಾತಾಡಿದ್ದಲ್ಲದೋ? ನೆಂಪಿಲ್ಲೆಯೋ? (https://oppanna.com/oppa/krishna-ashtami-kashta)
ಅದಿರಳಿ.

ಬಾಲಕೃಷ್ಣ:

ಕುಂಞಿಮಾಣಿ ಕೃಷ್ಣನ ಚಿತ್ರಣ ನಿತ್ಯ ಹರಿದ್ವರ್ಣ! ಬರೇ ಹೆತ್ತಬ್ಬೆ ದೇವಕಿಗೆ ಮಾಂತ್ರ ಅಲ್ಲ, ಸಾಕಬ್ಬೆ ಯಶೋದೆಗೆ ಮಾಂತ್ರ ಅಲ್ಲ, ಭೂಲೋಕದ ಎಲ್ಲಾ ಅಮ್ಮಂದ್ರಿಂಗೂ ಕೊಂಡಾಟಲ್ಲಿ ಚಿರಸ್ಥಾಯಿಯಾಗಿಪ್ಪ ಚಿತ್ರಣ.
ಕುಂಞಿ ಕೃಷ್ಣನ ತುಂಟತನ. ಅವನ ಪೋಕ್ರಿ ಕಾರ್ಯಂಗೊ ಎಲ್ಲವನ್ನುದೇ ಎಷ್ಟೆಷ್ಟೋ ಜೆನ ವರ್ಣನೆ ಮಾಡಿದ್ದವು.
ವರ್ಣಿಸಿದಷ್ಟೂ ಮುಗುದ್ದಿಲ್ಲೆ, ಇಂದಿಂಗೂ ಬೆಳೆತ್ತಾ ಇದ್ದು ವರ್ಣನೆಗೊ.
ಎಲ್ಲಿ ಒರೆಂಗೆ ಈ ಜಗತ್ತಿಲಿ ಕುಂಞಿಮಕ್ಕೊ ಇರ್ತವೋ, ಎಲ್ಲಿ ಒರೆಂಗೆ ಕುಂಞಿಮಕ್ಕೊ ಪೋಕ್ರಿಮಾಡ್ತವೋ, ಅಲ್ಲಿ ಒರೆಂಗೂ ಅಮ್ಮಂದ್ರಿಂಗೆ ಕೃಷ್ಣನ ನೆಂಪಿಕ್ಕು.
ರಂಗಮಾವಂಗೂ ಅದೇ ಅಪ್ಪದು. ಮದಲು ಶಾಂಬಾವ ಸಣ್ಣ ಇಪ್ಪಗ, ಅದರಿಂದ ಮತ್ತೆ ವಿನು ಸಣ್ಣ ಇಪ್ಪಗ – ಅವರ ಲೂಟಿಗಳ, ಅವರ ನೆಗೆಗಳ ಕಾಂಬಗ ಕುಂಞಿಕೃಷ್ಣನನ್ನೇ ಕಂಡುಗೊಂಡಿತ್ತಾಡ. ಕಾಂಬುಅಜ್ಜಿ-ಶಂಬಜ್ಜಂಗೂ ಹಾಂಗೇ, ರಂಗಮಾವನೇ ಕೃಷ್ಣ!
ಅವಕ್ಕೆ ಇವಕ್ಕೆ ಹೇದು ಅಲ್ಲ, ಎಲ್ಲೋರಿಂಗೂ ಹಾಂಗೇ!

~

ಬ್ರಹ್ಮಚಾರಿ ಕೃಷ್ಣ:

ಸೋದರಮಾವಂದ್ರು ಹೇಳಿದಕೂಡ್ಳೇ – ಎಲ್ಲೋರುದೇ ಸಾರಡಿ ಅಪ್ಪಚ್ಚಿಯ ಹಾಂಗಿರ್ತವಿಲ್ಲೆ; ಕಿಟ್ಟಮಾವನ ಹಾಂಗೂ ಇರ್ತವಿಲ್ಲೆ!
ಕೆಲವು ಜೆನ ಕರಿಮುಸುಂಟಂಗಳೂ, ಉರಿಮುಸುಂಟಂಗಳೂ ಇರ್ತವು!
ನಮ್ಮ ಕಂಸನೂ ಹಾಂಗೇ ಇದಾ. ಕೃಷ್ಣನ ಸೋದರ ಮಾವ ಆದರೂ ಕೃಷ್ಣನ ಕಂಡ್ರೇ ಆಗ.
ಎಂತಗೆ? ಕೃಷ್ಣನಿಂದಾಗಿಯೇ ಅವನ ಸಾವು – ಹೇಳ್ತದು ಅವಂಗೆ ಗೊಂತಿತ್ತಿದಾ.
ಕೃಷ್ಣ ಹುಟ್ಳೇ ಆಗ ಹೇಳಿ ಇದ್ದತ್ತು, ಆದರೂ – ಅರಾಡಿಯದ್ದೆ ಇಷ್ಟು ಸಮಯ ಬೆಳದೂ ಆತು.
ಅದೊಂದು ದಿನ ಕಂಸ-ಕೃಷ್ಣ+ಬಲರಾಮರ ಯುದ್ಧ ನೆಡದೇ ಹೋತು.
ಲೋಕಕಂಟಕ ಕಂಸಂಗೆ ಒಂದು ಗೆತಿ ಕಾಣ್ಸಿಯೂ ಆತು.

ಬಾಲ್ಯಲ್ಲೇ ಇಷ್ಟೊಂದು ಲೋಕೋಪಕಾರಿ ಕಾರ್ಯ ಮಾಡಿದ ಕೃಷ್ಣನ ಎಲ್ಲೋರಿಂಗೂ ಕೊಶಿ ಆಗದ್ದೆ ಇಕ್ಕೋ?
ತನ್ನ ಮಕ್ಕಳೂ ಕೃಷ್ಣನ ಹಾಂಗೆ ಧೈರ್ಯ, ಬಲಶಾಲಿ ಆಗಿದ್ದುಗೊಂಡು ಲೋಕೋಪಕಾರಿ ಆಯೇಕು ಹೇದೇ ಗ್ರೇಶಿಸ್ಸು ಅಲ್ಲದೋ ಎಲ್ಲಾ ಅಬ್ಬೆಪ್ಪ?!

~

ಯೌವನ ಕೃಷ್ಣ:

ಬ್ರಹ್ಮಚಾರಿ – ಅವಿವಾಹಿತ ಹೇಳ್ತ ಎರಡು ವಿತ್ಯಾಸ ಬೈಲಿಲಿ ಎಲ್ಲೋರಿಂಗೂ ಅರಡಿಗು ಇದಾ! ಅದಿರಳಿ.
ಪ್ರಾಯ ಬೆಳದ ಹಾಂಗೆ ಲೂಟಿಯೂ ಬೆಳೆತ್ತು ಹೇದು ಮಾಷ್ಟ್ರುಮಾವ ಹೇಳುಲಿದ್ದು. ಕೃಷ್ಣಂದುದೇ ಹಾಂಗೇ – ಅವ ಬೆಳದನೋ, ಅವನೊಟ್ಟಿಂಗೇ ಅವನ ಲೂಟಿಗಳೂ ಬೆಳದತ್ತು. ಬೆಳವು ಮಾಡ್ಳೆ ಸುರುಮಾಡಿದ. ಗೋಪಿಕೆಯರ ಒಟ್ಟಿಂಗೆ ಡೇನ್ಸು ಮಾಡ್ಳೆ ಸುರುಮಾಡಿದ. ಅಂತೇ ನೆಗೆ ಮಾಡುದಲ್ಲದ್ದೇ, ಆ ಎಲ್ಲಾ ಗೋಪಿಕೆಯರಿಂಗೂ ಒಂದು ರಕ್ಷಣೆ ಕೊಟ್ಟಿದ ಹೇಳ್ತದರನ್ನೂ ನಾವು ನೆಂಪು ಮಡಿಕ್ಕೊಳೇಕು! ಅದಿರಳಿ. ಅದೆಲ್ಲ ದೇವರಿಂಗೆ ಮಾಂತ್ರ ಎಡಿಗಾದ ಕಾರ್ಯ.

