ಅಂದ್ರಾಣ ವಿಜಯಡ್ಕವೂ; ಇಂದ್ರಾಣ ವಿಜಯಕರ್ನಾಟಕವೂ..!!

December 10, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಡ್ಪಲ್ತಡ್ಕ ಭಾವನ ಗುರ್ತ ಇದ್ದಲ್ಲದೋ ನಿಂಗೊಗೆ?

ನಮ್ಮದೇ ಬೈಲಿಲಿ ಇದ್ದಂಡು, ಸಂಗೀತಲ್ಲಿ ತುಂಬಾ ತೊಡಗುಸಿಗೊಂಡು, ಶೃಂಗೇರಿಲಿ ಸಂಗೀತ ಗುರುಗೊ ಆಗಿ ಇದ್ದ°!
ಧಾರಾಳ ಗೊಂತಿಪ್ಪಲೂ ಸಾಕು.
ಕುಡ್ಪಲ್ತಡ್ಕ ಮಾವನ ಅರಡಿಗೋ?
ಒಂದರಿ ಅವರ ಬಗ್ಗೆ ಗೊಂತಾಗಿದ್ದರೆ ನಿಂಗೊಗೆ ಗುರ್ತ ಮರೆಯ; ಎಂದೆಂದಿಂಗೂ ನೆಂಪೊಳಿತ್ತ ಅಭಿಮಾನ ಬಂದಿಕ್ಕುಗು.
ಬೈಲಿಲಿ ಕೆಲವು ಜೆನಕ್ಕೆ ಗೊಂತಿಪ್ಪಲೂ ಸಾಕು; ಆದರೆ ಎಲ್ಲೋರಿಂಗೂ ಅವರ ಹಿನ್ನಲೆ ಅರಡಿಯ ಇದಾ..ಈಗ ಪ್ರಸ್ತುತ ಎಲ್ಲ ಹೆರಿಯರ ಹಾಂಗೇ ಪ್ರಾಯ ಆಯಿದು; ಸಂಸಾರದಷ್ಟಕೇ ಇದ್ದವು.
ಆದರೆ, ಒಂದು ತಲೆಮಾರು ಹಿಂದೆ ಕುಡ್ಪಲ್ತಡ್ಕಮಾವ° ಅವರ ಊರಿಂಗಾಗಿ ಕೊಟ್ಟ ಕೊಡುಗೆಯೇ ಇಂದಿಂಗೆ ಅವರ ಗೌರವ ಸ್ಥಾನಲ್ಲಿ ಮಾಡಿದ್ದು.
ಆ ಸಮೆಯಲ್ಲಿ ಅವರ ಊರಿಲಿ ಆದ ಒಂದು ಸಂಕ್ರಮಣ, ಒಂದು ಕ್ರಾಂತಿ; ನಮ್ಮತ್ವವ ಒಳಿಶಲೆ ಇರ್ತ ಆ ಆಂತರ್ಯದ ಪ್ರೇರೇಪಣೆ – ಅತ್ಯಮೋಘವಾದ್ದು.
ಅದರ ಗ್ರೇಶಿರೆ ಎಂತವಂಗೂ ಒಂದರಿ ಹೆತ್ತಬ್ಬೆಯ ನೆಂಪಕ್ಕು..!
ಅದೆಂತರ?
~

ನಿದಾನಕ್ಕೆ ಚಿಹ್ನೆ ಬದಲಕ್ಕು ಹೇಳಿ ಪೆರ್ಲದಣ್ಣ ಕಾಗತಲ್ಲಿ ಬಿಡುಸಿ ತೋರುಸಿದನಡ!

ಕುಡ್ಪಲ್ತಡ್ಕ ಮಾವನ ಬಗ್ಗೆ ಹೇಳ್ತದರ ಮೊದಲು ಕುಡ್ಪಲ್ತಡ್ಕದ ಬಗ್ಗೆ ಹೇಳೆಕ್ಕಲ್ಲದೋ..
ಹಳಬ್ಬರಿಂಗೆ ಈ ಶುದ್ದಿ ಹೇಳೆಕ್ಕೂಳಿ ಇಲ್ಲೆ, ಕೇಳಿ ಗೊಂತಿಕ್ಕು!

ಚೆಂಬರ್ಪು ಅಣ್ಣನ ಹಾಂಗೆ ಅದೇ ಊರಿಂದ ಬಂದ ಈಗಾಣೋರಿಂಗೆ ಈ ಶುದ್ದಿ ಹೇಳೆಕ್ಕು ಹೇಳಿ ಇಲ್ಲೆ, ಆದರೆ ಅತ್ಲಾಗಿ ಸಂಪರ್ಕ ಇಲ್ಲದ್ದ ಒಪ್ಪಣ್ಣ ಒಪ್ಪಕ್ಕಂದ್ರಿಂಗೆ ಗೊಂತಪ್ಪಲೆ ರಜ್ಜ ಹಿಂದಾಣ ಶುದ್ದಿ ಹೇಳ್ತೆ, ಆತೋ?

ಇದು ನಿಂಗೊಗೆ ಒಪ್ಪಣ್ಣ ಹೇಳುದಾದರೂ, ಒಪ್ಪಣ್ಣಂಗೆ ಹೇಳಿದ್ದು ಕುಡ್ಪಲ್ತಡ್ಕ ಬಾವನೂ ಮಾವನೂ ಆಗಿ!
~
ಈ ಶುದ್ದಿ ಹೇಳುವಗ ಅವಕ್ಕೆ ಬಪ್ಪ ಪಿಸುರು, ರೌದ್ರ – ಅದರ ಗ್ರೇಶುವಗ ನವಗೆ ಅಭಿಮಾನ ಬಕ್ಕು!
– ವಿಟ್ಳ ಸೀಮೆಲಿ ಸಣ್ಣ ಊರು; ಒಳ್ಳೆ ಮನುಶ್ಶರ ಊರಿಂಗೆ ಬೇಕಾದ ನೆಮ್ಮದಿಯ ಬದುಕ್ಕು.
ಯಕ್ಷಗಾನ, ತಾಳಮದ್ದಳೆ, ಸಂಗೀತ – ಹೀಂಗಿರ್ತ ಶಾಸ್ತ್ರೀಯ ಮನೋರಂಜನೆಗೆ ಧಾರಾಳ ಅವಕಾಶ.
ಎಲ್ಲ ಊರಿನ ಹಾಂಗೇ ಈ ಊರಿಲಿಯೂ ಒಂದು ಬೂತಸ್ತಾನ; ಎಲ್ಲ ಬೂತಸ್ತಾನದ ಹಾಂಗೆ ಇದರ್ಲಿಯೂ ಒಂದು ಬೂತ!ಬೂತದ ಹೆಸರು ಕುಡ್ಪೋಲ್ತಾಯೆ ಹೇಳಿ. ಕುಡ್ಪೊಳು ಇಪ್ಪ ಮರಲ್ಲಿ ಮದಲಿಂಗೆ ಬನ ಇದ್ದದೋ ಏನೋ – ಉಮ್ಮಪ್ಪ!
ಮುಂದಕ್ಕೆ ಜೆನರ ಬಾಯಿಲಿ ಕುಡ್ಪೋಲ್ತಾಯಿ ಬೂತ ಹೇಳಿಯೇ ಹೆಸರು ಬಂತು.
ಬೂತದ ಹೆಸರೇ ಆ ಅಡ್ಕಕ್ಕೂ ಬಂತು – ಕುಡ್ಪೋಲ್ತಾಯಿಯ ಅಡ್ಕ – ಕುಡ್ಪಲ್ತಡ್ಕ – ಹೇಳಿಗೊಂಡು.
~
ಎಷ್ಟೋ ತಲೆಮಾರು ಆ ಊರು ಅದೇ ಹೆಸರಿಲಿ ಇತ್ತು.
ಊರು ಬೆಳದತ್ತು, ಆ ಹೆಸರುದೇ.
ಹೆಸರಾಂತ ಕಲಾವಿದರು, ಕಲಾ ಪ್ರೋತ್ಸಾಹಕರು, ಕಲಾರಾಧಕರು, ಕಲೋತ್ತಮರು, ಕುಲೋತ್ತಮರು – ಎಲ್ಲ ಬಂದವು, ಬಂದು ಹೋದವು, ಬತ್ತಾ ಇದ್ದವು.
ಊರು ಹಳತ್ತಾದರೂ, ಊರೋರು ಹಳತ್ತಾಯಿದವಿಲ್ಲೆ, ಹೊಸತನಕ್ಕೆ ಹೊಂದಿಗೊಂಡು, ಹೊಸತ್ತನ್ನೇ ಕಂಡುಗೊಂಡು ಇತ್ತಿದ್ದವು.

