ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

May 18, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮನ್ನೆ ಸೂರಂಬೈಲು ಡೈರಿಗೆ ಹೋಪಗ ಹಿಳ್ಳೆಮನೆ ಸತ್ಯಮಾವ ಸಿಕ್ಕಿ ಮಾತಾಡುಸಿದವು.
“ಯೇ ಒಪ್ಪಣ್ಣ, ಬೆಂಗುಳೂರಿಂದ ನಾಕು ಜೆನ ಬಂದು ನಾಳ್ತಿಂಗೆ ತರಬೇತಿ ಶಿಬಿರ ನೆಡೆಶುತ್ತವು; ಮಕ್ಕೊಗೆ ಕಲಿಯುವಿಕೆಯ ಬಗ್ಗೆ; ನಾಳ್ತು ಶೆನಿವಾರ ಆಯಿತ್ಯವಾರ ಮುಜುಂಗರೆಗೆ ಬಾ,ಶಾಲೆ ಮಕ್ಕಳೊಟ್ಟಿಂಗೆ ನಿನಗೂ ಕೂದುಗೊಂಬಲಕ್ಕು” – ಅಂಬೆರ್ಪಿಲಿ ಹೇಳಿಕ್ಕಿ ಹೆರಟವು.
ಅವಕ್ಕೆ ಯೇವತ್ತೂ ಅಂಬೆರ್ಪೇ; ಗೆಡ್ಡ ತೆಗವಲೂ ಪುರ್ಸೊತ್ತಿಲ್ಲೆ – ಹೇದು ಅತ್ತೆ ಪರಂಚಲಿದ್ದು ಒಂದೊಂದರಿ. 😉
ಅದಿರಳಿ.

ಹಾಂಗೆ ಮನ್ನೆ ಮುಜುಂಗರೆಗೆ ಹೋಗಿತ್ತಿದ್ದೆ.
ಬೈಲಿನ ಎಲ್ಲ ಮಕ್ಕಳುದೇ ಹೋಯೇಕಾದ ಚೆಂದದ ಕಾರ್ಯಕ್ರಮ ಅದು.
ಕಲ್ತಾದಮತ್ತೆ ಬರೇ ಇಂಜಿನಿಯರು ಮಾಂತ್ರ ಅಲ್ಲ, ಬೇರೆಯುದೇ ಜೀವನ ಇದ್ದು ಹೇದು ತಿಳುಶುತ್ತ ಕಾರ್ಯವ ಚೆಂದಲ್ಲಿ ಮಾಡಿಗೊಂಡಿದ್ದವು.
ಕೊಡೆಯಾಲ-ಸಾಗರ ಹೋಬಳಿಯ, ಬೆಂಗುಳೂರಿಲಿರ್ತ ಕೆಲವು ತುಂಡುಜವ್ವನಿಗರು ಕಾರ್ಯಕ್ರಮಕ್ಕೆ ಬಂದಿತ್ತವು; ಎಲ್ಲ ಕಾರ್ಯಕರ್ತರೂ ಒರ್ಮೆಯಿಶಿಗೊಂಡು ಚೆಂದಲ್ಲಿ ಹೋಪಲೆ ಗುರುಗಳ ಪ್ರೇರಣೆಯೇ ಕಾರಣ!
~
ಎರಡು ದಿನದ ಕಾರ್ಯಕ್ರಮಕ್ಕೆ ಬೆಂಗುಳೂರಿಂದ ಬಂದೋರ ವಸತಿ ಇದ್ದದು ಎಡಪ್ಪಾಡಿಭಾವನ ಮನೇಲಿ! ಶೆನಿವಾರದ ಕಾರ್ಯಕ್ರಮ ಮುಗುದಪ್ಪದ್ದೇ ಎಲ್ಲೋರುದೇ ಹೆರಟು ನಿಂದವು, ಎಡಪ್ಪಾಡಿಮನೆಗೆ.
ಹೋಪದು ಹೇಂಗೆ – ವಾಹನಲ್ಲಿಯೋ? ಚೆ, ಬೇಡಪ್ಪ; ಇಲ್ಲಿಂದ ಓ ಅಲ್ಲಿಗೆ – ಒಂದು ವಾಕಿಂಗು ಅಕ್ಕು, ನೆಡವೊ° – ಹೇಳಿದವು ಬಂದೋರ ಪೈಕಿ ನೆಡುಪ್ರಾಯದ ಮಾವ. ಹಾಂಗೆ ನೆಡಕ್ಕೊಂಡೇ ಹೋಪದು ಹೇದು ನಿಘಂಟು ಮಾಡಿತ್ತು.
ನವಗುದೇ ಬೈಲಿಂಗೆ ನೆಡಕ್ಕೊಂಡು ಹೋವುತ್ತ ದಾರಿ, ಹಾಂಗಾಗಿ ಒಟ್ಟಿಂಗೇ ನೆಡವಲೆ ಸುರು ಆತು. ಬೆಳ್ಳಿಪ್ಪಾಡಿಅಪ್ಪಚ್ಚಿ, ದೊಡ್ಡೇರಿ ದೊಡ್ಡಪ್ಪ, ದೊಡ್ಡಮ್ಮ – ಎಲ್ಲೋರುದೇ ಇದ್ದ ಕಾರಣ ಮಾತಾಡಿಂಡು ಹೋಪಲೆ ಸಂಗಾತಕ್ಕೆ ಆತು.
ಮುಜುಂಗಾವಿಂದ ಸೂರಂಬೈಲು ಮಾರ್ಗಕ್ಕೆ ಸೇರಿ, ಅಲ್ಲಿಂದ ಹೊಸಮಣ್ಣಿನ ತಿರ್ಗಾಸು ಇಳುದು, ಶಡ್ರಂಪಾಡಿ ದೇವಸ್ಥಾನದ ಎದುರೆ ಕಣಿ ಹಾರಿ, ಮರಿಮನೆ ತೋಟಲ್ಲೆ ಗುಡ್ಡೆ ಹತ್ತಿ ಎಡಪ್ಪಾಡಿ ಕುಂಞಿಮಾವನ ಮನೆ ಕರೆಲಿ ಬಂದರೆ ಸಿಕ್ಕುದೇ ಎಡಪ್ಪಾಡಿಭಾವನ ಜಾಲು!

