Oppanna.com

ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ…

ಬರದೋರು :   ಒಪ್ಪಣ್ಣ    on   13/01/2017    2 ಒಪ್ಪಂಗೊ

ಭೂಮಿಯ ಸುತ್ತ ಆಕಾಶದ ಅವಕಾಶ ಇದ್ದು. ಪೂರ್ಣ ವೃತ್ತಲ್ಲಿ. ಆ ಮುನ್ನೂರ ಅರುವತ್ತು ಡಿಗ್ರಿಯ ಅವಕಾಶವ ನಮ್ಮ ಅಜ್ಜಂದ್ರು ಹನ್ನೆರಡು ವಿಭಾಗ ಮಾಡಿದ್ದವು. ಅವುಗಳ ’ರಾಶಿ’ ಹೇದು ಗುರುತಿಸಿದ್ದವು.
ಭೂಮಿಯ ಚಲನೆಂದಾಗಿ ಈ ಮುನ್ನೂರ ಅರುವತ್ತು ಡಿಗ್ರಿಲಿ ಇಪ್ಪ ಆಕಾಶಕಾಯಂಗೊ ಚಲಿಸಿದ ಹಾಂಗೆ ಕಾಂಬಲಿದ್ದು ನಮ್ಮ ಕಣ್ಣಿಂಗೆ. ಈ ಚಲನೆಯನ್ನೂ ನಿಖರವಾಗಿ ಗುರ್ತ ಹಾಕಲೆ ಬೇಕಾಗಿಯೇ ಆಕಾಶಲ್ಲಿ ವಿಭಾಗ ಮಾಡಿಗೊಮ್ಡಿದವು.
ಹನ್ನೆರಡು ರಾಶಿಗಳಲ್ಲಿ ಸೂರ್ಯನ ಚಲನೆಯ ಗುರುತ ಮಾಡುವ ವಿಧಾನ ಸೌರಮಾನ ಕಾಲಗಣನಾ ಪದ್ಧತಿ.

ಬಾನಲ್ಲಿ ಸೂರ್ಯದೇವರು ಒಂದು ರಾಶಿಂದ ಇನ್ನೊಂದು ರಾಶಿಗೆ ಕಾಲು ಮಡಗುತ್ತ ಪರ್ವವ ಸಂಕ್ರಾಂತಿ ಹೇಳುದು. ನಮ್ಮ ಅಜ್ಜಿಯಕ್ಕೊ ಇದರ ಶೆಂಕ್ರಾಂತಿ – ಹೇಳಿಯೂ ಹೇಳಿಗೊಂಡು ಇತ್ತಿದ್ದವು.
ಆಯಾ ರಾಶಿಯ ಹೆಸರು ಸೇರ್ಸಿ ಶೆಂಕ್ರಾಂತಿ ಹೇದು ಗುರ್ತ ಮಾಡುಸ್ಸು ಕ್ರಮ. ಹಾಂಗಾಗಿ, ಧನು ರಾಶಿಂದ ಮಕರ ರಾಶಿಗೆ ಕಾಲು ಮಡಗುತ್ತ ದಿನವ – ಮಕರ ಸಂಕ್ರಾಂತಿ – ಹೇಳ್ತ ಕ್ರಮ.
~
ಭಾರತ ಹೇದರೆ ಬಹುವಿಧದ ಜೀವನ ಶೈಲಿ, ಬಹು ವಿಧದ ಭಾಶಾ ಸೊಬಗು, ಬಹು ವಿಧದ ಹಬ್ಬದ ಪದ್ಧತಿಗೊ ನೆಡದು ಬಂದ ದೇಶ. ಆ ಜೀವನ ಶೈಲಿಗೆ ಹಿಂದೂ ಸನಾತನ ಧರ್ಮ – ಹೇಳ್ತದು ಕ್ರಮ.
ಇದರ ಬೇರುದೇ ವಿಶಾಲ, ವೃಕ್ಷದ ಗೆಲ್ಲುಗಳೂ ವಿಶಾಲ. ಇದರ ವೈಶಾಲ್ಯ ಎಷ್ಟು ಹೇಳಿ ಗೊಂತಾಯೆಕ್ಕಾರೆ – ಯೇವದಾರು ಹಬ್ಬ ಬರೆಕ್ಕು.
ಅದರಲಿ ಒಂದು – ಈ ಮಕರ ಶೆಂಕ್ರಾಂತಿ.
~
ನಮ್ಮ ಊರಿಲಿ ಅಯ್ಯಪ್ಪ ವ್ರತಧಾರಿಗೊ ಇದ್ದವಲ್ದೋ; ಅವರ ಭಾವನೆಗಳಿಂದಾಗಿ ಈ ಮಕರ ಶೆಂಕ್ರಾಂತಿ ಹೇಳುಸ್ಸು ತುಂಬ ಪ್ರಾಮ್ಖ್ಯ ಆಯಿದು.
ಅಯ್ಯಪ್ಪಮಾಲೆ ಹಾಕಿ ನಲುವತ್ತೆಂಟು ದಿನ ವ್ರತ ಮಾಡಿ, ಮಕರ ಶೆಂಕ್ರಾಂತಿಯ ಜ್ಯೋತಿಯ ದಿನ ಶಬರಿ ಮಲೆಗೆ ಹೋಪ ಕ್ರಮ ನಮ್ಮ ನೆರೆಕರೆಲಿ ಕಾಣ್ತು. ಹಾಂಗಾರೆ ಮಕರ ಶೆಂಕ್ರಾಂತಿಯ ದಿನ ಎಂತ ಇದ್ದು ಅಲ್ಲಿ?
ಎಲ್ಲ ಶೆಂಕ್ರಾಂತಿಯ ದಿನವೂ ಶಬರಿ ಮಲೆಲಿ ವಿಶೇಶ ಆದರೂ – ಮಕರ ಶೆಂಕ್ರಾಂತಿಯ ದಿನ ’ಅಯ್ಯಪ್ಪ ಜ್ಯೋತಿ’ ಕಾಂಬ ಗವುಜಿ.
ಈ ಪುಣ್ಯ ಪರ್ವವ ಕಾಂಬಲೆ ವ್ರತಧಾರಿಗೊ ಹೋಪದು ನವಗೆ ಗೊಂತಿದ್ದು.
~
ಇನ್ನು ಘಟ್ಟದ ಮೇಗೆ ಬಂದರೆ, ಬೆಂಗ್ಳೂರು ಮೈಸೂರು ಆಸುಪಾಸಿಲಿ ಈ’ಸಂಕ್ರಾಂತಿ’ ಹಬ್ಬವ ಗವುಜಿಲಿ ಆಚರಣೆ ಮಾಡ್ತವು. ದನಗಳ, ಗಾಡಿಯ ಪೂಜೆ ಮಾಡುವ ಸಂದರ್ಭ ಇದು. ಹಾಲಿನ ಭಕ್ಷ್ಯಂಗೊ, ಬೆಳಿ ಎಳ್ಳು, ನೆಲಕಡ್ಳೆ, ಹುರಿಕಡ್ಳೆ, ಬೆಲ್ಲ ಶೆಕ್ಕರೆ – ಇತ್ಯಾದಿಗಳ ಮಿಶ್ರಣ ಮಾಡಿ, ಅದರೊಟ್ಟಿಂಗೆ ಕಬ್ಬು ಕಾಜಿ ಬಾಳೆಹಣ್ಣು ಇತ್ಯಾದಿ ಸುವಸ್ತುಗಳ ಮಡಗಿ ಪರಸ್ಪರ ಮನೆಗೊಕ್ಕೆ ಕೊಟ್ಟು ಶುಭ ಹಾರೈಸುದು ಕಾಣ್ತು.
~
ತೆಲುಗು ರಾಜ್ಯಂಗಳಲ್ಲಿ ಇದರ ಭೋಗಿ – ಹೇಳ್ತ ಹೆಸರಿಲಿಯೂ ಆಚರಣೆ ಮಾಡ್ತವು. ಶೆಂಕ್ರಾಂತಿ, ಭೋಗಿ – ದಿನ ಮರದಿನ ಆಗಿ ಗೌಜಿ ಮಾಡ್ತವು. ಹೆಮ್ಮಕ್ಕೊ ಎಲ್ಲೋರುದೇ ಸೇರಿ ಜಾನಪದವಾಗಿ ಬಂದ ಪದ್ಯಂಗಳ ಹೇಳಿಗೊಂಡು, ಜಾನಪದವಾಗಿ ನೃತ್ಯವ ಮಾಡ್ತ ಗೌಜಿ. ವಿಶೇಶ ಭಕ್ಶ್ಯ ಪರಮಾನ್ನಂಗಳ ಮಾಡಿ ಎಲ್ಲೋರುದೇ ಸೇರಿ ಗೌಜಿ ಮಾಡ್ತ ಕೊಶಿ. ಎಳ್ಳಿನ ವಿಶೇಷ ಖಾದ್ಯಂಗೊ, ಪಾನಕ ಪನಿವಾರಂಗೊ ಈ ದಿನದ ವಿಶೇಷ.
~
ತೆಮುಳುನಾಡು ಹೊಡೆಂಗೆ ಹೋದರೆ ಇದೇ ಹಬ್ಬವ ’ಪೊಂಗಲ್’ – ಹೇದು ಗುರುತುಸುತ್ತವು. ಎತ್ತುಗಳ ಪೂಜೆ ಮಾಡಿ, ಯುವ ಹೋರಿಗಳ ಹಿಡುದು ನಿಲ್ಲುಸಿ ಅವುಗಳ ಪಳಗುಸುವ ಜಲ್ಲಿಕಟ್ಟು – ಹೇಳ್ತ ಆಟವೂ ಇದೇ ಸಂದರ್ಭಲ್ಲಿ ನೆಡೆತ್ತು. ಈಗ ಸರ್ವೋಚ್ಚ ನ್ಯಾಯಾಲಯ ಇದಕ್ಕೆ ತಡೆ ಕೊಟ್ಟ ಕಾರಣ ವಿಷೇಷವಾಗಿ ಈ ಸಂಗತಿ ದೇಶದ ಗಮನ ಎಳೆತ್ತಾ ಇದ್ದು.
~
ಇದೆಲ್ಲ ದಕ್ಷಿಣ ಭಾರತದ ಕತೆ ಆತು. ಇನ್ನು ಪೂರ್ವದ ಹೊಡೆಂಗೆ ಹೋದರೆ ಒಡಿಶಾಲ್ಲಿ ಮಕರ ಚವುಲ – ಹೇದು ಆಚರಣೆ ಮಾಡ್ತವಾಡ. ಹೊಸ ಅಕ್ಕಿ ಊಟ, ಹಾಲಿನ ಉತ್ಪನ್ನಂಗಳಾದ ರಸಗುಲ್ಲ ಇತ್ಯಾದಿಗಳ ಆ ದಿನ ವಿಷೇಷವಾಗಿ ಮಾಡ್ತವಾಡ.

ಬಂಗಾಳದ ಹೊಡೆಲಿ ಇದರ ಶಕರೈನ್ ಅಥವಾ ಪೌಷ ಸಂಕ್ರಾಂತಿ ಹೇದು ಹೇಳ್ತವಾಡ. ಯೇವತ್ತೂ ಮಾಡ್ತ ಮೀನುಕರಿ ಅಲ್ಲದ್ದೆ ಹಾಲು ಪರಮಾನ್ನ, ಬೆಂಗಾಳಿ ಗವುಜಿ ಊಟಂಗೊ ಇತ್ಯಾದಿ ಆ ದಿನದ ವಿಶೇಷ.

ಬಂಗಾಳಂದ ಇನ್ನೂ ಪೂರ್ವಕ್ಕೆ ಹೋದರೆ, ಈಶಾನ್ಯ ಭಾರತದ ಆಸ್ಸಾಮಿಲಿ ಇದರ ಬಿಹು / ಭೋಗಲಿ ಬಿಹು ಹೇದು ಆಚರಣೆ ಮಾಡ್ತವಾಡ.

ಉತ್ತರ ಭಾರತದ ಬಿಹಾರದ ಹೊಡೆಲಿ ಇದರ ಖಿಚುಡೀ – ಹೇದು ಆಚರಣೆ ಮಾಡ್ತವಾಡ. ತೆಮುಳುನಾಡಿನ ಪೊಂಗಲ್ ನ ಹಾಂಗೇ ಉತ್ತರ ಭಾರತದ ಖಿಚ್ಡೀ – ಹೇದರೆ ಅಕ್ಕಿಂದ ಮಾಡ್ತ ಒಂದು ಖಾದ್ಯ.

ಬಿಹಾರದ ಹತ್ರಾಣ ಜಾರ್ಖಂಡಲ್ಲಿ, ಹೇದರೆ ಮೊದಲಾಣ ಮೈಥಿಲೀ ದೇಶಲ್ಲಿ ಇದರ ತಿಲ ಸಂಕ್ರಾಂತ್ ಹೇಳ್ತವಾಡ. ನಮ್ಮ ಊರಿನ ಎಳ್ಳುಂಡೆಯ ಹಾಂಗಿರ್ತ ಒಂದು ಖಾದ್ಯ, ಎಳ್ಳು ಹಾಕಿದ ಒಂದು ಬೆಲ್ಲದ ಪಾಕವ ಮಾಡ್ತವಾಡ.

ಅಲ್ಲೇ ಹೆರದಿಕ್ಕೆ, ಮೊದಲು ನಮ್ಮ ಭಾರತದ ಭಾಗವೇ ಆಗಿದ್ದ ನೇಪಾಳಲ್ಲಿ ಮಘೇ ಸಂಕ್ರಾಂತಿ ಅಥವಾ ತಿಲ ಸಂಕ್ರಾಂತ್ – ಹೇದು ಆಚರಣೆ ಮಾಡ್ತವಾಡ. ನೇಪಾಳ ಹೇದರೆ ನಮ್ಮ ಸಂಸ್ಕಾರವೇ ಅಪ್ಪೋ.

ಹರಿಯಾಣ, ಹಿಮಾಚಲ, ಹಿಮಾಲಯ, ಪಂಜಾಬಿಲಿ ಇದರ ಮಾಘಿ – ಹೇದು ಆಚರಣೆ ಮಾಡ್ತವಾಡ.

ಉತ್ತರದ ಕೊಡಿಯ ಕಾಶ್ಮೀರದ ಕಣಿವೆಗೆ ಹೋದರೆ ಅಲ್ಲಿ ಶಿಶಿರ ಸಂಕ್ರಾಂತಿ – ಹೇದು ಹಬ್ಬ ಮಾಡ್ತವು.

ಪಶ್ಚಿಮಕ್ಕೆ ಬಂದರೆ, ಗುಜರಾತಿಲಿ ಇದರ ಉತ್ತರಾಯಣ್ – ಹೇದು ವಿಶೇಷವಾಗಿ ಗುರುತುಸುತ್ತವಾಡ. ಹೇದರೆ, ಬಾನಲ್ಲಿ ಸೂರ್ಯಚಾಮಿ ಇನ್ನು ಉತ್ತರದ ಹೊಡೆಂಗೆ ಹೋಪಲೆ ಸುರು ಮಾಡ್ತದು ಹೇದು; ಇದೊಂದು ಪುಣ್ಯ ಪರ್ವ ಕಾಲ ಹೇದು ಆಚರಣೆ.

ಅಲ್ಲಿಂದಲೂ ಪಶ್ಚಿಮಕ್ಕೆ ಹೋದರೆ, ಈಗಾಣ ಪಾಕಿಸ್ತಾನದ ಸಿಂಧೂ ಪ್ರಾಂತ್ಯಲ್ಲಿ ತಿರ್ಮೂರಿ – ಹೇದು ಆಚರಣೆ ಮಾಡ್ತವಾಡ.

ಇಷ್ಟೇ ಅಲ್ಲ, ಇನ್ನೂ ಹಲವು ದಿಕ್ಕೆ ಹಲವು ಹೆಸರಿಲಿ ಹಬ್ಬದ ಗವುಜಿ ಮಾಡ್ತವು ಹೇದು ರೆಜಾ ಅಧ್ಯಯನ ಮಾಡಿರೆ ತಿಳುದು ಬತ್ತು.
~
ಒಂದೇ ದಿನವ, ಒಂದೇ ಹಬ್ಬವ ಹಲವು ಹೆಸರಿಲಿ ಭಾರತದಾದ್ಯಂತ ಆಚರಣೆ ಮಾಡುವ ವೈವಿಧ್ಯ ಈ ಮಕರ ಶೆಂಕ್ರಾಂತಿಯ ಒಂದು ವೈಶಿಷ್ಠ್ಯ.
~
ಒಂದೊಪ್ಪ: ದಿನ ಒಂದೇ, ಹಬ್ಬ ಒಂದೇ, ಸೂರ್ಯನೂ ಒಂದೇ, ಭೂಮಿಯೂ ಒಂದೇ. ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಹೇಳ್ತ ಮಾತಿನ ಪ್ರಾರೂಪ ಈ ಶೆಂಕ್ರಾಂತಿ. ಅಲ್ದೋ!

2 thoughts on “ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ…

  1. ಮಕರ ಸಂಕ್ರಾಂತಿ ಬಗೆಲಿ ಒಳ್ಳೆ ಶುದ್ದಿ. ವೈವಿಧ್ಯತೆಲಿಯುದೆ ಏಕತೆ. ಲಾಯಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×