Oppanna.com

ಸುಬ್ರಮಣ್ಯದ ಷಷ್ಟಿ- ಕಿರು ಷಷ್ಟಿ; ಚಳಿಗಾಲಲ್ಲಿ ಆಧ್ಯಾತ್ಮ ಪುಷ್ಟಿ!!

ಬರದೋರು :   ಒಪ್ಪಣ್ಣ    on   17/12/2010    39 ಒಪ್ಪಂಗೊ

ಓ ಮನ್ನೆ ಒರೆಂಗೆ ಚಳಿ ಸುರು ಆಯಿದಿಲ್ಲೆ ಆಯಿದಿಲ್ಲೆ ಹೇಳಿ ಊರವೆಲ್ಲಾ ಪರಂಚಿಗೊಂಡವು!
ತೆಕ್ಕೊಳಿ – ಈಗಂತೂ ಚಳಿಯೋ ಚಳಿ; ಸಾಕೋ – ಬೇಕೋ ಹೇಳಿ ಕೇಳ್ತಾ ಇದ್ದು.
ಬೇಕಾರೂ, ಬೇಡದ್ರೂ ಅನುಬವಿಸೆಕ್ಕಷ್ಟೆ. ಅಲ್ಲದೋ?! ಸುರು ಆದರೆ ನಿಂಬಲೆ ಕೂಪಲೆ ಎಡಿಯದ್ದ ನಮುನೆ ಚಳಿ!
ನಮ್ಮ ಊರಿಲೇ ಚಳಿ ಇದ್ದು, ಇನ್ನು ನಮ್ಮಂದಲೂ ಮೂಡಕ್ಕೆ ಇರ್ತ ಸುಬ್ರಮಣ್ಯಲ್ಲಿ ಹೇಂಗಿರೆಡ! ಹೇಳಿ ಕುಂಬ್ಳೆಸೀಮೆಯ ದೊಡ್ಡಮಾವ ಅನುಬವದ ಮಾತು ಹೇಳುಗು.
ಚಳಿ ಬಂದರೆ ಒಬ್ಬಂಗೆ ಇಬ್ರಿಂಗೆ ಅಲ್ಲ, ಇಡೀ ಊರಿಂಗೇ; ಅದು ದೇವೆಗೌಡನಿಂದಲೂ ಜಾತ್ಯತೀತ.

ಚಳಿಗೂ ಷಷ್ಟಿಗೂ ಬಾದರಾಯಣ ಸಮ್ಮಂದ ಇದ್ದು ಹೇಳಿ ನಮ್ಮ ಬಟ್ಟಮಾವ ನಂಬಿದ್ದವು.
ಆದಿಕ್ಕೋ ಏನೋ, ಒಪ್ಪಣ್ಣಂಗರಡಿಯ – ಚಳಿ ಅನುಭವುಸುವೋರಿಂಗೇ ಅದು ಗೊಂತಕ್ಕಷ್ಟೆ, ಕಂಬುಳಿ ಹೊದ್ದು ಮನುಗಿದೋರಿಂಗಲ್ಲ!
ಅದಿರಳಿ,
ಕಳುದ ವಾರ ಸ್ರಷ್ಠಿ ಕಳಾತು. ಚಳಿಯೂ ಸುರು ಆತು.
ಸ್ರಷ್ಟಿಗೆ ಒಂದು ದೊಡಾ ಗವುಜಿ – ನಮ್ಮ ಸುಬ್ರಮಣ್ಯಲ್ಲಿ ಸುಬ್ರಮಣ್ಯನ ಒರಿಶಾವಧಿ ಜಾತ್ರೆ!

ಜಾತ್ರೆ ಹೇಳಿತ್ತುಕಂಡ್ರೆ ಜನಸಾಗರ, ರಥ ಎಳವದು, ಪಟಾಕಿ ಹೇಳಿಗೊಂಡು ಗವುಜಿ ಇದ್ದದೇ.

ಗವುಜಿಯ ಹಿಂದೆ ಕೆಲವು ನಂಬಿಕೆಗೊ,  ಆಚರಣೆಗಳ ಹಿಂದೆ ಕೆಲವು ಇತಿಹಾಸಂಗೊ ಇರ್ತು. ಅದು ಎಂತರ ಹೇಳಿ ತಿಳುಕ್ಕೊಂಡು ಆಚರುಸಿರೆ ಆ ಗವುಜಿಗೆ ಸರಿಯಾದ ಅರ್ಥ ಬಕ್ಕು, ಅಲ್ಲದೋ?

ಈ ಸರ್ತಿ ಸುಬ್ರಮಣ್ಯ ಷಷ್ಟಿಯ ಬಗ್ಗೆ ತಿಳುಕ್ಕೊಂಬೊ ಹೇಳಿ ಅನುಸಿತ್ತು ಒಪ್ಪಣ್ಣಂಗೆ.
~

ಮೊದಾಲಿಂಗೆ,

ಸುಬ್ರಮಣ್ಯನ ಬಗ್ಗೆ:
ಸುಬ್ರಮಣ್ಯನ ಬಗ್ಗೆ ಅರಡಿಯೇಕಾರೆ ಸ್ಕಂದಪುರಾಣ ತೆಗೇಕಡ, ಬಟ್ಟಮಾವ° ಹೇಳುಗು.
ಅವರ ಕೈಲಿ ಎಂತಾರು ಕೇಳಿರೆ ಅದಕ್ಕೊಂದು ಉತ್ತರ ಕೊಟ್ಟೇ ಕೊಡುಗು; ಎಂತದೂ ಪುರುಸೊತ್ತಿಲ್ಲದ್ದರೆ ಎಲ್ಲಿ ಇದ್ದು ವಿವರ ಹೇಳಿ ಆದರೂ ಹೇಳುಗು.
ಮೊನ್ನೆ ಬಟ್ಟಮಾವ° ಅಂಬೆರ್ಪಿಲಿ ಇತ್ತಿದ್ದವು; ಹಾಂಗಾಗಿ ಸ್ಕಂದಪುರಾಣಲ್ಲಿದ್ದು – ಹೇಳಿ ಮಾಂತ್ರ ಹೇಳಿಕ್ಕಿದವು.
ಅವು ಹೇಳಿಕ್ಕಿ ಹೋವುತ್ತವು, ನಾವು ಎಲ್ಲಿಂದ ತಪ್ಪದು ಅದರ?!
ಗಣೇಶಮಾವನಲ್ಲಿ ಸ್ಕಂದಪುರಾಣ ಇಕ್ಕು, ಆದರೆ ಸಂಸ್ಕೃತಲ್ಲಿಕ್ಕಷ್ಟೆ, ಡಾಮಹೇಶಣ್ಣ ಪೋರೀನಿಂಗೆ ಹೋಯಿದ, ಅಂಬಗ ಆ ಪುಸ್ತಕ ನಮ್ಮಂದ ಓದಿಕ್ಕಲೆಡಿಯ.
ಮತ್ತೆಂತರ ಮಾಡುಸ್ಸು, ಮಾಷ್ಟ್ರುಮಾವನಲ್ಲಿಗೆ ಎತ್ತಿತ್ತು ಸವಾರಿ.

ಸ್ಕಂದಪುರಾಣದ ಕನ್ನಡ ವಿವರಣೆ ಇದ್ದೋ – ಕೇಳಿದೆ; ಪುಸ್ತಕದಕವಾಟು ಹುಡುಕ್ಕಿರೆ ಸಿಕ್ಕುಗು – ಹೇಳಿದವು ಎಲೆ ತಿಂದೋಂಡು.
ಬೇಕಾತಿಲ್ಲೆ ಈ ಜೆಂಬಾರ – ಹೇಳಿ ಗ್ರೇಶಿಗೊಂಡೆ!
ಅಂಬಗ ಬಾಯಿಗೆ ಬತ್ತಷ್ಟು ಹೇಳಿ, ಇಂದಿಂಗೆ ಸಾಕು – ವಿವರ ಬೇಕಾರೆ ವಿದ್ವಾನಣ್ಣನತ್ರೆ ಕೇಳುವೊ° – ಹೇಳಿದೆ.

ಸುಬ್ರಮಣ್ಯ್ದದ ಷಷ್ಟಿ ಗವುಜಿ; ಗೋಪುರ-ರಥ-ಆನೆ-ಜೆನಂಗೊ!!!

~
ಕಾಳಿದಾಸ ಕುಮಾರಸಂಭವ ಹೇಳಿ ಬರದ್ದನಡ, ಇದೇ ಸ್ಕಂದನ ಬಗ್ಗೆ.
ಅದರ್ಲಿ ಸುಬ್ರಹ್ಮಣ್ಯನ ಹುಟ್ಟು ವಿವರವಾಗಿ ಇದ್ದಡ.

ತಾರಕಾಸುರ ದೇವರಿಂಗೆ ಉಪದ್ರ ಕೊಡ್ಳೆ ಸುರು ಮಾಡ್ತನಡ.
ಶಿವನ ಮಗನಿಂದ ಮಾಂತ್ರ ಅವಂಗೆ ಮರಣ ಸಿಕ್ಕುಗು – ಹೇಳಿ ವರ ಇರ್ತ ಕಾರಣ ಅವನ ಹಾಂಕಾರ ಉಪ್ಪರಿಗೆ ಹತ್ತಿರ್ತಡ.

