Oppanna.com

ಕಮ್ಮಿನಿಷ್ಟೆಯ ಪ್ರಚಾರಪ್ರಿಯನ ದೇವಸ್ಥಾನ ಎದುರೇ ಹಣ್ಣುಕಾಯಿ ಮಾಡಿದವಡ..!

ಬರದೋರು :   ಒಪ್ಪಣ್ಣ    on   02/12/2011    49 ಒಪ್ಪಂಗೊ

ಚಾಂದ್ರಮಾನ ಲೆಕ್ಕಲ್ಲಿ ಮಾರ್ಗಶಿರ ಷಷ್ಠಿ ಬಂತು ಹೇಳಿರೆ, ಸುಬ್ರಮಣ್ಯದ ಗವುಜಿ ನೆಂಪಾಗಿಯೇ ಆವುತ್ತು ಬೈಲಿಲಿ.
ಸುಬ್ರಮಣ್ಯನ ಒರಿಶಾವಧಿ ಜಾತ್ರೆ “ಷಷ್ಠಿ” ದಿನ ಅಲ್ಲದೋ!
ಶಿವನ ಕಂದ ಚುಬ್ಬಣ್ಣ ಕಾಡಿನೊಳ ಸಣ್ಣ ಬೆಶಿಲುಮಚ್ಚಿಲಿ – ಕುಮಾರಧಾರೆಯ ಶುದ್ಧ ನೀರಿಲಿ ಆಡಿಗೊಂಡು; ಆದಿ ಶೇಷನ ಹೆಡೆಯ ಕೆಳ ತಣಿಲು ಮಾಡಿಗೊಂಡು, ಮೂಡ ಮೋರೆ ಹಾಕಿಗೊಂಡು ಕೂಯಿದ°.
ಎಷ್ಟು ಸಾವಿರ ಒರಿಶ ಆತೋ! ಆರಿಂಗೊಂತು!
ಅದೊಂದು ಶೆಗ್ತಿ ಕ್ಷೇತ್ರ, ಅದೊಂದು ಭಕ್ತಿ ಕ್ಷೇತ್ರ, ಅದೊಂದು ಯೋಗದ ಕ್ಷೇತ್ರ.
ಎಷ್ಟೋ ರೋಗಂಗೊಕ್ಕೆ, ರುಜಿನಂಗೊಕ್ಕೆ, ಹರಕ್ಕೆಗೊಕ್ಕೆ, ಉತ್ತರ ಕೊಡ್ತ° ಹೇಳಿ ನಮ್ಮ ಹಳಬ್ಬರ ನಂಬಿಕೆ.
ಈಗಂತೂ ನಿತ್ಯಕ್ಕೂ ಒಳ್ಳೆತ ಜೆನ ಆವುತ್ತು ಅಲ್ಲಿ. ಒರಿಶಾವಧಿ ಷಷ್ಠಿಗಂತೂ, ಭರ್ಜರಿ!!
ಪಂಚಮಿ, ಷಷ್ಠಿ, ಕಿರಿಷಷ್ಠಿ – ಹೀಂಗೆಲ್ಲ ಗವುಜಿಗಳ ಕಳುದೊರಿಶ ಒಂದರಿ ನೆಂಪುಮಾಡಿದ್ದು.
ಪುಚ್ಚಪ್ಪಾಡಿ ಅಣ್ಣ, ವೆಂಕಟೇಶಣ್ಣ – ಎಲ್ಲೋರುದೇ ಸೇರಿಗೊಂಡು – ಆನೆಂದ ಹಿಡುದು ರಥದ ಒರೆಂಗೆ ಸುಮಾರು ವಿಷಯಂಗಳ ನಾವು ಮಾತಾಡಿದ್ದು. ನೆಂಪಿದ್ದೋ? (ಸಂಕೊಲೆ)
ಅಂತೂ ಅದೊಂದು ಗವುಜಿಯ, ಕೊಶಿಯ ಶುದ್ದಿಯೇ ಆಗಿತ್ತು.

ಪ್ರತಿ ಒರಿಶವೂ ಷಷ್ಠಿಗವುಜಿ ಹೇಳಿತ್ತುಕಂಡ್ರೆ ಕೊಶಿಯ ಶುದ್ದಿಯೇ ಆದರೂ, ಈ ಒರಿಶ ಹಾಂಗಲ್ಲ.
ಕೆಲವು ಬೇಲೆ ಇದ್ಯಾಂತಿನ ಜೆನಂಗೊ ಬಂದು, ಅನಗತ್ಯ ಹರಟೆ ಮಾಡಿಗೊಂಡು, ಹೊತ್ತು, ನೆಮ್ಮದಿ ಎಲ್ಲವನ್ನೂ ಹಾಳುಮಾಡಿಗೊಂಡಿದ್ದವು.
ಕಾಟುನಾಯಿ ಎಲ್ಲಿಯೋ ಮಾರ್ಗಲ್ಲಿ ಕೊರಪ್ಪಿರೆ ನವಗೆಂತೂ ಬೇಜಾರ ಇತ್ತಿಲ್ಲೆ; ಆದರೆ ನಮ್ಮ ಊರಿನ, ನಮ್ಮ ಮನೆಯ, ನಮ್ಮ ಜೆಗಿಲಿಲಿ ನಿಂದು ಕೊರಪ್ಪಿರೆ?
ಅದರ ತಡವಲೆಡಿಯ!
ಹಾಂಗೇ – ಆ ಬೇಲೆ ಇದ್ಯಾಂತಿನ ಜೆನ ಬೇರೆಲ್ಲಿಯಾರು ಹರಟೆ ಮಾಡಿದ್ದರೆ ನವಗೆ ಸಾರ ಇತ್ತಿಲ್ಲೆ; ನಮ್ಮ ಊರಿನ ಪವಿತ್ರ ದೇವಸ್ಥಾನ ಒಂದರಲ್ಲಿ ರಾಜಕೀಯ ಮಾಡುವಗ ಮಾಂತ್ರ ನವಗೆ ತಡವಲೇ ಎಡಿಯ!
ಹಾಂಗೆ, ಒಂದರಿ ಎಲ್ಲೋರುದೇ ಇದ್ದು ಮಾತಾಡುವನೋ ಹೇದು ಈ ಶುದ್ದಿ ತಂದದು ಬೈಲಿಂಗೆ! ಆಗದೋ?
~

ಅಪ್ಪಲೆ ಕಳುದೊರಿಶವೇ ಸು- ಸುದ್ದಿ ಇದ್ದತ್ತು.
ಸುಬ್ರಮಣ್ಯದ ಮಡೆಸ್ನಾನಲ್ಲಿ ಬ್ರಾಹ್ಮಣ್ಯದ ವಾಸನೆ ಇದ್ದು, ಅದರ ನಿಲ್ಲುಸೇಕು – ಹೇಳ್ತದು.
ಹಲವಾರು ಜೆನ ಬುದ್ಧಿಲ್ಲದ್ದ ಜೀವಿಗೊ ಅಂಬಗಳೇ ಹೊಣದ್ದವು – ಅದರ ವಿರುದ್ಧ ಪ್ರತಿಭಟನೆ ಮಾಡೇಕು ಹೇಳಿಗೊಂಡು. ಆದರೆ, ಅದು ಜಾಸ್ತಿ ಹರುದತ್ತಿಲ್ಲೆ,
ಹಾಂಗಾಗಿ, ಪ್ರಸಾದ ಊಟ ನೆಡದೇ ನೆಡದತ್ತು, ಮಡೆಸ್ನಾನ ಅದರಷ್ಟಕೇ ನೆಡದತ್ತು, ಹರಕ್ಕೆ ಹೊತ್ತುಗೊಂಡ ಎಷ್ಟೋ ಜೆನ ತೀರುಸಿದ ನೆಮ್ಮದಿಲಿ ಮನಗೆ ಹೋದವು.

ಆದರೆ, ಪ್ರತಿಭಟನೆ, ಪೇಪರು, ಟೀವಿ – ಹೇಳಿಗೊಂಡು ಸುಮಾರು ಜೆನ ಬುದ್ಧಿಲ್ಲದ್ದ ಜೀವಿಗೊ ಹಾರಿದವಲ್ಲದೋ –
ನಾಕು ದಿನ ಎಲ್ಲಾ ಪೇಪರು, ಟೀವಿಗಳಲ್ಲಿ ಅವರ ಹೆಸರು ಹೊಡಚ್ಚಿತ್ತು, ಮಡೆಸ್ನಾನದ ಹಾಂಗೆ.
– ಹೋ,ಈ ವಿಶಯ ತೆಕ್ಕೊಂಡ್ರೆ ಒಳ್ಳೆ ಪ್ರಚಾರ ಸಿಕ್ಕುತ್ತು – ಹೇಳಿ ಅನುಸಲೆ ಸುರು ಆತೋ ಕಾಣ್ತು ಅವಕ್ಕೆ.
ಕಳುದ ಸರ್ತಿಯಾಣ ಬೂದಿಮುಚ್ಚಿದ ಕೆಂಡಲ್ಲೇ ಮಿಣ್ಣಿ ಒಳುದಿದ್ದತ್ತು. ಈ ಸರ್ತಿ ’ಇನ್ನೂ ಹೆಚ್ಚು ಪ್ರಚಾರ ತೆಕ್ಕೊಂಬ ಗೀಳು’ ಹಿಡುದತ್ತು.
ಆದ್ದದು ಅಷ್ಟೇ. ಮತ್ತೆಂತೂ ಇಲ್ಲೆ.
ಆರೋ ನಾಕು ಜೆನಕ್ಕೆ ಟೀವಿಲಿ ಬಪ್ಪಲೆ ಕಾರಣ ಬೇಕಾತು, ಇದರ ಹಿಡುದು ದೊಡ್ಡ ವಿಶಯ ಮಾಡಿದವು. ನಮ್ಮೂರ ದೇವರ ಹೆಸರಿನ ಮಡೆ ಮಾಡ್ಳೆ ಹೆರಟವು.
ಕಾರಣ ಎಂತರ? ಕಾರಣ ನೋಡೇಕಾರೆ ಮಡೆಸ್ನಾನ ಹೇದರೆ ಎಂತರ ಹೇದು ನೋಡೇಕು.
~
ಎಲ್ಲಾ ಜಾತ್ರೆಯ ಹಾಂಗೇ ಸುಬ್ರಮಣ್ಯ ಜಾತ್ರೆಗೆ ಪ್ರಸಾದ ಭೋಜನ ಇದ್ದಪ್ಪೋ!
ಅಂಗಿತೆಗದು ಬಾಳೆಲೆ ಹಂತಿ ಹಾಕಿ, ಕ್ರಮಪ್ರಕಾರದ ಸನಾತನ ಭೋಜನ.
ಭೋಜನ ಮುಗುಕ್ಕೊಂಡು ಬಪ್ಪಗಳೇ ಕೆಲವು ಜೆನ ಭಕ್ತರು – ಸುಬ್ರಮಣ್ಯನ ಹತ್ತರೆ ನಮಸ್ಕಾರ ಮಾಡಿ ಬಂದಿರ್ತವು. ಅವರದ್ದೊಂದು ಹರಕ್ಕೆ ಇರ್ತು; ಎಂತರ?

