ಕುಮ್ಕಿ ಜಾಗೆಯ ಸರ್ಕಾರವೇ ಮುಕ್ಕಿ ತಿಂತಡ!!!

ಊರಿಲೀಗ ವಿಪರೀತ ಚಳಿ.
ಚಳಿ ಜೋರಪ್ಪಗ ಯೇವ ಕೆಲಸವೂ ನೆಂಪಾವುತ್ತಿಲ್ಲೆ. ನೆಂಪಾದರೂ ಮಾಡ್ಳೆ ಮನಸ್ಸು ಬತ್ತಿಲ್ಲೆ, ಮಾಡೆಕ್ಕು ಹೇದು ಮನಸ್ಸಿಲಿದ್ದರೂ ಏಳುಲೆ ಛಳಿ ಬಿಡ್ತಿಲ್ಲೆ. ನೀರಿಂಗೆ ಬಿದ್ದು ಚೆಂಡಿ ಆದ ಕೋಳಿ ಯೇವ ರೀತಿ ಬೆಶಿಲಿಲಿ ಕೂದಿರ್ತೋ – ಅದೇ ನಮುನೆ ಬೆಶ್ಚಂಗೆ ಕೂದುಗೊಂಬದು ಪರಮ ಸುಖ ಹೇದು ಅನುಸುತ್ತು.
ಕುಂಟಾಂಗಿಲ ಬಾವ° ಅಂತೂ ರಜ ದೊಡ್ಡಮಟ್ಟಿಂಗೆ ಆಲೋಚನೆ ಮಾಡಿ ಜೀವನಲ್ಲಿ ಒಂದು ಹಂತ ಮೇಲೆ ಏರಿದ°. ಇರಳಿ, ಅವಂಗೂ ಶುಭಾಶಯಂಗೊ.
~

ಮೊನ್ನೆ ಕುಂಟಾಂಗಿಲ ಬಾವನ ಮದುವೆಗೆ ಪಂಜಚಿಕ್ಕಯ್ಯ ಬಪ್ಪಗ ರಜ್ಜ ತಡವಾಯಿದು.
ಬಪ್ಪಗ ಕೈಲಿ ಆ ದಿನದ ಪೇಪರು ಹಿಡ್ಕೊಂಡೇ ಬಯಿಂದವು; ತಲೆಲಿ ತಲೆಬೆಶಿಯೂ.
ಪಂಜಚಿಕ್ಕಯ್ಯಂಗೆ – ಕುಶಿ ಆದರೂ, ಬೇಜಾರಾದರೂ ಒಳ ಮಡಗಿ ಅರಡಿಯ; ಅದು ಮೋರೆಲಿ ಕಾಂಗು ಅಂಬಗಳೇ.
ಹಾಂಗೆ, ಮೊನ್ನೆ ಮದುವೆಲಿಯೂ – ಯೇವತ್ರಾಣ ಗೆಲುವು ಇದ್ದತ್ತಿಲ್ಲೆ; ಯೇವದೋ ಒಂದು ಬೇಜಾರವೇ ಕಂಡುಗೊಂಡಿತ್ತು. ತಲೆ ಇದ್ದವಕ್ಕಲ್ಲದೋ ತಲೆಬೆಶಿ ಇರ್ಸು – ಹೇದು ರಂಗಮಾವನ ಒಂದು ಮಾತಿದ್ದು. ಹಾಂಗೆ ನಾವುದೇ ಎಂತ್ಸೂ ಕೇಳುಲೆ ಹೋಯಿದಿಲ್ಲೆ.

ಆದರೆ, ರಜ್ಜ ಕಳುದು ಆಚಮನೆ ದೊಡ್ಡಪ್ಪ° ಸಿಕ್ಕಿಯಪ್ಪಗ, ಅವರ ಮಾತುಕತೆ ಒಪ್ಪಣ್ಣಂಗೆ ಕೇಳಿಯಪ್ಪಗ – ಪಂಜಚಿಕ್ಕಯ್ಯನ ಬೇಜಾರಕ್ಕೆ ಕಾರಣ ಎಂತ್ಸರ ಹೇದು ಅರಡಿಗಾತು.
ಅದೇ – ಕುಮ್ಕಿ ಭೂಮಿಯ ಹಕ್ಕಿನ ವಿಶಯಲ್ಲಿ ಈಗ ನೆಡೆತ್ತಾ ಇಪ್ಪ ಕೋರ್ಟು-ನಂಬ್ರದ ಸಂಗತಿ.
~
ಕುಮ್ಕಿ ಹೇದರೆಂತ್ಸು?