ಅದಕ್ಕೆ ಸ್ವಾಹಾದೇವಿ (ಕೃತ್ತಿಕೆ ಹೇಳಿಯೂ ಹೆಸರಿದ್ದಡ) ಹೇಳ್ತ ದೇವತೆ, ಶಿವನಿಂದ ಒಂದು ಮಗು ಪಡೆತ್ತಡ. ಹಾಂಗೆ ಹುಟ್ಟಿದ ಮಾಣಿಯೇ ಈ ಸುಬ್ರಮಣ್ಯ ಅಡ.
ಬಯಂಕರ ಸಾಮರ್ಥ್ಯವಂತ!
ಕುಮಾರ, ಕುಮಾರ ಸ್ವಾಮಿ, ಮಾಣಿ, ಕಂದ, ಮುರುಗ – ಹೇಳಿ ಎಲ್ಲ ಇವನ ಆರಾಧನೆ ಮಾಡ್ತವಡ.
ಪಾರ್ವತಿಗೂ ಮಗನೇ ಆದ ಕಾರಣ ಅವಂಗೆ ದ್ವೈಮಾತುರ – ಹೇಳಿಯೂ ಹೇಳ್ತವಡ.
ಮುಂದೆ ಈ ಮಾಣಿ ದಕ್ಷಬ್ರಹ್ಮನ ಮಗಳು ದೇವಸೇನೆ ಹೇಳ್ತ ಕೂಸಿನ ಇಂದ್ರನ ಸಂದಾನಲ್ಲಿ ಮದುವೆ ಆವುತ್ತನಡ.
ಇವ ಮದುವೆ ಆದ್ದು ಮಾರ್ಗಶಿರ ಮಾಸ ಶುಕ್ಲ ಪಕ್ಷ ಷಷ್ಟಿ ದಿನ ಅಡ.
ಅದುವೇ ಷಷ್ಟಿ – ಹೇಳ್ತದು ಒಂದು ನಂಬಿಕೆ.
~

ಅದೇ ನಮುನೆ ಇನ್ನೊಂದು ನಂಬಿಕೆ ಇದ್ದು –
ಯುದ್ಧದೇವತೆ ಆದ ಈ ಮಾಣಿಗೆ ಬ್ರಹ್ಮನ ಶಾಪ ಸಿಕ್ಕಿತ್ತಡ; ವಿಶ ಇಪ್ಪ ಸರ್ಪ ಆಗಿ ಹೋಪಲೆ!
ಮಾಣಿಯ ಅಮ್ಮ ಪಾರ್ವತಿಗೆ ಮಂಡೆಬೆಚ್ಚ ಅಪ್ಪಲೆ ಸುರು ಆತು.
ಎಂತ್ಸರ ಮಾಡುಸ್ಸು, ಪುನಾ ಮನಿಶ್ಶ° ಆಯೇಕಾರೆ – ನೂರೆಂಟು ಸರ್ತಿ ಸ್ರಷ್ಟಿ ವ್ರತ ಮಾಡೇಕು ಹೇಳಿದವಡ ಅರಡಿವೋರು.
ಹಾಂಗೆ, ವ್ರತ ಮಾಡಿ, ವ್ರತದ ಉದ್ಯಾಪನೆ ದಿನ ಗವುಜಿ ಮಾಡಿತ್ತಡ. ಆ ಗವುಜಿಗೆ ವಿಷ್ಣುವೂ ಬಂದ.
ವಿಷ್ಣುವಿನ ಸ್ಪರ್ಷಂದಾಗಿ ವಿಷ ಸರ್ಪ° ಆಗಿಪ್ಪ ಸುಬ್ರಮಣ್ಯ ಮನುಶ್ಶ° ಆದ°.
ಪಾರ್ವತಿ ಮಾಡಿದ ವ್ರತಕ್ಕೆ ಸ್ರಷ್ಟಿ ವ್ರತ – ಹೇಳಿಯೂ, ಆ ದಿನಕ್ಕೆ ಸ್ರಷ್ಟಿ / ಚಂಪಾ ಷಷ್ಠಿ ಹೇಳಿಯೂ ಹೆಸರಾತಡ.
~
ಎರಡುದೇ ನಮ್ಮ ನಂಬಿಕೆಯ ಕತೆ ಆದ ಕಾರಣ ಯೇವದು ಸರಿ ಹೇಳಿ ವಿಮರ್ಶೆ ಮಾಡ್ತದು ಬೇಡ – ಎರಡನ್ನೂ ಸಮಾನವಾಗಿ ನಂಬುವೊ° – ಹೇಳಿದವು ಮಾಷ್ಟ್ರುಮಾವ°.
ಮಾಷ್ಟ್ರೇ ಹೇಳಿದ ಮೇಗೆ ಮಕ್ಕಳದ್ದು ಉಸ್ಕು ಇರ್ತೋ!?

ಅಂತೂ ಉಶಾರಿಮಾಣಿ ಸುಬ್ರಮಣ್ಯನ ಬಗ್ಗೆ ಕೆಲವು ವಿಚಾರಂಗೊ ಗೊಂತಾತು.
ಪೊಸವಣಿಕೆಯ ಇದೇ ಹೆಸರಿನ ಮಾಣಿ ಇನ್ನೂ ಉಶಾರಿಕ್ಕು, ಅಲ್ಲದೋ?! – ಹೇಳಿ ಭಿಂಗಿ ನೆಗೆಮಾಣಿ ಕೇಳಿಯೇ ಬಿಟ್ಟ°!
~

ಷಷ್ಟಿಯ ಗವುಜಿಗೆ ದೇವಸ್ಥಾನ ತೆಯಾರು

ಸುಬ್ರಮಣ್ಯದ ಬಗ್ಗೆ:
ಕೊಡೆಯಾಲ ಹೋಬಳಿಯ ಅತ್ಯಂತ ಮನಾರದ ದೇವಸ್ತಾನ ಇದ್ದರೆ ಅದು ಸುಬ್ರಮಣ್ಯವೇ ಆಗಿಕ್ಕಡ; – ಈ ಮಾತಿನ ಶಂಬಜ್ಜನೂ ಒಪ್ಪುಗು.
ಕಡ್ಪ ಕಾಡು – ನಾಕು ಸುತ್ತಿಂಗುದೇ! ನೆಡು ಮದ್ಯಾನ್ನವೂ ಸಮಗಟ್ಟು ಬೆಶಿಲಿರದೋ ಏನೋ – ಆ ನಮುನೆ ಮರಂಗೊ!
ಮರಂಗಳ ಹೊತ್ತು, ಚೆಂದಕೆ ಗಾಂಭೀರ್ಯಲ್ಲಿ ನಿಂದ ಕುಮಾರ ಪರ್ವತ! – ಒರಿಶಾನುಗಟ್ಳೆಂದ!
ಅದರಿಂದಾಗಿ ಹರುದು ಬತ್ತ – ಕಣ್ಣಾಟಿ ನಮುನೆ ನೀರಿನ – ಕುಮಾರ ಧಾರೆ!
ಜೆನವಸತಿ ಕಡಮ್ಮೆ, ಹಾಂಗಾಗಿ ಬೊಬ್ಬೆ ಗಲಾಟೆ ಇರ; ಕುರೆ-ಗಲೀಜುಗಳುದೇ ಇರ.
ಒರಿಶಕ್ಕೊಂದೋ – ಎರಡೋ ದೊಡ್ಡ ಗವುಜಿ, ಜೆನ ಸೇರ್ತ ನಮುನೆದು. ಆ ದಿನ ಮಾಂತ್ರ ನಿಂಬಲೇ ಎಡಿಯದ್ದಷ್ಟು ಜೆನಂಗೊ!
ನೆಡವಲೇ ಎಡಿಯದ್ದಷ್ಟು ಸಂತೆ-ಅಂಗುಡಿಗೊ; ಮಾರ್ಗದ ಇಡೀಕ.
ಒಬ್ಬೊಬ್ಬಂದು ಒಂದೊಂದು ವ್ಯಾಪಾರ- ನಮ್ಮ ಊರವರ ಅಂಗುಡಿಗಳದ್ದು ಒಂದು ಸಾಲಾದರೆ; ಗಟ್ಟದ ಮೇಗಾಣವರದ್ದು ಇನ್ನೊಂದು ಸಾಲು.

ಅಪ್ಪು, ಗಟ್ಟದ ಮೇಗಾಣೋರಿಂಗೆ ಸುಬ್ರಮಣ್ಯ ಹೇಳಿರೆ ಭಾರೀ ಹತ್ತರೆ ಇದಾ..
ಕಂಬುಳಿಯೋ – ಹೋರಿ,ದನಗಳನ್ನೋ – ತಂದು ಮಾರಿ, ಪೈಸೆ ತೆಕ್ಕಂಡು, ಸುಬ್ರಮಣ್ಯನ ಪ್ರಸಾದ ಹಿಡ್ಕೊಂಡು ಗಟ್ಟ ಹತ್ತುಗು – ಮದಲಿಂಗೇ!
ಈಗಾಣ ಸಂಗತಿ ಅಲ್ಲ ಇದು, ಶಂಬಜ್ಜನ ಕಾಲಲ್ಲಿ! ಈಗ ತುಂಬ ಬದಲಾಯಿದು;
~

ಪ್ರತಿ ಒರಿಶದ ಮಾರ್ಗಶಿರ ಷಷ್ಟಿಯ ದಿನ ಸುಬ್ರಮಣ್ಯಲ್ಲಿ ಚಂಪಾಷಷ್ಟಿ. ವಿಶೇಷ ಜೆನ ಸೇರ್ತ ದೊಡ್ಡ ಜಾತ್ರೆ.
ಈ ಒರಿಶದ ಜಾತ್ರೆ ಮೊನ್ನೆ – ೧೧-ದಶಂಬ್ರ-೨೦೧೦ಕ್ಕೆ ಕಳಾತು.
ಹೋಪಲಾತಿಲ್ಲೆ ನವಗೆ, ಬೇರೆ ಅಂಬೆರ್ಪಿನ ಎಡಕ್ಕಿಲಿ. 🙁
ಆರಾರು ಹೋಯಿದವೋ ಬೈಲಿಂದ, ಉಮ್ಮಪ್ಪ, ಗೊಂತಾಯೆಕ್ಕಷ್ಟೆ.

ಆದರೆ ಆಚಮನೆ ದೊಡ್ಡಪ್ಪ ಮದಲಿಂಗೇ ಸುಬ್ರಮಣ್ಯದ ಸಂಪರ್ಕಲ್ಲಿ ಇದ್ದೋರು.
ಪಡುವಲಾಗಿ ಕೊಡೀಯಾಣ ಕುಂಬ್ಳೆ ದೇವಸ್ಥಾನಂದ ಹಿಡುದು, ಮೂಡ್ಳಾಗಿ ಕೊಡೀಯಾಣ ಸುಬ್ರಮಣ್ಯ ಒರೆಂಗೂ ಅವರ ಸಂಪರ್ಕ ಇತ್ತು.
ಸುಬ್ರಮಣ್ಯದ ಸ್ರಷ್ಟಿ ಆಚರಣೆ ಬಗ್ಗೆ ಅವರತ್ರೆ ಕೇಳಿರೆ ಹೇಂಗೆ – ಕಂಡತ್ತು. ಮಾಷ್ಟ್ರುಮಾವನಲ್ಲಿಂದ ಬಪ್ಪಗ ಅವರಲ್ಲೆ ಆಗಿ ಬಂದೆ..
~
ಈ ಕ್ಷೇತ್ರದ ದೇವರ ಸುರುವಿಂಗೆ ಕುಕ್ಕೆ ಮಾಡ್ತ ಹೆಣ್ಣಿಂಗೆ ಕಾಂಬಲೆ ಸಿಕ್ಕಿದ್ದಡ. ಹಾಂಗೆ ಕುಕ್ಕೆ ಸುಬ್ರಮಣ್ಯದೇವರು ಹೇಳಿಯೂ ಹೇಳ್ತವಡ.
~
ಮಾರ್ಗಶಿರ ಮಾಸಂದ ಮದಲಾಣ ಕಾರ್ತಿಕಮಾಸದ ಕೃಷ್ಣಪಕ್ಷ ದ್ವಾದಶಿಗೆ ಒಂದು ಗವುಜಿ ಇದ್ದಡ, ಷಷ್ಟಿಂದ ಸುಮಾರು ಹತ್ತು ದಿನ ಮದಲೇ.
ಕೊಪ್ಪರಿಗೆ ಮೂರ್ತ – ಹೇಳ್ತದಡ ಅದರ. ರೂಪತ್ತೆ ಮನೆ ಟಯರೀಸಿನ ಮೇಗೆ ಕಪ್ಪು ಟೇಂಕಿ ಒಂದಿದ್ದಲ್ಲದೋ – ಆ ಟೇಂಕಿಯಷ್ಟಕೆ ಇಪ್ಪ ಕೊಪ್ಪರಿಗೆ!
ಒಂದಲ್ಲ – ಎರಡು ಕೊಪ್ಪರಿಗೆ ಇದ್ದಡ – ರಾಮ ಲಕ್ಷ್ಮಣರು – ಹೇಳುದಡ ಅದರ. ಆ ಕೊಪ್ಪರಿಗೆಯ ಒಲೆಗೆ ಮಡಗುದು.