ಅಲ್ಲಿಂದಲೇ ತಿರುಗುತ್ತೆ ಗ್ರೇಶಿರೂ, ಒಂದು ಆಸರಿಂಗೆ ಕುಡುದು ಹೋಪಲಕ್ಕೂದು ಎಡಪ್ಪಾಡಿ ಭಾವ ಹೇಳಿದ ಕಾರಣ ಕೈಕ್ಕಾಲು ತೊಳದು ಒಳ ಹತ್ತಿತ್ತು.
ಬನ್ನಿ ಬನ್ನಿ – ಹೇದು ಎಲ್ಲೋರನ್ನೂ ಕೂರ್ಸಿ ಆಸರಿಂಗೆ ಎತ್ತುಸಿ ಎಡಪ್ಪಾಡಿಬಾವ ರಪಕ್ಕನೆ ಮಾಯ!
ಚಾಯ ಬಪ್ಪಗಳೂ ಭಾವನ ಪತ್ತೆ ಇಲ್ಲೆ; ಸುಮಾರು ಹೊತ್ತು ಕಳುದು -ಚಾಯ ತಣಿವಲಪ್ಪಗ- ಪ್ರತ್ಯಕ್ಷ.
ಚಾಯ ಕುಡುದಪ್ಪದ್ದೇ, ಈಗ ಬತ್ತೆ – ಹೇದು ಪುನಾ ಒಂದರಿ ಮಾಯ!
ಹೊತ್ತು ಕಂತಿ ಇರುಳಿರುಳಾಗಿಂಡು ಬಪ್ಪಗ ಒಂದರಿ ಆಂಜಿದ ಹಾಂಗೆ ಕಂಡತ್ತು. “ಬಾವಾ, ಇನ್ನು ಮೆಲ್ಲಂಗೆ…” ಹೇಳಿದೆ.
ಇರುಳಿಂಗೆ ಹೇಂಗೂ ಗಮ್ಮತ್ತಿದ್ದು, ಇನ್ನು ಉಂಡಿಕ್ಕಿ ಹೋಪಲಾಗದೋ – ಎಡಪ್ಪಾಡಿಭಾವನ ಅಭಿಪ್ರಾಯ ಆತು.
ಎಡಪ್ಪಾಡಿಭಾವನ ಅಭಿಪ್ರಾಯವೇ ನಮ್ಮ ಅಭಿಪ್ರಾಯವು. 😉

ನಾವು ಬಂದೋರ ಒಟ್ಟಿಂಗೆ ಬೊಬ್ಬೆ, ನೆಗೆ ಗೌಜಿ, ಗಲಾಟೆ ಮಾಡಿ ಮಾತಾಡ್ಸೆಂಡಿದ್ದತ್ತು.
ಬಾವಯ್ಯ° ಪುನಾ ಮಾಯ! ಇರುಳು ಊಟದ ಹೊತ್ತಪ್ಪಗ ಒಂದರಿಯಾಣ ಕೆಲಸ ಮುಗುಶಿಯೇ ಬಂದದು.
ಇರುಳು ಪಾಚದ ಊಟವ ಎಲ್ಲೋರುದೇ ಉಂಡಿಕ್ಕಿ, ಚೆಂದಲ್ಲಿ ಎದ್ದವು. ಕೈ ತೊಳದಪ್ಪದ್ದೇ, “ಇನ್ನಾದರೂ ಹೆರಡದ್ರೆ ಆಗ” ಹೇದು ಸೀತ ಮನಗೆ ಹೆರಟತ್ತು ಎಡಪ್ಪಾಡಿಬಾವನಲ್ಲಿಂದ.
ಊಟೋಪಚಾರ ಗವುಜಿ ಇದ್ದತ್ತು, ಏ…ವ್!!
ಮರದಿನ ಒಪಾಸು ಕೊಡ್ತ ಲೆಕ್ಕಲ್ಲಿ – ಮೂರುಬೆಟ್ರಿ ಲೈಟು ತೆಕ್ಕೊಂಡು ಹೆರಟದು.
~

ಎಡಪ್ಪಾಡಿಬಾವನ ಕಾಂಬದು ಹೇದರೆ – ಗುರುಗಳ ಕಾಂಬದು ಹೇಳಿದ ಹಾಂಗೇ – ಅಪುರೂಪದ ವಿಶಯವೇ ಈಗೀಗ.
ಒಂದು ದಿನ ಬೆಂಗುಳೂರು, ಮರದಿನ ಊರು. ಮತ್ತಾಣ ದಿನ ಸಾಗರ, ಮರದಿನ ಊರು. ಇನ್ನಾಣ ದಿನ ಬೆಂಗುಳೂರು, ಮರದಿನ ಊರು – ಇಡೀ ಗೋಕರ್ಣಮಂಡಲವೇ ಆಚಮನೆ ಎಡಪ್ಪಾಡಿ ಬಾವಂಗೆ.
ಅಪುರೂಪಲ್ಲಿ ಇಂದು ಮನೆಲಿದ್ದನೋ – ಚೆಲ, ಅಂಬಗಂಬಗ ಎಡಪ್ಪಾಡಿಭಾವ ಮಾಯ! 😉
ಈ ಅಂಬಗಂಬಗ ಮಾಯ ಅಪ್ಪ ಕತೆ ಎಂತರ – ನಿಂಗೊಗಾರಿಂಗಾರು ಅರಡಿಗೋ? ಒಪ್ಪಣ್ಣಂಗೆ ಅರಡಿಗು!!
ಅದೆಂತರ? ಅದುವೇ ಮಳೆಗಾಲ ಹಿಡಿತ್ತದರ ಮದಲು ಆಯೇಕಾದ “ಮಳೆಗಾಲದ ರೂಢಿ ಕೆಲಸಂಗೊ”!!

ಊರಿಲಿ ಪುರ್ಸೋತಿಲಿ ಇಪ್ಪದರ್ಲೇ ಹಲವು ಕೆಲಸಂಗಳ ಮುಗಿಶಿಂಬಲೆ ಬೇಕಾಗಿಯೇ ಮಾಯ ಆದ್ಸು.
ಲೈಟಿನ ಬೆಣಚ್ಚಿಲಿ ಮನಗೆ ಹೋಪಗ ದಾರಿಲಿ ಇದನ್ನೇ ಚಿಂತನೆ ಮಾಡಿಂಡು ಹೋತು ನಾವು.
~