ತರವಾಡುಮನೆ ಎಂಕಪ್ಪಜ್ಜನ ಕಾಲಲ್ಲಿ – ಹೇದರೆ ೧೯೦೦-೧೯೧೦ರ ಬ್ರಿಟಿಶರ ಕಾಲಲ್ಲಿ ನಮ್ಮ ಊರಿಂಗೆ ಮೆಡ್ರಾಸು ಗೋರ್ಮೆಂಟು.
ಊರಿಲಿಡೀ ಉಂಬಲೇ ಬಡತನ ಇಪ್ಪಗ ಜಾಗೆಗೆ ಬೇಡಿಕೆಯೂ ಕಡಮ್ಮೆ; ತೆಕ್ಕೊಂಬ ಶೆಗ್ತಿ ಇದ್ದೋರೂ ಕಡಮ್ಮೆ.
ಹಾಂಗೆ ಆರಾರು ಮಂಗ್ಳೂರು ಹೋಬಳಿಲಿ ಕೃಶಿ ಭೂಮಿ ತೆಕ್ಕೊಂಡೋರಿಂಗೆ – ಅವರ ಜಾಗೆ ಕರೆಲಿ ’ಆರದ್ದೂ ಅಲ್ಲದ್ದೆ ಇದ್ದಿದ್ದ’ ಗೋರ್ಮೆಂಟು ಕಾಡಿನ – ಅಳದು ಕೊಟ್ಟುಗೊಂಡಿತ್ತಿದ್ದವಡ. ವರ್ಗ ಜಾಗೆಂದ ನೂರು ಗಜದಷ್ಟು ದೂರದ ಜಾಗೆಲಿ – ಆ ವರ್ಗ ಜಾಗೆಯ ವಾರೀಸುದಾರ ಅವನ ಕೃಶಿ-ಜೀವನಕ್ಕೆ ಪೂರಕ ಚಟುವಟಿಕೆಗಳ ಮಾಡಿಗೊಂಬಲಕ್ಕು.
ಹೇದರೆ, ಅಡಿಗೆ ಮಾಡ್ಳೆ ಸೌದಿ, ದನಗೊಕ್ಕೆ ಬಜಕ್ಕುರೆ, ದನಗೊಕ್ಕೆ ಮೇವು, ತೋಟಕ್ಕೆ ಸೊಪ್ಪು – ಹೀಂಗಿರ್ಸ ಚಟುವಟಿಕೆಗೊ.
ವರ್ಗಾ ಜಾಗೆಗೆ ತಾಗಿಂಡಿಪ್ಪ ಈ ಕಾಡಿನ ಜಾಗೆಯೇ – ಕುಮ್ಕಿ. ಇದೇ ನಮುನೆ ಜಾಗೆಗೆ ಉತ್ತರ ಕನ್ನಡಲ್ಲಿ ಬೆಟ್ಟ ಹೇದೂ, ಕೊಡಗಿನ ಹೊಡೆಲಿ ಬಾಣೆ – ಹೇದೂ ಹೇಳ್ತವಾಡ.
ಅದೊಂದು ನಮುನೆ – ಕೃಶಿ ಭೂಮಿಗೂ, ಕಾಡಿಂಗೂ ಇರ್ತ ಕೊಂಡಿ ಜಾಗೆ.

