Oppanna.com

ಮಹಾ ಸಾಧನೆಯ ಮಹಾಜನಕ್ಕೆ ಮಹಾ ಶತಮಾನೋತ್ಸವ..!

ಬರದೋರು :   ಒಪ್ಪಣ್ಣ    on   20/12/2013    12 ಒಪ್ಪಂಗೊ

ನೀರ್ಚಾಲು ನಮ್ಮ ಬೈಲಿನೊಳವೇ ಇಪ್ಪ ಕಾರಣ ಅಲ್ಯಾಣ ಶುದ್ದಿಗೊ ಅಂಬಗಂಬಗ ಬತ್ತು.
ಪೇಟೆಲಿ ಹಾಂಗಾತು, ಬೈಲಕರೆಲಿ ಹೀಂಗಾತು, ಮಾರ್ಗದ ಬುಡಲ್ಲಿ ಹುಲಿ ಹೋತು – ಹೇದು ಹಲವು ವಿಷಯ ಮಾತಾಡ್ತು.
ಆದರೆ ಈ ವಾರ ಮಾತಾಡ್ಸು ನೀರ್ಚಾಲಿನ ಇತಿಹಾಸಲ್ಲೇ ಅಭೂತಪೂರ್ವ ಸಂಗತಿಯ.
ಮೊನ್ನೆ ಕುಚ್ಚಿ ತೆಗೆಶಲೆ ಬಂಡಾರಿಕೊಟ್ಟಗೆಗೆ ಹೋಗಿತ್ತಿದ್ದೆ ಅಲ್ಲದೋ – ಅಲ್ಲಿ ದೊಡ್ಡಭಾವ ಸಿಕ್ಕಿ ಮಾತಾಡಿದ ಸಂಗತಿಯ.
ಅದೇ – ಮಹಾಜನ ಕೋಲೇಜು ಹೈಸ್ಕೂಲಿನ ಶತಮಾನೋತ್ಸವದ ಗವುಜಿಯ.

~
ಖಂಡಿಗೆ ಅಜ್ಜ ನಮ್ಮ ಬಿಟ್ಟಿಕ್ಕಿ ಹೋದ ಸಮೆಯಲ್ಲಿ ನಾವು ಬೈಲಿಲಿ ಒಂದರಿ ಶುದ್ದಿ ಮಾತಾಡಿದ್ದು.
ಅದಾ, ದೊಡ್ಡಭಾವನ ಸಮೋಸ ಬಂದು ನಾವು ಬೈಲಿಲಿ ಮಾತಾಡಿಗೊಂಡದು!
ಖಂಡಿಗೆ ಅಜ್ಜನ ನಿರ್ವಹಣಾ ಕೌಶಲ್ಯ, ಬಹುಭಾಷಾ ಪಾಂಡಿತ್ಯ, ಬಹುಮುಖ ಪ್ರತಿಭೆ, ಆಧುನಿಕ ಚಿಂತನೆಗೊ – ಎಲ್ಲವುದೇ ನಾವು ಮಾತಾಡಿಗೊಂಡಿದು.
ಎಲ್ಲೋರುದೇ ಅವರ ಹೆರಿ ವೆಗ್ತಿತ್ವವ ನೆಂಪುಮಾಡಿಗೊಂಡಿದವು; ಟೀಕೆಮಾವ “ಗಡಿನಾಡಿನ ಶ್ರೀರಾಮ” ಹೇಳಿಯೇ ಮೆಚ್ಚುಗೆಯ ಟೀಕೆಮಾಡಿದ್ದವು.
ಖಂಡಿಗೆ ಅಜ್ಜನ ಇತಿಹಾಸ ಎಲ್ಲೇ – ಆರಿಂಗೇ ನೆಂಪಾದರೂ; ಅವು ಸೇವೆ ಸಲ್ಲಿಸಿದ ಆ ಮಹಾನ್ ಸಂಸ್ಥೆಯ ನೆಂಪಕ್ಕು.
ಈ ವಾರ ಅಂತೂ – ಹೇಂಗೂ ನೆಂಪು ಮಾಡಿಗೊಳೇಕು; ಅದುವೇ ಶತಮಾನೋತ್ಸವದ ಗವುಜಿಗೆ.

~

ಮಾಷ್ಟ್ರುಮಾವ° ಒಂದೊಂದರಿ ಹೇಳುಲಿದ್ದು – ಶಾಲೆಗಳಲ್ಲಿ ಎರಡು ವಿಧ ಹೇದು.
ಒಂದು ಬುದ್ಧಿವಂತ ಶಾಲೆ; ಇನ್ನೊಂದು ಧನವಂತ ಶಾಲೆ.
ಬುದ್ಧಿವಂತ ಮಕ್ಕಳ ಬುದ್ಧಿಮತ್ತೆಗೆ ಸರಿಯಾದ ವಿದ್ಯೆಯ ಒದಗುಸುತ್ತ ಶಾಲೆ ಬುದ್ಧಿವಂತ ಶಾಲೆ.
ಧನವಂತರ ಬಡ್ಡುಮಕ್ಕಳನ್ನೇ ಕಾದು, ಅವಕ್ಕೇ ಪಾಟಮಾಡಿ ಮಾಳಿಗೆ ಕಟ್ಟೋಣ ಕಟ್ಟಿ ದೊಡ್ಡ ಆವುತ್ತದು ಇನ್ನೊಂದು ನಮುನೆ ಶಾಲೆ.