ಮಳೆಗಾಲದ ನಾಕು ತಿಂಗಳು ಹೇದರೆ ಚಾತುರ್ಮಾಸ್ಯ; ಎಲ್ಲಿಗೂ ಹೋಪಲೆಡಿಯ.
ಮಳೆಗಾಲಲ್ಲಿ ಕೃಷಿಯ ವಾಣಿಜ್ಯ ಬೆಳೆಗಳೂ ಇಲ್ಲೆ; ಅಲಫಲಂಗಳೂ ಇಲ್ಲೆ, ವೈದಿಕ ಕಾರ್ಯಕ್ರಮಂಗಳೂ ಇಲ್ಲೆ. ಅಂಬಗ ಆ ನಾಕು ತಿಂಗಳು ಬದ್ಕೇಡದೋ?
ಬದ್ಕೇಕಾರೆ ಸಾಮಾನುಗೊ ಬೇಡದೋ? ಅಂಬೆರ್ಪಿಂಗೆ ರಜ ಪೈಶೆ ಬೇಡದೋ?
ಈಗೀಗ ಮಳೆಯೇ ಕಮ್ಮಿ ಆಯಿದು; ಮದಲಿಂಗೆ ಮಳೆಗಾಲ ಹೇದರೆ ಮಳೆಯೇ. ಮಳೆ ಬಿಟ್ಟು ಬೇರೇನೂ ಇರ! – ಹೇಳ್ತವು ರಂಗಮಾವ. ಅದೇನೇ ಇರಳಿ, ಮಳೆಗಾಲ ಎದುರಾತು ಹೇದರೆ ಕೆಲಸಂಗೊ ಸೊರುಗಿ ಸೊರುಗಿ ಬಪ್ಪದು ಗೊಂತಿಪ್ಪದೇ ನವಗೆ.
ಮೂರ್ನಾಕು ತಿಂಗಳ ಮಳೆಗಾಲ ಕಳಿಯಲೆ ದಕ್ಕಿತ ಅಕ್ಕಿ ಬೇಳೆಗೊ, ಉಪ್ಪು ಮೆಣಸುಗೊ, ಧವಸ ಧಾನ್ಯಂಗೊ, ಆಹಾರ ವಸ್ತುಗೊ, ಸೌದಿ ಹೊಳ್ಳಚ್ಚುಗೊ, ಮದ್ದಿನ ಕೊರಡು, ಅರಿಷ್ಟಂಗೊ, ಇತ್ಯಾದಿಗಳ ತೆಗದು ರೂಢಿಮಾಡಿ ಜೋಡುಸಿ ಅಟ್ಟಲ್ಲಿ ಮಡಗ್ಗು ಅಜ್ಜಜ್ಜಿಂದ್ರು.
ಹಾಂಗೆ, ಮಳೆಗಾಲಕ್ಕಿಪ್ಪದರ ರೂಢಿಮಾಡಿ ಮಡಗುತ್ತದು ಎಲ್ಲೋರಿಂಗೂ ಇಪ್ಪ ತಲೆಬೇನೆ. ಈ ತಲೆಬೇನೆಯ ಬಗ್ಗೆಯೇ ರಜ ಚಿಂತನೆ ಮಾಡುವನೋ?

ದೊಡ್ಡಜ್ಜನ ಮನೆಲಿ ಕಳುದೊರಿಶ ಮಡಗಿದ್ದು, ಈ ಒರಿಶದ ಆಟಿಸಮ್ಮಾನಕ್ಕೂ ಸಾಕಡ! ;-)

~

ಒಣಕ್ಕು ಬೇಸಗೆ ಬಂದ ಕೂಡ್ಳೇ ಬೆಶಿಬೆಶಿ ಅಟ್ಟಲ್ಲಿ ಮಡಗಿದ ಹಳೆಡಕ್ಕೆಯ ಇಳಿಶಿ ಸೊಲಿಶಿ, ಕೋಕ ಪಟೋರ ಹೆರ್ಕಿ, ನಾಕು ಬೆಶಿಲಿಂಗೆ ಹಾಕಿ ಪರಿಮ್ಮಳ ಬರುಸಿ ಕೆಮ್ಕಕ್ಕೆ ಕೊಡುಗು ರಂಗಮಾವ.
ಶಿವಣ್ಣನ ಜೀಪು ಒಂದರಿ ಬಂದು ತರವಾಡುಮನೆ ಜಾಲಿಲಿ ತಿರುಗಿ ನಿಂದರೆ, ಅದರ ಹೊಟ್ಟೆತುಂಬ ಹಳೆಡಕ್ಕೆ ತುಂಬುಸೆಂಡು ಗುಡ್ಡೆ ಹತ್ತುಗು.
ಕೆಮ್ಕಲ್ಲಿ ಅಡಕ್ಕೆ ವಿಲೇವಾರಿ ಆದಪ್ಪದ್ದೇ, ಕೊಂಕಣಿ ಅಂಗುಡಿಂದ ಅಕ್ಕಿ, ಬೆಲ್ಲ, ಶೆಕ್ಕರೆ ಹಿಂಡಿ ಇತ್ಯಾದಿಗಳ ತುಂಬುಸೆಂಡು ಒಪಾಸು ಬಕ್ಕು. ಒಂದೇ ಬಾಡಿಗೆಲಿ ನಿಮುರ್ತಿ ಆವುತ್ತನ್ನೇ! 😉
ಈ ಒರಿಶ ಹೇಂಗೂ ಅಡಕ್ಕಗೆ ಒಳ್ಳೆ ಕ್ರಯ ಇದ್ದಿದಾ; ಹಾಂಗಾಗಿ ಎಲ್ಲಾ ಕೃಷಿಕರಿಂಗೂ “ತೊಂದರಿಲ್ಲೆ” ಹೇಳ್ತ ಅನುಭವ!

ಅಡಕ್ಕೆ ಕೊಟ್ಟ ಪೈಶೆಲೇ ಮಳೆಗಾಲಕ್ಕಿಪ್ಪ ಸಾಮಾನುಗಳನ್ನೂ ತಂದಿಕ್ಕುದು ಈಗಾಣ ಕ್ರಮ ಅಲ್ಲ, ರಂಗಮಾವನಿಂದ ಮದಲಿಂಗೇ ಹಾಂಗೆ.
ರಂಗಮಾವನ ಅಪ್ಪ – ಶಂಬಜ್ಜನ ಕಾಲಲ್ಲೇ – ಅಡಕ್ಕೆಯ ಗೋಣಿಕಟ್ಟಿ ಗಾಡಿಲಿ ಕಾಸ್ರೋಡಿಂಗೆ ಕೊಂಡೋಕು; ರೈಲಾಪೀಸಿಂಗೆ. ಅಲ್ಲಿ ಗೂಡ್ಸು ರೈಲಿಂಗೆ ಬರೆಶುಗು – ಕೊಡೆಯಾಲಕ್ಕೆ.
ಇಂದು ಗೂಡ್ಸಿಂಗೆ ಬರೆಶಿರೆ, ನಾಳೆ ಕಳುದು ನಾಳ್ತಿಂಗೆ ಸ್ವತಃ ಕೊಡೆಯಾಲಕ್ಕೆ ಹೆರಡುಗು; ಸಂಗಾತಕ್ಕೆ ರಂಗಮಾವನೂ ಒಟ್ಟಿಂಗೆ. ರಂಗಮಾವ° ಸಣ್ಣ ಇಪ್ಪಗ ಬಟ್ಯ° ಹೋಗಿಂಡಿತ್ತಡ; ಚೀಲ ಹೊರ್ಲೆ.

ಬಸ್ಸಿಲಿ ಹತ್ತಿಂಡು ಕೊಡೆಯಾಲದ ಬಂದರಿನ ಹತ್ತರಾಣ ಮಾಮೂಲು ಅಡಕ್ಕೆಸೇಟಿನ ಅಂಗುಡಿಗೆ ಹೋಕು.
ಶಂಬಜ್ಜ ಅಲ್ಲಿಗೆತ್ತುವಗ ಎರಡು ದಿನ ಹಿಂದೆ ಗೂಡ್ಸಿಲಿ ಕೊಟ್ಟು ಕಳುಸಿದ ಅಡಕ್ಕೆಯೂ ಬಂದು ಎತ್ತಿಕ್ಕು.
ಶಂಭಟ್ರ ಅಡಿಕೆ ಬಂದದೇ – ಅಜ್ಜನ ತಲೆ ಕೊಡಿ ಕಾಂಬಗಳೇ ಸೇಟು ಹೇಳುಗಡ.
ಅಡಕ್ಕೆ ಸೇಟಿಂಗೆ ಶಂಬಜ್ಜನ ಗುರ್ತ ಇಂದು ನಿನ್ನೇಣದ್ದಲ್ಲ, ಹೋದ ಕೂಡ್ಳೇ ಒಂದು ಕಾಪಿಯೋ, ಕಶಾಯವೋ, ಹಾಲುನೀರೋ ಮಣ್ಣ ತರ್ಸಿ ಕೊಡುವಷ್ಟು ಗುರ್ತ.

ಅಡಕ್ಕಗೆ ಕ್ರಯ ಮಾಡಿಕ್ಕಿ, ಪೈಶೆಯ ಹಿಡ್ಕೊಂಡು ಕೊಂಕಣಿ ಅಂಗುಡಿಗೆ ಹೋಪದು. ಅಲ್ಲಿಯೂ ಶಂಬಜ್ಜನ ಗುರ್ತದೋರೇ ಇದಾ!
ಅಕ್ಕಿ-ಬೆಲ್ಲ-ಬೇಳೆ-ಕಾಳು- ಹೇಳಿಗೊಂಡು ಮಳೆಗಾಲಕ್ಕೆ ಬೇಕಾವುತ್ತ ದೊಡ್ಡ ಸಾಮಾನುಗಳ ಬರೆಶಿಂಡು ಅಲ್ಲಿಂದ ಹೆರಡುಗು. ಬೇಗ ಮುಗುಶಲೆ ಕಮ್ಮಿ ಕ್ರಯದ ಬೆಲ್ಲ, ಮಳೆಗಾಲದ ಅಕೇರಿಮುಟ್ಟ ಮಡಗಲೆ ಹೆಚ್ಚು ಕ್ರಯದ ಬೆಲ್ಲ, ಜೆಂಬ್ರದ ಅಕ್ಕಿ, ಕಡವ ಅಕ್ಕಿ, ಕಜೆ ಅಕ್ಕಿ; ಕನ್ನೆತಿಂಗಳ್ಳಿ ಬಪ್ಪ ಎಂಕಪ್ಪಜ್ಜನ ತಿತಿ ಪಾಯಿಸಕ್ಕೆ ಹಸರು ಬೇಳೆ, ಹೋಳಿಗೆಗೆ ಕಡ್ಳೆಬೇಳೆ – ಹೀಂಗೆ ಹಲವು ಬಗೆ ಸಾಮಾನುಗೊ.
ಆ ಸಾಮಾನಿನ ಕಟ್ಟವ ರೈಲಾಪೀಸಿಲಿ ಗೂಡ್ಸು ಬರೆಶಿ ಬಸ್ಸು ಹತ್ತಿಂಡು ಒಪಾಸು ಬಕ್ಕು.
ಎರಡು ದಿನಲ್ಲಿ ಕಾಸ್ರೋಡಿಂಗೆ ಎತ್ತಿಕ್ಕು ಅವರ ಗೂಡ್ಸು; ಗಾಡಿ ಕಟ್ಟುಸೆಂಡು ಹೋಗಿ ತಂದರಾತು.
ಅಬ್ಬಾ – ಈಗ ರಂಗಮಾವನ ಕಾಲಕ್ಕೆ ಅಷ್ಟು ಬಂಙ ಇಲ್ಲೆಪ್ಪೋ – ಹೇದು ಕಾಂಬದು ಒಂದೊಂದರಿ.
ಬೆಲ್ಲದ ಗುಣಮಟ್ಟ ನೋಡ್ಳೆ ಹೇಳಿಗೊಂಡು ಕೆಲವು ಸರ್ತಿ ಅಂಗುಡಿಅಂಗುಡಿ ತಿರುಗಲೂ ಇದ್ದತ್ತಡ ರಂಗಮಾವಂಗೆ, ಶಂಬಜ್ಜನೊಟ್ಟಿಂಗೆ. ಪ್ರತೀ ಅಂಗುಡಿಂದಲೂ ಒಂದೊಂದು ಮುದ್ದೆ ಬೆಲ್ಲವ ತುಂಡುಸಿ ಚೀಲಲ್ಲಿ ಹಾಕಿಂಡ್ರೆ ಒಂದು ವಾರದ ಕೊದಿಲಿಂಗೆ ಅದುವೇ ಸಾಕಕ್ಕಡ, ಒಂದೊಂದರಿ ನೆಗೆಮಾಡ್ಳಿದ್ದು! 😉
~

ಅಡಕ್ಕೆ ಸೊಲಿಶುತ್ತರ ಒಟ್ಟಿಂಗೇ, ಕಾಯಿಯ ವಿಲೇವಾರಿಯೂ ಇದ್ದು ತರವಾಡುಮನೆಲಿ.
ಕಳುದೊರಿಶ ಅಟ್ಟಲ್ಲಿ ಹಾಕಿದ ತೆಂಙಿನಕಾಯಿ –ಕೊಟ್ಟೆ – ಗೋಟು ಆಗಿರ್ತದರ – ಬೇಸಗೆಲೇ ಕೆಳ ಇಳುಶಿ, ಮುಂಡನ ಕೈಲಿ ಸೊಲಿಶುಗು. ಸೊಲುದ ಗೋಟುಕಾಯಿಯ ಒಡದು, ಹತ್ತು ಬೆಶಿಲು ಒಣಗುಸಿ, ಗಾಣ ಹಿಡುಶುಗು.
ಹಳಿಲಿ ಇದರ “ಎಣ್ಣೆ ತಿರುಗುಸುದು” ಹೇಳಿಯೂ ಹೇಳುಗಡ ಒಂದೊಂದರಿ. ಒಳ್ಳೆ ಕಾಯಿಯ ಒಳ್ಳೆ ಎಣ್ಣೆಯ ಪುನಾ ಬೆಶಿಲಿಂಗೆ ಒಣಗುಸಿ, ಒಳ ಮಡಗ್ಗು; ಕೆಟ್ಟುಕಾಯಿಯ ಎಣ್ಣೆ ಇದ್ದರೆ ಅದು ಕೈಗೋ-ಕಾಲಿಂಗೋ ಉದ್ದಲೆ ಬೇಕಕ್ಕು ಮಳೆಗಾಲಲ್ಲಿ.
ಹೊಸಾ ತೆಂಗಿನೆಣ್ಣೆ ಬಂದ ಸಮೆಯಲ್ಲಿ ಕಾಂಬುಅಜ್ಜಿ ಕೆಲವೆಲ್ಲ ಎಣ್ಣೆ ಕಾಸಿಂಡಿತ್ತವಡ. ತಲಗೆ ಹಾಕಲೆ ಗರ್ಗನ ಎಣ್ಣೆ, ದನದ ಮೈ ಉಣುಂಗಿಂಗೆ ಉದ್ದಿನ ಎಣ್ಣೆ – ಹೀಂಗಿರ್ಸು!
ಈಗ ಎಲ್ಲದಕ್ಕೂ ಬೇರೆಬೇರೆ ನಮುನೆ ಕುಪ್ಪಿಗಳಲ್ಲಿ ಎಣ್ಣೆಗೊ ಸಿಕ್ಕುತ್ತು. ಅಲ್ಲದೋ? 😉
~
ಈಗಲ್ಲದೋ ಗೋಬರುಗೇಸು, ಹಂಡೆ ಗೇಸು – ಹೇದು ಬಂದದು? ಮದಲಿಂಗೆ ಸೌದಿ ಒಲೆ.
ಒಲಗೆ ಸೌದಿ ಬೇಕಲ್ಲದೋ – ಅದಕ್ಕೆ ದಕ್ಕಿತ ಗುಡ್ಡೆಯೂ ಇದ್ದತ್ತು; ಗುಡ್ಡೆಲಿ ಸೌದಿ ಮರಂಗಳೂ ಇದ್ದತ್ತು.
ಬೇಸಗೆಲಿ ಇಪ್ಪ ಹಲವು ಕೆಲಸಲ್ಲಿ ಈ ಸೌದಿ ವಿಲೇವಾರಿ ಮುಖ್ಯವಾದ್ಸು. ತರವಾಡುಮನೆಲಿ ಈಗಳೂ ಈ ಕೆಲಸ ಇದ್ದು.
ಕಳುದ ಮಳೆಗಾಲ ತೋಟಕ್ಕೆ ಸೊಪ್ಪು ಮಾಡಿದ್ದಿದ್ದರೆ, ಅದರ ಅಡರುಗೊ, ಕೊದಂಟಿಗೊ ಎಲ್ಲ ಗುಡ್ಡೆಲಿ ಹಾಂಗೇ ಬಿದ್ದೊಂಡಿಕ್ಕು; ಅದುವೇ ಈ ಮಳೆಗಾಲಕ್ಕೆ ಸೌದಿ! ಕೋಲು ಅಡರುಗಳ ಒಂದೊಂದೇ ಕೋಲು ಉದ್ದಕ್ಕೆ ತುಂಡುಸಿ; ಪತ್ತಕ್ಕೆ ಸಿಕ್ಕುತ್ತಷ್ಟು ದೊಡ್ಡ ಕಟ್ಟ ಮಾಡಿಗೊಂಡು, ತಲೆಹೊರೆಲೇ ತಂದು, ಮನೆ ಹಿಂದಾಣ ಸೌದಿಕೊಟ್ಟಗೆಗೆ ಎತ್ತುಸುಗು ರಂಗಮಾವ°. ಉದಿಯಪ್ಪಗ ಸುರುಮಾಡಿರೆ ಬೆಶಿಲು ಏರ್ತಷ್ಟು ಹೊತ್ತೂ ಈ ಕೆಲಸ ಮಾಡುಗು.
ಬೆಶಿಲು ಏರಿದ ನೆಡು ಮಧ್ಯಾನ ಸೌದಿಕೊಟ್ಟಗೆಲಿ ನಿಂದುಗೊಂಡು ತಂದ ಸೌದಿಗಳ ಅಟ್ಟಿ ಓಯಿಶುಗು (ಓಶುಗು).
ನೆಲಲ್ಲಿ ಮಡಗಿದ ನಾಕು ಕಲ್ಲುಗಳ ಮೇಗೆ ದಪ್ಪದ ಮರ ಹಾಕಿ ಮಾಡಿದ ಅಟ್ಟೊಳಿಗೆ (ಪೀಠ)ದ ಮೇಗೆ ಮನಾರಕ್ಕೆ ಒಂದೊಂದೇ ಕೋಲು ಸೌದಿ ಮಡಗಿರೆ, ಒಂದಾಳು ಎತ್ತರ ಬಪ್ಪನ್ನಾರವೂ ಆ ಅಟ್ಟಿ ಹಾಂಗೇ ಸರ್ತಕೆ ಇಕ್ಕು.
ಜಗ್ಗಲೂ ಆಗ, ಮಾಲಲೂ ಆಗದ್ದ ಹಾಂಗೆ ಮಡಗಲೆ ಅನುಭವ ಬೇಕು ಇದಾ! ಶಾಂಬಾವಂಗೆ ಅರಡಿಯ ಅದು.

ಇದು ಕೋಲು ಸೌದಿಯ ಏರ್ಪಾಡು ಆದರೆ, ಒಡದ ಸೌದಿಯ ಕತೆ ಇನ್ನೊಂದು.
ತೋರದ ಕೊದಂಟಿಗೊ, ಕುತ್ತಿಗೊ, ಮರದ ದಿಮ್ಮಿಗಳ ಹಾಂಗೇ ಒಲಗೆ ಹಾಕಲೆ ಆವುತ್ತೋ? ಅದಕ್ಕೆ ಮಡು ತೆಕ್ಕೊಂಡು ಒಡೇಕು. ಮದಲಿಂಗೆ ಬಟ್ಯನೇ ಸೌದಿ ಒಡಕ್ಕೊಂಡಿದ್ದದು; ಈಗ ಬಾಬು.
ಒಡದ ಸೌದಿಗಳನ್ನೂ ಅಟ್ಟಿ ಓಶಿ ಮಡಗುದು; ಹೆಜ್ಜೆ ಒಲಗೆ ದೊಡ್ಡ ಕಿಚ್ಚಿಂಗೆ ಇದುವೇ ಆಯೇಕು. ಅಲ್ಲದೋ?!

ಈಗ ಸೌದಿ ಒಲೆಯೂ ಇಲ್ಲೆ, ಗುಡ್ಡೆಯೂ ಇಲ್ಲೆ, ಗುಡ್ಡೆ ಇದ್ದರೆ ಅಲ್ಲಿ ಸೌದಿ ಮರಂಗಳೂ ಇಲ್ಲೆ!
~

ಕೋಲು ಸೌದಿ, ಒಡದ ಸೌದಿ ಮಾಂತ್ರ ಸಾಕೋ? ಸಾಲಪ್ಪ!
ನೆಡುಮಳೆಗಾಲ ಒಣಕ್ಕು ಮಡ್ಳು ಬೇಕು ಹೇದು ಒಳಂದ ಪಾತಿಅತ್ತೆ ಹೇದರೆ, ರಂಗಮಾವ ಎಲ್ಲಿಂದ ತಪ್ಪದು! ಒಲೆ ಕಿಚ್ಚು ಹಿಡುಶಲೆ ರಜ ಮಡ್ಳು ಬೇಕಪ್ಪದರ ಕಟ್ಟಲ್ಲಿ ಕಟ್ಟಿ ಮಡಗ್ಗು.

ತೆಂಗಿನ ಮರದ ಎಲ್ಲಾ ಭಾಗಂಗಳೂ ಅಗ್ನಿದೇವಂಗೆ ಹತ್ತರೆಯೇ;
ಕೊತ್ತಳಿಂಕೆಯನ್ನೂ ಸಿಗುದು ಓಶುಗು; ಬೆಶಿನೀರ ಒಲಗಕ್ಕನ್ನೇ!
ಜೋರು ಮಳೆ ಸಮೆಯಲ್ಲಿ ಬೆಶಿನೀರ ಕಿಚ್ಚಾಕಲೆ ಎಂತ ಕೆಣಿ! ಒಂದರಿ ಕಿಚ್ಚು ಮುಟ್ಟುಸಲೆ ತಕ್ಕ ಆದರೂ ಒಣಕ್ಕು ಎಂತಾರು ಬೇಡದೋ? ಅದಕ್ಕೇ ರಜ ಕಾಯಿಸೊಪ್ಪನ್ನೂ ತುಂಬುಸಿ ಮಡಗ್ಗು.
ಹೋಯ್, ಮಳೆಗಾಲಲ್ಲಿ ಪಿರ್ಕು ಕಚ್ಚುವಗ ಹೊಗೆ ಹಾಕೆಡದೋ? ಹೊಗೆ ಹಾಕೇಕಾರೆ ಕೀಜಿ ಬಾಲ್ದಿಲಿಪ್ಪ ಕೆಂಡಕ್ಕೆ ರಜ ಅಡಕ್ಕೆ ಸೊಪ್ಪು ಹಾಕೆಡದೋ? ಹಾಂಗೆ ಅಡಕ್ಕೆ ಚೋಲಿಯನ್ನೂ ಗೋಣಿಲಿ ಕಟ್ಟಿಮಡಗ್ಗು.
ಇದರೆಲ್ಲ ಸೌದಿಕೊಟ್ಟಗೆಲಿ ಜಾಗೆ ಇಲ್ಲದ್ದರೆ ಬೂದಿಹೊಂಡದ ಹತ್ತರೆ ಮಡಗಿರೂ ಆವುತ್ತು; ಸೌದಿಯಷ್ಟು ಮನಾರಕೆ ಮಡಗೇಕು ಹೇದು ಏನಿಲ್ಲೆ ಇದಾ!

ಶಂಬಜ್ಜನ ಕಾಲಲ್ಲಿ ಸೂಟೆಗಳೂ ಕಟ್ಟಿ ಮಡಗಿ ತೆಯಾರಿಕ್ಕಡ.
ಮಡಲ ಸೂಟೆ, ಬೆದ್ರಕೋಲು ಸೂಟೆ, ಅಡಕ್ಕೆಮರದ ಕೋಲಿನ ಸೂಟೆಗೊ – ಹೀಂಗಿರ್ಸೆಲ್ಲ!
ಈಗ ಟೋರ್ಚು, ಬೆಟ್ರಿ ಲೈಟು ಬಂದ ಕಾರಣ – ಇದಾ – ಸುಲಾಬ –ಸುಚ್ಚು ಒತ್ತಿ ಅಪ್ಪಗ ಹೊತ್ತಿತ್ತು, ನಂದಿತ್ತು!
ಇಷ್ಟು ಮಾಂತ್ರ ಅಲ್ಲದ್ದೆ ಇನ್ನೂ ಹಲವಾರು ಸಾಧನಂಗೊ ಸೌದಿಕೊಟ್ಟಗೆ ಬಂದು ಸೇರಿಂಗು.
~

ಇದಿಷ್ಟು ರಂಗಮಾವನ ಜೆಬಾದಾರಿ ಆದರೆ, ಪಾತಿಅತ್ತೆದು ಬೇರೆಯೇ ಇದ್ದು.
ದಪ್ಪಸೊಳೆ ಹಲಸಿನಕಾಯಿಯ ಸುಂದರಿ ಕೈಲಿ ಕೊರೆಶಿ, ಸೊಳೆತೆಗದು ಉಪ್ಪಿಲಿ ಹಾಕುಗು.
ಸೋಣೆಲಿ ಉಂಡ್ಳಕಾಳು ಮಾಡಿ ತಿಂಬಲೆ; ಸೊಳೆರೊಟ್ಟಿ ಮಾಡ್ಳೆ – ಇತ್ಯಾದಿ.
ಹಲಸಿನಣ್ಣಿನ ಕಾಸಿ ಪೆರಟಿ ಉಂಡೆಮಾಡಿ ಮಡಗಿರೆ ಆಟಿಸಮ್ಮಾನಕ್ಕೆ ಪಾಯಿಸ ಆತು; ಬಂಡಾಡಿಅಜ್ಜಿಯಲ್ಲಿ ತೆಯಾರಾತೋ ಏನೋ, ಈ ಒರಿಶದ ಆಟಿ ಸಮ್ಮಾನಕ್ಕೆ! :-)
ಹಲಸಿನ ವೈವಿಧ್ಯಂಗೊ ಅಂದೇ ಒಂದರಿ ನಾವು ಮಾತಾಡಿದ್ದು, ಅಲ್ಲದೊ? (http://oppanna.com/?p=13028)

ಹಲಸಿನ ಶುದ್ದಿ ಹಾಂಗಾದರೆ, ಮಾವಿಂದು ಇನ್ನೊಂದು.
ಉಪ್ಪಿನಾಯಿ, ನೀರುಮಾವಿನಕಾಯಿ, ಇದೆಲ್ಲ ಹೇಂಗೂ ಇದ್ದನ್ನೆ..
ಸುಂದರಿ ಮನೆಮೇಲ್ಕಟೆ ಇಪ್ಪ ಮಾವಿನ ಹಣ್ಣಿನ ಎಸರು ತೆಗದು ಪಾತಿಅತ್ತೆ ಮಾಂಬ್ಳ ಎರಗು; ಕೆರಿಶಿ ಮೇಗಂಗೆ.
ಹಾಂಗೆ ಎರದ ಮಾಂಬಳವ ಚೆಂದಕೆ ಒಣಗುಸಿ, ಶಂಬಜ್ಜನ ಬೈರಾಸಿನ ನಮುನೆ ತುಂಡುಸಿ ಸುರುಳಿಸುತ್ತಿ ಬರಣಿಲಿ ಕಟ್ಟಿ ಮಡಗ್ಗು.
ಆಟಿ-ಸೋಣೆಲಿ ಗೊಜ್ಜಿ ಮಾಡ್ಲಕ್ಕಿದಾ! ಜೀರ್ಣಕ್ಕೂ ಒಳ್ಳೆದು.

ಜೇನದ ಪೆಟ್ಟಿಗೆ ಇದ್ದರೆ ಅದರಿಂದ ಜೇನು ಬಿಡುಸಿಗೊಂಬಲೆ ನೆಂಪುಮಾಡುಗು ಪಾತಿಅತ್ತೆ. ಉಂಡಗೆ ರವೆ ಇದ್ದ ಹಾಂಗೆ ತೆಳ್ಳವಿಂಗೆ ಜೇನ ಆಯೇಕು ರಂಗಮಾವಂಗೆ! 😉
ಮತ್ತೆ ಹಲವಾರು ಕೊಡಿಗೊ, ಕಂಚುಸಟ್ಟು, ನೆಲ್ಲಿಸಟ್ಟು, ದಾಳಿಂಬೆ ಚೋಲಿ – ಹೀಂಗಿರ್ಸರ ಒಣಗುಸಿ ಹೇಮಾರ್ಸಿ ಮಡಗ್ಗು.
ಹಪ್ಪಳ, ಸೆಂಡಗೆ, ಬಾಳ್ಕು – ಹೀಂಗಿರ್ಸದು ಹೇಂಗೂ ಇದ್ದನ್ನೇ! ಇದೆಲ್ಲದರ ನಾವೊಂದರಿ ಮಾತಾಡಿದ್ದು ನೆಂಪಿಕ್ಕಿ ನಿಂಗೊಗೆ: http://oppanna.com/oppa/hemmakko-hemarsi-madugudu

~

ತರವಾಡುಮನೆಲಿ ಮಡ್ಳಕಟ್ಟ ತಯಾರಾಯಿದು!

ಈಗಾಣ ಆಧುನಿಕ ಜೀವನಲ್ಲಿ ಮದಲಾಣಷ್ಟು ಕೆಲಸಂಗೊ ಇಲ್ಲದ್ದರೂ ಕಮ್ಮಿ ಏನಲ್ಲ.
ಮಳೆಗಾಲ ಎದುರಾತು ಹೇಳುವಗ ಎಲ್ಲೋರಿಂಗೂ ಒಂದರಿ ಮೈ ಜುಂ ಹೇಳ್ತು. ಒಣಕ್ಕು ಬೇಸಗೆಂದ ಚೆಂಡಿ ಮಳೆಗಾಲಕ್ಕೆ ಜನಜೀವನ ತಯಾರಾಗಿ ಇರೇಕು ಅಲ್ಲದೋ!
ಅದರ್ಲಿಯೂ ಅಡಕ್ಕೆ ಇತ್ಯಾದಿ ಕೃಷಿಗಳ ನಂಬಿದ ಬೈಲಿನೋರು ಅವರ ಎಲ್ಲಾ ಅವಲಂಬನತೆಯನ್ನೂ ಹೊಂದುಸೆಂಡು, ಮಳಗಾಲ ತಾಪತ್ರೆ ಆಗದ್ದ ಹಾಂಗೆ ನೋಡಿಗೊಳೇಕು.

ಹೇಳಿದಾಂಗೆ, ಈ ಎಲ್ಲ ಕೆಲಸ ಮಾಡ್ಳೆ ಗಡು ಹೇದು ಒಂದಿದ್ದು; ಅದುವೇ ಪತ್ತನಾಜೆ.
ಪತ್ತನಾಜೆ ಕೇವಲ ಧಾರ್ಮಿಕವಾಗಿ ಮಾಂತ್ರ ವಿಶೇಷ ಅಲ್ಲ, ಬದಲಾಗಿ ಹೀಂಗಿರ್ಸ ಕಾರ್ಯಂದಾಗಿ ಸಾಮಾಜಿಕವಾಗಿಯೂ ವಿಶೇಷ ದಿನ.
ಬೇಸಗೆ ತಿಂಗಳ ಹತ್ತನೇ ದಿನ, ಹೇದರೆ ಮೇ ಹದಿಮೂರಕ್ಕೆ ಶೆಂಕ್ರಾಂತಿ ಬಂದರೆ ಇಪ್ಪತ್ತಮೂರಕ್ಕೆ ಪತ್ತನಾಜೆ ಬಕ್ಕು.
ಅಲ್ಲಿಂದ ಮದಲೆಲ್ಲ ಬೇಸಗೆ, ಮತ್ತೆ ಮಳೆಗಾಲ ಹೇದು ಲೆಕ್ಕ. ಪತ್ತನಾಜೆಂದ ಮದಲೇ ಹೇಳದ್ದೆಕೇಳದ್ದೆ ಹೀಂಗೆ ಮಳೆ ಬಂದರೆ ಮಿಂಚಿನಡ್ಕ ಬಾವಂಗೆ ಕೋಪವೇ ಬಕ್ಕಿದಾ! ಅದಿರಳಿ.
ಇದೆಲ್ಲ ಗ್ರೇಶಿಂಡಿಪ್ಪಗಳೇ ಮನೆಗೆತ್ತಿತ್ತು. ಮೂರುಬೆಟ್ರಿ ಲೈಟಿನ ನಂದುಸಿ ಮನೆ ಮೆಟ್ಟುಕಲ್ಲು ಹತ್ತುವನ್ನಾರವೂ ಇದೇ ವಿಷಯಂಗೊ ತಲೆಲಿತ್ತು.
~

ಬಪ್ಪವಾರವೇ ಪತ್ತನಾಜೆ ಇದಾ.
ಬೈಲಿಲಿ ಆರೇ ಎದುರೆದುರು ಸಿಕ್ಕಲಿ, ಪರಸ್ಪರ ಕೇಳಿಂಬದೇ – ನಿಂಗಳಲ್ಲಿ ಹೇಂಗಾತು? ಮಳೆಗಾಲಕ್ಕಿಪ್ಪದು ರೂಢಿ ಆತೋ – ಹೇದು.
ಒಪ್ಪಣ್ಣನೂ ಅದನ್ನೇ ಕೇಳುದು ಬೈಲಿನೋರ ಹತ್ತರೆ; ಹೇಂಗೆ? ನಿಂಗಳಲ್ಲಿ ರೂಢಿ ಆತೋ? ಅಟ್ಟ- ಸೌದಿಕೊಟ್ಟಗೆ ತುಂಬಿಂಡು ಬಂತೋ?
~
ಒಂದೊಪ್ಪ: ಮಳೆಗಾಲಂದ ಮದಲು ಅಟ್ಟ ತುಂಬುಸಿರೆ, ಮಳೆಗಾಲಲ್ಲಿ ಹೊಟ್ಟೆ ತುಂಬುಗು.ಅಲ್ಲದೋ?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. {Athithi}

  { Comment Moderated. Please authenticate your email address}

  [Reply]

  VA:F [1.9.22_1171]
  Rating: 0 (from 0 votes)
 2. ಅಡ್ಕತ್ತಿಮಾರುಮಾವ°

  ಒಪ್ಪಣ್ಣ ಬರದ್ದು ಬಾರೀ ಲಾಯಿಕ ಆಯಿದು..ಈಗ ಮಳೆಗಾಲಕ್ಕೆ ತಯಾರಿ ಮಾಡುದು ಕಮ್ಮಿ ಆವುತ್ತಾ ಬೈಂದು ಕಾರಣ ಜೆನ ಸಿಕ್ಕುತ್ತವಿಲ್ಲೆ…ಮೊದಲಿಂಗೆ ಈ ಸಮಯಲ್ಲಿ ಆರದರೂ ಸಿಕ್ಕಿದರೆ ಸುರೂವಿಂಗೆ ಕೇಳುವ ಪ್ರಶ್ನೆ ಬೆಲ್ಲ ತೆಗದಾತಾ ಬಾವ ಎಸ್ಟ್ಟು ಖಂಡಿ ತೆಗದಿ?ಆನು ತೆಗದ ಬೆಲ್ಲಲ್ಲಿ ರಜ್ಜ ಉಪ್ಪು ಹೆಚ್ಹಿತ್ತು ಆದರೆ ಕಾಚೇಲು ಇದ್ದು ಹೇಳಿ ಅದರ ತೆಗದೆ ..ಹೇಳಿರೆ ಉಳ್ಲಾಲ ಬೆಲ್ಲ ತೆಗವದು ಅದು ಒಳ್ಲೆ ಕರ್ಚಿ ಅಪ್ಪ ಸಮಯಲ್ಲಿ ಬೆಲ್ಲ ಮಾಡುವ ಪೊರ್ಬ್ಬುಗ ಉಪ್ಪು ನೀರು ನಿಂಬ ಕಬ್ಬನ್ನೂ ಬೆಲ್ಲ ಮಾಡಿ ಕೊಡುಗು ಅದ್ರ ಬೆಲ್ಲ ಉಪ್ಪುಪ್ಪು ಅಪ್ಪದು ಆದರೆ ಒಳ್ಲೆ ಕಾಸಿದ ಬೆಲ್ಲ ಬಾಳ್ವಿಕೆ ಹೆಚ್ಹು ಬಕ್ಕು..ಅಲ್ಲದ್ದರೆ ಆಟಿ ಗಪ್ಪಗ ಬೆಲ್ಲ ನೀರಕ್ಕು..ಹಾಂಗೆ ಬೆಲ್ಲದ ಅಂಗಡಿಗೆ ಹೋದರೆ ಬೆಲ್ಲ ತಿನ್ನದ್ದೆ ಹೇಂಗೆ ಗೊಂತಪ್ಪದು ?ಅಂಗಡಿ ಕೊಂಕಣಿಗ ಸ್ವಲ್ಪ್ಪ ಬೆಲ್ಲ ಚೀಲಕ್ಕೆ ಹಾಕಿಕೊಳ್ಲಿ ಭಟ್ರೆ ಮನೆಯಲ್ಲಿ ತೋರ್ಸಿ ಮತ್ತೆ ತೆಗೆಯಿರಿ ಹೇಳುಗು ಹಾಂಗೆ ೧೦ ಅಂಗಡಿ ಸುತ್ತಇ ಅಪ್ಪಗ ಇವನ ಚೀಲಲ್ಲಿ ಬೆಲ್ಲ ತುಂಬಿತ್ತು…ಅದರ ಮನಗೆ ತಂದು ಬಂದವಕ್ಕೆ ಆಸರಿಂಗೆ ಕೊಡುಲೆಉಪಯೋಗಿಸುದು ತಿಂದವ ಇದು ಯಾವ ಅಂಗಡಿ ಬೆಲ್ಲಾ ಹೇಳಿ ಕೇಳುತ್ತ..ಇವ ಆ ಅಂಗಡಿ ಬೆಲ್ಲ ಹೇಳಿ ಹೇಳುತ್ತ ಅಂಗಡಿದಕ್ಕೆ ಸುಲಾಭಲ್ಲಿ ಅಡ್ವಟೈಸ್ ಆದಾಂಗೆ ಆತು ಮರುದಿನ ಅದೇ ಅಂಗಡಿಗೆ ಹೋಗಿ ಬೆಲ್ಲ ತಪ್ಪದೆ…ಮತ್ತೆ ಅದು ಮುಗುದರೆ ಬೇಕಪ್ಪಗ ಒಳ್ಲೆ ಬೆಲ್ಲ ಸಿಕ್ಕೆಕ್ಕಲ್ಲದಾ? ನೀನು ಬರದ ಎಲ್ಲಾ ವಿಶಯಂಗಳೂ ಅಕ್ಶ್ರರಸಹ ಸತ್ಯ… ಒಂದು ಒಪ್ಪ..

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣವೇಣೂರಣ್ಣಅಡ್ಕತ್ತಿಮಾರುಮಾವ°ಮುಳಿಯ ಭಾವಅನಿತಾ ನರೇಶ್, ಮಂಚಿಪವನಜಮಾವಸರ್ಪಮಲೆ ಮಾವ°ದೊಡ್ಡಭಾವಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಡೈಮಂಡು ಭಾವನೆಗೆಗಾರ°ಪಟಿಕಲ್ಲಪ್ಪಚ್ಚಿಮಂಗ್ಳೂರ ಮಾಣಿಪೆಂಗಣ್ಣ°ಅಕ್ಷರದಣ್ಣಪುಣಚ ಡಾಕ್ಟ್ರುಬೊಳುಂಬು ಮಾವ°ಶಾ...ರೀಶುದ್ದಿಕ್ಕಾರ°ಕಜೆವಸಂತ°ಶರ್ಮಪ್ಪಚ್ಚಿಕಾವಿನಮೂಲೆ ಮಾಣಿಗೋಪಾಲಣ್ಣಸುಭಗಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