ಊರು ಬೆಳದ ಹಾಂಗೆ ಸವುಕರ್ಯವೂ ಬೆಳೇಕನ್ನೆ..
ಕಾಲುದಾರಿ, ಒಂಟಿಪಾಲ ಇದ್ದ ಹಾಂಗೇ ಮಾರ್ಗ, ಡಾಮರು, ಕರೆಂಟು, ಲೈಟು, ಪೋನು, ಪಂಪು, ಪೋಷ್ಟಾಪೀಸು – ಎಲ್ಲವುದೇ ಬಂತು ಆ ಕುಡ್ಪಲ್ತಡ್ಕಕ್ಕೆ.

ಒಂದೇ ಬಸ್ಸು ಇದ್ದದು ನಾಕು ಬಸ್ಸು ಬಂತು, ಸುಂದರನ ಗೂಡಂಗುಡಿಯ ಕರೆಲಿ ಇಬ್ರಾಯಿಯ ‘ಭಾರತ್ ಟ್ರೇಡರ್ಸು’ ಬಂತು.
ಈ ಬ್ಯಾರಿಗಳದ್ದು ಹೆಸರಿಂಗೆ ಮಾಂತ್ರ ಭಾರತ್ತು, ಇಂಡಿಯನ್ನು; ದೇಶಕ್ಕೆ ಬೇಕಾಗಿ ಮಾಡ್ತದು ಎಂತ್ಸೂ ಇಲ್ಲೆ. ಇಪ್ಪದು ಪೂರ ಹೆರದೇಶದ್ದೇ – ಹೇಳಿ ಗುಣಾಜೆಮಾಣಿ ಒಂದೊಂದರಿ ಪರಂಚುತ್ತ°.
ಅದಿರಳಿ,

~ಇಷ್ಟೆಲ್ಲ ಬಂದು ಊರು ರೈಸಿರೆ, ಅದರ ಲಾಭ ಪಡಕ್ಕೊಂಬ ಕಾಲಕ್ಕಪ್ಪಗ ಹೊಸಬ್ಬರುದೇ ಬತ್ತವಿದಾ.. ಇಲ್ಲಿಗೂ ಬಂದವು.\
ಅಡಕ್ಕೆ ಬಟ್ಟಕ್ಕೊ, ಕೆಲವು ಆಳುಗೊ ಮಾಂತ್ರ ಇದ್ದಿದ್ದ ಊರಿಂಗೆ ಬ್ಯಾರಿಗೊ, ಪುರ್ಬುಗೊ ಎಲ್ಲೋರುದೇ ಬಂದು ಎರ್ಕಿದವು.
ಅಷ್ಟು ಸೌಕರ್ಯ ಆದ ಊರಿಲಿ ಬದುಕ್ಕುಲುದೇ ಕೊಶಿಯೇ ಅಲ್ಲದೋ?
ಮಾರ್ಗ ಇದ್ದು ಹೇಳಿ ಆದರೆ ಆ ಮಾರ್ಗದ ಕರೆಲಿ ಪಳ್ಳಿಯೋ, ಇಂಗ್ರೋಜಿಯೋ ಎಂತಾರು ಎದ್ದೇ ಏಳುಗು.
ಹಾಂಗೆ ಇಲ್ಲಿಯೂ ಆತು;

ಮಾರ್ಗದ ಕರೆಲಿ ದೊಡಾ ಜಾಗೆ ತೆಗದು ಒಂದು ದೊಡಾ ಇಂಗ್ರೋಜಿ ಕಟ್ಟಿದವು.
ಇಂಗ್ರೋಜಿ ಹುಟ್ಟುದು, ಬೆಳೆತ್ತದು, ಮುಂದುವರಿತ್ತದು, ನುಂಗುತ್ತದು – ಈ ಶುದ್ದಿಯ ನಾವು ಮೊದಲೇ ಒಂದರಿ ಮಾತಾಡಿತ್ತು, ಗೊಂತಿದ್ದನ್ನೇ?
ಇಲ್ಲಿಯೂ ಹಾಂಗೇ, ಸಣ್ಣ ಮಟ್ಟಿಲಿ ಒಂದು ಇಂಗ್ರೋಜಿ ಸುರು ಆತು.
ಸುರುವಿಂಗೆ ಸಣ್ಣ ಇದ್ದರೂ, ಕ್ರಮೇಣ ದೊಡ್ಡ ಆವುತ್ತದು ಇಂಗ್ರೋಜಿಯ ಲಕ್ಷಣ..!
– ಇದುದೇ ದೊಡ್ಡ ಆತು.

ಇಂಗ್ರೋಜಿ ಇದ್ದರಾತೋ – ಅದರ ಕರೆಲಿ ಒಂದು ಆಸ್ಪತ್ರೆ ಕಟ್ಟಿದವು.
ಅಸ್ಪತ್ರೆ ಬಂದರೆ ಸಾಕೋ, ಏಸುವಿನ ಆಶೀರ್ವಾದಲ್ಲಿ ಪಾಪದವರ ರೋಗ ಗುಣಮಾಡಲೆ ಸುರು ಮಾಡಿದವು!
ಪೈಸೆ ಇಪ್ಪವು ಬಂದರೆ ರೋಗವ ರಜ್ಜ ಉದ್ದ ಎಳದು ಪೈಸೆಯೂ ಸಮಾಕೆ ಎಳದಿಕ್ಕುಗು, ಅದು ಬೇರೆ! ಪಾಪದವು ಹೇಳಿತ್ತುಕಂಡ್ರೆ ಬೇಗ ಗುಣ ಮಾಡಿಕ್ಕಿ ಪೈಸೆ ಕಮ್ಮಿ ತೆಕ್ಕೊಂಗು, ಮತ್ತೊಂದು ಬಸ್ಮವುದೇ ಕೊಡುಗು – ಮುಂದಕ್ಕೆ ರೋಗ ಬಪ್ಪಲಾಗ ಇದಾ!
ನಷ್ಟ ಎಂತ್ಸೂ ಇಲ್ಲೆ. ಈಚ ಹೊಡೆಲಿ ಬಿಟ್ಟದರ ಆಚ ಹೊಡೆಲಿ ಎಳೆತ್ತದು.
ಪಾಪದವು ‘ಏಸುವಿನ ಕೃಪೆ ದೊಡ್ಡದು’ ಹೇಳಿಗೊಂಡು ನಂಬುವ ಹಾಂಗೆ ಮಾಡಿತ್ತು, ಅದೊಂದು ಲಾಬ!

ನೋಡಿಗೊಂಡು ಇದ್ದ ಹಾಂಗೇ, ಎಷ್ಟೋ ಜೆನ ರೋಗಿಗೊ ಏಸುವಿನ ಲೆಕ್ಕಲ್ಲಿ ’ಗುಣ’ ಅಪ್ಪಲೆ ಸುರು ಆದವು!
ತಲೆಗೆ ಇಂತಿಷ್ಟು ಹೇಳಿ ಪುರ್ಬುಗಳ ಮಾಡಿರೆ ಅವಕ್ಕೂ ಗುಣ ಆವುತ್ತಡ ಇದಾ! 😉 :-(
ಅವಕ್ಕೆ ಗುಣ ಆದರೆ ಇನ್ನುದೇ ದೊಡ್ಡ ಇಂಗ್ರೋಜಿ ಕಟ್ಳಾವುತ್ತಲ್ಲದೋ!
ಹಾಂಗೆ ಕಟ್ಟಿರೆ ಇನ್ನೂ ದೊಡ್ಡ ಆಸ್ಪತ್ರೆ ಕಟ್ಳಕ್ಕಲ್ಲದೋ – ಹಾಂಗೆ ಸಮಾಜಸೇವೆ ಅವರ ಉದ್ದೇಶ ಆಗಿತ್ತೋ ಏನೋ! – ಹೇಳಿ ಕುಡ್ಪಲ್ತಡ್ಕಬಾವ ವೆಂಗ್ಯ ಮಾಡಿಗೊಂಡು ಹೇಳುಗು! 👿
~
ಇಂಗ್ರೋಜಿಗೆ ಆ ಊರಿನ ಕೊರಗ್ಗರನ್ನೂ ಬಪ್ಪಲೆ ಹೇಳಿದವು.
ಅಂತೇ ಬಾರದ್ದಕ್ಕೆ ಆಸೆ ಹುಟ್ಟುಸಿಗೊಂಡು ಬಪ್ಪಲೆ ಮಾಡಿದವು!
ಅದಕ್ಕೂ ಬಾರದ್ದಕ್ಕೆ ಬಲಾತ್ಕಾರ – ಬಲಪ್ರಯೋಗದ ಮೂಲಕ ಬಪ್ಪಲೆ ಮಾಡಿದವು.
ಮಾಡಿಮಾಡಿ ಅವಕ್ಕೆ ಯೇಸುವಿನ ಆಶೀರ್ವಾದ ಸಿಕ್ಕುತ್ತ ನಮುನೆ ಮಾಡಿದವು!
– ಇದಕ್ಕೆಲ್ಲ ಮೂಲಕಾರಣ ಒಂದು ಪಾದ್ರಿ ಅಡ, ಆ ಕಾಲಕ್ಕೆ.
ಪಾದ್ರಿ ಒಟ್ಟಿಂಗೆ ಪಾದ ಮಡಗುತ್ತ ಒಳುದೋರುದೇ ಇರ್ತವಿದ, ಪಟಾಲಮ್ಮುಗೊ.ಹಾಂಗೆ, ಕೆಲವು ಜೆನರ ಸಂಪರ್ಕ ಮಾಡಿ ಆ ಇಂಗ್ರೋಜಿಗೆ ಬತ್ತ ನಮುನೆ ಮಾಡಿಯೇ ಬಿಟ್ಟವು.
ಒಂದರಿ ಬಪ್ಪ ನಮುನೆ ಮಾಡಿರಾತೋ? ಪ್ರತಿ ಆಯಿತ್ಯವಾರ ಬಂದು ಆ ವಾರ ಮಾಡಿದ ತಪ್ಪುಗಳ ಒಪ್ಪೇಕಲ್ಲದೋ..
ವಾರಕ್ಕೊಂದರಿ ತಪ್ಪುಗಳ ಒಪ್ಪಿ, ಮತ್ತಾಣವಾರಕ್ಕೆ ತಪ್ಪು ಮಾಡ್ಳೆ ತೆಯಾರಾಗಿ ಹೋಪದಡ ಅವು, ಕುಡ್ಪಲ್ತಡ್ಕ ಬಾವ ನೆಗೆಮಾಡುಗು ಒಂದೊಂದರಿ.. :-)
ಹಾಂಗೆ, ಇಂಗ್ರೋಜಿಲಿ ಕೆಲಸ ಕಮ್ಮಿ ಆದಪ್ಪಗ ನರ್ಸುಗೊಕ್ಕೆ ಈ ಜೆನಂಗಳ ಬತ್ತ ನಮುನೆ ನೋಡ್ತ ಕೆಲಸ ಸಿಕ್ಕಿತ್ತು.
ಒಂದರಿ ಒತ್ತಾಯಕ್ಕೆ ಬಂದುಗೊಂಡು ಇದ್ದರೂ, ಕೆಲವು ಸರ್ತಿ ಬಾರದ್ದೆ ಕಂಡುಕಟ್ಟಿಗೊಂಡು ಇತ್ತಿದ್ದವಿದಾ, ಈಚವು!
~
ಅದಪ್ಪು, ಕೊರಗ್ಗ ಮೇರಂಗೊ ಸುರುಸುರುವಿಂಗೆ ಇಂಗ್ರೋಜಿಗೆ ಹೋಗದ್ದೆ ಕೂಪಲೆ ಕಾರಣ ಎಂತರ?
ಕುಡ್ಪೊಲ್ತಾಯಿ ಬೂತದ ಹೆದರಿಕೆ!
– ಕ್ರಮೇಣ ಈ ಸಂಗತಿಯೂ ಅವಕ್ಕೆ ಗೊಂತಪ್ಪಲೆ ಸುರು ಆತು.