ನಮ್ಮ ಊರು ಬುದ್ಧಿವಂತರ ಊರು ಹೇದು ಆದ್ಸು ಹೇಂಗೆ?
ನೀರ್ಚಾಲಿನ ಶಾಲೆಯ ಹಾಂಗಿರ್ಸ “ಬುದ್ಧಿವಂತರ ಶಾಲೆಂದ” ಆಗಿಯೇ – ಹೇದು ಮಾಷ್ಟ್ರುಮಾವ ಘಟ್ಟಿ ನಂಬಿಗೊಂಡಿದವು.
ನಮ್ಮ ಊರಿನ ಹಳೇ ಕಾಲದ – ಬುದ್ಧಿವಂತ ಮಕ್ಕೊ ಹೋಗಿ, ವಿದ್ಯಾರ್ಜನೆ ಮಾಡಿ ಕಲ್ತು ಉಶಾರಾಗಿ ಊರಿಂಗೆ ಸಮಾಜಕ್ಕೆ ಹೆಸರು ತಯಿಂದವು.
ಅದರ್ಲಿ ಈ ಶಾಲೆಯೂ ಭಾಗಿ ಆಯಿದು ಹೇಳ್ತದು ಒಂದು ಕೊಶಿಯ ಸಂಗತಿ.

~
ಬಂಡಾರಿಕೊಟ್ಟಗೆಲಿ ಜೆನ ತುಂಬ ಇದ್ದದು ಕೊಶಿಯ ಸಂಗತಿಯೋ? ಅಲ್ಲಪ್ಪ.
ಅಜ್ಜಕಾನ ಭಾವ ನಲುವತ್ತೈದು ದಿನಕ್ಕೊಂದರಿ ತೆಗೆಶುತ್ತ ಕಾರಣ ಬಂಡಾರಿಗೂ ತುಂಬ ಹೊತ್ತು ಬೇಕಾವುತ್ತು.
ಹಾಂಗೆ, ಎಂಗೊ – ಮತ್ತೆ ಬಂದೋರು ಕಾದುಗೊಂಡೇ ಬಾಕಿ.
ಹಾಂಗೆ ಕಾವ ಹೊತ್ತಿಲಿ ದೊಡ್ಡಭಾವ ಹಲವಾರು ವಿಷಯ ಮಾತಾಡ್ಳೆ ಸಿಕ್ಕಿದ ಕಾರಣ ಒರಕ್ಕು ತೂಗಿದ್ದಿಲ್ಲೆ..
ಆ ಶಾಲೆಯ ಇತಿಹಾಸ – ಒರ್ತಮಾನ – ಭವಿಷ್ಯತ್ತಿನ ಬಗ್ಗೆ ಚೆಂದಕೆ ವಿವರ್ಸಿಗೊಂಡು ಹೋದವು.
~
ಇತಿಹಾಸ:
ಇಪ್ಪತ್ತನೆಯ ಶತಮಾನದ ಆರಂಭದ ಹೊತ್ತಿಂಗೆ – ಊರೊಳ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗುಸೇಕು ಹೇದು ಕೆಲವು ವಿದ್ಯಾದಾನಾಸಕ್ತರು ಚಿಂತನೆ ಮಾಡಿದವಡ.
ಮುಂಚೂಣಿಲಿ ಖಂಡಿಗೆ ಶಂಭಟ್ಟ – ಈಶ್ವರ ಭಟ್ಟ ಹೇದು ಇಬ್ರು ಅಜ್ಜಂದ್ರು ಇದ್ದಿದ್ದವಡ. ಹಾಂಗೆ, ಅವರ ಆಸಕ್ತಿ – ಚಿಂತನೆಯ ಫಲವಾಗಿ 1911ರ ಹೊತ್ತಿಂಗೆ ಊರ ದೇವರಾದ ಪೆರಡಾಲ ಉದನೇಶ್ವರನ ಸನ್ನಿಧಿಲಿ, ಅದೇ ದೇವಸ್ಥಾನದ ಗೋಪುರಲ್ಲೇ – ಸಂಸ್ಕೃತ ತರಗತಿಗೊ ಸುರು ಆತು.
ಮಹಾ ಮೇಧಾವಿಗಳ, ಜೆನಂಗಳ ತಯಾರು ಮಾಡ್ತ ಮಹಾ ನಿರೀಕ್ಷೆ ಮಡಗಿದ ಆ ಪಾಠಶಾಲೆಗೆ “ಮಹಾಜನ” ಹೇಳಿಯೇ ಹೆಸರುದೇ ಆತು.
ನೆರೆಕರೆಯ ಮಕ್ಕೊ, ವಿದ್ಯಾಸಕ್ತರು, ಎಲ್ಲೋರುದೇ, ಜಾಣಂಗೊ – ಎಲ್ಲೋರುದೇ ಬಂದು ವಿದ್ಯಾಪಾಠ ಪಡಕ್ಕೊಂಡವು; ಉಶಾರಿ ಆದವು.
ಈ ಪಾಠಶಾಲೆ ಅಧಿಕೃತವಾಗಿ ಸರಕಾರಿ ದಾಖಲೆಲಿ ಸೇರುವಾಗ ಸುರು ಆಗಿ ಎರಡೊರಿಶ ಆಗಿತ್ತಾಡ; ಛೇ!
ಹಾಂಗಾಗಿ, ಲಿಕಾರ್ಡು ತೆಗದು ನೋಡಿರೆ 1913 ಹೇಳಿಯೇ ಲೆಕ್ಕ ಸಿಕ್ಕುಗಟ್ಟೆ; ಆದರೆ ಅಜ್ಜಂದ್ರ ಹತ್ತರೆ ಕೇಳಿರೆ 1911 ರಿಂದಲೇ ಲೆಕ್ಕ ಹಿಡಿಗು. ಪೋ!!
ಅದಿರಳಿ.