ಷಷ್ಟಿ ಸಮಾರಾಧನೆ ಪೂರ ಕಳುದ ಮತ್ತೆಯೇ ಅದರ ಒಲೆಂದ ಇಳುಗುದು. ಅಶನ ಬೆಂದೊಂಡೇ ಇಪ್ಪ ಕ್ರಮ ಅಡ ಅದರ್ಲಿ.
~

( ಕುಕ್ಕೆ ಸುಬ್ರಮಣ್ಯ ದೇವಸ್ಥಾನಲ್ಲಿ ಷಷ್ಟಿ ರಥ ಎಳವದು. (http://kukketemple.com ಲಿ ಪೆರ್ಲದಣ್ಣಂಗೆ ಸಿಕ್ಕಿದ್ದಡ. )

~
ಜಾತ್ರಗೆ ರಥ ವಿಶೇಷ; ಸುಬ್ರಮಣ್ಯಲ್ಲಿ ಎರಡು ರಥ ಇದ್ದು. ಒಂದು ಪಂಚಮಿ ರಥ, ಸಣ್ಣದು. ಇನ್ನೊಂದು ದೊಡ್ಡ ರಥ – ಷಷ್ಟಿಗಿಪ್ಪದು.
ಈ ದೊಡ್ಡ ರಥ ತುಂಬ ದೊಡ್ಡದಡ, ಇಡೀ (ದಕ್ಷಿಣಕನ್ನಡ) ಜಿಲ್ಲೆಲೇ ದೊಡ್ಡ ರಥ ಅಡ – ಆಚಮನೆ ದೊಡ್ಡಪ್ಪ ಹೇಳಿದವು.
ಅಂಬಗ ಮುತ್ತಪ್ರೈಯ ಪುತ್ತೂರಿನ ರಥವೋ? – ಕೇಳಿದೆ.
ಇದು ಈಗಾಣ ಕತೆ ಅಲ್ಲ, ಶಂಬಜ್ಜನ ಕಾಲದ ಕತೆ; ನೀನು ಹಾಂಗೆಲ್ಲ ಪೆರಟ್ಟು ಕೇಳಿರಾಗ – ಹೇಳಿ ನೆಗೆಮೋರೆಲಿ ಕಣ್ಣು ಹೊರಳುಸಿದವು.
ಪುತ್ತೂರು ರಥ ಎಷ್ಟು ದೊಡ್ಡವೋ – ಉಮ್ಮಪ್ಪ! ಅದಿರಳಿ.
~
ಪಂಚಮಿ ದಿನ ಇರುಳೇ ಒಂದು ಜಾತ್ರೆ ಇದ್ದಡ ಸುಬ್ರಮಣ್ಯಲ್ಲಿ.
ಸುಬ್ರಮಣ್ಯನ ರಥಲ್ಲಿ ಕೂರುಸಿ ಆ ಸಣ್ಣ ರಥಲ್ಲಿ ರಥಬೀದಿಲೆ ಹೋಪದು – ಸಣ್ಣ ರಥ ಹೇಳಿರೂ ಸಾದಾರ್ಣ ದೊಡ್ಡ ಇದ್ದಡ ಅದು.
ಮುಂದೆ ಒರೆಂಗೆ ಬಂದು ಆ ಜೋಡುಮಾರ್ಗದ ಹತ್ತರೆ ಒಪಾಸು ತಿರುಗಿ ಹಿಂದಂತಾಗಿ ಹೋವುತ್ತದು. ಈಗೆಲ್ಲ ದೊಡ್ಡ ಲೈಟುಗೊ ಆಯಿದಲ್ಲದೋ – ಮದಲಿಂಗೆ ಪೂರ ದೊಂದಿಯೂ – ಗೇಸುಲೈಟುದೇ ಅಡ.
ಇರುಳಾಣ ಮಂದ ಬೆಣಚ್ಚಿಲಿ ಸುಬ್ರಮಣ್ಯನ ಗವುಜಿ ನೋಡ್ತದು ಕೊಶಿಯೇ ಅಡ. ಆ ರಥ ಎಳೆತ್ತದು ಗವುಜಿಯೇ ಗವುಜಿ ಅಡ.
ಮರದಿನ ಷಷ್ಟಿ ರಥ ನೋಡ್ಳೆ ಎಡಿಗಾಗದ್ದೋರು ಮುನ್ನಾಣದಿನವೇ ಬಂದು ಸುಬ್ರಮಣ್ಯನ ಪ್ರಸಾದ ತೆಕ್ಕೊಳ್ತವಡ.
~
ಮರದಿನ ಷಷ್ಟಿ; ಸುಬ್ರಮಣ್ಯನ ಮದುವೆ ಆದ ದಿನವೂ ಅಪ್ಪು, ಪಾರ್ವತಿ ವ್ರತಂದಾಗಿ ಸುಬ್ರಮಣ್ಯ ಮತ್ತೆ ಮಾಣಿ ಆದ್ದದೂ ಅಪ್ಪು.
ಆ ದಿನಕ್ಕೆ ಒರಿಶಂಪ್ರತಿ ಜಾತ್ರೆ ಆವುತ್ತು.

ಪರಶುರಾಮ ಕ್ಷೇತ್ರಲ್ಲಿ ಹಾವುಗೊಕ್ಕೆ ತುಂಬ ಪ್ರಾಮುಖ್ಯತೆ.
ಅದರ್ಲಿಯೂ ಹಾವನ್ನೇ ಒಳಗೊಂಡ ಸುಬ್ರಮಣ್ಯ ದೇವರಿಂಗೆ ಇನ್ನುದೇ ಬೆಲೆ. ಹಾಂಗಾಗಿ, ಊರೂರಿಂದ ಪೂರ ಬಂದು ನೋಡುಗು.

ಗಿರಿಗೆದ್ದೆ ಅಪ್ಪಚ್ಚಿ ಒಂದರಿ ಕುಮಾರಪರ್ವತದ ತಲೆಂಗೆ ಹತ್ತಿ, ಒಂದು ದೀಪ ಮಡಗುತ್ತ ಕಾರ್ಯವೂ ಮಾಡುಗಡ, ಗಣೇಶಮಾವ ಹೇಳಿತ್ತಿದ್ದವು.
ಅದಲ್ಲದ್ದೆ ಅಲ್ಯಾಣ ಮಠ, ಆದಿ ಸುಬ್ರಮಣ್ಯ, ಹತ್ತರಾಣ ಇತರ ಕ್ಷೇತ್ರಂಗಳ ಎಲ್ಲಾ ಆಸ್ತಿಕರುದೇ ಬಂದು ಸುಬ್ರಮಣ್ಯನ ಚೆಂದ ನೋಡ್ತದಡ.
ಇಂದು ಜಾತ್ರೆ ದೊಡ್ಡ ರಥಲ್ಲಿ.
~
ಇದರೆಡಕ್ಕಿಲಿ ಮತ್ತೊಂದು ಜಾನಪದ ಕತೆ ಹೇಳಿದವು ದೊಡ್ಡಪ್ಪ – ನಮ್ಮದರ್ಲಿ ಕತೆಗೊಕ್ಕೆ ಏನೂ ಬರೆಗ್ಗಾಲ ಇಲ್ಲೆ ಇದಾ.
ಅದರ್ಲಿಯೂ ದೊಡ್ಡಪ್ಪ ಒಟ್ಟಿಂಗಿದ್ದರಂತೂ ಏನೂ ಬರೆಗ್ಗಾಲ ಇಲ್ಲೆ!

ಒಂದರಿ ವಾಸುಕಿಗೂ, ಗರುಡಂಗೂ ಜಗಳ ಆತಡ.
ಗರುಡನ ಆಹಾರ ಅಲ್ಲದೋ, ವಾಸುಕಿ ಹೇಳಿತ್ತುಕಂಡ್ರೆ, ಜಗಳ ಅಪ್ಪದು ಸಾಮಾನ್ಯವೇ; ಬಟ್ಯಂಗೂ – ಕೋಳಿಗೂ ಆದ ನಮುನೆ!
ವಾಸುಕಿ ಬಂದು ಸುಬ್ರಮಣ್ಯನ ಹಿಂದೆ ಹುಗ್ಗಿನಿಂದನಡ.
ಹಾಂಗೆ ಸುಬ್ರಮಣ್ಯನ ಜಾತ್ರೆದಿನ ಗರುಡ ಮೇಗಂದಲೇ ಬಂದು ನೋಡಿದನಡ, ವಾಸುಕಿಯ ಕಂಡತ್ತು!
ಚೆಲಾ – ಇಷ್ಟು ಗವುಜಿ ಮಾಡ್ತನಾ ವಾಸುಕಿ, ಅವನ ಸುಮ್ಮನೆ ಬಿಡ್ತಿಲ್ಲೆ – ಹೇಳಿಗೊಂಡು ಇನ್ನೂ ಹತ್ತರೆ ಬಂದು ನೋಡುವಗ ಸುಬ್ರಮಣ್ಯನನ್ನೂ ಕಂಡತ್ತು.
ಓ -ಇದು ವಾಸುಕಿಯ ರೂಪಲ್ಲಿಪ್ಪ ಸುಬ್ರಮಣ್ಯ – ಹೇಳಿಗೊಂಡು ಗರುಡ ಹೋದನಡ. ಹಾಂಗೆ, ಇಂದಿಂಗೂ ಷಷ್ಟಿದಿನ ಸುಬ್ರಮಣ್ಯನ ದೊಡ್ಡರಥ ಎಳೇಕಾರೆ ಗರುಡ ಬಂದು ರಥವ ನೋಡಿ ಹೋಕಡ.
~