ಕೆಲವು ಮನುಶ್ಶರಿಂಗೆ ಪೈಶೆಯ ಮುಂದೆ ದೈವಬಕ್ತಿಯೂ ಕಾಣದ್ದೆ ಆವುತ್ತಡ.
ಈ ವಿಶಯ ನಮ್ಮಂದ ಬೇಗ ಪಾದ್ರಿಗೊಕ್ಕೆ ಅಂದಾಜಿ ಆತೋ ಏನೋ!
ಆ ಕಾಲಲ್ಲಿ ಹೆಚ್ಚು ಹೇಳಿದರೆ ಒಂದು ರುಪಾಯಿಯ ನೋಟಿಂದ ದೊಡ್ಡ ನೋಟು ನೋಡಿರವು ಆ ಕೊರಗ್ಗಂಗೊ.
ಹಾಂಗಿಪ್ಪಗ ಹತ್ತುರುಪಾಯಿಯ ಹೊಸಾ ಗರಿಗರಿ ನೋಟುಗೊ ಕಂಡರೆ ಬಿಡುಗೊ!
ಇಂಗ್ರೋಜಿಯವಕ್ಕೆ ಇಂದು ಹತ್ರುಪಾಇ ಕರ್ಚು ಮಾಡಿರೆ, ನಾಳೆ ಹೆರಂದ ಸಾವಿರಗಟ್ಳೆಲಿ ಬಕ್ಕಡ! ಮತ್ತೆಂತಾಯೆಕ್ಕು, ಅವರ ಅಪ್ಪ ಅಡಕ್ಕೆತೋಟ ಮಾಡಿದ ಪೈಶೆ ಅಲ್ಲ ಹೇಂಗಾರುದೇ!
‘ನಿಂಗೊಗೆ ಎಂಗೊ ಸಕಾಯ ಮಾಡುತ್ತೆಯೊ°. ಎಷ್ಟು ದಿನ ಹೀಂಗೆ ಬಡತನಲ್ಲಿ ಇರ್ತಿ? ನಿಂಗೊಗೆ ಹೊಸಾ ಪ್ರಪಂಚ ತೋರುಸುತ್ತೆಯೊ°’ ಹೇಳಿ ಎಲ್ಲ ಮಂಕಡುಸಿತ್ತು ಪಾದ್ರಿ.
ನಮ್ಮ ಜನಂಗೊಕ್ಕೆ ತರ್ಕ ಅರಡಿಯ; ಅದರ ನಂಬಿ ಇಂಗ್ರೋಜಿಗೆ ಹೋಪಲೆ ಸುರು ಮಾಡಿಯೇ ಮಾಡಿದವು.
~

ಇದರೆಡಕ್ಕಿಲಿ ಎಂತಾತು ಹೇಳಿರೆ..
ಕೊರಗ್ಗಂಗಳ ಬಪ್ಪಲೆ ಮಾಡಿದ ಆ ಪಾದ್ರಿ ಸತ್ತತ್ತು!
ಎಂತದೋ ವಿಕ್ಟರು – ಹೇಳಿ ಅದರ ಹೆಸರು.
ಯೇಸುವಿನ ಆಶೀರ್ವಾದವೇ ಇಲ್ಲದ್ದ ಆ ಊರಿಲಿ ದೊಡಾ ಆಸ್ಪತ್ರೆ ಸುರು ಮಾಡಿತ್ತು!
ಆ ಊರಿನ ಪಾಪವ ತೊಳದು ಯೇಸುವಿನ ಊರು ಮಾಡ್ಳೆ ಬಯಂಕರ ಕೆಲಸಮಾಡಿದ್ದಡ ಅದು, ಹಾಂಗಾಗಿ ಆ ಊರಿಲಿ ದೊಡ್ಡ ಪವಾಡ ಪುರುಶನೇ ಆಗಿ ಹೋತದು!
ಆ ಪಾದ್ರಿ ಬದುಕ್ಕಿಪ್ಪಗ ಇದ್ದದರಿಂದಲೂ ಸತ್ತಮೇಲೆ ಅದರ ಹೆಸರು ರಟ್ಟಿ ರಟ್ಟಿ ಕೇಳುಲೆ ಸುರು ಆತು!
– ಎಲ್ಲೋರದ್ದುದೇ ಹಾಂಗೇ, ಅದಿರಳಿ!
ಕುಡ್ಪೋಲ್ತಾಯಿಯ ಪ್ರವಾಹಕ್ಕೆ ವಿರುದ್ಧ ಈಜಿ, ಆ ಊರಿನ ಉದ್ಧಾರ ಮಾಡ್ತ ಕಾರ್ಯ ಮಾಡಿದ ಆ ಜೆನಕ್ಕೆ ಒಂದು ಸಾರ್ಥಕ ಶ್ರದ್ಧಾಂಜಲಿ ಕೊಡ್ಳೆ ಅದರಿಂದ ಮತ್ತಾಣ ಪಾದ್ರಿಗೊ ಯೋಚನೆ ಮಾಡಿದವು.
ಹೇಂಗೆ?
ಆ ಊರಿಂಗೆ ಆ ಪಾದ್ರಿದೇ ಹೆಸರು ಮಡಗುದು!
~ವಿಕ್ಟರು ಹೇಳಿರೆ ಗೆಲ್ಲುತ್ತದು – ಹೇಳ್ತ ಅರ್ತ ಬತ್ತಡ; ಅಪ್ಪೋ – ಉಮ್ಮ, ಮಾಷ್ಟ್ರುಮಾವನತ್ರೆ ಕೇಳೆಕ್ಕಷ್ಟೆ.
ಹಾಂಗೆ ವಿಕ್ಟರಿಂದಾಗಿ ಉದ್ಧಾರ ಆದ ಆ ಊರಿಂಗೆ ವಿಕ್ಟರಿನ ಹೆಸರನ್ನೇ ಮಡಗುತ್ತದು ಅವರ ಮನಸ್ಸಿಲಿ ಬಂತು.
ತಲೆತಲಾಂತರದ ಕುಡ್ಪಲ್ತಡ್ಕ ಇನ್ನು ವಿಜಯಡ್ಕ ಅಪ್ಪ ಕಾಲ ಬಂತು!
~

