Oppanna.com

ಹೆರಿಯೋರು ಮಕ್ಕಳ ಒಂದೇ ಹಾಂಗೆ ಕಂಡ್ರೆ, ಮಕ್ಕಳೂ ಹೆರಿಯೋರ ಒಂದೇ ಹಾಂಗೆ ಕಾಂಗು..

ಬರದೋರು :   ಒಪ್ಪಣ್ಣ    on   06/03/2015    2 ಒಪ್ಪಂಗೊ

ಬೈಲಕರೆ ಗಣೇಶಮಾವನ ಅಜ್ಜನಮನೆ ನೆರೆಕರೆಲಿ ಒಂದು ಮನೆ ಇದ್ದು, ನಿಂಗೊಗೆ ಗುರ್ತ ಇಕ್ಕು.
ಪಳ್ಳದಕರೆ ಸುಬ್ರಾಯಜ್ಜನ ಮನೆ ಹೇಳಿಯೇ ಹೆಸರಾಯಿದು ಅದಕ್ಕೀಗ. ಸುಬ್ರಾಯಜ್ಜನ ಪುಳ್ಳಿ ಈಗ ಜವ್ವನಿಗ°. ಅವ ಸಣ್ಣಾಗಿಪ್ಪಾಗ – ನಮ್ಮ ಈಚಕರೆ ಪುಟ್ಟಭಾವನ ಕ್ಲಾಸು ಮೇಟು ಆಡ. ಆ ನೆಂಟಸ್ತನಲ್ಲಿ ಹಲವೂ ಸರ್ತಿ ಪುಟ್ಟಭಾವನ ಮನೆಗೆ ಬಂದದಿದ್ದು.

ಕೆಲವು ಸರ್ತಿ ಬಂದಿಪ್ಪಾಗ ಒಪ್ಪಣ್ಣಂಗೂ ಮಾತಾಡ್ಳೆ ಸಿಕ್ಕಿದ್ದದಿದ್ದು.

~

ಎಷ್ಟೋ ಒರಿಶ ಕಳುದಮತ್ತೆ ಆ ಮಾಣಿಯ ಓ ಮನ್ನೆ ಕಾಂಬಲೆ ಸಿಕ್ಕಿತ್ತು – ಬದಿಯೆಡ್ಕಲ್ಲಿ. ಮತ್ತಾಣ ಬಸ್ಸು ಹಿಡುದು ಮಾಯಕ ಅಪ್ಪನ್ನಾರವೂ ತುಂಬ ಹೊತ್ತು ಉಭಯಕುಶಲೋಪರಿ ಮಾತಾಡಿದೆಯೊ°. ಮಾಣಿಗೆ ಒಂಚೂರೂ ದೊಡ್ಡಸ್ತಿಕೆ ಇಲ್ಲೆ – ಹೇಳ್ತಿತವು ಪಾತಿಅತ್ತೆ. ಅಷ್ಟೂ ನಯವಿನಯ, ಮಾತುಗಾರಿಕೆ. ಇದಕ್ಕೆಲ್ಲ ಕಾರಣ ಅವರ ಕೌಟುಂಬಿಕ ಹಿನ್ನೆಲೆಯೇ – ಹೇದು ಒಪ್ಪಣ್ಣಂಗೆ ಅನುಸುಲೆ ಇದ್ದು ಒಂದೊಂದರಿ.

ಹಾಂಗಾರೆ ಅವರ ಕೌಟುಂಬಿಕ ಹಿನ್ನೆಲೆ ಎಂತರ? ಅದೇ – ಅವಿಭಕ್ತ ಕುಟುಂಬ.