ಹಾಂಗೆ ಸುರು ಆದ ಬಳಕೆ – ಕ್ರಮೇಣ ಅದು ಅವರದ್ದೇ ಆಗಿ ಹೋತು.
ಈಗಾಣ ಕತೆ ಅಲ್ಲ ಅದು – ಬ್ರಿಟಿಷರ ಕಾಲದ್ದು. ಮೂವತ್ತೊರಿಶಕ್ಕೆ ಒಂದು ತಲೆಮಾರು ಹೇದರೂ – ಸುಮಾರು ನಾಲ್ಕು ತಲೆಮಾರು ಹಿಂದೆ.
ತರವಾಡುಮನೆಲಿ ಎಂಕಪ್ಪಜ್ಜಂದ ಮತ್ತೆ ಶಂಬಜ್ಜ° ಬಂದು, ಮತ್ತೆ ರಂಗಮಾವನ ಆಡಳ್ತೆ ಆಗಿ, ಶಾಂಬಾವನ ಆಡಳ್ತೆಲಿ ಪುಳ್ಳಿಮಾಣಿ ವಿನು ಶಾಲೆಗೋಪಷ್ಟು ದೊಡ್ಡವೂ ಆಯಿದ°! ಇಷ್ಟು ಸಮೆಯ ಆತು ಕುಮ್ಕಿ ಆಗಿ.
ಆ ಜಾಗೆಯ ಮೇಗೆ ಪೂರ್ಣ ಅಧಿಕಾರ ನಿಂಗೊಗೆ ಇಲ್ಲೆ; ಆದರೆ ಅದರ ’ಅನುಭವಿಸಲೆ ಅಕ್ಕು’ – ಹೇದು ಬ್ರಿಟಿಶರ ಕಾನೂನು ಹೇಯಿದ್ಸಾಡ.

ಬೆಳವಣಿಗೆ – ಹೋರಾಟ:

ಪೂರ್ಣ ಅಧಿಕಾರ ರೈತರಿಂಗೆ ಇಲ್ಲೆ – ಹೇದು ಸರಕಾರ ಹೇದರೂ – ಆ ಜಾಗೆಯ ಸುತ್ತುಮುತ್ತ ಬೇರೆ ಮನುಷ್ಯರು ಆರೂ ಇಲ್ಲೆ.
ಕೃಷಿ ಜಾಗೆ ಒಳಿಯೆಕ್ಕಾರೆ ಅದಕ್ಕೆ ತಾಗಿಂಡಿದ್ದ ಈ ಕುಮ್ಕಿ ಜಾಗೆಯನ್ನೂ ಭದ್ರ ಮಾಡೆಕ್ಕು. ಕುಮ್ಕಿಗೆ ಬೇಲಿ ಹಾಕದ್ರೆ ವರ್ಗ ಜಾಗೆಲಿಪ್ಪ ತೋಟವೂ ಒಳಿಯ. ಹಾಂಗಾಗಿ – ಕುಮ್ಕಿಗೆ ಬೇಲಿ ಹಾಕೆಕ್ಕಾಗಿ ಬಂತು. ಬೇಲಿ ಹಾಕಿ ಭದ್ರ ಆದ ಮತ್ತೆ – ಅದುದೇ ಕೃಷಿ ಭೂಮಿಯ ಹಾಂಗೇ ಕಂಡತ್ತು.
ಕ್ರಮೇಣ ಕುಮ್ಕಿಯೂ ವರ್ಗ ಜಾಗೆಯ ಹಾಂಗೇ ಆತು.
ಎಷ್ಟೋ ದಿಕ್ಕೆ ವರ್ಗ ಜಾಗೆಗೂ – ಕುಮ್ಕಿ ಜಾಗೆಗೂ ಗಡಿಯೇ ಮಾಸಿ ಹೋತು. ಏಕೇದರೆ – ಎರಡುದೇ ಒಬ್ಬನದ್ದೇ ಒಡೆತನ ಆದ ಕಾರಣ!
ಅಷ್ಟೇ ಅಲ್ಲದ್ದೆ, ವರ್ಗ ಜಾಗೆಯ ವಾರೀಸುದಾರನ ಕುಟುಂಬ ಬೆಳದತ್ತು. ಮನೆಲಿ ಊಟ ಮಾಡ್ಳೆ ಸದಸ್ಯರ ಸಂಖ್ಹ್ಯೆ ಹೆಚ್ಚಾತು. ಕೆಲಸ ಮಾಡುವ ಕೈಗೊ ಜಾಸ್ತಿ ಆತು. ಹಶು ಅಪ್ಪ ಹೊಟ್ಟೆಗೊ ಜಾಸ್ತಿ ಆತು. ಕುಮ್ಕಿಗಳೂ ಕೃಷಿ ಭೂಮಿ ಆತು.
ಅಜ್ಜಂದ್ರ ಕಾಲದ ಕುಮ್ಕಿ ಮಕ್ಕೊಗೆ ಪಾಲಾತು. ವರ್ಗ ಜಾಗೆಯ ಒಟ್ಟಿಂಗೆ ಕುಮ್ಕಿಲಿಯೂ ಪಾಲಾತು.
ಕೆಲವು ದಿಕ್ಕೆ ಒಪ್ಪಕ್ಕ° ಚಿಕ್ಕು ಪಾಲು ಮಾಡಿದ ಹಾಂಗೆ – ಜಾಗೆ ತುಂಡುಗೊ; ಹೇಂಗಿದ್ದು ಹೇದರೆ – ಒಂದೆಕರೆ ವರ್ಗ, ಹತ್ತೆಕ್ರೆ ಕುಮ್ಕಿ – ಹೇದೂ ಆಯಿದು.
ಒಟ್ಟಿಲಿ ವರ್ಗ ಜಾಗೆ – ಕುಮ್ಕಿ ಜಾಗೆ ಎರಡುದೇ ಗುರ್ತವೇ ಸಿಕ್ಕದ್ದಷ್ಟು ’ಒಂದೇ ನಮುನೆ’ ಆಗಿ ಹೋತು.
ಕೆಲವು ದಿಕ್ಕೆ ಅಂತೂ – ಮನೆಯೇ ಕುಮ್ಕಿ ಜಾಗೆಲಿ ಆಗಿ ಹೋತು!