ಅನಾದಿಕಾಲಂದ ಆ ಊರಿನ ಕಾದ ಕುಡ್ಪೊಲ್ತಾಯಿ ದೈವದ ಕೋಪಕ್ಕೆ ಕಾರಣ ಅಕ್ಕಾದ ಆ ಕ್ರಮಕ್ಕೆ ಹೆಚ್ಚಿನವು ಬೇಡ ಹೇಳಿದವಡ.
ಆದರೆ ಪೈಶೆ ಆಶಗೆ ಕೆಲವು ಜೆನ ಅಕ್ಕು ಹೇಳಿದವಡ. ಅಕ್ಕು ಹೇಳಿದ್ದರ ಮಾಂತ್ರ ಕೇಳಿಗೊಂಡು ಅವು ಮುಂದುವರುದೇ ಹೋದವಡ.
ಶಾಂತಿಯನ್ನೇ ಬಯಸುತ್ತ ಜೆನಂಗೊ ರಗಾಳಗೆ ಹೋಗದ್ದೆ ಮೌನಲ್ಲಿ ಕೂದವಡ!
ಹೊಸತ್ತು ಬಪ್ಪಗ ಹಳತ್ತರ ಮರವಲಾಗ ಅಲ್ಲದೋ, ಆದರೂ, ನೋಡಿಗೊಂಡು ಇದ್ದ ಹಾಂಗೇ ಅದರ ವಿಜಯಡ್ಕ ಮಾಡಿಬಿಟ್ಟವಡ!
~

ಅಂಬಗಾಣ ಕೆಲವು ಜವ್ವನಿಗರು ಅದರ ವಿರೋಧುಸಿದವಡ.
ಬಾಯಿ ವಿರೋಧ ಸಾಕಾಗದ್ದೆ ಜಗಳ – ಪೆಟ್ಟುಗುಟ್ಟು – ದೊಂಬಿ – ಗಲಾಟೆ ಆತಡ.
ಪೋಲೀಸು, ಕೋರ್ಟು, ವಿಚಾರಣೆ, ಒಕೀಲ – ಎಲ್ಲವುದೇ ಅವು ಹೇಳಿದ ಹಾಂಗೆ ಇತ್ತಡ.

ಜಗಳಲ್ಲಿ ನಮ್ಮವು ಕೆಲವು ಜೆನ ಒಳ ಹೋದವಡ, ಕುಡ್ಪಲ್ತಡ್ಕಮಾವನನ್ನೂ ಸೇರಿ!
ಪಾಪ, ಆ ಸಮೆಯಲ್ಲಿ ಮಾವ ತುಂಬ ಬಂಙ ಬಯಿಂದವಡ.
ಅಂಬಗ ನವಗೆ ಹತ್ತರಾಣೋರು ಕೈ ಕೊಟ್ಟದರ ಹೇಳಿರೆ ಇನ್ನೊಂದು ವಿಕಿಲೀಕು ಅಕ್ಕು ಹೇಳಿ ಪೆರ್ಲದಣ್ಣನ ಹತ್ರೆ ಹೇಳಿಗೊಂಡು ಇತ್ತಿದ್ದ° ಕುಡ್ಪಲ್ತಡ್ಕ ಬಾವಯ್ಯ!
ಉಮ್ಮ, ನವಗೆ ಅದೆಲ್ಲ ಅರಡಿಯ!

ಮಾವ° ಒಳವೇ ಇದ್ದಿದ್ದವು; ಮಾವನ ಹಾಂಗೆ ಸುಮಾರು ಜೆನ – ವಿರೋಧ ಕೊಟ್ಟೋರು.
ಹೆರ ಇದ್ದುಗೊಂಡು ವಿರೋಧ ಮಾಡಿದವರ ಹಿಡುದು ಹಿಡುದು ಬಡುದವು.

ಕೆಲವು ಜೆನಕ್ಕೆ ಪೊರ್ಬುಗೊ ಬಡುದವು, ಅವರಿಂದ ಹರಿಯದ್ದೋರಿಂಗೆ ಪೋಲೀಸುಗೊ ಬಡುದವು. :-(

ಅಂಬಗಾಣ ಕತೆ ಕೇಳಿರೆ ರೋಮ ಕುತ್ತ ಅಕ್ಕಡ!
ಹಾಂಗೆ, ಬಲಾತ್ಕಾರಲ್ಲಿ ಕುಡ್ಪಲ್ತಡ್ಕವ ವಿಜಯಡ್ಕ ಮಾಡಿಯೇ ಮಾಡಿದವು.
ಅಬ್ಬಾ, ಅವರ ಶೆಗ್ತಿಯೇ!
~ಪರಿವರ್ತನೆಗೆ ಒಂದು ತಲೆಮಾರುದೇ ಸಾಕಾವುತ್ತಡ! ಮಾಷ್ಟ್ರುಮಾವ° ಹೇಳುಗು ಕೆಲವು ಸರ್ತಿ.
ಹಾಂಗೆ, ಒಂದು ತಲೆಮಾರಿಲಿ ಕುಡ್ಪಲ್ತಡ್ಕವ ಮರದು ವಿಜಯಡ್ಕ ಹೇಳ್ತ ಎಲ್ಲ ಲಕ್ಷಣಂಗಳೂ ಕಾಣ್ತಾ ಇದ್ದಡ.
ಕೆಲವು ಜೆನ ಎರಡೂ ಹೆಸರನ್ನೂ ಹೇಳ್ತವಡ.
ಕೆಲವು ಜೆನ ಇನ್ನುದೇ ಕುಡ್ಪಲ್ತಡ್ಕ ಹೇಳಿಯೇ ಹೇಳ್ತವಡ!

ಅದೇನೇ ಇರಳಿ,
ಊರಿಂಗೆ ಬೇಕಾಗಿ, ಊರಿನ ಹೆಸರಿಂಗೆ ಬೇಕಾಗಿ ಎಷ್ಟೋ ಒರಿಶ ಜೈಲಿಲಿ ಇದ್ದುಗೊಂಡು ಊರಿನ ಸಂಘಟನೆಯ ಬಗ್ಗೆ ಗಮನ ಹರುಸಿದ ಕುಡ್ಪಲ್ತಡ್ಕಮಾವನ ಬಗ್ಗೆ ಒಪ್ಪಣ್ಣಂಗೆ ತುಂಬ ಕೊಶಿ!

ಉಳುದವರ ಹಾಂಗೆ ಊರಿನ ಕತೆ ನವಗೆಂತಕೆ, ನಮ್ಮದರ ನಾವು ನೋಡಿಗೊಂಬೊ° – ಹೇಳಿಗೊಂಡು ಕೂಯಿದವಿಲ್ಲೆನ್ನೆ!
ಅದುವೇ ನವಗೆ ಅಬಿಮಾನ!

ಒರಿಶ ಹೋದ ಹಾಂಗೆ ಹತ್ತರೆಬತ್ತಾ ಇದ್ದೋ - ವಿಜಯಡ್ಕಂಗೊ!
~ನಿನ್ನೆ ಅದು ತುಂಬಾ ನೆಂಪಾತು ಭಾವ. ಎಂತಕೆ ಹೇಳಿತ್ತುಕಂಡ್ರೆ..

ನಿನ್ನೆ ಹೊತ್ತಪ್ಪಗ ಅಕ್ಕಚ್ಚು ಕೊಟ್ಟೊಂಡಿತ್ತಿದ್ದೆ. ಅಜ್ಜಕಾನಬಾವ° ಸೂರಂಬೈಲಿಂಗೆ ಹೋವುತ್ತವ° ಜಾಲಿಲೆ ನೆಡಕ್ಕೊಂಡು ಬಂದ°.
ಇದೆಂತ ಹೊತ್ತಲ್ಲದ್ದ ಹೊತ್ತಿಂಗೆ ಪೇಟಗೆ ಹೆರಟದು ಬಾವಾ – ಕೇಳಿದೆ!
ಅಷ್ಟಪ್ಪಗ ಬೆಂಗುಳೂರಿನ ಒಂದು ಸಂಗತಿ ಹೇಳಿದ°.

– ಬೆಂಗುಳೂರಿಂದ ಪೆರ್ಲದಣ್ಣ ಪೋನು ಮಾಡಿತ್ತಿದ್ದನಡ.
ಯೇವತ್ತೂ ಅವ ಮೂರುಸಂದ್ಯೆಗೆ ಪೋನು ಮಾಡ್ತದು, ಆದರೆ ನಿನ್ನೆ ಮದ್ಯಾಂತಿರಿಗಿಯೇ ಮಾಡಿದ್ದನಡ.
ಎಂತಪ್ಪ ಅಂಬೆರ್ಪು?!
~ಕನ್ನಡ ಪೇಪರು ಅರಡಿವೋರಿಂಗೆ ವಿಜಯಕರ್ನಾಟಕವುದೇ ಅರಡಿಗು! ಅಲ್ಲದ?
ಸುಮಾರು ಹತ್ತು ಹನ್ನೆರಡು ಒರಿಶ ಹಿಂದೆ ಗಟ್ಟದ ಮೇಗಾಣ ಪಾರ್ಸೆಲುಗಾರ° ವಿಜಯಸಂಕೇಶ್ವರ° ಹೇಳ್ತ ಜೆನ ಈ ಪೇಪರು ಮಾಡಿದ್ದಡ.
ಪ್ರಿಂಟುಮಾಡ್ಳೆ ಪೈಶೆ ಆರದ್ದಾದರೂ, ಒಂದು ಪೇಪರಿನ ಬೆಳೆಶೆಕ್ಕಾದ್ದು ಸಂಪಾದಕರೇ ಅಲ್ಲದೋ?
ಕೆಲವು ಒರಿಶಲ್ಲಿ ಹಲವು ಸಂಪಾದಕರು ಬಂದು ಹೋದರೂ, ಗೋಣನ ಮೈಲಿ ಉಣುಂಗು ನಿಂದ ಹಾಂಗೆ – ಗಟ್ಟಿಗೆ ನಿಂದದು ನಮ್ಮ ವಿಶ್ವಣ್ಣ ಮಾಂತ್ರ!