ಇದಲ್ಲದ್ದೇ – ಪ್ರೀತಿಯ ರುಕ್ಮಿಣಿ,ರಾಧೆಯರ ಒಟ್ಟಿಂಗೆ ಪ್ರೇಮಕಲಾಪ ಕಾಲಕ್ಷೇಪದ ಸನ್ನಿವೇಶ ತುಂಬಾ ಶೃಂಗಾರಪೂರಿತವಾಗಿದ್ದಲ್ಲದೋ!
ರಂಗಮಾವಂಗೆ ಪಾತಿಅತ್ತೆ ಮನೆತುಂಬಿದ ಹೊಸತ್ತರಲ್ಲಿ ಆ ಮನದನ್ನೆ ರಾಧೆಯರಾಗಿರೇಕು ಹೇದು ಅನುಸಿಗೊಂಡಿತ್ತಾಡ. ಪಾತಿಅತ್ತೆಗೆ ಮನದನ್ನ ಕೃಷ್ಣ ಆಗಿರೇಕು ಹೇದು ಕಂಡುಗೊಂಡಿತ್ತೋ ಏನೋ! ಉಮ್ಮಪ್ಪ, ನವಗರಡಿಯ! 😉

~

ಗುರುಗಳ ಬೈಲಿಲಿ ಕಂಡ ಕುಂಞಿ ಕೃಷ್ಣ
ಗುರುಗಳ ಬೈಲಿಲಿ ಕಂಡ ಕುಂಞಿ ಕೃಷ್ಣ

ಕುರುಕ್ಷೇತ್ರ:
ಕುಶಾಲಿನ ಕಾಲ ಮುಗುತ್ತು; ಗಂಭೀರತೆಯ ಸಮಯ ಬಂತು.
ಕೃಷ್ಣನ ಕಾಲದ ಮಹಾನ್ ಯುದ್ಧ ಆದ್ಸು ಯೇವದು? ಮಹಾಭಾರತ.
ಅದರ್ಲಿ ಕೃಷ್ಣ ಕತ್ತಿ-ಕೋಲು-ಗದೆ-ಬಿಲ್ಲು ಹಿಡ್ದನೋ? ಇಲ್ಲೆ!!
ದೈಹಿಕವಾಗಿ ಯೇವದೇ ವಿಚಾರಲ್ಲಿಯೂ ತೊಡಗುಸಿಗೊಳ್ಳದ್ದೆ, ಧರ್ಮ ವಿಜಯ ಅಪ್ಪಲೆ ಪ್ರತ್ಯಕ್ಷ-ಪರೋಕ್ಷ ಕಾರಣ ಆದ ಕೃಷ್ಣನ ಬಗ್ಗೆ ಆರಿಂಗೆ ಗೊಂತಿಲ್ಲದ್ದು?!

ಸಂಧಾನಗಾರನಾಗಿ ಎರಡೂ ಕಡೆಯೋರ ಸೇರ್ಸಿ ಮಾತುಕತೆ ಮಾಡ್ಳೆ ಹೆರಟದು ಒಂದು ಕತೆ.
ಸಂಧಾನ ಮಾಡೆಕ್ಕಾರೆ ಎಷ್ಟು ಚಾಣಾಕ್ಷತೆ, ಗಾಂಭೀರ್ಯತೆ, ಬುದ್ಧಿವಂತಿಗೆ ಇರೆಕ್ಕು ಹೇದು ಅರಡಿಗನ್ನೇ!
ಅದು ಎಡಿಯದ್ದೆ, ಜಾತಕಲ್ಲಿ ಸೇರಿಬಾರದ್ದೆ ಬಿದ್ದು ಹೋದ್ಸು ಇನ್ನೊಂದು ಕತೆ. ಅದಿರಳಿ.

ಮುಂದೆ ನೆಡದ ಯುದ್ಧದ ಇಡೀ ಧರ್ಮರಾಯನ ಕಡೆ ಇದ್ದುಗೊಂಡು, ಅತ್ಯುಪಾಯಂದ ಪಾಂಡವರ ಗೆಲ್ಲುಸಿ ಕೊಟ್ಟದು ಸುಲಭವೋ? ಸಹಸ್ರಾರು ರಾಜರ, ಅವರ ಸೈನ್ಯದ ಸಹಕಾರ ಇದ್ದಿದ್ದ ದುರ್ಯೋಧನಂಗೆ ಗೆಲ್ಲಲೆ ಎಡಿಗಾಗದ್ದು ಪಾಂಡವರ ಕಡೆ ಇದ್ದ ಕೃಷ್ಣನಿಂದಾಗಿಯೇ ಅಲ್ಲದೋ?
ಅದಕ್ಕೇ, ಈಗಳೂ – ಆರಾರು ತುಂಬಾ ಚಾಣಾಕ್ಷ, ತುಂಬಾ ಬುದ್ಧಿವಂತಿಗೆ ತೋರ್ಸಿರೆ “ಕೃಷ್ಣ” ಹೇಳ್ತವು.
ರಂಗಮಾವಂಗೆ – ಶಾಂಬಾವನೂ ತುಂಬಾ ಉಶಾರಿ ಆಯೇಕು – ಹೇಳ್ತದು ಮನಸ್ಸಿಂಗೆ ಬಪ್ಪದಿದಾ!