ಮೈಕೈಲಿ ಏನಾರು ಅಸೌಖ್ಯ ಇದ್ದರೆ, ಚರ್ಮ ರೋಗ ಇತ್ಯಾದಿ ಇದ್ದರೆ, – ಈ ಒರಿಶದ ಸುಬ್ರಮಣ್ಯ ದೇವರ ಜಾತ್ರೆಲಿ, ಸುಬ್ರಮಣ್ಯ ದೇವರ ಪ್ರಸಾದಲ್ಲಿ ಉರುಳುಸೇವೆ ಮಾಡ್ತೆ – ಹೇಳಿಗೊಂಡು.
ಹಾಂಗಾಗಿ, ಸುರುವಾಣ ಹಂತಿ ಭೋಜನ ಆದ ಕೂಡ್ಳೇ, ಬಾಳೆ ತೆಗವಂದ ಮದಲೇ – ಭಕ್ತರು ಉರುಳುಸೇವೆ ಸುರುಮಾಡ್ತವು.
ಶ್ರದ್ಧೆಲಿ ದೇವರಿಂಗೆ ಉರುಳು ಬಪ್ಪದು – ಹೇಂಗೆ?
ಸೋನೆಗಾಂದಿ ಆರೋಗ್ಯಕ್ಕಾಗಿ ಜನಾರ್ದನ ಪೂಜಾರಿ ಬೆಳಿಅಂಗಿ ಹಾಕಿಂಡು ಕೋಂಗ್ರೇಟಿಲಿ ಉರುಳಿದ್ದಲ್ಲದೋ – ಹಾಂಗೆ ಹರಕ್ಕೆ ತೀರುಸುದು ಅಲ್ಲ,
ಶುದ್ಧಲ್ಲಿ, ಬರಿಮೈಲಿ – ಚೆಂಡಿಹರ್ಕೋ ಎಂತಾರು ಸುತ್ತಿಗೊಂಡು, ಏಕಧ್ಯಾನಲ್ಲಿ ಮಾಡ್ತ ಹರಕ್ಕೆ ಸೇವೆ ಅದು.

ಇಂತವ ಉಂಡ ಬಾಳೆ ಹೇದು ಮುಖ್ಯ ಅಲ್ಲ, ಅದು ಸುಬ್ರಮಣ್ಯನ ಪ್ರಸಾದಭೋಜನದ ಬಾಳೆ – ಹೇದು ಲೆಕ್ಕ!
ಇದೆಲ್ಲ ನಮ್ಮ ತುಳುನಾಡಿನ ಆಚರಣೆಗೊ. ಗಟ್ಟದ ಮೇಗಾಣ ಹೆಬಗಂಗೊಕ್ಕೆ ಎಂತರ ಅರಡಿಗು!
~

ಅದೇ ಈಗ ತೊಂದರಗೆ ಬಿದ್ದದು.
ಇದು ಮೂಢ ನಂಬಿಕೆ ಅಡ, ಪುರೋಹಿತಶಾಹಿ ಅಡ,  ದಲಿತರ ತುಳಿವದಡ; ಹಾಂಗಡ, ಹೀಂಗಡ.
ಒರಿಶಾನುಗಟ್ಳೆಂದ ಕ್ಷೇತ್ರಲ್ಲಿ ನೆಡಕ್ಕೊಂಡು ಬಂದ ಆಚಾರಂಗೊ ಎಂತ ಇದ್ದೋ – ಅದರ ಬೇರೆಯೇ ’ಜಾತಿ ರಾಜಕೀಯಲ್ಲಿ’ ನೋಡಿ, ಬೇರೆಯೇ ಅರ್ತ ಕೊಟ್ಟವು.
ಇದಕ್ಕೆ ಎಂತೆಲ್ಲ ಬಣ್ಣ ಕಟ್ಟುಲೆಡಿಗೋ ಎಲ್ಲವನ್ನೂ ಕಟ್ಟಿ, ಅಕೇರಿಗೆ ಟೀವಿಲಿ, ಪೇಪರಿಲಿ ಬತ್ತಷ್ಟು ದೊಡ್ಡ ಹೇಸಿಗೆ ಮಾಡಿ ಹಾಕಿದವು.
ಆರು? ಕೆಲವೇ ಜೆನಂಗೊ.

ಅವ್ವೇ ಅವರ ಪ್ರಗತಿಯ ಪರಂಗೊ ಹೇಳುದು. ಅವ್ವೇ ಅವರ ಬುದ್ಧಿಜೀವಿಗೊ ಹೇಳಿಗೊಂಬದು, ಅವ್ವೇ ಅದರ ವಿಚಾರವಾದಿಗೊ – ಹೇಳಿಗೊಂಬದು.
ಅವು ಹೇಳಿರೆ ಮಣ್ಣಾಕಿ ಹೋಗಲಿ, ನಾವುದೇ ಎಂತಕೆ ಅವರ ಹಾಂಗೆ ಹೇಳೇಕು?
ಬುದ್ಧಿಶೆಗ್ತಿಯ ನಿಜವಾಗಿ ಬಳಕೆಗೆ ಹಿಡಿತ್ತೋನು ಬುದ್ಧಿಜೀವಿಗೊ. ವಿಜ್ಞಾನಿಗೊ, ಶತಾವಧಾನಿಗಳ ಹಾಂಗಿಪ್ಪೋರು!
ಇವೆಲ್ಲ ಗೆಡ್ಡಬಿಟ್ಟೊಂಡು ಕಳ್ಳುಕುಡ್ಕೊಂಡು ತಿರುಗುತ್ತೋರ – ಬುದ್ಧಿಜೀವಿಗೊ ಹೇಳಿರೆ ನವಗೆ ಮರಿಯಾದಿ ಇದ್ದೋ!
ಸನಾತನ ಧರ್ಮದ ಆಚರಣೆಗಳಿಂದಲೂ, ಅವಕ್ಕೆ ಇಂಗ್ಲೀಶು ಪುಸ್ತಕಂಗಳಲ್ಲಿ ಪ್ರಿಂಟಾಗಿ ಬಂದದು ಹೆಚ್ಚು ನಂಬಿಕೆಯ ವಸ್ತುಗೊ
ಒಪ್ಪಣ್ಣ ಅವರ ಬುದ್ಧಿಲ್ಲದ್ದ ಜೀವಿಗೊ ಹೇಳಿಯೇ ಹೇಳ್ತದು. ಅದಿರಳಿ.
~

ಈ ಸರ್ತಿ ಒಂದು ಗಮ್ಮತ್ತಾಯಿದು!
ಸುಬ್ರಮಣ್ಯಲ್ಲಿ ನೆಡೆತ್ತಾ ಇಪ್ಪದು ಮೂಢನಂಬಿಕೆ – ಹೇಳಿ ಬುದ್ಧಿಲ್ಲದ್ದ ಜೀವಿಗೊ ಸುರುಮಾಡಿದ್ದವಲ್ಲದೋ – ಅದೃಷ್ಟಕ್ಕೆ, ಸ್ಥಳೀಯ ಆರದ್ದೂ ಅದಕ್ಕೆ ಬೆಂಬಲ ಸಿಕ್ಕಿದ್ದಿಲ್ಲೆ.
ಹಾಂಗಾಗಿ ಕಳುದೊರಿಶ ಪುಸ್ಕ ಆತು.
ಈ ಒರಿಶ ಪುನಾ ಎಳಗಿತ್ತಲ್ಲದೋ – ಗಟ್ಟದ ಮೇಗಾಣ ಕೆಲವುಜೆನ ಎಳಗಿದವು.
ಮುನ್ನಾಣದಿನವೇ ಬಸ್ಸಿಲಿ ಟಿಗೇಟು ಮಾಡಿ ಬಂದವು; ಟೀವಿ ಕೆಮರದವರನ್ನೂ ಕರಕ್ಕೊಂಡು ಬಂದವು.
ಬೇಕನ್ನೇ – ನಾಳೆ ಪಟ ಬರೆಡದೋ, ಗುಣಾಜೆಮಾಣಿಯ ಹಾಂಗೆ!
ಕೆಮರದ ಮುಂದೆ ನಿಂದುಗೊಂಡು ’ಇದು ಮೂಢನಂಬಿಕೆ, ದಲಿತರ ಶೋಷಣೆ, ಹಾಂಗೆ, ಹೀಂಗೆ’ ರಾಜಕೀಯಭಾಷಣ ಕೊರಪ್ಪಲೆ ಸುರು ಮಾಡಿತ್ತು.

ರಥ ಎಳವ ನಾಗರ ಬೆತ್ತಲ್ಲಿ ಬಡಿವಲೂ ಎಡಿತ್ತು!