ವಿಶ್ವಣ್ಣ ಆರು? – ಮೂರೂರಿನ ಹೊಡೇಣೋರಡ, ಮದಲಿಂಗೇ ಬೆಂಗ್ಳೂರು, ಇಂಗ್ಳೇಂಡು – ಎಲ್ಲ ಹೋಗಿ ಕಲ್ತಿಕ್ಕಿ ಬಂದೋರಡ.
ನಮ್ಮ ಬೈಲಿನ ವಿದ್ವಾನಣ್ಣಂಗೆ ಸರೀ ಅರಡಿಗು ಅವರ.
ಹಳೇ ಕಾಲದ, ಹಳೇ ಕ್ರಮದ ಪತ್ರಿಕೋದ್ಯಮವ ರಜ ಕರೆಂಗೆ ಮಡಗಿ, ಹೆರಾಣ ಜಗತ್ತಿಂಗೆ ಬೇಕಾದ ನಮುನೆ ಹೊಸ ಹೊಸ ವೆವಸ್ತೆಯ ಮಾಡಿಗೊಂಡು ಹೊಸ ಪತ್ರಿಕೆಯ ಜಗತ್ತಿನ ಬಿಡುಸಿ ಮಡಗಿದ ಜೆನ ಅಡ.
~

ಅಂಬಗ ಹುಟ್ಟಿ – ಹರೆತ್ತಾ ಇದ್ದಿದ್ದ ವಿಜಯಕರ್ನಾಟಕಕ್ಕೆ ಈ ವಿಶ್ವಣ್ಣ ಸಂಪಾದಕರಾಗಿ ಬಂದವು.
ಅದಾ, ಅವು ಬಂದು ಕೂದ ಕೂಡ್ಳೇ ಪ್ರಸಾರಲ್ಲಿ ಏರಿಕೆ ಕಂಡತ್ತಡ,
ಹೊಸ ಹೊಸ ’ವಿಜಯಂಗೊ’ ಬಂತಡ..
ಹರೆತ್ತಾ ಇದ್ದದು ಎದ್ದು ನಿಂಬಲೆ ಸುರು ಆತು..
ದೊಡ್ಡದೊಡ್ಡ ಜೆನರ ಹೊಸ ಹೊಸ ಅಂಕಣಂಗೊ ಬಪ್ಪಲೆ ಸುರು ಆತಡ..
ನಿಂದಿದ್ದ ಪೇಪರು ನೆಡವಲೆ ಸುರು ಆತು..

ಹೊಸ ಹೊಸ ಚರ್ಚೆಗೊ ಬಪ್ಪಲೆ ಸುರು ಆತಡ..

ನೆಡಕ್ಕೊಂಡಿದ್ದ ಪೇಪರು ಓಡಿಗೊಂಡು ಹೋಪಲೆ ಸುರು ಆತು..

ಓದುಗರ ನೇರವಾದ ಒಳಗೊಳ್ಳುವಿಕೆ ಸುರು ಆತಡ..

ಓಡ್ತ ಪೇಪರು ಹಾರಿಗೊಂಡು ಹೋಪಲೆ ಸುರು ಆತು.
ನೋಡಿಗೊಂಡು ಇಪ್ಪಗಳೇ ನಂಬರು ವನ್ (ಹಳ್ಳಿಲಿ ಹೀಂಗೆ ಹೇಳಿರೆ ನೆಗೆಮಾಡುಗು, ಅದು ಬೇರೆ!) ಆಗಿಬಿಟ್ಟತ್ತಡ ಆ ಪೇಪರು!!
~ಟೈಮ್ಸು ಆಪ್ ಇಂಡಿಯಾ – ಹೇಳ್ತ ದೊಡಾ ಪೇಪರು ಇದ್ದಡ.
ಅವಕ್ಕೆ ಈ ವಿಜಯಕರ್ನಾಟಕ ಕುಡ್ಪಲ್ತೋಯಿಯ ಹಾಂಗೆ ಉಪದ್ರ ಕೊಡ್ಳೆ ಸುರು ಆತು.
ಇದರಿಂದಾಗಿ ಜೆನಂಗೊ ಅವರ ಪೇಪರು ತೆಕ್ಕೊಂಬದರ ಕಮ್ಮಿ ಮಾಡಿದವಡ.

ಹೀಂಗೇ ಮುಂದರುದರೆ ಅವರ ಪೇಪರು ಬೆಳವಲೆ ಅವಕಾಶ ಇಲ್ಲೆ ಹೇಳಿಗೊಂಡು, ಈ ಪೇಪರಿನ ಇಡೀಕ ಕ್ರಯ ಮಾಡಿದವಡ ಅವು!

ಪೇಪರು ಮಾಡಿದ ಜೆನಕ್ಕೆ ಪೈಶೆ ಒತ್ತಾಯ ಬಂತೋ, ಎಂತಪ್ಪ – ಆ ಇಡೀ ಪೇಪರಿನ ಮಾರಿತ್ತಡ!
ಎಷ್ಟೋ ಕೋಟಿಗೆ! ನವಗರಡಿಯ. ಗುಣಾಜೆಮಾಣಿಗೆ ಗೊಂತಿದ್ದೋ ಏನೋ – ಎಷ್ಟಕ್ಕೆ ಹೇಳ್ತ ವಿಶಯ..!
~
ಮಾರಿ ಆತು, ತೆಕ್ಕೊಂಡುದೇ ಆತು.
ಮಾರಿದವನೂ, ತೆಕ್ಕೊಂಡವನೂ – ಇಬ್ರುದೇ ವಿಶ್ವಣ್ಣನೇ ಸಂಪಾದಕರಾಗಿ ಇರೆಕ್ಕು ಹೇಳಿಗೊಂಡು ಇತ್ತಿದ್ದವಡ.ಆದರೂ, ಅವು ತೆಕ್ಕೊಂಡ ದಿನಂದಲೇ ವಿಜಯಕರ್ನಾಟಕಲ್ಲಿ ಕೆಲವು ಬದಲಾವಣೆ ಕಂಡತ್ತಡ.
ಟೈಮ್ಸು ಪೇಪರಿಲಿ ಬತ್ತ ನಮುನೆ ಕೆಲವು ಬೇಡಂಗಟ್ಟೆ ಪಟಂಗೊ, ಚಿತ್ರಂಗೊ, ಅನಗತ್ಯ ಶುದ್ದಿಗೊ – ಎಲ್ಲ ಬಪ್ಪಲೆ ಸುರು ಆತಡ.
ಎಂತ ಮಾಡುದು, ಎಲ್ಲ ದೊಡ್ಡವರ ದಯೆ – ಹೇಳಿಗೊಂಡು ನಾವು ಮತ್ತುದೇ ವಿಜಯಕರ್ನಾಟಕ ಓದಿಗೊಂಡು ಇತ್ತಿದಾ!
~

ನಿನ್ನೆ ಮದ್ಯಾನ್ನ ಉಂಡಿಕ್ಕಿ ಹೊಟ್ಟೆ ಉದ್ದಿಗೊಂಡು ಕೂದ ಆ ವಿಶ್ವಣ್ಣನ ಅಲ್ಲಿಂದ ಬಿಡ್ಲೆ ಹೇಳಿದವಡ!
ಚೆಲಾ, ಈ ಬೆಶಿಲಿಂಗೆ ಎಲ್ಲಿಗೆ ಹೋಪದಿನ್ನು – ಹೇಳಿಗೊಂಡು ಕೂಯಿದವಿಲ್ಲೆ ವಿಶ್ವಣ್ಣ.
ಅವು ಹೇಳುದಕ್ಕಿಂದಲೂ ಮದಲೇ ಅಲ್ಲಿಂದ ಬಿಟ್ಟಿಕ್ಕಿ ಎದ್ದಿಕ್ಕಿ ಬಂದವಡ!

ಅಬ್ಬಾ, ಅವರ ದೈರ್ಯವೇ!