ಎಲ್ಲ ಸರೀ ಇದ್ದತ್ತು.
ಈ ವೆವಸ್ತೆ ಒಂದು ಹೊಡೆ ಆದರೆ, ’ಈ ಜಾಗೆ ಮೇಗೆ ಪೂರ್ಣ ಅಧಿಕಾರ ಇಲ್ಲೆ’ – ಹೇಳ್ತ ಸತ್ಯ ನಮ್ಮ ಹೆರಿಯೋರ ತಲೆಲಿ ನಿತ್ಯ ತಿರುಗೆಂಡು ಇದ್ದತ್ತು. ಹಾಂಗಾಗಿ ಸ್ವಾತಂತ್ರ ಸಮಯಂದಲೇ ’ಇದರ ಪೂರ್ಣ ಅಧಿಕಾರ ಕೊಡಿ’ – ಹೇದು ಹೋರಾಟ ಸುರು ಮಾಡಿದವು.
೧೯೫೦ ರಿಂದ ಸುರು ಆದ ಹೋರಾಟ, ೧೯೭೦ ರ ಹೊತ್ತಿಂಗೆ ರಜ ಜೋರೇ ಆತು. ೧೯೭೬ ರಲ್ಲಿ ಅಂತೂ- ಕುಮ್ಕಿ ಜಾಗೆಲಿ ಕೃಶಿ ಮಾಡ್ತರೆ ಎಂತೆಲ್ಲ ಕ್ರಮ ಅನುಸರುಸೇಕು – ಹೇದು – ಸುಪ್ರೀಮು ಕೋರ್ಟು ವರೆಗೆ ಹೋತಾಡ ಒಂದರಿ.

ಅಂತೂ ಬೂದಿ ಮುಚ್ಚಿಂಡಿದ್ದ ಕೆಂಡದ ಹಾಂಗೆ ಈ ಸಮಸ್ಯೆ ಹಾಂಗೇ ಇದ್ದತ್ತಾಡ.
ಕುಮ್ಕಿ ಹಕ್ಕು ಕೃಷಿಕರಿಂಗೆ ಕೊಡಿ – ಹೇದು ಕುಮ್ಕಿ ಅನುಭವಿಸುವ ಕೃಷಿಕರು; ಕುಮ್ಕಿ ಸರ್ಕಾರದ್ದು – ಹೇದು ಸರ್ಕಾರ ಅತ್ತಿತ್ತೆ ವಾದ ವಿವಾದ ಮಾಡಿಗೊಂಡು ಇತ್ತಿದ್ದವು.