ಎಲ್ಲಿ? ಮತ್ತೆಲ್ಲಿ, ಸುಬ್ರಮಣ್ಯನ ರಥ ಹೋಪ ನಡೆಲಿಯೇ.
ಸುಬ್ರಮಣ್ಯನ ದೇವಸ್ಥಾನದ ಕ್ರಮವ ರಾಜಕೀಯ ಭಾಶಣ ಮೂಲಕ, ಸುಬ್ರಮಣ್ಯ ದೇವಸ್ಥಾನದ ನಡೆಲೇ ಬೈವಲೆ ಸುರುಮಾಡಿರೆ ಎಂತಕ್ಕು?
ಎಂತ ಆಯೇಕೋ ಅದೇ ಆತು!
ಆ ಪ್ರಚಾರಪ್ರಿಯನ ಹಿಡುದವು. ’ಪಾಡ್ಳಯ ಪಾಡ್ಳೆ’ ಹೇಳಿಗೊಂಡು ಸಮಾ ಬಿಗುದವು.
ದಲಿತ – ಹೇಳಿರೆ ತುಳಿತಕ್ಕೆ ಒಳಗಾದವ – ಹೇದು ಅರ್ತ ಆಡ. ಹಾಂಗೆ, ಪ್ರಚಾರಭಾಶಣ ಬಿಗಿವಲೆ ಬಂದ ಆ ಕಮ್ಮಿನಿಷ್ಠೆಯ ಪ್ರಚಾರಪ್ರಿಯ ನಿಜವಾಗಿಯೂ ’ದಲಿತ’ ಆತು!
ಅದಕ್ಕೆ ಬಿಗುದ್ದು ಆರು?
ಸುಬ್ರಮಣ್ಯ ದೇವರ ಪ್ರಥಮ ಶಿಷ್ಯವರ್ಗ – ನಮ್ಮ ಊರಿನ ಮಲೆಕುಡಿಯರು!
(ಈಗಾಣ ಪೊಟ್ಟು ರಾಜಕೀಯಲ್ಲಿ ಅವರ ’ದಲಿತರು’ ಹೇಳಿಯೂ ಹೇಳ್ತವು)
ತುಳುನಾಡಿನ ಹೆಮ್ಮೆಗಳಲ್ಲಿ ಇದೂ ಒಂದು.
ಸುಬ್ರಮಣ್ಯ ದೇವರು ಸುರೂ ಕಾಂಬಲೆ ಸಿಕ್ಕಿದ್ದೇ ಮಲೆಕುಡಿಯ ಹೆಣ್ಣಿಂಗೆ.
ಹಾಂಗಾಗಿ ದೇವರಿಂಗೂ, ಮಲೆಕುಡಿಯರಿಂಗೂ ಅವಿನಾಭಾವ ಸಮ್ಮಂದ. ದೇವರ ರಥೋತ್ಸವಕ್ಕೆ ರಥ ಕಟ್ಟುದೇ ಅವು. ಅದು ಅವರ ಹಕ್ಕು, ಕರ್ತವ್ಯ. ಅದಿರಳಿ.
~
ಮಡೆಸ್ನಾನ ದಲಿತರ ಶೋಷಣೆ ಹೇಂಗಾವುತ್ತು?
ಪ್ರಸಾದಭೋಜನಲ್ಲಿ ಹೋಗಿ ಉರುಳು – ಹೇಳಿ ಆರನ್ನೂ ಒತ್ತಾಯ ಮಾಡ್ತವಿಲ್ಲೆ. ಭಕ್ತರು ಅವ್ವಾಗಿ ಹರಕ್ಕೆ ಹೇಳಿ, ಆ ಹೊತ್ತಿಂಗೆ ಅಲ್ಲಿಗೆ ಬಂದು, ಅವ್ವಾಗಿ ಆ ಸೇವೆಲಿ ಪಾಲುಗೊಂಬದು.
ಅಪ್ಪೋ ಅಲ್ಲದೋ?
ಅದರ್ಲಿ ಬಟ್ಟಕ್ಕೊ ಇರ್ತವು, ಬಂಟಕ್ಕೊ ಇರ್ತವು, ಮಲೆಕುಡಿಯಂಗೊ ಇರ್ತವು, ಮತ್ತೊಬ್ಬ ಇರ್ತವು, ಆರು ಬೇಕಾರೂ ಇರ್ತವು.
ಉರುಳುವ ಮದಲು – ನಿನ್ನ ಜಾತಿ ಯೇವದು – ಹೇಳಿ ಕೇಳ್ತವಿಲ್ಲೆ ಆರುದೇ.
ನಮ್ಮ ಊರಿನ ಆಚರಣೆಗಳ ಗಟ್ಟದಮೇಗಾಣ ಜೆನಂಗೊ ಕಮ್ಮಿನಿಷ್ಠೆಯ ದೃಷ್ಟಿಲಿ ನೋಡಿರೆ, ಅದಕ್ಕೆ ಎಂತ ಮದ್ದು?
ಅದಕ್ಕೆ ಪೆಟ್ಟೇ ಮದ್ದು!
~
ಹಾಂಗೆ, ಆ ಜನ ಬಂತು, ಪ್ರಚಾರ ಭಾಷಣ ಬಿಗುದತ್ತು. ಸಮಕ್ಕೆ ನಾಕು ತಿಂದತ್ತು. ಪಾಪ!
ಒಂದೇ ಮಾತಿಲಿ ಹೇಳ್ತರೆ, ಆ ಜನವೇ ಹಣ್ಣುಕಾಯಿ ಆಗಿ ಹೋತು!
ಪೆಟ್ಟಿನ ಬೆಶಿಗೆ ಓಡಿದ್ದರ ಅಟ್ಟುಸಿ ಬಡುದವದಾ, ಬದ್ಕಿರೆ ಬೇಡಿತಿಂಬೆ ಹೇಳಿಗೊಂಡು ಪೋಲೀಸು ಷ್ಟೇಷನಿಂಗೆ ಓಡಿತ್ತು!
ಒಂದರಿ ಟೀವಿಲಿ ಬಪ್ಪಲೆ ಬೇಕಾಗಿ ಬಂಙ ಬಂದು, ಹೀಂಗೆ ಮೈಕೈ ಮುರಿವಷ್ಟು ಪೆಟ್ಟುತಿಂಬ ಜೆಂಬಾರ ಬೇಕಾತಿಲ್ಲೆ ಅದಕ್ಕೆ!
ಹು!!
~
ಒಪ್ಪಣ್ಣಂಗೆ ಕಾಂಬದೆಂತ ಹೇಳಿದರೆ, ಈ ಬುದ್ಧಿಲ್ಲದ್ದ ಜೀವಿಗಳೇ ಸಮಾಜವ ಒಡವಲೆ ನೋಡ್ತಾ ಇಪ್ಪದು.
ಸಮಾಜದ ಒಗ್ಗಟ್ಟಿಂಗಾಗಿ ಸುಮಾರು ನಂಬಿಕೆಗಳ ನೆಡೆಶಿಗೊಂಡು ಬತ್ತಾ ಇರ್ತಲ್ಲದೋ, ಹಾಂಗಿಪ್ಪದರ ಒಂದೊಂದನ್ನೇ ಹೆರ್ಕಿ ಹೆರ್ಕಿ – ಇದು ಮೂಢನಂಬಿಕೆ ಹೇದು ಹೆರ್ಕಿ ತೋರುಸಿಗೊಂಡು ಬತ್ತಾ ಇದ್ದು.
ಆ ಮೂಲಕ ಒಗ್ಗಟ್ಟಿಲಿಪ್ಪ ಸಮಾಜವ ತುಂಡುಮಾಡಿ ಚೆಂದ ನೋಡ್ತು.
ಸುಬ್ರಮಣ್ಯನ ಲೆಕ್ಕಲ್ಲಿ ದಲಿತರು ಹೇಳಿ ಆರುದೇ ಇಲ್ಲೆ.
“ದಲಿತರು” ಹೇಳಿ ಆರು ಇದ್ದರೂ – ಅದು ಓಟಿನ ರಾಜಕಾರಣಿ ಲೆಕ್ಕಲ್ಲಿ ಮಾಂತ್ರ!
~

ಅಷ್ಟೆಲ್ಲ ಆಗಿ ಅವು ತಪ್ಪು ಹುಡ್ಕುದು ನಮ್ಮ ಸನಾತನ ಧರ್ಮಲ್ಲಿ ಮಾಂತ್ರ!
ಪುರ್ಬುಗಳಲ್ಲಿಯೋ,ಮಾಪ್ಳೆಗಳಲ್ಲಿಯೋ ಮಣ್ಣ ತಪ್ಪು ಹುಡ್ಕಲಿ ನೋಡೊ! ಬೆಟ್ರಿ ಇದ್ದರಲ್ಲದೋ!
ಪುರ್ಬು ಪಾದ್ರಿ ಕೊಡುವ ’ಪವಿತ್ರ ಜಲ’ಲ್ಲಿ ಎಂತ ಹೊದುಂಕುಳೂ ಇಲ್ಲೆ, ಅದು ಬರೀ ಟೇಂಕಿನೀರು – ಹೇಳಿ ತೋರುಸಲಿ. ಮಾಪ್ಳೆ ಪಡುಹೊಡೆಂಗೆ ದಿನಕ್ಕೈದು ಸರ್ತಿ ಬಗ್ಗುತ್ತಲ್ಲದೋ – ಅದರ್ಲಿ ಮಣ್ಣಂಗಟ್ಟಿಯೂ ಸಿಕ್ಕುತ್ತಿಲ್ಲೆ ಹೇಳಲಿ ಈ ಜನ.
ಉಹೂಂ! ನಾಳೆ ಜೀವಲ್ಲಿರ ಅದು.
ನಮ್ಮ ಸಮಾಜ ಎಲ್ಲರನ್ನೂ ಸಹಿಸಿದ್ದು. ಹಾಂಗಾಗಿ ಇನ್ನೂ ಬದ್ಕಿದ್ದು ಅದು.
ಸುಬ್ರಮಣ್ಯ ಆ ಜೆನಕ್ಕೆ ಒಳ್ಳೆ ಬುದ್ಧಿ ಕೊಡ್ಳಿ.
~
ಮೂಢನಂಬಿಕೆ ಅಡ! ಛೆ! ಅಂಬಗ ಎಲ್ಲವೂ ಹಾಂಗೇ.
ಭಕ್ತರು ಕಾಣಿಕೆ ಹಾಕುತ್ತವಲ್ಲದೋ – ಅದು ಮೂಢನಂಬಿಕೆ ಅಲ್ಲದೋ?
ಗುಂಡದ ಎದುರು ಕೈ ಮುಗಿತ್ತವಲ್ಲದೋ? ಅದು? ಗುಂಡದೊಳ ದೇವರು ಇಪ್ಪದು?
– ಹಾಂಗೆ ನೋಡ್ಳೆ ಹೆರಟ್ರೆ, ಒಂದಕ್ಕೊಂದು ಪಿರಿ ಬಿಚ್ಚಿಗೊಂಡೇ ಹೋವುತ್ತು. ಪಿರಿಗೊ ಎಲ್ಲವೂ ಗಟ್ಟಿ ಕಾದಿದ್ದರೇ, ಬಳ್ಳಿ ಗಟ್ಟಿ ಇಪ್ಪದು.
ಆ ಬಳ್ಳಿಯೇ ಗಟ್ಟಿ ಇಲ್ಲದ್ದರೆ ಸಂಸಾರ ರಥ ಎಳವದು ಹೇಂಗೆ?!

ಒಂದೊಪ್ಪ: ನಂಬಿದ್ದರ ಮೇಗೆ ಸಂಶಯ ಮಾಡ್ಳಾಗ. ನಂಬಾಣಿಕೆಗಳ ರಥಲ್ಲೇ ಅಲ್ಲದೋ, ಬಾಳಿನ ಷಷ್ಠಿಜಾತ್ರೆ ನೆಡೆತ್ತದು!

49 thoughts on “ಕಮ್ಮಿನಿಷ್ಟೆಯ ಪ್ರಚಾರಪ್ರಿಯನ ದೇವಸ್ಥಾನ ಎದುರೇ ಹಣ್ಣುಕಾಯಿ ಮಾಡಿದವಡ..!

  1. ಲಾಯ್ಕಾಯ್ದು..ಒಪ್ಪಣ್ಣ…..ನಂಬಿಕೆಯ ಆಧಾರಲ್ಲಿ ಇಪ್ಪ ವಸ್ಥುವಿನ ಬಗ್ಗೆ ಆರಿಂಗೂ ಮಾತಾಡ್ಲೆ ಸಾಧ್ಯ ಇಲ್ಲೆ….

    ಧನ್ಯವಾದ…..