~

ಪಳ್ಳದಕರೆ ಸುಬ್ರಾಯಜ್ಜನ ತುಂಬು ಸಂಸಾರ ಹೇದರೆ – ಅವರ ಮಕ್ಕಳಿಂದ ಬೆಳಗಿ, ಈಗ ಪುಳ್ಯಕ್ಕೊಗೆ ಮಕ್ಕೊ ಆಯಿದು – ಇಷ್ಟೂ ಉದ್ದದ ಬಳ್ಳಿ ಒಟ್ಟಿಂಗೇ ಒಂದೇ ಹುರಿಯಾಗಿ ಒಂದೇ ಮನೆಲಿ ಇದ್ದವು ಹೇಳುಸ್ಸು ನಮ್ಮ ಸಮಾಜದ ಅಪೂರ್ವ ಹೆಮ್ಮೆಯ ವಿಷಯ. ಈಗ ಎಲ್ಲಿದ್ದು ಹಾಂಗಿಪ್ಪ ವೆವಸ್ತೆ?
ಸುಬ್ರಾಯಜ್ಜಂಗೆ ನಾಕು ಜೆನ ಮಕ್ಕೊ. ಅಖೇರಿಯಾಣ ಮಾವ° ಮಾಷ್ಟ್ರು ಹೇಳುಸ್ಸು ಬಿಟ್ರೆ, ಮತ್ತೆ ಎಲ್ಲ ಮಾವಂದ್ರುದೇ ಕೃಷಿಯೇ.  ಮಾಷ್ಟ್ರುದೇ ಶಾಲೆಲಿ ಮಾಂತ್ರ. ಮನೆಲಿ ಗೊಬ್ಬರದ ಹೆಡಗೆ ಹೊತ್ತೇ ಅಭ್ಯಾಸ ಅವಕ್ಕೆ. ಮನೆಯ ಸಮಗ್ರ ಕೆಲಸ ಕಾರ್ಯಂಗಳಲ್ಲಿ ಎಲ್ಲೋರುದೇ ಸೇರಿ ಕೆಲಸ ಮಾಡ್ತ ಕಾರಣ ಆ ಮನೆಯ ಜೀವ ಇನ್ನುದೇ ಜೀವಂತಿಕೆಲಿ ಇದ್ದು.

ಆ ಮನೆಯ ಅವಿಭಕ್ತತೆಯ ಗುಟ್ಟು ಎಂತರ? – ಎಂತರ ಹೇದರೆ, ಸುಬ್ರಾಯಜ್ಜನ ನಡವಳಿಕೆ!
ಅಪ್ಪು – ಆ ವಿಷಯಲ್ಲಿ ಸುಬ್ರಾಯಜ್ಜನ ಮೆಚ್ಚಲೇ ಬೇಕು!! ತನ್ನ ಇಡೀ ಜೀವಮಾನಲ್ಲಿ – ಅವರ ನಾಲ್ಕೂ ಮಕ್ಕಳನ್ನೂ ಒಂದೇ ಹಾಂಗೆ ಕಂಡಿದವಾಡ! ಒಬ್ಬ ಉಶಾರಿ, ಇನ್ನೊಬ್ಬ ಮಾಷ್ಟ್ರ°, ಮತ್ತೊಬ್ಬ° ಕೃಷಿ – ಹೇದು ಏನೂ ಬೇಧಭಾವ ಇಲ್ಲೆ. ಆಂತರ್ಯಲ್ಲಿಯೂ ಇದೇ ಪ್ರೀತಿ. ಇದರಿಂದ ಎಲ್ಲಾ ಮಕ್ಕೊಗೂ ಅವರ ಹೆರಿಯೋರ ಮೇಗೆ ಒಂದೇ ನಮುನೆ ಪ್ರೀತಿ ಬಪ್ಪಲೆ ಕಾರಣ ಆತು.