ಮುಂದೆ ಸೌಕರ್ಯ ಬೆಳದ ಹಾಂಗೇ, ಮಕ್ಕಳ ಸಂಖ್ಯೆಯೂ ಬೆಳದ ಹಾಂಗೆ ಕ್ರಮೇಣ ದೇವಾಲಯದ ಆವರಣಂದ ವಿದ್ಯಾಲಯದ ಆವರಣಕ್ಕೆ ಬಂತು.
ಆರಂಭ ಆಗಿ ನಾಕೊರಿಶ ಕಳುದು (1915)- ಅದರದ್ದೇ ಆದ ಜಾಗೆ-ಕಟ್ಟೋಣ ಹುಟ್ಟಿತ್ತು.
ಅಂದು ಹುಟ್ಟಿದ ಆವರಣ ಇಂದಿಂಗೂ ಬೆಳೆತ್ತಾ ಇದ್ದು – ಅದುವೇ, ನೀರ್ಚಾಲಿನ ಕರಿಮಾರ್ಗದ ಕರೆಲಿ, ಈಗ ಇಪ್ಪಂತಾದ್ದು.

ಮುಂದೆ, ನೀರ್ಚಾಲಿಂಗೆ ಬಂದು ಹೊಸ ಕಟ್ಟೋಣಲ್ಲಿ ಶಾಲೆಯ ಪೂರ್ಣರೂಪ ಪಡಕ್ಕೊಂಡತ್ತು.
ನಾಕೈದು ಒರಿಶ ಕಳುದ ಮತ್ತೆ “ಪಾಠಶಾಲೆ” ಆಗಿದ್ದದರ “ಪ್ರಾಚ್ಯ ಶಾಲೆ” ಹೇದು (1920) ಮದರಾಸು ವಿಶ್ವವಿದ್ಯಾಲಯ ಅಂಗೀಕರುಸಿತ್ತಾಡ.
ದೊಡ್ಡಭಾವ ಹಾಂಗೆ ಹೇದರೆ ನವಗೆ ಅರ್ತ ಅಕ್ಕೋ – ಅದಕ್ಕೆ ಸುಲಾಬಲ್ಲಿ ಅರ್ತಪ್ಪ ಹಾಂಗೆ “ಶಾಲೆ ಇರ್ಸರ ಕೋಲೇಜು ಮಾಡಿದವು” – ಹೇದು ಹೇಳಿಯಪ್ಪಗ ಗೊಂತಾತು.
ಅರ್ಥ ಆದ್ಸಕ್ಕೆ ಬಂಡಾರಿ ಕುರ್ಶಿಲಿ ಕೂದ ಅಜ್ಜಕಾನ ಭಾವಂದೇ ತಲೆ ಆಡುಸಿದನೋ ತೋರ್ತು; ಬಂಡಾರಿ ಪರಂಚುಸ್ಸು ಕೇಳಿತ್ತು.
1920ರಲ್ಲೇ ನಮ್ಮ ಊರೊಳ ಕೋಲೇಜು ಇದ್ದತ್ತಪ್ಪೋ! ಯ್ಯೋ..ಪ!
~
ಇದರೊಟ್ಟಿಂಗೇ, ಕನ್ನಡವಿಭಾಗವನ್ನೂ ಆರಂಭಮಾಡ್ಳೆ ಅನುಮತಿ ಸಿಕ್ಕಿತ್ತು.
ಆ ಸಮೆಯಲ್ಲಿ; ಮಹಾಜನ ಸಂಸ್ಕೃತ ಕೋಲೇಜಿಲಿ ಎ-ವಿದ್ವಾನ್, ಬಿ-ವಿದ್ವಾನ್ ಹೇದು ಎರಡು ವಿದ್ವತ್ತು ಕ್ಲಾಸುಗೊ.
ಎ-ವಿದ್ವಾನ್ ಹೇದರೆ ಸಂಪೂರ್ಣ ಸಂಸ್ಕೃತ. ಅದರ್ಲಿ ಕಲ್ತೋರು ಸಂಸ್ಕೃತ ವಿದ್ವಾನ್ ಆವುತ್ತವು.
ಬಿ-ವಿದ್ವಾನ್ ಹೇದರೆ, ಸಂಸ್ಕೃತದ ಒಟ್ಟಿಂಗೆ ಕನ್ನಡವೂ ಇದ್ದತ್ತು.
ಅದರ ಕಲ್ತರೆ “ಕನ್ನಡ ಪಂಡಿತರು” ಆವುತ್ತವು. ಅಲ್ಲಿ ಕಲ್ತು ಕನ್ನಡಪಂಡಿತರಾಗಿ ಹಲವಾರು ಶಾಲೆಗಳಲ್ಲಿ ದುಡುದ ಮಾಷ್ಟ್ರುಮಾವಂದ್ರ ನವಗೆ ಕಾಂಬಲೆ ಸಿಕ್ಕುತ್ತಪ್ಪೋ!