ಈ ವಿವಾದ ಕರ್ನಾಟಕ ಹೈಕೋರ್ಟಿಂಗೆ ಹೋಗಿ, ೨೦೦೩ ರಲ್ಲಿ ತೀರ್ಮಾನ ಕೊಟ್ಟತ್ತಾಡ. ಎಂತಾಳಿ?
ಕುಮ್ಕಿ ಭೂಮಿ ಸರ್ಕಾರದ್ದೇ ಸೊತ್ತು. ಅದರ ಅನುಭವಿಸಲೆ ಮಾಂತ್ರ ಕೃಷಿಕರಿಂಗೆ ಹಕ್ಕಿಪ್ಪದೇ ಹೊರತು, ಅದರ ಸ್ವಾಮಿತ್ವ ಇಲ್ಲೆ -ಹೇದು!
ಒಂದಲ್ಲ ಒಂದು ದಿನ ಈ ಕುಮ್ಕಿ ಕೈ ಜಾರುವ ಲಕ್ಷಣ – ಹೇದು ಅಂಬಗ ಕೃಶಿಕರಿಂಗೆ ಅನುಸುಲೆ ಸುರು ಆತು.
~
ಆದರೆ ಅದೃಷ್ಟವಶಾತ್, ೨೦೧೩ ರಲ್ಲಿ ಬಂದ ಡೀವಿ ಗೋರ್ಮೆಂಟು “ಕುಮ್ಕಿ ಹಕ್ಕಿನ ಪೂರ್ಣವಾಗಿ ರೈತರಿಂಗೇ ಕೊಡ್ತೆಯೊ°” – ಹೇದು ಶಾಸನವೇ ಪಾಸು ಮಾಡಿತ್ತಾಡ.
ಕೃಶಿಕರಿಂಗೆಲ್ಲ ಕೊಶೀ ಆತು. ರಾಜ್ಯದ ಎಲ್ಲೋರ ಹೊಟ್ಟೆ ತಣ್ಣಂಗಿರಲಿ – ಹೇದು ಹಾರೈಸಿ ನೆಮ್ಮದಿಲಿ ಇದ್ದಿದ್ದವು.
~
ಆದರೆ, ಈಗ ಸರ್ಕಾರ ಬದಲಿತ್ತನ್ನೇ – ಈ ಬದಲಾದ ಸರ್ಕಾರ ಅದರ ರಾಗ ಬದಲುಸಿತ್ತಾಡ.
ಅಂದು ಕೋರ್ಟು ಹೇಳಿದ್ದೇ ವೇದವಾಕ್ಯ; ಕುಮ್ಕಿ ಜಾಗೆ ಸರ್ಕಾರದ್ದೇ. ಅದರ ಕೃಷಿಕರದ್ದು ಹೇದು ಒಪ್ಪುಲೆ ಬಿಡ್ತಿಲ್ಲೆ – ಹೇದು.
ಕುಮ್ಕಿ ಜಾಗೆಯ ತುಂಡುಸಿ ಬಡವರಿಂಗೆ ಹಂಚುತ್ತೆಯೊ° – ಹೇದು ಒಂದು ಮಂತ್ರಿ ಹೇಳಿಯೂ ಆತು ಅಷ್ಟೊತ್ತಿಂಗೆ.
ಆತನ್ನೇ! ಪುನಾ ತಲೆಬೆಶಿ.