  2. ಒಟ್ಟಿಲಿ ದೇವರ ಶಕ್ತಿಯ ಪರೀಕ್ಷೆ ಮಾಡ್ಲೆ ಹೊರಟವಕ್ಕೆ ಒಂದು ದಿನ ಪಿರಿ ಕಾಯಿಗದ..ಕಾದು ನೊನೊಡುವ

  3. Some people may tell that it is not good for health. But nobody compelled it.2ndly there are several places which are not at all suit to live;but public live there and the so called developed persons call the place as SLUM and pretend that they are helping those. For what extent it is right ?
    Shastra prakara BRAHMANA UCHISTA SHUDDAKARAKA (SAPTASHUDDILI ONDU)

  4. Some people may tell that it is not good for health. But nobody compelled it.2ndly there are several places which are not at all suit to live;but public live there and the so called developed persons call the place as SLUM and pretend that they are helping those. For what extent it is right ?

  5. ಅವರವರ ನಂಬಿಕೆ ಅವಕ್ಕವಕ್ಕೆ. ಅದರಲ್ಲಿ ರಾಜಕೀಯ ಮಾಡಿ ಹೆಸರು ಗಳುಸಲೆ, ಜಾತಿ ಬೇಧವ ತಂದು ಬ್ರಾಂಮರ ಕೆಳ ತಗ್ಗುಸಲೆ ಹೆರಟ ಬುದ್ದಿಜೀವಿ ಹೇಳ್ತ ಪ್ರಾಣಿಗೆ ನಾಲ್ಕು ಬೆಶಿ ಬೆಶಿ ಬಿದ್ದದು ಲಾಯಕಾಯಿದು. ಒಪ್ಪಣ್ಣ ಹೇಳಿದ ಪ್ರತಿ ಮಾತುಗಳು ಸರಿಯಾಗಿಯೇ ಇದ್ದು. ಕಡೇಣ ಒಪ್ಪ, ಒಪ್ಪತಕ್ಕ ವಿಷಯ.

  6. ಮಡೆಸ್ನಾನ ದಲಿತರ ಶೋಷಣೆ ಹೇಂಗಾವುತ್ತು?
    ಪ್ರಸಾದಭೋಜನಲ್ಲಿ ಹೋಗಿ ಉರುಳು – ಹೇಳಿ ಆರನ್ನೂ ಒತ್ತಾಯ ಮಾಡ್ತವಿಲ್ಲೆ. ಭಕ್ತರು ಅವ್ವಾಗಿ ಹರಕ್ಕೆ ಹೇಳಿ, ಆ ಹೊತ್ತಿಂಗೆ ಅಲ್ಲಿಗೆ ಬಂದು, ಅವ್ವಾಗಿ ಆ ಸೇವೆಲಿ ಪಾಲುಗೊಂಬದು.
    ಅಪ್ಪೋ ಅಲ್ಲದೋ?
    ಅದರ್ಲಿ ಬಟ್ಟಕ್ಕೊ ಇರ್ತವು, ಬಂಟಕ್ಕೊ ಇರ್ತವು, ಮಲೆಕುಡಿಯಂಗೊ ಇರ್ತವು, ಮತ್ತೊಬ್ಬ ಇರ್ತವು, ಆರು ಬೇಕಾರೂ ಇರ್ತವು.
    ಉರುಳುವ ಮದಲು – ನಿನ್ನ ಜಾತಿ ಯೇವದು – ಹೇಳಿ ಕೇಳ್ತವಿಲ್ಲೆ ಆರುದೇ.
    ನಮ್ಮ ಊರಿನ ಆಚರಣೆಗಳ ಗಟ್ಟದಮೇಗಾಣ ಜೆನಂಗೊ ಕಮ್ಮಿನಿಷ್ಠೆಯ ದೃಷ್ಟಿಲಿ ನೋಡಿರೆ, ಅದಕ್ಕೆ ಎಂತ ಮದ್ದು?
    ಅದಕ್ಕೆ ಪೆಟ್ಟೇ ಮದ್ದು!

    >>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
    ಒಪ್ಪಣ್ಣ ಪಷ್ಟಾಯಿದು ಬರದ್ದು.–

  7. ಒಪ್ಪಣ್ಣ,

    ನಮ್ಮ ಸನಾತನ ಧರ್ಮದ ಚೆಂದ ಒಂದು ಇದ್ದು ಅಲ್ಲದ? ಇದರ ಬಗ್ಗೆ ನೀನು ಅಂದು ಒಂದರಿ ಬರದ್ದೆ!! ಜಾತಿಯೂ ಬೇಕು ಪದ್ಧತಿಯೂ ಬೇಕು ಹೇಳ್ತ ಶುದ್ದಿಲಿ!!(https://oppanna.com/oppa/jati-paddhati) ನಮ್ಮ ತತ್ತ್ವಲ್ಲಿ ಮಾಂತ್ರ ಅಲ್ಲದಾ ದೇವಸ್ಥಾನಂಗಳಲ್ಲಿ, ಭೂತಸ್ಥಾನಂಗಳಲ್ಲಿ ಆಯಾ ಸಮಾಜ ಬಂಧುಗೊಕ್ಕೆ ಅವರವರ ಸ್ಥಾನಕ್ಕೆ ತಕ್ಕ ಕೆಲಸಕ್ಕೆ ಒಂದು ಮರಿಯಾದಿಯ ಜಾಗೆ ಮಡಗಿ ಅದು ತಪ್ಪದ್ದ ಹಾಂಗೆ ನಡೆಶಿಗೊಂಡು ಬತ್ತಾ ಇಪ್ಪದು. ಪ್ರಾಕಿಂದ ಬಂದ ನಂಬಿಕೆಗಳ ಆರೂ ಬದಲ್ಸುಲೆ ಹೊಯಿದವಿಲ್ಲೇ, ಆಯಾ ಜಾಗೆಗೆ ಕೊಡುವ ಮರಿಯಾದಿಯ ಕಡಮ್ಮೆ ಮಾಡಿದ್ದವೂ ಇಲ್ಲೆ. ನಮ್ಮ ಹೆಚ್ಚಿನ ದೇವಸ್ಥಾನಂಗಳಲ್ಲಿ ದೇವರು ಸಿಕ್ಕಿದ್ದದು ದೇವರಿಂಗೆ ಪ್ರೀತಿ ಪಾತ್ರರಾದ ಸಮಾಜದವಕ್ಕೇ ಅಲ್ಲದಾ? ದೇವರೇ ಆ ಗೌರವವ ಅವಕ್ಕೆ ಕೊಟ್ಟಿಪ್ಪಗ ಈಗಾಣ ಕೆಲವು ಜನ ಅವರ ಜಾತಿ ಪದ್ಧತಿಲಿ ಕಟ್ಟಿ ಹಾಕಿ ನಿಂಗೋ ಕೆಳಾಣೋರು ಹೇಳಿ ಪಟ್ಟಿ ಮಾಡಿ ತೋರ್ಸುತ್ತಾ ಇಪ್ಪದಲ್ಲದಾ?

    ಒಪ್ಪಣ್ಣ,

    ಸುಬ್ರಹ್ಮಣ್ಯದ ಮಡೆಸ್ನಾನದ ಬಗ್ಗೆ ಹೇಳ್ತಾರೆ ಅದು ಇಂಥಾ ಜಾತಿಯೋರಿಂಗೆ ಹೇಳಿ ನಡಕ್ಕೊಂಡು ಬಂದ ಸಂಪ್ರದಾಯ ಅಲ್ಲ ಅಲ್ಲದಾ? ದೇವರ ಶಕ್ತಿಯ ನಂಬಿದ ಭಕ್ತಂಗೋ ಅವರವರ ಇಷ್ಟಾರ್ಥ ಸಿದ್ಧಿಗೆ ದೇವರಿಂಗೆ ಆತ್ಮಸಮರ್ಪಣೆ ಮಾಡ್ಲೆ ರೂಪಿಸಿಗೊಂಡ ಒಂದು ಮಾರ್ಗ. ಮನುಷ್ಯ ಯಾವಾಗ ದೇವರ ನಂಬುತ್ತ? ತನಗೆ ಜೀವನಲ್ಲಿ ತುಂಬಾ ಕಷ್ಟ ಬಂದು ಅದರ ಸುಳಿಂದ ಹೆರ ಬಪ್ಪಲೆ ದೇವರ ಮೊರೆ ಹೊಕ್ಕು, ತನ್ನ ದೇಹದಂಡನೆಯ ರೂಪಲ್ಲಿ ಆದರೂ ದೇವರ ಸಂಪ್ರೀತ ಮಾಡಿ ಫಲ ಪಡ ಕ್ಕೊಂಬ ಪ್ರಯತ್ನ ಮಾಡ್ತ° ಅಲ್ಲದಾ? ಮಡೆಸ್ನಾನಕ್ಕೆ ಹರಕ್ಕೆ ಹೊತ್ತ ಜನಂಗಳ ಹತ್ತರೆ ಅವು ಎಂತಕ್ಕೆ ಹರಕ್ಕೆ ಹೊತ್ತವು ಹೇಳಿ ಕೇಳಿದರೆ ಪ್ರತಿಯೊಬ್ಬನ ಕಥೆಯೂ ಬೇರೆ ಬೇರೆ ಆದಿಕ್ಕು. ಅದರಲ್ಲಿ ಅವರ ಜೀವನದ ಬೇನೆ ಇಕ್ಕು, ದೇವರಿಂಗೆ ಹರಕ್ಕೆ ಸಂದಾಯ ಮಾಡಿದರೆ ನಾಳೆ ಜೀವನಲ್ಲಿ ಕೊಶಿ ಬಕ್ಕು ಹೇಳ್ತ ಆಶಯವೂ ಇಕ್ಕು ಅಲ್ಲದ? ಜನಂಗಳ ಈ ನಂಬಿಕೆಗೆ ರಾಜಕೀಯ ಬಣ್ಣ ಕೊಟ್ಟರೆ ಅದರ ದೇವರು ಮೆಚ್ಚುಗೋ? ನೀನು ಹೇಳಿದ ಹಾಂಗೆ ದೇವರ ಪ್ರಥಮ ಶಿಷ್ಯ ವರ್ಗದವ್ವೇ ಗಲಾಟೆ ಮಾಡ್ಲೆ ಬಂದೋರ ನೋಡಿಗೊಂಡವಿಲ್ಲೆಯಾ?

    ಒಪ್ಪಣ್ಣೋ, ನೀನು ಹೇಳಿದ ಹಾಂಗೆ ಎಲ್ಲೋರೂ ತಪ್ಪು ಹುಡ್ಕುದು ನಮ್ಮ ಸನಾತನ ಧರ್ಮಲ್ಲಿ ಮಾತ್ರ! ತಪ್ಪು ಹೇಳ್ತ ದೃಷ್ಟಿಲಿ ನೋಡ್ತವಂಗೆ ಎಲ್ಲದರಲ್ಲಿಯೂ ತಪ್ಪು ಕಾಣ್ತು ಅಲ್ಲದಾ? ಜೀವನ ಸಂಕಷ್ಟದ ಸುಳಿಲಿ ಇಪ್ಪವಂಗೆ, ನಂಬಿಕೆಗಳ ನಂಬಿ ಬದುಕ್ಕುವವಂಗೆ ಲೋಕದವರ ಯಾವ ಹುಳ್ಕುಗಳೂ ಕಾಣ. ಅವನ ಮನಸ್ಸು ದೇವರ ಮೇಲೆ ಇರ್ತು, ಗುರಿ ಕಷ್ಟ ನಿವಾರಣೆಯ ಮೇಲೆ ಇರ್ತು ಅಲ್ಲದಾ? ಎಲ್ಲರಿಂಗೂ ಚುಬ್ಬಣ್ಣ ಒಳ್ಳೆ ಬುದ್ಧಿ ಕೊಡಲಿ..

