ಲೌ-ಜಿಹಾದ್ ನ ಒಟ್ಟಿಂಗೇ ಗೋವು-ಜಿಹಾದ್..!!

June 13, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡೈಮಂಡು ಭಾವನ ಮದುವೆ ನಿನ್ನೆ.
ಬೈಲಿನಾರಂಭಂದಲೂ ಒಟ್ಟಿಂಗೇ ಇಪ್ಪ ವಜ್ರದ ತುಂಡು; ಮದುವೆ ಆಗಿ ವೈವಾಹಿಕ ಜೀವನಕ್ಕೆ ಏರುದು ಒಪ್ಪಣ್ಣಂಗೆ, ಇಡೀ ಬೈಲಿಂಗೇ ತುಂಬಾ ಕುಷಿಯ ಸಂಗತಿ. ಡೈಮಂಡು ಭಾವನ ಮನೆ-ಮನಸ್ಸಿನ ಹೊಸ್ತಿಲು ತೊಳುದು ಬಂದ ಕೂಸು ಬೈಲಿಂಗೂ ಬಪ್ಪದು ಕೊಶಿಯ ವಿಷಯವೇ!

ಎರಡು ಅಕ್ಷತೆ ಕಾಳು ಹಾಕಿ, ಎರಡು ಹೋಳಿಗೆಯೂ ಹೊಡದಿಕ್ಕಿ ಬಪ್ಪೊ° – ಹೇದು ಬೊಳುಂಬು ಮಾವ° ಆಶೆ ಬರುಸಿದವು. ಸುರುವಾಣದ್ದು ಬೇಕೋಬೇಡದೊ, ಎರಡ್ಣೇದಕ್ಕೆ ನಾವು ತೆಯಾರು!
ಹಾಂಗೆ, ಹೋಗಿತ್ತಿದ್ದೆ.
ಜೆಂಬ್ರದ ಮನೆಲಿ, ಬೈಲ ಕಳ ಸೇರಿ ಮಾತಾಡಿಗೊಂಡು ಇದ್ದಿದ್ದೆಯೊ° – ಮೂಡಕರೇಲಿ.
ಯೇನಂಕೂಡ್ಳಣ್ಣನ ಕೈಲಿ ಕೆಮರ ಇದ್ದತ್ತು, ಮುಳಿಯಭಾವನ ಕೈಲಿ ಝರಿಶಾಲು ಇದ್ದತ್ತು, ಮಾಷ್ಟ್ರುಮಾವನ ಕೈಲಿ ಎಲೆಮರಿಗೆ ಇದ್ದತ್ತು, ಅದರಲ್ಲಿ ಕೈ ಸುಭಗಣ್ಣಂದು ಇದ್ದತ್ತು. ಕುಂಟಾಂಗಿಲ ಭಾವನ ಕೈಲಿ ಮೊಬೈಲು ಇದ್ದತ್ತು. ಶ್ರೀಅಕ್ಕನ ಕೈಲಿ ನೀರಿನ ಕುಪ್ಪಿ ಇದ್ದತ್ತು, ಕಾನಾವು ಡಾಗುಟ್ರ ಕೈಲಿ ಸುದ್ದಿಪೇಪರು ಇದ್ದತ್ತು. ಪೇಪರು ಓದಿಂಡೇ ಡಾಗುಟ್ರುಬಾವ° ಮಾಷ್ಟ್ರುಮಾವನ ಹತ್ತರೆ ತಿರುಗಿ ಪುತ್ತೂರಿಲಿ ನೆಡದ ಒಂದು ಶುದ್ದಿ ಹೇಳಿದವು, ಗಂಭೀರಲ್ಲಿ.
ಅದೆಂತರ?
~

ಪುತ್ತೂರಿನ ಈಶ ಮಹಾಲಿಂಗೇಶ್ವರ ದೇವರು.
ಜಗತ್ತಿನೊಡೆಯ ಶಿವನ ಜಾಗೆಯೂ ದೊಡ್ಡದೇ ಅಲ್ಲದೋ?
ಪೇಟೆ ನೆಡೂಕೆ ದೊಡಾ ದೇವಸ್ಥಾನ, ದೇವಸ್ಥಾನದ ಹಿಂದೆ ದೊಡಾ ಕೆರೆ, ಎದುರು ದೊಡಾ ಗೆದ್ದೆ.
ದೇವರ ಜಾತ್ರೆ ಅಲ್ಲೇ ನೆಡೆತ್ತ ಕಾರಣ ಜಾತ್ರೆ ಗೆದ್ದೆ ಹೇಳಿಯೂ ಹೇಳ್ತವು.

ಅದರ ಒಂದು ಕೊಡೀಲಿ ಕಂಬ್ಳ ನೆಡೆತ್ತು – ಹಾಂಗೆ ರಜ ನೀರಿಪ್ಪ ಜಾಗೆಯೂ ಅಪ್ಪು. ಆಚ ಕರೆಲಿ ಸ್ಮಶಾನ – ಶಿವಂಗೆ ಸ್ಮಶಾನ ಹತ್ತರೆಯೇ ಇದಾ!

ಇಡೀ ಪುತ್ತೂರಿಂಗೇ ಅಧೀಶ ಅವ. ಊರ ಕಾವ ಅಭಯ ಕೊಡುವ ದೇವರಾದ ಕಾರಣ ಜಾತ್ರೆಗೆದ್ದೆ ಹೇದರೆ ನಿರ್ಭಯ ಪ್ರದೇಶ. ಆರೂ ಹೆದರೆಕ್ಕಾದ್ದಿಲ್ಲೆ – ಹೇಳ್ತದು ಪ್ರತೀತಿ.

ಹಾಂಗಾಗಿಯೇ ಮದಲಿಂದಲೇ  ಪುತ್ತೂರು  ದೇವಸ್ಥಾನ ಹೇದರೆ ದಾರಿಹೋಪೋರಿಂಗೆ, ಪೇಟಗೆ ಬಂದೋರಿಂಗೆ – ಆಶ್ರಯ ತಾಣ. ಧರ್ಮ, ಜಾತಿ, ಪ್ರಾಯ – ಯೇವದಕ್ಕೂ ಲಗಾವಿಲ್ಲದ್ದೆ ಆಶ್ರಯ ಕೊಡುವ ಜಾಗೆ.
ಗೆದ್ದೆ ಹೇಳಿದ ಮತ್ತೆ ಹುಲ್ಲು-ಪೊದೆ, ಮೇವುಗೊ ಸಾಮಾನ್ಯ, ಇದ್ದೇಇದ್ದು. ನೀರಿನಾಶ್ರಯವೂ ಒಳ್ಳೆತ ಇದ್ದು – ಹಾಂಗಾಗಿ ದನಗಳೂ ಧಾರಾಳ ಇರ್ತವು.
ಶಿವನ ವಾಹನ ನಂದಿಯ ವಂಶದವಕ್ಕೆ ಶಿವನ ಜಾಗೆಲಿ ಜಾಗೆ ಇಲ್ಲದ್ದಿಕ್ಕೋ?

ಅದೆಲ್ಲ ಇರಳಿ. ಸಮಸ್ಯೆ ಏನಿಲ್ಲೆ. ಹಾಂಗಾರೆ ಡಾಗುಟ್ರುಬಾವ ಹೇಳಿದ ಸಂಗತಿ ಎಂತರ? ಪೇಪರಿಲಿ ಬಂದ ಶುದ್ದಿ ಎಂತರ?
ಅದೇ – ದನ ಕಳ್ಳುವದರ ಬಗ್ಗೆ!!
ನಿನ್ನೆಲ್ಲ ಮೊನ್ನೆ – ಜಾತ್ರೆಗೆದ್ದೆಲಿ ಇದ್ದಿದ್ದ ದನಗಳ ಕದ್ದು ತೆಕ್ಕೊಂಡು ಹೋಯಿದವಡ – ಹೇಳುವ ಆಘಾತಕಾರೀ ಸುದ್ದಿ.
~

ಅಪ್ಪಡ.
ಯೇವತ್ರಾಣಂತೆ ಜಾತ್ರೆಗೆದ್ದೆಲಿ ದನಂಗೊ ತಿರುಗೆಂಡು, ಒರಗೆಂಡು, ನೀರುಕುಡ್ಕೊಂಡು, ಹುಲ್ಲುತಿಂದುಗೊಂಡು ಇರ್ತವು. ಎಷ್ಟೋ ಒರಿಶಂದ ಹಾಂಗೆ ಇದ್ದವು. ಆದರೆ ಮೊನ್ನೆ, ಛೇ!
ಇರುಳು ಒಂದು ಜೆನ ಬೈಕ್ಕಿಲಿ ಬಂದು ದನಗೊ ಎಲ್ಲೆಲ್ಲಿ ಮನಿಕ್ಕೊಂಡಿದ್ದವು – ಹೇದು ನೋಡಿಂಡು ಹೋತಡ.
ಎಷ್ಟು ದನಗೊ ಎಲ್ಲೆಲ್ಲಿ ಮನುಗಿದ್ದವು ಹೇದು ಗೊಂತಪ್ಪದ್ದೇ, ಅದರ ಮುಕ್ರಿಗೆ ಆ ಮಾಹಿತಿ ಕೊಟ್ಟತ್ತು.
ಮತ್ತಾಣ ರಜ ಹೊತ್ತಿಲಿ ಒಂದು ವಾಹನಲ್ಲಿ ಜೆನಂಗೊ ಬಂದವು.
ಬಾಡುಸಿದ ಬಾಳೆಲಿ ಅಶನವೋ – ಎಂತದೋ ಗೋಗ್ರಾಸ ತೆಕ್ಕೊಂಡು ಬಂದವು. ದನಗಳ ಎದುರು ಮಡುಗಿಕ್ಕಿ ಹೋದವು.
ಹಾಂಗಿಪ್ಪ ಗೋಗ್ರಾಸ ಧಾರಾಳ ತಿಂದು ಗೊಂತಿದ್ದು ಆ ಅಮ್ಮಂದ್ರಿಂಗೆ, ದೇವಸ್ಥಾನಲ್ಲಿ ಸಿಕ್ಕಿಗೊಂಡಿರ್ತು ಅಲ್ಲದಾ?
ಹಾಂಗೆ, ಆ ಬಾಡುಸಿದ ಬಾಳೆಲಿ ಇದ್ದ ಗೋಗ್ರಾಸವನ್ನೂ ತಿಂದವು. ಪಾಪ!

ಆದರೆ, ಈ ಗೋಗ್ರಾಸಲ್ಲಿ ಪಾಪಿಗೊ ವಿಷ ಹಾಕಿತ್ತಿದ್ದವು ಪಾಪ!
ಮಕ್ಕೊ ಕೊಟ್ಟದರ ಎಲ್ಲವನ್ನೂ ತಿಂದ ಗಂಗಾಮಾತೆಯ ಬಗ್ಗೆ ನಾವು ಕಳುದ ವಾರ ಮಾತಾಡಿದ್ದಲ್ಲದೋ – ಅದೇ ನಮುನೆ, ಈ ಗೋಮಾತೆಗಳೂ.
ಮಕ್ಕೊ ವಿಷ ಹಾಕಿರೂ ನೋಡದ್ದೆ, ಆ ಗೋಗ್ರಾಸವ ತಿಂದವು.
ತಿಂದು? ಪಾಪ, ಸ್ಮೃತಿ ತಪ್ಪಿ ಬಿದ್ದವು.
ದನಗೊ ಬೀಳುದೇ ತಡ, ಆ ಜೀಪಿನ ಕಟುಕರು ಒಪಾಸು ಬಂದವು. ಬಿದ್ದ ದನಗಳ ಸುಲಾಭಲ್ಲಿ ಜೀಪಿಂಗೆ ತುಂಬುಸಿ ಕೊಂಡೋದವು.

ಒಂದು ಪಾಪದ ಗೂರ್ಖ ಇದ್ದತ್ತಡ ದೇವಸ್ಥಾನದ ಕಾವಲಿಂಗೆ. ಅದು ಬಿಗಿಲು ಉರುಗೆಂಡು ಹೋಪಗ ತಲವಾರು ತೋರ್ಸಿ ಹೆದರ್ಸಿ ಓಡುಸಿದವಾಡ. ಅಂತೂ ಆ ಗೋಮಾತೆಗೊ ಹೋದವು ಹೋದವೇ. ಎಲ್ಲಿಗೆ ಹೋದವು, ಎತ್ಲಾಗಿ ಎತ್ತಿದವು? ಉಮ್ಮಪ್ಪ. ಒಂದೂ ಗೊಂತಿಲ್ಲೆ!

ನಮ್ಮ ಸಮಾಜದ ಅಕ್ಕ ತಂಗೆಕ್ಕೊ ಕಾಣೆ ಆದ ಹಾಂಗೇ, ಈ ಗೋಮಾತೆಗಳೂ ಕಾಣೆ!

~

ಅಬ್ಬೆ ಹಾಲು ಕುಡಿವದು ಒಂದೆರಡು ಒರಿಶಲ್ಲೇ ನಿಲ್ಲುಸುತ್ತವು ಮಕ್ಕೊ. ಅದಾಗಿ, ಸಾವನ್ನಾರ – ತೊಂಭತ್ತೆಂಟು ಒರಿಶವೂ ಕುಡಿತ್ತದು ದನದ ಹಾಲೇ ಅಲ್ಲದೋ? ಹಾಂಗಾರೆ, ಹೆಚ್ಚು ಸಮಯ ಹಾಲು ಕೊಡುವ ಅಮ್ಮ – ಹೇದರೆ ಗೋಮಾತೆಯೇ ಅಲ್ಲದೋ? ಈ ಗೋಮಾತೆಯ ಹತ್ಯೆ ಮಾಡ್ಳಾಗ, ಅದರ ಪೂಜ್ಯ ಭಾವನೆಲಿ ಕಾಣೇಕು – ಹೇದು ಸರಕಾರ ಹೇಳುಲೆ ಸುರುಮಾಡಿಗೊಂಡಿದ್ದ ಹಾಂಗೇ, ಪ್ರತೀಕಾರವಾಗಿ ಗೋವುಗಳ ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿ, ಹತ್ಯೆ ಮಾಡಿ ತಿಂಬಂಥಾ ಹ್ಯೇಯ ಕೃತ್ಯ ನಮ್ಮ ಬೈಲಿನ ಕೆಲವು ಕಡೆ ನೆಡೆತ್ತಾ ಇದ್ದು.

ದನವ ಕದ್ದು ಕೊಂಡೋಪ ಸಂಗತಿ ನಮ್ಮ ಮಂಗ್ಳೂರು ಹೋಬಳಿ ಆಸುಪಾಸಿಲಿ ಅಂದಿಂದ ರಜ ಜೋರಿಲಿ ನೆಡೆತ್ತಾ ಇಪ್ಪದು ನಿಂಗೊಗೆ ಗೊಂತಿಕ್ಕು. ಕೈರಂಗಳ ಗೋಶಾಲೆ ಪರಿಸರಂದ ಕೊಂಡೋಪಲೆ ನೋಡಿದವು, ಬದಿಯೆಡ್ಕ ಮೂರ್ತಿಮಾವನ ಹೋರಿಯ ಕೊಂಡೋದವು, ಮಾಷ್ಟ್ರುಮಾವನಲ್ಲಿಂದ ಗುಡ್ಡಗೆ ಬಿಟ್ಟ ಗಡಸು ಒಂದು ಕಾಣೆ ಆತು, ಈಶ್ವರ ಮಂಗಲದ ಹತ್ತರೆ ಒಂದು ಭಾವಯ್ಯನ ಮನೆಜಾಲಿಂಗೆ ಜೀಪು ತಂದು, ಹಟ್ಟಿಂದ ದನಗಳ ಬರಬರನೆ ಎಳಕ್ಕೊಂಡು ಹೋದ್ದು – ಉದೆಕಾಲಕ್ಕೆ!!
ಇದೀಗ ಮಾಲಿಂಗೇಶ್ವರನ ದಿವ್ಯ ಸನ್ನಿಧಿಂದಲೇ ಎಳಕ್ಕೊಂಡು ಹೋದ್ಸು!
ಎಲ್ಲದಕ್ಕೂ ಕಾರಣ ಒಂದೇ – ಪೆಟ್ಟಿನ ಬೆಶಿ ಇಲ್ಲದ್ದ ಭಂಡ ಧೈರ್ಯ.
ಎಂತ ಮಾಡಿರೂ ದಕ್ಕುಸಿಗೊಂಬಲೆ ಎಡಿತ್ತು – ಹೇಳುವ ರಾಜಕೀಯ ಕೃಪಾಕಟಾಕ್ಷ!
ಅದಕ್ಕೇ ಡಾಗುಟ್ರುಬಾವ° ಹೇಳಿದ್ದದು – ’ಗೋವು ಜಿಹಾದ್’ ಹೇದು.
~

ಇದೆಲ್ಲ ಕೇಳಿ ಅಪ್ಪಗ ಒಂದು ಹಳೇ ಕತೆ ನೆಂಪುಮಾಡಿಗೊಂಡವು ಮಾಷ್ಟ್ರುಮಾವ°.
ಛತ್ರಪತಿ ಶಿವಾಜಿ ಸಣ್ಣ ಇಪ್ಪಗಾಣ ಕತೆ ಅಡ.
ಅವನ ಅಮ್ಮ ಜೀಜಾಬಾಯಿ –ಮಹಾಮಾತೆ. ಶಿವಾಜಿ ಸಣ್ಣಾಗಿಪ್ಪಗಳೇ ನಮ್ಮ ಹಿರಿಯರ ಕತೆಗೊ, ರಾಮ-ಕೃಷ್ಣರ ಆದರ್ಶಂಗೊ, ಪೌರಾಣಿಕ ಸನ್ನಿವೇಶಂಗೊ, ಚಿಂತನೆಗೊ, ಧರ್ಮಸಾರಂಗೊ – ಇತ್ಯಾದಿಗಳ ವಿವರ್ಸಿಗೊಂಡು ಇದ್ದತ್ತು. ಹಾಂಗಾಗಿ ಶಿವಾಜಿಗೆ ಸಣ್ಣಾಗಿಪ್ಪಗಳೇ ನಮ್ಮ ಧರ್ಮದ ಬಗ್ಗೆ ತುಂಬ ಒಲವು. ಶಿವಾಜಿಯ ಅಪ್ಪ° ಶಹಾಜಿ ಇದ್ದದು ಬ್ಯಾರಿಗಳ ಆಸ್ಥಾನಲ್ಲಿ ಮಂತ್ರಿ ಆಗಿಂಡು. ಶಹಾಜಿ ಹೋಗಿ ಕೈಮುಗುದು ನಿಲ್ಲುತ್ತ ಬ್ಯಾರಿ ಆಸ್ಥಾನಲ್ಲಿಯೂ ಶಿವಾಜಿಗೆ ದೊಡ್ಡ ಹಿತ ಆಯಿದಿಲ್ಲೆ. ಅಮ್ಮ ಹೇಳಿಕೊಟ್ಟ ಸನಾತನ ಚಿತ್ರಣವೇ ಹೆಚ್ಚು ಆಪ್ತ ಕಂಡದು. ಅಮ್ಮನ ಈ ಪ್ರೇರೇಪಣೆಗಳೇ ಮುಂದೆ ಅವನ ಒಳ ಇದ್ದಿದ್ದ ಮಾಹಾನ್ ಚಕ್ರವರ್ತಿಯ ಹೆರಬರುಸುಲೆ ಕಾರಣ ಆತು – ಹೇಳ್ತದು ಮಾಷ್ಟ್ರುಮಾವನ ನಂಬಿಕೆ.

ಅದೊಂದು ದಿನ ಈ ಬಾಲಶಿವಾಜಿ ಅವನ ಅಪ್ಪನ ಒಟ್ಟಿಂಗೆ ಎಲ್ಲಿಗೋ ಹೋಗಿಂಡಿಪ್ಪಾಗ, ಒಂದು ಜೆನ ಕ್ರೂರ ರೀತಿಲಿ ದನಕ್ಕೆ ಬಡ್ಕೊಂಡು ಇದ್ದತ್ತಾಡ. ದನಕ್ಕೆ ಬಡಿವವರ ಕೈ ಕಡಿಯೆಕ್ಕು – ಹೇದು ಅವನ ಅಮ್ಮ ಹೇಳಿಕೊಟ್ಟದು ನೆಂಪಾತು. ಅಮ್ಮ ಹೇಳಿದ ಮತ್ತೆ ಬೇರೆ ಮಾತಿಲ್ಲೆ. ಅಪ್ಪನ ಸೊಂಟಲ್ಲಿದ್ದ ಕತ್ತಿ ತೆಗದ°, ಎಳದ್ದು – ಒಂದು ಬೀಸಿದ°. ಗೋಮಾತೆಯ ಹಿಂಸೆಕೊಟ್ಟುಗೊಂಡಿದ್ದ ಕ್ರೂರಿಯ ಕೈಗೇ ಬಲವಾದ ಪೆಟ್ಟು!!

ನಮ್ಮೊಳವೂ ಹೀಂಗಿಪ್ಪ ಶಿವಾಜಿಗೊ ಹುಟ್ಟಿ ಬರೆಕ್ಕು. ಗೋಮಾತೆಯ ರಕ್ಷಣೆಗೆ ನಾವು ಎದ್ದು ನಿಲ್ಲೆಕ್ಕು. ಅಲ್ಲದ್ದರೆ, ನಮ್ಮ ಗಂಗೆ-ತುಂಗೆ-ಉಮೆ-ಮೋಳಮ್ಮ ಹೀಂಗಿಪ್ಪ ಅಮೂಲ್ಯ ಜಾತಿಯ ದನಗೊ ನಮ್ಮೆದುರೇ ಕಾಣೆ ಆಗಿ ಹೋಕು – ಹೇದವು ಮಾಷ್ಟ್ರುಮಾವ°.
~

ನಿನ್ನೆಲ್ಲ ಮೊನ್ನೆ ಹಿಂದೂ ಸಾಮ್ರಾಜ್ಯ ದಿನ ಅಡ. ಶಿವಾಜಿಯ ಆಸ್ಥಾನ ಆರಂಭ ಆದ ವಾರ್ಷಿಕೋತ್ಸವ. ಅದೇ ದಿನ ಈ ಘಟನೆಯೂ ನೆಡದ್ದು ತುಂಬಾ ಬೇಜಾರಾತು ಒಪ್ಪಣ್ಣಂಗೆ.
ನಾವೆಲ್ಲರೂ ಶಿವಾಜಿಯ ಹಾಂಗಾಗಿ ಗೋಮಾತೆಯ ರಕ್ಷಣೆ ಮಾಡುವೊ°.
ಗಂಗಾಮಾತೆಯ ಒಳಿಶೆಕ್ಕು, ಒಟ್ಟಿಂಗೆ ಗೋಮಾತೆಗಳನ್ನೂ ಒಳಿಶೆಕ್ಕು. ಎರಡೂ ನಮ್ಮ ಸಂಸ್ಕಾರದ ಎರಡು ಮೋರೆಗೊ.
ಅಲ್ಲದೋ?

ಒಂದೊಪ್ಪ: ಗೋ ರಕ್ಷಣೆ ಮಾಡದ್ದೋನಿಂಗೂ ಗೋ ಭಕ್ಷಣೆಯ ಪಾಪ ತಟ್ಟುಗಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮಂಗ್ಳೂರ ಮಾಣಿ
  ಮಂಗ್ಳೂರ ಮಾಣಿ

  ಖಂಡಿತ ಒಪ್ಪಣ್ಣಾ.. ಸರಿಯಾಗಿ ಹೇಳಿದ್ದೆ.
  ಗುರುಗೊ ಕಳೆದ ಚಾತುರ್ಮಾಸ್ಯಲ್ಲಿ ಈ ಬಗ್ಗೆ ಹೇಳಿತ್ತಿದ್ದವುದೇ. – “ಸತ್ತ ದನಕ್ಕಿಂತ ಜೀವಂತ ದನದ ಬೆಲೆ ಹೆಚ್ಚು ಮಾಡಿ, ಅಷ್ಟಪ್ಪಗ ತನ್ನಂತಾನೇ ಕಸಾಯಿಖಾನೆಗೊ ಮುಚ್ಚುತ್ತು” ಹೇಳಿ.ಆದರೆ ಕದ್ದು ಕೊಂಡೋಪೋರಿಂಗೆ ಎಂತ ಮಾಡುದು?
  “ನಮ್ಮತ್ರೆ ಜಂಡಾಳಿಂಡ್” ಹೇಳುವವಕ್ಕೆ ಸೊಕ್ಕಲ್ಲದಾ?!!
  ಹು°!

  [Reply]

  VA:F [1.9.22_1171]
  Rating: 0 (from 0 votes)
 2. ಡಾಮಹೇಶಣ್ಣ

  ನಮ್ಮ ಹೊಸ ಸರಕಾರ ನಿರುದ್ಯೋಗ ನಿವಾರಣೆಗೆ ‘‘ಒಂದು ಮರ, ಒಂದು ದನ, ಒಂದು ಮನೆ’’ ಹೇಳಿ ಯೋಜನೆ ಮಾಡ್ತಡ. ‘ಗೋ-ಜಿಹಾದಿ’ ನಾಶವಾಗಿ ‘ಗೋಜಯದ ಹಾದಿ’ ತಯಾರಾಗಲಿ. ‘ಗೋಮಾತೃವಿಜಯ’ಕ್ಕೆ ಪೀಠಿಕೆ ಆಗಲಿ ಹೇಳಿ ಆಶಯ!

  [Reply]

  VN:F [1.9.22_1171]
  Rating: 0 (from 0 votes)
 3. ಮುಣ್ಚಿಕಾನ ಭಾವ

  ಒಂದು ತಿಂಗಳ ಮೊದಲು ಎನ್ನ ಅಜ್ಜನ ಮನೆಂ (ಎಡಕ್ಕಾನ) ದಲೂ ಒಂದೆರಡು ದನಂಗಳ ಪಾಪಿಗೊ ಕದ್ದುಕೊಂಡು ಹೋಯ್ದವು.
  ಎಲ್ಲರೂ ಒಟ್ಟಾಗಿ ಅಂತವರ ಮಟ್ಟ ಹಾಕೆಕ್ಕು ಅಲ್ಲದಾ…?

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  , ದಿನಾ ಚಿನ್ನದ ಮೊಟ್ಟೆ ಮಡಗುತ್ತ ಕೋಳಿಯ ಹೊಟ್ಟೆಯನ್ನೇ ಕೊಯಿದರೆ, ಒಂದೇ ಬಿಟ್ಟು ಚಿನ್ನದಮೊಟ್ಟೆ ಸಿಕ್ಕುಗನ್ನೆ ಹೇಳ್ತ ಅವಿವೇಕಿಗೊ ಈ ಕಸಾಯಿಗೊ .ಆದರೆ ಹೀಂಗಾದರೆ ಚಿನ್ನದ ಮೊಟ್ಟೆ ಮಡಗುವ ಕೋಳಿ ನಿರ್ನಾಮ ಅಪ್ಪಲೆ ದಿನ ದೂರ ಇಲ್ಲೆ. ಈ ಹೊಸ ಸರಕಾರಂದ ಒಂದು ಒಳ್ಳೆ ರೀತಿಯ ಹೊಸ ಆಶೆ.

  [Reply]

  VN:F [1.9.22_1171]
  Rating: 0 (from 0 votes)
 5. ಶಾರದಾಗೌರೀ

  ಒಪ್ಪಣ್ಣ, ಈಗಾಣ ಕಾಲಲ್ಲಿ ನೆಡವ ಶುದ್ದಿಯನ್ನೇ ತೆಕ್ಕೊಂಡು ಬರದ್ದದು ಲಾಯ್ಕಾಯಿದು.
  ಗೋಮಾತೆಯ ಬಗ್ಗೆ ನಮ್ಮ ಜನಂಗಳಲ್ಲಿ ಜಾಗೃತಿ ಬರೆಕ್ಕಾದ ಅಗತ್ಯ ಇದ್ದು. ನಮ್ಮ ಮನೆಯ ಅಂಗಂಗಳೇ ಆಗಿಪ್ಪ ಗೋವುಗಳ ಅಬ್ಬೆಕ್ಕಳ ಹಾಂಗೇ ನೋಡಿಗೊಳ್ಳೆಕ್ಕು ಹೇಳ್ತ ಆಶಯವೂ ಮನ ಮುಟ್ಟುವ ಹಾಂಗೆ ಇದ್ದು.

  ದಿನಕ್ಕೊಂದು ವಿಧಲ್ಲಿ ಗೋವಿನ ತೆಕ್ಕೊಂಡು ಹೋವುತ್ತವು. ಇನ್ನಾಣ ಯೋಚನೆ ಬರೆಕ್ಕಾದರೆ ಮಾಡಲೇ ನಾವು ಎಚ್ಚರಿಗೆಲಿ ಇರೆಕ್ಕಪ್ಪ ಅನಿವಾರ್ಯತೆ ಇದ್ದು.
  ಶಿವಾಜಿಯ ಕತೆಲಿ ಬಂದ ಹಾಂಗೆ ಇಪ್ಪ ಶಿವಾಜಿಯ ಶಕ್ತಿಯ ತೆಕ್ಕೊಂಡ ಮಕ್ಕೊ ಸಮಾಜಲ್ಲಿ ಬೆಳೆಯಲಿ..
  ಶುದ್ದಿ ಒಪ್ಪ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಅಕ್ಷರ°ಕೆದೂರು ಡಾಕ್ಟ್ರುಬಾವ°ಅಡ್ಕತ್ತಿಮಾರುಮಾವ°ಪವನಜಮಾವಬಟ್ಟಮಾವ°ವೇಣಿಯಕ್ಕ°ಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಕೇಜಿಮಾವ°ಒಪ್ಪಕ್ಕಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿಚೆನ್ನೈ ಬಾವ°ಶರ್ಮಪ್ಪಚ್ಚಿಡಾಗುಟ್ರಕ್ಕ°ಶುದ್ದಿಕ್ಕಾರ°ಕಳಾಯಿ ಗೀತತ್ತೆದೊಡ್ಮನೆ ಭಾವದೇವಸ್ಯ ಮಾಣಿಪುಣಚ ಡಾಕ್ಟ್ರುನೆಗೆಗಾರ°ಅಜ್ಜಕಾನ ಭಾವಕೊಳಚ್ಚಿಪ್ಪು ಬಾವಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