ದೊಡ್ಡರಥ ಎಳವದೂ ಹಾಂಗೇ, ಮುನ್ನಾಣ ದಿನ ಎಳದ ಹಾಂಗೆ ಆ ಜೋಡುಮಾರ್ಗಲ್ಲಿ ತಿರುಗಲೆ ಇಲ್ಲೆ.
ಅಷ್ಟು ದೊಡ್ಡದರ ತಿರುಗುಸಲೆ ಸುಲಬ ಇಲ್ಲೆ ಇದಾ! ಹಾಂಗೆ ಮುಂದೆ ಮುಂದೆ ಎಳಕ್ಕೊಂಡು ಹೋಕು, ಹಿಂದೆ ಹಿಂದೆ ಎಳಕ್ಕೊಂಡು ಬಕ್ಕು!
~
ರಥ ಎಳವದು ಹೇಳುವಗ ನೆಂಪಾತು – ಸುಬ್ರಮಣ್ಯದ ಹೊಡೆಲಿ ನಾಗರಬೆತ್ತ ದಾರಾಳ.
ಒಳ್ಳೆತ ಗಟ್ಟಿ, ಮಾಷ್ಟ್ರನ ಕೈಲಿದ್ದರಂತೂ ಮತ್ತೂ ಜಾಸ್ತಿ! 😉
ಹಾಂಗಾಗಿ, ಈ ರಥಕ್ಕೂ ನಾಗರಬೆತ್ತದ್ದೇ ಬಳ್ಳಿ.
ದೊಡ್ಡರಥ ಎಳದ ಬಳ್ಳಿ ಆದ ಕಾರಣ ಅದಕ್ಕೆ ವಿಶೇಷ ಶೆಗ್ತಿ ಇದ್ದು ಹೇಳ್ತ ನಂಬಿಕೆ ಊರಿಲಿ ನೆಡೆತ್ತು.
ಆ ಬಳ್ಳಿಯ ರಥ ಎಳದ ಎಲ್ಲೋರುದೇ ತುಂಡುಸಿ ಮನಗೆ ತೆಕ್ಕೊಂಡು ಹೋಕು. ವಿಷಜಂತುಗೊ, ಸರ್ಪಂಗೊ ಎಲ್ಲ ಕಚ್ಚಿದ್ದರೆ – ಈ ತುಂಡಿನ ಅರದು ಕಿಟ್ಟಿರೆ ಗುಣ ಆವುತ್ತು ಹೇಳ್ತದು ಆ ನಂಬಿಕೆ.
~
ಷಷ್ಟಿ ಸಮಾರಾಧನೆ ಹೇಂಗೂ ಇದ್ದನ್ನೆ, ಗಮ್ಮತ್ತಿನ ಮೃಷ್ಟಾನ್ನ ಊಟ! ಹಸ್ತೋದಕ ಹಂತಿ ಬೇರೆ, ಹೆರಾಣ ಅಂಬೆರ್ಪಿನ ಹಂತಿ ಬೇರೆ ಅಡ.
~
ಹಸ್ತೋದಕದ ಕೃಷ್ಣಾರ್ಪಣ ಅಪ್ಪಗಳೇ ಹೆರ ಜೆನಂಗೊ ಕಾದುಗೊಂಡು ಇರ್ತವಡ, ಹಸ್ತೋದಕ ಹಂತಿಯ ಮೇಗೆ ಉರುಳುಸೇವೆ ನಂಬಿಗೊಂಡೋರು ಆ ದಿನ ಉರುಳಿ ಕುಮಾರಧಾರೆಲಿ ಮಿಂದುಗೊಂಡು ಬತ್ತವು.
ಚರ್ಮರೋಗ ಇತ್ಯಾದಿಗೊಕ್ಕೆ ಪರಿಹಾರ ಹೇಳ್ತದು ಊರೋರ ನಂಬಿಕೆ.
ವೈಜ್ಞಾನಿಕವಾಗಿ ಅದು ಲೊಟ್ಟೆ. ಜಾತಿ ರಾಜಕೀಯಕ್ಕೆ ಹಾಂಗೆ ಮಾಡ್ತದು ಹೇಳಿ ಬುದ್ಧಿ(ಲ್ಲದ್ದ)ಜೀವಿಗೊ, ಮಾಯಾವತಿಯ ಓಟಿನೋರು ಎಲ್ಲ ಬೊಬ್ಬೆ ಹೊಡದವಡ.
ಹರಕ್ಕೆ ನಂಬಿಗೊಂಡದಕ್ಕೆ ವೈಜ್ಞಾನಿಕ ಹುಡ್ಕಿರೆ ಅಕ್ಕೋ ಭಾವಾ? – ನಿಂಗಳೇ ಹೇಳಿ. ಅದರಿಂದಲೂ ಅವೈಜ್ಞಾನಿಕಂಗೊ ಆಚವರ ಹತ್ರೆಯೂ ಇದ್ದು. ನಂಬಿಕೆ ಬೇರೆ ವಿಜ್ಞಾನ ಬೇರೆ.
ಎಂತ ಹೇಳ್ತಿ..?
~
ಷಷ್ಟಿ ಕಳುದ ಮೇಗೆ ಆರು ದಿನಲ್ಲಿ ದ್ವಾದಶಿ ಬತ್ತಲ್ಲದೋ – ಮಾರ್ಗಶಿರ ಶುಕ್ಲ ದ್ವಾದಶಿ!
ಹದಿನೈದು ದಿನ ಹಿಂದೆ, ಕಳುದ ದ್ವಾದಶಿಗೆ ಒಲಗೆ ಮಡಗಿದ ಕೊಪ್ಪರಿಗೆಯ ಇಳುಗಿ, ನೀರೆರದು ತೊಳದು, ಕವುಂಚಿ ಮಡಗುತ್ತ ದಿನ.

ಜಾತ್ರೆ ಹೇಳಿರೆ ಗವುಜಿ. ಸಾವಿರಾರು ಜೆನರ ಗವುಜಿಯ ಒಟ್ಟಿಂಗೇ ರಜ ರಜ ಮಣ್ಣು, ಮಲಿನವುದೇ ಆವುತ್ತು.
ಇಡೀ ಸುಬ್ರಮಣ್ಯ ದೇವಸ್ಥಾನವೇ ಆ ದಿನ ಜಾತ್ರೆ ಕಳುದ ಕೊಳೆಯ ತೊಳಕ್ಕೊಂಬ ದಿನ.
ನಿತ್ಯಾಣ ಧಾರ್ಮಿಕ ಕಾರ್ಯಕ್ಕೆ ತೆಯಾರಾಗಿಪ್ಪ ಕಾಲ.

ಇಡೀ ದೇವಸ್ಥಾನದ ಅಂಗಣಲ್ಲಿ ಮುಕ್ಕಾಲುಕೋಲು ನೀರು ಎರ್ಕುಸಿ, ಸಣ್ಣ ರಥಲ್ಲಿ ಸುಬ್ರಮಣ್ಯನ ಕೂರುಸಿ, ಆ ನೀರಿಲಿ ಎಳೆತ್ತ ಕಾಲ.
ರಥ ಎಳೆತ್ತ ಕಾರಣ ಈ ಉತ್ಸವವ ಬಂಡಿ ಉತ್ಸವ ಹೇಳಿಯೂ ಹೇಳ್ತವು.
~
ರಥ ಹೋದಲ್ಲಿ ಸುಬ್ರಮಣ್ಯದ ಆನೆಯೂ ಬರೆಡದೋ – ಹಾಂಗೆ ರಥಂದ ಮುಂದೆ ನೀರಿಲಿ ಆ ಆನೆಯೂ!
ಸುಬ್ರಮಣ್ಯ ಆನೆ ಹೇಳಿತ್ತುಕಂಡ್ರೆ ಸಣ್ಣ ಪ್ರಾಯ! ಮಹಾ ಪೋಕ್ರಿಬುದ್ಧಿಯುದೇ – ನೆಗೆಗಾರನ ಹಾಂಗೆ.
ನೀರಿಲಿ ನೆಡೆತ್ತ ಆನೆ ಮೇಗಂಗೆ ಪುಳ್ಳರುಗೊ ಕೈಲಿ ನೀರು ರಟ್ಟುಸುದು, ಪೋಲಿ ಎಳಗಿದ ಆನೆ ಒಂದರಿಯೇ ಸೊಂಡಿಲಿಲಿ ಕೊಡಪ್ಪಾನ ನೀರು ತುಂಬುಸಿ ಪುಸೂ..ಲನೆ ಬಿಡುದು.
ಬಿಂಗಿಮಕ್ಕೊ ಪೂರ ಚೆಂಡಿ ಮಕ್ಕೊ ಆದವು! 🙂
~
ನಾಳೆ (18, ದಶಂಬ್ರಕ್ಕೆ) ಬಂಡಿ ಉತ್ಸವ.
ಆಚಮನೆ ದೊಡ್ಡಣ್ಣಂಗೆ ಹೊಸಾ ಬೈಕ್ಕಿದ್ದಲ್ಲದೋ – ಹಾಂಗೆ, ಈ ಒರಿಶ ಬಂಡಿ ಉತ್ಸವಕ್ಕೆ ಇರುಳಿಂಗೆ ಹೋಪ ಅಂದಾಜಿದ್ದು ಕಾಣ್ತು. ಸರಿ ಅರಡಿಯ ಒಪ್ಪಣ್ಣಂಗೆ.
~

ಷಷ್ಟಿ ಕಳುದು ಸರೀ ಒಂದು ತಿಂಗಳಾದ ಮತ್ತೆ – ಪೌಷ ಮಾಸ ಶುಕ್ಲಪಕ್ಷಕ್ಕೆ ಕಿರುಷಷ್ಟಿ ಇದ್ದಡ.
ಷಷ್ಟಿಯ ಎಲ್ಲಾ ಆಚರಣೆಗಳ ಸಣ್ಣ ಮಟ್ಟಿಂಗೆ ಮಾಡ್ತ ಕಾರಣ ಕಿರುಷಷ್ಟಿ ಹೇಳಿ ಹೇಳುತ್ಸಡ ಇದರ – ಆಚಮನೆ ದೊಡ್ಡಪ್ಪ ಹೆಸರಿನ ಅರ್ಥವಿಶೇಷವನ್ನೂ ವಿವರುಸಿದವು.
ಹಳಬ್ಬರು ಕಿರಿಷಷ್ಟಿ ಹೇಳಿಯೂ ಹೇಳುಗಡ.
ಷಷ್ಟಿಗೆ ಹೋಪಲೆಡಿಯದ್ದೋರು ಅದಕ್ಕೆ ಹೋಗಿ ಪುಣ್ಯಕಟ್ಟಿಗೊಳ್ತವು.