ಹಾಂಗೆ ನೋಡಿರೆ, ಸಂಸ್ಕೃತ ವಿದ್ವಾನ್ ಆದೋರಿಂದ ಸುಲಾಭಲ್ಲಿ ಕನ್ನಡ ವಿದ್ವಾನ್ ಗೊಕ್ಕೆ ಕೆಲಸ ಸಿಕ್ಕಿಗೊಂಡಿತ್ತು.
ಇದರಿಂದಾಗಿ, ಸಂಸ್ಕೃತ ವಿಭಾಗಕ್ಕೆ ವಿದ್ಯಾರ್ಥಿಗಳೇ ಬಪ್ಪದು ಕಡಮ್ಮೆ ಆಗಿ ಹೊತು.
ಕಾಲಕ್ರಮೇಣ ಸಂಸ್ಕೃತ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ ಬಂತು. ಅಂತೂ ಒಂದೊರಿಶ ಮುಚ್ಚಿಯೇ ಹೋತು.
ಕನ್ನಡ ಮಾಂತ್ರ ಇದ್ದರೂ – ತುಂಬ ಸಮೆಯ ನೆಡದತ್ತಿಲ್ಲೆ.
~
ಇಷ್ಟೆಲ್ಲ ಅಪ್ಪಗ ಭಾರತಕ್ಕೆ ಸ್ವಾತಂತ್ರ್ಯವೂ ಬಂತು; ಮೆಡ್ರಾಸು ಪ್ರಾಂತ್ಯವೂ ಹೋತು. ಮತ್ತೆ ಬಂದದು ಕೇರಳ ಹೇಳ್ತ ಮಲೆಯಾಳಿ ರಾಜ್ಯ. ಶುದ್ಧ ಕನ್ನಡದ ಕಾಸರಗೋಡು ಆರದ್ದೋ ಕೈತಪ್ಪು – ಕಣ್ತಪ್ಪು – ಬಾಯಿತಪ್ಪುಗಳಿಂದಾಗಿ ಮಲೆಯಾಳಿ ರಾಜ್ಯಕ್ಕೆ ಸೇರಿತ್ತು. ಅದೇ ದೊಡ್ಡ ಕತೆ, ಇನ್ನೊಂದರಿ ಮಾತಾಡುವೊ°.
~
ಅಂತೂ – ಕಾಲ ಆಧುನಿಕ ಆವುತ್ತಾ ಇದ್ದು.
ವಿಜ್ಞಾನ, ಇಂಗ್ಳೀಶು ಭೂಗೋಳ ಶಾಸ್ತ್ರಂಗೊ ಬೆಳಕ್ಕೊಂಡು ಬಂತು.
ಊರ ವಿದ್ಯಾಭಿಮಾನಿಗಳ ಬೇಡಿಕೆಯೂ ಆಧುನಿಕ ಆಗಿಂಡು ಬಂತು.
ಹಾಂಗಾಗಿ – ಇದರೆಡಕ್ಕಿಲಿ ಒಂದೊರಿಶ (1952) ಕನ್ನಡ ಪ್ರೌಢ ಶಿಕ್ಷಣ ಆರಂಭ ಆತಾಡ.

ಮುಂದೊಂದು ದಿನ ಸಂಸ್ಕೃತ ಪಾಠಶಾಲೆ ಸಂಪೂರ್ಣವಾಗಿ ನಿಂದದು ಕೇರಳ ಸರಕಾರದ ಆದೇಶಂದಾಗಿ.
1957ರಲ್ಲಿ ಕೇರಳ ಸರ್ಕಾರದ ಆದೇಶಾನುಸಾರ ಸಂಸ್ಕೃತ ಪ್ರಾಥಮಿಕ ಶಾಲೆ “ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ” – ಹೇಳಿ ಬದಲಾತು.
ಹಾಂಗಾಗಿ, ನೀರ್ಚಾಲು ಶಾಲೆಲಿ ಕನ್ನಡ ಮಾಧ್ಯಮ ಒಂದರಿಂದ – ಹತ್ತನೇ ತರಗತಿ ಒರೆಂಗೆ ಆಧುನಿಕ ಶಿಕ್ಷಣದ ವೆವಸ್ತೆ ಒದಗಿಬಂತು.
ಪಠ್ಯ ಬದಲಾದರೂ – ಹಳೆ ನೆಂಪಿಂಗೆ ಶಾಲೆಯ ಹೆಸರು ಹಾಂಗೇ ಮಡಿಕ್ಕೊಂಡಿದವಾಡ, ಖಂಡಿಗೆ ಅಜ್ಜ – “ಮಹಾಜನ ಸಂಸ್ಕೃತ ಕೋಲೇಜು” ಶಾಲೆ – ಹೇದು.
ಇಂದಿಂಗೂ ಅದರ ಹೆಸರು ಹೇಳುವಾಗ ಭವ್ಯ ಇತಿಹಾಸ ನೆಂಪಾಗದ್ದೆ ಇಕ್ಕೋ?
ಅಂದಿಂದ ಇಂದಿನ ಒರೆಂಗೂ – ಎಷ್ಟೋ ಸಾವಿರ ಮಕ್ಕೊ ಇಲ್ಲಿ ಕಲ್ತು ದೊಡ್ಡ ದೊಡ್ಡ ಸಾಧನೆ ಮಾಡಿದ್ದವು.
ಶೇಣಿ ಅಜ್ಜ°, ಚೌಕ್ಕಾರುಮಾವ°, ಕೈಯಾರ ಕಿಂಞಣ್ಣ ರೈ – ಹೀಂಗಿರ್ಸ ಹೆರಿಯ ತಲೆಗೊ ಇದೇ ಶಾಲೆಯ ವಿದ್ಯಾರ್ಥಿಗೊ – ಹೇಳಿ ಗ್ರೇಶಿಗೊಂಬಲೆ ಹೆಮ್ಮೆ ಆವುತ್ತು – ಹೇಳಿದವು ದೊಡ್ಡಭಾವ.
ಅದೇ ದೊಡ್ಡಭಾವ° ಅಂತಾ ಶಾಲೆಲಿ ಮಾಷ್ಟ್ರ° ಆಗಿರ್ಸು ಹೇದು ಗ್ರೇಶಲೆ ಒಪ್ಪಣ್ಣಂಗೂ ಹೆಮ್ಮೆ ಆವುತ್ತು; ಅದು ಬೇರೆ!