    ಒಂದೊಪ್ಪ ಲಾಯ್ಕಾಯಿದು.

    1. ಅಕ್ಕೋ ,
      (ಎಲ್ಲರಿಂಗೂ ಚುಬ್ಬಣ್ಣ ಒಳ್ಳೆ ಬುದ್ಧಿ ಕೊಡಲಿ..)
      ಇದು ಆ ಕನ್ನಾಟಿ ಮಡಗುತ್ತ ಚುಬ್ಬಣ್ಣ ಅಲ್ಲನ್ನೇ ಹೇಳಿ ಬೋಚ ಬಾವ ಕೇಳಿಯೊಂಡಿತ್ತಿದ್ದ……..

  8. ಈ ಜನಂಗೊಕ್ಕೆ ಹಿಂದೂ ನಂಬಿಕೆಯ ಬಯ್ವದು ಹೇಳಿದರೆ ಖುಷಿ ಹೇಳಿ ಕಾಣ್ತು. ಬ್ರಾಹ್ಮಣರಿಂಗೆ ಬಯ್ದರೆ ಒಂದು ವಿಕೃತವಾದ ಖುಷಿ ಇವಕ್ಕೆ. ಕಾರಣ ಬೇಡದ ‘ಬುದ್ಧಿ’ ಇರದ ‘ಜೀವಿ’ಗೋ..

  9. ‘ಯೇನಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವ।’ ಇಷ್ಟೇ ವಿರೋಧದ ಹಿನ್ನಲೆ. ಈ ದೇಶಲ್ಲಿ ಬ್ರಾಹ್ಮಣರು ಸುಲಭಲ್ಲಿ ಸಿಕ್ಕುತ್ತವು ವಿರೋಧುಸಲೆ! ಬೇರೆಯವರ ಬಗ್ಗೆ ಮಾತಾಡಿದ್ದರೆ ಇಷ್ಟೊತ್ತಿಂಗೆ ತಲೆತಪ್ಪುಸಿ ಓಡೆಕಿತ್ತು- ತಸ್ಲೀಮಾ ನಸ್ರಿನ್ ಹೇಳ್ತದರ ಬಗ್ಗೆ ಗೊಂತಿಲ್ಲೆಯೊ? ನಮ್ಮ ಬ್ರಾಹ್ಮಣರಾದರೆ “ಅಪ್ಪಪ್ಪು, ನಿಂಗೊ ಹೇಳಿದ್ದೇ ಸರಿ, ಮಡೆಸ್ನಾನ ದೊಡ್ಡ ತಪ್ಪು, ಅನ್ಯಾಯ” ಹೇಳ್ತವು! ಆನು ಇದರ ಬಗ್ಗೆಯೇ ಬೇರೆದಿಕ್ಕೆ ಚರ್ಚೆ ಮಾಡುವಗ ಕಂಡ ಸಂಗತಿ ಇದು…

  10. ಉತ್ತಮ ಲೇಖನ ಒಪ್ಪಣ್ಣ, ಮಡೆ ಸ್ನಾನವ ವಿರೋಧಿಸುವವು ಊರಿಲಿ ಭೂತ ಕಟ್ತಿದ ಸಮಯಲ್ಲಿ ನಲಿಕ್ಕೆಯವಕ್ಕುದೆ ಎಲ್ಲ ಜಾತಿಯವ್ವು ಕೈ ಮುಗಿತ್ತು ಹೇಳುದರ ಗಮನಿಸೆಕ್ಕು. ಅದೇ ರೀತಿ ಯಾವ ಚರ್ಮ ರೋಗ ತಜ್ನರತ್ರೂ ಗುಣ ಆಗದ ರೋಗ೦ಗೊ ಮಡೆಸ್ನಾನಲ್ಲಿ ಗುಣ ಆದ್ದು ತಿಲ್ಕೊನ್ದ್ರೆ ಒಳ್ಲೆದು. ಅದೇ ರೀತಿ ಈಗೀಗ ಭ್ರಾಹ್ಮಣರ ಹ೦ತಿ ಭೇದದ ಬಗೆಗೆ ಬಾರಿ ವಿರೋಧ ಸುರು ಅಯ್ದು, ಹಾಗಿಪ್ಪ ಬುದ್ದು ಜೀವಿಗಳ ಸರಿಯಾದ ಭ್ರಾಮರ ಹ೦ತಿಲಿ ಕೂರ್ಸಿರೆ ಆತು, ಒ೦ದು ಗನ್ತೆ ಚಕ್ಕಲ್ನಾಟಿ ಕೂದು ಉನ್ಸಿರೆ ಮತ್ತೆ ಮಾತಾಡವು..

  11. ಚೊಲೊ ಬರದ್ರಿ ಒಪ್ಪಣ್ಣ… ಸರಿಯಾದ ಮಾತು ಅದು…
    ಅರೆ ನಂದ ಕಿಶೋರ ಇಲ್ಲಿಯೇ ಇದ್ಯಾ… ನಾ ಬಂದಿದ್ದಕ್ಕೆ ಬೇಜಾರಿಲ್ಲೆ ಅಲ್ದಾ..>>?

    1. ಬೇಜಾರೆಂತಕೆ ಸಂತೋಷಣ್ಣಾ??
      ನಿಂಗಳೂ ಬಂದರೆ ಖುಶಿಯೇ 🙂

      1. ಎಲ್ಲಿಯೋ ನೋಡಿಂಡು ಬರದರೆ ಹೀಂಗೇ ಅಪ್ಪದಿದಾ…
        ಪ್ರಶಾಂತಣ್ಣ ಹೇಳಿ ಆಯೆಕಾದಲ್ಲಿ ಸಂತೋಷಣ್ಣ ಹೇಳಿ ಆವುತ್ತು..
        ಬೇಜಾರಿಲ್ಲೆನ್ನೆ??

  12. ತುರುವೇಕೆರೆ ಬೇಟೆರಾಯ ಸ್ವಾಮಿ ದೇವಸ್ತಾನದಲ್ಲಿ (ವಿಷ್ಣುವಿನ ದೇವಸ್ತಾನ ) ಶತಮಾನಗಳಿಂದ ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ ಆಚರಣೆ…..
    ಯಾಕೆ ಯಾರು ಇದುವರೆಗೆ ಇದನ್ನು ಪ್ರಸ್ತಾಪಿಸಿಲ್ಲ?

    1. ಹೌದು ಯಾಕೆ ಕೇವಲ ಸುಬ್ರಹ್ಮಣ್ಯ ದಲ್ಲಿ ಮಾತ್ರ ವಿರೋದ ಹೇಳೀ ನಂದೂವಾ..>

  13. ಒಳ್ಳೆ ಲೇಖನ ಒಪ್ಪಣ್ಣ..
    ಆನು ಚೌತಿ ದಿನ ಸುಬ್ರಹ್ಮಣ್ಯಕ್ಕೆ ಹೋಗಿತ್ತಿದ್ದೆ..
    ಎಲ್ಲ ಚೆಂದಕೆ ನಡದಿತ್ತು..

    ನಾವೆಂತಕೆ ತಲೆಬೆಶಿ ಮಾಡುದು?
    ಅವಂಗೆ ಬೇಕು ಹೇಳಿ ಇದ್ದರೆ ಅವನೆ ನಮ್ಮ ಕೈಲಿ ಮಾಡ್ಸುತ್ತ..
    ಅವನ ಅಪ್ಪಣೆಗೆ ಕಾದು ಕೂಪ ತಾಳ್ಮೆ ಇದ್ದರೆ ಸಾಕಿದಾ…?

  14. ರಾಜೇಂದ್ರಣ್ಣೋ … ಆನು ಪ್ರಶಾಂತ ಇಲ್ಲಿಗೂ ಬಂದೆ.. ನಿಂಗಳ ಭಾಶೆ ಕಲಿಯಕಾಯ್ದು ಈಗ..>

    1. ಪ್ರಶಾಂತ, ಒಪ್ಪ ಕೊಟ್ಟು ಭಾಗವಹಿಸಿದ್ದು ಖುಷಿ ಆತು. ಇಲ್ಲಿಯ ನಾಲ್ಕೈದು ಬರವಣಿಗೆ ಓದಿದರೆ ಸರಿಯಾಗಿ ಅರ್ಥ ಆವುತ್ತು. ಸಮಚಿತ್ತ ಹವ್ಯಕರು ಎಲ್ಲಿದ್ದರೂ ಒಂದೇಯ. ಹಾಂಗಾಗಿ ಏನೂ ಕಷ್ಟ ಆಗ.

  15. ಹೂ… ಕಡೇಂಗೆ ಎಂತಾತಡ ಈಗ??? ಎಂತೋ ಸುಪ್ರೀಮು ಕೋರ್ಟು ಅದು ಇದು ಹೇಳ್ತದು ಕೇಳ್ತಾ ಇತ್ತು…?? ಇದು ಎಂತಕ್ಕು ಹೇಳಿ??

  16. ಬುದ್ದಿ ಇಲ್ಲದ್ದ ಜೀವಿಗೊ :- ಒಪ್ಪ.
    ಪಾದ್ರಿಗಳ ಪವಿತ್ರ ಜಲ- ಟೇಂಕಿ ನೀರು :- ಒಪ್ಪ.
    ಪುರ್ಬುಗಳಲ್ಲಿಯೋ,ಮಾಪ್ಳೆಗಳಲ್ಲಿಯೋ ಮಣ್ಣ ತಪ್ಪು ಹುಡ್ಕಲಿ ನೋಡೊ! ಬೆಟ್ರಿ ಇದ್ದರಲ್ಲದೋ! :- ಸೂಪರ್ ಒಪ್ಪ.
    ಕಾಣಿಕೆ :- ಒಪ್ಪ

    ಬಹು ಲಾಯಿಕ್ಕಕ್ಕೆ ಬರದ್ದೆ ಒಪ್ಪಣ್ಣೊ, ಹಾಂಗಾಗಿ ನಿನಗೊಂದು ಒಪ್ಪ.