ಮಕ್ಕೊ ಸಣ್ಣ ಇಪ್ಪಾಗ ಹೆರಿಯೋರ ಪ್ರೀತಿ ಎಷ್ಟು ಲಾಯ್ಕಕ್ಕೆ ಸಿಕ್ಕುತ್ತೋ, ಅಷ್ಟೇ ಚೆಂದಕ್ಕೆ ಹೆರಿಯೋರ ಕೆನೆಕಾಲಲ್ಲಿ ಮಕ್ಕಳ ಪ್ರೀತಿ ಸಿಕ್ಕುತ್ತಾಡ. ಆ ಸತ್ಯ ಸುಬ್ರಾಯಜ್ಜಂಗೆ ಸರಿಯಾಗಿ ಹೊಂದುದ್ದು. ಕೊನೆವರೆಂಗೂ ಆ ನಾಲ್ಕೂ ಮಕ್ಕೊ ಅಜ್ಜನ ಚೆಂದಕೆ ಕಂಡಿದವು.

~

ಇದಿಷ್ಟು ಎಲ್ಲಾ ಮನೆಲಿ, ಎಲ್ಲಾ ಮನೆಲಿ ಅಲ್ಲದ್ರೂ – ಹೆಚ್ಚಿನ ಮನೆಲಿ ಕಾಂಬಂತದ್ದೇ ವಿಷಯ. ಆದರೆ  ಸುಬ್ರಾಯಜ್ಜನ ಮನೆಲಿ ಮತ್ತೂ ಒಂದು  ಹೆಜ್ಜೆ ಮುಂದೆ ಹೋಗಿ, ಆ ನಾಲ್ಕೂ ಜೆನರ ಸಂಸಾರ ಒಂದೇ ಮನೆಲಿ ಬೆಳಗಿದ್ದು.

ಸುಬ್ರಾಯಜ್ಜನ ದೊಡ್ಡಮಗಂಗೆ ಕೂಸುಡ್ಕುವಾಗಳೇ ಸುಬ್ರಾಯಜ್ಜಂಗೆ ಆಲೋಚನೆ ಇದ್ದತ್ತೋ ಏನೋ – ತನ್ನ ಮಕ್ಕಳೂ ಒಟ್ಟಿಂಗೇ ಬೆಳಗೆಕ್ಕು ಹೇದು. ದೊಡ್ಡಮಾವನ ಹೆಂಡತ್ತಿಯ ಖಾಸಾ ತಂಗೆಯ ಎರಡ್ಣೇ ಮಾವಂಗೆ ತಂದವು. ಒಂದೇ ಮನೆಂದ ಅಕ್ಕತಂಗೆಯ ಒಂದೇ ಮನೆಗೆ ಸೊಸೆಯಾಗಿ ತಂದವು – ಅಣ್ಣತಮ್ಮಂಗೆ.
ಆ ಮನೆಲಿ ಇಬ್ರೇ ಕೂಸುಗೊ ಇದ್ದ ಕಾರಣ ಮತ್ತಾಣೋರಿಂಗೆ ಬೇರೆ ಮನೆಂದ ಸಮ್ಮಂದ ನೋಡೇಕಾತು, ಅದು ಬೇರೆ!! ಆದರೆ ಮೂರ್ನೇ, ನಾಲ್ಕನೇ ಅತ್ತೆಕ್ಕಳೂ ಎಷ್ಟು ಚೆಂದಕೆ ಹೊಂದಿಗೊಂಡು ಹೋವುತ್ತವು ಹೇದರೆ, ಅವುದೇ ಅದೇ ಮನೆಂದಲೇ ಬಂದದೋ – ಅವಕ್ಕೆ ಮದುವೆ ಆಗಿ ಬಪ್ಪ ಮದಲೇ ಗುರ್ತ ಇದ್ದತ್ತೋ – ಹೇಳ್ತಷ್ಟೂ ಚೆಂದಕೆ ಹೊಂದಿಗೊಂಡಿದವು.