~

ಅಂತೂ ನಮ್ಮ ಸುಬ್ರಮಣ್ಯವೇ ಆಸಕ್ತಿಕರ ಕ್ಷೇತ್ರ.
ಸುಬ್ರಮಣ್ಯ ಚಾಮಿ ಆಸ್ತಿಕರ ದೇವರು.
ಷಷ್ಟಿ ಹೇಳಿತ್ತುಕಂಡ್ರೆ ಆಸ್ತಿಕರಿಂಗೆ ವಿಶೇಷ ದಿನ. ಬೈಲಿಲಿಯೂ ಆ ದಿನ ಗಮ್ಮತ್ತೇ. ಊಟ ಉಪಾಹಾರ ಬಿಟ್ಟು ದೇವತಾಧ್ಯಾನಲ್ಲಿ ಉಪವಾಸ ಮಾಡಿದವು.
ಊರು ಸಿಕ್ಕದ್ದೋರುದೇ ಉಪವಾಸ ಮಾಡಿಕ್ಕಿದವು.
– ಮುಳಿಯಬಾವ ಸೌದಿಗೆ(ದೇಶಕ್ಕೆ) ಹೋಗಿ ಸಮಗಟ್ಟು ಊಟ ಸಿಕ್ಕದ್ದೆಯೂ ಉಪವಾಸ ಮಾಡಿದವಡ, ಅದು ಉಪವಾಸ ಸ್ರಷ್ಟಿ ಲೆಕ್ಕಲ್ಲಿ ಬಾರ- ಹೇಳಿದ್ದಕ್ಕೆ ಬೇಜಾರುಮಾಡಿಗೊಂಡವಡ, ಕೇವಳದಣ್ಣ ಹೇಳಿ ನೆಗೆ ಮಾಡಿಗೊಂಡು ಇತ್ತಿದ್ದವು! 😉
~

ಚಳಿಗಾಲ, ಇಡೀ ಸಮಾಜವೇ ಮೈಂದಿನ ಅಡಿಲಿ ಬೆಶ್ಚಂಗೆ ಇಪ್ಪಗ,
ಉಪವಾಸ, ರಥ, ಜಾತ್ರೆ, ಬಂಡಿ, ಉತ್ಸವ – ಹೇಳಿಗೊಂಡು ಮತ್ತೊಂದರಿ ಆಧ್ಯಾತ್ಮದ ಹೊಡೆಂಗೆ ಎಳೆತ್ತ ಸುಬ್ರಮಣ್ಯಂಗೆ ನಾವೆಲ್ಲರೂ ನಮಸ್ಕಾರ ಮಾಡುವೊ.

ಒಂದೊಪ್ಪ: ಸುಬ್ರಮಣ್ಯದ ಸುಬ್ರಮಣ್ಯಂಗೆ ಚಳಿಗಾಲ ಜಾತ್ರೆ ಮಾಡಿರೆ ಇಡಿ ಲೋಕವನ್ನೇ ತಂಪಿಲಿ ಮಡಗ್ಗು, ಅಲ್ಲದೋ?

ಸೂ: ಸುಬ್ರಮಣ್ಯದ ವೆಬ್-ಸೈಟಿಲಿ ಷಷ್ಟಿ ರಥ ಎಳೆತ್ತದು ಕಾಣ್ತಡ, ಪುಚ್ಚಪ್ಪಾಡಿಅಣ್ಣ ಹೇಳಿತ್ತಿದ್ದ°.
http://kukketemple.com

39 thoughts on “ಸುಬ್ರಮಣ್ಯದ ಷಷ್ಟಿ- ಕಿರು ಷಷ್ಟಿ; ಚಳಿಗಾಲಲ್ಲಿ ಆಧ್ಯಾತ್ಮ ಪುಷ್ಟಿ!!

  1. ಒಪ್ಪಣ್ಣಾ… ಸುದ್ದಿ ಲಾಯ್ಕ ಆಯಿದು…‍ ‍ಸುಬ್ರಹ್ಮಣ್ಯ ‘ಸ್ರಷ್ಟಿ’ಯ ಹಿನ್ನೆಲೆ, ಇತಿಹಾಸದ ವಿವವರಣೆ ಗೊಂತಿತ್ತಿಲ್ಲೆ…. ಲಾಯ್ಕಲ್ಲಿ ವಿವರಿಸಿದ್ದೆ
    ಅಭಿನಂದಬೆಗೊ…

    1. ಅಪ್ಪು ಕೆಪ್ಪಣ್ಣೋ..
      ಅದೊಂದು ನೋಡ್ಳೇಬೇಕಾದ ಗವುಜಿ.
      ಮುಂದಕ್ಕೇವಗಾರು ದೇವರೆತ್ತುಸಿರೆ ನಾವೊಂದರಿ ಹೋಪೊ°, ಅಲ್ಲದೋ?

  2. ಒಪ್ಪಣ್ಣ, ಸುಬ್ರಹ್ಮಣ್ಯನ ಬಗ್ಗೆ ಒಳ್ಳೆಯ, ಗೊಂತಿಲ್ಲದ್ದೆ ಇದ್ದ ವಿವರಂಗ ಈಗ ಗೊಂತಾತು. ಷಷ್ಟಿಯ ವಿವರಣೆ ಲಾಯ್ಕಾಯಿದು.
    ಸುಬ್ರಹ್ಮಣ್ಯನ ನೆಗೆಗಾರನ ಪೋಕ್ರಿತನವ ಹೇಳಿದ್ದೂ ಲಾಯ್ಕಾಯಿದು. ಪೇಪರ್ ಲಿ ದಿನಾ ಅದರ ಪೋಕ್ರಿತನದ, ಬಾಲಲೀಲೆಯ ಪಟಂಗ ಬತ್ತಾ ಇರ್ತನ್ನೇ. ಸಂತೋಷ ಆವುತ್ತು ಅದರ ನೋಡುವಾಗ. ಈಗ ನಿನ್ನ ಲೆಕ್ಕಲ್ಲಿ ನೆಗೆಗಾರ° ಹೇಳಿಯೇ ಅಂದಾಜು ಅಪ್ಪದು ಅದರ. 😉 🙂

    ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊಯೇಕ್ಕಾದರೆ ಹೇಂಗೆ ಹೋಪ ಕ್ರಮ ಹೇಳಿ ಒಬ್ಬ ಹಿರಿಯರು ಎಂಗೊಗೆ ಹೇಳಿತ್ತಿದ್ದವು, ಎಂಗೊ ಸರ್ಪ ಸಂಸ್ಕಾರ ಮಾಡ್ಲೆ ಹೋದ ಸಮೆಯಲ್ಲಿ.
    ನಾವು ಮೊದಾಲು, ಅಗ್ರಹಾರ ಸೋಮನಾಥ ದೇವಸ್ಥಾನದ( ಇಲ್ಲಿ ಸುಬ್ರಹ್ಮಣ್ಯದ ಮೊದಲಾಣ ಕೆಲವು ಗುರುಗಳ ವೃಂದಾವನಂಗ ಇದ್ದು) ಹತ್ತರೆ ಹರಿವ ಕುಮಾರಧಾರೆಲಿ ಕೈಕಾಲು ತೊಳದು, ಅಥವಾ ಮಿಂದು, ಸೋಮನಾಥನ ದರ್ಶನ ಮಾಡಿ, ವನದುರ್ಗೆಯ ಆಶೀರ್ವಾದ ತೆಕ್ಕೊಂಡು, ಗಣಪತಿ ದೇವರಿಂಗೆ ಅಡ್ಡ ಬಿದ್ದು, ಆದಿಸುಬ್ರಹ್ಮಣ್ಯಕ್ಕೆ ಹೋಗಿ, ಮತ್ತೆ ದೊಡ್ಡ ದೇವಸ್ಥಾನಕ್ಕೆ ಹೋಯೆಕ್ಕು ಹೇಳಿ.

    ಹಸ್ತೋದಕ ಹಂತಿಯ ಮೇಗೆ ಉರುಳು ಸೇವೆ ಮಾಡ್ತದರ ಬಗ್ಗೆ ಸುಮಾರು ಚರ್ಚೆಗ ನಡದ್ದನ್ನೇ. ಅದು ನಾವು ಉಂಬ ಹಂತಿ ಹೇಳ್ತ ಕಾರಣಕ್ಕೆ ಹಾಂಗೆ ಹೇಳುದಲ್ಲದಾ? ಅದು ಒಬ್ಬೊಬ್ಬನ ನಂಬಿಕೆಯ ಮೇಲೆ ಹೋವುತ್ತು. ಅದೇ ಜನಂಗ, ಕುಮಾರಧಾರೆಲಿ ಮಿಂದು, ಮಾರ್ಗಲ್ಲಿ ಉರುಳುಸೇವೆ ಮಾಡ್ತಾವಲ್ಲದಾ, ಅಂಬಗ ಏಕೆ ಮಾತಾಡ್ತಾವಿಲ್ಲೇ? ಮಾರ್ಗಲ್ಲಿ ಎಂತೆಲ್ಲಾ ಇರ್ತಿಲ್ಲೆ? ಅದು ಶುದ್ಧವಾಗಿದ್ದೋ? ಬಾಳೆಲಿ ಆರೂ ತುಪ್ಪವು.., ಮಾರ್ಗಲ್ಲಿ ಎಲ್ಲವುದೇ ಇರ್ತಿಲ್ಲೆಯಾ? ಜನರ ನಂಬಿಕೆಯ ನಾವೆಂತ ಮಾಡ್ಲೆ ಆವುತ್ತಿಲ್ಲೆ. ಕೆಲವು ದೇವಸ್ಥಾನಲ್ಲಿ ನೆಲಲ್ಲಿ ಉಂಬ ಕ್ರಮ ಇದ್ದು. ನಾವು ಬಾಳೆಲಿ ಉಂಬಗ ನಮ್ಮ ಹತ್ತರೆ ಇಪ್ಪವ್ವು ನೆಲಲ್ಲಿ ಉಂಬಗ ನವಗೆ ಉಂಬಲೆ ಎಡಿತ್ತಾ?