~

ನಿತ್ಯ ಜೀವನಲ್ಲಿ ತುಂಬಾ ಸಾತ್ವಿಕವಾಗಿದ್ದರೆ “ರಾಮ” ಹೇಳ್ತವು. ರಜಾ ತುಂಟತನ, ಚಾಣಾಕ್ಷತೆ ಇದ್ದರೆ ಕೃಷ್ಣ ಹೇಳ್ತವು.
ಲೆಕ್ಕಪತ್ರ ಬರವಗಳೂ – ರಾಮ ಲೆಕ್ಕ, ಕೃಷ್ಣ ಲೆಕ್ಕ ಹೇದು ಎರಡಿದ್ದಾಡ, ಬೊಳುಂಬು ಮಾವನ ಹತ್ತರೆ ಸುಭಗಣ್ಣ ವಿವರ್ಸಿಗೊಂಡು ಇತ್ತಿದ್ದವು ಓ ಮೊನ್ನೆ. 😉
ಕೆಲವು ಸರ್ತಿ ರಾಮತ್ವಂದಲೂ ಕೃಷ್ಣತ್ವ ಹೆಚ್ಚು ಉಪಯೋಗಕ್ಕೆ ಬಪ್ಪದು.  ಅದಿರಳಿ.
ಯೇವಯೇವ ಬುದ್ಧಿಯ ಎಲ್ಲೆಲ್ಲಿ ಹೇಂಗೇಂಗೆ ಉಪಯೋಗುಸೇಕು ಹೇಳ್ತರ ನವಗೆ ಕೃಷ್ಣನ ಚಾಕಚಕ್ಯತೆಂದ ಅರಡಿತ್ತು.
ಎಲ್ಲಾ ಅಪ್ಪಮ್ಮಂದ್ರಿಂಗೆ, ಎಲ್ಲಾ ಬ್ರಹ್ಮಚಾರಿಗೊಕ್ಕೆ, ಎಲ್ಲಾ ಯುಕ್ತ, ಯೋಗ್ಯ ಜೆನಂಗೊಕ್ಕೆ ಕಲಿಯಲೆ ಪಾಠ ಇದ್ದು, ಕೃಷ್ಣನ ಜೀವನಲ್ಲಿ.

ಅದಕ್ಕೇ ರಂಗಮಾವ ಸ್ವತಃ ಆಸಕ್ತಿಲಿ ಬೆಣ್ಣೆ ನೈವೇದ್ಯ ಮಾಡುಸ್ಸು. ಅಮ್ಮನ ಕಣ್ಣುತಪ್ಪುಸಿ ಬೆಣ್ಣೆ ಕದ್ದವಂಗೆ ನೈವೇದ್ಯ ಮಾಡ್ಳೆ ಬೆಣ್ಣೆ ತಪ್ಪಗ ಪಾತಿಅತ್ತೆಗೂ ಮನಾಸಿಲಿ ನೆಗೆ ಬಪ್ಪಲಿದ್ದು.
ಎಲ್ಲವೂ ಒಟ್ಟಾಗಿ, ಪ್ರತಿ ಮನೆಮನೆಲಿ ಕೃಷ್ಣ ಇದ್ದ, ಪ್ರತಿ ಮನಮನಲ್ಲಿ ಕೃಷ್ಣ ಇದ್ದ.
ಕೃಷ್ಣ ಇಲ್ಲದ್ದ ಲೋಕವನ್ನೇ ಗ್ರೇಶುಲೆಡಿಯ.
ಮಾಣಿ ಮಠದ ಚಾತುರ್ಮಾಸ್ಯಲ್ಲಿ ಕೃಷ್ಣನ ವೇಶ ಹಾಕಿಂಡು ಹಲವು ಗೌಜಿಯನ್ನೇ ಆಚರಣೆ ಮಾಡಿದ್ದವಾಡ.