ದೊಡ್ಡಕ್ಕನ ಚಾಳಿ ಮನೆಮಂದಿಗೆಲ್ಲ – ಹೇದು ಗಟ್ಟದ ಮೇಗೆ ಒಂದು ಗಾದೆ ಇದ್ದಾಡ ಅಲ್ಲದೋ? – ಹಾಂಗೇ ಈ ಮನೆಯ ದೊಡ್ಡಕ್ಕ° ತುಂಬಾ ಚೆಂದಕೆ ತೆಕ್ಕೊಂಡು ಹೋದ ಕಾರಣ ಎಲ್ಲಾ ತಂಗೆಕ್ಕಳೂ ಅದರ ಅನುಸರುಸಿದವು. ಮನೆ ಚೆಂದಲ್ಲೇ ನೆಡಕ್ಕೊಂಡು ಬಂತು. ಆ ನಾಲ್ಕೂ ಸಂಸಾರಂಗಳೂ ಬೆಳಗಿತ್ತು. ಒಟ್ಟಿಂಗೇ ಬೆಳಗಿ ಬಂತು.

ಅಖೇರಿಯಾಣ ಮಾವ° ಮಾಷ್ಟ್ರ° ಟ್ರಾನ್ಸುವಾರು ಆದ ಕಾರಣ ಶಾಲಗೆ ಹೋವುತ್ತ ಅನುಕ್ಕೂಲಕ್ಕೆ ಕೊಡೆಯಾಲಲ್ಲಿ ಬೀಡಾರ ಮಾಡಿದ್ದವಷ್ಟೇ ಹೊರತು, ಅವುದೇ ಒಟ್ಟಿಂಗೇ ಇದ್ದವು. ವಾರಕ್ಕೊಂದರಿ ಬಂದೇಬಕ್ಕು ಊರಿನ ಮನೆಗೆ.

ಈಗ ಆ ನಾಲ್ಕು ಜೆನಕ್ಕೆ ಮಕ್ಕೊ ಆಗಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಯಿದು ಸಂಸಾರದ ಬಳ್ಳಿ. ಅವುದೇ ಇಷ್ಟನ್ನಾರ ಬೇರೆ ಆಯಿದವಿಲ್ಲೆ. ಅದೇ ಮರದ ಒಂದೊಂದು ಗೆಲ್ಲಿಲಿ ನೆಲೆ ಕಂಡಿದವು.

~

ಎರಡ್ಣೇ ಮಾವನ ಮಗನೇ ನಮ್ಮ ಈಚಕರೆ ಪುಟ್ಟಭಾವನ ದೋಸ್ತಿ. ಅವನ ಹತ್ತರಾಣ ಒಡನಾಟ ಬೈಲಿಂಗೆ ಇದ್ದ ಕಾರಣ ಅವರ ಮನೆಯ ಒಳಾಣ ಕೆಲವು ಸಂಗತಿಗೊ ನವಗೆ ಅರಡಿಗಾತು.

ಹಲವಾರು ಚೆಂದದ ಸಂಗತಿಲಿ, ಕೊಶಿ ಕಂಡ ಒಂದು ಸಂಗತಿ ಹೇದರೆ,
ಅಲ್ಲಿ ಎಲ್ಲಾ ಮಕ್ಕೊ ಎಲ್ಲಾ ಹೆರಿಯೋರನ್ನೂ “ಅಪ್ಪ” ಅಥವಾ “ಅಮ್ಮ” – ಹೇಳಿಯೇ ಹೇಳುಸ್ಸಾಡ. ಸುರುವಿಂಗೆ ನೋಡುವಾಗ “ಛೇ – ಇದೆಂತ ವಿಚಿತ್ರ” – ಹೇದು ಕಾಂಗು. ಆದರೆ, ಅವಿಭಕ್ತ ನೆಲೆಲಿ ನಿಂದು ನೋಡಿರೆ – ಆ ಮನೆಲಿ ಅಷ್ಟು ಒಗ್ಗಟ್ಟು ಇದ್ದು – ಹೇಳ್ತದು ನವಗೆ ಗೊಂತಾವುತ್ತು.