    ನಂಬಿಕೆಯ ಬಗ್ಗೆ ಹೇಳುವಾಗ ಸುಬ್ರಹ್ಮಣ್ಯಲ್ಲಿಯೇ ಒಂದು ಹೊಸಾ ಪದ್ಧತಿ ಬೆಳೆತ್ತದರ ಬಗ್ಗೆ ನಮ್ಮ ಚುಬ್ಬಣ್ಣ ಒಂದು ಶುದ್ದಿ ಬರದ್ದಾ° ಇಲ್ಲೆಯಾ? ಹೊಳೇಲಿ ಕಲ್ಲು ರಾಶಿ ಮಡುಗುದು. ಅಂಬಗ ಹಾಂಗೆ ಇಪ್ಪದು ಸರಿಯಾ? ನಾಳೆ ಅದು ಒಂದು ಕ್ರಮವೇ ಆಗಿ ಬೆಳದು, ದೇವಸ್ಥಾನಕ್ಕೆ ಸಂಬಂಧ ಇಲ್ಲದ್ದರೂ ಅದು ಒಂದು ಪರಿಪಾಠ ಆಗಿ ಹೋಕಲ್ಲದಾ? ಈ ನಂಬಿಕೆ ಜನಂಗಳ ಅಜ್ಞಾನದ ಕಡೆಂಗೆ ಕೊಂಡು ಹೋಪದಲ್ಲದಾ?
    ಮನುಷ್ಯ ಆದ ಮೇಲೆ ನಂಬಿಕೆ ಯಾವುದಾದರೂ ಒಂದು ವಿಷಯಲ್ಲಿ ಮಡಿಗಿಯೇ ಮಡುಗುತ್ತ°. ಅದು ಆರೋಗ್ಯಕರವಾಗಿದ್ದರೆ ಎಲ್ಲರಿಂಗೂ ಒಳ್ಳೇದು. ಇಲ್ಲದ್ದಲ್ಲಿ ಸಮಾಜಕ್ಕೆ ಅದು ಮಾರಕ.
    ಒಂದೊಪ್ಪ ಲಾಯ್ಕಾಯಿದು.

    1. ಸುಬ್ರಹ್ಮಣ್ಯಕ್ಕೆ ಹೋಪಗ ಯಾವ ರೀತಿ ದೇಹ ಶುದ್ಧ ಮಾಡಿ, ಪರಿವಾರ ದೇವರುಗಳ ದರ್ಶನ ಮಾಡಿಂಡು ಮುಂದಂಗೆ ಹೋಯೆಕ್ಕು ಹೇಳ್ತ ವಿವರವ ಶ್ರೀ ಅಕ್ಕ ಕೊಟ್ಟದು ಲಾಯಿಕ ಆತು.
      ಗೊಂತಿಲ್ಲದ್ದ ವಿಶಯ ತಿಳಿಸಿ ಕೊಟ್ಟದಕ್ಕೆ ಧನ್ಯವಾದಂಗೊ.
      ಒಪ್ಪಣ್ಣನ ಬಯಲಿಂಗೆ ಇಳುದವಕ್ಕೆ ಒಂದಲ್ಲದ್ದರೊಂದು ಮಾಹಿತಿಗೊ ಸಿಕ್ಕುತ್ತು ಹೇಳುವದು ತುಂಬಾ ಸಂತೋಷದ ಸಂಗತಿ.
      [ಮನುಷ್ಯ ಆದ ಮೇಲೆ ನಂಬಿಕೆ ಯಾವುದಾದರೂ ಒಂದು ವಿಷಯಲ್ಲಿ ಮಡಿಗಿಯೇ ಮಡುಗುತ್ತ°. ಅದು ಆರೋಗ್ಯಕರವಾಗಿದ್ದರೆ ಎಲ್ಲರಿಂಗೂ ಒಳ್ಳೇದು. ಇಲ್ಲದ್ದಲ್ಲಿ ಸಮಾಜಕ್ಕೆ ಅದು ಮಾರಕ.]- ವಾಸ್ತವ ಸಂಗತಿ, ಸರಿಯಾಗಿ ಹೇಳಿದೆ. ಕೊಶೀ ಆತು.

      1. ಶ್ರೀಅಕ್ಕಾ..
        ಭಾರೀ ಲಾಯಿಕದ ಒಪ್ಪ ಬರದಿ ನಿಂಗೊ! ಕೊಶೀ ಆತು.
        ಶ್ರೀಶಣ್ಣ ಹೇಳಿದ ಹಾಂಗೆ ಆ ಗೆರೆ ಬೈಲಿನ ಎಲ್ಲೋರಿಂಗೂ ಕೊಶಿ ಆತು.

        ಸುಬ್ರಮಣ್ಯ ಎಲ್ಲೋರಿಂಗೂ ಒಳ್ಳೆದುಮಾಡಲಿ..

  3. tumba laikaidu oppnna.namma ajjandra bhasheya sersigondu barava kramavude chendakke odule koshi aavuttu.
    subrahmanyada shashtige hogi banda hange aathu.
    kumara parvatada kodiyange hattule oppannanottinge hopale ondu maja.
    bachhelu gontaga nege hasya ellavu ondu koshiye koshi..
    shashtiya shuddi bhari laikaidu oppanna.
    good luck.

    1. ಪುಚ್ಚಪ್ಪಾಡಿ ಅಣ್ಣಂಗೆ ನಮಸ್ಕಾರ ಇದ್ದು.
      ಕಂಬುಳಿಯ ಶುದ್ದಿ ಸುರುವಿಂಗೇ ಹೇಳಿದ್ದಲ್ಲದೋ? ಕಂಡತ್ತಿಲ್ಲೆಯೋ?

      ಅಪುರೂಪಲ್ಲಿ ನಿಂಗೊಗೆ ಕಂಬುಳಿ ನೆಂಪಾದ್ದರ ಕಂಡು ಬೈಲಿನವಕ್ಕೆ ಕೊಶಿ ಆಯಿದಾತ! 😉

    1. ಬೇಜಾರು ಮಾಡೆಡ ಕೂಸೇ. ಎಂಗಳ ಒಪ್ಪಣ್ಣ ರಥೋತ್ಸವದ ಸಮೆಲಿ ನಿನ್ನ ದೂರಂದ ಕಂಡದು. ಅದೂ ಆ ಗೇಸ್ ಲೈಟಿನ ಬೆಣಂಚಿಲ್ಲಿ. ಹಾಂಗಾಗಿ ಒಂದು ಸಣ್ಣ ಕಂಫ್ಯೂಸು. ನಿನ್ನ ತಂಗೆ ಹೇಳಿಯೇ ಹೇಳುವೊ. ಬೈಲಿಂಗೆ ಸುರು ಬಂದ ಹಾಂಗೆ ಕಂಡತ್ತು. ಬೈಲಿಂಗೆ ಸ್ವಾಗತ.

      1. Akku maava.. 🙂 dhanyavadango… Anu bailinge idara modalu bainde.yavaglu bappalille heli aste..

        1. { ಹಾಂಗಾಗಿ ಒಂದು ಸಣ್ಣ ಕಂಫ್ಯೂಸು }
          ಅಪ್ಪಪ್ಪು, ಆ ಮಂದ ಬೆಣ್ಚಿಲಿ ಎಂತದೂ ಸಮಗಟ್ಟು ಕಾಣ.
          ವೀಡ್ಯಲ್ಲಿ ಪಕ್ಕನೆ ರೂಪತ್ತೆ ಮಗಳ ಹಾಂಗೆ ಕಂಡತ್ತು, ಬೀಸಾಳೆಲಿ ಗಾಳಿ ಹಾಕಿಯೊಂಡು, ರಥದ ಮುಂದೆ.
          ಮತ್ತೆ ನೋಡಿರೆ ಅದು ಆನೆಕುಂಞಿ! 😉

  4. ಚೆ೦ದ ಆಯಿದು ಒಪ್ಪಣ್ಣ ಹೇಳಿದ ಸ್ಥಲ ಪುರಾಣ.
    ‘ಸ್ರಷ್ಟಿ’ ಹೇಳಿರೆ ಎ೦ತದು? ಷಷ್ಠಿ ಯನ್ನೆ ಹಾ೦ಗೆ ಹೇಳುವದ?
    ಕುಮಾರ ಪರ್ವತದ ಕಲ್ಲು ಮ೦ಟಪದ ಪಟ ನೋಡುವಗ ನೆ೦ಪಾತು:
    ಸುಮಾರು ವರ್ಶ ಹಿ೦ದೆ ವೆ೦ಕಟೇಶ್ವರ ಭಟ್ರೊಟ್ಟಿ೦ಗೆ ಕುಮಾರ ಪರ್ವತಕ್ಕೆ ಹೋದವರಲ್ಲಿ (ಪೆರಡಾಲ ದೇವಸ್ಥಾನದ ವಸ೦ತ ವೇದಪಾಠಶಾಲೆಯ ವಿದ್ಯಾರ್ಥಿಗ) ಆನುದೆ ಇದ್ದಿದ್ದೆ. ದಾರಿಲ್ಲಿ ಜಿಗಣೆ ಕಚ್ಚುವದು, ಕಾಲಿ೦ದ ಅದರ ಬಿಡುಸುವದು… ಪರ್ವತಲ್ಲಿ ಕುಮಾರ ಲಿ೦ಗ ಸಿಕ್ಕುವದು.. ಲಾಯಕ ಅನುಭವ೦ಗ. ವೇಣೂರಣ್ಣ೦ಗೆ ನೆ೦ಪಿಕ್ಕು…

    ಪರ್ವತಕ್ಕೆ ಹತ್ತುವ ದಾರಿಲ್ಲಿ (ಅರಣ್ಯದ ಮಧ್ಯಲ್ಲಿ) ಯಾತ್ರಿಕರಿ೦ಗೆ ಆತಿಥ್ಯ ಕೊಡುವ ನಮ್ಮವರ ಒ೦ದು ಮನೆ ಇದ್ದು. ತೋಟ ಇದ್ದು, ಕೃಷಿ ಮಾಡ್ತವು. ಅವರ ಧೈರ್ಯ ಮೆಚ್ಚೆಕಾದ್ದದೆ!

    ‘ಕುಮಾರ ಪರ್ವತ’ ದ ಹೆಸರು ಕೇಳುವಗ ಮತ್ತೊ೦ದು ನೆ೦ಪಾತು: ‘ಕುರಾಮ’ ಹೇಳಿ ಒ೦ದು ಪರ್ವತ ಜಪಾನಿಲ್ಲಿ ಇದ್ದು. ಅಲ್ಲಿ ಬೌದ್ಧರ ಮ೦ದಿರ೦ಗ ಇದ್ದು. ‘ಕುಮಾರ’ ವೇ ‘ಕುರಾಮ/ಕೊರಾಮ’ ಆದ್ದದು ಹೇಳಿ ಅವ್ವು ಹೇಳ್ತವು. ಅಲ್ಲಿ ಒ೦ದು ವಿಗ್ರಹವೂ ಇದ್ದು. ‘ಸನತ್ಕುಮಾರ’ನ ವಿಗ್ರಹ ಅಡ.