ಇದರ ಹಿಂದೆ ಓಟಿನ ಲೆಕ್ಕಾಚಾರವೂ ಇದ್ದು – ಹೇದು ಪಂಜಚಿಕ್ಕಯ್ಯನ ಅಭಿಪ್ರಾಯ.
ಒಬ್ಬನ ಕುಂಕಿಯ ತುಂಡುಸಿ ಹತ್ತು ಮನೆಗೆ ಕೊಟ್ರೆ – ಮೂಲ ಕೃಶಿಕರ ಮನೆಲಿ ನಾಲ್ಕೇ ಓಟು ಇಕ್ಕಷ್ಟೆ; ಆದರೆ ಹೊಸತ್ತು ಬಂದ ಎಲ್ಲಾ ಮನೆಗಳಲ್ಲಿ ಹನ್ನೆರಡು ಹನ್ನೆರಡು ಜೆನಂಗೊ, ನೂರಾ ಇಪ್ಪತ್ತು ಓಟು ಸಿಕ್ಕುತ್ತಿಲ್ಲೆಯೋ!
ಹೀಂಗೆಲ್ಲ ಲೆಕ್ಕಾಚಾರಂಗೊ ಅಡ!! ಅದಿರಳಿ.
~
ಅದಿರಳಿ.
ಈಗಾಣ ಒರ್ತಮಾನ ಎಂತ್ಸರ ಹೇದರೆ – ಪುತ್ತೂರಿನ ಶಾಂಭಟ್ರು ಹೇಳ್ತ ಮಹನೀಯರು ಕರ್ನಾಟಕ ಹೈಕೋರ್ಟಿನ ಹಳೇ ತೀರ್ಮಾನದ ವಿರುದ್ಧ ಸುಪ್ರೀಮು ಕೋರ್ಟಿಂಗೆ ಹೋಗಿ ನಂಬ್ರ ಮಾಡಿದವಡ.
ಆ ಪ್ರಕಾರ ಮೊನ್ನೆ ತೀರ್ಪು ಬಂತಾಡ. ತೀರ್ಪಿಲಿ ಎಂತ್ಸ ಹೇಯಿದ್ದು ಗೊಂತಿದ್ದೋ – “ಹೈಕೋರ್ಟು ಹೇಯಿದ್ಸರ ಅಲ್ಲಾಳಿ ಹೇಳುಲೆ ಎಂತೂ ವಿಶೇಷ ಸಂಗತಿಗೊ ಕಾಣ್ತಿಲ್ಲೆ” – ಹೇದು.
ಆತನ್ನೇ.
ಹಾಂಗಾರೆ ಇನ್ನು ಕರ್ನಾಟಕ ಹೈಕೋರ್ಟು ಹೇಳಿದ್ದೇ ಅಂತಿಮ!
ಅದರ ನೆಡೆಶಲೆ ಇಪ್ಪ ಕರ್ನಾಟಕ ಸರ್ಕಾರದ ಅತೀ ಇಚ್ಚಾಶೆಗ್ತಿಯೂ ಇದ್ದನ್ನೇ.
ಕುಮ್ಕಿಯ ಜಿಲ್ಲಾಧಿಕಾರಿಯ ಮೂಲಕ ಸರ್ಕಾರ ವಶ ಪಡುಸಿಗೊಂಬ ಅಧಿಕಾರ ಇದ್ದಾಡ.
~

ಹಾಂಗಾರೆ ಇನ್ನು ಸದ್ಯಲ್ಲೇ – ಕುಮ್ಕಿ ಜಾಗೆಯ ತೋಟವ ಕಡುದು ಸಮ ಮಾಡಿ, ಮೀಸಲಾತಿಯವಕ್ಕೆ, ಅಲ್ಪಸಂಖ್ಯಾತರಿಂಗೆ, ಓರಾಟಗಾರರಿಂಗೆ, ಸಾಹಿತಿಗೊಕ್ಕೆ ಹೇದು ಹರುದು ಹಂಚಿ ಕೊಡುವ ದೃಶ್ಯಂಗೊ ಕಾಂಗೋ!
ಅದರ್ಲಿ ನಿಜವಾದ ಬಡವರೆಷ್ಟೋ, ಗೋರ್ಮೆಂಟು ಸರ್ಟಿಫಿಕೇಟು ಮಾಡುಸಿಗೊಂಡ ಲೊಟ್ಟೆಗೊ ಎಷ್ಟೋ!
ಎಂತೆಲ್ಲ ನೋಡ್ಳಿದ್ದೋ – ದೇವರೇ ಬಲ್ಲ!!
~

ಕೆಲವು ವಿಷಯಂಗೊ ನಾವು ಗಮನುಸೆಕ್ಕು.