ಮಕ್ಕೊ ಸಣ್ಣಾಗಿಪ್ಪಗ ದೊಡ್ಡೋರು ಹೇಂಗೆ ನೋಡ್ತವೋ, ಮುಂದೆ ಅದುವೇ ಜೀವನ ಇಡೀ ಪ್ರತಿಫಲನ ಆಗಿರ್ತು – ಹೇದು ಮಾಷ್ಟ್ರುಮಾವ° ಒಂದೊಂದರಿ ಹೇಳುದಿದ್ದು. ಈ ಸಂಸಾರಲ್ಲಿಯೂ ಹಾಂಗೇ – ಪುಟ್ಟಭಾವನ ದೋಸ್ತಿ ಹೇಳಿದ ಕತೆಗೊ ಗಮ್ಮತ್ತಿದ್ದು. ಅವನ ದೊಡ್ಡಮ್ಮಂಗೆ ಅವನ ತುಂಬ ಇಷ್ಟ ಅಡ. ಅವನ ಸ್ವಂತ ಅಮ್ಮನಿಂದಲೂ ಜಾಸ್ತಿಯೇ ಇಷ್ಟವೋ ಹೇಳ್ತಷ್ಟೂ ಪ್ರೀತಿ. ಮನೆಲಿಯೂ ಒಟ್ಟಿಂಗೇ, ತೋಟಲ್ಲಿಯೂ ಒಟ್ಟಿಂಗೇ – ಎಲ್ಲಾ ದಿಕ್ಕೆಯೂ ದೊಡ್ಡಮ್ಮಂಗೆ ಅಂಟಿಗೊಂಡೇ ಇದ್ದದು ಈ ಮಾಣಿ. ಉದಿಯಪ್ಪಗ ದೋಸೆ ತಿನ್ನುಸುವಾಗಳೂ ಹಾಂಗೇ – “ಇದಾ, ನೀನುದೇ ಮೋಹನಣ್ಣನ ಹಾಂಗೆ ದೊಡ್ಡ ಆಗೆಡದೋ? ಆಯೆಕ್ಕಾರೆ ಇನ್ನೊಂದು ದೋಸೆ ತಿನ್ನು”  – ಹೇದು ಒತ್ತಾಯ ಮಾಡಿ ಬಳುಸುಗು. ಮೋಹನ ಹೇದರೆ ಸ್ವಂತ ಮಗ°, ಈ ಬಾಬೆ ತಂಗೆ ಮಗ°!

ಕ್ರಮೇಣ ಮಾತಾಡ್ಳೆ ಸುರು ಮಾಡಿದ ಮತ್ತೆ ದೊಡ್ಡಮ್ಮನನ್ನೂ ಅಮ್ಮ ಹೇಳಿಯೇ ಹೇಳುಲೆ ಸುರು ಮಾಡಿದ ಈ ಮಾಣಿ! ದೊಡ್ಡಮ್ಮನ ಮಾಂತ್ರ ಅಲ್ಲ, ಚಿಕ್ಕಮ್ಮಂದ್ರನ್ನೂ ಅಮ್ಮ – ಹೇಳಿಯೇ ಗುರ್ತಿಸಿದ°.

ಎಲ್ಲ ಅಮ್ಮಂದ್ರೂ ಒಂದೇ, ಅಲ್ಯಾಣ ಮಕ್ಕೊಗೆ. ಏಕೇದರೆ, ಎಲ್ಲ ಮಕ್ಕಳೂ ಒಂದೇ, ಅಲ್ಯಾಣ ಅಮ್ಮಂದ್ರಿಂಗೆ!