~

ವರ್ತಮಾನ:
ಅಂದ್ರಾಣ ಸ್ವರೂಪ ಅಂದಿಂಗೆ, ಇಂದ್ರಾಣ ಸ್ವರೂಪ ಇಂದಿಂಗೆ.
ಸಾರಡಿ ತೋಡಿನ ನೀರಿನ ಹಾಂಗೆ ಹರ್ಕೊಂಡೇ ಇದ್ದರೆ ಮಾಂತ್ರ ಜೀವಂತಿಕೆ. ಹೀಂಗಿದ್ದರೆ ಮಾಂತ್ರ ಅಸ್ತಿತ್ವ ಒಳಿಗಷ್ಟೆ. ಅಲ್ಲದೋ?
ಅದೇ ರೀತಿಲಿ, ನೂರೊರಿಶ ಹಳೇ ಶಾಲೆ ಆದರೂ – ಇಂದ್ರಾಣ ಜೀವನ ಪದ್ಧತಿಗೆ ಹೊಂದುವ ಹಾಂಗಿರ್ಸ ವಿಜ್ಞಾನ, ಕಂಪ್ಯೂಟ್ರು, ಇಂಟರ್ನೆಟ್ಟು – ಎಲ್ಲವೂ ಆ ಶಾಲೆಲಿ ಇದ್ದು.
ಎಲ್ಲವುದೇ ಆ ಶಾಲೆಲಿ ಹೇಳಿಕೊಡ್ತು. ಅಲ್ಲಿಂದ ಕಲ್ತು ಹೆರ ಬಂದ ಮಕ್ಕೊಗೆ ಈ ನಮುನೆ ಕೆಟ್ಟುಂಕೆಣಿಗೊ ಪೂರಾ ಅರಡಿತ್ತಾಡ.

ಅದಲ್ಲದ್ದೆ, ಕಾಲಕಾಲಕ್ಕೆ ಅಗತ್ಯದ ಹಾಂಗೆ ಕೆಲವು ಹೊಸ ಕಟ್ಟೋಣಂಗೊ ಬಯಿಂದು; ಪರಿಸರ ಬೆಳದ್ದು.
ಹಳೆಯ ಜೀರ್ಣವಾದ ಕೆಲವು ಕಟ್ಟೋಣಂಗಳ ಬದಲು ಹೊಸ ಕಟ್ಟೋಣ ಕಟ್ಟಿದ್ದು; ಕಟ್ಟುತ್ತಾ ಇದ್ದು.
ಒರಿಶಕ್ಕೂ ಸರಿಸುಮಾರು ಏಳುನೂರು ವಿದ್ಯಾರ್ಥಿಗೊ ಶಾಲೆಲಿರ್ತವು; ಅವರೆಲ್ಲರ ಭವಿಷ್ಯವ ರೂಪುಸುವ ಮಹತ್ಕಾರ್ಯವ ಆ ಮಹಾಜನ ಕೋಲೇಜು ಶಾಲೆ ಮಾಡ್ತಾ ಇದ್ದು – ಹೇಳಿದವು ದೊಡ್ಡಭಾವ°.
~
ಅಜ್ಜಕಾನ ಭಾವ ಕುರ್ಷಿಂದ ಎದ್ದಪ್ಪದ್ದೇ “ಉಸ್ಸಪ್ಪ” ಹೇದು ಒಂದರಿ ಹೊದಕ್ಕೆ ಕುಡುಗಿತ್ತು ಕುಚ್ಚಿತೆಗದ ಮನಿಶ್ಶ.
ಮತ್ತಾಣ ಜೆನ ದೊಡ್ಡಭಾವನೇ ಆದ ಕಾರಣ ಮಾತು ವಿಷಯ ತುಂಡಾತು.
~

ಭವಿಷ್ಯ:
ಇಷ್ಟೆಲ್ಲ ಭವ್ಯ ಕೋಲೇಜು, ವಿದ್ವತ್ತು, ವಿದ್ವಾನು, ಕನ್ನಡ, ಪ್ರಾಥಮಿಕ, ಪ್ರೌಢ ಶಾಲೆಗೊ ಇದ್ದರೂ – ಮುಂದೆಂತ – ಹೇಳ್ತ ಚಿಂತನೆ ನಮ್ಮಲ್ಲಿ ಬಪ್ಪದು ನಿಜ.
ಊರುಗಳಲ್ಲಿಪ್ಪ ಜೆನಜೀವನ ಪೂರ್ತ ಪೇಟೆಗೊಕ್ಕೆ ವಲಸೆ ಹೋವುಸ್ಸು ಒಂದು ಕಾರಣ;
ಕೇರಳದ ಮಲೆಯಾಳೀ ಕಪಿಮುಷ್ಟಿ ಇನ್ನೊಂದು ಕಾರಣ;
ಆಧುನಿಕ ಕಾಲಲ್ಲಿ ಆಂಗ್ಲ ಪದ್ಧತಿಯ ಬಗ್ಗೆ ಒಲವು ಇಪ್ಪದು ಮತ್ತೊಂದು ಕಾರಣ;
ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಮ್ಮೆ ಅಪ್ಪದು ಮಗದೊಂದು ಕಾರಣ –
– ಹೀಂಗಿರ್ಸ ಹಲವಾರು ಕಾರಣಂಗಳಿಂದಾಗಿ ಊರ ಶಾಲೆಗಳ ಭವಿಷ್ಯ ಎಂತಕ್ಕು ಹೇಳ್ತ ಚಿಂತನೆ ನಮ್ಮ ಹೆರಿಯೋರಲ್ಲಿ ಇಪ್ಪದಪ್ಪು.
ಎಲ್ಲ ಶಾಲೆಗೊಕ್ಕೆ ಬಪ್ಪ ಎಲ್ಲಾ ಚಿಂತೆಗೊ, ಚಿಂತನೆಗೊ ಈ ಶಾಲೆಯೋರಿಂಗೂ ಬಕ್ಕು – ಹೇದವು ದೊಡ್ಡಭಾವ°.