  17. ಬೆಶಿ ಬೆಶಿ ಶುದ್ದಿಯ ಬೆಶಿ ಬೆಶಿಲೇ ಬರದ್ದು ಒಪ್ಪ ಆಯ್ದು.
    ‘ದಲಿತ ಪರ ಹೋರಾಟ’ ಹೇಳುದು ಸುಲಾಬಲ್ಲಿ ಪ್ರಚಾರ ಸಿಕ್ಕುವ ಧರ್ಮದ ಸಂಗತಿ ಆಯ್ದೀಗ. ಇದ್ದಬದ್ದದಕ್ಕೆಲ್ಲ ಹಾಂಗೊಂದು ಹೆಸರು ಕೊಟ್ಟು ನಾಕು ಗೆರೆ ಭಾಷಣ ಮಾಡಿಕ್ಕಿ ಧರಣಿ ಕೂದರೆ ಆತು. ಟೀವಿಲಿ ಪೇಪರಿಲಿ ದೊಡ್ಡ ದೊಡ್ಡಕೆ ಹೆಸರು ಬತ್ತು.
    ಹಾಂಗೇ ಮಾಡ್ಳೆ ಹೆರಟ ಆ ಬುದ್ಧಿಲ್ಲದ್ದ ಜನಕ್ಕೆ ಸರಿಯಾಗಿ ಬುದ್ಧಿಕಲಿಶಿದವು ನಮ್ಮವು.
    ಅವರವರ ನಂಬಿಕೆಗೊ ಅವಕ್ಕವಕ್ಕೆ. ಅದರ ಕೆದಕುಲೆ ಬಂದರೆ ಎಂತಾವುತ್ತೂಳಿ ಹೇಳ್ಳೆ ಒಂದು ಪ್ರತ್ಯಕ್ಷ ಉದಾಹರಣೆ ಸಿಕ್ಕಿತ್ತದ.

  18. ನಂಬಿಕೆಯ ಹಾಳು ಮಾಡುವ ಮೂಢಂಗೆ ನಾಲ್ಕು ಮಡಗಿದ್ದು ಚೊಕ್ಕಾಯಿದು.
    ಅಧಿಕ ಪ್ರಸಂಗ ಮಾಡುವ ಪಟಿಂಗಂಗೊಕ್ಕೆ ಹೀಂಗೆ ಅಲ್ಲಲ್ಲೇ ಸಮ್ಮಾನ ಸಿಕ್ಕಿದರೆ
    ರಜ ಕಾಟ ಕಡಮ್ಮೆ ಅಕ್ಕೋ ಏನೋ…

  19. ಬುದ್ಧಿ ಜೀವಿಗೊ ಹೇಳಿಂಡು ಬಂದು ಗಲಾಟೆ ಮಾಡುವವಕ್ಕೆ ಅತ್ತ ವೈಜ್ಞಾನಿಕ ಮನೋಭಾವವೂ ಇಲ್ಲೆ, ಇತ್ತ ಸಾಮಾಜಿಕ ಕಳಕಳಿಯೂ ಇಲ್ಲೆ. ಒಟ್ಟಾರೆ ಬ್ರಾಹ್ಮಣರ ದೂರಿಂಡು ಬಪ್ಪದೇ ಮುಖ್ಯ ಅಜೆಂಡಾ. ಅದು ಇಲ್ಲದ್ರೆ ಮತ್ತೆ ದೂರಲೆ ಹಿಂದೂ ಸಮಾಜವೂ ಆವುತ್ತು.
    ಈ ಸಮಾಜಲ್ಲಿ ಎಲ್ಲವೂ ನಂಬಿಕೆಯ ಮೇಲೆಯೇ ನೆಡೆತ್ತಾ ಇಪ್ಪದು.
    ಪ್ರಶ್ನೆ ಇಪ್ಪದು- ಹಿಂದುಗಳ ನಂಬಿಕೆಗಳ ಮಾತ್ರ ಎಂತಕೆ ಟೀಕೆ ಮಾಡ್ಲೆ ಎಡಿಗಪ್ಪದು. ಬೇರೆ ಮತಸ್ಠರದ್ದು ಎಂತಕೆ ಎಡಿಯದ್ದಿಪ್ಪದು?
    ಪಿರಿ ಕಾದ್ದ್ದು ಸಾಕಾವ್ತಿಲ್ಲೆ
    ಒಂದೊಪ್ಪ ಲಾಯಿಕ ಆಯಿದು

    1. ಅಪ್ಪಚ್ಚೀ,
      ಬ್ರಾಹ್ಮಣ್ಯವ ದೂರ್ತದು ಹೇದರೆ ಒಳುದೋರ ಒಂದು ಮಾಡಿ ಬೇಳೆಬೇಶಲೆ ಒಂದು ದಾರಿ ಹೇದು ಆಯಿದು ಈಗ.
      ಒಬ್ಬ ಬ್ರಾಹ್ಮಣರ ದೂರಿರೆ, ಅವಂಗೆ ಹಿಂದುಗಳಲ್ಲಿ ಒಳುದ ಜಾತಿಯೋರು, ಪುರ್ಬುಗೊ, ಮಾಪ್ಳೆಗೊ ಹತ್ತರೆ ಅಪ್ಪಲಕ್ಕು – ಹೇಳಿ ಸೂಚನೆ ಅಷ್ಟೆ.

      ಮದಲು ಹೇಂಗಿದ್ದರೂ, ಇನ್ನು ಒಂದಾಗಿಪ್ಪ ಮನಸ್ಸಿಪ್ಪಲಾಗದೋ?
      ದೇವರಿದ್ದ, ಎಂತಾವುತ್ತು ನೋಡುವೊ, ಅಲ್ಲದೋ ಅಪ್ಪಚ್ಚಿ…

  20. ನಮಸ್ತೆ, ಒಪ್ಪಣ್ಣ, ಸುಮಾರು ದಿನ ಆತು ಇಲ್ಲಿ ಕಾಣದ್ದೆ,

    ಈ ಸುಬ್ರಹ್ಮಣ್ಯದ ವಿಷಯಲ್ಲಿ ಇವಕ್ಕೆ ಮಡೆಸ್ನಾನ ನಿಲ್ಲುಸುದು ಮುಖ್ಯ ಅಲ್ಲ, ಬ್ರಾಹ್ಮಣರು ಊಟ ಮಾಡುದು ಮತ್ತು ಆ ಎಲೆಲೆ ಉರುಳುದು ತಪ್ಪು ಹೇಳಿ ಇಂದು ಎನಿಗೆ ಗೊತ್ತಾದ ಅಧಿಕೃತ ಸುದ್ದಿ. ಅದಕ್ಕೆ ಅವು ಹೇಳಿದ್ದವು ಎಂಗೊ ಊಟ ಮಾಡಿದ ಎಲೆಲಿ ಬ್ರಾಹ್ಮಣರು ಉರುಳಲಿ ಹೇಳಿ, ಅದರೊಟ್ಟಿಗೆ ಹೇಳಿದವು ಎಂಗೊಗೂ ಅಲ್ಲೇ ಊಟ ಹಾಕಿ ಹೇಳ್ತವು. ಮೊನ್ನೆ ಅವು ಬಂದ ಉದ್ದೇಶವೂ ಅದೇ ಆಗಿತ್ತು, ಒಳ ಕೂತು ಊಟ ಮಾಡುವ ಉದ್ದೇಶ ಇತ್ತು. ಆದರೆ ಹೆರೆವೇ ಪೆಟ್ಟು ಬಿದ್ದ ಕಾರಣ ಎಲ್ಲಾ ಪ್ಲಾನ್ ಠುಸ್ ಆತು ಅಷ್ಟೆ. ಹೀಂಗೆಲ್ಲಾ ಇಪ್ಪಗ ಬ್ರಾಹ್ಮಣರು ಸುಬ್ರಹ್ಮಣ್ಯದ ಷಷ್ಠಿಗೆ ಊಟಕ್ಕೆ ಅಂದೇ ಹೋಪಲಾಗ. ಬೇರೆ ಯಾವಗಾದರೂ ಹೋಗಿ ಊಟ ಮಾಡಿ ಬಂದರೆ ಎಂತ ಆವುತ್ತು ?

    1. ಪುಚ್ಚಪ್ಪಾಡಿ ಅಣ್ಣನ ಒಪ್ಪವ ನಿರೀಕ್ಷೆಲಿ ಇತ್ತಿದ್ದೆ. ಇಂದೇ ಕಂಡು ಮಹದಾನಂದ ಆತು.
      ತುಂಬ ಲಾಯಿಕ ಬರದ್ದಿ.

      { ಬೇರೆ ಯಾವಗಾದರೂ ಹೋಗಿ ಊಟ ಮಾಡಿ ಬಂದರೆ ಎಂತ }
      ಎಂತಕೆ? ಅದೇ ದಿನ ಉಂಡ್ರೆಂತ.
      ನಮ್ಮ ಊರಿನ ಸಹೋದರರು ಎಂತದೂ ಹೇಳಿದ್ದವಿಲ್ಲೆ. ಗಟ್ಟದ ಮೇಗಾಣ ಸ್ವಯ ಇಲ್ಲದ್ದ ಕೆಲವು ಬೆಗುಡಂಗೊ ಹೇಳಿದ್ದು. ಆ ಜೆನಂಗಳ ದುರಾಲೋಚನೆಯ ನಿಲ್ಲುಸಿದ್ದುದೇ ಬ್ರಾಹ್ಮಣರು ಅಲ್ಲ.
      ನಮ್ಮ ಊರಿನ ಸಹೋದರರೇ.

      ಸ್ಥಳೀಯ ಚಿತ್ರಣವ ಸ್ಥಳೀಯರೇ ಕೊಡೆಕ್ಕಷ್ಟೆ.
      ಎಲ್ಲ ಟೀವಿ-ಪೇಪರಿನವು ಬರೆತ್ತದು ನೋಡಿರೆ ಹಾಂಗೇ ಅನುಸುತ್ತು.
      ಕುಕ್ಕೆಯ ಘಟನೆಯ ವರದಿಮಾಡಿದ ಪತ್ರಕರ್ತರಲ್ಲಿ ಹೆಚ್ಚಿನೋರುದೇ ಈ ಸೇವೆಯ ಬಗ್ಗೆ ಏನೂ ಅರಡಿಯದ್ದೋರು.
      ಇಡೀ ಸಮಾಜವ ಹಳ್ಳ ಹಿಡುಶುತ್ತವು ಅವ್ವೇಯೋದು ಒಂದು ಸಂಶಯಬಪ್ಪದು ಪೆರ್ಲದಣ್ಣಂಗೆ.

      1. ಇದರ ಸುರು ಮಾಡಿದವು ಸುಬ್ರಹ್ಮಣ್ಯದ ಒಬ್ಬ ಪತ್ರಕರ್ತನೇ, ಅವಂಗೆ ಎಂತ ಆಯಿದು ಹೇಳಿ ಇಲ್ಫ್ಲಿ ಬರವಲೆ ಎಡಿಯ, ಮಹೇಶಣ್ಣನತ್ತರೆ ಒಂದರಿ ಕೇಳಿ ನೋಡಿ.

    1. ಹಾಂಗೆ ನೋಡಿರೆ ದಲಿತರು ಭಾರತಲ್ಲಿ ಎಲ್ಲಿಯೂ ಇಲ್ಲೆ ಗೀತತ್ತೆ.
      ಇಪ್ಪದು ಓಟಿನ ರಿಜಿಸ್ತ್ರಿಲಿ ಮಾಂತ್ರ!