ಪೆರ್ಲದಣ್ಣ ಪೋನು ಮಾಡಿದ್ದು ಅದರ ಹೇಳುಲೇ!
~ಕರ್ನಾಟಕದ, ಕನ್ನಡದ್ದೇ ಒಂದು ಜೆನ ಹುಟ್ಟುಸಿದ ಪೇಪರು ಅದು.
ಕನ್ನಡಿಗರೇ ಬೆಳೆಶಿದ್ದು ಅದರ! ಕನ್ನಡದ ಮಾಣಿಯೇ ಒಬ್ಬ ಅದರ ಸಂಪಾದಕ!
ಸುಮಾರು ಒರಿಶಂದ ಕಟ್ಟಿ ಬೆಳೆಶಿದ ಆ ಪೇಪರಿನ, ದೊಡ್ಡ ಆದ ಮೇಲೆ ಅನುಬವಿಸುಲೆ ಆರಾರು ಬರೆಕ್ಕು! ಅಲ್ಲದೋ?
ಲಾಬ ಬಪ್ಪಲೆ ಸುರು ಅಪ್ಪಗ ಪೇಪರಿನ ಕಟ್ಟಿದವನೂ ಬೇಡ, ಬೆಳೆಶಿದವನೂ ಬೇಡ – ಅಲ್ಲದೋ?
~
ಸಂಪಾದಕರು ಬರೇ ಪೇಪರು ಬೆಳೆಶಿದ್ದಲ್ಲ, ಪೇಪರಿನ ಒಟ್ಟಿಂಗೆ ತಾನೂ ಬೆಳಕ್ಕೊಂಡು, ಹತ್ತಾರು ಜವ್ವನಿಗ ಪತ್ರಕರ್ತರ ಬೆಳೆಶಿದ್ದವಡ.
ಈಗಳೂ ಸುಮಾರು ಜೆನ ಜವ್ವನಿಗರು ಅಲ್ಲಿ ಪತ್ರಕರ್ತರಾಗಿದ್ದವಡ – ಕೆಲವು ಜೆನರ ಪೆರ್ಲದಣ್ಣಂಗೆ ಗುರ್ತ ಇದ್ದು!
~
ರಜ ಹೊತ್ತಪ್ಪಗ ಇನ್ನೊಂದು ಶುದ್ದಿ ಗೊಂತಾತು
– ಈ ವಿಶ್ವಣ್ಣ ಅಲ್ಲಿಂದ ಬಿಡ್ಳೆ ಕಾರಣ ಆ ಪೇಪರಿನ ಕ್ರಯಕ್ಕೆ ತೆಗದ ಪುರ್ಬುಗೊ – ಹೇಳಿಗೊಂಡು.

ನಮ್ಮ ದೇಶ, ಭಾಶೆ, ಜೀವನ ಪದ್ಧತಿಯ ಬಗೆಗೆ ಅಭಿಮಾನ ಇದ್ದಿದ್ದ ಒಂದು ವ್ಯವಸ್ಥಿತ ತಂಡವ ಕಟ್ಟಿದ ವಿಶ್ವಣ್ಣನ ಹಿಂದೆಮುಂದೆ ನೋಡದ್ದೆ ತೆಗದುಬಿಟ್ಟವು.

ಎಂತಕೆ ಹೇಳಿತ್ತುಕಂಡ್ರೆ, ಅವಕ್ಕೆ ಪುರ್ಬುಗಳ ಸಪೋರ್ಟುಮಾಡಿ ಬರೇಕಾತಡ.
ಕೇವಲ ಧರ್ಮಕ್ಕಾಗಿ ಅವು ಹೀಂಗೆ ಮಾಡ್ತವು ಹೇಳಿ ಆದರೆ ನಾವು ಪೈಶೆಕೊಟ್ಟು ಅವರ ಬೆಳೆಶೇಕೋ – ಹೇಳ್ತದು ಈಗ ಪ್ರಶ್ನೆ.
~
ಅಂದು ವಿಜಯಡ್ಕದ ಸಮೆಯಲ್ಲೂ ಅವರ ಶೆಗ್ತಿ ಬಯಂಕರ ಇತ್ತು.
ಇಂದು ವಿಜಯಕರ್ನಾಟಕದ ಸಮೆಯಲ್ಲೂ ಅವರ ಶೆಗ್ತಿ ಅದೇ ನಮುನೆ – ಬಲಶಾಲಿಯಾಗಿದ್ದು.
ಒಂದು ತಲೆಮಾರು ಕಳುದರೂ ಅವರ ತಾಕತ್ತು ಹಾಂಗೇ ಇದ್ದು ಹೇಳಿ ಆದರೆ, ನಮ್ಮ ಭವಿಷ್ಯ ಹೇಂಗೆ?
ಯೋಚನೆ ಮಾಡೆಕ್ಕು!!
– ಹೇಳಿದ ಅಜ್ಜಕಾನಬಾವ° ಸೂರಂಬೈಲಿಂಗೆ ಹೆರಟೇ ಹೆರಟ°.
ಸೀತ ಪೇಪರಿನ ಅಂಗುಡಿಗೆ ಹೋಗಿ, ಮರದಿನಂದ ಹೊಸದಿಗಂತ ತೆಗದುಮಡಗಲೆ ಹೇಳಲೆ ಹೋಪವ°..
~
ಅವ ಹೋಗಿ ಬಪ್ಪನ್ನಾರವೂ ಒಪ್ಪಣ್ಣನ ತಲೆಲಿ ಆ ವಿಶಯವೇ ಸುತ್ತಿಗೊಂಡು ಇತ್ತು!

ಅವರ ಅಸ್ತಿತ್ವವ ಒಳಿಶಿಗೊಂಬಲೆ ಬೆಳೆಶಿಗೊಂಬಲೆ ಬೇಕಾಗಿ, ಅವಕ್ಕೆ ಆಶ್ರಯ ಕೊಟ್ಟ ನಮ್ಮ ಮೂಲತತ್ವವ ಬಲಿತೆಕ್ಕೊಳ್ತವನ್ನೆ!
ಅವು ಹೇಳಿದಾಂಗೆ ಕೇಳದ್ರೆ ನಮ್ಮವರ ಎಂತ ಬೇಕಾರೂ ಮಾಡುಗು!
ಅಷ್ಟು ಗಟ್ಟಿ ನಿಂದಿದವು ಅವು!
ಇಲ್ಲಿ ಮಾಂತ್ರ ಅಲ್ಲಡ, ಸರಕಾರಲ್ಲಿಯೂ ಹಿಂದಾಣ ಬಾಗಿಲಿಲಿ ಅವರದ್ದೇ ಒಯಿವಾಟುಗೊ ಇದ್ದಡ.
ಕೇಂದ್ರ ಸರಕಾರಲ್ಲಿ ಎಂತಾರು ದೊಡ್ಡಮಟ್ಟಿನ ಒಯಿವಾಟು ಆವುತ್ತರೆ ಒಂದರಿ ಇಟೆಲಿಂದಲೋ, ವೇಟಿಕನ್ನಿಂದಲೋ ಒಪ್ಪಿಗೆ ಬಂದಾವುತ್ತಡ.
ನವಗೆ ಎದುರಂಗೆ ಗೊಂತೇ ಆಗದ್ದೆ, ಹಿಂದಂದಲೇ ತಿರುಗುತ್ತ ಈ ನಮುನೆ ಶೆಗ್ತಿಗೊಕ್ಕೆ ’ಲಾಬಿ’ ಹೇಳ್ತದಡ ಈಗಾಣ ಭಾಶೆಲಿ, ಪೆರ್ಲದಣ್ಣ ಹೇಳಿದ್ದನಡ.
ಬೈರಪ್ಪನ ಅನಿಸಿಕೆಗೊ, ಪ್ರತಾಪು ಸಿಮ್ಮನ ಲೇಖನಂಗೊ, ಮಂಗ್ಳೂರಿನ ವರದಿಗೊ, ಮಠದ ಕಾರ್ಯಕ್ರಮಂಗೊ – ಇದರ ಎಲ್ಲವನ್ನುದೇ ಸಮಷ್ಟಿಲಿ ನೋಡಿ ಅಪ್ಪಗ ವಿಜಯಕರ್ನಾಟಕಲ್ಲಿ ಹಿಂದು ಪರ ಜಾಸ್ತಿ ಬತ್ತಾ ಇದ್ದು, ಹೇಳ್ತ ಅನಿಸಿಕೆ ಓನರುಗೊ ಮಾಡಿದವಡ.
ಇದರ ಎಲ್ಲ ಬಿಟ್ಟು, ಪುರ್ಬುಗಳ ಪೇಪರಿನ ಹಾಂಗೆ ಆಯೆಕ್ಕು – ಹೇಳಿಗೊಂಡು.
ವಿಶ್ವಣ್ಣ ಹೇಂಗೇ ಇರಳಿ,  ಎಂತದೇ ಮಾಡಿರಳಿ,  ಅವರ ಹೀಂಗಿರ್ತ ಲಾಬಿಗೆ ಬೀಳದ್ದೆ, ನೇರವಾಗಿ ಎದ್ದು ಬಂದದಕ್ಕೆ ಅಭಿಮಾನಪೂರ್ವಕ ನಮಸ್ಕಾರಂಗೊ..!
~
ನೋಡಿ, ಹೆರಾಣೋರಿಂಗೆ ಅರಡಿಗೋ? ಒಳ ಹೇಂಗಿದ್ದು ಹೇಳಿಗೊಂಡು?
ಆಧುನಿಕತೆಗೆ ವೇದಿಕೆ ಕೊಟ್ಟ ಒಬ್ಬನ ಹೀಂಗೆಲ್ಲ ಮಾಡಿ ಬಲುಗಿ ಇಡ್ಕಿ, ಇನ್ನು ಆರಾರೋ ಪುರ್ಬುಗೊಕ್ಕೆ ಪೈಶೆ ಮಾಡಿಕೊಡ್ತವ° ಬಂದ ಪೇಪರಿನ ನಾವು ತೆಗೆಯೆಕ್ಕೋ?
ಸಂಘದ ಅಜ್ಜಂದ್ರ ದೂರದೃಷ್ಟಿಯ ಬಗ್ಗೆ ಮತ್ತೊಂದರಿ ಹೆಮ್ಮೆ ಅನುಸಿತ್ತು.
ನವಗೆ ನಮ್ಮ ಹೊಸದಿಗಂತ ಇದ್ದು. ಅಲ್ಲದೋ?
ಅಜ್ಜಕಾನಬಾವನೂ ಅದನ್ನೇ ಯೋಚನೆ ಮಾಡಿದ್ದು.
~
ಕುಡ್ಪಲ್ತಡ್ಕಲ್ಲಿ ಕುಡ್ಪೊಲ್ತಾಯಿ ಇದ್ದು. ಆದರೆ ವಿಜಯಕರ್ನಾಟಕಲ್ಲಿ?
ಹೀಂಗಿದ್ದು ಈಗಾಣ ಜೀವನ!