~

ವಿಷ್ಣುವಿನ ಹತ್ತವತಾರಲ್ಲಿ ಕೃಷ್ಣಾವತಾರವೂ ಒಂದು ಹೇಳ್ತವು ತಿಳುದೋರು.
ಆದರೆ, ಈ ಒಂದೇ ಅವತಾರಲ್ಲಿ ಹತ್ತಾರು, ನೂರಾರು ಬಗೆಯ ವೆಗ್ತಿತ್ವಲ್ಲಿ ಬೆಳದು ನಿಂದು, ಜೆನಂಗೊಕ್ಕೆ ಹಲವು ಪಾಠಂಗಳ ಕಲುಶಿದ ಆ ಮಹಾ ಚೈತನ್ಯಕ್ಕೆ ಅನುದಿನವೂ ನಮಸ್ಕಾರ ಸಲ್ಲುಸೇಕಾದ್ಸು ನಮ್ಮ ಕರ್ತವ್ಯ.

ಮೊನ್ನೆ ಕಳುದ ಕೃಷ್ಣಾಷ್ಟಮಿಯ ಶುಭಹಾರೈಕೆಗೊ.

~

ಒಂದೊಪ್ಪ: ಕೃಷ್ಣನ ತಿಳಿಯದ್ದರೆ ಲೋಕವ ತಿಳಿಯಲೆಡಿಯ.

6 thoughts on “ಕೃಷ್ಣಾವತಾರದ ಒಳವೇ ದಶಾವತಾರ…!!

  1. ಕೃಷ್ಣನ ವೈವಿಧ್ಯಮಯ ವ್ಯಕ್ಥಿತ್ವದ ಶುದ್ದಿ ಲಾಯಕಿತ್ತು. ಕೃಷ್ಣ ಚಾಮಿ ಹೇಂಗಿದ್ದರೂ ನಮ್ಮವನೇ, ಸರಿಯಾದ ಮಾತು.

  2. ನಾವು ಕುಂಞಿ ಮಕ್ಕಳ ಬಾಲಕೃಷ್ಣ…, ಮುದ್ದುಕೃಷ್ಣ… ಹೇಳಿ ಎಲ್ಲಾ ಕೊಂಗಾಟ ಮಾಡ್ತು.್
    ಆದರೆ ದೊಡ್ಡ ಆದ ಮೇಲೆ ರಾಮನ ಹಾಂಗೆ ಇರ್ರೆಕ್ಕು ಹೇಳಿ ಗ್ರಹಿಸುತ್ತು 😉
    ಸುಮ್ಮನೆ ತಮಾಶೆಗೆ ಹೇಳಿದೆ ಅಷ್ಟೆ.. ಆರೂ ಬೇಜಾರ ಮಾಡೆಡಿ 🙂