ಇದೆಲ್ಲದರ ಎದುರುಸಿ ಧೈರ್ಯವಾಗಿ ವಿದ್ಯಾದಾನ ಕಾರ್ಯ ಮಾಡಿದ್ದೇ ಆದಲ್ಲಿ – ಶಾಲೆ ಇನ್ನೂ ನೂರಾರು ಒರಿಶ, ಸಾವಿರಾರು ಒರಿಶ ಬೆಳೆತ್ತರಲ್ಲಿ ಸಂಶಯ ಇಲ್ಲೆ.
ಹಾಂಗೆ ಮುಂದುವರುಸಿದರೇ – ಖಂಡಿಗೆ ಅಜ್ಜಂದ್ರ ಆತ್ಮಕ್ಕೆ – ಮೇಗಂದ ನೋಡುವಾಗ – ನೆಮ್ಮದಿ ಸಿಕ್ಕುಗು – ಹೇಳ್ತದು ಬೈಲಿನೋರ ಅಭಿಪ್ರಾಯ.
ಶತಮಾನೋತ್ಸವ ಕಾರ್ಯಕ್ರಮ ಚೆಂದಲ್ಲಿ ನೆಡೆಯಲಿ.
ನಾವೆಲ್ಲೊರುದೇ ಹೋಪೊ°; ಚೆಂದದ ಕಾರ್ಯಕ್ರಮಂಗಳ ಆಸ್ವಾದನೆ ಮಾಡುವೊ°.

ಆಗದೋ?
~
ಒಂದೊಪ್ಪ: ನೂರೊರಿಶದ ಮಹಾ ಸಂಭ್ರಮ ಇನ್ನೂ ಸಾವಿರಾರು ಮಹಾಜನರ ತಯಾರು ಮಾಡಲಿ..
~

ವಿ. ಸೂ: ಶತಮಾನೋತ್ಸವಕ್ಕೆ ಬರೇಕು ಹೇಳಿ ಕೇರಳದ ವಿದ್ಯಾಮಂತ್ರಿಗೆ ಅದರ ಚೇಲಂಗಳ ಮೂಲಕ ಹೇಳಿಕೆ ಕೊಟ್ಟವಾಡ.
“ಮಲೆಯಾಳ ವಿಭಾಗ ಆರಂಭ ಮಾಡ್ತರೆ ಕಳುಸುತ್ತೆಯೊ°” – ಹೇಳಿದವಡ ದರ್ಪಲ್ಲಿ.
“ಬಾರದ್ರೂ ಸಾರ ಇಲ್ಲೆ, ಎಂಗೊ ಮುಂದುವರುಸುತ್ತೆಯೊ°” – ಹೇಳಿಕ್ಕಿ ಬಂದವಾಡ, ಆಡಳ್ತೆ ಸಮಿತಿಯೋರು.
ಆ ಉತ್ತರಕ್ಕೆ, ಅದರ ಹಿಂದಿಪ್ಪ ಕನ್ನಡ ಪ್ರೇಮಕ್ಕೆ ಬೈಲಿನ ಹೆಮ್ಮೆಯ ಅಭಿನಂದನೆಗೊ.

~
ಸೂ:
ಕೆಲವು ಸಂಕೊಲೆಗೊ:

  • ಮಹಾಜನ ಸಂಸ್ಕೃತ ಕಾಲೇಜಿನ ಬ್ಲೋಗು ಬೈಲು, ದೊಡ್ಡಭಾವನ ನಿರ್ವಹಣೆಲಿ: (ಇಲ್ಲಿದ್ದು)
  • ಮಹಾಜನ ಖಂಡಿಗೆ ಶ್ಯಾಮ ಭಟ್ – ಪ್ರಿನ್ಸುಪಾಲ್ ಅಜ್ಜನ ಬಗ್ಗೆ ದೊಡ್ಡಭಾವನ ಶುದ್ದಿ ಲೇಖನ:  (ಇಲ್ಲಿದ್ದು)
  • ಕಾರ್ಯಕ್ರಮದ ನೇರಪ್ರಸಾರದ ಸಂಕೊಲೆ: https://oppanna.com/shuddi/nirchal-mahajana-live
  • ಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದ್ದು..

12 thoughts on “ಮಹಾ ಸಾಧನೆಯ ಮಹಾಜನಕ್ಕೆ ಮಹಾ ಶತಮಾನೋತ್ಸವ..!