ಒಂದೊಪ್ಪ: ರಾಷ್ಟ್ರಜಾಗೃತಿಯ ಮನಸ್ಸುಗೊಕ್ಕೆ ರಾಷ್ಟ್ರಜಾಗೃತಿಯ ದೈನಿಕ ಇರೆಕ್ಕು, ಕೇವಲ ಧರ್ಮಜಾಗೃತಿದು ಅಲ್ಲ..
ಎಂತ ಹೇಳ್ತಿ?

ಅಂದ್ರಾಣ ವಿಜಯಡ್ಕವೂ; ಇಂದ್ರಾಣ ವಿಜಯಕರ್ನಾಟಕವೂ..!!, 4.7 out of 10 based on 11 ratings

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಲಾಯ್ಕಾಯಿದು. ಈ ತೂಕದ ಸಕಾಲಿಕ ಶುದ್ದಿ ಓದಿ ಕುಶಿ ಆತು. ವಿಜಯಡ್ಕದ ಸಂಗತಿ ಕೇಳಿ ಬೇಜಾರಾತು. ಕುಡ್ಪಲ್ತಡ್ಕ ಮಾವಂಗೆ ಮನತುಂಬಿದ ನಮನಂಗೊ…

  ವಿಜಯಕರ್ನಾಟಕದ ಸಂಗತಿ ಕೇಳ್ಯಪ್ಪಗ ಹೀಂಗನುಸಿತ್ತು:
  ಗಂಭೀರತೆಲೂ ನೆಗೆ ಅರಳುಸಿಗೊಂಡಿದ್ದ
  ‘ವಕ್ರತುಂಡೋಕ್ತಿ’ ಇಲ್ಲೆ…
  ಓದುಗರ ಮಿಡಿತದ ಅಭಿವ್ಯಕ್ತಿಯಾಗಿದ್ದ
  ‘ಜನಗಳ ಮನ’ ಇಲ್ಲೆ…
  ಪತ್ರಿಕೋದ್ಯಮದ ಪ್ರತಿಬಿಂಬವಾಗಿದ್ದ
  ‘ಸುದ್ದಿಮನೆ ಕತೆ’ ಇಲ್ಲೆ…
  ‘ಬೆತ್ತಲೆ ಜಗತ್ತಿ’ನ ತೀಕ್ಷ್ಣ ಬರಹಂಗೊ ಇಲ್ಲೆ…
  ‘ನೀರು ನೆರಳಿ’ನ ಆಸರೆ ಇಲ್ಲೆ…
  ‘ಕ್ಷಣಹೊತ್ತಿನ ಅಣಿಮುತ್ತು’ದೇ ಇಲ್ಲೆ…
  ಮತ್ತೆಂತ ಒಳುದ್ದಿನ್ನು ಈ
  ‘ಸಮಸ್ತ ಕನ್ನಡಿಗರ ಹೆಮ್ಮೆ’ಲಿ…??!!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಅರ್ಧಕ್ಕರ್ಧ advertisement ಇದ್ದು ಸಾಲದೋ ಅಕ್ಕಾ..

  [Reply]

  VA:F [1.9.22_1171]
  Rating: 0 (from 0 votes)
 2. shyamaraj.d.k

  Lekhana olledayidu Oppanna.Anu vijayakarnataka nillusi udayavani hakale heli atu.Diganta hengaru annual subscrip.

  [Reply]

  VA:F [1.9.22_1171]
  Rating: +1 (from 1 vote)
 3. ವಿಷ್ಣು ನಂದನ
  vishnunandana

  Vishweshawar Bhat bittadu thumba bejaru. Mundenthara heli keliyappaga ondu thingalu kayiri heliddavu. Pratap Simha “We will come up with some thing big” heli helidda.

  Yenthade aagali aa thandakke nammellara naithika bembala iddu.

  Avara mundana yojanege nammellara sahakara irali.

  [Reply]

  VA:F [1.9.22_1171]
  Rating: +1 (from 1 vote)
 4. ಶಾಂತತ್ತೆ
  ಅಮ್ಮ

  laikaidu oppanna ninna bareyana.innu olle olle shuddi odule sikka vijaya karnatakalli.adara guna matta iligu aste.
  ellavu olledakkagi heli greshuva.
  ondoppa laikaidu.
  vishwannange olledaagali.
  mundana baravanige, yojanego ella shubhavagali.
  good luck oppanna…

  [Reply]

  VA:F [1.9.22_1171]
  Rating: +1 (from 1 vote)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಒಪ್ಪಣ್ಣ, ಶುದ್ದಿ ಮನಸ್ಸಿನ ಒಳಂಗೆ ಹೋತು. ಪಾಪದ ಮನುಷ್ಯರ, ಜೀವನದ ಬಗ್ಗೆ ಏನೆಲ್ಲಾ ಆಶೆ ಬರುಸಿ, ಇದುವರೆಗೆ ನಿಂಗೊ ಎಂತದೂ ಅನುಭವಿಸಿದ್ದಿಲ್ಲಿ ಹೇಳಿ ಮಾಡಿ, ಅವರ ನರಕಕ್ಕೆ ಎಳಕ್ಕೊಂಡು ಹೋಪದಲ್ಲದಾ ಇದು? ಕೊರಗ್ಗಂಗೊಕ್ಕೆ, ಈಗ ಆಸ್ಪತ್ರೆ ಮಾತ್ರ ಅಲ್ಲ, ಮಲ್ಲಿಗೆ ಕೃಷಿಯೂ, ತರಕಾರಿ ಕೃಷಿಯೂ ಮಾಡ್ಲೆ ಹೇಳಿ ಇಂಗ್ರೋಜಿಯ ಕರೇಲಿ ಜಾಗೆ ಮಾಡಿ ಕೊಟ್ಟು, ಅದರಲ್ಲಿ ಬೆಳದದ್ದು ಅವಕ್ಕೆ ಮಾರಿಗೊಂಬಲೆ ಅಕ್ಕು ಹೇಳಿ ಮಾಡಿ, ಅವು ಹೆಚ್ಚಿನ ಸಂಖ್ಯೆಲಿ ಬಂದಪ್ಪಗ ಅವರ ಪೊರ್ಬುಗ ಮಾಡಿ ‘ನ್ಯೂ ಇಂಡಿಯಾ ‘ ಹೇಳುವ ಹೆಸರಿಲಿ ಇವಕ್ಕೆ ಮಾತ್ರ ಹೋಪಲೆ ಇಪ್ಪ ಇಂಗ್ರೋಜು ಕಟ್ಟಿಸಿ ಕೊಡ್ತವು. ಕಟ್ಟೋಣ ಕಟ್ಟುತ್ತ ಪೈಸ ಹೇಂಗೆ ಆದರೂ ಬತ್ತನ್ನೇ ಹೆರಂದ.
  ಜಾತಿ ಬದಲಾವಣೆ ಆದವ್ವು, ಇಂಗ್ರೋಜಿಯ ಒಳ ಬಂದರೆ ಅಶುದ್ಧ ಅಪ್ಪ ನಮೂನೆ ಆವುತ್ತು ಹೇಳಿ ತೋರ್ಸಿಗೊಂಬಲೆ ಆವುತ್ತಿಲ್ಲೆ ಅಲ್ಲದಾ? ಅದಕ್ಕೆ ಹೀಂಗಿಪ್ಪವಕ್ಕೆ ಹೇಳಿಯೇ ಒಂದು ಚರ್ಚ್ ಕಟ್ಟಿಸಿದರೆ, ಅವರ ಮನಸ್ಸಿಂಗೆ ಬಂದ ಹಾಂಗೆ ದೇವರ ಪೂಜೆ ಮಾಡ್ಲೆ ಅವಕಾಶ ಮಾಡ್ಲೆ ಅಕ್ಕನ್ನೆ!!! ಜಾತಿಲಿ ಬದಲಾವಣೆ ಆಯಿದು ಹೇಳಿ ಹಿಂದಂದ ಬಂದ ಸಂಪ್ರದಾಯ ಮರೆತ್ತಾ? ಯೇಸುವಿಂಗೆ ಹಣ್ಣು ಕಾಯಿ ಮಡಿಗಿ, ಆರತಿ ಎತ್ತಿ ಪೂಜೆ ಮಾಡಿದರೂ ಮಾಡಿದವು.