    {ಈಗಂತೂ ಚಳಿಯೋ ಚಳಿ}
    ಅಪ್ಪಪ್ಪು, ತು೦ಬಾ ಚಳಿ ಇಲ್ಲಿ. ಕೊಡೆ ಹಿಡಿವಷ್ಟು ಚಳಿ!

    1. ಡಾಮಹೇಶಣ್ಣಾ..
      { ‘ಸ್ರಷ್ಟಿ’ ಹೇಳಿರೆ ಎ೦ತದು? ಷಷ್ಠಿ ಯನ್ನೆ ಹಾ೦ಗೆ ಹೇಳುವದ? }
      ಅಪ್ಪು, ಕಾಂಬುಅಜ್ಜಿ ಎಲ್ಲ ಹಾಂಗೇ ಹೇಳಿಗೊಂಡು ಇದ್ದದು.
      ಹಳಬ್ಬರು ಉಚ್ಛಾರ ಆದಷ್ಟು ಸುಲಾಬ ಮಾಡಿಗೊಂಗಿದಾ.
      (ಹಾಂಗೇ, ಒಪ್ಪಣ್ಣಂಗೂ ಅಂಬೆರ್ಪಿಂಗೆ ಹೇಳುವಗ ಹಾಂಗೇ ಬಪ್ಪದು! 😉 )

      ಕುಮಾರಪರ್ವತದ ಶುದ್ದಿ ಪುರುಸೋತಿಲಿ ಒಂದರಿ ಮಾತಾಡುವೊ°, ಆಗದಾ?! 🙂

      ಜಪಾನಿನ ಕೊರಮ್ಮನ ಶುದ್ದಿ ಕಂಡು ಕೊಶಿ ಆತು! :_)

      { ಕೊಡೆ ಹಿಡಿವಷ್ಟು ಚಳಿ}
      ವಿದೇಶದ ವಿಶೇಷ ಆಯಿಕ್ಕಲ್ಲದೋ!
      ಎಂಗಳ ಬಟ್ಯ ಚಳಿ ಆದರೆ ಕೊಡೆ ಅಲ್ಲ ಕೊಡಪ್ಪಾನ ಹಿಡಿಗು, ಕಳ್ಳಿಂದು! 😉

  5. ಸುಬ್ರಹ್ಮಣ್ಯನ ಜನನಕ್ಕೆ ಕಾರಣ, ಅವನ ಸಾಮರ್ಥ್ಯ, ಷಷ್ಠಿ ಹೇಳ್ತ ಹೆಸರು ಬಪ್ಪಲೆ ಕಾರಣ, ಸುಬ್ರಹ್ಮಣ್ಯಲ್ಲಿ ಅದರ ಆಚರಣೆ,ಒಟ್ಟಿಂಗೆ ಬಂಡಿ ಉತ್ಸವ ಮತ್ತೆ ಕಿರುಷಷ್ಠಿ ಬಗ್ಗೆ ಕೂಡಾ ಒಳ್ಳೆ ವಿವರವಾದ ಮಾಹಿತಿ. ಧನ್ಯವಾದಂಗೊ.
    ಚಾರಣ ಪ್ರಿಯರಿಂಗೆ ಕುಮಾರ ಪರ್ವತ ಹತ್ತುವದು ಕೂಡಾ ಹೆಮ್ಮೆಯ ವಿಶಯ.
    ವಾಹನ ವೆವಸ್ಥೆ ಕಮ್ಮಿ ಇಪ್ಪ ಮೊದಲಾಣ ಕಾಲಲ್ಲಿ, ಅಲ್ಲಿಗೆ ಹೋದ ನೆಂಪಿಂಗೆ ಹೇಳ್ತ ಹಾಂಗೆ ಬಪ್ಪಗ ಕಂಬಳಿ ತೆಕ್ಕೊಡು ಬಕ್ಕು.
    ತುಂಬಾ ಆತ್ಮೀಯರು ಒಟ್ಟಿಂಗೆ ಇದ್ದರೆ “ಸುಬ್ರಹ್ಮಣ್ಯದ ಜೋಡಿ” ಹೇಳಿ ಹೋಲಿಕೆಯೂ ಕೊಡುಗು.
    [ನಂಬಿಕೆ ಬೇರೆ ವಿಜ್ಞಾನ ಬೇರೆ.] -ಸರಿಯಾಗಿ ಹೇಳಿದೆ.
    ಬರೇ ನಂಬಿಕೆ ಮತ್ತೆ ಆತ್ಮ ವಿಶ್ವಾಸಂದ ಜೀವನವ ಎದುರಿಸಿ, ಗುಣ ಮಾಡ್ಲೆ ಎಡಿಯದ್ದ ಖಾಯಿಲೆಗಳಿಂದಲೂ ಮುಕ್ತರಾಗಿ ಮೇಗೆ ಬಂದವು ಇದ್ದವು. ಇದಕ್ಕೆಲಾ ವಿಜ್ಞಾನಲ್ಲಿ ಉತ್ತರ ಸಿಕ್ಕಲೆ ಕಷ್ಟ.

    1. ಶರ್ಮಪ್ಪಚ್ಚೀ..
      ಕಂಬುಳಿ ಶುದ್ದಿ ಪಷ್ಟಾಯಿದು.
      ಸುಬ್ರಮಣ್ಯದ (ಕುಳ್ಕುಂದ) ದನಗಳ ಜಾತ್ರೆ ಬಿಟ್ಟುಹೋತದಾ ಹೇಳುಲೆ!
      ಆಚಮನೆ ದೊಡ್ಡಪ್ಪ ನೆಂಪಿಲಿ ಹೇಳಿರೂ ಒಪ್ಪಣ್ಣಂಗೆ ಹೇಳುಲೆ ಬಿಟ್ಟು ಹೋಗಿತ್ತು. 🙁
      ಒಳ್ಳೆದಾತು ನಿಂಗೊ ನೆಂಪು ಮಾಡಿದ್ದು.

  6. ತು೦ಬ ಲಾಯಿಕ ಆಯಿದು ಒಪ್ಪಣ್ಣ… :)ಅದಕ್ಕೆ ಮೊದಲು ಧನ್ಯವದನ್ಗೊ… ಮತ್ತೆ ರಥೋತ್ಸವ ಕ೦ಡು ತು೦ಬಾ ಖುಷಿ ಆತು… ಹೋಪಲೆ ಎಡಿಯದ್ದರೂ ಕ೦ಡು ತು೦ಬ ಸ೦ತೋಷ ಆತು.. 🙂

    1. ಚಿಕ್ಕಮ್ಮಾ..
      ಧನ್ಯವಾದ ಹೇಳಿದ್ದಕ್ಕೆ ಧನ್ಯವಾದಂಗೊ. 🙂

      ರಥೋತ್ಸವಲ್ಲಿ ಅದಾ, ಆಚ ಕರೇಲಿ ನಿಂಗಳ ಕಂಡಾಂಗೆ ಆತನ್ನೆಪ್ಪಾ..
      ನಿಂಗೊ ಅಲ್ಲದ ಅಂಬಗ! 😉

  7. ಜಾತ್ರೆಯ ಇತಿಹಾಸಂಗಲ ತಿಳಿಸಿದ್ದು ಲಾಯಿಕಾಯಿದು.

    1. ಪ್ರಮೋದಭಾವಾ..
      ನಿಂಗೊಗೆ ಕೊಶಿ ಆದ್ದರ ಕಂಡು ಕೊಶಿ ಆತು ಒಪ್ಪಣ್ಣಂಗೆ.. 🙂
      ಬೈಲಿನ ಎಲ್ಲಾ ಶುದ್ದಿಗಳ ಕಂಡು, ಮಾತಾಡುಸಿಗೊಂಡಿರಿ..

  8. ಎಲ್ಲಾ ದಿಕ್ಕು ಚಳಿ ಇದ್ದರು, ಎಂಗಳ ಕೊಡೆಯಾಲಲ್ಲಿ ಈ ದಶಂಬರಲ್ಲಿ ಚಳಿ ಸಾಲ ಭಾವಯ್ಯ. ಷಷ್ಟಿ ಬಗ್ಗೆ ಒಪ್ಪಣ್ಣನ ವಿವರಣೆಯ ಲೇಖನ ಚೆಂದ ಆಯಿದು. ಅಲ್ಲಿಯ ಜಾತ್ರೆ , ರಥೋತ್ಸವವ ಕಣ್ತುಂಬ ನೋಡಿದ ಹಾಂಗೆ ಆತು. ಅಂಬಗ ಒಂದು ಕಥೆಯ ಪ್ರಕಾರ ಷಷ್ಟಿ ಹೇಳಿರೆ ಸುಬ್ರಹ್ಮಣನ wedding anniversary ! ಅಲ್ಲದೊ ? ಸುಬ್ರಹ್ಮಣ್ಯಂಗೂ, ಸರ್ಪಕ್ಕೂ ಇದ್ದ ಸಂಬಂಧದ ಕತೆ ಎನಗೆ ಹೊಸತ್ತು. ತಿಳಿಸಿ ಕೊಟ್ಟದಕ್ಕೆ ಧನ್ಯವಾದಂಗೊ.

    1. {ಚಳಿ ಸಾಲ ಭಾವಯ್ಯ}
      ನಿಂಗೊ ಕೊಡೆಯಾಲಲ್ಲಿ ಕೂದಂಡು ಹಾಂಗೆ ಹೇಳಿರೆ ಅಕ್ಕೋ?
      ಕಡಲಕರೆಲಿ ಮಾಪುಳೆ ಮೀನುಸುಟ್ಟಾಕಿತ್ತಾಯಿಕ್ಕು, ಹಾಂಗೆ ಬೆಶ್ಚಂಗೆ!

      ಸುಬ್ರಮಣ್ಯಸೂಕ್ತ, ಸರ್ಪಸೂಕ್ತ ಹೇಳಿರೆ ಒಂದೇ ಮಂತ್ರ ಅಡ, ಬಟ್ಟಮಾವ° ಹೇಳಿತ್ತಿದ್ದವು ಅಂದು.