  1. ಒಪ್ಪಣ್ಣ ಲೇಖನ ಓದಿ ಖುಷಿ ಆತು.. ೬ ವರ್ಷ ಅಲ್ಲಿ ಕಲ್ತಿದೆ.. ಹಳೆ ವಿಧ್ಯಾರ್ಥಿ ಹೇಳುಲೆ ಹೆಮ್ಮೆ ಆವುತ್ತು.. ನಡು ಅ೦ಗಳಲ್ಲಿ ಉದಿಯಪ್ಪಗ ಪ್ರಾರ್ಥನೆ, ಆಟದ೦ಗಳಲ್ಲಿ ಹೊತ್ತೊಪಗ ಆಟ, ಅದರೆಡೆಲಿ ಮಾವಿನ ಮರಕ್ಕೆ ಕಲ್ಲು ಇಡುಕ್ಕಿ ಮಾವಿನಕಾಯಿ ಬಿಳುಸಿದ್ದು ನೆನಪಾತು.. ಮಾತ್ರ ಅಲ್ಲ ಶನಿವಾರ ಆದಿತ್ಯವಾರ ರಜೆಲಿ ಮನೋಳಿತ್ತಾಯ ಮಾಷ್ಟ್ರು ಸ೦ಗೀತ ಕಲಿಸುಗು..ಬೈಲಿನ ಮಕ್ಕ ಶಾಲೆಲಿ , ಸ೦ಗೀತ ದ ನೆಪಲ್ಲಿ ಲಗೋರಿ ಆಡಿದ್ದೇ ಆಡಿದ್ದು.. ಅ೦ಗಳ ದ ಕರೆಲಿ ನೆಲ್ಲಿ ಮರ ಇದ್ದತ್ತು.. ಕಲ್ಲು ಇಡುಕ್ಕಿ ನೆಲ್ಲಿ ಕಾಯಿ ಕೌದು ತಿ೦ದದೂ ನೆನಪಾತು ಒಪ್ಪಣ್ಣ… ಶಾಲೆ ಜಗುಲಿಲಿ ಬೈಲಿನ ಮಕ್ಕ ಕಲ್ಲಾಟವು ಆಡಿದ್ದೇ ಆಡಿದ್ದು ಸವಿ ನೆನಪು….
    ಪಾಂಡ್ಳು ಮಾಷ್ಟ್ರು, ಶ೦ಭಟ್ಟ ಮಾಶ್ಟ್ರು , ಶಂಕರಿ ಟೀಚರು, ದೇವಸ್ಯ ಮಾಬಲ ಮಾಷ್ಟ್ರು, ತೆ೦ಕಮನೆ ಹಿ೦ದಿ ಪ೦ಡಿತರು ಎಲ್ಲರ ನೆನಪಾತು ಒಪ್ಪಣ್ಣ…..ವ೦ದನೆಗೊ..ಶೋಭಕ್ಕ

  2. ಹರೇರಾಮ, ಉತ್ಸವಕ್ಕೆ ಹೋಗಿ ಬಂದೆ. ಹಳೆ ವಿದ್ಯಾರ್ಥಿಗೊಕ್ಕೆ ಮೀಸಲಿಟ್ಟ ಸ್ಪರ್ಧೆಲಿ ಎನಗೂ ಎರಡು{ಜಾನಪದ ಪ್ರಥಮ, ದೇವರನಾಮ ದ್ವಿತೀಯ}ಬಹುಮಾನ ಬಂತು. ಶಾಲಗೆ ಹೋಗೆಂಡಿಪ್ಪಾಗ ವೇದಿಕಗೆ ಹತ್ತಿಗೊಂಡಿದ್ದದು ನೆಂಪಾತು. ಮತ್ತೊಂದರಿ ವಿದ್ಯಮ್ಮನ ಸೆರಗಿನೊಳಂಗೆ ಹೊಕ್ಕು ಹೆರಟ ಅನುಭವವಾಗಿ ಪುಳಕಿತಗೊಂಡೆ.

  3. ಒಂದು ವಿದ್ಯಾ ಸಂಸ್ಥೆ ಶತಮಾನೋತ್ಸವ ಆಚರುಸುತ್ತಾ ಇದ್ದು ಹೇಳಿರೆ ನಿಜವಾಗಿಯೂ ಹೆಮ್ಮೆಯ ವಿಷಯವೇ ಸರಿ.
    ಈ ಸಂದರ್ಭಲ್ಲಿ ಶಾಲೆಯ ಉಗಮ, ಬೆಳವಣಿಗೆ, ಚರಿತ್ರೆ ಬಗ್ಗೆ ಒಪ್ಪಣ್ಣನ ಲೇಖನ ಹಲವಾರು ವಿವರಂಗಳ ಒದಗಿಸಿತ್ತು.
    ಆನು ಈ ಶಾಲೆಯ ವಿದ್ಯಾರ್ಥಿ ಅಲ್ಲದ್ದರೂ, ಶಾಲೆಯ ಬಗ್ಗೆ ಅಭಿಮಾನ ಇಪ್ಪಲೆ ಒಂದು ಕಾರಣ ಎನ್ನ ಸೋದರ ಮಾವ ಹೈಸ್ಕೂಲಿಲ್ಲಿ ಮಾಷ್ಟ್ರು ಆಗಿ ಸೇರಿ ಅಲ್ಲಿಯೆ ನಿವೃತ್ತಿ ಹೊಂದಿದವು. ಇನ್ನೊಂದು ಕಾರಣ ಯಾವದೇ ಒತ್ತಡಕ್ಕೆ ಮಣಿಯದ್ದೆ ಮಲೆಯಾಳಕ್ಕೆ ಮಣೆ ಹಾಕದ್ದೆ ಇಪ್ಪದು.
    ಗಡಿನಾಡು ಕಾಸರಗೋಡಿಲ್ಲಿ ಮಲೆಯಾಳದ ಆರ್ಭಟವ ಎದುರಿಸಿ ಎದೆ ಒಡ್ಡಿ ನಿಲ್ಲೆಕ್ಕಾದರೆ ಎಂಟೆದೆ ಧೈರ್ಯ ಬೇಕು.
    ಶಾಲೆಯ ಆಡಳಿತ ಮಂಡಳಿ “ಮಲಯಾಳ ಸುರು ಮಾಡ್ತಿಲ್ಲೆ” ಹೇಳಿ ನಿರ್ಧಾರ ತೆಕ್ಕೊಂಡು ಅದರ ತೋರಿಸಿ ಕೊಟ್ಟವು.
    ಶಾಲೆ ಇನ್ನೂ ನೂರ್ಕಾಲ ಬಾಳಲಿ, ಹಲವಾರು ಮಹಾಜನರ ಸಮಾಜಕ್ಕೆ ಕೊಡಲಿ ಹೇಳುವ ಹಾರೈಕೆ.