ಕುಮ್ಕಿ ಹೇದರೆ ಅದು ಅರಣ್ಯ ಭೂಮಿ- ಹೇಳ್ತ ಸಂಗತಿಲಿ ಬತ್ತಾಡ.
ಈಗ ಒಂದು ವೇಳೆ ಕೃಷಿಯೇ ಮಾಡಿದ್ದರೂ – ಅದು ಮರಂಗಳೇ ಅಲ್ದೋ! ಆ ಲೆಕ್ಕಲ್ಲಿ ಕೃಷಿಕರು ಪ್ರಪಂಚದ ವಾತಾವರಣಕ್ಕೆ ಸಹಾಯವೇ ಮಾಡುದಲ್ದೋ!
ಹಾಂಗಾರೆ, ಆ ಅರಣ್ಯ ಭೊಮಿಯ ಸರ್ಕಾರ ವಶ ಮಾಡಿರೂ – ಅಲ್ಲಿ ಲೆಕ್ಕಲ್ಲಿ ಅರಣ್ಯ ಬಿಟ್ಟು ಬೇರೆಂತೂ ಮಾಡ್ಳಾಗ ಅಲ್ದೋ?!
ಒಂದು ವೇಳೆ ಅದು ಅಲ್ಲಿ ಬಿಳ್ಡಿಂಗು ಹಾಕಿ ಕೋಂಕ್ರೇಟು ಕಟ್ಟಡ ತಂದರೆ – ಅದು ಅರಣ್ಯ ನೀತಿಗೆ ತಪ್ಪಿ ಹೋದ ಹಾಂಗೆ ಆತಿಲ್ಯೋ?
ಸರ್ಕಾರದ ಕಾನೂನು ಎಂತದೇ ಹೇಳಲಿ – ಭೂಮಿಯ ಕಾನೂನು ತಪ್ಪಿತ್ತಿಲ್ಲೆಯೋ?

ಕುಮ್ಕಿ ಭೂಮಿ ಇಪ್ಪದು ಕೃಷಿ ಭೂಮಿಯ ಒತ್ತಕ್ಕೆ. ಹೇದರೆ ತೋಟದ ಕರೆಲಿ.
ತೋಟದ ಕರೆಯ ಜಾಗೆಯ ಅಳದು ಯೇವದೋ ಗುರ್ತ ಇಲ್ಲದ್ದೋರಿಂಗೆ ಕೊಡ್ತೆ – ಹೇದರೆ ಆರಿಂಗಾರೂ ಪುಕುಪುಕು ಆಗದೋ?
ಕಳ್ಳ-ಕಾಕಂಗಳ ಭಯ ಅಲ್ಲದ್ದರೇ ಈಗಾಣ ಕಾಲಲ್ಲಿ ಜಾಸ್ತಿ; ಅದರ ಮೇಗಂದ ಜಾಗೆ ಕರೆಲಿ ಕಳ್ಳಂಗಳೂ ಕಾಕಂಗಳೂ ತುಂಬಿರೆ!!
ಸಾಬೀತಿನವು ಬಂದರೆ ಸಮ; ಆದರೆ ಎಲ್ಲೋರುದೇ ಒಂದೇ ನಮುನೆ ಇರ್ತವೋ!

ಕೆಲವು ದಿಕ್ಕೆ ಅರ್ಧ ಎಕ್ರೆ ಭೂಮಿಲಿ ಮನೆ ಕಟ್ಟಿ, ಹಿತ್ತುಲು ಬೆಳೆಶಿ, ಒಳುದ ನಾಲ್ಕೆಕರೆ ಕುಮ್ಕಿಲಿ ಕೃಷಿ ಮಾಡಿಗೊಂಡು ಕೆಲವು ಕೃಷಿಕರು ಇದ್ದವು.
ಅಂಥವು – ಈ ಕಾನೂನಿನ ಮೂಲಕ ಮಾರ್ಗಕ್ಕೆ ಬಂದು ಬೀಳವೋ?
ಕೃಷಿ ಭೂಮಿಯೆ ಇಲ್ಲದ್ದರೆ ಅವರ ಸಂಸಾರ ಸಾಗುಗೋ?
ಇದೊಂದು ಮುಗಿತ್ತಿಲ್ಲೆ ಈ ಸಂಗತಿ – ಹೇದು ಭಾರೀ ಬೇಜಾರ ಈಗ ಕೃಷಿಕರಿಂಗೆ.