ಅಪ್ಪನನ್ನೂ ಹಾಂಗೇ.
ಎಲ್ಲೋರನ್ನೂ ಅಪ್ಪ° ಹೇಳಿಯೇ ಹೇಳುದು. ಪ್ರತ್ಯೇಕ ದಿನಿಗೆಳೇಕಾರೆ ಅಥವಾ ಹೆರಾಣೋರಿಂಗೆ ಗೊಂತು ಮಾಡ್ಸೇಕಾರೆ ಮಾಂತ್ರ “ದೊಡ್ಡಪ್ಪ°” ಅಥವಾ “ಶಂಕರಪ್ಪಚ್ಚಿ” – ಹೇದು ತಿಳುಸುದು.
ನವಗೆ ಒಂಟಿಮನೆಗಳಿಂದ ಬಂದೋರಿಂಗೆ ಇದು ವಿಚಿತ್ರ ಕಾಂಗು, ಆದರೆ ಅವರ ಮನೆಲಿ ಅವೆಲ್ಲವೂ ಒಂದೇ ದೇವರಿಂಗೆ ಹೊಡಾಡುದು, ಒಂದೇ ಅಳಗೆಂದ ಹೆಜ್ಜೆ ಉಂಬದು. ಹಾಂಗಾಗಿ ಎಲ್ಲೋರುದೇ ಒಂದೇ – ಹೇಳ್ತ ಭಾವನೆ.
ಇಂದಿಂಗೂ, ಆ ಮನೆಲಿ ಅದೇ ನಮುನೆ ಒಗ್ಗಟ್ಟು,ಪ್ರೀತಿ ಪರಸ್ಪರ ಹೊಂದಿಗೊಂಬ ಭಾವನೆಗೊ ಕಾಣ್ತು ಹತ್ತರಂದ ನೋಡಿರೆ.

ಅಲ್ಯಾಣ ಎಲ್ಲಾ ಮಕ್ಕೊಗೂ ಸಂಸ್ಕಾರ ತಂತಾನಾಗಿಯೇ ಬತ್ತು. ಏಕೇದರೆ, ಹೆರಿಯೋರು ಹಲವಿದ್ದವು – ಎಲ್ಲೋರ ಕೈಂದಲೂ ಕಲಿತ್ತರೆ ಕ್ರಮಂಗೊ ಇದ್ದು. ಎಲ್ಲೋರುದೇ

~

ಮದಲಿಂಗೆ ಧಾರಾಳವಾಗಿದ್ದ ಈ ಸಂಪ್ರದಾಯ ಈಗ ಎಲ್ಲಿದ್ದು? ಎಲ್ಲವೂ ಒಂದೊಂದು ಪಿಟ್ಟೆ ಸಂಸಾರಂಗೊ.
ಇದರಿಂದಾಗಿ ನಷ್ಟ ಆರಿಂಗೆ? ನಮ್ಮ ಮತ್ತಾಣ ತಲೆಮಾರಿಂಗೇ ಅಲ್ಲದೋ?

ಸಣ್ಣಸಣ್ಣ ಅಹಂಭಾವಂಗಳಿಂದಾಗಿ ಹೆಚ್ಚಿನ ಮನೆಯುದೇ ಒಡವದು. ಹಾಂಗಿರ್ಸಕ್ಕೆ ಎಡೆಕೊಡದ್ದೆ ಪರಸ್ಪರ ನಂಬಿಕೆಲಿ ನೆಡವ ಹಂತ ಬಂದರೆ, ಕುಟುಂಬ ಒಂದಾಗಿ ಬದ್ಕುಲೆ ಚೆಂದ – ಹೇಳುಸ್ಸು ಆ ಮನೆಯ ನೋಡಿರೆ ಕಲಿವಲಕ್ಕು, ನಲಿವಲಕ್ಕು.
ಹೆರಿಯೋರು ಮಕ್ಕಳೆಲ್ಲೋರನ್ನೂ ಒಂದೇ ನಮುನೆ ನೋಡಿರೆ, ಮಕ್ಕೊಗೂ ಅದು ಗೊಂತಾವುತ್ತು. ಹೆರಿಯೋರ ಎಲ್ಲೋರನ್ನೂ ಅದೇ ಗೌರವಲ್ಲಿ ಕಾಣ್ತವು. ಮನೆಯ ಒಟ್ಟಿಂಗೇ ನೆಡೆಶುಲೆ ಅವುದೇ ಭಾಗಿ ಆವುತ್ತವು. ಅಲ್ಲದೋ?