  4. ಎಂಗಳ ಶಾಲೆಯ ಬಗೆಲಿ ಒಪ್ಪಣ್ಣನ ಪ್ರೀತಿಪೂರ್ವಕ ಸಕಾಲಿಕ ಶುದ್ದಿ ನೋಡಿ ಹೃದಯ ತುಂಬಿ ಬಂತು. ಕಾರ್ಯಕ್ರಮಕ್ಕೆ ಹೋಪಲೇ ಬೇಕು ಹೇಳಿ ಗ್ರೇಶಿಂಡಿದ್ದಿದ್ದೆ. ದೊಡ್ಡಬಾವನ ಹತ್ರೆ ಹೇಳಿಯೂ ಇತ್ತಿದ್ದೆ. ಕಾರ್ಯಕ್ರಮದ ಸಮೆಲಿ ಆನು ಬೆಂಗಳೂರಿಂಗೆ ಹೋಯೆಕಾಗಿ ಬಂತು. ಎನಗೆ ಎಲ್ಲವೂ ತಪ್ಪಿ ಹೋತಾನೆ. ಕಾರ್ಯಕ್ರಮ ಚೆಂದಕೆ ಕಳುದತ್ತು ಹೇಳಿ ಕೇಳಿ ಕೊಶಿ ಆತು.

  5. Hareraama, oppannana suddi sakaalika E shaaleya poorva vidyaarthini anu helle anagoo santoshaavuttu. haange mattondu putta santosha iddida hale vidyaarthigokke nedeshida jaanapada geetheli anage pratama bahumaana baindu hedu shuddi helidavu . adara thekkambale indu hoyikku. innu matte kaambo aagado?

  6. ಕನ್ನಡಾಭಿಮಾನಕ್ಕೆ ಒಂದು ಒಪ್ಪ..ಸಾಂಧರ್ಭಿಕ ಲೇಖನಕ್ಕೆ ಇನ್ನೊಂದು..ಶುಭ ಹಾರೈಕೆಗಳು..ಕಾರ್ಯಕ್ರಮ ಬೈಲಿನೊರುದೆ ಸೇರಿ ಯಶವ ಪಡೆಯಲಿ..

  7. ಆನು ಇಲ್ಲಿಯ ಹಳೆ ವಿದ್ಯಾರ್ಥಿ ಅಲ್ಲ. ಆದರೂ ಎನಗೆ ಈ ಶಾಲೆಯ ಬಗ್ಗೆ ತುಂಬ ಅಭಿಮಾನ ಇದ್ದು. ಎನ್ನ ಅಪ್ಪ ಇದೇ ಶಾಲೆಲಿ ಬಿ ವಿದ್ವಾನ್ ಪರೀಕ್ಷೆ ಪಾಸು ಮಾಡಿದ್ದು.(ಕಯ್ಯಾರ ಕಿಂಞಣ್ಣ ರೈಗಳ ಕ್ಲಾಸುಮೇಟು.) ಎನ್ನ ಯೆಜಮಾಂತಿಯೂ ಇಲ್ಲಿಂದಲೇ ಕಲ್ತದು.ಮಹಾಜನ ಶಾಲೆಯ ಹೆಸರು ಹೇಳ್ವಗ ಏನೋ ಒಂದು ನಮ್ಮತನದ ಭಾವನೆ ನಮ್ಮ ಅರಿವಿಲ್ಲದ್ದೆ ಮೂಡುತ್ತು.ಈ ಶಾಲೆ ಮುಂದೆಯೂ ಬೆಳೆಯಲಿ. ಕನ್ನಡವ ಆ ಪರಿಸರಲ್ಲಿ ಬೆಳಶಲಿ

  8. ನಮ್ಮ ಶಾಲೆಯ ಬಗ್ಗೆ ಗೌರವ, ಅಭಿಮಾನ, ಆದರಗಳ ವರ್ಧಿಸುವ ಬರವಣಿಗೆ!
    ತುಂಬ ಸಂತೋಷ ಆತು.
    ಮಹಾಜನ ಶಾಲೆಗೆ ಮಹೋನ್ನತ ಕೀರ್ತಿಯೂ ಯಶಸ್ಸೂ ಬರಳಿ.

  9. ಸ್ವಾರಸ್ಯವೂ ಸೋಜಿಗವೂ ಸತ್ಯವೂ ಸಾಂದರ್ಭಿಕವೂ ಆಗಿ ಬಂದ ಈ ಶುದ್ದಿಗೊಂದು ಒಪ್ಪ.

    ಬೈಲ ಈ ಶಾಲೆ ಶತಮಾನೋತ್ಸವವ ಸಂತೋಷಲ್ಲಿ ಆಚರುಸುವದು ಹೆಮ್ಮೆಯ ಸಂಗತಿ. ಶಾಲಗೆ ಇನ್ನಷ್ಟು ಕೀರ್ತಿ ಸಿಕ್ಕಲಿ. ಅದೆಷ್ಟೋ ಮಂದಿಗಳ ಸುಸಂಸ್ಕೃತರನ್ನಾಗಿಸಿದ ಈ ಶಾಲಗೆ ಊರ ಪರವೂರ ಮಹನೀಯರ ಪ್ರೋತ್ಸಾಹ ಎಂದಿಂಗೂ ಇರಳಿ. ಬೈಲ ಹೆಮ್ಮೆಯ ವಿದ್ಯಾದೇಗುಲ ಇದಾಗಿ ಸದಾ ಉಳಿಯಲಿ ಹೇಳ್ವದೀಗ ಸದಾಶಯ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×