  ಕುಡ್ಪಲ್ತಡ್ಕ, ವಿಜಯಡ್ಕ ಅಪ್ಪ ಕಾಲಲ್ಲಿ, ಅದರ ವಿರೋಧಿಸಿ, ಪೊರ್ಬುಗಳ ಪ್ರಾಬಲ್ಯ ಆಗದ್ದ ಹಾಂಗೆ ಮಾಡ್ಲೆ ತಮ್ಮ ಶ್ರಮ ಮೀರಿ ಪ್ರಯತ್ನ ಮಾಡಿದ ಕುಡ್ಪಲ್ತಡ್ಕ ಮಾವನ, ಮತ್ತೆ ಒಳುದ ನಮ್ಮ ಸಮಾಜ ಬಾಂಧವರಿಂಗೆ ಎಷ್ಟು ಅಭಿಮಾನ ತೋರ್ಸಿದರೂ ಸಾಲ. ನಮ್ಮ ಸಂಸ್ಕೃತಿಯ ಒಳಿಶುಲೆ ತಮ್ಮ ನಾಳೆಯ ಯೋಚನೆ ಮಾಡದ್ದೆ ಕ್ರಾಂತಿ ಮಾಡಿದ ಕುಡ್ಪಲ್ತಡ್ಕ ಮಾವನ ಹಾಂಗೆ ಇಪ್ಪೋರ ಸಂತತಿ ಸಾವಿರ ಆಗಲಿ.
  ನಾಳೆ ನಮ್ಮಲ್ಲಿ ಅಪ್ಪ ಅನ್ಯಾಯಂಗಳ ಎದುರುಸುಲೇ ಹೆರಟಪ್ಪಗ ಕುಡ್ಪಲ್ತಡ್ಕ ಮಾವನ ಆದರ್ಶಂಗ ಎಲ್ಲೋರಿಂಗೆ ಸ್ಫೂರ್ತಿ ಕೊಡಲಿ..

  ಒಪ್ಪಣ್ಣ ವಿಜಯ ಕರ್ನಾಟಕ ಬೆಳದು ಬಂದದರ ಚೆಂದಲ್ಲಿ ವಿವರ್ಸಿದ್ದ°. ಒಂದು ಪತ್ರಿಕೆ ಜನಂಗಳ ಮನಸ್ಸಿನ ಹತ್ತರೆ ಅಪ್ಪಲೆ ಮಾಡಿ, ಅದರಲ್ಲಿ ಬಪ್ಪ ವಾರ್ತೆಗಳಲ್ಲಿ ಜನಂಗಳ ಯೋಚನೆ ವಿಶಾಲ ಅಪ್ಪ ಹಾಂಗೆ ಮಾಡುವ ಕೆಲಸ ಸಣ್ಣದು ಅಲ್ಲನ್ನೇ.!! ಬೆಳದು ನಿಂದು ಫಸಲು ಕೊಯ್ವ ಹೊತ್ತಿಂಗೆ ಬೆಳವಲೆ ಶ್ರಮ ಹಾಕಿದವನ ಕರೆಂಗೆ ಮಡಿಗಿದರೆ ಹೇಂಗೆ ಅಕ್ಕು? ಅನುಭವ ಇಪ್ಪವ° ಸೋಲಿಂಗೆ ಹೆದರ° ಅಲ್ಲದಾ ಒಪ್ಪಣ್ಣ? ಇನ್ನುದೇ ತೇಜಸ್ಸಿಲಿ ಹೊಸ ಉತ್ಸಾಹಲ್ಲಿ ತನ್ನ ಹಾಂಗೆ ಇಪ್ಪೋರ ಸೇರ್ಸಿ ಇನ್ನೊಂದು ವಿಧಲ್ಲಿ ಮೇಲೆ ಬಕ್ಕು ಅಲ್ಲದಾ? ಹೊಸಾ ಯೋಚನೆಯ ತೆಕ್ಕೊಂಡು ಹೊಸತ್ತು ವಿಚಾರ ಗಟ್ಟಿಯಾಗಿ ಬೆಳದು ಬರಲಿ..
  ಜೆನಂಗಳ ದಾರಿ ತಪ್ಪುಸುವವರ, ಜೆನಂಗೊಕ್ಕೆ ಸರಿಯಾಗಿ ಪರಿಚಯ ಮಾಡಿ, ಜೆನಂಗ, ಜನಪ್ರತಿನಿಧಿಗಳ ಆಯುವಲ್ಲಿ ಯಾವ ತಪ್ಪುದೇ ಮಾಡದ್ದೆ ಇಪ್ಪ ಹಾಂಗೆ ಆಗಲಿ.
  ಒಂದೊಪ್ಪ ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  raghumuliya

  ಮತಭ್ರಾಂತತೆಯೋ ಅಲ್ಲ ಮತಿಭ್ರಾಂತತೆಯೋ ಹೇಳಿ ಅರ್ಥ ಆಗದ್ದ ಕಾಲ, ಒಪ್ಪಣ್ಣಾ .ಕಿಸೆಲಿಪ್ಪ ಪಾವಲಿ ನೋಡಿರೆ ಪಾದ್ರಿಗಳ,ಮಾದ್ರಿಗಳ ನೆ೦ಪಿಂಗೆ ಅಚ್ಚಪ್ಪಲೇ ಶುರು ಆಯಿದು.ಪ್ರತಿಯೊಂದರಲ್ಲಿ ಶಿಲುಬೆಯೋ,ಎರಡು ಬೆರಳೋ- ಕಂಡರೂ ನವಗೆಲ್ಲ ಜಾಣ ಕುರುಡು.ನಮ್ಮ (ಹಿ೦ದೂಗಳ) ಧರ್ಮ ಸಹಿಷ್ಣುತೆ ಹೇಳಿರೆ ಹಾಂಗಿಪ್ಪದು. ಎದುರು ಮಾತಾಡಿತ್ತೋ ಉಗ್ರವಾದದ ಹಣೆಪಟ್ಟಿ.ಬಹುಸ೦ಖ್ಯಾತರಾದ ಹಿಂದೂಗಳ ‘ಧರ್ಮವಿಜಯ’ ಆಯೆಕ್ಕಾರೆ ಮತ್ತೊಬ್ಬ ವಿವೇಕಾನಂದ,ಪರಮಹಂಸ ಬರೆಕ್ಕಷ್ಟೇ.
  ಉತ್ತಮ ಲೇಖನ,ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 7. ಕೇಜಿಮಾವ°

  ಆನು ಸಂಕೇಶ್ವರ° ಮಾರಿಗ್ದೊಡನೆ ವಿ ಕ ಓದುದು ನಿಲ್ಸಿದ್ದೆ.ಒಳಾಣ ಪುಟಂಗಳ ವೆಬ್ಸಿಟಿಲ್ಲಿ ಓದಿದೆ,ಈಗ ಪೂರ್ತಿ ಬಿಟ್ಟಿದೆ.ಸ್ಂಕೇಶ್ವರ° ಹೊಸ ಪೇಪರು ಮಾಡ್ತ° ಹೇಳಿ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಡೈಮಂಡು ಭಾವಅನು ಉಡುಪುಮೂಲೆಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುಡಾಗುಟ್ರಕ್ಕ°ಶುದ್ದಿಕ್ಕಾರ°ಮಾಲಕ್ಕ°ಶೇಡಿಗುಮ್ಮೆ ಪುಳ್ಳಿರಾಜಣ್ಣಪಟಿಕಲ್ಲಪ್ಪಚ್ಚಿಸಂಪಾದಕ°ಚೆನ್ನೈ ಬಾವ°ಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕಗೋಪಾಲಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಅಕ್ಷರ°ದೊಡ್ಮನೆ ಭಾವವಾಣಿ ಚಿಕ್ಕಮ್ಮಪುತ್ತೂರುಬಾವಪುಟ್ಟಬಾವ°ಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