    1. ಪೆರುವದಣ್ಣೋ, ಬೇಜಾರಾತೋ?
      ಆ ಜೆನರ ಬೊಬ್ಬೆ ಕೇಳಿ ಒಪ್ಪಣ್ಣಂಗೂ ಬೇಜಾರಾಗಿತ್ತು. 🙁 🙁
      ಆದರೆ, ತೊಂದರೆ ಇಲ್ಲೆ.

      ದೇವಸೇನಾಪತಿಗೆ ಉಶಾರಿನ ಸೈನಿಕರು ಇಪ್ಪದು ಸಂತೋಷದ ವಿಶಯ!

  21. ಹರೇ ರಾಮ,

    “ನಂಬಿದ್ದರ ಮೇಗೆ ಸಂಶಯ ಮಾಡ್ಳಾಗ. ನಂಬಾಣಿಕೆಗಳ ರಥಲ್ಲೇ ಅಲ್ಲದೋ, ಬಾಳಿನ ಷಷ್ಠಿಜಾತ್ರೆ ನೆಡೆತ್ತದು!” …
    “ಪಿರಿಗೊ ಎಲ್ಲವೂ ಗಟ್ಟಿ ಕಾದಿದ್ದರೇ, ಬಳ್ಳಿ ಗಟ್ಟಿ ಇಪ್ಪದು. ಆ ಬಳ್ಳಿಯೇ ಗಟ್ಟಿ ಇಲ್ಲದ್ದರೆ ಸಂಸಾರ ರಥ ಎಳವದು ಹೇಂಗೆ?!”.
    ತುಂಬಾ ತುಂಬಾ ಇಷ್ಟ ಆತು.

    ನಾವು ಯಾವ ತರ ಸುಖ ಜೀವನ ನಡೆಸಲಕ್ಕು ಹೇಳುದರ ಸಂಶೋಧನೆ ಮಾಡಿ ಕಂಡುಗೊಂಡು ಗಟ್ಟಿಗೆ ನೈದು ಮಡಗಿದ್ದದೆ ಈ ನಂಬಿಕೆಯ ಬಳ್ಳಿ. ಕಾಲದ ಪ್ರಭಾವವೋ, ವಿದೇಶಿಯರ ಆಕ್ರಮಣವೋ… ಕಾರಣ ಎಂತದೋ… ಅಂತೂ ಆ ಬಳ್ಳಿ ಇಂದು ಪೂರ್ತಿ ಶಿಥಿಲ ಆಯಿದು. ಅದೆಷ್ಟು ಶಿಥಿಲ ಆಯಿದು ಹೇಳಿರೆ ನಮಗೆ ಆ ಬಳ್ಳಿ ಹೇಂಗೆ ಇದ್ದತ್ತು, ಎಂತಕೆ ಇದ್ದತ್ತು ಹೇಳುದರ ಅರ್ಥ ಮಾಡಿಗೊಮ್ಬಲೆ ತುಂಬಾ ತುಂಬಾ ಕಷ್ಟ ಅಥವಾ ಜೀವನ ಪೂರ್ತಿ ಸಂಶೋಧನೆ ಮಾಡಿಗೊಂಡೆ ಕೂರೆಕ್ಕಷ್ಟೆ. ನಮಗಿಪ್ಪ ಇಂದು ಇಪ್ಪ ಅತ್ಯಂತ ಸುಲಭ ವಿಧಾನ ಹೇಳಿರೆ ಆ ಬಳ್ಳಿಯ ಮತ್ತೆ ನೈತ್ತ ಇಪ್ಪವರ ಜೊತೆ ಸೇರಿ…ಎಲ್ಲೋರನ್ನೂ ಸೇರುಸಿಗೊಂಡು ಬಳ್ಳಿ ನೈವದು. ಎಂತಕೆ ಹೇಳಿರೆ ಜೀವನಲ್ಲಿ ಒಬ್ಬನೇ ಹೇಳಿ ಸುಖ ಪಡುಲೆ ಸಾಧ್ಯವೇ ಇಲ್ಲೇ. ನಾವು ಖುಷಿಯಾಗಿರೆಕ್ಕಾರೆ ನಮ್ಮ ಸುತ್ತಮುತ್ತಲಿಪ್ಪವು ಎಲ್ಲ ಖುಷಿಯಾಗಿರೆಕ್ಕು… ಎಲ್ಲ ಪಿರಿಗಳ ಸೇರುಸಿಗೊಂಡು ಒಪ್ಪಣ್ಣ ಹೇಳಿದ ಹಾಂಗೆ ಗಟ್ಟಿ ಬಳ್ಳಿ ನೈವ ಅಲ್ಲದ?

    1. ಜಯಕ್ಕಾ, ಭಾರೀ ಚೆಂದ ಬರದ್ದಿ ಒಪ್ಪವ!
      ಲಾಯಿಕಲ್ಲಿ ನೈದು ಮಡಗಿರೆ, ರಥ ಎಳವಲೂ ಅಕ್ಕು, ಅಂಬೆರ್ಪಿಂಗೆ ಪಿರಿಕಾಯಿಸಲೂ ಅಕ್ಕು. ಅಲ್ಲದೋ? 🙂

  22. ಒಪ್ಪಣ್ಣೋ , ಮಲೆಕುಡಿಯರ ಬುಡಕಟ್ಟು ಜನ ಹೆಳ್ತವು………ಅವರ ದಲಿತರು ಹೆಳುದು ಗೊಂತಿತ್ತಿಲ್ಲೆ…….schedule tribes group ಲಿ ಅವರ ಸಮಾಜಶಾಸ್ತ್ರ ಅಧ್ಯಯನ ಮಾಡ್ತು………….

    1. ವಿದ್ಯಕ್ಕಾ,
      ವಿಷಯ ಹೀಂಗಿದ್ದೋ? ಆಯಿಪ್ಪಲೂ ಸಾಕು. ನವಗರಡಿಯ.

      ಆದರೆ, ಪೆಟ್ಟು ತಿಂದ ಬುದ್ಧಿಲ್ಲದ್ದ ಜೀವಿಂದ ಹೆಚ್ಚು ಬುದ್ಧಿ ಇಪ್ಪವು ಇವು. 🙂
      ಎಂತ ಹೇಳ್ತಿ?

      1. ನಿಜಕ್ಕು ಅಪ್ಪು ಒಪ್ಪಣ್ಣೋ……………….. ಪೆಟ್ಟು ತಿಂದವು ಬುದ್ಧಿ ಇಲ್ಲದ್ದೆ ಪೆಟ್ಟು ತಿಂದದಾಗಿರ……..ಅವಕ್ಕೆ ಬುದ್ಧಿ ಹೆಚ್ಚಾದ್ದು……. ಅಹಂಕಾರ…….. ಅಷ್ಟೇ……. ಅಥವ ಎಂಗೊಗೂ ಬುದ್ಧಿ ಇದ್ದು ಹೇಳಿ ತೋರ್ಸಲೆ ಹೆರಟ ದಾರಿ ತಪ್ಪಾದ್ದಷ್ಟೆ ಎಂತ ಹೇಳ್ತಿ?

  23. ಒಪ್ಪಣ್ಣೋ , ಬೆಶಿಲಿಲಿ ಬೇಳೆಬೇಶಲೆ ಬಂದ ಬೆಗುಡಂಗೊಕ್ಕೆ ಬೆಲ್ಲಕಾಯಿ ಕೊಟ್ಟಹಾಂಗೆ ನಾಕು ಬಿಗುದ್ದದು ಬಾರೀ ಲಾಯಿಕಾಯಿದು ಹೇಳಿ ಒಂದೊಪ್ಪ, ಇನ್ನು C ಭಾವನ ಹಾಂಗೆ ಹೇಳುದಾದರೆ
    ಅಲ್ಲಿಂದ ಬಂದ ಆಕಾಟುಗೊ ಇಲ್ಲಿಯಾಣವರ ಈ ನಂಬಿಕಗೆ ಅಡ್ಡಿಮಾಡಿದ್ದಕ್ಕೆ ಉಂಬಂದ ಮೊದಲೇ ಊಟ ಹಾಕಿದ್ದರ ಬೈಲಿಂಗೆ ಹಾಕಿದ್ದಕ್ಕೆ ಧ್ನ್ಯವಾದಂಗೊ ,ಋಣ ಭಾರ ತೀರುಸಲೆ ಎಲೆಲಿ ಉಂಡವು ಏಳೆಕಾರೆ ಉರುಳುಲಾಗ ಹೇಳಿದವಕ್ಕೆ ಐ ಯ್ಯ ಯ್ಯೋ ಹೇಳುವಹಾಂಗೆ ಒಪ್ಪಕೆ ಕೊಟ್ಟು ಓಡುಸಿದ್ದದು ಲಾಯಿಕಾಯಿದು ಔಚಿತ್ಯಪೂರ್ಣ ಲೇಖನ ಅಂತೂ ಕೊನೆಗೂ ನಂಬಿಕೆಯೇ ಉಳುತ್ತಲ್ಲದೋ..?, ಅಃ, ಪಾಡ್ಲಯ ಪಾಡ್ಲೆ ಹೇಳಿಯಪ್ಪಗ ನಾಕುಬಿದ್ದದು ಲಾಯಿಕಾಯಿದು ಹೇಳಿ ಇನ್ನೊಂದೊಪ್ಪ

    1. ಪ್ರಸಾದಭಾವಾ!

      ವ್ಯಕ್ತಿಯೊಬ್ಬನ ಆಂತರಿಕ ನೆಮ್ಮದಿಗೋಸ್ಕರ ನಮ್ಮ ದೇಶಲ್ಲಿ ಯೇವ ಕಾರಯವನ್ನೂ ಮಾಡ್ಳಕ್ಕು – ಇನ್ನೊಬ್ಬಂಗೆ ತೊಂದರೆ ಆವುತ್ತಿಲ್ಲೇ ಹೇಳಿ ಆದರೆ.
      ಹಾಂಗಿಪ್ಪಗ ಈ ಬುದ್ಧಿಲ್ಲದ್ದೋರದ್ದು ಎಂತರ ತಕರಾರು – ಅಲ್ಲದೋ?

  24. ನಂಬಿಕೆ ಘಟ್ಟಿಯಾಗಿ ಇದು ನಮ್ಮ ಸಂಪ್ರದಾಯ ಹೇಳಿ ನಂಬಿದವಕ್ಕೆ, ಅ ನಂಬಿಕೆಯೇ ತಪ್ಪು ಹೇಳಿ ಬುದ್ದಿ ಕಮ್ಮಿಇಪ್ಪ ಬುದ್ದಿ ಜೀವಿಗೊ ವಿರೋಧಿಸಿದರೆ ಅಪ್ಪ ಪರಿಣಾಮವೇ ಇದು. ಕಮ್ಮಿ ನಿಷ್ಟಂಗೆ ಅಲ್ಲಿ ಆದ ಹಲ್ಲೆ ಬುದ್ಧಿ ಕಮ್ಮಿ ಇಪ್ಪವಕ್ಕೆ ಒಂದು ಪಾಠ.

    1. ಬುದ್ಧಿ ಕಮ್ಮಿ ಇಪ್ಪಲೆ ಬುದ್ಧಿ ಬೆಳವಲೇ ಅಲ್ಲದೋ – ನಾಗರಬೆತ್ತ ಇಪ್ಪದು!
      ಪ್ರೈಮರಿಲಿ ಮಾಷ್ಟ್ರಕ್ಕೊ ಹಾಂಗೆ ಮಾಡಿಯೇ ಅಲ್ಲದೋ ನಮ್ಮ ದಾರಿಗೆ ತರುಸಿದ್ದು.

      ಅವಕ್ಕೂ ಹಾಂಗೇ ಮಾಡೇಕಟ್ಟೆಯೋದು!

  25. ಮಡೆಸ್ನಾನಲ್ಲಿ ಆರನ್ನೂ ಒತ್ತಾಯಿಸುತ್ತವಿಲ್ಲೆ.ಹರಕೆ ಹೊತ್ತವು ಮಾಡುತ್ತವು.ಅದೊಂದು ದೊಡ್ಡ ಸಮಸ್ಯೆ ಅಲ್ಲ.
    ಅದು ಬೇಡ ಹೇಳಿ ಆದರೆ ನಿಲ್ಲುಸಲಕ್ಕು-ಅದರ ಬಗ್ಗೆ ಪ್ರಶ್ನೆ ಮಡುಗುತ್ತವಡ.ದೇವರಿಂಗೆ ಅದು ಬೇಕೊ ಹೇಳಿ ನೋಡುವದು.
    ನಮ್ಮ ಸಮಾಜಲ್ಲಿ ಬೇಕಾದಷ್ಟು ಬೇರೆ ಸಮಸ್ಯೆಗೊ ಇದ್ದವು.ಜನನಾಯಕರು ಅದರ ಬಗ್ಗೆ ಗಮನ ಹರಿಸಲಿ.
    ಜನಂಗೊ ನಂಬಿಕೆಲಿ ಚಳಿಲಿ ಗಂಗಾ ಸ್ನಾನ ಮಾಡುತ್ತವು.ಹಿಮಾಲಯ ಹತ್ತಿ ಹೋವುತ್ತವು,ಮಾನಸ ಸರೋವರಕ್ಕೆ ಹೋವುತ್ತವು.ಉಪವಾಸ ಮಾಡುತ್ತವು. ಶಬರಿ ಮಲೆಗೆ ಹೋವುತ್ತವು.ಎಲ್ಲವನ್ನೂ ಮೂಢನಂಬಿಕೆ ಹೇಳಿದರೆ,ಧಾರ್ಮಿಕ ಆಚರಣೆ ರದ್ದು ಮಾಡೆಕ್ಕಾಗಿ ಬಕ್ಕು.[ಕ್ರಮೇಣ ಹಾಂಗೆ ಆವುತ್ತೊ ಹೇಳಿ ತೋರುತ್ತು].ಮೊದಲೆಲ್ಲ ರೋಗ ಬಂದ ಕೆಲವರು ಹರಕೆ ಹೇಳಿ ಪ್ರತಿವರ್ಷ ಕೊರಗನ ವೇಷ ಹಾಕಿಕೊಂಡಿತ್ತಿದ್ದವು.ಅದು ಸರಿ ಅಲ್ಲ ಹೇಳಿ ಹಲವು ವರ್ಷ ಮೊದಲು ಆಂದೋಲನ ಆಯಿದು.[ಕೊರಗನ ವೇಷ ಹಾಕುದು ಆರ ಒತ್ತಾಯಕ್ಕಲ್ಲ,ಆರನ್ನೂ ಅವಹೇಳನ ಮಾಡುಲೆ ಅಲ್ಲ,ಪೈಸೆ ಮಾಡುಲೆ ಅಲ್ಲ,-ಹೇಳಿ ಆರಿಂಗೂ ಅನಿಸಿದ್ದಿಲ್ಲೆ!]
    ಜನಕ್ಕೆ ಜಾತೀಯತೆಯೇ ಮುಖ್ಯ,ರಾಜಕೀಯವೇ ಮುಖ್ಯ,ತೋರಿಕೆಯ ಭಕ್ತಿ,ಕಾಳಜಿಯೇ ಮುಖ್ಯ ಹೇಳಿ ಅಪ್ಪಾಗ ಹೀಂಗೆಲ್ಲಾ ಆವುತ್ತು.
    ಆಗಲಿ…ನಡೆಯಲಿ….

    1. ಗೋಪಾಲಣ್ಣ, ನೂರಕ್ಕೆ ನೂರು ಸರಿಯಾಗಿ ಹೇಳಿದ್ದಿ.
      ಮಾಷ್ಟ್ರುಮಾವಂದೇ ಇದೇ ಉದಾಹರಣೆಯನ್ನೂ, ಅಭಿಪ್ರಾಯವನ್ನೂ ಹೇಳಿದವು ಓ ಮೊನ್ನೆ ಮಾತಾಡುವಗ.
      ಇನ್ನೊಬ್ಬನ ಒತ್ತಾಯ ಮಾಡಿತ್ತುಕಂಡ್ರೆ ಅಲ್ಲದೋ – ಅದು ದಬ್ಬಾಳಿಕೆ ಹೇದು ಅಪ್ಪದು.

      ನಮ್ಮೂರಿನ ಅಪೂರ್ವ ಆಚರಣೆಗೊ ಒಂದೊಂದಾಗಿ ಕಾಣೆ ಅಕ್ಕೋದು ಸಂಶಯ ಬತ್ತು.
      ಮತ್ತೆ, ನಮ್ಮ ಊರುದೇ ಮತ್ತೊಂದು ’ಪಾಶ್ಚಾತ್ಯ ದೇಶ’ ಆಗಿರ್ತು. ಅಷ್ಟೇ.
      ಅಲ್ಲದೋ?

  26. [’ಪಾಡ್ಳಯ ಪಾಡ್ಳೆ’ ಹೇಳಿಗೊಂಡು ಸಮಾ ಬಿಗುದವು.]
    ಇನ್ನು ಎಂತ ಬೇಕಾರು ಆಗಲಿ ಭಾವ ಈ ಶುದ್ದಿ ಓದಿ ಹೊಟ್ಟೆ ತುಂಬಾ ಖುಶೀ ಆತು ನೋಡಿ. ಕೆಲವು ಜೆನ ಕೇಳುಗು ಅದೇಂಗೆ ಹೊಟ್ಟೆತುಂಬಾ ಹೇಳಿ. ಮನಸ್ಸು ತುಂಬಾ ಹೇಳಿ ಅಲ್ಲದೋ ಹೇದು. ಅಲ್ಲಾ., ಇದು ಹೊಟ್ಟೆತುಂಬವೇ. ಹೇಂಗೆ ಹೇಳಿ ನಿಂಗೊಗೂ ಗೊಂತಿದ್ದು .

    ಶುದ್ದಿಗೊಂದು ಮನಸ್ಸು ತುಂಬಾ ಒಪ್ಪಂಗೊ ಹೇಳುವದು – ‘ಚೆನ್ನೈವಾಣಿ’

    1. ಹೊಟ್ಟೆ ತುಂಬ ಕೊಶಿ ಆದ್ದರ ಕಂಡು ಮನಸ್ಸು ತುಂಬಿ ಬಂತು.
      ಪಾಡ್ಳಯ ಹೇಳಿ ಹೇಳ್ತ ಪರಿಸ್ಥಿತಿ ನಿಂಗೊ ಇಪ್ಪ ತೆಮುಳುನಾಡಿಲಿ ಅಂದೇ ಬಯಿಂದು. ಅಲ್ಲದೋ?

      ಈ ಚೆನ್ನೈಭಾವ ಒರಗುದು ಎಷ್ಟೊತ್ತಿಂಗೇದು ಎಲ್ಲೋರುದೇ ಮಾತಾಡಿಗೊಳ್ತವು.
      ನೆಡುಇರುಳೋ, ಉದೆಕಾಲಕ್ಕೋ, ಹಗಲೋ, ಮೂರ್ಸಂದೆಗೋ – ಉಮ್ಮಪ್ಪ!
      ಬೈಲಿಲಿ ಒಪ್ಪಂಗಳ ನೋಡಿರೆ ಎಲ್ಲಾ ಹೊತ್ತಿಲಿಯೂ ಒಂದೊಂದಿರ್ತು. ಕೊಶೀ ಅಪ್ಪದು ಅದರ ಕಂಡಪ್ಪಗ.

  27. ಇದಾ… ‘ಮಡೆ’ಸ್ನಾನ ತಡವಲೆ ಬಂದ ಕಮ್ಮಿನಿಷ್ಟೆಯ ಜೆನಂಗೊಕ್ಕೆ ಬೆಶಿಬೆಶೀ ನಾಕು ಮಡುಗಿ ‘ಮಡಿ’ ಮಾಡಿದ ಶುದ್ದಿ ಬೆಶಿಬೆಶೀ ಬಂತಿದಾ…!
    ಬರದ್ದದು ಭಾರೀ ಚೊಕ್ಕ ಆಯಿದು ಒಪ್ಪಣ್ಣೋ. ಸಂಸಾರ ರಥ ಎಳವ ಬಳ್ಳಿ ಗಟ್ಟಿ ಅಪ್ಪಲೆ ನಂಬಿಕೆ ಕಟ್ಟುಪಾಡು ಆಚರಣೆ ಮುಂತಾದ ಪಿರಿಗಳ ಕಾಯಿಸೆಕ್ಕಾದ ಹಾಂಗೆ ಈ ಬೇಲೆ ಇದ್ಯಾಂತಿನವಕ್ಕೂ ಸಮಯನೋಡಿ ‘ಪಿರಿಕಾಯಿಸೆಕ್ಕಾದ’ ಅಗತ್ಯ ಇದ್ದು..!!
    😉

    1. ಸುಬಗಣ್ಣಾ,
      ಒಪಣ್ಣ ಬೆಶಿಬೆಶಿ ಶುದ್ದಿ ಹೇಳಿದ್ದಕ್ಕೆ, ಅದಿನ್ನೂ ತಣಿವ ಮದಲೇ ಒಪ್ಪ ಕೊಟ್ಟಿರಲ್ಲದೋ! ಕೊಶೀ ಆತು.

      ಪಿರಿ ಕಾಯಿಸುವ ಕಾರ್ಯ ಮೊನ್ನೆ ಮಾಡಿದ್ದವು ಹೇದು ಗೊಂತಾಗಿ – ಹಾಲು ಕುಡುದಷ್ಟು ಸಂತೋಷ ಆತು.
      ಅದರೆ ಈಗ ಪ್ರತಿಭಟನೆಗೊ ಆವುತ್ತಾ ಇದ್ದಾಡ ಅಪ್ಪೋ?
      ಎಲ್ಲಿಗೆತ್ತಿತು ನಮ್ಮ ಜೆನಂಗಳ ಬೊಂಡು!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×