~

ಒಂದೊಪ್ಪ: ಕೂಡಿದ ಮನೆಯ ಒಡವದು ಸುಲಾಭ. ಒಡದ ಮನೆ ಸೇರ್ಸುಲೆ ಎಡಿಗೋ?

2 thoughts on “ಹೆರಿಯೋರು ಮಕ್ಕಳ ಒಂದೇ ಹಾಂಗೆ ಕಂಡ್ರೆ, ಮಕ್ಕಳೂ ಹೆರಿಯೋರ ಒಂದೇ ಹಾಂಗೆ ಕಾಂಗು..

  1. ಅದೂ…. ಹೇದರೆ ಭಾವಾ…. ಮನೆಲಿ ನಡಕ್ಕೊಂಡು ಬಪ್ಪ ಸಂಪ್ರದಾಯಂಗೊ ಮನೆ ಎಜಮಾನನ ಮುಂದಾಳುತ್ವಲ್ಲಿ ಮಕ್ಕ ಸಣ್ಣಯಿಪ್ಪಂದಲೇ ನಡಕ್ಕೊಂಡು ಬರೆಕು. ಸಣ್ಣಾಯಿಪ್ಪಳೇ ಗುರುಹಿರಿಯರು ಬಂಧು ಬಳಗ ನೆಂಟರಿಷ್ಟರು ಹೇಳ್ವ ಸಂಬಂಧ ನೆತ್ತರಿಲ್ಲಿ ಬೇರೂರೆಕು. ಅದರ ಹಿರಿಯರು ಕಿರಿಯರೂ ಶ್ರದ್ಧಾಭಕ್ತಿಂದ ಪಾಲುಸೆಕು. ಎಲ್ಲಿಯಾರು ಒಂದಿಕ್ಕೆ ಸಡ್ಳು ಆತೋ.. ಅಲ್ಲಿಗೆ ಬಿರುದತ್ತು ಹೇದೇ ಲೆಕ್ಕ. ಭಂಙ ಇದ್ದು ಇಂದ್ರಾಣ ಕಾಲಲ್ಲಿ ಹೇಳ್ಸು ಇದಕ್ಕೆ ಉತ್ತರ ಅಲ್ಲ. ಎಲ್ಲ ಮುಗುದಮತ್ತೆ ಅಯ್ಯೋ ಪಾಪ ಹೇಳ್ತರಿಂದ ಎಂತ ಗುಣ! ಹಾಂಗೇ ಹೇಳದ್ದಾಂಗೆ ಅಪ್ಪಲೆ ಎಂತ ಮಾಡೆಕೊ ಅದರ ಮಾಡಿಯೇ ಆಯೆಕು. ಇಲ್ಲದ್ದರೆ ಹಂಚಿ ತಿಂಬ ಬದಲು ಹರಿಹಂಚಾಗಿ ತಿಂಬದೇ ಕಾಂಗಟ್ಟೆ. ಶುದ್ದಿ ಚಿಂತನೀಯ

  2. ಒಂದೊಪ್ಪ ಇಂದ್ರಾಣದ್ದು ಹೆಚ್ಚು ಅರ್ಥಗರ್ಭಿತವಾಗಿ ಇದ್ದು ಒಪ್ಪಣ್ಣಾ.
    ಬೈಲಿನ ಮನೆಗೊ ಅದೇ ಹಳೆಯ ನಮುನೆಲಿ, ಹೊಸ ಬೆಳಕಿಲ್ಲಿ ಮಿನುಗಲಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×