ಕುಮ್ಕಿ ಭೂಮಿ ಸರ್ಕಾರದ್ದು ಹೇಳುದು ಸುಲಾಬ. ಆದರೆ ಅದರ ಹಿಂದಾಣ ಬೇನೆಗೊ, ಬೇಜಾರಂಗಳನ್ನೂ ಅರ್ತ ಮಾಡಿಗೊಳ್ಳೆಡದೋ?
ಬರೇ ಕುಮ್ಕಿ ಜಾಗೆಯ ತುಂಡಿಲಿ ಜೀವನ ಮಾಡ್ತ ಕೃಷಿಕರು ಮಾರ್ಗಕ್ಕೆ ಬಂದು ಬೀಳೆಕ್ಕಕ್ಕು.
~
ಅಂತೂ ಇಂತೂ – ಕೃಷಿಕರು ಸದಾ ಯೋಚನೆ ಮಡೆಕ್ಕಾದ ಕಾಲ.
~
ಹದಿನೈದು ಒರಿಶ ಕೃಶಿ ಮಾಡಿದ ಸರ್ಕಾರೀ ಭೂಮಿ ಅಕ್ರಮ-ಸಕ್ರಮಲ್ಲಿ ಕೃಷಿಕರದ್ದು ಆವುತ್ತಡ.
ಆದರೆ ನೂರಾರು ಒರಿಶ ಕೃಶಿ ಮಾಡಿದ ಕುಮ್ಕಿ ಭೂಮಿ ಕೃಷಿಕರದ್ದೇ ಅಲ್ದೋ ಹಾಂಗಾರೆ?

~

ಒಂದೊಪ್ಪ: ಕೃಷಿಕರ ನೆಮ್ಮದಿಲಿ ಮಡಗಿರೆ ಮಾಂತ್ರ ಸರ್ಕಾರ ಅಥವಾ ದೇಶ ನೆಮ್ಮದಿಲಿ ಇಕ್ಕಷ್ಟೆ. ಕೃಷಿಕರೇ ಮಾರ್ಗಕ್ಕೆ ಬಿದ್ದರೆ ಒಳುದೋರು ಉಂಬದೆಂತರ?

ಒಪ್ಪಣ್ಣ

   

You may also like...

6 Responses

 1. ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿ

 2. Harisha Kevala says:

  ಸಕಾಲಿಕ ಉತ್ತಮ ಮಾಹಿತಿ

 3. ಗಡಿ ತಕರಾರು ಜಾಗೆ ತಕರಾರು ಮುಗಿಯದ್ದ ತಲೆಬೇನೆ ಅಪ್ಪೋ!! ಬೂದಿ ಮುಚ್ಚಿದ ಕೆಂಡವೇ!!

  ಅತ್ಯುತ್ತಮ ಈ ಶುದ್ದಿಗೊಂದು ಒಪ್ಪ.

 4. ಬೊಳುಂಬು ಗೋಪಾಲ says:

  ಸೊಪ್ಪು ಸೌದಗೆ ಕುಮ್ಕಿ ಜಾಗೆ ಕೃಷಿಕರಿಂಗೆ ಬೇಕೇ ಬೇಕು. ಇದರ ತುಂಡು ಮಾಡಿ “ಅಲ್ಪ” ಸಂಖ್ಯೆಯವಕ್ಕೆ ಮನೆ ಕಟ್ಳೋ, ಪಳ್ಳಿ ಕಟ್ಟಲೋ ಕೊಟ್ರೆ ಕಷ್ಟ ಆಗಿ ಹೋಕು. ಒಪ್ಪಣ್ಣನ ಸಕಾಲಿಕ ಲೇಖನ ಒಳ್ಳೆ ಮಾಹಿತಿ ಕೊಟ್ಟತ್ತು.

 5. ಸರಿಯಾದ ಮಾಹಿತಿ. ಕೃಷಿಕರ ಎಲ್ಲಾ ರೀತಿಲಿಯೂ ಹರುದು ಮುಕ್ಕುದೇ ಆತು.ಮತ್ತೆ ಕೃಷಿಕರಿಂಗೆಂತರ ಪ್ರೋತ್ಸಾಹ! ಸಾವಯವ ಕೃಷಿಗೆ ಕರೆಕಾಡು ಅಗತ್ಯ .

 6. Prashant Bhat yellapur says:

  ಕೇಸ್ ನಂಬರ್ ಅಥವಾ ಜಜ್ಮೆt ಡೀಟೇಲ್ಸ್ bekagittu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *