ಮಾಸುವ ನೆಂಪಿನ ಮಾಸದ್ದೆ ಒಳಿಶುವ ಮಾಸಿಕಂಗೊ..

December 26, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲ ಭಾವಂದ್ರಿಂಗೆ ಈ ವಾರ ಅತ್ಯಂತ ಕಡಮ್ಮೆ ಪುರುಸೊತ್ತು.ಸರ್ಪಮಲೆ ಮಾವನ ಪುಳ್ಳಿಮಾಣಿಯ ಲೂಟಿ ತಡೆಯದ್ದೆ ಜೆನಿವಾರ ಹಾಕಿ ಕಟ್ಟುವ ಗವುಜಿ, ಬೈಂಗ್ರೋಡು ಮಾಣಿಗೆ ನೂಲಮದಿಮ್ಮೆಯ ಗೌಜಿ, ಹೊಸಮನೆಲಿ ಒರಿಶಾಂತದ ಗವುಜಿ, ಪೋಳ್ಯಲ್ಲಿ ಮದುವೆ ಗೌಜಿ, ಅಮ್ಡಾಲಿಲಿ ಬನಾರಿ ಅಜ್ಜನ ಶತಮಾನೋತ್ಸವ ಗೌಜಿ – ನೆಂಪಾವುತ್ತಿಲ್ಲೆ, ಹೇಳ್ತರೆ ಇನ್ನೂ ಹಲವಿದ್ದು – ಹತ್ತೂ ಹಲವು ಗೌಜಿಗೊ ಊರೊಳ. ಎಲ್ಲಾದಕ್ಕೂ ಹೋಗಿ ಬಂದಪ್ಪಗ ಒಪ್ಪಣ್ಣನ ಸೊಂಟ ಸೋಬಾನೆ ಆತಪ್ಪೋ!
ಹೇಳಿದಾಂಗೆ, ಕಳುದ ವಾರಂದಲೇ ಕುಂಟಾಂಗಿಲ ಬಾವನ ಬೈಲಿಲಿ ಕಾಂಬಲಿಲ್ಲೆ. ಏಕೆ? ಏಕೇದರೆ – ಅವಂಗೆ ಬೆಶಿ ಅಡ – ಹೇಳುಗು ಬೋಚಬಾವ. ಎತಾರ್ತಕ್ಕೆ ಕುಂಟಾಂಗಿಲ ಬಾವಂಗೆ ಬೆಶಿ ಹಿಡುದ ಬಗೆ ಏನಲ್ಲ, ಆದರೆ ಇಂಗ್ಳೀಶಿನ ಬೆಶಿ ಬೋಚಬಾವ ಹೇಳುವಾಗ ಅದು ನಮ್ಮ ಭಾಶೆಯ ಬೆಶಿ ಆವುತ್ತು ಅಷ್ಟೆ! ಪೋ!!
ಅದಪ್ಪು, ಕುಂಟಾಂಗಿಲ ಭಾವಂಗೆ ಏಕೆ ಬೆಶಿ? ಅದೇ – ಕುಂಬ್ಳೆಜ್ಜನ ಒರಿಶಾಂತ ಹತ್ತರೆ ಬಂತಲ್ಲದೋ, ಅದೇ ಬೆಶಿ.
ಕಳುದೊರಿಶ ಹೊಸ ಒರಿಶ ಸುರು ಅಪ್ಪ ಗವುಜಿಲೇ – ನಮ್ಮ ಬೈಲಿನ ಮೂರ್ನಾಲ್ಕು ಜೆನ ಗೆಣವತಿ ಭಟ್ರು ತೀರಿ ಹೋದ್ಸು ಗೊಂತಿಕ್ಕು. ಶೇಡ್ಯಮ್ಮೆ, ಹೊಸಮನೆ ಗೆಣವತಿ ಭಟ್ರ ಒಟ್ಟೀಂಗೆ ನಮ್ಮ ಕುಂಬ್ಳೆಜ್ಜನೂ ಒಬ್ಬರು! ತುಂಬಾ ಚಟುವಟಿಕೆ ಹೊಂದಿ, ಆರೋಗ್ಯವಂತರಾಗಿದ್ದ ಕುಂಬ್ಳೆಜ್ಜ ಒಂದರಿಯೇ ಗೊಂತೇ ಇಲ್ಲದ್ದೆ ನಮ್ಮ ಬಿಟ್ಟಿಕ್ಕಿ ಹೋಗಿತ್ತವು!
ಆ ದಿನಂದ ಇಂದಿಂಗೆ ಒಂದೊರಿಶ ಆತು ಅಪ್ಪೋ!!
ಕುಂಟಾಂಗಿಲ ಭಾವಂಗೆ ಪೂರ್ತ ಉಸ್ತುವಾರಿ ಇಪ್ಪ ಕಾರಣ ಶಾಮಿಯಾನ ಹಾಕುತ್ಸರಿಂದ ಶರ್ಬತ್ತಿಂಗೆ ನಿಂಬುಳಿ ತತ್ತನ್ನಾರವೂ ತಲೆಬೆಶಿಗೊ ಹಲವಿದ್ದು. ಅದರೆಡಕ್ಕಿಲಿ ಒಂದೊಂದರಿ ಬೈಲಿನ ನೆಂಟ್ರುಗಳ ಮಾತಾಡ್ಸುತ್ತ ಕಾರಣ ರಜಾ ಅಪುರೂಪ ಆದ್ಸಪ್ಪು.
ಒಂದರಿಯಾಣ ತಲೆಬೆಶಿ ಇಳುದ ಕೂಡ್ಳೇ ಬಾರದ್ದೆ ಒಳಿಯ. ಅದಿರಳಿ.
~
ಕುಂಬ್ಳೆಜ್ಜನ ಒರಿಶಾಂತಕ್ಕೆ ನಾವುದೇ ಹೋಗಿದ್ದತ್ತು; ದೊಡ್ಡಭಾವನ ಕಾರಿನ ಹಿಂದಾಣ ಸೀಟಿಲಿ. ಎದುರಾಣ ಸೀಟಿಲಿ – ದೊಡ್ಡಭಾವಂದೇ, ದೊಡ್ಡಳಿಯನ ದೊಡ್ಡದೊಡ್ಡಪ್ಪನ ದೊಡ್ಡತಮ್ಮ – ಸರ್ವೆ ಭಾವಂದೇ ಇದ್ದಿದ್ದವು. ಹಿಂದಾಣ ಇಡೀ ಸೀಟಿಲಿ ಒಪ್ಪಣ್ಣ ಮಾಂತ್ರ ಆದ ಕಾರಣ ಪದ್ಯಾಣಜ್ಜಿಯ ಹಾಂಗೆ ಕಾಲುನೀಡಿ ಕೂದುಗೊಂಡದು. ಉದೆಕ್ಕಾಲಕ್ಕೇ ಬೈಲಕರೆ ಕರಿಮಾರ್ಗದ ಬುಡಂದ ಹೆರಟ್ರೂ, ಓ ಅಲ್ಲಿ ಚೆರುಕಳ ಎತ್ತುವಾಗ ಗೊಂತಾತು, ಯೇವದೋ ಮಾಪುಳೆಯ ಇನ್ನೊಂದು ಮಾಪುಳೆ ಕುತ್ತಿ ಕೊಂದ ಲೆಕ್ಕಲ್ಲಿ ಹರ್ತಾಳ ಸುರು ಆಯಿದು ಹೇದು. ಆದರೆ ಪ್ರೈವೇಟು ಕಾರುಗೊಕ್ಕೆ ಹೋಪಲೆ ಏನೂ ಸಮಸ್ಯೆ ಆವುತ್ತಿಲ್ಲೆ – ಹೇಳಿಯೂ ಟೀಕೆಪಿ ಬಾವನ ಮೆಸೇಜು ಬಂತು. ಹಾಂಗೆ, ಅರೆ ಹೆದರಿಕೆ, ಅರೆ ಧೈರ್ಯಲ್ಲಿ ಬಂದುಗೊಂಡು ಇತ್ತಿದ್ದು ಎಂಗೊ.
~
ಸರ್ವೆ ಭಾವಂಗೆ ವಿಷಯ ಎಷ್ಟೂ ಅರಡಿಗು. ಒಂದು ಜಾಗೆಯ, ಒಂದು ಕಾರ್ಯದ, ಒಬ್ಬ ವೆಗ್ತಿಯ – ಬರೀ ಅಕ್ಷಾಂಶ ರೇಖಾಂಶ ಮಾಂತ್ರ ಸರ್ವೆ ಮಾಡುದು ಅಲ್ಲದ್ದೆ, ಆ ಸಂಗತಿಯ ಪೂರ್ವಾಪರ ಪೂರ ಅಳತೆ ಮಾಡ್ತ ಸಾಮರ್ತಿಗೆ ಇದ್ದು. ಸ್ವಂತ ಆಸಕ್ತಿಲೇ ಕಲ್ತುಗೊಂಡಿದವು, ಯಕ್ಷಗಾನಂದ ಹಿಡುದು ಮಗನ ಗಣಿತ ಲೆಕ್ಕದ ವರೆಂಗೆ. ಯೇವದೇ ವಿಷಯ ಆದರೂ – ವಸ್ತುನಿಷ್ಠ. ಆವುತ್ತರೆ ಆವುತ್ತು; ಇಲ್ಲದ್ದರೆ ಇಲ್ಲೇದು. ಗೊಂತಿದ್ದದಕ್ಕೆ ಮಾತಾಡುಗು; ಗೊಂತಿಲ್ಲದ್ದಕ್ಕೆ ಹೂಂಕುಟ್ಟುಗು. ಹೆಚ್ಚಿನೋರಿಂಗೂ ಇದು ಅರಡಿಯದ್ದೇ ಮೋಸ ಅಪ್ಪದು ಇದಾ!
ಮೊನ್ನೆ ಕಾರಿಲಿ ಹೋಪಗ ಬಂದ ವಿಷಯ ಎಂತರ – ಹೇದರೆ, ವೆಗ್ತಿ ತೀರಿ ಹೋಗಿ ಒರಿಶಾಂತದ ಒರೆಗೆ ಮಾಡ್ತ ಪಿತೃಕಾರ್ಯಂಗಳ ಅಗತ್ಯದ ಬಗ್ಗೆ. ಅದೆಂತರ?
~
ವೆಗ್ತಿಯ ಜನನ ಹೇಂಗೆ ನಿಶ್ಚಿತವೋ, ಮರಣವೂ ಅಷ್ಟೇ ನಿಘಂಟು. ಜನ್ಮಾದಿಂದ ತೊಡಗಿ ಆರಂಭ ಅಪ್ಪ ಪೂರ್ವ ಷೋಡಷ ಕರ್ಮಂಗೊ ಎಷ್ಟು ಪ್ರಾಮುಖ್ಯವೋ, ಆ ವೆಗ್ತಿ ತೀರಿದ ಮತ್ತಾಣ ಅಪರ ಕಾರ್ಯಂಗಳೂ ಅಷ್ಟೇ ಮುಖ್ಯ. ಅಷ್ಟು ದಿನ ಅದರ್ಲಿ ವಾಸ ಮಾಡಿಗೊಂಡು ಇದ್ದ ಜೀವಾಂಶ ಅಂದು ಬಿಟ್ಟು ಹೋದ ಆ ದೇಹವ ಅತ್ಯಂತ ಶುದ್ಧಲ್ಲಿ ಸಂಸ್ಕಾರ ಆರಂಭ ಮಾಡ್ತು. ಶವ ಮುಟ್ಟಿರೆ ಮೈಲಿಗೆ ಹೇದು ನಾವು ಹೇಳ್ತು; ಆದರೆ ಶವ ಸಂಸ್ಕಾರ ಆರಂಭ ಅಪ್ಪದು – ಬಟ್ಟಮಾವನ ಮಂತ್ರಲ್ಲಿ ಕರ್ಮ ಹಿಡುದೋರು ಆ ದೇಹವ ಮೀಶುವ ಮೂಲಕ. ಅದಾದ ಮತ್ತೆ ಶವವ ಆರೇ ಮುಟ್ಟೇಕಾರೂ ಮಿಂದಾಯೇಕು. ಹೊರ್ಲೆ ಬಪ್ಪ ಮಾವಂದ್ರೂ – ಮಿಂದುಗೊಂಡೇ ಬರೇಕು. ಇಷ್ಟೂ ಶುದ್ಧದ ಕಾರ್ಯಂಗೊ ಶ್ರದ್ಧೆ ಉಂಟಪ್ಪಲೆ ಬೇಕಾಗಿಯೇ! ಹಾಂಗೆ ಹೊತ್ತುಗೊಂಡು ಹೋಗಿ ಚಿತೆಲಿ ಮಡಗಿರೆ ನಿರ್ಜೀವ ದೇಹಕ್ಕೆ ಕಿಚ್ಚುಮುಟ್ಟಿ ಮೋಕ್ಷಕ್ಕೆ ಹೋಪದೇ.
ಆ ದಿನ ದಹನ ಆದ ಮತ್ತೆ, ಮೂರ್ನೇ ದಿನ ಸಂಚಯನ, ಅಥವಾ ಬೂದಿ ಕೂಡುಸ್ಸು. ಎರಡು ದಿನ ಹಿಂದೆಯೇ ಕೊಟ್ಟ ಬೃಹತ್ ಕಿಚ್ಚಿಲಿ ಹೊತ್ತಿ ಬೂದಿ ಆದ ದೇಹದ ಉಳಿಕೆಗೊ ಎಂತಾರು ಬಾಕಿ ಆದರೆ, ಎಲ್ಲವನ್ನೂ ಒಂದುಸಿ, ನಂದುಸಿ, ಕೂಡಿ, ರಜ ಅಸ್ತಿಯ ಅಳಗೆಲಿ ಹಾಕಿ ಮಡಗುಸ್ಸು, ಚಿನ್ನದ ಹೊಡಿಯೊಟ್ಟಿಂಗೆ. ಮುಂದಕ್ಕೆ ಕಾಶಿಗೆ ಹೋವುತ್ತ ಏರ್ಪಾಡು ಇದ್ದರೆ ಅಲ್ಲಿಗೆ ಅಸ್ತಿಯೂ ಇದೇ ಸಂದರ್ಭಲ್ಲಿ ಎತ್ತಿ ಮಡಗುಸ್ಸು.
ಅಲ್ಲಿಂದ ಮತ್ತಾಣ ವೈದೀಕ ಕಾರ್ಯಕ್ರಮಂಗೊ ಇಪ್ಪದು ಹತ್ತನೇ ದಿನ. ಅಷ್ಟೂ ದಿನವೂ ಉದಿಯಪ್ಪಗ ಮೀಯೇಕಾರೆ ತಿಲೋದಕ ಕೊಡ್ಳಿದ್ದು ಪ್ರೇತಕ್ಕೆ. ಅಪ್ಪು, ಜೀವ ಇಪ್ಪದು ದೇಹ ಕಳದು ಪ್ರೇತ ಆಯಿದು. ಇನ್ನು ಅದಕ್ಕೆ ಸಂಸ್ಕಾರಂಗೊ ಆಯೇಕು. ಸಂಸ್ಕಾರಂಗೊ ಅಪ್ಪಾಗ ದಿನವೂ ಅದಕ್ಕೆ ಅನ್ನಾಹಾರ ಕೊಡೆಕ್ಕು. ಎಳ್ಳು+ನೀರು ಅದರ ಮುಖ್ಯ ಆಹಾರ. ಹಾಂಗಾಗಿ ಜೆನಿವಾರ ಎಡತ್ತು ಮಾಡಿಂಡು ತಿಲೋದಕ ಬಿಡ್ತದು ಅಪರ ಕಾರ್ಯಲ್ಲಿ ಸರ್ವೇ ಸಾಮಾನ್ಯ.
ಹತ್ತನೇ ದಿನ ಸದ್ಗತಿ ಕಾರ್ಯಂಗೊ ಸುರು ಆವುತ್ತು. ದಶ, ಶುದ್ಧ, ಸಪಿಂಡೀಕರಣ, ಪತಂಗ ಕಾರ್ಯಕ್ರಮಂಗಳ ಎಡಕ್ಕಿಲಿ ಉತ್ಸರ್ಗ ಹೋಮಂಗಳೇ ಇತ್ಯಾದಿ ನೆಡೆಶಿ ಪ್ರೇತತ್ವ ನಿವೃತ್ತಿ ಮಾಡಿ ಪಿತೃತ್ವ ಪ್ರಾಪ್ತಿ ಅಪ್ಪ ಹಾಂಗೆ ಸಂಸ್ಕಾರಂಗೊ ಒದಗುಸುತ್ತವು ಬಟ್ಟಮಾವಂದ್ರು.
~
ಇದಿಷ್ಟು ವೈದಿಕರು ಇದ್ದುಗೊಂಡು ಮಾಡುವ ಪ್ರಮುಖ ಕಾರ್ಯಕ್ರಮಂಗೊ. ಆದರೆ, ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮಂಗಳ ಒಂದರಿಯಾಣದ್ದರ ಮುಗುಶಿದ ಬಟ್ಟಮಾವಂದ್ರು ಒಂದು ಚೀಟಿಲಿ ಪಟ್ಟಿ ಬರದು ಕೊಟ್ಟಿಕ್ಕಿ ಹೋವುತ್ತವು – “ಮಾಸಿಕಗಳು” – ಹೇದು. ಅದೆಂತರ ಮಾಸಿಕಂಗೊ? ಅದರ ಹೇಂಗೆ ಲೆಕ್ಕ ಹಾಕಿದವು? – ಇದರ ಬಗ್ಗೆ ಸರ್ವೆಭಾವ ವಿವರ್ಸಿದವು; ಒರಿಶಾಂತದ ಮನೆ ಎತ್ತುವನ್ನಾರವೂ.
ಸರ್ವೆಭಾವನ ಹೆರಿಯೋರು ಆಚೊರಿಶ ತೀರಿ, ಕಳುದೊರಿಶದ ಒರಿಶಾಂತದ ಒರೆಂಗೆ ಬಂದ ಎಲ್ಲಾ ಹದಿನಾರು ಮಾಸಿಕಂಗಳನ್ನೂ – ಎಲ್ಲಾ ಮಕ್ಕಳೂ ಒಟ್ಟುಸೇರಿ ಶ್ರದ್ಧೇಲಿ ವೈದಿಕ ಮುಖೇನ ನೆಡಿಶಿದ್ದವು. ಬೌಶ್ಷ ಈಗಾಣ ಕಾಲಲ್ಲಿ ಅಂತೂ – ಈ ನಮುನೆ ಪಿತೃಕಾರ್ಯ ಮಾಡಿದ ಮನೆ ನಮ್ಮ ಹೋಬಳಿಲೇ ಯೇವದೂ ಇರ, ಸದ್ಯಕ್ಕೆ! ಹಾಂಗಾಗಿ ಸರ್ವೆಭಾವ ಈ ವಿಷಯಂಗಳ ಹೇಳಿರೆ ಅದಕ್ಕೆ ಒಳ್ಳೆತ ತೂಕ ಇದ್ದು ಇದಾ!
~
ಮಾಸಿಕ ಹೇದರೆಂತ್ಸು?
ವೆಗ್ತಿ ತೀರಿಹೋಗಿ ಒಂದೊರಿಷ ಅಪ್ಪಗ ಪ್ರಥಮಾಬ್ದಿಕ ಶ್ರಾದ್ಧ ಆವುತ್ತು. ಅದಕ್ಕೆ ಒರಿಶಾಂತ ಹೇಳಿಯೂ ಹೇಳ್ತವು ನಮ್ಮ ಊರಿನ ಭಾಷೆಲಿ. ತೀರಿದ ದಿನಂದ ಒರಿಶಾಂತದ ಒರೆಗಾಣ ಒಂದೊರಿಶದ ಸಮೆಯಾವಕಾಶಲ್ಲಿ ಕೆಲವು ನಿರ್ದಿಷ್ಟ ದಿನಂಗಳಲ್ಲಿ ತೀರಿಗೊಂಡವನ ಸ್ಮರಣೆ ಮಾಡ್ತ ಕಾರ್ಯಕ್ರಮವೇ ಮಾಸಿಕ. ಆ ದಿನ ಕರ್ತೃಗೊ ಉದಿಯಪ್ಪಾಗ ಉಪಾಹಾರ ಮಾಡಿ, ಮಜ್ಜಾನಕ್ಕೆ ಬ್ರಾಹ್ಮಣರಿಂಗೆ ಹಸ್ತೋದಕ ಕೊಟ್ಟು ಪಿತೃಗಳ ಆವಾಹನೆ ಮಾಡುಸಿ, ಸಂತೋಷಪಡುಸುತ್ತವು. ಮೋಕ್ಷಲೋಕಕ್ಕೆ ಹೋಪ ದಾರಿಲಿ ಅವಕ್ಕೆ ಬೇಕಪ್ಪಗ ಅನ್ನಾಹಾರವ ಬ್ರಾಹ್ಮಣರೂಪೀ ಪಿತೃಗೊಕ್ಕೆ ಕೊಡ್ತವು. ಒಂದು ವೇಳೆ ವೈದಿಕರ ದಿನಿಗೆಳಿ ಈ ಕಾರ್ಯ ಮಾಡುಸುಲೆ ಸಾಧ್ಯ ಆಗದ್ದೇ ಹೋದ ಪಕ್ಷಲ್ಲಿ, ತೂಷ್ಣಿಲಿ ಮಜ್ಜಾನಕ್ಕೆ ಕಾಕಗೆ ಅಶನ ಕೊಟ್ಟು ಕಾವ್-ಕಾವ್ ಹೇದು ಚಪ್ಪಾಳೆತಟ್ಟಿ ಬಕ್ಕು ಕರ್ತೃಗೊ. ಅದಿರಳಿ.
ಲೆಕ್ಕ ಹಾಕುಸ್ಸು ಹೇಂಗೆ?
ವೆಗ್ತಿ ತೀರಿದ ದಿನ ಇಪ್ಪ ನಿತ್ಯ ನಕ್ಷತ್ರ ಇದ್ದಲ್ಲದೋ – ಒರಿಶಾಂತದ ಒರೆಂಗೆ ಪ್ರತೀ ತಿಂಗಳುದೇ ಆ ನಿತ್ಯ ನಕ್ಷತ್ರ ಬತ್ತಿದಾ, ಆ ಎಲ್ಲಾ ದಿನವೂ ಮಾಸಿಕಂಗೊ. ಮಾಸಕ್ಕೊಂದರಿ – ಮಾಸಿಕ ಹೇದು ಆರಂಭ ಆತಾಯಿಕ್ಕು. ಅದೇ ತಿಂಗಳ, ಅದೇ ನಕ್ಷತ್ರಕ್ಕೆ ಒರಿಶಾಂತ ಬತ್ತು!
ಅಷ್ಟೇಯೋ? ಅಲ್ಲ.
ಕವಿಃ ಕಥಯ ತನ್ವಂಗೀ ಪತಂಗಃ ಪಿತೃಸಂಗಮಃ – ಹೇದು ಒಂದು ಶ್ಲೋಕ ಸೂತ್ರ ಇದ್ದಾಡ. ಇದು ಮಾಸಿಕದ ದಿನಂಗಳ ನೆಂಪು ಮಡಗಲೆ ಇಪ್ಪ ಕೆಣಿಸೂತ್ರ ಆಡ. ಸರ್ವೆಭಾವಂಗೆ ಪರಕ್ಕಜೆ ಭಟ್ಟಮಾವ ನೆಂಪುಮಾಡುಸಿ ಕೊಟ್ಟದಾಡ. ಇದೆಂತರ? ಅಕ್ಷರ ಸಂಖ್ಯಾಪದ್ಧತಿಲಿ ನೋಡಿರೆ – ಇದು ನಾಲ್ಕು ಸಂಖ್ಯೆಗೊ – ಮಾಸಿಕ ಆಯೇಕಾದ ನಾಲ್ಕು ದಿನಂಗೊ ಆಡ!
(ಕವಿಃ : ೪೧, ಕಥಯ: ೧೭೧, ತನ್ವಂಗೀ: ೩೪೬, ಪತಂಗ: ೩೬೧)
ರೂಢಿಲಿ –
೪೧ನೇ ದಿನ ಸುರುವಾಣ ಮಾಸಿಕ,
೧೭೧ ನೇ ದಿನ ಐದೂವರೆ ಮಾಸಿಕ,
೨೪೬ನೇ ದಿನ ಅರೆ ಮಾಸಿಕ,
೩೬೧ನೇ ದಿನ ಪತಂಗ ಹೇಳಿಯೂ ಹೇಳ್ತವು!
ತಿಂಗಳ ಮಾಸಿಕ ಹನ್ನೆರಡು ಮಾಂತ್ರ ಅಲ್ಲದ್ದೆ ದಿನಲೆಕ್ಕದ ನಾಲ್ಕೈದು ಮಾಸಿಕಂಗೊ. ತಿಂಗಳು ಅಧಿಕಮಾಸವೋ ಮಣ್ಣ ಇದ್ದರೆ ಒಂದು ಜಾಸ್ತಿಯೂ ಅಕ್ಕಿದಾ.
~
ಲೆಕ್ಕಾಚಾರ ಅಂತಿರಳಿ.
ಈ ಮಾಸಿಕಂಗೊ ಎಂತಕೆ ಆಯಾ ದಿನವೇ ಮಾಡೇಕು – ಹೇಳ್ತದಕ್ಕೆ ವಿಜ್ಞಾನ ಉತ್ತರ ಕೊಡ. ಅದು ಶ್ರದ್ಧೆಯ ವಿಚಾರ, ಶ್ರಾದ್ಧ. ಆದರೆ – ಅಂಬಗಂಬಗ ಶ್ರಾದ್ಧಮಾಡಿರೆ ತೀರಿಗೊಂಡ ವೆಗ್ತಿಯ ನೆಂಪು ಪದೇಪದೇ ನೆಡದು ನವಗೆ ಅವರ ನೆಂಪುಮಾಸದ್ದ ಹಾಂಗೆ ಆವುತ್ತು. ಉದಿಯಾಂದ ಫಲಾರ, ಉಪಾಹಾರ ಮಾಡಿ, ಇರುಳಿಂಗೆ ಒಪ್ಪೊತ್ತು ಮಾಡಿ – ಹಶುಕಟ್ಟಿಂಡು ಕೂದು, ತಾನೇತಾನಾಗಿ ತೀರಿಗೊಂಡವನ ನೆಂಪು ಬತ್ತು; ಆ ಮೂಲಕ ಅವರ ಆದರ್ಶಂಗಳ, ಅವರ ಒಟ್ಟಿಂಗೆ ಕಳದ ಸಂದರ್ಭಂಗಳ ಎಲ್ಲವನ್ನೂ ನೆಂಪುಮಾಡ್ಳಾವುತ್ತು – ಹೇಳುಸ್ಸು ಸರ್ವೇ ಭಾವನ ಸ್ವತಃ ಅನುಭವದ ಮಾತು ಆಡ.
~
ಒಂದೊಪ್ಪ: ಪ್ರೇತತ್ರ್ವಂದ ಪಿತೃತ್ವ ಸಿಕ್ಕೇಕಾರೆ ಸಂಸ್ಕಾರ ಸಿಕ್ಕೇಕು. ಶಿಷ್ಯತ್ವಂದ ಪ್ರೇತತ್ವ ಸಿಕ್ಕೇಕಾರೆ ಸಂಸ್ಕಾರ ಕಳಕ್ಕೊಳೇಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಒಳ್ಳೆದಾಯಿದು ಒಪ್ಪಣ್ಣ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಮಾಸಿಕದ ಬಗೆಲಿ ಒಳ್ಳೆ ಮಾಹಿತಿ ಕೊಟ್ಟತ್ತು ಈ ವಾರದ ಶುದ್ದಿ. ಒಂದೊಪ್ಪವುದೆ ಒಪ್ಪ ಇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°vreddhiಬೋಸ ಬಾವವಿಜಯತ್ತೆವೇಣೂರಣ್ಣರಾಜಣ್ಣಡಾಗುಟ್ರಕ್ಕ°ಅಡ್ಕತ್ತಿಮಾರುಮಾವ°ವಾಣಿ ಚಿಕ್ಕಮ್ಮಸರ್ಪಮಲೆ ಮಾವ°ನೆಗೆಗಾರ°ಶುದ್ದಿಕ್ಕಾರ°ನೀರ್ಕಜೆ ಮಹೇಶಜಯಗೌರಿ ಅಕ್ಕ°ಜಯಶ್ರೀ ನೀರಮೂಲೆಶ್ಯಾಮಣ್ಣಮಾಲಕ್ಕ°ಕೇಜಿಮಾವ°ಅಕ್ಷರ°ಒಪ್ಪಕ್ಕದೊಡ್ಮನೆ ಭಾವಪುಟ್ಟಬಾವ°ಪುತ್ತೂರುಬಾವಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