  9. ಕಳುದ ವರ್ಷ ಮಾಷ್ಟ್ರುಮಾವ ಎನ್ನ ಬಂಡಿ ಉತ್ಸವಕ್ಕೆ ಕರಕ್ಕೊಂಡು ಹೋಯಿದವು..ಈ ಸರ್ತಿ ಆಚಮನೆ ದೊಡ್ಡಣ್ಣನ ಹೊಸಾ ಬೈಕ್ಕಿಲಿ ಹೋಪಲೆಡಿತ್ತೋ ಹೇಳಿ ನೋಡೆಕ್ಕಷ್ಟೇ..ಶುದ್ಧಿ ಫಷ್ಟಾಯಿದು…ಸುಬ್ರಮಣ್ಯ ಎಲ್ಲೋರಿಂಗೂ ಒಳ್ಳೇದು ಮಾಡಲಿ…

    1. ಗಣೇಶಮಾವಾ°..
      ಆಚಮನೆ ದೊಡ್ಡಣ್ಣನ ಬೈಕ್ಕಿಲಿ ಗಾಳಿ ಕಮ್ಮಿ ಆಯಿದಡ..
      ಗುಣಾಜೆಮಾಣಿಯ ಹುಡ್ಕಿಯೊಂಡು ಇತ್ತಿದ್ದ° ದೊಡ್ಡಣ್ಣ!.. 😉

      ಕಳುದೊರಿಶ ಬಂಡಿ ಉತ್ಸವಕ್ಕೆ ಹೋದ ಶುದ್ದಿ ಬೈಲಿಂಗೆ ಹೇಳುಲೆಡಿಗೋ?
      (ಆನೆ ನೀರು ಚೇಪಿದ ನೆಗೆಯನ್ನುದೇ ಸೇರುಸಿಗೊಂಡು!! )

  10. ಕೂದಲ್ಲೇ ಸುಬ್ರಮಣ್ಯ ದೇವಸ್ಥಾನದ ಜಾತ್ರೆ ನೋಡಿದ ಹಾಂಗಾತದ. ಈ ಜಾತ್ರೆಯ ವಿಷಯ ಬರದೋರಿಂಗೂ,ಓದಿದೋರಿಂಗೂ,ನೋಡಿದೋರಿಂಗೂ,ನೋಡದ್ದೊರಿಂಗೋ ಕ್ಷೇತ್ರ ದೇವರು ಒಳ್ಳೆದು ಮಾಡಲಿ ಹೇಳಿ ಹಾರೈಸುವ.
    ಎಡೆಲಿ ಎನ್ನ ಸೌದಿ ಕಡಿವಲೆ ಕಳುಸಿದೆ ಅಲ್ಲದೋ?

  11. ಸುಬ್ರಹ್ಮಣ್ಯ ದೇವರಿ೦ಗೆ ಜ್ಯೋತಿಷ್ಯಲ್ಲಿ ವಿಶೇಷ ಸ್ಥಾನ ಇದ್ದು ಕಾರಣ ಅವ೦ ಗ್ರಹಾದಿಪ೦ ಸಕಲ ಗ್ರಹ೦ಗೋಕ್ಕೂ ಅವನೇ ಅಧಿಪತಿ.ಹಾ೦ಗಾಗಿ ಗ್ರಹಚಾರ ದೋಷಕ್ಕೆಲ್ಲ ಅವನನ್ನೇ ಕೇಳಿಗೊ೦ಬದು.ಸೇನಾದಿಪತಿ ಹೇಳೀರೆ ಬಾಕಿದ್ದವು ಕೇಳುಗಲ್ಲದೊ.ಜ್ಯೋತಿಷ್ಯದವು ಅವ೦ಗೆ ಅಡ್ಡಬಿದ್ದೇ ಮು೦ದೆ ಹೋಪದು.ಪಯ್ಯನ್ನೂರಿನ ಸುಬ್ರಹ್ಮಣ್ಯ ಈ ಬಗ್ಯೆ ಹೆಚ್ಹು ಹೆಸರುವಾಸಿ.ಈಗ ಸಿನೆಮದವರಿ೦ದ ಸುರುವಾಗಿ ರಾಜಕೀಯದವರ ವರೆಗೆ ಎಲ್ಲೋರೂದೆ ಸರ್ಪದೋಷ ಹೇಳಿಗೊ೦ಡು ನಿವ್ರುತ್ತಿಗೆ ಸುಬ್ರಹ್ಮಮಣ್ಯಕ್ಕೆ ಬಪ್ಪದು ಹೆಚ್ಚಾಯಿದು.ಪರಶುರಾಮ ಕ್ಷೆತ್ರಲ್ಲಿ ಸುಬ್ರಹ್ಮಣ್ಯ೦ಗೆ ಅದಿಕಾರ ಜಾಸ್ತಿ, ಕಾರಣ ಇದು ಸರ್ಪ೦ಗಳ ರಾಜ್ಯ ಸಮುದ್ರನತ್ರೆ ಕೇಳಿ ಪರಶುರಾಮ ಪಡಕ್ಕೊ೦ಡದು ಅ೦ಬಗ ಒಪ್ಪಿಯೊ೦ಡಪ್ರಕಾರ ಸರ್ಪ್ಪ೦ಗೊಕ್ಕೆ ಇಲ್ಲಿ ಪೂಜೆ ನೆಡೇಕು ಹಾ೦ಗೆ ನಾಗಬನ೦ಗಳೂ ಇಲ್ಲಿ ಜಾಸ್ತಿ.ಬರದೂ ಬರದು ಬನಿಯನು ಅ೦ಗಿದ ದೊಡ್ಡ ಅಕ್ಕೋ ಹೇಳಿ ಹೆದರಿಕೆ.ಇಲ್ಲಿಗೆ ನಿಲ್ಲುಸುತ್ತೆ.ಇದೆಲ್ಲ ಎನ್ನ ಅಪ್ಪನಿ೦ದ ತಿಳುದ ಸ೦ಗತಿಗೊ.ಸತ್ಯ ಗೊ೦ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ.

    1. ಒಳ್ಳೆ ಒಪ್ಪ ಕೊಟ್ಟಿದಿ ಮಾವ°…

      {ಬನಿಯನು ಅ೦ಗಿದ ದೊಡ್ಡ ಅಕ್ಕೋ..}
      ಅಂಗಿಂದ ದೊಡ್ಡ ಬನಿಯಾನು ಇದ್ದರೂ ಈಗೀಗ ನೆಡೆತ್ತು –
      ಬನಿಯಾನಂಗಿ (T-Shirt) ಹೇಳಿ ಬಯಿಂದಡ, ಅದರ ಹಾಕಿರೆ ಮತ್ತೆ ಅಂಗಿ ಹಾಕೆಕ್ಕು ಹೇಳಿಯೂ ಇಲ್ಲೆಡ ಮಾವ°..

  12. {ಗಟ್ಟದ ಮೇಗಾಣೋರಿಂಗೆ ಸುಬ್ರಮಣ್ಯ ಹೇಳಿರೆ ಭಾರೀ ಹತ್ತರೆ ಇದಾ}
    ಗಟ್ಟದ ಮೇಗಾಣೋರು ಕುಕ್ಕೆ ಹೇಳುದು ಹೇಳಿದ ಪೆರ್ಲದಣ್ಣ ಅಪ್ಪೋ?

    1. ಬೆಂಗಳೂರಿನ ಹತ್ರೆ ಘಾಟಿ ಸುಬ್ರಹ್ಮಣ್ಯ ಹೇಳಿ ಇದ್ದು, ಆದ ಕಾರಣ ಈ ಸುಬ್ರಹ್ಮಣ್ಯವ ಕುಕ್ಕೆ ಸುಬ್ರಹ್ಮಣ್ಯ ಹೇಳಿ ಹೇಳುತ್ತವು

  13. monne madesnaanada vishaya odida mele ee lekhana bandadu sakaalika heli anisittu.manjeshwarada ratha subramanyada rathanda raja saNNa ada.adakkondu kathe iddada.gontiddare heluviro?enage saree gontille.

    1. ಸುಬ್ರಹ್ಮಣ್ಯದ ರಥದಸ್ಟೇ ದೊಡ್ಡ ರಥ ಕಟ್ಟುಲೇ ಹೇಳಿ ಆಚಾರಿಗೋ ಸುಬ್ರಹ್ಮಣ್ಯದ ಬ್ರಹ್ಮ ರಥವ ಒಂದು ಕೊಲಿಲಿ ಅಳತೆ ತೆಕ್ಕೊಂಡು ಮಂಜೇಶ್ವರಕ್ಕೆ ಹೆರಟವಡ. ಹಂಗೆ ಹೊಪಗ ಆ ಕೋಲಿನ ದಂಟು ಕೋಲಿನ ಹಂಗೆ ಹಿಡುಕ್ಕೊಂಡು ಹೊಪಗ ಅದು ತಳದು ತಳದು ಹೋತಡ. ಹಂಗಾಗಿ ಮಂಜೇಶ್ವರಲ್ಲಿ ರಥ ಕಟ್ಟುವಾಗ ಚೂರು ಸಣ್ಣ ಆತಡ.

      1. ಗೋಪಾಲಣ್ಣ,
        ನಿಂಗಳ ಒಪ್ಪ ಕಂಡು ಕೊಶಿ ಆತು.
        ಅದರ್ಲಿ ಇರ್ತ ಪ್ರಶ್ನೆ ಕಂಡು ಮತ್ತೂ ಕೊಶಿ ಆತು.
        ಉತ್ತರ ಹೇಳುಲೆ ಹೇಳಿ ಹೆರಾಡುವಗ ವೆಂಕಟೇಶಣ್ಣ ಉತ್ತರ ಹೇಳಿದ್ದು ಕಂಡು ಮತ್ತೂ ಕೊಶಿ ಆತು!
        ಇಬ್ರಿಂಗೂ ನಮಸ್ಕಾರಂಗೊ.
        ಆಚಮನೆ ದೊಡ್ಡಪ್ಪಂದೇ ಅದೇ ಕತೆ ಹೇಳಿತ್ತಿದ್ದವು, ಆ ಕತೆ ಇನ್ನುದೇ ಉದ್ದ ಇದ್ದು – ಕೋಲು ಮತ್ತುದೇ ಸಣ್ಣ ಸಣ್ಣ ಅಪ್ಪದು. 🙂

        ವೆಂಕಟೇಶಣ್ಣನ ಹತ್ರೆ ನಿಂದುಗೊಂಡಿಪ್ಪದು ಸುಬ್ರಮಣ್ಯನ ನೆಗೆಗಾರನೇ ಅಲ್ಲದೋ? 🙂

          1. ನೆಗೆಗಾರನ(ನೆಗೆಗಾರ್ತಿಯ) ಕಂಡು ತುಂಬಾ ಕೊಶಿ ಆತು ವೆಂಕಟೇಶಣ್ಣಾ..
            ಈ ಶುದ್ದಿಗೆ ನಿಂಗೊ ಒಪ್ಪ ಕೊಟ್ಟೇ ಕೊಡುವಿ ಹೇಳಿ ಇತ್ತು ಒಪ್ಪಣ್ಣಂಗೆ.
            ಕೊಶಿ ಆತು, ಬೈಲಿಂಗೆ ಬಂದೋಂಡಿರಿ. ಆತೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×