  3. ಧಾರ್ಮಿಕವಾಗಿ ದೈವತ್ವಕ್ಕೇರಿದ ಶ್ರೀಕೃಷ್ಣ ಸಾಮಾಜಿಕವಾಗಿಯೂ ಜನರ ರಕ್ಷಣೆಮಾಡಿದ್ದಕ್ಕೆ ಅವನ ಹೆಂಡತಿಯರೇ ಸಾಕ್ಷಿ. ಅವಂಗೆ ೧೬೦೦೮ ಜನ ಹೆಂಡತಿಯರಡ. ಅದರಲ್ಲಿ ೧೬೦೦೦ ಜನ ನರಕಾಸುರನ ಬಂಧನಲ್ಲಿತ್ತಿದ್ದ ಹೆಮ್ಮಕ್ಕೊ. ಹೆಮ್ಮಕ್ಕೊ ಹೇಳಿದ್ದು ಎಂತಕೆ ಹೇಳಿರೆ ಅದರಲ್ಲಿ ಹೆಚ್ಚಿನವರದ್ದುದೇ ಪ್ರಾಯ ಕೃಷ್ಣಂದ ಹೆಚ್ಚಾಗಿತ್ತಡ. ನರಕಾಸುರನ ಬಂಧನಂದ ಹೆರ ಬಂದ ಹೆಮ್ಮಕ್ಕೊ ಎಲ್ಲಿಗೆ ಹೋಯೆಕ್ಕು? ರಾಕ್ಷಸನ ಮನೆಲಿ ಇತ್ತಿದ್ದವು ಹೇಳಿ ಎಲ್ಲೋರುದೆ ಅವರ ನೋಡುವ ದೃಷ್ಟಿಯೇ ಬದಲಕ್ಕು. ಪರಿಣಾಮವಾಗಿ ಈ ಸಮಾಜಲ್ಲಿ ಇಪ್ಪದಕ್ಕಿಂತ ನರಕಾಸುರನ ಬಂಧನವೇ ಎಷ್ಟೋ ಒಳ್ಲೆದಿತ್ತು ಹೇಳಿ ಕಾಂಬ ಅವಕಾಶ ಅವಕ್ಕೆ ಒದಗಿಬಕ್ಕು. ಅವರೆಲ್ಲರನ್ನೂ ಅಂಥಾ ಬಿಗಡಾಯಿಸಿದ ಪರಿಸ್ಥಿತಿಂದ ಕಾಪಾಡಿದ್ದು ಕೃಷ್ಣನೇ. ಅವರ ಮದುವೆಯಾಗಿ ಅವಕ್ಕೆಲ್ಲಾ ಶ್ರೀಕೃಷ್ಣನ ಹೆಂಡತಿ ಹೇಳುವ ನೆಲೆಯನ್ನೂ ಸ್ಥಾನವನ್ನೂ ಮಾನವನ್ನೂ ಸಮಾಜಲ್ಲಿ ಒಂದು ಬೆಲೆಯನ್ನೂ ತಂದುಕೊಟ್ಟದು ಇದೇ ಶ್ರೀಕೄಷ್ಣನೇ ಅಲ್ಲದಾ- ನಾರಿಯ ಸೀರೆ ಕದ್ದಿದ° ಹೇಳ್ತ ಅಪವಾದವ ಹೊತ್ತವನೇ ನಾರಿಯ ಮಾನವ ಕಾಪಾಡಿದವ°. ಗೋಕುಲಲ್ಲಿ ಮುರಳಿಕೃಷ್ಣನಾಗಿ ಬೆಳದವ° ಗೋಕುಲ ಬಿಡುವಾಗ ಕೊಳಲನ್ನೂ ಬಿಡ್ತ°. ಮುಂದೆ ಪಾರ್ಥಸಾರಥಿಯಾಗಿ, ಮತ್ತೆ ಅವತಾರ ಸಮಾಪ್ತಿ ಅಪ್ಪಲ್ಲಿವರೆಗೂ ಅವನ ಒಂದೊಂದು ನಡೆಗೂ ಹತ್ತುಹಲವು ಅರ್ಥ ಸಿಕ್ಕುಗು. ದೇವರೂ ಆವ್ತ°- ಆಪ್ತನೂ ಆವ್ತ°, ಅಬ್ಬೆಯೂ ಆವ್ತ°- ಮಗನೂ ಆವ್ತ°. ಒಪ್ಪಣ್ಣ, ಇಂಥಾ ಒಬ್ಬ ವ್ಯಕ್ತಿಯ ಬಗ್ಗೆ ಮಾತಾಡಿದ್ದು ತುಂಬಾ ಒಳ್ಲೆ ಶುದ್ದಿಯಾಯಿದು.

  4. ಕೃಷ್ಣಾಯ ತುಭ್ಯಂ ನಮಃ..ದಶಾವತಾರಲ್ಲಿ ಕೃಷ್ಣಾವತಾರ ಒಂದು ಆದರೆ, ಈಗ ಒಂದು ಅವತಾರಲ್ಲಿ ಹತ್ತಾರು ವ್ಯಕ್ತಿತ್ವಂಗೊ..!!!! ಕೃಷ್ಣನ ಅರಿತರೆ ಲೋಕವ ಅರಿತಂತೆಯೆ ಸರಿ..

  5. ಶುದ್ದಿ ತುಂಬ ಲಾಯಕ ಆಯ್ದು. ನಮೋ ನಮಃ, ಹರೇ ರಾಮ ।

    ಹಾಲು ಬೆಣ್ಣೆ ಮೊಸರು ಉಂಡ್ಳಕಾಳು ತಿಂದ ಕೃಷ್ಣ ಎಲ್ಯಾರು ಹೋಳಿಗೆ ತಿಂದ ಕತೆ ಇದ್ದೋ ಕೇಳ್ತ° ಅಡಿಗೆ ಸತ್ಯಣ್ಣ°!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×